[Mission 2022] ದೈನಂದಿನ ಪ್ರಚಲಿತ ಘಟನೆಗಳು ದಿನಾಂಕ – 18ನೇ ನವೆಂಬರ 2021 – INSIGHTSIAS

[ad_1]

 

 

ಪರಿವಿಡಿ:

 ಸಾಮಾನ್ಯ ಅಧ್ಯಯನ ಪತ್ರಿಕೆ 2:

1. ಪಶ್ಚಿಮ ಬಂಗಾಳದಲ್ಲಿ ಸಿಬಿಐ, ಇಡಿ ವಿರುದ್ಧ ಸವಲತ್ತು ಉಲ್ಲಂಘನೆ ನಿರ್ಣಯ ಮಂಡನೆ.

2. ಮಾನನಷ್ಟ ಮೊಕದ್ದಮೆ ಪ್ರಕರಣವನ್ನು ರದ್ದುಗೊಳಿಸುವಂತೆ ಹೈಕೋರ್ಟ್ ಮೊರೆ ಹೋದ ರಾಹುಲ್ ಗಾಂಧಿ.

3. ಜಾಧವ್‌ ಅವರಿಗೆ ಮೇಲ್ಮನವಿ ಸಲ್ಲಿಸಲು ಅವಕಾಶ ನೀಡಿದ ಪಾಕಿಸ್ತಾನದ ಹೊಸ ಕಾನೂನು.

 

ಸಾಮಾನ್ಯ ಅಧ್ಯಯನ ಪತ್ರಿಕೆ 3:

1. 7,287 ಗ್ರಾಮಗಳಲ್ಲಿ ಮೊಬೈಲ್ ಸೇವೆ ಒದಗಿಸಲು ಸಚಿವ ಸಂಪುಟದ ಒಪ್ಪಿಗೆ.

2. ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ (PMGSY).

3. ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆ (UAPA).

 

ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ಸಂಗತಿಗಳು:

1. ಹೂಡಿಕೆದಾರರ ಚಾರ್ಟರ್ ಅನ್ನು ಅನಾವರಣಗೊಳಿಸಿದ SEBI.

 


ಸಾಮಾನ್ಯ ಅಧ್ಯಯನ ಪತ್ರಿಕೆ : 2


 

ವಿಷಯಗಳು: ಸಂಸತ್ತು ಮತ್ತು ರಾಜ್ಯ ಶಾಸಕಾಂಗಗಳು – ರಚನೆ, ಕಾರ್ಯವೈಖರಿ, ವ್ಯವಹಾರದ ನಡಾವಳಿಗಳು, ಅಧಿಕಾರಗಳು ಮತ್ತು ಸವಲತ್ತುಗಳು ಮತ್ತು ಇವುಗಳಿಂದ ಉಂಟಾಗುವ ಸಮಸ್ಯೆಗಳು.

ಪಶ್ಚಿಮ ಬಂಗಾಳದಲ್ಲಿ ಸಿಬಿಐ, ಇಡಿ ವಿರುದ್ಧ ಸವಲತ್ತು ಉಲ್ಲಂಘನೆ ನಿರ್ಣಯ ಮಂಡನೆ:


(Privilege motion against CBI, ED in WB)

ಸಂದರ್ಭ:

ಪಶ್ಚಿಮ ಬಂಗಾಳದಲ್ಲಿ, ತೃಣಮೂಲ ಕಾಂಗ್ರೆಸ್ ಪಕ್ಷವು ಕೇಂದ್ರೀಯ ತನಿಖಾ ದಳ’ (Central Bureau of Investigation- CBI) ಮತ್ತು ‘ಜಾರಿ ನಿರ್ದೇಶನಾಲಯ (Enforcement Directorate – ED)’ ದ ವಿರುದ್ಧ  ವಿಧಾನಸಭೆಯಲ್ಲಿ ‘ಸವಲತ್ತು ಉಲ್ಲಂಘನೆ’ ನಿರ್ಣಯವನ್ನು (Breach of Privilege Motion)  ಮಂಡಿಸಿದೆ.

ಏನಿದು ಪ್ರಕರಣ?

ನಾರದ ಪ್ರಕರಣದಲ್ಲಿ ಚಾರ್ಜ್‌ಶೀಟ್/ದೋಷಾರೋಪ ಪಟ್ಟಿ ಯನ್ನು ಸಲ್ಲಿಸುವ ಮುನ್ನವಿಧಾನಸಭಾ ಸ್ಪೀಕರ್’ ಅನುಮೋದನೆ ಪಡೆಯದ ತನಿಖಾ ಸಂಸ್ಥೆಗಳ ವಿರುದ್ಧ ‘ಸವಲತ್ತು ಉಲ್ಲಂಘನೆ’ ನಿರ್ಣಯವನ್ನು ಮಂಡಿಸಲಾಗಿದೆ.

  1. ಕೇಂದ್ರ ತನಿಖಾ ಸಂಸ್ಥೆಗಳಿಂದ ‘ನಾರದ ಪ್ರಕರಣ’ದಲ್ಲಿ ಮೂವರು ವಿಧಾನಸಭಾ ಸದಸ್ಯರ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಲಾಗಿದೆ.

ವಿಧಾನಸಭಾಧ್ಯಕ್ಷರ ಒಪ್ಪಿಗೆಯ ಅವಶ್ಯಕತೆ:

ಈ ವಿಷಯವನ್ನು ಕಲ್ಕತ್ತಾ ಹೈಕೋರ್ಟ್‌ನಲ್ಲಿ ಪಟ್ಟಿ ಮಾಡಲಾಗಿತ್ತು. ಆ ವೇಳೆ ‘ಕಲ್ಕತ್ತಾ ಹೈಕೋರ್ಟ್’ ಸಿಬಿಐಗೆ ‘ವಿಧಾನಸಭಾ ಸ್ಪೀಕರ್’ ಒಪ್ಪಿಗೆ ಪಡೆಯುವಂತೆ ಸ್ಪಷ್ಟ ನಿರ್ದೇಶನ ನೀಡಿತ್ತು. ಆದರೆ, ಸಿಬಿಐ ‘ವಿಧಾನಸಭಾ ಸ್ಪೀಕರ್’ ಬದಲಿಗೆ ನೇರವಾಗಿ ರಾಜ್ಯಪಾಲರ ಒಪ್ಪಿಗೆ ಪಡೆಯಲು ಅವರ ಬಳಿ ತೆರಳಿತು.

‘ಸಂಸದೀಯ ಸವಲತ್ತುಗಳು’ ಯಾವುವು?

ಸಂಸದೀಯ ಸವಲತ್ತುಗಳು (Parliamentary Privileges), ಮೂಲತಃ ಸದನದ ಸದಸ್ಯರು ವೈಯಕ್ತಿಕವಾಗಿ ಮತ್ತು ಸಾಮೂಹಿಕವಾಗಿ ಅನುಭವಿಸುವ ಹಕ್ಕುಗಳು ಮತ್ತು ವಿನಾಯಿತಿಗಳನ್ನು ಉಲ್ಲೇಖಿಸುತ್ತವೆ. ಈ ಹಕ್ಕುಗಳ ಅಡಿಯಲ್ಲಿ, ಸದನದ ಸದಸ್ಯರ ವಿರುದ್ಧ ಅಥವಾ ಅವರ ಶಾಸಕಾಂಗ ಕಟ್ಟುಪಾಡುಗಳನ್ನು ಪೂರೈಸುವ ಸಂದರ್ಭದಲ್ಲಿ ನೀಡಲಾದ ಹೇಳಿಕೆಗಳ ವಿರುದ್ಧ ಯಾವುದೇ ನಾಗರಿಕ ಅಥವಾ ಕ್ರಿಮಿನಲ್ ಕ್ರಮಗಳನ್ನು ತೆಗೆದುಕೊಳ್ಳಲಾಗುವುದಿಲ್ಲ. ಅಂದರೆ ಅವರಿಗೆ ನಾಗರಿಕ ಅಥವಾ ಅಪರಾಧ ಹೊಣೆಗಾರಿಕೆಯ ವಿರುದ್ಧ ರಕ್ಷಣೆ ನೀಡಲಾಗುತ್ತದೆ, ಇದರಿಂದಾಗಿ ಅವರು “ತಮ್ಮ ಕಾರ್ಯಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಬಹುದು”.

ಸಂಸದೀಯ ಸವಲತ್ತುಗಳಿಗೆ ಸಂಬಂಧಿಸಿದ ಸಾಂವಿಧಾನಿಕ ನಿಬಂಧನೆಗಳು:

  1. ಸಂವಿಧಾನದ 105 ನೇ ಪರಿಚ್ಛೇದದ ಅಡಿಯಲ್ಲಿ, ಭಾರತೀಯ ಸಂಸತ್ತು, ಅದರ ಸದಸ್ಯರು ಮತ್ತು ಸಮಿತಿಗಳ ಸವಲತ್ತುಗಳನ್ನು ಉಲ್ಲೇಖಿಸಲಾಗಿದೆ. ಸಂವಿಧಾನದ 105 ನೇ ವಿಧಿಯು ಎರಡು ಸವಲತ್ತುಗಳನ್ನು ಸ್ಪಷ್ಟವಾಗಿ ಉಲ್ಲೇಖಿಸುತ್ತದೆ. ಅವುಗಳೆಂದರೆ: ಸಂಸತ್ತಿನಲ್ಲಿ ವಾಕ್ ಸ್ವಾತಂತ್ರ್ಯ ಮತ್ತು ಅದರ ನಡಾವಳಿಗಳನ್ನು ಪ್ರಕಟಿಸುವ ಹಕ್ಕು.
  2. 1908 ರ ಸಿವಿಲ್ ಪ್ರೊಸೀಜರ್ ಸಂಹಿತೆಯಲ್ಲಿ, ಸಂವಿಧಾನದಲ್ಲಿ ನಿರ್ದಿಷ್ಟಪಡಿಸಿದ ಸವಲತ್ತುಗಳ ಹೊರತಾಗಿ, ಸದನಗಳ ಸಭೆ ಅಥವಾ ಅದರ ಸಮಿತಿಯ ಸಭೆಯ ಸಮಯದಲ್ಲಿ ಅದು ಪ್ರಾರಂಭವಾಗುವ ನಲವತ್ತು ದಿನಗಳ ಮೊದಲು ಮತ್ತು ಮುಕ್ತಾಯಗೊಂಡ ನಲವತ್ತು ದಿನಗಳ ನಂತರ ನಾಗರಿಕ ಕಾರ್ಯವಿಧಾನದಡಿಯಲ್ಲಿ ಸದಸ್ಯರನ್ನು ಬಂಧಿಸುವುದರಿಂದ ಮತ್ತು ಸುಪರ್ದಿಗೆ ಪಡೆಯುವುದರಿಂದ ಸ್ವಾತಂತ್ರ್ಯಮತ್ತು ಅವಕಾಶವನ್ನು ಕಲ್ಪಿಸಲಾಗಿದೆ.
  3. ಅದೇ ರೀತಿ ಸಂವಿಧಾನದ 194 ನೇ ವಿಧಿಯು ರಾಜ್ಯ ಶಾಸಕಾಂಗಗಳು, ಅದರ ಸದಸ್ಯರು ಮತ್ತು ಸಮಿತಿಗಳು ಪಡೆದ ಅಧಿಕಾರಗಳು, ಸವಲತ್ತುಗಳು ಮತ್ತು ವಿನಾಯಿತಿಗಳನ್ನು ಕುರಿತು ಹೇಳುತ್ತದೆ.

ಸವಲತ್ತು ಉಲ್ಲಂಘನೆ ಎಂದರೇನು?

ಸವಲತ್ತು ಉಲ್ಲಂಘನೆಯ ನಿರ್ಣಯ ಮತ್ತು ಅದು ಆಕರ್ಷಿಸುವ ದಂಡದ ಬಗ್ಗೆ ಸ್ಪಷ್ಟ, ಅಧಿಸೂಚಿತ ನಿಯಮಗಳಿಲ್ಲ.

  1. ಸಾಮಾನ್ಯವಾಗಿ, ಸಂಸತ್ತಿನ ಸದನದ ಕಾರ್ಯ ಕಲಾಪಗಳಿಗೆ ನೇರವಾಗಿ ಅಥವಾ ಪರೋಕ್ಷವಾಗಿ ಅಡ್ಡಿಯುಂಟುಮಾಡುವ ಅಥವಾ ತಡೆಯೊಡ್ಡುವ ಅಥವಾ ಸಂಸತ್ತಿನ ಸದಸ್ಯ ಅಥವಾ ಅಧಿಕಾರಿಯು ಕರ್ತವ್ಯಗಳನ್ನು ನಿರ್ವಹಿಸಲು ಅಡ್ಡಿಯಾಗುವ ಯಾವುದೇ ಕಾರ್ಯವನ್ನು ಸವಲತ್ತು ಉಲ್ಲಂಘನೆ ಎಂದು ಪರಿಗಣಿಸಲಾಗುತ್ತದೆ.
  2. ಸದನ, ಅದರ ಸಮಿತಿಗಳು ಅಥವಾ ಸದಸ್ಯರ ಭಾಷಣಗಳು, ಸ್ಪೀಕರ್‌ನ ಕರ್ತವ್ಯಗಳನ್ನು ಪಾಲಿಸುವಲ್ಲಿ ಅವರ ನಿಷ್ಪಕ್ಷಪಾತವಾದ ಪಾತ್ರವನ್ನು ಪ್ರಶ್ನಿಸುವುದು, ಸದನದಲ್ಲಿ ಸದಸ್ಯರ ನಡವಳಿಕೆಯನ್ನು ಖಂಡಿಸುವುದು, ಸದನದ ನಡಾವಳಿಗಳ ಕುರಿತು ಸುಳ್ಳು ಪ್ರಕಟಣೆ ನೀಡಿ, ಮಾನ ಹಾನಿ ಉಂಟುಮಾಡುವುದು ಇತ್ಯಾದಿಗಳು.
  3. ಯಾವುದೇ ಸದನದ ಯಾವುದೇ ಸದಸ್ಯರಿಂದ ಸವಲತ್ತು ಉಲ್ಲಂಘನೆ ಮಾಡಿದ ತಪ್ಪಿತಸ್ಥ ವ್ಯಕ್ತಿಯ ವಿರುದ್ಧ ಚಲನೆಯ ರೂಪದಲ್ಲಿ ನೋಟಿಸ್ ಸಲ್ಲಿಸಬಹುದು.

ಲೋಕಸಭೆಯ ಸ್ಪೀಕರ್ / ರಾಜ್ಯಸಭೆಯ ಅಧ್ಯಕ್ಷರ ಪಾತ್ರ:

ಸವಲತ್ತು ಉಲ್ಲಂಘನೆಯ ಚಲನೆಯನ್ನು ಪರಿಶೀಲಿಸಲು, ಲೋಕಸಭೆಯ ಸ್ಪೀಕರ್ / ರಾಜ್ಯಸಭೆಯ ಅಧ್ಯಕ್ಷರು ಮೊದಲ ಹಂತ.

  1. ಲೋಕಸಭೆಯ ಸ್ಪೀಕರ್ / ರಾಜ್ಯಸಭೆಯ ಅಧ್ಯಕ್ಷರು ಅವರು, ಸವಲತ್ತುಗಳ ಚಲನೆಯನ್ನು ಸ್ವತಃ ನಿರ್ಧರಿಸಬಹುದು ಅಥವಾ ಅದನ್ನು ಸಂಸತ್ತಿನ ಸವಲತ್ತುಗಳ ಸಮಿತಿಗೆ ಉಲ್ಲೇಖಿಸಬಹುದು.
  2. ಲೋಕಸಭೆಯ ಸ್ಪೀಕರ್ / ರಾಜ್ಯಸಭೆಯ ಅಧ್ಯಕ್ಷರು ಸಂಬಂಧಿತ ನಿಯಮಗಳ ಅಡಿಯಲ್ಲಿ ಚಲನೆಯನ್ನು ಒಪ್ಪಿದರೆ, ಸಂಬಂಧಪಟ್ಟ ಸದಸ್ಯರಿಗೆ ಚಲನೆಯನ್ನು ಉಲ್ಲೇಖಿಸಿ ಸಂಕ್ಷಿಪ್ತ ಹೇಳಿಕೆ ನೀಡಲು ಅವಕಾಶ ನೀಡಲಾಗುತ್ತದೆ.

ಅನ್ವಯಿಸುವಿಕೆ:

  1. ಸಂವಿಧಾನವು, ಸಂಸತ್ತಿನ ಸದನ ಅಥವಾ ಅದರ ಯಾವುದೇ ಸಮಿತಿಯ ವಿಚಾರಣೆಯಲ್ಲಿ ಮಾತನಾಡಲು ಮತ್ತು ಭಾಗವಹಿಸಲು ಅರ್ಹರಾಗಿರುವ ಎಲ್ಲ ವ್ಯಕ್ತಿಗಳಿಗೆ ಸಂಸತ್ತಿನ ಸವಲತ್ತುಗಳನ್ನು ನೀಡಿದೆ. ಈ ಸದಸ್ಯರಲ್ಲಿ ಭಾರತದ ಅಟಾರ್ನಿ ಜನರಲ್ ಮತ್ತು ಕೇಂದ್ರ ಸಚಿವರು ಸೇರಿದ್ದಾರೆ.
  2. ಆದಾಗ್ಯೂ,ರಾಷ್ಟ್ರಪತಿಗಳು, ಸಂಸತ್ತಿನ ಅವಿಭಾಜ್ಯ ಅಂಗವಾಗಿದ್ದರೂ, ಸಂಸತ್ತಿನ ಸವಲತ್ತುಗಳನ್ನು ಅನುಭವಿಸುವುದಿಲ್ಲ. ಸಂವಿಧಾನದ 361 ನೇ ವಿಧಿಯು ರಾಷ್ಟ್ರಪತಿಗಳಿಗೆ ಸವಲತ್ತುಗಳನ್ನು ಒದಗಿಸುತ್ತದೆ.

ಶಾಸಕಾಂಗದ ಸವಲತ್ತು ಉಲ್ಲಂಘನೆಯಾಗಿದೆ ಎಂದು ಹೇಳಲಾದ ವಿಷಯಗಳಲ್ಲಿ ಅನುಸರಿಸಬೇಕಾದ ಕಾರ್ಯವಿಧಾನಗಳು:

  1. ಸದನದಲ್ಲಿ ಸ್ಪೀಕರ್ ಅಥವಾ ಅಧ್ಯಕ್ಷರು ಸವಲತ್ತು ಸಮಿತಿಯನ್ನು ರಚಿಸುತ್ತಾರೆ, ಇದು ಕೆಳಮನೆಯಲ್ಲಿ 15 ಸದಸ್ಯರನ್ನು ಮತ್ತು ಮೇಲ್ಮನೆಯಲ್ಲಿ 11 ಸದಸ್ಯರನ್ನು ಒಳಗೊಂಡಿದೆ.
  2. ಸದನದಲ್ಲಿನ ಪಕ್ಷಗಳ ಸಂಖ್ಯೆಯನ್ನು ಆಧರಿಸಿ ಸಮಿತಿಯ ಸದಸ್ಯರನ್ನು ನಾಮಕರಣ ಮಾಡಲಾಗುತ್ತದೆ.
  3. ನಿರ್ಣಯದ ಕುರಿತ ಮೊದಲ ನಿರ್ಧಾರವನ್ನು ಸ್ಪೀಕರ್ ಅಥವಾ ಅಧ್ಯಕ್ಷರು ತೆಗೆದುಕೊಳ್ಳುತ್ತಾರೆ.
  4. ಮೇಲ್ನೋಟಕ್ಕೆ, ಸವಲತ್ತು ಉಲ್ಲಂಘನೆ ಅಥವಾ ತಿರಸ್ಕಾರದ ಸಂದರ್ಭದಲ್ಲಿ, ಸ್ಪೀಕರ್ ಅಥವಾ ಅಧ್ಯಕ್ಷರು ನಿಗದಿಪಡಿಸಿದ ಕಾರ್ಯವಿಧಾನವನ್ನು ಅನುಸರಿಸುವ ಮೂಲಕ ಈ ವಿಷಯವನ್ನು ಸವಲತ್ತುಗಳ ಸಮಿತಿಗೆ ಉಲ್ಲೇಖಿಸುತ್ತಾರೆ.
  5. ಸಮಿತಿಯು,ಆರೋಪಿತ ವ್ಯಕ್ತಿಯು ನೀಡಿದ ಹೇಳಿಕೆಗಳಿಂದ ರಾಜ್ಯ ಶಾಸಕಾಂಗ ಮತ್ತು ಅದರ ಸದಸ್ಯರ ಅಪಮಾನವಾಗಿದೆಯೇ ಮತ್ತು ಸಾರ್ವಜನಿಕರ ಮುಂದೆ ಅವರ ವ್ಯಕ್ತಿತ್ವವು ಕೆಟ್ಟದಾಗಿ ನಿರೂಪಣೆ ಗೊಂಡಿದೆಯೇ ಎಂದು ಪರಿಶೀಲಿಸುತ್ತದೆ.
  6. ಸಮಿತಿಯು ಅರೆ-ನ್ಯಾಯಾಂಗ ಅಧಿಕಾರವನ್ನು ಹೊಂದಿದೆ ಮತ್ತು ಸಂಬಂಧಪಟ್ಟ ಎಲ್ಲರಿಂದ ಸ್ಪಷ್ಟೀಕರಣವನ್ನು ಪಡೆಯುತ್ತದೆ ಮತ್ತು ವಿಚಾರಣೆಯನ್ನು ನಡೆಸಿದ ನಂತರ, ಅದರ ಸಂಶೋಧನೆಗಳ ಆಧಾರದ ಮೇಲೆ ರಾಜ್ಯ ಶಾಸಕಾಂಗದ ಪರಿಗಣನೆಗೆ ಶಿಫಾರಸುಗಳನ್ನು ಮಾಡುತ್ತದೆ.

 

ವಿಷಯಗಳುಸಂವಿಧಾನ- ಐತಿಹಾಸಿಕ ಆಧಾರಗಳು, ವಿಕಸನ, ವೈಶಿಷ್ಟ್ಯಗಳು, ತಿದ್ದುಪಡಿಗಳು, ಮಹತ್ವದ ನಿಬಂಧನೆಗಳು ಮತ್ತು ಮೂಲ ರಚನೆ.

ಮಾನನಷ್ಟ ಮೊಕದ್ದಮೆ ಪ್ರಕರಣವನ್ನು ರದ್ದುಗೊಳಿಸುವಂತೆ ಹೈಕೋರ್ಟ್ ಮೊರೆ ಹೋದ ರಾಹುಲ್ ಗಾಂಧಿ:


(Rahul moves HC to quash defamation case)

ಸಂದರ್ಭ:

ಸ್ಥಳೀಯ ಬಿಜೆಪಿ ನಾಯಕರೊಬ್ಬರು ಹೂಡಿರುವ ಮಾನನಷ್ಟ  (Defamation) ಮೊಕದ್ದಮೆಯನ್ನು ರದ್ದುಗೊಳಿಸುವಂತೆ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಬಾಂಬೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಏನಿದು ಪ್ರಕರಣ?

2018ರಲ್ಲಿ ಸ್ಥಳೀಯ ಬಿಜೆಪಿ ನಾಯಕ ಮಹೇಶ್ ಶ್ರೀಶ್ರೀಮಲ್ ಅವರು ರಾಹುಲ್ ಗಾಂಧಿ ವಿರುದ್ಧ ಗಿರ್ಗಾಂವ್ ಮ್ಯಾಜಿಸ್ಟ್ರೇಟ್ ಕೋರ್ಟ್‌ನಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ಪ್ರಕರಣದ ಪ್ರಕಾರ, ಶ್ರೀ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ‘ಕಳ್ಳರ ಕಮಾಂಡರ್’ (Commander in Thief) ಎಂದು ಕರೆದಿದ್ದರು ಮತ್ತು  ಶ್ರೀಶ್ರೀಮಲ್ ಅವರು ಭಾರತೀಯ ಜನತಾ ಪಕ್ಷದ ಸದಸ್ಯರಾಗಿರುವುದರಿಂದಾಗಿ ಅವರು ಇದು ತಮಗೂ ಸಹ ಆದ ಅವಮಾನ ಎಂದು ಪರಿಗಣಿಸಿದ್ದರು.

  1. ಈ ಪ್ರಕರಣವನ್ನು ರದ್ದುಗೊಳಿಸುವಂತೆ ಬಾಂಬೆ ಹೈಕೋರ್ಟ್‌ಗೆ ರಾಹುಲ್ ಗಾಂಧಿ ಅರ್ಜಿ ಸಲ್ಲಿಸಿದ್ದು, ಅದರಲ್ಲಿ ಅವರು ಪಕ್ಷ ಗಾರನಿಗೆ ವೈಯಕ್ತಿಕವಾಗಿ ಮತ್ತು ನೇರವಾಗಿ ಮಾಡಿದ ಮಾನಹಾನಿಗಾಗಿ ಮಾನನಷ್ಟ ಮೊಕದ್ದಮೆ ದಾಖಲಿಸಬಹುದು ಎಂದು ಹೇಳಿದ್ದಾರೆ.

ಮಾನನಷ್ಟ’ ಎಂದರೇನು?

ಮಾನನಷ್ಟ (Defamation) ಎನ್ನುವುದು ಒಬ್ಬ ವ್ಯಕ್ತಿ, ವ್ಯಾಪಾರ, ಉತ್ಪನ್ನ, ಗುಂಪು, ಸರ್ಕಾರ, ಧರ್ಮ ಅಥವಾ ರಾಷ್ಟ್ರದ ಪ್ರತಿಷ್ಠೆಗೆ ಹಾನಿ ಮಾಡುವ ಸುಳ್ಳು ಹೇಳಿಕೆಗಳ ಸಂವಹನವಾಗಿದೆ.

ಭಾರತದಲ್ಲಿ, ಮಾನನಷ್ಟದ ಸಿವಿಲ್ ಮತ್ತು ಕ್ರಿಮಿನಲ್ ಎರಡೂ ರೂಪಗಳಿವೆ. ಎರಡು ರೀತಿಯ ಮಾನನಷ್ಟಗಳ ನಡುವಿನ ವ್ಯತ್ಯಾಸವು ಅವರ ಉದ್ದೇಶಗಳಲ್ಲಿರುತ್ತದೆ.

  1. ಸಿವಿಲ್ ಪ್ರಕಾರದ ಮಾನನಷ್ಟದಲ್ಲಿ, ಅಪರಾಧಿಯು ಪರಿಹಾರದ ರೂಪದಲ್ಲಿ ಪರಿಹಾರ ಧನವನ್ನು ನೀಡಬೇಕು ಮತ್ತು ಕ್ರಿಮಿನಲ್/ಅಪರಾಧ ಪ್ರಕಾರದ ಮಾನನಷ್ಟದ ಸಂದರ್ಭದಲ್ಲಿ ಅಪರಾಧಿಯನ್ನು ಶಿಕ್ಷಿಸಲಾಗುತ್ತದೆ, ಹೀಗಾಗಿ ಅಂತಹ ಕೃತ್ಯವನ್ನು ಮಾಡದಂತೆ ಇತರರಿಗೆ ಸಂದೇಶವನ್ನು ನೀಡಲಾಗುತ್ತದೆ.

ಕಾನೂನು ನಿಬಂಧನೆಗಳು:

ಕ್ರಿಮಿನಲ್ ಮಾನನಷ್ಟವನ್ನು ಭಾರತೀಯ ದಂಡ ಸಂಹಿತೆಯ (Indian Penal Code- IPC) ಸೆಕ್ಷನ್ 499 ರ ಅಡಿಯಲ್ಲಿ ನಿರ್ದಿಷ್ಟವಾಗಿ ಅಪರಾಧ ಎಂದು ವ್ಯಾಖ್ಯಾನಿಸಲಾಗಿದೆ.

ಸಿವಿಲ್ ಮಾನನಷ್ಟವು ದೌರ್ಜನ್ಯದ ಕಾನೂನನ್ನು (Tort law) ಆಧರಿಸಿದೆ. ದೌರ್ಜನ್ಯದ ಕಾನೂನು: ದೋಷವನ್ನು ವ್ಯಾಖ್ಯಾನಿಸಲು ಕಾನೂನು ಅಥವಾ ಶಾಸನವನ್ನು ಅವಲಂಬಿಸದ ಕಾನೂನಿನ ಕ್ಷೇತ್ರವಾಗಿದೆ, ಆದರೆ ‘ಏನು ಮಾಡುವುದು ತಪ್ಪಾಗಿರಬಹುದು?’ ಎಂದು ವಿವರಿಸಲು ವಿವಿಧ ಕಾನೂನುಗಳನ್ನು ಬಳಸುತ್ತದೆ.

  1. ಐಪಿಸಿಯ ಸೆಕ್ಷನ್ 499 ರ ಪ್ರಕಾರ, ಮಾನನಷ್ಟವನ್ನು ಮಾತನಾಡುವ ಅಥವಾ ಓದಬಹುದಾದ ಪದಗಳ ಮೂಲಕ, ಚಿಹ್ನೆಗಳ ಮೂಲಕ ಮತ್ತು ಗೋಚರ ಅಭಿವ್ಯಕ್ತಿಯ ಮೂಲಕ ಮಾಡಬಹುದು ಎಂದು ಹೇಳುತ್ತದೆ.
  2. ಸೆಕ್ಷನ್ 499 ರಲ್ಲಿ ವಿನಾಯಿತಿಗಳನ್ನು ಸಹ ಉಲ್ಲೇಖಿಸಲಾಗಿದೆ. ಇವುಗಳಲ್ಲಿ ‘ಸಾರ್ವಜನಿಕ ಹಿತಾಸಕ್ತಿ’ಯಲ್ಲಿ ಅಗತ್ಯವಾದ ‘ಸತ್ಯ’ವನ್ನು ಹೇಳುವುದು ಅಥವಾ ಪ್ರಕಟಿಸುವುದು ಮಾನನಷ್ಟದ ಅಡಿಯಲ್ಲಿ ಬರುವುದಿಲ್ಲ.
  3. ಮಾನನಷ್ಟಕ್ಕಾಗಿ ಶಿಕ್ಷೆಗೆ ಸಂಬಂಧಿಸಿದಂತೆ IPC ಯ ಸೆಕ್ಷನ್ 500 ರ ಪ್ರಕಾರ, ಇನ್ನೊಬ್ಬ ವ್ಯಕ್ತಿಯನ್ನು ಮಾನಹಾನಿ ಮಾಡುವ ಯಾವುದೇ ವ್ಯಕ್ತಿಗೆ ಎರಡು ವರ್ಷಗಳವರೆಗೆ ವಿಸ್ತರಿಸಬಹುದಾದ ಸರಳ ಜೈಲು ಶಿಕ್ಷೆ ಅಥವಾ ದಂಡ ಅಥವಾ ಎರಡನ್ನೂ ವಿಧಿಸಲಾಗುತ್ತದೆ.

ಮಾನನಷ್ಟ ಕಾನೂನಿನ ದುರ್ಬಳಕೆ ಮತ್ತು ಸಂಬಂಧಿತ ಕಾಳಜಿಗಳು:

  1. ಇದರ ಅಡಿಯಲ್ಲಿ, ಕ್ರಿಮಿನಲ್ ನಿಬಂಧನೆಗಳನ್ನು ಸಾಮಾನ್ಯವಾಗಿ ಕಿರುಕುಳದ ಸಾಧನವಾಗಿ ಬಳಸಲಾಗುತ್ತದೆ.
  2. ಭಾರತೀಯ ಕಾನೂನು ಪ್ರಕ್ರಿಯೆಯ ತೊಡಕಿನ ಸ್ವರೂಪವನ್ನು ಗಮನಿಸಿದರೆ, ಪ್ರಕರಣದ ಗಂಭೀರತೆಯನ್ನು ಲೆಕ್ಕಿಸದೆಯೇ, ಕಾರ್ಯವಿಧಾನವು ಶಿಕ್ಷೆಯಾಗಿ ಬದಲಾಗುತ್ತದೆ.
  3. ಮಾನನಷ್ಟ ಕಾನೂನುಗಳು ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮೂಲಭೂತ ಹಕ್ಕುಗಳೊಂದಿಗೆ ಸಂಘರ್ಷಿಸುತ್ತವೆ ಎಂದು ವಿಮರ್ಶಕರು ವಾದಿಸುತ್ತಾರೆ.
  4. ಕ್ರಿಮಿನಲ್ ಮಾನನಷ್ಟವು ಸಮಾಜದ ಮೇಲೆ ಕೆಟ್ಟ ಪರಿಣಾಮಗಳನ್ನು ಬೀರುತ್ತದೆ: ಉದಾಹರಣೆಗೆ, ರಾಜ್ಯವು ಕ್ರಿಮಿನಲ್ ಮಾನನಷ್ಟ ವನ್ನು ಮಾಧ್ಯಮಗಳು ಮತ್ತು ರಾಜಕೀಯ ವಿರೋಧಿಗಳನ್ನು ಟೀಕೆಗಳಿಂದ ದೂರವಿರಿಸಲು ಮತ್ತು ಅಗತ್ಯ ಸಂಯಮವನ್ನು ಅಳವಡಿಸಿಕೊಳ್ಳುವಂತೆ ಒತ್ತಾಯಿಸಲು ಒಂದು ಸಾಧನವಾಗಿ ಬಳಸುತ್ತದೆ.

ಸರ್ವೋಚ್ಚ ನ್ಯಾಯಾಲಯದ ಅವಲೋಕನಗಳು:

  1. 2014 ರ ಸುಬ್ರಮಣಿಯನ್ ಸ್ವಾಮಿ VS ಯೂನಿಯನ್ ಆಫ್ ಇಂಡಿಯಾ ಪ್ರಕರಣದಲ್ಲಿ, ನ್ಯಾಯಾಲಯವು ಭಾರತೀಯ ದಂಡ ಸಂಹಿತೆಯ ಸೆಕ್ಷನ್ 499 ಮತ್ತು 500 (ಕ್ರಿಮಿನಲ್ ಮಾನನಷ್ಟ) ಗಳ ಸಾಂವಿಧಾನಿಕ ಸಿಂಧುತ್ವವನ್ನು ಎತ್ತಿಹಿಡಿದಿದೆ ಮತ್ತು ಒಬ್ಬ ವ್ಯಕ್ತಿಗೆ ಸ್ವಾತಂತ್ರ್ಯವಿದೆ ಎಂಬ ಕಾರಣಕ್ಕಾಗಿ ಇನ್ನೊಬ್ಬ ವ್ಯಕ್ತಿಯ ‘ಗೌರವ ಮತ್ತು ಘನತೆಯಿಂದ ಬದುಕುವ ಹಕ್ಕನ್ನು’ ಯಾರಿಂದಲೂ ಹಾಳುಮಾಡಲು ಸಾಧ್ಯವಿಲ್ಲ ಎಂದು ಹೇಳಿದೆ.
  2. ಆಗಸ್ಟ್ 2016 ರಲ್ಲಿ ನ್ಯಾಯಾಲಯವು ತಮಿಳುನಾಡು ಮುಖ್ಯಮಂತ್ರಿ ಜೆ. ಜಯಲಲಿತಾ ಅವರು “ಪ್ರಜಾಪ್ರಭುತ್ವವನ್ನು ಉಸಿರುಗಟ್ಟಿಸಲು” ಕ್ರಿಮಿನಲ್ ಮಾನನಷ್ಟ ಕಾನೂನನ್ನು ದುರುಪಯೋಗ ಪಡಿಸಿಕೊಂಡಿದ್ದ ಕ್ಕಾಗಿ ಅವರನ್ನು ತೀವ್ರವಾಗಿ ಟೀಕಿಸುತ್ತ “ಸಾರ್ವಜನಿಕ ವ್ಯಕ್ತಿಗಳು” ಟೀಕೆಗಳನ್ನು ಎದುರಿಸಬೇಕಾಗುತ್ತದೆ ಎಂದು ಹೇಳಿತ್ತು.

 

ವಿಷಯಗಳು: ಪ್ರಮುಖ ಅಂತರರಾಷ್ಟ್ರೀಯ ಸಂಸ್ಥೆಗಳು, ಏಜೆನ್ಸಿಗಳು ಮತ್ತು ವೇದಿಕೆಗಳು, ಅವುಗಳ ರಚನೆ, ಆದೇಶ.

ಜಾಧವ್‌ ಅವರಿಗೆ ಮೇಲ್ಮನವಿ ಸಲ್ಲಿಸಲು ಅವಕಾಶ ನೀಡಿದ ಪಾಕಿಸ್ತಾನದ ಹೊಸ ಕಾನೂನು:


(New Pak. Law allows Jadhav to file appeal)

ಸಂದರ್ಭ:

ಮರಣದಂಡನೆಗೆ ಗುರಿಯಾಗಿರುವ ಭಾರತೀಯ ಕೈದಿ ಕುಲಭೂಷಣ್ ಜಾಧವ್ ಅವರಿಗೆ “ಮಿಲಿಟರಿ ನ್ಯಾಯಾಲಯದ ಶಿಕ್ಷೆಯ ವಿರುದ್ಧ” ಮರುಪರಿಶೀಲನಾ ಮೇಲ್ಮನವಿ ಸಲ್ಲಿಸಲು ಹಕ್ಕನ್ನು ನೀಡಲು ಪಾಕಿಸ್ತಾನದ ಸಂಸತ್ತು ಕಾನೂನನ್ನು ರೂಪಿಸಿ ಜಾರಿಗೊಳಿಸಿದೆ.

ಈ ಕಾನೂನಿನ ಉದ್ದೇಶವೆಂದರೆ ಅಂತರರಾಷ್ಟ್ರೀಯ ನ್ಯಾಯಾಲಯದ (ICJ) ತೀರ್ಪಿಗೆ ಅನುಗುಣವಾಗಿ ಜಾಧವ್ ಅವರಿಗೆ ಭಾರತದ ‘ಕಾನ್ಸುಲರ್ ಕಚೇರಿಯ ಸಂಪರ್ಕ’ ಹೊಂದಲು ಮತ್ತು ನೆರವು ಪಡೆಯಲು ಅವಕಾಶ ನೀಡುವುದು.

ಹಿನ್ನೆಲೆ:

ಪಾಕಿಸ್ತಾನದಲ್ಲಿ ಗೂಢಚಾರಿಕೆ ನಡೆಸಿದ, ವಿಧ್ವಂಸಕ ಕೃತ್ಯಕ್ಕೆ ಯತ್ನಿಸಿದ ಆರೋಪದ ಮೇಲೆ ಏಪ್ರಿಲ್ 2017 ರಲ್ಲಿ 51 ವರ್ಷದ ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿಯಾದ ಕುಲಭೂಷಣ್ ಜಾಧವ್ ಅವರಿಗೆ ಪಾಕಿಸ್ತಾನದ ಮಿಲಿಟರಿ ನ್ಯಾಯಾಲಯ ಮರಣದಂಡನೆ ಶಿಕ್ಷೆಯನ್ನು ವಿಧಿಸಿತ್ತು.

ಇಲ್ಲಿಯವರೆಗಿನ ಬೆಳವಣಿಗೆಗಳು:

  1. ಜಾಧವ್‌ಗೆ ಸಲಹೆ ನೀಡುವುದನ್ನು ನಿರಾಕರಿಸಿದ್ದಕ್ಕಾಗಿ ಮತ್ತು ‘ಮರಣದಂಡನೆ’ ಶಿಕ್ಷೆಯನ್ನು ಪ್ರಶ್ನಿಸಲು ಪಾಕಿಸ್ತಾನದ ವಿರುದ್ಧ ಭಾರತ ‘ಇಂಟರ್ನ್ಯಾಷನಲ್ ಕೋರ್ಟ್ ಆಫ್ ಜಸ್ಟಿಸ್’ (ICJ) ಗೆ ಮನವಿ ಮಾಡಿತು.
  2. ಜಾಧವ್ ಅವರ ಅಪರಾಧ ಮತ್ತು ಶಿಕ್ಷೆಯನ್ನು ಪರಿಣಾಮಕಾರಿಯಾಗಿ ಪರಿಶೀಲಿಸಲು ಮತ್ತು ಮರುಪರಿಶೀಲಿಸಲು ಪಾಕಿಸ್ತಾನವು ಕ್ರಮ ಕೈಗೊಳ್ಳಬೇಕು ಮತ್ತು ಜಾಧವ್ ಅವರಿಗೆ ವಿಳಂಬವಿಲ್ಲದೆ ಭಾರತದ ವಕೀಲರ ಸೇವೆ ಪಡೆಯಲು ಅವಕಾಶ ನೀಡಬೇಕು ಎಂದು ಜುಲೈ 2019 ರಲ್ಲಿ ‘ಅಂತರಾಷ್ಟ್ರೀಯ ನ್ಯಾಯಾಲಯವು’ ತೀರ್ಪು ನೀಡಿತು.
  3. ಮಿಲಿಟರಿ ನ್ಯಾಯಾಲಯವು ನಿವೃತ್ತ ಅಧಿಕಾರಿಗೆ ನೀಡಿದ ಶಿಕ್ಷೆಯ ವಿರುದ್ಧ ಮೇಲ್ಮನವಿ ಸಲ್ಲಿಸಲು ಸೂಕ್ತ ವೇದಿಕೆಯನ್ನು (ಸಾಕ್ಷ್ಯವನ್ನು) ಒದಗಿಸುವಂತೆ ಅಂತರರಾಷ್ಟ್ರೀಯ ನ್ಯಾಯಾಲಯವು ತನ್ನ 2019 ರ ತೀರ್ಪಿನಲ್ಲಿ ಪಾಕಿಸ್ತಾನವನ್ನು ಕೇಳಿದೆ.

ಪರಿಣಾಮಕಾರಿಯಾದ ವಿಮರ್ಶೆ ಮತ್ತು ಮರು-ಪರಿಗಣನೆಯಿಂದ ಭಾರತದ ಮೇಲಾಗುವ ಪರಿಣಾಮಗಳು:

ಪರಿಣಾಮಕಾರಿಯಾದ ವಿಮರ್ಶೆ ಮತ್ತು ಮರು-ಪರಿಗಣನೆಯು (Effective Review and Reconsideration) ಒಬ್ಬರು ಅರ್ಥಮಾಡಿಕೊಂಡಂತೆ ಒಂದು ನುಡಿಗಟ್ಟು, ಇದು ದೇಶೀಯ ಸಂದರ್ಭಗಳಲ್ಲಿ ಪ್ರಚಲಿತದಲ್ಲಿರುವ ‘ವಿಮರ್ಶೆ’ (Review) ಗಿಂತ ಭಿನ್ನವಾಗಿರುತ್ತದೆ.

  1. ಇದರಲ್ಲಿ, ಕುಲಭೂಷಣ್ ಜಾಧವ್ ಅವರಿಗೆ ‘ವಕೀಲರನ್ನು ಒದಗಿಸಲು’ ಮತ್ತು ಅವರ ಪ್ರತಿವಾದಕ್ಕೆ ಸಿದ್ಧರಾಗಲು ಸಹಾಯ ಮಾಡುವುದು ಒಳಗೊಂಡಿರುತ್ತದೆ.
  2. ಇದರರ್ಥ ಪಾಕಿಸ್ತಾನವು ಜಾಧವ್ ವಿರುದ್ಧ ಇದುವರೆಗೆ ಹೊರಿಸಲಾದ ಎಲ್ಲಾ ಆರೋಪಗಳನ್ನು ಮತ್ತು ಸಂಪೂರ್ಣವಾಗಿ ಅಪಾರದರ್ಶಕವಾಗಿರುವ ಸಾಕ್ಷ್ಯವನ್ನು ಬಹಿರಂಗಪಡಿಸಬೇಕಾಗಿದೆ.
  3. ಜಾಧವ್ ಅವರಿಂದ ಸೇನೆಯು ಅಪರಾಧದ ತಪ್ಪೊಪ್ಪಿಗೆಯನ್ನು ಪಡೆದ ಸಂದರ್ಭಗಳನ್ನೂ ಪಾಕಿಸ್ತಾನ ಬಹಿರಂಗಪಡಿಸಬೇಕಾಗಿದೆ.
  4. ಇದರರ್ಥ ಜಾಧವ್ ಅವರು ಪ್ರಕರಣದ ವಿಚಾರಣೆಯ ಯಾವುದೇ ವೇದಿಕೆ ಅಥವಾ ನ್ಯಾಯಾಲಯದಲ್ಲಿ ತಮ್ಮನ್ನು ತಾವು ಸಮರ್ಥಿಸಿಕೊಳ್ಳುವ ಹಕ್ಕನ್ನು ಹೊಂದಿರುತ್ತಾರೆ.

ವಿಯೆನ್ನಾ ಸಮಾವೇಶ (Vienna Convention):

  1. ವಿಯೆನ್ನಾ ಕನ್ವೆನ್ಷನ್ ಆನ್ ಕಾನ್ಸುಲರ್ ರಿಲೇಶನ್ಸ್ (Vienna Convention on Consular Relations) ಸ್ವತಂತ್ರ ರಾಷ್ಟ್ರಗಳ ನಡುವಿನ “ರಾಜತಾಂತ್ರಿಕ ಸಂಬಂಧಗಳನ್ನು” ವ್ಯಾಖ್ಯಾನಿಸುವ ಅಂತರರಾಷ್ಟ್ರೀಯ ಒಪ್ಪಂದವಾಗಿದೆ.
  2. 1963 ರ ‘ವಿಯನ್ನ ಸಮಾವೇಶದ ದೂತವಾಸ ಸಂಬಂಧಗಳ’ (Article 36 of Vienna Convention of Consular Relations, 1963) 36 ನೇ ವಿಧಿಯ ಪ್ರಕಾರ, ಆತಿಥೇಯ ದೇಶದಲ್ಲಿ ಬಂಧಿಸಲ್ಪಟ್ಟ ಅಥವಾ ಬಂಧನಕ್ಕೊಳಗಾದ ವಿದೇಶಿ ಪ್ರಜೆಗಳಿಗೆ ‘ಬಂಧನದ ಕಾರಣವನ್ನು ಆತನ ದೇಶದ ರಾಯಭಾರ ಕಚೇರಿ ಅಥವಾ ದೂತಾವಾಸಕ್ಕೆ ಆ ಬಂಧನದ ಸೂಚನೆಯನ್ನು ಹೊಂದುವ ಹಕ್ಕನ್ನು’ ತಕ್ಷಣವೇ ನೀಡಬೇಕು.
  3. ಬಂಧಿತ ವಿದೇಶಿ ಪ್ರಜೆಯ ಕೋರಿಕೆಯ ಮೇರೆಗೆ, ಸಂಬಂಧಪಟ್ಟ ವ್ಯಕ್ತಿಯ ದೇಶದ ರಾಯಭಾರ ಕಚೇರಿ ಅಥವಾ ದೂತಾವಾಸಕ್ಕೆ ನೋಟೀಸ್ ಅನ್ನು ಫ್ಯಾಕ್ಸ್ ಮಾಡುವ ಮೂಲಕ ಪೊಲೀಸರು ಆ ವ್ಯಕ್ತಿಯನ್ನು ಪರಿಶೀಲಿಸಬಹುದು.

 


ಸಾಮಾನ್ಯ ಅಧ್ಯಯನ ಪತ್ರಿಕೆ : 3


 

ವಿಷಯಗಳು: ಮೂಲಸೌಕರ್ಯ-ದೂರಸಂಪರ್ಕ.

7,287 ಗ್ರಾಮಗಳಲ್ಲಿ ಮೊಬೈಲ್ ಸೇವೆ ಒದಗಿಸಲು ಸಚಿವ ಸಂಪುಟದ ಒಪ್ಪಿಗೆ:


(Cabinet nod for mobile services in 7,287 villages)

ಸಂದರ್ಭ:

ಐದು ರಾಜ್ಯಗಳ ಮಹತ್ವಕಾಂಕ್ಷೆಯ ಜಿಲ್ಲೆ’ (Aspirational Districts) ಗಳ ವ್ಯಾಪ್ತಿಯಲ್ಲಿಲ್ಲದ ಗ್ರಾಮಗಳಲ್ಲಿ ಮೊಬೈಲ್ ಸೇವೆಯನ್ನು ಒದಗಿಸಲು ಕೇಂದ್ರ ಸಚಿವ ಸಂಪುಟ ತನ್ನ ಅನುಮೋದನೆ ನೀಡಿದೆ.

  1. ಮೊಬೈಲ್ ಸೇವೆಗೆ ಒಳಪಡದ ಆಂಧ್ರಪ್ರದೇಶ, ಛತ್ತೀಸ್‌ಗಢ, ಜಾರ್ಖಂಡ್, ಮಹಾರಾಷ್ಟ್ರ ಮತ್ತು ಒಡಿಶಾದ 44 ಮಹತ್ವಾಕಾಂಕ್ಷೆಯ ಜಿಲ್ಲೆಗಳಲ್ಲಿ 7,287 ಹಳ್ಳಿಗಳಿಗೆ ಅಂದಾಜು ರೂ.6,466 ಕೋಟಿ ವೆಚ್ಚದಲ್ಲಿ 4G ಮೊಬೈಲ್ ಸೇವೆಗಳನ್ನು ಒದಗಿಸಲು ಯೋಜನೆಯು ಯೋಜಿಸಿದೆ. ಈ ಮೊತ್ತವು ಐದು ವರ್ಷಗಳ ಕಾರ್ಯಾಚರಣೆಯ ವೆಚ್ಚವನ್ನು ಸಹ ಒಳಗೊಂಡಿದೆ.

ಅನುಷ್ಠಾನ:

ಯೋಜನೆಯು ಯುನಿವರ್ಸಲ್ ಸರ್ವೀಸ್ ಆಬ್ಲಿಗೇಶನ್ ಫಂಡ್ (Universal Service Obligation Fund – USOF) ನಿಂದ ಧನಸಹಾಯವನ್ನು ಪಡೆಯುತ್ತದೆ ಮತ್ತು ಒಪ್ಪಂದಕ್ಕೆ ಸಹಿ ಮಾಡಿದ ನಂತರ 18 ತಿಂಗಳೊಳಗೆ ಯೋಜನೆಯನ್ನು ಪೂರ್ಣಗೊಳಿಸುವ ಗುರಿಯನ್ನು ಹೊಂದಿದೆ.

ಯೂನಿವರ್ಸಲ್ ಸರ್ವೀಸ್ ಆಬ್ಲಿಗೇಶನ್ ಫಂಡ್’ (USOF) ಎಂದರೇನು?

ಸಾರ್ವಭೌಮ ಸೇವಾ ದಾಯಿತ್ವ ನಿಧಿ’/‘ಯೂನಿವರ್ಸಲ್ ಸರ್ವಿಸ್ ಆಬ್ಲಿಗೇಶನ್ ಫಂಡ್’ ಅನ್ನು 2002 ರಲ್ಲಿ ಸ್ಥಾಪಿಸಲಾಯಿತು. ಸಾರ್ವತ್ರಿಕವಾಗಿ ದೂರಸಂಪರ್ಕ ಸೇವೆಗಳನ್ನು ಒದಗಿಸುವುದು ಮತ್ತು ದೇಶದ ಗ್ರಾಮೀಣ ಮತ್ತು ದೂರದ ಪ್ರದೇಶಗಳ ಜನರಿಗೆ ಅಂತರ್ಗತ ಅಭಿವೃದ್ಧಿಯ ಪ್ರಯೋಜನಗಳನ್ನು ಖಚಿತಪಡಿಸುವುದು ಇದರ ಮುಖ್ಯ ಉದ್ದೇಶವಾಗಿದೆ.

  1. ಭಾರತೀಯ ಟೆಲಿಗ್ರಾಫ್ (ತಿದ್ದುಪಡಿ) ಕಾಯಿದೆ, 2003’ ಅಡಿಯಲ್ಲಿ ‘ಯೂನಿವರ್ಸಲ್ ಸರ್ವಿಸ್ ಆಬ್ಲಿಗೇಶನ್ ಫಂಡ್’ (USOF) ಗೆ ಶಾಸನಬದ್ಧ ಸ್ಥಾನಮಾನವನ್ನು ನೀಡಲಾಗಿದೆ.
  2. ‘ಯೂನಿವರ್ಸಲ್ ಸರ್ವೀಸ್ ಆಬ್ಲಿಗೇಶನ್ ಫಂಡ್’USOF ನಿರ್ವಾಹಕರ ನೇತೃತ್ವದಲ್ಲಿದೆ, ಅವರು, ದೂರಸಂಪರ್ಕ ಇಲಾಖೆ (DoT)ಕಾರ್ಯದರ್ಶಿಗೆ ವರದಿ ಮಾಡುತ್ತಾರೆ.

ಹಣಕಾಸು:

‘ಯೂನಿವರ್ಸಲ್ ಸರ್ವೀಸ್ ಆಬ್ಲಿಗೇಶನ್ ಫಂಡ್’ (USOF) ಗಾಗಿ ನಿಧಿಯು ‘ಯುನಿವರ್ಸಲ್ ಸರ್ವಿಸ್ ಲೆವಿ’ (Universal Service Levy – USL) ನಿಂದ ಠೇವಣಿ ಮಾಡಲಾಗುತ್ತದೆ. ಯುನಿವರ್ಸಲ್ ಸರ್ವಿಸ್ ಲೆವಿ (USL) ಅನ್ನು ಎಲ್ಲಾ ಟೆಲಿಕಾಂ ಆಪರೇಟರ್‌ಗಳಿಂದ ಅವರ ಹೊಂದಾಣಿಕೆಯ ಒಟ್ಟು ಆದಾಯದ (AGR) ಮೇಲೆ ವಿಧಿಸಲಾಗುತ್ತದೆ.ಈ ಮೊತ್ತವನ್ನು ಕನ್ಸಾಲಿಡೇಟೆಡ್ ಫಂಡ್ ಆಫ್ ಇಂಡಿಯಾ /ಭಾರತದ ಸಂಚಿತ ನಿಧಿಯಲ್ಲಿ ಠೇವಣಿ ಮಾಡಲಾಗುತ್ತದೆ ಮತ್ತು ಅದರ ವೆಚ್ಚಕ್ಕೆ ‘ಸಂಸತ್ತಿನ ಪೂರ್ವಾನುಮತಿ’ ಅಗತ್ಯವಿದೆ.

ದೇಶದ ಅಂತರ್ಗತ ಅಭಿವೃದ್ಧಿಯಲ್ಲಿ USOF ನ ಕೊಡುಗೆ:

  1. ‘ಯುನಿವರ್ಸಲ್ ಸರ್ವಿಸ್ ಆಬ್ಲಿಗೇಶನ್ ಫಂಡ್’ (USOF) ಗ್ರಾಮೀಣ ಭಾರತೀಯರು ತಮ್ಮ ಸಂಪೂರ್ಣ ಸಾಮರ್ಥ್ಯಕ್ಕೆ ಅನುಗುಣವಾಗಿ ಕಾರ್ಯನಿರ್ವಹಿಸಲು ಮತ್ತು ಉತ್ಪಾದಕವಾಗಿ ಭಾಗವಹಿಸಲು ಅನುವು ಮಾಡಿಕೊಡುತ್ತದೆ.ರಾಷ್ಟ್ರದ ಅಭಿವೃದ್ಧಿಗೆ ಕೊಡುಗೆ ನೀಡಲು, ಅವರ ವ್ಯಾಪ್ತಿಯೊಳಗೆ ಮತ್ತು ಅವರ ವಿಧಾನಗಳಲ್ಲಿ, ವಿಶ್ವಾಸಾರ್ಹ ಮತ್ತು ಸಾರ್ವತ್ರಿಕ ದೂರಸಂಪರ್ಕ ಜಾಲದ ಮೂಲಕ ಅವರನ್ನು ಪರಿಣಾಮಕಾರಿಯಾಗಿ ಸಂಪರ್ಕಿಸುವ ಗುರಿಯನ್ನು ಹೊಂದಿದೆ.
  2. ಇದು ಗ್ರಾಮೀಣ ಮತ್ತು ದೂರದ ಪ್ರದೇಶಗಳಲ್ಲಿನ ಜನರಿಗೆ ಕೈಗೆಟುಕುವ ಬೆಲೆಯಲ್ಲಿ ತಾರತಮ್ಯರಹಿತ ಗುಣಮಟ್ಟದ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ (Information and Communication Technology – ICT) ಸೇವೆಗಳಿಗೆ ಪ್ರವೇಶವನ್ನು ಒದಗಿಸುವುದನ್ನು ಖಾತ್ರಿಗೊಳಿಸುತ್ತದೆ.
  3. ಇದು ದೇಶದ ಗ್ರಾಮೀಣ ಮತ್ತು ದೂರದ ಭಾಗಗಳ ಜನಸಂಖ್ಯೆಯನ್ನು ಮುಖ್ಯವಾಹಿನಿಗೆ ತರಲು ಒಳನಾಡಿನಲ್ಲಿ ಪರಿಣಾಮಕಾರಿ ಮತ್ತು ಶಕ್ತಿಯುತ ಸಂಪರ್ಕ ಸೌಲಭ್ಯವನ್ನು ಒದಗಿಸುತ್ತದೆ.
  4. ವಿಶ್ವಾಸಾರ್ಹ, ದೃಢವಾದ ಮತ್ತು ಹೆಚ್ಚಿನ ವೇಗದ ಗತಿಯ ದೂರಸಂಪರ್ಕ ಮತ್ತು ಬ್ರಾಡ್‌ಬ್ಯಾಂಡ್ ಸೌಲಭ್ಯಗಳನ್ನು ಒದಗಿಸುವುದು ಗ್ರಾಹಕನ ದೃಷ್ಟಿಕೋನದಿಂದ ಮತ್ತು ಕಾರ್ಯತಂತ್ರ ಹಾಗೂ ಆಡಳಿತದ ಕಾರಣಗಳಿಗಾಗಿ ಅವಶ್ಯಕವಾಗಿದೆ.
  5. ಉಪಗ್ರಹದ ಮೂಲಕ ಒದಗಿಸಲಾದ 4G ಮೊಬೈಲ್ ಸೇವೆಗಳು, ಸೀಮಿತ ಬ್ಯಾಕ್‌ಹಾಲ್ ಬ್ಯಾಂಡ್‌ವಿಡ್ತ್‌ (Backhaul Bandwidth) ನಿಂದಾಗಿ ಆಗಾಗ್ಗೆ ಅಡಚಣೆಯನ್ನು ಎದುರಿಸುತ್ತವೆ, ಇದು ಪ್ರಮುಖ ಸುಧಾರಣೆಯನ್ನು ಸಹ ನೋಡುತ್ತದೆ.
  6. ದೂರದ, ಗ್ರಾಮೀಣ ಪ್ರದೇಶಗಳಲ್ಲಿ ಮೊಬೈಲ್ ಸೇವೆಗಳಿಗೆ ಮೂಲಸೌಕರ್ಯಗಳನ್ನು ನಿರ್ಮಿಸುವುದು.
  7. ಹಂತ ಹಂತವಾಗಿ ಹಳ್ಳಿಗಳಲ್ಲಿ ಬ್ರಾಡ್‌ಬ್ಯಾಂಡ್ ವ್ಯವಸ್ಥೆ ಒದಗಿಸುವುದು.
  8. ಗ್ರಾಮೀಣ ಪ್ರದೇಶಗಳಲ್ಲಿ ‘ನ್ಯಾಷನಲ್ ಆಪ್ಟಿಕ್ ಫೈಬರ್ ನೆಟ್‌ವರ್ಕ್’ ನಂತಹ ಹೊಸ ತಂತ್ರಜ್ಞಾನಗಳ ಸೇರ್ಪಡೆ.

 

ವಿಷಯಗಳು: ಮೂಲಸೌಕರ್ಯ-ರಸ್ತೆ ಸಂಪರ್ಕ.

ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ (PMGSY):


(Pradhan Mantri Gram Sadak Yojana (PMGSY)

ಸಂದರ್ಭ:

‘ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್ ಸಮಿತಿ’ಯು, (Cabinet Committee on Economic Affairs) ರಸ್ತೆಗಳು ಮತ್ತು ಸೇತುವೆಗಳ ನಿರ್ಮಾಣದ ಬಾಕಿ ಕಾಮಗಾರಿಗಳನ್ನು ಪೂರ್ಣಗೊಳಿಸಲು ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆI ಮತ್ತು II ಅನ್ನು ಸೆಪ್ಟೆಂಬರ್, 2022 ರವರೆಗೆ ಮುಂದುವರಿಸಲು ತನ್ನ ಅನುಮೋದನೆಯನ್ನು ನೀಡಿದೆ.

  1. ಮಾರ್ಚ್, 2023 ರವರೆಗೆ ಎಡಪಂಥೀಯ ಉಗ್ರಗಾಮಿ (Left Wing Extremism) ಪೀಡಿತ ಪ್ರದೇಶಗಳಿಗೆ’ ‘ರಸ್ತೆ ಸಂಪರ್ಕ ಯೋಜನೆಯ ಮುಂದುವರಿಕೆಯನ್ನು ಸಮಿತಿಯು ಅನುಮೋದಿಸಿದೆ.
  2. ಮೂರು ಯೋಜನೆಗಳ ಅಡಿಯಲ್ಲಿ ಕಲ್ಪಿಸಲಾದ ಕಾಮಗಾರಿಗಳನ್ನು ಪೂರ್ಣಗೊಳಿಸಲು ಕಾಲ-ಮಿತಿಯನ್ನು ವಿಸ್ತರಿಸಲಾಗಿದೆ.

ಅವಶ್ಯಕತೆ:

  1. ‘ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ’-I (PMGSY-I) ಮತ್ತು ‘ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ’-II (PMGSY-II) ಕೋವಿಡ್ ಲಾಕ್‌ಡೌನ್, ಸುದೀರ್ಘ ಮಳೆ, ಚಳಿಗಾಲ, ಅರಣ್ಯ ಸಂಬಂಧಿತ ಸಮಸ್ಯೆಗಳಿಂದಾಗಿ ಈಶಾನ್ಯ ಮತ್ತು ಗುಡ್ಡಗಾಡು ರಾಜ್ಯಗಳಲ್ಲಿ ಈ ಯೋಜನೆಯಡಿ ಕಾಮಗಾರಿಗಳು ಬಾಕಿ ಉಳಿದಿವೆ.
  2. ಅಲ್ಲದೆ, ಗ್ರಾಮೀಣ ಆರ್ಥಿಕತೆಗೆ ಸಂಬಂಧಿಸಿದ ಈ ಪ್ರಮುಖ ಕಾರ್ಯಗಳನ್ನು ಪೂರ್ಣಗೊಳಿಸಲು ಸಮಯವನ್ನು ವಿಸ್ತರಿಸಲು ಈ ರಾಜ್ಯಗಳು ಕೇಂದ್ರ ಸರ್ಕಾರಕ್ಕೆ ಮನವಿ ಮಾಡುತ್ತಿವೆ.

ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ (PMGSY) ಯ ಕುರಿತು:

ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ (PMGSY) ಯನ್ನು 25ನೇ ಡಿಸೆಂಬರ್ 2000 ರಂದು ಪ್ರಾರಂಭಿಸಲಾಯಿತು.

ಉದ್ದೇಶ: ರಸ್ತೆ ಸಂಪರ್ಕವಿಲ್ಲದ ವಸತಿ ಪ್ರದೇಶಗಳಿಗೆ ಸರ್ವ-ಋತು ರಸ್ತೆ ಸಂಪರ್ಕವನ್ನು ಒದಗಿಸುವುದು.

ಅರ್ಹತೆ: ಜನಗಣತಿ-2001 ರ ಪ್ರಕಾರ, ಬಯಲು ಪ್ರದೇಶಗಳಲ್ಲಿ 500 ಕ್ಕಿಂತ ಹೆಚ್ಚು ಮತ್ತು ಈಶಾನ್ಯ ಮತ್ತು ಹಿಮಾಲಯ ರಾಜ್ಯಗಳಲ್ಲಿ 250 ಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿರುವ ರಸ್ತೆ ವಂಚಿತ ವಸತಿ ಪ್ರದೇಶಗಳು.

ಅನುದಾನ: ಈಶಾನ್ಯ ಮತ್ತು ಹಿಮಾಲಯ ರಾಜ್ಯಗಳಲ್ಲಿ ಯೋಜನೆಯಡಿ ಮಂಜೂರಾದ ಯೋಜನೆಗಳಿಗೆ ಸಂಬಂಧಿಸಿದಂತೆ, ಯೋಜನಾ ವೆಚ್ಚದ 90% ಕೇಂದ್ರ ಸರ್ಕಾರವು ಭರಿಸಿದರೆ, ಇತರ ರಾಜ್ಯಗಳಿಗೆ ಕೇಂದ್ರ ಸರ್ಕಾರವು 60% ವೆಚ್ಚವನ್ನು ಭರಿಸುತ್ತದೆ.

ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ: ಹಂತ-I

  1. PMGSY-I ಅನ್ನು ಡಿಸೆಂಬರ್, 2000 ರಲ್ಲಿ 100% ಕೇಂದ್ರ ಪ್ರಾಯೋಜಿತ ಯೋಜನೆಯಾಗಿ ಪ್ರಾರಂಭಿಸಲಾಯಿತು.
  2. ಯೋಜನೆಯಡಿಯಲ್ಲಿ, 1,35,436 ವಸತಿಗಳಿಗೆ ರಸ್ತೆ ಸಂಪರ್ಕವನ್ನು ಒದಗಿಸಲು ಮತ್ತು ಕೃಷಿಯಿಂದ ಮಾರುಕಟ್ಟೆಗೆ ಸಂಪರ್ಕವನ್ನು ಖಚಿತಪಡಿಸಿಕೊಳ್ಳಲು 3.68 ಲಕ್ಷ ಕಿ.ಮೀ ಅಸ್ತಿತ್ವದಲ್ಲಿರುವ ಗ್ರಾಮೀಣ ರಸ್ತೆಗಳನ್ನು ನವೀಕರಿಸಲು ಗುರಿಯನ್ನು ನಿಗದಿಪಡಿಸಲಾಗಿದೆ.

ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ- ಹಂತ II:

  1. ನಂತರ, ‘ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ’ – ಹಂತ II (PMGSY-II) ಅನ್ನು 2013 ರಲ್ಲಿ ಭಾರತ ಸರ್ಕಾರವು ಅದರ ಒಟ್ಟಾರೆ ದಕ್ಷತೆಯನ್ನು ಸುಧಾರಿಸಲು ಅಸ್ತಿತ್ವದಲ್ಲಿರುವ ಗ್ರಾಮೀಣ ರಸ್ತೆ ಜಾಲದ 50,000 ಕಿಮೀಗಳನ್ನು ನವೀಕರಿಸಲು ಪ್ರಾರಂಭಿಸಿತು.
  2. ಆದಾಗ್ಯೂ, PMGSY-I ಅಡಿಯಲ್ಲಿಯೂ ಕೆಲಸ ಮುಂದುವರೆದಿದೆ ಮತ್ತು ‘ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ’ಯ ಎರಡನೇ ಹಂತದ ಅಡಿಯಲ್ಲಿ, ಗ್ರಾಮೀಣ ಸಂಪರ್ಕಕ್ಕಾಗಿ ಈಗಾಗಲೇ ನಿರ್ಮಿಸಲಾದ ರಸ್ತೆಗಳನ್ನು ಗ್ರಾಮೀಣ ಮೂಲಸೌಕರ್ಯಗಳನ್ನು ಹೆಚ್ಚಿಸಲು ಮೇಲ್ದರ್ಜೆಗೆ ಏರಿಸುವ ಗುರಿಯನ್ನು ಹೊಂದಿದೆ.

ಸವಾಲುಗಳು:

  1. ಮೀಸಲು ನಿಧಿಯ ಕೊರತೆ
  2. ಪಂಚಾಯತ್ ರಾಜ್ ಸಂಸ್ಥೆಗಳ ಸೀಮಿತ ಪಾಲುದಾರಿಕೆ.
  3. ಅಸಮರ್ಪಕ ಅನುಷ್ಠಾನ ಮತ್ತು ಗುತ್ತಿಗೆ ಸಾಮರ್ಥ್ಯ
  4. ವಿಶೇಷವಾಗಿ ಗುಡ್ಡಗಾಡು ರಾಜ್ಯಗಳಲ್ಲಿ ಕಡಿಮೆ ‘ಕೆಲಸದ ಅವಧಿ’ ಮತ್ತು ಕಷ್ಟಕರವಾದ ಭೂಪ್ರದೇಶ.
  5. ನಿರ್ಮಾಣ ಸಾಮಗ್ರಿಗಳ ಕೊರತೆ
  6. ಎಡಪಂಥೀಯ ಉಗ್ರಗಾಮಿ ಪ್ರದೇಶಗಳಲ್ಲಿ ಭದ್ರತಾ ಕಾಳಜಿ.

ಎಡಪಂಥೀಯ ಉಗ್ರಗಾಮಿ ಪೀಡಿತ ಪ್ರದೇಶಗಳಿಗೆ ರಸ್ತೆ ಸಂಪರ್ಕ ಯೋಜನೆಕುರಿತು:

ಈ ಯೋಜನೆಯನ್ನು 2016 ರಲ್ಲಿ ಪ್ರಾರಂಭಿಸಲಾಯಿತು.

ಇದರ ಅಡಿಯಲ್ಲಿ, 9 ರಾಜ್ಯಗಳು, ಅಂದರೆ ಆಂಧ್ರಪ್ರದೇಶ, ಬಿಹಾರ, ಛತ್ತೀಸ್‌ಗಢ, ಜಾರ್ಖಂಡ್, ಮಧ್ಯಪ್ರದೇಶ, ಮಹಾರಾಷ್ಟ್ರ, ಒಡಿಶಾ, ತೆಲಂಗಾಣ ಮತ್ತು ಉತ್ತರ ಪ್ರದೇಶದ 44 ಜಿಲ್ಲೆಗಳಲ್ಲಿ 11,725 ​​ಕೋಟಿ ರೂಪಾಯಿ ವೆಚ್ಚದಲ್ಲಿ 5,412 ಕಿಮೀ ಉದ್ದದ ರಸ್ತೆಗಳು ಮತ್ತು 126 ಆಯಕಟ್ಟಿನ ಪ್ರಾಮುಖ್ಯತೆಯ ಸೇತುವೆಗಳ ನಿರ್ಮಾಣ/ಉನ್ನತೀಕರಣವನ್ನು ಮಾಡಲಾಗುವುದು.

  1. ರಾಜ್ಯಗಳು ಮತ್ತು ಭದ್ರತಾ ಪಡೆಗಳೊಂದಿಗೆ ಸಮಾಲೋಚಿಸಿ ಗೃಹ ಸಚಿವಾಲಯವು ಈ ಯೋಜನೆಯಡಿಯಲ್ಲಿ ರಸ್ತೆಗಳು ಮತ್ತು ಸೇತುವೆಗಳ ಕಾಮಗಾರಿಗಳನ್ನು ಆಯ್ಕೆ ಮಾಡಿದೆ.
  2. ಯೋಜನೆಯಡಿಯಲ್ಲಿ, ಇತರ ಜಿಲ್ಲಾ ರಸ್ತೆಗಳು(Other District Roads), ಗ್ರಾಮೀಣ ರಸ್ತೆಗಳು (Village Roads) ಮತ್ತು ಅಸ್ತಿತ್ವದಲ್ಲಿರುವ ಪ್ರಮುಖ ಜಿಲ್ಲಾ ರಸ್ತೆಗಳನ್ನು (Major District Roads) ಭದ್ರತೆಯ ದೃಷ್ಟಿಯಿಂದ ಮೇಲ್ದರ್ಜೆಗೇರಿಸಲಾಗುವುದು.
  3. ಇದನ್ನು ಹೊರತುಪಡಿಸಿ ಭದ್ರತೆಯ ದೃಷ್ಟಿಯಿಂದ ಈ ರಸ್ತೆಗಳಲ್ಲಿ ಪ್ರಮುಖವಾಗಿರುವ 100 ಮೀಟರ್‌ ಉದ್ದದ ಸೇತುವೆಗಳಿಗೂ ಅನುದಾನ ನೀಡಲಾಗುವುದು.

 

ವಿಷಯಗಳು: ಆಂತರಿಕ ಭದ್ರತೆಗೆ ಸವಾಲನ್ನು ಒಡ್ಡುವ ಆಡಳಿತ ವಿರೋಧಿ ಅಂಶಗಳ ಪಾತ್ರ.

ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆ (UAPA)


(Unlawful Activities (Prevention) Act (UAPA):

ಸಂದರ್ಭ:

ಭಾರತದ ಮುಖ್ಯ ನ್ಯಾಯಮೂರ್ತಿ ಎನ್‌ವಿ ರಾಮನ್ ನೇತೃತ್ವದ ಸುಪ್ರೀಂ ಕೋರ್ಟ್‌ನ ವಿಶೇಷ ಪೀಠವು ತ್ರಿಪುರಾ ಪೊಲೀಸರು ಇತ್ತೀಚೆಗೆ ‘ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆ (Unlawful Activities (Prevention) Act (UAPA) ಅಡಿಯಲ್ಲಿ ಪ್ರಕರಣ ದಾಖಲಿಸಿರುವ ಇಬ್ಬರು ವಕೀಲರು ಮತ್ತು ಪತ್ರಕರ್ತರ ವಿರುದ್ಧ ಯಾವುದೇ “ಬಲವಂತದ ಕ್ರಮ” ಕೈಗೊಳ್ಳುವುದರಿಂದ ರಕ್ಷಣೆ ಒದಗಿಸಿದೆ.

ಏನಿದು ಪ್ರಕರಣ?

ತ್ರಿಪುರಾದಲ್ಲಿ, ಅಕ್ಟೋಬರ್ ತಿಂಗಳಲ್ಲಿ ನಡೆದ ಕೆಲವು ಘಟನೆಗಳ ತನಿಖೆಗಾಗಿ ಈ ವಕೀಲರ ನೇತೃತ್ವದಲ್ಲಿ ‘ಸತ್ಯಶೋಧನೆ’ ಅಭಿಯಾನವನ್ನು ನಡೆಸಲಾಯಿತು ಮತ್ತು ಇವರು “ರಾಜ್ಯದಲ್ಲಿ ಮುಸ್ಲಿಂ ಅಲ್ಪಸಂಖ್ಯಾತರ ವಿರುದ್ಧ ಉದ್ದೇಶಿತ ರಾಜಕೀಯ ಹಿಂಸಾಚಾರ” ವರದಿಯನ್ನು ಬಿಡುಗಡೆ ಮಾಡಿದರು. ಯುಎಪಿಎ ಅಡಿಯಲ್ಲಿ ಆರೋಪಿಯಾಗಿರುವ ಪತ್ರಕರ್ತ ಟ್ವೀಟ್ ಮಾಡಿದ್ದು, ಅದರಲ್ಲಿ “ತ್ರಿಪುರಾ ಹೊತ್ತಿ ಉರಿಯುತ್ತಿದೆ” ಎಂದು ಬರೆಯಲಾಗಿದೆ. ಇದಾದ ನಂತರ ಈ ವಕೀಲರು ಮತ್ತು ಪತ್ರಕರ್ತನ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು.

ಪ್ರಸ್ತುತ ಕಾಳಜಿಗಳು:

ತ್ರಿಪುರಾ ರಾಜ್ಯವು “ಬಾಧಿತ ಪ್ರದೇಶಗಳಿಂದ ಬರುವ ಮಾಹಿತಿ ಮತ್ತು ಸತ್ಯಗಳ ಏಕಸ್ವಾಮ್ಯವನ್ನು ಹೊಂದಿದೆ, ಮತ್ತು ರಾಜ್ಯದಲ್ಲಿ ಉದ್ದೇಶಿತ ಹಿಂಸಾಚಾರದ ಬಗ್ಗೆ ಸಾರ್ವಜನಿಕ ಡೊಮೇನ್‌ಗೆ ಮಾಹಿತಿ ಮತ್ತು ಸಂಗತಿಗಳನ್ನು ತರಲು ಪ್ರಯತ್ನಿಸುತ್ತಿರುವ ವಕೀಲರು ಮತ್ತು ಪತ್ರಕರ್ತರು ಸೇರಿದಂತೆ ನಾಗರಿಕ ಸಮಾಜದ ಸದಸ್ಯರ ವಿರುದ್ಧ UAPA ಅನ್ನು ಅನ್ವಯಿಸಲಾಗುತ್ತಿದೆ ಎಂದು ಅರ್ಜಿದಾರರು ವಾದಿಸಿದ್ದಾರೆ.

ಈ ಸಮಯದ ಅವಶ್ಯಕತೆ:

UAPA ಕಾಯ್ದೆಯ ಅಡಿಯಲ್ಲಿ ಕಾನೂನುಬಾಹಿರ ಚಟುವಟಿಕೆಎಂಬುದಕ್ಕೆ ನೀಡಲಾದ ಅಸ್ಪಷ್ಟ ಮತ್ತು ವಿಶಾಲವಾದ ವ್ಯಾಖ್ಯಾನವನ್ನು ನಿರ್ಬಂಧಿಸುವಂತೆ ಅರ್ಜಿದಾರರು ನ್ಯಾಯಾಲಯವನ್ನು ಕೋರಿದ್ದಾರೆ. ಕಾರಣ UAPA ಕಾಯ್ದೆಯ ಅಸ್ಪಷ್ಟ ವ್ಯಾಖ್ಯಾನವು ‘ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆ’ಯ ಭಯವನ್ನು ತೋರಿಸುವ ಮೂಲಕ ಭಿನ್ನಾಭಿಪ್ರಾಯ ಮತ್ತು ಮುಕ್ತ ಅಭಿವ್ಯಕ್ತಿಯನ್ನು ದಮನ ಮಾಡಲು ರಾಜ್ಯಕ್ಕೆ ಮುಕ್ತ ಅಧಿಕಾರವನ್ನು ನೀಡಿದೆ ಎಂದು ಅವರು ವಾದಿಸಿದ್ದಾರೆ.

ಅಲ್ಲದೆ, ಯುಎಪಿಎ ಅಡಿಯಲ್ಲಿ ‘ನಿರೀಕ್ಷಣಾ ಜಾಮೀನು’ ನೀಡುವುದನ್ನು ತಡೆಹಿಡಿಯಲಾಗಿದೆ, ಮತ್ತು ಜಾಮೀನು ಪಡೆಯುವ ಸಾಧ್ಯತೆಗಳು ತೀರಾ ಕಡಿಮೆ ಇವೆ.

ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆ ಕುರಿತು:

1967 ರಲ್ಲಿ ಅಂಗೀಕರಿಸಲ್ಪಟ್ಟ ಈ ಕಾನೂನು (the Unlawful Activities (Prevention) Act) ಭಾರತದಲ್ಲಿ ಕಾನೂನುಬಾಹಿರ ಚಟುವಟಿಕೆಗಳನ್ನು ನಡೆಸುವ ಗುಂಪುಗಳನ್ನು ಪರಿಣಾಮಕಾರಿಯಾಗಿ ತಡೆಗಟ್ಟುವ ಗುರಿಯನ್ನು ಹೊಂದಿದೆ.

ಈ ಕಾಯಿದೆಯು ಕೇಂದ್ರ ಸರ್ಕಾರಕ್ಕೆ ಸಂಪೂರ್ಣ ಅಧಿಕಾರವನ್ನು ನೀಡುತ್ತಿದ್ದು ಅದರ ಮೂಲಕ ಕೇಂದ್ರವು ಒಂದು ಚಟುವಟಿಕೆಯನ್ನು ಕಾನೂನುಬಾಹಿರವೆಂದು ಭಾವಿಸಿದರೆ ಸರ್ಕಾರವು ಅಧಿಕೃತ ಗೆಜೆಟ್ ಮೂಲಕ ಅದನ್ನು ಘೋಷಿಸಬಹುದು.

  1. ಮರಣದಂಡನೆ ಮತ್ತು ಜೀವಾವಧಿ ಶಿಕ್ಷೆಯನ್ನು ಗರಿಷ್ಠ ಶಿಕ್ಷೆಯಾಗಿ ನೀಡಬಹುದಾಗಿದೆ.

ಮುಖ್ಯ ಅಂಶಗಳು:

UAPA ಅಡಿಯಲ್ಲಿ, ಭಾರತೀಯ ಮತ್ತು ವಿದೇಶಿ ಪ್ರಜೆಗಳು, ಇಬ್ಬರನ್ನು ಬಂಧಿಸಿ ವಿಚಾರಣೆಗೊಳಪಡಿಸಬಹುದು.

  1. ಭಾರತದ ಹೊರಗಿನ ವಿದೇಶಿ ನೆಲದಲ್ಲಿ ಅಪರಾಧ ನಡೆದರೂ ಅಪರಾಧಿಗಳಿಗೆ ಈ ಕಾಯ್ದೆಯು ಭಾರತೀಯ ಮತ್ತು ವಿದೇಶಿ ಅಪರಾಧಿಗಳಿಗೆ ಸಮಾನವಾಗಿ ಅನ್ವಯಿಸುತ್ತದೆ.
  2. ಯುಎಪಿಎ ಅಡಿಯಲ್ಲಿ, ತನಿಖಾ ಸಂಸ್ಥೆಯು ಬಂಧನದ ನಂತರ ಗರಿಷ್ಠ 180 ದಿನಗಳಲ್ಲಿ ಚಾರ್ಜ್‌ಶೀಟ್ ಸಲ್ಲಿಸಬಹುದು ಮತ್ತು ನ್ಯಾಯಾಲಯಕ್ಕೆ ಮಾಹಿತಿ ನೀಡಿದ ನಂತರ ಅವಧಿಯನ್ನು ಇನ್ನಷ್ಟು ವಿಸ್ತರಿಸಬಹುದು.

2019 ರ ತಿದ್ದುಪಡಿಗಳ ಪ್ರಕಾರ:

  1. NIA ಯಿಂದ ಪ್ರಕರಣದ ತನಿಖೆ ನಡೆದಾಗ ಆಸ್ತಿಯನ್ನು ವಶಪಡಿಸಿಕೊಳ್ಳಲು ಅಥವಾ ಲಗತ್ತಿಸಲು ಅನುಮತಿ ನೀಡಲು ರಾಷ್ಟ್ರೀಯ ತನಿಖಾ ಸಂಸ್ಥೆಯ (NIA) ಮಹಾನಿರ್ದೇಶಕರಿಗೆ ಈ ಕಾಯಿದೆ ಅಧಿಕಾರ ನೀಡುತ್ತದೆ.
  2. DSP ಅಥವಾ ACP ಅಥವಾ ರಾಜ್ಯದ ಉನ್ನತ ಶ್ರೇಣಿಯ ಅಧಿಕಾರಿಯೊಬ್ಬರು ತನಿಖೆ ನಡೆಸಿದ ಪ್ರಕರಣಗಳಿಗೆ ಹೆಚ್ಚುವರಿಯಾಗಿ ಭಯೋತ್ಪಾದನೆ ಪ್ರಕರಣಗಳ ತನಿಖೆ ನಡೆಸಲು ಇನ್ಸ್‌ಪೆಕ್ಟರ್ ಅಥವಾ ಹೆಚ್ಚಿನ ಹುದ್ದೆಯ NIA ಅಧಿಕಾರಿಗಳಿಗೆ ಈ ಕಾಯ್ದೆ ಅಧಿಕಾರ ನೀಡುತ್ತದೆ.
  3. ಒಬ್ಬ ವ್ಯಕ್ತಿಯನ್ನು ಭಯೋತ್ಪಾದಕನೆಂದು ಘೋಷಿಸುವ ಅವಕಾಶವೂ ಇದರಲ್ಲಿ ಸೇರಿದೆ. ಈ ತಿದ್ದುಪಡಿಗೆ ಮುಂಚಿತವಾಗಿ ಕೇವಲ ಸಂಘಟನೆಗಳನ್ನು ಮಾತ್ರ ಭಯೋತ್ಪಾದಕ ಸಂಘಟನೆಗಳು ಎಂದು ಗುರುತಿಸಬಹುದಾಗಿತ್ತು.

ಸಂಬಂಧಿಸಿದ ಸಮಸ್ಯೆಗಳು:

ಭಿನ್ನಾಭಿಪ್ರಾಯ, ಕಾನೂನಿನ ಆಳ್ವಿಕೆ ಮತ್ತು ನ್ಯಾಯೋಚಿತ ವಿಚಾರಣೆಗೆ,ಮತ್ತು ಸಾಂವಿಧಾನಿಕ ಸ್ವಾತಂತ್ರ್ಯಕ್ಕೆ ವಿರುದ್ಧವಾಗಿದೆ ಎಂದು ನಾಗರಿಕ ಸಮಾಜದಿಂದ UAPA ಟೀಕೆಗಳನ್ನು ಎದುರಿಸುತ್ತಿದೆ.

ಸಂಬಂಧಿತ ಸಮಸ್ಯೆಗಳು:

  1. ಭಯೋತ್ಪಾದಕ ಕಾಯಿದೆಯ ಅಸ್ಪಷ್ಟ ವ್ಯಾಖ್ಯಾನ.
  2. ಜಾಮೀನು ನಿರಾಕರಣೆ.
  3. ಪ್ರಕರಣಗಳ ವಿಚಾರಣೆಯ ಬಾಕಿ.
  4. ರಾಜ್ಯ ಅತಿಕ್ರಮಣ.
  5. ಒಕ್ಕೂಟ ವ್ಯವಸ್ಥೆಯನ್ನು ಅನ್ನು ದುರ್ಬಲಗೊಳಿಸುತ್ತದೆ.

UAPA ಕುರಿತು ದೆಹಲಿ ಉಚ್ಚ ನ್ಯಾಯಾಲಯದ ವ್ಯಾಖ್ಯಾನ:

ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆ, 1967, (UAPA) ಯ “ಅಸ್ಪಷ್ಟ” ಸೆಕ್ಷನ್ 15 ರ ಬಾಹ್ಯರೇಖೆಗಳನ್ನು ( Section 15 of the Unlawful Activities (Prevention) Act, 1967) ವ್ಯಾಖ್ಯಾನಿಸುವ ತೀರ್ಪನ್ನು ನೀಡುವ ಸಂದರ್ಭದಲ್ಲಿ,ದೆಹಲಿ ಹೈಕೋರ್ಟ್‌ನ ವಿಭಾಗೀಯ ಪೀಠವು ಕಾಯಿದೆಯ ಸೆಕ್ಷನ್ 15, 17 ಮತ್ತು 18 ರ ಮೇಲೆ ಕೆಲವು ಪ್ರಮುಖ ತತ್ವಗಳನ್ನು ವಿಧಿಸಿದೆ.

ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯ 15, 17 ಮತ್ತು 18ನೇ ವಿಭಾಗಗಳು(ಸೆಕ್ಷನ್ ಗಳು):

  1. ಕಾಯ್ದೆಯ ಸೆಕ್ಷನ್. 15 ‘ಭಯೋತ್ಪಾದಕ ಕೃತ್ಯ’ದ ಅಪರಾಧವನ್ನು ಮಾಡಲಾಗುತ್ತದೆ.
  2. ಸೆಕ್ಷನ್. 17 ಭಯೋತ್ಪಾದಕ ಕೃತ್ಯ ಎಸಗಲು ಹಣವನ್ನು ಸಂಗ್ರಹಿಸಿದ್ದಕ್ಕಾಗಿ ಶಿಕ್ಷೆಯನ್ನು ವಿಧಿಸುತ್ತದೆ.
  3. ಸೆಕ್ಷನ್.18ರ ಅಡಿಯಲ್ಲಿ, ‘ಭಯೋತ್ಪಾದಕ ಕೃತ್ಯ ಎಸಗಲು ಸಂಚು ಅಥವಾ ಭಯೋತ್ಪಾದಕ ಕೃತ್ಯ ಎಸಗಲು ಯಾವುದೇ ಪೂರ್ವಸಿದ್ಧತೆಯಲ್ಲಿನ’ ಕೃತ್ಯ ಎಂಬ ಅಪರಾಧವನ್ನು ಹೊರಿಸಲಾಗುತ್ತದೆ.

ನ್ಯಾಯಾಲಯ ಮಾಡಿದ ಪ್ರಮುಖ ಅವಲೋಕನಗಳು:

  1. “ಭಯೋತ್ಪಾದಕ ಕಾಯ್ದೆ”ಗಳನ್ನು ಕ್ಷುಲ್ಲಕಗೊಳಿಸಲು ಲಘುವಾಗಿ ಪರಿಗಣಿಸಬಾರದು.
  2. ಭಯೋತ್ಪಾದಕ ಚಟುವಟಿಕೆಯೆಂದರೆ ಸಾಮಾನ್ಯ ದಂಡನೆ ಕಾನೂನಿನಡಿಯಲ್ಲಿ ವ್ಯವಹರಿಸಲು ಕಾನೂನು ಜಾರಿ ಸಂಸ್ಥೆಗಳ ಸಾಮರ್ಥ್ಯವನ್ನು ಮೀರಿ ವ್ಯವಹರಿಸುತ್ತದೆ. ಹಿತೇಂದ್ರ ವಿಷ್ಣು ಠಾಕೂರ್ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿದ ತೀರ್ಪನ್ನು ಈ ನ್ಯಾಯಾಲಯವು ಆಧಾರವಾಗಿ ಉಲ್ಲೇಖಿಸಿದೆ.
  3. ಹಿತೇಂದ್ರ ವಿಷ್ಣು ಠಾಕೂರ್ ತೀರ್ಪಿನಲ್ಲಿ ಸರ್ವೋಚ್ಚ ನ್ಯಾಯಾಲಯವು ಪ್ರತಿಯೊಬ್ಬ ಭಯೋತ್ಪಾದಕನು ಅಪರಾಧಿಯಾಗಬಹುದು ಆದರೆ ಪ್ರತಿಯೊಬ್ಬ ಅಪರಾಧಿಯನ್ನು ಭಯೋತ್ಪಾದಕ ಎಂದು ಹಣೆಪಟ್ಟಿ ಕಟ್ಟಲಾಗುವುದಿಲ್ಲ ಎಂದು ತೀರ್ಪು ನೀಡಿದೆ.
  4. ಭಯೋತ್ಪಾದಕ ಕೃತ್ಯಗಳನ್ನು ರಾಜ್ಯದ ಸಾಮಾನ್ಯ ಕಾನೂನು ಸುವ್ಯವಸ್ಥೆಯ ಸಮಸ್ಯೆಯೊಂದಿಗೆ ಸಮೀಕರಿಸಬಾರದು.
  5. “ಭಯೋತ್ಪಾದಕ ಕಾಯ್ದೆ”ಯನ್ನು, ಭಾರತೀಯ ದಂಡ ಸಂಹಿತೆ ಅಡಿಯಲ್ಲಿ ಸಾಂಪ್ರದಾಯಿಕ ಅಪರಾಧಗಳ ಅಡಿಯಲ್ಲಿ ಬರುವ ಪ್ರಕರಣಗಳಿಗೆ ಸಾಮಾನ್ಯವಾಗಿ ಅನ್ವಯಿಸಲು ಬರುವುದಿಲ್ಲ.
  6. ಸರ್ಕಾರ ಅಥವಾ ಸಂಸತ್ತಿನ ನಡೆಗಳ ಬಗ್ಗೆ ವ್ಯಾಪಕ ವಿರೋಧ ಇದ್ದಾಗ ಆಕ್ರೋಶಭರಿತ ಭಾಷಣಗಳು, ರಸ್ತೆ ತಡೆಯಂತಹ ಕೃತ್ಯಗಳು ಅಸಾಮಾನ್ಯ ಏನಲ್ಲ. ಸರ್ಕಾರ ಅಥವಾ ಸಂಸತ್ತಿನ ನಡವಳಿಕೆಯ ವಿರುದ್ಧ ಪ್ರತಿಭಟನೆ ನಡೆಸುವುದು ಕಾನೂನುಬಾಹಿರವೂ ಅಲ್ಲ. ಇಂತಹ ಪ್ರತಿಭಟನೆಗಳು ಶಾಂತಿಯುತವಾಗಿ, ಅಹಿಂಸಾತ್ಮಕವಾಗಿ ಇರಬೇಕು. ಆದರೆ, ಪ್ರತಿಭಟನಕಾರರು ಕಾನೂನಿನ ಮಿತಿಯನ್ನು ಮೀರುವುದೂ ಅಸಾಮಾನ್ಯ ಅಲ್ಲ ಎಂದು ನ್ಯಾಯಾಲಯವು ಹೇಳಿದೆ.
  7. ಈಗಿನ ಪ್ರಕರಣದಲ್ಲಿ, ಆಕ್ರೋಶಭರಿತ ಭಾಷಣ ಮಾಡಲಾಗಿದೆ, ಮಹಿಳಾ ಪಪ್ರತಿಭಟನಕಾರರಿಗ ಕುಮ್ಮಕ್ಕು ನೀಡಲಾಗಿದೆ ಎಂದು ವಾದಕ್ಕೆ ಒಪ್ಪಿಕೊಂಡು, ಸಂವಿಧಾನವು ನೀಡಿದ ಪ್ರತಿಭಟನೆಯ ಮಿತಿಯನ್ನು ಇದು ಮೀರಿದೆ ಎಂದು ಭಾವಿಸಿದರೂ ಇದನ್ನು ಕಾನೂನುಬಾಹಿರ ಕೃತ್ಯಗಳ ತಡೆ ಕಾಯ್ದೆಯಲ್ಲಿ ವಿವರಿಸಿರುವ ಭಯೋತ್ಪಾದನಾ ಕೃತ್ಯ ಅಥವಾ ಷಡ್ಯಂತ್ರ ಎಂದು ಪರಿಗಣಿಸಲು ಸಾಧ್ಯವಿಲ್ಲ’ ಎಂದು ಪೀಠವು ವಿವರಿಸಿದೆ.
  8. ಆರೋಪಿಗಳ ಮೇಲೆ ಹೊರಿಸಲಾಗಿರುವ ಆರೋಪಗಳಿಗೂ ಆರೋಪಪಟ್ಟಿ ಮತ್ತು ಅದರ ಜತೆಗೆ ಇರಿಸಿದ್ದ ದಾಖಲೆಗಳಿಗೂ ಯಾವುದೇ ಸಂಬಂಧ ಇರುವುದು ಮೇಲ್ನೋಟಕ್ಕೆ ಕಾಣಿಸುತ್ತಿಲ್ಲ ಎಂದೂ ಪೀಠವು ಹೇಳಿದೆ.
  9. ಭಿನ್ನಮತವನ್ನು ದಮನಿಸುವ ಕಾತರ ಮತ್ತು ಪರಿಸ್ಥಿತಿಯು ಕೈಮೀರಿ ಹೋಗಬಹುದು ಎಂಬ ಅನಾರೋಗ್ಯಕರ ಭೀತಿಯಿಂದಾಗಿ, ಸಂವಿಧಾನವು ಖಾತರಿಪಡಿಸಿರುವ ಪ್ರತಿಭಟನೆಯ ಹಕ್ಕು ಮತ್ತು ಭಯೋತ್ಪಾದನೆಯ ನಡುವಣ ರೇಖೆಯನ್ನು ಸರ್ಕಾರವು ಮಸುಕಾಗಿಸಿದೆ. ಈ ಮನಸ್ಥಿತಿಯೇ ಗಟ್ಟಿಗೊಂಡರೆ ಅದು ಪ್ರಜಾಪ್ರಭುತ್ವಕ್ಕೆ ವಿಷಾದದ ದಿನ ಎಂದು ಹೇಳದೆ ವಿಧಿಯಿಲ್ಲ ಎಂದು ಪೀಠವು ಹೇಳಿದೆ.

ಈ ತೀರ್ಪಿನ ಪರಿಣಾಮಗಳು:

  1. ಈ ತೀರ್ಪಿನೊಂದಿಗೆ, UAPA ಅಡಿಯಲ್ಲಿ ಭಯೋತ್ಪಾದನೆ ಕೃತ್ಯದ ಆರೋಪದ ಮೇಲೆ ವ್ಯಕ್ತಿಯನ್ನು ಬಂಧಿಸಲು ನಿರ್ಬಂಧವನ್ನು ನ್ಯಾಯಾಲಯವು ಹೆಚ್ಚಿಸಿದೆ.
  2. “ಭಯೋತ್ಪಾದನೆ” ಪ್ರಕರಣಗಳ ವಿಭಾಗದಲ್ಲಿ ಅಗತ್ಯವಾಗಿ ಬರದ ಪ್ರಕರಣಗಳಲ್ಲಿ ಸಹ ವ್ಯಕ್ತಿಗಳ ವಿರುದ್ಧ UAPA ಅನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ನ್ಯಾಯಾಲಯವು ಗಮನಸೆಳೆದಿದೆ.
  3. ಛತ್ತೀಸಗಡದ ಬುಡಕಟ್ಟು ಜನಾಂಗದವರ ವಿರುದ್ಧ, ಜಮ್ಮು ಮತ್ತು ಕಾಶ್ಮೀರದ ಪ್ರಾಕ್ಸಿ ಸರ್ವರ್‌ಗಳ ಮೂಲಕ ಸಾಮಾಜಿಕ ಮಾಧ್ಯಮವನ್ನು ಬಳಸುತ್ತಿರುವವರ ವಿರುದ್ಧ ಮತ್ತು ಮಣಿಪುರದ ಪತ್ರಕರ್ತರ ವಿರುದ್ಧ ರಾಜ್ಯವು ಈ ನಿಬಂಧನೆಯನ್ನು ವ್ಯಾಪಕ ಶ್ರೇಣಿಯ ಅಪರಾಧಗಳಲ್ಲಿ ಬಳಸಿರುವುದರಿಂದ ಈ ಎಚ್ಚರಿಕೆಯು ಗಮನಾರ್ಹವಾಗಿದೆ.

 


ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:


ಹೂಡಿಕೆದಾರರ ಚಾರ್ಟರ್ ಅನ್ನು ಅನಾವರಣಗೊಳಿಸಿದ SEBI:

ಇತ್ತೀಚೆಗೆ, ಮಾರುಕಟ್ಟೆ ನಿಯಂತ್ರಕ ‘ಸೆಕ್ಯುರಿಟೀಸ್ ಅಂಡ್ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ’ / ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯು (SEBI) ಸೆಕ್ಯುರಿಟೀಸ್ ಮಾರುಕಟ್ಟೆಯಲ್ಲಿ ಹೂಡಿಕೆದಾರರ ಹಿತಾಸಕ್ತಿಗಳನ್ನು ರಕ್ಷಿಸುವ ಉದ್ದೇಶದಿಂದ ಹೂಡಿಕೆದಾರರ ಚಾರ್ಟರ್ (Investor Charter) ಅನ್ನು ಬಿಡುಗಡೆ ಮಾಡಿದೆ.

  1. ಹೂಡಿಕೆದಾರರ ಚಾರ್ಟರ್ ಅನ್ನು ಸಿದ್ಧಪಡಿಸುವ ಉದ್ದೇಶವು ಹೂಡಿಕೆದಾರರ ಹಿತಾಸಕ್ತಿಗಳನ್ನು ರಕ್ಷಿಸುವುದು ಮತ್ತು ನ್ಯಾಯಯುತ, ಪಾರದರ್ಶಕ ಮತ್ತು ಸುರಕ್ಷಿತ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಅವರಿಗೆ ಸಹಾಯ ಮಾಡುವುದು.
  2. ಹೂಡಿಕೆದಾರರ ಚಾರ್ಟರ್ ಸ್ಕೋರ್ ಪೋರ್ಟಲ್‌ನಲ್ಲಿ ಹೂಡಿಕೆದಾರರು ಸಲ್ಲಿಸಿದ ದೂರುಗಳ ಸಮಯೋಚಿತ ಮತ್ತು ನ್ಯಾಯಯುತ ಪರಿಹಾರವನ್ನು ಸಹ ಕಲ್ಪಿಸುತ್ತದೆ.
  3. ಈ ಚಾರ್ಟರ್ ಪ್ರಕಾರ, ಹೂಡಿಕೆದಾರರ ಹಕ್ಕುಗಳು SEBI ಯಿಂದ ಮಾನ್ಯತೆ ಪಡೆದ ಮಾರುಕಟ್ಟೆ ಮೂಲಸೌಕರ್ಯ ಸಂಸ್ಥೆಗಳು, SEBI ನೋಂದಾಯಿತ ಮಧ್ಯವರ್ತಿಗಳು, ನಿಯಂತ್ರಿತ ಘಟಕಗಳು ಮತ್ತು ಆಸ್ತಿ ನಿರ್ವಹಣಾ ಕಂಪನಿಗಳಿಂದ ಗುಣಮಟ್ಟದ ಸೇವೆಗಳನ್ನು ಪಡೆಯುವುದನ್ನು ಸಹ ಒಳಗೊಂಡಿರುತ್ತದೆ.

 


  • Join our Official Telegram Channel HERE for Motivation and Fast Updates
  • Subscribe to our YouTube Channel HERE to watch Motivational and New analysis videos

[ad_2]

Leave a Comment