[Mission 2022] ದೈನಂದಿನ ಪ್ರಚಲಿತ ಘಟನೆಗಳು ದಿನಾಂಕ – 24ನೇ ಮಾರ್ಚ್ 2022 – INSIGHTSIAS

[ad_1]

ಪರಿವಿಡಿ:

ಸಾಮಾನ್ಯ ಅಧ್ಯಯನ ಪತ್ರಿಕೆ 2:

  1. ಸಂವಿಧಾನದ ಪರಿಚ್ಛೇದ 355.
  2. ಮುಖ್ಯಮಂತ್ರಿಯ ನೇಮಕ ಮತ್ತು ಪದಚ್ಯುತಿ.
  3. ಕ್ರಿಮಿನಲ್ ನ್ಯಾಯ ಸುಧಾರಣೆಗಳು.
  4. ವಿದೇಶಿಯರ ನ್ಯಾಯಮಂಡಳಿಗಳು ಯಾವುವು?
  5. ಮಧ್ಯಾಹ್ನದ ಊಟದ ಯೋಜನೆ.
  6. ಸ್ವಚ್ಛ ಭಾರತ್ ಮಿಷನ್.

 

ಸಾಮಾನ್ಯ ಅಧ್ಯಯನ ಪತ್ರಿಕೆ 3:

  1. ವಿಶ್ವ ಜಲ ದಿನ.
  2. ಮರ್ಕ್ಯುರಿ ಮಾಲಿನ್ಯ.

 

ಪ್ರಿಲಿಮ್ಸ್‌ಗೆ ಸಂಬಂಧಿಸಿದ ಸಂಗತಿಗಳು:

  1. ಅಬೆಲ್ ಪ್ರಶಸ್ತಿ.
  2. ಮಾಂಡಾ ಎಮ್ಮೆ.
  3. ಕುಕಿ ಬುಡಕಟ್ಟು.
  4. ಡಾಕ್ಸಿಂಗ್.
  5. ವಯನಾಡ್ ವನ್ಯಜೀವಿ ಅಭಯಾರಣ್ಯ.

 


ಸಾಮಾನ್ಯ ಅಧ್ಯಯನ ಪತ್ರಿಕೆ 2:


 

ವಿಷಯಗಳು: ಸಂವಿಧಾನ- ಐತಿಹಾಸಿಕ ಆಧಾರಗಳು, ವಿಕಸನ, ವೈಶಿಷ್ಟ್ಯಗಳು, ತಿದ್ದುಪಡಿಗಳು, ಮಹತ್ವದ ನಿಬಂಧನೆಗಳು ಮತ್ತು ಮೂಲ ರಚನೆ.

 

ಸಂವಿಧಾನದ ಪರಿಚ್ಛೇದ 355:

(Article 355)

 

ಸಂದರ್ಭ:

ಪಶ್ಚಿಮ ಬಂಗಾಳದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ ಮತ್ತು ಸಂವಿಧಾನದ ನಿಬಂಧನೆಗಳ ಪ್ರಕಾರ ರಾಜ್ಯದಲ್ಲಿ ಆಡಳಿತ ನಡೆಸುವುದನ್ನು ಖಚಿತಪಡಿಸಿಕೊಳ್ಳಲು 355 ನೇ ವಿಧಿಯನ್ನು ಜಾರಿಗೊಳಿಸಬೇಕು ಎಂದು ಪಶ್ಚಿಮ ಬಂಗಾಳದ ಕಾಂಗ್ರೆಸ್ ಪಕ್ಷವು ಒತ್ತಾಯಿಸಿದೆ.

 

ಏನಿದು ಪ್ರಕರಣ?

ಮಾರ್ಚ್ 21, 2022 ರಂದು, ಬಿರ್ಭುಮ್ ಜಿಲ್ಲೆಯ ಬೊಗ್ಟುಯಿ ಗ್ರಾಮದಲ್ಲಿ ಆಡಳಿತ ಪಕ್ಷದ ಎರಡು ಗುಂಪುಗಳ ನಡುವೆ ಹಿಂಸಾತ್ಮಕ ಹೊಡೆದಾಟ ನಡೆಯಿತು.

  1. ಗ್ರಾಮದ ಉಪ ಪ್ರಧಾನರಾದ, ಶ್ರೀ ಬದು ಶೇಖ್ ಅವರನ್ನು ಹತ್ಯೆ ಮಾಡಲಾಯಿತು ಮತ್ತು ಅದಕ್ಕೆ ಪ್ರತೀಕಾರದ ಕ್ರಮವಾಗಿ ಆ ಪ್ರದೇಶದಲ್ಲಿನ ಮನೆಗಳ ಮೇಲೆ ದಾಳಿ ಮಾಡಿ ಬೆಂಕಿ ಹಚ್ಚಲಾಯಿತು, ಇದರ ಪರಿಣಾಮವಾಗಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 12 ಜನರು ಸಾವನ್ನಪ್ಪಿದರು. ಸಾವನ್ನಪ್ಪಿದ ಈ ಎಲ್ಲಾ ಸದಸ್ಯರು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರಾಗಿದ್ದರು.

 

ಆರ್ಟಿಕಲ್ 355 ಎಂದರೇನು?

355 ನೇ ವಿಧಿಯು, “ಬಾಹ್ಯ ಆಕ್ರಮಣ ಮತ್ತು ಆಂತರಿಕ ದಂಗೆಯಿಂದ ಪ್ರತಿ ರಾಜ್ಯವನ್ನು ರಕ್ಷಿಸುವುದು ಒಕ್ಕೂಟ ಸರ್ಕಾರದ ಕರ್ತವ್ಯವಾಗಿದೆ ಮತ್ತು ಪ್ರತಿ ರಾಜ್ಯದ ಸರ್ಕಾರವು ಸಂವಿಧಾನದ ನಿಬಂಧನೆಗಳಿಗೆ ಅನುಗುಣವಾಗಿ ನಡೆಸಲ್ಪಡುತ್ತವೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು” ಎಂಬ ಸಂವಿಧಾನದ ನಿಬಂಧನೆಯನ್ನು ಉಲ್ಲೇಖಿಸುತ್ತದೆ.

  1. ಈ ಕರ್ತವ್ಯದ ಎರಡನೇ ಭಾಗಕ್ಕೆ – ಪ್ರತಿಯೊಂದು ರಾಜ್ಯದ ಸರ್ಕಾರವು ಸಂವಿಧಾನದ ನಿಬಂಧನೆಗಳಿಗೆ ಅನುಗುಣವಾಗಿ ನಡೆಸಲ್ಪಡುತ್ತದೆ ಎಂದು ಖಚಿತಪಡಿಸಿಕೊಳ್ಳಬೇಕು ಎಂಬ ಹಲವಾರು ದೃಷ್ಟಿ ಕೋನಗಳಿವೆ.

 

ಕಾನೂನು ಮತ್ತು ಸುವ್ಯವಸ್ಥೆಯ ದೃಷ್ಟಿಕೋನ:

“ಸಾರ್ವಜನಿಕ ಸುವ್ಯವಸ್ಥೆ” ಮತ್ತು “ಪೊಲೀಸ್” ಎಂಬುವು ರಾಜ್ಯ ಪಟ್ಟಿಯ ವಿಷಯಗಳಾಗಿವೆ ಮತ್ತು ರಾಜ್ಯಗಳು ಈ ವಿಷಯಗಳ ಮೇಲೆ ಕಾನೂನು ಮಾಡಲು ವಿಶೇಷ ಅಧಿಕಾರವನ್ನು ಹೊಂದಿವೆ.

 

ತುರ್ತು ಪರಿಸ್ಥಿತಿ ಹೇರಿಕೆಯ ಸಮರ್ಥನೆ:

ಈ ಲೇಖನವನ್ನು ವಿರಳವಾಗಿ ಬಳಸಲಾಗಿದ್ದರೂ; 352 ಮತ್ತು 356 ನೇ ವಿಧಿಯ ಅಡಿಯಲ್ಲಿ ತುರ್ತು ಪರಿಸ್ಥಿತಿ ಹೇರುವಿಕೆಯನ್ನು ಸಮರ್ಥಿಸುವ ಸಾಧನವಾಗಿ ಇದನ್ನು ನೋಡಲಾಗುತ್ತದೆ.

 

ಆರ್ಟಿಕಲ್ 352 ಸಶಸ್ತ್ರ ದಂಗೆ ಸಂಭವಿಸಿದಾಗ ತುರ್ತು ಪರಿಸ್ಥಿತಿಯನ್ನು ಹೇರಲು ಕೇಂದ್ರಕ್ಕೆ ಅಧಿಕಾರ ನೀಡುತ್ತದೆ, ಆದರೆ ಅಂತಹ ಘೋಷಣೆಯನ್ನು ರಾಜ್ಯದಲ್ಲಿ ಆಂತರಿಕ ಗಲಭೆ ಉಂಟಾದಾಗ ತುರ್ತು ಪರಿಸ್ಥಿತಿಯನ್ನು ಹೇರಲು ಸಾಧ್ಯವಿಲ್ಲ – ಎಂದು ಎಸ್‌ಆರ್ ಬೊಮ್ಮಾಯಿ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಹೇಳಿದೆ.

 

  1. ಆದ್ದರಿಂದ, 355 ನೇ ವಿಧಿಯು ಸ್ವತಃ ತುರ್ತು ಪರಿಸ್ಥಿತಿಯನ್ನು ಹೇರುವ ಅಧಿಕಾರವನ್ನು ಕೇಂದ್ರಕ್ಕೆ ನೀಡುವುದಿಲ್ಲ ಏಕೆಂದರೆ ಸಶಸ್ತ್ರ ದಂಗೆಯ ಕೊರತೆಯ ಆಂತರಿಕ ಅಡಚಣೆಯು ಕಾಯಿದೆಯ ಅಡಿಯಲ್ಲಿ ತುರ್ತು ಪರಿಸ್ಥಿತಿಯ ಘೋಷಣೆಯನ್ನು ಸಮರ್ಥಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ವ್ಯಾಖ್ಯಾನವಾಗಿದೆ. 352ನೇ ವಿಧಿ ಅಥವಾ ಅಂತಹ ಅಡಚಣೆಯು ಕಾಯಿದೆಯ ಅಡಿಯಲ್ಲಿ ತುರ್ತು ಪರಿಸ್ಥಿತಿಯ ಘೋಷಣೆಯನ್ನು  ಮಾಡಲು  ಸಮರ್ಥಿಸುವುದಿಲ್ಲ.

 

ವಿಷಯಗಳು: ವಿವಿಧ ಸಾಂವಿಧಾನಿಕ ಹುದ್ದೆಗಳಿಗೆ ನೇಮಕಾತಿ,ವಿವಿಧ ಸಾಂವಿಧಾನಿಕ ಸಂಸ್ಥೆಗಳ ಅಧಿಕಾರಗಳು, ಕಾರ್ಯಗಳು ಮತ್ತು ಜವಾಬ್ದಾರಿಗಳು.

 

ಮುಖ್ಯಮಂತ್ರಿಯ ನೇಮಕ ಮತ್ತು ಪದಚ್ಯುತಿ:

(Appointment and removal of Chief Minister)

 

 ಸಂದರ್ಭ:

ಇತ್ತೀಚೆಗೆ,ಪುಷ್ಕರ್ ಸಿಂಗ್ ಧಾಮಿ ಉತ್ತರಾಖಂಡದ 12 ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.

 

  1. ಸಂವಿಧಾನದ ಪ್ರಕಾರ, ಮುಖ್ಯಮಂತ್ರಿಯನ್ನು ರಾಜ್ಯಪಾಲರು ನೇಮಿಸುವುದರಿಂದ, ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನವನ್ನು ರಾಜ್ಯದ ರಾಜ್ಯಪಾಲರ ಮುಂದೆ  ಸ್ವೀಕರಿಸಬೇಕಾಗುತ್ತದೆ.

 

ಮುಖ್ಯಮಂತ್ರಿಯ ನೇಮಕಾತಿ:

ಮುಖ್ಯಮಂತ್ರಿಗಳು (Chief Minister) ,ರಾಜ್ಯದ ಕಾರ್ಯಂಗ ಮುಖ್ಯಸ್ಥರಾದ ರಾಜ್ಯಪಾಲರಿಂದ   ನೆಮಿಸಲ್ಪಡುತ್ತಾರೆ.

 

  1. ಸಂವಿಧಾನದ 164 ನೇ ವಿಧಿಯು ರಾಜ್ಯಪಾಲರಿಗೆ ನೆರವು ಮತ್ತು ಸಲಹೆ ನೀಡುವ ಸಲುವಾಗಿ ಮುಖ್ಯಮಂತ್ರಿ ನೇತೃತ್ವದ ಮಂತ್ರಿಮಂಡಲ ಇರಬೇಕೆಂದು ತಿಳಿಸುತ್ತದೆ.

 

ಮುಖ್ಯಮಂತ್ರಿಯಾಗಿ ಯಾರನ್ನು ನೇಮಿಸಬಹುದು?

ರಾಜ್ಯ ವಿಧಾನಸಭೆಯ ಸಾರ್ವತ್ರಿಕ ಚುನಾವಣೆಯ ನಂತರ, ಈ ಸದನದಲ್ಲಿ ಬಹುಮತವನ್ನು ಗಳಿಸುವ ಪಕ್ಷ ಅಥವಾ ಸಮ್ಮಿಶ್ರ / ಪಕ್ಷಗಳ ಗುಂಪು ತನ್ನ ನಾಯಕನನ್ನು ಆಯ್ಕೆ ಮಾಡುತ್ತದೆ ಮತ್ತು ಅವರ ಹೆಸರನ್ನು ರಾಜ್ಯಪಾಲರಿಗೆ ತಿಳಿಸುತ್ತದೆ.ನಂತರ ರಾಜ್ಯಪಾಲರು   ಔಪಚಾರಿಕವಾಗಿ ಅವರನ್ನು ಮುಖ್ಯಮಂತ್ರಿಯಾಗಿ ನೇಮಿಸುತ್ತಾರೆ ಮತ್ತು ಅವರಿಗೆ ಮಂತ್ರಿ ಮಂಡಳವನ್ನು ರಚಿಸುವಂತೆ ಸೂಚಿಸುತ್ತಾರೆ.

  1. ರಾಜ್ಯ ವಿಧಾನಸಭೆಯಲ್ಲಿ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ದೊರೆಯದಿದ್ದಾಗ, ರಾಜ್ಯಪಾಲರು ಸಾಮಾನ್ಯವಾಗಿ ಸದನದಲ್ಲಿನ ಏಕೈಕ ದೊಡ್ಡ ಪಕ್ಷದ ನಾಯಕನನ್ನು ಸರ್ಕಾರ ರಚಿಸಲು ಆಹ್ವಾನಿಸುತ್ತಾರೆ. 

 

ಅಧಿಕಾರವಧಿ:

ಸೈದ್ಧಾಂತಿಕವಾಗಿ, ರಾಜ್ಯಪಾಲರ ಇಚ್ಛೆ ಇರುವ ವರೆಗೆ  ಮುಖ್ಯಮಂತ್ರಿ ಅಧಿಕಾರದಲ್ಲಿ ಮುಂದುವರೆಯುತ್ತಾರೆ. ಆದಾಗ್ಯೂ, ವಾಸ್ತವದಲ್ಲಿ ಮುಖ್ಯಮಂತ್ರಿ ಅವರು ರಾಜ್ಯ ವಿಧಾನಸಭೆಯಲ್ಲಿ ಬಹುಮತವನ್ನು ಹೊಂದಿರುವವರೆಗೆ ಮತ್ತು ರಾಜ್ಯ ವಿಧಾನಸಭೆಯಲ್ಲಿ  ಬಹುಮತ ಹೊಂದಿದ ಪಕ್ಷದ ನಾಯಕನಾಗಿರುವವರೆಗೂ ತಮ್ಮ ಕಚೇರಿಯಲ್ಲಿಯೇ ಮುಂದುವರೆಯುತ್ತಾರೆ.

 

  1. ವಿಧಾನಸಭೆಯಲ್ಲಿ ಮುಖ್ಯಮಂತ್ರಿಗಳು ಬಹುಮತದ ಬೆಂಬಲವನ್ನು ಕಳೆದುಕೊಂಡರೆ ರಾಜ್ಯಪಾಲರು ಮುಖ್ಯಮಂತ್ರಿಯನ್ನು ವಜಾ ಮಾಡಬಹುದು.
  2. ಅವರ ವಿರುದ್ಧ ಅವಿಶ್ವಾಸ ನಿರ್ಣಯ ( vote of no-confidence) ಮಂಡಿಸುವ ಮೂಲಕ ರಾಜ್ಯ ವಿಧಾನಸಭೆಯು ಮುಖ್ಯಮಂತ್ರಿಯನ್ನು ಅವರ ಹುದ್ದೆಯಿಂದ ತೆಗೆದುಹಾಕಬಹುದು.

 

ಮುಖ್ಯಮಂತ್ರಿಯ ಅಧಿಕಾರ ಮತ್ತು ಕಾರ್ಯಗಳು:

  1. ರಾಜ್ಯಪಾಲರಿಗೆ ನೆರವು ಮತ್ತು ಸಲಹೆಯನ್ನು ಒದಗಿಸುತ್ತಾರೆ.
  2. ಮುಖ್ಯಮಂತ್ರಿಗಳು ಸಂಪುಟದ ಮುಖ್ಯಸ್ಥರು.
  3. ಅವರು ಸದನದ ನಾಯಕರು.
  4. ರಾಜ್ಯ ಆಡಳಿತಕ್ಕೆ ಸಂಬಂಧಿಸಿದ ಮಂತ್ರಿಮಂಡಲದ ಎಲ್ಲಾ ನಿರ್ಧಾರಗಳನ್ನು ಅವರು ರಾಜ್ಯಪಾಲರಿಗೆ ತಿಳಿಸುತ್ತಾರೆ.
  5. ಎಲ್ಲಾ ನೀತಿಗಳನ್ನು ಮುಖ್ಯಮಂತ್ರಿಗಳು ಸದನದಲ್ಲಿ ಘೋಷಿಸುತ್ತಾರೆ.
  6. ವಿಧಾನಸಭೆಯನ್ನು ವಿಸರ್ಜಿಸಲು ಅವರು ರಾಜ್ಯಪಾಲರಿಗೆ ಶಿಫಾರಸು ಮಾಡುತ್ತಾರೆ.
  7. ರಾಜ್ಯ ವಿಧಾನಸಭೆಯ ಅಧಿವೇಶನವನ್ನು ಕಾಲಕಾಲಕ್ಕೆ ಕರೆಯಲು ಮತ್ತು ಕೊನೆಗೊಳಿಸಲು ಅವರು ರಾಜ್ಯಪಾಲರಿಗೆ ಸಲಹೆ ನೀಡುತ್ತಾರೆ.

 

 

ವಿಷಯಗಳು: ಸರ್ಕಾರದ ವಿವಿಧ ಅಂಗಗಳ ನಡುವೆ ಅಧಿಕಾರ ವಿಭಜನೆ, ವಿವಾದ ಪರಿಹಾರ ಕಾರ್ಯವಿಧಾನಗಳು ಮತ್ತು ಸಂಸ್ಥೆಗಳು.

 

ಕ್ರಿಮಿನಲ್ ನ್ಯಾಯ ಸುಧಾರಣೆಗಳು:

(Criminal justice reforms)

 

ಸಂದರ್ಭ:

ಕ್ರಿಮಿನಲ್ ಕಾನೂನುಗಳಲ್ಲಿ ಸಮಗ್ರ ಬದಲಾವಣೆಗಳನ್ನು ಮಾಡುವ ಗುರಿಯನ್ನು ಹೊಂದಿರುವ ಸರ್ಕಾರವು ಭಾರತೀಯ ದಂಡ ಸಂಹಿತೆ, ಕ್ರಿಮಿನಲ್ ಪ್ರಕ್ರಿಯಾ ಸಂಹಿತೆ ಮತ್ತು ಭಾರತೀಯ ಸಾಕ್ಷ್ಯ ಕಾಯಿದೆಯಂತಹ (Indian Evidence Act) ಕಾನೂನುಗಳಿಗೆ ತಿದ್ದುಪಡಿ ಮಾಡುವ ಪ್ರಕ್ರಿಯೆಯನ್ನು ಎಲ್ಲಾ ಮಧ್ಯಸ್ಥಗಾರರೊಂದಿಗೆ ಸಮಾಲೋಚಿಸಿ ಪ್ರಾರಂಭಿಸಿದೆ.

 

ಸಲಹೆಗಳನ್ನು ಆಹ್ವಾನಿಸಲಾಗಿದೆ:

ಗೃಹ ಸಚಿವಾಲಯವು, ಕ್ರಿಮಿನಲ್ ಕಾನೂನುಗಳಲ್ಲಿ ಸಮಗ್ರ ತಿದ್ದುಪಡಿಗಳನ್ನು ತರುವ ಬಗ್ಗೆ ರಾಜ್ಯಪಾಲರು, ಮುಖ್ಯಮಂತ್ರಿಗಳು, ಲೆಫ್ಟಿನೆಂಟ್ ಗವರ್ನರ್‌ಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಆಡಳಿತಾಧಿಕಾರಿಗಳು, ಭಾರತದ ಮುಖ್ಯ ನ್ಯಾಯಮೂರ್ತಿಗಳು, ವಿವಿಧ ಹೈಕೋರ್ಟ್‌ಗಳ ಮುಖ್ಯ ನ್ಯಾಯಮೂರ್ತಿಗಳು, ಬಾರ್ ಕೌನ್ಸಿಲ್ ಆಫ್ ಇಂಡಿಯಾ, ವಿವಿಧ ರಾಜ್ಯಗಳ ಬಾರ್ ಕೌನ್ಸಿಲ್, ವಿವಿಧ ವಿಶ್ವವಿದ್ಯಾಲಯಗಳು, ಕಾನೂನು ಸಂಸ್ಥೆಗಳಿಂದ ಮತ್ತು ಎಲ್ಲಾ ಸಂಸದರಿಂದ ಸಲಹೆಗಳನ್ನು ಆಹ್ವಾನಿಸಿದೆ.

 

ಪ್ರಸ್ತುತ ಕಾಳಜಿಗಳು/ಸವಾಲುಗಳು:

  1. ಪ್ರಕರಣಗಳ ವಿಲೇವಾರಿಯಲ್ಲಿನ ವಿಳಂಬವು ವಿಚಾರಣಾಧೀನ ಕೈದಿಗಳ ಮತ್ತು ಅಪರಾಧಿಗಳ ಮಾನವ ಹಕ್ಕುಗಳ ಉಲ್ಲಂಘನೆಗೆ ಕಾರಣವಾಗುತ್ತದೆ.
  2. ಪೊಲೀಸ್ ಸುಧಾರಣೆಗಳ ಕುರಿತು ಸುಪ್ರೀಂ ಕೋರ್ಟ್‌ನ ನಿರ್ದೇಶನಗಳ ಹೊರತಾಗಿಯೂ, ಯಾವುದೇ ಬದಲಾವಣೆಗಳಾಗಿಲ್ಲ.
  3. ಒಬ್ಬ ವ್ಯಕ್ತಿಯನ್ನು ಅಪರಾಧಿ ಎಂದು ಪರಿಗಣಿಸುವ ನ್ಯಾಯಾಲಯದ ಆದೇಶಗಳು ಅನುಷ್ಠಾನಗೊಳ್ಳಲು ವರ್ಷಗಳನ್ನು ತೆಗೆದುಕೊಳ್ಳುತ್ತಿವೆ.

 

ಸೂಚಿಸಲಾದ ಸುಧಾರಣೆಗಳು:

 

  1. ಪ್ರತಿ ಪೊಲೀಸ್ ಠಾಣೆಯಲ್ಲಿನ ಪ್ರಕರಣಗಳ ದಟ್ಟಣೆಯನ್ನು ಕಡಿಮೆ ಮಾಡಲು, ಭಾರತೀಯ ದಂಡ ಸಂಹಿತೆಯ ಅಡಿಯಲ್ಲಿ ಕೆಲವು ಅಪರಾಧಗಳನ್ನು ವಿಶೇಷ ಕಾನೂನು ಮತ್ತು ತ್ವರಿತ ನ್ಯಾಯಾಲಯಗಳಲ್ಲಿ ಪರಿಗಣಿಸಬಹುದು.
  2. ದಾಖಲೆಗಳ ಡಿಜಿಟಲೀಕರಣವನ್ನು ಮಾಡಬೇಕು, ಇದು ತನಿಖೆ ಮತ್ತು ವಿಚಾರಣೆಯನ್ನು ವೇಗಗೊಳಿಸಲು ಸಹಾಯ ಮಾಡುತ್ತದೆ.
  3. ಹೊಸ ಅಪರಾಧಗಳ ಸೃಷ್ಟಿ ಮತ್ತು ಅಪರಾಧಗಳ ಅಸ್ತಿತ್ವದಲ್ಲಿರುವ ವರ್ಗೀಕರಣಗಳ ನವೀಕರಣವು ಕಳೆದ ನಾಲ್ಕು ದಶಕಗಳಲ್ಲಿ ಗಣನೀಯವಾಗಿ ಬದಲಾಗಿರುವ ಕ್ರಿಮಿನಲ್ ನ್ಯಾಯಶಾಸ್ತ್ರದ ತತ್ವಗಳಿಂದ ಮಾರ್ಗದರ್ಶನ ಪಡೆಯಬೇಕು.
  4. ಅಪರಾಧಗಳ ವರ್ಗೀಕರಣವನ್ನು ಭವಿಷ್ಯದಲ್ಲಿ ಅಪರಾಧಗಳ ನಿರ್ವಹಣೆಗೆ ಅನುಕೂಲವಾಗುವ ರೀತಿಯಲ್ಲಿ ಮಾಡಬೇಕು.
  5. ಒಂದೇ ಸ್ವರೂಪದ ಅಪರಾಧಗಳಿಗೆ ವಿವಿಧ ಶಿಕ್ಷೆಗಳ ಪ್ರಮಾಣ ಮತ್ತು ಸ್ವರೂಪವನ್ನು ನಿರ್ಧರಿಸುವಲ್ಲಿ ನ್ಯಾಯಾಧೀಶರ ವಿವೇಚನೆಯೂ ನ್ಯಾಯಿಕ ಪೂರ್ವನಿದರ್ಶನದ ತತ್ತ್ವಗಳನ್ನು ಆಧರಿಸಿರಬೇಕು.

 

ಭಾರತದಲ್ಲಿ ಕ್ರಿಮಿನಲ್ ಕಾನೂನು:

  1. ಭಾರತದಲ್ಲಿ ಚಾಲ್ತಿಯಲ್ಲಿರುವ ಕ್ರಿಮಿನಲ್ ಕಾನೂನು ಹಲವಾರು ಮೂಲಗಳಲ್ಲಿ ಬೇರೂರಿದೆ –ಭಾರತೀಯ ದಂಡ ಸಂಹಿತೆ, 1860, ನಾಗರಿಕ ಹಕ್ಕುಗಳ ಕಾಯ್ದೆ, 1955, ವರದಕ್ಷಿಣೆ ನಿಷೇಧ ಕಾಯಿದೆ, 1961 ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯಿದೆ, 1989.
  2. ಕ್ರಿಮಿನಲ್ ನ್ಯಾಯ ವ್ಯವಸ್ಥೆಯು ಸ್ಥಾಪಿತ ಕಾನೂನುಗಳನ್ನು ಉಲ್ಲಂಘಿಸುವವರಿಗೆ ದಂಡ ವಿಧಿಸಬಹುದು.
  3. ಕ್ರಿಮಿನಲ್ ಕಾನೂನು ಮತ್ತು ಕ್ರಿಮಿನಲ್ ಪ್ರಕ್ರಿಯೆಯನ್ನು ಸಂವಿಧಾನದ ಏಳನೇ ಅನುಸೂಚಿಯ ಸಮವರ್ತಿ ಪಟ್ಟಿಯಲ್ಲಿ ಸೇರಿಸಲಾಗಿದೆ.
  4. ಲಾರ್ಡ್ ಥಾಮಸ್ ಬಾಬಿಂಗ್ಟನ್ ಮೆಕಾಲೆಯನ್ನು (Lord Thomas Babington Macaulay) ಭಾರತದಲ್ಲಿ ಕ್ರಿಮಿನಲ್ ಕಾನೂನುಗಳ ಕ್ರೋಡೀಕರಣದ ಮುಖ್ಯ ವಾಸ್ತುಶಿಲ್ಪಿ ಎಂದು ಹೇಳಿದ್ದಾರೆ.

 

ಸುಧಾರಣೆಗಳ ಅಗತ್ಯತೆ:

  1. ವಸಾಹತುಶಾಹಿ ಯುಗದ ಕಾನೂನುಗಳು.
  2. ನಿಷ್ಫಲತೆ.
  3. ನ್ಯಾಯದಾನಕ್ಕಾಗಿ ಬಾಕಿ ಇರುವ ಪ್ರಕರಣಗಳ ಸಂಖ್ಯೆಯಲ್ಲಿನ ಹೆಚ್ಚಳ.
  4. ಬೃಹತ್ ವಿಚಾರಣಾ ವ್ಯಾಜ್ಯಗಳು.

 

ಕ್ರಿಮಿನಲ್ ಕಾನೂನಿನ ಸುಧಾರಣಾ ಸಮಿತಿ:

 

  1. ಕ್ರಿಮಿನಲ್ ಕಾನೂನನ್ನು ಸುಧಾರಿಸಲು ಗೃಹ ಸಚಿವಾಲಯವು (MHA) ರಾಷ್ಟ್ರೀಯ ಮಟ್ಟದ ಸಮಿತಿಯನ್ನು ರಚಿಸಿದೆ.
  2. ಈ ಸಮಿತಿಯ ಅಧ್ಯಕ್ಷರು ರಣಬೀರ್ ಸಿಂಗ್ (ಉಪಕುಲಪತಿ, ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯ ದೆಹಲಿ).
  3. ಈ ಸಮಿತಿಯು ಸರ್ಕಾರಕ್ಕೆ ಸಲ್ಲಿಸುವ ವರದಿಗಾಗಿ ಆನ್‌ಲೈನ್‌ನಲ್ಲಿ ತಜ್ಞರೊಂದಿಗೆ ಸಮಾಲೋಚಿಸಿ ಅಭಿಪ್ರಾಯಗಳನ್ನು ಸಂಗ್ರಹಿಸುತ್ತದೆ ಮತ್ತು ಲಭ್ಯವಿರುವ ವಸ್ತುಗಳನ್ನು ಸಂಗ್ರಹಿಸುತ್ತದೆ. 

 

ಕ್ರಿಮಿನಲ್ ಕಾನೂನಿನ ಸುಧಾರಣಾ ಸಮಿತಿ:

  1. ಕ್ರಿಮಿನಲ್ ಕಾನೂನನ್ನು ಸುಧಾರಿಸಲು ಗೃಹ ಸಚಿವಾಲಯವು (MHA) ರಾಷ್ಟ್ರೀಯ ಮಟ್ಟದ ಸಮಿತಿಯನ್ನು ರಚಿಸಿದೆ.
  2. ಈ ಸಮಿತಿಯ ಅಧ್ಯಕ್ಷರು ರಣಬೀರ್ ಸಿಂಗ್ (ಉಪಕುಲಪತಿ, ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯ ದೆಹಲಿ).
  3. ಈ ಸಮಿತಿಯು ಸರ್ಕಾರಕ್ಕೆ ಸಲ್ಲಿಸುವ ವರದಿಗಾಗಿ ಆನ್‌ಲೈನ್‌ನಲ್ಲಿ ತಜ್ಞರೊಂದಿಗೆ ಸಮಾಲೋಚಿಸಿ ಅಭಿಪ್ರಾಯಗಳನ್ನು ಸಂಗ್ರಹಿಸುತ್ತದೆ ಮತ್ತು ಲಭ್ಯವಿರುವ ವಸ್ತುಗಳನ್ನು ಸಂಗ್ರಹಿಸುತ್ತದೆ.

 

ಕ್ರಿಮಿನಲ್  ಕಾನೂನುಗಳಿಗೆ ಸಂಬಂಧಿಸಿದಂತೆ ಈ ಹಿಂದಿನ ಸಮಿತಿಗಳು:

ಮಾಧವ್ ಮೆನನ್ ಕಮಿಟಿ: ಇದು 2007 ರಲ್ಲಿ CJSI ನಲ್ಲಿನ ಸುಧಾರಣೆಗಳ ಕುರಿತು ವಿವಿಧ ಶಿಫಾರಸುಗಳನ್ನು ಸೂಚಿಸಿ ತನ್ನ ವರದಿಯನ್ನು ಸಲ್ಲಿಸಿತು.

 

ಮಳಿಮಠ ಸಮಿತಿ ವರದಿ: ಇದು 2003 ರಲ್ಲಿ ಕ್ರಿಮಿನಲ್ ಜಸ್ಟಿಸ್ ಸಿಸ್ಟಮ್ ಇನ್ ಇಂಡಿಯಾ (CJSI) ಕುರಿತು ತನ್ನ ವರದಿಯನ್ನು ಸಲ್ಲಿಸಿತು. 

 

ವಿಷಯಗಳು: ಸರ್ಕಾರದ ನೀತಿಗಳು ಮತ್ತು ವಿವಿಧ ಕ್ಷೇತ್ರಗಳಲ್ಲಿನ ಅಭಿವೃದ್ಧಿಯ ಅಡಚಣೆಗಳು ಮತ್ತು ಅವುಗಳ ವಿನ್ಯಾಸ ಮತ್ತು ಅನುಷ್ಠಾನದಿಂದ ಉಂಟಾಗುವ ಸಮಸ್ಯೆಗಳು.

 

ವಿದೇಶಿಯರ ನ್ಯಾಯಮಂಡಳಿಗಳು ಯಾವುವು?

(What are Foreigners’ Tribunals?)

 

ಸಂದರ್ಭ:

ಅಸ್ಸಾಂನ ಚಚಾರ್ ಜಿಲ್ಲೆಯ ವಿದೇಶಿಯರ ನ್ಯಾಯಮಂಡಳಿಯು (Foreigners’ Tribunal) ಅನಾರೋಗ್ಯಪೀಡಿತ ವ್ಯಕ್ತಿಗೆ ನೋಟಿಸ್ ಜಾರಿ ಮಾಡಿದೆ ಮತ್ತು ಆತ ಭಾರತೀಯ ಪೌರತ್ವವನ್ನು ಸಾಬೀತುಪಡಿಸಲು ಮಾನ್ಯವಾದ ದಾಖಲೆಗಳನ್ನು ಸಲ್ಲಿಸಲು ವಿಫಲವಾದ ಕಾರಣ ಮಾರ್ಚ್ 30 ರಂದು ತನ್ನ ಮುಂದೆ ಹಾಜರಾಗುವಂತೆ ನಿರ್ದೇಶಿಸಿದೆ.

 

ಹಿನ್ನೆಲೆ:

ರಾಜ್ಯ ಪೊಲೀಸರ ಗಡಿ ಶಾಖೆಗೆ ಶಂಕಿತ ಪೌರತ್ವ ಹೊಂದಿರುವ ಜನರನ್ನು ಗುರುತಿಸಲು ಮತ್ತು ಅವರನ್ನು ಅರೆ ನ್ಯಾಯಾಂಗೀಯ ಸಂಸ್ಥೆಯಾದ ‘ವಿದೇಶಿಯರ ನ್ಯಾಯಮಂಡಳಿಗೆ’ ಈ ಕುರಿತು ಕ್ರಮ ಕೈಗೊಳ್ಳಲು ವರದಿ ಮಾಡುವ ಕಾರ್ಯವನ್ನು ವಹಿಸಲಾಗಿದೆ.

 

‘ವಿದೇಶಿ ನ್ಯಾಯಮಂಡಳಿ’ ಎಂದರೇನು?

  1. ‘ವಿದೇಶಿಯರ ನ್ಯಾಯಮಂಡಳಿಗಳನ್ನು, ವಿದೇಶಿಯರ (ನ್ಯಾಯಮಂಡಳಿ) [Foreigners (Tribunals) Order]) ಆದೇಶ’ 1964 ರ ಅಡಿಯಲ್ಲಿ ಸ್ಥಾಪಿಸಲಾದ ಅರೆ-ನ್ಯಾಯಾಂಗ ಸಂಸ್ಥೆಗಳು ಆಗಿವೆ.
  2. ಈ ನ್ಯಾಯಮಂಡಳಿಗಳು ದೇಶದಲ್ಲಿ ಅಕ್ರಮವಾಗಿ ವಾಸಿಸುತ್ತಿರುವ ವ್ಯಕ್ತಿಯು “ವಿದೇಶಿ” ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸುತ್ತದೆ.

 

ಸಂಯೋಜನೆ: ‘ವಿದೇಶಿ ನ್ಯಾಯಮಂಡಳಿಯ’ ಸದಸ್ಯರು ಕನಿಷ್ಠ ಏಳು ವರ್ಷಗಳ ವಕಾಲತ್ತು ಅನುಭವವನ್ನು ಹೊಂದಿರುವ 35 ವರ್ಷಕ್ಕಿಂತ ಕಡಿಮೆಯಲ್ಲದ ವಯಸ್ಸಿನ ವಕೀಲರು (ಅಥವಾ) ಅಸ್ಸಾಂ ನ್ಯಾಯಾಂಗ ಸೇವೆಯ ನಿವೃತ್ತ ನ್ಯಾಯಾಂಗ ಅಧಿಕಾರಿಗಳು, ಅರೆ ನ್ಯಾಯಾಂಗ ಸೇವೆಯಲ್ಲಿ ಅನುಭವ ಹೊಂದಿರುವ ನಾಗರಿಕ ಸೇವಕರನ್ನು (ಕಾರ್ಯದರ್ಶಿ ಅಥವಾ ಹೆಚ್ಚುವರಿ ಕಾರ್ಯದರ್ಶಿಯ ಶ್ರೇಣಿಗಿಂತ ಕೆಳಗಿಲ್ಲದ) ಒಳಗೊಂಡಿರುತ್ತದೆ.

 

ವಿದೇಶಿ ನ್ಯಾಯಮಂಡಳಿಗಳನ್ನು ಸ್ಥಾಪಿಸುವ ಅಧಿಕಾರ ಹೊಂದಿರುವವರು ಯಾರು?

 

ಗೃಹ ಸಚಿವಾಲಯವು (MHA) ವಿದೇಶಿಯರ (ನ್ಯಾಯಮಂಡಳಿ) ಆದೇಶ, 1964 ಕ್ಕೆ ತಿದ್ದುಪಡಿ ಮಾಡಿದ ನಂತರ, ಎಲ್ಲಾ ರಾಜ್ಯಗಳು ಮತ್ತು ಕೇಂದ್ರ ಪ್ರದೇಶಗಳಲ್ಲಿ ನ್ಯಾಯಮಂಡಳಿಗಳನ್ನು (ಅರೆ- ನ್ಯಾಯಿಕ ಪ್ರಾಧಿಕಾರಗಳನ್ನು) ಸ್ಥಾಪಿಸಲು ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ.

 

  1. ಈ ಮೊದಲು, ನ್ಯಾಯಮಂಡಳಿಗಳನ್ನು ಸ್ಥಾಪಿಸುವ ಅಧಿಕಾರವನ್ನು ಕೇಂದ್ರಕ್ಕೆ ಮಾತ್ರ ವಹಿಸಲಾಗಿತ್ತು.

 

‘ವಿದೇಶಿ ನ್ಯಾಯಮಂಡಳಿಗಳಿಗೆ’ ಮೇಲ್ಮನವಿ ಸಲ್ಲಿಸುವ ಹಕ್ಕು ಹೊಂದಿರುವವರು ಯಾರು?

  1. ತಿದ್ದುಪಡಿ ಮಾಡಿದ ಆದೇಶದ [ವಿದೇಶಿ (ನ್ಯಾಯಮಂಡಳಿ) 2019] ಅನ್ವಯ ನ್ಯಾಯಮಂಡಳಿಗಳಲ್ಲಿ ಮೇಲ್ಮನವಿ ಸಲ್ಲಿಸಲು ವ್ಯಕ್ತಿಗಳಿಗೆ ಅಧಿಕಾರ ನೀಡುತ್ತದೆ.
  2. ಇದಕ್ಕೂ ಮೊದಲು ರಾಜ್ಯ ಆಡಳಿತ ಮಾತ್ರ ಈ ನ್ಯಾಯಮಂಡಳಿಗಳಲ್ಲಿ ಶಂಕಿತನ ವಿರುದ್ಧ ಪ್ರಕರಣ ದಾಖಲಿಸಬಹುದಿತ್ತು. 

 

ಘೋಷಿತ ವಿದೇಶಿಯ ಎಂದರೆ ಯಾರು?

‘ಘೋಷಿತ ವಿದೇಶಿಯರು’(Declared Foreigners-DF) ಎಂದರೆ ರಾಜ್ಯ ಪೊಲೀಸರ ಗಡಿ ಶಾಖೆಯಿಂದ ಅಕ್ರಮ ವಲಸಿಗರು ಎಂದು ಗುರುತಿಸಲ್ಪಟ್ಟ ನಂತರ, ತಮ್ಮ ಪೌರತ್ವದ ಪುರಾವೆಗಳನ್ನು ಒದಗಿಸಲು ವಿಫಲರಾದ ಆಧಾರದ ಮೇಲೆ ಅವರನ್ನು ಯಾವುದಾದರೂ ಒಂದು  ‘ವಿದೇಶಿ ನ್ಯಾಯಮಂಡಳಿ’ (Foreigners’ Tribunal- FT) ಯು ‘ವಿದೇಶಿ’ ಎಂದು ಘೋಷಿಸಲಾಗುತ್ತದೆ.

 

ವಿಷಯಗಳು: ಸರ್ಕಾರದ ನೀತಿಗಳು ಮತ್ತು ವಿವಿಧ ಕ್ಷೇತ್ರಗಳಲ್ಲಿನ ಅಭಿವೃದ್ಧಿಯ ಅಡಚಣೆಗಳು ಮತ್ತು ಅವುಗಳ ವಿನ್ಯಾಸ ಮತ್ತು ಅನುಷ್ಠಾನದಿಂದ ಉಂಟಾಗುವ ಸಮಸ್ಯೆಗಳು.

 

ಮಧ್ಯಾಹ್ನದ ಬಿಸಿಯೂಟ ಯೋಜನೆ:

(midday meal scheme)

 

ಸಂದರ್ಭ:

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ದೀರ್ಘಾವಧಿಯ ಮುಚ್ಚುವಿಕೆಯ ನಂತರ ತೆರೆದಿರುವ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು ಪುನರಾರಂಭಿಸಲು ಬುಧವಾರ ಬಲವಾದ ಬೇಡಿಕೆಯನ್ನು ಮುಂದಿಟ್ಟಿದ್ದಾರೆ. 

 

ಏನಿದು ಸಮಸ್ಯೆ?

ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ಶಾಲೆಗಳನ್ನು ಮುಚ್ಚಿದಾಗ ಮಧ್ಯಾಹ್ನದ ಬಿಸಿಯೂಟದ ಯೋಜನೆಯನ್ನು ನಿಲ್ಲಿಸಲಾಯಿತು. ಸಾಂಕ್ರಾಮಿಕ ಸಮಯದಲ್ಲಿ ಮಕ್ಕಳಿಗೆ ಒಣ / ಡ್ರೈ ಪಡಿತರವನ್ನು ನೀಡಲಾಯಿತು ಮತ್ತು ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯ ಅಡಿಯಲ್ಲಿ ಆಹಾರ ಧಾನ್ಯಗಳನ್ನು ಸಹ ಒದಗಿಸಲಾಯಿತು. ಆದರೆ ಮಕ್ಕಳಿಗೆ, ಒಣ ಪಡಿತರ ಬಿಸಿ ಬೇಯಿಸಿದ ಊಟಕ್ಕೆ ಪರ್ಯಾಯವಲ್ಲ.

 

ಮಧ್ಯಾಹ್ನದ ಬಿಸಿಯೂಟ ಯೋಜನೆಯ ಕುರಿತು:

ಈ ಯೋಜನೆಯು ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿನ ಮತ್ತು ಮದರಸಾಗಳಲ್ಲಿನ ಎಲ್ಲಾ ಮಕ್ಕಳಿಗೆ ಒಂದು ಬಾರಿಯ  ಊಟವನ್ನು ಸಮಗ್ರ ಶಿಕ್ಷಣ ಯೋಜನೆಯಡಿಯಲ್ಲಿ,ಖಾತರಿಪಡಿಸುತ್ತದೆ.

 

  1. ಈ ಯೋಜನೆಯಡಿಯಲ್ಲಿ ಎಂಟನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ವರ್ಷದಲ್ಲಿ ಕನಿಷ್ಠ 200 ದಿನಗಳ ವರೆಗೆಯಾದರೂ ಒಂದು ಪೌಷ್ಠಿಕಾಂಶದ ಬೇಯಿಸಿದ ಊಟವನ್ನು ಖಾತರಿಪಡಿಸಲಾಗುತ್ತದೆ.
  2. ಈ ಯೋಜನೆಯು ಮಾನವ ಸಂಪನ್ಮೂಲ ಸಚಿವಾಲ (ಶಿಕ್ಷಣ ಸಚಿವಾಲಯ)ಯದ ವ್ಯಾಪ್ತಿಗೆ ಬರುತ್ತದೆ.
  3. ಇದನ್ನು ಕೇಂದ್ರ ಸರ್ಕಾರದ ಪ್ರಯೋಜಿತ ರಾಷ್ಟ್ರೀಯ ಶಿಕ್ಷಣ ಕಾರ್ಯಕ್ರಮವಾದ ಪ್ರಾಥಮಿಕ ಶಿಕ್ಷಣಕ್ಕೆ ಪೌಷ್ಟಿಕಾಂಶದ ಬೆಂಬಲಕ್ಕಾಗಿ ರಾಷ್ಟ್ರೀಯ ಕಾರ್ಯಕ್ರಮ (National Programme of Nutritional Support to Primary Education (NP – NSPE) ಎಂಬ ಹೆಸರಿನಲ್ಲಿ 1995 ರಲ್ಲಿ ಪ್ರಾರಂಭಿಸಲಾಯಿತು. 2004 ರಲ್ಲಿ, ಈ ಯೋಜನೆಯನ್ನು ಮಧ್ಯಾಹ್ನದ ಬಿಸಿಯೂಟ ಯೋಜನೆ ಎಂದು ಪುನರಾರಂಭಿಸಲಾಯಿತು.
  4. ಈ ಯೋಜನೆಯನ್ನು ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ, 2013 ರ 

ವ್ಯಾಪ್ತಿಗೆ ಒಳಪಡಿಸಲಾಗಿದೆ.

 

ಉದ್ದೇಶಗಳು:

ಹಸಿವು ಮತ್ತು ಅಪೌಷ್ಟಿಕತೆಯನ್ನು ಪರಿಹರಿಸಿ, ಶಾಲೆಯಲ್ಲಿ ದಾಖಲಾತಿ ಮತ್ತು ಹಾಜರಾತಿಯನ್ನು ಹೆಚ್ಚಿಸಿ,ವಿವಿಧ ಜಾತಿಗಳ ನಡುವೆ ಸಾಮಾಜಿಕೀಕರಣವನ್ನು ಸುಧಾರಿಸಿ, ತಳಮಟ್ಟದಲ್ಲಿ ಉದ್ಯೋಗವನ್ನು ಒದಗಿಸುವುದು, ವಿಶೇಷವಾಗಿ ಮಹಿಳೆಯರಿಗೆ ಒದಗಿಸುವುದು. 

 

ಮಧ್ಯಾಹ್ನದ ಬಿಸಿಯೂಟ ಯೋಜನೆ (MDM) ನಿಯಮಗಳು 2015 ರ ಪ್ರಕಾರ:

 

  1. ಮಕ್ಕಳಿಗೆ ಶಾಲೆಯಲ್ಲಿ ಮಾತ್ರ ಊಟ ಬಡಿಸಲಾಗುವುದು.
  2. ಆಹಾರ ಧಾನ್ಯಗಳು ಲಭ್ಯವಿಲ್ಲದ ಕಾರಣ ಅಥವಾ ಬೇರೆ ಯಾವುದೇ ಕಾರಣಗಳಿಂದಾಗಿ ಯಾವುದೇ ಶಾಲಾ ದಿನದಂದು ಮಧ್ಯಾಹ್ನದ ಊಟವನ್ನು ಶಾಲೆಯಲ್ಲಿ ಒದಗಿಸದಿದ್ದರೆ, ಮುಂದಿನ ತಿಂಗಳು 15 ರೊಳಗೆ ರಾಜ್ಯ ಸರ್ಕಾರವು ಆಹಾರ ಭದ್ರತಾ ಭತ್ಯೆಯನ್ನು ಪಾವತಿಸಬೇಕು.
  3. ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ 2009 ರ ಅಡಿಯಲ್ಲಿ ಕಡ್ಡಾಯವಾಗಿರುವ ಶಾಲಾ ನಿರ್ವಹಣಾ ಸಮಿತಿಯು ಸಹ ಮಧ್ಯಾಹ್ನದ ಬಿಸಿಯೂಟ ಯೋಜನೆಯ ಅನುಷ್ಠಾನವನ್ನು ಮೇಲ್ವಿಚಾರಣೆ ಮಾಡುತ್ತದೆ.

 

ಪೌಷ್ಟಿಕಾಂಶದ ಮಾನದಂಡಗಳು:

  1. ಮಧ್ಯಾಹ್ನದ ಬಿಸಿಯೂಟ ಯೋಜನೆಯ ಮಾರ್ಗಸೂಚಿಗಳ ಪ್ರಕಾರ, ಕ್ಯಾಲೊರಿ ಸೇವನೆಯ ವಿಷಯದಲ್ಲಿ, ಕಿರು ಪ್ರಾಥಮಿಕ ಶಾಲೆಗಳಲ್ಲಿನ ಮಕ್ಕಳಿಗೆ MDM ಮೂಲಕ ದಿನಕ್ಕೆ ಕನಿಷ್ಠ 450 ಕ್ಯಾಲೊರಿಗಳನ್ನು 12 ಗ್ರಾಂ ಪ್ರೋಟೀನ್‌ನೊಂದಿಗೆ ಒದಗಿಸಬೇಕು ಮತ್ತು ಹಿರಿಯ ಪ್ರಾಥಮಿಕ ಶಾಲೆಗಳಲ್ಲಿನ ಮಕ್ಕಳು 20 ಗ್ರಾಂ ಪ್ರೋಟೀನ್‌ನೊಂದಿಗೆ 700 ಕ್ಯಾಲೊರಿಗಳನ್ನು ಒದಗಿಸಬೇಕು.
  2. ಪ್ರಾಥಮಿಕ ತರಗತಿಗಳ ಮಕ್ಕಳ ಪ್ರತಿ ಊಟದಲ್ಲಿ, ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ನಿಗದಿಪಡಿಸಿದಂತೆ 100 ಗ್ರಾಂ ಆಹಾರ ಧಾನ್ಯಗಳು, 20 ಗ್ರಾಂ ದ್ವಿದಳ ಧಾನ್ಯಗಳು, 50 ಗ್ರಾಂ ತರಕಾರಿಗಳು ಮತ್ತು 5 ಗ್ರಾಂ ತೈಲಗಳು ಮತ್ತು ಕೊಬ್ಬುಗಳನ್ನು ಒಳಗೊಂಡಿರಬೇಕು. ಹಿರಿಯ-ಪ್ರಾಥಮಿಕ ಶಾಲೆಗಳ ಮಕ್ಕಳ ಊಟದಲ್ಲಿ ಕಡ್ಡಾಯವಾಗಿ 150 ಗ್ರಾಂ ಆಹಾರ ಧಾನ್ಯಗಳು, 30 ಗ್ರಾಂ ದ್ವಿದಳ ಧಾನ್ಯಗಳು, 75 ಗ್ರಾಂ ತರಕಾರಿಗಳು ಮತ್ತು 7.5 ಗ್ರಾಂ ತೈಲಗಳು ಮತ್ತು ಕೊಬ್ಬುಗಳಿರಬೇಕು. 

 

ವಿಷಯಗಳು: ಕೇಂದ್ರ ಮತ್ತು ರಾಜ್ಯಗಳಿಂದ  ದುರ್ಬಲ ವರ್ಗದ ಜನಸಮುದಾಯದವರಿಗೆ ಇರುವ ಕಲ್ಯಾಣ ಯೋಜನೆಗಳು ಮತ್ತು ಈ ಯೋಜನೆಗಳ ಕಾರ್ಯಕ್ಷಮತೆ; ಕಾರ್ಯವಿಧಾನಗಳು,ಕಾನೂನುಗಳು, ಸಂಸ್ಥೆಗಳು ಮತ್ತು ಈ ದುರ್ಬಲ ವಿಭಾಗಗಳ ರಕ್ಷಣೆ ಮತ್ತು ಸುಧಾರಣೆಗಾಗಿ ರಚಿಸಲಾದ ಸಂಸ್ಥೆಗಳು.

 

ಸ್ವಚ್ಛ ಭಾರತ್ ಮಿಷನ್:

(Swachh Bharat Mission)

 

ಸಂದರ್ಭ:

ಜಲ ಸಂಪನ್ಮೂಲಗಳ ಕುರಿತ ಸಂಸದೀಯ ಸ್ಥಾಯಿ ಸಮಿತಿಯ ವರದಿಯ ಪ್ರಕಾರ:

 

ಈ ವರ್ಷ ದ್ರವ ತ್ಯಾಜ್ಯ ನಿರ್ವಹಣೆಗೆ (liquid waste management) ಮೂಲಸೌಕರ್ಯವನ್ನು ಪಡೆಯಬೇಕಿದ್ದ ಹಳ್ಳಿಗಳಲ್ಲಿ ಕೇವಲ 12% ಮಾತ್ರ ಸ್ವಚ್ಛ ಭಾರತ್ ಮಿಷನ್‌ನ ಎರಡನೇ ಹಂತದ ಅಡಿಯಲ್ಲಿ ತಮ್ಮ ಗುರಿಯನ್ನು ಸಾಧಿಸಿವೆ.

 

ಘನತ್ಯಾಜ್ಯ ನಿರ್ವಹಣಾ (solid waste management) ಮೂಲಸೌಕರ್ಯದ ಅನುಷ್ಠಾನವು ಸಹ ಹಿಂದುಳಿದಿದೆ, ಫೆಬ್ರವರಿ 7 ರವರೆಗೆ 2021-22 ರ ಅವಧಿಯಲ್ಲಿ ಕೇವಲ 22% ಗುರಿ ಗ್ರಾಮಗಳನ್ನು ಒಳಗೊಂಡಿದೆ.

 

ಹಿನ್ನೆಲೆ:

ಸ್ವಚ್ಛ ಭಾರತ್ ಮಿಷನ್ ನ ಮೊದಲ ಹಂತದಲ್ಲಿ, ಪ್ರತಿ ಗ್ರಾಮೀಣ ಪ್ರದೇಶದ ಪ್ರತಿ ಮನೆಯಲ್ಲೂ ಶೌಚಾಲಯವನ್ನು ಒದಗಿಸುವ ಗುರಿಯನ್ನು ಹೊಂದಿತ್ತು ಮತ್ತು 2019 ರಲ್ಲಿ ತನ್ನ ಗುರಿಯನ್ನು ಸಾಧಿಸಿದೆ ಎಂದು ಹೇಳಿಕೊಂಡಿದೆ.

 

ಸ್ವಚ್ಛ ಭಾರತ ಯೋಜನೆ-ನಗರ 2.0 ಕುರಿತು:

  1. ಈ ಯೋಜನೆಯು ಎಲ್ಲಾ ನಗರಗಳನ್ನು ‘ಕಸ ಮುಕ್ತ’ಗೊಳಿಸುವ ಮತ್ತು ʻಅಮೃತ್ʼ ವ್ಯಾಪ್ತಿಗೆ ಒಳಪಟ್ಟ ನಗರಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ನಗರಗಳಲ್ಲಿ ತ್ಯಾಜ್ಯ ನೀರಿನ ನಿರ್ವಹಣೆಯ ಉದ್ದೇಶವನ್ನು ಹೊಂದಿದೆ. 
  2. ಜೊತೆಗೆ ಎಲ್ಲಾ  ನಗರ ಸ್ಥಳೀಯ ಸಂಸ್ಥೆಗಳು ಬಯಲು ಶೌಚ ಮುಕ್ತವಾಗುವಂತೆ (ಒಡಿಎಫ್‌+) ಮತ್ತು 1 ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆಯನ್ನು ಹೊಂದಿರುವವ ಸ್ಥಳೀಯ ಸಂಸ್ಥೆಗಳು ಒಡಿಎಫ್++ ಆಗಿರುವಂತೆ ಖಾತರಿಪಡಿಸುತ್ತದೆ.
  3.  ಆ ಮೂಲಕ ನಗರ ಪ್ರದೇಶಗಳಲ್ಲಿ ಸುರಕ್ಷಿತ ನೈರ್ಮಲ್ಯದ ಗುರಿಯನ್ನು ಸಾಧಿಸುತ್ತದೆ. 
  4. ಮೂಲದಲ್ಲೇ ಘನ ತ್ಯಾಜ್ಯದ ವಿಂಗಡಣೆ, ʻ3ಆರ್ʼ (ಕಡಿಮೆಮಾಡುವುದು, ಮರುಬಳಕೆ, ಸಂಸ್ಕರಣೆ), ಪುರಸಭೆಯ ಎಲ್ಲಾ ರೀತಿಯ ಘನ ತ್ಯಾಜ್ಯದ ವೈಜ್ಞಾನಿಕ ಸಂಸ್ಕರಣೆ ಮತ್ತು ಪರಿಣಾಮಕಾರಿ ಘನ ತ್ಯಾಜ್ಯ ನಿರ್ವಹಣೆಗಾಗಿ ಕಸ ಸುರಿಯುವ ಸ್ಥಳಗಳಲ್ಲಿ ಮಾಲಿನ್ಯಕಾರಕಗಳ ನಿವಾರಣೆಯತ್ತ ಈ ಯೋಜನೆಯು ಗಮನ ಹರಿಸಲಿದೆ. ಈ ಯೋಜನೆಯ ವೆಚ್ಚ ಸುಮಾರು  1.41 ಲಕ್ಷ ಕೋಟಿ ರೂಪಾಯಿಗಳು. 

 


ಸಾಮಾನ್ಯ ಅಧ್ಯಯನ ಪತ್ರಿಕೆ 3:


 

ವಿಷಯಗಳು: ಸಂರಕ್ಷಣೆ, ಪರಿಸರ ಮಾಲಿನ್ಯ ಮತ್ತು ಅವನತಿ, ಪರಿಸರ ಪ್ರಭಾವದ ಮೌಲ್ಯಮಾಪನ.

 

ವಿಶ್ವ ಜಲ ದಿನ:

(World Water Day)

 

ಸಂದರ್ಭ:

ಸಕಲ ಜೀವರಾಶಿಗಳ ಮೂಲ ನೀರು. ನೀರಿಲ್ಲದ ಬದುಕು ಊಹೆಗೂ ನಿಲುಕದ್ದು. ಹೀಗಾಗಿ ನೀರಿನ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ.

 

  1. ಮುಂದಿನ ಪೀಳಿಗೆಗೆ ನೀರಿನ ಮಹತ್ವವನ್ನು ತಿಳಿಸಬೇಕು ಎನ್ನುವ ನಿಟ್ಟಿನಲ್ಲಿ ಪ್ರತೀ ವರ್ಷ ವಿಶ್ವ ಜಲ ದಿನವನ್ನು ಆಚರಿಸಲಾಗುತ್ತದೆ.  
  2. ಪ್ರತೀ ವರ್ಷ ಮಾರ್ಚ್​ 22 ರಂದು ಜಗತ್ತಿನಾದ್ಯಂತ ಜಲ ದಿನವನ್ನು ಆಚರಿಸಲಾಗುತ್ತದೆ. 
  3. ವಿಶ್ವಸಂಸ್ಥೆಯು 1993 ರಿಂದ ಪ್ರತಿ ವರ್ಷ ಮಾರ್ಚ್ 22 ರಂದು ವಿಶ್ವ ಜಲ ದಿನವನ್ನು ವಿಶ್ವದಲ್ಲಿ ನೀರಿನ ಕೊರತೆಯ ಬಗ್ಗೆ ಜಾಗೃತಿ ಮೂಡಿಸಲು ಆಚರಿಸುತ್ತಿದೆ.

 

2022 ರ ಥೀಮ್​:

ವಿಶ್ವ ಜಲ ದಿನ 2022 ರ ಥೀಮ್ “ಅಂತರ್ಜಲದ ಅದೃಶ್ಯವನ್ನು ಗೋಚರಿಸುವಂತೆ ಮಾಡುವುದು”. ಕಳೆದ ವಾರ ರೋಮ್‌ನಲ್ಲಿ ನಡೆದ 30ನೇ ಸಭೆಯಲ್ಲಿ ಯುಎನ್-ವಾಟರ್ ಈ ವಿಷಯವನ್ನು ನಿರ್ಧರಿಸಿದೆ. ಇದನ್ನು ಅಂತರರಾಷ್ಟ್ರೀಯ ಅಂತರ್ಜಲ ಸಂಪನ್ಮೂಲಗಳ ಮೌಲ್ಯಮಾಪನ ಕೇಂದ್ರ (IGRAC) ಪ್ರಸ್ತಾಪಿಸಿದೆ. ಹೀಗಾಗಿ ವಾರ್ಷಿಕ ಜಲ ಅಭಿವೃದ್ದಿಗೆ ಒತ್ತು ನೀಡಲಾಗುತ್ತಿದೆ.

Current Affairs

ವಿಶ್ವ ಜಲ ದಿನದ ಮಹತ್ವ:

 

  1. ಮುಖ್ಯವಾಗಿ ನೀರಿನ ಕೊರತೆಯ ಬಗ್ಗೆ ಅರಿವು ಮೂಡಿಸುವುದು ವಿಶ್ವ ಜಲ ದಿನದ  ಮಹತ್ವದ ಉದ್ದೇಶವಾಗಿದೆ.  ಇಂದಿನ ದಿನಗಳಲ್ಲಿ ನೀರಿನ ಸಂರಕ್ಷಣೆ ಅತೀ ಅಗತ್ಯವಾಗಿದೆ. ಭೂಮಿಯ ಮೇಲೆ ಸುಮಾರು 70 ಪ್ರತಿಶತದಷ್ಟು ನೀರು ಆವರಿಸಿದ್ದರೆ, ಸಿಹಿನೀರು ಅದರ ಶೇಕಡಾ 3 ರಷ್ಟಿದೆ, ಅದರಲ್ಲಿ ಮೂರನೇ ಎರಡರಷ್ಟು ಹೆಪ್ಪುಗಟ್ಟಿದ ಅಥವಾ ಪ್ರವೇಶಿಸಲಾಗುವುದಿಲ್ಲ ಮತ್ತು ಬಳಕೆಗೆ ಲಭ್ಯವಿಲ್ಲ.
  2. ವರದಿಯ ಪ್ರಕಾರ ನಮಗೆ ಕುಡಿಯಲು ಶುದ್ಧ ನೀರು, ಇತರ ಗೃಹೋಪಯೋಗಿ ವಸ್ತುಗಳು ಮತ್ತು ಜಮೀನುಗಳಿಗೆ ನೀರುಣಿಸಲು ಅಗತ್ಯವಿದೆ. ಆದ್ದರಿಂದ, ಪ್ರಪಂಚದಾದ್ಯಂತ ಸುಮಾರು 1.1 ಶತಕೋಟಿ ಜನರು ಶುದ್ಧ ನೀರಿನ್ನು ಪಡೆಯುವುದಿಲ್ಲ ಮತ್ತು ಒಟ್ಟು 2.7 ಶತಕೋಟಿ ಜನರು ವರ್ಷದಲ್ಲಿ ಕನಿಷ್ಠ ಒಂದು ತಿಂಗಳ ಕಾಲ ನೀರಿನ ಕೊರತೆಯನ್ನು ಅನುಭವಿಸುತ್ತಾರೆ. ಆದ್ದರಿಂದ ನೀರಿನ ಮಿತ ಬಳಕೆ ಅಗತ್ಯವಾಗಿದೆ.

 

ನೀರು, ಒಂದು ಮಾನವ ಹಕ್ಕು:

 

2010 ರಲ್ಲಿ, ವಿಶ್ವ ಸಂಸ್ಥೆಯು “ಸುರಕ್ಷಿತ ಮತ್ತು ಶುದ್ಧ ಕುಡಿಯುವ ನೀರು ಮತ್ತು ನೈರ್ಮಲ್ಯದ ಹಕ್ಕನ್ನು ಮಾನವ ಹಕ್ಕು ಎಂದು ಗುರುತಿಸಿತು, ಇದು ಜೀವನದ ಸಂಪೂರ್ಣ ಆನಂದಕ್ಕಾಗಿ ಮತ್ತು ಎಲ್ಲಾ ಮಾನವ ಹಕ್ಕುಗಳಿಗೆ ಅವಶ್ಯಕವಾಗಿದೆ.”

ನೀರಿನ ಮಾನವ ಹಕ್ಕು ಪ್ರತಿಯೊಬ್ಬರಿಗೂ ತಾರತಮ್ಯವಿಲ್ಲದೆ, ಸಾಕಷ್ಟು, ಸುರಕ್ಷಿತ, ಸ್ವೀಕಾರಾರ್ಹ, ಭೌತಿಕವಾಗಿ ಪ್ರವೇಶಿಸಬಹುದಾದ ಮತ್ತು ವೈಯಕ್ತಿಕ ಮತ್ತು ಗೃಹಬಳಕೆಗಾಗಿ ಕೈಗೆಟುಕುವ ನೀರನ್ನು ಪಡೆಯಲು ಅರ್ಹವಾಗಿದೆ; ಇದು ಕುಡಿಯಲು ನೀರು, ವೈಯಕ್ತಿಕ ನೈರ್ಮಲ್ಯ, ಬಟ್ಟೆ ಒಗೆಯುವುದು, ಆಹಾರ ತಯಾರಿಕೆ ಮತ್ತು ವೈಯಕ್ತಿಕ ಮತ್ತು ಮನೆಯ ನೈರ್ಮಲ್ಯವನ್ನು ಒಳಗೊಂಡಿರುತ್ತದೆ.

Current Affairs

ನಾನಾ ಕಾರಣಗಳಿಂದ ಸುರಕ್ಷಿತ ನೀರಿಲ್ಲದೆ ಜನರು ಪರದಾಡುವಂತಾಗಿದೆ. ಅವುಗಳಲ್ಲಿ ಕೆಲವು ಇಂತಿವೆ:

 

  1. ಲೈಂಗಿಕ ಸೂಕ್ಷ್ಮತೆ ಮತ್ತು ಲಿಂಗ ಭೇದ.
  2. ಕುಲ, ಜನಾಂಗ, ಧರ್ಮ, ಜನ್ಮ, ಜಾತಿ, ಭಾಷೆ ಮತ್ತು ರಾಷ್ಟ್ರೀಯತೆ.
  3. ಅಂಗವೈಕಲ್ಯ, ವಯಸ್ಸು ಮತ್ತು ಆರೋಗ್ಯ ಸ್ಥಿತಿ.
  4. ಆಸ್ತಿ, ಅಧಿಕಾರಾವಧಿ, ನಿವಾಸ, ಆರ್ಥಿಕ ಮತ್ತು ಸಾಮಾಜಿಕ ಸ್ಥಾನಮಾನ.
  5. ಪರಿಸರದ ಅವನತಿ, ಹವಾಮಾನ ಬದಲಾವಣೆ, ಜನಸಂಖ್ಯೆಯ ಬೆಳವಣಿಗೆ, ಸಂಘರ್ಷ, ಬಲವಂತದ ಸ್ಥಳಾಂತರ ಮತ್ತು ವಲಸೆಯ ಹರಿವುಗಳಂತಹ ಇತರ ಅಂಶಗಳು ನೀರಿನ ಮೇಲಿನ ಪರಿಣಾಮಗಳ ಮೂಲಕ ಅಂಚಿನಲ್ಲಿರುವ ಗುಂಪುಗಳ ಮೇಲೆ ಅಸಮಾನವಾಗಿ ಪರಿಣಾಮ ಬೀರಬಹುದು.

 

ಅಂತರ್ಜಲವನ್ನು ಏಕೆ ಸಂರಕ್ಷಿಸಬೇಕು?

  1. ಜಾಗತಿಕ ಜನಸಂಖ್ಯೆಯು ಸ್ಫೋಟಗೊಳ್ಳುವುದರೊಂದಿಗೆ ಮತ್ತು ಬೆಳೆ ಉತ್ಪಾದನೆಯು ಲಾಕ್‌ಸ್ಟೆಪ್‌ನಲ್ಲಿ ಹೆಚ್ಚಾಗುವುದರಿಂದ ಅಂತರ್ಜಲದ ಖಜಾನೆಯ ಈಗಾಗಲೇ ಒತ್ತಡದಲ್ಲಿದೆ.
  2. ಬರ ಮತ್ತು ದಾಖಲೆಯ ಮಳೆಯಂತಹ ಹವಾಮಾನದ ಎರಡೂ ಘಟನೆಗಳಿಂದಾಗಿ – ನಮ್ಮ ಗ್ರಹದ ಪರಿಸ್ಥಿತಿ ಇನ್ನೂ ಹದಗೆಟ್ಟಿದೆ – ಅಂತರ್ಜಲದ ಖಜಾನೆಯು ಎಷ್ಟು ಬೇಗನೆ ಮರುಪೂರಣಗೊಳ್ಳುತ್ತವೆ ಎಂಬುದರ ಮೇಲೆ ಮತ್ತೊಂದು ದೀರ್ಘಕಾಲೀನ ಪ್ರಭಾವವು ನಿರ್ಧಾರಿತ ವಾಗುತ್ತದೆ.
  3. ಮುಂದಿನ 100 ವರ್ಷಗಳಲ್ಲಿ ಎಲ್ಲಾ ಅಂತರ್ಜಲ ಪೂರೈಕೆಗಳಲ್ಲಿ ಅರ್ಧದಷ್ಟು ಮಾತ್ರ ಸಂಪೂರ್ಣವಾಗಿ ಮರುಪೂರಣ ಅಥವಾ ಮರು-ಸಮತೋಲನ ಹೊಂದುವ ಸಾಧ್ಯತೆಯಿದೆ.
  4. ಮಳೆನೀರನ್ನು ಬೆಡ್ ರಾಕ್ ಗಳ ಮೂಲಕ ಶೋಧಿಸುವ ಪ್ರಕ್ರಿಯೆಯು ಮತ್ತು ಭೂಗರ್ಭದಲ್ಲಿ ಶೇಖರಣೆಯಾಗುವ ಪ್ರಕ್ರಿಯೆಯು ಶತಮಾನಗಳನ್ನು ತೆಗೆದುಕೊಳ್ಳಬಹುದು ಮತ್ತು ಈ ವಿದ್ಯಮಾನವು ಪ್ರದೇಶದಿಂದ ಪ್ರದೇಶಕ್ಕೆ ಹೆಚ್ಚು ವ್ಯತ್ಯಾಸಗೊಳ್ಳುತ್ತದೆ.
  5. ಹವಾಮಾನ ಬದಲಾವಣೆಯು ದೀರ್ಘ ಬರಗಾಲಗಳು ಮತ್ತು ದೊಡ್ಡ ಬಿರುಗಾಳಿಗಳನ್ನು ಬಳುವಳಿಯಾಗಿ ನೀಡುವುದರಿಂದ, ಮಳೆಯ ತೀವ್ರತೆಯು ಹೆಚ್ಚು ಸ್ಪಷ್ಟವಾಗುತ್ತದೆ, ಇದು ಮುಂದಿನ ಪೀಳಿಗೆಗೆ ಅಂತರ್ಜಲ ಮೀಸಲುಗಳ ಮೇಲೆ ಪರಿಣಾಮ ಬೀರುತ್ತದೆ.

Current Affairs

ವಿಷಯಗಳು: ಸಂರಕ್ಷಣೆ, ಪರಿಸರ ಮಾಲಿನ್ಯ ಮತ್ತು ಅವನತಿ, ಪರಿಸರ ಪ್ರಭಾವದ ಮೌಲ್ಯಮಾಪನ.

 

ಮರ್ಕ್ಯುರಿ ಮಾಲಿನ್ಯ:

(Mercury Pollution)

 

ಸಂದರ್ಭ:

ಜಾಗತಿಕವಾಗಿ ಪ್ರಮುಖ ಮಾಲಿನ್ಯಕಾರಕವಾದ ಪಾದರಸದ ಅಕ್ರಮ ವ್ಯಾಪಾರವನ್ನು ಎದುರಿಸಲು ಅಂತರಾಷ್ಟ್ರೀಯ ಸಹಕಾರ ಮತ್ತು ಸಮನ್ವಯವನ್ನು ವರ್ಧಿಸುವ ಬಾಧ್ಯಕಾರಿಯಲ್ಲದ ಘೋಷಣೆಯನ್ನು ಅಳವಡಿಸಿಕೊಳ್ಳಲು ಇಂಡೋನೇಷ್ಯಾದ ಬಾಲಿಯಲ್ಲಿ ನಡೆಯುತ್ತಿರುವ ವಿವಿಧ ಪಾಲುದಾರರ ಸಭೆಯಲ್ಲಿ ಒಮ್ಮತವು ಬೆಳೆಯುತ್ತಿದೆ.

 

ಇಂಡೋನೇಷ್ಯಾ ಸರ್ಕಾರ ಮತ್ತು ವಿಶ್ವಸಂಸ್ಥೆಯು ಪಾದರಸದ ಜಾಗತಿಕ ಅಕ್ರಮ ವ್ಯಾಪಾರವನ್ನು ಎದುರಿಸಲು ಮಿನಮಾಟಾ ಸಮಾವೇಶಕ್ಕೆ ಸಹಿ ಹಾಕಿದ ಪಕ್ಷಗಳಿಂದ ಬಾಲಿ ಘೋಷಣೆಗೆ (Bali Declaration) ಬೆಂಬಲ ಮತ್ತು ಬದ್ಧತೆಯನ್ನು ಕೋರಿದೆ.

 

ಬಾಧ್ಯಸ್ಥ ವಲ್ಲದ ಈ ಘೋಷಣೆಯು ಪಕ್ಷಗಳಿಗೆ ಈ ಕೆಳಕಂಡ ಕ್ರಮಗಳನ್ನು ಕೈಗೊಳ್ಳಲು ಕರೆ ನೀಡುತ್ತದೆ:

 

  1. ಪಾದರಸದ ವ್ಯಾಪಾರವನ್ನು ಮೇಲ್ವಿಚಾರಣೆ ಮಾಡಲು ಮತ್ತು ನಿರ್ವಹಿಸಲು ಪ್ರಾಯೋಗಿಕ ಪರಿಕರಗಳು ಮತ್ತು ಅಧಿಸೂಚನೆ ಮತ್ತು ಮಾಹಿತಿ-ಹಂಚಿಕೆ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸಬೇಕು.
  2. ಪಾದರಸದ ಅಕ್ರಮ ವ್ಯಾಪಾರವನ್ನು ಎದುರಿಸಲು ಸಂಬಂಧಿಸಿದ ಅನುಭವಗಳು ಮತ್ತು ಅಭ್ಯಾಸಗಳನ್ನು ವಿನಿಮಯ ಮಾಡಿಕೊಳ್ಳಿ, ಕುಶಲಕರ್ಮಿಗಳು ಮತ್ತು ಸಣ್ಣ ಪ್ರಮಾಣದ ಚಿನ್ನದ ಗಣಿಗಾರಿಕೆಯಲ್ಲಿ ಪಾದರಸದ ಬಳಕೆಯನ್ನು ಕಡಿಮೆ ಮಾಡುವುದು.
  3. ಅಂತಹ ವ್ಯಾಪಾರಕ್ಕೆ ಸಂಬಂಧಿಸಿದ ರಾಷ್ಟ್ರೀಯ ಶಾಸನ ಮತ್ತು ಡೇಟಾ ಮತ್ತು ಮಾಹಿತಿಯ ಉದಾಹರಣೆಗಳನ್ನು ಹಂಚಿಕೊಳ್ಳಲು ತಿಳಿಸುತ್ತದೆ.

 

ಪಾದರಸದ ಬಗೆಗಿನ ಪ್ರಮುಖ ಸಂಗತಿಗಳು:

ಮೂಲ: ಪಾದರಸವು ನೈಸರ್ಗಿಕವಾಗಿ ಕಂಡುಬರುವ ಅಂಶವಾಗಿದೆ, ಮತ್ತು ಇದು ಗಾಳಿ, ನೀರು ಮತ್ತು ಮಣ್ಣಿನಲ್ಲಿ ಕಂಡುಬರುತ್ತದೆ. ನೈಸರ್ಗಿಕ ಪ್ರಕ್ರಿಯೆಗಳಾದ ಬಂಡೆಗಳ ಸವೆತ, ಹವಾಮಾನ, ಜ್ವಾಲಾಮುಖಿ ಸ್ಫೋಟಗಳು, ಭೂಶಾಖದ ಚಟುವಟಿಕೆಗಳು, ಕಾಡಿನ ಬೆಂಕಿ ಮುಂತಾದವುಗಳ ಮೂಲಕ ಇದು ವಾತಾವರಣಕ್ಕೆ ಬಿಡುಗಡೆಯಾಗುತ್ತದೆ. ಇದಲ್ಲದೆ, ‘ಪಾದರಸ’ವು ಮಾನವ ಚಟುವಟಿಕೆಗಳ ಮೂಲಕವೂ ವಾತಾವರಣಕ್ಕೆ ಬಿಡುಗಡೆಯಾಗುತ್ತದೆ.

 

ವಿಷಕಾರಿ ಪರಿಣಾಮಗಳು: ಪಾದರಸವು ಮಾನವ ನರಮಂಡಲ, ಜೀರ್ಣಕಾರಿ ಮತ್ತು ಪ್ರತಿರಕ್ಷಣಾ ವ್ಯವಸ್ಥೆ ಮತ್ತು ಶ್ವಾಸಕೋಶ, ಮೂತ್ರಪಿಂಡ, ಚರ್ಮ ಮತ್ತು ಕಣ್ಣುಗಳ ಮೇಲೆ ವಿಷಕಾರಿ ಪರಿಣಾಮಗಳನ್ನು ಬೀರುತ್ತದೆ.

 

ಸಾರ್ವಜನಿಕ ಆರೋಗ್ಯಕ್ಕೆ ಹಾನಿಕಾರಕವಾದ ಪ್ರಮುಖ ರಾಸಾಯನಿಕಗಳು – ‘ಪಾದರಸ’ವನ್ನು ವಿಶ್ವ ಆರೋಗ್ಯ ಸಂಸ್ಥೆ (WHO)ಯು ಪ್ರಮುಖವಾದ ಸಾರ್ವಜನಿಕ ಆರೋಗ್ಯ ಕಾಳಜಿಯ ಹತ್ತು ರಾಸಾಯನಿಕಗಳ ಗುಂಪಿನಲ್ಲಿ ‘ಮರ್ಕ್ಯುರಿ’ ಪಾದರಸವು ಸಹ ಒಂದು ಎಂದು ಪರಿಗಣಿಸುತ್ತದೆ.

ಮಿನಮಾಟಾ ಕಾಯಿಲೆ: ಇದು ಮೀಥೈಲ್‌ಮೆರ್ಕ್ಯುರಿ (Methylmercury) ವಿಷದಿಂದ ಉಂಟಾಗುವ ಕಾಯಿಲೆಯಾಗಿದ್ದು, ಇದನ್ನು ಜಪಾನ್‌ನ ಮಿನಾಮಟಾ ಕೊಲ್ಲಿಯ ನಿವಾಸಿಗಳಲ್ಲಿ ಮೊದಲು ಗಮನಿಸಲಾಯಿತು. ‘ಪಾದರಸ ಕೈಗಾರಿಕಾ ತ್ಯಾಜ್ಯ’ದಿಂದ ಕಲುಷಿತಗೊಂಡ ಮೀನುಗಳನ್ನು ತಿನ್ನುವ ಪರಿಣಾಮವಾಗಿ ಈ ರೋಗ ಹರಡಿತು.

Current Affairs

‘ಮಿನಮಾಟಾ ಸಮಾವೇಶ’ದ ಬಗ್ಗೆ:

  1. ಪಾದರಸದ ಮೇಲಿನ ಮಿನಮಾಟಾ ಸಮಾವೇಶವು (Minamata Convention on Mercury) ಪಾದರಸ ಮತ್ತು ಅದರ ಸಂಯುಕ್ತಗಳ ದುಷ್ಪರಿಣಾಮಗಳಿಂದ ಮಾನವನ ಆರೋಗ್ಯ ಮತ್ತು ಪರಿಸರವನ್ನು ರಕ್ಷಿಸುವ ಜಾಗತಿಕ ಒಪ್ಪಂದವಾಗಿದೆ.
  2. 2013 ರಲ್ಲಿ ಸ್ವಿಟ್ಜರ್‌ಲ್ಯಾಂಡ್‌ನ ಜಿನೀವಾದಲ್ಲಿ ನಡೆದ ಅಂತರ್-ಸರ್ಕಾರಿ ಸಮಾಲೋಚನಾ ಸಮಿತಿಯ ಐದನೇ ಅಧಿವೇಶನದಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕಲಾಯಿತು ಮತ್ತು ಅದನ್ನು 2017 ರಲ್ಲಿ ಜಾರಿಗೆ ತರಲಾಯಿತು.
  3. ಈ ಸಮಾವೇಶದ ಮುಖ್ಯ ಉದ್ದೇಶವೆಂದರೆ ಅದರ ಜೀವನ ಚಕ್ರದಲ್ಲಿ ಮಾನವಜನ್ಯ ಚಟುವಟಿಕೆಗಳಿಂದ ‘ಪಾದರಸ’ದ ಬಿಡುಗಡೆಯನ್ನು ನಿಯಂತ್ರಿಸುವುದು.
  4. ಇದು ವಿಶ್ವಸಂಸ್ಥೆಯ ಒಪ್ಪಂದವಾಗಿದೆ.
  5. ಸಮಾವೇಶವು ‘ಪಾದರಸ’ದ ಮಧ್ಯಂತರ ಸಂಗ್ರಹಣೆ ಮತ್ತು ತ್ಯಾಜ್ಯವಾದ ನಂತರ ಅದನ್ನು ವಿಲೇವಾರಿ ಮಾಡುವುದು, ಪಾದರಸದಿಂದ ಕಲುಷಿತಗೊಂಡ ತಾಣಗಳು ಮತ್ತು ಆರೋಗ್ಯ ಸಂಬಂಧಿತ ಸಮಸ್ಯೆಗಳನ್ನು ಸಹ ತಿಳಿಸುತ್ತದೆ.
  6. ಈ ಸಮಾವೇಶವನ್ನು ಭಾರತವು ಒಪ್ಪಿ  (ratified) ಅಂಗೀಕರಿಸಿದೆ. 

Current Affairs


ಪ್ರಿಲಿಮ್ಸ್‌ಗೆ ಸಂಬಂಧಿಸಿದ ಸಂಗತಿಗಳು:


 

ಅಬೆಲ್ ಪ್ರಶಸ್ತಿ:

(Abel Prize)

2022ನೇ ಸಾಲಿನ ‘ಅಬೆಲ್ ಪ್ರಶಸ್ತಿ’ಯನ್ನು ಪ್ರೊಫೆಸರ್ ಡೆನ್ನಿಸ್ ಪಾರ್ನೆಲ್ ಸುಲ್ಲಿವಾನ್ ಅವರಿಗೆ ನೀಡಲಾಗಿದೆ.

 

ಪ್ರೊಫೆಸರ್ ಸುಲ್ಲಿವನ್ ಅವರಿಗೆ “ಸ್ಥಳಶಾಸ್ತ್ರಕ್ಕೆ (Topology) ಅದರ ವಿಶಾಲವಾದ ಅರ್ಥದಲ್ಲಿ ಮತ್ತು ನಿರ್ದಿಷ್ಟವಾಗಿ ಅದರ ಬೀಜಗಣಿತ, ಜ್ಯಾಮಿತೀಯ ಮತ್ತು ಕ್ರಿಯಾತ್ಮಕ ಅಂಶಗಳಿಗೆ ಅವರು ನೀಡಿದ ಅದ್ಭುತ ಕೊಡುಗೆಗಳಿಗಾಗಿ” ಈ ಪ್ರಶಸ್ತಿಯನ್ನು ನೀಡಲಾಗಿದೆ.

 

ಅಬೆಲ್ ಪ್ರಶಸ್ತಿಯ ವಿಶೇಷತೆ : ಅಂತರಾಷ್ಟ್ರೀಯ ಮಟ್ಟದಲ್ಲಿ ಗಣಿತಶಾಸ್ತ್ರ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಸಾಧಕರಿಗೆ ನೀಡುವ ಪ್ರಶಸ್ತಿಯಾಗಿದೆ. ಇದನ್ನು ಗಣಿತದ ನೊಬೆಲ್ ಪ್ರಶಸ್ತಿ ಎಂದು ಬಿಂಬಿಸಲಾಗಿದೆ. 

 

ಪ್ರಶಸ್ತಿ ನೀಡುವ ದೇಶ: ನಾರ್ವೆ

ಸ್ಥಾಪನೆ ವರ್ಷ: 2001, ಮೊದಲು ಪ್ರದಾನ:- 2003.

 

ಪ್ರದಾನ ಮಾಡುವ ಸ್ಥಳ:- ಓಸ್ಲೋ ವಿಶ್ವವಿದ್ಯಾಲಯದ ಅಟ್ರಿಯಂ (1947 ರಿಂದ 1989 ರವರೆಗೆ ನೊಬೆಲ್ ಶಾಂತಿ ಪ್ರಶಸ್ತಿ ಪ್ರದಾನ ಮಾಡುವ ಸ್ಥಳ).

 

ಮೊದಲ ಪ್ರಶಸ್ತಿ: ಫ್ರೆಂಚ್‌ನ ಜೀನ್ ಪಿಯರ್ ಸೆರ್ರೆ (2003)

 

ಪ್ರಶಸ್ತಿ ಪಡೆದ ಭಾರತೀಯ ಮೂಲದವರು:- ಎಸ್.ಆರ್. ಶ್ರೀನಿವಾಸ್ ವರದನ್ (2007)-ಸಂಭವನೀಯತೆ ಸಿದ್ಧಾಂತ.

 

2019ನೇ ಸಾಲಿನ ಪ್ರಶಸ್ತಿ: ಅಮೆರಿಕದ ಕರೇನ್ ಅಪ್ಲೆನ್‌ಬೆಕ್ (ಅಬೆಲ್ ಪ್ರಶಸ್ತಿಗೆ ಭಾಜನರಾದ ಮೊಟ್ಟ ಮೊದಲ ಮಹಿಳೆ)

 

ಮಾಂಡಾ ಎಮ್ಮೆ:

(Manda buffalo)

 

  1. ನ್ಯಾಶನಲ್ ಬ್ಯೂರೋ ಆಫ್ ಅನಿಮಲ್ ಜೆನೆಟಿಕ್ ರಿಸೋರ್ಸಸ್ (NBAGR) ಮಾಂಡಾ ಎಮ್ಮೆಯನ್ನು ಭಾರತದಲ್ಲಿ ಕಾಣುವ 19 ನೇ ಅನನ್ಯ ತಳಿಯ ಎಮ್ಮೆ ಎಂದು ಗುರುತಿಸಿದೆ.
  2. ಈ ತಳಿಯು ಪೂರ್ವ ಘಟ್ಟಗಳ ಪ್ರಸ್ಥಭೂಮಿ ಮತ್ತು ಒಡಿಶಾದ ಕೋರಾಪುಟ್ ಪ್ರದೇಶದಲ್ಲಿ ಕಂಡುಬರುತ್ತದೆ.
  3. ಮಾಂಡಾ ಎಮ್ಮೆಗಳು ಪರಾವಲಂಬಿ ಸೋಂಕುಗಳಿಗೆ ನಿರೋಧಕವಾಗಿರುತ್ತವೆ, ರೋಗಗಳಿಗೆ ಕಡಿಮೆ ಒಳಗಾಗುತ್ತವೆ ಮತ್ತು ವಿರಳ ಸಂಪನ್ಮೂಲಗಳಲ್ಲಿ ಬದುಕಬಲ್ಲವು.

ಕುಕಿ ಬುಡಕಟ್ಟು:

  1. ಮೂಲಭೂತವಾಗಿ, ‘ಕುಕಿ ಸಮುದಾಯ’ ವು ಮಿಜೋರಾಂನ ಮಿಜೋ ಬೆಟ್ಟಗಳಲ್ಲಿನ (ಹಿಂದೆ ಲುಶಾಯ್) ಸ್ಥಳೀಯ ಜನಾಂಗೀಯ ಗುಂಪಾಗಿದೆ.
  2. ಈ ಸಮುದಾಯವು ಅರುಣಾಚಲ ಪ್ರದೇಶವನ್ನು ಹೊರತುಪಡಿಸಿ ಈಶಾನ್ಯ ಭಾರತದ ಎಲ್ಲಾ ರಾಜ್ಯಗಳಲ್ಲಿ ನೆಲೆಸಿದೆ.
  3. 1917-1919 ರವರೆಗಿನ ‘ದಿ ಕುಕಿ ರೈಸಿಂಗ್’ – ಕುಕಿ ಸಮುದಾಯದ ವಸಾಹತುಶಾಹಿ-ವಿರೋಧಿ ಸ್ವಾತಂತ್ರ್ಯ ಹೋರಾಟವಾಗಿಯೂ ಕಂಡುಬರುತ್ತದೆ – ತಮ್ಮ ಭೂಮಿಯನ್ನು ಉಳಿಸಿಕೊಳ್ಳಲು ಬ್ರಿಟಿಷರ ವಿರುದ್ಧ ಹೋರಾಡಲಾಯಿತು. WWII ಸಮಯದಲ್ಲಿ, ಕುಕಿ ಜನರು ಬ್ರಿಟಿಷರ ವಿರುದ್ಧ ಹೋರಾಡಲು ಭಾರತೀಯ ಸೇನೆಯನ್ನು ಸೇರಿದರು. 

 

ಹಿನ್ನೆಲೆ:

ಪ್ರತ್ಯೇಕ ರಾಜ್ಯಕ್ಕಾಗಿ ಆಗ್ರಹ: ಕುಕಿ ಸಮುದಾಯವು ಬ್ರಿಟಿಷರಿಗೆ ಎಂದಿಗೂ ತಲೆಬಾಗದಿದ್ದರೂ ವಸಾಹತುಶಾಹಿಗಳ ಪದಚ್ಯುತಿಗೆ ಅವರ ಕೊಡುಗೆಯನ್ನು ಎಂದಿಗೂ ಗುರುತಿಸಲಾಗಿಲ್ಲ, ಹಾಗೂ ಭಾರತ ಸ್ವಾತಂತ್ರ್ಯದ ನಂತರವೂ ತಮ್ಮನ್ನು ದುರ್ಬಲಗೊಳಿಸಲಾಗಿದೆ ಎಂದು ಅವರು ಭಾವಿಸುತ್ತಾರೆ.

  1. ‘ಕುಕಿ ನ್ಯಾಷನಲ್ ಆರ್ಗನೈಸೇಷನ್’ ಮತ್ತು ‘ಯುನೈಟೆಡ್ ಪೀಪಲ್ಸ್ ಫ್ರಂಟ್’ ನಂತಹ ಉಗ್ರಗಾಮಿ ಸಂಘಟನೆಗಳು ಮಣಿಪುರದಲ್ಲಿ ‘ಕುಕಿ ಬುಡಕಟ್ಟು’ ಜನಾಂಗಕ್ಕೆ ಪ್ರತ್ಯೇಕ ರಾಜ್ಯಕ್ಕಾಗಿ ಒತ್ತಾಯಿಸುತ್ತಿವೆ.
  2. ಕೇಂದ್ರ ಸರ್ಕಾರ ಎಲ್ಲ ‘ಕುಕಿ ಉಗ್ರಗಾಮಿ ಗುಂಪು’ಗಳೊಂದಿಗೆ ಶಾಂತಿ ಮಾತುಕತೆ ನಡೆಸಿ ಮುಂದಿನ ಐದು ವರ್ಷಗಳಲ್ಲಿ ಅವರ ಸಮಸ್ಯೆಯನ್ನು ಬಗೆಹರಿಸುವುದಾಗಿ ಭರವಸೆ ನೀಡಿದೆ.

 

ಡಾಕ್ಸಿಂಗ್:

(Doxxing)

 

Doxxing ಎಂಬುದು ಇಂಟರ್ನೆಟ್‌ನಲ್ಲಿ ಇತರರ ವೈಯಕ್ತಿಕ ಮಾಹಿತಿಯನ್ನು ದುರುದ್ದೇಶದಿಂದ ಪ್ರಕಟಿಸುವುದು ಮತ್ತು ವಿಶ್ಲೇಷಿಸುವುದಾಗಿದೆ, ಅದು ವ್ಯಕ್ತಿಯ ನಿಜವಾದ ಗುರುತನ್ನು ಬಹಿರಂಗಪಡಿಸಬಹುದು ಮತ್ತು ಅವರನ್ನು ಕಿರುಕುಳ ಮತ್ತು ಸೈಬರ್ ದಾಳಿಗೆ ಬಲಿಯಾಗುವಂತೆ ಮಾಡುತ್ತದೆ.

 

ಮೆಟಾದ (Meta’s) ಮೇಲ್ವಿಚಾರಣಾ ಮಂಡಳಿಯು ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಗಳಿಗೆ ಕಟ್ಟುನಿಟ್ಟಾದ ಡಾಕಿಂಗ್ ನಿಯಮಗಳನ್ನು ರೂಪಿಸಲು ಸೂಚಿಸಿದೆ.

 

ವಯನಾಡ್ ವನ್ಯಜೀವಿ ಅಭಯಾರಣ್ಯ:

ಕೇರಳದ ಅದ್ಭುತ ಪ್ರವಾಸಿ ತಾಣಗಳಲ್ಲಿ ವಯನಾಡ್‌ ಕೂಡಾ ಒಂದು. ತಿರುವು ಮುರುವಿನ ಘಾಟಿಯ ರಸ್ತೆಗಳು, ಸುತ್ತ ಮುತ್ತಲ ಕಾಫಿ-ಚಹಾದ ಬೆಳೆಗಳು, ತಂಗಾಳಿಯಲ್ಲಿತೇಲಿ ಬರುವ ಸುಗಂಧವನ್ನು ಆಸ್ವಾದಿಸುತ್ತಾ ವಯನಾಡುವಿನತ್ತ ಪ್ರಯಾಣ ಬೆಳೆಸಿದರೆ ಸ್ವರ್ಗದ ಅನುಭವವಾದಂತಾಗುತ್ತದೆ.

 

  1. ಈ ಅಭಯಾರಣ್ಯವು ನೀಲಗಿರಿ ಬಯೋಸ್ಫಿಯರ್ ರಿಸರ್ವ್ / ನೀಲಗಿರಿ ಜೀವಗೋಳ ಮೀಸಲಿನ (5,520 ಚದರ ಕಿಮೀ)  ಒಂದು ಘಟಕವಾಗಿದೆ ಮತ್ತು ಇದು ದಕ್ಷಿಣ ಭಾರತದ ಆನೆ ಮೀಸಲು / ಎಲಿಫೆಂಟ್ ರಿಸರ್ವ ಸಂಖ್ಯೆ 7 ರ ಪ್ರಮುಖ ಅಂಶವಾಗಿದೆ.
  2. ಇದು ನಾಲ್ಕು ಕೊಂಬಿನ ಹುಲ್ಲೆಗಳು ಕಂಡುಬರುವ, ಕೇರಳದ ಏಕೈಕ ಅಭಯಾರಣ್ಯವಾಗಿದೆ.
  3. ಈಜಿಪ್ಟಿನ ರಣಹದ್ದು, ಹಿಮಾಲಯನ್ ಗ್ರಿಫನ್ ಮತ್ತು ಸಿನೆರಿಯಸ್ ರಣಹದ್ದುಗಳ ಉಪಸ್ಥಿತಿಯು ಅಭಯಾರಣ್ಯದಲ್ಲಿ ವರದಿಯಾಗಿದೆ ಮತ್ತು ಒಂದು ಕಾಲದಲ್ಲಿ ಕೇರಳದಲ್ಲಿ ಸಾಮಾನ್ಯವಾಗಿದ್ದ ಕೆಂಪು-ತಲೆ ಮತ್ತು ಬಿಳಿ ಬೆನ್ನಿನ ರಣಹದ್ದು ಎಂಬ ಈ ಎರಡು ಜಾತಿಯ ರಣಹದ್ದುಗಳು, ಈಗ ವಯನಾಡ್ ಪ್ರಸ್ಥಭೂಮಿಗೆ ಸೀಮಿತವಾಗಿವೆ.
  4. ನಾಗರಹೊಳೆ-ಬಂಡಿಪುರ-ಮುದುಮಲೈ-ವಯನಾಡು ಅರಣ್ಯ ಸಂಕೀರ್ಣ ಕೂಡ ದೇಶದ ಪ್ರಮುಖ ಹುಲಿಗಳ ಆವಾಸಸ್ಥಾನಗಳಲ್ಲಿ ಒಂದಾಗಿದೆ.
  5. ವನ್ಯಜೀವಿ ವಿಭಾಗದ ಕಾಡುಗಳು ಕಬಿನಿ ನದಿ ವ್ಯವಸ್ಥೆಯ ಉಪನದಿಗಳಿಗೆ ಪ್ರಮುಖ ಜಲಾನಯನ ಪ್ರದೇಶಗಳಾಗಿವೆ.

 

ಏನೆಲ್ಲಾನೋಡಬಹುದು?

 

ಕೇರಳದ ವಯನಾಡ್ ಗೆ ಪ್ರವಾಸ ಕೈಗೊಳ್ಳುವ ಮೂಲಕ

ಥೋಲ್ಪೆಟ್ಟಿ ಅಭಯಾರಣ್ಯ, ಕುರುವ ದ್ವೀಪಗಳು, ತಿರುನೆಲ್ಲಿ ದೇವಳ, ಎಡಕ್ಕಲ್ಲು ಗುಹೆ, ಬಾಣಾಸುರ ಅಣೆಕಟ್ಟು, ಪಳಸೀ ಉದ್ಯಾನ , ಮುತಂಗ ವನ್ಯಜೀವಿ ಅಭಯಾರಣ್ಯ, ಚೆಂಬ್ರಾ ಪಾರ್ಕ್ ಮುಂತಾದವುಗಳನ್ನು ನೋಡಬಹುದು.

[ad_2]

Leave a Comment