[Mission 2022] ದೈನಂದಿನ ಪ್ರಚಲಿತ ಘಟನೆಗಳು ದಿನಾಂಕ – 5ನೇ ಮಾರ್ಚ್ 2022 – INSIGHTSIAS

[ad_1]

 

 

ಪರಿವಿಡಿ:

 ಸಾಮಾನ್ಯ ಅಧ್ಯಯನ ಪತ್ರಿಕೆ  2 :

1. ಭಾರತದ ಸಂವಿಧಾನದ 8ನೇ ಅನುಸೂಚಿ.

 

ಸಾಮಾನ್ಯ ಅಧ್ಯಯನ ಪತ್ರಿಕೆ :2

1. J&K ಡಿಲಿಮಿಟೇಶನ್ ಪ್ರಕ್ರಿಯೆಯ ನಂತರ ‘ಮತದಾರರ ದ್ವೀಪಗಳು’ ನಿರ್ಮಾಣವಾಗುವ ಸಂದೇಹ.

2. ಮಕ್ಕಳ ಹಕ್ಕುಗಳ ರಕ್ಷಣೆಯ ರಾಷ್ಟ್ರೀಯ ಆಯೋಗ.

3. ಪ್ರಧಾನ ಮಂತ್ರಿ ಜನ-ಔಷಧಿ ಯೋಜನೆ.

4. ರಷ್ಯಾದ ಕ್ರಮಗಳ ಕುರಿತು ತನಿಖೆ ನಡೆಸಲು ಮಾನವ ಹಕ್ಕುಗಳ ಮಂಡಳಿಯ ಮತದಾನದಿಂದ ಭಾರತ ದೂರ ಉಳಿದಿದೆ.

5. ದತ್ತಾಂಶ ಸಂರಕ್ಷಣಾ ಮಸೂದೆ.

 

ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ಸಂಗತಿಗಳು:

1. ಜಪೋರಿಝಿಯಾ ಪರಮಾಣು ವಿದ್ಯುತ್ ಸ್ಥಾವರ.

 


ಸಾಮಾನ್ಯ ಅಧ್ಯಯನ ಪತ್ರಿಕೆ : 1


 

ವಿಷಯಗಳು: ಭಾರತೀಯ ಸಂಸ್ಕೃತಿಯು ಪ್ರಾಚೀನ ಕಾಲದಿಂದ ಆಧುನಿಕ ಕಾಲದವರೆಗೆ ಕಲಾ ಪ್ರಕಾರಗಳು, ಸಾಹಿತ್ಯ ಮತ್ತು ವಾಸ್ತುಶಿಲ್ಪದ ಪ್ರಮುಖ ಅಂಶಗಳನ್ನು ಒಳಗೊಂಡಿದೆ.

ಭಾರತದ ಸಂವಿಧಾನದ 8ನೇ ಅನುಸೂಚಿ:


(Eighth schedule to the Constitution)

 

ಸಂದರ್ಭ:

ಇತ್ತೀಚಿಗೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ತಮ್ಮ ಸರ್ಕಾರವು ‘ಭೋಜ್‌ಪುರಿ’ ಅನ್ನು ‘ಸಂವಿಧಾನದ ಎಂಟನೇ ಅನುಸೂಚಿ’ಗೆ ಸೇರಿಸುವ  ಬಹುಕಾಲದ ಬೇಡಿಕೆಯನ್ನು ಮತ್ತೆ ಪುನರುಜ್ಜೀವನಗೊಳಿಸುತ್ತದೆ ಎಂದು ಹೇಳಿದ್ದಾರೆ. ‘ಎಂಟನೇ ಅನುಸೂಚಿ’ಗೆ ಸೇರ್ಪಡೆಯಾದ ನಂತರ ಭೋಜ್‌ಪುರಿ ಭಾಷೆಯು ಅಧಿಕೃತ ಭಾಷೆಯ ಸ್ಥಾನಮಾನವನ್ನು ಪಡೆಯುತ್ತದೆ.

  1. 2017ರಲ್ಲಿ ರಾಜ್ಯ ಸಚಿವ ಸಂಪುಟವು ಈ ಸಂಬಂಧ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿತ್ತು.

 

ಸಂವಿಧಾನದ 8ನೇ ಅನುಸೂಚಿ:

ಭಾರತದ ಸಂವಿಧಾನದ ಭಾಗ XVII ರಲ್ಲಿ, ಅಧಿಕೃತ ಭಾಷೆಗಳಿಗೆ ಸಂಬಂಧಿಸಿದ ನಿಬಂಧನೆಗಳನ್ನು ವಿಧಿ 343 ರಿಂದ ವಿಧಿ 351 ರವರೆಗೆ ಮಾಡಲಾಗಿದೆ.

 

ಎಂಟನೇ ಅನುಸೂಚಿಗೆ ಸಂಬಂಧಿಸಿದ ಸಾಂವಿಧಾನಿಕ ನಿಬಂಧನೆಗಳು ಇಂತಿವೆ:

  1. ವಿಧಿ 344: ಆರ್ಟಿಕಲ್ 344 (1) ಸಂವಿಧಾನದ ಪ್ರಾರಂಭದಿಂದ ಐದು ವರ್ಷಗಳ ಅವಧಿ ಮುಗಿದ ನಂತರ ರಾಷ್ಟ್ರಪತಿಗಳು ಸಂವಿಧಾನಾತ್ಮಕವಾಗಿ ಒಂದು ಆಯೋಗವನ್ನು ರಚಿಸಬೇಕು. (ಅದರಂತೆ ಸಂವಿಧಾನ ಪ್ರಾರಂಭವಾದ ಐದು ವರ್ಷಗಳ ನಂತರ ರಾಷ್ಟ್ರಪತಿಗಳು ಶ್ರೀ ಬಿ ಜಿ ಕೇರ್ ಅವರ ಅಧ್ಯಕ್ಷತೆಯಲ್ಲಿ ಒಂದು ಆಯೋಗವನ್ನು ನೇಮಿಸಿದರು).
  2. ವಿಧಿ 351: ಇದರ ಅಡಿಯಲ್ಲಿ, ಹಿಂದಿ ಭಾಷೆಯ ಅಭಿವೃದ್ಧಿಗೆ, ಅದರ ಪ್ರಸಾರಕ್ಕೆ ಸಂಬಂಧಿಸಿದಂತೆ ನಿಬಂಧನೆಗಳನ್ನು ಮಾಡಲಾಗಿದೆ, ಇದರಿಂದ ಇದು ಭಾರತದ ಸಂಯೋಜಿತ ಸಂಸ್ಕೃತಿಯ ಎಲ್ಲಾ ಅಂಶಗಳಿಗೆ ಅಭಿವ್ಯಕ್ತಿ ಮಾಧ್ಯಮವಾಗಿ ಕಾರ್ಯನಿರ್ವಹಿಸುತ್ತದೆ.
  3. ವಿಧಿ 345: ಪ್ರತಿಯೊಂದು ರಾಜ್ಯದ ಶಾಸನಸಭೆಗಳು ಆ ರಾಜ್ಯದಲ್ಲಿ ಪ್ರಚಲಿತವಾಗಿರುವ ಒಂದು ಅಥವಾ ಹೆಚ್ಚಿನ ಭಾಷೆಗಳನ್ನು ಅಲ್ಲಿನ ಯಾವುದೇ ಅಧಿಕೃತ ಉದ್ದೇಶಗಳಿಗೆ ಬಳಸಿಕೊಳ್ಳುವ ಅಧಿಕಾರವನ್ನು ಹೊಂದಿವೆ ಎಂದು ತಿಳಿಸುತ್ತದೆ.
  4. ವಿಧಿ 347: ರಾಷ್ಟ್ರಪತಿಗಳು ಒಂದು ರಾಜ್ಯದಲ್ಲಿ ಅಲ್ಲಿನ ಒಂದು ನಿರ್ದಿಷ್ಟ ಭಾಷೆಯು ಆ ರಾಜ್ಯಕ್ಕೆ ಪೂರ್ತಿಯಾಗಿ ಅಥವಾ ಭಾಗಶಃ ಅಧಿಕೃತ ಭಾಷೆಯಾಗಬೇಕು ಎಂದು ನಿರ್ದೇಶನ ನೀಡಬಹುದು.

ಪ್ರಸ್ತುತ, ಸಂವಿಧಾನದ ಎಂಟನೇ ಅನುಸೂಚಿಯಲ್ಲಿ, ಅಸ್ಸಾಮೀಸ್, ಬಂಗಾಳಿ, ಗುಜರಾತಿ, ಹಿಂದಿ, ಕನ್ನಡ, ಕಾಶ್ಮೀರಿ, ಕೊಂಕಣಿ, ಮಲಯಾಳಂ, ಮಣಿಪುರಿ, ಮರಾಠಿ, ನೇಪಾಳಿ, ಒರಿಯಾ, ಪಂಜಾಬಿ, ಸಂಸ್ಕೃತ, ಸಿಂಧಿ, ತಮಿಳು, ತೆಲುಗು, ಉರ್ದು, ಬೋಡೋ, ಸಂತಾಲಿ , ಮೈಥಿಲಿ ಮತ್ತು ಡೋಗ್ರಿ, ಸೇರಿದಂತೆ ಒಟ್ಟು 22 ಅಧಿಕೃತ ಭಾಷೆಗಳಿವೆ.

 


ಸಾಮಾನ್ಯ ಅಧ್ಯಯನ ಪತ್ರಿಕೆ : 2


 

ವಿಷಯಗಳು:ಭಾರತದ ಸಂವಿಧಾನ- ಐತಿಹಾಸಿಕ ಆಧಾರಗಳು, ವಿಕಸನ, ವೈಶಿಷ್ಟ್ಯಗಳು, ತಿದ್ದುಪಡಿಗಳು, ಮಹತ್ವದ ನಿಬಂಧನೆಗಳು ಮತ್ತು ಮೂಲ ರಚನೆ.

J&K ಡಿಲಿಮಿಟೇಶನ್ ಪ್ರಕ್ರಿಯೆಯ ನಂತರ ‘ಮತದಾರರ ದ್ವೀಪಗಳು’ ನಿರ್ಮಾಣವಾಗುವ ಸಂದೇಹ:


(‘Voter islands’ after J&K delimitation exercise)

 

ಸಂದರ್ಭ:

ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಯುತ್ತಿರುವ ‘ಕ್ಷೇತ್ರ ಪುನರ್ವಿಂಗಡಣೆ ಪ್ರಕ್ರಿಯೆ’ (Delimitation Process) ಯಲ್ಲಿ ಭಾಗವಹಿಸುತ್ತಿರುವ ರಾಜಕೀಯ ನಾಯಕರು ಹಾಗೂ ಸ್ವತಂತ್ರ ವೀಕ್ಷಕರು ಕೇಂದ್ರಾಡಳಿತ ಪ್ರದೇಶದಲ್ಲಿ “ಮತದಾರರ ದ್ವೀಪಗಳು” ರಚನೆಯಾಗಬಹುದೆಂಬ ಭೀತಿಯಲ್ಲಿದ್ದಾರೆ.

ಏನಿದು ಪ್ರಕರಣ?

ಡಿಲಿಮಿಟೇಶನ್ ಆಕ್ಟ್, 2002 ರ ಪ್ರಕಾರ,  (The Delimitation Act, 2002) ಜನಸಂಖ್ಯೆಯನ್ನು ಹೊರತುಪಡಿಸಿ, ಎಲ್ಲಾ ಕ್ಷೇತ್ರಗಳು ಭೌಗೋಳಿಕವಾಗಿ ಕಾಂಪ್ಯಾಕ್ಟ್ ಪ್ರದೇಶಗಳಾಗಿರಬೇಕು ಮತ್ತು ಅವುಗಳನ್ನು ಡಿಲಿಮಿಟ್ ಮಾಡುವಾಗ, ಅವುಗಳ ನೈಸರ್ಗಿಕ ಲಕ್ಷಣಗಳು, ಆಡಳಿತಾತ್ಮಕ ಘಟಕಗಳ ಅಸ್ತಿತ್ವದಲ್ಲಿರುವ ಗಡಿಗಳು, ಸಂವಹನ ಸೌಲಭ್ಯಗಳು ಮತ್ತು ಸಾರ್ವಜನಿಕ ಅನುಕೂಲಗಳನ್ನು ಗಣನೆಗೆ ತೆಗೆದುಕೊಳ್ಳುವುದು ಅವಶ್ಯಕವಾಗಿದೆ.

  1. ಪ್ರಸ್ತುತ ನಡೆಯುತ್ತಿರುವ ‘ಕ್ಷೇತ್ರ ಪುನರ್ವಿಂಗಡಣೆ ಪ್ರಕ್ರಿಯೆ’ಯಲ್ಲಿ ಈ ತತ್ವವನ್ನು ಪಾಲಿಸಲಾಗುತ್ತಿಲ್ಲ ಎಂದು ವೀಕ್ಷಕರು ಹೇಳುತ್ತಿದ್ದಾರೆ.
  2. ಉದಾಹರಣೆಗೆ, ಈ ‘ಡಿಲಿಮಿಟೇಶನ್ ಪ್ರಕ್ರಿಯೆ’ಯಲ್ಲಿ ಸೂಚಿಸಲಾದ ಗಡಿಗಳ ಪ್ರಕಾರ, ಒಂದು ತಹಸಿಲ್‌ನಲ್ಲಿರುವ ಗ್ರಾಮವು ಇನ್ನೊಂದು ತಹಸಿಲ್‌ನಲ್ಲಿರುವ ಇತರ ಗ್ರಾಮಗಳಿಂದ ಸಂಪೂರ್ಣವಾಗಿ ಸುತ್ತುವರಿಯಲ್ಪಡುತ್ತದೆ. ಇಲ್ಲಿ ಭೌಗೋಳಿಕ ಸಂಪರ್ಕವನ್ನು ಪರಿಗಣಿಸಲಾಗುತ್ತಿಲ್ಲ, ಹೀಗಾಗಿ ಈ ಪ್ರಕ್ರಿಯೆಯು ‘ಮತದಾರರ ದ್ವೀಪ’ಗಳು ಹುಟ್ಟಲು ಕಾರಣವಾಗುತ್ತಿದೆ.
  3. ಹೊಸ ಕ್ಷೇತ್ರವಿಂಗಡನೆ ಪ್ರಕ್ರಿಯೆಯ ನಂತರ, J&K ನಲ್ಲಿ ಒಟ್ಟು ವಿಧಾನಸಭಾ ಸ್ಥಾನಗಳ ಸಂಖ್ಯೆಯನ್ನು 83 ರಿಂದ 90 ಕ್ಕೆ ಹೆಚ್ಚಿಸಲಾಗುತ್ತದೆ. ಈ ಸ್ಥಾನಗಳು ‘ಪಾಕಿಸ್ತಾನ ಆಕ್ರಮಿತ ಕಾಶ್ಮೀರ’ (PoK) ಗಾಗಿ ಮೀಸಲಾದ 24 ಸ್ಥಾನಗಳಿಗೆ ಹೆಚ್ಚುವರಿಯಾಗಿರುತ್ತವೆ ಮತ್ತು ಈ ಸ್ಥಾನಗಳನ್ನು ಅಸೆಂಬ್ಲಿಯಲ್ಲಿ ಖಾಲಿ ಇರಿಸಲಾಗುತ್ತದೆ.

 

ಜಮ್ಮು ಮತ್ತು ಕಾಶ್ಮೀರ ಕ್ಷೇತ್ರ ಪುನರ್ ವಿಂಗಡಣೆ ಘಟನಾ ಕ್ರಮಗಳು:

  1. ಜಮ್ಮು ಮತ್ತು ಕಾಶ್ಮೀರದಲ್ಲಿ ಮೊದಲ ಕ್ಷೇತ್ರ ಪುನರ್ ವಿಂಗಡಣೆ ಪ್ರಕ್ರಿಯೆಯನ್ನು 1951 ರಲ್ಲಿ ಕ್ಷೇತ್ರ ಪುನರ್ ವಿಂಗಡಣೆ ಸಮಿತಿಯು ಕಾರ್ಯಗತಗೊಳಿಸಿತು,ಮತ್ತು ಇದರ ಅಡಿಯಲ್ಲಿ, ಅಂದಿನ ರಾಜ್ಯವನ್ನು 25 ವಿಧಾನಸಭಾ ಕ್ಷೇತ್ರಗಳಾಗಿ ವಿಂಗಡಿಸಲಾಗಿತ್ತು.
  2. ಅದರ ನಂತರ, 1981 ರಲ್ಲಿ ಮೊದಲ ಬಾರಿಗೆ ಪೂರ್ಣ ಪ್ರಮಾಣದ ಡಿಲಿಮಿಟೇಶನ್ ಆಯೋಗವನ್ನು (Delimitation Commission) ರಚಿಸಲಾಯಿತು ಮತ್ತು ಈ ಆಯೋಗವು 1981 ರ ಜನಗಣತಿಯ ಆಧಾರದ ಮೇಲೆ 1995 ರಲ್ಲಿ ತನ್ನ ಶಿಫಾರಸುಗಳನ್ನು ಸಲ್ಲಿಸಿತು. ಅಂದಿನಿಂದ, ರಾಜ್ಯದಲ್ಲಿ ಯಾವುದೇ ಡಿಲಿಮಿಟೇಶನ್ ಪ್ರಕ್ರಿಯೆಯನ್ನು ನಡೆಸಲಾಗಿಲ್ಲ.
  3. 2011 ರ ಜನಗಣತಿಯ ಆಧಾರದ ಮೇಲೆ ಕ್ಷೇತ್ರ ಪುನರ್ವಿಂಗಡಣೆ ಮಾಡಲು 2020 ರಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ‘ಕ್ಷೇತ್ರ ಪುನರ್ ವಿಂಗಡಣೆ ಆಯೋಗ’ವನ್ನು ರಚಿಸಲಾಯಿತು. ಈ ಆಯೋಗಕ್ಕೆ ಕೇಂದ್ರಾಡಳಿತ ಪ್ರದೇಶದಲ್ಲಿ ಇನ್ನೂ ಏಳು ಸ್ಥಾನಗಳನ್ನು ಸೇರಿಸಲು ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯಗಳಿಗೆ ಮೀಸಲಾತಿ ನೀಡಲು ಆದೇಶಿಸಲಾಯಿತು.
  4. ಹೊಸ ಕ್ಷೇತ್ರ ಪುನರ್ವಿಂಗಡಣೆ ಪ್ರಕ್ರಿಯೆಯ ನಂತರ, ಜಮ್ಮು ಮತ್ತು ಕಾಶ್ಮೀರದಲ್ಲಿ ಒಟ್ಟು ಸೀಟುಗಳ ಸಂಖ್ಯೆಯನ್ನು 83 ರಿಂದ 90 ಕ್ಕೆ ಹೆಚ್ಚಿಸಲಾಗುವುದು. ಈ ಸ್ಥಾನಗಳು ‘ಪಾಕಿಸ್ತಾನ ಆಕ್ರಮಿತ ಕಾಶ್ಮೀರ’ (PoK) ಕ್ಕಾಗಿ ಕಾಯ್ದಿರಿಸಲಾದ 24 ಸ್ಥಾನಗಳಿಗೆ ಹೆಚ್ಚುವರಿಯಾಗಿರುತ್ತವೆ ಮತ್ತು ಈ ಸ್ಥಾನಗಳನ್ನು ವಿಧಾನಸಭೆಯಲ್ಲಿ ಖಾಲಿ ಇಡಲಾಗುತ್ತದೆ.

current affairs

 

‘ಡಿಲಿಮಿಟೇಶನ್’/ ಕ್ಷೇತ್ರ ಪುನರ್ವಿಂಗಡಣೆ ಎಂದರೇನು? ಅದು ಏಕೆ ಅಗತ್ಯವಾಗಿದೆ?

‘ಡಿಲಿಮಿಟೇಶನ್’ / ಕ್ಷೇತ್ರ ಪುನರ್ವಿಂಗಡಣೆ (Delimitation) ಎಂದರೆ, ‘ಶಾಸಕಾಂಗವನ್ನು ಹೊಂದಿರುವ ರಾಜ್ಯದಲ್ಲಿ ಪ್ರಾದೇಶಿಕ ಕ್ಷೇತ್ರಗಳ ಮಿತಿಗಳನ್ನು (boundaries of territorial constituencies) ಅಥವಾ ಗಡಿಗಳನ್ನು ನಿಗದಿಪಡಿಸುವ ಪ್ರಕ್ರಿಯೆಯಾಗಿದೆ.

  1. ಜಮ್ಮು ಮತ್ತು ಕಾಶ್ಮೀರ ಮರುಸಂಘಟನೆ ಕಾಯ್ದೆ 2019 ರ ನಿಬಂಧನೆಗಳ ಪ್ರಕಾರ, ಕೇಂದ್ರಾಡಳಿತ ಪ್ರದೇಶದ ಲೋಕಸಭಾ ಮತ್ತು ವಿಧಾನಸಭಾ ಕ್ಷೇತ್ರಗಳನ್ನು ಮರು ರೂಪಿಸಲು ಜಮ್ಮು ಮತ್ತು ಕಾಶ್ಮೀರ ಡಿಲಿಮಿಟೇಶನ್ / ಕ್ಷೇತ್ರ ಪುನರ್ವಿಂಗಡಣೆ ಆಯೋಗವನ್ನು ಕೇಂದ್ರ ಸರ್ಕಾರ ಕಳೆದ ವರ್ಷ ಮಾರ್ಚ್ 6 ರಂದು ರಚಿಸಿತು.
  2. ‘ಜಮ್ಮು ಮತ್ತು ಕಾಶ್ಮೀರ ಮರುಸಂಘಟನೆ ಕಾಯ್ದೆ’, 2019 ರ ಮೂಲಕ ರಾಜ್ಯವನ್ನು ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್‌ ಎಂಬ ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಂಗಡಿಸಲಾಗಿದೆ.

 

ಕ್ಷೇತ್ರ ಪುನರ್ವಿಂಗಡಣೆ ಪ್ರಕ್ರಿಯೆಯನ್ನು ಯಾರು ನಿರ್ವಹಿಸುತ್ತಾರೆ?

  1. ಡಿಲಿಮಿಟೇಶನ್ ಪ್ರಕ್ರಿಯೆಯನ್ನು ಹೆಚ್ಚು ಅಧಿಕಾರ ಹೊಂದಿರುವ ಆಯೋಗವು ಕೈಗೊಳ್ಳುತ್ತದೆ. ಈ ಆಯೋಗವನ್ನು ಔಪಚಾರಿಕವಾಗಿ ಕ್ಷೇತ್ರ ಪುನರ್ವಿಂಗಡಣೆ ಆಯೋಗ (Delimitation Commission) ಅಥವಾ ಬೌಂಡರಿ ಕಮಿಷನ್ (Boundary Commission) ಎಂದು ಕರೆಯಲಾಗುತ್ತದೆ.
  2. ಡಿಲಿಮಿಟೇಶನ್ ಆಯೋಗದ ಆದೇಶಗಳು ಕಾನೂನಿನಂತೆಯೇ ಅಧಿಕಾರವನ್ನು ಹೊಂದಿವೆ, ಮತ್ತು ಅದನ್ನು ಯಾವುದೇ ನ್ಯಾಯಾಲಯದ ಮುಂದೆ ಪ್ರಶ್ನಿಸಲಾಗುವುದಿಲ್ಲ.

 

ಈ ಆಯೋಗದ ಸಂರಚನೆ:

‘ಡಿಲಿಮಿಟೇಶನ್ ಕಮಿಷನ್ ಆಕ್ಟ್’, 2002 ರ ಪ್ರಕಾರ, ಕೇಂದ್ರವು ನೇಮಿಸಿದ ಕ್ಷೇತ್ರ ಪುನರ್ವಿಂಗಡಣೆ ಆಯೋಗವು ಮೂವರು ಸದಸ್ಯರನ್ನು ಒಳಗೊಂಡಿದೆ: ಇದರಲ್ಲಿ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳಾಗಿ ಸೇವೆ ಸಲ್ಲಿಸುತ್ತಿರುವ ಅಥವಾ ನಿವೃತ್ತರಾದ ನ್ಯಾಯಾಧೀಶರು ಮತ್ತು ಮುಖ್ಯ ಚುನಾವಣಾ ಆಯುಕ್ತರು,* ಅಥವಾ ಮುಖ್ಯ ಚುನಾವಣಾ ಆಯುಕ್ತರು ನಾಮನಿರ್ದೇಶನ ಮಾಡಿದ ಚುನಾವಣಾ ಆಯುಕ್ತರು ಮತ್ತು* ಎಕ್ಸ್ ಆಫೀಸಿಯೊ ಸದಸ್ಯರಾಗಿ ನಾಮನಿರ್ದೇಶನ ಗೊಂಡಿರುವ ರಾಜ್ಯ ಚುನಾವಣಾ ಆಯುಕ್ತರು.

 

ಸಾಂವಿಧಾನಿಕ ನಿಬಂಧನೆಗಳು:

  1. ಸಂವಿಧಾನದ 82 ನೇ ವಿಧಿಯ ಪ್ರಕಾರ, ಪ್ರತಿ ಜನಗಣತಿಯ ನಂತರ ಭಾರತದ ಸಂಸತ್ತು ‘ಕ್ಷೇತ್ರ ಪುನರ್ ವಿಂಗಡನಾ ಕಾಯ್ದೆ’ಯನ್ನು ಜಾರಿಗೊಳಿಸುತ್ತದೆ.
  2. ಆರ್ಟಿಕಲ್ 170 ರ ಅಡಿಯಲ್ಲಿ, ಪ್ರತಿ ಜನಗಣತಿಯ ನಂತರ, ಕ್ಷೇತ್ರ ಪುನರ್ ವಿಂಗಡನಾ ಕಾಯ್ದೆ ಪ್ರಕಾರ ರಾಜ್ಯಗಳನ್ನು ಪ್ರಾದೇಶಿಕ ಕ್ಷೇತ್ರಗಳಾಗಿ ವಿಂಗಡಿಸಲಾಗುತ್ತದೆ.

ನೋಟ್:

ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ರಂಜನಾ ಪ್ರಕಾಶ್ ದೇಸಾಯಿ ಅವರ ಅಧ್ಯಕ್ಷತೆಯಲ್ಲಿ ‘ಜಮ್ಮು ಮತ್ತು ಕಾಶ್ಮೀರ ಕ್ಷೇತ್ರ ಪುನರ್ವಿಂಗಡಣೆ ಆಯೋಗ’  (Jammu and Kashmir Delimitation Commission) ವನ್ನು ರಚಿಸಲಾಗಿದೆ.

 

ವಿಷಯಗಳು: ಶಾಸನಬದ್ಧ ನಿಯಂತ್ರಕ ಮತ್ತು ವಿವಿಧ ಅರೆ- ನ್ಯಾಯಿಕ ಸಂಸ್ಥೆಗಳು.

ಮಕ್ಕಳ ಹಕ್ಕುಗಳ ರಕ್ಷಣೆಯ ರಾಷ್ಟ್ರೀಯ ಆಯೋಗ/ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (NCPCR):


(National commission for protection of Child Rights)

ಸಂದರ್ಭ:

ಇತ್ತೀಚೆಗೆ, ಮಕ್ಕಳ ಹಕ್ಕುಗಳ ರಕ್ಷಣೆಯ ರಾಷ್ಟ್ರೀಯ ಆಯೋಗ (National Commission for Protection of Child Rights – NCPCR) ವು ತನ್ನ 17 ನೇ ಸಂಸ್ಥಾಪನಾ ದಿನವನ್ನು ಆಚರಿಸಿತು.

NCPCR ಬಗ್ಗೆ:

ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವನ್ನು (NCPCR) ಮಾರ್ಚ್ 2007 ರಲ್ಲಿ ‘ಮಕ್ಕಳ ಹಕ್ಕುಗಳ ಸಂರಕ್ಷಣಾ ಕಾಯ್ದೆ, 2005’ ರ ಅಡಿಯಲ್ಲಿ ಸ್ಥಾಪಿಸಲಾಗಿದೆ.

  1. ಇದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯದ ಆಡಳಿತ ನಿಯಂತ್ರಣದಲ್ಲಿ ಕಾರ್ಯನಿರ್ವಹಿಸುತ್ತದೆ.
  2. ಆಯೋಗವು 5ನೇ ಮಾರ್ಚ್ 2007 ರಂದು ತನ್ನ ಕಾರ್ಯಾಚರಣೆ ಆರಂಭಿಸಿತು.

 

‘ಮಕ್ಕಳ’ ವ್ಯಾಖ್ಯಾನ: 0 ರಿಂದ 18 ವರ್ಷದೊಳಗಿನ ವ್ಯಕ್ತಿಯನ್ನು ಆಯೋಗವು ‘ಮಗು’ ಎಂದು ವ್ಯಾಖ್ಯಾನಿಸಿದೆ.

ಆಯೋಗದ ಕಾರ್ಯ:

ಆಯೋಗದ ಕಾರ್ಯವು ಭಾರತದ ಸಂವಿಧಾನದಲ್ಲಿ ಪ್ರತಿಪಾದಿಸಿರುವಂತೆ ದೇಶದಲ್ಲಿ ರೂಪಿಸಿದ ಎಲ್ಲಾ ಕಾನೂನುಗಳು, ನೀತಿಗಳು, ಕಾರ್ಯಕ್ರಮಗಳು ಮತ್ತು ಆಡಳಿತ ಕಾರ್ಯವಿಧಾನಗಳು ಮತ್ತು ಮಕ್ಕಳ ಹಕ್ಕುಗಳ ಕುರಿತ ವಿಶ್ವಸಂಸ್ಥೆಯ ಸಮಾವೇಶದಲ್ಲಿ ವಿವರಿಸಿರುವಂತೆ ಅವರು ಮಗುವಿನ ಹಕ್ಕುಗಳ ದೃಷ್ಟಿಗೆ ಅನುಗುಣವಾಗಿರುವುದನ್ನು ಖಚಿತಪಡಿಸಿಕೊಳ್ಳುವುದು.

 

‘ಶಿಕ್ಷಣ ಹಕ್ಕು ಕಾಯ್ದೆ’ 2009 ಕ್ಕೆ ಸಂಬಂಧಿಸಿದಂತೆ NCPCR ನ ಅಧಿಕಾರಗಳು:

  1. ಕಾನೂನಿನ ಉಲ್ಲಂಘನೆಗೆ ಸಂಬಂಧಿಸಿದ ದೂರುಗಳನ್ನು ತನಿಖೆ ಮಾಡಬಹುದು.
  2. ಯಾವುದೇ ವ್ಯಕ್ತಿಯನ್ನು ವಿಚಾರಣೆ ಮಾಡಲು ಕರೆಸಬಹುದು ಮತ್ತು ಸಾಕ್ಷ್ಯವನ್ನು ಕೋರಬಹುದು.
  3. ಮ್ಯಾಜಿಸ್ಟ್ರೇಟ್ ವಿಚಾರಣೆಗೆ ಆದೇಶಿಸಬಹುದು.
  4. ರಿಟ್ ಅರ್ಜಿಯನ್ನು ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಬಹುದು.
  5. ಅಪರಾಧಿಯ ವಿರುದ್ಧ ಕಾನೂನು ಕ್ರಮ ಜರುಗಿಸಲು ಸರ್ಕಾರವನ್ನು ಸಂಪರ್ಕಿಸಬಹುದು.
  6. ಪೀಡಿತ ಜನರಿಗೆ ಮಧ್ಯಂತರ ಪರಿಹಾರವನ್ನು ನೀಡುವಂತೆ ಶಿಫಾರಸು ಮಾಡಬಹುದು.

 

ಸಂಯೋಜನೆ:

  1. ಆಯೋಗವು ಅಧ್ಯಕ್ಷರು ಮತ್ತು ಆರು ಸದಸ್ಯರನ್ನು ಒಳಗೊಂಡಿದೆ, ಅವರಲ್ಲಿ ಕನಿಷ್ಠ ಇಬ್ಬರು ಮಹಿಳೆಯರು ಇರಬೇಕು.
  2. ಎಲ್ಲಾ ಸದಸ್ಯರನ್ನು ಕೇಂದ್ರ ಸರ್ಕಾರವು ನೇಮಿಸುತ್ತದೆ, ಮತ್ತು ಅವರ ಅಧಿಕಾರಾವಧಿ ಮೂರು ವರ್ಷಗಳು.
  3. ಆಯೋಗದಲ್ಲಿ ಸೇವೆ ಸಲ್ಲಿಸಲು ಅಧ್ಯಕ್ಷರ ಗರಿಷ್ಠ ವಯಸ್ಸು 65 ವರ್ಷಗಳು ಮತ್ತು ಸದಸ್ಯರ ಗರಿಷ್ಠ ವಯಸ್ಸು 60 ವರ್ಷಗಳು.

 

ವಿಷಯಗಳು: ಸರ್ಕಾರದ ನೀತಿಗಳು ಮತ್ತು ವಿವಿಧ ಕ್ಷೇತ್ರಗಳಲ್ಲಿನ ಅಭಿವೃದ್ಧಿಯ ಅಡಚಣೆಗಳು ಮತ್ತು ಅವುಗಳ ವಿನ್ಯಾಸ ಮತ್ತು ಅನುಷ್ಠಾನದಿಂದ ಉಂಟಾಗುವ ಸಮಸ್ಯೆಗಳು.

ಪ್ರಧಾನ ಮಂತ್ರಿ ಜನ-ಔಷಧಿ ಯೋಜನೆ:


(Pradhan Mantri Jan-Aushadhi Yojana)

 

ಸಂದರ್ಭ:

2022 ರ ಮಾರ್ಚ್ 1 ರಿಂದ ಮಾರ್ಚ್ 7 ವರೆಗೆ ಜನೌಷಧಿ ದಿವಸ್ ಸಪ್ತಾಹವನ್ನು ಆಚರಿಸಲಾಗುತ್ತದೆ.

ಥೀಮ್:4 ನೇ ಜನೌಷಧಿ ದಿವಸ್‌ನ ಥೀಮ್ / ವಿಷಯ: “ಜನಔಷಧಿ-ಜನ ಉಪಯೋಗಿ” (Jan Aushadhi-Jan Upyogi) ಎಂಬುದಾಗಿದೆ.

ಫಾರ್ಮಾಸ್ಯುಟಿಕಲ್ಸ್ & ಮೆಡಿಕಲ್ ಡಿವೈಸಸ್ ಬ್ಯೂರೋ ಆಫ್ ಇಂಡಿಯಾ (Pharmaceuticals & Medical Devices Bureau of India (PMBI) ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಪರಿಯೋಜನೆಯನ್ನು (PMBJP) ಅನುಷ್ಠಾನ ಮಾಡುವ ಸಂಸ್ಥೆಯಾಗಿದೆ.

ಯೋಜನೆಯ ಕಾರ್ಯಕ್ಷಮತೆ:

  1. ದೇಶದ ಎಲ್ಲ ಜಿಲ್ಲೆಗಳನ್ನು ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಪರ್ಯಾಯ ಯೋಜನೆ ವ್ಯಾಪ್ತಿಗೆ ಒಳಪಡಿಸಲಾಗಿದೆ.
  2. ಎಲ್ಲಾ ಕೇಂದ್ರಗಳಲ್ಲಿ ಔಷಧಿಗಳ ನೈಜ ಸಮಯದ ವಿತರಣೆಯನ್ನು ಖಚಿತಪಡಿಸಿಕೊಳ್ಳಲು ಪರಿಣಾಮಕಾರಿ ಐಟಿ ತಂತ್ರಜ್ಞಾನ-ಸಕ್ರಿಯಗೊಳಿಸಿದ ಲಾಜಿಸ್ಟಿಕ್ಸ್ ಮತ್ತು ಪೂರೈಕೆ ಸರಪಳಿಯನ್ನು ಪರಿಚಯಿಸಲಾಗಿದೆ.
  3. PMBJPಯ ಉತ್ಪನ್ನ ಶ್ರೇಣಿಯು ಪ್ರಸ್ತುತ 1,451 ಔಷಧಿಗಳು ಮತ್ತು 240 ಶಸ್ತ್ರಚಿಕಿತ್ಸಾ ಸಾಧನಗಳನ್ನು ಒಳಗೊಂಡಿದೆ.

current affairs

 

PMBJP ಯ ಕುರಿತು:

ಇದು,ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯದ  ಔಷಧೀಯ ಇಲಾಖೆ ನಡೆಸುವ ಅಭಿಯಾನವಾಗಿದೆ.

  1. ಈ ಅಭಿಯಾನದ ಅಡಿಯಲ್ಲಿ, ಗುಣಮಟ್ಟದ ಔಷಧಿಗಳನ್ನು ವಿಶೇಷ ಕೇಂದ್ರಗಳ ಮೂಲಕ ಕೈಗೆಟುಕುವ ದರದಲ್ಲಿ ಸಾಮಾನ್ಯ ಜನರಿಗೆ ಲಭ್ಯವಾಗುವಂತೆ ಮಾಡಲು ಪ್ರಯತ್ನಿಸಲಾಗುತ್ತದೆ.
  2. ಈ ವಿಶೇಷ ಕೇಂದ್ರಗಳನ್ನು ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಕೇಂದ್ರಗಳು ಎಂದು ಕರೆಯಲಾಗುತ್ತದೆ.
  3. ಈ ಕಾರ್ಯಕ್ರಮವನ್ನು 2008 ರಲ್ಲಿ ಆರಂಭಿಸಲಾಯಿತು, ಮತ್ತು 2015 ರಲ್ಲಿ ಈ ಯೋಜನೆಯನ್ನು ಮರು ನಾಮಕರಣ ಮಾಡುವ ಮೂಲಕ ಮತ್ತೆ ಆರಂಭಿಸಲಾಯಿತು.
  4. ಈ ಯೋಜನೆಯನ್ನು ‘ಫಾರ್ಮಾಸ್ಯುಟಿಕಲ್ಸ್ ಮತ್ತು ಮೆಡಿಕಲ್ ಡಿವೈಸ್ ಬ್ಯೂರೋ ಆಫ್ ಇಂಡಿಯಾ’ (PMBI) ಜಾರಿಗೊಳಿಸಿದೆ.

 

ಈ ಯೋಜನೆಯ ಪ್ರಮುಖ ಲಕ್ಷಣಗಳು:

  1. ಗುಣಮಟ್ಟದ ಔಷಧಿಗಳ ಲಭ್ಯತೆಯನ್ನು ಖಚಿತಪಡಿಸುವುದು.
  2. ಔಷಧದ ವೆಚ್ಚವನ್ನು ಕಡಿಮೆ ಮಾಡಲು ಗುಣಮಟ್ಟದ ಜೆನೆರಿಕ್ ಔಷಧಿಗಳ ವ್ಯಾಪ್ತಿಯನ್ನು ಹೆಚ್ಚಿಸಿ, ಪ್ರತಿ ವ್ಯಕ್ತಿಯ ಚಿಕಿತ್ಸೆಯ ವೆಚ್ಚವನ್ನು ಮರು ವ್ಯಾಖ್ಯಾನಿಸುವುದು.
  3. ಶಿಕ್ಷಣ ಮತ್ತು ಪ್ರಚಾರದ ಮೂಲಕ ಜೆನೆರಿಕ್ ಔಷಧಗಳ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ಗುಣಮಟ್ಟವನ್ನು ಕೇವಲ ಹೆಚ್ಚಿನ ಬೆಲೆಯಿಂದ ನಿರ್ಣಯಿಸಲಾಗುವುದಿಲ್ಲ.
  4. ಸರ್ಕಾರಿ ಕಾರ್ಯಕ್ರಮ, ಸಾರ್ವಜನಿಕ ವಲಯದ ಸಂಸ್ಥೆಗಳು, ಖಾಸಗಿ ವಲಯ, ಎನ್‌ಜಿಒಗಳು, ಸಂಘಗಳು, ಸಹಕಾರಿ ಸಂಸ್ಥೆಗಳು ಮತ್ತು ಇತರ ಸಂಸ್ಥೆಗಳನ್ನು ಒಳಗೊಂಡ ಸಾರ್ವಜನಿಕ ಕಾರ್ಯಕ್ರಮ.
  5. ಕಡಿಮೆ ಚಿಕಿತ್ಸಾ ವೆಚ್ಚಗಳು ಮತ್ತು ಸುಲಭ ಲಭ್ಯತೆಯ ಮೂಲಕ ಉತ್ತಮ ಆರೋಗ್ಯ ಸೇವೆಯ ಪ್ರವೇಶವನ್ನು ಸುಧಾರಿಸುವ ಮೂಲಕ ಅಗತ್ಯವಿದ್ದಲ್ಲೆಲ್ಲ, ಎಲ್ಲಾ ಚಿಕಿತ್ಸಕ ವಿಭಾಗಗಳಲ್ಲಿ ಜೆನೆರಿಕ್ ಔಷಧಗಳ ಬೇಡಿಕೆಯನ್ನು ಸೃಷ್ಟಿಸುವುದು.

 

ವಿಷಯಗಳು: ಪ್ರಮುಖ ಅಂತರರಾಷ್ಟ್ರೀಯ ಸಂಸ್ಥೆಗಳು, ಏಜೆನ್ಸಿಗಳು ಮತ್ತು ವೇದಿಕೆಗಳು, ಅವುಗಳ ರಚನೆ, ಮತ್ತು ಆದೇಶ.

ರಷ್ಯಾದ ಕ್ರಮಗಳ ಕುರಿತು ತನಿಖೆ ನಡೆಸಲು ಮಾನವ ಹಕ್ಕುಗಳ ಮಂಡಳಿಯ ಮತದಾನದಿಂದ ಭಾರತ ದೂರ ಉಳಿದಿದೆ:


(India abstains from Human Rights Council vote to probe Russian actions)

 

ಸಂದರ್ಭ:

ಉಕ್ರೇನ್ ಮೇಲೆ ರಷ್ಯಾ ನಡೆಸುತ್ತಿರುವ ಆಕ್ರಮಣವನ್ನು ಬಲವಾಗಿ ಖಂಡಿಸಿದ ವಿಶ್ವ ಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯ (UNHRC) ನಿರ್ಣಯದ ಮೇಲಿನ ಮತದಾನದಿಂದ ಭಾರತ ದೂರ ಉಳಿದಿದೆ.

ನಿರ್ಣಯದ ಉದ್ದೇಶ?

ಉಕ್ರೇನ್‌ನಲ್ಲಿ ರಶಿಯಾದ ಸೈನಿಕ ಕಾರ್ಯಾಚರಣೆಗಳ ಬಗ್ಗೆ ಅಂತರಾಷ್ಟ್ರೀಯ ತನಿಖಾ ಆಯೋಗವನ್ನು ಸ್ಥಾಪಿಸುವಂತೆ ಈ ನಿರ್ಣಯವು UNHRC ಯನ್ನು ಆಗ್ರಹಿಸಿದೆ.

  1. ರಷ್ಯಾದ ಪಡೆಗಳಿಂದ ಮಾನವ ಹಕ್ಕುಗಳ ಉಲ್ಲಂಘನೆ, ನಾಗರಿಕ ಸಾವುನೋವುಗಳು ಮತ್ತು ಜನ ವಸತಿ ಪ್ರದೇಶಗಳಲ್ಲಿ ರಷ್ಯಾದ “ಬಾಂಬ್ ದಾಳಿ ಮತ್ತು ಶೆಲ್ ದಾಳಿ” ಯಿಂದ 6,60,000 ನಿರಾಶ್ರಿತರನ್ನು ಬಲವಂತವಾಗಿ ಸ್ಥಳಾಂತರಿಸುವ ವರದಿಗಳ ಬಗ್ಗೆ ಇದು “ಗಂಭೀರ ಕಾಳಜಿ” ಯ ವಿಷಯವಾಗಿದೆ ಎಂದು ನಿರ್ಣಯವು ಹೇಳಿದೆ.

 

ನಿರ್ಣಯದ ಪರ ಬೆಂಬಲ:

32 ದೇಶಗಳು, ಅಥವಾ UNHRC ಯ ಸುಮಾರು ಮೂರನೇ ಎರಡರಷ್ಟು ಸದಸ್ಯರು ನಿರ್ಣಯದ ಪರವಾಗಿ ಮತ ಚಲಾಯಿಸಿದರು.

ಮತದಾನಕ್ಕೆ ಗೈರಾದ/ ನಿರ್ಣಯದ ವಿರುದ್ಧ ಮತ ಚಲಾಯಿಸಿದವರು:

ವಿಶ್ವಸಂಸ್ಥೆಯ ಸದಸ್ಯರಿಂದ ಚುನಾಯಿತರಾದ 47 ಸದಸ್ಯ ಬಲದ UNHRC ಮಂಡಳಿಯ ನಿರ್ಣಯಕ್ಕೆ ಗೈರುಹಾಜರಾದ 13 ದೇಶಗಳಲ್ಲಿ ಚೀನಾ, ಪಾಕಿಸ್ತಾನ, ಕಝಾಕಿಸ್ತಾನ್, ಸುಡಾನ್, ಉಜ್ಬೇಕಿಸ್ತಾನ್ ಮತ್ತು ವೆನೆಜುವೆಲಾದೊಂದಿಗೆ ಭಾರತವೂ ಸೇರಿದೆ.

ರಷ್ಯಾ ಮತ್ತು ಎರಿಟ್ರಿಯಾ ಮಾತ್ರ ನಿರ್ಣಯದ ವಿರುದ್ಧ ಮತ ಚಲಾಯಿಸಿದವು.

  1. ಜನ ವಸತಿ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿರುವ ಆರೋಪವನ್ನು ರಷ್ಯಾ ನಿರಾಕರಿಸಿದೆ ಮತ್ತು ಉಕ್ರೇನ್‌ನಲ್ಲಿನ ಮಿಲಿಟರಿ ಕಾರ್ಯಾಚರಣೆಗೆ ಪ್ರತಿಕ್ರಿಯೆಯಾಗಿ ಉಕ್ರೇನ್ ಪೂರ್ವ ಡೊನ್‌ಬಾಸ್ ಪ್ರದೇಶದಲ್ಲಿ ದಾಳಿಗಳನ್ನು ನಡೆಸಿದೆ ಮತ್ತು ಮಾನವ ಹಕ್ಕುಗಳ ಉಲ್ಲಂಘನೆ ಮಾಡಿದೆ ಎಂದು ರಷ್ಯಾದ ಅಧ್ಯಕ್ಷ ಪುಟಿನ್ ಉಕ್ರೇನ್ ಸರ್ಕಾರದ ವಿರುದ್ಧ ಆರೋಪ ಮಾಡಿದ್ದಾರೆ.

 

ಉಕ್ರೇನ್ ವಿಷಯದಲ್ಲಿ ಭಾರತದ ನಿಲುವು:

  1. ಫೆಬ್ರವರಿ 24 ರಂದು ಉಕ್ರೇನ್‌ನಲ್ಲಿ ರಷ್ಯಾದ ಮಿಲಿಟರಿ ಕಾರ್ಯಾಚರಣೆಗಳು ಪ್ರಾರಂಭವಾದಾಗಿನಿಂದ ‘ಮಾನವ ಹಕ್ಕುಗಳ ಮಂಡಳಿ’ಯಲ್ಲಿ ಭಾರತದ ಸ್ಥಾನವು ವಿಶ್ವಸಂಸ್ಥೆ ಮತ್ತು ಬಹುಪಕ್ಷೀಯ ಸಂಸ್ಥೆಗಳಿಗೆ ಗೈರುಹಾಜರಿಯ ಸರಮಾಲೆಯನ್ನು ಸೇರಿಸುತ್ತದೆ.ಆದರೆ ಉಕ್ರೇನ್‌ನಲ್ಲಿ ರಷ್ಯಾದ ಮಿಲಿಟರಿ ದಾಳಿಯ ಉಲ್ಬಣಗೊಳ್ಳುವಿಕೆಯ ದೃಷ್ಟಿಯಿಂದ,ಮಾಸ್ಕೋವನ್ನು ಟೀಕಿಸುವ ನಿರ್ಣಯಗಳ ಪರವಾಗಿ ಹೆಚ್ಚು ಹೆಚ್ಚು ದೇಶಗಳು ಮತ ಚಲಾಯಿಸುತ್ತಿವೆ.
  2. ಭಾರತ ಸರ್ಕಾರವು ‘ವಿಶ್ವಸಂಸ್ಥೆಯ ಭದ್ರತಾ ಮಂಡಳಿ’ಯಲ್ಲಿ ಮೂರು,ನ್ಯೂಯಾರ್ಕ್‌ನಲ್ಲಿ ನೆಲೆ ಗೊಂಡಿರುವ ‘ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿ’ಯಲ್ಲಿ ಕೈಗೊಳ್ಳಲಾದ ಎರಡು, ಜಿನೀವಾದಲ್ಲಿರುವ ‘ಮಾನವ ಹಕ್ಕುಗಳ ಮಂಡಳಿ’ಯಲ್ಲಿ ಎರಡು,ಮತ್ತು ವಿಯೆನ್ನಾ ಮೂಲದ ಅಂತರರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ (IAEA) ಯು ಕೈಗೊಂಡ ಒಂದು ನಿರ್ಣಯದ ಮೇಲಿನ ಮತದಾನದಿಂದ ದೂರವಿರಲು ನಿರ್ಧರಿಸಿದೆ.

 

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯ ಕುರಿತು:

‘ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿ’ (UN Human Rights Council- UNHRC) ಅನ್ನು 2006 ರಲ್ಲಿ ಮರುಸಂಘಟಿಸಲಾಯಿತು, ಅದರ ನಿಕಟಪೂರ್ವ ಸಂಘಟನೆಯಾದ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಆಯೋಗ (UN Commission on Human Rights)ದ ‘ವಿಶ್ವಾಸಾರ್ಹತೆಯ ಕೊರತೆಯನ್ನು’ ನಿವಾರಿಸಲು UNHRCಯು ಸಹಾಯ ಮಾಡುತ್ತದೆ.

ಮಾನವ ಹಕ್ಕುಗಳ ಹೈ ಕಮಿಷನರ್ (Office of the High Commissioner for Human Rights -OHCHR) ಕಚೇರಿಯು ಮಾನವ ಹಕ್ಕುಗಳ ಮಂಡಳಿಯ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತದೆ.

ಪ್ರಧಾನ ಕಛೇರಿ: ಸ್ವಿಟ್ಜರ್ಲೆಂಡ್‌ನ ಜಿನೀವಾದಲ್ಲಿದೆ.

ಸಂಯೋಜನೆ:

  1. ಪ್ರಸ್ತುತ, ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿ (UNHRC) 47 ಸದಸ್ಯರನ್ನು ಹೊಂದಿದೆ, ಮತ್ತು ಇಡೀ ವಿಶ್ವದ ಭೌಗೋಳಿಕ ಪ್ರಾತಿನಿಧ್ಯವನ್ನು ಖಚಿತಪಡಿಸಿಕೊಳ್ಳಲು ವಾರ್ಷಿಕ ಆಧಾರದ ಮೇಲೆ ಸ್ಥಾನಗಳನ್ನು ಹಂಚಿಕೆ ಮಾಡಲಾಗುತ್ತದೆ.
  2. ಪ್ರತಿ ಸದಸ್ಯರನ್ನು ಮೂರು ವರ್ಷಗಳ ಅವಧಿಗೆ ಆಯ್ಕೆ ಮಾಡಲಾಗುತ್ತದೆ.
  3. ಒಂದು ದೇಶಕ್ಕೆ ಒಂದು ಸ್ಥಾನವನ್ನು ಗರಿಷ್ಠ ಎರಡು ಬಾರಿ ಸತತವಾಗಿ ಹೊಂದಲು ಅವಕಾಶವಿದೆ. ಅಂದರೆ 2 ಕ್ಕಿಂತ ಹೆಚ್ಚು ಬಾರಿ ಸತತವಾಗಿ ಆಯ್ಕೆಯಾಗಲು ಅವಕಾಶವಿಲ್ಲ.

 

UNHRC ಯ ಸದಸ್ಯತ್ವವು ಸಮಾನ ಭೌಗೋಳಿಕ ವಿತರಣೆಯನ್ನು ಆಧರಿಸಿದೆ. ಸ್ಥಾನಗಳ ವಿತರಣೆಯು ಈ ಕೆಳಗಿನಂತೆ ಇದೆ:

  1. ಆಫ್ರಿಕನ್ ದೇಶಗಳು: 13 ಸ್ಥಾನಗಳು.
  2. ಏಷ್ಯಾ-ಪೆಸಿಫಿಕ್ ದೇಶಗಳು: 13 ಸ್ಥಾನಗಳು.
  3. ಲ್ಯಾಟಿನ್ ಅಮೇರಿಕನ್ ಮತ್ತು ಕೆರಿಬಿಯನ್ ದೇಶಗಳು: 8 ಸ್ಥಾನಗಳು.
  4. ಪಶ್ಚಿಮ ಯುರೋಪಿಯನ್ ಮತ್ತು ಇತರ ದೇಶಗಳು: 7 ಸ್ಥಾನಗಳು.
  5. ಪೂರ್ವ ಯುರೋಪಿಯನ್ ದೇಶಗಳು: 6 ಸ್ಥಾನಗಳು.

 

ಕಾರ್ಯಗಳು:

  1. ಮಂಡಳಿಯು, ವಿಶ್ವಸಂಸ್ಥೆಯ ಎಲ್ಲಾ 193 ಸದಸ್ಯ ರಾಷ್ಟ್ರಗಳ ‘ಸಾರ್ವತ್ರಿಕ ಆವರ್ತಕ ವಿಮರ್ಶೆ’ (Universal Periodic Review- UPR) ಮೂಲಕ ಮಾನವ ಹಕ್ಕುಗಳಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಕಡ್ಡಾಯವಲ್ಲದ ನಿರ್ಣಯಗಳನ್ನು ಹೊರಡಿಸುತ್ತದೆ.
  2. ಇದು ನಿರ್ದಿಷ್ಟ ದೇಶಗಳಲ್ಲಿನ ಮಾನವ ಹಕ್ಕುಗಳ ಉಲ್ಲಂಘನೆಗಾಗಿ ತಜ್ಞರ ಮೂಲಕ ತನಿಖೆಯ ಪ್ರಗತಿಯನ್ನು ನೋಡಿಕೊಳ್ಳುತ್ತದೆ.

 

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯ ಮುಂದೆ ಇರುವ ಸವಾಲುಗಳು ಮತ್ತು ಸುಧಾರಣೆಗಳ ಅವಶ್ಯಕತೆ:

  1. ‘ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯ ಸದಸ್ಯ ರಾಷ್ಟ್ರಗಳಾದ ಸೌದಿ ಅರೇಬಿಯಾ, ಚೀನಾ ಮತ್ತು ರಷ್ಯಾಗಳ ಮಾನವ ಹಕ್ಕುಗಳ ದಾಖಲೆಗಳು ಮಂಡಳಿಯ ಉದ್ದೇಶ ಮತ್ತು ಧ್ಯೇಯಕ್ಕೆ ಹೊಂದಿಕೆಯಾಗುವುದಿಲ್ಲ, ಇದರಿಂದಾಗಿ ವಿಮರ್ಶಕರು ಪರಿಷತ್ತಿನ ಪ್ರಸ್ತುತತೆಯನ್ನು ಪ್ರಶ್ನಿಸುತ್ತಾರೆ.
  2. UNHRC ಯಲ್ಲಿ ಅನೇಕ ಪಾಶ್ಚಿಮಾತ್ಯ ದೇಶಗಳು ಭಾಗವಹಿಸುತ್ತಿದ್ದರೂ, ಅವರು ಮಾನವ ಹಕ್ಕುಗಳ ತಿಳುವಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಳ್ಳುತ್ತಿದ್ದಾರೆ.
  3. UNHRC ಯ ಕಾರ್ಯವೈಖರಿಗೆ ಸಂಬಂಧಿಸಿದಂತೆ ಅದರ ಆದೇಶಗಳನ್ನು ಪಾಲಿಸದಿರುವುದು ಗಂಭೀರ ವಿಷಯವಾಗಿದೆ.
  4. ಅಮೆರಿಕದಂತಹ ಪ್ರಬಲ ರಾಷ್ಟ್ರಗಳ ಭಾಗವಹಿಸುವಿಕೆ ಯ ಕೊರತೆ.

 

ಪ್ರಸ್ತುತದ ಕಳವಳ:

ಮತದಾನದಿಂದ ದೂರವಿರುವ ಭಾರತದ ನಿರ್ಧಾರವು ಯಾವುದೇ ರಾಷ್ಟ್ರದ ಪರವಾಗಿ ಅಥವಾ ವಿರುದ್ಧವಾಗಿಲ್ಲ, ಆದರೆ ಅದು ತನ್ನದೇ ಆದ ರಾಷ್ಟ್ರೀಯ ಹಿತಾಸಕ್ತಿಯಿಂದ ಕೂಡಿದೆ ಎಂದು ಕೆಲವರು ಹೇಳುತ್ತಾರೆ.

  1. ಆದಾಗ್ಯೂ, ಈ ನಿರ್ಧಾರಗಳನ್ನು ಹೆಚ್ಚಿನ ಭಾರತೀಯ ವ್ಯಾಖ್ಯಾನಕಾರರು ‘ಕೆಟ್ಟ ಪರಿಸ್ಥಿತಿಯನ್ನು ಉತ್ತಮಗೊಳಿಸುವ’ ಅಥವಾ ಕೆಟ್ಟ ಪರಿಸ್ಥಿತಿಯಿಂದ ಲಾಭ ಮಾಡಿಕೊಳ್ಳುವ  ಪ್ರಯತ್ನವೆಂದು ಹೇಳಿದ್ದಾರೆ.
  2. ನಮ್ಮ ಅತಿದೊಡ್ಡ ಶಸ್ತ್ರಾಸ್ತ್ರ ಪೂರೈಕೆದಾರರಾಗಿ, ರಷ್ಯಾ ವಿಶ್ವಾಸಾರ್ಹ ಮಿತ್ರರಾಷ್ಟ್ರವಾಗಿದೆ. 1971 ರಲ್ಲಿ ಬಾಂಗ್ಲಾದೇಶದ ರಚನೆಯನ್ನು ಉಲ್ಲೇಖಿಸದೆ ಕಾಶ್ಮೀರ ವಿಷಯದ ಬಗ್ಗೆ ವಿಶ್ವಸಂಸ್ಥೆಯಲ್ಲಿ ರಷ್ಯಾ ಭಾರತವನ್ನು ಸಮರ್ಥಿಸಿಕೊಂಡಿದೆ ಎಂದು ಅವರು ಹೇಳುತ್ತಾರೆ.
  3. ಇದರ ಹೊರತಾಗಿ, ರಷ್ಯಾ ವಿರುದ್ಧ ಮತ ಚಲಾಯಿಸುವುದರಿಂದ ರಷ್ಯಾ ಚೀನಾಕ್ಕೆ ಹತ್ತಿರವಾಗುವ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ, ಇದರಿಂದ ದೇಶದ ಭದ್ರತೆಗೆ ಸಂಬಂಧಿಸಿದ ಅಪಾಯವು ಹಲವು ಪಟ್ಟು ಹೆಚ್ಚಾಗುತ್ತದೆ.

 

ಭಾರತವು ರಷ್ಯಾದ ಮೇಲೆ ಏಕೆ ಸಂಪೂರ್ಣವಾಗಿ ಅವಲಂಬಿತವಾಗಬಾರದು?

ಮೇಲಿನ ವಾದಗಳು ಮೂರು ದಶಕಗಳ ಹಿಂದೆ ಶೀತಲ ಸಮರದ ಅಂತ್ಯ ಮತ್ತು 20 ವರ್ಷಗಳ ಹಿಂದೆ ವ್ಲಾಡಿಮಿರ್ ಪುಟಿನ್ ಅವರು ಪ್ರವರ್ಧಮಾನಕ್ಕೆ ಬರುವುದಕ್ಕಿಂತ ಮುಂಚಿನವು. ಇನ್ನೂ ಹೆಚ್ಚು ಆತಂಕಕಾರಿಯಾಗಿ, ಮೇಲಿನ ವಾದಗಳು ಭಾರತದ ಸ್ವಂತ ರಾಷ್ಟ್ರೀಯ ಭದ್ರತಾ ಹಿತಾಸಕ್ತಿಗಳ ಕಡೆಗೆ ನಿರ್ಣಾಯಕತೆಯನ್ನು ಬಹಿರಂಗಪಡಿಸುತ್ತವೆ, ಇದು ಕಾಲಾನಂತರದಲ್ಲಿ ನಮಗೆ ಮತ್ತಷ್ಟು ಹಾನಿಯನ್ನುಂಟುಮಾಡುತ್ತದೆ.

 

  1. ಹೌದು, ರಷ್ಯಾ ನಮ್ಮ ಅತಿದೊಡ್ಡ ಶಸ್ತ್ರಾಸ್ತ್ರ ಪೂರೈಕೆದಾರ ಮತ್ತು ನಾವು ಅದರ ವಿರುದ್ಧ ಮತ ಚಲಾಯಿಸಿದರೆ ನಮ್ಮ ಶಸ್ತ್ರಾಸ್ತ್ರ ಸರಬರಾಜುಗಳ ಮೇಲೆ ಪರಿಣಾಮ ಬೀರುತ್ತದೆ ಎಂಬುದು ನಿಜ. ಆದಾಗ್ಯೂ, ರಷ್ಯಾ ಇನ್ನು ಮುಂದೆ ವಿಶ್ವಾಸಾರ್ಹ ಶಸ್ತ್ರಾಸ್ತ್ರ ಪೂರೈಕೆದಾರರಾಗಿಲ್ಲ; ಪುಟಿನ್ ಅಧಿಕಾರಕ್ಕೆ ಬಂದ ನಂತರ ಅದರ ವಿಶ್ವಾಸಾರ್ಹತೆ ಎಂದಿಗೂ ಸಾಬೀತಾಗಿಲ್ಲ.
  2. ರಷ್ಯಾದಿಂದ ಶಸ್ತ್ರಾಸ್ತ್ರ ಪೂರೈಕೆಯು ಆಗಾಗ್ಗೆ ವಿಳಂಬವಾಗುತ್ತದೆ ಮತ್ತು ಬೆಲೆಗಳನ್ನು ಹೆಚ್ಚಿಸಲು ಪುಟಿನ್ ‘ವಿಳಂಬ ಟ್ರಿಕ್’ ಅನ್ನು ಬಳಸಿದ್ದಾರೆ ಮತ್ತು ಕೆಲವೊಮ್ಮೆ ಬೆಲೆಗಳನ್ನು ದ್ವಿಗುಣಗೊಳಿಸಿದ್ದಾರೆ. ಇದಕ್ಕೆ ವ್ಯತಿರಿಕ್ತವಾಗಿ, ರಫೇಲ್ ಜೆಟ್‌ಗಳ ಫ್ರೆಂಚ್ ವಿತರಣೆಗಳು ರಷ್ಯಾಗೆ ತುಲನಾತ್ಮಕವಾಗಿ ಹೋಲಿಸಿದಾಗ ಸಾಕಷ್ಟು ಶೀಘ್ರವಾಗಿವೆ.
  3. ಪುಟಿನ್ ನಮಗೆ ಸಹಾಯ ಮಾಡುವುದು ದೂರದ ಮಾತಾಯಿತು, ಭಾರತದ ವಿರುದ್ಧ ಚೀನಾದ ಅನೇಕ ಆಕ್ರಮಣಕಾರಿ ಕೃತ್ಯಗಳಿಗೆ ಪುಟಿನ್ ಕಣ್ಣು ಮುಚ್ಚಿ ಕುಳಿತಿದ್ದಾರೆ.
  4. 2019 ಮತ್ತು 2020 ರಲ್ಲಿ UNSC ಯಲ್ಲಿ ಚೀನಾ ಕಾಶ್ಮೀರ ವಿಷಯವನ್ನು ಎತ್ತಿದಾಗ, ರಷ್ಯಾ ನಮಗೆ ಸ್ವಲ್ಪ ಕೂಡ ಸಹಾಯ ಮಾಡಲಿಲ್ಲ. ಆ ಸಮಯದಲ್ಲಿ ಅಮೇರಿಕಾ ಮತ್ತು ಯುರೋಪಿಯನ್ ದೇಶಗಳು – ತಮ್ಮದೇ ಆದ ಮಾನವ ಹಕ್ಕುಗಳ ಸಿದ್ಧಾಂತಗಳಿಗೆ ವಿರುದ್ಧವಾಗಿ – ನಮಗೆ ಸಹಾಯ ಮಾಡಿದವು.

 

ವಿಷಯಗಳು: ಸರ್ಕಾರದ ನೀತಿಗಳು ಮತ್ತು ವಿವಿಧ ಕ್ಷೇತ್ರಗಳಲ್ಲಿನ ಅಭಿವೃದ್ಧಿಯ ಅಡಚಣೆಗಳು ಮತ್ತು ಅವುಗಳ ವಿನ್ಯಾಸ ಮತ್ತು ಅನುಷ್ಠಾನದಿಂದ ಉಂಟಾಗುವ ಸಮಸ್ಯೆಗಳು.

ದತ್ತಾಂಶ ಸಂರಕ್ಷಣಾ ಮಸೂದೆ:


(Data protection Bill)

 ಸಂದರ್ಭ:

ಸರ್ಕಾರವು ಒದಗಿಸಿದ ಮಾಹಿತಿಯ ಪ್ರಕಾರ, ‘ದತ್ತಾಂಶ ಸಂರಕ್ಷಣಾ ಮಸೂದೆ‘ಯ ಕರಡಿನಲ್ಲಿ ಸ್ವೀಕರಿಸಿದ ಸಲಹೆಗಳು / ಒಳಹರಿವುಗಳನ್ನು ಅಧ್ಯಯನ ಮಾಡಲಾಗುತ್ತಿದೆ, ಮತ್ತು ಡಿಜಿಟಲ್ ಪರಿಸರ ವ್ಯವಸ್ಥೆಯಲ್ಲಿನ ಯಾವುದೇ ಶಾಸನವು ಬೆಳವಣಿಗೆಯನ್ನು ಹೆಚ್ಚಿಸಲು ಅನುವು ಮಾಡಿಕೊಡುತ್ತದೆ ಎಂದು ಸರ್ಕಾರವು ಎಚ್ಚರಿಕೆಯಿಂದ ಖಚಿತಪಡಿಸುತ್ತದೆ.

ಡಿಸೆಂಬರ್ 16, 2021 ರಂದು, ‘ವೈಯಕ್ತಿಕ ದತ್ತಾಂಶ ಸಂರಕ್ಷಣಾ ಮಸೂದೆ’ (Personal Data Protection (PDP) Bill) ಯ ಕುರಿತು ರಚಿಸಲಾದ ಜಂಟಿ ಸಂಸದೀಯ ಸಮಿತಿಯ (Joint Parliamentary Committee – JPC), ವಿವಿಧ ನಿಬಂಧನೆಗಳ ಕುರಿತು ತನ್ನ ಅಭಿಪ್ರಾಯಗಳನ್ನು ನೀಡುತ್ತ, ಸಂಸತ್ತಿನ ಉಭಯ ಸದನಗಳಲ್ಲಿ ತನ್ನ ವರದಿಯನ್ನು ಮಂಡಿಸಿತು.

ಹಿನ್ನೆಲೆ:

11ನೇ ಡಿಸೆಂಬರ್ 2019 ರಂದು ‘ಖಾಸಗಿ ಡೇಟಾ ಸಂರಕ್ಷಣಾ ಮಸೂದೆ’ 2019 ಕುರಿತು ಬಿಜೆಪಿ ಸಂಸದ ಪಿ.ಪಿ. ಚೌಧರಿ ನೇತೃತ್ವದಲ್ಲಿ ರಚನೆಯಾದ ಜಂಟಿ ಸಂಸದೀಯ ಸಮಿತಿಯು ಸುಮಾರು ಎರಡು ವರ್ಷಗಳ ನಂತರ, ಅಂದರೆ ಡಿಸೆಂಬರ್ 16 ರಂದು, ಸಂಸತ್ತಿನ ಉಭಯ ಸದನಗಳಲ್ಲಿ ಮುಂಬರುವ ಮಸೂದೆಯ ಅಂತಿಮ ವರದಿಯನ್ನು ಮಂಡಿಸಿತು.

 

‘ಜಂಟಿ ಸಂಸದೀಯ ಸಮಿತಿ’ಯ ಪ್ರಮುಖ ಶಿಫಾರಸುಗಳು:

  1. ಅಸ್ತಿತ್ವದಲ್ಲಿರುವ ‘ಖಾಸಗಿ ಡೇಟಾ ಸಂರಕ್ಷಣಾ ಮಸೂದೆ’ ಯ ಶೀರ್ಷಿಕೆಯಿಂದ ‘ವೈಯಕ್ತಿಕ’ (Personal) ಎಂಬ ಪದವನ್ನು ಕೈಬಿಡಬೇಕು.ಗೌಪ್ಯತೆಯನ್ನು ಉತ್ತಮವಾಗಿ ಖಾತ್ರಿಪಡಿಸುವ ಸಲುವಾಗಿ, ಈ ಮಸೂದೆಯಲ್ಲಿ ‘ಖಾಸಗಿ-ಅಲ್ಲದ ಡೇಟಾ’ ನಂತಹ ಅನಾಮಧೇಯ ‘ಖಾಸಗಿ ಡೇಟಾ’ ಗೆ ಸಂಬಂಧಿಸಿದ ನಿಬಂಧನೆಗಳನ್ನು ಮಾಡಲಾಗಿದೆ ಎಂದು ತೋರಿಸುವುದು ಇದರ ಉದ್ದೇಶವಾಗಿದೆ.
  2. ಭಾರತದ ಹೊರಗೆ ವೈಯಕ್ತಿಕ ಡೇಟಾ ವರ್ಗಾವಣೆಯನ್ನು ನಿಷೇಧಿಸುವ ವಿಭಾಗಕ್ಕೆ ತಿದ್ದುಪಡಿ ಮಾಡಬೇಕು ಮತ್ತು “ಸೂಕ್ಷ್ಮ ವೈಯಕ್ತಿಕ ಡೇಟಾವನ್ನು ಕೇಂದ್ರ ಸರ್ಕಾರದ ಅನುಮೋದನೆಯಿಲ್ಲದೆ ಯಾವುದೇ ವಿದೇಶಿ ಸರ್ಕಾರ ಅಥವಾ ಏಜೆನ್ಸಿಯೊಂದಿಗೆ ಹಂಚಿಕೊಳ್ಳಬಾರದು.
  3. ಯಾವುದೇ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ತನ್ನ ಮಾತೃಸಂಸ್ಥೆ (ಅದರ ಸೇವೆಗಳಿಗೆ ತಂತ್ರಜ್ಞಾನವನ್ನು ನಿಯಂತ್ರಿಸುವ) ದೇಶದಲ್ಲಿ ತನ್ನ ಕಚೇರಿಯನ್ನು ಸ್ಥಾಪಿಸದ ಹೊರತು ಭಾರತದಲ್ಲಿ ಕಾರ್ಯನಿರ್ವಹಿಸಲು ಅನುಮತಿಸಬಾರದು.
  4. ‘ಜಂಟಿ ಸಂಸದೀಯ ಸಮಿತಿ’ಯು ಮಾಧ್ಯಮವನ್ನು ನಿಯಂತ್ರಿಸಲು ಪ್ರತ್ಯೇಕ ನಿಯಂತ್ರಣ ಸಂಸ್ಥೆಯನ್ನು ಸ್ಥಾಪಿಸಲು ಪ್ರಸ್ತಾಪಿಸಿದೆ.
  5. ವ್ಯಕ್ತಿಯಿಂದ ‘ಗುರುತಿಸಲಾಗದ’ (de-identified) ಡೇಟಾವನ್ನು ಮತ್ತೊಮ್ಮೆ ‘ಗುರುತಿಸಿದಾಗ’ (identified), ಮೂರು ವರ್ಷಗಳವರೆಗೆ ವಿಸ್ತರಿಸಬಹುದಾದ ಸೆರೆವಾಸ, ಅಥವಾ ಎರಡು ಲಕ್ಷ ರೂಪಾಯಿಗಳವರೆಗೆ ವಿಧಿಸಬುದಾದ ದಂಡ ಅಥವಾ ಎರಡನ್ನೂ ವಿಧಿಸಲಾಗುತ್ತದೆ.
  6. ಮಸೂದೆಯ ಹೆಸರಿನಿಂದ ‘ಖಾಸಗಿ’ ಪದವನ್ನು ಕೈಬಿಡಬೇಕು.
  7. ಕೇಂದ್ರ ಸರ್ಕಾರವು ಯಾವುದೇ ಸರ್ಕಾರಿ ಸಂಸ್ಥೆಗೆ ವಿಶೇಷ ಸಂದರ್ಭಗಳಲ್ಲಿ ಮಾತ್ರ ಕಾನೂನಿನಿಂದ ವಿನಾಯಿತಿ ನೀಡಬಹುದು.

 

ಈ ಶಿಫಾರಸುಗಳು ಮತ್ತು EU ನಿಯಮಗಳ ನಡುವೆ ಹೋಲಿಕೆ:

‘ಖಾಸಗಿ ಡೇಟಾ ಸಂರಕ್ಷಣಾ ಮಸೂದೆ’ ಕುರಿತು ‘ಜಂಟಿ ಸಂಸದೀಯ ಸಮಿತಿ’ಯ ಶಿಫಾರಸುಗಳು ಕೆಲವು ಅಂಶಗಳಲ್ಲಿ ‘ಯುರೋಪಿಯನ್ ಒಕ್ಕೂಟದ ಸಾಮಾನ್ಯ ಡೇಟಾ ಸಂರಕ್ಷಣಾ ನಿಯಂತ್ರಣ (European Union’s General Data Protection Regulation – GDPR)’ ದಂತಹ ಜಾಗತಿಕ ಮಾನದಂಡಗಳಿಗೆ ಹೋಲುತ್ತವೆ.

 

ಹೋಲಿಕೆಗಳು:

  1. ಸಮ್ಮತಿ: ಬಳಕೆದಾರರು ತಮ್ಮ ಡೇಟಾವನ್ನು ಪ್ರಕ್ರಿಯೆಗೊಳಿಸುವ ವಿಧಾನದ ಬಗ್ಗೆ ಸಂಪೂರ್ಣವಾಗಿ ತಿಳಿಸಬೇಕು ಇದರಿಂದ ಅವರು ‘ಸಮ್ಮತಿ’ ಅಥವಾ ಸಂಬಂಧಿತ ವಿಷಯಗಳಿಂದ ಹೊರಗುಳಿಯಬೇಕೆ ಎಂಬುದರ ಕುರಿತು ನಿರ್ಧಾರ ತೆಗೆದುಕೊಳ್ಳಬಹುದು.
  2. ಸುರಕ್ಷತೆಯ ಉಲ್ಲಂಘನೆ: ಡೇಟಾ ಸೋರಿಕೆಯಾದ 72 ಗಂಟೆಗಳ ಒಳಗೆ ‘ಸುರಕ್ಷತೆಯ ಉಲ್ಲಂಘನೆ’ಯ ಕುರಿತು ಅಧಿಕಾರಿಗಳಿಗೆ ವರದಿ ಮಾಡಬೇಕು.
  3. ಪರಿವರ್ತನೆಯ ಅವಧಿ (Transition period): ‘ಸಾಮಾನ್ಯ ದತ್ತಾಂಶ ಸಂರಕ್ಷಣಾ ನಿಯಂತ್ರಣ’ (GDPR) ನಿಬಂಧನೆಗಳನ್ನು ಕಾರ್ಯಗತಗೊಳಿಸಲು ಎರಡು ವರ್ಷಗಳ ‘ಪರಿವರ್ತನೆ ಅವಧಿ’ಯನ್ನು ನಿಗದಿಪಡಿಸುವುದು.
  4. ಡೇಟಾ ವಿಶ್ವಾಸಾರ್ಹತೆ (Data fiduciary): EU ಕಾನೂನಿನ ಅಡಿಯಲ್ಲಿ ಡೇಟಾ ಸಂಸ್ಕರಣೆಯ ಉದ್ದೇಶ ಮತ್ತು ವಿಧಾನವನ್ನು ನಿರ್ಧರಿಸಲು, ಯಾವುದೇ ನೈಸರ್ಗಿಕ ಅಥವಾ ಕಾನೂನುಬದ್ಧ ವ್ಯಕ್ತಿ, ಸಾರ್ವಜನಿಕ ಪ್ರಾಧಿಕಾರ, ಏಜೆನ್ಸಿ ಅಥವಾ ದೇಹವು ಡೇಟಾ ಟ್ರಸ್ಟಿಯಾಗಿರಬಹುದು. ಭಾರತದಲ್ಲಿ, ‘ಸರಕಾರೇತರ ಸಂಸ್ಥೆಗಳನ್ನು’ (NGOs) ಸಹ ‘ಡಾಟಾ ಟ್ರಸ್ಟಿಗಳು’ ಎಂದು ಸೇರಿಸಲಾಗಿದೆ.

 

ಡೇಟಾ ಸಂರಕ್ಷಣಾ ಪ್ರಾಧಿಕಾರ:

ಜಂಟಿ ಸಂಸದೀಯ ಸಮಿತಿಯು ಡಾಟಾ ಸಂರಕ್ಷಣಾ ಪ್ರಾಧಿಕಾರ (Data Protection Authority – DPA) ದ ರಚನೆಗೆ ಶಿಫಾರಸು ಮಾಡಿದೆ:

  1. ಡೇಟಾ ಪ್ರೊಟೆಕ್ಷನ್ ಅಥಾರಿಟಿ (DPA) ಯು ಗೌಪ್ಯತೆ ಮತ್ತು ವೈಯಕ್ತಿಕ ಡೇಟಾ ಮತ್ತು ವೈಯಕ್ತಿಕವಲ್ಲದ ಡೇಟಾಗೆ ಸಂಬಂಧಿಸಿದ ವಿಷಯಗಳನ್ನು ಪರಿಹರಿಸುತ್ತದೆ.
  2. ಸಂರಚನೆ: ಸಂಪುಟ ಕಾರ್ಯದರ್ಶಿ ನೇತೃತ್ವದ ಆಯ್ಕೆ ಸಮಿತಿಯ ಶಿಫಾರಸಿನ ಆಧಾರದ ಮೇಲೆ ಕೇಂದ್ರ ಸರ್ಕಾರವು ‘ದತ್ತಾಂಶ ಸಂರಕ್ಷಣಾ ಪ್ರಾಧಿಕಾರ’ದ ಅಧ್ಯಕ್ಷ ಮತ್ತು ಸದಸ್ಯರನ್ನು ನೇಮಿಸುತ್ತದೆ.
  3. ಸಮಿತಿಯ ಇತರ ಸದಸ್ಯರು “ಭಾರತದ ಅಟಾರ್ನಿ ಜನರಲ್, ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯದ ಕಾರ್ಯದರ್ಶಿ ಮತ್ತು ಕಾನೂನು ಸಚಿವಾಲಯದ ಕಾರ್ಯದರ್ಶಿ” ಒಳಗೊಂಡಿರುತ್ತಾರೆ.
  4. ನಾಮನಿರ್ದೇಶಿತ ಸದಸ್ಯರು: ಸ್ವತಂತ್ರ ತಜ್ಞರು ಮತ್ತು ಐಐಟಿ ಮತ್ತು ಐಐಎಂಗಳಿಂದ ತಲಾ ಒಬ್ಬ ನಿರ್ದೇಶಕರನ್ನು ಕೇಂದ್ರವು ನಾಮನಿರ್ದೇಶನ ಮಾಡುತ್ತದೆ.

 

ಮಸೂದೆಯ ಇತರ ಪ್ರಮುಖ ಅಂಶಗಳು:

  1. ವೈಯಕ್ತಿಕ ಡೇಟಾದ ಹರಿವು ಮತ್ತು ಬಳಕೆಯನ್ನು ನಿರ್ದಿಷ್ಟಪಡಿಸಲು ಮತ್ತು ವೈಯಕ್ತಿಕ ಡೇಟಾವನ್ನು ಪ್ರಕ್ರಿಯೆಗೊಳಿಸಿದ ವ್ಯಕ್ತಿಗಳ ಹಕ್ಕುಗಳನ್ನು ರಕ್ಷಿಸಲು ಮಸೂದೆಯು ಪ್ರಸ್ತಾಪಿಸುತ್ತದೆ.ಈ ಮಸೂದೆಯಲ್ಲಿ, ವೈಯಕ್ತಿಕ ಡೇಟಾದ ಗಡಿಯಾಚೆಗಿನ ವರ್ಗಾವಣೆಯನ್ನು ತಡೆಯಲು, ಡೇಟಾ ಸಂಸ್ಕರಣಾ ಘಟಕಗಳ ಹೊಣೆಗಾರಿಕೆ ಮತ್ತು ಅನಧಿಕೃತ ಮತ್ತು ಹಾನಿಕಾರಕ ಸಂಸ್ಕರಣೆಯನ್ನು ತಡೆಯಲು ಚೌಕಟ್ಟನ್ನು ರಚಿಸಲಾಗಿದೆ.
  2. ಮಸೂದೆಯು ತನ್ನ ತನಿಖಾ ಸಂಸ್ಥೆಗಳಿಗೆ “ಕಾನೂನಿನ ನಿಬಂಧನೆಗಳಿಂದ ವಿನಾಯಿತಿ” ನೀಡಲು ಸರ್ಕಾರಕ್ಕೆ ಅಧಿಕಾರ ನೀಡಲು ಪ್ರಯತ್ನಿಸುತ್ತದೆ. ಈ ನಿಬಂಧನೆಯನ್ನು ವಿರೋಧ ಪಕ್ಷದ ಸಂಸದರು ತೀವ್ರವಾಗಿ ವಿರೋಧಿಸಿದ್ದಾರೆ ಮತ್ತು ಅವರ ಭಿನ್ನಾಭಿಪ್ರಾಯವನ್ನು ದಾಖಲಿಸಿದ್ದರು.

 


ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ಸಂಗತಿಗಳು:


 ಜಪೋರಿಝಿಯಾ ಪರಮಾಣು ವಿದ್ಯುತ್ ಸ್ಥಾವರ:

(Zaporizhzhia Nuclear Power Plant)

  1. Zaporizhzhya ಪರಮಾಣು ವಿದ್ಯುತ್ ಸ್ಥಾವರವು ಉಕ್ರೇನ್‌ನಲ್ಲಿದೆ.
  2. ಇದು ಯುರೋಪಿನ ಅತಿದೊಡ್ಡ ಪರಮಾಣು ವಿದ್ಯುತ್ ಸ್ಥಾವರವಾಗಿದೆ.
  3. ಇದು ವಿಶ್ವದ 10 ದೊಡ್ಡ ಪರಮಾಣು ವಿದ್ಯುತ್ ಸ್ಥಾವರಗಳಲ್ಲಿ ಒಂದಾಗಿದೆ.
  4. ಇದನ್ನು ಸೋವಿಯತ್ ಒಕ್ಕೂಟ ನಿರ್ಮಿಸಿದೆ.
  5. ಇದು ನೀಪರ್ ನದಿಯ ಮೇಲೆ ಕಾಖೋವ್ಕಾ ಜಲಾಶಯದ ದಕ್ಷಿಣ ದಂಡೆಯಲ್ಲಿದೆ.

ಸುದ್ದಿಯಲ್ಲಿರಲು ಕಾರಣ:

ಇತ್ತೀಚೆಗೆ, ರಷ್ಯಾ ಈ ಪರಮಾಣು ಸ್ಥಾವರವನ್ನು ವಶಪಡಿಸಿಕೊಂಡಿದೆ.

current affairs

 


  • Join our Official Telegram Channel HERE for Motivation and Fast Updates
  • Subscribe to our YouTube Channel HERE to watch Motivational and New analysis videos

[ad_2]

Leave a Comment