[ad_1]
ಪರಿವಿಡಿ:
ಸಾಮಾನ್ಯ ಅಧ್ಯಯನ ಪತ್ರಿಕೆ 1 :
1. ಗಂಗೂ ಬಾಯಿ ಕಾಠಿಯಾವಾಡಿ.
ಸಾಮಾನ್ಯ ಅಧ್ಯಯನ ಪತ್ರಿಕೆ 2:
1. ಸಾರ್ವಜನಿಕ ಸುವ್ಯವಸ್ಥೆ: ಸ್ವಾತಂತ್ರ್ಯಗಳ ಮೇಲೆ ನಿಯಂತ್ರಣ ವಿಧಿಸುವ ಸಾಂವಿಧಾನಿಕ ನಿಬಂಧನೆ.
2. ಚುನಾವಣಾ ಚಿಹ್ನೆಗಳು.
3. ಫೈನಾನ್ಶಿಯಲ್ ಆಕ್ಷನ್ ಟಾಸ್ಕ್ ಫೋರ್ಸ್ (FATF).
ಸಾಮಾನ್ಯ ಅಧ್ಯಯನ ಪತ್ರಿಕೆ 3:
1. ನೇಪಾಳವು ಭಾರತದ UPI ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವ ಮೊದಲ ವಿದೇಶವಾಗಿದೆ.
2. ನಾಸಾದ ಪರ್ಸೇವೆರನ್ಸ್ ರೋವರ್.
ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ಸಂಗತಿಗಳು:
1. ಕರ್ನಾಟಕ ಸಮಿತಿಯೊಂದು ‘ಕಟ್ ವೇಸ್ಟ್ ಟಾಸ್ಕ್ ಫೋರ್ಸ್’ಗೆ ಶಿಫಾರಸು ಮಾಡಿದೆ.
2. ಪೊಲೀಸ್ ಕಿರುಕುಳದಿಂದ LGBTQIA+ ಸಮುದಾಯವನ್ನು ರಕ್ಷಿಸಲು ತಮಿಳುನಾಡಿನ ನಿಯಮ.
3. ಮ್ಯೂನಿಚ್ ಭದ್ರತಾ ಸಮ್ಮೇಳನ.
ಸಾಮಾನ್ಯ ಅಧ್ಯಯನ ಪತ್ರಿಕೆ : 1
ವಿಷಯಗಳು: 18ನೇ ಶತಮಾನದ ಮಧ್ಯಭಾಗದಿಂದ ಇಂದಿನವರೆಗೆ ಆಧುನಿಕ ಭಾರತದ ಇತಿಹಾಸ-ಮಹತ್ವದ ಘಟನೆಗಳು ವ್ಯಕ್ತಿಗಳು ಮತ್ತು ಸಮಸ್ಯೆಗಳು.
ಗಂಗೂಬಾಯಿ ಕಾಠಿಯಾವಾಡಿ:
(Gangubai Kathiawadi)
ಸಂದರ್ಭ:
ನಟಿ ಆಲಿಯಾ ಭಟ್ ಮುಖ್ಯಪಾತ್ರದಲ್ಲಿ ಅಭಿನಯಿಸಿದ ಚಿತ್ರವೊಂದು ಕಾನೂನು ಕ್ರಮವನ್ನು ಎದುರಿಸುತ್ತಿದೆ, ಏಕೆಂದರೆ
ಗಂಗೂಬಾಯಿ ಕಾಠಿಯಾವಾಡಿ (Gangubai Kathiawadi) ಅವರ ಕುಟುಂಬದ ಸದಸ್ಯರು ಎಂದು ಹೇಳಿಕೊಳ್ಳುವ ವ್ಯಕ್ತಿಗಳು ಚಿತ್ರದಲ್ಲಿ ಗಂಗೂಬಾಯಿ ಅವರ ಪಾತ್ರ ಚಿತ್ರಣವನ್ನು ವಿರೋಧಿಸಿದ್ದಾರೆ.
ಯಾರು ಈ ಗಂಗೂಬಾಯಿ ಕಾಠಿಯಾವಾಡಿ?
ಪೂರ್ಣ ಹೆಸರು: ಗಂಗಾ ಹರ್ಜೀವನದಾಸ್ ಕಾಠಿಯಾವಾಡಿ
ಮೂಲ: ಗುಜರಾತ್
ಖ್ಯಾತಿ: 50 ಮತ್ತು 60 ರ ದಶಕದಲ್ಲಿ ಮುಂಬೈನ ಪ್ರಸಿದ್ಧ ಮತ್ತು ಪ್ರಭಾವಶಾಲಿ ವೇಶ್ಯಾಗೃಹದ ಮಾಲೀಕರಲ್ಲಿ ಒಬ್ಬರು. ಅವರು ಲೈಂಗಿಕ ಕಾರ್ಯಕರ್ತರ ಕಲ್ಯಾಣ ಮತ್ತು ಹಕ್ಕುಗಳಿಗಾಗಿ ಹೋರಾಡಿದ್ದರು ಮತ್ತು ಅವರ ಉನ್ನತಿಗಾಗಿ ಕೆಲಸ ಮಾಡಿದ್ದರು.
ಗಂಗೂಬಾಯಿ ಅವರ ಜೀವನದ ಸಂಕ್ಷಿಪ್ತ ಇತಿಹಾಸ:
‘ಗಂಗೂಬಾಯಿ ಕಾಠಿಯಾವಾಡಿ’ಯನ್ನು ಆಕೆಯ ಪತಿ ವೇಶ್ಯಾಗೃಹದ ಮಾಲೀಕರಿಗೆ ಮಾರಾಟ ಮಾಡಿದ್ದನು ಎಂದು ಹೇಳಲಾಗುತ್ತದೆ.
ನಂತರ, ಗಂಗೂಬಾಯಿ ಕ್ರಮೇಣ ತನ್ನದೇ ಆದ ವೇಶ್ಯಾಗೃಹವನ್ನು ಪ್ರಾರಂಭಿಸಿದಳು.
ಅವರು ವಾಣಿಜ್ಯ ಲೈಂಗಿಕ ಕಾರ್ಯಕರ್ತರ ಹಕ್ಕುಗಳಿಗಾಗಿ ಹೊರಾಡಿದ್ದಕ್ಕೆ ಹೆಸರುವಾಸಿಯಾಗಿದ್ದಾರೆ.
ನಿಸ್ಸಂಶಯವಾಗಿ, ಗಂಗೂಬಾಯಿ ಈ ವಿಷಯದ ಬಗ್ಗೆ ರಾಜಕಾರಣಿಗಳೊಂದಿಗೆ ಸಾರ್ವಜನಿಕ ಅಭಿಪ್ರಾಯವನ್ನು ತನ್ನ ಪರವಾಗಿ ಸೆಳೆದಿದ್ದಾರೆ.
ಅವರ ಜೀವನಾಧಾರಿತ ಚಿತ್ರಕ್ಕೆ ಯಾಕೆ ವಿರೋಧ ವ್ಯಕ್ತವಾಗುತ್ತಿದೆ?
‘ಗಂಗೂಬಾಯಿ ಕಾಠಿಯಾವಾಡಿ’ ಅವರ ಜೀವನಾಧಾರಿತ ಚಿತ್ರಕ್ಕೆ ಆಕೆಯ ದತ್ತು ಮಕ್ಕಳು ವಿರೋಧ ವ್ಯಕ್ತಪಡಿಸಿದ್ದು, ಚಿತ್ರ ಬಿಡುಗಡೆಗೆ ತಡೆ ನೀಡುವಂತೆ ಒತ್ತಾಯಿಸಿದ್ದಾರೆ.
ಚಿತ್ರದಲ್ಲಿ ಆಕೆಯನ್ನು ‘ವೇಶ್ಯೆ’ ಮತ್ತು ‘ಮಾಫಿಯಾ ಕ್ವೀನ್’ ರೀತಿಯಲ್ಲಿ ಚಿತ್ರಿಸಲಾಗಿದೆ ಎಂದು ಅರ್ಜಿದಾರರು ವಾದಿಸಿದ್ದಾರೆ.
ಚಿತ್ರದ ಟ್ರೇಲರ್ ಬಿಡುಗಡೆಯಾದ ನಂತರ, ಅವರ ಖ್ಯಾತಿಗೆ ಧಕ್ಕೆಯಾಗಿದೆ ಮತ್ತು ಕಾಮಾಟಿಪುರದ ರೆಡ್‌ಲೈಟ್ ಪ್ರದೇಶಗಳಲ್ಲಿ ವಾಸಿಸುವ ಅವರ ಕುಟುಂಬದ ಮಹಿಳಾ ಸದಸ್ಯರು ಪುರುಷರಿಂದ ಆಕ್ಷೇಪಾರ್ಹ ಮತ್ತು ಅವಹೇಳನಕಾರಿ ನಿಂದನೆಗೆ ಗುರಿಯಾಗಿದ್ದಾರೆ ಎಂದು ಅವರು ಹೇಳುತ್ತಾರೆ.
ಲೈಂಗಿಕ ಕಾರ್ಯಕರ್ತರು/ಸೆಕ್ಸ್ ವರ್ಕರ್‌ಗಳ ಮುಂದಿರುವ ಸವಾಲುಗಳು:
ಲೈಂಗಿಕ ವೃತ್ತಿಯನ್ನು (Sex work) “ಕಾನೂನುಬದ್ಧ ಕಾರ್ಯ” ಎಂದು ಗುರುತಿಸಲಾಗಿಲ್ಲ.
ಲೈಂಗಿಕ ಕಾರ್ಯಕರ್ತೆಯರು ಸರ್ಕಾರ ನಡೆಸುವ ಪರಿಹಾರ ಕಾರ್ಯಕ್ರಮಗಳಿಂದ ಲಾಭ ಪಡೆಯಲು ಅರ್ಹರಲ್ಲ.
ಲೈಂಗಿಕ ಕಾರ್ಯಕರ್ತರ ರಕ್ಷಣೆಗೆ ಸಂಬಂಧಿಸಿದ ನಿಬಂಧನೆಗಳು:
1956 ರಲ್ಲಿ, ‘ಮಹಿಳೆಯರು ಮತ್ತು ಮಕ್ಕಳ ಅನೈತಿಕ ವ್ಯಾಪಾರ ನಿಗ್ರಹ ಕಾಯ್ದೆ'(The Suppression of Immoral Traffic in Women and Children Act) ಯನ್ನು ಜಾರಿಗೆ ತರಲಾಯಿತು.
ನಂತರ, ಈ ಕಾನೂನಿಗೆ ತಿದ್ದುಪಡಿಗಳನ್ನು ಮಾಡಲಾಯಿತು ಮತ್ತು ಕಾಯಿದೆಯ ಹೆಸರನ್ನು ‘ಅನೈತಿಕ ವ್ಯಾಪಾರ (ತಡೆಗಟ್ಟುವಿಕೆ) ಕಾಯಿದೆ’ ಎಂದು ಬದಲಾಯಿಸಲಾಯಿತು.
- ಪ್ರಸ್ತುತ, ಇದು ಭಾರತದಲ್ಲಿ ‘ಸೆಕ್ಸ್ ವರ್ಕ್’ ಅನ್ನು ಅಥವಾ ಲೈಂಗಿಕ ಕೆಲಸವನ್ನು ನಿಯಂತ್ರಿಸುವ ಕಾನೂನಾಗಿದೆ.
ಸಂವಿಧಾನದ ಪರಿಚ್ಛೇದ 23(1) ರ ನಿಬಂಧನೆಗಳ ಪ್ರಕಾರ, ಮಾನವ ದುರ್ವ್ಯವಹಾರವನ್ನು ಮತ್ತು ಬೇಗರ್ ಮತ್ತು ಅದೇ ರೀತಿಯ ಬಲವಂತದ ದುಡಿಮೆಯನ್ನು ನಿಷೇಧಿಸಲಾಗಿದೆ ಮತ್ತು ಈ ನಿಬಂಧನೆಯ ಯಾವುದೇ ಉಲ್ಲಂಘನೆಯು ಕಾನೂನಿನ ಪ್ರಕಾರ ಶಿಕ್ಷಾರ್ಹ ಅಪರಾಧವಾಗಿದೆ.
ಸಂವಿಧಾನದ ಪರಿಚ್ಛೇದ 23(2) ರ ನಿಬಂಧನೆಗಳ ಪ್ರಕಾರ, ಸಾರ್ವಜನಿಕ ಉದ್ದೇಶಗಳಿಗಾಗಿ ರಾಜ್ಯವು ಕಡ್ಡಾಯ ಸೇವೆಯನ್ನು ವಿಧಿಸುವುದರಿಂದ ರಾಜ್ಯವನ್ನು ಯಾವುದು ಪ್ರತಿಬಂಧಿಸತಕ್ಕುದಲ್ಲ ಮತ್ತು ಅಂತ ಸೇವೆಯನ್ನು ವಿಧಿಸುವಾಗ ರಾಜ್ಯವು ಕೇವಲ ಧರ್ಮ, ಮೂಲ ವಂಶ, ಜಾತಿ ಅಥವಾ ವರ್ಗ ಅಥವಾ ಅವುಗಳಲ್ಲಿ ಯಾವುದೇ ಒಂದರ ಆಧಾರದ ಮೇಲೆ ತಾರತಮ್ಯ ಮಾಡುವಂತಿಲ್ಲ.
ವೇಷವಾಟಿಕೆಯನ್ನು ಕಾನೂನುಬದ್ಧಗೊಳಿಸುವ ರಿಂದ ಆಗುವ ಪ್ರಯೋಜನ ಮತ್ತು ಕೆಡಕು:
- ವೇಶ್ಯಾವಾಟಿಕೆಯನ್ನು ಕಾನೂನುಬದ್ಧಗೊಳಿಸಿದರೆ, ವೇಶ್ಯಾಗೃಹವನ್ನು ನಿರ್ವಹಿಸುವ ಜವಾಬ್ದಾರಿಯನ್ನು ರಾಜ್ಯವು ಹೊಂದಿರುತ್ತದೆ ಮತ್ತು ಅಧಿಕೃತ ವ್ಯಕ್ತಿಗಳಿಗೆ ಪರವಾನಗಿಗಳನ್ನು ನೀಡುವ ಮೂಲಕ ರಾಜ್ಯವು ಈ ಬಾಧ್ಯತೆಯನ್ನು ಪೂರೈಸುತ್ತದೆ.
- ಈ ಸಂದರ್ಭದಲ್ಲಿ, ರಾಜ್ಯವು ವೇಶ್ಯೆಯರ ವಯಸ್ಸು, ಗ್ರಾಹಕರ ಡೇಟಾಬೇಸ್, ವೇಶ್ಯೆಯರಿಗೆ ಸಾಕಷ್ಟು ಸಂಭಾವನೆ ಮತ್ತು ವೈದ್ಯಕೀಯ ಸೌಲಭ್ಯಗಳ ಬಗ್ಗೆ ಮಾರ್ಗಸೂಚಿಗಳನ್ನು ಸಿದ್ಧಪಡಿಸುತ್ತದೆ.
- ಈ ರೀತಿಯಾಗಿ, ವೇಶ್ಯೆಯರು ವೈದ್ಯಕೀಯ ಆರೈಕೆ, ತಮ್ಮ ಮಕ್ಕಳ ಶಿಕ್ಷಣ, ಶೋಷಣೆಯ ವಿರುದ್ಧದ ಮತ್ತು ಅತ್ಯಾಚಾರದ ವಿರುದ್ಧ ರಕ್ಷಣೆ ಮುಂತಾದ ಕೆಲವು ಹಕ್ಕುಗಳನ್ನು ಪಡೆಯಬಹುದು.
- ಸೆಕ್ಸ್ ರಾಕೆಟ್ ಕಾರ್ಯಾಚರಣೆಗಳು, ರಹಸ್ಯ ಮತ್ತು ಬೀದಿ ವೇಶ್ಯಾವಾಟಿಕೆ, ವೇಶ್ಯೆಯರ ದುರುಪಯೋಗ ಇತ್ಯಾದಿಗಳನ್ನು ನಿರ್ಮೂಲನೆ ಮಾಡಲು ಈ ವಿಧಾನವು ಸಹಾಯಕವಾಗಿದೆ.
- ತಮ್ಮ ಜೀವನೋಪಾಯವನ್ನು ಕಳೆದುಕೊಂಡಿರುವ ಅಥವಾ ವೇಶ್ಯಾವಾಟಿಕೆಗೆ ಬಲವಂತವಾಗಿ ನೂಕಲ್ಪಟ್ಟಿರುವ ಈ ವೃತ್ತಿಯನ್ನು ಬಿಡಲು ಸಿದ್ಧರಿರುವ ವೇಶ್ಯೆಯರಿಗಾಗಿ ಭದ್ರತಾ ಮನೆಗಳನ್ನು ಸ್ಥಾಪಿಸಬೇಕು.
- ಅಲ್ಲದೆ, ಸರ್ಕಾರವು ಈ ವೇಶ್ಯೆಯರಿಗೆ ತರಬೇತಿ ಮತ್ತು ಮೂಲಭೂತ ಶಿಕ್ಷಣವನ್ನು ನೀಡಬಹುದು ಇದರಿಂದ ಅವರು ಹಣ ಸಂಪಾದಿಸಲು ಮತ್ತು ತಮ್ಮ ಜೀವನೋಪಾಯಕ್ಕಾಗಿ ದುಡಿಮೆಯ ಇತರ ಮಾರ್ಗಗಳನ್ನು ಅಳವಡಿಸಿಕೊಳ್ಳಬಹುದಾಗಿದೆ.
ಕೆಡಕು/ದೋಷ:
- ಮತ್ತೊಂದೆಡೆ, ವೇಶ್ಯಾವಾಟಿಕೆಯನ್ನು ಕಾನೂನುಬದ್ಧಗೊಳಿಸುವುದು ವೇಶ್ಯಾವೃತ್ತಿಗೆ ಮಾನ್ಯತೆ ನೀಡಲಾಗಿದೆ ಎಂದು ತಪ್ಪಾಗಿ ಅರ್ಥೈಸುವ ಸಾಧ್ಯತೆ ಇರುತ್ತದೆ.
- ವೇಶ್ಯಾವಾಟಿಕೆಯನ್ನು ಕಾನೂನುಬದ್ಧಗೊಳಿಸುವುದರಿಂದ ವೇಶ್ಯೆಯರಿಗೆ ಹಣ ಸಂಪಾದಿಸಲು ದಾರಿ ಮಾಡಿಕೊಡಬಹುದು, ಆ ಮೂಲಕ ಹೆಚ್ಚಿನ ಮಹಿಳೆಯರು ವೇಶ್ಯಾವಾಟಿಕೆಯನ್ನು ಆಯ್ಕೆ ಮಾಡಿಕೊಳ್ಳಲು ಪ್ರೋತ್ಸಾಹಿಸಬಹುದು.
- ಇದು ಸರ್ಕಾರಕ್ಕೆ ಆದಾಯ ತರುವ ಉದ್ಯಮವಾಗಬಲ್ಲ ಹೆಚ್ಚಿನ ಸಾಧ್ಯತೆಯಿದೆ.
ಸಾಮಾನ್ಯ ಅಧ್ಯಯನ ಪತ್ರಿಕೆ : 2
ವಿಷಯಗಳು: ಸಂವಿಧಾನ- ಐತಿಹಾಸಿಕ ಆಧಾರಗಳು, ವಿಕಸನ, ವೈಶಿಷ್ಟ್ಯಗಳು, ತಿದ್ದುಪಡಿಗಳು, ಮಹತ್ವದ ನಿಬಂಧನೆಗಳು ಮತ್ತು ಮೂಲ ರಚನೆ.
ಸಾರ್ವಜನಿಕ ಸುವ್ಯವಸ್ಥೆ: ಸ್ವಾತಂತ್ರ್ಯಗಳ ಮೇಲೆ ನಿಯಂತ್ರಣ ವಿಧಿಸುವ ಸಾಂವಿಧಾನಿಕ ನಿಬಂಧನೆ:
(Public order: A constitutional provision for curbing freedoms)
ಸಂದರ್ಭ:
‘ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳು ಧರಿಸುವ ಹಿಜಾಬ್ ಮೇಲೆ ರಾಜ್ಯ ಸರ್ಕಾರ ವಿಧಿಸಿರುವ ನಿಷೇಧ’ದ ಸಾಂವಿಧಾನಿಕತೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್ ನಡೆಸುತ್ತಿದೆ.
- ಕಳೆದ ವಿಚಾರಣೆಯಲ್ಲಿ, ‘ಸಾರ್ವಜನಿಕ ಸುವ್ಯವಸ್ಥೆ’ (Public order) ಯ ಉಲ್ಲಂಘನೆಯ ಆಧಾರದ ಮೇಲೆ, ವಿಧಿಸಲಾದ ನಿಷೇಧವನ್ನು ರಾಜ್ಯವು ಸಮರ್ಥಿಸಬಹುದೇ? ಎಂಬ ವಾದವನ್ನು ನ್ಯಾಯಾಧೀಶರು ಆಲಿಸಿದರು.
ಸಾರ್ವಜನಿಕ ಸುವ್ಯವಸ್ಥೆ ಎಂದರೇನು?
ಸಂವಿಧಾನದ ಪರಿಚ್ಛೇದ 25 ರ ನಿಬಂಧನೆಗಳ ಪ್ರಕಾರ, ಅಂತಃಸಾಕ್ಷಿ ಸ್ವಾತಂತ್ರ್ಯ ಮತ್ತು ಧರ್ಮದ ಅಬಾಧಿತ ಅವಲಂಬನೆ, ಆಚರಣೆ ಮತ್ತು ಪ್ರಚಾರ; ಸಾರ್ವಜನಿಕ ಸುವ್ಯವಸ್ಥೆ, ನೈತಿಕತೆ ಮತ್ತು ಆರೋಗ್ಯ ಇವುಗಳಿಗೆ ಹಾಗೂ ಈ ಭಾಗದ ಇತರ ಉಪಬಂಧಗಳಿಗೆ ಒಳಪಟ್ಟು ಎಲ್ಲಾ ವ್ಯಕ್ತಿಗಳು ಸಮಾನ ರೀತಿಯಲ್ಲಿ ಅಂತಃಸಾಕ್ಷಿ ಸ್ವಾತಂತ್ರ್ಯಕ್ಕೆ ಹಕ್ಕುಳ್ಳವರಾಗಿರುತ್ತಾರೆ ಮತ್ತು ಅಬಾಧಿತವಾಗಿ ಧರ್ಮವನ್ನು ಅವಲಂಬಿಸುವ, ಆಚರಿಸುವ ಮತ್ತು ಪ್ರಚಾರ ಮಾಡುವ ಹಕ್ಕನ್ನು ಪಡೆದಿರುತ್ತಾರೆ.
- ಆದ್ದರಿಂದ, ಧಾರ್ಮಿಕ ಸ್ವಾತಂತ್ರ್ಯವನ್ನು ರಾಜ್ಯವು ನಿರ್ಬಂಧಿಸಬಹುದಾದ ಮೂರು ಆಧಾರಗಳಲ್ಲಿ ಸಾರ್ವಜನಿಕ ಸುವ್ಯವಸ್ಥೆಯೂ ಒಂದಾಗಿದೆ. ಇದು ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಇತರ ಮೂಲಭೂತ ಹಕ್ಕುಗಳನ್ನು ನಿರ್ಬಂಧಿಸುವ ಆಧಾರಗಳಲ್ಲಿ ಒಂದಾಗಿದೆ.
ಸಾರ್ವಜನಿಕ ಸುವ್ಯವಸ್ಥೆಯ ಅಂಶಗಳ ಮೇಲೆ ಕಾನೂನು ಮಾಡುವ ಅಧಿಕಾರ?
ಸಾರ್ವಜನಿಕ ಸುವ್ಯವಸ್ಥೆಯನ್ನು ಸಾಮಾನ್ಯವಾಗಿ ಸಾರ್ವಜನಿಕ ಶಾಂತಿ ಮತ್ತು ಸುರಕ್ಷತೆಯೊಂದಿಗೆ ಸಮನಾಗಿ ಪರಿಗಣಿಸಲಾಗುತ್ತದೆ. ಸಂವಿಧಾನದ ಏಳನೇ ಅನುಸೂಚಿಯ ಪಟ್ಟಿ 2 ರ ಪ್ರಕಾರ, ಸಾರ್ವಜನಿಕ ಸುವ್ಯವಸ್ಥೆಯ ಅಂಶಗಳ ಮೇಲೆ ಕಾನೂನುಗಳನ್ನು ಮಾಡುವ ಅಧಿಕಾರವು ರಾಜ್ಯಗಳಿಗೆ ಇರುತ್ತದೆ.
ಹಿಜಾಬ್ ನಿಷೇಧವು ಸಾರ್ವಜನಿಕ ಸುವ್ಯವಸ್ಥೆಗೆ ಹೇಗೆ ಸಂಬಂಧಿಸಿದೆ?
ಇತ್ತೀಚೆಗಷ್ಟೇ ‘ಕರ್ನಾಟಕ ಶಿಕ್ಷಣ ಕಾಯ್ದೆ 1983’ ಅಡಿಯಲ್ಲಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
- ಅದರ ಪ್ರಕಾರ, “ಏಕತೆ” ಮತ್ತು “ಸಮಗ್ರತೆ”, ಯೊಂದಿಗೆ “ಸಾರ್ವಜನಿಕ ಸುವ್ಯವಸ್ಥೆ”ಯೂ, ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳಿಗೆ ಸ್ಕಾರ್ಫ್ / ಹಿಜಾಬ್ ಧರಿಸಲು ಅವಕಾಶ ನೀಡದಿರಲು ಒಂದು ಕಾರಣವಾಗಿದೆ.
- ಆದರೆ, ವಿದ್ಯಾರ್ಥಿಗಳು ಹಿಜಾಬ್ ಧರಿಸುವುದರಿಂದ ಮಾತ್ರ ಸಾರ್ವಜನಿಕ ಸುವ್ಯವಸ್ಥೆಯ ಸಮಸ್ಯೆ ಹೇಗೆ ಉಂಟಾಗುತ್ತದೆ ಎಂಬುದನ್ನು ಸಾಬೀತುಪಡಿಸುವಂತೆ ಅರ್ಜಿದಾರರು ರಾಜ್ಯವನ್ನು ಕೇಳಿದ್ದಾರೆ.ಇದು ಯಾವುದೇ ಧಾರ್ಮಿಕ ಪ್ರಕ್ರಿಯೆಯ ಭಾಗವಾಗಿ ಅಥವಾ ಅಪಾಯಕಾರಿ ಶಸ್ತ್ರಾಸ್ತ್ರಗಳ ಪ್ರದರ್ಶನದ ಭಾಗವಾಗಿ ಜನರು ಸಾರ್ವಜನಿಕವಾಗಿ ಸೇರುವ ಸಂದರ್ಭವಲ್ಲ.
ನ್ಯಾಯಾಲಯಗಳಿಂದ ‘ಸಾರ್ವಜನಿಕ ಸುವ್ಯವಸ್ಥೆ’ ಯ ವ್ಯಾಖ್ಯಾನ:
ನ್ಯಾಯಾಲಯಗಳು ವಿಶಾಲವಾಗಿ ‘ಸಾರ್ವಜನಿಕ ಆದೇಶ’ವನ್ನು ಕೆಲವು ವ್ಯಕ್ತಿಗಳಿಗಿಂತ ಹೆಚ್ಚಾಗಿ ಸಮುದಾಯದ ಮೇಲೆ ಪರಿಣಾಮ ಬೀರುವ ಘಟನೆಗಳು ಅಥವಾ ಕ್ರಿಯೆಗಳು ಎಂದು ವ್ಯಾಖ್ಯಾನಿಸಿವೆ.
- ರಾಮ್ ಮನೋಹರ್ ಲೋಹಿಯಾ VS ಸ್ಟೇಟ್ ಆಫ್ ಬಿಹಾರ್ (1965) ರಾಜ್ಯದ, ‘ಸಾರ್ವಜನಿಕ ಸುವ್ಯವಸ್ಥೆ’ ಪ್ರಕರಣದಲ್ಲಿ, ಸಮುದಾಯ ಅಥವಾ ಸಾರ್ವಜನಿಕರು ಒಂದು ನಿರ್ದಿಷ್ಟ ಕ್ರಿಯೆಯಿಂದ ಪ್ರಭಾವಿತರಾಗುವ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.
ಕರ್ನಾಟಕದ ಪ್ರಕರಣ:
ಕರ್ನಾಟಕದಲ್ಲಿ ನಡೆಯುತ್ತಿರುವ ಹಿಜಾಬ್-ನಿಷೇಧದ ಸಂಚಿಕೆಯನ್ನು ಅರ್ಥಮಾಡಿಕೊಳ್ಳಲು, ಯಾರೇ ಒಬ್ಬರು ತ್ರೈ ಕೇಂದ್ರೀಕೃತ ವಲಯಗಳನ್ನು ಕಲ್ಪಿಸಿಕೊಳ್ಳಬೇಕು,
ದೊಡ್ಡ ವೃತ್ತವು ‘ಕಾನೂನು ಮತ್ತು ಸುವ್ಯವಸ್ಥೆ’ ಪ್ರತಿನಿಧಿಸುತ್ತದೆ, ಮುಂದಿನದು ‘ಸಾರ್ವಜನಿಕ ಸುವ್ಯವಸ್ಥೆ’ ಮತ್ತು ಚಿಕ್ಕದು ‘ರಾಜ್ಯದ ಭದ್ರತೆ’ ಪ್ರತಿನಿಧಿಸುತ್ತದೆ.
ವಿಷಯಗಳು: ಸರ್ಕಾರದ ವಿವಿಧ ಅಂಗಗಳ ನಡುವೆ ಅಧಿಕಾರ ವಿಭಜನೆ, ವಿವಾದ ಪರಿಹಾರ ಕಾರ್ಯವಿಧಾನಗಳು ಮತ್ತು ಸಂಸ್ಥೆಗಳು.
ಚುನಾವಣಾ ಚಿಹ್ನೆಗಳು:
(Election symbols)
ಸಂದರ್ಭ:
ಇತ್ತೀಚೆಗೆ, ಉತ್ತರ ಪ್ರದೇಶದಲ್ಲಿ ಚುನಾವಣಾ ಪ್ರಚಾರ ಭಾಷಣದ ಸಮಯದಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು 2008 ರ ಅಹಮದಾಬಾದ್ ಸ್ಫೋಟಗಳು ಮತ್ತು ಸಮಾಜವಾದಿ ಪಕ್ಷದ ನಡುವೆ ಅದರ ಚುನಾವಣಾ ಚಿಹ್ನೆಯಾದ ಸೈಕಲ್ ನ ಕಾರಣದಿಂದ ಸಂಬಂಧ ವಿರಬಹುದು ಎಂದು ಸೂಚ್ಯವಾಗಿ ಕುಟುಕಿದರು.
ಏನಿದು ಪ್ರಕರಣ?
- 2006 ರ ಮಾಲೆಗಾಂವ್ ಸ್ಫೋಟದಲ್ಲಿ, ಬೈಸಿಕಲ್ಗಳನ್ನು ಬಾಂಬ್ ಸಾಗಿಸುವ ವಾಹಕವಾಗಿ ಮೊದಲ ಬಾರಿಗೆ ಬಳಸಲಾಯಿತು. ಸ್ಫೋಟದ ಸಂಚು ಮಾಡಿದ ದುಷ್ಕರ್ಮಿಗಳು ಎರಡು ಬಾಂಬ್‌ಗಳನ್ನು ಪ್ರತ್ಯೇಕ ಸೈಕಲ್‌ಗಳಲ್ಲಿ ಕಟ್ಟಿ ಪಟ್ಟಣದಲ್ಲಿ ಇರಿಸಿದ್ದರು.
- ಪ್ರಪಂಚದಾದ್ಯಂತದ ಭಯೋತ್ಪಾದಕ ಗುಂಪುಗಳು ಬಾಂಬ್‌ಗಳನ್ನು ಇರಿಸಲು ಬೈಸಿಕಲ್‌ಗಳನ್ನು ಬಹಳ ಹಿಂದಿನಿಂದಲೂ ಬಳಸುತ್ತಿವೆ. ಬೈಸಿಕಲ್‌ಗಳನ್ನು ಜಗತ್ತಿನಲ್ಲಿ ಎಲ್ಲಿ ಬೇಕಾದರೂ ಸುಲಭವಾಗಿ ಮತ್ತು ಅಗ್ಗದ ದರದಲ್ಲಿ ಖರೀದಿಸಬಹುದು, ಮತ್ತು ಸ್ಫೋಟದ ನಂತರ, ಅದರ ಚೂರುಗಳು ಮತ್ತು ಲೋಹದ ಚೂಪಾದ ತುಂಡುಗಳು ಸ್ಫೋಟದ ಪರಿಣಾಮವನ್ನು ಹೆಚ್ಚಿಸುತ್ತವೆ.
ರಾಜಕೀಯ ಪಕ್ಷಗಳಿಗೆ ಚಿಹ್ನೆಗಳನ್ನು ಹೇಗೆ ನೀಡಲಾಗುತ್ತದೆ?
ಚುನಾವಣಾ ಆಯೋಗದ ಮಾರ್ಗಸೂಚಿಗಳ ಪ್ರಕಾರ – ರಾಜಕೀಯ ಪಕ್ಷಕ್ಕೆ ಚುನಾವಣಾ ಚಿಹ್ನೆಯನ್ನು ಹಂಚಿಕೆ ಮಾಡಲು ಈ ಕೆಳಗಿನ ವಿಧಾನವನ್ನು ಅನುಸರಿಸಲಾಗುತ್ತದೆ:
- ನಾಮಪತ್ರ ಸಲ್ಲಿಸುವ ಸಮಯದಲ್ಲಿ, ರಾಜಕೀಯ ಪಕ್ಷ / ಅಭ್ಯರ್ಥಿಯು ಚುನಾವಣಾ ಆಯೋಗದ ಉಚಿತ ಚಿಹ್ನೆಗಳ ಪಟ್ಟಿಯಿಂದ ಮೂರು ಚಿಹ್ನೆಗಳನ್ನು ಒದಗಿಸಬೇಕಾಗುತ್ತದೆ.
- ಅವುಗಳಲ್ಲಿ, ರಾಜಕೀಯ ಪಕ್ಷ / ಅಭ್ಯರ್ಥಿಗೆ ‘ಮೊದಲು ಬಂದವರಿಗೆ ಮೊದಲ ಆದ್ಯತೆ’ ಆಧಾರದ ಮೇಲೆ ಚುನಾವಣಾ ಚಿಹ್ನೆ ನೀಡಲಾಗುತ್ತದೆ.
- ಮಾನ್ಯತೆ ಪಡೆದ ರಾಜಕೀಯ ಪಕ್ಷವು ವಿಭಜನೆ ಗೊಂಡಾಗ, ಪಕ್ಷಕ್ಕೆ ನಿಗದಿಪಡಿಸಿದ ಚಿಹ್ನೆ / ಚುನಾವಣಾ ಚಿಹ್ನೆಯನ್ನು ನಿಯೋಜಿಸುವ ನಿರ್ಧಾರವನ್ನು ಚುನಾವಣಾ ಆಯೋಗ ತೆಗೆದುಕೊಳ್ಳುತ್ತದೆ.
ಚುನಾವಣಾ ಆಯೋಗದ ಅಧಿಕಾರಗಳು:
ಚುನಾವಣಾ ಗುರುತುಗಳು (ಮೀಸಲಾತಿ ಮತ್ತು ಹಂಚಿಕೆ) ಆದೇಶ, 1968 ರ ಅಡಿಯಲ್ಲಿ, ರಾಜಕೀಯ ಪಕ್ಷಗಳನ್ನು ಗುರುತಿಸಲು ಮತ್ತು ಚಿಹ್ನೆಗಳನ್ನು ಹಂಚಲು ಚುನಾವಣಾ ಆಯೋಗಕ್ಕೆ ಅಧಿಕಾರ ನೀಡಲಾಗಿದೆ.
- ಆದೇಶದ 15 ನೇ ಪ್ಯಾರಾಗ್ರಾಫ್ ಅಡಿಯಲ್ಲಿ, ಪಕ್ಷದ ಹೆಸರು ಮತ್ತು ಚಿಹ್ನೆಗೆ ಸಂಬಂಧಿಸಿದ ಹಕ್ಕುಗಳ ಪ್ರಕರಣಗಳನ್ನು ಚುನಾವಣಾ ಆಯೋಗವು ಪ್ರತಿಸ್ಪರ್ಧಿ ಗುಂಪುಗಳು ಅಥವಾ ಮಾನ್ಯತೆ ಪಡೆದ ರಾಜಕೀಯ ಪಕ್ಷದ ಬಣಗಳಿಂದ ನಿರ್ಧರಿಸಬಹುದು.
- ರಾಜಕೀಯ ಪಕ್ಷಗಳ ಯಾವುದೇ ವಿವಾದ ಅಥವಾ ವಿಲೀನದ ಬಗ್ಗೆ ತೀರ್ಮಾನ ತೆಗೆದುಕೊಳ್ಳುವ ಏಕೈಕ ಪ್ರಾಧಿಕಾರ ಚುನಾವಣಾ ಆಯೋಗವಾಗಿದೆ. ಸಾದಿಕ್ ಅಲಿ ಮತ್ತು ಇತರರು VS ಭಾರತದ ಚುನಾವಣಾ ಆಯೋಗ (ECI) ಪ್ರಕರಣದಲ್ಲಿ (1971) ಸುಪ್ರೀಂ ಕೋರ್ಟ್ ಅದರ ಸಿಂಧುತ್ವವನ್ನು ಎತ್ತಿಹಿಡಿದಿದೆ.
ಚುನಾವಣಾ ಚಿಹ್ನೆಗಳ ವಿಧಗಳು:
ಚುನಾವಣಾ ಗುರುತುಗಳು (ಮೀಸಲಾತಿ ಮತ್ತು ಹಂಚಿಕೆ) (ತಿದ್ದುಪಡಿ) ಆದೇಶ, 2017 ರ ಪ್ರಕಾರ, ರಾಜಕೀಯ ಪಕ್ಷಗಳ ಚಿಹ್ನೆಗಳು ಈ ಕೆಳಗಿನಂತೆ ಎರಡು ಪ್ರಕಾದವುಗಳಾಗಿವೆ:
ಕಾಯ್ದಿರಿಸಲಾದ (Reserved): ದೇಶಾದ್ಯಂತ ಎಂಟು ರಾಷ್ಟ್ರೀಯ ಪಕ್ಷಗಳು ಮತ್ತು 64 ರಾಜ್ಯ ಪಕ್ಷಗಳಿಗೆ / ಪ್ರಾದೇಶಿಕ ಪಕ್ಷಗಳಿಗೆ ‘ಕಾಯ್ದಿರಿಸಿದ’ ಚಿಹ್ನೆಗಳನ್ನು ನೀಡಲಾಗಿದೆ.
ಉಚಿತ (Free): ಚುನಾವಣಾ ಆಯೋಗವು ಸುಮಾರು 200 ‘ಉಚಿತ’ ಚಿಹ್ನೆಗಳ ಸಂಗ್ರಹವನ್ನು ಹೊಂದಿದೆ, ಇವುಗಳನ್ನು ಗುರುತಿಸಲಾಗದ ಸಾವಿರಾರು ಪ್ರಾದೇಶಿಕ ಪಕ್ಷಗಳಿಗೆ ಹಂಚಿಕೆ ಮಾಡಲಾಗಿದೆ.
ರಾಜಕೀಯ ಪಕ್ಷದ ವಿಭಜನೆಯ ಸಂದರ್ಭದಲ್ಲಿ ‘ಚುನಾವಣಾ ಚಿಹ್ನೆ’ಗೆ ಸಂಬಂಧಿಸಿದಂತೆ ವಿವಾದದ ಕುರಿತು ಚುನಾವಣಾ ಆಯೋಗದ ಅಧಿಕಾರಗಳು:
ಶಾಸಕಾಂಗದ ಹೊರಗೆ ರಾಜಕೀಯ ಪಕ್ಷದ ವಿಭಜನೆಯ ಸಂದರ್ಭದಲ್ಲಿ, ‘ಚುನಾವಣಾ ಚಿಹ್ನೆಗಳು (ಮೀಸಲಾತಿ ಮತ್ತು ಹಂಚಿಕೆ) ಆದೇಶದ ಪ್ಯಾರಾ 15, 1968 ಹೇಳುತ್ತದೆ:
“ಗುರುತಿಸಲ್ಪಟ್ಟ ರಾಜಕೀಯ ಪಕ್ಷದಲ್ಲಿ ಎರಡು ಅಥವಾ ಹೆಚ್ಚು ಪ್ರತಿಸ್ಪರ್ಧಿ ವರ್ಗಗಳು ಅಥವಾ ಗುಂಪುಗಳಿವೆ ಎಂದು ಚುನಾವಣಾ ಆಯೋಗವು ತೃಪ್ತಿಗೊಂಡಾಗ ಮತ್ತು ಪ್ರತಿಸ್ಪರ್ಧಿ ವರ್ಗ ಅಥವಾ ಗುಂಪು ಆ ‘ರಾಜಕೀಯ ಪಕ್ಷ’ ಕ್ಕಾಗಿ ಹಕ್ಕು ಸಾಧಿಸುತ್ತಿರುವ, ಅಂತಹ ಸಂದರ್ಭದಲ್ಲಿ, ಚುನಾವಣಾ ಆಯೋಗವು ಈ ಪ್ರತಿಸ್ಪರ್ಧಿ ವರ್ಗಗಳು ಅಥವಾ ಗುಂಪುಗಳಲ್ಲಿ ಯಾವುದನ್ನಾದರೂ ‘ರಾಜಕೀಯ ಪಕ್ಷ’ ಎಂದು ಗುರುತಿಸಬೇಕೇ ಅಥವಾ ಅವುಗಳಲ್ಲಿ ಯಾವುದನ್ನೂ ಗುರುತಿಸಬಾರದೆ ಎಂದು ನಿರ್ಧರಿಸುವ ಅಧಿಕಾರ ಹೊಂದಿರುತ್ತದೆ, ಮತ್ತು ಆಯೋಗದ ನಿರ್ಧಾರವು ಈ ಎಲ್ಲಾ ಪ್ರತಿಸ್ಪರ್ಧಿ ವರ್ಗಗಳು ಅಥವಾ ಗುಂಪುಗಳ ಮೇಲೆ ಬಾಧ್ಯಸ್ತವಾಗಿರುತ್ತದೆ.
- ಈ ನಿಬಂಧನೆಯು ಎಲ್ಲಾ ರಾಷ್ಟ್ರೀಯ ಮತ್ತು ರಾಜ್ಯ ಪಕ್ಷಗಳ (ಮಾನ್ಯತೆ ಪಡೆದ) ನಡುವಿನ ವಿವಾದಗಳಿಗೂ ಅನ್ವಯಿಸುತ್ತದೆ (ಈ ಸಂದರ್ಭದಲ್ಲಿ LJP ಪಕ್ಷದಂತೆ).
- ನೋಂದಾಯಿತ ಆದರೆ ಚುನಾವಣಾ ಆಯೋಗದಿಂದ ಗುರುತಿಸದ ಪಕ್ಷಗಳ ನಡುವೆ ವಿಭಜನೆಯ ಸಂದರ್ಭದಲ್ಲಿ,ಚುನಾವಣಾ ಆಯೋಗವು ಸಾಮಾನ್ಯವಾಗಿ ಸಂಘರ್ಷದ ಬಣಗಳಿಗೆ ತಮ್ಮ ಭಿನ್ನಾಭಿಪ್ರಾಯಗಳನ್ನು ಆಂತರಿಕವಾಗಿ ಪರಿಹರಿಸಿಕೊಳ್ಳಲು ಅಥವಾ ನ್ಯಾಯಾಲಯವನ್ನು ಸಂಪರ್ಕಿಸಲು ಸಲಹೆ ನೀಡುತ್ತದೆ.
ದಯವಿಟ್ಟು ಗಮನಿಸಿ: 1968 ಕ್ಕಿಂತ ಮೊದಲು, ಅಧಿಸೂಚನೆಗಳು ಮತ್ತು ಕಾರ್ಯಕಾರಿ ಆದೇಶಗಳನ್ನು ಚುನಾವಣಾ ಆಯೋಗವು ‘ಚುನಾವಣಾ ನಡವಳಿಕೆ ನಿಯಮಗಳು’, 1961 ರ ಅಡಿಯಲ್ಲಿ ನೀಡುತ್ತಿತ್ತು.
ವಿಷಯಗಳು: ಪ್ರಮುಖ ಅಂತರರಾಷ್ಟ್ರೀಯ ಸಂಸ್ಥೆಗಳು, ಏಜೆನ್ಸಿಗಳು ಮತ್ತು ವೇದಿಕೆಗಳು, ಅವುಗಳ ರಚನೆ, ಮತ್ತು ಆದೇಶ.
ಫೈನಾನ್ಶಿಯಲ್ ಆಕ್ಷನ್ ಟಾಸ್ಕ್ ಫೋರ್ಸ್ (FATF):
(Financial Action Task Force)
ಸಂದರ್ಭ:
ಪ್ಯಾರಿಸ್‌ನಲ್ಲಿ ನಡೆಯುತ್ತಿರುವ ಹಣಕಾಸು ಕ್ರಿಯಾ ಕಾರ್ಯಪಡೆ (Financial Action Task Force – FATF) ಯ ಸಭೆಗಳಲ್ಲಿ, ಭಯೋತ್ಪಾದನೆಗೆ ಹಣಕಾಸು ಒದಗಿಸುವುದನ್ನು ನಿಷೇಧಿಸಲು ವಿಶ್ವಸಂಸ್ಥೆಯು ಗೊತ್ತುಪಡಿಸಿದ ಭಯೋತ್ಪಾದಕ ಗುಂಪುಗಳ ನಾಯಕರನ್ನು ತನಿಖೆ ಮಾಡುವ ಮತ್ತು ವಿಚಾರಣೆಗೆ ಒಳಪಡಿಸಿದ ಪಾಕಿಸ್ತಾನದ ಪ್ರಯತ್ನಗಳನ್ನು ಮೌಲ್ಯಮಾಪನ ಮಾಡಲಾಗುತ್ತದೆ.
ಈ ಬಹುಪಕ್ಷೀಯ ಹಣಕಾಸು ನಿಗಾ ಸಂಸ್ಥೆಯು (financial watch dog) ಪಾಕಿಸ್ತಾನವನ್ನು ‘ಗ್ರೇ ಲಿಸ್ಟ್’ನಲ್ಲಿಯೇ ಉಳಿಸಿಕೊಳ್ಳಬೇಕೇ ಅಥವಾ ‘ಹೆಚ್ಚಿನ ಮೇಲ್ವಿಚಾರಣೆಯ ಅಗತ್ಯವಿರುವ ದೇಶಗಳ ಪಟ್ಟಿ’ಯಲ್ಲಿ ಇರಿಸಬೇಕೆ ಎಂದು ನಿರ್ಧರಿಸುತ್ತದೆ.
ತಜ್ಞರ ಪ್ರಕಾರ, ಪಾಕಿಸ್ತಾನವನ್ನು ‘ಗ್ರೇ ಲಿಸ್ಟ್’ ನಲ್ಲಿ ಉಳಿಸಿಕೊಳ್ಳಲು ಉದ್ದೇಶಿಸಲಾಗಿದೆ ಮತ್ತು ಪಾಕಿಸ್ತಾನವನ್ನು “ಕಪ್ಪು ಪಟ್ಟಿ” ಗೆ ಸೇರಿಸುವ ಸಾಧ್ಯತೆ ಕಡಿಮೆ. ಒಂದು ದೇಶವನ್ನು ‘ಕಪ್ಪು ಪಟ್ಟಿ’ಗೆ ಸೇರಿಸಲು ಕಟ್ಟುನಿಟ್ಟಾದ ಆರ್ಥಿಕ ನಿರ್ಬಂಧಗಳು ಮತ್ತು ಹಣಕಾಸಿನ ವಹಿವಾಟುಗಳನ್ನು ಹೆಚ್ಚು ಕೂಲಂಕಷವಾಗಿ ಪರಿಶೀಲಿಸುವ ಅಗತ್ಯವಿದೆ. ಪ್ರಸ್ತುತ, ಉತ್ತರ ಕೊರಿಯಾ ಮತ್ತು ಇರಾನ್ ಮಾತ್ರ ‘ಕಪ್ಪು ಪಟ್ಟಿ’ಗೆ ಸೇರಿವೆ.
ಹಿನ್ನೆಲೆ:
2018 ರ ಜೂನ್‌ನಲ್ಲಿ, ಪ್ಯಾರಿಸ್ ಮೂಲದ ‘ಹಣಕಾಸು ಕ್ರಿಯಾ ಕಾರ್ಯಪಡೆ (FATF) ಯು ಪಾಕಿಸ್ತಾನವನ್ನು ‘ಬೂದು ಪಟ್ಟಿಯಲ್ಲಿ’(grey list ) ಇರಿಸಿದೆ ಮತ್ತು ಅಂದಿನಿಂದ ಈ ಪಟ್ಟಿಯಿಂದ ಹೊರಬರಲು ಪಾಕಿಸ್ತಾನವು ಹೆಣಗಾಡುತ್ತಿದೆ.
- ಪಾಕಿಸ್ತಾನಕ್ಕೆ 2018 ರಲ್ಲಿ 27 ಮಾನದಂಡಗಳನ್ನು (ಆಕ್ಷನ್ ಪಾಯಿಂಟ್‌ಗಳನ್ನು) ಜಾರಿಗೆ ತರಲು ಗಡುವು ನೀಡಲಾಗಿತ್ತು, ಈ ಪೈಕಿ ಪಾಕಿಸ್ತಾನವು ಇದುವರೆಗೆ 26 ಆಕ್ಷನ್ ಪಾಯಿಂಟ್‌ಗಳನ್ನು ಜಾರಿಗೆ ತಂದಿದೆ ಅಥವಾ ಪೂರೈಸಿದೆ.
ಮುಂದಿನ ನಡೆ ಏನು?
ಪ್ಯಾರಿಸ್ ಮೂಲದ ಫೈನಾನ್ಷಿಯಲ್ ಆಕ್ಷನ್ ಟಾಸ್ಕ್ ಫೋರ್ಸ್ (FATF) ನಿಂದ ಪಾಕಿಸ್ತಾನದ ತನ್ನ ಕ್ರಿಯಾ ಯೋಜನೆಯಲ್ಲಿ, ಭಯೋತ್ಪಾದನೆಗೆ ಹಣಕಾಸು ಒದಗಿಸುವುದರ ಕುರಿತ ತನಿಖೆ ಮತ್ತು ಯುಎನ್ ಘೋಷಿತ ಭಯೋತ್ಪಾದಕ ಗುಂಪುಗಳು ಮತ್ತು ಅವುಗಳ ನಾಯಕರು ಮತ್ತು ಕಮಾಂಡರ್‌ಗಳ ವಿರುದ್ಧ ವಿಚಾರಣೆಯನ್ನು ನಡೆಸಿ ತೆಗೆದುಕೊಳ್ಳಲಾಗುತ್ತಿರುವ ಕಾನೂನೂ ಕ್ರಮಗಳನ್ನು ತೋರಿಸಲು ಕೇಳಲಾಗಿದೆ.
FATF ನ ಕುರಿತು:
- ಪ್ಯಾರಿಸ್ ನಲ್ಲಿ ನಡೆದ ಜಿ -7 ದೇಶಗಳ ಸಭೆಯ ಉಪಕ್ರಮದ ಅನ್ವಯ 1989 ರಲ್ಲಿ, ಹಣಕಾಸು ಕ್ರಿಯಾ ಕಾರ್ಯಪಡೆಯು ಒಂದು ಅಂತರ್ ಸರ್ಕಾರಿ ಸಂಸ್ಥೆಯ ರೂಪದಲ್ಲಿ ರಚನೆಯಾಯಿತು.
- ಇದು ‘ನೀತಿ-ರೂಪಿಸುವ ಸಂಸ್ಥೆ’ ಆಗಿದ್ದು, ರಾಷ್ಟ್ರಮಟ್ಟದಲ್ಲಿ ವಿವಿಧ ಹಂತಗಳಲ್ಲಿ ಶಾಸಕಾಂಗ ಮತ್ತು ನಿಯಂತ್ರಕ ಸುಧಾರಣೆಗಳನ್ನು ಕೈಗೊಳ್ಳಲು ಅಗತ್ಯವಾದ ರಾಜಕೀಯ ಇಚ್ಛಾಶಕ್ತಿಯನ್ನು ಸೃಷ್ಟಿಸುತ್ತದೆ.
- ಇದರ ಸಚಿವಾಲಯ ಅಥವಾ ಕೇಂದ್ರ ಕಚೇರಿಯನ್ನು ಪ್ಯಾರಿಸ್‌ನ ‘ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಕೇಂದ್ರ (Economic Cooperation and Development- OECD) ಕಚೇರಿಯಲ್ಲಿ ಸ್ಥಾಪಿಸಲಾಗಿದೆ.
ಪಾತ್ರಗಳು ಮತ್ತು ಕಾರ್ಯಗಳು:
- ಹಣ ವರ್ಗಾವಣೆಯನ್ನು ಎದುರಿಸುವ ಕ್ರಮಗಳನ್ನು ತನಿಖೆ ಮಾಡಲು ಮತ್ತು ಅಭಿವೃದ್ಧಿಪಡಿಸಲು FATF ಅನ್ನು ಆರಂಭದಲ್ಲಿ ಸ್ಥಾಪಿಸಲಾಯಿತು.
- ಅಕ್ಟೋಬರ್ 2001 ರಲ್ಲಿ, ಹಣ ವರ್ಗಾವಣೆಯ ಜೊತೆಗೆ ಭಯೋತ್ಪಾದಕ ಹಣಕಾಸನ್ನು ಎದುರಿಸುವ ಪ್ರಯತ್ನಗಳನ್ನು ಸೇರಿಸಲು ಎಫ್‌ಎಟಿಎಫ್ ತನ್ನ ಆದೇಶವನ್ನು ವಿಸ್ತರಿಸಿತು.
- ಏಪ್ರಿಲ್ 2012 ರಲ್ಲಿ, ಸಾಮೂಹಿಕ ವಿನಾಶದ ಶಸ್ತ್ರಾಸ್ತ್ರಗಳ ಪ್ರಸರಣಕ್ಕಾಗಿ ಹಣವನ್ನು ನಿರ್ಬಂಧಿಸುವ ತನ್ನ ಪ್ರಯತ್ನಗಳಿಗೆ ಅದು ಸೇರಿಸಿತು.
ಸಂಯೋಜನೆ:
‘ಹಣಕಾಸು ಕ್ರಿಯಾ ಕಾರ್ಯಪಡೆಯು’ / (Financial Action Task Force- FATF) ಪ್ರಸ್ತುತ 39 ಸದಸ್ಯರನ್ನು ಒಳಗೊಂಡಿದೆ. ಇದರ ಸದಸ್ಯರು ವಿಶ್ವದ ಎಲ್ಲಾ ಭಾಗಗಳಲ್ಲಿನ ಹಣಕಾಸು ಕೇಂದ್ರಗಳನ್ನು ಪ್ರತಿನಿಧಿಸುತ್ತಾರೆ. ಇದು 2 ಪ್ರಾದೇಶಿಕ ಸಂಸ್ಥೆಗಳನ್ನು ಒಳಗೊಂಡಿದೆ – ಗಲ್ಫ್ ಆಫ್ ಕೋಆಪರೇಷನ್ ಕೌನ್ಸಿಲ್ (GCC) ಮತ್ತು ಯುರೋಪಿಯನ್ ಕಮಿಷನ್ (EC). ಇದು ವೀಕ್ಷಕರನ್ನು ಮತ್ತು ಸಹಾಯಕ ಸದಸ್ಯರನ್ನು (ದೇಶಗಳು) ಸಹ ಹೊಂದಿದೆ.
ಏನಿದು FATF ನ ಕಪ್ಪು ಪಟ್ಟಿ ಮತ್ತು ಬೂದು ಪಟ್ಟಿ?
ಕಪ್ಪು ಪಟ್ಟಿ(Black List): ಭಯೋತ್ಪಾದಕರಿಗೆ ಹಣಕಾಸು ನೆರವು ಮತ್ತು ಅಕ್ರಮ ಹಣ ವರ್ಗಾವಣೆಗೆ ಸಂಬಂಧಿತ ಚಟುವಟಿಕೆಗಳನ್ನು ಬೆಂಬಲಿಸುವ ಮತ್ತು ಈ ಚಟುವಟಿಕೆಗಳನ್ನು ನಿಷೇಧಿಸುವ ಜಾಗತಿಕ ನಿಬಂಧನೆಗಳೊಂದಿಗೆ ಸಹಕರಿಸದ ಸಹಕಾರೇತರ ದೇಶಗಳನ್ನು (Non-Cooperative Countries or Territories- NCCTs) ‘ಕಪ್ಪು ಪಟ್ಟಿಯಲ್ಲಿ’ ಇರಿಸಲಾಗಿದೆ. ‘ಹಣಕಾಸು ಕ್ರಿಯಾ ಕಾರ್ಯಪಡೆಯು’ ಹೊಸ ನಮೂದುಗಳನ್ನು ಸೇರಿಸಲು ಅಥವಾ ತೆಗೆದುಹಾಕಲು ಕಪ್ಪುಪಟ್ಟಿಯನ್ನು ನಿಯಮಿತವಾಗಿ ತಿದ್ದುಪಡಿ ಮಾಡುತ್ತದೆ.
ಬೂದು ಪಟ್ಟಿ(Grey List): ಭಯೋತ್ಪಾದಕರಿಗೆ ಹಣಕಾಸು ನೆರವು ಮತ್ತು ಅಕ್ರಮ ಹಣ ವರ್ಗಾವಣೆಗೆ ಸಂಬಂಧಿತ ಚಟುವಟಿಕೆಗಳಿಗೆ ಸುರಕ್ಷಿತವೆಂದು ಪರಿಗಣಿಸಲಾದ ದೇಶಗಳನ್ನು FATF ‘ಬೂದು ಪಟ್ಟಿಯಲ್ಲಿ’ ಸೇರಿಸುತ್ತದೆ. ಈ ಬೂದು ಪಟ್ಟಿಗೆ ಸೇರುವ ದೇಶಕ್ಕೆ ಕಪ್ಪುಪಟ್ಟಿಗೆ ಪ್ರವೇಶಿಸಬಹುದಾದ ಎಚ್ಚರಿಕೆಯ ಗಂಟೆಯಾಗಿ FATF ಕಾರ್ಯನಿರ್ವಹಿಸುತ್ತದೆ.
‘ಬೂದು ಪಟ್ಟಿಯಲ್ಲಿ’ ಸೇರ್ಪಡೆಗೊಂಡ ದೇಶಗಳು ಈ ಕೆಳಗಿನ ಸಂದರ್ಭಗಳನ್ನು ಎದುರಿಸಬೇಕಾಗುತ್ತದೆ:
- IMF, ವಿಶ್ವ ಬ್ಯಾಂಕ್, ADBಯಿಂದ ಆರ್ಥಿಕ ನಿರ್ಬಂಧಗಳು.
- ಐಎಂಎಫ್, ವಿಶ್ವ ಬ್ಯಾಂಕ್, ಎಡಿಬಿ ಮತ್ತು ಇತರ ದೇಶಗಳಿಂದ ಸಾಲ ಪಡೆಯುವಲ್ಲಿ ಸಮಸ್ಯೆ.
- ಅಂತರರಾಷ್ಟ್ರೀಯ ವ್ಯಾಪಾರದಲ್ಲಿ ಕಡಿತ.
- ಅಂತರರಾಷ್ಟ್ರೀಯ ವೇದಿಕೆಗಳಿಂದ ಬಹಿಷ್ಕಾರ.
ಸಾಮಾನ್ಯ ಅಧ್ಯಯನ ಪತ್ರಿಕೆ : 3
ವಿಷಯಗಳು: ವಿಜ್ಞಾನ ಮತ್ತು ತಂತ್ರಜ್ಞಾನ- ಬೆಳವಣಿಗೆಗಳು ಮತ್ತು ಅವುಗಳ ಅನ್ವಯಗಳು ಮತ್ತು ದೈನಂದಿನ ಜೀವನದಲ್ಲಿ ಅವುಗಳ ಪರಿಣಾಮಗಳು ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಭಾರತೀಯರ ಸಾಧನೆಗಳು; ತಂತ್ರಜ್ಞಾನದ ದೇಶೀಕರಣ ಮತ್ತು ಹೊಸ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವುದು.
ನೇಪಾಳವು ಭಾರತದ UPI ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವ ಮೊದಲ ವಿದೇಶವಾಗಿದೆ:
(Nepal will be the first foreign country to adopt India’s Unified payments interface (UPI) system)
ಸಂದರ್ಭ:
ರಾಷ್ಟ್ರೀಯ ಪಾವತಿ ನಿಗಮ ಅಭಿವೃದ್ಧಿಪಡಿಸಿದ (National Payments Corporation of India – NPCI) ಏಕೀಕೃತ ಪಾವತಿ ವ್ಯವಸ್ಥೆಯನ್ನು (UPI) ನೇಪಾಳವು ಅಳವಡಿಸಿಕೊಳ್ಳಲಿದೆ. ಭಾರತದ ನಂತರ ಯುಪಿಐ ಅಳವಡಿಕೆ ಮಾಡಿಕೊಳ್ಳಲಿರುವ ಮೊದಲ ದೇಶ ನೇಪಾಳವಾಗಿದೆ.
UPI ಎಂದರೇನು?
ಏಕೀಕೃತ ಪಾವತಿ ಇಂಟರ್ಫೇಸ್ (UPI) ಒಂದು ತ್ವರಿತ ನೈಜ-ಸಮಯ ಪಾವತಿ ವ್ಯವಸ್ಥೆಯಾಗಿದೆ. ಬಳಕೆದಾರರು ತಮ್ಮ ಬ್ಯಾಂಕ್ ಖಾತೆ ವಿವರಗಳನ್ನು ಇತರ ಪಕ್ಷಕ್ಕೆ ಬಹಿರಂಗಪಡಿಸದೆ ಅನೇಕ ಬ್ಯಾಂಕ್ ಖಾತೆಗಳಲ್ಲಿ ನೈಜ-ಸಮಯದ ಆಧಾರದ ಮೇಲೆ ಹಣವನ್ನು ವರ್ಗಾಯಿಸಲು ಈ ವ್ಯವಸ್ಥೆಯು ಅನುಮತಿಸುತ್ತದೆ.
- ಪ್ರಸ್ತುತ ಏಕೀಕೃತ ಪಾವತಿಗಳ ಇಂಟರ್ಫೇಸ್ (UPI), ರಾಷ್ಟ್ರೀಯ ಸ್ವಯಂಚಾಲಿತ ಕ್ಲಿಯರಿಂಗ್ ಹೌಸ್ (NACH), ತಕ್ಷಣದ ಪಾವತಿ ಸೇವೆ (IMPS), ಆಧಾರ್ ಸಕ್ರಿಯಗೊಳಿಸಿದ ಪಾವತಿ ವ್ಯವಸ್ಥೆ (AePS), ಭಾರತ್ ಬಿಲ್ ಪಾವತಿ ವ್ಯವಸ್ಥೆ (BBPS), ರೂಪೇ (RuPay) ಇತ್ಯಾದಿಗಳನ್ನು ಒಳಗೊಂಡಂತೆ ರಾಷ್ಟ್ರೀಯ ಪಾವತಿ ನಿಗಮ/ ‘ನ್ಯಾಷನಲ್ ಪೇಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ’ (NPCI) ನಿರ್ವಹಿಸುವ ಎಲ್ಲಾ ವ್ಯವಸ್ಥೆಗಳಲ್ಲಿ ಈ ವ್ಯವಸ್ಥೆಯು ದೊಡ್ಡದಾಗಿದೆ.
- ಉನ್ನತ UPI ಅಪ್ಲಿಕೇಶನ್‌ಗಳಲ್ಲಿ PhonePe, Paytm, Google Pay, Amazon Pay ಮತ್ತು ಸರ್ಕಾರದಿಂದ ನಡೆಸಲ್ಪಡುವ BHIM ಅಪ್ಲಿಕೇಶನ್ ಸೇರಿವೆ.
- ಏಕೀಕೃತ ಪಾವತಿ ವ್ಯವಸ್ಥೆ / ಯೂನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (UPI) ಅನ್ನು 21 ಸದಸ್ಯ ಬ್ಯಾಂಕ್‌ಗಳೊಂದಿಗೆ 2016 ರಲ್ಲಿ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ /ರಾಷ್ಟ್ರೀಯ ಪಾವತಿ ನಿಗಮವು(NPCI) ಪ್ರಾರಂಭಿಸಿದೆ.
BHIM ಎಂದರೇನು?
ಭಾರತ್ ಇಂಟರ್ಫೇಸ್ ಫಾರ್ ಮನಿ (Bharat Interface for Money -BHIM) UPI ಮೂಲಕ ಕಾರ್ಯನಿರ್ವಹಿಸುವ ಭಾರತದ ಡಿಜಿಟಲ್ ಪಾವತಿ ಅಪ್ಲಿಕೇಶನ್ (ಅಪ್ಲಿಕೇಶನ್) ಆಗಿದೆ, ಏಕೀಕೃತ ಪಾವತಿ ಇಂಟರ್ಫೇಸ್ (UPI) ವ್ಯವಸ್ಥೆಯಲ್ಲಿ, ಒಂದೇ ಮೊಬೈಲ್ ಅಪ್ಲಿಕೇಶನ್‌ನಿಂದ ಅನೇಕ ಬ್ಯಾಂಕ್ ಖಾತೆಗಳನ್ನು ನಿರ್ವಹಿಸಬಹುದು.
- ಭೀಮ್ ಅಪ್ಲಿಕೇಶನ್ ಅನ್ನು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (National Payments Corporation of India -NPCI) ಅಭಿವೃದ್ಧಿಪಡಿಸಿದೆ.
- ಇದು ನೈಜ-ಸಮಯದ ಹಣ ವರ್ಗಾವಣೆಯ ಸೌಲಭ್ಯವನ್ನು ಒದಗಿಸುತ್ತದೆ.
- ಇದನ್ನು, ಡಿಸೆಂಬರ್, 2016 ರಲ್ಲಿ ಪ್ರಾರಂಭಿಸಲಾಯಿತು.
BHIM ಅಪ್ಲಿಕೇಶನ್ ಮೂರು ಹಂತದ ದೃಢೀಕರಣ ವ್ಯವಸ್ಥೆಯನ್ನು ಹೊಂದಿದೆ:
- ಮೊದಲಿಗೆ, ಈ ಅಪ್ಲಿಕೇಶನ್ ಯಾವುದೇ ಸಾಧನ (ಕಂಪ್ಯೂಟರ್, ಮೊಬೈಲ್) ದ ID ಮತ್ತು ಮೊಬೈಲ್ ಸಂಖ್ಯೆಯೊಂದಿಗೆ ಲಿಂಕ್ ಆಗುತ್ತದೆ.
- ಎರಡನೆಯದಾಗಿ ವಹಿವಾಟು ನಡೆಸಲು ಬಳಕೆದಾರರು ಬ್ಯಾಂಕ್ ಖಾತೆಯನ್ನು (UPI ಅಥವಾ ಸಕ್ರಿಯಗೊಳಿಸಿಲ್ಲದ UPI ) ಸಿಂಕ್ ಮಾಡಬೇಕಾಗುತ್ತದೆ.
- ಮೂರನೆಯದಾಗಿ, ಬಳಕೆದಾರನು ತನ್ನ ಸಾಧನದಲ್ಲಿ BHIM ಅಪ್ಲಿಕೇಶನ್ ಅನ್ನು ಪ್ರಾರಂಭಿಸುವಾಗ ‘PIN’ ರಚಿಸಲು ಕೇಳಲಾಗುತ್ತದೆ, ಅಪ್ಲಿಕೇಶನ್‌ಗೆ ‘ಲಾಗ್ ಇನ್’ ಮಾಡಲು ಈ ‘PIN’ ನ ಅಗತ್ಯವಿದೆ. ಯಾವುದೇ ವಹಿವಾಟು ನಡೆಸಲು ಬಳಕೆದಾರನು ತನ್ನ ಬ್ಯಾಂಕ್ ಖಾತೆಗೆ ಲಿಂಕ್ ಮಾಡಲಾದ ‘UPI PIN’ ಅನ್ನು ಬಳಸಬೇಕಾಗುತ್ತದೆ.
ವಿಷಯಗಳು: ಮಾಹಿತಿ ತಂತ್ರಜ್ಞಾನ, ಬಾಹ್ಯಾಕಾಶ, ಕಂಪ್ಯೂಟರ್, ರೊಬೊಟಿಕ್ಸ್, ನ್ಯಾನೊ-ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ಬೌದ್ಧಿಕ ಆಸ್ತಿ ಹಕ್ಕುಗಳಿಗೆ ಸಂಬಂಧಿಸಿದ ವಿಷಯಗಳಿಗೆ ಸಂಬಂಧಿಸಿದಂತೆ ಜಾಗೃತಿ.
ನಾಸಾದ ಪರ್ಸೇವೆರನ್ಸ್ ರೋವರ್:
(NASA Perseverance Rover)
ಸಂದರ್ಭ:
ನಾಸಾದ ಪರ್ಸೆವೆರೆನ್ಸ್ ರೋವರ್ ಫೆಬ್ರವರಿ 19, 2021 ರಂದು ಮಂಗಳ ಗ್ರಹದ ಮೇಲ್ಮೈಯಲ್ಲಿ ಯಶಸ್ವಿಯಾಗಿ ಇಳಿದ ನಂತರ ಅಲ್ಲಿ ‘ ಭೂಮಿಯ ಒಂದು ಪೂರ್ಣ ವರ್ಷ’ ವನ್ನು ಪೂರ್ಣಗೊಳಿಸಿದೆ.
ರೆಡ್ ಪ್ಲಾನೆಟ್‌ನಲ್ಲಿ ಈ ಅವಧಿಯಲ್ಲಿ, ರೋವರ್ ಮೊದಲ ಬಾರಿಗೆ ತನ್ನ ಮಹತ್ವಾಕಾಂಕ್ಷೆಯ ಹಲವಾರು ಪ್ರಥಮ ಕಾರ್ಯಗಳನ್ನು ಪೂರ್ಣಗೊಳಿಸಿದೆ:
ಮತ್ತೊಂದು ಗ್ರಹದಿಂದ ಮೊದಲ ‘ರಾಕ್ ಸ್ಯಾಂಪಲ್’ ಅನ್ನು ಯಶಸ್ವಿಯಾಗಿ ಸಂಗ್ರಹಿಸಿದೆ.
‘ಇಂಜೇನಿಟಿ'(Ingenuity) ಹೆಲಿಕಾಪ್ಟರ್‌ಗೆ ಬೇಸ್ ಸ್ಟೇಷನ್ ಆಗಿ ಕಾರ್ಯನಿರ್ವಹಿಸುತ್ತದೆ.
ಮಂಗಳದ ಅಂಗಳದಲ್ಲಿರುವ ತೆಳುವಾದ ಗಾಳಿಯಿಂದ ಆಮ್ಲಜನಕವನ್ನು ಉತ್ಪಾದಿಸಿದೆ.
ಫೆಬ್ರವರಿ 14 ರಂದು ಸುಮಾರು 320 ಮೀಟರ್ ಪ್ರಯಾಣವನ್ನು ಪೂರ್ಣಗೊಳಿಸುವ ಮೂಲಕ ರೋವರ್ ಒಂದೇ ದಿನದಲ್ಲಿ ಮಂಗಳ ಗ್ರಹದ ಮೇಲ್ಮೈ ಮೇಲೆ ಅತಿ ಹೆಚ್ಚು ದೂರ ಕ್ರಮಿಸಿದ ದಾಖಲೆಯನ್ನು ಮುರಿದಿದೆ.
ಕೆಂಪು ಗ್ರಹದಲ್ಲಿ ಮೊದಲ ‘ಪ್ರೊಟೊಟೈಪ್ ಆಕ್ಸಿಜನ್ ಜನರೇಟರ್’ ಅನ್ನು ಪರೀಕ್ಷಿಸಲಾಯಿತು. ಇದನ್ನು MOXIE -ಮಾರ್ಸ್ ಆಕ್ಸಿಜನ್ ಇನ್-ಸಿಟು ರಿಸೋರ್ಸ್ ಯುಟಿಲೈಸೇಶನ್ ಎಕ್ಸ್ಪರಿಮೆಂಟ್ (Mars Oxygen In-Situ Resource Utilization Experiment) ಎಂದು ಕರೆಯಲಾಗುತ್ತದೆ.
ಪರ್ಸೇವೆರನ್ಸ್ ರೋವರ್ ಕುರಿತು:
- ಪರ್ಸೇವೆರನ್ಸ್ ರೋವರ್ ಅನ್ನು ಜುಲೈ 2020 ರಲ್ಲಿ ಉಡಾವಣೆ ಮಾಡಲಾಯಿತು.
- ಇದು ಬಹುಶಃ ಮಂಗಳನ ಮೇಲ್ಮೈಯಲ್ಲಿ ಜೆಜೆರೊ ಕುಳಿಗಳ (Jezero Crater) ಮೇಲೆ ಇಳಿಯುತ್ತದೆ.
- ಪ್ರಾಚೀನ ಜೀವಿಗಳ ಜೀವನದ ಖಗೋಳ ಸಾಕ್ಷ್ಯಗಳನ್ನು ಹುಡುಕುವುದು ಮತ್ತು ಭೂಮಿಗೆ ಮರಳಿ ತರಲು ಬಂಡೆಗಳು ಮತ್ತು ರೆಗ್ಲೋಲಿತ್‌ಗಳ (Reglolith) ಮಾದರಿಗಳನ್ನು ಸಂಗ್ರಹಿಸುವುದು ಪರ್ಸೇವೆರನ್ಸ್ ರೋವರ್ ನ ಮುಖ್ಯ ಕಾರ್ಯವಾಗಿದೆ.
- ಇದು ಪ್ಲುಟೋನಿಯಂನ ವಿಕಿರಣಶೀಲ ಕೊಳೆಯುವಿಕೆಯಿಂದ ಉತ್ಪತ್ತಿಯಾಗುವ ಶಾಖದಿಂದ ಉತ್ಪತ್ತಿಯಾಗುವ ವಿದ್ಯುತ್ ಶಕ್ತಿಯನ್ನು ಇಂಧನವಾಗಿ ಬಳಸುತ್ತದೆ.
- ನಾಸಾದ ಪರ್ಸೇವೆರನ್ಸ್, ಮಂಗಳನ ಮೇಲ್ಮೈಯಲ್ಲಿ ಸ್ಥಿರವಾಗಿರಲು ಆಕಾರ ಮೆಮೊರಿ ಮಿಶ್ರಲೋಹಗಳನ್ನು (shape memory alloys) ಬಳಸಲಾಗುತ್ತದೆ.
- ಸುಸಜ್ಜಿತ ಡ್ರಿಲ್, ಕ್ಯಾಮೆರಾ ಮತ್ತು ಲೇಸರ್ ಹೊಂದಿದ ರೋವರ್ ಅನ್ನು ಮಂಗಳ ಗ್ರಹವನ್ನು ಅನ್ವೇಷಿಸಲು ಸಿದ್ಧಪಡಿಸಲಾಗಿದೆ.
ಈ ಯೋಜನೆಯ ಮಹತ್ವ:
- ಪರ್ಸೇವೆರನ್ಸ್ ರೋವರ್ MOXIE ಅಥವಾ ಮಾರ್ಸ್ ಆಕ್ಸಿಜನ್ ISRU ಪ್ರಯೋಗ ಎಂಬ ವಿಶೇಷ ಸಾಧನವನ್ನು ಹೊಂದಿದೆ, ಇದು ಮಂಗಳ ಗ್ರಹದಲ್ಲಿ ಇಂಗಾಲ-ಡೈಆಕ್ಸೈಡ್-ಸಮೃದ್ಧ ವಾತಾವರಣದಿಂದ ಇಂಗಾಲದ ಡೈಆಕ್ಸೈಡ್ ಬಳಸಿ ಮೊದಲ ಬಾರಿಗೆ ಆಣ್ವಿಕ ಆಮ್ಲಜನಕವನ್ನು ರಚಿಸುತ್ತದೆ. (ISRU- In Situ Resource Utilization, ಅಂದರೆ , ನೌಕೆಯಲ್ಲಿರುವ ಗಗನಯಾತ್ರಿಗಳ ಹಾಗೂ ಬಾಹ್ಯಾಕಾಶ ನೌಕೆಯ ಅವಶ್ಯಕತೆಗಳನ್ನು ಪೂರೈಸಲು ಸ್ಥಳೀಯ ಸಂಪನ್ಮೂಲಗಳ ಬಳಕೆ ಅಂದರೆ ಬಾಹ್ಯಾಕಾಶ ನೌಕೆಯ ಒಳಗಿನ ಸಂಪನ್ಮೂಲಗಳನ್ನು ಬಳಕೆ ಮಾಡುವುದು).
- ಈ ಕಾರ್ಯಾಚರಣೆಯಲ್ಲಿ INGENUITY (‘ಜಾಣ್ಮೆ’) ಎಂಬ ಹೆಲಿಕಾಪ್ಟರ್ ಅನ್ನು ಸಹ ಕಳುಹಿಸಲಾಗಿದೆ, ಇದು ಮಂಗಳ ಗ್ರಹದಲ್ಲಿ ಹಾರಾಟ ನಡೆಸುವ ಮೊದಲ ಹೆಲಿಕಾಪ್ಟರ್ ಆಗಲಿದೆ. ನಾಸಾ ಮತ್ತೊಂದು ಗ್ರಹ ಅಥವಾ ಉಪಗ್ರಹದಲ್ಲಿ ಹೆಲಿಕಾಪ್ಟರ್ ಅನ್ನು ಹಾರಾಟ ನಡೆಸುತ್ತಿರುವುದು ಇದೇ ಮೊದಲು.
- ಭೂಮಿಯ ಮೇಲಿನ ಅತ್ಯಾಧುನಿಕ ಪ್ರಯೋಗಾಲಯಗಳಲ್ಲಿ ವಿಶ್ಲೇಷಿಸಲು ಮಂಗಳದಿಂದ ರಾಕ್ ಮಾದರಿಗಳನ್ನು ತರುವ ಮೊದಲ ಯೋಜಿತ ಪ್ರಯತ್ನವಾಗಿದೆ. ಇದರ ಉದ್ದೇಶ ಮಂಗಳನಲ್ಲಿರುವ ಪ್ರಾಚೀನ ಸೂಕ್ಷ್ಮಾಣುಜೀವಿಯ ಖಗೋಳ ಪುರಾವೆಗಳನ್ನು ಹುಡುಕುವುದು ಮತ್ತು ವರ್ತಮಾನ ಅಥವಾ ಹಿಂದಿನ ಜೀವನದ ಕುರುಹುಗಳನ್ನು ಹುಡುಕುವುದು.
ಮಿಷನ್‌ನ ಕೆಲವು ಪ್ರಮುಖ ಉದ್ದೇಶಗಳು:
- ಪ್ರಾಚೀನ ಜೀವಿಗಳ ಜೀವನದ ಖಗೋಳ ಸಾಕ್ಷ್ಯಗಳನ್ನು ಹುಡುಕುವುದು.
- ಭೂಮಿಗೆ ಮರಳಿ ತರಲು ಬಂಡೆಗಳು ಮತ್ತು ರೆಗ್ಲೋಲಿತ್‌ಗಳ (Reglolith) ಮಾದರಿಗಳನ್ನು ಸಂಗ್ರಹಿಸುವುದು.
- ಮಂಗಳನ ಮೇಲೆ ಪ್ರಾಯೋಗಿಕ ಹೆಲಿಕಾಪ್ಟರ್ ಇಳಿಸಲು.
- ಮಂಗಳನ ಹವಾಮಾನ ಮತ್ತು ಭೂವಿಜ್ಞಾನವನ್ನು ಅಧ್ಯಯನ ಮಾಡಲು.
- ಭವಿಷ್ಯದ ಮಂಗಳಯಾನಗಳಿಗಾಗಿ ತಂತ್ರಜ್ಞಾನವನ್ನು ಪ್ರದರ್ಶಿಸುವುದು.
ಮಂಗಳನ ಬಗ್ಗೆ ಇತ್ತೀಚಿನ ಆಸಕ್ತಿಯ ಕಾರಣಗಳು:
- ಮಂಗಳ ಭೂಮಿಗೆ ಅತ್ಯಂತ ಸಮೀಪದಲ್ಲಿದೆ (ಸುಮಾರು 200 ಮಿಲಿಯನ್ ಕಿಮೀ ದೂರ).
- ಇದು ಮನುಷ್ಯನು ಭೇಟಿ ನೀಡಲು ಅಥವಾ ದೀರ್ಘಕಾಲ ಉಳಿಯಲು ಬಯಸುವ ಗ್ರಹವಾಗಿದೆ.
- ಈ ಹಿಂದೆ ಮಂಗಳನ ಮೇಲೆ ಹರಿಯುವ ನೀರು ಮತ್ತು ವಾತಾವರಣದ ಪುರಾವೆಗಳು ಕಂಡುಬಂದಿವೆ; ಮತ್ತು ಬಹುಶಃ ಈ ಗ್ರಹದಲ್ಲಿ ಒಮ್ಮೆ ಜೀವನಕ್ಕೆ ಸೂಕ್ತವಾದ ಪರಿಸ್ಥಿತಿಗಳು ಕೂಡ ಇದ್ದವು.
- ಈ ಗ್ರಹವು ವಾಣಿಜ್ಯ ಪ್ರಯಾಣಕ್ಕೂ ಸೂಕ್ತವಾಗಬಹುದು.
ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ಸಂಗತಿಗಳು:
ಕರ್ನಾಟಕ ಸಮಿತಿಯೊಂದು ‘ಕಟ್ ವೇಸ್ಟ್ ಟಾಸ್ಕ್ ಫೋರ್ಸ್’ಗೆ ಶಿಫಾರಸು ಮಾಡಿದೆ:
ಇತ್ತೀಚಿಗೆ,ಕರ್ನಾಟಕ ಆಡಳಿತ ಸುಧಾರಣಾ ಆಯೋಗ-2 ರ ಎರಡು ಮತ್ತು ಮೂರನೇ ವರದಿಗಳನ್ನು ಆಯೋಗದ ಅಧ್ಯಕ್ಷರಾದ ನಿವೃತ್ತ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಅವರು ಕರ್ನಾಟಕ ಸರ್ಕಾರಕ್ಕೆ ಸಲ್ಲಿಸಿದರು.
ಆಯೋಗದ ವರದಿಯ ಪ್ರಮುಖ ಶಿಫಾರಸುಗಳು:
- ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ, ನಿಗಮ ಮಂಡಳಿ ಇತ್ಯಾದಿಗಳಲ್ಲಿ ಆಗುವ ಅನುಪಯುಕ್ತ ವೆಚ್ಚಗಳ ತಡೆಗೆ ಅನುಪಯುಕ್ತ ವೆಚ್ಚ ತಡೆ ಕಾರ್ಯಪಡೆ ರಚನೆ.
- ಸರ್ಕಾರದ ಸಚಿವಾಲಯದಲ್ಲಿ ಯಾವುದೇ ಇಲಾಖೆಯ ಕಡತಗಳು ಮೂರು ಅಥವಾ ನಾಲ್ಕು ಹಂತಗಳಿಗಿಂತ ಹೆಚ್ಚು ಚಲನವಲನವಾಗಬಾರದು.
- ಎಲ್ಲ ಇಲಾಖೆಗಳ ಸೂಚಿಸಿದ ಗ್ರೂಪ್-ಸಿ ಮತ್ತು ಡಿ ನೌಕರರ ವರ್ಗಾವಣೆಯನ್ನು ಗಣಕೀಕೃತ ಕೌನ್ಸೆಲಿಂಗ್ ಮೂಲಕ ಮಾಡಲು ಕಾಯ್ದೆ ಜಾರಿಗೆ ತರಬಹುದು
- ರಾಜ್ಯದಲ್ಲಿರುವ ಎಲ್ಲ ಅಂಚೆ ಕಚೇರಿಗಳಲ್ಲಿ ರಾಜ್ಯ ಸರ್ಕಾರದ ಸೇವೆಗಳನ್ನು ಒದಗಿಸಲು ಬಳಸಿಕೊಳ್ಳಬಹುದು. ಪ್ರಸ್ತುತ ಅಂಚೆ ಕಚೇರಿಗಳು ಭಾರತ ಸರ್ಕಾರದ ಸೇವೆಗಳನ್ನು ಒದಗಿಸುತ್ತಿವೆ.
- ಗ್ರಾಮ ಮಟ್ಟದ ಉದ್ಯಮಿಗಳಿಂದ (VLE) ಸ್ಥಾಪಿಸಲಾದ ಸಾಮಾನ್ಯ ಸೇವಾ ಕೇಂದ್ರಗಳನ್ನು (CSC) ರಾಜ್ಯವು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಬಳಸಿಕೊಳ್ಳುವುದರ ಮೂಲಕ ಸರ್ಕಾರಿ ಮತ್ತು ಸರ್ಕಾರೇತರ ಸೇವೆಗಳನ್ನು ಮನೆ ಬಾಗಿಲಿಗೆ ಒದಗಿಸಲು VLE ಗಳನ್ನು ಜನಸೇವಕರಾಗಿ ಬಳಸಿಕೊಳ್ಳಬಹುದು.
- ಜಿಲ್ಲಾಧಿಕಾರಿಯವರಿಗೆ ಸಾರ್ವಜನಿಕ ಉದ್ದೇಶಕ್ಕಾಗಿ ಸರ್ಕಾರದ ಇಲಾಖೆಗಳಿಗೆ ನಾಲ್ಕು ಹೆಕ್ಟೇರ್‌ವರೆಗೆ ಮತ್ತು ಜಮೀನಿನ ಮೌಲ್ಯವು ರೂ.5 ಕೋಟಿ ಮೀರದ ಸರ್ಕಾರಿ ಜಮೀನನ್ನು ಪರಿವರ್ತನಾ ಶುಲ್ಕದ ವಿನಾಯಿತಿ ನೀಡಿ ಉಚಿತವಾಗಿ ಮಂಜೂರು ಮಾಡುವ ಹೆಚ್ಚಿನ ಅಧಿಕಾರವನ್ನು ಪ್ರತ್ಯಾಯೋಜಿಸಬಹುದು.
- ಸಾರ್ವಜನಿಕ ಉದ್ಯಮಗಳ ಇಲಾಖೆಯನ್ನು(DPE) ಆರ್ಥಿಕ ಇಲಾಖೆಯಲ್ಲಿ ವಿಲೀನಗೊಳಿಸಬಹುದು
- ಭೂಸ್ವಾಧೀನಕ್ಕೆ ಪರಿಹಾರಧನದ ಪಾವತಿಯು ಕಾಲಮಿತಿಯದ್ದಾಗಿರಬೇಕು. ಕಾಲಮಿತಿಯಲ್ಲಿ ಪಾವತಿಸದಿದ್ದರೆ ವಿಳಂಬವಾದ ಅವಧಿಗೆ ಅನವಶ್ಯಕಾಗಿ ಹೆಚ್ಚುವರಿ ಪರಿಹಾರಧನವನ್ನು ಪಾವತಿಸಬೇಕಾಗುತ್ತದೆ.
- ಪರಿಹಾರ ಧನವನ್ನು ಆಧಾರ್ ಬೇಸ್ಡ್ ಪಾವತಿ ಮಾಡುವಂತೆ ಪ್ರಕ್ರಿಯೆಗೊಳಿಸಬೇಕು ಇದರಿಂದ ಚೆಕ್ ಮೂಲಕ ಪರಿಹಾರ ಧನ ಪಾವತಿಯಲ್ಲಾಗುವ ವಂಚನೆಯನ್ನು ತಡೆಗಟ್ಟಬಹುದು.
- ಅಧಿಕಾರಿಗಳ ಮತ್ತು ಸಿಬ್ಬಂದಿ ವರ್ಗದವರ ಕಾರ್ಯನಿರ್ವಹಣೆಯನ್ನುಮೌಲ್ಯಮಾಪನ ಮಾಡುವ ನಮೂನೆಯನ್ನು ಪರಿಷ್ಕರಿಸಿದ್ದು ಅದರಂತೆ ಕ್ರಮವಹಿಸಬಹುದು.
- ಸಾಧನೆ (ಕಾರ್ಯಕ್ಷಮತೆ ನಿರ್ವಹಣೆ ಮತ್ತು ಮೌಲ್ಯಮಾಪನ ಪದ್ಧತಿ) ಇಲಾಖೆಗಳ ಕಾರ್ಯಕ್ಷಮತೆ ನಿರ್ವಹಣೆ ಮತ್ತು ಮೌಲ್ಯಮಾಪನ ಪದ್ಧತಿಯನ್ನು ಜಾರಿಗೊಳಿಸಿ ಇಲಾಖೆಗಳ ಮೌಲ್ಯಮಾಪನ ಮಾಡಬಹುದು.
- ರಾಷ್ಟ್ರಮಟ್ಟದಲ್ಲಿ ರಾಜ್ಯದ ಸೂಚ್ಯಾಂಕವನ್ನು ಸುಧಾರಿಸಲು ಬಹುವಲಯ, ವಲಯ ಸೂಚ್ಯಂಕಗಳ ವಿಶ್ಲೇಷಣೆ, ಸುಧಾರಣೆ, ಮೇಲ್ವಿಚಾರಣೆ ಮಾಡಲು ಸಮಿತಿ ರಚಿಸಲು ಕ್ರಮ ತೆಗೆದುಕೊಳ್ಳಬಹುದು ಮತ್ತು ಇವೇ ಸೂಚ್ಯಂಕಗಳ ಆಧಾರದ ಮೇಲೆ ಜಿಲ್ಲಾ ಮತ್ತು ತಾಲೂಕುಗಳ ಶ್ರೇಣಿಗಳನ್ನು ಪ್ರಕಟಿಸುವುದು.
ಪೊಲೀಸ್ ಕಿರುಕುಳದಿಂದ LGBTQIA+ ಸಮುದಾಯವನ್ನು ರಕ್ಷಿಸಲು ತಮಿಳುನಾಡಿನ ನಿಯಮ:
LGBTQIA+ ಸಮುದಾಯದ ಸದಸ್ಯರು ಮತ್ತು ಸಮುದಾಯದ ಕಲ್ಯಾಣಕ್ಕಾಗಿ ಕೆಲಸ ಮಾಡುವವರ ವಿರುದ್ಧ ಕಿರುಕುಳವನ್ನು ತಡೆಗಟ್ಟಲು ತಮಿಳುನಾಡು ಸರ್ಕಾರವು ಪೊಲೀಸ್ ಅಧಿಕಾರಿಗಳ ನಡವಳಿಕೆ ನಿಯಮಗಳನ್ನು ತಿದ್ದುಪಡಿ ಮಾಡಿದೆ.
- ನಿಯಮದ ಪ್ರಕಾರ, ಯಾವುದೇ ಪೊಲೀಸ್ ಅಧಿಕಾರಿಯು LGBTQIA ಗೆ ಸೇರಿದ ಯಾವುದೇ ವ್ಯಕ್ತಿಗೆ (ಲೆಸ್ಬಿಯನ್, ಸಲಿಂಗಕಾಮಿ, ದ್ವಿಲಿಂಗಿ, ಲಿಂಗಾಯತ, ಕ್ವೀರ್, ಇಂಟರ್‌ಸೆಕ್ಸ್, ಅಲೈಂಗಿಕ/ಅಸೆಕ್ಷುವಲ್) + ಸಮುದಾಯ ಮತ್ತು ಸಮುದಾಯದ ಕಲ್ಯಾಣಕ್ಕಾಗಿ ಕೆಲಸ ಮಾಡುವ ಜನರಿಗೆ ಕಿರುಕುಳ ನೀಡುವ ಯಾವುದೇ ಕಾರ್ಯದಲ್ಲಿ ತೊಡಗಬಾರದು.
- ಈ ನಿಯಮದ ಉದ್ದೇಶವನ್ನು ಪೂರೈಸುವ ಸಲುವಾಗಿ, ‘ಕಿರುಕುಳ’ವು ಕಾನೂನು ಬದ್ಧವಾಗಿ ಸ್ಥಾಪಿಸಲಾದ ಕಾರ್ಯವಿಧಾನಕ್ಕೆ ಅನುಗುಣವಾಗಿ ತನಿಖೆ ಮಾಡುವ ಪೊಲೀಸರ ಹಕ್ಕನ್ನು ಒಳಗೊಂಡಿಲ್ಲ.
ಮಹತ್ವ: ಈ ತಿದ್ದುಪಡಿಯು ಪೊಲೀಸರಿಂದ ಕಿರುಕುಳವನ್ನು ಎದುರಿಸುತ್ತಿರುವ ಸಲಿಂಗಕಾಮಿ ದಂಪತಿಗಳು ರಕ್ಷಣೆ ಕೋರಿ ಸಲ್ಲಿಸಿದ ಅರ್ಜಿಯ ಕುರಿತು ಮದ್ರಾಸ್ ಹೈಕೋರ್ಟ್ ನೀಡಿದ ನಿರ್ದೇಶನವನ್ನು ಅನುಸರಿಸುತ್ತದೆ.
ಮ್ಯೂನಿಚ್ ಭದ್ರತಾ ಸಮ್ಮೇಳನ:
ಇತ್ತೀಚೆಗೆ ಜರ್ಮನಿಯಲ್ಲಿ ‘ಮ್ಯೂನಿಚ್ ಭದ್ರತಾ ಸಮ್ಮೇಳನ’ ವನ್ನು (Munich Security Conference) ಆಯೋಜಿಸಲಾಗಿತ್ತು, ಇದರಲ್ಲಿ ಭಾರತವೂ ಭಾಗವಹಿಸುತ್ತಿದೆ.
- ಮ್ಯೂನಿಚ್ ಸೆಕ್ಯುರಿಟಿ ಕಾನ್ಫರೆನ್ಸ್ ಅಂತರರಾಷ್ಟ್ರೀಯ ಭದ್ರತಾ ನೀತಿಯ ವಾರ್ಷಿಕ ಸಮ್ಮೇಳನವಾಗಿದ್ದು, 1963 ರಿಂದ ಜರ್ಮನಿಯ ಬವೇರಿಯಾದ ಮ್ಯೂನಿಚ್‌ನಲ್ಲಿ ವಾರ್ಷಿಕವಾಗಿ ಆಯೋಜಿಸಲಾಗುತ್ತದೆ.
- ಈ ಸಮ್ಮೇಳನವನ್ನು ಪ್ರತಿ ವರ್ಷ ಫೆಬ್ರವರಿ ತಿಂಗಳಲ್ಲಿ ಆಯೋಜಿಸಲಾಗುತ್ತದೆ.
- ಕಳೆದ ನಾಲ್ಕು ದಶಕಗಳಲ್ಲಿ, ಮ್ಯೂನಿಚ್ ಸೆಕ್ಯುರಿಟಿ ಕಾನ್ಫರೆನ್ಸ್ ಅಂತರಾಷ್ಟ್ರೀಯ ಭದ್ರತಾ ನೀತಿ ನಿರ್ಧಾರ-ನಿರ್ಮಾಪಕರಿಂದ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳುವ ಅತ್ಯಂತ ಪ್ರಮುಖ ಸ್ವತಂತ್ರ ವೇದಿಕೆಯಾಗಿದೆ.
- ಪ್ರತಿ ವರ್ಷ,ಈ ಸಮಾವೇಶವು ಪ್ರಸ್ತುತ ಮತ್ತು ಭವಿಷ್ಯದ ಭದ್ರತಾ ಸವಾಲುಗಳ ಕುರಿತು ಆಳವಾದ ಚರ್ಚೆಯಲ್ಲಿ ತೊಡಗಿಸಿಕೊಳ್ಳಲು ಪ್ರಪಂಚದಾದ್ಯಂತದ 70 ಕ್ಕೂ ಹೆಚ್ಚು ದೇಶಗಳಿಂದ ಸುಮಾರು 350 ಹಿರಿಯ ವ್ಯಕ್ತಿಗಳನ್ನು ಒಂದೇ ವೇದಿಕೆಯಲ್ಲಿ ಒಟ್ಟುಗೂಡಿಸುತ್ತದೆ.
[ad_2]