[Mission 2022] ದೈನಂದಿನ ಪ್ರಚಲಿತ ಘಟನೆಗಳು ದಿನಾಂಕ – 19ನೇ ಜನೇವರಿ 2022 – INSIGHTSIAS

[ad_1]

 

 

ಪರಿವಿಡಿ:

 ಸಾಮಾನ್ಯ ಅಧ್ಯಯನ ಪತ್ರಿಕೆ  1 :

1. ಗುರು ರವಿದಾಸ್.

2. ಭಾರತೀಯ ಉಪಖಂಡದ ಮೇಲೆ ಲಾ ನಿನಾ ಪರಿಣಾಮ.

 

ಸಾಮಾನ್ಯ ಅಧ್ಯಯನ ಪತ್ರಿಕೆ 2:

1. ಅಂತರಾಷ್ಟ್ರೀಯ ಇಂಧನ ಸಂಸ್ಥೆ (IEA) ಮತ್ತು ವಿದ್ಯುತ್ ಮಾರುಕಟ್ಟೆ ವರದಿ.

2. ವಿಶ್ವಸಂಸ್ಥೆಯ ಭದ್ರತಾ ಮಂಡಳಿ.

 

ಸಾಮಾನ್ಯ ಅಧ್ಯಯನ ಪತ್ರಿಕೆ 3:

1. PM ಗತಿಶಕ್ತಿ – ರಾಷ್ಟ್ರೀಯ ಮಾಸ್ಟರ್ ಪ್ಲಾನ್.

2. ದೇಶದ್ರೋಹ ಕಾನೂನು.

 

ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ಸಂಗತಿಗಳು:

1. ಪಂಡಿತ್ ಬಿರ್ಜು ಮಹಾರಾಜ್ ಮತ್ತು ಕಥಕ್.

 


ಸಾಮಾನ್ಯ ಅಧ್ಯಯನ ಪತ್ರಿಕೆ : 1


 

ವಿಷಯಗಳು: ಭಾರತೀಯ ಸಂಸ್ಕೃತಿಯು ಪ್ರಾಚೀನ ಕಾಲದಿಂದ ಆಧುನಿಕ ಕಾಲದವರೆಗೆ ಕಲಾ ಪ್ರಕಾರಗಳು, ಸಾಹಿತ್ಯ ಮತ್ತು ವಾಸ್ತುಶಿಲ್ಪದ ಪ್ರಮುಖ ಅಂಶಗಳನ್ನು ಒಳಗೊಂಡಿದೆ.

ಗುರು ರವಿದಾಸ್:


(Guru Ravidas)

ಸಂದರ್ಭ:

ಪಂಜಾಬ್‌ನಲ್ಲಿ ಫೆಬ್ರವರಿ 14 ಕ್ಕೆ ನಿಗದಿಯಾಗಿದ್ದ ವಿಧಾನ ಸಭಾ ಚುನಾವಣೆಯನ್ನು ಫೆಬ್ರವರಿ 20 ಕ್ಕೆ  ಮುಂದೂಡಿರುವುದು ರಾಜ್ಯದಲ್ಲಿ ನೆಲೆಸಿರುವ ರವಿದಾಸ್ಸಿಯಾ (Ravidassia community) ಸಮುದಾಯದ ಪ್ರಾಮುಖ್ಯತೆಯನ್ನು ಒತ್ತಿಹೇಳುತ್ತದೆ.

ಏನಿದು ಪ್ರಕರಣ?

ಫೆಬ್ರುವರಿ 16ರಂದು ಗುರು ರವಿದಾಸ್ ಜಯಂತಿ ಇದೆ. ಹೀಗಾಗಿ ಸುಮಾರು 20 ಲಕ್ಷದಷ್ಟು ಜನರು ಉತ್ತರ ಪ್ರದೇಶದ ಬನಾರಸ್‌ಗೆ ಭೇಟಿ ನೀಡಿ ಜಯಂತಿ ಆಚರಿಸಲಿದ್ದಾರೆ. ಅವರಲ್ಲಿ ಹಲವರು ಜಲಂಧರ್‌ನಲ್ಲಿರುವ ರವಿದಾಸ್ಸಿಯರ ಅತಿದೊಡ್ಡ ಡೇರಾ ಆದ ಡೇರಾ ಸಚ್‌ಖಂಡ್ ಬಲ್ಲನ್ (Dera Sachkhand Ballan) ಆಯೋಜಿಸಿರುವ ವಿಶೇಷ ರೈಲಿನಲ್ಲಿ ಪ್ರಯಾಣಿಸುತ್ತಾರೆ. ಅವರಿಗೆ, ಮತದಾನದಲ್ಲಿ ಪಾಲ್ಗೊಳ್ಳಲು ತೊಂದರೆಯಾಗದಂತೆ ನೋಡಿಕೊಳ್ಳಲು, ಚುನಾವಣೆಯನ್ನು ಕನಿಷ್ಠ ಆರು ದಿನ ಮುಂದೂಡಬೇಕು ಎಂದು ಆಡಳಿತಾರೂಢ ಕಾಂಗ್ರೆಸ್ ಸೇರಿದಂತೆ, ಬಿಜೆಪಿ, ಪಂಜಾಬ್‌ ಲೋಕ ಕಾಂಗ್ರೆಸ್‌ ಹಾಗು ಇನ್ನಿತರ ಪಕ್ಷಗಳು ಮತದಾನ ದಿನಾಂಕವನ್ನು ಮುಂದೂಡುವಂತೆ ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದವು. ಹೀಗಾಗಿ ದಿನಾಂಕ ಮರುನಿಗದಿಗೊಳಿಸಲಾಗಿದೆ.

ರವಿದಾಸ್ಸಿಯಾಸ್ ಗಳು ಯಾರು?

ರವಿದಾಸ್ಸಿಯಾಗಳು ದಲಿತ ಸಮುದಾಯವಾಗಿದ್ದು, ಅವರಲ್ಲಿ ಬಹುಪಾಲು – ಸುಮಾರು 12 ಲಕ್ಷ – ಜನರು ದೋಬಾ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ವಿಶ್ವಾದ್ಯಂತ 20 ಲಕ್ಷ ಅನುಯಾಯಿಗಳನ್ನು ಹೊಂದಿರುವ ಅವರ ಅತಿದೊಡ್ಡ ಡೇರಾ ಆದ ಡೇರಾ ಸಚ್‌ಖಂಡ್ ಬಲ್ಲನ್ ಅನ್ನು 20 ನೇ ಶತಮಾನದ ಆರಂಭದಲ್ಲಿ ಬಾಬಾ ಸಂತ ಪಿಪಾಲ್ ದಾಸ್ ಸ್ಥಾಪಿಸಿದರು.

  1. ಒಮ್ಮೆ ಸಿಖ್ ಧರ್ಮದೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಡೇರಾ ಈ ದಶಕಗಳ-ಹಳೆಯ ಸಂಬಂಧಗಳನ್ನು 2010 ರಲ್ಲಿ ಕಡಿದುಕೊಂಡಿತು ಮತ್ತು ರವಿದಾಸ್ಸಿಯಾ ಧರ್ಮವನ್ನು ಅನುಸರಿಸುವುದಾಗಿ ಘೋಷಿಸಿತು. ವಾರಣಾಸಿಯಲ್ಲಿ ಗುರು ರವಿದಾಸ್ ಜಯಂತಿಯಂದು ಡೇರಾ ಈ ಘೋಷಣೆಯನ್ನು ಮಾಡಿತು.
  2. 2010 ರಿಂದ, ಡೇರಾ ಸಚ್‌ಖಂಡ್ ಬಲ್ಲನ್ ಗುರು ಗ್ರಂಥ ಸಾಹಿಬ್ ನ ಬದಲಿಗೆ ಗುರು ರವಿದಾಸ್ ಅವರು ಬರೆದ 200 ಸ್ತೋತ್ರಗಳನ್ನು ಹೊಂದಿರುವ ಗ್ರಂಥವಾದ ಅಮೃತಬಾನಿ (Amritbani) ಯನ್ನು ರವಿದಾಸ್ಸಿಯಾ ದೇವಾಲಯಗಳು ಮತ್ತು ಗುರುದ್ವಾರಗಳಲ್ಲಿ ಅನುಸರಿಸಲು ಪ್ರಾರಂಭಿಸಿತು.

Current Affairs

 

ಗುರು ರವಿದಾಸ್ ಅವರ ಬಗ್ಗೆ:

  1. ಗುರು ರವಿದಾಸ್ ಭಕ್ತಿ ಚಳುವಳಿಯ ಉತ್ತರ ಭಾರತದ ಅತೀಂದ್ರಿಯ ಕವಿಯಾಗಿದ್ದಾರೆ.
  2. ಅವರ ಜನ್ಮದ ನಿಖರವಾದ ವರ್ಷ ತಿಳಿದಿಲ್ಲವಾದರೂ, ಸಂತನು 1377 CE ನಲ್ಲಿ ಜನಿಸಿದನೆಂದು ನಂಬಲಾಗಿದೆ.
  3. ಗುರು ರವಿದಾಸ್ ಜಯಂತಿಯನ್ನು ಮಾಘ ಪೂರ್ಣಿಮೆಯಂದು ಆಚರಿಸಲಾಗುತ್ತದೆ, ಇದು ಹಿಂದೂ ಪಾಂಚಂಗದ ಮಾಘ ಮಾಸದಲ್ಲಿನ ಹುಣ್ಣಿಮೆಯ ದಿನವಾಗಿದೆ.
  4. ಸಿಖ್ಖರ ಆದಿ ಗ್ರಂಥ, ಪಂಚವಾಣಿ ಜೊತೆಗೆ ಗುರು ರವಿದಾಸ್ ಅವರ ಸಾಹಿತ್ಯ ಕೃತಿಗಳು ಎರಡು ಹಳೆಯ ದಾಖಲಿತ ಮೂಲಗಳಾಗಿವೆ.
  5. ಗಮನಾರ್ಹವಾಗಿ, ಅವರು ಅಸ್ಪೃಶ್ಯ ಜಾತಿಗೆ ಸೇರಿದವರು ಮತ್ತು ಪರಿಣಾಮವಾಗಿ ಬಹಳಷ್ಟು ದೌರ್ಜನ್ಯಗಳನ್ನು ಅನುಭವಿಸಿದರು. ಆದಾಗ್ಯೂ, ಸಂತರು ಆಧ್ಯಾತ್ಮಿಕ ಅನ್ವೇಷಣೆಗಳ ಮೇಲೆ ತಮ್ಮ ಗಮನವನ್ನು ಕೇಂದ್ರೀಕರಿಸಲು ಆಯ್ಕೆ ಮಾಡಿದರು ಮತ್ತು 14 ರಿಂದ 16 ನೇ ಶತಮಾನದ CE ಅವಧಿಯಲ್ಲಿ ಭಕ್ತಿ ಚಳುವಳಿಯ ಮೇಲೆ ಭಾರಿ ಪ್ರಭಾವ ಬೀರಿದ ಹಲವಾರು ಭಕ್ತಿ ಗೀತೆಗಳ ರಚನೆ ಮಾಡಿದರು.
  6. ಅವರು ಭಕ್ತಿ ಸಂತ-ಕವಿ ರಮಾನಂದರ ಶಿಷ್ಯರು ಮತ್ತು ಭಕ್ತಿ ಸಂತ-ಕವಿ ಕಬೀರ್ ದಾಸ್ ಅವರ ಸಮಕಾಲೀನರು ಎಂದು ನಂಬಲಾಗಿದೆ.
  7. ಸಂತ ಮೀರಾಬಾಯಿ, ಅವರ ಪ್ರಸಿದ್ಧ ಶಿಷ್ಯರಲ್ಲಿ ಒಬ್ಬರು.
  8. ರವಿದಾಸ್ ಅವರ ನೈತಿಕ ಮತ್ತು ಬೌದ್ಧಿಕ ಸಾಧನೆಗಳ ಪೈಕಿ “ಬೇಗಂಪುರ(Begampura )ಎಂಬ ಪರಿಕಲ್ಪನೆಯು ದುಃಖವನ್ನು ತಿಳಿಯದ ನಗರವಾಗಿದೆ; ಮತ್ತು ಜಾತಿ ಮತ್ತು ವರ್ಗವ ರಹಿತ ಸಮಾಜವನ್ನು ಹೊಂದಿದೆ.

Current Affairs

 

ಗುರು ರವಿದಾಸರ ಬೋಧನೆಗಳು:

ಗುರು ರವಿದಾಸ್ ಅವರು ಜಾತಿ ವಿಭಜನೆಗಳ ವಿರುದ್ಧ ಮಾತನಾಡಿದರು ಮತ್ತು ಏಕತೆಯನ್ನು ಉತ್ತೇಜಿಸಲು ಅವುಗಳನ್ನು ತೊಡೆದುಹಾಕುವ ಮಾತನಾಡಿದರು. ಅವರ ಬೋಧನೆಗಳು ಜನರೊಂದಿಗೆ ಅನುರಣಿಸಿದವು, ಅಂತೆಯೇ ಅವರ ಬೋಧನೆಗಳ ಆಧಾರದ ಮೇಲೆ ರವಿದಾಸ್ಸಿಯಾ ಧರ್ಮ ಅಥವಾ ರವಿದಾಸ್ಸಿಯಾ ಧರಮ್ ಎಂಬ ಧರ್ಮವು ಹುಟ್ಟಲು ಕಾರಣವಾಯಿತು.

ಅವರು ದೇವರ ಸರ್ವವ್ಯಾಪಿತ್ವದ ಬಗ್ಗೆ ಬೋಧಿಸಿದರು ಮತ್ತು ಮಾನವ ಆತ್ಮವು ದೇವರ ಒಂದು ಕಣವಾಗಿದೆ ಎಂದು ಹೇಳಿದರು ಮತ್ತು ಆದ್ದರಿಂದ ಕೆಳಜಾತಿಯ ಜನರು ದೇವರ ಸಾಕ್ಷಾತ್ಕಾರವನ್ನು ಪಡೆಯಲು ಸಾಧ್ಯವಿಲ್ಲ ಎಂಬ ಕಲ್ಪನೆಯನ್ನು ರವಿದಾಸ್ ತಿರಸ್ಕರಿಸಿದರು. ಮನಸ್ಸನ್ನು ದ್ವಂದ್ವದಿಂದ ಮುಕ್ತಗೊಳಿಸುವುದೇ ದೇವರನ್ನು ಕಾಣಲು ಇರುವ ಏಕೈಕ ಮಾರ್ಗ ಎಂದು ಅವರು ತಮ್ಮ ಬೋಧನೆಗಳಲ್ಲಿ ಹೇಳಿದ್ದಾರೆ.

 

ವಿಷಯಗಳು: ಭೂಕಂಪಗಳು, ಸುನಾಮಿ, ಜ್ವಾಲಾಮುಖಿ ಚಟುವಟಿಕೆಗಳು ಚಂಡಮಾರುತ ಮುಂತಾದ ಪ್ರಮುಖ ಭೌಗೋಳಿಕ ವಿದ್ಯಮಾನಗಳು, ಭೌಗೋಳಿಕ ಲಕ್ಷಣಗಳು ಮತ್ತು ಅವುಗಳ ಸ್ಥಳ- ನಿರ್ಣಾಯಕ ಭೌಗೋಳಿಕ ವೈಶಿಷ್ಟ್ಯಗಳಲ್ಲಿನ ಬದಲಾವಣೆಗಳು (ಸಾಗರಗಳು ಮತ್ತು ಐಸ್-ಕ್ಯಾಪ್ಗಳು ಸೇರಿದಂತೆ) ಮತ್ತು ಸಸ್ಯ ಮತ್ತು ಪ್ರಾಣಿ ಮತ್ತು ಅಂತಹ ಬದಲಾವಣೆಗಳ ಪರಿಣಾಮಗಳು.

ಭಾರತೀಯ ಉಪಖಂಡದ ಮೇಲೆ ಲಾ ನಿನಾ ಪರಿಣಾಮ:


(La Niña effect on Indian subcontinent)

ಸಂದರ್ಭ:

ಭಾರತದ ವಿವಿಧ ಭಾಗಗಳು, ವಿಶೇಷವಾಗಿ ಉತ್ತರ ಭಾರತದಲ್ಲಿ ತೀವ್ರ ಚಳಿಗಾಳಿ/ಶೀತಗಾಳಿ ಬೀಸುತ್ತಿದೆ. ಉತ್ತರದ ಹಲವು ರಾಜ್ಯಗಳಲ್ಲಿ ತೀವ್ರ ಶೀತ ಅಲೆಗಳ ಬಗ್ಗೆ ಎಚ್ಚರಿಕೆ ನೀಡಲಾಗಿದೆ.

ಕೋಲ್ಡ್ ವೇವ್/ಶೀತಗಾಳಿ ಎಂದರೇನು?

ಚಳಿಯ ಅಲೆಯು ಬಯಲು ಪ್ರದೇಶ ಮತ್ತು ಪರ್ವತ ಪ್ರದೇಶಗಳಿಗೆ ವಿಭಿನ್ನವಾಗಿದೆ.

ಭಾರತೀಯ ಹವಾಮಾನ ಇಲಾಖೆ (Indian Meterological Department-IMD) ಪ್ರಕಾರ ತಾಪಮಾನವು 10 ಡಿಗ್ರಿಗಿಂತ ಕಡಿಮೆಯಾದರೆ ಮತ್ತು ಕನಿಷ್ಠ ತಾಪಮಾನ 4.5 ಡಿಗ್ರಿಯಲ್ಲಿ ಸ್ಥಿತಗೊಂಡರೆ,ಅದು ಬಯಲು ಸೀಮೆಗೆ ಶೀತ ಅಲೆಯಾಗಿದೆ. ಬೆಟ್ಟ ಪ್ರದೇಶಗಳಿಗೆ ಈ ಮಾನದಂಡವು 0 ಡಿಗ್ರಿ ತಾಪಮಾನ ವಾಗಿದೆ.

ತಾಪಮಾನವು ಸಾಮಾನ್ಯಕ್ಕಿಂತ 6.4 ಡಿಗ್ರಿಗಿಂತ ಕಡಿಮೆಯಿದ್ದರೆ ಅಥವಾ 2 ಡಿಗ್ರಿ ವರೆಗೆ ಕಡಿಮೆಯಾದರೆ, ಅದು ಬಯಲು ಪ್ರದೇಶದಲ್ಲಿ ತೀವ್ರ ಶೀತ ಅಲೆ/ ಕೋಲ್ಡ್ ವೇವ್ ಎಂದು ಕರೆಯಲ್ಪಡುತ್ತದೆ.

IMD ಇದನ್ನು ಇದು ಒಂದು “ಗಾಳಿಯ ಉಷ್ಣತೆಯ ಸ್ಥಿತಿಯಾಗಿದ್ದು, ಮಾನವ ದೇಹವು ಇಂತಹ ತೀವ್ರ ಶೀತ ಅಲೆಗೆ ಒಡ್ಡಿಕೊಂಡಾಗ ಮಾರಣಾಂತಿಕವಾಗುತ್ತದೆ” ಎಂದು ಹೇಳುತ್ತದೆ.

ಆದರೆ ಅದು ಏಕೆ ತುಂಬಾ ತಂಪಾಗಿದೆ?

ಕಿರು ಉತ್ತರ: ಉತ್ತರ ಬೆಲ್ಟ್ ಮೂಲಕ ಹಾದುಹೋಗುವ ಪಶ್ಚಿಮದ ಅಡಚಣೆಗಳ ಬಲವಾದ ಅಲೆಗಳು ಇದಕ್ಕೆ ಕಾರಣವಾಗಿವೆ.

ಸಂಕೀರ್ಣ ಉತ್ತರ: ಲಾ ನಿನಾ.

ಈ ಪ್ರದೇಶಕ್ಕೆ ಚಳಿಯನ್ನು ತರುವುದು, ಅಡೆತಡೆಯಿಲ್ಲದ ವಾಯುವ್ಯ ಮಾರುತಗಳು ಹೆಚ್ಚಿನ ಅಕ್ಷಾಂಶದಿಂದ ಇಂಡೋ-ಗಂಗಾ ಬಯಲು ಪ್ರದೇಶಗಳಿಗೆ ಶೀತ ಗಾಳಿಯನ್ನು ತರುತ್ತವೆ. ಆದಾಗ್ಯೂ, ಒಂದಾದನಂತರ ಒಂದು ಪಶ್ಚಿಮದ ಅಡಚಣೆಗಳ ಅಂಗೀಕಾರವು ಗಾಳಿಯ ದಿಕ್ಕನ್ನು ಶೀತ ವಾಯುವ್ಯದಿಂದ ಬೆಚ್ಚಗಿನ ಮತ್ತು ಆರ್ದ್ರ ಇಸ್ಟರ್ಲಿ ಗೆ ಬದಲಾಯಿಸುತ್ತದೆ.ಆದಾಗ್ಯೂ, ಲಾ ನಿನಾ ವಿದ್ಯಮಾನದ ಉಪಸ್ಥಿತಿಯಿಂದಾಗಿ, ಕಡಿಮೆ ಪ್ರಮಾಣದ ಚಳಿಗಾಲದ ಮಳೆಯನ್ನು ನಿರೀಕ್ಷಿಸಲಾಗಿದೆ ಮತ್ತು ಹೀಗಾಗಿ, ಹಿಮಾವೃತವಾದ ಶೀತ ಗಾಳಿಯು ವಾಯುವ್ಯ ಭಾರತದ ಮೇಲೆ ಅಡೆತಡೆಯಿಲ್ಲದೆ ಬೀಸುವುದನ್ನು ಮುಂದುವರೆಸುತ್ತದೆ, ಇದು ತಾಪಮಾನವನ್ನು ಕಡಿಮೆ ಮಾಡುತ್ತದೆ.

ಹಿನ್ನೆಲೆ:

‘ಎಲ್ ನಿನೋ’ (El Niño) ಮತ್ತು ಲಾ ನೀನಾ (La Niña)  ವಿದ್ಯಮಾನಗಳು ‘ಎಲ್ ನಿನೋ ಸದರ್ನ್ ಆಸಿಲೇಷನ್ (El Nino Southern Oscillation – ENSO)’ ಚಕ್ರದ ಒಂದು ಭಾಗವಾಗಿದೆ.

  1. 2020 ರಲ್ಲಿ, ಲಾ ನಿಯಾ ಪರಿಸ್ಥಿತಿಗಳು ಆಗಸ್ಟ್ ತಿಂಗಳಲ್ಲಿ ಅಭಿವೃದ್ಧಿಗೊಂಡವು ಮತ್ತು ನಂತರ ಏಪ್ರಿಲ್ 2021 ರಲ್ಲಿ ENSO- ತಟಸ್ಥ ಪರಿಸ್ಥಿತಿಗಳು (ENSO-neutral conditions) ಅಭಿವೃದ್ಧಿಗೊಂಡಾಗ ಕೊನೆಗೊಂಡಿತು.
  2. ಮುಂಬರುವ ಚಳಿಗಾಲದ ಅವಧಿಯಲ್ಲಿ ಡಿಸೆಂಬರ್ 2021 ರಿಂದ ಫೆಬ್ರವರಿ 2022 ರವರೆಗೆ ‘ಲಾ ನಿನಾ’ ವಿದ್ಯಮಾನವು ಮರುಕಳಿಸುವ ಸಂಭವನೀಯತೆಯು 87% ಇದೆ.

‘ಎಲ್ ನಿನೊ’ ಮತ್ತು ‘ಲಾ ನಿನಾ’ ಎಂದರೇನು?

‘ಎಲ್ ನಿನೋ’ (El Niño) ಮತ್ತು ‘ಲಾ ನಿನಾ’ (La Niña) ಉಷ್ಣವಲಯದ ಪೆಸಿಫಿಕ್ ಸಾಗರದಲ್ಲಿ ಸಂಭವಿಸುವ ಎರಡು ನೈಸರ್ಗಿಕ ಹವಾಮಾನ ವಿದ್ಯಮಾನಗಳು ಮತ್ತು ಅವು ಪ್ರಪಂಚದಾದ್ಯಂತ ಹವಾಮಾನ ಪರಿಸ್ಥಿತಿಗಳ ಮೇಲೆ ಪರಿಣಾಮ ಬೀರುತ್ತವೆ.

  1. ‘ಎಲ್ ನಿನೋ’ ವಿದ್ಯಮಾನದ ಸಮಯದಲ್ಲಿ, ‘ಮಧ್ಯ ಮತ್ತು ಪೂರ್ವ ಉಷ್ಣವಲಯದ ಪೆಸಿಫಿಕ್ ಸಾಗರ’ ದಲ್ಲಿ ಮೇಲ್ಮೈ ತಾಪಮಾನ ಏರುತ್ತದೆ, ಮತ್ತು ‘ಲಾ ನಿನಾ’ ಪರಿಸ್ಥಿತಿಗಳಲ್ಲಿ, ಪೂರ್ವ ಪೆಸಿಫಿಕ್ ಸಾಗರದ ಮೇಲ್ಮೈ ತಾಪಮಾನವು ಸಾಮಾನ್ಯಕ್ಕಿಂತ ಕಡಿಮೆಯಾಗುತ್ತದೆ.
  2. ಒಟ್ಟಾಗಿ, ಈ ಎರಡು ವಿದ್ಯಮಾನಗಳನ್ನು ‘ENSO’ ಅಥವಾ ‘El Nio Southern Oscillation’ ಎಂದು ಕರೆಯಲಾಗುತ್ತದೆ.

‘ಎಲ್ ನಿನೋ’ ವಿದ್ಯಮಾನದ ಮೂಲ:

  1. ಹವಾಮಾನ ಮಾದರಿಯಲ್ಲಿ (Climate Pattern) ಅಸಂಗತತೆ ಉಂಟಾದಾಗ ಎಲ್ ನಿನೋ ಪರಿಸ್ಥಿತಿಗಳು ಸೃಷ್ಟಿಯಾಗುತ್ತವೆ.
  2. ಸಮಭಾಜಕವನ್ನು ಸಮೀಪಿಸುತ್ತಿದ್ದಂತೆ ಪಶ್ಚಿಮ ದಿಕ್ಕಿನ ವ್ಯಾಪಾರ ಮಾರುತಗಳು ದುರ್ಬಲಗೊಳ್ಳುತ್ತವೆ ಮತ್ತು ಇದರ ಪರಿಣಾಮವಾಗಿ, ವಾಯು ಒತ್ತಡದಲ್ಲಿನ ಬದಲಾವಣೆಯಿಂದಾಗಿ, ಮೇಲ್ಮೈ ನೀರು ಪೂರ್ವದಿಂದ ದಕ್ಷಿಣ ಅಮೆರಿಕಾದ ಉತ್ತರದ ತೀರಕ್ಕೆ ಹರಿಯಲು ಪ್ರಾರಂಭಿಸುತ್ತದೆ.
  3. ಮಧ್ಯ ಮತ್ತು ಪೂರ್ವ ಪೆಸಿಫಿಕ್ ಸಾಗರ ಪ್ರದೇಶವು, ಆರು ತಿಂಗಳುಗಳಿಗಿಂತ ಹೆಚ್ಚು ಕಾಲ ಬೆಚ್ಚಗಿರುತ್ತದೆ ಮತ್ತು ಇದರ ಪರಿಣಾಮವಾಗಿ ‘ಎಲ್ ನಿನೋ’ ಪರಿಸ್ಥಿತಿಗಳು ಉದ್ಭವಿಸುತ್ತವೆ.

Current Affairs

Current Affairs

 

ಲಾ ನಿನಾದಿಂದಾಗಿ ಹವಾಮಾನದಲ್ಲಿನ ಬದಲಾವಣೆಗಳು:

  1. ಲಾ ನೀನಾದ ಕಾರಣ, ಹಾರ್ನ್ ಆಫ್ ಆಫ್ರಿಕಾ ಮತ್ತು ಮಧ್ಯ ಏಷ್ಯಾದಲ್ಲಿ ಸರಾಸರಿ ವಾಡಿಕೆಗಿಂತ ಕಡಿಮೆ ಮಳೆಯಾಗುತ್ತದೆ.
  2. ಪೂರ್ವ ಆಫ್ರಿಕಾವು ಸಾಮಾನ್ಯ ಪರಿಸ್ಥಿತಿಗಳಿಗಿಂತ ಹೆಚ್ಚು ಬರವನ್ನು ಎದುರಿಸಬಹುದಾಗಿದ್ದು, ಈ ಪ್ರದೇಶದಲ್ಲಿ ಮರುಭೂಮಿ ಮಿಡತೆ ದಾಳಿಯಿಂದಾಗಿ ಪ್ರಾದೇಶಿಕ ಆಹಾರದ ಭದ್ರತೆಯ ಮೇಲೆ ಭೀಕರ ಪರಿಣಾಮ ಬೀರುವ ಸಾಧ್ಯತೆಯಿದೆ.
  3. ಲಾ ನೀನಾ ಆಗಮನದೊಂದಿಗೆ, ದಕ್ಷಿಣ ಆಫ್ರಿಕಾದಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ಮಳೆಯಾಗಬಹುದು.
  4. ಇದು ನೈರುತ್ಯ ಹಿಂದೂ ಮಹಾಸಾಗರದ ಉಷ್ಣವಲಯದ ಚಂಡಮಾರುತಗಳ ಋತುವಿನ ಮೇಲೆ ವ್ಯಾಪಕವಾಗಿ ಪರಿಣಾಮ ಬೀರುತ್ತದೆ ಮತ್ತು ಚಂಡಮಾರುತದ ತೀವ್ರತೆಯನ್ನು ಕಡಿಮೆ ಮಾಡಲು ಕಾರಣವಾಗಬಹುದು.
  5. ಇದು ಆಗ್ನೇಯ ಏಷ್ಯಾ, ಕೆಲವು ಪೆಸಿಫಿಕ್ ದ್ವೀಪ ಸಮೂಹಗಳು ಮತ್ತು ದಕ್ಷಿಣ ಅಮೆರಿಕದ ಉತ್ತರ ಪ್ರದೇಶದಲ್ಲಿ ಸರಾಸರಿಗಿಂತ ಹೆಚ್ಚಿನ ಮಳೆಯನ್ನು ತರುವ ನಿರೀಕ್ಷೆಯಿದೆ.
  6. ಲಾ ನಿನಾದ ಆಗಮನದೊಂದಿಗೆ, ಭಾರತವು ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯನ್ನು ಪಡೆಯುತ್ತದೆ, ಇದು ದೇಶದ ವಿವಿಧ ಭಾಗಗಳಲ್ಲಿ ಪ್ರವಾಹದ ತೀವ್ರತೆಯನ್ನು ಹೆಚ್ಚಿಸುತ್ತದೆ.

 


ಸಾಮಾನ್ಯ ಅಧ್ಯಯನ ಪತ್ರಿಕೆ : 2


 

ವಿಷಯಗಳು: ಪ್ರಮುಖ ಅಂತರರಾಷ್ಟ್ರೀಯ ಸಂಸ್ಥೆಗಳು, ಏಜೆನ್ಸಿಗಳು ಮತ್ತು ವೇದಿಕೆಗಳು, ಅವುಗಳ ರಚನೆ, ಮತ್ತು ಆದೇಶ.

ಅಂತರಾಷ್ಟ್ರೀಯ ಇಂಧನ ಸಂಸ್ಥೆ (IEA) ಮತ್ತು ವಿದ್ಯುತ್ ಮಾರುಕಟ್ಟೆ ವರದಿ:


(International Energy Agency (IEA) and Electricity Market Report)

ಸಂದರ್ಭ:

ಅಂತರಾಷ್ಟ್ರೀಯ ಇಂಧನ ಸಂಸ್ಥೆಯ ದ್ವೈ-ವಾರ್ಷಿಕ ವಿದ್ಯುತ್ ಮಾರುಕಟ್ಟೆ ವರದಿಯ (bi-annual Electricity Market Report) 2022 ರ ಆರಂಭಿಕ ಆವೃತ್ತಿಯನ್ನು ಇತ್ತೀಚಿಗೆ ಪ್ರಕಟಿಸಲಾಗಿದೆ.

ವರದಿಯ ಮುಖ್ಯಾಂಶಗಳು:

  1. ಕೋವಿಡ್-19 ಲಾಕ್‌ಡೌನ್ ನಿರ್ಬಂಧಗಳನ್ನು ತೆಗೆದುಹಾಕುತ್ತಿರುವುದರಿಂದ ವಿದ್ಯುತ್ ಬೇಡಿಕೆಯ ಹೆಚ್ಚಳವನ್ನು ಪೂರೈಸಲು ರಾಷ್ಟ್ರಗಳು ಹೆಚ್ಚಾಗಿ ಪಳೆಯುಳಿಕೆ ಇಂಧನಗಳ ಬಳಕೆಯತ್ತ ಒಲವು ತೋರುತ್ತಿವೆ.
  2. ಜಾಗತಿಕ ವಿದ್ಯುತ್ ಬೇಡಿಕೆಯು 2021 ರಲ್ಲಿ ವರ್ಷದಿಂದ ವರ್ಷಕ್ಕೆ 6% ಹೆಚ್ಚಾಗಿದೆ – 2008 ರ ಆರ್ಥಿಕ ಕುಸಿತದ ನಂತರ IEA ಯಿಂದ ವರ್ಷದಿಂದ ವರ್ಷಕ್ಕೆ ಕಡಿದಾದ ಹೆಚ್ಚಳವಾಗಿದೆ.
  3. ಜಾಗತಿಕ ಶಕ್ತಿಯ ತೀವ್ರತೆಯು ವರ್ಷದಿಂದ ವರ್ಷಕ್ಕೆ 1.9% ರಷ್ಟು ಕಡಿಮೆಯಾಗಿದೆ – 2050 ರ ವೇಳೆಗೆ ನಿವ್ವಳ-ಶೂನ್ಯಕ್ಕೆ ಅಡಿಪಾಯ ಹಾಕಲು ಅಗತ್ಯವಿರುವ ಮಟ್ಟಕ್ಕಿಂತ ಅರ್ಧದಷ್ಟು ಕಡಿದಾದ ಕುಸಿತವಾಗಿದೆ.
  4. ನವೀಕರಿಸಬಹುದಾದ ವಿದ್ಯುತ್ ಉತ್ಪಾದನೆಯು 2021 ರಲ್ಲಿ ವರ್ಷದಿಂದ ವರ್ಷಕ್ಕೆ 6% ರಷ್ಟು ಹೆಚ್ಚಿದ್ದರೆ, ಕಲ್ಲಿದ್ದಲಿನಿಂದ ವಿದ್ಯುತ್ ಉತ್ಪಾದನೆಯು 9% ರಷ್ಟು ಹೆಚ್ಚಾಗಿದೆ, ಚೀನಾ ಮತ್ತು ಭಾರತ ಸೇರಿದಂತೆ ಪ್ರಮುಖ ಮಾರುಕಟ್ಟೆಗಳಲ್ಲಿ, ವಿದ್ಯುತ್ ಬೇಡಿಕೆಯ ಹೆಚ್ಚಳದ ಅರ್ಧಕ್ಕಿಂತ ಹೆಚ್ಚಿನದನ್ನು ಕಲ್ಲಿದ್ದಲು ಪೂರೈಸುತ್ತದೆ.
  5. ಇದು ಗ್ಯಾಸ್- ಫೀಲ್ಡ್ ಉತ್ಪಾದನೆಯಲ್ಲಿ 2% ಹೆಚ್ಚಳದೊಂದಿಗೆ, ವಿದ್ಯುತ್ ವಲಯದಿಂದ ಹೊರಸೂಸುವಿಕೆಯ ಪ್ರಮಾಣದಲ್ಲಿ ವರ್ಷದಿಂದ ವರ್ಷಕ್ಕೆ 7% ಹೆಚ್ಚಳಕ್ಕೆ ಕಾರಣವಾಯಿತು.
  6. ಹೊರಸೂಸುವಿಕೆಯ ಎರಡು ವರ್ಷಗಳ ಕುಸಿತದ ನಂತರ, ಅಂದರೆ ಈಗ ವಿದ್ಯುತ್ ವಲಯದಿಂದ ಹೊರಸೂಸುವಿಕೆಯು ದಾಖಲೆಯ ಮಟ್ಟದಲ್ಲಿದೆ.

ಕಾಳಜಿಗಳು:

  1. ಹೆಚ್ಚುತ್ತಿರುವ ನಿವ್ವಳ-ಶೂನ್ಯ ಚಳುವಳಿಯ ಹೊರತಾಗಿಯೂ, ಹೆಚ್ಚಿದ ಹೊರಸೂಸುವಿಕೆಯಿಂದ ಹೆಚ್ಚಿದ ವಿದ್ಯುತ್ ಬೇಡಿಕೆಗಳನ್ನು ಬೇರ್ಪಡಿಸಲು ರಾಷ್ಟ್ರಗಳು ಇನ್ನೂ ವಿಫಲವಾಗುತ್ತಿವೆ ಎಂದು IEA ಕಳವಳ ವ್ಯಕ್ತಪಡಿಸುತ್ತಿದೆ.
  2. ಮುಂದಿನ ಮೂರು ವರ್ಷಗಳವರೆಗೆ ವಿದ್ಯುತ್ ವಲಯದ ಹೊರಸೂಸುವಿಕೆಗಳು “ಅದೇ ಮಟ್ಟದಲ್ಲಿ” ಉಳಿಯುವ ಸಾಧ್ಯತೆಯಿದೆ ಎಂದು ಇದು ಮುನ್ಸೂಚಿಸುತ್ತಿದೆ.
  3. ಇದಕ್ಕೆ ವ್ಯತಿರಿಕ್ತವಾಗಿ, 2050 ರ ವೇಳೆಗೆ IEA ದ ನಿವ್ವಳ-ಶೂನ್ಯವು 2019 ರ ಬೇಸ್‌ಲೈನ್‌ಗೆ ವಿರುದ್ಧವಾಗಿ 2030 ರ ವೇಳೆಗೆ ವಲಯವಾರು ಹೊರಸೂಸುವಿಕೆಯಲ್ಲಿ 55% ಇಳಿಕೆಗೆ ಕಾರಣವಾಗುತ್ತದೆ.
  4. ವರದಿಯು ಜಾಗತಿಕವಾಗಿ ಸಗಟು ಅನಿಲ ಮತ್ತು ವಿದ್ಯುತ್ ಬೆಲೆಗಳಲ್ಲಿ “ಅಭೂತಪೂರ್ವ” ಮಟ್ಟಗಳಿಗೆ ಹೆಚ್ಚಳವಾಗುವ ಮತ್ತು ಕಲ್ಲಿದ್ದಲು ಬೆಲೆಗಳಲ್ಲಿ ಏರಿಳಿತವನ್ನು ಸೂಚಿಸುತ್ತದೆ.

ಹಿನ್ನೆಲೆ:

ಮಾರ್ಚ್ 2017 ರಲ್ಲಿ ಭಾರತವು ಅಂತಾರಾಷ್ಟ್ರೀಯ ಇಂಧನ ಏಜೆನ್ಸಿಯ (IEA) ಸಹ ಸದಸ್ಯತ್ವ ಪಡೆಯಿತು.

ಅಂತಾರಾಷ್ಟ್ರೀಯ ಇಂಧನ ಸಂಸ್ಥೆಯ ಕುರಿತು:

  1. ಅಂತಾರಾಷ್ಟ್ರೀಯ ಇಂಧನ ಸಂಸ್ಥೆಯು (IEA) ಅಂತರ್ ಸರ್ಕಾರಿ ಸ್ವಾಯತ್ತ ಸಂಸ್ಥೆಯಾಗಿದ್ದು ಇದನ್ನು ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿಗಾಗಿನ ಸಂಘಟನೆಯ (Organisation of Economic Cooperation and Development- OECD) ಫ್ರೇಮ್ವರ್ಕ್ ಪ್ರಕಾರ ಇದನ್ನು 1974 ರಲ್ಲಿ ಸ್ಥಾಪಿಸಲಾಯಿತು.
  2. ಅದರ ಕಾರ್ಯೋದ್ದೇಶವು ಮುಖ್ಯವಾಗಿ ನಾಲ್ಕು ಪ್ರಮುಖ ಕ್ಷೇತ್ರಗಳ ಮೇಲೆ ಕೇಂದ್ರೀಕರಿಸಿದೆ: ಇಂಧನ ಸುರಕ್ಷತೆ, ಆರ್ಥಿಕ ಅಭಿವೃದ್ಧಿ, ಪರಿಸರ ಜಾಗೃತಿ ಮತ್ತು ಜಾಗತಿಕ ಭಾಗವಹಿಸುವಿಕೆ.
  3. ಇದರ ಪ್ರಧಾನ ಕಚೇರಿಯು ( ಸಚಿವಾಲಯ) ಫ್ರಾನ್ಸ್‌ನ ಪ್ಯಾರಿಸ್‌ನಲ್ಲಿದೆ.

ಅದರ ಪಾತ್ರಗಳು ಮತ್ತು ಕಾರ್ಯಗಳು:

  1. 1973-1974ರ ತೈಲ ಬಿಕ್ಕಟ್ಟಿನ ಸಂದರ್ಭದಲ್ಲಿ ಅದರ ಸದಸ್ಯರಿಗೆ ಪ್ರಮುಖ ತೈಲ ಪೂರೈಕೆ ಅಡಚಣೆ ಗಳಿಗೆ ಸ್ಪಂದಿಸಲು ಅಂತರರಾಷ್ಟ್ರೀಯ ಇಂಧನ ಏಜೆನ್ಸಿಯನ್ನು ಸ್ಥಾಪಿಸಲಾಯಿತು. ಅದು ಇಂದಿಗೂ ತನ್ನ ಪಾತ್ರವನ್ನು ನಿರ್ವಹಿಸುತ್ತಿದೆ.
  2. ಜಾಗತಿಕವಾಗಿ ಪ್ರಮುಖ ಇಂಧನ ಪ್ರವೃತ್ತಿಗಳನ್ನು ಪತ್ತೆಹಚ್ಚುವುದು ಮತ್ತು ವಿಶ್ಲೇಷಿಸುವುದು, ಬಲವಾದ ಇಂಧನ ನೀತಿಗಳನ್ನು ಉತ್ತೇಜಿಸುವುದು ಮತ್ತು ಬಹುರಾಷ್ಟ್ರೀಯ ಇಂಧನ ತಂತ್ರಜ್ಞಾನ ಸಹಕಾರವನ್ನು ಉತ್ತೇಜಿಸಲು ಅಂತರರಾಷ್ಟ್ರೀಯ ಇಂಧನ ಸಂಸ್ಥೆ (IEA) ಆದೇಶವು ಕಾಲಾನಂತರದಲ್ಲಿ ವಿಸ್ತರಿಸಿದೆ.

IEA ಸಂಯೋಜನೆ ಮತ್ತು ಸದಸ್ಯತ್ವದ ಅರ್ಹತೆ:

Composition and eligibility:

  1. ಅಂತರರಾಷ್ಟ್ರೀಯ ಇಂಧನ ಸಂಸ್ಥೆ ಪ್ರಸ್ತುತ 30 ಸದಸ್ಯ ರಾಷ್ಟ್ರಗಳು ಮತ್ತು ಎಂಟು ಪಾಲುದಾರ ರಾಷ್ಟ್ರಗಳನ್ನು ಒಳಗೊಂಡಿದೆ. ಸದಸ್ಯರಾಗಲು, ದೇಶವೊಂದು ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಸ್ಥೆ (OECD) ಯಲ್ಲಿ ಸದಸ್ಯರಾಗುವುದು ಕಡ್ಡಾಯವಾಗಿದೆ. ಆದಾಗ್ಯೂ OECD ಯ ಎಲ್ಲಾ ಸದಸ್ಯರು IEA ಸದಸ್ಯರಲ್ಲ.
  2. ಅಂತರರಾಷ್ಟ್ರೀಯ ಇಂಧನ ಏಜೆನ್ಸಿಯ ಸದಸ್ಯತ್ವಕ್ಕಾಗಿ ಒಂದು ದೇಶವು ಈ ಕೆಳಗಿನ ಷರತ್ತುಗಳನ್ನು ಪೂರೈಸಬೇಕು:
  3. ಹಿಂದಿನ ವರ್ಷದ 90 ದಿನಗಳಲ್ಲಿ ಮಾಡಿದ ನಿವ್ವಳ ಆಮದಿಗೆ ಸಮನಾದ ಕಚ್ಚಾ ತೈಲ ಮತ್ತು / ಅಥವಾ ಉತ್ಪನ್ನ ನಿಕ್ಷೇಪಗಳನ್ನು ದೇಶದ ಸರ್ಕಾರವು ಹೊಂದಿರಬೇಕು. ಇವು ನೇರವಾಗಿ ಸರ್ಕಾರದ ಒಡೆತನದಲ್ಲಿಲ್ಲದಿದ್ದರೂ, ಜಾಗತಿಕ ತೈಲ ಪೂರೈಕೆಯಲ್ಲಿನ ಅಡೆತಡೆಯನ್ನು ನಿವಾರಿಸಲು ಇದನ್ನು ಬಳಸಬಹುದು.
  4. ದೇಶದಲ್ಲಿ ರಾಷ್ಟ್ರೀಯ ತೈಲ ಬಳಕೆಯನ್ನು 10% ರಷ್ಟು ಕಡಿಮೆ ಮಾಡಲು ‘ಬೇಡಿಕೆ ನಿಯಂತ್ರಣ ಕಾರ್ಯಕ್ರಮ’ ವನ್ನು ಜಾರಿಗೆ ತರಬೇಕು.
  5. ರಾಷ್ಟ್ರೀಯ ಆಧಾರಿತವಾಗಿ ಸಂಘಟಿತ ತುರ್ತು ಪ್ರತಿಕ್ರಿಯೆ ಕ್ರಮಗಳನ್ನು (Co-ordinated Emergency Response Measures- CERM) ಜಾರಿಗೆ ತರಲು ಶಾಸನ ಸಂಸ್ಥೆಗಳು ಇರಬೇಕು.
  6. ಕೋರಿಕೆಯ ಮೇರೆಗೆ, ದೇಶದ ವ್ಯಾಪ್ತಿಯಲ್ಲಿ ಕೆಲಸ ಮಾಡುವ ಎಲ್ಲಾ ತೈಲ ಕಂಪನಿಗಳು ಮಾಹಿತಿ ನೀಡುತ್ತಿವೆಯೇ ಎಂದು ಖಚಿತಪಡಿಸಿಕೊಳ್ಳಲು ಕಾನೂನು ಕ್ರಮಗಳು ಇರಬೇಕು.
  7. ಅಂತರರಾಷ್ಟ್ರೀಯ ಇಂಧನ ಏಜೆನ್ಸಿಯ ಸಾಮೂಹಿಕ ಕ್ರಮಕ್ಕೆ ಅದರ ಕೊಡುಗೆ ನೀಡುವುದನ್ನು ಖಚಿತಪಡಿಸಿಕೊಳ್ಳಲು ದೇಶದಲ್ಲಿ ಕಾನೂನುಗಳು ಅಥವಾ ಕ್ರಮಗಳು ಇರಬೇಕು.

ಅಂತರರಾಷ್ಟ್ರೀಯ ಇಂಧನ ಸಂಸ್ಥೆ ಪ್ರಕಟಿಸುವ ವರದಿಗಳು:

  1. ಜಾಗತಿಕ ಇಂಧನ ಮತ್ತು ಇಂಗಾಲದ ಡೈ ಆಕ್ಸೈಡ್ (CO2) ಸ್ಥಿತಿ ವರದಿ.(Global Energy & CO2 Status Report)
  2. ವಿಶ್ವ ಇಂಧನ ಮುನ್ನೋಟ.(World Energy Outlook)
  3. ವಿಶ್ವ ಇಂಧನ ಅಂಕಿಅಂಶಗಳು.(World Energy Statistics)
  4. ವಿಶ್ವ ಇಂಧನ ಸಮತೋಲನ.(World Energy Balances)
  5. ಇಂಧನ ತಂತ್ರಜ್ಞಾನದ ದೃಷ್ಟಿಕೋನಗಳು.(Energy Technology Perspectives).

 

ವಿಷಯಗಳು:ಪ್ರಮುಖ ಅಂತರರಾಷ್ಟ್ರೀಯ ಸಂಸ್ಥೆಗಳು, ಏಜೆನ್ಸಿಗಳು ಮತ್ತು ವೇದಿಕೆಗಳು, ಅವುಗಳ ರಚನೆ.

ವಿಶ್ವಸಂಸ್ಥೆಯ ಭದ್ರತಾ ಮಂಡಳಿ:


(United Nations Security Council)

ಸಂದರ್ಭ:

ಉತ್ತರ ಕೊರಿಯಾದ ಸರಣಿ ಕ್ಷಿಪಣಿ ಉಡಾವಣೆಗಳ ನಂತರ ಉತ್ತರ ಕೊರಿಯಾದ ಮೇಲೆ ಹೆಚ್ಚಿನ ನಿರ್ಬಂಧಗಳನ್ನು ವಿಧಿಸಲು ಅಮೆರಿಕ ಸಂಯುಕ್ತ ಸಂಸ್ಥಾನವು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯನ್ನು ಒತ್ತಾಯಿಸುತ್ತಿದೆ.

ಕ್ಷಿಪಣಿ ಉಡಾವಣೆಗಳ ಮೇಲೆ ಯುನೈಟೆಡ್ ಸ್ಟೇಟ್ಸ್ ಈಗಾಗಲೇ ಏಕಪಕ್ಷೀಯ ನಿರ್ಬಂಧಗಳನ್ನು ವಿಧಿಸಿದೆ. ಇದು ಉತ್ತರ ಕೊರಿಯಾದ ಆರುಜನ, ಒಬ್ಬ ರಷ್ಯನ್ ಮತ್ತು ರಷ್ಯಾದ ಒಂದು ಸಂಸ್ಥೆಯನ್ನು ಕಪ್ಪುಪಟ್ಟಿಗೆ ಸೇರಿಸಿದೆ, ಕಾರಣ ಅವರ ಮೇಲೆ ರಷ್ಯಾ ಮತ್ತು ಚೀನಾದಿಂದ ಪರಮಾಣು ಕಾರ್ಯಕ್ರಮಗಳಿಗೆ ಸರಕುಗಳನ್ನು ಸಂಗ್ರಹಿಸುತ್ತಿದ್ದಾರೆ ಎಂದು ಆರೋಪವಿದೆ.

ಇತ್ತೀಚಿನ ಘಟನೆಗಳು:

ಆರು ತಿಂಗಳ ವಿರಾಮದ ನಂತರ, ಉತ್ತರ ಕೊರಿಯಾ ಸೆಪ್ಟೆಂಬರ್‌ನಲ್ಲಿ ಕ್ಷಿಪಣಿ ಪರೀಕ್ಷೆಯನ್ನು ಪುನರಾರಂಭಿಸಿತು ಮತ್ತು ಹೊಸದಾಗಿ ಅಭಿವೃದ್ಧಿಪಡಿಸಿದ ಹಲವಾರು ಕ್ಷಿಪಣಿಗಳನ್ನು ಒಳಗೊಂಡಂತೆ ದಕ್ಷಿಣ ಕೊರಿಯಾ ಮತ್ತು ಜಪಾನ್‌ ಗಳ ಮೇಲೆ ನಿಖರ ದಾಳಿಮಾಡುವ ಸಾಮರ್ಥ್ಯವಿರುವ ಪರಮಾಣು ಸಾಮರ್ಥ್ಯದ ಆಯುಧಗಳನ್ನು ಅಭಿವೃದ್ಧಿಪಡಿಸಿದೆ.

  1. ‘ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು’ ಉತ್ತರ ಕೊರಿಯಾದ ಸಾರ್ವಭೌಮತ್ವವನ್ನು ಉಲ್ಲಂಘಿಸಲು ಪ್ರಯತ್ನಿಸಿದರೆ, ಅದು ಭವಿಷ್ಯದಲ್ಲಿ ಅದರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಉತ್ತರ ಕೊರಿಯಾವು ‘ವಿಶ್ವಸಂಸ್ಥೆಯ ಭದ್ರತಾ ಮಂಡಳಿ’ (UNSC) ಗೆ ಎಚ್ಚರಿಕೆ ನೀಡಿದೆ.
  2. ಅದೇ ಸಮಯದಲ್ಲಿ, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು,“ಡಬಲ್ ಡೀಲಿಂಗ್ ಸ್ಟಾಂಡರ್ಡ್ ಅನ್ನು” ಅಳವಡಿಸಿಕೊಂಡಿದೆ ಎಂದು ಉತ್ತರ ಕೊರಿಯಾ ಆರೋಪಿಸಿದೆ. ಕಾರಣ, ಯುನೈಟೆಡ್ ನೇಷನ್ಸ್ ಸೆಕ್ಯುರಿಟಿ ಕೌನ್ಸಿಲ್ ಅಮೆರಿಕ ಮತ್ತು ಅದರ ಮಿತ್ರರಾಷ್ಟ್ರಗಳು ಇದೇ ರೀತಿಯ ಶಸ್ತ್ರಾಸ್ತ್ರಗಳನ್ನು ಪರೀಕ್ಷಿಸುವ ಸಮಸ್ಯೆಯನ್ನು ಸಮಾನವಾಗಿ ಸ್ವೀಕರಿಸುವುದಿಲ್ಲ ಎಂದು ಹೇಳಿದೆ.

ಪ್ರಸ್ತುತ ಸನ್ನಿವೇಶ:

ಉತ್ತರ ಕೊರಿಯಾ ತನ್ನ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಪರಮಾಣು ಶಸ್ತ್ರಾಸ್ತ್ರಗಳಿಂದ ಸಜ್ಜುಗೊಳಿಸುವ ಗುರಿಯನ್ನು ಹೊಂದಿರುವುದರಿಂದ, ಹಲವಾರು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯಗಳ ಅಡಿಯಲ್ಲಿ, ಉತ್ತರ ಕೊರಿಯಾವನ್ನು ಯಾವುದೇ ಬ್ಯಾಲಿಸ್ಟಿಕ್ ಕ್ಷಿಪಣಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದನ್ನು ನಿಷೇಧಿಸಲಾಗಿದೆ.

ವಿಶ್ವಸಂಸ್ಥೆಯ ಭದ್ರತಾ ಮಂಡಳಿ (UNSC) ಯ ಕುರಿತು:

  1. ವಿಶ್ವಸಂಸ್ಥೆಯ ಭದ್ರತಾ ಮಂಡಳಿ (UNSC) ಸೇರಿದಂತೆ ವಿಶ್ವಸಂಸ್ಥೆಯ ಆರು ಪ್ರಮುಖ ಅಂಗಗಳನ್ನು ವಿಶ್ವಸಂಸ್ಥೆಯ ಚಾರ್ಟರ್ ಸ್ಥಾಪಿಸಿದೆ.
  2. ಚಾರ್ಟರ್ ಅಡಿಯಲ್ಲಿ, ಭದ್ರತಾ ಮಂಡಳಿಗೆ ನಿರ್ಧಾರ ತೆಗೆದುಕೊಳ್ಳುವ ಅಧಿಕಾರವನ್ನು ನೀಡಲಾಗುತ್ತದೆ ಮತ್ತು ಅದರ ನಿರ್ಧಾರಗಳು ಸದಸ್ಯ ರಾಷ್ಟ್ರಗಳ ಮೇಲೆ ಬಾಧ್ಯಸ್ಥ ವಾಗಿರುತ್ತವೆ.
  3. ಖಾಯಂ ಮತ್ತು ಶಾಶ್ವತವಲ್ಲದ ಸದಸ್ಯರು: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು 15 ಸದಸ್ಯರನ್ನು ಒಳಗೊಂಡಿದೆ, ಅದರಲ್ಲಿ 5 ಖಾಯಂ ಮತ್ತು 10 ಶಾಶ್ವತವಲ್ಲದ ರಾಷ್ಟ್ರಗಳು.
  4. ಪ್ರತಿ ವರ್ಷ, ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಐದು ಖಾಯಂ ಅಲ್ಲದ ಸದಸ್ಯರನ್ನು ಎರಡು ವರ್ಷಗಳ ಅವಧಿಗೆ ಆಯ್ಕೆ ಮಾಡುತ್ತದೆ.

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಅಧ್ಯಕ್ಷತೆಯ ಬಗ್ಗೆ:

  1. ಸದಸ್ಯ ರಾಷ್ಟ್ರಗಳ ಇಂಗ್ಲಿಷ್‌ ಹೆಸರಿನ ಮೊದಲ ಅಕ್ಷರಗಳ ಅನುಕ್ರಮದಲ್ಲಿ ಆಯಾ ರಾಷ್ಟ್ರಗಳಿಗೆ ಅಧ್ಯಕ್ಷ ಸ್ಥಾನವನ್ನು ಒಂದು ತಿಂಗಳು ಅವಧಿಗೆ ನೀಡಲಾಗುತ್ತದೆ.
  2. ಈ ಅನುಕ್ರಮವು ‘ಭದ್ರತಾ ಮಂಡಳಿ’ಯ 15 ಸದಸ್ಯ-ರಾಷ್ಟ್ರಗಳ ನಡುವೆ ಮಾಸಿಕವಾಗಿ ಮುಂದುವರಿಯುತ್ತದೆ.
  3. ಸದಸ್ಯ ರಾಷ್ಟ್ರದ ನಿಯೋಗದ ಮುಖ್ಯಸ್ಥರನ್ನು ‘ವಿಶ್ವಸಂಸ್ಥೆಯ ಭದ್ರತಾ ಮಂಡಳಿ’ ಅಧ್ಯಕ್ಷ ಎಂದು ಕರೆಯಲಾಗುತ್ತದೆ.
  4. ಭದ್ರತಾ ಮಂಡಳಿಯ ಅಧ್ಯಕ್ಷರು ಕೌನ್ಸಿಲ್‌ನ ಕಾರ್ಯಗಳನ್ನು ಸಮನ್ವಯಗೊಳಿಸುತ್ತಾರೆ, ನೀತಿ ವಿವಾದಗಳನ್ನು ನಿರ್ಧರಿಸುತ್ತಾರೆ ಮತ್ತು ಕೆಲವೊಮ್ಮೆ ಸಂಘರ್ಷದ ಗುಂಪುಗಳ ನಡುವೆ ರಾಜತಾಂತ್ರಿಕ ಅಥವಾ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸುತ್ತಾರೆ.
  5. ಭಾರತವು ಆಗಸ್ಟ್‌ 1ರಿಂದ ಒಂದು ತಿಂಗಳ ಅವಧಿಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಅಧ್ಯಕ್ಷತೆ ವಹಿಸಿಕೊಂಡಿದೆ. ಈ ಅವಧಿಯಲ್ಲಿ ಕಡಲ ಭದ್ರತೆ, ಶಾಂತಿ ಪಾಲನೆ ಮತ್ತು ಭಯೋತ್ಪಾದನೆ ನಿಗ್ರಹಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಆಯೋಜಿಸಲು ಸಿದ್ಧತೆ ನಡೆಸಿದೆ.
  6. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಶಾಶ್ವತವಲ್ಲದ ಸದಸ್ಯ ರಾಷ್ಟ್ರವಾಗಿರುವ ಭಾರತದ ಎರಡು ವರ್ಷಗಳ ಅಧಿಕಾರಾವಧಿಯು 2021ರ ಜನವರಿ 1ರಿಂದ ಆರಂಭವಾಗಿದೆ. ಮುಂದಿನ ವರ್ಷ ಡಿಸೆಂಬರ್‌ನಲ್ಲಿ ಮತ್ತೆ ಭದ್ರತಾ ಮಂಡಳಿಯ ಅಧ್ಯಕ್ಷ ಸ್ಥಾನ ಭಾರತಕ್ಕೆ ಸಿಗಲಿದೆ.

ಭದ್ರತಾ ಮಂಡಳಿಗೆ ಜುಲೈ ತಿಂಗಳಲ್ಲಿ ಫ್ರಾನ್ಸ್ ಅಧ್ಯಕ್ಷತೆ ವಹಿಸಿತ್ತು.

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಪ್ರಸ್ತಾವಿತ ಸುಧಾರಣೆಗಳು:

ವಿಶ್ವಸಂಸ್ಥೆಯ ಭದ್ರತಾ ಮಂಡಳಿ (UNSC) ಯನ್ನು ಐದು ಪ್ರಮುಖ ವಿಷಯಗಳಲ್ಲಿ ಸುಧಾರಣೆ ಮಾಡಲು ಉದ್ದೇಶಿಸಲಾಗಿದೆ:

ಸದಸ್ಯತ್ವದ ವರ್ಗಗಳು,

  1. ಐದು ಖಾಯಂ ಸದಸ್ಯರು ಹೊಂದಿರುವ ವೀಟೋ ಅಧಿಕಾರದ ಪ್ರಶ್ನೆ,
  2. ಪ್ರಾದೇಶಿಕ ಪ್ರಾತಿನಿಧ್ಯ,
  3. ವಿಸ್ತರಿತ ಮಂಡಳಿಯ ಗಾತ್ರ ಮತ್ತು ಅದರ ಕಾರ್ಯವೈಖರಿ, ಮತ್ತು,
  4. ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಮತ್ತು ವಿಶ್ವಸಂಸ್ಥೆಯ ಸಾಮಾನ್ಯ ಸಭೆ ನಡುವಿನ ಸಂಬಂಧಗಳು.

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತದ ಖಾಯಂ ಸದಸ್ಯತ್ವಕ್ಕಾಗಿ ಪ್ರಮುಖ ಅಂಶಗಳು:

  1. ಭಾರತವು,ವಿಶ್ವಸಂಸ್ಥೆಯ ಸ್ಥಾಪಕ ಸದಸ್ಯ ದೇಶವಾಗಿದೆ.
  2. ಅತ್ಯಂತ ಮುಖ್ಯವಾದ ವಿಷಯವೆಂದರೆ,
  3. ಭಾರತವು ವಿವಿಧ ಕಾರ್ಯಾಚರಣೆಗಳಲ್ಲಿ ನಿಯೋಜಿಸಿರುವ ಶಾಂತಿಪಾಲಕರ ಸಂಖ್ಯೆಯು, P5 ದೇಶಗಳಿಗಿಂತ ಸುಮಾರು ಎರಡು ಪಟ್ಟು ಹೆಚ್ಚಾಗಿದೆ.
  4. ಭಾರತವು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ಮತ್ತು ಎರಡನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿದೆ.
  5. ಭಾರತವು ಮೇ 1998 ರಲ್ಲಿ ಪರಮಾಣು ಶಸ್ತ್ರಾಸ್ತ್ರ ರಾಷ್ಟ್ರದ (Nuclear Weapons State – NWS) ಸ್ಥಾನಮಾನವನ್ನು ಪಡೆಯಿತು.ಮತ್ತು ಅಸ್ತಿತ್ವದಲ್ಲಿರುವ ಖಾಯಂ ಸದಸ್ಯರಂತೆಯೇ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿದೆ.ಈ ಆಧಾರದ ಮೇಲೆ ಭಾರತವು ಭದ್ರತಾ ಮಂಡಳಿಯಲ್ಲಿ ಶಾಶ್ವತ ಸದಸ್ಯತ್ವಕ್ಕಾಗಿ ಸ್ವಾಭಾವಿಕ ಹಕ್ಕುದಾರನಾಗುತ್ತದೆ.
  6. ಭಾರತವು ತೃತೀಯ ಜಗತ್ತಿನ ರಾಷ್ಟ್ರಗಳ ನಿರ್ವಿವಾದ ನಾಯಕ ದೇಶವಾಗಿದೆ ಮತ್ತು ಇದು ‘ಅಲಿಪ್ತ ಚಳುವಳಿ’ ಮತ್ತು ಜಿ -77 ಗುಂಪಿನಲ್ಲಿ ಭಾರತ ನಿರ್ವಹಿಸಿದ ನಾಯಕತ್ವದ ಪಾತ್ರದಲ್ಲಿ ಇದು ಸ್ಪಷ್ಟವಾಗಿ ಪ್ರತಿಫಲಿಸುತ್ತದೆ.

ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತ:

  1. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ 1950–51ರಿಂದ 2011–12ರವರೆಗೆ ಭಾರತವು ಏಳು ಬಾರಿ ಖಾಯಂ ಅಲ್ಲದ ಸದಸ್ಯ ರಾಷ್ಟ್ರವಾಗಿ ಆಯ್ಕೆಯಾಗಿದೆ.
  2. 1950-51ರಲ್ಲಿ, ಕೊರಿಯನ್ ಯುದ್ಧದ ಸಮಯದಲ್ಲಿ ಯುದ್ಧವನ್ನು ಕೊನೆಗೊಳಿಸಲು ಮತ್ತು ಕೊರಿಯಾ ಗಣರಾಜ್ಯದ ಸಹಾಯಕ್ಕಾಗಿ ಒತ್ತಾಯಿಸುವ ನಿರ್ಣಯಗಳನ್ನು ಅಂಗೀಕರಿಸಲು ಭಾರತ ಅಧ್ಯಕ್ಷತೆ ವಹಿಸಿತ್ತು.
  3. 1972-73ರಲ್ಲಿ ಭಾರತವು ವಿಶ್ವಸಂಸ್ಥೆಯಲ್ಲಿ ಬಾಂಗ್ಲಾದೇಶದ ಸದಸ್ಯತ್ವಕ್ಕಾಗಿ ಬಲವಾಗಿ ಬೆಂಬಲಿಸಿತು. ಆದರೆ, ಖಾಯಂ ಸದಸ್ಯ ರಾಷ್ಟ್ರವೊಂದರ ವೀಟೋ ಕಾರಣ ದಿಂದಾಗಿ ನಿರ್ಣಯವನ್ನು ಅಂಗೀಕರಿಸಲಾಗಿಲ್ಲ.
  4. 1977-78ರಲ್ಲಿ ಭಾರತವು UNSC ಯಲ್ಲಿ ಆಫ್ರಿಕಾಕ್ಕೆ ಬಲವಾದ ಧ್ವನಿಯಾಗಿ ವರ್ಣಭೇದ ನೀತಿಯ ವಿರುದ್ಧ ಮಾತನಾಡಿತು. 1978 ರಲ್ಲಿ ನಮೀಬಿಯಾದ ಸ್ವಾತಂತ್ರ್ಯಕ್ಕಾಗಿ ವಿದೇಶಾಂಗ ಸಚಿವ ಅಟಲ್ ಬಿಹಾರಿ ವಾಜಪೇಯಿ UNSC ಯಲ್ಲಿ ಮಾತನಾಡಿದರು.
  5. 1984-85ರಲ್ಲಿ, ಮಧ್ಯಪ್ರಾಚ್ಯದಲ್ಲಿ, ವಿಶೇಷವಾಗಿ ಪ್ಯಾಲೆಸ್ಟೈನ್ ಮತ್ತು ಲೆಬನಾನ್‌ಗಳ ವಿವಾದಗಳನ್ನು ಬಗೆಹರಿಸಲು UNSC ಯಲ್ಲಿ ಭಾರತ ಪ್ರಮುಖ ಧ್ವನಿಯಾಗಿತ್ತು.
  6. 2011-2012ರಲ್ಲಿ, ಭಾರತವು ಅಭಿವೃದ್ಧಿಶೀಲ ರಾಷ್ಟ್ರಗಳ ಪರವಾಗಿ, ಶಾಂತಿಪಾಲನೆ, ಭಯೋತ್ಪಾದನೆ ನಿಗ್ರಹ ಮತ್ತು ಆಫ್ರಿಕಾದ ದೇಶಗಳಿಗೆ ಬಲವಾದ ಧ್ವನಿಯಾಗಿತ್ತು.
  7. ಭಯೋತ್ಪಾದನೆ ನಿಗ್ರಹಕ್ಕೆ ಸಂಬಂಧಿಸಿದ UNSC 1373 ಸಮಿತಿ, ಭಯೋತ್ಪಾದಕ ಕೃತ್ಯಗಳಿಂದ ಅಂತರರಾಷ್ಟ್ರೀಯ ಶಾಂತಿ ಮತ್ತು ಭದ್ರತೆಗೆ ಬೆದರಿಕೆ ಹಾಕುವ ಬಗ್ಗೆ 1566 ಕಾರ್ಯನಿರತ ಗುಂಪು , ಮತ್ತು ಭಯೋತ್ಪಾದಕ ಕೃತ್ಯಗಳಿಂದ ಸುರಕ್ಷತೆ, ಮತ್ತು ಸೊಮಾಲಿಯಾ ಮತ್ತು ಎರಿಟ್ರಿಯಾಕ್ಕೆ ಸಂಬಂಧಿಸಿದ ಭದ್ರತಾ ಮಂಡಳಿ 751/1907 ಸಮಿತಿಯ ಅಧ್ಯಕ್ಷತೆಯನ್ನು ಭಾರತ ವಹಿಸಿದೆ.
  8. ಭಾರತ ಈ ಹಿಂದೆ ಹಲವು ಭಾರಿ ಭದ್ರತಾ ಮಂಡಳಿಯ ಕಾಯಂ ಅಲ್ಲದ ಸದಸ್ಯ ದೇಶವಾಗಿ ಆಯ್ಕೆಯಾಗಿತ್ತು. 1950-1951, 1967-1968, 1972-1973, 1977-1978, 1984-1985, 1991-1992 ಮತ್ತು ಇತ್ತೀಚೆಗೆ 2011-2012ರಲ್ಲಿ ಖಾಯಂ ಅಲ್ಲದ ಸದಸ್ಯ ರಾಷ್ಟ್ರವಾಗಿ ಭದ್ರತಾ ಮಂಡಳಿಗೆ ಪ್ರವೇಶಿಸಿತ್ತು.
  9. ‘ಜಗತ್ತಿನ ದೊಡ್ಡ ಪ್ರಜಾಪ್ರಭುತ್ವ ದೇಶವಾದ ಭಾರತ ಪ್ರಜಾತಂತ್ರ, ಮಾನವ ಹಕ್ಕುಗಳು ಹಾಗೂ ಅಭಿವೃದ್ಧಿ ಸೇರಿದಂತೆ ಮೂಲಭೂತ ಮೌಲ್ಯಗಳನ್ನು ಎತ್ತಿ ಹಿಡಿಯಲು ಸದಾ ಶ್ರಮಿಸುತ್ತದೆ’ ಎಂದು ವಿಶ್ವಸಂಸ್ಥೆಯಲ್ಲಿ ಭಾರತದ ಕಾಯಂ ಪ್ರತಿನಿಧಿ ಟಿ.ಎಸ್‌.ತಿರುಮೂರ್ತಿ ಹೇಳಿದ್ದಾರೆ.
  10. ‘ವಿಶ್ವಸಂಸ್ಥೆ ವಿವಿಧತೆಯಲ್ಲಿ ಏಕತೆಯನ್ನು ಪ್ರತಿಬಿಂಬಿಸುತ್ತದೆ. ಅದರ ಆಶಯದ ಚೌಕಟ್ಟಿನಲ್ಲಿಯೇ ವೈವಿಧ್ಯವು ಪ್ರಜ್ವಲಿಸಬೇಕು ಎಂಬ ತತ್ವಕ್ಕೆ ಭಾರತ ಬದ್ಧವಾಗಿದೆ. ಇದೇ ಆಶಯದೊಂದಿಗೆ ಭಾರತ ಭದ್ರತಾ ಮಂಡಳಿಯಲ್ಲಿ ಕಾರ್ಯ ನಿರ್ವಹಿಸಲಿದೆ’.

 


ಸಾಮಾನ್ಯ ಅಧ್ಯಯನ ಪತ್ರಿಕೆ : 3


 

ವಿಷಯಗಳು: ಮೂಲಸೌಕರ್ಯ: ಇಂಧನ, ಬಂದರುಗಳು, ರಸ್ತೆಗಳು, ವಿಮಾನ ನಿಲ್ದಾಣಗಳು, ರೈಲ್ವೆ ಇತ್ಯಾದಿ.

PM ಗತಿಶಕ್ತಿ – ರಾಷ್ಟ್ರೀಯ ಮಾಸ್ಟರ್ ಪ್ಲಾನ್:


(PM GatiShakti — National Master Plan)

ಸಂದರ್ಭ:

ಏಜೆನ್ಸಿಗಳ ನಡುವೆ ಸಮನ್ವಯ ಮತ್ತು ಸಹಯೋಗದ ದೊಡ್ಡ ಪ್ರಮಾಣದ ಕೊರತೆಯು ಭಾರತದಲ್ಲಿ ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಬೇಕಾದ ಮೂಲಸೌಕರ್ಯ ಯೋಜನೆಗಳ ಅನುಷ್ಠಾನಕ್ಕೆ ಪ್ರಮುಖ ಸವಾಲಾಗಿದೆ.

ಆಗಾಗ್ಗೆ ಈ ಯೋಜನೆಗಳು ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳುತ್ತಿಲ್ಲ, ಇದು ಯೋಜನೆಗೆ ಮಾಡಬೇಕಾದ ವೆಚ್ಚದ ಗಮನಾರ್ಹ ಹೆಚ್ಚಳಕ್ಕೆ ಕಾರಣವಾಗುತ್ತದೆ.

ದೇಶದಲ್ಲಿ ಬಾಕಿ ಉಳಿದಿರುವ ಯೋಜನೆಗಳ ಅವಲೋಕನ:

ಭಾರತ ಸರ್ಕಾರದ ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯದ (MoSPI) ಪ್ರಕಾರ, 2021 ರ ಆರಂಭದಲ್ಲಿ, 21.45 ಲಕ್ಷ ಕೋಟಿ ರೂಪಾಯಿಗಿಂತ ಹೆಚ್ಚು ಮೌಲ್ಯದ 1,687 ಕೇಂದ್ರ ಸರ್ಕಾರದ ಯೋಜನೆಗಳು ಅನುಷ್ಠಾನ ಹಂತದಲ್ಲಿದ್ದು, ಹೆಚ್ಚಾಗಿ ಅವುಗಳ ಪೂರ್ಣಗೊಳಿಸುವಿಕೆಯಲ್ಲಿನ ವಿಳಂಬದಿಂದಾಗಿ  ಸುಮಾರು 20 ಪ್ರತಿಶತದಷ್ಟು ವೆಚ್ಚವನ್ನು ಮೀರಿದೆ.

ವಿಳಂಬಕ್ಕೆ ಕಾರಣವೆಂದರೆ ಮೂಲ ಯೋಜನಾ ವೆಚ್ಚವನ್ನು ಕಡಿಮೆ ಅಂದಾಜು ಮಾಡುವುದು, ಸುರುಳಿಯಾಕಾರದ ಭೂಸ್ವಾಧೀನ ವೆಚ್ಚ, ಪರಿಸರ ಅನುಮತಿ ಪಡೆಯುವಲ್ಲಿನ ವಿಳಂಬ, ಅರಣ್ಯ ಮತ್ತು ವನ್ಯಜೀವಿ ಅನುಮತಿಗಳು ಮತ್ತು ಕೈಗಾರಿಕಾ ಪರವಾನಗಿ ಅನುಮತಿ, ಪೈಪ್‌ಲೈನ್‌ಗಳು / ಪ್ರಸರಣ ಮಾರ್ಗಗಳ ಅಧಿಕ ವೆಚ್ಚ, ಸಾಮಗ್ರಿಗಳ ಸ್ಥಳಾಂತರ, ಪ್ರಾಜೆಕ್ಟ್ ಫೈನಾನ್ಸಿಂಗ್‌ನ ಟೈ-ಅಪ್‌ನಲ್ಲಿನ ವಿಳಂಬಗಳು, ವಿವರವಾದ ಎಂಜಿನಿಯರಿಂಗ್‌ನ ಅಂತಿಮಗೊಳಿಸುವಿಕೆಯಲ್ಲಿ ವಿಳಂಬ, ಇತ್ಯಾದಿ.

ಜತೆಗೆ, ಭೂಸ್ವಾಧೀನ ಮತ್ತು ಒತ್ತುವರಿ ತೆರವು, ಪರಿಹಾರ ಮತ್ತು ಪುನರ್ವಸತಿ ಯೋಜನೆ ಮತ್ತು ಅನುಷ್ಠಾನ, ಸಕಾಲದಲ್ಲಿ ನಿರಾಕ್ಷೇಪಣಾ ಪ್ರಮಾಣಪತ್ರ ನೀಡುವುದು, ಅಗತ್ಯ ವಿದ್ಯುತ್ ಮತ್ತು ನೀರು ಪೂರೈಕೆ, ಕೆಲಸದ ಆದೇಶಕ್ಕೆ ಸಂಬಂಧಿಸಿದ ಸಮಸ್ಯೆಗಳಂತಹ ರಾಜ್ಯ ಸರ್ಕಾರದ ಮಟ್ಟದಲ್ಲಿ ಅಡಚಣೆಗಳಿವೆ.

ಇದಕ್ಕೆ ಪರಿಹಾರ:

ಮಲ್ಟಿ-ಮಾಡಲ್ ಸಂಪರ್ಕಕ್ಕಾಗಿ ಇತ್ತೀಚೆಗೆ ಘೋಷಿಸಲಾದ ಭಾರತದ ಪ್ರಧಾನ ಮಂತ್ರಿ ಗತಿ ಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್ ಭಾರತದಲ್ಲಿ ಮೂಲಸೌಕರ್ಯ ಮತ್ತು ಲಾಜಿಸ್ಟಿಕ್ ಅಭಿವೃದ್ಧಿ ಯೋಜನೆಗಳನ್ನು ಯೋಜಿಸುವ ಮತ್ತು ಕಾರ್ಯಗತಗೊಳಿಸುವ ರೀತಿಯಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತರಲು ಸಿದ್ಧವಾಗಿದೆ. ಇದು ಮ್ಯಾಕ್ರೋ ಯೋಜನೆ ಮತ್ತು ಮೈಕ್ರೋ ಅನುಷ್ಠಾನದ ನಡುವಿನ ದೊಡ್ಡ ವ್ಯತ್ಯಾಸ/ಅಂತರಗಳನ್ನು ನಿವಾರಿಸುತ್ತದೆ.

Current Affairs

 

PM ಗತಿಶಕ್ತಿ ಯೋಜನೆಯ ಬಗ್ಗೆ:

PM ಗತಿಶಕ್ತಿಯು ರಸ್ತೆ ಮತ್ತು ಹೆದ್ದಾರಿಗಳು, ರೈಲ್ವೇಗಳು, ಶಿಪ್ಪಿಂಗ್, ಪೆಟ್ರೋಲಿಯಂ ಮತ್ತು ಗ್ಯಾಸ್, ಪವರ್, ಟೆಲಿಕಾಂ, ಶಿಪ್ಪಿಂಗ್ ಮತ್ತು ವಾಯುಯಾನ ಸೇರಿದಂತೆ 16 ಸಚಿವಾಲಯಗಳನ್ನು ಸಂಪರ್ಕಿಸುವ ಸಮಗ್ರ ಡಿಜಿಟಲ್ ವೇದಿಕೆಯಾಗಿದೆ.

ಇದು ಒಂದು ಸಮಗ್ರ ಯೋಜನೆಯಾಗಿದೆ ಮತ್ತು ಮೂಲಸೌಕರ್ಯ ಯೋಜನೆಗಳ ಅನುಷ್ಠಾನವನ್ನು ಖಚಿತಪಡಿಸುವ ಗುರಿಯನ್ನು ಹೊಂದಿದೆ.

  1. ಇದರ ಉದ್ದೇಶ ಮಲ್ಟಿಮೋಡಲ್ ಸಂಪರ್ಕವನ್ನು ಹೆಚ್ಚಿಸುವ ಮತ್ತು ಲಾಜಿಸ್ಟಿಕ್ಸ್ ವೆಚ್ಚವನ್ನು ಕಡಿಮೆ ಮಾಡುವುದಾಗಿದೆ.
  2. ಪ್ರಧಾನ ಮಂತ್ರಿ ಗತಿ ಶಕ್ತಿಯು ಭಾರತಮಾಲಾ, ಸಾಗರಮಾಲಾ, ಒಳನಾಡು ಜಲಮಾರ್ಗಗಳು, ಡ್ರೈ/ಲ್ಯಾಂಡ್ ಪೋರ್ಟ್ ಗಳು, ಉಡಾನ್ (ಉದೇ ದೇಶ್ ಕಾ ಆಮ್ ನಾಗರಿಕ್ – ವಿಮಾನ ಪ್ರಯಾಣಕ್ಕೆ ಅನುಕೂಲವಾಗುವಂತೆ ಸಹಾಯಧನ) ನಂತಹ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಸಚಿವಾಲಯಗಳ 500 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಮೂಲಸೌಕರ್ಯ ಯೋಜನೆಗಳನ್ನು ಒಳಗೊಂಡಿರುತ್ತದೆ,ಇತ್ಯಾದಿ.

ಒದಗಿಸಲಾಗುವ ಸೇವೆಗಳು:

  1. ರಸ್ತೆಗಳು, ಹೆದ್ದಾರಿಗಳು, ರೈಲ್ವೇಗಳು ಮತ್ತು ಟೋಲ್ ಪ್ಲಾಜಾಗಳಂತಹ ಮೂಲಸೌಕರ್ಯಗಳನ್ನೂ ಒಳಗೊಂಡಂತೆ 200 ಪದರಗಳ ಭೌಗೋಳಿಕ ದತ್ತಾಂಶವನ್ನು ಪೋರ್ಟಲ್ ನೀಡುತ್ತದೆ, ಜೊತೆಗೆ ಅರಣ್ಯಗಳು, ನದಿಗಳು ಮತ್ತು ಜಿಲ್ಲಾ ಗಡಿಗಳ ಬಗ್ಗೆ ಭೌಗೋಳಿಕ ಮಾಹಿತಿಯನ್ನು ಒದಗಿಸುತ್ತದೆ ಹಾಗೂ ಯೋಜನೆ ರೂಪಿಸಲು ಮತ್ತು ಕ್ಲಿಯರೆನ್ಸ್ ಪಡೆಯಲು ಸಹಾಯ ಮಾಡುತ್ತದೆ.
  2. ಈ ಪೋರ್ಟಲ್ ವಿವಿಧ ಸರ್ಕಾರಿ ಇಲಾಖೆಗಳನ್ನು ನೈಜ ಸಮಯದಲ್ಲಿ ಮತ್ತು ಒಂದು ಕೇಂದ್ರೀಕೃತ ಸ್ಥಳದಲ್ಲಿ, ವಿಶೇಷವಾಗಿ ವಿವಿಧ ವಲಯಗಳ ಮತ್ತು ಬಹು-ಪ್ರಾದೇಶಿಕ ಪ್ರಭಾವ ಹೊಂದಿರುವ ವಿವಿಧ ಯೋಜನೆಗಳ ಪ್ರಗತಿಯನ್ನು ಪತ್ತೆಹಚ್ಚಲು ಅನುಮತಿಸುತ್ತದೆ.

ಮಹತ್ವ:

PM- ಗತಿಶಕ್ತಿಯ ಉದ್ದೇಶವು, ಎಲ್ಲಾ ಇಲಾಖೆಗಳು ಪರಸ್ಪರ ಯೋಜನೆಗಳನ್ನು ಸೂಕ್ಷ್ಮವಾಗಿ ಮೇಲ್ವಿಚಾರಣೆ ಮಾಡಲು ಮತ್ತು ಯೋಜನೆಗಳ ಸಮಗ್ರ ಯೋಜನೆ ಮತ್ತು ಕಾರ್ಯಗತಗೊಳಿಸುವಿಕೆಯ ಸಮಯದಲ್ಲಿ ನಿರ್ಣಾಯಕ ಡೇಟಾವನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ಪ್ರತಿಯೊಂದು ಇಲಾಖೆಯು ಪರಸ್ಪರ ಚಟುವಟಿಕೆಗಳನ್ನು ಮುಂದುವರಿಸುವುದನ್ನು ಖಚಿತಪಡಿಸಿಕೊಳ್ಳುವ ಒಂದು ಕೇಂದ್ರೀಕೃತ ಪೋರ್ಟಲ್ ಆಗಿದೆ.

  1. ಈ ಮೂಲಕ, ವಿವಿಧ ಇಲಾಖೆಗಳು ವಿವಿಧ ಕ್ಷೇತ್ರಗಳೊಂದಿಗಿನ ಪರಸ್ಪರ ಕ್ರಿಯೆಯ ಮೂಲಕ ತಮ್ಮ ಯೋಜನೆಗಳಿಗೆ ಆದ್ಯತೆ ನೀಡಲು ಸಾಧ್ಯವಾಗುತ್ತದೆ.
  2. ಈ ಬಹುಮಾದರಿ ಸಂಪರ್ಕ ವ್ಯವಸ್ಥೆಯು ಕೊನೆಯ ಮೈಲಿ ಸಂಪರ್ಕವನ್ನು ಹೆಚ್ಚಿಸುತ್ತದೆ ಮತ್ತು ಸಮಗ್ರ ಯೋಜನೆ ಮತ್ತು ಜಾರಿಗೊಳಿಸುವಿಕೆಯ ಅತಿಕ್ರಮಣಗಳನ್ನು ಕಡಿಮೆ ಮಾಡುವ ಮೂಲಕ ಲಾಜಿಸ್ಟಿಕ್ಸ್ ವೆಚ್ಚವನ್ನು ತಗ್ಗಿಸುತ್ತದೆ. ಅಥವಾ
  3. ಮಲ್ಟಿ-ಮೋಡಲ್ ಸಂಪರ್ಕವು ಜನರು, ಸರಕು ಮತ್ತು ಸೇವೆಗಳನ್ನು ಒಂದು ಸಾರಿಗೆ ವಿಧಾನದಿಂದ ಇನ್ನೊಂದಕ್ಕೆ ಸಾಗಿಸಲು ಸಮಗ್ರ ಮತ್ತು ತಡೆರಹಿತ ಸಂಪರ್ಕವನ್ನು ಒದಗಿಸುತ್ತದೆ. ಈ ಕ್ರಮವು ಮೂಲಸೌಕರ್ಯಕ್ಕೆ ಕೊನೆಯ ಮೈಲಿ ಸಂಪರ್ಕವನ್ನು ಸುಗಮಗೊಳಿಸುತ್ತದೆ ಮತ್ತು ಪ್ರಯಾಣದ ಸಮಯವನ್ನು ಕಡಿಮೆ ಮಾಡುತ್ತದೆ.

ಇದರ ಅಗತ್ಯತೆ:

ವಿವಿಧ ಇಲಾಖೆಗಳ ನಡುವೆ ತೀವ್ರ ಸಮನ್ವಯದ ಕೊರತೆ ಯಿಂದಾಗಿ ಕಳೆದ ಹಲವು ದಶಕಗಳಲ್ಲಿ, ಲೆಕ್ಕವಿಲ್ಲದಷ್ಟು ಸಮಸ್ಯೆಗಳು ಭಾರತದಲ್ಲಿ ಮೂಲಸೌಕರ್ಯಗಳನ್ನು ನಿರ್ಮಿಸುವ ಮಾರ್ಗದಲ್ಲಿ ಬಂದಿವೆ.

  1. ಉದಾಹರಣೆಗೆ, ಒಮ್ಮೆ ರಸ್ತೆ ನಿರ್ಮಿಸಿದ ನಂತರ, ಇತರ ಏಜೆನ್ಸಿಗಳು ಭೂಗತ ಕೇಬಲ್‌ಗಳು, ಗ್ಯಾಸ್ ಪೈಪ್‌ಲೈನ್‌ ಅಳವಡಿಸುವ ಇತ್ಯಾದಿ ಚಟುವಟಿಕೆಗಳಿಗಾಗಿ ನಿರ್ಮಿಸಿದ ರಸ್ತೆಯನ್ನು ಪುನಃ ಅಗೆಯುತ್ತವೆ. ಇದು ದೇಶದ ರಸ್ತೆ ಮೂಲಸೌಕರ್ಯ ಮತ್ತು ಸಂಚಾರದ ಮೇಲೆ ತೀವ್ರ ಪರಿಣಾಮ ಬೀರಿದೆ.
  2. ಅಲ್ಲದೆ, ಭಾರತದಲ್ಲಿ ಲಾಜಿಸ್ಟಿಕ್ಸ್ ವೆಚ್ಚಗಳು ಜಿಡಿಪಿಯ ಸುಮಾರು 13-14% ರಷ್ಟಿದ್ದು, ಅಭಿವೃದ್ಧಿ ಹೊಂದಿದ ಆರ್ಥಿಕತೆಗಳಲ್ಲಿ ಜಿಡಿಪಿಯ 7-8% ರಷ್ಟಿದೆ. ಹೆಚ್ಚಿನ ಲಾಜಿಸ್ಟಿಕ್ಸ್ ವೆಚ್ಚಗಳು ಆರ್ಥಿಕತೆಯೊಳಗೆ ವೆಚ್ಚದ ರಚನೆಗಳ ಮೇಲೆ ಪರಿಣಾಮ ಬೀರುತ್ತವೆ ಮತ್ತು ರಫ್ತುದಾರರಿಗೆ ಖರೀದಿದಾರರಿಗೆ ಸರಕುಗಳನ್ನು ಸಾಗಿಸಲು ಮತ್ತು ಕೊಳ್ಳಲು ಇದು ಹೆಚ್ಚು ದುಬಾರಿಯಾಗಿದೆ.

 

ವಿಷಯಗಳು: ಸರ್ಕಾರದ ನೀತಿಗಳು ಮತ್ತು ವಿವಿಧ ಕ್ಷೇತ್ರಗಳಲ್ಲಿನ ಅಭಿವೃದ್ಧಿಯ ಅಡಚಣೆಗಳು ಮತ್ತು ಅವುಗಳ ವಿನ್ಯಾಸ ಮತ್ತು ಅನುಷ್ಠಾನದಿಂದ ಉಂಟಾಗುವ ಸಮಸ್ಯೆಗಳು.

ದೇಶದ್ರೋಹದ ಕಾನೂನು:


(Sedition law)

ಸಂದರ್ಭ:

ದೇಶದ್ರೋಹದ ಕಾನೂನನ್ನು ರದ್ದುಗೊಳಿಸುವಂತೆ ಕರೆ ನೀಡಿರುವ ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಾಧೀಶ ರೋಹಿಂಟನ್ ನಾರಿಮನ್, ಸರ್ಕಾರವನ್ನು ಟೀಕಿಸುವವರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

  1. ದೇಶದ್ರೋಹದ ಕಾನೂನನ್ನು ಸಂಪೂರ್ಣವಾಗಿ ರದ್ದುಪಡಿಸುವ ಸಮಯ ಬಂದಿದೆ ಮತ್ತು ಸಂಪೂರ್ಣ ವಾಕ್ ಸ್ವಾತಂತ್ರ್ಯವನ್ನು ಅನುಮತಿಸುವ ಸಮಯ ಇದಾಗಿದೆ ಎಂದು ಅವರು ಹೇಳಿದರು.

ದೇಶದ್ರೋಹ ಕಾನೂನಿನ ದುರುಪಯೋಗದ ಬಗ್ಗೆ ಮಾಜಿ ನ್ಯಾಯಮೂರ್ತಿ ವ್ಯಕ್ತಪಡಿಸಿದ ಕಳವಳ:

ವಾಕ್‌ಸ್ವಾತಂತ್ರ್ಯವನ್ನು ಚಲಾಯಿಸುವವರ ವಿರುದ್ಧ ಕಟ್ಟುನಿಟ್ಟಾದ ದೇಶದ್ರೋಹದ ಕಾನೂನಿನಡಿಯಲ್ಲಿ ಪ್ರಕರಣ ದಾಖಲಿಸಲಾಗುತ್ತಿದ್ದರೂ, ದ್ವೇಷಪೂರಿತ ಭಾಷಣ ಮಾಡುವವರ ವಿರುದ್ಧ ಕಾರ್ಯಾಂಗವು ಕಟ್ಟುನಿಟ್ಟಾದ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ ಎಂದು ಆಕ್ರೋಶವನ್ನು ಹೊರಹಾಕಿದ್ದಾರೆ.

Current Affairs

 

ಹಿನ್ನೆಲೆ:

ದೇಶದ್ರೋಹ ಕಾನೂನನ್ನು,ವಿಮರ್ಶಕರು, ಪತ್ರಕರ್ತರು, ಸಾಮಾಜಿಕ ಮಾಧ್ಯಮ ಬಳಕೆದಾರರು, ಸರ್ಕಾರದ ಕೋವಿಡ್ -19 ನಿರ್ವಹಣೆಯ ಬಗ್ಗೆ ತಮ್ಮ ಅಭಿಪ್ರಾಯ ಮತ್ತು ನೋವುಗಳನ್ನು ಪ್ರಸಾರ ಮಾಡಿದ್ದಕ್ಕಾಗಿ  ಅಥವಾ ಸಾಂಕ್ರಾಮಿಕದ ಎರಡನೇ ಅಲೆಯ ಸಮಯದಲ್ಲಿ ತಮ್ಮ ಕುಂದುಕೊರತೆಗಳನ್ನು ವ್ಯಕ್ತಪಡಿಸಿದ್ದಕ್ಕಾಗಿ, ವೈದ್ಯಕೀಯ ಸೇವೆಗಳು, ಉಪಕರಣಗಳು, ಔಷಧಿಗಳು ಮತ್ತು ಆಮ್ಲಜನಕ ಸಿಲಿಂಡರ್‌ಗಳನ್ನು ಪಡೆಯಲು ಸಹಾಯವನ್ನು ಕೋರಿದ ಕಾರ್ಯಕರ್ತರು ಮತ್ತು ನಾಗರಿಕರ ವಿರುದ್ಧ ನಿರ್ದಾಕ್ಷಿಣ್ಯವಾಗಿ ದೇಶದ್ರೋಹ ಕಾನೂನನ್ನು ಬಳಸಲಾಗಿದೆ.

‘ದೇಶದ್ರೋಹ’(sedition) ಎಂದರೇನು?

ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 124 ಎ ಪ್ರಕಾರ, “ಯಾವುದೇ ವ್ಯಕ್ತಿಯು, ಪದಗಳಿಂದ, ಲಿಖಿತ ಅಥವಾ ಮಾತಿನ ಮೂಲಕ, ಅಥವಾ ಚಿಹ್ನೆಗಳ ಮೂಲಕ, ಅಥವಾ ದೃಶ್ಯ ಪ್ರದರ್ಶನದ ಮೂಲಕ ಅಥವಾ ಯಾವುದೇ ರೀತಿಯಲ್ಲಿ, ಕಾನೂನಿನಿಂದ ಸ್ಥಾಪಿಸಲ್ಪಟ್ಟ ಸರ್ಕಾರದ ವಿರುದ್ಧ, ದ್ವೇಷ ಅಥವಾ ತಿರಸ್ಕಾರವನ್ನು ಪ್ರಚೋದಿಸಿದರೆ ಅಥವಾ ತಿರಸ್ಕಾರವನ್ನು ಪ್ರಚೋದಿಸುವ ಪ್ರಯತ್ನವನ್ನು ತೋರಿಸಿದರೆ,ದಂಡದೊಂದಿಗೆ ಜೀವಾವಧಿ ಶಿಕ್ಷೆ ಅಥವಾ ಮೂರು ವರ್ಷಗಳವರೆಗೆ ವಿಸ್ತರಿಸಬಹುದಾದ ಒಂದು ಅವಧಿಯ ಜೈಲು ಶಿಕ್ಷೆ, ಇದಕ್ಕೆ ದಂಡವನ್ನು ಸೇರಿಸಬಹುದು ಅಥವಾ ದಂಡದಿಂದ ಮಾತ್ರ ಶಿಕ್ಷೆ ವಿಧಿಸಬಹುದಾಗಿದೆ”.

ಸರಿಯಾದ ವ್ಯಾಖ್ಯಾನ ಅಗತ್ಯವಿದೆ / ಈ ಕಾಯ್ದೆಯ ದುರುಪಯೋಗದ ಸುತ್ತಲಿನ ವಿವಾದಗಳು:

ದೇಶದ್ರೋಹ ಕಾನೂನು ಬಹಳ ಹಿಂದಿನಿಂದಲೂ ವಿವಾದದಲ್ಲಿದೆ. ತಮ್ಮ ನೀತಿಗಳನ್ನು ಬಹಿರಂಗವಾಗಿ ವಿಮರ್ಶೆ ಮಾಡಿದವರ ಮೇಲೆ ಭಾರತೀಯ ದಂಡ ಸಂಹಿತೆಯ (IPC) ‘ಸೆಕ್ಷನ್ 124-ಎ’ ಕಾನೂನನ್ನು ಬಳಸಿದ್ದಕ್ಕಾಗಿ ಆಗಾಗ್ಗೆ ಸರ್ಕಾರಗಳನ್ನು ಟೀಕಿಸಲಾಗಿದೆ.

ಆದ್ದರಿಂದ, ಈ ವಿಭಾಗವನ್ನು ವ್ಯಕ್ತಿಗಳ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ನಿರ್ಬಂಧವೆಂದು ಪರಿಗಣಿಸಲಾಗುತ್ತದೆ ಮತ್ತು ಒಂದು ರೀತಿಯಲ್ಲಿ ಸಂವಿಧಾನದ 19 ನೇ ಪರಿಚ್ಚೇಧದ ಅಡಿಯಲ್ಲಿ ಒದಗಿಸಲಾದ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ವಿಧಿಸಬೇಕಾದ ಸಮಂಜಸವಾದ ನಿರ್ಬಂಧಗಳ ನಿಬಂಧನೆಗಳ ಅಡಿಯಲ್ಲಿ ಬರುತ್ತದೆ.

ಈ ಕಾನೂನನ್ನು ವಸಾಹತುಶಾಹಿ ಬ್ರಿಟಿಷ್ ಆಡಳಿತಗಾರರು 1860 ರ ದಶಕದಲ್ಲಿ ಜಾರಿಗೆ ತಂದರು, ಅಂದಿನಿಂದ ಈ ಕಾನೂನು ಚರ್ಚೆಯ ವಿಷಯವಾಗಿದೆ. ಮಹಾತ್ಮ ಗಾಂಧಿ ಮತ್ತು ಜವಾಹರಲಾಲ್ ನೆಹರೂ ಸೇರಿದಂತೆ ಸ್ವಾತಂತ್ರ್ಯ ಚಳವಳಿಯ ಅನೇಕ ಉನ್ನತ ನಾಯಕರ ವಿರುದ್ಧ ದೇಶದ್ರೋಹದ ಕಾನೂನಿನಡಿಯಲ್ಲಿ ಬಂಧಿಸಲಾಗಿತ್ತು.

ಮಹಾತ್ಮ ಗಾಂಧಿ ಈ ಕಾನೂನನ್ನು “ನಾಗರಿಕ ಸ್ವಾತಂತ್ರ್ಯವನ್ನು ಉಲ್ಲಂಘಿಸಲು ವಿನ್ಯಾಸಗೊಳಿಸಲಾದ ಭಾರತೀಯ ದಂಡ ಸಂಹಿತೆಯ ರಾಜಕೀಯ ವಿಭಾಗಗಳ ರಾಜಕುಮಾರ” ಎಂದು ಬಣ್ಣಿಸಿದರು.

ಕಾನೂನನ್ನು “ಹೆಚ್ಚು ಆಕ್ಷೇಪಾರ್ಹ ಮತ್ತು ಖಂಡನೀಯ” ಎಂದು ವಿವರಿಸಿದ ನೆಹರೂ, “ನಮ್ಮಿಂದ ಅಂಗೀಕರಿಸಲ್ಪಟ್ಟ ಯಾವುದೇ ಕಾನೂನುಗಳ ನಿಬಂಧನೆಗಳಲ್ಲಿ ಇದಕ್ಕೆ ಯಾವುದೇ ಸ್ಥಾನವನ್ನು ನೀಡಬಾರದು” ಮತ್ತು “ನಾವು ಅದನ್ನು ಬೇಗನೆ ತೊಡೆದುಹಾಕುತ್ತೇವೆ” ಎಂದು ಹೇಳಿದರು.

Current Affairs

 

ಈ ಸಂದರ್ಭದಲ್ಲಿ ಸಂಬಂಧಿತ ಸುಪ್ರೀಂ ಕೋರ್ಟ್‌ನ ತೀರ್ಪುಗಳು:

ಕೇದಾರ್ ನಾಥ್ ಸಿಂಗ್ VS ಬಿಹಾರ ರಾಜ್ಯ ಪ್ರಕರಣ (1962): ಐಪಿಸಿಯ ಸೆಕ್ಷನ್ 124 ಎ ಅಡಿಯಲ್ಲಿ ಅಪರಾಧಗಳಿಗೆ ಸಂಬಂಧಿಸಿದ ಪ್ರಕರಣದ ವಿಚಾರಣೆಯ ಸಮಯದಲ್ಲಿ, ಸುಪ್ರೀಂ ಕೋರ್ಟ್‌ನ ಐದು ನ್ಯಾಯಾಧೀಶರ ಸಾಂವಿಧಾನಿಕ ಪೀಠವು ಕೇದಾರ್ ನಾಥ್ ಸಿಂಗ್ VS ಬಿಹಾರ ರಾಜ್ಯ ಪ್ರಕರಣದಲ್ಲಿ (1962) ಕೆಲವು ಮಾರ್ಗದರ್ಶಿ ಸೂತ್ರಗಳನ್ನು ರೂಪಿಸಿತು.

ಸರ್ಕಾರದ ಟೀಕಾಕಾರರು ಸರ್ಕಾರದ ಕ್ರಮಗಳನ್ನು ಇಷ್ಟಪಡದೇ ಅದರ ಕುರಿತು ಎಷ್ಟೇ ಕಠಿಣವಾಗಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರೂ, ಹಿಂಸಾತ್ಮಕ ಕೃತ್ಯಗಳಿಂದ ಸಾರ್ವಜನಿಕ ಸುವ್ಯವಸ್ಥೆಯ ಉಲ್ಲಂಘನೆಗೆ ಕಾರಣವಾಗದಿದ್ದಲ್ಲಿ ಅದು ಶಿಕ್ಷಾರ್ಹವಲ್ಲ ಎಂದು ನ್ಯಾಯಾಲಯ ತೀರ್ಪು ನೀಡಿದೆ.

ಬಲ್ವಂತ್ ಸಿಂಗ್ vs ಪಂಜಾಬ್ ರಾಜ್ಯ (1995) ಪ್ರಕರಣ:

ಈ ಪ್ರಕರಣದಲ್ಲಿ, ‘ಖಲಿಸ್ತಾನ್ ಜಿಂದಾಬಾದ್’ ನಂತಹ ಕೇವಲ ಘೋಷಣೆಗಳನ್ನು ಕೂಗುವುದು ದೇಶದ್ರೋಹಕ್ಕೆ ಸಮವಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿತ್ತು. ಸ್ಪಷ್ಟವಾಗಿ, ದೇಶದ್ರೋಹ ಕಾನೂನನ್ನು ತಪ್ಪಾಗಿ ಅರ್ಥೈಸಲಾಗಿದೆ ಮತ್ತು ಭಿನ್ನಾಭಿಪ್ರಾಯವನ್ನು ನಿಗ್ರಹಿಸಲು ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ ಎಂದೂ ಸಹ ನ್ಯಾಯಪೀಠವು ಅಭಿಪ್ರಾಯಪಟ್ಟಿತ್ತು.

ಸುಪ್ರೀಂಕೋರ್ಟ್ ಇತ್ತೀಚಿಗೆ ಮಾಡಿದ ಅವಲೋಕನಗಳು:

ಜೂನ್ 2021 ರಲ್ಲಿ ಸುಪ್ರೀಂಕೋರ್ಟ್ “ದೇಶದ್ರೋಹದ ಕಾನೂನಿನ ಮಿತಿಗಳನ್ನು ವ್ಯಾಖ್ಯಾನಿಸುವ ಸಮಯ ಬಂದಿದೆ” ಎಂದು ಹೇಳಿತ್ತು.

ಎರಡು ಸುದ್ದಿ ವಾಹಿನಿಗಳು ಸಲ್ಲಿಸಿದ ರಿಟ್ ಅರ್ಜಿಗಳ ವಿಚಾರಣೆಯ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಈ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದೆ.ಸುದ್ದಿ ವಾಹಿನಿಗಳು ತಮ್ಮ ವಿರುದ್ಧ ದಾಖಲಿಸಿದ FIR ಮತ್ತು ತಿರಸ್ಕಾರ ಪ್ರಕರಣಗಳನ್ನು ರದ್ದುಪಡಿಸುವಂತೆ ಆದೇಶಿಸಬೇಕೆಂದು ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿಗಳನ್ನು ಸಲ್ಲಿಸಿದ್ದವು.

ದೇಶದ್ರೋಹಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು ಮಾಡಿದ ಸಾಮಾನ್ಯ ಅವಲೋಕನಗಳು:

ದೇಶದ್ರೋಹದ ಮಿತಿಗಳನ್ನು ನಾವು ವ್ಯಾಖ್ಯಾನಿಸುವ ಸಮಯ ಬಂದಿದೆ.

ವಿಶೇಷವಾಗಿ ಪತ್ರಿಕಾ ಮತ್ತು ವಾಕ್ ಸ್ವಾತಂತ್ರ್ಯ ವಿಷಯದಲ್ಲಿ 124ಎ ಸೆಕ್ಷನ್ (ದೇಶದ್ರೋಹ) ಮತ್ತು 153ನೇ ಸೆಕ್ಷನ್‌ಗಳ (ವರ್ಗಗಳ ನಡುವೆ ದ್ವೇಷ ಹುಟ್ಟುಹಾಕುವುದು) ವ್ಯಾಖ್ಯಾನ ಅಗತ್ಯವಿದ್ದು, ಆ ಬಗ್ಗೆ ಪರಿಶೀಲನೆ ನಡೆಸುತ್ತೇವೆ’ ಎಂದು ನ್ಯಾಯಪೀಠವು ತಿಳಿಸಿದೆ.

ಈ ಸಮಯದ ಅವಶ್ಯಕತೆ:

ಉನ್ನತ ನ್ಯಾಯಾಲಯದ ಪ್ರಕಾರ, “ಭಾರತೀಯ ದಂಡ ಸಂಹಿತೆ, 1860 ರ ಸೆಕ್ಷನ್ 124A, 153A ಮತ್ತು 505 ರ ನಿಬಂಧನೆಗಳು” ನಿರ್ದಿಷ್ಟವಾಗಿ ಎಲೆಕ್ಟ್ರಾನಿಕ್ ಮತ್ತು ಮುದ್ರಣ ಮಾಧ್ಯಮದ ಸುದ್ದಿ, ಮಾಹಿತಿ ಮತ್ತು ದೇಶದ ಯಾವುದೇ ಭಾಗದಲ್ಲಿ ಅಸ್ತಿತ್ವದಲ್ಲಿರುವ ಆಡಳಿತವನ್ನು ಟೀಕಿಸುವ ಹಕ್ಕನ್ನು ಸಂವಹನ ಮಾಡುವ ಹಕ್ಕನ್ನು ಉಲ್ಲೇಖಿಸುತ್ತದೆ. ಇದರ ವ್ಯಾಪ್ತಿ ಮತ್ತು ನಿಯತಾಂಕಗಳನ್ನು ವಿವರಿಸಬೇಕಾಗದ ಅವಶ್ಯಕತೆಯಿದೆ.

 


ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:


 ಪಂಡಿತ್ ಬಿರ್ಜು ಮಹಾರಾಜ್ ಮತ್ತು ಕಥಕ್:

ಇತ್ತೀಚೆಗಷ್ಟೇ ಭಾರತೀಯ ಸಾಂಪ್ರದಾಯಿಕ ನೃತ್ಯ ಪ್ರಕಾರವಾದ ‘ಕಥಕ್’ ಅನ್ನು ವಿಶ್ವ ವೇದಿಕೆಗೆ ಕೊಂಡೊಯ್ದ ಪ್ರಸಿದ್ಧ ಕಥಕ್ ನೃತ್ಯಗಾರ ಬಿರ್ಜು ಮಹಾರಾಜ್ ನಿಧನರಾದರು.

ಅವರು ಭಾರತದ ಅತ್ಯಂತ ಪ್ರಸಿದ್ಧ ಮತ್ತು ನೆಚ್ಚಿನ ಕಲಾವಿದರಲ್ಲಿ ಒಬ್ಬರಾಗಿದ್ದರು, ಶಾಸ್ತ್ರೀಯ ಕಥಕ್ ನೃತ್ಯ ಪ್ರಕಾರವಾದ ಲಕ್ನೋದ ಕಲ್ಕಾ-ಬಿಂದಾದಿನ್ ಘರಾನಾ (Kalka-Bindadin gharana)ಗೆ ಸೇರಿದವರು. ಅವರು ಫೆಬ್ರವರಿ 4, 1938 ರಂದು ಲಕ್ನೋದಲ್ಲಿ ಜನಿಸಿದರು.

ಪ್ರಶಸ್ತಿಗಳು: 1983 ರಲ್ಲಿ ಪದ್ಮವಿಭೂಷಣ, ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಮತ್ತು ಕಾಳಿದಾಸ್ ಸಮ್ಮಾನ್.

ಕಥಕ್ ಬಗ್ಗೆ:

  1. ಕಥಕ್ ಹಿಂದೂಸ್ತಾನಿ ಅಥವಾ ಉತ್ತರ ಭಾರತೀಯ ಸಂಗೀತಕ್ಕೆ ಅತ್ಯಂತ ನಿಕಟ ಸಂಬಂಧ ಹೊಂದಿದ ಶಾಸ್ತ್ರೀಯ ನೃತ್ಯದ ಏಕೈಕ ರೂಪವಾಗಿದೆ. ಇವೆರಡೂ ಸಮಾನಾಂತರ ಬೆಳವಣಿಗೆಯನ್ನು ಹೊಂದಿದ್ದು, ಪ್ರತಿಯೊಂದೂ ಇನ್ನೊಂದನ್ನು ಪೋಷಿಸುತ್ತದೆ ಮತ್ತು ಸಲಹುತ್ತದೆ. (ಒಡಿಸ್ಸಿ ನೃತ್ಯವು ಹಿಂದೂಸ್ತಾನಿ ಮತ್ತು ಕರ್ನಾಟಕ ಶಾಸ್ತ್ರೀಯ ಸಂಗೀತಗಳ ಮಿಶ್ರಣವಾದ ಒಡಿಸ್ಸಿ ಸಂಗೀತವನ್ನು ಬಳಸುತ್ತದೆ).
  2. ಕಥಕ್ ಪ್ರಾಚೀನ ಭಾರತೀಯ ಶಾಸ್ತ್ರೀಯ ನೃತ್ಯದ ಪ್ರಮುಖ ಪ್ರಕಾರಗಳಲ್ಲಿ ಒಂದಾಗಿದೆ ಮತ್ತು ಸಾಂಪ್ರದಾಯಿಕವಾಗಿ ಕಥಕರು ಅಥವಾ ಕಥೆಗಾರರೆಂದು ಉಲ್ಲೇಖಿಸಲಾದ ಉತ್ತರ ಭಾರತದ ಬಾರ್ಡ್‌ಗಳೆಂದು (travelling bards) ಕರೆಯಲ್ಪಡುವ ಪ್ರವಾಸಿಗರಿಂದ ಹುಟ್ಟಿಕೊಂಡಿದೆ ಎಂದು ಪರಿಗಣಿಸಲಾಗಿದೆ.

  • Join our Official Telegram Channel HERE for Motivation and Fast Updates
  • Subscribe to our YouTube Channel HERE to watch Motivational and New analysis videos

[ad_2]

Leave a Comment