[Mission 2022] ದೈನಂದಿನ ಪ್ರಚಲಿತ ಘಟನೆಗಳು ದಿನಾಂಕ – 22 ನೇ ಸೆಪ್ಟೆಂಬರ್ 2021 – INSIGHTSIAS

[ad_1]

 

ಪರಿವಿಡಿ:

 

ಸಾಮಾನ್ಯ ಅಧ್ಯಯನ ಪತ್ರಿಕೆ 1:

1. ಶಂಖ ಲಿಪಿ.

2. ಫೋರ್ಟಿಫೈಡ್ ರೈಸ್ ಕೆರ್ನೆಲ್ಸ್ (FRK).

 

ಸಾಮಾನ್ಯ ಅಧ್ಯಯನ ಪತ್ರಿಕೆ 2:

1. ರಾಜಕೀಯ ಪಕ್ಷಗಳ ಮಾನ್ಯತೆ/ಅಮಾನ್ಯತೆ.

2. ಅಂತರಾಷ್ಟ್ರೀಯ ನೀಲಿ ಧ್ವಜ ಪ್ರಮಾಣೀಕರಣ.

3. ಹವಾನಾ ಸಿಂಡ್ರೋಮ್.

 

ಸಾಮಾನ್ಯ ಅಧ್ಯಯನ ಪತ್ರಿಕೆ 3:

1. ಜಾಗತಿಕ ನಾವೀನ್ಯತೆ ಸೂಚ್ಯಂಕ 2021

2. ಕರಾವಳಿ ಪರಿಸರ ಮತ್ತು ಸೌಂದರ್ಯಶಾಸ್ತ್ರ ನಿರ್ವಹಣಾ ಸೇವೆಗಳ (BEAMS) ಕಾರ್ಯಕ್ರಮ.

 

ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:

1. ಸಸ್ಯ ಆವಿಷ್ಕಾರಗಳು 2020.

 


ಸಾಮಾನ್ಯ ಅಧ್ಯಯನ ಪತ್ರಿಕೆ : 1


 

ವಿಷಯಗಳು: ಭಾರತೀಯ ಸಂಸ್ಕೃತಿಯು ಪ್ರಾಚೀನ ಕಾಲದಿಂದ ಆಧುನಿಕ ಕಾಲದವರೆಗೆ ಕಲಾ ಪ್ರಕಾರಗಳು, ಸಾಹಿತ್ಯ ಮತ್ತು ವಾಸ್ತುಶಿಲ್ಪದ ಪ್ರಮುಖ ಅಂಶಗಳನ್ನು ಒಳಗೊಂಡಿದೆ.

ಶಂಖ ಲಿಪಿ:


(Shankhalipi)

ಸಂದರ್ಭ:

ಇತ್ತೀಚೆಗೆ, ಪುರಾತತ್ತ್ವ ಶಾಸ್ತ್ರಜ್ಞರು ಉತ್ತರ ಪ್ರದೇಶದ ಇಟಾ ಜಿಲ್ಲೆಯ ಪುರಾತನ ಗುಪ್ತಾ ದೇವಾಲಯದ ಮೆಟ್ಟಿಲುಗಳ ಮೇಲೆ ‘ಶಂಖಲಿಪಿ’(Shankhalipi)ಯಲ್ಲಿ ಕೆತ್ತಿದ ಶಾಸನಗಳನ್ನು ಪತ್ತೆಹಚ್ಚಿದ್ದಾರೆ.

ಈ ಶಾಸನಗಳು ‘ಶ್ರೀ ಮಹೇಂದ್ರಾದಿತ್ಯ’ ನನ್ನು ಉಲ್ಲೇಖಿಸುತ್ತವೆ, ಇದು ಗುಪ್ತ ವಂಶದ ಆಡಳಿತಗಾರ ‘ಒಂದನೇ ಕುಮಾರ ಗುಪ್ತನ’  ಬಿರುದಾಗಿತ್ತು.

ಇತ್ತೀಚಿನ ಸಂಶೋಧನೆಗಳ ಮಹತ್ವ:

ಇಟಾದಲ್ಲಿರುವ ‘ಬಿಲ್ಸಾದ್’ ಸಂರಕ್ಷಿತ ಸ್ಥಳದಲ್ಲಿ ಎರಡು ಸಾಂಕೇತಿಕ/ಅಲಂಕಾರಿಕ ಸ್ತಂಭಗಳು ಕಂಡುಬಂದಿವೆ, ಈ ಸ್ತಂಭಗಳಲ್ಲಿ ಮಾನವ ಆಕೃತಿಗಳನ್ನು ಕೆತ್ತಲಾಗಿದೆ.

ಇದುವರೆಗೆ ಗುಪ್ತರ ಕಾಲದ ಎರಡು ರಚನಾತ್ಮಕ ದೇವಾಲಯಗಳು ಕಂಡುಬಂದಿರುವುದರಿಂದ – ದಶಾವತಾರ ದೇವಸ್ಥಾನ (ದಿಯೋಗಢ) ಮತ್ತು ಭಿತರ್ಗಾಂವ್ ದೇವಸ್ಥಾನ (ಕಾನ್ಪುರ್ ದೇಹತ್) ಈ ಆವಿಷ್ಕಾರವು ಮಹತ್ವದ್ದಾಗಿದೆ.

ಯಾರು ಈ ಕುಮಾರಗುಪ್ತ?

  1. ಕುಮಾರಗುಪ್ತ I ಉತ್ತರ-ಮಧ್ಯ ಭಾರತವನ್ನು ಐದನೇ ಶತಮಾನದಲ್ಲಿ 40 ವರ್ಷಗಳ ಕಾಲ ಆಳಿದರು.
  2. ಅವರು ಗುಪ್ತ ಚಕ್ರವರ್ತಿ ಎರಡನೇ ಚಂದ್ರಗುಪ್ತ ಮತ್ತು ರಾಣಿ ಧ್ರುವದೇವಿಯ ಮಗ.
  3. ಕುಮಾರಗುಪ್ತನು ತನ್ನ ಆಳ್ವಿಕೆಯಲ್ಲಿ ಅಶ್ವಮೇಧ ಯಜ್ಞ’ವನ್ನು ಆಯೋಜಿಸಿದ್ದನು.
  4. ಅವರು ಬಹುಶಃ ಮಧ್ಯ ಭಾರತದ ಔಲಿಕಾರರನ್ನು (Aulikaras) ಮತ್ತು ಪಶ್ಚಿಮ ಭಾರತದ ‘ತ್ರಿಕುಟಕ’ (Traikutakas) ರನ್ನು ವಶಪಡಿಸಿಕೊಂಡಿದ್ದರು.
  5. ಭಿತಾರಿ ಸ್ತಂಭ ಶಾಸನದಲ್ಲಿ ನೀಡಿರುವ ವಿವರಣೆಯ ಪ್ರಕಾರ, ಅವನ ಉತ್ತರಾಧಿಕಾರಿ ಸ್ಕಂದಗುಪ್ತನು ಗುಪ್ತ ವಂಶದ ಕ್ಷೀಣಿಸುತ್ತಿರುವ ಪ್ರತಿಷ್ಠೆಯನ್ನು ಮತ್ತೆ ಪುನಃ ಸ್ಥಾಪಿಸಿದನು.

ಆಡಳಿತ:

ಕುಮಾರಗುಪ್ತ I ‘ಮಹಾರಾಜ’ ಎಂಬ ಬಿರುದನ್ನು ಹೊಂದಿದ್ದನು, ಮತ್ತು ತನ್ನ ಸಾಮ್ರಾಜ್ಯವನ್ನು ವಿವಿಧ ಪ್ರಾಂತ್ಯಗಳಾಗಿ (ಭುಕ್ತಿಗಳು) ವಿಭಜಿಸಿದನು, ಈ ಭುಕ್ತಿಗಳಿಗೆ ರಾಜ್ಯಪಾಲರನ್ನು (ಉಪರಿಕರು) ನೇಮಿಸಿದನು, ಮತ್ತು ಉಪರಿಕರು ರಾಜನಿಗೆ ನಿಷ್ಠಾವಂತರು ಮತ್ತು ಜವಾಬ್ದಾರರಾಗಿದ್ದರು.

ಪ್ರಾಂತ್ಯಗಳನ್ನು (ಭುಕ್ತಿ) ಜಿಲ್ಲೆಗಳಾಗಿ (ವಿಷಯಗಳು) ವಿಂಗಡಿಸಲಾಗಿದೆ, ಇವುಗಳ ಆಡಳಿತವನ್ನು ಜಿಲ್ಲಾ ಮ್ಯಾಜಿಸ್ಟ್ರೇಟ್ (ವಿಷಯಪತಿ) ರವರು ನಿರ್ವಹಿಸುತ್ತಿದ್ದರು. ವಿಷಯಪತಿಗಳಿಗೆ ಆಡಳಿತದಲ್ಲಿ ಸಹಾಯ ಮಾಡಲು ಒಂದು ಸಲಹಾ ಮಂಡಳಿ ಇತ್ತು, ಇದರಲ್ಲಿ ಈ ಕೆಳಗಿನ ಅಧಿಕಾರಿಗಳು ಸೇರಿದ್ದಾರೆ:

  1. ನಗರ ಅಧ್ಯಕ್ಷರು ಅಥವಾ ಮಹಾಪೌರರು (ನಗರ-ಶ್ರೇಷ್ಠಿನ್).
  2. ವ್ಯಾಪಾರಿಗಳ ಸಂಘದ ಪ್ರತಿನಿಧಿಗಳು.
  3. ಕುಶಲಕರ್ಮಿಗಳ ಸಂಘದ ಮುಖ್ಯಸ್ಥ (ಪ್ರಥಮ-ಕುಲಿಕ್).
  4. ಬರಹಗಾರರು ಅಥವಾ ಗುಮಾಸ್ತರ ಸಂಘದ ಮುಖ್ಯಸ್ಥ (ಪ್ರಥಮ-ಕಾಯಸ್ಥ).

current affairs

 

ಶಂಖ ಲಿಪಿಯ ಬಗ್ಗೆ:

‘ಶಂಖ ಲಿಪಿ’, ಅಥವಾ ‘ಶೆಲ್-ಸ್ಕ್ರಿಪ್ಟ್’ (shell-script), ಅಲಂಕೃತ ಸುರುಳಿಯಾಕಾರದ ವರ್ಣಗಳು/ಅಕ್ಷರಗಳನ್ನು ಪ್ರತಿನಿಧಿಸುತ್ತದೆ,ಈ ಲಿಪಿಯಲ್ಲಿರುವ ವರ್ಣಗಳು ‘ಶಂಖ’ದಂತೆ ಕಾಣುತ್ತವೆ ಮತ್ತು ಇವನ್ನು ಬ್ರಾಹ್ಮಿ ಲಿಪಿಯಿಂದ ಪಡೆಯಲಾಗಿದೆ ಎಂದು ನಂಬಲಾಗಿದೆ.

  1. ಈ ಲಿಪಿಯಲ್ಲಿ ಕೆತ್ತಲಾಗಿರುವ ಶಾಸನಗಳು ಉತ್ತರ-ಮಧ್ಯ ಭಾರತದಲ್ಲಿ ಕಂಡುಬರುತ್ತವೆ ಮತ್ತು ಅವು 4 ರಿಂದ 8 ನೇ ಶತಮಾನಗಳ ನಡುವೆ ಇವೆ.
  2. ಈ ಶಾಸನಗಳಲ್ಲಿನ ಅಕ್ಷರಗಳ / ಅಕ್ಷರಗಳ ಸಂಖ್ಯೆ ತುಂಬಾ ಕಡಿಮೆ, ಇದು ಈ ಶಾಸನಗಳಲ್ಲಿ ಒಬ್ಬರ ಹೆಸರು ಅಥವಾ ಶುಭ ಸಂಕೇತ ಅಥವಾ ಎರಡರ ಸಂಯೋಜನೆಯನ್ನು ಕೆತ್ತಲಾಗಿದೆ ಎಂದು ಸೂಚಿಸುತ್ತದೆ.
  3. ಈ ಲಿಪಿಯನ್ನು ಇಂಗ್ಲಿಷ್ ವಿದ್ವಾಂಸ ಜೇಮ್ಸ್ ಪ್ರಿನ್ಸೆಪ್ 1836 ರಲ್ಲಿ ಉತ್ತರಾಖಂಡದ ಬರಾಹತ್ ನಲ್ಲಿ ಹಿತ್ತಾಳೆಯ ತ್ರಿಶೂಲದ ಮೇಲೆ ಕಂಡುಹಿಡಿದನು. ಜೇಮ್ಸ್ ಪ್ರಿನ್ಸೆಪ್ ‘ಜರ್ನಲ್ ಆಫ್ ದಿ ಏಷಿಯಾಟಿಕ್ ಸೊಸೈಟಿ ಆಫ್ ಬೆಂಗಾಲ್’ ನ ಸ್ಥಾಪಕ-ಸಂಪಾದಕರಾಗಿದ್ದರು.

 

ವಿಷಯಗಳು: ಜನಸಂಖ್ಯೆ ಮತ್ತು ಸಂಬಂಧಿತ ಸಮಸ್ಯೆಗಳು, ಬಡತನ ಮತ್ತು ಅಭಿವೃದ್ಧಿ ಸಮಸ್ಯೆಗಳು, ನಗರೀಕರಣ, ಅವುಗಳ ಸಮಸ್ಯೆ ಮತ್ತು ಪರಿಹಾರಗಳು.

ಫೋರ್ಟಿಫೈಡ್ ರೈಸ್ ಕೆರ್ನೆಲ್ಸ್ (FRK):


(Fortified Rice Kernels (FRK)

ಸಂದರ್ಭ:

ಕೇಂದ್ರ ಸರ್ಕಾರವು ಪ್ರಥಮ ಬಾರಿಗೆ ಗ್ರೇಡ್ ಎ ಮತ್ತು ಸಾಮಾನ್ಯ ಅಕ್ಕಿಗೆ ಬಲವರ್ಧಿತ ಅಕ್ಕಿ ಕಾಳುಗಳ ಖರೀದಿಯಲ್ಲಿ (Fortified Rice Kernels -FRK) ಏಕರೂಪದ ವಿಶೇಷಣಗಳನ್ನು ನೀಡಿದೆ. ಕೇಂದ್ರ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯದಿಂದ ವಿಶೇಷಣಗಳನ್ನು ನೀಡಲಾಗಿದೆ.

ಹಿನ್ನೆಲೆ:

2024 ರ ವೇಳೆಗೆ ಸಾರ್ವಜನಿಕ ವಿತರಣಾ ವ್ಯವಸ್ಥೆ (PDS) ಮತ್ತು ಮಧ್ಯಾಹ್ನದ ಊಟ ಸೇರಿದಂತೆ ಸರ್ಕಾರದ ವಿವಿಧ ಯೋಜನೆಗಳ ಅಡಿಯಲ್ಲಿ ಬಲವರ್ಧಿತ ಅಕ್ಕಿಯನ್ನು ವಿತರಿಸಲಾಗುವುದು.

ಅಕ್ಕಿ ಬಲವರ್ಧನೆಯ ಅಗತ್ಯತೆ:

  1. ದೇಶದಲ್ಲಿ ಮಹಿಳೆಯರು ಮತ್ತು ಮಕ್ಕಳಲ್ಲಿ ಹೆಚ್ಚಿನ ಪ್ರಮಾಣದ ಅಪೌಷ್ಟಿಕತೆ ಇರುವುದರಿಂದ ಈ ಘೋಷಣೆ ಮಹತ್ವದ್ದಾಗಿದೆ.
  2. ಆಹಾರ ಸಚಿವಾಲಯದ ಪ್ರಕಾರ, ದೇಶದ ಪ್ರತಿ ಎರಡನೇ ಮಹಿಳೆ ರಕ್ತಹೀನತೆಯಿಂದ ಬಳಲುತ್ತಿದ್ದರೆ ಮತ್ತು ದೇಶದ ಪ್ರತಿ ಮೂರನೇ ಮಗು ಕುಂಠಿತ ಬೆಳವಣಿಗೆಯನ್ನು ಹೊಂದಿದೆ.
  3. ಭಾರತವು ಜಾಗತಿಕ ಹಸಿವು ಸೂಚ್ಯಂಕದ ಪಟ್ಟಿಯಲ್ಲಿನ 107 ದೇಶಗಳ ಪೈಕಿ 94 ನೇ ಸ್ಥಾನದಲ್ಲಿದೆ ಮತ್ತು ಜಾಗತಿಕ ಹಸಿವು ಸೂಚ್ಯಂಕದ (Global Hunger Index (GHI) ‘ಗಂಭೀರ ಹಸಿವು’ ವಿಭಾಗದಲ್ಲಿ ಸ್ಥಾನ ಪಡೆದಿದೆ.
  4. ಬಡ ಮಹಿಳೆಯರು ಮತ್ತು ಬಡ ಮಕ್ಕಳಲ್ಲಿ ಅಪೌಷ್ಟಿಕತೆ ಮತ್ತು ಅಗತ್ಯ ಪೋಷಕಾಂಶಗಳ ಕೊರತೆಯು ಅವರ ಬೆಳವಣಿಗೆಯಲ್ಲಿ ಪ್ರಮುಖ ಅಡೆತಡೆಗಳನ್ನು ಉಂಟುಮಾಡುತ್ತದೆ.

ಆಹಾರ ಬಲವರ್ಧನೆ ಎಂದರೇನು?

ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ, ಆಹಾರ ಪೂರೈಕೆಯ ಪೌಷ್ಠಿಕಾಂಶದ ಗುಣಮಟ್ಟವನ್ನು ಸುಧಾರಿಸಲು ಅಗತ್ಯವಾದ ಸೂಕ್ಷ್ಮ ಪೋಷಕಾಂಶಗಳ ಪ್ರಮಾಣ ಅಂದರೆ ಜೀವಸತ್ವಗಳು ಮತ್ತು ಖನಿಜಗಳು ಅದರಲ್ಲಿ ಎಚ್ಚರಿಕೆಯಿಂದ ಸಾರ್ವಜನಿಕ ಆರೋಗ್ಯಕ್ಕೆ ಕನಿಷ್ಠ ಅಪಾಯದೊಂದಿಗೆ ಹೆಚ್ಚಿಸುವುದಾಗಿದೆ. ಇದರ ಉದ್ದೇಶವು ಸರಬರಾಜು ಮಾಡಿದ ಆಹಾರ ಧಾನ್ಯಗಳ ಪೌಷ್ಟಿಕಾಂಶದ ಗುಣಮಟ್ಟವನ್ನು ಸುಧಾರಿಸುವುದು ಮತ್ತು ಕನಿಷ್ಠ ಅಪಾಯದೊಂದಿಗೆ ಸಾರ್ವಜನಿಕರಿಗೆ ಆರೋಗ್ಯ ಪ್ರಯೋಜನಗಳನ್ನು ಒದಗಿಸುವುದು.

ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ವು, ದೇಶದಲ್ಲಿ ಆಹಾರ ಪದಾರ್ಥಗಳಿಗೆ ಮಾನದಂಡಗಳನ್ನು ಹೊಂದಿಸುತ್ತದೆ, ಹಾಗೂ ಆಹಾರದ ಬಲವರ್ಧನೆಯನ್ನು ವ್ಯಾಖ್ಯಾನಿಸುತ್ತದೆ. FSSAI ಪ್ರಕಾರ, ಆಹಾರ ಬಲವರ್ಧನೆ ಎಂದರೆ,  “ಆಹಾರದಲ್ಲಿ ಅಗತ್ಯವಾದ ಸೂಕ್ಷ್ಮ ಪೋಷಕಾಂಶಗಳ ಅಂಶವನ್ನು ಉದ್ದೇಶಪೂರ್ವಕವಾಗಿ ಹೆಚ್ಚಿಸುವ ಮೂಲಕ ಆಹಾರದ ಪೌಷ್ಟಿಕಾಂಶದ ಗುಣಮಟ್ಟವನ್ನು ಸುಧಾರಿಸಲು ಮತ್ತು ಸಾರ್ವಜನಿಕ ಆರೋಗ್ಯಕ್ಕೆ ಕನಿಷ್ಠ ಅಪಾಯದೊಂದಿಗೆ ಆರೋಗ್ಯ ಪ್ರಯೋಜನವನ್ನು ಒದಗಿಸುವುದಾಗಿದೆ”.

ಬಲವರ್ಧಿತ ಅಕ್ಕಿ:

ಆಹಾರ ಸಚಿವಾಲಯದ ಪ್ರಕಾರ, ಆಹಾರದಲ್ಲಿ ವಿಟಮಿನ್ ಮತ್ತು ಖನಿಜಾಂಶವನ್ನು ಹೆಚ್ಚಿಸಲು ಅಕ್ಕಿಯ ಬಲವರ್ಧನೆಯು ವೆಚ್ಚ-ಪರಿಣಾಮಕಾರಿ ಮತ್ತು ಪೂರಕ ತಂತ್ರವಾಗಿದೆ.

  1. FSSAI ಮಾನದಂಡಗಳ ಪ್ರಕಾರ, 1 ಕೆಜಿ ಬಲವರ್ಧಿತ ಅಕ್ಕಿಯಲ್ಲಿ ಕಬ್ಬಿಣ (28 ಮಿಗ್ರಾಂ -42.5 ಮಿಗ್ರಾಂ), ಫೋಲಿಕ್ ಆಮ್ಲ (75-125 ಮೈಕ್ರೋಗ್ರಾಮ್) ಮತ್ತು ವಿಟಮಿನ್ ಬಿ -12 (0.75-1.25 ಮೈಕ್ರೋಗ್ರಾಮ್) ಇರುತ್ತದೆ.
  2. ಇದರ ಜೊತೆಯಲ್ಲಿ, ಅಕ್ಕಿಯನ್ನು ಮೈಕ್ರೋನ್ಯೂಟ್ರಿಯಂಟ್‌ಗಳೊಂದಿಗೆ, ಅಕ್ಕಿಯನ್ನು ಪ್ರತ್ಯೇಕವಾಗಿ ಅಥವಾ ಸಂಯೋಜನೆಯಲ್ಲಿ ಬಲ ವರ್ಧಿಸಬಹುದು. ಪ್ರತಿ ಕೆಜಿ ಅಕ್ಕಿಗೆ ಸತು (10 ಮಿಗ್ರಾಂ -15 ಮಿಗ್ರಾಂ), ವಿಟಮಿನ್ ಎ (500-750 ಮೈಕ್ರೋಗ್ರಾಮ್ RE), ವಿಟಮಿನ್ ಬಿ 1 (1 ಮಿಗ್ರಾಂ -1.5 ಮಿಗ್ರಾಂ), ವಿಟಮಿನ್ ಬಿ 2 (1.25 mg-1.75 mg), ವಿಟಮಿನ್ B3 (12.5 mg-20 mg) ಮತ್ತು ವಿಟಮಿನ್ B6 (1.5 mg-2.5 mg) ಪ್ರಮಾಣದಲ್ಲಿ ಬರೆಸುವ ಮೂರಕ ಬಲ ವರ್ಧಿಸಬಹುದು.

ಆಹಾರ ಬಲವರ್ಧನೆಯ’ ಪ್ರಯೋಜನಗಳು:

ವ್ಯಾಪಕವಾಗಿ ಸೇವಿಸುವ ಪ್ರಧಾನ ಆಹಾರಗಳಿಗೆ ಪೋಷಕಾಂಶಗಳನ್ನು ಸೇರಿಸುವುದನ್ನು ‘ಆಹಾರ ಬಲವರ್ಧನೆ’ಯು ಒಳಗೊಂಡಿರುವುದರಿಂದ, ಜನಸಂಖ್ಯೆಯ ದೊಡ್ಡ ಭಾಗದ ಆರೋಗ್ಯವನ್ನು ಸುಧಾರಿಸಲು ಇದು ಅತ್ಯುತ್ತಮ ಮಾರ್ಗವಾಗಿದೆ.

  1. ‘ಫೋರ್ಟಿಫಿಕೇಶನ್’ ಎನ್ನುವುದು ವ್ಯಕ್ತಿಗಳಲ್ಲಿ ಪೌಷ್ಟಿಕಾಂಶವನ್ನು ಸುಧಾರಿಸಲು ಒಂದು ಸುರಕ್ಷಿತ ಮಾರ್ಗವಾಗಿದೆ ಮತ್ತು ಆಹಾರಕ್ಕೆ ಸೂಕ್ಷ್ಮ ಪೋಷಕಾಂಶಗಳನ್ನು ಸೇರಿಸುವುದರಿಂದ ಜನರ ಆರೋಗ್ಯಕ್ಕೆ ಯಾವುದೇ ಅಪಾಯವಿಲ್ಲ.
  2. ಈ ವಿಧಾನವು ಜನರ ಆಹಾರ ಪದ್ಧತಿ ಮತ್ತು ಮಾದರಿಗಳಲ್ಲಿ ಯಾವುದೇ ಬದಲಾವಣೆಯ ಅಗತ್ಯವಿಲ್ಲ ಮತ್ತು ಇದು ಜನರಿಗೆ ಪೌಷ್ಟಿಕಾಂಶಗಳನ್ನು ತಲುಪಿಸಲು ಸಾಮಾಜಿಕ-ಸಾಂಸ್ಕೃತಿಕವಾಗಿ ಸ್ವೀಕಾರಾರ್ಹ ಮಾರ್ಗವಾಗಿದೆ.
  3. ‘ಆಹಾರ ಬಲವರ್ಧನೆ’ಆಹಾರದ ಗುಣಲಕ್ಷಣಗಳನ್ನು ಬದಲಿಸುವುದಿಲ್ಲ – ರುಚಿ, ಭಾವನೆ, ನೋಟ.
  4. ಇದನ್ನು ತ್ವರಿತವಾಗಿ ಅನ್ವಯಿಸಬಹುದು ಹಾಗೂ ತುಲನಾತ್ಮಕವಾಗಿ ಆರೋಗ್ಯ ಸುಧಾರಣೆಯ ಫಲಿತಾಂಶಗಳನ್ನು ಕಡಿಮೆ ಅವಧಿಯಲ್ಲಿ ತೋರಿಸಬಹುದು.
  5. ಈಗಿರುವ ತಂತ್ರಜ್ಞಾನ ಮತ್ತು ವಿತರಣಾ ವೇದಿಕೆಯನ್ನು ಸದುಪಯೋಗಪಡಿಸಿಕೊಂಡರೆ ಇದು ಅತ್ಯಂತ ವೆಚ್ಚ-ಪರಿಣಾಮಕಾರಿ ವಿಧಾನವೆಂದು ಸಾಬೀತುಪಡಿಸಬಹುದು.

 

‘ಆಹಾರ ಬಲವರ್ಧನೆ’ಗೆ ಸಂಬಂಧಿಸಿದ ಸಮಸ್ಯೆಗಳು:

  1. ಪ್ರಸ್ತುತ, ‘ಆಹಾರ ಬಲವರ್ಧನೆ’ಯನ್ನು ಬೆಂಬಲಿಸುವ ಪುರಾವೆಗಳು ಅಪೂರ್ಣವಾಗಿವೆ ಮತ್ತು ಮಹತ್ವದ ರಾಷ್ಟ್ರೀಯ ನೀತಿಯನ್ನು ಕಾರ್ಯಗತಗೊಳಿಸಲು ಖಂಡಿತವಾಗಿಯೂ ಸಾಕಾಗುವುದಿಲ್ಲ.
  2. ‘ಆಹಾರ ಬಲವರ್ಧನೆ’ಯನ್ನು ಉತ್ತೇಜಿಸಲು,’ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ‘(Food Safety and Standards Authority of India – FSSAI) ವು ಹಲವು ಅಧ್ಯಯನ-ವರದಿಗಳನ್ನು ಉಲ್ಲೇಖಿಸುತ್ತದೆ, ಆ ಹೆಚ್ಚಿನ ಅಧ್ಯಯನಗಳನ್ನು ‘ಆಹಾರ ಕಂಪನಿಗಳು’ ಪ್ರಾಯೋಜಿಸಿವೆ, ಅವು ‘ಆಹಾರ ಬಲವರ್ಧನೆಯಿಂದ’ ಪ್ರಯೋಜನ ಪಡೆಯುತ್ತವೆ ಮುಂದೆ ಇದು ಹಿತಾಸಕ್ತಿ ಸಂಘರ್ಷಗಳಿಗೆ ಕಾರಣವಾಗುತ್ತದೆ.
  3. ‘ಆಹಾರ ಬಲವರ್ಧನೆ’ಗೆ ಈ ಆದೇಶವು ಭಾರತೀಯ ರೈತರು ಮತ್ತು ಸ್ಥಳೀಯ ತೈಲ ಮತ್ತು ಅಕ್ಕಿ ಗಿರಣಿಗಳು ಸೇರಿದಂತೆ ಆಹಾರ ಸಂಸ್ಕಾರಕಗಳ ವಿಶಾಲ ಅನೌಪಚಾರಿಕ ಆರ್ಥಿಕತೆಗೆ ಹಾನಿ ಮಾಡುತ್ತದೆ ಮತ್ತು ಬಹುರಾಷ್ಟ್ರೀಯ ಕಂಪನಿಗಳ ಒಂದು ಸಣ್ಣ ಗುಂಪು ಮಾತ್ರ ಪ್ರಯೋಜನ ಪಡೆಯುತ್ತದೆ.
  4. ಅಲ್ಲದೆ, ಆಹಾರಗಳ ರಾಸಾಯನಿಕ ಬಲವರ್ಧನೆಯ ಒಂದು ಪ್ರಮುಖ ಸಮಸ್ಯೆ ಎಂದರೆ ಪೋಷಕಾಂಶಗಳು ಪ್ರತ್ಯೇಕವಾಗಿ ಕಾರ್ಯನಿರ್ವಹಿಸುವುದಿಲ್ಲ, ಆದರೆ ಅವು ಅತ್ಯುತ್ತಮವಾದ ಹೀರಿಕೊಳ್ಳುವಿಕೆಗೆ ಪರಸ್ಪರ ಒಟ್ಟಾಗಿರಬೇಕು.

ಅವಶ್ಯಕತೆ:

ಭಾರತದಲ್ಲಿ ಅಪೌಷ್ಟಿಕತೆಗೆ ಒಂದು ಕಾರಣವೆಂದರೆ, ಇಲ್ಲಿನ ಜನರು ಯಾವಾಗಲೂ ಒಂದೇ ರೀತಿಯ ಏಕದಳ ಧಾನ್ಯ ಆಧಾರಿತ ಆಹಾರವನ್ನು ಮತ್ತು, ಕಡಿಮೆ ತರಕಾರಿ ಮತ್ತು ಪ್ರಾಣಿ ಜನ್ಯ ಉತ್ಪನ್ನಗಳಲ್ಲಿನ ಪ್ರೋಟೀನ್‌ಗಳನ್ನು ಸೇವಿಸುವುದಾಗಿದೆ. ಆದ್ದರಿಂದ, ಆಹಾರವನ್ನು ಬಲಪಡಿಸುವ ಬದಲು, ‘ಆಹಾರದಲ್ಲಿ ವೈವಿಧ್ಯತೆ’ ಯನ್ನು ತರುವುದು ಅಪೌಷ್ಟಿಕತೆಯ ವಿರುದ್ಧ ಹೋರಾಡಲು ಇರುವ ಹೆಚ್ಚು ಆರೋಗ್ಯಕರ ಮತ್ತು ವೆಚ್ಚ-ಪರಿಣಾಮಕಾರಿ ಮಾರ್ಗವಾಗಿದೆ.

 


ಸಾಮಾನ್ಯ ಅಧ್ಯಯನ ಪತ್ರಿಕೆ : 2


 

ವಿಷಯಗಳು: ಪ್ರಜಾ ಪ್ರಾತಿನಿಧ್ಯ ಕಾಯ್ದೆಯ ಪ್ರಮುಖ ಲಕ್ಷಣಗಳು.

ರಾಜಕೀಯ ಪಕ್ಷಗಳಿಗೆ ಮಾನ್ಯತೆ ನೀಡುವುದು /ಮಾನ್ಯತೆಯನ್ನು ರದ್ದುಪಡಿಸುವುದು:


(Recognition/derecognition of political parties)

ಸಂದರ್ಭ:

ದೆಹಲಿ ಹೈಕೋರ್ಟ್, ಸಾರ್ವಜನಿಕ ಹಣವನ್ನು ಬಳಸಿಕೊಂಡು ಗಣೇಶ ಚತುರ್ಥಿ ಕಾರ್ಯಕ್ರಮಗಳನ್ನು ಆಯೋಜಿಸಿದ್ದಕ್ಕಾಗಿ ಆಮ್ ಆದ್ಮಿ ಪಕ್ಷದ ಮಾನ್ಯತೆ ರದ್ದುಗೊಳಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯ ಕುರಿತು ಕೇಂದ್ರ ಸರ್ಕಾರ, ದೆಹಲಿ ಸರ್ಕಾರ ಮತ್ತು ಚುನಾವಣಾ ಆಯೋಗದ ಪ್ರತಿಕ್ರಿಯೆಯನ್ನು ಕೇಳಿದೆ.

ಏನಿದು ಪ್ರಕರಣ?

ದೆಹಲಿ ಹೈಕೋರ್ಟ್‌ನಲ್ಲಿ ಸಲ್ಲಿಸಲಾದ ಅರ್ಜಿಯಲ್ಲಿ ಅರ್ಜಿದಾರರು, ಸಾರ್ವಜನಿಕರ ಹಿತದೃಷ್ಟಿಯಿಂದ, ‘ಸಂವಿಧಾನ’ ಮತ್ತು ‘ಪ್ರಜಾ ಪ್ರಾತಿನಿಧ್ಯ ಕಾಯಿದೆ’ಯನ್ನು ಉದ್ದೇಶಪೂರ್ವಕವಾಗಿ ಉಲ್ಲಂಘಿಸಿದ ಆರೋಪದ ಮೇಲೆ  ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮತ್ತು ಇತರ ಸಚಿವರನ್ನು ಸಾಂವಿಧಾನಿಕ ಹುದ್ದೆಯಿಂದ ತೆಗೆದುಹಾಕಬೇಕು ಮತ್ತು ‘ಆಮ್ ಆದ್ಮಿ ಪಾರ್ಟಿ’ (AAP) ಯನ್ನು ಅಮಾನ್ಯಗೊಳಿಸಬೇಕು ಎಂಬ ಬೇಡಿಕೆ ಮಂಡಿಸಿದ್ದಾರೆ.

ರಾಜಕೀಯ ಪಕ್ಷಗಳ ನೋಂದಣಿ:

ರಾಜಕೀಯ ಪಕ್ಷಗಳ ನೋಂದಣಿಯನ್ನು 1951 ರ ಪ್ರಜಾ ಪ್ರಾತಿನಿಧ್ಯ ಕಾಯ್ದೆಯ ( ಜನಪ್ರತಿನಿಧಿ ಕಾಯ್ದೆ) ಸೆಕ್ಷನ್ 29 ಎ ನಿಬಂಧನೆಗಳ ಅಡಿಯಲ್ಲಿ ಮಾಡಲಾಗುತ್ತದೆ.

  1. ರಾಜಕೀಯ ಪಕ್ಷವನ್ನು ನೋಂದಾಯಿಸಲು, ರಚನೆಯಾದ 30 ದಿನಗಳ ಅವಧಿಯಲ್ಲಿ, ಮೇಲಿನ ವಿಭಾಗದ ಅಡಿಯಲ್ಲಿ ಭಾರತದ ಚುನಾವಣಾ ಆಯೋಗಕ್ಕೆ ಅರ್ಜಿಯನ್ನು ಸಲ್ಲಿಸಬೇಕು. ಇದಕ್ಕಾಗಿ, ಭಾರತದ ಚುನಾವಣಾ ಆಯೋಗವು ಭಾರತದ ಸಂವಿಧಾನದ 324 ನೇ ವಿಧಿ ಮತ್ತು 1951 ರ ಪ್ರಜಾ ಪ್ರಾತಿನಿಧ್ಯ ಕಾಯ್ದೆ’ ಯ ಸೆಕ್ಷನ್ 29 ಎ ಯಿಂದ ನೀಡಲ್ಪಟ್ಟ ಅಧಿಕಾರವನ್ನು ಚಲಾಯಿಸಲು ಮಾರ್ಗಸೂಚಿಗಳನ್ನು ನೀಡುತ್ತದೆ.

ಭಾರತದ ‘ರಾಷ್ಟ್ರೀಯ ರಾಜಕೀಯ ಪಕ್ಷ’ವಾಗಿ ಅರ್ಹತೆ ಪಡೆಯಲು:

  1. ರಾಜಕೀಯ ಪಕ್ಷವನ್ನು ರಾಷ್ಟ್ರೀಯ ಪಕ್ಷವೆಂದು ಗುರುತಿಸಬೇಕಾದರೆ, ಯಾವುದೇ ನಾಲ್ಕು ಅಥವಾ ಹೆಚ್ಚಿನ ರಾಜ್ಯಗಳಲ್ಲಿ ಸಾರ್ವತ್ರಿಕ ಚುನಾವಣೆಗಳಲ್ಲಿ ಅಥವಾ ವಿಧಾನಸಭಾ ಚುನಾವಣೆಗಳಲ್ಲಿ ಒಟ್ಟು ಆರು ಪ್ರತಿಶತದಷ್ಟು ಮಾನ್ಯವಾದ ಮತಗಳನ್ನು ಪಡೆಯುವುದು ಕಡ್ಡಾಯವಾಗಿದೆ.
  2. ಅಲ್ಲದೆ, ಇದಕ್ಕಾಗಿ ಯಾವುದೇ ರಾಜ್ಯ ಅಥವಾ ರಾಜ್ಯಗಳಿಂದ ಕನಿಷ್ಠ ನಾಲ್ಕು ಲೋಕಸಭಾ ಸ್ಥಾನಗಳನ್ನು ಗೆಲ್ಲಬೇಕು.
  3. ಲೋಕಸಭಾ ಚುನಾವಣೆಯಲ್ಲಿ, ಒಟ್ಟು ಲೋಕಸಭಾ ಸ್ಥಾನಗಳಲ್ಲಿ 2 ಪ್ರತಿಶತ (ಪ್ರಸ್ತುತ 543 ಸದಸ್ಯರ ಪೈಕಿ 11 ಸದಸ್ಯರು) ಆ ರಾಜಕೀಯ ಪಕ್ಷದಿಂದ ಗೆದ್ದಿದ್ದರೆ ಮತ್ತು ಈ ಸದಸ್ಯರು ಕನಿಷ್ಠ ಮೂರು ವಿಭಿನ್ನ ರಾಜ್ಯಗಳಿಂದ ಆಯ್ಕೆ ಯಾಗಿರಬೇಕು.

ರಾಜ್ಯ ರಾಜಕೀಯ ಪಕ್ಷವಾಗಿ (ಪ್ರಾದೇಶಿಕ ಪಕ್ಷ ) ಅರ್ಹತೆ ಪಡೆಯಲು:

  1. ರಾಜಕೀಯ ಪಕ್ಷವನ್ನು ‘ರಾಜ್ಯ ಮಟ್ಟದ ರಾಜಕೀಯ ಪಕ್ಷ’ ಎಂದು ಗುರುತಿಸಬೇಕಾದರೆ, ರಾಜ್ಯದಲ್ಲಿ ನಡೆಯುವ ಲೋಕಸಭೆ ಅಥವಾ ವಿಧಾನಸಭಾ ಚುನಾವಣೆಯಲ್ಲಿ ಒಟ್ಟು ಶೇಕಡಾ 6 ರಷ್ಟು ಮಾನ್ಯ ಮತಗಳನ್ನು ಪಡೆಯುವುದು ಕಡ್ಡಾಯವಾಗಿದೆ.
  2. ಇದಲ್ಲದೆ, ಅದು ಸಂಬಂಧಪಟ್ಟ ರಾಜ್ಯದ ವಿಧಾನಸಭೆಯಲ್ಲಿ ಕನಿಷ್ಠ ಎರಡು ಸ್ಥಾನಗಳನ್ನು ಗೆಲ್ಲಬೇಕು.
  3. ರಾಜಕೀಯ ಪಕ್ಷವೊಂದು, ರಾಜ್ಯ ವಿಧಾನಸಭೆಯ ಚುನಾವಣೆಯಲ್ಲಿ ವಿಧಾನಸಭೆಯ ಒಟ್ಟು ಸ್ಥಾನಗಳಲ್ಲಿ 3 ಪ್ರತಿಶತ ಅಥವಾ 3 ಸ್ಥಾನಗಳು, ಯಾವುದು ಹೆಚ್ಚೋ ಅದನ್ನು ಪಡೆಯಬೇಕು.

ಪ್ರಯೋಜನಗಳು:

  1. ರಾಜ್ಯ ಮಟ್ಟದ ರಾಜಕೀಯ ಪಕ್ಷ’ ಎಂದು ಗುರುತಿಸಲ್ಪಟ್ಟ ಯಾವುದೇ ನೋಂದಾಯಿತ ಪಕ್ಷವು ಪಕ್ಷಕ್ಕೆ ಕಾಯ್ದಿರಿಸಿದ ಚುನಾವಣಾ ಚಿಹ್ನೆಯನ್ನು ಆಯಾ ರಾಜ್ಯದ ಅಭ್ಯರ್ಥಿಗಳಿಗೆ ಹಂಚುವ ಅರ್ಹತೆಯನ್ನು ಹೊಂದಿದೆ. ಮತ್ತು, ‘ರಾಷ್ಟ್ರೀಯ ರಾಜಕೀಯ ಪಕ್ಷ’ ಎಂದು ಗುರುತಿಸಲ್ಪಟ್ಟ ಯಾವುದೇ ನೋಂದಾಯಿತ ಪಕ್ಷವು ಭಾರತದಾದ್ಯಂತ ತನ್ನ ಅಭ್ಯರ್ಥಿಗಳಿಗೆ ಪಕ್ಷಕ್ಕೆ ಕಾಯ್ದಿರಿಸಿದ ಚಿಹ್ನೆಯನ್ನು ನಿಗದಿಪಡಿಸುವ ಅರ್ಹತೆಯನ್ನು ಹೊಂದಿರುತ್ತದೆ.
  2. ಮಾನ್ಯತೆ ಪಡೆದ ರಾಷ್ಟ್ರೀಯ ಅಥವಾ ರಾಜ್ಯಮಟ್ಟದ ರಾಜಕೀಯ ಪಕ್ಷಗಳ ಅಭ್ಯರ್ಥಿಗಳಿಗೆ ತಮ್ಮ ನಾಮಪತ್ರಗಳನ್ನು ಸಲ್ಲಿಸುವಾಗ ಕೇವಲ ಒಬ್ಬ ಪ್ರಸ್ತಾಪಕರ ಅಗತ್ಯವಿದೆ. ಅಲ್ಲದೆ, ಮತದಾರರ ಪಟ್ಟಿಗಳ ತಿದ್ದುಪಡಿ ಸಮಯದಲ್ಲಿ ಎರಡು ಸೆಟ್ ಮತದಾರರ ಪಟ್ಟಿಗಳನ್ನು ಉಚಿತವಾಗಿ ಪಡೆಯಲು ಅವರಿಗೆ ಅಧಿಕಾರವಿದೆ ಮತ್ತು ಸಾರ್ವತ್ರಿಕ ಚುನಾವಣೆಯ ಸಮಯದಲ್ಲಿ ಒಂದು ಸೆಟ್ ಮತದಾರರ ಪಟ್ಟಿಯ ಒಂದು ನಕಲು ಪ್ರತಿಯನ್ನು ಸಂಬಂಧಿಸಿದ ಪಕ್ಷದ ಅಭ್ಯರ್ಥಿಗಳು ಉಚಿತವಾಗಿ ಪಡೆಯುತ್ತಾರೆ.
  3. ಸಾರ್ವತ್ರಿಕ ಚುನಾವಣೆಯ ಸಮಯದಲ್ಲಿ ಅವರಿಗೆ ಆಕಾಶವಾಣಿ ಮತ್ತು ದೂರದರ್ಶನದಲ್ಲಿ ಪ್ರಸಾರ ಮಾಡುವ ಸೌಲಭ್ಯವನ್ನು ಒದಗಿಸಲಾಗುತ್ತದೆ.
  4. ಮಾನ್ಯತೆ ಪಡೆದ ರಾಜಕೀಯ ಪಕ್ಷಗಳಿಗೆ, ಸಾರ್ವತ್ರಿಕ ಚುನಾವಣೆಗಳಲ್ಲಿ ಸ್ಟಾರ್ ಪ್ರಚಾರಕರ ಪ್ರಯಾಣದ ವೆಚ್ಚವನ್ನು ಆ ಪಕ್ಷದ ಅಭ್ಯರ್ಥಿ ಅಥವಾ ಪಕ್ಷದ ವೆಚ್ಚಗಳಿಗೆ ಸೇರಿಸಲಾಗುವುದಿಲ್ಲ.

 

ವಿಷಯಗಳು: ಸಂರಕ್ಷಣೆ ಮತ್ತು ಮಾಲಿನ್ಯ ಸಂಬಂಧಿತ ವಿಷಯಗಳು.

ಅಂತರಾಷ್ಟ್ರೀಯ ನೀಲಿ ಧ್ವಜ ಪ್ರಮಾಣೀಕರಣ:


(International Blue Flag Certification)

ಸಂದರ್ಭ:

ಇತ್ತೀಚೆಗೆ, ಇತರ ಎರಡು ಭಾರತೀಯ ಕಡಲತೀರಗಳು (ತಮಿಳುನಾಡಿನ ಕೋವಲಂ ಮತ್ತು ಪುದುಚೇರಿಯಲ್ಲಿ ಈಡನ್) ಜಾಗತಿಕ ಮಟ್ಟದಲ್ಲಿ ಗುರುತಿಸಲ್ಪಟ್ಟ ಮತ್ತು ಅಪೇಕ್ಷಿತ ಅಂತರಾಷ್ಟ್ರೀಯ ಪರಿಸರ-ಲೇಬಲ್ ‘ಬ್ಲೂ ಫ್ಲ್ಯಾಗ್’ ಪ್ರಮಾಣಪತ್ರವನ್ನು ಪಡೆದಿವೆ.

ಭಾರತದಲ್ಲಿ ‘ಬ್ಲೂ ಫ್ಲ್ಯಾಗ್’ ಪ್ರಮಾಣಪತ್ರ ಹೊಂದಿರುವ ಕಡಲತೀರಗಳ ಸಂಖ್ಯೆ 10 ಕ್ಕೆ ಏರಿದೆ.

  1. ಸಂಪನ್ಮೂಲಗಳ ಸಮಗ್ರ ನಿರ್ವಹಣೆಯ ಮೂಲಕ ಪ್ರಾಚೀನ ಕರಾವಳಿ ಮತ್ತು ಸಮುದ್ರ ಪರಿಸರ ವ್ಯವಸ್ಥೆಗಳನ್ನು ರಕ್ಷಿಸಲು ಮತ್ತು ಸಂರಕ್ಷಿಸಲು ಭಾರತದ ಬದ್ಧತೆಯನ್ನು ಗುರುತಿಸಿ ಈ ಪ್ರಮಾಣೀಕರಣವನ್ನು ನೀಡಲಾಗಿದೆ.

ಕಳೆದ ವರ್ಷ ‘ಬ್ಲೂ ಫ್ಲ್ಯಾಗ್’ ಪ್ರಮಾಣಪತ್ರವನ್ನು ಪಡೆದ ಬೀಚ್‌ಗಳನ್ನು ಈ ಪಟ್ಟಿಯಲ್ಲಿ ಮತ್ತೆ ಸೇರಿಸಲಾಗಿದೆ. ಅವುಗಳು:

ಕಪ್ಪಾಡ್ (ಕೇರಳ), ಶಿವರಾಜ್‌ಪುರ (ಗುಜರಾತ್), ಘೋಘ್ಲಾ (ಡಿಯು), ಕಾಸರ್ ಕೋಡ್ ಮತ್ತು ಪಡುಬಿದ್ರಿ (ಕರ್ನಾಟಕ), ಋಷಿಕೊಂಡ (ಆಂಧ್ರಪ್ರದೇಶ), ಗೋಲ್ಡನ್ (ಒಡಿಶಾ) ಮತ್ತು ರಾಧನಗರ (ಅಂಡಮಾನ್ ಮತ್ತು ನಿಕೋಬಾರ್).

2020 ರ ಅಕ್ಟೋಬರ್ 6 ರಂದು ಭಾರತವು ಈ 8 ಕಡಲತೀರಗಳಿಗೆ ಅಂತರರಾಷ್ಟ್ರೀಯ ನೀಲಿ ಧ್ವಜ ಪ್ರಮಾಣೀಕರಣವನ್ನು ಪಡೆದುಕೊಂಡಿತು, ಸದಸ್ಯ ಸಂಘಟನೆಗಳಾದ UNEP, UNWTO, UNESCO, IUCN, ILS, FEE ಇತ್ಯಾದಿಗಳನ್ನು ಒಳಗೊಂಡ ಅಂತರರಾಷ್ಟ್ರೀಯ ತೀರ್ಪುಗಾರರ ತಂಡವು ಡೆನ್ಮಾರ್ಕ್‌ನ ಕೋಪನ್ ಹ್ಯಾಗನ್‌ನಲ್ಲಿ (Copenhagen) ಪ್ರಶಸ್ತಿಯನ್ನು ಘೋಷಿಸಿತು.

ನೀಲಿ ಧ್ವಜ ಕಾರ್ಯಕ್ರಮದ ಬಗ್ಗೆ:

  1. ಬ್ಲೂ ಫ್ಲ್ಯಾಗ್ ಸರ್ಟಿಫಿಕೇಶನ್’ ಎನ್ನುವುದು ಜಾಗತಿಕವಾಗಿ ಗುರುತಿಸಲ್ಪಟ್ಟಿರುವ ‘ಪರಿಸರ-ಲೇಬಲ್’ ಆಗಿದ್ದು, 33 ಕಠಿಣ ಮಾನದಂಡಗಳ ಆಧಾರದ ಮೇಲೆ “ಡೆನ್ಮಾರ್ಕ್‌ನಲ್ಲಿ ಪರಿಸರ ಶಿಕ್ಷಣ ಪ್ರತಿಷ್ಠಾನ” ದಿಂದ ನೀಡಲ್ಪಟ್ಟಿದೆ.a
  2. ಬೀಚ್ ಗಳು ಮತ್ತು ಸಮುದ್ರತೀರಗಳಿಗಾಗಿನ ನೀಲಿ ಧ್ವಜ ಕಾರ್ಯಕ್ರಮವನ್ನು ಅಂತರರಾಷ್ಟ್ರೀಯ, ಸರ್ಕಾರೇತರ, ಲಾಭರಹಿತ ಸಂಸ್ಥೆ FEE (ಪರಿಸರ ಶಿಕ್ಷಣದ ಪ್ರತಿಷ್ಠಾನ/ the Foundation for Environmental Education) ನಡೆಸುತ್ತಿದೆ.
  3. ಇದು 1985 ರಲ್ಲಿ ಫ್ರಾನ್ಸ್‌ನಲ್ಲಿ ಪ್ರಾರಂಭವಾಯಿತು ಮತ್ತು 1987 ರಿಂದ ಯುರೋಪಿನಲ್ಲಿ ಮತ್ತು ಯುರೋಪಿನ ಹೊರಗಿನ ಪ್ರದೇಶಗಳಲ್ಲಿ, 2001ರಲ್ಲಿ ದಕ್ಷಿಣ ಆಫ್ರಿಕಾ ಸೇರಿದಂದಿನಿಂದ ಜಾರಿಗೆ ಬಂದಿದೆ.
  4. ಅಚ್ಚುಕಟ್ಟಾದ ಮತ್ತು ಸ್ವಚ್ಛವಾದ ಕಡಲತೀರಗಳು ಕರಾವಳಿ ಪರಿಸರದ ಉತ್ತಮ ಆರೋಗ್ಯದ ಸೂಚಕಗಳಾಗಿವೆ, ‘ನೀಲಿ ಧ್ವಜ ಪ್ರಮಾಣೀಕರಣ’ ಭಾರತದ ಸಂರಕ್ಷಣೆ ಮತ್ತು ಸುಸ್ಥಿರ ಅಭಿವೃದ್ಧಿ ಪ್ರಯತ್ನಗಳಿಗೆ ‘ಜಾಗತಿಕ ಮನ್ನಣೆ’ಯಾಗಿದೆ.
  5. ಕಡಲತೀರದ ಮೇಲೆ ಬೀಸುತ್ತಿರುವ “ನೀಲಿ ಧ್ವಜ” ಬೀಚ್ ನ 33% ಕಟ್ಟುನಿಟ್ಟಾದ ಮಾನದಂಡಗಳು ಮತ್ತು ಕಡಲತೀರದ ಉತ್ತಮ ಆರೋಗ್ಯದೊಂದಿಗೆ 100% ಅನುಸರಣೆಯನ್ನು ಸೂಚಿಸುತ್ತದೆ.

ನೀಲಿ ಧ್ವಜ ಕಡಲತೀರ ಎಂದರೇನು?

ಕಡಲತೀರದ ಸ್ವಚ್ಛತೆ, ನೀರಿನ ಗುಣಮಟ್ಟ, ಪರಿಸರ ಸ್ನೇಹಿ ವಾತಾವರಣ, ಸುರಕ್ಷತೆ ಮುಂತಾದ ಅಂಶಗಳನ್ನು ಒಳಗೊಂಡಿರುವ ಕಡಲ ತೀರವಾಗಿದೆ.

  1. ಇದು ಒಂದು ‘ಪರಿಸರ-ಪ್ರವಾಸೋದ್ಯಮ ಮಾದರಿ’ ಯಾಗಿದೆ ಮತ್ತು ಪ್ರವಾಸಿಗರಿಗೆ ಮತ್ತು ಕಡಲತೀರದ ವಿಹಾರಿಗಳಿಗೆ ಸ್ವಚ್ಛ ಮತ್ತು ಆರೋಗ್ಯಕರ ಸ್ನಾನದ ನೀರನ್ನು ಒದಗಿಸುವ ಮತ್ತು ಸೌಲಭ್ಯಗಳು / ಸೌಕರ್ಯಗಳು, ಸುರಕ್ಷಿತ ಮತ್ತು ಆರೋಗ್ಯಕರ ಪರಿಸರ ಮತ್ತು ಪ್ರದೇಶದ ಸುಸ್ಥಿರ ಅಭಿವೃದ್ಧಿಯನ್ನು ಒದಗಿಸುವ ಕಡಲತೀರಗಳೆಂದು ಗುರುತಿಸಲಾಗುತ್ತದೆ.

ಮಾನದಂಡ:

ನೀಲಿ ಧ್ವಜ ಪ್ರಮಾಣೀಕರಣಕ್ಕೆ ಅರ್ಹತೆ ಪಡೆಯಲು ಸುಮಾರು 33 ಷರತ್ತುಗಳನ್ನು ಚಾಚೂ ತಪ್ಪದೇ ಪಾಲಿಸಬೇಕಾಗುತ್ತದೆ, ಉದಾಹರಣೆಗೆ ನೀರು ಕೆಲವು ಗುಣಮಟ್ಟದ ಮಾನದಂಡಗಳನ್ನು ಪೂರೈಸುವುದು, ತ್ಯಾಜ್ಯ ವಿಲೇವಾರಿ ಸೌಲಭ್ಯಗಳನ್ನು ಹೊಂದಿರುವುದು, ಅಂಗವಿಕಲ ಸ್ನೇಹಿಯಾಗಿರುವುದು, ಪ್ರಥಮ ಚಿಕಿತ್ಸಾ ಸಾಧನಗಳನ್ನು ಹೊಂದಿರುವುದು ಮತ್ತು ಕಡಲತೀರದ ಮುಖ್ಯ ಪ್ರದೇಶಗಳಲ್ಲಿ ಸಾಕುಪ್ರಾಣಿಗಳಿಗೆ ಪ್ರವೇಶ ನೀಡದಿರುವುದು. ಕೆಲವು ಮಾನದಂಡಗಳು ಸ್ವಯಂಪ್ರೇರಿತ ವಾಗಿದ್ದರೆ ಇನ್ನು ಕೆಲವು ಕಡ್ಡಾಯವಾಗಿವೆ.

ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ಉಪಯುಕ್ತ ಅಂಶಗಳು :

ಇಂತಹ 560 ಕ್ಕೂ ಹೆಚ್ಚು ಕಡಲತೀರಗಳನ್ನು ಹೊಂದಿರುವ ಸ್ಪೇನ್ ಮೊದಲ ಸ್ಥಾನದಲ್ಲಿದ್ದರೆ; ಗ್ರೀಸ್ ಮತ್ತು ಫ್ರಾನ್ಸ್ ನಂತರದ ಸ್ಥಾನಗಳಲ್ಲಿವೆ.

ಭಾರತವು ಈಗ 50 “ಬ್ಲೂ ಫ್ಲಾಗ್” ದೇಶಗಳ ಗುಂಪಿನಲ್ಲಿದೆ.

ನೀಲಿ ಧ್ವಜ ಪ್ರಮಾಣೀಕರಣವು ಕಡಲತೀರಗಳಿಗೆ ಮಾತ್ರ ಲಭ್ಯವಿದೆಯೇ?

  1. ಹಾಗೇನೂ ಇಲ್ಲ. ಇದನ್ನು ಬೀಚ್, ಮರೀನಾ (ಸಣ್ಣ ಬೋಟುಗಳ ವಿರಾಮಕ್ಕಾಗಿ ಬಳಸುವ ಸಣ್ಣ ಬಂದರು) ಅಥವಾ ಸುಸ್ಥಿರ ಬೋಟಿಂಗ್ ಪ್ರವಾಸೋದ್ಯಮ ಆಯೋಜಕರಿಗೆ ನೀಡಲಾಗುವುದು.
  2. ಮೂಲಭೂತವಾಗಿ, ನೀಲಿ ಧ್ವಜ ಎನ್ನುವುದು ಒಂದು ಟ್ರೇಡ್‌ಮಾರ್ಕ್ ಆಗಿದೆ.

 

ವಿಷಯಗಳು:ಆರೋಗ್ಯ, ಶಿಕ್ಷಣ, ಸಾಮಾಜಿಕ ವಲಯ / ಸೇವೆಗಳ ಅಭಿವೃದ್ಧಿ ಮತ್ತು ನಿರ್ವಹಣೆಗೆ ಸಂಬಂಧಿಸಿದ ಮಾನವ ಸಂಪನ್ಮೂಲ ಸಂಬಂಧಿತ ವಿಷಯಗಳು.

ಹವಾನಾ ಸಿಂಡ್ರೋಮ್:


(Havana Syndrome)

ಸಂದರ್ಭ:

ಈ ತಿಂಗಳ ಆರಂಭದಲ್ಲಿ ಭಾರತಕ್ಕೆ ಭೇಟಿ ನೀಡಿದ್ದಾಗ, ಸಿಐಎ ನಿರ್ದೇಶಕ ವಿಲಿಯಂ ಬರ್ನ್ಸ್ ಮತ್ತು ಯುಎಸ್ ಗುಪ್ತಚರ ಅಧಿಕಾರಿ ಹವಾನಾ ಸಿಂಡ್ರೋಮ್ ರೋಗಲಕ್ಷಣಗಳನ್ನು ಅನುಭವಿಸುತ್ತಿದ್ದರೆಂದು ವರದಿಯಾಗಿದೆ.

ಭಾರತದಲ್ಲಿ ಇಂತಹ ಘಟನೆ ವರದಿಯಾಗುತ್ತಿರುವುದು ಇದೇ ಮೊದಲು ಮತ್ತು ಇದು ರಾಜತಾಂತ್ರಿಕ ಪರಿಣಾಮಗಳನ್ನು ಹೊಂದಿರಬಹುದು.

‘ಹವಾನಾ ಸಿಂಡ್ರೋಮ್’ ಎಂದರೇನು?

2016 ರ ಕೊನೆಯಲ್ಲಿ, ಹಲವಾರು ಯುಎಸ್ ರಾಜತಾಂತ್ರಿಕರು ಮತ್ತು ಹವಾನಾದಲ್ಲಿ ಬೀಡುಬಿಟ್ಟಿದ್ದ ಇತರ ಸಿಬ್ಬಂದಿಗಳು ವಿಚಿತ್ರ ಶಬ್ದಗಳನ್ನು ಕೇಳಿದ ನಂತರ ಮತ್ತು ಅವರ ಹೋಟೆಲ್ ಕೊಠಡಿಗಳಲ್ಲಿ ಅಥವಾ ಮನೆಗಳಲ್ಲಿ ವಿಚಿತ್ರವಾದ ದೇಹದ ಸಂವೇದನೆಗಳನ್ನು ಅನುಭವಿಸಿದ ನಂತರ ಅನಾರೋಗ್ಯಕ್ಕೆ ಒಳಗಾದರು.

ಇದರ ಜೊತೆಗೆ, ವಾಕರಿಕೆ, ತೀವ್ರ ತಲೆನೋವು, ಆಯಾಸ, ತಲೆತಿರುಗುವಿಕೆ, ನಿದ್ರೆಯ ತೊಂದರೆಗಳು ಮತ್ತು ಶ್ರವಣ ನಷ್ಟದಂತಹ ಲಕ್ಷಣಗಳನ್ನು ಗಮನಿಸಲಾಗಿದೆ. ಅಂದಿನಿಂದ ಈ ರೋಗವನ್ನು “ಹವಾನಾ ಸಿಂಡ್ರೋಮ್” ಎಂದು ಕರೆಯಲಾಗುತ್ತದೆ.

‘ಹವಾನಾ ಸಿಂಡ್ರೋಮ್’ ಗೆ ಕಾರಣಗಳು?

  1. ಸಮಿತಿಯು ಪರೀಕ್ಷಿಸಿದ ಪ್ರಕರಣಗಳ ವ್ಯಾಖ್ಯಾನದ ಮೇಲೆ, ‘ನಿರ್ದೇಶಿತ’ ನಾಡಿಮಿಡಿತ ರೇಡಿಯೋ ಫ್ರೀಕ್ವೆನ್ಸಿ ಎನರ್ಜಿಯು (Directed pulsed Radio Frequency energy) ‘ಹವಾನಾ ಸಿಂಡ್ರೋಮ್’ಗೆ ಹೆಚ್ಚಿನ ಕಾರಣವೆಂದು ಕಂಡುಬಂದಿದೆ.
  2. ಈ ಕಾಯಿಲೆಯಿಂದ ಸೋಂಕಿಗೆ ಒಳಗಾದಾಗ, ರೋಗಿಯು ನೋವಿನ ಸಂವೇದನೆ ಮತ್ತು ಝೆಂಕರಿಸುವ ಶಬ್ದವನ್ನು ಅನುಭವಿಸಿದನು, ಮತ್ತು ಇವುಗಳು ನಿರ್ದಿಷ್ಟ ದಿಕ್ಕಿನಿಂದ ಅಥವಾ ಕೊಠಡಿಯ ನಿರ್ದಿಷ್ಟ ಸ್ಥಳದಿಂದ ಹುಟ್ಟಿಕೊಂಡವು.

ಹವಾನಾ ಸಿಂಡ್ರೋಮ್‌ಗೆ ಅಮೆರಿಕದ ಪ್ರತಿಕ್ರಿಯೆ:

ಸಿಂಡ್ರೋಮ್ ಅನ್ನು ಉದ್ದೇಶಪೂರ್ವಕವಾಗಿ ಸಕ್ರಿಯಗೊಳಿಸುವ “ಬಲವಾದ ಸಾಧ್ಯತೆ” ಇದೆ ಎಂದು ಯುಎಸ್ ನಂಬುತ್ತದೆ.

  1. ವರ್ಷಗಳಲ್ಲಿ, ಈ ಘಟನೆಗಳನ್ನು ಎಫ್‌ಬಿಐ, ಸಿಐಎ, ಯುಎಸ್ ಮಿಲಿಟರಿ, ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಹೆಲ್ತ್ ಮತ್ತು ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಶನ್ ಇದರ ಕುರಿತು ತನಿಖೆ ಮಾಡಿವೆ ಆದರೆ ಯಾವುದೇ ಖಚಿತ ಫಲಿತಾಂಶವನ್ನು ಹೊಂದಿಲ್ಲ.
  2. ಕೆಲವು ವಿಜ್ಞಾನಿಗಳು ವಿದೇಶಿ ಕಾರ್ಯಾಚರಣೆಗಳಲ್ಲಿ ಉಂಟಾಗುವ ಒತ್ತಡದ ವಾತಾವರಣದಿಂದ ಉಂಟಾಗುವ ಮಾನಸಿಕ ಅಸ್ವಸ್ಥತೆ” ಯಂತಹ ಸಿದ್ಧಾಂತಗಳನ್ನು ಮುಂದಿಟ್ಟಿದ್ದಾರೆ.
  3. ಆದಾಗ್ಯೂ, ಡಿಸೆಂಬರ್ 2020 ರಲ್ಲಿ, ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್ (NAS) ನ ವರದಿಯಲ್ಲಿ, ರೋಗದ ಸಂಭವನೀಯ ಕಾರಣವೆಂದರೆ ‘ನಿರ್ದೇಶಿತ’ ಮೈಕ್ರೋವೇವ್ ವಿಕಿರಣ (‘directed’ microwave radiation) ಎಂದು ಹೇಳಲಾಗಿದೆ.

current affairs

 

ಹೆಚ್ಚಿನ ಮಾಹಿತಿಗಾಗಿ:

ಹವಾನ ಸಿಂಡ್ರೋಮ್ ಎಂದರೇನು?

ಈ ಹವನ ಸಿಂಡ್ರೋಮ್‌ ಮೊದಲಿಗೆ 20216ರಲ್ಲಿ ಯುಎಸ್‌ನ ಇಂಟೆಲಿಜೆನ್ಸಿ ಆಫೀಸರ್‌ಗಳಿಗೆ ಹಾಗೂ ರಾಯಭಾರಿ ಕಚೇರಿಯ ಸಿಬ್ಬಂದಿಗಳಲ್ಲಿ ಈ ಸಿಂಡ್ರೋಮ್ ಕಂಡು ಬಂದಿತ್ತು. ಜಗತ್ತಿನ ವಿವಿಧ ಭಾಗಗಳಲ್ಲಿರುವ ಅಮೆರಿಕ ರಾಯಬಾರಿ ಅಧಿಕಾರಿಗಳಲ್ಲಿ ಈ ರೀತಿಯ ಸಿಂಡ್ರೋಮ್ ಕಂಡು ಬಂದಿತ್ತು.

ಈ ಸಿಂಡ್ರೋಮ್‌ ಬರಲು ಕಾರಣವೇನು ಎಂದು ಅನೇಕ ಸಂಶೋಧನೆಗಳು ನಡೆಸಲಾಯಿತು. ಈ ರೀತಿಯ ಸಿಂಡ್ರೋಮ್‌ ಅತ್ಯಧಿಕ ಮಾನಸಿಕ ಒತ್ತಡ ಹಾಗೂ ಮೈಕ್ರೋವೇವ್‌ ಆಯುಧಗಳಿಂದ ಉಂಟಾಗಿರಬಹುದು ಎಂದು ಅಂದಾಜಿಸಲಾಗಿದೆ. ನಿಖರ ಕಾರಣವೇನು ಎಂಬುವುದು ತಿಳಿದು ಬಂದಿಲ್ಲ. ತಲೆಗೆ ಪೆಟ್ಟಾದಾಗ ಉಂಟಾಗುವ ಲಕ್ಷಣಗಳು ಕಂಡು ಬರುವುದು. ಈ ರೀತಿಯ ಸಮಸ್ಯೆ ರಾಯಭಾರಿಗಳಲ್ಲಿ, ಇಂಟೆಲಿಜೆನ್ಸಿ ಆಫೀಸರ್‌ಗಳು, ಸೈನಿಕರಲ್ಲಿ ಹಾಗೂ ಅವರ ಕುಟುಂಬದವರಲ್ಲಿ ಕಂಡು ಬಂದಿತ್ತು.

ಇದುವರೆಗೆ 130 ಜನರಲ್ಲಿ ಹವನ ಸಿಂಡ್ರೋಮ್‌ ಕಂಡು ಬಂದಿತ್ತು. ಕೆಲವರು ಹವನ ಸಿಂಡ್ರೋಮ್‌ ಕಂಡು ಬಂದ ಮೇಲೆ ಹಲವು ದಿನಗಳವರೆಗೆ ಆರೋಗ್ಯ ಸಮಸ್ಯೆ ಕಂಡು ಬಂದಿರುವುದಾಗಿ ಅನೇಕರು ಹೇಳಿದ್ದರು.

ಹವಾನ ಸಿಂಡ್ರೋಮ್‌ನ ಲಕ್ಷಣಗಳೇನು?

2016ರಲ್ಲಿ ಈ ಸಮಸ್ಯೆ ಕಂಡು ಬಂದವರಲ್ಲಿ ರಾತ್ರಿ ಹೊತ್ತು ಕಿವಿ ಹೊಡೆದು ಹೋಗುವಷ್ಟು ಶಬ್ದ ಕೇಳಿ ಬಂದಂತೆ ಅನಿಸುವುದು, ಮುಖದಲ್ಲಿ ತುಂಬಾ ಗಾಬರಿ, ಒತ್ತಡ ಕಂಡು ಬರುವುದು. ಆ ಶಬ್ದ ಕೇಳುವುದು ನಿಂತ ಮೇಲೆ ನೋವು, ಸುಸ್ತು, ತಲೆಸುತ್ತು ಉಂಟಾಗುವುದು. ಇನ್ನು ಕೆಲವರು ಈ ಆರೋಗ್ಯ ಸಮಸ್ಯೆಯಿಂದಾಗಿ ಕೆಲಸ ಮಾಡಲು ತೊಂದರೆಯಾಗುವುದಾಗಿ ಹೇಳಿದ್ದರು.

ಹವನ ಸಿಂಡ್ರೋಮ್ ಬಂದವರಲ್ಲಿ ತುಂಬಾ ಸಮಯ ಈ ಸಮಸ್ಯೆಗಳು ಕಾಡಿದ್ದವು.

  1. ಮೈಗ್ರೇನ್
  2. ದೂರದೃಷ್ಟಿದೋಷ
  3. ಮಳ್ಳೆಗಣ್ಣು
  4. ತಲೆಸುತ್ತು
  5. ಮೂಗಿನಲ್ಲಿ ರಕ್ತಸ್ರಾವ.

ಒಟ್ಟಿನಲ್ಲಿ ಈ ಲಕ್ಷಣಗಳು ತಲೆಗೆ ಪೆಟ್ಟಾದವರಲ್ಲಿ ಕಂಡು ಬರುವುದು. ಹವಾನ ಸಿಂಡ್ರೋಮ್‌ ಇರುವವರಲ್ಲಿಯೂ ಈ ರೀತಿಯ ಲಕ್ಷಣಗಳು ಕಂಡು ಬಂದಿವೆ.

ಹವಾನ ಸಿಂಡ್ರೋಮ್ ಬರಲು ಕಾರಣವೇನು?

ತುಂಬಾ ರಾಸಾಯನಿಕಗಳಿಂದಾಗಿ ಈ ರೀತಿಯ ಸಿಂಡ್ರೋಮ್ ಉಂಟಾಗಬಹುದು, ಔಷಧಿ ಸೇವನೆಯಿಂದಲೂ ಬರಬಹುದು ಅಥವಾ ಆಕಸ್ಮಿಕವಾಗಿಯೂ ಉಂಟಾಗಬಹುದು. ಆದರೆ ಈ ಲಕ್ಷಣಗಳು ಕಂಡು ಬಂದವರ ಮನೆಯಲ್ಲಿ ಯಾವುದೇ ನಿರ್ಧಿಷ್ಟ ರಾಸಾಯನಿಕವಾಗಲಿ ಅಥವಾ ಇತರ ವಿಷ ಅಂಶಗಳಾಗಲಿ ಪತ್ತೆಯಾಗಿರಲಿಲ್ಲ.

ಹವನ ಸಿಂಡ್ರೋಮ್‌ ಬಹುಶಃ ಈ ಕಾರಣಗಳಿಂದ ಉಂಟಾಗುವುದು:

ಅಲ್ಟ್ರಾಸೋನಿಕ್ ಅಥವಾ ಮೈಕ್ರೋವೇವ್‌ನಿಂದ ಉಂಟಾಗುವ ವಿಕಿರಣಗಳು.

ಬಯೋವೆಫನರಿಗಳು ಮನುಷ್ಯನ ಕಿವಿಯ ಒಳಗಡೆ ಮೈಕ್ರೋಬಬಲ್ಸ್‌(ಗುಳ್ಳೆಗಳು) ಉಂಟಾಗುವುದು, ಆ ಗುಳ್ಳೆಗಳು ರಕ್ತದ ಮೂಲಕ ಮೆದುಳು ತಲುಪುವುಉದ. ಇದರಿಂದ ಜೀವ ಕಣಗಳಿಗೆ ಹಾನಿಯುಂಟಾಗಿ ಕಿವಿ ಒಡೆದು ಹೋಗುವಷ್ಟು ಶಬ್ದ ಉಂಟಾಗುವುದು.

ರೇಡಿಯೋ ವಿಕಿರಣಗಳು ತಲೆಗೆ ತಾಗಿದಾಗ ಇದರಿಂದ ಮೆದುಳಿನ ಕಾರ್ಯಕ್ಕೆ ಅಡಚಣೆ ಉಂಟಾಗುವುದು.

ಹವಾನ ಸಿಂಡ್ರೋಮ್ ಗಂಭೀರವಾದದ್ದೇ?

ಹವನ ಸಿಂಡ್ರೋಮ್‌ ಅಷ್ಟೊಂದು ಗಂಭೀರವಲ್ಲ, ಇದರಿಂದ ಸಾವು ಸಂಭವಿಸಲ್ಲ, ಜೊತೆಗೆ ಸಿಂಡ್ರೋಮ್‌ ಕಾಣಿಸಿಕೊಂಡವರು ಇನ್ನೂ ಜೀವನಂತವಾಗಿದ್ದಾರೆ.

 


ಸಾಮಾನ್ಯ ಅಧ್ಯಯನ ಪತ್ರಿಕೆ : 3


 

ವಿಷಯಗಳು: ಮಾಹಿತಿ ತಂತ್ರಜ್ಞಾನ, ಬಾಹ್ಯಾಕಾಶ, ಕಂಪ್ಯೂಟರ್, ರೊಬೊಟಿಕ್ಸ್, ನ್ಯಾನೊ-ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ಬೌದ್ಧಿಕ ಆಸ್ತಿ ಹಕ್ಕುಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಜಾಗೃತಿ.

ಜಾಗತಿಕ ನಾವೀನ್ಯತೆ ಸೂಚ್ಯಂಕ 2021:


(Global Innovation Index)

ಸಂದರ್ಭ:

ವಿಶ್ವ ಬೌದ್ಧಿಕ ಆಸ್ತಿ ಸಂಸ್ಥೆಯ (World Intellectual Property Organization – WIPO) ‘ಜಾಗತಿಕ ನಾವೀನ್ಯತೆ ಸೂಚ್ಯಂಕ’ 2021 ರ ರ್ಯಾಂಕಿಂಗ್ನಲ್ಲಿ ಭಾರತವು 2 ಸ್ಥಾನ ಮೇಲಕ್ಕೇರಿ 46 ನೇ ಸ್ಥಾನಕ್ಕೆ ಏರಿದೆ.

  1. ಕಳೆದ ಹಲವು ವರ್ಷಗಳಿಂದ ಭಾರತವು ಜಾಗತಿಕ ನಾವೀನ್ಯತೆ ಸೂಚ್ಯಂಕ (Global Innovation Index – GII) ದಲ್ಲಿ ತನ್ನ ಸ್ಥಾನವನ್ನು ಸ್ಥಿರವಾಗಿ ಸುಧಾರಿಸುತ್ತಿದೆ ಮತ್ತು 2015 ರಲ್ಲಿದ್ದ 81 ನೇ ಸ್ಥಾನದಿಂದ 2021 ರಲ್ಲಿ 46 ನೇ ಸ್ಥಾನಕ್ಕೆ ಏರಿದೆ.

ಪ್ರಾಮುಖ್ಯತೆ:

  1. ಅಪಾರವಾದ ಜ್ಞಾನದ ಬಂಡವಾಳ, ರೋಮಾಂಚಕ ಸ್ಟಾರ್ಟ್ ಅಪ್ ಪರಿಸರ ಮತ್ತು ಸಾರ್ವಜನಿಕ ಮತ್ತು ಖಾಸಗಿ ಸಂಶೋಧನಾ ಸಂಸ್ಥೆಗಳಿಂದ ಮಾಡಿದ ಅದ್ಭುತ ಕೆಲಸದಿಂದಾಗಿ ಜಿಐಐ ಶ್ರೇಯಾಂಕ ನಿರಂತರವಾಗಿ ಸುಧಾರಿಸಿದೆ.
  2. ಪರಮಾಣು ಶಕ್ತಿ ಇಲಾಖೆ; ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ; ಜೈವಿಕ ತಂತ್ರಜ್ಞಾನ ಇಲಾಖೆ ಮತ್ತು ಬಾಹ್ಯಾಕಾಶ ಇಲಾಖೆಯಂತಹ ವೈಜ್ಞಾನಿಕ ವಿಭಾಗಗಳು ರಾಷ್ಟ್ರೀಯ ನಾವೀನ್ಯತೆ ಪರಿಸರ ವ್ಯವಸ್ಥೆಯನ್ನು ಸಮೃದ್ಧಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿವೆ.

2021ರ ಜಾಗತಿಕ ನಾವೀನ್ಯತೆ ಸೂಚ್ಯಂಕ (GII) ಶ್ರೇಯಾಂಕದಲ್ಲಿ ಅಗ್ರ 10 ದೇಶಗಳು:

current affairs

 

ಜಾಗತಿಕ ನಾವೀನ್ಯತೆ ಸೂಚ್ಯಂಕದ ಕುರಿತು:

  1. ‘ಜಾಗತಿಕ ನಾವೀನ್ಯತೆ ಸೂಚ್ಯಂಕ’ (GII) ದೇಶಗಳು ತಮ್ಮ ಸಾಮರ್ಥ್ಯ ಮತ್ತು ನಾವೀನ್ಯತೆಯ ಯಶಸ್ಸಿನ ಆಧಾರದ ಮೇಲೆ ತಯಾರಿಸಿದ ವಾರ್ಷಿಕ ಸೂಚ್ಯಂಕವಾಗಿದೆ.
  2. ಸೂಚ್ಯಂಕವನ್ನು ಕಾರ್ನೆಲ್ ವಿಶ್ವವಿದ್ಯಾಲಯವು, INSEAD ಮತ್ತು ವಿಶ್ವ ಬೌದ್ಧಿಕ ಆಸ್ತಿ ಸಂಸ್ಥೆ (WIPO), ಇತರ ಸಂಸ್ಥೆಗಳ ಸಹಭಾಗಿತ್ವದಲ್ಲಿ ಜಂಟಿಯಾಗಿ ಪ್ರಕಟಿಸಿದೆ.
  3. ಇದು ಅಂತರರಾಷ್ಟ್ರೀಯ ದೂರಸಂಪರ್ಕ ಒಕ್ಕೂಟ (International Telecommunication Union), ವಿಶ್ವ ಬ್ಯಾಂಕ್ ಮತ್ತು ವಿಶ್ವ ಆರ್ಥಿಕ ವೇದಿಕೆ ಸೇರಿದಂತೆ ಹಲವಾರು ಮೂಲಗಳಿಂದ ಪಡೆದ ವ್ಯಕ್ತಿನಿಷ್ಠ ಮತ್ತು ವಸ್ತುನಿಷ್ಠ ದತ್ತಾಂಶವನ್ನು ಆಧರಿಸಿದೆ.
  4. ಈ ಸೂಚ್ಯಂಕವನ್ನು 2007 ರಲ್ಲಿ INSEAD ಮತ್ತು ‘ವರ್ಲ್ಡ್ ಬಿಸಿನೆಸ್’ ಹೆಸರಿನ ಬ್ರಿಟಿಷ್ ನಿಯತಕಾಲಿಕೆಯು ಪ್ರಾರಂಭಿಸಿತು.
  5. ಜಾಗತಿಕ ನಾವೀನ್ಯತೆ ಸೂಚ್ಯಂಕವು ಆರ್ಥಿಕತೆಯ ನಾವೀನ್ಯತೆ ಕಾರ್ಯಕ್ಷಮತೆಯನ್ನು ಅಳೆಯುವ ಪ್ರಮುಖ ಉಲ್ಲೇಖವಾಗಿದೆ ಮತ್ತು ಇದನ್ನು ಸಾಮಾನ್ಯವಾಗಿ ಕಾರ್ಪೊರೇಟ್ ಮತ್ತು ಸರ್ಕಾರಿ ಅಧಿಕಾರಿಗಳು ದೇಶಗಳನ್ನು ನಾವೀನ್ಯತೆ-ಮಟ್ಟದ ಆಧಾರದ ಮೇಲೆ ಹೋಲಿಸಲು ಬಳಸುತ್ತಾರೆ.

 

ವಿಷಯಗಳು: ಸಂರಕ್ಷಣೆ, ಪರಿಸರ ಮಾಲಿನ್ಯ ಮತ್ತು ಅವನತಿ, ಪರಿಸರ ಪ್ರಭಾವದ ಮೌಲ್ಯಮಾಪನ.

ಕರಾವಳಿ ಪರಿಸರ ಮತ್ತು ಸೌಂದರ್ಯಶಾಸ್ತ್ರ ನಿರ್ವಹಣಾ ಸೇವೆಗಳ (BEAMS) ಕಾರ್ಯಕ್ರಮ:


(Beach Environment and Aesthetics Management Services (BEAMS) program)

ಸಂದರ್ಭ:

ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು ಭಾರತದ ಕರಾವಳಿ ಪ್ರದೇಶಗಳ ‘ಸುಸ್ಥಿರ ಅಭಿವೃದ್ಧಿಗೆ’ ಅತ್ಯಂತ ಪ್ರಶಂಸನೀಯ ಮತ್ತು ಪ್ರಮುಖ ಕಾರ್ಯಕ್ರಮ ‘ಕರಾವಳಿ ಪರಿಸರ ಮತ್ತು ಸೌಂದರ್ಯಶಾಸ್ತ್ರ ನಿರ್ವಹಣಾ ಸೇವೆಗಳು (BEAMS)’ ಕಾರ್ಯಕ್ರಮವನ್ನು ಆರಂಭಿಸಿದೆ.

BEAMS ಕಾರ್ಯಕ್ರಮದ ಕುರಿತು:

  1. ಇದು ಭಾರತದ ಕರಾವಳಿ ಪ್ರದೇಶಗಳ ಸುಸ್ಥಿರ ಅಭಿವೃದ್ಧಿಗಾಗಿ ‘ಸಮಗ್ರ ಕರಾವಳಿ ವಲಯ ನಿರ್ವಹಣೆ’ (Integrated Coastal Zone Management- ICZM) ವಿಧಾನದ ಅಡಿಯಲ್ಲಿ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ ಆರಂಭಿಸಿದ ಉಪಕ್ರಮವಾಗಿದೆ.
  2. ಸಂಪನ್ಮೂಲಗಳ ಸಮಗ್ರ ನಿರ್ವಹಣೆಯ ಮೂಲಕ ಪ್ರಾಚೀನ ಕರಾವಳಿ ಮತ್ತು ಸಮುದ್ರ ಪರಿಸರ ವ್ಯವಸ್ಥೆಗಳನ್ನು ಸಂರಕ್ಷಿಸುವುದು ಇದರ ಮುಖ್ಯ ಉದ್ದೇಶವಾಗಿದೆ.

ಕಾರ್ಯಕ್ರಮದ ಉದ್ದೇಶಗಳು:

  1. ಕರಾವಳಿ ನೀರಿನಲ್ಲಿನ ಮಾಲಿನ್ಯವನ್ನು ಕಡಿಮೆ ಮಾಡುವುದು,
  2. ಕರಾವಳಿ ಸರಕುಗಳ ಸುಸ್ಥಿರ ಅಭಿವೃದ್ಧಿಯನ್ನು ಉತ್ತೇಜಿಸುವುದು,
  3. ಕರಾವಳಿ ಪರಿಸರ ವ್ಯವಸ್ಥೆಗಳು ಮತ್ತು ನೈಸರ್ಗಿಕ ಸಂಪನ್ಮೂಲಗಳನ್ನು ರಕ್ಷಿಸುವುದು ಮತ್ತು
  4. ಕರಾವಳಿ ಪರಿಸರ ಮತ್ತು ನಿಯಮಾವಳಿಗಳಿಗೆ ಅನುಸಾರವಾಗಿ ಕಡಲತೀರದವರಿಗೆ ಸ್ವಚ್ಛತೆ, ನೈರ್ಮಲ್ಯ ಮತ್ತು ಸುರಕ್ಷತೆಯ ಉನ್ನತ ಗುಣಮಟ್ಟವನ್ನು ಕಾಯ್ದುಕೊಳ್ಳುವಂತೆ ಸ್ಥಳೀಯ ಅಧಿಕಾರಿಗಳು ಮತ್ತು ಮಧ್ಯಸ್ಥಗಾರರಿಗೆ ಕಟ್ಟುನಿಟ್ಟಾಗಿ ನಿರ್ದೇಶನ ನೀಡುವುದು.

ಸಮಗ್ರ ಕರಾವಳಿ ವಲಯ ನಿರ್ವಹಣೆ (ICZM) ಯೋಜನೆ ಎಂದರೇನು?

  1. ICZM ಕರಾವಳಿ ಸಮುದಾಯಗಳ ಜೀವನೋಪಾಯವನ್ನು ಸುಧಾರಿಸುವ ಮತ್ತು ಕರಾವಳಿ ಪರಿಸರ ವ್ಯವಸ್ಥೆಯನ್ನು ಸಂರಕ್ಷಿಸುವ ಗುರಿಯನ್ನು ಹೊಂದಿದೆ.
  2. ಇದು ವಿಶ್ವ ಬ್ಯಾಂಕ್ ನೆರವಿನ ಯೋಜನೆಯಾಗಿದೆ.
  3. ಈ ಯೋಜನೆಯ ಸಂದರ್ಭದಲ್ಲಿ, ನ್ಯಾಷನಲ್ ಸೆಂಟರ್ ಫಾರ್ ಸಸ್ಟೈನಬಲ್ ಕೋಸ್ಟಲ್ ಮ್ಯಾನೇಜ್‌ಮೆಂಟ್ (National Centre for Sustainable Coastal Management- NCSCM), ಚೆನ್ನೈ, ವೈಜ್ಞಾನಿಕ ಮತ್ತು ತಾಂತ್ರಿಕ ಒಳಹರಿವುಗಳನ್ನು ಒದಗಿಸುತ್ತದೆ.
  4. ICZM ಪರಿಕಲ್ಪನೆಯು 1992 ರಲ್ಲಿ ರಿಯೊ ಡಿ ಜನೈರೊದಲ್ಲಿ ನಡೆದ ಭೂಮಿಯ ಶೃಂಗಸಭೆಯಲ್ಲಿ ಹುಟ್ಟಿಕೊಂಡಿತು.

 


ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:


ಸಸ್ಯ ಆವಿಷ್ಕಾರಗಳು 2020:

(Plant Discoveries 2020)

  1. ಭಾರತದ ಸಸ್ಯಶಾಸ್ತ್ರೀಯ ಸಮೀಕ್ಷೆಯಿಂದ ಇತ್ತೀಚೆಗೆ ಪ್ರಕಟವಾದ ‘ಸಸ್ಯ ಸಂಶೋಧನೆಗಳು 2020’ (Plant Discoveries 2020) ರಲ್ಲಿ, 267 ಹೊಸ ಸಸ್ಯ ಜಾತಿಗಳನ್ನು ದೇಶದ ಸಸ್ಯವರ್ಗದಲ್ಲಿ ಸೇರಿಸಲಾಗಿದೆ.
  2. 2020 ರಲ್ಲಿ ಪತ್ತೆಯಾದ ಒಟ್ಟು 267 ಹೊಸ ಸಸ್ಯ ಪ್ರಭೇದಗಳಲ್ಲಿ, 119 ಆಂಜಿಯೋಸ್ಪೆರ್ಮ್‌ಗಳು (Angiosperms), ಮೂರು ಸ್ಟೆರಿಡೋಫೈಟ್‌ಗಳು (Pteridophytes); ಐದು ಬ್ರಯೋಫೈಟ್ಸ್ (Pteridophytes), 44 ಕಲ್ಲುಹೂವುಗಳು; 57 ಶಿಲೀಂಧ್ರಗಳು, 21 ಪಾಚಿಗಳು ಮತ್ತು 18 ಸೂಕ್ಷ್ಮಜೀವಿಗಳನ್ನು ಒಳಗೊಂಡಿದೆ.
  3. ಭಾರತದ ವಿವಿಧ ಭಾಗಗಳಿಂದ 14 ಹೊಸ ಮ್ಯಾಕ್ರೋ ಮತ್ತು 31 ಹೊಸ ಸೂಕ್ಷ್ಮ ಶಿಲೀಂಧ್ರ ಜಾತಿಗಳನ್ನು ದಾಖಲಿಸಲಾಗಿದೆ.
  4. ಒಟ್ಟು ಆವಿಷ್ಕಾರಗಳಲ್ಲಿ, 22%ಪಶ್ಚಿಮ ಘಟ್ಟಗಳಿಂದ ಪಡೆಯಲಾಗಿದೆ, ನಂತರ ಪಶ್ಚಿಮ ಹಿಮಾಲಯಗಳು (15%), ಪೂರ್ವ ಹಿಮಾಲಯಗಳು (14%) ಮತ್ತು ಈಶಾನ್ಯ ಶ್ರೇಣಿಗಳು (12%).

Join our Official Telegram Channel HERE for Motivation and Fast Updates

Subscribe to our YouTube Channel HERE to watch Motivational and New analysis videos

[ad_2]

Leave a Comment