[ Optionals : Admissions Open ] InsightsIAS Kannada Literature Optional Classes 2022 – INSIGHTSIAS

[ad_1]

ಇನ್ಸೈಟ್ಸ್ (InsightsIAS)

ಕನ್ನಡ  ಸಾಹಿತ್ಯ  ಐಚ್ಛಿಕ ವಿಷಯ ತರಗತಿಗಳು

ಆನ್ಲೈನ್ (Online) ಮತ್ತು ಆಫ್ ಲೈನ್(Offline)* ಎರಡೂ ಮಾಧ್ಯಮಗಳಲ್ಲಿ ಲಭ್ಯ !!

 

 

 

Starts from: 2nd July 2021

Fee: Rs. 25000/- + taxes

Mode : Online & Offline(*Subject to Government norms)

CLICK HERE TO DOWNLOAD THE TIMETABLE

 

CLICK HERE TO SUBSCRIBE

 

ಐಎಎಸ್ ಐಪಿಎಸ್ ಅಥವಾ ಯಾವುದೇ ನಾಗರೀಕ ಸೇವಾ ಅಧಿಕಾರಿಯಾಗುವ ನಿಮ್ಮ ಕನಸನ್ನು ಸಾಕಾರಗೊಳಿಸಲು ಐಚ್ಛಿಕ ವಿಷಯದ ಆಯ್ಕೆ ಮತ್ತು ಸಮರ್ಪಕ ತಯಾರಿಯು ಅತ್ಯಂತ ಪ್ರಮುಖವಾದ ಹಂತ. ಶೇಕಡಾ 35-40% ರಷ್ಟು ನಿಮ್ಮ ಮುಖ್ಯ ಪರೀಕ್ಷೆಯ ತೇರ್ಗಡೆ ಯೋಗ್ಯ ಅಂಕಗಳನ್ನು ಐಚ್ಛಿಕ ವಿಷಯ ಒಂದರಿಂದಲೇ ಗಳಿಸಬಹುದಾಗಿದೆ. ಹಾಗಾಗಿ ಪರೀಕ್ಷೆಯ ಬೇಡಿಕೆಗೆ ಅನುಗುಣವಾಗಿ ನಿಮ್ಮ ತಯಾರಿ ಇದ್ದಲ್ಲಿ ಮಾತ್ರ ಅತ್ಯುತ್ತಮ ಅಂಕಗಳನ್ನು ಪಡೆದು ತೇರ್ಗಡೆಯಾಗಿ ದೇಶ ಸೇವೆ ಮಾಡಲು ಸಾಧ್ಯ.

ಪ್ರತಿ ವರ್ಷದಂತೆ ಈ ವರ್ಷವೂ ಇನ್ಸೈಟ್ಸ್ ಸಂಸ್ಥೆ 5 ಕ್ಕೂ ಹೆಚ್ಚು ಬಾರಿ ಯು.ಪಿ.ಎಸ್.ಸಿ ಮುಖ್ಯ ಪರೀಕ್ಷೆ ಬರೆದ , ವ್ಯಕ್ತಿತ್ವ ಪರೀಕ್ಷೆಯ ಅನುಭವವುಳ್ಳ ಹಾಗೂ ಕನ್ನಡ ಬೋಧನೆಯಲ್ಲೂ ಕಳೆದ ಕೆಲವು ವರ್ಷಗಳಿಂದ ವಿದ್ಯಾರ್ಥಿಗಳಿಂದ ಮನ್ನಣೆಗಳಿಸಿದ ನುರಿತ ಅಧ್ಯಾಪಕರಿಂದ ನಿಮಗೆ ಕನ್ನಡ ಐಚ್ಛಿಕ ವಿಷಯದ ತರಗತಿಗಳನ್ನು ಪ್ರಸ್ತುತ ಪಡಿಸುತ್ತಿದೆ . ಕನ್ನಡ ಸಾಹಿತ್ಯ ಐಚ್ಛಿಕ ವಿಷಯಕ್ಕೆ ಸಂಬಂಧಿಸಿದಂತೆ, ಪ್ರಯೋಗಾತ್ಮಕವಾದ ಹಾಗು ಪರೀಕ್ಷಾ ಪರಿಣಾಮಕತೆಯ ದೃಷ್ಟಿಯಿಂದ ಅತ್ಯುಪಯುಕ್ತವಾದ ಪರಿಪೂರ್ಣ ಮಾರ್ಗದರ್ಶನದ ಸೌಲಭ್ಯವನ್ನು ಇನ್ಸೈಟ್ಸ್ ಸಂಸ್ಥೆ ಈ ಮೂಲಕ ಯು.ಪಿ.ಎಸ್.ಸಿ ಪರೀಕ್ಷಾ ಆಕಾಂಕ್ಷಿಗಳಿಗೆ ಅನುವು ಮಾಡಿಕೊಡುತ್ತಿದೆ.

ಕನ್ನಡ ಸಾಹಿತ್ಯ ಕಳೆದ 9 ವರ್ಷಗಳಿಂದ ಬಹು ಭರವಸೆಯ ಐಚ್ಚಿಕ ವಿಷಯವಾಗಿ ಬಹುತೇಕ ವಿದ್ಯಾರ್ಥಿಗಳ ಆಯ್ಕೆಯಾಗಿರುವುದು ಜಾಹೀರಾದ ಸಂಗತಿ. 330 ರವರೆಗೂ ಇದರ ಅಂಕ ವ್ಯಾಪ್ತಿಯ ಸಾಧ್ಯತೆಯನ್ನು 2014 ರಿಂದ 2019 ರ ಸಾಲಿನಲ್ಲಿ ಮನಗಂಡಿದ್ದೇವೆ. ಅಲ್ಲದೇ 2016 ರಲ್ಲಿ ಇತರ ಐಚ್ಛಿಕ ವಿಷ್ಯಗಳಿಗಿಂತಲೂ ಸರಾಸರಿ ತೇರ್ಗಡೆಯಲ್ಲಿ ಕನ್ನಡ ಸಾಹಿತ್ಯ ಮುಂಚೂಣಿಯಲ್ಲಿತ್ತು (16%) ಅಲ್ಲದೆ ಅದೇ ಸಾಲಿನಲ್ಲಿ , ಇನ್ಸೈಟ್ಸ್ ನವರೇ ಆದ ಕೆ. ಆರ್ ನಂದಿನಿ ಅವರು ಕನ್ನಡ ಐಚ್ಚಿಕದಲ್ಲಿ ಅತಿ ಹೆಚ್ಚು ಅಂಕ ಗಳಿಸಿ ದೇಶಕ್ಕೆ ಪ್ರಥಮ ರಾಂಕ್ ಪಡೆದಿರುವುದೂ ಹೆಗ್ಗಳಿಕೆಯ ಸಂಗತಿ. ಅಲ್ಲದೆ ಪ್ರತಿ ವರ್ಷ ಸತತವಾಗಿ ಕನ್ನಡ ಸಾಹಿತ್ಯ ಐಚ್ಛಿಕ ವಿಷಯದ ವಿದ್ಯಾರ್ಥಿಗಳ ತೇರ್ಗಡೆಯ ಸರಾಸರಿ ಶೇಕಡಾ ೧೦% ಕ್ಕಿಂತ ಹೆಚ್ಚಿರುವುದು , ಈ ವಿಷಯದ ನಿಶ್ಚಿತತೆಯನ್ನು ಹೇಳುತ್ತದೆ . .

ಆದರೆ ಇತ್ತೀಚಿನ ದಿನಗಳಲ್ಲಿ ಸರಾಸರಿ ಅಂಕ ಗಳಿಕೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿರುವುದರ ಬಗ್ಗೆ ವಿದ್ಯಾರ್ಥಿಗಳಲ್ಲಿ ಸಹಜವಾಗಿ ಆತಂಕ ಮೂಡಿರುವುದನ್ನು ನಾವು ಅವಲೋಕಿಸಿದ್ದೇವೆ. ಇದರ ಬಗ್ಗೆ ವಿಸ್ತೃತವಾಗಿ ಪರಿಶೀಲಿಸಿದಾಗ ಬಹುತೇಕವಾಗಿ ಇದಕ್ಕೆ ಮೂಲ ಕಾರಣ – ಸಿದ್ಧ ಮಾದರಿಯ ಸಾಮಾನ್ಯ ಉತ್ತರಗಳು (static answers & dependency on ready-made notes), ಉತ್ತರ ಪತ್ರಿಕೆಯ ಅಪೂರ್ಣತೆ, ಹಳೆಯ ಉದಾಹರಣೆಗಳ ಪುನರಾವರ್ತನೆ, ವಿಷಯದ ಮೇಲೆ ಹಿಡಿತದ ಕೊರತೆ ಹಾಗೂ ಅಗತ್ಯವಾದ ಉತ್ತರಾಭ್ಯಾಸದ ಕೊರತೆ ಎಂಬುದು ಮೇಲ್ನೋಟಕ್ಕೆ ಎದ್ದು ಕಾಣುತ್ತದೆ.

ಇವೆಲ್ಲವುಗಳನ್ನು ಮನಗಂಡು ನಮ್ಮ ಕನ್ನಡ ಸಾಹಿತ್ಯ ಐಚ್ಚಿಕ ವಿಷಯ ತರಗತಿಗಳನ್ನು ವಿಶೇಷವಾಗಿ ಈ ಕೆಳಗಿನ ಅಂಶಗಳೊಂದಿಗೆ ವಿನ್ಯಾಸ ಗೊಳಿಸಲಾಗಿದೆ.

 

ಧ್ಯೇಯೋದ್ದೇಶ:

ಸಮರ್ಪಕ ಸಮಯದಲ್ಲಿ ಸಮಗ್ರವಾಗಿ ಪಠ್ಯವಾರು ಸಾಹಿತ್ಯದ ವಿಷಯಗಳ ಮೇಲೆ ಹಿಡಿತ ಸಾಧಿಸುವುದು ಹಾಗೂ ವಿಶ್ಲೇಷಣಾತ್ಮಕತೆಯ ಮನೋಭಾವವನ್ನು ಗಳಿಸಿ ಬರವಣಿಗೆಯ ಸತತಾಭ್ಯಾಸದ ಜೊತೆಗೆ ಪರಿಣಾಮಕಾರಿ ಉತ್ತರಗಳನ್ನು ಬರೆಯುವ ಸಾಮರ್ಥ್ಯ ಹೊಂದುವುದು.

 

ತರಗತಿಗಳ ವಿಶೇಷತೆ:

ಶಿಸ್ತುಬದ್ಧತೆ – ಪ್ರಪ್ರಥಮ ಬಾರಿಗೆ ವೇಳಾಪಟ್ಟಿ ಸಹಿತವಾದ ಕನ್ನಡ ಐಚ್ಚಿಕ ತರಗತಿಗಳು

ಸತತಾಭ್ಯಾಸ – ಪ್ರತಿ ಪಠ್ಯದ ನಂತರ ಹಿಂದಿನ ವರ್ಷಗಳ ಪ್ರಶ್ನೆಗಳ ಕುರಿತು ಸಮಗ್ರ ಚರ್ಚೆ

ನಿರಂತರ ಮಾರ್ಗದರ್ಶನ – ಉತ್ತರಗಳ ಚರ್ಚೆ ಹಾಗೂ ವ್ಯಕ್ತಿಗತವಾದ ಸಲಹೆಗಳು. ತರಗತಿಗಳು ಮುಗಿದ ನಂತರವೂ ನಿರಂತರವಾಗಿ ವಿದ್ಯಾರ್ಥಿಗಳ ಏಳಿಗೆಗಾಗಿ ಶ್ರಮಿಸುವ ಅಧ್ಯಾಪಕರು.

ಅಗತ್ಯವಾದ ಪಠ್ಯ ಸಾಮಗ್ರಿ – ಪರೀಕ್ಷೆಯ ಬೇಡಿಕೆಗೆ ಅನುಗುಣವಾಗಿ ಪರಿಷ್ಕಾರಗೊಂಡ, ಸಮರ್ಪಕ ಹಾಗೂ ಸಮಗ್ರ ಸಾಮಗ್ರಿ (Completely updated & comprehensive).

ನುರಿತ ಅಧ್ಯಾಪಕ ವರ್ಗ – ಯು.ಪಿ.ಎಸ್.ಸಿ ಮುಖ್ಯ ಪರೀಕ್ಷೆಯ ಅಗಾಧ ಅನುಭವದೊಂದಿಗೆ.

ನಾಡು – ನುಡಿಯ ಬಗೆಗಿನ ನಿಮ್ಮ ಅಭಿಮಾನ ಚಿರಂತನವಾಗಿರಲಿ. ತಾಯಿ ಭುವನೇಶ್ವರಿಯ ಕೃಪೆ ನಿಮ್ಮನ್ನು ಯಶಸ್ಸಿನ ಹಾದಿಯಲ್ಲಿ ನಡೆಸಲಿ ಎಂದು ಆಶಿಸುತ್ತೇವೆ. ಶುಭವಾಗಲಿ .

ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ

 

 

CLICK HERE TO SUBSCRIBE


For any queries contact,

mail : [email protected]

Contact:

Bangalore Office : 7483163074 / 9380863034

Delhi Office : 9625668123, 7303318519, 011-495-2020-5

Hyderabad Office : 8688512637

 


  • Follow us on our Official TELEGRAM Channel HERE
  • Subscribe to Our Official YouTube Channel HERE
  • Our Official Facebook Page HERE

[ad_2]

Leave a Comment