[Mission 2022] ದೈನಂದಿನ ಪ್ರಚಲಿತ ಘಟನೆಗಳು ದಿನಾಂಕ – 23 ನೇ ಸೆಪ್ಟೆಂಬರ್ 2021 – INSIGHTSIAS

[ad_1]

 

ಪರಿವಿಡಿ:

 

ಸಾಮಾನ್ಯ ಅಧ್ಯಯನ ಪತ್ರಿಕೆ 2:

1. ಸಂಸದೀಯ ಸವಲತ್ತುಗಳು.

2. ಭಾರತೀಯ ಸಂದರ್ಭದಲ್ಲಿ ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿಯ ಕಾರ್ಯನಿರ್ವಹಣೆ.

3. ಎಬೋಲಾ ಸೋಂಕಿನಿಂದ ಬದುಕುಳಿದವರು ಭವಿಷ್ಯದಲ್ಲಿ ಅದರ ಏಕಾಏಕಿ ಸ್ಪೋಟಕ್ಕೆ ಕಾರಣವಾಗಬಹುದು.

4. ಮೊನೊಕ್ಲೋನಲ್ ಆಂಟಿಬಾಡಿ ಚಿಕಿತ್ಸೆ.

5. ಆಫ್ರಿಕನ್ ಹಂದಿ ಜ್ವರ.

 

ಸಾಮಾನ್ಯ ಅಧ್ಯಯನ ಪತ್ರಿಕೆ 3:

1. ಏಕ-ಬಳಕೆಯ ಪ್ಲಾಸ್ಟಿಕ್‌ಗಳಿಗೆ ಪರ್ಯಾಯ.

 

ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:

1. WHO ದ ಜಾಗತಿಕ ವಾಯು ಮಾಲಿನ್ಯ ಮಾನದಂಡಗಳು.

 


ಸಾಮಾನ್ಯ ಅಧ್ಯಯನ ಪತ್ರಿಕೆ : 2


 

ವಿಷಯಗಳು: ಸಂಸತ್ತು ಮತ್ತು ರಾಜ್ಯ ಶಾಸಕಾಂಗಗಳು – ರಚನೆ, ಕಾರ್ಯವೈಖರಿ, ವ್ಯವಹಾರದ ನಡಾವಳಿಗಳು, ಅಧಿಕಾರಗಳು ಮತ್ತು ಸವಲತ್ತುಗಳು ಮತ್ತು ಇವುಗಳಿಂದ ಉಂಟಾಗುವ ಸಮಸ್ಯೆಗಳು.

ಸಂಸದೀಯ ಸವಲತ್ತುಗಳು:


(Parliamentary Privileges)

ಸಂದರ್ಭ:

ಇತ್ತೀಚೆಗೆ, ಉಪರಾಷ್ಟ್ರಪತಿ ಮತ್ತು ರಾಜ್ಯಸಭೆಯ ಅಧ್ಯಕ್ಷ ಎಂ ವೆಂಕಯ್ಯ ನಾಯ್ಡು ಅವರು ಸಂಸತ್ತಿನ ಕಲಾಪಗಳಿಗೆ ಅಡ್ಡಿಪಡಿಸುವುದು ಸದನದ ಅವಹೇಳನಕ್ಕೆ ಸಮಾನವಾಗಿದೆ ಮತ್ತು ಇದನ್ನು ಸವಲತ್ತು ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ದೇಶದಲ್ಲಿ ಮೊದಲ ಬಾರಿಗೆ ಶಾಸಕಾಂಗದ ಅಧ್ಯಕ್ಷರು ‘ಸಂಸತ್ತಿನಲ್ಲಿ ಅಡಚಣೆ’ಗಳ ವಿಚಾರದ ಕುರಿತು ಸಾರ್ವಜನಿಕ ಹೇಳಿಕೆ ನೀಡಿದ್ದಾರೆ.

ರಾಜ್ಯಸಭೆಯ ಉತ್ಪಾದಕತೆ:

  1. 1978 ರಿಂದ, ‘ರಾಜ್ಯಸಭೆಯ ಉತ್ಪಾದಕತೆ’ ಯನ್ನು ಪ್ರಮಾಣಿಕರಿಸಲಾಗುತ್ತಿದೆ. 1996 ರವರೆಗಿನ ಆರಂಭಿಕ 19 ವರ್ಷಗಳಲ್ಲಿ, ಸದನದ ಉತ್ಪಾದಕತೆಯು 100 ಪ್ರತಿಶತಕ್ಕಿಂತ ಹೆಚ್ಚಿತ್ತು, ಆದರೆ ಅಂದಿನಿಂದ ಉತ್ಪಾದಕತೆಯು ಕುಸಿಯಲಾರಂಭಿಸಿದೆ.
  2. ಈ 19 ವರ್ಷಗಳ ಮೊದಲ 16 ವರ್ಷಗಳಲ್ಲಿ, ಸದನದ ಉತ್ಪಾದಕತೆ ವರ್ಷಕ್ಕೆ 100 ಪ್ರತಿಶತಕ್ಕಿಂತ ಹೆಚ್ಚು ಇತ್ತು, ನಂತರ ಕಳೆದ 24 ವರ್ಷಗಳಲ್ಲಿ 100 ಪ್ರತಿಶತ ಉತ್ಪಾದಕತೆಯನ್ನು ಸಾಧಿಸಿದ್ದು, 1998 ಮತ್ತು 2009 ವರ್ಷಗಳಲ್ಲಿ ಮಾತ್ರ. ರಾಜ್ಯಸಭೆಯು ಕಳೆದ 12 ವರ್ಷಗಳಲ್ಲಿ ಒಮ್ಮೆಯೂ 100% ಉತ್ಪಾದಕತೆಯನ್ನು ತಲುಪಿಲ್ಲ.

‘ಸಂಸದೀಯ ಸವಲತ್ತುಗಳು’ ಯಾವುವು?

ಸಂಸದೀಯ ಸವಲತ್ತುಗಳು (Parliamentary Privileges), ಮೂಲತಃ ಸದನದ ಸದಸ್ಯರು ವೈಯಕ್ತಿಕವಾಗಿ ಮತ್ತು ಸಾಮೂಹಿಕವಾಗಿ ಅನುಭವಿಸುವ ಹಕ್ಕುಗಳು ಮತ್ತು ವಿನಾಯಿತಿಗಳನ್ನು ಉಲ್ಲೇಖಿಸುತ್ತವೆ. ಈ ಹಕ್ಕುಗಳ ಅಡಿಯಲ್ಲಿ, ಸದನದ ಸದಸ್ಯರ ವಿರುದ್ಧ ಅಥವಾ ಅವರ ಶಾಸಕಾಂಗ ಕಟ್ಟುಪಾಡುಗಳನ್ನು ಪೂರೈಸುವ ಸಂದರ್ಭದಲ್ಲಿ ನೀಡಲಾದ ಹೇಳಿಕೆಗಳ ವಿರುದ್ಧ ಯಾವುದೇ ನಾಗರಿಕ ಅಥವಾ ಕ್ರಿಮಿನಲ್ ಕ್ರಮಗಳನ್ನು ತೆಗೆದುಕೊಳ್ಳಲಾಗುವುದಿಲ್ಲ. ಅಂದರೆ ಅವರಿಗೆ ನಾಗರಿಕ ಅಥವಾ ಅಪರಾಧ ಹೊಣೆಗಾರಿಕೆಯ ವಿರುದ್ಧ ರಕ್ಷಣೆ ನೀಡಲಾಗುತ್ತದೆ, ಇದರಿಂದಾಗಿ ಅವರು “ತಮ್ಮ ಕಾರ್ಯಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಬಹುದು”.

ಸಂಸದೀಯ ಸವಲತ್ತುಗಳಿಗೆ ಸಂಬಂಧಿಸಿದ ಸಾಂವಿಧಾನಿಕ ನಿಬಂಧನೆಗಳು:

  1. ಸಂವಿಧಾನದ 105 ನೇ ಪರಿಚ್ಛೇದದ ಅಡಿಯಲ್ಲಿ, ಭಾರತೀಯ ಸಂಸತ್ತು, ಅದರ ಸದಸ್ಯರು ಮತ್ತು ಸಮಿತಿಗಳ ಸವಲತ್ತುಗಳನ್ನು ಉಲ್ಲೇಖಿಸಲಾಗಿದೆ. ಸಂವಿಧಾನದ 105 ನೇ ವಿಧಿಯು ಎರಡು ಸವಲತ್ತುಗಳನ್ನು ಸ್ಪಷ್ಟವಾಗಿ ಉಲ್ಲೇಖಿಸುತ್ತದೆ. ಅವುಗಳೆಂದರೆ: ಸಂಸತ್ತಿನಲ್ಲಿ ವಾಕ್ ಸ್ವಾತಂತ್ರ್ಯ ಮತ್ತು ಅದರ ನಡಾವಳಿಗಳನ್ನು ಪ್ರಕಟಿಸುವ ಹಕ್ಕು.
  2. 1908 ರ ಸಿವಿಲ್ ಪ್ರೊಸೀಜರ್ ಸಂಹಿತೆಯಲ್ಲಿ, ಸಂವಿಧಾನದಲ್ಲಿ ನಿರ್ದಿಷ್ಟಪಡಿಸಿದ ಸವಲತ್ತುಗಳ ಹೊರತಾಗಿ, ಸದನಗಳ ಸಭೆ ಅಥವಾ ಅದರ ಸಮಿತಿಯ ಸಭೆಯ ಸಮಯದಲ್ಲಿ ಅದು ಪ್ರಾರಂಭವಾಗುವ ನಲವತ್ತು ದಿನಗಳ ಮೊದಲು ಮತ್ತು ಮುಕ್ತಾಯಗೊಂಡ ನಲವತ್ತು ದಿನಗಳ ನಂತರ ನಾಗರಿಕ ಕಾರ್ಯವಿಧಾನದಡಿಯಲ್ಲಿ ಸದಸ್ಯರನ್ನು ಬಂಧಿಸುವುದರಿಂದ ಮತ್ತು ಸುಪರ್ದಿಗೆ ಪಡೆಯುವುದರಿಂದ ಸ್ವಾತಂತ್ರ್ಯಮತ್ತು ಅವಕಾಶವನ್ನು ಕಲ್ಪಿಸಲಾಗಿದೆ.
  3. ಅದೇ ರೀತಿ ಸಂವಿಧಾನದ 194 ನೇ ವಿಧಿಯು ರಾಜ್ಯ ಶಾಸಕಾಂಗಗಳು, ಅದರ ಸದಸ್ಯರು ಮತ್ತು ಸಮಿತಿಗಳು ಪಡೆದ ಅಧಿಕಾರಗಳು, ಸವಲತ್ತುಗಳು ಮತ್ತು ವಿನಾಯಿತಿಗಳನ್ನು ಕುರಿತು ಹೇಳುತ್ತದೆ.

ಸವಲತ್ತು ಉಲ್ಲಂಘನೆ ಎಂದರೇನು?

ಸವಲತ್ತು ಉಲ್ಲಂಘನೆಯ ನಿರ್ಣಯ ಮತ್ತು ಅದು ಆಕರ್ಷಿಸುವ ದಂಡದ ಬಗ್ಗೆ ಸ್ಪಷ್ಟ, ಅಧಿಸೂಚಿತ ನಿಯಮಗಳಿಲ್ಲ.

  1. ಸಾಮಾನ್ಯವಾಗಿ, ಸಂಸತ್ತಿನ ಸದನದ ಕಾರ್ಯ ಕಲಾಪಗಳಿಗೆ ನೇರವಾಗಿ ಅಥವಾ ಪರೋಕ್ಷವಾಗಿ ಅಡ್ಡಿಯುಂಟುಮಾಡುವ ಅಥವಾ ತಡೆಯೊಡ್ಡುವ ಅಥವಾ ಸಂಸತ್ತಿನ ಸದಸ್ಯ ಅಥವಾ ಅಧಿಕಾರಿಯು ಕರ್ತವ್ಯಗಳನ್ನು ನಿರ್ವಹಿಸಲು ಅಡ್ಡಿಯಾಗುವ ಯಾವುದೇ ಕಾರ್ಯವನ್ನು ಸವಲತ್ತು ಉಲ್ಲಂಘನೆ ಎಂದು ಪರಿಗಣಿಸಲಾಗುತ್ತದೆ.
  2. ಸದನ, ಅದರ ಸಮಿತಿಗಳು ಅಥವಾ ಸದಸ್ಯರ ಭಾಷಣಗಳು, ಸ್ಪೀಕರ್‌ನ ಕರ್ತವ್ಯಗಳನ್ನು ಪಾಲಿಸುವಲ್ಲಿ ಅವರ ನಿಷ್ಪಕ್ಷಪಾತವಾದ ಪಾತ್ರವನ್ನು ಪ್ರಶ್ನಿಸುವುದು, ಸದನದಲ್ಲಿ ಸದಸ್ಯರ ನಡವಳಿಕೆಯನ್ನು ಖಂಡಿಸುವುದು, ಸದನದ ನಡಾವಳಿಗಳ ಕುರಿತು ಸುಳ್ಳು ಪ್ರಕಟಣೆ ನೀಡಿ, ಮಾನ ಹಾನಿ ಉಂಟುಮಾಡುವುದು ಇತ್ಯಾದಿಗಳು.
  3. ಯಾವುದೇ ಸದನದ ಯಾವುದೇ ಸದಸ್ಯರಿಂದ ಸವಲತ್ತು ಉಲ್ಲಂಘನೆ ಮಾಡಿದ ತಪ್ಪಿತಸ್ಥ ವ್ಯಕ್ತಿಯ ವಿರುದ್ಧ ಚಲನೆಯ (ಹಕ್ಕುಚ್ಯುತಿ) ರೂಪದಲ್ಲಿ ನೋಟಿಸ್ ಸಲ್ಲಿಸಬಹುದು.

ಲೋಕಸಭೆಯ ಸ್ಪೀಕರ್ / ರಾಜ್ಯಸಭೆಯ ಅಧ್ಯಕ್ಷರ ಪಾತ್ರ:

ಸವಲತ್ತು ಉಲ್ಲಂಘನೆಯ ಚಲನೆಯನ್ನು ಪರಿಶೀಲಿಸಲು, ಲೋಕಸಭೆಯ ಸ್ಪೀಕರ್ / ರಾಜ್ಯಸಭೆಯ ಅಧ್ಯಕ್ಷರು ಮೊದಲ ಹಂತ.

ಲೋಕಸಭೆಯ ಸ್ಪೀಕರ್ / ರಾಜ್ಯಸಭೆಯ ಅಧ್ಯಕ್ಷರು ಅವರು, ಸವಲತ್ತುಗಳ ಚಲನೆಯನ್ನು ಸ್ವತಃ ನಿರ್ಧರಿಸಬಹುದು ಅಥವಾ ಅದನ್ನು ಸಂಸತ್ತಿನ ಸವಲತ್ತುಗಳ ಸಮಿತಿಗೆ ಉಲ್ಲೇಖಿಸಬಹುದು.

  1. ಲೋಕಸಭೆಯ ಸ್ಪೀಕರ್ / ರಾಜ್ಯಸಭೆಯ ಅಧ್ಯಕ್ಷರು ಸಂಬಂಧಿತ ನಿಯಮಗಳ ಅಡಿಯಲ್ಲಿ ಚಲನೆಯನ್ನು ಒಪ್ಪಿದರೆ, ಸಂಬಂಧಪಟ್ಟ ಸದಸ್ಯರಿಗೆ ಚಲನೆಯನ್ನು ಉಲ್ಲೇಖಿಸಿ ಸಂಕ್ಷಿಪ್ತ ಹೇಳಿಕೆ ನೀಡಲು ಅವಕಾಶ ನೀಡಲಾಗುತ್ತದೆ.

ಅನ್ವಯಿಸುವಿಕೆ:

  1. ಸಂವಿಧಾನವು, ಸಂಸತ್ತಿನ ಸದನ ಅಥವಾ ಅದರ ಯಾವುದೇ ಸಮಿತಿಯ ವಿಚಾರಣೆಯಲ್ಲಿ ಮಾತನಾಡಲು ಮತ್ತು ಭಾಗವಹಿಸಲು ಅರ್ಹರಾಗಿರುವ ಎಲ್ಲ ವ್ಯಕ್ತಿಗಳಿಗೆ ಸಂಸತ್ತಿನ ಸವಲತ್ತುಗಳನ್ನು ನೀಡಿದೆ. ಈ ಸದಸ್ಯರಲ್ಲಿ ಭಾರತದ ಅಟಾರ್ನಿ ಜನರಲ್ ಮತ್ತು ಕೇಂದ್ರ ಸಚಿವರು ಸೇರಿದ್ದಾರೆ.
  2. ಆದಾಗ್ಯೂ,ರಾಷ್ಟ್ರಪತಿಗಳು, ಸಂಸತ್ತಿನ ಅವಿಭಾಜ್ಯ ಅಂಗವಾಗಿದ್ದರೂ, ಸಂಸತ್ತಿನ ಸವಲತ್ತುಗಳನ್ನು ಅನುಭವಿಸುವುದಿಲ್ಲ. ಸಂವಿಧಾನದ 361 ನೇ ವಿಧಿಯು ರಾಷ್ಟ್ರಪತಿಗಳಿಗೆ ಸವಲತ್ತುಗಳನ್ನು ಒದಗಿಸುತ್ತದೆ.

ಶಾಸಕಾಂಗದ ಸವಲತ್ತು ಉಲ್ಲಂಘನೆಯಾಗಿದೆ ಎಂದು ಹೇಳಲಾದ ವಿಷಯಗಳಲ್ಲಿ ಅನುಸರಿಸಬೇಕಾದ ಕಾರ್ಯವಿಧಾನಗಳು:

  1. ಸದನದಲ್ಲಿ ಸ್ಪೀಕರ್ ಅಥವಾ ಅಧ್ಯಕ್ಷರು ಸವಲತ್ತು ಸಮಿತಿಯನ್ನು ರಚಿಸುತ್ತಾರೆ, ಇದು ಕೆಳಮನೆಯಲ್ಲಿ 15 ಸದಸ್ಯರನ್ನು ಮತ್ತು ಮೇಲ್ಮನೆಯಲ್ಲಿ 11 ಸದಸ್ಯರನ್ನು ಒಳಗೊಂಡಿದೆ.
  2. ಸದನದಲ್ಲಿನ ಪಕ್ಷಗಳ ಸಂಖ್ಯೆಯನ್ನು ಆಧರಿಸಿ ಸಮಿತಿಯ ಸದಸ್ಯರನ್ನು ನಾಮಕರಣ ಮಾಡಲಾಗುತ್ತದೆ.
  3. ನಿರ್ಣಯದ ಕುರಿತ ಮೊದಲ ನಿರ್ಧಾರವನ್ನು ಸ್ಪೀಕರ್ ಅಥವಾ ಅಧ್ಯಕ್ಷರು ತೆಗೆದುಕೊಳ್ಳುತ್ತಾರೆ.
  4. ಮೇಲ್ನೋಟಕ್ಕೆ, ಸವಲತ್ತು ಉಲ್ಲಂಘನೆ ಅಥವಾ ತಿರಸ್ಕಾರದ ಸಂದರ್ಭದಲ್ಲಿ, ಸ್ಪೀಕರ್ ಅಥವಾ ಅಧ್ಯಕ್ಷರು ನಿಗದಿಪಡಿಸಿದ ಕಾರ್ಯವಿಧಾನವನ್ನು ಅನುಸರಿಸುವ ಮೂಲಕ ಈ ವಿಷಯವನ್ನು ಸವಲತ್ತುಗಳ ಸಮಿತಿಗೆ ಉಲ್ಲೇಖಿಸುತ್ತಾರೆ.
  5. ಸಮಿತಿಯು,ಆರೋಪಿತ ವ್ಯಕ್ತಿಯು ನೀಡಿದ ಹೇಳಿಕೆಗಳಿಂದ ರಾಜ್ಯ ಶಾಸಕಾಂಗ ಮತ್ತು ಅದರ ಸದಸ್ಯರ ಅಪಮಾನವಾಗಿದೆಯೇ ಮತ್ತು ಸಾರ್ವಜನಿಕರ ಮುಂದೆ ಅವರ ವ್ಯಕ್ತಿತ್ವವು ಕೆಟ್ಟದಾಗಿ ನಿರೂಪಣೆ ಗೊಂಡಿದೆಯೇ ಎಂದು ಪರಿಶೀಲಿಸುತ್ತದೆ.
  6. ಸಮಿತಿಯು ಅರೆ-ನ್ಯಾಯಾಂಗ ಅಧಿಕಾರವನ್ನು ಹೊಂದಿದೆ ಮತ್ತು ಸಂಬಂಧಪಟ್ಟ ಎಲ್ಲರಿಂದ ಸ್ಪಷ್ಟೀಕರಣವನ್ನು ಪಡೆಯುತ್ತದೆ ಮತ್ತು ವಿಚಾರಣೆಯನ್ನು ನಡೆಸಿದ ನಂತರ, ಅದರ ಸಂಶೋಧನೆಗಳ ಆಧಾರದ ಮೇಲೆ ರಾಜ್ಯ ಶಾಸಕಾಂಗದ ಪರಿಗಣನೆಗೆ ಶಿಫಾರಸುಗಳನ್ನು ಮಾಡುತ್ತದೆ.

 

ವಿಷಯಗಳು: ಮಾಹಿತಿ ತಂತ್ರಜ್ಞಾನ, ಬಾಹ್ಯಾಕಾಶ, ಕಂಪ್ಯೂಟರ್, ರೊಬೊಟಿಕ್ಸ್, ನ್ಯಾನೊ-ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ಬೌದ್ಧಿಕ ಆಸ್ತಿ ಹಕ್ಕುಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಜಾಗೃತಿ.

ಭಾರತೀಯ ಸಂದರ್ಭದಲ್ಲಿ ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿಯ ಕಾರ್ಯನಿರ್ವಹಣೆ:


(Central bank digital currency (CBDC)

ಸಂದರ್ಭ:

ಭಾರತೀಯ ರಿಸರ್ವ್ ಬ್ಯಾಂಕ್ ‘ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ’ (Central bank digital currency CBDC) ಯನ್ನು ಹಂತ ಹಂತವಾಗಿ ಆರಂಭಿಸಲು ಅನುಷ್ಠಾನ ಕಾರ್ಯತಂತ್ರವನ್ನು ರೂಪಿಸುತ್ತಿದೆ ಮತ್ತು ಈ ವರ್ಷದ ಅಂತ್ಯದ ವೇಳೆಗೆ ಡಿಜಿಟಲ್ ಕರೆನ್ಸಿಯನ್ನು ಪ್ರಾಯೋಗಿಕವಾಗಿ ಬಿಡುಗಡೆ ಮಾಡುವ ನಿರೀಕ್ಷೆಯಿದೆ.

ಹಣಕಾಸು ಸಲಹಾ ಸೇವೆಗಳ ಸಂಸ್ಥೆಯು ಭಾರತೀಯ ಸಂದರ್ಭದಲ್ಲಿ CBDC ಯ ನಾಲ್ಕು ಪ್ರಮುಖ ಉಪಯೋಗಗಳನ್ನು ಪಟ್ಟಿ ಮಾಡಿದೆ. ಅವುಗಳೆಂದರೆ;

ಒಂದು ದೇಶದಲ್ಲಿ ‘ಫಿಟ್-ಫಾರ್-ಪರ್ಪಸ್’ (‘Fit-for-Purpose’ Money) ಹಣವನ್ನು  ಸಾಮಾಜಿಕ ಪ್ರಯೋಜನಗಳು ಮತ್ತು ಇತರ ಉದ್ದೇಶಿತ ಪಾವತಿಗಳಿಗೆ ಬಳಸಲಾಗುವುದು. ಅಂತಹ ಸಂದರ್ಭಗಳಲ್ಲಿ, ಪೂರ್ವ-ಪ್ರೋಗ್ರಾಮ್ ಮಾಡಲಾದ ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ (CBDC) ಪಾವತಿಯನ್ನು ಕೇಂದ್ರೀಯ ಬ್ಯಾಂಕ್‌ನಿಂದ ಉದ್ದೇಶಿತ ಫಲಾನುಭವಿಗಳಿಗೆ ನೀಡಬಹುದು, ಇದು ನಿರ್ದಿಷ್ಟ ಉದ್ದೇಶಕ್ಕಾಗಿ ಮಾತ್ರ ಮಾನ್ಯವಾಗಿರುತ್ತದೆ.

ವಿದೇಶದಿಂದ ದೇಶಕ್ಕೆ ತ್ವರಿತ ರವಾನೆಗಾಗಿ ಹಣ ಪಾವತಿಗಳು CBDC ಅನ್ನು ಬಳಸಬಹುದು. ಭಾರತ ಸೇರಿದಂತೆ ವಿಶ್ವದ ಪ್ರಮುಖ ಆರ್ಥಿಕತೆಗಳಲ್ಲಿ ಅಂತಾರಾಷ್ಟ್ರೀಯ ಸಹಕಾರದ ಮೂಲಕ ‘ಸಿಬಿಡಿಸಿ’ಗಳ ವರ್ಗಾವಣೆ ಮತ್ತು ಪರಿವರ್ತನೆಗೆ ಅಗತ್ಯ ಮೂಲಸೌಕರ್ಯ ಮತ್ತು ಕಾರ್ಯವಿಧಾನಗಳನ್ನು ರಚಿಸಬಹುದು.

‘ಸಿಬಿಡಿಸಿ’ಗಳ ಮೂಲಕ ಪಾವತಿ ವಹಿವಾಟುಗಳಿಗೆ’ ಪಾವತಿ ಸಲಕರಣೆಗಳನ್ನು ‘ಒದಗಿಸಬಹುದು. ಇದರ ಜೊತೆಯಲ್ಲಿ, CBDC ಗಳಿಗೆ ಸಾರ್ವತ್ರಿಕ ಪ್ರವೇಶವನ್ನು ಹೊಂದಲು, ‘ಆಫ್‌ಲೈನ್ ಪಾವತಿ’ಗಳನ್ನು ಸಹ ಅದರ ಕೆಲಸದಲ್ಲಿ ಸೇರಿಸಿಕೊಳ್ಳಬಹುದು.

CBDC ನೆರವಿನಿಂದ, ಭಾರತದಲ್ಲಿ ‘ಸೂಕ್ಷ್ಮ,ಸಣ್ಣ ಮತ್ತು ಮಧ್ಯಮ ಉದ್ಯಮ’ (MSMEs) ಗಳಿಗೆ ತ್ವರಿತ ಸಾಲಗಳನ್ನು ನೀಡಲು ಸಾಧ್ಯವಿದೆ.

CBDC ಯ ಅವಶ್ಯಕತೆ:

  1. ಅಧಿಕೃತ ಡಿಜಿಟಲ್ ಕರೆನ್ಸಿ ಯಾವುದೇ ಅಂತರ-ಬ್ಯಾಂಕ್ ಪಾವತಿ ಇಲ್ಲದೆ ‘ನೈಜ-ಸಮಯದ ಪಾವತಿಗಳನ್ನು’ ಸಕ್ರಿಯಗೊಳಿಸುವ ಮೂಲಕ ಕರೆನ್ಸಿ ನಿರ್ವಹಣೆಯ ವೆಚ್ಚವನ್ನು ಕಡಿಮೆ ಮಾಡುತ್ತದೆ.
  2. ಭಾರತದ ಗಮನಾರ್ಹವಾಗಿ ಹೆಚ್ಚಿನ ಕರೆನ್ಸಿ-ಜಿಡಿಪಿ ಅನುಪಾತವು ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿಯ (CBDC) ಮತ್ತೊಂದು ಪ್ರಯೋಜನವಾಗಿದೆ – ಇದರ ಮೂಲಕ, ದೊಡ್ಡ ಮೊತ್ತದ ನಗದು ಬಳಕೆಯನ್ನು ಸಿಬಿಡಿಸಿಗಳ ಮೂಲಕ ಬದಲಾಯಿಸಬಹುದು ಮತ್ತು ಕಾಗದದ ಕರೆನ್ಸಿಯನ್ನು ಮುದ್ರಿಸುವುದು, ಸಾಗಿಸುವುದು ಮತ್ತು ಸಂಗ್ರಹಿಸುವ ವೆಚ್ಚವನ್ನು ಗಣನೀಯವಾಗಿ ಕಡಿಮೆ ಮಾಡಬಹುದು.
  3. ಈ ವ್ಯವಸ್ಥೆಯಲ್ಲಿ, ವ್ಯಕ್ತಿಯಿಂದ ವ್ಯಕ್ತಿಗೆ ಹಣ ವರ್ಗಾವಣೆಯು ಕೇಂದ್ರ ಬ್ಯಾಂಕಿನ ಜವಾಬ್ದಾರಿಯಾಗಿರುವುದರಿಂದ, ‘ಅಂತರ-ಬ್ಯಾಂಕ್ ವಸಾಹತು’ / ‘ಅಂತರ-ಬ್ಯಾಂಕ್ ಮಧ್ಯಸ್ಥಿಕೆಯ’ ಅಗತ್ಯವನ್ನು ತೆಗೆದುಹಾಕಲಾಗುತ್ತದೆ.

CBDC ಅಥವಾ ‘ರಾಷ್ಟ್ರೀಯ ಡಿಜಿಟಲ್ ಕರೆನ್ಸಿ’ ಎಂದರೇನು?

ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ (CBDC), ಅಥವಾ ರಾಷ್ಟ್ರೀಯ ಡಿಜಿಟಲ್ ಕರೆನ್ಸಿ,ಒಂದು ದೇಶದ ಫಿಯಟ್ ಕರೆನ್ಸಿಯ ಡಿಜಿಟಲ್ ರೂಪವಾಗಿದೆ.ಇದಕ್ಕಾಗಿ, ಕಾಗದದ ಕರೆನ್ಸಿ ಅಥವಾ ನಾಣ್ಯಗಳನ್ನು ಟಂಕಿಸುವ ಬದಲು, ಕೇಂದ್ರೀಯ ಬ್ಯಾಂಕ್ ಎಲೆಕ್ಟ್ರಾನಿಕ್ ಟೋಕನ್ಗಳನ್ನು ನೀಡುತ್ತದೆ. ಈ ಟೋಕನ್ ಮೌಲ್ಯವು ಸರ್ಕಾರದ ಸಂಪೂರ್ಣ ವಿಶ್ವಾಸ ಮತ್ತು ವಿಶ್ವಾಸಾರ್ಹತೆಯನ್ನು ಹೊಂದಿರುತ್ತದೆ.

ಎಸ್‌ಸಿ ಗರ್ಗ್ ಸಮಿತಿ ಶಿಫಾರಸುಗಳು (2019):

  1. ಯಾವುದೇ ರೂಪದಲ್ಲಿ ಕ್ರಿಪ್ಟೋಕರೆನ್ಸಿಗಳಲ್ಲಿ ಹೂಡಿಕೆ, ಮಾಲೀಕತ್ವ, ವಹಿವಾಟು ಅಥವಾ ವ್ಯವಹಾರವನ್ನು ನಡೆಸುವ ಯಾವುದೇ ವ್ಯಕ್ತಿಯನ್ನಾದರೂ ನಿಷೇಧಿಸಬೇಕು.
  2. ಸಮಿತಿಯಿಂದ, ಡಿಜಿಟಲ್ ಕರೆನ್ಸಿಯಲ್ಲಿ ವಿನಿಮಯ ವಹಿವಾಟು ಅಥವಾ ವ್ಯಾಪಾರ ಮಾಡುವವರಿಗೆ ಒಂದರಿಂದ 10 ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ಶಿಫಾರಸು ಮಾಡಲಾಗಿದೆ.
  3. ಕ್ರಿಪ್ಟೋಕರೆನ್ಸಿ ಬಳಕೆದಾರರು ಗಳಿಸಿದ ಬೊಕ್ಕಸ ಅಥವಾ ಲಾಭದಿಂದ ಉಂಟಾಗುವ ನಷ್ಟ ಯಾವುದು ಹೆಚ್ಚೋ ಅದರ ಪ್ರಕಾರ ಮೂರು ಪಟ್ಟು ಹೆಚ್ಚಿನ ಮೊತ್ತದ ವಿತ್ತೀಯ ದಂಡವನ್ನು ವಿಧಿಸುವ ಕುರಿತು ಸಮಿತಿ ಪ್ರಸ್ತಾಪಿಸಿತು.
  4. ಆದರೆ, ‘ಭಾರತೀಯ ರಿಸರ್ವ್ ಬ್ಯಾಂಕ್ ನಿಂದ ಕ್ರಿಪ್ಟೋಕರೆನ್ಸಿಗಳನ್ನು ನೀಡುವ ಸಂಭಾವ್ಯತೆಯ’ ಬಗ್ಗೆ ಸರ್ಕಾರವು ಮುಕ್ತ ಮನಸ್ಸು ಇಟ್ಟುಕೊಳ್ಳಬೇಕೆಂದು ಸಮಿತಿಯು ಸಲಹೆ ನೀಡಿತು.

ರಾಷ್ಟ್ರೀಯ ಡಿಜಿಟಲ್ ಕರೆನ್ಸಿಯನ್ನು ಪ್ರಾರಂಭಿಸುವಲ್ಲಿನ ಸವಾಲುಗಳು:

  1. ಸಂಭಾವ್ಯ ಸೈಬರ್ ಭದ್ರತಾ ಬೆದರಿಕೆ.
  2. ಜನರಲ್ಲಿ ಡಿಜಿಟಲ್ ಸಾಕ್ಷರತೆಯ ಕೊರತೆ.
  3. ಡಿಜಿಟಲ್ ಕರೆನ್ಸಿಯ ಪರಿಚಯದೊಂದಿಗೆ, ನಿಯಂತ್ರಣ, ಹೂಡಿಕೆಗಳು ಮತ್ತು ಖರೀದಿಗಳನ್ನು ಪತ್ತೆಹಚ್ಚುವುದು, ವ್ಯಕ್ತಿಗಳಿಗೆ ತೆರಿಗೆ ವಿಧಿಸುವುದು ಇತ್ಯಾದಿಗಳಿಗೆ ಸಂಬಂಧಿಸಿದ ವಿವಿಧ ಸವಾಲುಗಳು ಸಹ ಉದ್ಭವಿಸುತ್ತವೆ.
  4. ಗೌಪ್ಯತೆಗೆ ಬೆದರಿಕೆ: ಡಿಜಿಟಲ್ ಕರೆನ್ಸಿಗೆ ವ್ಯಕ್ತಿಯ ಕೆಲವು ಮೂಲಭೂತ ಮಾಹಿತಿಯನ್ನು ಸಂಗ್ರಹಿಸುವ ಅಗತ್ಯವಿರುತ್ತದೆ, ಇದರಿಂದಾಗಿ ವ್ಯಕ್ತಿಯು ಅವನು ಅಥವಾ ಅವಳು ಆ ಡಿಜಿಟಲ್ ಕರೆನ್ಸಿಯನ್ನು ಹೊಂದಿರುವವರು ಎಂದು ಸಾಬೀತುಪಡಿಸಬಹುದು.

 

 

ವಿಷಯಗಳು:ಆರೋಗ್ಯ, ಶಿಕ್ಷಣ, ಸಾಮಾಜಿಕ ವಲಯ / ಸೇವೆಗಳ ಅಭಿವೃದ್ಧಿ ಮತ್ತು ನಿರ್ವಹಣೆಗೆ ಸಂಬಂಧಿಸಿದ ಮಾನವ ಸಂಪನ್ಮೂಲ ಸಂಬಂಧಿತ ವಿಷಯಗಳು.

ಮೊನೊಕ್ಲೋನಲ್ ಆಂಟಿಬಾಡಿ ಚಿಕಿತ್ಸೆ:


(Monoclonal antibody treatment)

ಸಂದರ್ಭ:

ಇತ್ತೀಚೆಗೆ, ಮೊನೊಕ್ಲೋನಲ್ ಆಂಟಿಬಾಡಿ ಟ್ರೀಟ್ಮೆಂಟ್  (Monoclonal Antibody Treatment) ಪೂರೈಕೆಗಾಗಿ ಯುರೋಪಿಯನ್ ಕಮಿಷನ್ ಒಂದು ಒಪ್ಪಂದಕ್ಕೆ ಸಹಿ ಹಾಕಿದೆ.

  1. ‘ಯುರೋಪಿಯನ್ ಕಮಿಷನ್’ ನ 18 ಸದಸ್ಯ ರಾಷ್ಟ್ರಗಳು 220,000 ಚಿಕಿತ್ಸೆಗಳನ್ನು ಖರೀದಿಸಲು ‘ಜಂಟಿ ಸಂಗ್ರಹಣೆಗೆ’ ಸಹಿ ಹಾಕಿವೆ.

ಮೊನೊಕ್ಲೋನಲ್ ಪ್ರತಿಕಾಯಗಳು (Monoclonal antibodies- mAbs) ಎಂದರೇನು?

  1. ಇವು ದೇಹದ ‘ನೈಸರ್ಗಿಕ ಪ್ರತಿರಕ್ಷಣಾ ವ್ಯವಸ್ಥೆಗೆ’ ಸಹಾಯ ಮಾಡುವ ಉದ್ದೇಶದಿಂದ ಕೃತಕವಾಗಿ ಉತ್ಪತ್ತಿಮಾಡಿದ ಪ್ರತಿಕಾಯಗಳಾಗಿವೆ.
  2. ಮೊನೊಕ್ಲೋನಲ್ ಪ್ರತಿಕಾಯಗಳು ನಿರ್ದಿಷ್ಟ ಪ್ರತಿಜನಕವನ್ನು ಗುರಿಯಾಗಿಸುತ್ತವೆ. ಈ ವಿಶೇಷ ಪ್ರತಿಜನಕವು ರೋಗನಿರೋಧಕ ಪ್ರತಿಕ್ರಿಯೆಯನ್ನು ಉಂಟುಮಾಡುವ ಸೂಕ್ಷ್ಮಾಣುಜೀವಿಗಳ ‘ಪ್ರೋಟೀನ್’ ಆಗಿದೆ.

‘ಮೊನೊಕ್ಲೋನಲ್ ಪ್ರತಿಕಾಯಗಳನ್ನು’ ಹೇಗೆ ಉತ್ಪತ್ತಿ ಮಾಡಲಾಗುತ್ತದೆ?

  1. ಪ್ರಯೋಗಾಲಯದಲ್ಲಿ, ಬಿಳಿ ರಕ್ತ ಕಣಗಳನ್ನು ನಿರ್ದಿಷ್ಟ ಪ್ರತಿಜನಕಕ್ಕೆ ಒಡ್ಡುವ ಮೂಲಕ ಮೊನೊಕ್ಲೋನಲ್ ಪ್ರತಿಕಾಯಗಳನ್ನು ಉತ್ಪಾದಿಸಬಹುದು.
  2. ಹೆಚ್ಚಿನ ಪ್ರತಿಕಾಯಗಳನ್ನು ಉತ್ಪಾದಿಸಲು, ಒಂದೇ ಬಿಳಿರಕ್ತಕಣ ವನ್ನು ಅಬೀಜ ಸಂತಾನೋತ್ಪತ್ತಿ ಮಾಡಲಾಗುತ್ತದೆ. ಪ್ರತಿಕಾಯದ ಒಂದೇ ರೀತಿಯ ಪ್ರತಿಗಳನ್ನು ಉತ್ಪಾದಿಸಲು ಒಂದೇ ಬಿಳಿ ರಕ್ತ ಕಣ ಮಾದರಿಯನ್ನು (Clone) ಬಳಸಲಾಗುತ್ತದೆ.
  3. ಕೋವಿಡ್ -19 ರ ಸಂದರ್ಭದಲ್ಲಿ, ವಿಜ್ಞಾನಿಗಳು ಸಾಮಾನ್ಯವಾಗಿ ‘ಮೊನೊಕ್ಲೋನಲ್ ಪ್ರತಿಕಾಯಗಳನ್ನು’ ಉತ್ಪಾದಿಸಲು SARS-CoV-2 ವೈರಸ್‌ನ ಸ್ಪೈಕ್ ಪ್ರೋಟೀನ್‌ ಅನ್ನು ಬಳಸುತ್ತಾರೆ. ಈ ‘ಸ್ಪೈಕ್ ಪ್ರೋಟೀನ್’ ವೈರಸ್ ಅನ್ನು ಆತಿಥೇಯ ಕೋಶಕ್ಕೆ ಪ್ರವೇಶಿಸಲು ಸಹಾಯ ಮಾಡುತ್ತದೆ.

‘ಮೊನೊಕ್ಲೋನಲ್ ಪ್ರತಿಕಾಯಗಳ’ ಅವಶ್ಯಕತೆ:

ಆರೋಗ್ಯಕರ ದೇಹದಲ್ಲಿ, ಅದರ ‘ಪ್ರತಿರಕ್ಷಣಾ ವ್ಯವಸ್ಥೆ’ (Immune System) ಪ್ರತಿಕಾಯಗಳನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ಈ ಪ್ರತಿಕಾಯಗಳು ನಮ್ಮ ರಕ್ತದಲ್ಲಿನ ವೈ-ಆಕಾರದ (Y-shape) ಸೂಕ್ಷ್ಮ ಪ್ರೋಟೀನ್‌ಗಳಾಗಿವೆ, ಈ ಸೂಕ್ಷ್ಮ ಪ್ರೋಟೀನ್ಗಳು ಶತ್ರು ಸೂಕ್ಷ್ಮಜೀವಿಗಳನ್ನು ಗುರುತಿಸುತ್ತವೆ ಮತ್ತು ಬಂಧಿಸುತ್ತವೆ ಮತ್ತು ಈ ರೋಗಕಾರಕ ಸೂಕ್ಷ್ಮಜೀವಿಗಳ ಮೇಲೆ ದಾಳಿ ಮಾಡಲು ಪ್ರತಿರಕ್ಷಣಾ ವ್ಯವಸ್ಥೆಯನ್ನು ಸಂಕೇತಿಸುತ್ತವೆ.

ಆದಾಗ್ಯೂ, ಈ ಪ್ರತಿಕಾಯಗಳನ್ನು ಸಾಕಷ್ಟು ಪ್ರಮಾಣದಲ್ಲಿ ಉತ್ಪಾದಿಸಲು ಸಾಧ್ಯವಾಗದ ರೋಗನಿರೋಧಕ ವ್ಯವಸ್ಥೆ ಹೊಂದಿರುವ ಜನರಿಗೆ ಸಹಾಯ ಮಾಡಲು ವಿಜ್ಞಾನಿಗಳು ‘ಮೊನೊಕ್ಲೋನಲ್ ಪ್ರತಿಕಾಯಗಳನ್ನು’ ಕಂಡುಹಿಡಿದಿದ್ದಾರೆ.

ಇತಿಹಾಸ:

ನೊಬೆಲ್ ಪ್ರಶಸ್ತಿ ಪುರಸ್ಕೃತ ಜರ್ಮನ್ ರೋಗನಿರೋಧಕ ತಜ್ಞ (Immunologist) ಪಾಲ್ ಎಲ್ರಿಚ್ ( Paul Ehrlich) ಜೋಬರ್ ಕುಗೆಲ್’ (Zauberkugel) ಅಂದರೆ ‘ಮ್ಯಾಜಿಕ್ ಬುಲೆಟ್’ ಎಂಬ ಕಲ್ಪನೆಯನ್ನು 1900 ರ ದಶಕದಲ್ಲಿ ಒಂದು ರೋಗದ ಚಿಕಿತ್ಸೆಗಾಗಿ ಪ್ರತಿಕಾಯಗಳನ್ನು ನೀಡುವ ಕಲ್ಪನೆಯನ್ನು ಪ್ರಸ್ತಾಪಿಸಿದ್ದರು. ಜೋಬರ್ ಕುಗೆಲ್ ಒಂದು ಆಯ್ದ ರೋಗಕಾರಕ ಸೂಕ್ಷ್ಮಾಣುಜೀವಿಯನ್ನು ಗುರಿಯಾಗಿಸುವ ಒಂದು ಸಂಯೋಜಕವಾಗಿದೆ.

  1. ಅಂದಿನಿಂದ, ವಿಶ್ವದ ಮೊದಲ ಮೊನೊಕ್ಲೋನಲ್ ಪ್ರತಿಕಾಯವಾದ ‘ಮುರೊಮೊನಾಬ್-ಸಿಡಿ 3’ (Muromonab-CD3) ಅನ್ನು ಮಾನವರ ಮೇಲೆ ಕ್ಲಿನಿಕಲ್ ಬಳಕೆಗಾಗಿ ಅನುಮೋದಿಸುವವರೆಗೆ ಎಂಟು ದಶಕಗಳನ್ನು ಸಂಶೋಧನೆಗಾಗಿ ತೆಗೆದುಕೊಂಡಿತು.
  2. ಮುರೊಮೊನಾಬ್-ಸಿಡಿ 3 ಒಂದು ರೋಗನಿರೋಧಕ ಔಷಧಿಯಾಗಿದ್ದು (Immunosuppressant) ‘ಅಂಗಾಂಗ ಕಸಿ’ ರೋಗಿಗಳಲ್ಲಿ ತೀವ್ರವಾದ ನಿರಾಕರಣೆಯನ್ನು (Acute Rejection) ಕಡಿಮೆ ಮಾಡಲು ಇದನ್ನು ನೀಡಲಾಗುತ್ತದೆ.

ಅನ್ವಯಗಳು:

ಮೊನೊಕ್ಲೋನಲ್ ಪ್ರತಿಕಾಯಗಳು ಈಗ ತುಲನಾತ್ಮಕವಾಗಿ ಸಾಮಾನ್ಯವಾಗಿದೆ. ಎಬೋಲಾ, ಎಚ್‌ಐವಿ, ಚರ್ಮ ರೋಗಗಳು (psoriasis) ಇತ್ಯಾದಿಗಳ ಚಿಕಿತ್ಸೆಯಲ್ಲಿ ಅವುಗಳನ್ನು ಬಳಸಲಾಗುತ್ತದೆ.

 

ವಿಷಯಗಳು:ಆರೋಗ್ಯ, ಶಿಕ್ಷಣ, ಸಾಮಾಜಿಕ ವಲಯ / ಸೇವೆಗಳ ಅಭಿವೃದ್ಧಿ ಮತ್ತು ನಿರ್ವಹಣೆಗೆ ಸಂಬಂಧಿಸಿದ ಮಾನವ ಸಂಪನ್ಮೂಲ ಸಂಬಂಧಿತ ವಿಷಯಗಳು.

ಎಬೋಲಾ ಸೋಂಕಿನಿಂದ ಬದುಕುಳಿದವರು ಭವಿಷ್ಯದಲ್ಲಿ ಅದರ ಏಕಾಏಕಿ ಸ್ಪೋಟಕ್ಕೆ ಕಾರಣವಾಗಬಹುದು:


(Ebola Survivors Can Trigger Outbreaks Years After Infection)

ಸಂದರ್ಭ:

ಹೊಸ ಅಧ್ಯಯನದ ಪ್ರಕಾರ, ಎಬೋಲಾದಿಂದ ಚೇತರಿಸಿಕೊಂಡ ಜನರು ಸೋಂಕಿನಿಂದ ಗುಣಮುಖರಾದ  ಕನಿಷ್ಠ ಐದು ವರ್ಷಗಳ ನಂತರ ಮತ್ತೆ ಅನಾರೋಗ್ಯಕ್ಕೆ ಒಳಗಾಗಬಹುದು ಮತ್ತು ಇದು ಸಾಂಕ್ರಾಮಿಕ ರೋಗವು ಮತ್ತೆ ಹರಡಲು ಕಾರಣವಾಗಬಹುದು. ಈ ವಿನಾಶಕಾರಿ ಹರಡುವಿಕೆಯನ್ನು ತಡೆಗಟ್ಟಲು ಪೂರ್ವ-ಸೋಂಕಿತ ರೋಗಿಗಳ ದೀರ್ಘಾವಧಿಯ ಮೇಲ್ವಿಚಾರಣೆ ಅಗತ್ಯವಿದೆ.

ಸೋಂಕಿನಿಂದ ಚೇತರಿಸಿಕೊಂಡ ವ್ಯಕ್ತಿಗಳು ಮುಂದಿನ ವರ್ಷಗಳಲ್ಲಿ ವೈರಸ್ ಅನ್ನು ಪುನಃ ಸಕ್ರಿಯಗೊಳಿಸುವ ಮತ್ತು ಸೋಂಕನ್ನು ಹರಡುವ ಸಾಮರ್ಥ್ಯವನ್ನು ಹೊಂದಿರುವ ‘ವೈರಸ್‌ಗಳ ಭಂಡಾರ’ ಎಂದು ತೋರುತ್ತದೆ ಎಂದು ಅಧ್ಯಯನ ಹೇಳಿದೆ.

ಎಬೋಲಾ ಸೋಂಕಿನಿಂದ ಚೇತರಿಸಿಕೊಂಡ ಜನರ ಆರೈಕೆ ಮತ್ತು ಸಾರ್ವಜನಿಕ ಆರೋಗ್ಯದ ಪರಿಣಾಮಗಳು:

  1. ದೀರ್ಘಕಾಲದ ಎಬೋಲಾ ವೈರಸ್ ‘ಮೀಸಲು’ ಮತ್ತು ಸಾಂಕ್ರಾಮಿಕ ರೋಗಗಳನ್ನು ಉಂಟುಮಾಡುವ ಸಾಮರ್ಥ್ಯವನ್ನು ಹೊಂದಿರುವ ‘ಮಧ್ಯಂತರ ಆತಿಥೇಯರ’ ಪಟ್ಟಿಯಲ್ಲಿ ಮಾನವರನ್ನು ಈಗ ಸೇರಿಸಿಕೊಳ್ಳಬಹುದು.
  2. ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ಹಾಕಲು ಆದ್ಯತೆ ನೀಡಬೇಕು ಮತ್ತು ಎಬೋಲಾ ಔಟ್ ಬ್ರೆಕ್ ನ ಮುನ್ಸೂಚನೆಯನ್ನು ಅರಿತುಕೊಳ್ಳಲು ಎಬೋಲಾದಿಂದ ಚೇತರಿಸಿಕೊಂಡ ಜನರನ್ನು ಮೇಲ್ವಿಚಾರಣೆ ಮಾಡುವ ಅಗತ್ಯತೆ ಇದೆ.
  3. “ಎಬೋಲಾ ಸೋಂಕಿನಿಂದ ಬದುಕುಳಿದವರ” ವಿಶಾಲವಾದ ವ್ಯಾಖ್ಯಾನವನ್ನು ನಿರ್ಧರಿಸುವ ಅಗತ್ಯವಿದೆ.

ಹಿನ್ನೆಲೆ:

2014-2016ರಲ್ಲಿ ಎಬೋಲಾ (ಏಕಾಏಕಿ) ಔಟ್ ಬ್ರೆಕ್  ನಿಂದಾಗಿ 11,300 ಜನರು ಸಾವನ್ನಪ್ಪಿದ್ದಾರೆ. ಈ ಸಾವುಗಳಲ್ಲಿ ಹೆಚ್ಚಿನವು ಗಿನಿಯಾ, ಸಿಯೆರಾ ಲಿಯೋನ್ ಮತ್ತು ಲೈಬೀರಿಯಾದಲ್ಲಿ ಸಂಭವಿಸಿವೆ.

  1. ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ (DRC)ದಲ್ಲಿ ಏಕಾಏಕಿ ಕಾಣಿಸಿಕೊಂಡಿದ್ದ 12 ನೇ ಸುತ್ತಿನ ಎಬೋಲಾ ಪ್ರಕರಣಗಳು ಅಂತ್ಯಗೊಂಡಿವೆ ಎಂದು ಮೇ 2021 ರಲ್ಲಿ, ಅಲ್ಲಿನ ಸರ್ಕಾರದಿಂದ ಅಧಿಕೃತವಾಗಿ ಘೋಷಿಸಲಾಗಿದೆ.

ಎಬೋಲಾ ಸಾಂಕ್ರಾಮಿಕದ ಕುರಿತು:

ಎಬೋಲಾ ವೈರಸ್ ಕಾಯಿಲೆ- (Ebola virus disease– EVD) ಮನುಷ್ಯರಿಗೆ ಹರಡುವ ಮಾರಕ ರೋಗ. ಇದಕ್ಕಾಗಿ ಇದನ್ನು ಈ ಹಿಂದೆ ಎಬೋಲಾ ಹೆಮರಾಜಿಕ್ ಜ್ವರ (Ebola haemorrhagic fever) ಎಂದು ಕರೆಯಲಾಗುತ್ತಿತ್ತು.

ಎಬೋಲಾದ ಹರಡುವಿಕೆ: ಈ ವೈರಸ್ ವನ್ಯಜೀವಿಗಳಿಂದ ಮನುಷ್ಯರಿಗೆ ಮತ್ತು ನಂತರ ಮಾನವನಿಂದ ಮಾನವನಿಗೆ ಹರಡುವ ಮೂಲಕ ಇಡೀ ಮನುಕುಲಕ್ಕೆ ಹರಡುತ್ತದೆ.

ಸರಾಸರಿ, ಎಬೋಲಾ ವೈರಸ್ ಕಾಯಿಲೆ (EVD) ಪ್ರಕರಣಗಳು ಸುಮಾರು 50% ರಷ್ಟು ಮರಣ ಪ್ರಮಾಣವನ್ನು ಹೊಂದಿವೆ. ಹಿಂದಿನ ಏಕಾಏಕಿ ರೋಗದ ಸಮಯದಲ್ಲಿ, ಸೋಂಕಿತ ಪ್ರಕರಣಗಳಲ್ಲಿನ ಮರಣ ಪ್ರಮಾಣವು 25% ರಿಂದ 90% ವರೆಗೆ ಬದಲಾಗಿದೆ.

ತಡೆಗಟ್ಟುವಿಕೆ: ಈ ರೋಗವನ್ನು ಏಕಾಏಕಿ ಯಶಸ್ವಿಯಾಗಿ ನಿಯಂತ್ರಿಸಲು ಸಮುದಾಯದ ಸಹಭಾಗಿತ್ವ ಬಹಳ ಮುಖ್ಯ. ಏಕಾಏಕಿ ಉತ್ತಮ ನಿಯಂತ್ರಣ, ಸೋಂಕಿತ ಪ್ರಕರಣಗಳ ನಿರ್ವಹಣೆ, ಸಂಪರ್ಕಕ್ಕೆ ಬರುವ ಜನರ ಮೇಲ್ವಿಚಾರಣೆ ಮತ್ತು ಗುರುತಿಸುವಿಕೆ ಸೂಕ್ತ ಪ್ರಯೋಗಾಲಯ ಸೇವೆಗಳು ಮತ್ತು ಸಾಮಾಜಿಕ ಜಾಗೃತಿಯನ್ನು ಅವಲಂಬಿಸಿರುತ್ತದೆ.

ಚಿಕಿತ್ಸೆ: ಪುನರ್ಜಲೀಕರಣದೊಂದಿಗೆ ಆರಂಭಿಕ ಬೆಂಬಲ ಆರೈಕೆ, ರೋಗಲಕ್ಷಣದ ಚಿಕಿತ್ಸೆಯು ಬದುಕುಳಿಯುವಿಕೆಯನ್ನು ಸುಧಾರಿಸುತ್ತದೆ. ವೈರಸ್ ಅನ್ನು ತಟಸ್ಥಗೊಳಿಸಲು ಇನ್ನೂ ಯಾವುದೇ ಲಸಿಕೆ ಬಂದಿಲ್ಲ:

ಲಸಿಕೆಗಳು :

  1. 2015 ರಲ್ಲಿ, ಎಬೋಲಾ ವೈರಸ್ ಕಾಯಿಲೆ (ಇವಿಡಿ) ವಿರುದ್ಧ ಗಿನಿಯಾ ಗಣರಾಜ್ಯದಲ್ಲಿ ನಡೆಸಿದ ಪ್ರಮುಖ ಪ್ರಯೋಗದ ಸಮಯದಲ್ಲಿrVSV’ – ZEBOV ಎಂಬ ಪ್ರಾಯೋಗಿಕ ಎಬೋಲಾ ಲಸಿಕೆ ಸಾಕಷ್ಟು ಪರಿಣಾಮಕಾರಿ ಎಂದು ಸಾಬೀತಾಯಿತು. ಪರವಾನಗಿ ಚಿಕಿತ್ಸೆಯು ಸಾಬೀತಾಗಿಲ್ಲ ಆದರೆ ರಕ್ತ, ರೋಗನಿರೋಧಕ ಶಕ್ತಿ ಮತ್ತು ಔಷಧ ಚಿಕಿತ್ಸೆಗಳ ವ್ಯಾಪ್ತಿಯು ಅಭಿವೃದ್ಧಿಯ ಹಂತದಲ್ಲಿದೆ.
  2. ‘rVSV’ – ZEBOV’ ಲಸಿಕೆಯನ್ನು ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋದಲ್ಲಿ 2018–2019 ಎಬೋಲಾ ಹರಡಿದ ಸಂದರ್ಭದಲ್ಲಿ ಏಕಾಏಕಿ ಬಳಸಲಾಯಿತು. ಗರ್ಭಿಣಿ ಮತ್ತು ಹಾಲುಣಿಸುವ ಮಹಿಳೆಯರಿಗೆ ಸಾಮಾನ್ಯ ಜನಸಂಖ್ಯೆಯಂತೆಯೇ ಲಸಿಕೆ ನೀಡಬೇಕು.
  3. ಜನರ ಅಪನಂಬಿಕೆ ಮತ್ತು ಭಯೋತ್ಪಾದಕ ದಾಳಿಯಿಂದಾಗಿ, ಆರೋಗ್ಯ ಕಾರ್ಯಕರ್ತರು ಪ್ರವೇಶಿಸಲಾಗದ ಪ್ರದೇಶಗಳಲ್ಲಿ ಲಸಿಕೆ ನೀಡುವಲ್ಲಿ ತೊಂದರೆ ಅನುಭವಿಸುತ್ತಿದ್ದಾರೆ.

Ebola

 

 

ವಿಷಯಗಳು:ಆರೋಗ್ಯ, ಶಿಕ್ಷಣ, ಸಾಮಾಜಿಕ ವಲಯ / ಸೇವೆಗಳ ಅಭಿವೃದ್ಧಿ ಮತ್ತು ನಿರ್ವಹಣೆಗೆ ಸಂಬಂಧಿಸಿದ ಮಾನವ ಸಂಪನ್ಮೂಲ ಸಂಬಂಧಿತ ವಿಷಯಗಳು.

ಆಫ್ರಿಕನ್ ಹಂದಿ ಜ್ವರ:


(African Swine Fever (ASF)

ಸಂದರ್ಭ:

ಭಾರತದಲ್ಲಿ, ‘ಆಫ್ರಿಕನ್ ಹಂದಿ ಜ್ವರ’ (ASF) ಮತ್ತೊಮ್ಮೆ ಸುದ್ದಿಯಲ್ಲಿದೆ. ಈಶಾನ್ಯ ರಾಜ್ಯ ಮಿಜೋರಾಂನಲ್ಲಿ ‘ಆಫ್ರಿಕನ್ ಹಂದಿ ಜ್ವರ’ ಕಾಣಿಸಿಕೊಂಡ ನಂತರ, ಇತ್ತೀಚೆಗೆ ‘ತ್ರಿಪುರ’ ರಾಜ್ಯದಲ್ಲೂ ಸಹ ಈ ರೋಗದ ಪ್ರಕರಣಗಳು ವರದಿಯಾಗಿವೆ.

ಮುಂದಿನ ನಡೆ?

ASF ನ ಔಟ್ ಬ್ರೆಕ್ ನ ನಂತರ, ಈಶಾನ್ಯ ರಾಜ್ಯಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ ಮತ್ತು ಜನರು, ವಿಶೇಷವಾಗಿ ಹಂದಿ-ಸಾಕಣೆದಾರರಿಗೆ, ಇತರ ರಾಜ್ಯಗಳು ಮತ್ತು ನೆರೆಯ ದೇಶಗಳಿಂದ, ವಿಶೇಷವಾಗಿ ಮ್ಯಾನ್ಮಾರ್‌ನಿಂದ ಹಂದಿಗಳನ್ನು ತರುವುದನ್ನು ನಿಲ್ಲಿಸುವಂತೆ ಕೇಳಿಕೊಳ್ಳಲಾಗಿದೆ.

ಆಫ್ರಿಕನ್ ಹಂದಿ ಜ್ವರದ ಕುರಿತು:

  1. ASF ಹೆಚ್ಚು ಸಾಂಕ್ರಾಮಿಕ ಮತ್ತು ಮಾರಕ ಪ್ರಾಣಿಗಳ ಕಾಯಿಲೆಯಾಗಿದ್ದು ಅದು ಸಾಕು ಮತ್ತು ಕಾಡು ಹಂದಿಗಳಿಗೆ ಸೋಂಕು ತರುತ್ತದೆ. ಹಂದಿಗಳು ಅದರ ಸೋಂಕಿನಿಂದಾಗಿ ಒಂದು ರೀತಿಯ ತೀವ್ರವಾದ ರಕ್ತಸ್ರಾವದ ಜ್ವರದಿಂದ (Hemorrhagic Fever) ಬಳಲುತ್ತವೆ.
  2. ಇದನ್ನು 1920 ರಲ್ಲಿ ಆಫ್ರಿಕಾದಲ್ಲಿ ಮೊದಲ ಬಾರಿಗೆ ಪತ್ತೆಹಚ್ಚಲಾಯಿತು.
  3. ಈ ರೋಗದಲ್ಲಿನ ಸಾವಿನ ಪ್ರಮಾಣವು ಶೇಕಡಾ 100 ರ ಹತ್ತಿರದಲ್ಲಿದೆ, ಮತ್ತು ಜ್ವರಕ್ಕೆ ಯಾವುದೇ ಚಿಕಿತ್ಸೆ ಇಲ್ಲದಿರುವುದರಿಂದ, ಪ್ರಾಣಿಗಳನ್ನು ಕೊಲ್ಲುವುದು ಸೋಂಕಿನ ಹರಡುವಿಕೆಯನ್ನು ತಡೆಯುವ ಏಕೈಕ ಮಾರ್ಗವಾಗಿದೆ.
  4. ಆಫ್ರಿಕನ್ ಹಂದಿ ಜ್ವರವು ಮನುಷ್ಯರಿಗೆ ಅಪಾಯವನ್ನುಂಟು ಮಾಡುವುದಿಲ್ಲ, ಏಕೆಂದರೆ ಇದು ಪ್ರಾಣಿಗಳಿಂದ ಪ್ರಾಣಿಗಳಿಗೆ ಮಾತ್ರ ಹರಡುತ್ತದೆ.
  5. FAO ಪ್ರಕಾರ, ಈ ರೋಗವು ಹೆಚ್ಚು ಸಾಂಕ್ರಾಮಿಕವಾಗಿದೆ ಮತ್ತು ಅದರ ಗಡಿಯಾಚೆಗಿನ ಸಾಂಕ್ರಾಮಿಕತೆಯ ಸಾಮರ್ಥ್ಯವು ಈ ಪ್ರದೇಶದ ಎಲ್ಲಾ ದೇಶಗಳನ್ನು ಅಪಾಯಕ್ಕೆ ಸಿಲುಕಿಸಿದೆ, ರೋಗದ ಭೀತಿಯು ಮತ್ತೊಮ್ಮೆ ಆಫ್ರಿಕಾದಿಂದ ಹೊರಗಿನ ದೇಶಗಳನ್ನು ತಲುಪಿದೆ. ಈ ರೋಗವು ಜಾಗತಿಕ ಆಹಾರ ಸುರಕ್ಷತೆ ಮತ್ತು ಕೌಟುಂಬಿಕ ಆದಾಯಕ್ಕೆ ಗಮನಾರ್ಹ ಅಪಾಯವನ್ನುಂಟುಮಾಡುತ್ತದೆ.
  6. ಈ ರೋಗದಲ್ಲಿನ ಮರಣ ಪ್ರಮಾಣವು ಶೇಕಡಾ 100 ರ ಹತ್ತಿರದಲ್ಲಿದೆ, ಮತ್ತು ಈ ಜ್ವರಕ್ಕೆ ಯಾವುದೇ ಚಿಕಿತ್ಸೆ ಇಲ್ಲದಿರುವುದರಿಂದ ಪ್ರಾಣಿಗಳನ್ನು ಕೊಲ್ಲುವುದೊಂದೆ ರೋಗ ಹರಡದಂತೆ ತಡೆಯಲು ಇರುವ ಏಕೈಕ ಮಾರ್ಗ.
  7. ಇದಕ್ಕಾಗಿ ಯಾವುದೇ ಮಾನ್ಯತೆ ಪಡೆದ ಲಸಿಕೆಯನ್ನು ಇನ್ನೂ ಕಂಡು ಹಿಡಿಯಲಾಗಿಲ್ಲ, ಅದಕ್ಕಾಗಿಯೇ ಸೋಂಕಿನ ಹರಡುವಿಕೆಯನ್ನು ತಡೆಗಟ್ಟಲು ಸೋಂಕಿತ ಪ್ರಾಣಿಗಳನ್ನು ಸಾಮಾಹಿಕವಾಗಿ ಕೊಲ್ಲಲಾಗುತ್ತದೆ.

 

ಭಾರತದಲ್ಲಿ ಇದರ ಪರಿಣಾಮ:

ಆಫ್ರಿಕನ್ ಹಂದಿ ಜ್ವರವು ಸುಮಾರು ಶತಮಾನದಷ್ಟು ಹಳೆಯದಾದ ಕಾಯಿಲೆಯಾಗಿದ್ದು, ಇದು ದೇಶೀಯ ಹಂದಿಗಳು ಮತ್ತು ಕಾಡುಹಂದಿಗಳಿಗೆ ಸೋಂಕು ತರುತ್ತದೆ, ಮತ್ತು ಸೋಂಕಿನಿಂದ ಸುಮಾರು 100 ಪ್ರತಿಶತದಷ್ಟು ಮರಣ ಪ್ರಮಾಣವನ್ನು ಹೊಂದಿದೆ. ಈ ರೋಗವು 2018 ರಿಂದ ವಿಶ್ವದ ಮೂರನೇ ಒಂದು ಭಾಗದಷ್ಟು ಹಂದಿಗಳನ್ನು ಬಲಿ ಪಡೆದಿದೆ.

  1. ಭಾರತವು ಈ ರೋಗದ ಇತ್ತೀಚಿನ ಬಲಿಪಶು. ಸೋಂಕಿತ ಪ್ರಕರಣಗಳು ಮೇ 2020 ರಿಂದ ಇಲ್ಲಿ ವರದಿಯಾಗುತ್ತಿದ್ದವು, ಆದರೆ ಕಳೆದ ಕೆಲವು ತಿಂಗಳುಗಳಲ್ಲಿ ಅವುಗಳ ಸಂಖ್ಯೆಯಲ್ಲಿ ಭಾರಿ ಏರಿಕೆ ಕಂಡುಬಂದಿದೆ.
  2. ಒಂದು ಅಂದಾಜಿನ ಪ್ರಕಾರ, ಆಫ್ರಿಕನ್ ಹಂದಿ ಜ್ವರ (ASF) ದಿಂದಾಗಿ, ಈಶಾನ್ಯ ರಾಜ್ಯಗಳಲ್ಲಿ ಹಂದಿಮಾಂಸದ ಉತ್ಪಾದನೆಯಲ್ಲಿ ಶೇಕಡಾ 50 ರಷ್ಟು ಇಳಿಕೆ ಕಂಡುಬಂದಿದೆ.

 


ಸಾಮಾನ್ಯ ಅಧ್ಯಯನ ಪತ್ರಿಕೆ : 3


 

ವಿಷಯಗಳು: ಸಂರಕ್ಷಣೆ, ಪರಿಸರ ಮಾಲಿನ್ಯ ಮತ್ತು ಅವನತಿ, ಪರಿಸರ ಪ್ರಭಾವದ ಮೌಲ್ಯಮಾಪನ.

ಏಕ-ಬಳಕೆಯ ಪ್ಲಾಸ್ಟಿಕ್‌ಗಳಿಗೆ ಪರ್ಯಾಯ:


(Substitute for single-use plastics)

ಸಂದರ್ಭ:

ಭಾರತೀಯ ವಿಜ್ಞಾನ ಸಂಸ್ಥೆ (IISc) ಯ ಸಂಶೋಧಕರು ‘ಏಕ-ಬಳಕೆಯ ಪ್ಲಾಸ್ಟಿಕ್’ (Single-Use Plastics)ಗಳಿಗೆ ಒಂದು ಪರ್ಯಾಯ ಮಾರ್ಗವನ್ನು ಕಂಡುಕೊಂಡಿದ್ದಾರೆ.

‘ಖಾದ್ಯವಲ್ಲದ ತೈಲಗಳು’ ಮತ್ತು ‘ಕೃಷಿ ಒಣಹುಲ್ಲಿನಿಂದ’ ಹೊರತೆಗೆಯಲಾದ ಸೆಲ್ಯುಲೋಸ್ ಅನ್ನು ಸಂಯೋಜಿಸುವ ಮೂಲಕ, ಜೈವಿಕ ವಿಘಟನೀಯ (Biodegradable) ಬಹು ಬಳಕೆಯ ಪಾಲಿಮರ್ ಶೀಟ್ ಅನ್ನು ಸಂಶೋಧಕರು ತಯಾರಿಸಿದ್ದಾರೆ.

ಪ್ರಾಮುಖ್ಯತೆ:

ಈ ‘ಪಾಲಿಮರ್ ಶೀಟ್’ ‘ಏಕ-ಬಳಕೆಯ ಪ್ಲಾಸ್ಟಿಕ್’ಗೆ ಪರ್ಯಾಯವಾಗಿ ಪರಿಣಮಿಸಬಹುದು, ಇದು ತಾತ್ವಿಕವಾಗಿ, ಪರಿಸರದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹವಾಗುವುದನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಹಿನ್ನೆಲೆ:

2019 ರ ವರ್ಷದಲ್ಲಿ, ದೇಶಾದ್ಯಂತ ‘ಏಕ-ಬಳಕೆಯ ಪ್ಲಾಸ್ಟಿಕ್’ ಬಳಕೆಯನ್ನು ನಿರುತ್ಸಾಹಗೊಳಿಸಲು, 2022 ರ ವೇಳೆಗೆ ಭಾರತವನ್ನು ‘ಏಕ-ಬಳಕೆಯ ಪ್ಲಾಸ್ಟಿಕ್’ನಿಂದ ಮುಕ್ತಗೊಳಿಸಲು ಕೇಂದ್ರ ಸರ್ಕಾರವು ಬಹು-ಮಂತ್ರಿ ಮಂಡಲ ಯೋಜನೆಯನ್ನು ಸಿದ್ಧಪಡಿಸಿತ್ತು.

ಕಾರ್ಯತಂತ್ರ:

ಸರ್ಕಾರಿ ಸಮಿತಿಯು,‘ಸಿಂಗಲ್ ಯೂಸ್ ಪ್ಲಾಸ್ಟಿಕ್’ (SUP) ಮೂಲಕ ತಯಾರಿಸಿದ ವಸ್ತುಗಳನ್ನು ಅವುಗಳ ಉಪಯುಕ್ತತೆ ಮತ್ತು ಪರಿಸರ ಪ್ರಭಾವದ ಸೂಚ್ಯಂಕದ ಆಧಾರದ ಮೇಲೆ ನಿಷೇಧಿಸಲು ಸೂಚಿಸಿದೆ ಎಂದು ಗುರುತಿಸಲಾಗಿದೆ. ಇದನ್ನು ಮೂರು ಹಂತಗಳಲ್ಲಿ ನಿಷೇಧಿಸಲು ಸಮಿತಿ ಪ್ರಸ್ತಾಪಿಸಿದೆ:

  1. ‘ಸಿಂಗಲ್ ಯೂಸ್ ಪ್ಲಾಸ್ಟಿಕ್’ ನಿಂದ ತಯಾರಿಸಿದ ಸರಕುಗಳ ಮೊದಲ ವರ್ಗವು ಬಲೂನುಗಳು, ಧ್ವಜಗಳು, ಕ್ಯಾಂಡಿ, ಐಸ್ ಕ್ರೀಮ್ ಮತ್ತು ‘ಇಯರ್ ಬಡ್ಸ್ ಗಳು’ ಮತ್ತು ಅಲಂಕಾರಗಳಲ್ಲಿ ಬಳಸುವ ಥರ್ಮೋಕೋಲ್ ನಲ್ಲಿ ಬಳಸುವ ಪ್ಲಾಸ್ಟಿಕ್ ತುಂಡುಗಳನ್ನು ಒಳಗೊಂಡಿದೆ.
  2. ಎರಡನೆಯ ವಿಭಾಗದಲ್ಲಿ, ಪ್ಲೇಟ್‌ಗಳು, ಕಪ್‌ಗಳು, ಕನ್ನಡಕ ಮತ್ತು ಕಟ್ಲರಿಗಳಾದ ಚಾಪ್‌ಸ್ಟಿಕ್‌ಗಳು, ಚಮಚಗಳು, ಸ್ಟ್ರಾಗಳು ಮತ್ತು ಟ್ರೇಗಳು; ಸಿಹಿ ಪೆಟ್ಟಿಗೆಗಳ ಪ್ಯಾಕಿಂಗ್‌ನಲ್ಲಿ ಬಳಸುವ ಚಿತ್ರಗಳು; ಆಮಂತ್ರಣ ಪತ್ರವನ್ನು; 100 ಮೈಕ್ರಾನ್‌ಗಳಿಗಿಂತ ಕಡಿಮೆ ದಪ್ಪವಿರುವ ಸಿಗರೆಟ್ ಪ್ಯಾಕೆಟ್‌ಗಳು ಮತ್ತು ಪ್ಲಾಸ್ಟಿಕ್ ಬ್ಯಾನರ್‌ಗಳು. 2022 ರ ಜುಲೈ 1 ರಿಂದ ಜಾರಿಗೆ ಬರುವಂತೆ ಈ ವರ್ಗದ ವಸ್ತುಗಳನ್ನು ನಿಷೇಧಿಸಲು ಉದ್ದೇಶಿಸಲಾಗಿದೆ.
  3. ನಿಷೇಧಿತ ‘ಸಿಂಗಲ್ ಯೂಸ್ ಪ್ಲಾಸ್ಟಿಕ್’ಗಳ ಮೂರನೇ ವರ್ಗದಲ್ಲಿ, 240 ಮೈಕ್ರಾನ್‌ಗಳಿಗಿಂತ ಕಡಿಮೆ ದಪ್ಪವಿರುವ ನೇಯದ ಚೀಲ (non-woven) ಗಳನ್ನು ಸೇರಿಸಲಾಗಿದೆ. ಇದನ್ನು ಮುಂದಿನ ವರ್ಷದ ಸೆಪ್ಟೆಂಬರ್‌ನಿಂದ ಪ್ರಾರಂಭಿಸಲು ಉದ್ದೇಶಿಸಲಾಗಿದೆ.

ಮುಂಬರುವ ಸವಾಲುಗಳು:

  1. ಭಾರತದಾದ್ಯಂತ ದಿನಕ್ಕೆ ಸುಮಾರು 26,000 ಟನ್ ಪ್ಲಾಸ್ಟಿಕ್ ತ್ಯಾಜ್ಯ ಉತ್ಪತ್ತಿಯಾಗುತ್ತದೆ, ಅದರಲ್ಲಿ 10,000 ಟನ್‌ಗಿಂತ ಹೆಚ್ಚಿನ ತ್ಯಾಜ್ಯವನ್ನು ಸಂಗ್ರಹಿಸಲಾಗುವುದಿಲ್ಲ; ಇದನ್ನು ಗಮನಿಸಿದಾಗ, ‘ಸಿಂಗಲ್ ಯೂಸ್ ಪ್ಲಾಸ್ಟಿಕ್’ ಅನ್ನು ನಿಷೇಧಿಸುವುದು ಸುಲಭದ ಕೆಲಸವಲ್ಲ.
  2. ನದಿಗಳು, ಸಾಗರಗಳು ಮತ್ತು ಬಂಜರು ಭೂಮಿಯಲ್ಲಿ ದೊಡ್ಡ ಪ್ರಮಾಣದ ಪ್ಲಾಸ್ಟಿಕ್ ಅನ್ನು ಎಸೆಯಲಾಗುತ್ತದೆ.

ಮುಂದೆ ಕೈಗೊಳ್ಳಬೇಕಿರುವ ಕ್ರಮಗಳೇನು?

  1. ಇದನ್ನು ಎದುರಿಸಲು ಸರ್ಕಾರವು ಮೊದಲು ಆರ್ಥಿಕ ಮತ್ತು ಪರಿಸರ ವೆಚ್ಚ-ಲಾಭದ ಬಗ್ಗೆ ಸಮಗ್ರ ವಿಶ್ಲೇಷಣೆ ಮಾಡಬೇಕು.
  2. ಈ ನಿಷೇಧ ಯಶಸ್ವಿಯಾಗಲು, ಯೋಜನೆಯು ಸಾಮಾಜಿಕ ಮತ್ತು ಆರ್ಥಿಕ ಪರಿಣಾಮಗಳನ್ನು ಗಣನೆಗೆ ತೆಗೆದುಕೊಳ್ಳಬೇಕು.
  3. ನಮಗೆ ಉತ್ತಮ ಮರುಬಳಕೆ ನೀತಿಗಳು ಬೇಕಾಗುತ್ತವೆ ಏಕೆಂದರೆ ನಾವು ಸಂಪನ್ಮೂಲಗಳ ಲಭ್ಯತೆಯು ಕಡಿಮೆ ಇದೆ, ಮತ್ತು ಮೇಲಾಗಿ, ಸಮಗ್ರ ಕಾರ್ಯತಂತ್ರದ ಅಗತ್ಯವಿದೆ.

 


ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:


WHO ದ ಜಾಗತಿಕ ವಾಯು ಮಾಲಿನ್ಯ ಮಾನದಂಡಗಳು:

ವಿಶ್ವ ಆರೋಗ್ಯ ಸಂಸ್ಥೆ (WHO) ಯು 2005 ರ ನಂತರ ಮೊದಲ ಬಾರಿಗೆ ನವೀಕರಿಸಲಾದ ತನ್ನ ಜಾಗತಿಕ ವಾಯು ಮಾಲಿನ್ಯ ಮಾನದಂಡಗಳನ್ನು’ ಹೊಸ ವೈಜ್ಞಾನಿಕ ಆವಿಷ್ಕಾರಗಳನ್ನು ಗುರುತಿಸಿ ಹೆಚ್ಚು ಕಠಿಣಗೊಳಿಸಿದೆ. ಹೊಸ ಮಾಹಿತಿಯ ಪ್ರಕಾರ, ವಾಯು ಮಾಲಿನ್ಯದ ಪರಿಣಾಮವು ‘ಆರೋಗ್ಯ’ದ ಮೇಲೆ ಈ ಹಿಂದೆ ಅಂದಾಜಿಸಿದ್ದಕ್ಕಿಂತ ಹೆಚ್ಚು ಗಂಭೀರವಾಗಿದೆ.

ಇತ್ತೀಚಿನ ಮಾನದಂಡಗಳ ಪ್ರಕಾರ:

  1. 2005 ರ ಮಾನದಂಡಗಳ ಪ್ರಕಾರ, ಪ್ರಸ್ತುತ ಎಲ್ಲಾ ದೇಶಗಳು ಅನುಸರಿಸುತ್ತಿರುವ ವಾರ್ಷಿಕ 5 ಮೇಲಿನ ಮಿತಿ, ಪ್ರತಿ ಘನ ಮೀಟರ್‌ಗೆ 10 ಮೈಕ್ರೋಗ್ರಾಂಗಳು. ಇದನ್ನು ಈಗ ಪ್ರತಿ ಘನ ಮೀಟರ್‌ಗೆ 5 ಮೈಕ್ರೋಗ್ರಾಂಗಳಷ್ಟು ಪರಿಷ್ಕರಿಸಲಾಗಿದೆ.
  2. ಮೊದಲ 24 ಗಂಟೆಗಳಲ್ಲಿ, ಪಿಎಮ್ 2.5 ರ ಮಿತಿ 25 ಮೈಕ್ರೋಗ್ರಾಂಗಳಷ್ಟಿತ್ತು, ಈಗ ಅದನ್ನು 15 ಮೈಕ್ರೋಗ್ರಾಂಗಳಿಗೆ ಇಳಿಸಲಾಗಿದೆ.
  3. PM10, ಅಥವಾ 10 ಮೈಕ್ರೋಗ್ರಾಮ್‌ಗಳಿಗಿಂತ ಹೆಚ್ಚಿನ ಗಾತ್ರದ ‘ಪಾರ್ಟಿಕುಲೇಟ್ ಮ್ಯಾಟರ್’ ನ ಮೇಲಿನ ಮಿತಿ 20 ಮೈಕ್ರೋಗ್ರಾಂಗಳು, ಇದನ್ನು ಈಗ 15 ಮೈಕ್ರೋಗ್ರಾಂಗಳಿಗೆ ಪರಿಷ್ಕರಿಸಲಾಗಿದೆ, ಆದರೆ 24-ಗಂಟೆಯ ಮೌಲ್ಯವನ್ನು 50 ಮೈಕ್ರೋಗ್ರಾಂಗಳಿಂದ 45 ಮೈಕ್ರೋಗ್ರಾಂಗಳಿಗೆ ಪರಿಷ್ಕರಿಸಲಾಗಿದೆ.

current affairs


Join our Official Telegram Channel HERE for Motivation and Fast Updates

Subscribe to our YouTube Channel HERE to watch Motivational and New analysis videos

[ad_2]

Leave a Comment