[Mission 2022] ದೈನಂದಿನ ಪ್ರಚಲಿತ ಘಟನೆಗಳು ದಿನಾಂಕ – 16ನೇ ಅಕ್ಟೋಬರ್ 2021 – INSIGHTSIAS

[ad_1]

 

 

ಪರಿವಿಡಿ:

ಸಾಮಾನ್ಯ ಅಧ್ಯಯನ ಪತ್ರಿಕೆ 1:

1. ನಿಹಾಂಗ್ ಗಳು ಎಂದರೆ ಯಾರು?

2. ಅಮೃತ್ 2.0.

 

ಸಾಮಾನ್ಯ ಅಧ್ಯಯನ ಪತ್ರಿಕೆ 2:

1. ಹಗಲು ಹೊತ್ತಿನಲ್ಲಿ ಹಲ್ಲೆ ಹಾಗೂ ಹತ್ಯೆ ಮತ್ತು ಅದನ್ನು ತಡೆಯಲು ಕಾನೂನು.

2. ‘ಒಂದು ಆರೋಗ್ಯ’ ವಿಧಾನ.

3. ಯುಎನ್ ಮಾನವ ಹಕ್ಕುಗಳ ಮಂಡಳಿ.

 

ಸಾಮಾನ್ಯ ಅಧ್ಯಯನ ಪತ್ರಿಕೆ 3:

1. PM ಗತಿಶಕ್ತಿ – ರಾಷ್ಟ್ರೀಯ ಮಾಸ್ಟರ್ ಪ್ಲಾನ್.

 

ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:

1. ಸಂಪತ್ತು ಮರುಹಂಚಿಕೆ ಮಂಡಳಿ.

2. ಅರ್ಥಶಾಸ್ತ್ರದ ನೊಬೆಲ್.

3. ಯುಫಿಲ್

4. ಡ್ರಾಸ್.

 


ಸಾಮಾನ್ಯ ಅಧ್ಯಯನ ಪತ್ರಿಕೆ : 1


 

ವಿಷಯಗಳು: ಭಾರತೀಯ ಸಂಸ್ಕೃತಿಯು ಪ್ರಾಚೀನ ಕಾಲದಿಂದ ಆಧುನಿಕ ಕಾಲದವರೆಗೆ ಕಲಾ ಪ್ರಕಾರಗಳು, ಸಾಹಿತ್ಯ ಮತ್ತು ವಾಸ್ತುಶಿಲ್ಪದ ಪ್ರಮುಖ ಅಂಶಗಳನ್ನು ಒಳಗೊಂಡಿದೆ.

ನಿಹಾಂಗ್ ಗಳು ಎಂದರೆ ಯಾರು?


(Who are Nihangs?)

ಸಂದರ್ಭ:

ಕಳೆದ ವರ್ಷ, ಕೋವಿಡ್ ಲಾಕ್‌ಡೌನ್ ಸಮಯದಲ್ಲಿ ‘ಸಂಚಾರಿ ಪಾಸ್’(movement passes) ಗಳನ್ನು ತೋರಿಸುವಂತೆ ಕೇಳಿದ ನಂತರ ನಿಹಾಂಗ್‌ (Nihangs)ಗಳ ಗುಂಪೊಂದು ಪಟಿಯಾಲದಲ್ಲಿ ಒಬ್ಬ ಪೊಲೀಸ್ ಕೈಯನ್ನು ಕತ್ತಿಯಿಂದ ಕತ್ತರಿಸಿತ್ತು.

  1. ಈ ವರ್ಷ, ಹೊಸದಿಲ್ಲಿಯ ಸಿಂಗು ಗಡಿ ಬಳಿ ಪವಿತ್ರ ಗ್ರಂಥವನ್ನು ಅವಾಮಾನಗೊಳಿಸಿದ ಆರೋಪದ ಮೇಲೆ ಮತ್ತೆ ಅವರು ಒಬ್ಬ ವ್ಯಕ್ತಿಯನ್ನು ಕೊಂದಿದ್ದಾರೆ.

 

ನಿಹಾಂಗ್ ಎಂದರೆ ಯಾರು?

ನಿಹಾಂಗ್ ಸಿಖ್ ಯೋಧರ ಶ್ರೇಣಿ ಯಾಗಿದೆ. ಅವರುಗಳು ಸಾಮಾನ್ಯವಾಗಿ ನೀಲಿ ನಿಲುವಂಗಿಗಳು, ಕತ್ತಿಗಳು ಮತ್ತು ಈಟಿಯಂತಹ ಪ್ರಾಚೀನ ಆಯುಧಗಳು ಮತ್ತು ಉಕ್ಕಿನ ಕೋಟ್ಗಳಿಂದ ಅಲಂಕರಿಸಲ್ಪಟ್ಟ ಅಲಂಕೃತ ಪೇಟಗಳನ್ನು ಧರಿಸುತ್ತಾರೆ.

nihangs

 

ನಿಹಾಂಗ್ ಪದದ ಅರ್ಥವೇನು?

ವ್ಯುತ್ಪತ್ತಿಯಲ್ಲಿ ಪರ್ಷಿಯನ್ ಭಾಷೆಯಲ್ಲಿ ನಿಹಾಂಗ್ ಎಂದರೆ ಅಲಿಗೇಟರ್, ಕತ್ತಿ ಮತ್ತು ಪೆನ್ ಎಂಬ ಅರ್ಥವನ್ನು ಕೊಡುತ್ತದೆ ಆದರೆ ನಿಹಾಂಗ್ಸ್‌ನ ಗುಣಲಕ್ಷಣಗಳು ಸಂಸ್ಕೃತ ಪದ ನಿಹ್ ಶ್ಯಾಂಕ್ (nihshank)  ಗೆ ಹೆಚ್ಚು ಹೋಲುತ್ತವೆ ಅಂದರೆ ನಿರ್ಭೀತ, ಕಳಂಕವಿಲ್ಲದ, ಶುದ್ಧ, ನಿರಾತಂಕದ ಮತ್ತು ಲೌಕಿಕ ಲಾಭ ಮತ್ತು ಸೌಕರ್ಯದ ಬಗ್ಗೆ ಅಸಡ್ಡೆ ಭಾವ ಹೊಂದಿರುವ ಎಂದು ತಿಳಿಸುತ್ತದೆ.

ಮೂಲ:

ಮೂಲಗಳ ಪ್ರಕಾರ ಅವರ ಮೂಲವು ಗುರು ಗೋಬಿಂದ್ ಸಿಂಗ್ ಅವರ ಕಿರಿಯ ಮಗ ಫತೇಹ್ ಸಿಂಗ್ (1699-1705), ನೊಂದಿಗೆ ಸಂಬಂಧಿಸಿರುವುದು ಕಂಡುಬಂದಿದೆ.ಅವರು ಒಮ್ಮೆ ಗುರುಗಳ ಸಮ್ಮುಖದಲ್ಲಿ ನೀಲಿ ಚೋಲಾ ಮತ್ತು ನೀಲಿ ದುಪಟ್ಟಾ  ದುಮಾಲಾ (ಬಟ್ಟೆಯ ತುಂಡನ್ನು ರೂಪಿಸಿದರು) ಧರಿಸಿ ಬಂದಿದ್ದರು.

  1. ತನ್ನ ಮಗನು ತುಂಬಾ ಭವ್ಯವಾಗಿ ಕಾಣುತ್ತಿರುವುದನ್ನು ನೋಡಿದ ಗುರುಗಳು, ಇದು ಖಲ್ಸಾದ ಶಾಂತ ನಿರ್ಭೀತ ಸೈನಿಕರಾದ ನಿಹಾಂಗ್‌ಗಳ ಉಡುಗೆ ಎಂದು ಹೇಳಿದರು.

ನಿಹಾಂಗ್‌ಗಳು ಇತರ ಸಿಖ್ಖರು ಮತ್ತು ಇತರ ಸಿಖ್ ಯೋಧರಿಗಿಂತ ಹೇಗೆ ಭಿನ್ನವಾಗಿದ್ದರು?

ನಿಹಾಂಗ್ಸ್ ಖಾಲ್ಸಾ ನೀತಿ ಸಂಹಿತೆ (Khalsa code of conduct) ಯನ್ನು ಅದರ ಕಠಿಣ ಅರ್ಥದಲ್ಲಿ ಕಟ್ಟುನಿಟ್ಟಾಗಿ ಅನುಸರಿಸುತ್ತಾರೆ. ಅವರು ಲೌಕಿಕ ಯಜಮಾನನಿಗೆ ಯಾವುದೇ ನಿಷ್ಠೆಯನ್ನು ತೋರುವುದಿಲ್ಲ. ತಮ್ಮ ದೇಗುಲಗಳ ಮೇಲೆ ಅವರು ಕೇಸರಿಯ ಬದಲು ನೀಲಿ ನಿಶಾನ್ ಸಾಹಿಬ್ (ಧ್ವಜ) ವನ್ನು ಹಾರಿಸುತ್ತಾರೆ.

ಸಿಖ್ ಇತಿಹಾಸದಲ್ಲಿ ನಿಹಾಂಗ್ ಗಳ ಪಾತ್ರವೇನು?

  1. ಮೊದಲ ಸಿಖ್ ಆಡಳಿತದ ಪತನದ ನಂತರ (1710-15) ಮೊಘಲ್ ಆಡಳಿತಗಾರರು ಸಿಖ್ಖರನ್ನು ಕೊಲ್ಲುತ್ತಿದ್ದಾಗ ಮತ್ತು ಅಫ್ಘಾನ್ ಆಕ್ರಮಣಕಾರ ಅಹ್ಮದ್ ಶಾ ದುರಾನಿಯ (1748-65) ಆಕ್ರಮಣದ ಸಮಯದಲ್ಲಿ ಸಿಖ್ ಪಂಥವನ್ನು ರಕ್ಷಿಸುವಲ್ಲಿ ನಿಹಾಂಗ್ಸ್ ಪ್ರಮುಖ ಪಾತ್ರ ವಹಿಸಿದ್ದರು.
  2. ನಿಹಾಂಗ್ಸ್ ಅಮೃತಸರದ ಅಕಲ್ ಬುಂಗಾದಲ್ಲಿ (ಈಗ ಅಕಾಲ್ ತಖ್ತ್ ಎಂದು ಕರೆಯುತ್ತಾರೆ) ಸಿಖ್ಖರ ಧಾರ್ಮಿಕ ವ್ಯವಹಾರಗಳ ಮೇಲೆ ಹಿಡಿತ ಸಾಧಿಸಿದರು. ಅವರು ತಮ್ಮನ್ನು ಯಾವುದೇ ಸಿಖ್ ಮುಖ್ಯಸ್ಥರಿಗೆ ಅಧೀನವೆಂದು ಪರಿಗಣಿಸಲಿಲ್ಲ ಮತ್ತು ಹೀಗೆ ತಮ್ಮ ಸ್ವತಂತ್ರ ಅಸ್ತಿತ್ವವನ್ನು ಉಳಿಸಿಕೊಂಡರು.
  3. 1849 ರಲ್ಲಿ ಸಿಖ್ ಸಾಮ್ರಾಜ್ಯದ ಪತನದ ನಂತರ ಪಂಜಾಬಿನ ಬ್ರಿಟಿಷ್ ಅಧಿಕಾರಿಗಳು 1859 ರಲ್ಲಿ ಸ್ವರ್ಣಮಂದಿರದ ಆಡಳಿತವನ್ನು ನೋಡಿಕೊಳ್ಳಲು ವ್ಯವಸ್ಥಾಪಕರನ್ನು (ಸರ್ಬ್ರಾಹ್ -sarbrah) ನೇಮಿಸಿದಾಗ ಅವರ ಪ್ರಭಾವ ಕೊನೆಗೊಂಡಿತು.

 

ವಿಷಯಗಳು: ಜನಸಂಖ್ಯೆ ಮತ್ತು ಸಂಬಂಧಿತ ಸಮಸ್ಯೆಗಳು, ಬಡತನ ಮತ್ತು ಅಭಿವೃದ್ಧಿ ಸಮಸ್ಯೆಗಳು, ನಗರೀಕರಣ, ಅವುಗಳ ಸಮಸ್ಯೆ ಮತ್ತು ಪರಿಹಾರಗಳು.

ಅಮೃತ್ 2.0:


(AMRUT 2.0)

ಸಂದರ್ಭ:

ಇತ್ತೀಚೆಗೆ, ಕೇಂದ್ರ ಸಚಿವ ಸಂಪುಟವು ನವೀಕರಣ ಮತ್ತು ನಗರ ಪುನರುತ್ಥಾನಕ್ಕಾಗಿ ಅಟಲ್ ಮಿಷನ್ ’ (Atal Mission for Rejuvenation and Urban Transformation 2.0 -AMRUT 2.0) 2025-26 ವರ್ಷದವರೆಗೆ ಮುಂದುವರಿಸಲು ಅನುಮೋದನೆ ನೀಡಿದೆ.

  1. ಈ ನಿರ್ಧಾರವು ‘ಆತ್ಮ ನಿರ್ಭರ ಭಾರತ’ದತ್ತ ಒಂದು ಹೆಜ್ಜೆಯಾಗಿದ್ದು,’ ನೀರಿನ ವೃತ್ತಾಕಾರದ ಆರ್ಥಿಕತೆಯೊಂದಿಗೆ ನಗರಗಳನ್ನು ‘ನೀರು ಸುರಕ್ಷಿತ’ ಮತ್ತು ‘ಆತ್ಮ ನಿರ್ಭರ’ ಮಾಡಬೇಕೆಂಬ ಉದ್ದೇಶವನ್ನು ಹೊಂದಿದೆ.

ಹಿನ್ನೆಲೆ:

ನವೀಕರಣ ಮತ್ತು ನಗರ ಪುನರುತ್ಥಾನಕ್ಕಾಗಿ ಅಟಲ್ ಮಿಷನ್ (Atal Mission for Rejuvenation and Urban Transformation AMRUT), ಇದು ದೇಶದ ಮೊದಲ ಕೇಂದ್ರೀಕೃತ ರಾಷ್ಟ್ರೀಯ ನೀರಿನ ಮಿಷನ್ ಆಗಿದ್ದು ಅದನ್ನು ಜೂನ್ 2015 ರಲ್ಲಿ 500 ನಗರಗಳಲ್ಲಿನ ನಾಗರಿಕರಿಗೆ ‘ನಲ್ಲಿ ಸಂಪರ್ಕ’ ಮತ್ತು ‘ಒಳಚರಂಡಿ ಸಂಪರ್ಕ’ ಒದಗಿಸುವ ಮೂಲಕ ಸುಲಲಿತ ಜೀವನವನ್ನು ಒದಗಿಸಲು ಆರಂಭಿಸಲಾಯಿತು.

  1. ಈ ಮಿಷನ್ ಅಡಿಯಲ್ಲಿ, ಇಲ್ಲಿಯವರೆಗೆ 1.1 ಕೋಟಿ ಮನೆಗಳಿಗೆ ನಲ್ಲಿ ಸಂಪರ್ಕಗಳು ಮತ್ತು 85 ಲಕ್ಷ ಒಳಚರಂಡಿ/ಕೊಳಚೆ ಸಂಪರ್ಕಗಳನ್ನು ಒದಗಿಸಲಾಗಿದೆ.

current affairs

 

ಅಮೃತ್ 2.0’ ಕುರಿತು:

  1. ಅಮೃತ್ 2.0 ಅಡಿಯಲ್ಲಿ, ಎಲ್ಲಾ 4,378 ಶಾಸನಬದ್ಧ ನಗರಗಳಲ್ಲಿನ ಮನೆಗಳಿಗೆ ಟ್ಯಾಪ್/ನಲ್ಲಿ ನೀರಿನ ಸಂಪರ್ಕಗಳನ್ನು ಒದಗಿಸುವ ಮೂಲಕ ನೀರಿನ ಪೂರೈಕೆಯ ಸಾರ್ವತ್ರಿಕ ವ್ಯಾಪ್ತಿಯನ್ನು ಸಾಧಿಸುವ ಗುರಿಯನ್ನು ನಿಗದಿಪಡಿಸಲಾಗಿದೆ.
  2. 500 AMRUT ನಗರಗಳಲ್ಲಿ ಮನೆಗಳಿಗೆ ಒಳಚರಂಡಿ/ಕೊಳಚೆ ನಿರ್ವಹಣೆಯ 100% ವ್ಯಾಪ್ತಿಯನ್ನು ಒದಗಿಸುವುದು ಇನ್ನೊಂದು ಉದ್ದೇಶವಾಗಿದೆ.
  3. ಈ ಮಿಷನ್ 2.68 ಕೋಟಿ ಟ್ಯಾಪ್ ಸಂಪರ್ಕಗಳನ್ನು ಮತ್ತು 2.64 ಕೋಟಿ ಒಳಚರಂಡಿ/ಕೊಳಚೆ ಸಂಪರ್ಕಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ.
  4. ವೃತ್ತಾಕಾರದ ಆರ್ಥಿಕತೆಯ ತತ್ವಗಳನ್ನು ಅಳವಡಿಸಿಕೊಳ್ಳಿ (3R ಗಳನ್ನು ಬಳಸಿ ತ್ಯಾಜ್ಯದಿಂದ ಸಂಪತ್ತನ್ನು ಸೃಷ್ಟಿಸುವುದು)
  5. ಮೇಲ್ಮೈ ಮತ್ತು ಅಂತರ್ಜಲ ಮೂಲಗಳ ಸಂರಕ್ಷಣೆ ಮತ್ತು ನವೀಕರಣವನ್ನು ಉತ್ತೇಜಿಸಲು.
  6. ಡೇಟಾ ಆಧಾರಿತ ‘ನೀರು ನಿರ್ವಹಣೆ’ ಆಡಳಿತ.
  7. ಇತ್ತೀಚಿನ ಜಾಗತಿಕ ತಂತ್ರಜ್ಞಾನಗಳು ಮತ್ತು ಕೌಶಲ್ಯಗಳನ್ನು ಸದುಪಯೋಗಪಡಿಸಿಕೊಳ್ಳಲು ತಂತ್ರಜ್ಞಾನ ಉಪ-ಮಿಷನ್.
  8. ನಗರಗಳ ನಡುವೆ ಸ್ಪರ್ಧೆಯನ್ನು ಉತ್ತೇಜಿಸಲು ಕುಡಿಯುವ ನೀರಿನ ಸಮೀಕ್ಷೆ’ (ಪೇ ಜಲ ಸಮೀಕ್ಷೆ) ಯನ್ನು ಆಯೋಜಿಸುವುದು.

current affairs

 

ವಿಷಯಗಳು: ಸರ್ಕಾರದ ನೀತಿಗಳು ಮತ್ತು ವಿವಿಧ ಕ್ಷೇತ್ರಗಳಲ್ಲಿನ ಅಭಿವೃದ್ಧಿಯ ಅಡಚಣೆಗಳು ಮತ್ತು ಅವುಗಳ ವಿನ್ಯಾಸ ಮತ್ತು ಅನುಷ್ಠಾನದಿಂದ ಉಂಟಾಗುವ ಸಮಸ್ಯೆಗಳು.

ಹಗಲು ಹೊತ್ತಿನಲ್ಲಿ ಹಲ್ಲೆ ಹಾಗೂ ಹತ್ಯೆ ಮತ್ತು ಅದನ್ನು ತಡೆಯಲು ಕಾನೂನು:


(Daylight lynching and law to prevent it)

ಸಂದರ್ಭ:

ಇತ್ತೀಚೆಗೆ,ದೆಹಲಿ-ಹರಿಯಾಣ ಗಡಿಯಲ್ಲಿ ರೈತರ ಪ್ರತಿಭಟನೆಯ ಸ್ಥಳವಾದ ಸಿಂಗುವಿನಲ್ಲಿ ವ್ಯಕ್ತಿಯೊಬ್ಬನ ಹತ್ಯೆಯು, ದ್ವೇಷದ ಅಪರಾಧದ ಕ್ರೂರತೆಯನ್ನು ಸೆರೆಹಿಡಿದು ಮರುಪ್ರಸಾರ ಮಾಡಲಾದ ವಿಡಿಯೋವು,ತಪ್ಪಿತಸ್ಥರಿಗೆ ತ್ವರಿತ ಮತ್ತು ಖಚಿತವಾದ ಶಿಕ್ಷೆಯನ್ನು ನೀಡಲು ಕಾನೂನಿನ ಸಂಪೂರ್ಣ ಬಲವನ್ನು ಉಪಯೋಗಿಸಬೇಕು ಎಂದು ಕರೆ ನೀಡುತ್ತದೆ.

ಏನಿದು ಪ್ರಕರಣ?

ಸಂತ್ರಸ್ತ, ಲಖ್‌ಬೀರ್ ಸಿಂಗ್, ಪರಿಶಿಷ್ಟ ಜಾತಿಗೆ ಸೇರಿದ ಒಬ್ಬ ಕಾರ್ಮಿಕ ನಾಗಿದ್ದು ಆತನು ತರ್ನ್ ತಾರನ್‌ನ ಹಳ್ಳಿಗೆ ಸೇರಿದವನು. ಆತನ ಕೊಲೆಗಾರರಿಂದ (ನಿಹಾಂಗ್‌ಗಳ ಒಂದು ಗುಂಪು) ಅವನ ಮೇಲೆ ಬೀಡಾಬಿ ಅಥವಾ ಪವಿತ್ರ ಗ್ರಂಥವನ್ನು ಅವಮಾನಿಸಿದ ಕೃತ್ಯದ ಆರೋಪ ಹೊರಿಸಲಾಗಿದೆ, ಅಷ್ಟಕ್ಕೆ ಸುಮ್ಮನಾಗದ ಅವರು, ಲಖ್‌ಬೀರ್ ಸಿಂಗ್ ನನ್ನು ಚಿತ್ರಹಿಂಸೆ ಮಾಡಿ ಕೊಲೆ ಮಾಡಿದ್ದಾರೆ ಮತ್ತು  ವಿರೂಪಗೊಂಡ ಆತನ ದೇಹವನ್ನು ಪೋಲಿಸ್ ಬ್ಯಾರಿಕೇಡ್‌ಗೆ ಕಟ್ಟಿದ್ದಾರೆ.

ಈಗ ಮಾಡಬೇಕಿರುವುದೇನು?

ಕೊಲೆಗಡುಕರು ಮತ್ತು ದುಷ್ಕರ್ಮಿಗಳಿಗೆ ಯಾವುದೇ ರಕ್ಷಣೆಯನ್ನು ಪಡೆಯಲು ಅವಕಾಶ ನೀಡಬಾರದು. ಅವರು ನ್ಯಾಯಾಧೀಶರು, ತೀರ್ಪುಗಾರರು, ಮರಣದಂಡನೆಕಾರರ  ಪಾತ್ರವನ್ನು ನಿರ್ವಹಿಸಿದ್ದಾರೆ ಮತ್ತು ರಾಜ್ಯದ ಆಡಳಿತವು ಅವರನ್ನು ತುರ್ತಾಗಿ ಗುರುತಿಸಬೇಕು ಮತ್ತು ಅವರನ್ನು ಕಠಿಣ ಶಿಕ್ಷೆಗೆ ಗುರಿಪಡಿಸಬೇಕು.

ಲಿಂಚಿಂಗ್ ಎಂದರೇನು?

  1. ಧರ್ಮ, ಜನಾಂಗ, ಜಾತಿ, ಲಿಂಗ, ಹುಟ್ಟಿದ ಸ್ಥಳ, ಭಾಷೆ, ಆಹಾರ ಪದ್ಧತಿಗಳು, ಲೈಂಗಿಕ ದೃಷ್ಟಿಕೋನ, ರಾಜಕೀಯ ಸಂಬಂಧ, ಜನಾಂಗೀಯತೆ ಅಥವಾ ಯಾವುದೇ ಇತರ ಸಂಬಂಧಿತ ಆಧಾರಗಳ ಮೇಲೆ ಯಾವುದೇ ಕೃತ್ಯ ಅಥವಾ ಸರಣಿಯ ಹಿಂಸಾಚಾರ ದಂತಹ ಕೃತ್ಯ/ಕೃತ್ಯಗಳಿಗೆ ಕುಮ್ಮಕ್ಕು ನೀಡುವುದು, ಸ್ವಯಂಪ್ರೇರಿತವಾಗಿ ಅಥವಾ ಯೋಜಿತವಾಗಿ, ಸಹಾಯ ಮಾಡುವುದು (ಪ್ರೋತ್ಸಾಹಿಸುವುದು) ಲಿಂಚಿಂಗ್ ಅಥವಾ ಗುಂಪು ಹತ್ಯೆ ಆಗಿದೆ.
  2. ಇದರಲ್ಲಿ, ತಪ್ಪಿತಸ್ಥನು ತನ್ನ ಅಪರಾಧಕ್ಕಾಗಿ ಅನಿಯಂತ್ರಿತ ಜನಸಮೂಹದಿಂದ ಶಿಕ್ಷೆಗೊಳಗಾಗುತ್ತಾನೆ ಅಥವಾ ಕೆಲವೊಮ್ಮೆ ಕೇವಲ ವದಂತಿಗಳ ಆಧಾರದ ಮೇಲೆ, ಅಪರಾಧ ಮಾಡದೆ ಇದ್ದರೂ ಸಹ ತಕ್ಷಣ ಶಿಕ್ಷೆಗೊಳಗಾಗುತ್ತಾನೆ, ಅಥವಾ ಅವನನ್ನು ಹೊಡೆದು ಸಾಯಿಸಲಾಗುತ್ತದೆ.

ಈ ಪ್ರಕರಣಗಳನ್ನು ಹೇಗೆ ನಿರ್ವಹಿಸಲಾಗುತ್ತದೆ?

ಅಸ್ತಿತ್ವದಲ್ಲಿರುವ ಭಾರತೀಯ ದಂಡ ಸಂಹಿತೆ (ಐಪಿಸಿ) ಯ ಅಡಿಯಲ್ಲಿ ಇಂತಹ ಘಟನೆಗಳಿಗೆ “ಪ್ರತ್ಯೇಕ” ವ್ಯಾಖ್ಯಾನವಿಲ್ಲ. ಹತ್ಯೆ ಘಟನೆಗಳನ್ನು ಐಪಿಸಿ ಸೆಕ್ಷನ್ 300 ಮತ್ತು 302 ರ ಅಡಿಯಲ್ಲಿ ವ್ಯವಹರಿಸಲಾಗುತ್ತದೆ.

  1. IPC ಸೆಕ್ಷನ್ 302 ಪ್ರಕಾರ ಕೊಲೆ ಮಾಡಿದವರಿಗೆ ಮರಣದಂಡನೆ ಅಥವಾ ಜೀವಾವಧಿ ಶಿಕ್ಷೆ ವಿಧಿಸಲಾಗುತ್ತದೆ ಮತ್ತು ದಂಡವನ್ನು ಸಹ ವಿಧಿಸಬಹುದಾಗಿದೆ. ಕೊಲೆ ಅಪರಾಧವು ಒಂದು ಕಾಗ್ನಿಜಬಲ್, ಜಾಮೀನು ರಹಿತ ಮತ್ತು ಸಂಯುಕ್ತವಲ್ಲದ ಅಪರಾಧವಾಗಿದೆ.

ಸುಪ್ರೀಮ್ ಕೋರ್ಟ್ ಮಾರ್ಗಸೂಚಿಗಳು:

  1. ಹತ್ಯೆಗೆ ಪ್ರತ್ಯೇಕ ಅಪರಾಧ” ಸಂಹಿತೆ ಇರಬೇಕು ಮತ್ತು ವಿಚಾರಣಾ ನ್ಯಾಯಾಲಯಗಳು ಸಾಮಾನ್ಯವಾಗಿ ಗುಂಪು ಹಿಂಸಾಚಾರದ ಪ್ರಕರಣಗಳಲ್ಲಿ ಕಠಿಣ ಉದಾಹರಣೆ ನೀಡಲು ಆರೋಪಿತ ವ್ಯಕ್ತಿಗೆ ಅಥವಾ ವ್ಯಕ್ತಿಗಳ ಗುಂಪಿಗೆ ಗರಿಷ್ಠ ಶಿಕ್ಷೆಯನ್ನು ನೀಡಬೇಕು.
  2. ಗುಂಪು ಹಿಂಸೆ ಮತ್ತು ಹತ್ಯಾಕಾಂಡದ ಘಟನೆಗಳನ್ನು ತಡೆಯಲು ರಾಜ್ಯ ಸರ್ಕಾರಗಳು ಪ್ರತಿ ಜಿಲ್ಲೆಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಯನ್ನು ನೇಮಿಸಬೇಕು.
  3. ರಾಜ್ಯ ಸರ್ಕಾರಗಳು ಇತ್ತೀಚಿನ ದಿನಗಳಲ್ಲಿ ಹತ್ಯಾಕಾಂಡ ಮತ್ತು ಗುಂಪು ಹಿಂಸಾಚಾರದ ಪ್ರಕರಣಗಳು ವರದಿಯಾಗಿರುವ ಜಿಲ್ಲೆಗಳು, ಉಪ ವಿಭಾಗಗಳು ಮತ್ತು ಹಳ್ಳಿಗಳನ್ನು ಗುರುತಿಸಬೇಕು.
  4. ಲಿಂಚಿಂಗ್ ಮತ್ತು ಗುಂಪು ಹಿಂಸೆ ಸಂಬಂಧಿತ ಸಮಸ್ಯೆಗಳನ್ನು ನಿಭಾಯಿಸಲು ಕಾರ್ಯತಂತ್ರ ರೂಪಿಸಲು ಯಾವುದೇ ಅಂತರ್ ಜಿಲ್ಲಾ ಸಮನ್ವಯ ಸಮಸ್ಯೆಗಳ ಕುರಿತು ನೋಡಲ್ ಅಧಿಕಾರಿಗಳು ಡಿಜಿಪಿಯ ಗಮನಕ್ಕೆ ತರಬೇಕು.
  5. ಪ್ರತಿಯೊಬ್ಬ ಪೊಲೀಸ್ ಅಧಿಕಾರಿಯು ಜಾಗರೂಕತೆಯಿಂದ ಮಾರು ವೇಷದಲ್ಲಿ ಹಿಂಸೆಯನ್ನು ಉಂಟುಮಾಡುವ ಪ್ರವೃತ್ತಿಯನ್ನು ಹೊಂದಿರುವ ಗುಂಪುಗಳನ್ನು ಚದುರಿಸಲು ಕ್ರಮ ಕೈಗೊಳ್ಳುವುದನ್ನು ಖಚಿತಪಡಿಸಿಕೊಳ್ಳಬೇಕು.
  6. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೇಡಿಯೋ, ದೂರದರ್ಶನ ಮತ್ತು ಇತರ ಮಾಧ್ಯಮ ವೇದಿಕೆಗಳಲ್ಲಿ ಗುಂಪು ಹತ್ಯೆ ಮತ್ತು ಗುಂಪು ಹಿಂಸೆಯ ಗಂಭೀರ ಪರಿಣಾಮಗಳ ಬಗ್ಗೆ ಪ್ರಸಾರ ಮಾಡಬೇಕು.
  7. ರಾಜ್ಯ ಪೊಲೀಸರು ತೆಗೆದುಕೊಂಡ ಕ್ರಮಗಳ ಹೊರತಾಗಿಯೂ, ಹತ್ಯೆ ಅಥವಾ ಗುಂಪು ಹಿಂಸಾಚಾರದಂತಹ ಕಳವಳಕಾರಿ ಘಟನೆಗಳು ಸ್ಥಳೀಯ ಪೊಲೀಸರ ಗಮನಕ್ಕೆ ಬಂದರೆ, ನ್ಯಾಯವ್ಯಾಪ್ತಿಯ ಪೊಲೀಸ್ ಠಾಣೆಯು ತಕ್ಷಣವೇ FIR ಅನ್ನು ದಾಖಲಿಸಬೇಕು.
  8. ರಾಜ್ಯ ಸರ್ಕಾರಗಳು CRPCಯ ಸೆಕ್ಷನ್ 357 A ನಿಬಂಧನೆಗಳ ಅಡಿಯಲ್ಲಿ ಹತ್ಯೆ/ಗುಂಪು ಹತ್ಯೆಯ ಸಂತ್ರಸ್ತರಿಗೆ ಪರಿಹಾರ ಯೋಜನೆಯನ್ನು ಸಿದ್ಧಪಡಿಸಬೇಕು.
  9. ಯಾವುದೇ ಒಬ್ಬ ಪೊಲೀಸ್ ಅಧಿಕಾರಿ ಅಥವಾ ಜಿಲ್ಲಾಡಳಿತದ ಅಧಿಕಾರಿ ತನ್ನ ಕರ್ತವ್ಯವನ್ನು ನಿರ್ವಹಿಸಲು ವಿಫಲವಾದಲ್ಲಿ, ಅದನ್ನು ಉದ್ದೇಶಪೂರ್ವಕ ನಿರ್ಲಕ್ಷ್ಯದ ಕ್ರಮವೆಂದು ಪರಿಗಣಿಸಲಾಗುತ್ತದೆ.

ಈ ಸಮಯದ ಅವಶ್ಯಕತೆ:

  1. ಪ್ರತಿ ಬಾರಿಯೂ ಮರ್ಯಾದಾ ಹತ್ಯೆ, ದ್ವೇಷದ ಅಪರಾಧಗಳು, ಮಾಟಗಾತಿ ಹತ್ಯೆ ಅಥವಾ ಗುಂಪು ಹತ್ಯೆಯ ಪ್ರಕರಣಗಳು ವರದಿಯಾದಾಗ ಈ ಅಪರಾಧಗಳನ್ನು ಎದುರಿಸಲು ವಿಶೇಷ ಕಾನೂನಿನ ಬೇಡಿಕೆಗಳನ್ನು ಎತ್ತಲಾಗುತ್ತದೆ.
  2. ಆದರೆ, ಈ ಅಪರಾಧಗಳು ಕೊಲೆಗಳಲ್ಲದೆ ಬೇರೇನೂ ಅಲ್ಲ ಮತ್ತು ಐಪಿಸಿ ಮತ್ತು ಸಿಆರ್‌ಪಿಸಿ ಅಡಿಯಲ್ಲಿ ಈಗ ಅಸ್ತಿತ್ವದಲ್ಲಿರುವ ನಿಬಂಧನೆಗಳು ಇಂತಹ ಅಪರಾಧಗಳನ್ನು ನಿಭಾಯಿಸಲು ಸಾಕಾಗುತ್ತದೆ ಎಂಬುದು ವಾಸ್ತವವಾಗಿದೆ.
  3. ಪೂನಾವಾಲಾ ಪ್ರಕರಣದಲ್ಲಿ ಸೂಚಿಸಲಾದ ಮಾರ್ಗಸೂಚಿಗಳೊಂದಿಗೆ ಸೇರಿಕೊಂಡು, ಗುಂಪು ಹತ್ಯೆಯನ್ನು ಎದುರಿಸಲು ಸರ್ಕಾರವು ಸಾಕಷ್ಟು ಶ್ರಮ ವಹಿಸುತ್ತಿದೆ. ಆದಾಗ್ಯೂ, ನಮ್ಮಲ್ಲಿ ಕೊರತೆಯಿರುವುದು ಅಸ್ತಿತ್ವದಲ್ಲಿರುವ ಕಾನೂನುಗಳ ಸರಿಯಾದ ಜಾರಿ ಮತ್ತು ಜಾರಿ ಸಂಸ್ಥೆಗಳ ಜವಾಬ್ದಾರಿಯುತ ಹೊಣೆಗಾರಿಕೆ.

ಈ ನಿಟ್ಟಿನಲ್ಲಿ ವಿವಿಧ ರಾಜ್ಯಗಳ ಪ್ರಯತ್ನಗಳು:

  1. ಮಣಿಪುರ ಸರ್ಕಾರವು 2018 ರಲ್ಲಿ ಗುಂಪು ಹತ್ಯಾಕಾಂಡದ ವಿರುದ್ಧ ಒಂದು ಮಸೂದೆಯನ್ನು ಮಂಡಿಸಿತು, ಇದು ಕೆಲವು ತಾರ್ಕಿಕ ಮತ್ತು ಸಂಬಂಧಿತ ನಿಬಂಧನೆಗಳನ್ನು ಒಳಗೊಂಡಿದೆ.
  2. ರಾಜಸ್ಥಾನ ಸರ್ಕಾರವು 2019 ರ ಆಗಸ್ಟ್ ನಲ್ಲಿ ಹತ್ಯಾಕಾಂಡದ ವಿರುದ್ಧ ಮಸೂದೆಯನ್ನು ಅಂಗೀಕರಿಸಿತು.
  3. ಪಶ್ಚಿಮ ಬಂಗಾಳವು ಗುಂಪು ಹತ್ಯೆಯ ವಿರುದ್ಧ ಹೆಚ್ಚು ಕಠಿಣ ನಿಬಂಧನೆಗಳನ್ನು ಹೊಂದಿರುವ ವಿಧೇಯಕವನ್ನು ಜಾರಿಗೊಳಿಸಿತು.

 

ವಿಷಯಗಳು: ಆರೋಗ್ಯ, ಶಿಕ್ಷಣ, ಸಾಮಾಜಿಕ ವಲಯ / ಸೇವೆಗಳ ಅಭಿವೃದ್ಧಿ ಮತ್ತು ನಿರ್ವಹಣೆಗೆ ಸಂಬಂಧಿಸಿದ ಮಾನವ ಸಂಪನ್ಮೂಲ ಸಂಬಂಧಿತ ವಿಷಯಗಳು.

‘ಒಂದು ಆರೋಗ್ಯ’ ವಿಧಾನ:


(‘One Health’ consortium)

ಸಂದರ್ಭ:

ಇತ್ತೀಚೆಗೆ, ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಜೈವಿಕ ತಂತ್ರಜ್ಞಾನ ಇಲಾಖೆಯು (Department of Biotechnology)ಒಂದು ಆರೋಗ್ಯ’ ವಿಧಾನ (‘One Health’ consortium) ವನ್ನು ಆರಂಭಿಸಿದೆ. ಇದು ಡಿಬಿಟಿಯ ಮೊದಲ ಒನ್ ಹೆಲ್ತ್’ ಯೋಜನೆಯಾಗಿದೆ.

ಯೋಜನೆಯ ಬಗ್ಗೆ:

  1. ಈ ಕಾರ್ಯಕ್ರಮದಡಿಯಲ್ಲಿ ದೇಶದ ಈಶಾನ್ಯ ಭಾಗವನ್ನು ಒಳಗೊಂಡಂತೆ ಇಡೀ ದೇಶದಲ್ಲಿ ಪ್ರಮುಖವಾದ ಬ್ಯಾಕ್ಟೀರಿಯಾ, ವೈರಲ್ ಮತ್ತು ಪರಾವಲಂಬಿ ಸೋಂಕುಗಳ ಝೂನೋಟಿಕ್ ಹಾಗೂ ಟ್ರಾನ್ಸ್‌ಬೌಂಡರಿ ರೋಗಾಣುಗಳ ಕಣ್ಗಾವಲು / ಮೇಲ್ವಿಚಾರಣೆ ನಡೆಸುತ್ತದೆ.
  2. ಈ ಯೋಜನೆಯು ಅಸ್ತಿತ್ವದಲ್ಲಿರುವ ಡಯಾಗ್ನೋಸ್ಟಿಕ್ ಪರೀಕ್ಷೆಗಳ ಬಳಕೆ ಮತ್ತು ಕಣ್ಗಾವಲು ಮತ್ತು ಉದಯೋನ್ಮುಖ ರೋಗಗಳ ಹರಡುವಿಕೆಯನ್ನು ಅರ್ಥಮಾಡಿಕೊಳ್ಳಲು ಹೆಚ್ಚುವರಿ ವಿಧಾನಗಳ ಅಭಿವೃದ್ಧಿಯನ್ನು ಸಹ ಪರಿಗಣಿಸಲಾಗಿದೆ.

ಇತ್ತೀಚಿನ ವರ್ಷಗಳಲ್ಲಿ ವೈರಾಣುಗಳ ಏಕಾಏಕಿ ಸ್ಫೋಟದ ಟ್ರಾನ್ಸ್ ಬೌಂಡರಿ ಪರಿಣಾಮಗಳಾದ ಉದಾಹರಣೆಗೆ  ನಿಫಾ ವೈರಸ್, ಎಬೋಲಾ, ತೀವ್ರ ಉಸಿರಾಟದ ಸಿಂಡ್ರೋಮ್ (Severe Acute Respiratory Syndrome -SARS)), ಮಧ್ಯಪ್ರಾಚ್ಯ ಉಸಿರಾಟದ ಸಿಂಡ್ರೋಮ್ (Middle East Respiratory Syndrome -MERS) ಮತ್ತು ಏವಿಯನ್ ಇನ್ಫ್ಲುಯೆನ್ಸವು (Avian Influenza) ಪರಿಸರ, ಪ್ರಾಣಿಗಳು ಮತ್ತು ಮಾನವ ಆರೋಗ್ಯದ ನಡುವಿನ ಸಂಪರ್ಕಗಳನ್ನು ಸ್ಥಿರವಾಗಿ ದಾಖಲಿಸುವ ಅಗತ್ಯವನ್ನು ಮತ್ತಷ್ಟು ಬಲಪಡಿಸಿದೆ.

ಇದು, ಪ್ರಾಣಿಗಳು, ಮಾನವರು ಮತ್ತು ಪರಿಸರದ ನಡುವಿನ ಪರಸ್ಪರ ಸಂಬಂಧವನ್ನು ಅಂಗೀಕರಿಸಲು ನಮ್ಮನ್ನು ಒತ್ತಾಯಿಸುತ್ತದೆ, ಈ ವಿಧಾನವನ್ನು “ಒಂದು ಆರೋಗ್ಯ” (One Health) ಎಂದು ಕರೆಯಲಾಗುತ್ತದೆ.

ಸಂಯೋಜನೆ:

‘ಒನ್ ಹೆಲ್ತ್ ಕನ್ಸೋರ್ಟಿಯಂ’ ಹೈದರಾಬಾದ್‌ನ ಡಿಬಿಟಿ-ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಅನಿಮಲ್ ಬಯೋಟೆಕ್ನಾಲಜಿಯ ನೇತೃತ್ವದ 27 ಸಂಸ್ಥೆಗಳನ್ನು ಒಳಗೊಂಡಿದೆ.

ಒಂದು ಆರೋಗ್ಯ’ ವಿಧಾನದ ಅಗತ್ಯತೆ ಮತ್ತು ಮಹತ್ವ:

ಕೋವಿಡ್ -19 ಸಾಂಕ್ರಾಮಿಕವು ಸಾಂಕ್ರಾಮಿಕ ರೋಗಗಳ ನಿಯಂತ್ರಣದಲ್ಲಿ ‘ಒಂದು ಆರೋಗ್ಯ’ ತತ್ವಗಳ ಪ್ರಸ್ತುತತೆಯನ್ನು ತೋರಿಸಿದೆ, ವಿಶೇಷವಾಗಿ ವಿಶ್ವದಾದ್ಯಂತ ಜೂನೋಟಿಕ್ ರೋಗಗಳನ್ನು ತಡೆಗಟ್ಟುವ ಮತ್ತು ನಿಯಂತ್ರಿಸುವ ಪ್ರಯತ್ನಗಳ ಪ್ರಸ್ತುತತೆಯನ್ನು ಒಳಗೊಂಡಿದೆ.

  1. ಆದ್ದರಿಂದ, ಭವಿಷ್ಯದ ಸಾಂಕ್ರಾಮಿಕ ರೋಗಗಳಿಂದ ಉಂಟಾಗುವ ಹಾನಿಯನ್ನು ಕಡಿಮೆ ಮಾಡಲು ಮಾನವ, ಪ್ರಾಣಿಗಳು ಮತ್ತು ವನ್ಯಜೀವಿಗಳ ಆರೋಗ್ಯವನ್ನು ಅರ್ಥಮಾಡಿಕೊಳ್ಳಲು ಒಂದು ಸಮಗ್ರ ವಿಧಾನದ ಅವಶ್ಯಕತೆಯಿದೆ.

ಒಂದು ಆರೋಗ್ಯ ಪರಿಕಲ್ಪನೆ ಎಂದರೇನು?

(What is OneHealth concept?)

  1. ಒನ್ ಹೆಲ್ತ್ ಇನಿಶಿಯೇಟಿವ್ ಟಾಸ್ಕ್ ಫೋರ್ಸ್ ವ್ಯಾಖ್ಯಾನಿಸಿದಂತೆ ಜನರು, ಪ್ರಾಣಿಗಳು ಮತ್ತು ನಮ್ಮ ಪರಿಸರಕ್ಕೆ ಉತ್ತಮವಾದ ಸೂಕ್ತ ಆರೋಗ್ಯವನ್ನು ಪಡೆಯಲು ಸ್ಥಳೀಯವಾಗಿ, ರಾಷ್ಟ್ರೀಯವಾಗಿ ಮತ್ತು ಜಾಗತಿಕವಾಗಿ ಕೆಲಸ ಮಾಡುವ ಅನೇಕ ವಿಭಾಗಗಳ ಸಹಯೋಗದ ಪ್ರಯತ್ನಗಳನ್ನು ಒಂದು ಆರೋಗ್ಯ ಎನ್ನಲಾಗುತ್ತದೆ.
  2. ಒಂದು ಆರೋಗ್ಯ ಮಾದರಿಯು ಪ್ರಪಂಚದಲ್ಲಿ ಹೊಸದಾಗಿ ಉದಯಿಸುತ್ತಿರುವ ಮತ್ತು ಅಸ್ತಿತ್ವದಲ್ಲಿರುವ ಝೂನೋಟಿಕ್ ಬೆದರಿಕೆಗಳನ್ನು ನಿಯಂತ್ರಿಸಲು ರೋಗ ನಿಯಂತ್ರಣದಲ್ಲಿ ಅಂತರಶಿಸ್ತೀಯ ವಿಧಾನವನ್ನು ಸುಗಮಗೊಳಿಸುತ್ತದೆ.

ಈ ಕುರಿತು ಭಾರತದ ಯೋಜನೆಗಳು:

ಭಾರತದ ‘ಒನ್ ಹೆಲ್ತ್’ ದೃಷ್ಟಿಕೋನವು ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ (Food and Agriculture Organization of the United Nations -FAO)), ಪ್ರಾಣಿಗಳ ಆರೋಗ್ಯಕ್ಕಾಗಿ ವಿಶ್ವ ಸಂಸ್ಥೆ (the World Organisation for Animal Health -OIE)), ವಿಶ್ವ ಆರೋಗ್ಯ ಸಂಸ್ಥೆ (the World Health Organization – WHO) ಮತ್ತು ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮ (the United Nations Environment Programme -UNEP) – ವಿಶ್ವಸಂಸ್ಥೆಯ ಮಕ್ಕಳ ನಿಧಿ (United Nations Children’s Fund -UNICEF) ಮತ್ತು ‘ಒಂದು ವಿಶ್ವ ಒಂದು ಆರೋಗ್ಯ’ (One World, One Health) ಕ್ಕೆ ಕೊಡುಗೆ ನೀಡುವ ಉದ್ದೇಶದ ವಿಶ್ವಬ್ಯಾಂಕ್ ಬೆಂಬಲಿಸುವ ಜಾಗತಿಕ ಉಪಕ್ರಮವನ್ನು ಒಳಗೊಂಡ ತ್ರಿಪಕ್ಷೀಯ-ಪ್ಲಸ್ ಮೈತ್ರಿಕೂಟದ (agreement between the tripartite-plus alliance) ನಡುವಿನ ಒಪ್ಪಂದದಿಂದ ತನ್ನ ನೀಲನಕ್ಷೆಯನ್ನು ಪಡೆದುಕೊಂಡಿದೆ.

  1. ದೀರ್ಘಕಾಲೀನ ಉದ್ದೇಶಗಳಿಗೆ ಅನುಗುಣವಾಗಿ, ಭಾರತವು ಝೂನೋಸಸ್ ಗಳ ಬಗ್ಗೆ ರಾಷ್ಟ್ರೀಯ ಸ್ಥಾಯಿ ಸಮಿತಿಯನ್ನು 1980 ರ ದಶಕದಷ್ಟು ಹಿಂದೆಯೇ ಸ್ಥಾಪಿಸಿತು.
  2. ಈ ವರ್ಷ, ನಾಗ್ಪುರದಲ್ಲಿ ‘ಆರೋಗ್ಯಕ್ಕಾಗಿ ಒಂದು ಕೇಂದ್ರ’(Centre for One Health) ವನ್ನು ಸ್ಥಾಪಿಸಲು ಹಣವನ್ನು ಮಂಜೂರು ಮಾಡಲಾಗಿದೆ.
  3. ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆ (Department of Animal Husbandry and Dairying -DAHD) ಯು 2015 ರಿಂದ ಪ್ರಾಣಿಗಳ ಕಾಯಿಲೆಗಳ ಹರಡುವಿಕೆಯನ್ನು ತಗ್ಗಿಸಲು ಹಲವಾರು ಯೋಜನೆಗಳನ್ನು ಪ್ರಾರಂಭಿಸಿದೆ, ಅದರೊಂದಿಗೆ ಧನಸಹಾಯವನ್ನು ನೀಡಲಾಗುತ್ತದೆ. ಧನಸಹಾಯದ ವಿಧಾನವು (ಕೇಂದ್ರ: ರಾಜ್ಯ) 60:40, ಈಶಾನ್ಯ ರಾಜ್ಯಗಳಿಗೆ 90:10, ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ 100% ಧನಸಹಾಯ ನೀಡಲಾಗುತ್ತದೆ.

ಸಮನ್ವಯದ ಅವಶ್ಯಕತೆ:

ವಿಜ್ಞಾನಿಗಳು, 1.7 ದಶಲಕ್ಷಕ್ಕೂ ಹೆಚ್ಚು ವೈರಸ್‌ಗಳು ವನ್ಯಜೀವಿ ಆವಾಸಸ್ಥಾನಗಳಲ್ಲಿ ಪಸರಿಸುತ್ತಿವೆ ಎಂದು ಗಮನಿಸಿದ್ದಾರೆ, ಮತ್ತು ಅವುಗಳಲ್ಲಿ ಹೆಚ್ಚಿನವು  ಝೂನೋಟಿಕ್ ಆಗಿರುವ ಸಾಧ್ಯತೆಯಿದೆ, ಇವುಗಳನ್ನು ಸಮಯೋಚಿತವಾಗಿ ಪತ್ತೆ ಮಾಡದೇ ಹೋದರೆ, ಮುಂಬರುವ ದಿನಗಳಲ್ಲಿ ಭಾರತವು ಇನ್ನೂ ಅನೇಕ ಸಾಂಕ್ರಾಮಿಕ ರೋಗಗಳನ್ನು ಎದುರಿಸಬೇಕಾಗುತ್ತದೆ ಎಂಬುದನ್ನು ಇದು ಸೂಚಿಸುತ್ತದೆ.

ಈಗ ಮಾಡಬೇಕಿರುವುದೇನು?

  1. ಅಸ್ತಿತ್ವದಲ್ಲಿರುವ ಪ್ರಾಣಿಗಳ ಆರೋಗ್ಯ ಮತ್ತು ರೋಗ ಕಣ್ಗಾವಲು ವ್ಯವಸ್ಥೆಗಳನ್ನು ಕ್ರೋಡೀಕರಿಸುವುದು – ಉದಾ., ಪ್ರಾಣಿಗಳ ಉತ್ಪಾದಕತೆ ಮತ್ತು ಆರೋಗ್ಯಕ್ಕಾಗಿ ರಾಷ್ಟ್ರೀಯ ಪ್ರಾಣಿ ರೋಗ ವರದಿ ಮಾಡುವ ಮಾಹಿತಿ ಜಾಲ ವ್ಯವಸ್ಥೆ ಸ್ಥಾಪಿಸುವುದು.
  2. ಅನೌಪಚಾರಿಕ ಮಾರುಕಟ್ಟೆ ಮತ್ತು ಕಸಾಯಿಖಾನೆ ಕಾರ್ಯಾಚರಣೆಗಾಗಿ ಉತ್ತಮ-ಅಭ್ಯಾಸ ಮಾರ್ಗಸೂಚಿಗಳನ್ನು ಅಭಿವೃದ್ಧಿಪಡಿಸುವುದು (ಉದಾ., ತಪಾಸಣೆ, ರೋಗ ಹರಡುವಿಕೆಯ ಮೌಲ್ಯಮಾಪನಗಳು).
  3. ಗ್ರಾಮೀಣ ಮಟ್ಟದವರೆಗೆ ಪ್ರತಿ ಹಂತದಲ್ಲೂ ‘ಒಂದು ಆರೋಗ್ಯ’ ವ್ಯವಸ್ಥೆಯನ್ನು ಕಾರ್ಯಗತಗೊಳಿಸಲು ಕಾರ್ಯವಿಧಾನಗಳನ್ನು ರಚಿಸುವುದು.

one_health

 

ವಿಷಯಗಳು: ಪ್ರಮುಖ ಅಂತರರಾಷ್ಟ್ರೀಯ ಸಂಸ್ಥೆಗಳು, ಏಜೆನ್ಸಿಗಳು ಮತ್ತು ವೇದಿಕೆಗಳು, ಅವುಗಳ ರಚನೆ, ಆದೇಶ.

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿ:


(UN Human Rights Council)

ಸಂದರ್ಭ:

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಗೆ ಭಾರತವು ಭಾರೀ ಬಹುಮತದೊಂದಿಗೆ 6 ನೇ ಅವಧಿಗೆ ಮರು ಆಯ್ಕೆಯಾಗಿದೆ.

ಅದಲ್ಲದೆ, ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯು ಇಸ್ರೇಲ್ ವಿರುದ್ಧ ದೀರ್ಘಕಾಲದ ಪಕ್ಷಪಾತದ ಧೋರಣೆ ಹೊಂದಿದೆ ಮತ್ತು ಅಲ್ಲಿ ಸುಧಾರಣೆಯ ಎಂದು ಆರೋಪಿಸಿ ಟ್ರಂಪ್ ಆಡಳಿತವು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯನ್ನು ತ್ಯಜಿಸಿದ ಮೂರು ವರ್ಷಗಳ ನಂತರ ಅಮೆರಿಕ ಕೂಡ ಮತ್ತೆ UNHRC ಯನ್ನು ಸೇರಿಕೊಂಡಿದೆ.

ಹಿನ್ನೆಲೆ:

ಸಮಾನ ಪ್ರಾತಿನಿಧ್ಯವನ್ನು ಖಚಿತಪಡಿಸಿಕೊಳ್ಳಲು ಮಾನವ ಹಕ್ಕುಗಳ ಮಂಡಳಿಯ ಅಭ್ಯರ್ಥಿಗಳನ್ನು ಭೌಗೋಳಿಕ ಗುಂಪುಗಳಲ್ಲಿ ಆಯ್ಕೆ ಮಾಡಲಾಗುತ್ತದೆ.

ವಿಶ್ವಸಂಸ್ಥೆಯ ಮಾನವಹಕ್ಕುಗಳ ಮಂಡಳಿಯ ಕುರಿತು :

‘ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿ’ (UNHRC) ಅನ್ನು 2006 ರಲ್ಲಿ ಮರುಸಂಘಟಿಸಲಾಯಿತು, ಅದರ ನಿಕಟಪೂರ್ವ ಸಂಘಟನೆಯಾದ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಆಯೋಗದ ‘ವಿಶ್ವಾಸಾರ್ಹತೆಯ ಕೊರತೆಯನ್ನು’ ನಿವಾರಿಸಲು ಇದು ಸಹಾಯ ಮಾಡುತ್ತದೆ.

ಪ್ರಧಾನ ಕಛೇರಿ : ಸ್ವಿಟ್ಜರ್ಲೆಂಡ್‌ನ ಜಿನೀವಾದಲ್ಲಿದೆ.

ಸಂಯೋಜನೆ:

  1. ಪ್ರಸ್ತುತ, ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿ (UNHRC) 47 ಸದಸ್ಯರನ್ನು ಹೊಂದಿದೆ, ಮತ್ತು ಇಡೀ ವಿಶ್ವದ ಭೌಗೋಳಿಕ ಪ್ರಾತಿನಿಧ್ಯವನ್ನು ಖಚಿತಪಡಿಸಿಕೊಳ್ಳಲು ವಾರ್ಷಿಕ ಆಧಾರದ ಮೇಲೆ ಸ್ಥಾನಗಳನ್ನು ಹಂಚಿಕೆ ಮಾಡಲಾಗುತ್ತದೆ.
  2. ಪ್ರತಿ ಸದಸ್ಯರನ್ನು ಮೂರು ವರ್ಷಗಳ ಅವಧಿಗೆ ಆಯ್ಕೆ ಮಾಡಲಾಗುತ್ತದೆ.
  3. ಒಂದು ದೇಶಕ್ಕೆ ಒಂದು ಸ್ಥಾನವನ್ನು ಗರಿಷ್ಠ ಎರಡು ಬಾರಿ ಸತತವಾಗಿ ಹೊಂದಲು ಅವಕಾಶವಿದೆ. ಅಂದರೆ 2 ಕ್ಕಿಂತ ಹೆಚ್ಚು ಬಾರಿ ಸತತವಾಗಿ ಆಯ್ಕೆಯಾಗಲು ಅವಕಾಶವಿಲ್ಲ.

ಕಾರ್ಯಗಳು:

  1. ಮಂಡಳಿಯು, ವಿಶ್ವಸಂಸ್ಥೆಯ ಎಲ್ಲಾ 193 ಸದಸ್ಯ ರಾಷ್ಟ್ರಗಳ ‘ಸಾರ್ವತ್ರಿಕ ಆವರ್ತಕ ವಿಮರ್ಶೆ’ (Universal Periodic Review- UPR) ಮೂಲಕ ಮಾನವ ಹಕ್ಕುಗಳಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಕಡ್ಡಾಯವಲ್ಲದ / ಯಾವುದೇ ದೇಶದ ಮೇಲೆ ಬಂದನ ಕಾರಿಯಲ್ಲದ ನಿರ್ಣಯಗಳನ್ನು ರವಾನಿಸುತ್ತದೆ.
  2. ಇದು ನಿರ್ದಿಷ್ಟ ದೇಶಗಳಲ್ಲಿನ ಮಾನವ ಹಕ್ಕುಗಳ ಉಲ್ಲಂಘನೆಗಾಗಿ ತಜ್ಞರ ಮೂಲಕ ತನಿಖೆಯ ಪ್ರಗತಿಯನ್ನು ನೋಡಿಕೊಳ್ಳುತ್ತದೆ.

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯ ಮುಂದೆ ಇರುವ ಸವಾಲುಗಳು ಮತ್ತು ಸುಧಾರಣೆಗಳ ಅವಶ್ಯಕತೆ:

  1. ‘ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯ ಸದಸ್ಯ ರಾಷ್ಟ್ರಗಳಾದ ಸೌದಿ ಅರೇಬಿಯಾ, ಚೀನಾ ಮತ್ತು ರಷ್ಯಾಗಳ ಮಾನವ ಹಕ್ಕುಗಳ ದಾಖಲೆಗಳು ಮಂಡಳಿಯ ಉದ್ದೇಶ ಮತ್ತು ಧ್ಯೇಯಕ್ಕೆ ಹೊಂದಿಕೆಯಾಗುವುದಿಲ್ಲ, ಇದರಿಂದಾಗಿ ವಿಮರ್ಶಕರು ಪರಿಷತ್ತಿನ ಪ್ರಸ್ತುತತೆಯನ್ನು ಪ್ರಶ್ನಿಸುತ್ತಾರೆ.
  2. UNHRC ಯಲ್ಲಿ ಅನೇಕ ಪಾಶ್ಚಿಮಾತ್ಯ ದೇಶಗಳು ಭಾಗವಹಿಸುತ್ತಿದ್ದರೂ, ಅವರು ಮಾನವ ಹಕ್ಕುಗಳ ತಿಳುವಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಳ್ಳುತ್ತಿದ್ದಾರೆ.
  3. UNHRC ಯ ಕಾರ್ಯವೈಖರಿಗೆ ಸಂಬಂಧಿಸಿದಂತೆ ಅದರ ಆದೇಶಗಳನ್ನು ಪಾಲಿಸದಿರುವುದು ಗಂಭೀರ ವಿಷಯವಾಗಿದೆ.
  4. ಅಮೆರಿಕದಂತಹ ಪ್ರಬಲ ರಾಷ್ಟ್ರಗಳ ಭಾಗವಹಿಸುವಿಕೆಯ ಕೊರತೆ.

 

ವಿಷಯಗಳು: ಮೂಲಸೌಕರ್ಯ: ಇಂಧನ, ಬಂದರುಗಳು, ರಸ್ತೆಗಳು, ವಿಮಾನ ನಿಲ್ದಾಣಗಳು, ರೈಲ್ವೆ ಇತ್ಯಾದಿ.

PM ಗತಿಶಕ್ತಿ – ರಾಷ್ಟ್ರೀಯ ಮಾಸ್ಟರ್ ಪ್ಲಾನ್:


(PM GatiShakti — National Master Plan)

ಸಂದರ್ಭ:

ಇತ್ತೀಚಿಗೆ, ದೇಶದಲ್ಲಿ ಮೂಲಸೌಕರ್ಯ ಅಭಿವೃದ್ಧಿಗಾಗಿ ಪಿಎಂ ಗತಿಶಕ್ತಿ” (PM GatiShakti — National Master Plan)– ರಾಷ್ಟ್ರೀಯ ಮಾಸ್ಟರ್ ಪ್ಲಾನ್ಅನ್ನು ಪ್ರಾರಂಭಿಸಲಾಗಿದೆ.

  1. ಇದರ ಉದ್ದೇಶ ಮಲ್ಟಿಮೋಡಲ್ ಸಂಪರ್ಕವನ್ನು ಹೆಚ್ಚಿಸುವ ಮತ್ತು ಲಾಜಿಸ್ಟಿಕ್ಸ್ ವೆಚ್ಚವನ್ನು ಕಡಿಮೆ ಮಾಡುವುದಾಗಿದೆ.

PM ಗತಿಶಕ್ತಿಯ ಬಗ್ಗೆ:

PM ಗತಿಶಕ್ತಿಯು ರಸ್ತೆ ಮತ್ತು ಹೆದ್ದಾರಿಗಳು, ರೈಲ್ವೇಗಳು, ಶಿಪ್ಪಿಂಗ್, ಪೆಟ್ರೋಲಿಯಂ ಮತ್ತು ಗ್ಯಾಸ್, ಪವರ್, ಟೆಲಿಕಾಂ, ಶಿಪ್ಪಿಂಗ್ ಮತ್ತು ವಾಯುಯಾನ ಸೇರಿದಂತೆ 16 ಸಚಿವಾಲಯಗಳನ್ನು ಸಂಪರ್ಕಿಸುವ ಸಮಗ್ರ ಡಿಜಿಟಲ್ ವೇದಿಕೆಯಾಗಿದೆ.

ಇದು ಒಂದು ಸಮಗ್ರ ಯೋಜನೆಯಾಗಿದೆ ಮತ್ತು ಮೂಲಸೌಕರ್ಯ ಯೋಜನೆಗಳ ಅನುಷ್ಠಾನವನ್ನು ಖಚಿತಪಡಿಸುವ ಗುರಿಯನ್ನು ಹೊಂದಿದೆ.

ಒದಗಿಸಲಾಗುವ ಸೇವೆಗಳು:

  1. ರಸ್ತೆಗಳು, ಹೆದ್ದಾರಿಗಳು, ರೈಲ್ವೇಗಳು ಮತ್ತು ಟೋಲ್ ಪ್ಲಾಜಾಗಳಂತಹ ಮೂಲಸೌಕರ್ಯಗಳನ್ನೂ ಒಳಗೊಂಡಂತೆ 200 ಪದರಗಳ ಭೌಗೋಳಿಕ ದತ್ತಾಂಶವನ್ನು ಪೋರ್ಟಲ್ ನೀಡುತ್ತದೆ, ಜೊತೆಗೆ ಅರಣ್ಯಗಳು, ನದಿಗಳು ಮತ್ತು ಜಿಲ್ಲಾ ಗಡಿಗಳ ಬಗ್ಗೆ ಭೌಗೋಳಿಕ ಮಾಹಿತಿಯನ್ನು ಒದಗಿಸುತ್ತದೆ ಹಾಗೂ ಯೋಜನೆ ರೂಪಿಸಲು ಮತ್ತು ಕ್ಲಿಯರೆನ್ಸ್ ಪಡೆಯಲು ಸಹಾಯ ಮಾಡುತ್ತದೆ.
  2. ಈ ಪೋರ್ಟಲ್ ವಿವಿಧ ಸರ್ಕಾರಿ ಇಲಾಖೆಗಳನ್ನು ನೈಜ ಸಮಯದಲ್ಲಿ ಮತ್ತು ಒಂದು ಕೇಂದ್ರೀಕೃತ ಸ್ಥಳದಲ್ಲಿ, ವಿಶೇಷವಾಗಿ ವಿವಿಧ ವಲಯಗಳ ಮತ್ತು ಬಹು-ಪ್ರಾದೇಶಿಕ ಪ್ರಭಾವ ಹೊಂದಿರುವ ವಿವಿಧ ಯೋಜನೆಗಳ ಪ್ರಗತಿಯನ್ನು ಪತ್ತೆಹಚ್ಚಲು ಅನುಮತಿಸುತ್ತದೆ.

ಮಹತ್ವ:

PM- ಗತಿಶಕ್ತಿಯ ಉದ್ದೇಶವು, ಎಲ್ಲಾ ಇಲಾಖೆಗಳು ಪರಸ್ಪರ ಯೋಜನೆಗಳನ್ನು ಸೂಕ್ಷ್ಮವಾಗಿ ಮೇಲ್ವಿಚಾರಣೆ ಮಾಡಲು ಮತ್ತು ಯೋಜನೆಗಳ ಸಮಗ್ರ ಯೋಜನೆ ಮತ್ತು ಕಾರ್ಯಗತಗೊಳಿಸುವಿಕೆಯ ಸಮಯದಲ್ಲಿ ನಿರ್ಣಾಯಕ ಡೇಟಾವನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ಪ್ರತಿಯೊಂದು ಇಲಾಖೆಯು ಪರಸ್ಪರ ಚಟುವಟಿಕೆಗಳನ್ನು ಮುಂದುವರಿಸುವುದನ್ನು ಖಚಿತಪಡಿಸಿಕೊಳ್ಳುವ ಒಂದು ಕೇಂದ್ರೀಕೃತ ಪೋರ್ಟಲ್ ಆಗಿದೆ.

  1. ಈ ಮೂಲಕ, ವಿವಿಧ ಇಲಾಖೆಗಳು ವಿವಿಧ ಕ್ಷೇತ್ರಗಳೊಂದಿಗಿನ ಪರಸ್ಪರ ಕ್ರಿಯೆಯ ಮೂಲಕ ತಮ್ಮ ಯೋಜನೆಗಳಿಗೆ ಆದ್ಯತೆ ನೀಡಲು ಸಾಧ್ಯವಾಗುತ್ತದೆ.
  2. ಈ ಬಹುಮಾದರಿ ಸಂಪರ್ಕ ವ್ಯವಸ್ಥೆಯು ಕೊನೆಯ ಮೈಲಿ ಸಂಪರ್ಕವನ್ನು ಹೆಚ್ಚಿಸುತ್ತದೆ ಮತ್ತು ಸಮಗ್ರ ಯೋಜನೆ ಮತ್ತು ಜಾರಿಗೊಳಿಸುವಿಕೆಯ ಅತಿಕ್ರಮಣಗಳನ್ನು ಕಡಿಮೆ ಮಾಡುವ ಮೂಲಕ ಲಾಜಿಸ್ಟಿಕ್ಸ್ ವೆಚ್ಚವನ್ನು ತಗ್ಗಿಸುತ್ತದೆ. ಅಥವಾ
  3. ಮಲ್ಟಿ-ಮೋಡಲ್ ಸಂಪರ್ಕವು ಜನರು, ಸರಕು ಮತ್ತು ಸೇವೆಗಳನ್ನು ಒಂದು ಸಾರಿಗೆ ವಿಧಾನದಿಂದ ಇನ್ನೊಂದಕ್ಕೆ ಸಾಗಿಸಲು ಸಮಗ್ರ ಮತ್ತು ತಡೆರಹಿತ ಸಂಪರ್ಕವನ್ನು ಒದಗಿಸುತ್ತದೆ. ಈ ಕ್ರಮವು ಮೂಲಸೌಕರ್ಯಕ್ಕೆ ಕೊನೆಯ ಮೈಲಿ ಸಂಪರ್ಕವನ್ನು ಸುಗಮಗೊಳಿಸುತ್ತದೆ ಮತ್ತು ಪ್ರಯಾಣದ ಸಮಯವನ್ನು ಕಡಿಮೆ ಮಾಡುತ್ತದೆ.

ಇದರ ಅಗತ್ಯತೆ:

ವಿವಿಧ ಇಲಾಖೆಗಳ ನಡುವೆ ತೀವ್ರ ಸಮನ್ವಯದ ಕೊರತೆ ಯಿಂದಾಗಿ ಕಳೆದ ಹಲವು ದಶಕಗಳಲ್ಲಿ, ಲೆಕ್ಕವಿಲ್ಲದಷ್ಟು ಸಮಸ್ಯೆಗಳು ಭಾರತದಲ್ಲಿ ಮೂಲಸೌಕರ್ಯಗಳನ್ನು ನಿರ್ಮಿಸುವ ಮಾರ್ಗದಲ್ಲಿ ಬಂದಿವೆ.

  1. ಉದಾಹರಣೆಗೆ, ಒಮ್ಮೆ ರಸ್ತೆ ನಿರ್ಮಿಸಿದ ನಂತರ, ಇತರ ಏಜೆನ್ಸಿಗಳು ಭೂಗತ ಕೇಬಲ್‌ಗಳು, ಗ್ಯಾಸ್ ಪೈಪ್‌ಲೈನ್‌ ಅಳವಡಿಸುವ ಇತ್ಯಾದಿ ಚಟುವಟಿಕೆಗಳಿಗಾಗಿ ನಿರ್ಮಿಸಿದ ರಸ್ತೆಯನ್ನು ಪುನಃ ಅಗೆಯುತ್ತವೆ. ಇದು ದೇಶದ ರಸ್ತೆ ಮೂಲಸೌಕರ್ಯ ಮತ್ತು ಸಂಚಾರದ ಮೇಲೆ ತೀವ್ರ ಪರಿಣಾಮ ಬೀರಿದೆ.
  2. ಅಲ್ಲದೆ, ಭಾರತದಲ್ಲಿ ಲಾಜಿಸ್ಟಿಕ್ಸ್ ವೆಚ್ಚಗಳು ಜಿಡಿಪಿಯ ಸುಮಾರು 13-14% ರಷ್ಟಿದ್ದು, ಅಭಿವೃದ್ಧಿ ಹೊಂದಿದ ಆರ್ಥಿಕತೆಗಳಲ್ಲಿ ಜಿಡಿಪಿಯ 7-8% ರಷ್ಟಿದೆ. ಹೆಚ್ಚಿನ ಲಾಜಿಸ್ಟಿಕ್ಸ್ ವೆಚ್ಚಗಳು ಆರ್ಥಿಕತೆಯೊಳಗೆ ವೆಚ್ಚದ ರಚನೆಗಳ ಮೇಲೆ ಪರಿಣಾಮ ಬೀರುತ್ತವೆ ಮತ್ತು ರಫ್ತುದಾರರಿಗೆ ಖರೀದಿದಾರರಿಗೆ ಸರಕುಗಳನ್ನು ಸಾಗಿಸಲು ಮತ್ತು ಕೊಳ್ಳಲು ಇದು ಹೆಚ್ಚು ದುಬಾರಿಯಾಗಿದೆ.

 


ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:


 ಸಂಪತ್ತು ಮರುಹಂಚಿಕೆ ಮಂಡಳಿ:

(Wealth redistribution council)

ಜಪಾನ್‌ನ ಹೊಸ ಪ್ರಧಾನ ಮಂತ್ರಿ ಫುಮಿಯೊ ಕಿಶಿದಾ (Fumio Kishida)ಈ ಪ್ರಮುಖ ಸಂಪತ್ತು ಮರುಹಂಚಿಕೆ ಮಂಡಳಿ(Wealth redistribution council) ಯನ್ನು ಅನಾವರಣಗೊಳಿಸಿದ್ದಾರೆ.

ಉದ್ದೇಶ: ಈ ಮಂಡಳಿಯು ಸಂಪತ್ತಿನ ಅಸಮಾನತೆಯನ್ನು ಹೇಗೆ ನಿಭಾಯಿಸುವುದು ಮತ್ತು ಸಂಪತ್ತನ್ನು ಮನೆಗಳಿಗೆ ಮರುಹಂಚಿಕೆ ಮಾಡುವುದು ಹೇಗೆ ಎಂದು ಕಾರ್ಯತಂತ್ರ ರೂಪಿಸುವ ಜವಾಬ್ದಾರಿಯನ್ನು ಹೊಂದಿದೆ.

ಸಂಯೋಜನೆ: ಸಂಪತ್ತು ಮರುಹಂಚಿಕೆ ಸಮಿತಿಯು ಖಾಸಗಿ ವಲಯದ ಮಂತ್ರಿಗಳು ಮತ್ತು ಪ್ರತಿನಿಧಿಗಳ ಮಿಶ್ರಣವನ್ನು ಒಳಗೊಂಡಿರುತ್ತದೆ. ಖಾಸಗಿ ವಲಯದ ಸದಸ್ಯರಲ್ಲಿ ಕನಿಷ್ಠ ಏಳು ಜನ ಮಹಿಳೆಯರಾಗಿರಬೇಕು.

 

ಅರ್ಥಶಾಸ್ತ್ರದ ನೊಬೆಲ್:

2021 ರ ಆರ್ಥಿಕ ವಿಜ್ಞಾನದ ನೊಬೆಲ್ ಪ್ರಶಸ್ತಿಯನ್ನು ಜಂಟಿಯಾಗಿ ಕೆನಡಾದ ಮೂಲದ ಡೇವಿಡ್ ಕಾರ್ಡ್‌ (David Card) ಗೆ ಮತ್ತು ಇಸ್ರೇಲಿ-ಅಮೇರಿಕನ್ ಜೋಶುವಾ ಡಿ ಆಂಗ್ರಿಸ್ಟ್ (Joshua D Angrist) ಮತ್ತು ಡಚ್-ಅಮೇರಿಕನ್ ಗೈಡೊ ಡಬ್ಲ್ಯೂ ಇಂಬೆನ್ಸ್‌ (Guido W Imbens)ಗೆ ನೀಡಲಾಗಿದೆ. ಬಹುಮಾನದ ಶೇಕಡಾ 50 ಡೇವಿಡ್ ಕಾರ್ಡ್ ಅವರಿಗೆ ಮತ್ತು ಇನ್ನರ್ಧ ಭಾಗವನ್ನು ಇಸ್ರೇಲಿ-ಅಮೇರಿಕನ್ ಮತ್ತು ಡಚ್ ಅಮೆರಿಕನ್ ಜೋಡಿಗೆ ನೀಡಲಾಗಿದೆ.

ಕಾರ್ಮಿಕ ಮಾರುಕಟ್ಟೆಗಳ ಮೇಲೆ ಕನಿಷ್ಠ ವೇತನ, ವಲಸೆ ಮತ್ತು ಶಿಕ್ಷಣದ ಪ್ರಭಾವದ ಮೇಲೆ “ನೈಸರ್ಗಿಕ ಪ್ರಯೋಗಗಳ ಬಳಕೆ”ಎಂಬ ಅವರ ಕೆಲಸಕ್ಕಾಗಿ ಅವರಿಗೆ ನೋಬೆಲ್ ಬಹುಮಾನವನ್ನು ನೀಡಲಾಗಿದೆ.

  1. ಕಾರ್ಮಿಕ ಅರ್ಥಶಾಸ್ತ್ರಕ್ಕೆ ನೀಡಿದ ಪ್ರಾಯೋಗಿಕ ಕೊಡುಗೆಗಳಿಗಾಗಿ ಡೇವಿಡ್ ಕಾರ್ಡ್ ಅವರನ್ನು ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ.
  2. ಜೋಶುವಾ ಡಿ ಆಂಗ್ರಿಸ್ಟ್ ಮತ್ತು ಗೈಡೋ ಡಬ್ಲ್ಯೂ ಇಂಬೆನ್ಸ್ ಅವರು “ಸಾಂದರ್ಭಿಕ ಸಂಬಂಧಗಳ ವಿಶ್ಲೇಷಣೆಗೆ ನೀಡಿದ ಕ್ರಮಬದ್ಧವಾದ ಕೊಡುಗೆಗಳಿಗಾಗಿ” ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ.

current affairscurrent affairs

 

ಯುಫಿಲ್: (UFill)

ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಅಡಿಯಲ್ಲಿನ ಒಂದು PSU ಆಗಿರುವ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (BPCL) “UFill” ಡಿಜಿಟಲ್ ಗ್ರಾಹಕರ ಅನುಭವ ಯೋಜನೆಯನ್ನು ಪ್ರಾರಂಭಿಸುವುದಾಗಿ ಘೋಷಿಸಿದೆ.

  1. UFill ಯೋಜನೆಯನ್ನು ಭಾರತದ 65 ನಗರಗಳಲ್ಲಿ ಪ್ರಾರಂಭಿಸಲಾಗಿದೆ ಮತ್ತು ಶೀಘ್ರದಲ್ಲೇ ದೇಶದಾದ್ಯಂತ ವಿಸ್ತರಿಸಲಾಗುವುದು.
  2. ತಂತ್ರಜ್ಞಾನವು ಗ್ರಾಹಕರಿಗೆ ಇಂಧನ ನಿಯಂತ್ರಣವನ್ನು ನೀಡುತ್ತದೆ ಮತ್ತು ವಿತರಣಾ ಘಟಕವು ಮುಂಚಿತವಾಗಿ ಪಾವತಿಸಿದ ಇಂಧನದ ಮೌಲ್ಯವನ್ನು ಸ್ವಯಂಚಾಲಿತವಾಗಿ ಮೊದಲೇ ಪಡೆಯುತ್ತದೆ ಮತ್ತು ಮಾರಾಟದ ಹಂತದಲ್ಲಿ ಯಾವುದೇ ಮಾನವ ಚಾಲಿತ ಹಸ್ತಕ್ಷೇಪವನ್ನು ಕಡಿಮೆ ಮಾಡುತ್ತದೆ.

 

ಡ್ರಾಸ್: (Drass)

  1. ಡ್ರಾಸ್ ಅನ್ನು ಲಡಾಕ್ ನ ಹೆಬ್ಬಾಗಿಲು” (the Gateway to Ladakh) ಎಂದು ಕರೆಯಲಾಗುತ್ತದೆ ಮತ್ತು ಇದು ಎತ್ತರದ ಟ್ರೆಕ್ಕಿಂಗ್ ಮಾರ್ಗಗಳು ಮತ್ತು ಪ್ರವಾಸಿ ತಾಣಗಳಿಗೆ ಪ್ರಸಿದ್ಧವಾಗಿದೆ.
  2. ಇದು ಒಂದು ಆಯಕಟ್ಟಿನ ಮಹತ್ವದ ಸೇನಾ ಕೇಂದ್ರವಾಗಿದ್ದು, ಭಾರತೀಯ ಸೇನಾ ಸಿಬ್ಬಂದಿ ಗಡಿರೇಖೆಯನ್ನು ಕಾಪಾಡಲು ವರ್ಷಪೂರ್ತಿ ಎತ್ತರದ ಪರ್ವತಗಳು ಮತ್ತು ಘನೀಕರಿಸುವ ತಾಪಮಾನವನ್ನು ಧೈರ್ಯದಿಂದ ಎದುರಿಸಬೇಕಾಗುತ್ತದೆ.
  3. ಇದು ವಿಶ್ವದ ಅತ್ಯಂತ ತಂಪಾದ ಸ್ಥಳಗಳಲ್ಲಿ ಒಂದಾಗಿದೆ, ಅಲ್ಲಿ ತಾಪಮಾನವು -40 ° C ಗಿಂತ ಕಡಿಮೆಮಾಡುತ್ತದೆ
  4. ಜೋಜಿಲಾ ಪಾಸ್ ಮತ್ತು ಕಾರ್ಗಿಲ್ ಪಟ್ಟಣದ ನಡುವೆ ಇರುವ, ಡ್ರಾಸ್ ನಲ್ಲಿನ ಸರಾಸರಿ ತಾಪಮಾನವು ಚಳಿಗಾಲದಲ್ಲಿ -20 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆ ಇರುತ್ತದೆ ಮತ್ತು ಇದನ್ನು ಸಾಮಾನ್ಯವಾಗಿ ಭಾರತದಲ್ಲಿ ಅತ್ಯಂತ ಶೀತಲ ಆವಾಸಸ್ಥಳಎಂದು ಕರೆಯಲಾಗುತ್ತದೆ.

ಸುದ್ದಿಯಲ್ಲಿರಲು ಕಾರಣ?

ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಈ ಬಾರಿ ಕಾರ್ಗಿಲ್‌ನ ಡ್ರಾಸ್ ಪ್ರದೇಶದಲ್ಲಿ ಭಾರತೀಯ ಸೇನೆಯ ಸೈನಿಕರೊಂದಿಗೆ ದಸರಾ ಹಬ್ಬವನ್ನು ಆಚರಿಸಿದರು.


Join our Official Telegram Channel HERE for Motivation and Fast Updates

Subscribe to our YouTube Channel HERE to watch Motivational and New analysis videos

[ad_2]

Leave a Comment