[Mission 2022] ದೈನಂದಿನ ಪ್ರಚಲಿತ ಘಟನೆಗಳು ದಿನಾಂಕ – 23ನೇ ಫೆಬ್ರುವರಿ 2022 – INSIGHTSIAS

[ad_1]

 

 

ಪರಿವಿಡಿ:

 ಸಾಮಾನ್ಯ ಅಧ್ಯಯನ ಪತ್ರಿಕೆ  1 :

1. ಕೃಷ್ಣಾ ನದಿ ನೀರು ವಿವಾದ.

2. ಯುಜಿಸಿಯ ‘ಅಕಾಡೆಮಿಕ್ ಬ್ಯಾಂಕ್ ಆಫ್ ಕ್ರೆಡಿಟ್ಸ್’ ಯೋಜನೆ.

3. ಶಾಶ್ವತ ಸಿಂಧೂ ಆಯೋಗ.

 

ಸಾಮಾನ್ಯ ಅಧ್ಯಯನ ಪತ್ರಿಕೆ 3:

1. ಡಾರ್ಕ್ ಎನರ್ಜಿ ಎಂದರೇನು?

2. ನಾಸಾದ ಲೂಸಿ ಮಿಷನ್.

3. CRZ ಮಾನದಂಡಗಳು.

 

ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ಸಂಗತಿಗಳು:

1. ದೋಡಾ ಬ್ರಾಂಡ್ ಉತ್ಪನ್ನ.

2. ಮಿನ್ಸ್ಕ್ ಒಪ್ಪಂದಗಳು.

 


ಸಾಮಾನ್ಯ ಅಧ್ಯಯನ ಪತ್ರಿಕೆ : 2


 

ವಿಷಯಗಳು: ಸರ್ಕಾರದ ನೀತಿಗಳು ಮತ್ತು ವಿವಿಧ ಕ್ಷೇತ್ರಗಳಲ್ಲಿನ ಅಭಿವೃದ್ಧಿಯ ಅಡಚಣೆಗಳು ಮತ್ತು ಅವುಗಳ ವಿನ್ಯಾಸ ಮತ್ತು ಅನುಷ್ಠಾನದಿಂದ ಉಂಟಾಗುವ ಸಮಸ್ಯೆಗಳು.

ಕೃಷ್ಣಾ ನದಿ ನೀರು ವಿವಾದ:


(Krishna River water dispute)

 ಸಂದರ್ಭ:

ಕರ್ನಾಟಕ ಸರ್ಕಾರವು ಮಹಾರಾಷ್ಟ್ರ, ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಹರಿಯುವ ಕೃಷ್ಣಾ ನದಿ ನೀರಿನ ಹಂಚಿಕೆ ವಿವಾದಕ್ಕೆ ಸಂಬಂಧಿಸಿದ ಅರ್ಜಿಯ ವಿಚಾರಣೆಗೆ ಪೀಠವನ್ನು ರಚಿಸುವಂತೆ ಕೋರಿ ಇತ್ತೀಚೆಗೆ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದೆ.

  1. ಏತನ್ಮಧ್ಯೆ, ‘ಮಧ್ಯಸ್ಥಿಕೆ’ ಮೂಲಕ ವಿವಾದವನ್ನು ಇತ್ಯರ್ಥಪಡಿಸುವ ಸಾಧ್ಯತೆಯ ಬಗ್ಗೆ ಸುಪ್ರೀಂ ಕೋರ್ಟ್ ಕಕ್ಷಿದಾರರನ್ನು ಕೇಳಿದೆ.

 

ಏನಿದು ವಿವಾದ?

 ‘ಕೃಷ್ಣಾ ನದಿ ನೀರು ವಿವಾದ’ (Krishna River water dispute) ಪ್ರಕರಣದ ವಿಚಾರಣೆಗೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಎಎಸ್ ಬೋಪಣ್ಣ ಅವರ ವಿಭಾಗೀಯ ಪೀಠವನ್ನು ರಚಿಸಿತ್ತು.

  1. ಈ ಪ್ರಕರಣವು ಜನವರಿ 10 ರಂದು ವಿಚಾರಣೆಗೆ ಬರುತ್ತಿದ್ದಂತೆ ನ್ಯಾಯಮೂರ್ತಿ ಚಂದ್ರಚೂಡ್‌ ಮತ್ತು ಎ.ಎಸ್‌.ಬೋಪಣ್ಣ ಅವರು, ‘ನಾವು ಮೂಲತಃ ಕ್ರಮವಾಗಿ ಮಹಾರಾಷ್ಟ್ರ ಮತ್ತು ಕರ್ನಾಟಕದವರು’ ಎಂಬುದನ್ನು ಉಲ್ಲೇಖಿಸಿ ವಿಚಾರಣೆಯಿಂದ ಹಿಂದೆಸರಿದರು. ಇದೇ ಕಾರಣದಿಂದಾಗಿ ಈ ಹಿಂದೆ ನ್ಯಾಯಮೂರ್ತಿಗಳಾದ ಎ.ಎಂ.ಖಾನ್‌ವಿಲ್ಕರ್‌ ಮತ್ತು ಮೋಹನ್‌ ಎಂ.ಶಾಂತನಗೌಡರ್‌ ಅವರು ವಿಚಾರಣೆಯಿಂದ ಹಿಂದೆ ಸರಿದಿದ್ದರು ಎಂಬುದನ್ನು ನೆನಪಿಸಿದರು.
  2. ಕರ್ನಾಟಕ, ಆಂಧ್ರಪ್ರದೇಶ, ಮಹಾರಾಷ್ಟ್ರ ಮತ್ತು ತೆಲಂಗಾಣ ನಡುವೆ ಕೃಷ್ಣಾ ನದಿ ಜಲವಿವಾದವಿದೆ.

 

ಪ್ರಕರಣದಿಂದ ಹಿಂದೆ ಸರಿದ ನ್ಯಾಯಾಧೀಶರು, ಜಲವಿವಾದದ ತೀರ್ಪು ನೀಡಲು ರಚಿಸಲಾದ ಪೀಠದ ಭಾಗವಾಗಿರುವುದರಿಂದ, ತಮ್ಮ ವಿರುದ್ಧ ಹರಿದುಬರುತ್ತಿರುವ ಇಮೇಲ್‌ಗಳು ಮತ್ತು ಪತ್ರಗಳ ಭಾಷೆ ಮತ್ತು ಸ್ವರೂಪದಿಂದಾಗಿ ಅಸಮಾಧಾನಗೊಂಡಿದ್ದರು.

ನ್ಯಾಯಾಲಯದಲ್ಲಿ ವಿವಾದ:

ನವೆಂಬರ್ 16, 2011 ರಂದು ಸುಪ್ರೀಂ ಕೋರ್ಟ್ ನೀಡಿದ ಆದೇಶದಿಂದ ವಿನಾಯಿತಿ ನೀಡುವಂತೆ ಕರ್ನಾಟಕ ಕೋರಿತ್ತು. ಈ ಆದೇಶದಲ್ಲಿ, ನ್ಯಾಯಾಲಯವು ‘ಕೃಷ್ಣ ಜಲ ವಿವಾದಗಳ ನ್ಯಾಯಮಂಡಳಿ II’ ( Krishna Water Disputes Tribunal II (KWDT) ಯು ಡಿಸೆಂಬರ್ 2010 ರಲ್ಲಿ, ಕರ್ನಾಟಕ, ಹಿಂದಿನ ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರ ರಾಜ್ಯಗಳಿಗೆ ಕೃಷ್ಣಾ ನದಿಯಿಂದ ನೀರು ಹಂಚಿಕೆ ಮಾಡುವ ಕುರಿತು ಹೊರಡಿಸಿದ ಅಂತಿಮ ಆದೇಶವನ್ನು ಅಂತರ-ರಾಜ್ಯ ಜಲ ವಿವಾದಗಳ ಕಾಯಿದೆ., 1956 ರ ಸೆಕ್ಷನ್ 6(1) ಅಡಿಯಲ್ಲಿ, ಕೇಂದ್ರ ಸರ್ಕಾರವು ಅಧಿಕೃತ ಗೆಜೆಟ್‌ನಲ್ಲಿ ಪ್ರಕಟಿಸದಂತೆ ನಿರ್ಬಂಧಿಸಲಾಗಿದೆ.

  1. ನ್ಯಾಯಾಧಿಕರಣದ ಆದೇಶವನ್ನು ಪ್ರಕಟಿಸುವುದು ಅದರ ಅನುಷ್ಠಾನಕ್ಕೆ ಅತ್ಯಗತ್ಯವಾದ ಒಂದು ಪೂರ್ವ ಷರತ್ತಾಗಿದೆ.
  2. KWDT ನವೆಂಬರ್ 29, 2013 ರಂದು ಕರ್ನಾಟಕ, ಮಹಾರಾಷ್ಟ್ರ ಮತ್ತು ಹಿಂದಿನ ಆಂಧ್ರಪ್ರದೇಶ ರಾಜ್ಯಕ್ಕೆ ಈಗಾಗಲೇ ಹಂಚಿಕೆ ಮಾಡಿದ 2130 ಟಿಎಂಸಿ ಅಡಿ ನೀರಿನ ಹಂಚಿಕೆಯನ್ನು ಸಂರಕ್ಷಿಸುವುದರೊಂದಿಗೆ ತನ್ನ ಅಂತಿಮ ಆದೇಶ ಮತ್ತು ಹೆಚ್ಚುವರಿ ನೀರನ್ನು ಹಂಚಿಕೆ ಮಾಡುವ ಕುರಿತ ತನ್ನ ವರದಿಯನ್ನು ಪರಿಷ್ಕರಿಸಿತು.

 

ಸಂಬಂಧಿತ ವಿವಾದಗಳು / ಕೃಷ್ಣ ಜಲ ವಿವಾದಗಳ ನ್ಯಾಯಮಂಡಳಿಯ ತೀರ್ಪು:

ಕೃಷ್ಣಾ ನದಿ ನೀರಿನ ವಿವಾದವು ಹಿಂದಿನ ರಾಜಮನೆತನದ ಹೈದರಾಬಾದ್ ಮತ್ತು ಮೈಸೂರು ರಾಜ್ಯಗಳ ನಡುವೆ ಪ್ರಾರಂಭವಾಯಿತು ಮತ್ತು ನಂತರದ ರಾಜ್ಯಗಳಾದ ಮಹಾರಾಷ್ಟ್ರ, ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣಗಳ ನಡುವೆ ಮುಂದುವರಿಯುತ್ತಿದೆ.

ಕೃಷ್ಣಾ ಜಲ ವಿವಾದಗಳ ನ್ಯಾಯಾಧಿಕರಣ (Krishna Water Disputes Tribunal- KWDT) ವನ್ನು 1969 ರಲ್ಲಿ ಅಂತರ-ರಾಜ್ಯ ನದಿ ನೀರಿನ ವಿವಾದಗಳ ಕಾಯಿದೆ, 1956 ರ ಅಡಿಯಲ್ಲಿ ಸ್ಥಾಪಿಸಲಾಯಿತು, ಅದು ತನ್ನ ವರದಿಯನ್ನು 1973 ರಲ್ಲಿ ಸಲ್ಲಿಸಿತು.

1976 ರಲ್ಲಿ ಪ್ರಕಟವಾದ ಕೃಷ್ಣಾ ನದಿ ನೀರಿನ ವಿವಾದಗಳ ನ್ಯಾಯಮಂಡಳಿಯ ವರದಿಯು 2060 TMC (ಸಾವಿರ ಮಿಲಿಯನ್ ಘನ ಅಡಿ) ಕೃಷ್ಣಾ ನದಿ ನೀರನ್ನು 75 ಪ್ರತಿಶತ ಅವಲಂಬನೆಯ ಆಧಾರದ ಮೇಲೆ ಮೂರು ಭಾಗಗಳಾಗಿ ವಿಂಗಡಿಸಿದೆ:

  1. ಮಹಾರಾಷ್ಟ್ರಕ್ಕೆ 560 ಟಿ.ಎಂ.ಸಿ
  2. ಕರ್ನಾಟಕಕ್ಕೆ 700 ಟಿ.ಎಂ.ಸಿ
  3. ಆಂಧ್ರಪ್ರದೇಶಕ್ಕೆ 800 ಟಿ.ಎಂ.ಸಿ

 

ಪರಿಷ್ಕೃತ ಆದೇಶ:

ರಾಜ್ಯಗಳಲ್ಲಿ ಅಸಮಾಧಾನ ವ್ಯಕ್ತವಾದ ನಂತರ 2004ರಲ್ಲಿ ಎರಡನೇ ಕೃಷ್ಣಾ ಜಲ ವಿವಾದ ನ್ಯಾಯಾಧಿಕರಣದ (KWDT) ರಚನೆಯಾಯಿತು.

ಎರಡನೇ KWDT ತನ್ನ ಅಂತಿಮ ವರದಿಯನ್ನು 2010 ರಲ್ಲಿ ಸಲ್ಲಿಸಿತು. ಈ ವರದಿಯಲ್ಲಿ ಕೃಷ್ಣಾ ನದಿಯ ಹೆಚ್ಚುವರಿ ನೀರನ್ನು ಮಹಾರಾಷ್ಟ್ರಕ್ಕೆ 81 ಟಿಎಂಸಿ, ಕರ್ನಾಟಕಕ್ಕೆ 177 ಟಿಎಂಸಿ ಮತ್ತು ಆಂಧ್ರಪ್ರದೇಶಕ್ಕೆ 190 ಟಿಎಂಸಿ ಶೇ.65 ರ ಅವಲಂಬನೆ ಆಧಾರದ ಮೇಲೆ ಹಂಚಿಕೆ ಮಾಡಲಾಗಿದೆ.

ಅಂತಿಮ ಆದೇಶವನ್ನು ಇನ್ನು ಏಕೆ ಪ್ರಕಟಿಸಲಾಗಿಲ್ಲ?

2014ರಲ್ಲಿ ತೆಲಂಗಾಣ ಪ್ರತ್ಯೇಕ ರಾಜ್ಯವಾದ ನಂತರ ಆಂಧ್ರಪ್ರದೇಶ ಕೆಡಬ್ಲ್ಯುಡಿಟಿಯಲ್ಲಿ ತೆಲಂಗಾಣವನ್ನು ಪ್ರತ್ಯೇಕ ಪಕ್ಷವಾಗಿ ಸೇರಿಸಿಕೊಳ್ಳಬೇಕು ಮತ್ತು ಕೃಷ್ಣಾ ನದಿ ನೀರನ್ನು ಮೂರು ರಾಜ್ಯಗಳಿಗೆ ಬದಲಾಗಿ ನಾಲ್ಕು ರಾಜ್ಯಗಳಿಗೆ ಹಂಚಿಕೆ ಮಾಡಬೇಕೆಂದು ಒತ್ತಾಯಿಸುತ್ತಿದೆ.

 

ವಿಷಯಗಳು: ಆರೋಗ್ಯ, ಶಿಕ್ಷಣ, ಸಾಮಾಜಿಕ ವಲಯ / ಸೇವೆಗಳ ಅಭಿವೃದ್ಧಿ ಮತ್ತು ನಿರ್ವಹಣೆಗೆ ಸಂಬಂಧಿಸಿದ ಮಾನವ ಸಂಪನ್ಮೂಲ ಸಂಬಂಧಿತ ವಿಷಯಗಳು.

ಅಕಾಡೆಮಿಕ್ ಬ್ಯಾಂಕ್ ಆಫ್ ಕ್ರೆಡಿಟ್:


(ಶೈಕ್ಷಣಿಕ ಅಂಕಗಳ ‘ಶೈಕ್ಷಣಿಕ ಬ್ಯಾಂಕ್’)

 (Academic Bank of Credit)

  ಸಂದರ್ಭ:

ಅಕಾಡೆಮಿಕ್ ಬ್ಯಾಂಕ್ ಆಫ್ ಕ್ರೆಡಿಟ್ (Academic Bank of Credit – ABC) ಈ ಶೈಕ್ಷಣಿಕ ವರ್ಷದಿಂದ ದೇಶದಲ್ಲಿ ಜಾರಿಗೆ ಬರುವ ಸಾಧ್ಯತೆಯಿದೆ. ಆದಾಗ್ಯೂ, ಈ ಯೋಜನೆಯು ಅನೇಕ ಅನುಕೂಲಗಳು ಮತ್ತು ಅನನುಕೂಲಗಳನ್ನು ಹೊಂದಿದೆ ಮತ್ತು ಈ    ಯೋಜನೆಯನ್ನು ಕಾರ್ಯಗತಗೊಳಿಸುವ ಮೊದಲು ಇನ್ನೂ ಅನೇಕ ಸಮಸ್ಯೆಗಳನ್ನು ಪರಿಹರಿಸಬೇಕಾಗಿದೆ.

 

ಯೋಜನೆಗೆ ಸಂಬಂಧಿಸಿದ ಕಾಳಜಿಗಳು ಮತ್ತು ಸವಾಲುಗಳು:

  1. ಉತ್ತಮವಾಗಿ ಸಂಘಟಿತ ಮತ್ತು ವ್ಯವಸ್ಥಿತ ಕಲಿಕೆಯು ‘ಅಕಾಡೆಮಿಕ್ ಕ್ರೆಡಿಟ್ ಬ್ಯಾಂಕ್’ (ABC) ನಿಂದ ಪ್ರಭಾವಿತವಾಗಿರುತ್ತದೆ. ವಿವಿಧ ವಿಶ್ವವಿದ್ಯಾನಿಲಯಗಳಿಂದ ಕಾಲೇಜುಗಳನ್ನು ಬದಲಾಯಿಸಲು ವಿದ್ಯಾರ್ಥಿಗಳಿಗೆ ಕಷ್ಟವಾಗಬಹುದು.
  2. ವಿದ್ಯಾರ್ಥಿ ವ್ಯಾಸಂಗ ಮಾಡುತ್ತಿರುವ ವಿಶ್ವವಿದ್ಯಾಲಯ ಅಥವಾ ಕಾಲೇಜಿನ ಹೆಸರು ಮತ್ತು ಶಿಕ್ಷಣದ ಗುಣಮಟ್ಟದ ವಿಷಯದಲ್ಲಿ, ಅವನು ಕಾಲೇಜು ಅಥವಾ ವಿಶ್ವವಿದ್ಯಾನಿಲಯವನ್ನು ಬದಲಾಯಿಸಿದಾಗ ಅದು ವ್ಯತ್ಯಾಸವನ್ನು ಉಂಟುಮಾಡುತ್ತದೆ.
  3. ದೂರಸ್ಥ ಸಂಸ್ಥೆಗಳ ಮೇಲೆ ಪರಿಣಾಮ: ‘ನ್ಯಾಷನಲ್ ಅಸೆಸ್‌ಮೆಂಟ್ ಮತ್ತು ಅಕ್ರೆಡಿಟೇಶನ್ ಕೌನ್ಸಿಲ್’ (NAAC) ಪಟ್ಟಿ ಮಾಡಿರುವ ಸಂಸ್ಥೆಗಳು ಮಾತ್ರ ‘ಅಕಾಡೆಮಿಕ್ ಬ್ಯಾಂಕ್ ಆಫ್ ಕ್ರೆಡಿಟ್’ ಗೆ ಸೇರಬಹುದು.ಈ ನಿಬಂಧನೆಯು ಈಗಾಗಲೇ ಅಂಚಿನಲ್ಲಿರುವ ದೂರಸ್ಥ ಸಂಸ್ಥೆಗಳನ್ನು ಮತ್ತಷ್ಟು ಕಡೆಗಣಿಸಬಹುದು.
  4. ‘ಅಕಾಡೆಮಿಕ್ ಕ್ರೆಡಿಟ್ ಬ್ಯಾಂಕ್’ ಅನ್ನು ಜಾರಿಗೆ ತರಲು ತಮ್ಮ ನೀತಿಗಳನ್ನು ಬದಲಾಯಿಸುವ ಅಗತ್ಯತೆಯ ಮೇಲೆ ವಿವಿಧ ರಾಜಕೀಯ ಪಕ್ಷಗಳು ಆಡಳಿತ ನಡೆಸುವ ವಿವಿಧ ರಾಜ್ಯಗಳ ನಡುವೆ ಹಿತಾಸಕ್ತಿ ಸಂಘರ್ಷ ಉಂಟಾಗಬಹುದು.
  5. ಈಗಾಗಲೇ ಹೆಚ್ಚಿನ ಬೇಡಿಕೆಯಲ್ಲಿರುವ ಪ್ರಮುಖ ಸಂಸ್ಥೆಗಳಲ್ಲಿ, ‘ಅಕಾಡೆಮಿಕ್ ಕ್ರೆಡಿಟ್ ಬ್ಯಾಂಕ್‌ಗಳ’ ಅಡಿಯಲ್ಲಿ ವಿದ್ಯಾರ್ಥಿಗಳಿಗೆ ಹೆಚ್ಚುವರಿ ಸೀಟುಗಳನ್ನು ಒದಗಿಸುವುದರಿಂದ ಸಂಸ್ಥೆಗಳು ಹೆಚ್ಚುವರಿ ವೆಚ್ಚಗಳನ್ನು ಭರಿಸಬೇಕಾಗುತ್ತದೆ.

 

ಅಕಾಡೆಮಿಕ್ ಬ್ಯಾಂಕ್ ಆಫ್ ಕ್ರೆಡಿಟ್

(ಶೈಕ್ಷಣಿಕ ಅಂಕಗಳ ‘ಶೈಕ್ಷಣಿಕ ಬ್ಯಾಂಕ್’) ಎಂದರೇನು?

ಅಕಾಡೆಮಿಕ್ ಬ್ಯಾಂಕ್ ಆಫ್ ಕ್ರೆಡಿಟ್ ಅನ್ನು ವಿಶ್ವವಿದ್ಯಾಲಯ ಧನಸಹಾಯ ಆಯೋಗ (UGC) ವು ಸ್ಥಾಪಿಸಿದೆ.

ಉದ್ದೇಶಿತ ‘ಅಕಾಡೆಮಿಕ್ ಬ್ಯಾಂಕ್ ಆಫ್ ಕ್ರೆಡಿಟ್’ (Academic Bank of Credit- ABC) ಅನ್ನು ‘ರಾಷ್ಟ್ರೀಯ ಶಿಕ್ಷಣ ನೀತಿ (National Education Policy – NEP) 2020’ ರ ಅಡಿಯಲ್ಲಿ ಪ್ರಸ್ತಾಪಿಸಲಾಗಿದ್ದು ಜುಲೈ 2021 ರಲ್ಲಿ ಔಪಚಾರಿಕವಾಗಿ ಅನಾವರಣಗೊಂಡಿದೆ.

 

  1. ಇದರ ಅಡಿಯಲ್ಲಿ, ವಿದ್ಯಾರ್ಥಿಗಳಿಗೆ ಕೋರ್ಸ್ ಪ್ರವೇಶಿಸಲು ಮತ್ತು ಪೂರ್ಣಗೊಳಿಸಲು ಹಲವಾರು ಆಯ್ಕೆಗಳನ್ನು ನೀಡಲಾಗುವುದು.
  2. ‘ಅಕಾಡೆಮಿಕ್ ಕ್ರೆಡಿಟ್ ಬ್ಯಾಂಕ್’ ಅಡಿಯಲ್ಲಿ, ವಿದ್ಯಾರ್ಥಿಗಳು ಪದವಿ ಅಥವಾ ಕೋರ್ಸ್‌ನಿಂದ ಹೊರಗುಳಿಯಲು ಮತ್ತು ಸಂಬಂಧಿತ ಪ್ರಮಾಣಪತ್ರವನ್ನು ಪಡೆಯುವ ಆಯ್ಕೆಯನ್ನು ನೀಡಲಾಗುತ್ತದೆ. ನಿರ್ದಿಷ್ಟ ಸಮಯದ ನಂತರ, ವಿದ್ಯಾರ್ಥಿಗಳು ಮತ್ತೆ ತಮ್ಮ ಅಧ್ಯಯನವನ್ನು ಅವರು ಅಪೂರ್ಣಗೊಳಿಸಿದ ಅದೇ ಹಂತದಿಂದ ಪುನರಾರಂಭಿಸಬಹುದಾಗಿದೆ.
  3. ಇದು ವಿದ್ಯಾರ್ಥಿಗಳಿಗೆ ಒಂದು ಪದವಿಯನ್ನು ಪೂರೈಸುವಾಗ ಅಥವಾ ಕೋರ್ಸ್ ತೊರೆಯುವಾಗ ಶಿಕ್ಷಣ ಸಂಸ್ಥೆಗಳನ್ನು ಬದಲಾಯಿಸುವ ಸೌಲಭ್ಯವನ್ನೂ ಒದಗಿಸುತ್ತದೆ.
  4. ಕೋರ್ಸ್ ಮಧ್ಯದಲ್ಲಿ ವಿದ್ಯಾರ್ಥಿಯು ತನ್ನ ಇಚ್ಛೆಯ ವಿಷಯಗಳನ್ನು ಬದಲಿಸಲು ನೂತನ ಶಿಕ್ಷಣ ನೀತಿಯಲ್ಲಿ ಅವಕಾಶವಿದೆ. ಹೀಗೆ ವಿಷಯ ಮತ್ತು ಕೋರ್ಸ್ ಬದಲಿಸಿದಾಗ ವಿದ್ಯಾರ್ಥಿಯ ಶೈಕ್ಷಣಿಕ ಮೌಲ್ಯಮಾಪನವನ್ನು ನಡೆಸಲು ಶೈಕ್ಷಣಿಕ ಬ್ಯಾಂಕ್ ನೆರವಾಗಲಿದೆ.
  5. ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಇದನ್ನು ರೂಪಿಸಲಾಗಿದೆ. ಇದು ಶಿಕ್ಷಣ ವ್ಯವಸ್ಥೆಯಲ್ಲಿ ಕ್ರಾಂತಿಕಾರಕ ಬದಲಾವಣೆ ತರಲಿದೆ. ಅಲ್ಲದೆ, ವಿದ್ಯಾರ್ಥಿ ತನ್ನ ಇಚ್ಛೆಯ ವಿಷಯವನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವನ್ನು ಈ ವ್ಯವಸ್ಥೆ ನೀಡಲಿದೆ’.

 

ಕಾರ್ಯನಿರ್ವಹಣೆ ವಿಧಾನ:

‘ಅಕಾಡೆಮಿಕ್ ಕ್ರೆಡಿಟ್ ಬ್ಯಾಂಕ್’ ಒಂದು ವರ್ಚುವಲ್ ಸ್ಟೋರ್ ಹೌಸ್ ಆಗಿದ್ದು, ಇದು ವಿದ್ಯಾರ್ಥಿಯ ‘ಅಕಾಡೆಮಿಕ್ ಕ್ರೆಡಿಟ್’ ದಾಖಲೆಯನ್ನು ಉಳಿಸಿಕೊಳ್ಳುತ್ತದೆ. ಇದು ಯಾವುದೇ ಕೋರ್ಸ್‌ನ ಯಾವುದೇ ಕ್ರೆಡಿಟ್ ಕೋರ್ಸ್ ದಾಖಲೆಗಳನ್ನು ವಿದ್ಯಾರ್ಥಿಗಳಿಂದ ನೇರವಾಗಿ ಸ್ವೀಕರಿಸುವುದಿಲ್ಲ, ಆದರೆ, ವಿದ್ಯಾರ್ಥಿಗಳ ಖಾತೆಗಳಲ್ಲಿ ಠೇವಣಿ ಇರಿಸಿದ ಉನ್ನತ ಶಿಕ್ಷಣ ಸಂಸ್ಥೆಗಳಿಂದ ಮಾತ್ರ ಕ್ರೆಡಿಟ್ ಕೋರ್ಸ್ ದಾಖಲೆಗಳನ್ನು ಸ್ವೀಕರಿಸುತ್ತದೆ.

Current Affairs

 

ಪ್ರಯೋಜನಗಳು:

ಅಕಾಡೆಮಿಕ್ ಕ್ರೆಡಿಟ್ ಬ್ಯಾಂಕ್ ಕ್ರೆಡಿಟ್(ಅಂಕಗಳ) ವೆರಿಫಿಕೇಶನ್ (ಪರಿಶೀಲನೆ), ಕ್ರೆಡಿಟ್ ಕ್ರೋಡೀಕರಣ, ಕ್ರೆಡಿಟ್ ವರ್ಗಾವಣೆ, ವಿದ್ಯಾರ್ಥಿಗಳ ಬಿಡುಗಡೆ ಮತ್ತು ಮುಂದಿನ ಹಂತಕ್ಕೆ ಬಡ್ತಿ ಪಡೆಯಲು ವಿದ್ಯಾರ್ಥಿಗಳಿಗೆ ಸಹಾಯ ಮಾಡುತ್ತದೆ.

 

ಸರಳ ಪದಗಳಲ್ಲಿ:

‘ಅಕಾಡೆಮಿಕ್ ಬ್ಯಾಂಕ್ ಆಫ್ ಕ್ರೆಡಿಟ್’ ಅಡಿಯಲ್ಲಿ, ವಿದ್ಯಾರ್ಥಿಯು ಯಾವುದೇ ಉನ್ನತ ಶಿಕ್ಷಣ ಸಂಸ್ಥೆಯಿಂದ ಬಹು ಪ್ರವೇಶ ಮತ್ತು ನಿರ್ಗಮನ ಆಯ್ಕೆಗಳ ಅನುಕೂಲದೊಂದಿಗೆ ಪದವಿಯನ್ನು ಪೂರೈಸಬಹುದು.ಒಂದೇ ಕಾಲೇಜಿನಲ್ಲಿ ಮೂರು ವರ್ಷ ಕಳೆಯುವ ಬದಲು ವಿದ್ಯಾರ್ಥಿಯು ಒಂದು ಕಾಲೇಜಿನಿಂದ ಇನ್ನೊಂದು ಕಾಲೇಜಿಗೆ ಸುಲಭವಾಗಿ ಬದಲಾಗಬಹುದು. ಪದವಿಯನ್ನು ಗಳಿಸಲು, ಒಬ್ಬ ವಿದ್ಯಾರ್ಥಿಯು ತನ್ನ ಖಾತೆ(ಗಳಲ್ಲಿ) ನಿರ್ದಿಷ್ಟ ಸಂಖ್ಯೆಯ ‘ಕ್ರೆಡಿಟ್’ಗಳನ್ನು ಹೊಂದಿರಬೇಕಾಗುತ್ತದೆ.

  1. ಉದಾಹರಣೆಗೆ, ಬಿ.ಕಾಂ ವಿದ್ಯಾರ್ಥಿಯು ಕಾಲೇಜಿನಲ್ಲಿ ಓದುತ್ತಿದ್ದರೆ, ಒಂದು ವರ್ಷದ ನಂತರ ಅವನು ಅಥವಾ ಅವಳು ತನ್ನ ಕಾಲೇಜನ್ನು ಬದಲಾಯಿಸಬಹುದು. ಮತ್ತು, ಒಂದು ಅಂತರದ ನಂತರ ಅದೇ ಕೋರ್ಸ್‌ಗೆ ಸೇರಬಹುದು.
  2. ಅಲ್ಲಿಯವರೆಗೆ, ವಿದ್ಯಾರ್ಥಿಯು ಆ ಒಂದು ವರ್ಷದಲ್ಲಿ ಗಳಿಸಿದ ‘ಕ್ರೆಡಿಟ್’ಗಳನ್ನು ಅವನ/ಅವಳ ಎಬಿಸಿ ಖಾತೆಯಲ್ಲಿ ಇಡಲಾಗುತ್ತದೆ ಮತ್ತು ವಿದ್ಯಾರ್ಥಿಯು ಬೇರೆ ಯಾವುದೇ ಕಾಲೇಜಿನಲ್ಲಿ ಅದೇ ಕೋರ್ಸ್‌ಗೆ ಪ್ರವೇಶ ಪಡೆದಾಗ ಈ ‘ಕ್ರೆಡಿಟ್’ಗಳನ್ನು ಬಳಸಬಹುದು.

Current Affairs

 

ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ಗಮನಿಸಿ:

ವಿದ್ಯಾರ್ಥಿಗಳ ಪರೀಕ್ಷೆಯ ವ್ಯವಸ್ಥೆಯನ್ನು ಬದಲಿಸುವ ‘ಕಲಿಕಾಮಟ್ಟ ವಿಶ್ಲೇಷಣೆಗಾಗಿ ವ್ಯವಸ್ಥಿತ ಮೌಲ್ಯಮಾಪನ-ಸಫಲ್’ ವ್ಯವಸ್ಥೆಯನ್ನೂ ಜಾರಿಗೊಳಿಸಲಾಗುತ್ತದೆ.

‘ನೂತನ ಶಿಕ್ಷಣ ನೀತಿಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು. ಇದಕ್ಕೆ ಶಿಕ್ಷಕರನ್ನು ಸಿದ್ಧಪಡಿಸಲು NCERT ‘ನಿಶಿತಾ 2.0’ ಎಂಬ ತರಬೇತಿ ಕಾರ್ಯಕ್ರಮವನ್ನು ಸಿದ್ಧಪಡಿಸಿದೆ. ಶಿಕ್ಷಕರಿಗೆ ಬೇಕಿರುವ ತರಬೇತಿ ಇದರಲ್ಲಿ ದೊರೆಯಲಿದೆ. ತರಬೇತಿ ಪಡೆದ ಶಿಕ್ಷಕರು ತಮ್ಮ ಶಿಕ್ಷಣ ಇಲಾಖೆಗೆ, ತಮ್ಮ ಅಗತ್ಯಗಳ ಬಗ್ಗೆ ಸಲಹೆಗಳನ್ನು ನೀಡಲು ಸಾಧ್ಯವಾಗುತ್ತದೆ’.

‘ಮುಂದಿನ ದಿನಗಳಲ್ಲಿ ದೇಶದ ಆರ್ಥಿಕತೆಯಲ್ಲಿ ಕೃತಕ ಬುದ್ಧಿಮತ್ತೆ ಮಹತ್ವದ ಪಾತ್ರ ವಹಿಸಲಿದೆ. ವಿದ್ಯಾರ್ಥಿಗಳನ್ನು ಅಂತಹ ವಾತಾವರಣಕ್ಕೆ ಸಿದ್ಧಪಡಿಸುವ ಕೃತಕ ಬುದ್ಧಿಮತ್ತೆ ಕಾರ್ಯಕ್ರಮವನ್ನು ಆರಂಭಿಸಲಾಗುತ್ತದೆ. ಇದಕ್ಕಾಗಿ ರಾಷ್ಟ್ರೀಯ ಡಿಜಿಟಲ್ ಶಿಕ್ಷಣ ವ್ಯವಸ್ಥೆ ಮತ್ತು ರಾಷ್ಟ್ರೀಯ ಶಿಕ್ಷಣ ತಂತ್ರಜ್ಞಾನ ಫೋರಂಗಳು ಡಿಜಿಟಲ್ ಮತ್ತು ತಾಂತ್ರಿಕ ಯೋಜನೆಯನ್ನು ರೂಪಿಸಲಿವೆ’ ಎಂದು ಹೇಳಲಾಗಿದೆ.

‘ಸಂಜ್ಞಾ ಭಾಷೆಗೆ ಭಾಷಾ ವಿಷಯದ ಮಾನ್ಯತೆ ನೀಡಲಾಗಿದೆ. ಸಾಮಾನ್ಯ ವಿದ್ಯಾರ್ಥಿಗಳಿಗೂ ಸಂಜ್ಞಾ ಭಾಷೆಯನ್ನು, ಒಂದು ಭಾಷೆಯಾಗಿ ಕಲಿಸಲು ಅವಕಾಶವಿದೆ. ದೇಶದಲ್ಲಿ 3 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ತಮ್ಮ ಕಲಿಕೆಗಾಗಿ ಸಂಜ್ಞಾಭಾಷೆಯನ್ನು ಅವಲಂಬಿಸಿದ್ದಾರೆ. ಈ ಹೊಸ ವ್ಯವಸ್ಥೆಯು ಭಾರತೀಯ ಸಂಜ್ಞಾ ಭಾಷೆಗೆ ಉತ್ತೇಜನ ನೀಡಲಿದೆ. ಇದರಿಂದ ಅಂಗವಿಕಲ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ’ ಎಂದು ತಿಳಿಸಲಾಗಿದೆ.

 

ವಿಷಯಗಳು: ಭಾರತ ಮತ್ತು ನೆರೆಹೊರೆಯ ದೇಶಗಳೊಂದಿಗಿನ ಅದರ ಸಂಬಂಧಗಳು.

‘ಶಾಶ್ವತ ಸಿಂಧೂ ಆಯೋಗ’:


(Permanent Indus Commission)

 

ಸಂದರ್ಭ:

ಮಾರ್ಚ್ 1 ರಿಂದ 3 ರವರೆಗೆ ನಡೆಯಲಿರುವ ಶಾಶ್ವತ ಸಿಂಧೂ ಆಯೋಗದ (Permanent Indus Commission) ವಾರ್ಷಿಕ ಸಭೆಯಲ್ಲಿ ಭಾಗವಹಿಸಲು 10 ಸದಸ್ಯರ ಭಾರತೀಯ ನಿಯೋಗವು ಪಾಕಿಸ್ತಾನಕ್ಕೆ ಭೇಟಿ ನೀಡಲಿದೆ.

ಸಿಂಧೂ ಜಲ ಒಪ್ಪಂದದ (Indus Water Treaty) ಅಡಿಯಲ್ಲಿ, ಪ್ರತಿ ವರ್ಷ ಮಾರ್ಚ್ 31 ರೊಳಗೆ ಕನಿಷ್ಠ ಒಮ್ಮೆಯಾದರೂ ಭಾರತ ಮತ್ತು ಪಾಕಿಸ್ತಾನದಲ್ಲಿ ನಿಯಮಿತವಾದ ಶಾಶ್ವತ ಸಿಂಧೂ ಆಯೋಗದ ಸಭೆಗಳನ್ನು ನಡೆಸುವುದು ಕಡ್ಡಾಯವಾಗಿದೆ.

ಪ್ರಾಮುಖ್ಯತೆ:

ಉಭಯ ದೇಶಗಳ ನಡುವಿನ ‘ಸಿಂಧೂ ಜಲ ಒಪ್ಪಂದ’ಕ್ಕೆ ಸಹಿ ಹಾಕಿದ ನಂತರ, ಭಾರತೀಯ ನಿಯೋಗದಲ್ಲಿ ಮೊದಲ ಬಾರಿಗೆ ಮೂವರು ಮಹಿಳಾ ಅಧಿಕಾರಿಗಳು ಸಹ ಭಾಗವಹಿಸಲಿದ್ದಾರೆ ಮತ್ತು ಸಭೆಯಲ್ಲಿ ವಿವಿಧ ವಿಷಯಗಳ ಕುರಿತು ಭಾರತೀಯ ಆಯುಕ್ತರಿಗೆ ಸಲಹೆ ನೀಡಲಿದ್ದಾರೆ.

ಸಭೆಯಲ್ಲಿ ಚರ್ಚೆಯ ಕೇಂದ್ರ ಬಿಂದುಗಳು:

ಸಭೆಯ ಅಜೆಂಡಾದಲ್ಲಿ, ಜಮ್ಮು ಮತ್ತು ಕಾಶ್ಮೀರದ ಚೆನಾಬ್ ಜಲಾನಯನ ಪ್ರದೇಶದಲ್ಲಿ ‘ಪಾಕಲ್ ದುಲ್’ (1,000 ಮೆಗಾವ್ಯಾಟ್), ಲೋವರ್ ಕಲ್ನಾಯ್ (48 ಮೆಗಾವ್ಯಾಟ್) ಮತ್ತು ಕಿರು (624 ಮೆಗಾವ್ಯಾಟ್) ಮತ್ತು ಲಡಾಖ್‌ನಲ್ಲಿ ಸ್ಥಾಪಿಸಲಾಗುವುದು. ಕೆಲವು ಸಣ್ಣ ಜಲವಿದ್ಯುತ್ ಯೋಜನೆಗಳಿಗೆ ಪಾಕಿಸ್ತಾನದ ಆಕ್ಷೇಪಣೆ ಚರ್ಚೆಯಾಗುವ ಸಾಧ್ಯತೆ ಇದೆ.

ಸಿಂಧೂ ನದಿ ನೀರಿನ ಒಪ್ಪಂದದ ಕುರಿತು:

ಇದು ನದಿ ನೀರು-ಹಂಚಿಕೆ ಒಪ್ಪಂದವಾಗಿದ್ದು, 1960 ರಲ್ಲಿ ವಿಶ್ವ ಬ್ಯಾಂಕ್ ನ ಮಧ್ಯಸ್ಥಿಕೆಯಲ್ಲಿ ಭಾರತದ ಪ್ರಧಾನಿ ಜವಾಹರಲಾಲ್ ನೆಹರು ಮತ್ತು ಪಾಕಿಸ್ತಾನದ ಅಧ್ಯಕ್ಷ ಅಯೂಬ್ ಖಾನ್ ಅವರು ಇದಕ್ಕೆ ಸಹಿ ಹಾಕಿದ್ದರು.

Current Affairs

 

ಭಾರತ ಮತ್ತು ಪಾಕಿಸ್ತಾನದ ನಡುವೆ ಸಿಂಧೂ ನದಿ ನೀರಿನ ಹಂಚಿಕೆ:

 ಸಿಂಧೂ ಜಲ ಒಪ್ಪಂದದ (Indus Water Treaty- IWT) ಪ್ರಕಾರ, ಮೂರು ಪೂರ್ವದ ನದಿಗಳಾದ ರಾವಿ, ಬಿಯಾಸ್ ಮತ್ತು ಸಟ್ಲೆಜ್ ನೀರಿನ (33 ಮಿಲಿಯನ್ ಎಕರೆ ಫೀಟ್) ಮೇಲೆ ಭಾರತಕ್ಕೆ ಸಂಪೂರ್ಣ ನಿಯಂತ್ರಣ ನೀಡಲಾಯಿತು.

 

  1. ಪಾಕಿಸ್ತಾನವು ಪಶ್ಚಿಮ ನದಿಗಳನ್ನು (135MAF) ನಿಯಂತ್ರಿಸುತ್ತದೆ – ಸಿಂಧೂ, ಚೆನಾಬ್ ಝೆಲಮ್.

ಒಪ್ಪಂದದ ಪ್ರಕಾರ, ಪಾಕಿಸ್ತಾನ ಮತ್ತು ಭಾರತದ ಜಲ ಆಯುಕ್ತರು ವರ್ಷಕ್ಕೆ ಎರಡು ಬಾರಿ ಭೇಟಿಯಾಗಿ ಯೋಜನೆಯ ಸ್ಥಳಗಳ ತಾಂತ್ರಿಕ ಅಂಶಗಳು ಮತ್ತು ನದಿಯಲ್ಲಿ ನಡೆಯುತ್ತಿರುವ ಪ್ರಮುಖ ಕಾರ್ಯಗಳ ಬಗ್ಗೆ ಪರಸ್ಪರ ತಿಳಿಸಬೇಕಾಗುತ್ತದೆ.

ಒಪ್ಪಂದದ ಅಡಿಯಲ್ಲಿ, ಎರಡೂ ಕಡೆಯವರು ನೀರಿನ ಹರಿವು ಮತ್ತು ನೀರಿನ ಬಳಕೆಯ ಪ್ರಮಾಣವನ್ನು ಕುರಿತು ಮಾಹಿತಿ ಹಂಚಿಕೊಳ್ಳುತ್ತಾರೆ.

 

ಜಲ ವಿದ್ಯುದುತ್ಪಾದನಾ ಹಕ್ಕು:

ಸಿಂಧೂ ಜಲ ಒಪ್ಪಂದದ ಅಡಿಯಲ್ಲಿ, ‘ವಿನ್ಯಾಸ ಮತ್ತು ಕಾರ್ಯಾಚರಣೆಗೆ ನಿರ್ದಿಷ್ಟ ಮಾನದಂಡಕ್ಕೆ ಒಳಪಟ್ಟು’ ಹರಿಯುತ್ತಿರುವ ಪಶ್ಚಿಮದ ನದಿಗಳ ಮೇಲೆ ಯೋಜನೆಗಳ ಮೂಲಕ ಜಲವಿದ್ಯುತ್ ಉತ್ಪಾದಿಸಲು ಭಾರತಕ್ಕೆ ಅಧಿಕಾರ ನೀಡಲಾಗಿದೆ.

  1. ಒಪ್ಪಂದದ ಅಡಿಯಲ್ಲಿ, ಪಾಕಿಸ್ತಾನವು ಪಶ್ಚಿಮ ನದಿಗಳ ಮೇಲಿನ ಭಾರತೀಯ ಜಲವಿದ್ಯುತ್ ಯೋಜನೆಗಳ ವಿನ್ಯಾಸದ ಬಗ್ಗೆ ಕಳವಳ ವ್ಯಕ್ತಪಡಿಸುವ ಹಕ್ಕನ್ನು ಹೊಂದಿದೆ.

ಶಾಶ್ವತ ಸಿಂಧೂ ಆಯೋಗ:

  1. ಸಿಂಧೂ ಜಲ ಒಪ್ಪಂದ, 1960 ರ ಗುರಿಗಳನ್ನು ಕಾರ್ಯಗತಗೊಳಿಸಲು ಮತ್ತು ನಿರ್ವಹಿಸಲು ಭಾರತ ಮತ್ತು ಪಾಕಿಸ್ತಾನದ ಅಧಿಕಾರಿಗಳನ್ನು ಒಳಗೊಂಡ ದ್ವಿಪಕ್ಷೀಯ ಆಯೋಗವಾದ ಶಾಶ್ವತ ಸಿಂಧೂ ಆಯೋಗ (Permanent Indus Commission) ವನ್ನು ರಚಿಸಲಾಯಿತು.
  2. ‘ಸಿಂಧೂ ಜಲ ಒಪ್ಪಂದ’ದ ಪ್ರಕಾರ, ಈ ಆಯೋಗದ ಸಭೆಯು ನಿಯಮಿತವಾಗಿ ಭಾರತ ಮತ್ತು ಪಾಕಿಸ್ತಾನದಲ್ಲಿ ವರ್ಷಕ್ಕೊಮ್ಮೆಯಾದರೂ ನಡೆಯಬೇಕು.

 

ಆಯೋಗದ ಕಾರ್ಯಗಳು:

  1. ನದಿಗಳ ನೀರಿನ ಅಭಿವೃದ್ಧಿಗೆ ಸಂಬಂಧಿಸಿದ ಯಾವುದೇ ಸಮಸ್ಯೆಯನ್ನು ಅಧ್ಯಯನ ಮಾಡುವುದು ಮತ್ತು ಎರಡೂ ಸರ್ಕಾರಗಳಿಗೆ ವರದಿ ಮಾಡುವುದು.
  2. ನೀರಿನ ಹಂಚಿಕೆಯ ಬಗ್ಗೆ ಉಂಟಾಗುವ ವಿವಾದಗಳನ್ನು ಪರಿಹರಿಸುವುದು.
  3. ಯೋಜನೆಯ ತಾಣಗಳು ಮತ್ತು ನದಿಯ ಪ್ರಮುಖ ಭಾಗಗಳಲ್ಲಿ ಕೆಲಸ ಮಾಡಲು ತಾಂತ್ರಿಕ ತಪಾಸಣೆ ವ್ಯವಸ್ಥೆ ಮಾಡುವುದು.
  4. ಯೋಜನೆಯ ತಾಣಗಳಿಗೆ ಮತ್ತು ನದಿಯ ಪ್ರಮುಖ ಕಾರ್ಯಚಟುವಟಿಕೆಯ ಕೇಂದ್ರಗಳಿಗೆ ಮುಖ್ಯಸ್ಥರು ಭೇಟಿ ನೀಡಿ ತಾಂತ್ರಿಕ ತಪಾಸಣೆ ಕೈಗೊಳ್ಳಲು ವ್ಯವಸ್ಥೆ ಮಾಡುವುದು.
  5. ಪ್ರತಿ ಐದು ವರ್ಷಗಳಿಗೊಮ್ಮೆ, ನದಿಗಳನ್ನು ಪರಿಶೀಲಿಸಲು ಸಾಮಾನ್ಯ ಪ್ರವಾಸ ಕೈಗೊಳ್ಳುವುದು.
  6. ಒಪ್ಪಂದದ ನಿಬಂಧನೆಗಳ ಅನುಷ್ಠಾನಕ್ಕೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವುದು.

 


ಸಾಮಾನ್ಯ ಅಧ್ಯಯನ ಪತ್ರಿಕೆ : 3


 

ವಿಷಯಗಳು: ಮಾಹಿತಿ ತಂತ್ರಜ್ಞಾನ, ಬಾಹ್ಯಾಕಾಶ, ಕಂಪ್ಯೂಟರ್, ರೊಬೊಟಿಕ್ಸ್, ನ್ಯಾನೊ-ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ಬೌದ್ಧಿಕ ಆಸ್ತಿ ಹಕ್ಕುಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಜಾಗೃತಿ.

ಡಾರ್ಕ್ ಎನರ್ಜಿ ಎಂದರೇನು?


(What is dark energy?)

ಸಂದರ್ಭ:

ಬ್ರಹ್ಮಾಂಡದ ಗಮನಾರ್ಹ ಭಾಗವು ‘ಡಾರ್ಕ್ ಮ್ಯಾಟರ್’ (Dark Matter) ನಿಂದ ಮಾಡಲ್ಪಟ್ಟಿದೆ ಮತ್ತು ಇದು ಗುರುತ್ವಾಕರ್ಷಣೆಯ ಮೂಲಕ ಮಾತ್ರ ಬ್ರಹ್ಮಾಂಡದ ಉಳಿದ ಭಾಗಗಳೊಂದಿಗೆ ಸಂವಹನ ನಡೆಸುತ್ತದೆ ಎಂದು ಖಗೋಳ ಅವಲೋಕನಗಳು ತೋರಿಸುತ್ತವೆ.

  1. ಪ್ರಯೋಗಾಲಯಗಳಲ್ಲಿ ನಡೆಸಿದ ಅನೇಕ ದೊಡ್ಡ ಪ್ರಯೋಗಗಳು ಡಾರ್ಕ್ ಮ್ಯಾಟರ್ ಗೆ ಕಾರಣವಾಗಿರುವ ಸಂಭವನೀಯ ‘ಮೂಲಭೂತ ಕಣಗಳನ್ನು’ ಪತ್ತೆಹಚ್ಚಲು ಪ್ರಯತ್ನಿಸಿವೆ. ಆದಾಗ್ಯೂ, ಇಲ್ಲಿಯವರೆಗೆ ಈ ಡಾರ್ಕ್ ಮ್ಯಾಟರ್ ಕಣಗಳು ಪತ್ತೆಯಾಗಿಲ್ಲ.

 

ಡಾರ್ಕ್ ಮ್ಯಾಟರ್ ನ ಅವಲೋಕನ:

ಡಾರ್ಕ್ ಮ್ಯಾಟರ್‌ ನ ಎಷ್ಟು ಭಾಗವು  ಕಪ್ಪು ಕುಳಿಯಿಂದ ಆವರಿಸಿದೆ ಎಂದು ಅಂದಾಜಿಸಲು ಸಂಶೋಧಕರು ‘ಲೆನ್ಸಿಂಗ್ ಸಿಗ್ನೇಚರ್’ (Lensing Signatures)ನ ‘ನಾನ್-ಅಬ್ಸರ್ವೇಶನ್’ (Non-Observation) ಅನ್ನು ಬಳಸುತ್ತಾರೆ. ‘ಗ್ರಾವಿಟೇಶನಲ್ ಲೆನ್ಸಿಂಗ್’ (Gravitational lensing) ಡಾರ್ಕ್ ಮ್ಯಾಟರ್‌ನ ಪ್ರಮಾಣ ಮತ್ತು ವಿತರಣೆಗೆ ನೇರವಾಗಿ ಸಂವೇದನಶೀಲ ವಾಗಿರುವುದರಿಂದ, ‘ವಿಶ್ವಶಾಸ್ತ್ರಜ್ಞರಿಗೆ’ ಇದು ತುಂಬಾ ಉಪಯುಕ್ತವಾಗಿದೆ.

 

ಗುರುತ್ವಾಕರ್ಷಣೆಯ ಲೆನ್ಸಿಂಗ್ ಮತ್ತು ಅದರ ಕಾರ್ಯನಿರ್ವಹಣೆ:

  1. ‘ಗ್ರಾವಿಟೇಶನಲ್ ಲೆನ್ಸಿಂಗ್’ ಎಂಬುದು ಐನ್‌ಸ್ಟೈನ್‌ ರ ‘ಸಾಮಾನ್ಯ ಸಾಪೇಕ್ಷತಾ ಸಿದ್ಧಾಂತ’ (Theory of General Relativity) ದ ಪರಿಣಾಮವಾಗಿದೆ – ಸರಳವಾಗಿ ಹೇಳುವುದಾದರೆ, ‘ದ್ರವ್ಯರಾಶಿ’ ಯು ಬೆಳಕನ್ನು ಬಾಗಿಸುತ್ತದೆ.
  2. ದೈತ್ಯ ವಸ್ತುವಿನ ಗುರುತ್ವಾಕರ್ಷಣೆಯ ಕ್ಷೇತ್ರವು ಬಾಹ್ಯಾಕಾಶದಲ್ಲಿ ಸಾಕಷ್ಟು ವಿಸ್ತರಿಸುತ್ತದೆ ಮತ್ತು ಆ ಕಾಯದ ಹತ್ತಿರ ಹಾದುಹೋಗುವ ಬೆಳಕಿನ ಕಿರಣಗಳನ್ನು (ಮತ್ತು ಅದರ ಗುರುತ್ವಾಕರ್ಷಣೆಯ ಕ್ಷೇತ್ರದ ಮೂಲಕ) ಬೇರೆಡೆಗೆ ತಿರುಗಿಸಲು ಮತ್ತು ಮರು-ಕೇಂದ್ರೀಕರಿಸಲು ಕಾರಣವಾಗುತ್ತದೆ.
  3. ಕಾಯವು ಹೆಚ್ಚು ಬೃಹತ್ ಪ್ರಮಾಣದ್ದಾದಷ್ಟು, ಅದರ ಗುರುತ್ವಾಕರ್ಷಣೆಯ ಕ್ಷೇತ್ರವು ಬಲವಾಗಿರುತ್ತದೆ ಮತ್ತು ಆದ್ದರಿಂದ ಬೆಳಕಿನ ಕಿರಣಗಳ ಬಾಗುವಿಕೆಯು ಹೆಚ್ಚಾಗುತ್ತದೆ. ‘ಆಪ್ಟಿಕಲ್ ಲೆನ್ಸ್’ ಗಳನ್ನು ತಯಾರಿಸಲು ದಟ್ಟವಾದ ವಸ್ತುವನ್ನು ಬಳಸುವುದರಿಂದ ಅದರ ‘ವಕ್ರೀಭವನ’ದ ಪ್ರಮಾಣವು ಹೆಚ್ಚಾಗಿರುತ್ತದೆ.

Current Affairs

 

ಡಾರ್ಕ್ ಎನರ್ಜಿ ಎಂದರೇನು?

ಡಾರ್ಕ್ ಎನರ್ಜಿಯ ಕುರಿತು ತಿಳಿದಿರುವುದಕ್ಕಿಂತ ತಿಳಿಯದಿರುವುದೇ ಹೆಚ್ಚು. ಬ್ರಹ್ಮಾಂಡದ ವಿಸ್ತರಣೆಯ ಮೇಲೆ ಅದು ಹೇಗೆ ಪರಿಣಾಮ ಬೀರುತ್ತದೆ ಎಂದು ನಮಗೆ ತಿಳಿದಿರುವ ಕಾರಣ ಎಷ್ಟು ಡಾರ್ಕ್ ಎನರ್ಜಿಯಿದೆ ಎಂದು ನಮಗೆ ತಿಳಿದಿದೆ. ಅದನ್ನು ಹೊರತುಪಡಿಸಿ, ಇದು ಸಂಪೂರ್ಣ ರಹಸ್ಯವಾಗಿದೆ. ಆದರೆ ಇದು ಒಂದು ಪ್ರಮುಖ ರಹಸ್ಯವಾಗಿದೆ. ಇದು ಬ್ರಹ್ಮಾಂಡದ ಸುಮಾರು 68% ರಷ್ಟಿದೆ.

ಡಾರ್ಕ್ ಎನರ್ಜಿಯು ಒಂದು ಊಹಾತ್ಮಕ ಶಕ್ತಿಯ ರೂಪವಾಗಿದ್ದು ಅದು ಗುರುತ್ವಾಕರ್ಷಣೆಯ ವಿರುದ್ಧವಾಗಿ ವರ್ತಿಸುವ ಋಣಾತ್ಮಕ, ವಿಕರ್ಷಣ ಒತ್ತಡವನ್ನು ಬೀರುತ್ತದೆ.

  1. ಇದು ನಮ್ಮ ಬ್ರಹ್ಮಾಂಡದ ವಿಸ್ತರಣೆಯ ದರವನ್ನು ನಿಧಾನಗೊಳಿಸುವ ಬದಲು ಕಾಲಕ್ರಮೇಣ ವೇಗಗೊಳಿಸಲು ಕಾರಣವಾಗುತ್ತದೆ. ಈ ವಿದ್ಯಮಾನವು ಬಿಗ್ ಬ್ಯಾಂಗ್ ನಲ್ಲಿ ಆರಂಭವಾದ ವಿಶ್ವದಿಂದ ಒಬ್ಬರು ಏನನ್ನು ನಿರೀಕ್ಷಿಸಬಹುದು ಎಂಬುದಕ್ಕೆ ವಿರುದ್ಧವಾಗಿದೆ.

Current Affairs

 

ಡಾರ್ಕ್ ಎನರ್ಜಿ ಡಾರ್ಕ್ ಮ್ಯಾಟರ್‌ಗಿಂತ ಹೇಗೆ ಭಿನ್ನವಾಗಿದೆ?

ನಮಗೆ ತಿಳಿದಿರುವ ಎಲ್ಲವೂ ಅಂದರೆ, ಗ್ರಹಗಳು, ಚಂದ್ರಗಳು, ಬೃಹತ್ ಗೆಲಕ್ಸಿಗಳು – ಬ್ರಹ್ಮಾಂಡದ 5% ಕ್ಕಿಂತ ಕಡಿಮೆ ಪ್ರಮಾಣದಲ್ಲಿ ಇವೆ. ಸುಮಾರು 27% ಡಾರ್ಕ್ ಮ್ಯಾಟರ್ ಮತ್ತು 68% ಡಾರ್ಕ್ ಎನರ್ಜಿ ಇದೆ (About 27% is dark matter and 68% is dark energy).

ಡಾರ್ಕ್ ಮ್ಯಾಟರ್ ಗ್ಯಾಲಕ್ಸಿಗಳನ್ನು ಆಕರ್ಷಿಸುತ್ತದೆ ಮತ್ತು ಹಿಡಿದಿಟ್ಟುಕೊಳ್ಳುತ್ತದೆ, ಅದೇವೇಳೆ ಡಾರ್ಕ್ ಎನರ್ಜಿಯು ಹಿಮ್ಮೆಟ್ಟಿಸುತ್ತದೆ ಮತ್ತು ನಮ್ಮ ಬ್ರಹ್ಮಾಂಡದ ವಿಸ್ತರಣೆಗೆ ಕಾರಣವಾಗುತ್ತದೆ.

  1. ಡಾರ್ಕ್ ಮ್ಯಾಟರ್ ನ ಅಸ್ತಿತ್ವವನ್ನು 1920 ರಲ್ಲೇ ಸೂಚಿಸಲಾಗಿತ್ತು, ಆದರೆ 1998 ರವರೆಗೆ ಡಾರ್ಕ್ ಎನರ್ಜಿಯು ಪತ್ತೆಯಾಗಿರಲಿಲ್ಲ.

Current Affairs

 

XENON1T ಪ್ರಯೋಗದ ಬಗ್ಗೆ:

  1. ಇದು ವಿಶ್ವದ ಅತ್ಯಂತ ಸೂಕ್ಷ್ಮವಾದ ಡಾರ್ಕ್ ಮ್ಯಾಟರ್ ಪ್ರಯೋಗವಾಗಿದೆ ಮತ್ತು ಇದನ್ನು ಇಟಲಿಯ INFN ಲ್ಯಾಬೋರೇಟರಿ ನಾಜಿಯೊನಾಲಿ ಡೆಲ್ ಗ್ರಾನ್ ಸಾಸ್ಸೊದಲ್ಲಿ (INFN Laboratori Nazionali del Gran Sasso) ಆಳವಾದ ಭೂಗತ ಕಾರ್ಯಾಚರಣೆಯನ್ನು ನಡೆಸಲಾಯಿತು.
  2. ಇದು ಡ್ಯುಯಲ್-ಫೇಸ್ (ಲಿಕ್ವಿಡ್/ಗ್ಯಾಸ್) ಕ್ಸೆನಾನ್ ತಂತ್ರವನ್ನು ಬಳಸುತ್ತದೆ ಮತ್ತು ಇದು ಇಟಲಿಯ INFN ನ ಲ್ಯಾಬೋರೇಟರಿ ನಾಜಿಯೊನಾಲಿ ಡೆಲ್ ಗ್ರ್ಯಾನ್ ಸಾಸ್ಸೊದಲ್ಲಿ ಭೂಗರ್ಭದಲ್ಲಿದೆ.

 

ಸಾಮಾನ್ಯ ಸಾಪೇಕ್ಷತೆಯ ಸಿದ್ಧಾಂತ:

ಆದಾಗ್ಯೂ, ಪ್ರಮುಖ ಸಿದ್ಧಾಂತವಾದ ಸಾಮಾನ್ಯ ಸಾಪೇಕ್ಷತೆಯ ಸಿದ್ಧಾಂತವು, ಡಾರ್ಕ್ ಎನರ್ಜಿಯನ್ನು ಬಾಹ್ಯಾಕಾಶದ ಆಸ್ತಿಯೆಂದು ಪರಿಗಣಿಸುತ್ತದೆ. ಬಾಹ್ಯಾಕಾಶವು ಖಾಲಿ ಜಾಗವಲ್ಲ ಎಂದು ಮೊದಲು ಅರ್ಥಮಾಡಿಕೊಂಡವರು ಆಲ್ಬರ್ಟ್ ಐನ್‌ಸ್ಟೈನ್. ಬಾಹ್ಯಾಕಾಶದ ಹೆಚ್ಚಿನ ಜಾಗವು ಅಸ್ತಿತ್ವಕ್ಕೆ ಬರುವುದನ್ನು ಮುಂದುವರಿಸಬಹುದು ಎಂದು ಅರ್ಥಮಾಡಿಕೊಂಡರು ಐನ್ ಸ್ಟೀನ್ ಅವರೇ . ಐನ್ ಸ್ಟೀನ್ ತನ್ನ ಸಾಮಾನ್ಯ ಸಾಪೇಕ್ಷತಾ ಸಿದ್ಧಾಂತದಲ್ಲಿ, ವಿಜ್ಞಾನಿಗಳು ಅಸ್ತಿತ್ವದಲ್ಲಿದೆ ಎಂದು ಭಾವಿಸಿರುವ ಸ್ಥಿರ ಬ್ರಹ್ಮಾಂಡವನ್ನು ಲೆಕ್ಕಹಾಕಲು ವಿಶ್ವವಿಜ್ಞಾನದ ಸ್ಥಿರಾಂಕವನ್ನು ಸೇರಿಸಿದರು.

 

  1. ಹಬಲ್ ದೂರದರ್ಶಕವು ವಿಸ್ತರಿಸುತ್ತಿರುವ ಬ್ರಹ್ಮಾಂಡದ ಕುರಿತು ಘೋಷಿಸಿದ ನಂತರ, ಐನ್‌ಸ್ಟೈನ್ ತನ್ನ ಸ್ಥಿರತೆಯ ವಾದವನ್ನು ತನ್ನ ಅತ್ಯಂತ “ದೊಡ್ಡ ಪ್ರಮಾದ” ಎಂದು ಕರೆದನು.
  2. ಆದರೆ ಖಾಲಿ ಅಂತರಿಕ್ಷವು ತನ್ನದೇಯಾದ ಶಕ್ತಿಯನ್ನು ಹೊಂದಬಹುದು ಎಂದು ಊಹಿಸುವ ಮೂಲಕ ಐನ್‌ಸ್ಟೀನ್‌ನ ಪ್ರಮಾದವು ಡಾರ್ಕ್ ಎನರ್ಜಿಗೆ ಸೂಕ್ತವಾಗಿ ಹೊಂದಬಹುದು. ಸ್ಥಿರವು ಹೆಚ್ಚು ಜಾಗವನ್ನು ಹೊರಹೊಮ್ಮಿದಂತೆ, ಬ್ರಹ್ಮಾಂಡಕ್ಕೆ ಹೆಚ್ಚಿನ ಶಕ್ತಿಯನ್ನು ಸೇರಿಸಲಾಗುತ್ತದೆ, ಅದರ ವಿಸ್ತರಣೆಯನ್ನು ಹೆಚ್ಚಿಸುತ್ತದೆ ಎಂದು ಸೂಚಿಸುತ್ತದೆ.

 

ವಿಷಯಗಳು: ಮಾಹಿತಿ ತಂತ್ರಜ್ಞಾನ, ಬಾಹ್ಯಾಕಾಶ, ಕಂಪ್ಯೂಟರ್, ರೊಬೊಟಿಕ್ಸ್, ನ್ಯಾನೊ-ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ಬೌದ್ಧಿಕ ಆಸ್ತಿ ಹಕ್ಕುಗಳಿಗೆ ಸಂಬಂಧಿಸಿದ ವಿಷಯಗಳಿಗೆ ಸಂಬಂಧಿಸಿದಂತೆ ಜಾಗೃತಿ.

ನಾಸಾದ ಲೂಸಿ ಮಿಷನ್:


(NASA’s Lucy mission)

 ಸಂದರ್ಭ:

ಬಾಹ್ಯಾಕಾಶದಲ್ಲಿ ಸುದರ್ಘ 12 ವರ್ಷಗಳ ಪ್ರಯಾಣದಲ ಬಳಿಕ ಲುಸಿ ನೌಕೆ ತಲುಪಲಿರುವ ಟ್ರೋಜನ್ ಕ್ಷುದ್ರಗ್ರಹಗಳ ಪಟ್ಟಿಯಲ್ಲಿ ಯುರಿಬೇಟ್ಸ್ (Eurybates) ಕೂಡ ಒಂದಾಗಿದೆ.

  1. ಇತ್ತೀಚೆಗೆ, ‘ಲಾಸ್ ವೇಗಾಸ್’ ನಲ್ಲಿ ನಕ್ಷತ್ರವನ್ನು ಗಮನಿಸುತ್ತಿರುವಾಗ, ಆ ನಕ್ಷತ್ರವು ಸ್ವಲ್ಪ ಸಮಯದವರೆಗೆ ಕಣ್ಮರೆಯಾಯಿತು, ಏಕೆಂದರೆ ಈ ನಕ್ಷತ್ರದ ಮುಂದೆ ‘ಯೂರಿಬಿಟಿಸ್’ ಕ್ಷುದ್ರಗ್ರಹ ಹಾದುಹೋಯಿತು.
  2. ಯೂರಿಬೆಟಿಸ್ ನಕ್ಷತ್ರವನ್ನು ಅದರ ನೆರಳಿನಲ್ಲಿ ತೆಗೆದುಕೊಂಡ ತಕ್ಷಣ – ವೈಜ್ಞಾನಿಕ ಪರಿಭಾಷೆಯಲ್ಲಿ ಈ ಘಟನೆಯನ್ನು ‘ಗ್ರಹಣ’ /’ಅಕಲ್ಟೇಶನ್’ (Occultation) ಎಂದು ಕರೆಯಲಾಗುತ್ತದೆ- ಕ್ಷುದ್ರಗ್ರಹದ ಗಾತ್ರದ ಸರಿಸುಮಾರು 40-ಮೈಲಿ- (64-ಕಿಲೋಮೀಟರ್-) ವಿಸ್ತಾರವಾದ ನೆರಳು ಈ ಪ್ರದೇಶದ ಮೇಲೆ ಹಾದು ಹೋಗುತ್ತಿರುವುದು ಕಂಡುಬಂದಿದೆ.
  3. ಈ ಮಾಹಿತಿಯ ಉಪಯೋಗವನ್ನು ಲೂಸಿ ಮಿಷನ್‌ನ ಸಂಶೋಧಕರು 2027 ರಲ್ಲಿ ಲೂಸಿ ಬಾಹ್ಯಾಕಾಶ ನೌಕೆಯು ಯೂರಿಬೆಟ್ಸ್‌ ನ ಹತ್ತಿರದಿಂದ ಹಾದುಹೋಗುವ ಸಮಯದಲ್ಲಿ ಸಂಗ್ರಹಿಸಲಾಗುವ ಮಾಹಿತಿಯನ್ನು ಪೂರ್ಣಗೊಳಿಸಲು ಬಳಸುತ್ತಾರೆ.

 

ಗ್ರಹಣ ಎಂದರೇನು?

ಗ್ರಹಣವು ಒಂದು ಬಾಹ್ಶಾಕಾಶದವಸ್ತುವು ಮತ್ತೊಂದರ ನೆರಳಿನಲ್ಲಿ ಚಲಿಸಿದಾಗ ಉಂಟಾಗುವ ಒಂದು ಖಗೋಳಶಾಸ್ತ್ರೀಯ ಘಟನೆ. ಸೌರಮಂಡಲದಂತಹ ಒಂದು ತಾರಾಮಂಡಲದಲ್ಲಿ ಗ್ರಹಣ ಉಂಟಾದಾಗ, ಒಂದು ಬಗೆಯ ಸಂಯೋಗದ (ಸರಳ ರೇಖೆಯಲ್ಲಿ ಒಂದೇ ಗುರುತ್ವಾಕರ್ಷಣ ವ್ಯವಸ್ಥೆಯಲ್ಲಿನ ಮೂರು ಅಥವಾ ಹೆಚ್ಚು ಬಾಹ್ಯಾಕಾಶ ಕಾಯಗಳ ಹೊಂದಿಕೆ) ರಚನೆಯಾಗುತ್ತದೆ. ಗ್ರಹಣ ಪದವನ್ನು ಹಲವುವೇಳೆ, ಒಂದು ಸೂರ್ಯಗ್ರಹಣ (ಚಂದ್ರನ ನೆರಳು ಭೂಮಿಯ ಮೇಲ್ಮೈಯನ್ನು ಹಾದುಹೋಗುವ ಘಟನೆ), ಅಥವಾ ಒಂದು ಚಂದ್ರಗ್ರಹಣವನ್ನು (ಚಂದ್ರವು ಭೂಮಿಯ ನೆರಳಿನಲ್ಲಿ ಚಲಿಸುವ ಘಟನೆ) ವಿವರಿಸಲು ಬಳಸಲಾಗುತ್ತದೆ.

Current Affairs

 

‘ಲೂಸಿ’ ಮಿಷನ್ ಕುರಿತು:

ಇದು ಗುರು ಗ್ರಹದ ‘ಟ್ರೋಜನ್ ಕ್ಷುದ್ರಗ್ರಹಗಳನ್ನು’ ಅನ್ವೇಷಿಸಲು ನಾಸಾ ಕಳುಹಿಸಿದ ಮೊದಲ ಮಿಷನ್ ಆಗಿದೆ.

ಈ ಮಿಷನ್ ಸೌರಶಕ್ತಿಯಿಂದ ಚಾಲಿತವಾಗಿದೆ.

ಈ ಮಿಷನ್ ಕಾರ್ಯಾಚರಣೆಯನ್ನು ಪೂರ್ಣಗೊಳಿಸಲು 12 ವರ್ಷಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಎಂದು ಅಂದಾಜಿಸಲಾಗಿದೆ. ಈ ಸಮಯದಲ್ಲಿ, ಬಾಹ್ಯಾಕಾಶ ನೌಕೆಯು ಸುಮಾರು 6.3 ಶತಕೋಟಿ ಕಿಮೀ ಪ್ರಯಾಣಿಸಿ “ಎಂಟು ಕ್ಷುದ್ರಗ್ರಹಗಳನ್ನು” ಸುತ್ತಿ  “ಯುವ ಸೌರವ್ಯೂಹ” ದ ಬಗ್ಗೆ ಮಾಹಿತಿ ಪಡೆಯಲಿದೆ.

ಮಿಷನ್ ಉದ್ದೇಶ:

‘ಟ್ರೋಜನ್ ಕ್ಷುದ್ರಗ್ರಹಗಳ’ ಗುಂಪಿನಲ್ಲಿರುವ ವಿವಿಧ ಕ್ಷುದ್ರಗ್ರಹಗಳ ಸಂಯೋಜನೆಯನ್ನು ಅರ್ಥಮಾಡಿಕೊಳ್ಳಲು, ಕ್ಷುದ್ರಗ್ರಹಗಳ ದ್ರವ್ಯರಾಶಿ ಮತ್ತು ಸಾಂದ್ರತೆಯನ್ನು ನಿರ್ಧರಿಸಲು ಮತ್ತು ಟ್ರೋಜನ್ ಕ್ಷುದ್ರಗ್ರಹಗಳನ್ನು ಸುತ್ತುವ ಉಪಗ್ರಹಗಳು ಮತ್ತು ಉಂಗುರಗಳನ್ನು ವೀಕ್ಷಿಸಲು ಮತ್ತು ಅಧ್ಯಯನ ಮಾಡಲು ‘ಲೂಸಿ ಮಿಷನ್’ ಅನ್ನು ವಿನ್ಯಾಸಗೊಳಿಸಲಾಗಿದೆ.

Current Affairs

 

‘ಟ್ರೋಜನ್ ಕ್ಷುದ್ರಗ್ರಹಗಳು’ ಎಂದರೇನು?

 ಟ್ರೋಜನ್ ಕ್ಷುದ್ರಗ್ರಹಗಳು ಆರಂಭಿಕ ಸೌರವ್ಯೂಹದ ಅವಶೇಷಗಳು ಎಂದು ನಂಬಲಾಗಿದೆ, ಮತ್ತು ಅವುಗಳನ್ನು ಅಧ್ಯಯನ ಮಾಡುವುದರಿಂದ ವಿಜ್ಞಾನಿಗಳಿಗೆ ಅವುಗಳ ಮೂಲ, ವಿಕಸನ ಮತ್ತು ಪ್ರಸ್ತುತ ರೂಪವನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ.

  1. ಈ ‘ಕ್ಷುದ್ರಗ್ರಹಗಳು’ ಸುಮಾರು 4 ಬಿಲಿಯನ್ ವರ್ಷಗಳ ಹಿಂದೆ ಸೌರವ್ಯೂಹದ ರಚನೆಯೊಂದಿಗೆ ಹುಟ್ಟಿಕೊಂಡಿವೆ ಎಂದು ನಂಬಲಾಗಿದೆ, ಮತ್ತು ಟ್ರೋಜನ್ ಕ್ಷುದ್ರಗ್ರಹಗಳು ಸೌರಮಂಡಲದ ಇತರ ಗ್ರಹಗಳು ರೂಪುಗೊಂಡ ಅದೇ ವಸ್ತುವಿನಿಂದ ರೂಪುಗೊಂಡಿವೆ ಎಂದು ನಂಬಲಾಗಿದೆ.

 

ವಿಷಯಗಳು: ಸಂರಕ್ಷಣೆ, ಪರಿಸರ ಮಾಲಿನ್ಯ ಮತ್ತು ಅವನತಿ, ಪರಿಸರ ಪ್ರಭಾವದ ಮೌಲ್ಯಮಾಪನ.

CRZ ಮಾನದಂಡಗಳು:


(Coastal Regulation Zone norms)

 ಸಂದರ್ಭ:

‘ಅಕ್ರಮ ನಿರ್ಮಾಣ’ ಮತ್ತು ‘ಕರಾವಳಿ ನಿಯಂತ್ರಣ ವಲಯ’ (Coastal Regulation Zone norms) ನಿಯಮಗಳ ಉಲ್ಲಂಘನೆಯ ದೂರುಗಳನ್ನು ಸ್ವೀಕರಿಸಿದ ನಂತರ ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (BMC) ಜುಹುದಲ್ಲಿರುವ ಕೇಂದ್ರ ಸಚಿವ ‘ನಾರಾಯಣ ರಾಣೆ’ ಅವರ ಬಂಗಲೆಯ ಪರಿಶೀಲನೆಯನ್ನು ಪೂರ್ಣಗೊಳಿಸಿದೆ.

 

ಏನಿದು ಪ್ರಕರಣ?

‘ಕರಾವಳಿ ನಿಯಂತ್ರಣ ವಲಯ’ (ಸಿಆರ್‌ಝಡ್) ನಿಯಮಗಳನ್ನು ಉಲ್ಲಂಘಿಸಿ ಸಮುದ್ರದಿಂದ 50 ಮೀಟರ್‌ ಅಂತರದೊಳಗೆ ಕೇಂದ್ರ ಸಚಿವರ ಬಂಗಲೆಯನ್ನು ಅಕ್ರಮವಾಗಿ ನಿರ್ಮಿಸಲಾಗಿದೆ.

 

ಕರಾವಳಿ ನಿಯಂತ್ರಣ ವಲಯಗಳು ಯಾವುವು?

 ಪರಿಸರ ಸಚಿವಾಲಯವು ಕರಾವಳಿ ನಿಯಂತ್ರಣ ವಲಯ ನಿಯಮಗಳನ್ನು (CRZ ನಿಯಮಗಳು) ಫೆಬ್ರವರಿ 1991 ರಲ್ಲಿ, 1986 ರ  ಪರಿಸರ ಸಂರಕ್ಷಣಾ ಕಾಯಿದೆಯ ಸೆಕ್ಷನ್ 3 ರ ಅಡಿಯಲ್ಲಿ ತಂದಿತು. 2011 ರಲ್ಲಿ ನಿಯಮಗಳನ್ನು ಅಧಿಸೂಚಿಸಲಾಯಿತು.

2018 ರಲ್ಲಿ, ಕರಾವಳಿ ನಿಯಂತ್ರಣ ವಲಯಕ್ಕೆ ಸಂಬಂಧಿಸಿದ ಹೊಸ ನಿಯಮಗಳನ್ನು ಹೊರಡಿಸಲಾಗಿದೆ. ಇವು ಈ ಪ್ರದೇಶದಲ್ಲಿ ನಿರ್ಮಾಣದ ಮೇಲಿನ ಕೆಲವು ನಿರ್ಬಂಧಗಳನ್ನು ತೆಗೆದುಹಾಕುವುದು, ನಿರಾಕ್ಷೇಪಣಾ ಪ್ರಕ್ರಿಯೆಯನ್ನು ಸರಳೀಕರಿಸುವುದು ಮತ್ತು ಕರಾವಳಿ ಪ್ರದೇಶಗಳಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುವ ಗುರಿಯನ್ನು ಹೊಂದಿವೆ.

CRZ ನಿಯಮಗಳ ಪ್ರಕಾರ, ತೀರ ಪ್ರದೇಶಗಳಾದ ಸಮುದ್ರಗಳು, ಕೊಲ್ಲಿಗಳು, ನದಿಗಳು ಮತ್ತು ಹಿನ್ನೀರುಗಳು ಉಬ್ಬರವಿಳಿತದ ರೇಖೆಯಿಂದ (HTL) ಮತ್ತು ಕಡಿಮೆ ಉಬ್ಬರವಿಳಿತದ ರೇಖೆ (LTL) ಮತ್ತು ಭೂಪ್ರದೇಶದ 500 ಮೀಟರ್‌ಗಳಷ್ಟು ಅಲೆಗಳ ಪ್ರಭಾವಕ್ಕೆ ಒಳಗಾಗುತ್ತವೆ.

ಹೆಚ್ಚಿನ ಉಬ್ಬರವಿಳಿತದ ರೇಖೆಯನ್ನು ಕರಾವಳಿ ನಿಯಂತ್ರಣ ವಲಯ (CRZ) ಎಂದು ಘೋಷಿಸಲಾಗಿದೆ.

ಕರಾವಳಿ ವಲಯ ನಿರ್ವಹಣಾ ಯೋಜನೆಗಳನ್ನು (CZMP) ಸಿದ್ಧಪಡಿಸುವ ಮತ್ತು CRZ ನಿಯಮಗಳನ್ನು ಆಯಾ ಕರಾವಳಿ ವಲಯ ನಿರ್ವಹಣಾ ಪ್ರಾಧಿಕಾರಗಳ ಮೂಲಕ ಅನುಷ್ಠಾನಗೊಳಿಸುವ ಜವಾಬ್ದಾರಿಯನ್ನು ರಾಜ್ಯ ಸರ್ಕಾರಗಳು ಹೊಂದಿವೆ.

ಉದ್ದೇಶಗಳು:

ಈ ಮಾನದಂಡಗಳು ಸಮುದ್ರ ತೀರದಿಂದ ನಿರ್ದಿಷ್ಟ ದೂರದಲ್ಲಿ ದೊಡ್ಡ ನಿರ್ಮಾಣ, ಹೊಸ ಕೈಗಾರಿಕೆಗಳ ಸ್ಥಾಪನೆ, ಅಪಾಯಕಾರಿ ವಸ್ತುಗಳ ಸಂಗ್ರಹಣೆ ಅಥವಾ ವಿಲೇವಾರಿ, ಗಣಿಗಾರಿಕೆ, ಭೂ-ಬಳಕೆ ಬದಲಾವಣೆ ಮತ್ತು ಅಣೆಕಟ್ಟು ನಿರ್ಮಾಣದಂತಹ ಕೆಲವು ಚಟುವಟಿಕೆಗಳನ್ನು ನಿಷೇಧಿಸುತ್ತವೆ.

‘ನಿಯಂತ್ರಣ ವಲಯ’ದ ವ್ಯಾಖ್ಯಾನ:

ಎಲ್ಲಾ ನಿಬಂಧನೆಗಳಲ್ಲಿ, ನಿಯಂತ್ರಣ ವಲಯ (Regulation Zone) ವನ್ನು ಎತ್ತರದ ಉಬ್ಬರವಿಳಿತದ ರೇಖೆಯಿಂದ 500 ಮೀಟರ್‌ಗಳಷ್ಟು ಪ್ರದೇಶವೆಂದು ವ್ಯಾಖ್ಯಾನಿಸಲಾಗಿದೆ.

CRZ ನಲ್ಲಿ ನಿರ್ಬಂಧಗಳು:

CRZ ನಲ್ಲಿನ ನಿರ್ಬಂಧಗಳು ಪ್ರದೇಶದ ಜನಸಂಖ್ಯೆ, ಪರಿಸರ ಸೂಕ್ಷ್ಮತೆ, ತೀರದಿಂದ ದೂರ ಮತ್ತು ಪ್ರದೇಶವನ್ನು ನೈಸರ್ಗಿಕ ಉದ್ಯಾನವನ ಅಥವಾ ವನ್ಯಜೀವಿ ಪ್ರದೇಶವೆಂದು ಸೂಚಿಸಲಾಗಿದೆಯೇ ಎಂಬಂತಹ ಮಾನದಂಡಗಳನ್ನು ಅವಲಂಬಿಸಿರುತ್ತದೆ.

ಹೊಸ ನಿಯಮಗಳ ಪ್ರಕಾರ, ಮುಖ್ಯ ಭೂಭಾಗದ ಕರಾವಳಿಯ ಪಕ್ಕದಲ್ಲಿರುವ ಎಲ್ಲಾ ದ್ವೀಪಗಳು ಮತ್ತು ಮುಖ್ಯ ಭೂಭಾಗದಲ್ಲಿರುವ ಎಲ್ಲಾ ಹಿನ್ನೀರಿನ (Backwater) ದ್ವೀಪಗಳಿಗೆ 20 ಮೀಟರ್ ವರೆಗೆ ನೋ ಡೆವಲಪ್ಮೆಂಟ್ ಝೋನ್ ಎಂದು  ಘೋಷಿಸಲಾಗಿದೆ.

ಕರಾವಳಿ ನಿಯಂತ್ರಣ ವಲಯದ ವರ್ಗೀಕರಣ

CRZ ಅಧಿಸೂಚನೆಯ ಪ್ರಕಾರ, ಕರಾವಳಿ ಪ್ರದೇಶಗಳನ್ನು ನಾಲ್ಕು ವರ್ಗಗಳಾಗಿ ವರ್ಗೀಕರಿಸಲಾಗಿದೆ:

CRZ-I: ಇದು ಪರಿಸರ ಸೂಕ್ಷ್ಮ ಪ್ರದೇಶಗಳಾದ ಮ್ಯಾಂಗ್ರೋವ್ಸ್, ಹವಳಗಳು/ಹವಳದ ದಿಬ್ಬಗಳು, ಮರಳು ದಿಬ್ಬಗಳು, ರಾಷ್ಟ್ರೀಯ ಉದ್ಯಾನವನಗಳು, ಸಮುದ್ರ ಉದ್ಯಾನಗಳು, ಅಭಯಾರಣ್ಯಗಳು, ಮೀಸಲು ಅರಣ್ಯಗಳು, ವನ್ಯಜೀವಿ ಆವಾಸಸ್ಥಾನಗಳು, ಇತ್ಯಾದಿಗಳನ್ನು ಹೊಂದಿದೆ. ಮತ್ತು ಕಡಿಮೆ ಉಬ್ಬರವಿಳಿತದ ಸಾಲುಗಳು.

CRZ-II: ಇದು ತೀರದವರೆಗಿನ ಅಭಿವೃದ್ಧಿ ಹೊಂದಿದ ಪ್ರದೇಶಗಳನ್ನು ರೂಪಿಸುತ್ತದೆ, ಇದು ಅಸ್ತಿತ್ವದಲ್ಲಿರುವ ಪುರಸಭೆಯ ವ್ಯಾಪ್ತಿಯಲ್ಲಿ ಬರುತ್ತದೆ. ಈ ವಲಯದಲ್ಲಿ ಅನಧಿಕೃತ ರಚನೆಗಳ ಅಭಿವೃದ್ಧಿಗೆ ಅವಕಾಶವಿಲ್ಲ.

CRZ-III: ತುಲನಾತ್ಮಕವಾಗಿ ಅಡ್ಡಿಪಡಿಸದ ಮತ್ತು ಮೇಲಿನ ವರ್ಗಗಳ ಅಡಿಯಲ್ಲಿ ಬರದ ಗ್ರಾಮೀಣ ಪ್ರದೇಶಗಳಂತಹ ಪ್ರದೇಶಗಳನ್ನು ಈ ವಲಯದಲ್ಲಿ ಸೇರಿಸಲಾಗಿದೆ. ಈ ಕರಾವಳಿ ನಿಯಂತ್ರಣ ವಲಯದಲ್ಲಿ ಕೃಷಿ ಅಥವಾ ಕೆಲವು ಸಾರ್ವಜನಿಕ ಸೌಲಭ್ಯಗಳಿಗೆ ಸಂಬಂಧಿಸಿದ ನಿರ್ದಿಷ್ಟ ಚಟುವಟಿಕೆಗಳನ್ನು ಮಾತ್ರ ಅನುಮತಿಸಲಾಗಿದೆ.

CRZ- IV: ವಲಯವು ಉಬ್ಬರವಿಳಿತ-ಪ್ರಭಾವಿತ ಜಲಮೂಲಗಳ ಪ್ರದೇಶಗಳನ್ನು ಒಳಗೊಂಡಂತೆ ಕಡಿಮೆ ಅಲೆಗಳ ಸಾಲಿನಿಂದ ಪ್ರಾದೇಶಿಕ ಮಿತಿಗಳವರೆಗೆ ನೀರಿನ ಪ್ರದೇಶಗಳನ್ನು ರೂಪಿಸುತ್ತದೆ.

 

ಅನುಷ್ಠಾನ:

ಆದಾಗ್ಯೂ, ಕರಾವಳಿ ನಿಯಂತ್ರಣ ವಲಯಕ್ಕೆ (CRZ) ಸಂಬಂಧಿಸಿದ ನಿಯಮಗಳನ್ನು ಕೇಂದ್ರ ಪರಿಸರ ಸಚಿವಾಲಯ ರೂಪಿಸಿದೆ,ಆದರೆ, ಇವುಗಳನ್ನು ರಾಜ್ಯ ಸರ್ಕಾರಗಳು ಕರಾವಳಿ ವಲಯ ನಿರ್ವಹಣಾ ಪ್ರಾಧಿಕಾರಗಳ (Coastal Zone Management Authorities) ಮೂಲಕ ಅನುಷ್ಠಾನಗೊಳಿಸುತ್ತವೆ.

 


ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ಸಂಗತಿಗಳು:


  ದೋಡಾ ಬ್ರಾಂಡ್ ಉತ್ಪನ್ನ: 

  1. ಇತ್ತೀಚೆಗೆ, ‘ಲ್ಯಾವೆಂಡರ್’ (Lavender) ಅನ್ನು ‘ದೋಡಾ ಬ್ರಾಂಡ್ ಉತ್ಪನ್ನ’ (Doda Brand Product) ಎಂದು ಗೊತ್ತುಪಡಿಸಲಾಗಿದೆ.
  2. ‘ದೋಡಾ’ ಎಂಬುದು ಜಮ್ಮು ಮತ್ತು ಕಾಶ್ಮೀರದ ಭಾರತೀಯ ಕೇಂದ್ರಾಡಳಿತ ಪ್ರದೇಶದ ‘ದೋಡಾ ಜಿಲ್ಲೆಯ’ ಪಟ್ಟಣ ಮತ್ತು ಅಧಿಸೂಚಿತ ಪ್ರದೇಶ ಸಮಿತಿಯಾಗಿದೆ.
  3. ದೋಡಾವು ಭಾರತದ ನೇರಳೆ ಕ್ರಾಂತಿಯ (ಅರೋಮಾ ಮಿಷನ್) ಜನ್ಮಸ್ಥಳವಾಗಿದೆ ಮತ್ತು ಕೃಷಿ-ಸ್ಟಾರ್ಟ್ ಅಪ್ ಗಳು, ಉದ್ಯಮಿಗಳು ಮತ್ತು ರೈತರನ್ನು ಆಕರ್ಷಿಸಲು ಮೋದಿ ಸರ್ಕಾರದ ‘ಒಂದು ಜಿಲ್ಲೆ, ಒಂದು ಉತ್ಪನ್ನ’ ಉಪಕ್ರಮದ ಭಾಗವಾಗಿ ಲ್ಯಾವೆಂಡರ್ ಅನ್ನು ಪ್ರಚಾರ (promot) ಮಾಡಬಹುದು.

 

ಮಿನ್ಸ್ಕ್ ಒಪ್ಪಂದಗಳು (Minsk Agreements): 

ಇತ್ತೀಚೆಗೆ, ಯುಎಸ್ ಅಧಿಕಾರಿಗಳು ಉಕ್ರೇನ್ ಮೇಲೆ ಆಕ್ರಮಣ ಮಾಡದಂತೆ ರಷ್ಯಾವನ್ನು ಎಚ್ಚರಿಸಿದ್ದಾರೆ.ಪೂರ್ವ ಉಕ್ರೇನ್‌ನಲ್ಲಿ ರಷ್ಯಾದ ವಕ್ತಾರರು ಪ್ರತ್ಯೇಕತಾವಾದಿ ಯುದ್ಧವನ್ನು ಕೊನೆಗೊಳಿಸಲು ವಿನ್ಯಾಸಗೊಳಿಸಿದ 2014 ಮತ್ತು 2015 ರಲ್ಲಿ ಮಿನ್ಸ್ಕ್‌ನಲ್ಲಿ ಸಹಿ ಮಾಡಿದ ಒಪ್ಪಂದಗಳಿಗೆ ಬದ್ಧರಾಗಿರಲು ಎರಡು ದೇಶಗಳಿಗೆ ಒತ್ತಾಯಿಸಿದ್ದಾರೆ.

ಮೊದಲ ಮಿನ್ಸ್ಕ್ ಒಪ್ಪಂದ (Minsk I): ಉಕ್ರೇನ್ ಮತ್ತು ರಷ್ಯಾದ ಬೆಂಬಲಿತ ಪ್ರತ್ಯೇಕತಾವಾದಿಗಳು ಸೆಪ್ಟೆಂಬರ್ 2014 ರಲ್ಲಿ ಬೆಲಾರಸ್ ರಾಜಧಾನಿ ಮಿನ್ಸ್ಕ್ ನಲ್ಲಿ 12 ಅಂಶಗಳ ಕದನ ವಿರಾಮ ಒಪ್ಪಂದವನ್ನು ಅಂಗೀಕರಿಸಿದರು.

  1. ಅದರ ನಿಬಂಧನೆಗಳು ಕೈದಿಗಳ ವಿನಿಮಯ, ಮಾನವೀಯ ನೆರವು ವಿತರಣೆ ಮತ್ತು ಭಾರೀ ಶಸ್ತ್ರಾಸ್ತ್ರಗಳನ್ನು ನಿಯೋಜನೆಯಿಂದ ತೆಗೆದುಹಾಕುವುದು.
  2. ಎರಡೂ ಪಕ್ಷಗಳು ಈ ಒಪ್ಪಂದವನ್ನು ಉಲ್ಲಂಘನೆ ಮಾಡುವುದರೊಂದಿಗೆ ಒಪ್ಪಂದವು ಮುರಿದುಬಿದ್ದಿತು.

ಎರಡನೇ ಮಿನ್ಸ್ಕ್ ಒಪ್ಪಂದ (Minsk II):

2015 ರಲ್ಲಿ, ಫ್ರಾನ್ಸ್ ಮತ್ತು ಜರ್ಮನಿಯ ಮಧ್ಯಸ್ಥಿಕೆಯಲ್ಲಿ ‘ಎರಡನೇ ಮಿನ್ಸ್ಕ್ ಶಾಂತಿ ಒಪ್ಪಂದ’ಕ್ಕೆ ಸಹಿ ಹಾಕಿದ ನಂತರ ಮುಕ್ತ ಸಂಘರ್ಷವನ್ನು ತಪ್ಪಿಸಲಾಯಿತು.

  1. ಈ ಒಪ್ಪಂದವನ್ನು ಬಂಡುಕೋರ ಪ್ರದೇಶಗಳಲ್ಲಿ ಹೋರಾಟವನ್ನು ಕೊನೆಗೊಳಿಸಲು ಮತ್ತು ಉಕ್ರೇನಿಯನ್ ರಾಷ್ಟ್ರೀಯ ಪಡೆಗಳಿಗೆ ಗಡಿಯನ್ನು ಹಸ್ತಾಂತರಿಸಲು ವಿನ್ಯಾಸಗೊಳಿಸಲಾಗಿದೆ.


  • Join our Official Telegram Channel HERE for Motivation and Fast Updates
  • Subscribe to our YouTube Channel HERE to watch Motivational and New analysis videos

[ad_2]

Leave a Comment