[Mission 2022] ದೈನಂದಿನ ಪ್ರಚಲಿತ ಘಟನೆಗಳು ದಿನಾಂಕ – 3ನೇ ಫೆಬ್ರುವರಿ 2022 – INSIGHTSIAS

[ad_1]

 

 

ಪರಿವಿಡಿ:

 ಸಾಮಾನ್ಯ ಅಧ್ಯಯನ ಪತ್ರಿಕೆ  2 :

1. ರಾಷ್ಟ್ರಪತಿಗಳ ಭಾಷಣದ ಮೇಲೆ ವಂದನಾ ನಿರ್ಣಯ.

2. ಕ್ರಿಮಿನಲ್ ಕಾನೂನುಗಳಿಗೆ ತಿದ್ದುಪಡಿಗಳು.

3. ಲೋಕಾಯುಕ್ತದ ಅಧಿಕಾರವನ್ನು ಸೀಮಿತಗೊಳಿಸಲು ಕೇರಳದ ಪ್ರಸ್ತಾಪ.

4. ಚುನಾವಣಾ ಬಾಂಡ್‌ಗಳು.

5. ಶಾಶ್ವತ ಸಿಂಧೂ ಆಯೋಗ.

 

ಸಾಮಾನ್ಯ ಅಧ್ಯಯನ ಪತ್ರಿಕೆ 3:

1. ವರ್ಚುವಲ್ ಡಿಜಿಟಲ್ ಸ್ವತ್ತುಗಳು ಯಾವುವು?

2. ಹ್ಯಾಕ್ ಪ್ರೂಫ್ ಕ್ವಾಂಟಮ್ ಸಂವಹನವನ್ನು ಪ್ರದರ್ಶಿಸಿದ ISRO.

 

ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ಸಂಗತಿಗಳು:

1. ಆಂಧ್ರಪ್ರದೇಶದ CLAP ಅಭಿಯಾನ.

2. ಹಿನ್ನಿವ್ಟ್ರೆಪ್ ನ್ಯಾಷನಲ್ ಲಿಬರೇಶನ್ ಕೌನ್ಸಿಲ್ (HNLC).

3. ಸಾಫ್ರನ್ ಬೌಲ್ ಪ್ರಾಜೆಕ್ಟ್.

 


ಸಾಮಾನ್ಯ ಅಧ್ಯಯನ ಪತ್ರಿಕೆ : 2


 

ವಿಷಯಗಳು: ಸಂಸತ್ತು ಮತ್ತು ರಾಜ್ಯ ಶಾಸಕಾಂಗಗಳು – ರಚನೆ, ಕಾರ್ಯವೈಖರಿ, ವ್ಯವಹಾರದ ನಡಾವಳಿಗಳು, ಅಧಿಕಾರಗಳು ಮತ್ತು ಸವಲತ್ತುಗಳು ಮತ್ತು ಇವುಗಳಿಂದ ಉಂಟಾಗುವ ಸಮಸ್ಯೆಗಳು.

ರಾಷ್ಟ್ರಪತಿಗಳ ಭಾಷಣದ ಮೇಲೆ ವಂದನಾ ನಿರ್ಣಯ:


(Motion of thanks to President’s Address)

ಸಂದರ್ಭ :

ಬಜೆಟ್ ಅಧಿವೇಶನದ ಆರಂಭದಲ್ಲಿ, ಭಾರತದ ರಾಷ್ಟ್ರಪತಿಗಳು ಸಂಸತ್ತಿನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡುತ್ತಾರೆ. ಅಧ್ಯಕ್ಷರ ಈ ಭಾಷಣವು ಸಾಮಾನ್ಯವಾಗಿ ಕಳೆದ ವರ್ಷದ ಸರ್ಕಾರದ ಸಾಧನೆಗಳನ್ನು ಎತ್ತಿ ತೋರಿಸುತ್ತದೆ ಮತ್ತು ಭವಿಷ್ಯದ ಗುರಿಗಳು ಮತ್ತು ಯೋಜನೆಗಳನ್ನು ವಿವರಿಸುತ್ತದೆ.

  1. ರಾಷ್ಟ್ರಪತಿಗಳ ಭಾಷಣದ ನಂತರ, ಪ್ರತಿ ಸದನದಲ್ಲಿ ಆಡಳಿತ ಪಕ್ಷದ ಸಂಸದರು ಧನ್ಯವಾದಗಳನ್ನು ಅರ್ಪಿಸುತ್ತಾರೆ. ಈ ಸಮಯದಲ್ಲಿ, ರಾಜಕೀಯ ಪಕ್ಷಗಳು ರಾಷ್ಟ್ರಪತಿಗಳ ಭಾಷಣದ ಮೇಲೆ ವಂದನಾ ನಿರ್ಣಯ (Motion of thanks to President’s Address) ಸಲ್ಲಿಸಿ ಚರ್ಚೆ ಮಾಡುತ್ತವೆ.

“ವಂದನಾ ನಿರ್ಣಯ” (Motion of thanks) ಎಂದರೇನು ಮತ್ತು ಅದು ಒಳಗೊಂಡಿರುವ ಅಂಶಗಳು ಯಾವುವು?

ಬಜೆಟ್ ಅಧಿವೇಶನದ ಆರಂಭದಲ್ಲಿ ರಾಷ್ಟ್ರಪತಿಗಳು ಸಂಸತ್ತಿನ ಜಂಟಿ ಸಭೆಯನ್ನುದ್ದೇಶಿಸಿ ಭಾಷಣ ಮಾಡುತ್ತಾರೆ. ರಾಷ್ಟ್ರಪತಿಗಳ ಈ ಭಾಷಣವನ್ನು ಸರ್ಕಾರ ಸಿದ್ಧಪಡಿಸಿದ್ದು, ಇದು ಸರ್ಕಾರದ ಸಾಧನೆಗಳನ್ನು ವಿವರಿಸುತ್ತದೆ.

ರಾಷ್ಟ್ರಪತಿಗಳ ಭಾಷಣದ ನಂತರ, ಪ್ರತಿ ಸದನದಲ್ಲಿ ಆಡಳಿತ ಪಕ್ಷದ ಸಂಸದರು ಧನ್ಯವಾದಗಳನ್ನು ಅರ್ಪಿಸುತ್ತಾರೆ. ಈ ಸಮಯದಲ್ಲಿ, ರಾಜಕೀಯ ಪಕ್ಷಗಳು ವಂದನಾ ನಿರ್ಣಯದ ಮೇಲೆ ಚರ್ಚೆ ಮಾಡುತ್ತವೆ ಮತ್ತು ತಿದ್ದುಪಡಿಗೆ ಸಲಹೆಗಳನ್ನು ನೀಡುತ್ತವೆ.

ಇದಕ್ಕೆ ಸಂಬಂಧಿಸಿದ ಸಾಂವಿಧಾನಿಕ ನಿಬಂಧನೆಗಳು:

ರಾಷ್ಟ್ರಪತಿಗಳ ಭಾಷಣ ಮತ್ತು ವಂದನಾ ನಿರ್ಣಯದ ಮೇಲಿನ ಚರ್ಚೆಯನ್ನು (ಧನ್ಯವಾದಗಳ ಚಲನೆಯನ್ನು) ಸಂವಿಧಾನದ ಅನುಚ್ಛೇದ 86 (1) ಮತ್ತು 87 (1) ವಿಧಿಗಳು ಮತ್ತು ಲೋಕಸಭೆಯಲ್ಲಿನ ಕಾರ್ಯವಿಧಾನ ಮತ್ತು ವ್ಯವಹಾರದ ನಡವಳಿಕೆಯ ನಿಯಮಗಳ 16 ರಿಂದ 24 ರವರೆಗಿನ ನಿಯಮಗಳ ಮೂಲಕ ನಿಯಂತ್ರಿಸಲಾಗುತ್ತದೆ.

“ ವಂದನಾನಿರ್ಣಯ” ಕ್ಕೆ ತಿದ್ದುಪಡಿಗಳು:

  1. ಅಧ್ಯಕ್ಷರು ಸದನವನ್ನು ಉದ್ದೇಶಿಸಿ ಮಾತನಾಡಿದ ನಂತರ, ರಾಷ್ಟ್ರಪತಿಗಳ ಭಾಷಣದ ಮೇಲಿನ ಮೋಷನ್ ಆಫ್ ಥ್ಯಾಂಕ್ಸ್ ಗೆ ಅಥವಾ ವಂದನಾ ನಿರ್ಣಯಕ್ಕೆ ತಿದ್ದುಪಡಿಯನ್ನು ಸದನದಲ್ಲಿ ಮಂಡಿಸಬಹುದು.
  2. ತಿದ್ದುಪಡಿಯು ವಂದನಾನಿರ್ಣಯ ದಲ್ಲಿರುವ ವಿಷಯಗಳನ್ನು ಹಾಗೂ ಸದಸ್ಯರ ಅಭಿಪ್ರಾಯದಲ್ಲಿ, ರಾಷ್ಟ್ರಪತಿಗಳ ಭಾಷಣದಲ್ಲಿ ಉಲ್ಲೇಖಿಸಿದ ವಿಷಯಗಳಿಗೆ ಸಂಬಂಧಿಸಿದ ವಿಚಾರಗಳನ್ನು ನಮೂದಿಸುವಲ್ಲಿ ವಿಫಲವಾಗಿದೆ ಎಂದು ಉಲ್ಲೇಖಿಸಬಹುದು.
  3. ವಂದನ ನಿರ್ಣಯಕ್ಕೆ ತಿದ್ದುಪಡಿಯನ್ನು ಸ್ಪೀಕರ್ ತನ್ನ ವಿವೇಚನೆಯ ಅನುಸಾರ ಸೂಕ್ತವಾದ ರೀತಿಯಲ್ಲಿ ಸೇರಿಸಬಹುದು.

ಮಿತಿಗಳು:

  1. ವಂದನಾ ನಿರ್ಣಯದ ಮೇಲಿನ ಚರ್ಚೆಯ ಸಂದರ್ಭದಲ್ಲಿ, ಕೇಂದ್ರ ಸರ್ಕಾರವು ನೇರವಾಗಿ ಜವಾಬ್ದಾರನಲ್ಲದ ವಿಷಯಗಳನ್ನು ಸದಸ್ಯರು ಚರ್ಚಿಸಲು ಸಾಧ್ಯವಿಲ್ಲ.
  2. ಇದಲ್ಲದೆ, ರಾಷ್ಟ್ರಪತಿಗಳ ಭಾಷಣದ ಚರ್ಚೆಯ ಸಂದರ್ಭದಲ್ಲಿ ರಾಷ್ಟ್ರಪತಿಯವರನ್ನು ಉಲ್ಲೇಖಿಸಲಾಗುವುದಿಲ್ಲ, ಏಕೆಂದರೆ ಭಾಷಣದ ವಿಷಯಕ್ಕೆ ಕೇಂದ್ರ ಸರ್ಕಾರವು ಜವಾಬ್ದಾರಿಯಾಗಿರುತ್ತದೆಯೇ ಹೊರತು  ರಾಷ್ಟ್ರಪತಿಗಳಲ್ಲ ಎಂಬುದು ಮಿತಿಯಾಗಿದೆ.

ಇದರ ಅಂಗೀಕಾರ:

  1. ಸಂಸತ್ತಿನ ಸದಸ್ಯರು ವಂದನಾನಿರ್ಣಯದ ಮೇಲೆ ಮತ ಚಲಾಯಿಸುತ್ತಾರೆ. ಈ ನಿರ್ಣಯವನ್ನು ಎರಡೂ ಸದನಗಳಲ್ಲಿ ಅಂಗೀಕರಿಸುವ ಅಗತ್ಯವಿದೆ.
  2. ‘ವಂದನಾನಿರ್ಣಯ’ ಕ್ಕೆ ಅಂಗೀಕಾರವನ್ನು ಪಡೆಯುವಲ್ಲಿ ಸರ್ಕಾರ ವಿಫಲವಾದರೆ ಅದನ್ನು ಸರ್ಕಾರದ ಸೋಲು ಎಂದು ಪರಿಗಣಿಸಲಾಗುತ್ತದೆ ಮತ್ತು ಇದು ಸರ್ಕಾರದ ಅವನತಿಗೆ ಕಾರಣವಾಗಬಹುದು.
  3. ಅದಕ್ಕಾಗಿಯೇ, ‘ವಂದನಾನಿರ್ಣಯ’ ವನ್ನು ‘ಅವಿಶ್ವಾಸ ನಿರ್ಣಯ’ ಎಂದು ಪರಿಗಣಿಸಲಾಗುತ್ತದೆ.

 

ವಿಷಯಗಳು: ಸರ್ಕಾರದ ನೀತಿಗಳು ಮತ್ತು ವಿವಿಧ ಕ್ಷೇತ್ರಗಳಲ್ಲಿನ ಅಭಿವೃದ್ಧಿಯ ಅಡಚಣೆಗಳು ಮತ್ತು ಅವುಗಳ ವಿನ್ಯಾಸ ಮತ್ತು ಅನುಷ್ಠಾನದಿಂದ ಉಂಟಾಗುವ ಸಮಸ್ಯೆಗಳು.

ಕ್ರಿಮಿನಲ್ ಕಾನೂನುಗಳಿಗೆ ತಿದ್ದುಪಡಿಗಳು:


(Amendments to Criminal Laws)

ಸಂದರ್ಭ:

ಇತ್ತೀಚೆಗಷ್ಟೇ ಕೇಂದ್ರ ಸರ್ಕಾರವು ರಾಜ್ಯಸಭೆಗೆ ನೀಡಿರುವ ಮಾಹಿತಿಯ ಪ್ರಕಾರ ‘ಕ್ರಿಮಿನಲ್ ಕಾನೂನುಗಳಿಗೆ ಸಮಗ್ರ ತಿದ್ದುಪಡಿ’ (Amendments to Criminal Laws) ತರುವ ಪ್ರಕ್ರಿಯೆಗೆ ಚಾಲನೆ ನೀಡಿದೆ ಎಂದು ಹೇಳಿದೆ.

  1. ‘ವೈವಾಹಿಕ ಅತ್ಯಾಚಾರ’ (Marital Rape) ವನ್ನು ಭಾರತೀಯ ದಂಡ ಸಂಹಿತೆಯಡಿ (IPC) ಅಪರಾಧ ಎಂದು ಸೇರಿಸುವ ಬಗ್ಗೆ ಕೇಂದ್ರ ಸರ್ಕಾರ ಯಾವುದೇ ನಿರ್ಧಾರ ಕೈಗೊಂಡಿದೆಯೇ ಎಂದು ಲೋಕಸಭೆಯಲ್ಲಿ ಕೇಳಲಾದ ಪ್ರಶ್ನೆಯೊಂದಕ್ಕೆ ಉತ್ತರಿಸುವಾಗ ಸರ್ಕಾರವು ಈ ಮಾಹಿತಿಯನ್ನು ನೀಡಿದೆ.

ವೈವಾಹಿಕ ಅತ್ಯಾಚಾರದ ಅಪರಾಧಿಕರಣ:

ದಯವಿಟ್ಟು ಗಮನಿಸಿ: ಹೈಕೋರ್ಟ್,‘ಭಾರತೀಯ ದಂಡ ಸಂಹಿತೆಯ’ ಸೆಕ್ಷನ್ 375 ರ ಅಡಿಯಲ್ಲಿ ವೈವಾಹಿಕ ಅತ್ಯಾಚಾರಕ್ಕೆ ನೀಡಲಾದ ‘ವಿನಾಯತಿ’ಯನ್ನು ಪ್ರಶ್ನಿಸಿ ಸಲ್ಲಿಸಲಾದ ಅನೇಕ ಅರ್ಜಿಗಳನ್ನು ವಿಚಾರಣೆ ನಡೆಸುತ್ತಿದೆ.

  1. ವೈವಾಹಿಕ ಅತ್ಯಾಚಾರದ ವಿಷಯವು ತುಂಬಾ ಸೂಕ್ಷ್ಮವಾಗಿದ್ದು ವ್ಯಾಪಕವಾದ ಸಮಾಲೋಚನೆಯ ಅಗತ್ಯವಿರುವ ಕಾರಣ ತನ್ನ ನಿಲುವನ್ನು ಸ್ಪಷ್ಟಪಡಿಸಲು ಕೇಂದ್ರ ಸರ್ಕಾರವು ಹೆಚ್ಚಿನ ಸಮಯವನ್ನು ಬಯಸಿದೆ.
  2. ‘ಭಾರತೀಯ ದಂಡ ಸಂಹಿತೆಯ’ ಸೆಕ್ಷನ್ 375 ರ ಅಡಿಯಲ್ಲಿ ಹೆಂಡತಿಯ ವಯಸ್ಸು 15 ವರ್ಷಕ್ಕಿಂತ ಹೆಚ್ಚಿದ್ದರೆ, ಆದರೆ 18 ವರ್ಷಕ್ಕಿಂತ ಕಡಿಮೆ ಇದ್ದರೂ ಹೆಂಡತಿಯೊಂದಿಗೆ ಗಂಡನು ನಡೆಸುವ ಬಲವಂತದ ಲೈಂಗಿಕ ಸಂಭೋಗವನ್ನು ‘ಅತ್ಯಾಚಾರ’ ಅಪರಾಧವೆಂದು ಪರಿಗಣಿಸಲಾಗುವುದಿಲ್ಲ. ಈ ವಿನಾಯಿತಿಯನ್ನು “ವೈವಾಹಿಕ ಅತ್ಯಾಚಾರ ವಿನಾಯಿತಿ” (Marital Rape Exception) ಎಂದು ಕರೆಯಲಾಗುತ್ತದೆ, ಆದಕಾರಣ ಈ ವಿನಾಯಿತಿಯನ್ನು ರದ್ದುಪಡಿಸುವಂತೆ ದೆಹಲಿ ಉಚ್ಚ ನ್ಯಾಯಾಲಯದಲ್ಲಿ ಸಲ್ಲಿಸಲಾದ ಅರ್ಜಿಗಳಲ್ಲಿ ಕೋರಲಾಗಿದೆ.

‘ಭಾರತೀಯ ದಂಡ ಸಂಹಿತೆಯ’ ಸೆಕ್ಷನ್ 375:

ಹೆಂಡತಿಯ ವಯಸ್ಸು 15 ವರ್ಷಕ್ಕಿಂತ ಹೆಚ್ಚಿದ್ದರೆ, ಹೆಂಡತಿಯೊಂದಿಗೆ ಗಂಡನು ನಡೆಸುವ ಬಲವಂತದ ಲೈಂಗಿಕ ಸಂಭೋಗವನ್ನು ‘ಅತ್ಯಾಚಾರ’ ಅಪರಾಧವೆಂದು  ಪರಿಗಣಿಸಲಾಗುವುದಿಲ್ಲ. ಈ ವಿನಾಯಿತಿಯನ್ನು “ವೈವಾಹಿಕ ಅತ್ಯಾಚಾರ ವಿನಾಯಿತಿ” (Marital Rape Exception) ಎಂದೂ ಕರೆಯಲಾಗುತ್ತದೆ ಎಂದು ಹೇಳುತ್ತದೆ.

ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ (NFHS) ಸಂಶೋಧನೆಗಳು:

  1. ಇದುವರೆಗೆ ಮದುವೆಯಾಗಿರುವ ಅಥವಾ ಪ್ರಸ್ತುತ ವಿವಾಹವಾಗಿರುವ 7% ಮಹಿಳೆಯರು ವೈವಾಹಿಕ ಲೈಂಗಿಕ ಹಿಂಸೆಯನ್ನು ಅನುಭವಿಸಿದ್ದಾರೆ.
  2. 15-49 ವರ್ಷ ವಯಸ್ಸಿನ ಮಹಿಳೆಯರಲ್ಲಿ ಮದುವೆಯಾಗಿರುವ ಅಥವಾ ಪ್ರಸ್ತುತ ವೈವಾಹಿಕ ಲೈಂಗಿಕ ದೌರ್ಜನ್ಯವನ್ನು ಅನುಭವಿಸುತ್ತಿರುವ ಮಹಿಳೆಯರಲ್ಲಿ, 83% ಮಹಿಳೆಯರು ತಮ್ಮ ಪ್ರಸ್ತುತ ಪತಿಯನ್ನು ಮತ್ತು 9% ಮಹಿಳೆಯರು ತಮ್ಮ ಮಾಜಿ ಪತಿ ಲೈಂಗಿಕ ದೌರ್ಜನ್ಯದ ಅಪರಾಧಿ ಎಂದು ವರದಿ ಮಾಡಿದ್ದಾರೆ.

ವೈವಾಹಿಕ ಅತ್ಯಾಚಾರದಿಂದ ವಿನಾಯಿತಿ ನೀಡುವ ಕುರಿತ ಪ್ರಸ್ತುತ ವಿವಾದ:

‘ವೈವಾಹಿಕ ಅತ್ಯಾಚಾರ’ವನ್ನು ಅಪರಾಧವೆಂದು ಘೋಷಿಸುವುದು ‘ವಿವಾಹ ಸಂಸ್ಥೆ’ಯನ್ನು ಇಕ್ಕಟ್ಟಿಗೆ ಸಿಲುಕಿಸುತ್ತದೆ ಎಂದು ಸರ್ಕಾರವು ಹಲವಾರು ಸಂದರ್ಭಗಳಲ್ಲಿ ಹೇಳಿದ್ದರೂ, ತಜ್ಞರ ಪ್ರಕಾರ ‘ಖಾಸಗಿತನದ ಹಕ್ಕು’ ಸೇರಿದಂತೆ ಸುಪ್ರೀಂ ಕೋರ್ಟ್‌ನ ಇತ್ತೀಚಿನ ತೀರ್ಪುಗಳು ಸರ್ಕಾರದ ಈ ವಾದಗಳನ್ನು ದುರ್ಬಲಗೊಳಿಸಿವೆ.

ಈ ವಿಷಯದ ಕುರಿತು ಸರ್ಕಾರದ ನಿಲುವನ್ನು ಪ್ರಶ್ನಿಸುವ ಇತ್ತೀಚಿನ ತೀರ್ಪುಗಳು:

‘ಇಂಡಿಪೆಂಡೆಂಟ್ ಥಾಟ್ ವರ್ಸಸ್ ಯೂನಿಯನ್ ಆಫ್ ಇಂಡಿಯಾ’ (Independent Thought vs. Union of India) ಪ್ರಕರಣದ ಅಕ್ಟೋಬರ್ 2017 ರ ತೀರ್ಪು. ಈ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ ‘ಅಪ್ರಾಪ್ತ ಪತ್ನಿಯ ಮೇಲಿನ ಅತ್ಯಾಚಾರ’ ವನ್ನು ಅಪರಾಧ ಎಂದು ಘೋಷಿಸಿದೆ.

ನ್ಯಾಯಮೂರ್ತಿ ಕೆ.ಎಸ್. ಪುಟ್ಟಸ್ವಾಮಿ Vs ಯೂನಿಯನ್ ಆಫ್ ಇಂಡಿಯಾ ಪ್ರಕರಣದಲ್ಲಿ (ಸೆಪ್ಟೆಂಬರ್ 2018), ಸಂವಿಧಾನವು ಖಾತರಿಪಡಿಸಿದ ಪ್ರತಿಯೊಬ್ಬ ವ್ಯಕ್ತಿಯ ಖಾಸಗಿತನದ ಮೂಲಭೂತ ಹಕ್ಕನ್ನು ಸರ್ವೋಚ್ಚ ನ್ಯಾಯಾಲಯವು ಸರ್ವಾನುಮತದಿಂದ ಗುರುತಿಸಿದೆ.

‘ಜೋಸೆಫ್ ಶೈನ್ vs ಯೂನಿಯನ್ ಆಫ್ ಇಂಡಿಯಾ’ ಪ್ರಕರಣ (ಅಕ್ಟೋಬರ್ 2018). ಈ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ ಐವರು ನ್ಯಾಯಾಧೀಶರ ಪೀಠವು ‘ವ್ಯಭಿಚಾರ’ (Adultery) ವನ್ನು ಅಪರಾಧ ಎಂದು ಘೋಷಿಸುವ ಮೂಲಕ ಖಂಡಿಸಿತ್ತು.

ವೈವಾಹಿಕ ಅತ್ಯಾಚಾರದ ಬಲಿಪಶುಗಳಿಗೆ ಲಭ್ಯವಿರುವ ಕಾನೂನು ಸಹಾಯಗಳು:

ಸಂತ್ರಸ್ತರು ಕೌಟುಂಬಿಕ ದೌರ್ಜನ್ಯದಿಂದ ಮಹಿಳೆಯರ ರಕ್ಷಣೆ ಕಾಯಿದೆ, 2005’  (Protection of Women from Domestic Violence Act, 2005) ಅಡಿಯಲ್ಲಿ ಒದಗಿಸಲಾದ ನಾಗರಿಕ ಪರಿಹಾರಗಳನ್ನು ಮಾತ್ರ ಆಶ್ರಯಿಸುತ್ತಾರೆ.

ಈ ನಿಟ್ಟಿನಲ್ಲಿ ಇರುವ ಕಾನೂನು ನಿಬಂಧನೆಗಳು:

ಪ್ರಸ್ತುತ, ‘ವೈವಾಹಿಕ ಅತ್ಯಾಚಾರ’ವನ್ನು ‘ಹಿಂದೂ ವಿವಾಹ ಕಾಯಿದೆ’, 1955, ‘ಮುಸ್ಲಿಂ ವೈಯಕ್ತಿಕ ಕಾನೂನು (ಶರಿಯತ್) ಕಾಯಿದೆ’, 1937 (ಮುಸ್ಲಿಂ ವೈಯಕ್ತಿಕ ಕಾನೂನು (ಶರಿಯತ್) ಅರ್ಜಿ ಕಾಯಿದೆ, 1937)( Muslim Personal Law (Shariat) Application Act, 1937) ಮತ್ತು ‘ವಿಶೇಷ ವಿವಾಹ ಕಾಯಿದೆ’, 1954 ರಲ್ಲಿ ವಿಚ್ಛೇದನಕ್ಕೆ ಆಧಾರವಾಗಿ ಪರಿಗಣಿಸಲಾಗಿಲ್ಲ, ಮತ್ತು ಇದನ್ನು ವಿಚ್ಛೇದನಕ್ಕೆ ಆಧಾರವಾಗಿ ಬಳಸಲಾಗುವುದಿಲ್ಲ ಅಥವಾ ಗಂಡನ ವಿರುದ್ಧ ಕ್ರೌರ್ಯದ ಪ್ರಕರಣವನ್ನು ದಾಖಲಿಸಲು ಬಳಸಲಾಗುವುದಿಲ್ಲ.

  1. ಐಪಿಸಿಯ ಸೆಕ್ಷನ್ 375 ,“ಪತ್ನಿಯ ವಯಸ್ಸು 15 ವರ್ಷಕ್ಕಿಂತ ಕಡಿಮೆಯಿಲ್ಲದಿದ್ದರೆ, ಪುರುಷನು ತನ್ನ ಹೆಂಡತಿಯೊಂದಿಗೆ ನಡೆಸುವ ಲೈಂಗಿಕ ಸಂಪರ್ಕವು ಅತ್ಯಾಚಾರವಲ್ಲ” ಎಂದು ಹೇಳುತ್ತದೆ.
  2. ಯಾವುದೇ ಕಾನೂನು ಅಥವಾ ಶಾಸನವು ‘ವೈವಾಹಿಕ ಅತ್ಯಾಚಾರ’ವನ್ನು ಗುರುತಿಸುವುದಿಲ್ಲ.
  3. ‘ಕೌಟುಂಬಿಕ ಹಿಂಸಾಚಾರದ ವಿರುದ್ಧ ಮಹಿಳೆಯರ ರಕ್ಷಣೆ ಕಾಯಿದೆ, 2005’ರ ಅಡಿಯಲ್ಲಿ ಒದಗಿಸಲಾದ ನಾಗರಿಕ ಪರಿಹಾರಗಳನ್ನು ಮಾತ್ರ ಸಂತ್ರಸ್ತರು ಆಶ್ರಯಿಸುತ್ತಾರೆ.

ವೈವಾಹಿಕ ಅತ್ಯಾಚಾರವನ್ನು ಕ್ರಿಮಿನಲ್ ಅಪರಾಧ ಎಂದು ಘೋಷಿಸುವುದು ಅವಶ್ಯಕ ಏಕೆಂದರೆ;

  1. ತಮ್ಮ ಹೆಂಡತಿಯರೊಂದಿಗೆ ಸಮ್ಮತಿಯಿಲ್ಲದ ಸಂಭೋಗವನ್ನು ಹೊಂದುವುದು ಮತ್ತು ಬಲಪ್ರಯೋಗದ ಮೂಲಕ ತಮ್ಮ ಹೆಂಡತಿಯರನ್ನು ಲೈಂಗಿಕ ಕ್ರಿಯೆಗೆ ಬಲವಂತಪಡಿಸುವುದು ಸಾಮಾನ್ಯ ಅಭ್ಯಾಸವಾಗಿದೆ ಎಂದು ಹಲವಾರು ಅಧ್ಯಯನಗಳು ತೋರಿಸಿವೆ.
  2. ಮದುವೆಯು ‘ಸಮಾನ ಸಂಬಂಧಗಳ’ ಒಪ್ಪಂದವಾಗಿದೆ, ಮತ್ತು ಅದು ಎಲ್ಲದಕ್ಕೂ ಒಂದು ಬಾರಿ ನೀಡುವ ಒಪ್ಪಿಗೆಯಲ್ಲ.
  3. ಕಾನೂನಿನಲ್ಲಿ ಪತಿಗೆ ಅತ್ಯಾಚಾರ ಎಸಗಲು ನೀಡಿದ ಕಾನೂನು ವಿನಾಯಿತಿಯು ಪುರುಷರಿಗೆ ಅಸಮಾನ ಸವಲತ್ತುಗಳನ್ನು ಒದಗಿಸುತ್ತದೆ.
  4. ವೈವಾಹಿಕ ಅತ್ಯಾಚಾರಕ್ಕೆ ಬಲಿಯಾದ ಮಹಿಳೆಯರು/ಸಂತ್ರಸ್ತರು ದೀರ್ಘಕಾಲದ ಮನೋವೈಜ್ಞಾನಿಕ ಆಘಾತವನ್ನು ಅನುಭವಿಸುತ್ತಾರೆ.
  5. ಸೆಕ್ಷನ್ 375 ರ ಅಡಿಯಲ್ಲಿ ನೀಡಲಾದ ವಿನಾಯಿತಿಯು ಸಂವಿಧಾನದ 14, 15, 19 ಮತ್ತು 21 ನೇ ವಿಧಿಗಳ ಅಡಿಯಲ್ಲಿ ಮಹಿಳೆಯರಿಗೆ ನೀಡಲಾಗಿರುವ ಹಕ್ಕುಗಳನ್ನು ಉಲ್ಲಂಘಿಸುತ್ತದೆ.
  6. ಭಾರತೀಯ ಸಮಾಜದ ಪಿತೃಪ್ರಧಾನ ಸ್ವಭಾವವು ಪುರುಷರ ಮನಸ್ಸಿನಲ್ಲಿ ನೆಲೆಗೊಂಡಿದೆ, ತಮ್ಮ ಗಂಡಂದಿರು ಲೈಂಗಿಕತೆಯನ್ನು ಬಯಸಿದಾಗ ಅದನ್ನು ಮಹಿಳೆಯರು ಪಾಲಿಸಬೇಕೆಂದು ನಿರೀಕ್ಷಿಸಲಾಗಿದೆ.
  7. ವೈವಾಹಿಕ ಅತ್ಯಾಚಾರದಿಂದ ಬಳಲುತ್ತಿರುವ ಮಹಿಳೆ ದೈಹಿಕ ಹಿಂಸೆಯನ್ನು ಅನುಭವಿಸಬೇಕಾಗುತ್ತದೆ, ಜೊತೆಗೆ ತನ್ನ ಘನತೆಗೆ ದಕ್ಕೆಯಾವುದರಿಂದ ಆಕೆಯು ಮಾನಸಿಕ ಆಘಾತವನ್ನು ಅನುಭವಿಸಬೇಕಾಗುತ್ತದೆ.
  8. ಐಪಿಸಿ ಸೆಕ್ಷನ್ 375 ರಲ್ಲಿ ನೀಡಿರುವ ಈ ವಿನಾಯಿತಿಯನ್ನು ಕಳೆದ 70 ವರ್ಷಗಳಲ್ಲಿ ಎಂದಿಗೂ ಮುಟ್ಟಲಾಗಿಲ್ಲ.
  9. ಬಾಲ್ಯವಿವಾಹಗಳ ವ್ಯಾಪಕತೆ, ಮತ್ತು ಅನೇಕ ಸಂದರ್ಭಗಳಲ್ಲಿ ಮಹಿಳೆಯರ ಬಲವಂತದ ಮದುವೆಯ ವಿಷಯವು, ಸಮಾಜದಲ್ಲಿ ಸಾಮಾನ್ಯ ವಿದ್ಯಮಾನವಾಗಿ ಹೋಗಿದೆ.

‘ವೈವಾಹಿಕ ಅತ್ಯಾಚಾರ’ವನ್ನು ಅಪರಾಧವೆಂದು ಘೋಷಿಸುವುದರ ವಿರುದ್ಧದ ವಾದಗಳು:

  1. ‘ವೈವಾಹಿಕ ಅತ್ಯಾಚಾರ’ವನ್ನು ಅಪರಾಧವೆಂದು ಘೋಷಿಸುವುದು,“ಪತಿಗೆ ಕಿರುಕುಳ ನೀಡುವ ಸುಲಭ ಮಾರ್ಗವಾಗಿರುವುದರ ಜೊತೆಗೆ ಮದುವೆ ಎಂಬ ಸಂಸ್ಥೆಯನ್ನು ಅಸ್ಥಿರಗೊಳಿಸಬಹುದು”.
  2. ವರದಕ್ಷಿಣೆ ಕಾಯ್ದೆ ಎಂದು ಕರೆಯಲ್ಪಡುವ ‘ಐಪಿಸಿಯ ಸೆಕ್ಷನ್ 498 ಎ’ ಅನ್ನು “ಗಂಡಂದಿರಿಗೆ ಕಿರುಕುಳ ನೀಡಲು” ಸುಲಭ ಸಾಧನವಾಗಿ ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ.
  3. ‘ವೈವಾಹಿಕ ಅತ್ಯಾಚಾರ’ವನ್ನು ಇತರ ದೇಶಗಳು, ಹೆಚ್ಚಾಗಿ ಪಾಶ್ಚಿಮಾತ್ಯ ದೇಶಗಳು ಅಪರಾಧಿಕರಣ ಗೊಳಿಸಿವೆ. ಇದರರ್ಥ ಇವರನ್ನು ಕುರುಡಾಗಿ ಅನುಸರಿಸುವ ಮೂಲಕ ಭಾರತವೂ ಅದನ್ನೇ ಮಾಡಬೇಕು ಎಂದಲ್ಲ.
  4. ಅತ್ಯಾಚಾರ ಕಾನೂನುಗಳನ್ನು ಪರಿಶೀಲಿಸಲು ರಚಿಸಲಾದ ಕಾನೂನು ಆಯೋಗವು ಈ ಸಮಸ್ಯೆಯನ್ನು ಪರಿಶೀಲಿಸಿದೆ ಮತ್ತು ವೈವಾಹಿಕ ಅತ್ಯಾಚಾರವನ್ನು ಅಪರಾಧವೆಂದು ಪರಿಗಣಿಸುವ ಬಗ್ಗೆ ಯಾವುದೇ ಶಿಫಾರಸುಗಳನ್ನು ಮಾಡಿಲ್ಲ.
  5. ಹೆಂಡತಿಗೆ ವೈಯಕ್ತಿಕವಾಗಿ, ವೈವಾಹಿಕ ಅತ್ಯಾಚಾರದಂತೆ ತೋರುವ ಲೈಂಗಿಕ ಸಸಂಬಂಧಗಳು ಇನ್ನೊಬ್ಬರಿಗೆ ಆ ರೀತಿ ಅನ್ನಿಸದಿರಬಹುದು.
  6. ಪುರುಷ ಮತ್ತು ಅವನ ಸ್ವಂತ ಹೆಂಡತಿಯ ನಡುವಿನ ಲೈಂಗಿಕ ಕ್ರಿಯೆಗಳ ಸಂದರ್ಭದಲ್ಲಿ ಯಾವುದೇ ಶಾಶ್ವತವಾದ ಪುರಾವೆಗಳು ಕಂಡುಬರುವುದಿಲ್ಲ.

ಕ್ರಿಮಿನಲ್ ಕಾನೂನಿನ ಸುಧಾರಣಾ ಸಮಿತಿ:

  1. ಕ್ರಿಮಿನಲ್ ಕಾನೂನನ್ನು ಸುಧಾರಿಸಲು ಗೃಹ ಸಚಿವಾಲಯವು (MHA) ರಾಷ್ಟ್ರೀಯ ಮಟ್ಟದ ಸಮಿತಿಯನ್ನು ರಚಿಸಿದೆ.
  2. ಈ ಸಮಿತಿಯ ಅಧ್ಯಕ್ಷರು ರಣಬೀರ್ ಸಿಂಗ್ (ಉಪಕುಲಪತಿ, ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯ ದೆಹಲಿ).
  3. ಈ ಸಮಿತಿಯು ಸರ್ಕಾರಕ್ಕೆ ಸಲ್ಲಿಸುವ ವರದಿಗಾಗಿ ಆನ್‌ಲೈನ್‌ನಲ್ಲಿ ತಜ್ಞರೊಂದಿಗೆ ಸಮಾಲೋಚಿಸಿ ಅಭಿಪ್ರಾಯಗಳನ್ನು ಸಂಗ್ರಹಿಸುತ್ತದೆ ಮತ್ತು ಲಭ್ಯವಿರುವ ವಸ್ತುಗಳನ್ನು ಸಂಗ್ರಹಿಸುತ್ತದೆ.

ಕ್ರಿಮಿನಲ್  ಕಾನೂನುಗಳಿಗೆ ಸಂಬಂಧಿಸಿದಂತೆ ಈ ಹಿಂದಿನ ಸಮಿತಿಗಳು:

ಮಾಧವ್ ಮೆನನ್ ಕಮಿಟಿ: ಇದು 2007 ರಲ್ಲಿ CJSI ನಲ್ಲಿನ ಸುಧಾರಣೆಗಳ ಕುರಿತು ವಿವಿಧ ಶಿಫಾರಸುಗಳನ್ನು ಸೂಚಿಸಿ ತನ್ನ ವರದಿಯನ್ನು ಸಲ್ಲಿಸಿತು.

ಮಳಿಮಠ ಸಮಿತಿ ವರದಿ: ಇದು 2003 ರಲ್ಲಿ ಕ್ರಿಮಿನಲ್ ಜಸ್ಟಿಸ್ ಸಿಸ್ಟಮ್ ಇನ್ ಇಂಡಿಯಾ (CJSI) ಕುರಿತು ತನ್ನ ವರದಿಯನ್ನು ಸಲ್ಲಿಸಿತು.

Current Affairs

 

ವಿಷಯಗಳು: ವಿವಿಧ ಸಾಂವಿಧಾನಿಕ ಹುದ್ದೆಗಳಿಗೆ ನೇಮಕಾತಿ,ವಿವಿಧ ಸಾಂವಿಧಾನಿಕ ಸಂಸ್ಥೆಗಳ ಅಧಿಕಾರಗಳು, ಕಾರ್ಯಗಳು ಮತ್ತು ಜವಾಬ್ದಾರಿಗಳು.

ಲೋಕಾಯುಕ್ತದ ಅಧಿಕಾರವನ್ನು ಸೀಮಿತಗೊಳಿಸಲು ಕೇರಳದ ಪ್ರಸ್ತಾಪ:


(Kerala’s Proposal to limit Lokayukta’s Power)

ಸಂದರ್ಭ:

ಇತ್ತೀಚೆಗಷ್ಟೇ ಕೇರಳ ಸರ್ಕಾರವು ಸುಗ್ರೀವಾಜ್ಞೆಯ ಮೂಲಕ ‘ಕೇರಳ ಲೋಕಾಯುಕ್ತ ಕಾಯ್ದೆ’ಗೆ ತಿದ್ದುಪಡಿ ತರುವ ಪ್ರಸ್ತಾವನೆಯನ್ನು ಮಂಡಿಸಿದೆ.

  1. ಸರ್ಕಾರದ ಈ ಕ್ರಮವನ್ನು ಪ್ರತಿಪಕ್ಷಗಳು ಟೀಕಿಸಿವೆ.

ಪ್ರಸ್ತಾವಿತ ಬದಲಾವಣೆಗಳು:

ಪ್ರಕರಣವನ್ನು ಆಲಿಸಲು ಅವಕಾಶವನ್ನು ಒದಗಿಸಿದ ನಂತರ, ಸರ್ಕಾರವು ಲೋಕಾಯುಕ್ತರ ತೀರ್ಪನ್ನು ಒಪ್ಪಿಕೊಳ್ಳಬಹುದು ಅಥವಾ ತಿರಸ್ಕರಿಸಬಹುದು.

ಪ್ರಸ್ತುತ, ಕೇರಳ ಲೋಕಾಯುಕ್ತ ಕಾಯಿದೆ’ಯ ಸೆಕ್ಷನ್ 14 ರ ಅಡಿಯಲ್ಲಿ, ಲೋಕಾಯುಕ್ತರು ನಿರ್ದೇಶಿಸಿದಾಗ ಸಾರ್ವಜನಿಕ ನೌಕರನು ಹುದ್ದೆಯನ್ನು ಖಾಲಿ ಮಾಡುವುದು ಕಡ್ಡಾಯವಾಗಿದೆ.

ತಿದ್ದುಪಡಿಯನ್ನು ವಿರೋಧಿಸಲು ಕಾರಣಗಳು:

ತಿದ್ದುಪಡಿಗಳನ್ನು ಎರಡು ಕಾರಣಗಳಿಗಾಗಿ ವಿರೋಧಿಸಲಾಗುತ್ತಿದೆ:

  1. ಕಾಯಿದೆಯ ನಿಬಂಧನೆಗಳನ್ನು ಸುಗ್ರೀವಾಜ್ಞೆಯ ಮೂಲಕ ತಿದ್ದುಪಡಿ ಮಾಡಲಾಗುತ್ತಿದೆ ಮತ್ತು ಆದ್ದರಿಂದ ವಿಷಯದ ಬಗ್ಗೆ ಯಾವುದೇ ಸರಿಯಾದ ಚರ್ಚೆಯನ್ನು ಮಾಡಲಾಗಿಲ್ಲ.
  2. ಪ್ರಸ್ತಾವಿತ ತಿದ್ದುಪಡಿಗಳು ‘ಕೇಂದ್ರ ಲೋಕಪಾಲ ಮತ್ತು ಲೋಕಾಯುಕ್ತ ಕಾಯಿದೆ, 2013’ರ ಮೂಲ ಆಶಯವನ್ನು ಉಲ್ಲಂಘಿಸುತ್ತವೆ.

 ಲೋಕಾಯುಕ್ತ ಎಂದರೆ ಯಾರು?

ಕೇಂದ್ರ ಲೋಕಪಾಲ್ ಮತ್ತು ಲೋಕಾಯುಕ್ತ ಕಾಯಿದೆ, 2013 (The central Lokpal and Lokayuktas Act, 2013) ಅನ್ನು 1 ಜನವರಿ 2014 ರಂದು ಅಧಿಸೂಚಿಸಲಾಯಿತು.

ರಾಜ್ಯದಲ್ಲಿರುವ ‘ಲೋಕಾಯುಕ್ತ’ ಹುದ್ದೆಯು ಕೇಂದ್ರದಲ್ಲಿನ ‘ಲೋಕಪಾಲ’ ಹುದ್ದೆಗೆ ಸಮಾನವಾಗಿದೆ.

ಮೂಲತಃ, ಕೇಂದ್ರ ಕಾನೂನು ಪ್ರತಿ ರಾಜ್ಯದಲ್ಲಿ ಕಡ್ಡಾಯವಾಗಿ ‘ಲೋಕಾಯುಕ್ತ’ರ ನೇಮಕ ಮಾಡುವುದನ್ನು ಪರಿ ಕಲ್ಪಿಸಿದೆ.

ಆದಾಗ್ಯೂ, ಈ ನಿಬಂಧನೆಗೆ ವಿರೋಧದ ನಂತರ, ಕೇಂದ್ರ ಕಾನೂನಿನಲ್ಲಿ ಕೇವಲ ಒಂದು ಚೌಕಟ್ಟನ್ನು ರೂಪಿಸಲಾಯಿತು ಮತ್ತು ಅದರ ಬಗ್ಗೆ ನಿರ್ದಿಷ್ಟ ನಿಬಂಧನೆಗಳನ್ನು ರೂಪಿಸುವ ಕಾರ್ಯವನ್ನು ರಾಜ್ಯಗಳಿಗೆ ಬಿಡಲಾಯಿತು.

ಈ ನಿಟ್ಟಿನಲ್ಲಿ, ರಾಜ್ಯಗಳು ತಮ್ಮದೇ ಆದ ಕಾನೂನುಗಳನ್ನು ರೂಪಿಸಲು ಈ ಶಾಸನದ ಅಡಿಯಲ್ಲಿ ಸ್ವಾಯತ್ತತೆಯನ್ನು ನೀಡಲಾಗಿದೆ, ಆದ್ದರಿಂದ, ಲೋಕಾಯುಕ್ತದ ಅಧಿಕಾರಗಳು ರಾಜ್ಯದಿಂದ ರಾಜ್ಯಕ್ಕೆ ವಿವಿಧ ಅಂಶಗಳಿಗೆ ಸಂಬಂಧಿಸಿದಂತೆ ಬದಲಾಗುತ್ತವೆ, ಉದಾಹರಣೆಗೆ ಲೋಕಾಯುಕ್ತರ ಅಧಿಕಾರಾವಧಿ, ಮತ್ತು ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲು ಮಂಜೂರಾತಿ ನೀಡುವಿಕೆ ಇತ್ಯಾದಿಗಳು.

ಲೋಕಪಾಲ್’ ಎಂದರೆ ಯಾರು?

‘ಕೇಂದ್ರ ಲೋಕಪಾಲ ಮತ್ತು ಲೋಕಾಯುಕ್ತ ಕಾಯಿದೆ’ಯಲ್ಲಿ ‘ಲೋಕಪಾಲ’ (Lokpal) ಸಂಸ್ಥೆಯ ರಚನೆ ಮಾಡಲು ಅವಕಾಶ ಕಲ್ಪಿಸಲಾಗಿದೆ.

ಇದು ಅಧ್ಯಕ್ಷರು ಮತ್ತು ಗರಿಷ್ಠ 8 ಸದಸ್ಯರನ್ನು ಒಳಗೊಂಡ ಬಹು-ಸದಸ್ಯ ಸಂಸ್ಥೆಯಾಗಿದೆ.

‘ಲೋಕಪಾಲ್’ ನ ಅಧ್ಯಕ್ಷರು ಭಾರತದ ಮಾಜಿ ಮುಖ್ಯ ನ್ಯಾಯಾಧೀಶರು ಅಥವಾ ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಾಧೀಶರು ಅಥವಾ ನಿರ್ದಿಷ್ಟ ಪಡಿಸಿದಂತೆ ಅರ್ಹತಾ ಮಾನದಂಡಗಳನ್ನು ಪೂರೈಸುವ ಪ್ರಖ್ಯಾತ ವ್ಯಕ್ತಿಯಾಗಿರುತ್ತಾರೆ.

ಸದಸ್ಯರು:

ಅದರ ಗರಿಷ್ಠ ಎಂಟು ಸದಸ್ಯರಲ್ಲಿ ಅರ್ಧದಷ್ಟು ಸದಸ್ಯರು ನ್ಯಾಯಾಂಗದಿಂದ ಮತ್ತು ಕನಿಷ್ಠ 50 ಪ್ರತಿಶತ ಸದಸ್ಯರು ಸದಸ್ಯರು. ಪ. ಜಾತಿ/ ಪ. ಬುಡಕಟ್ಟು / ಇತರ ಹಿಂದುಳಿದ ವರ್ಗಗಳು / ಅಲ್ಪಸಂಖ್ಯಾತರು ಮತ್ತು ಮಹಿಳಾ ವರ್ಗದಿಂದ ಬಂದವರಾಗಿರಬೇಕು.

ಪಾತ್ರಗಳು ಮತ್ತು ಕಾರ್ಯಗಳು:

‘ಸಾರ್ವಜನಿಕ ಸೇವಕರ’ ವಿರುದ್ಧದ ದೂರುಗಳನ್ನು ಲೋಕಪಾಲ್ ಮತ್ತು ಲೋಕಾಯುಕ್ತದಿಂದ ಪರಿಹರಿಸಲಾಗುವುದು. ಲೋಕಪಾಲದ ಅಧಿಕಾರವ್ಯಾಪ್ತಿಯು ಪ್ರಧಾನ ಮಂತ್ರಿಗಳು, ಮಂತ್ರಿಗಳು, ಸಂಸತ್ತಿನ ಸದಸ್ಯರು, ಗ್ರೂಪ್ A, B, C ಮತ್ತು D ಅಧಿಕಾರಿಗಳು ಮತ್ತು ಕೇಂದ್ರ ಸರ್ಕಾರದ ಅಧಿಕಾರಿಗಳನ್ನು ಒಳಗೊಂಡಿರುತ್ತದೆ.

  1. ಲೋಕಪಾಲ್ ಅನ್ನು ಮಾರ್ಚ್ 2019 ರಲ್ಲಿ ನೇಮಿಸಲಾಯಿತು ಮತ್ತು ಸಂಬಂಧಿತ ನಿಯಮಗಳನ್ನು ರೂಪಿಸಿದ ನಂತರ, ಅದು ಮಾರ್ಚ್ 2020 ರಿಂದ ಕಾರ್ಯನಿರ್ವಹಿಸಲು ಪ್ರಾರಂಭಿಸಿತು.
  2. ಪ್ರಸ್ತುತ, ಲೋಕಪಾಲದ ಅಧ್ಯಕ್ಷ ಪಿನಾಕಿ ಚಂದ್ರ ಘೋಷ್ ಆಗಿದ್ದು, ಅವರು ಸುಪ್ರೀಂ ಕೋರ್ಟ್ ನ ಮಾಜಿ ನ್ಯಾಯಾಧೀಶರಾಗಿದ್ದಾರೆ.

ಈ ರೀತಿಯ ಸಂಸ್ಥೆಗಳ ಅವಶ್ಯಕತೆಗಳು:

  1. ದುರಾಡಳಿತವು (Maladministration) ಗೆದ್ದಲಿನಂತಿದ್ದು ಅದು ರಾಷ್ಟ್ರದ ಅಡಿಪಾಯವನ್ನು ನಿಧಾನವಾಗಿ ನಾಶಪಡಿಸುತ್ತದೆ ಮತ್ತು ಆಡಳಿತವು ತನ್ನ ಕಾರ್ಯವನ್ನು ಪೂರೈಸದಂತೆ ತಡೆಯುತ್ತದೆ.
  2. ಈ ಸಮಸ್ಯೆಗೆ ಮೂಲ ಕಾರಣ ‘ಭ್ರಷ್ಟಾಚಾರ’ ವಾಗಿದೆ. ಬಹುತೇಕ ಭ್ರಷ್ಟಾಚಾರ ವಿರೋಧಿ ಸಂಸ್ಥೆಗಳು ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಸುಪ್ರೀಂ ಕೋರ್ಟ್ ಕೂಡ ಸಿಬಿಐ ಅನ್ನು ಪಂಜರದ ಗಿಳಿ’ ಮತ್ತು ‘ಅದರ ಮಾಲೀಕರ ಧ್ವನಿ’ ಎಂದು ಬಣ್ಣಿಸಿದೆ.
  3. ಈ ಏಜೆನ್ಸಿಗಳಲ್ಲಿ ಹೆಚ್ಚಿನವು ಕೇವಲ ಸಲಹಾ ಸಂಸ್ಥೆಗಳಾಗಿವೆ ಮತ್ತು ಯಾವುದೇ ಪರಿಣಾಮಕಾರಿ ಅಧಿಕಾರವನ್ನು ಹೊಂದಿಲ್ಲ. ಅವುಗಳ ಸಲಹೆಯನ್ನು ವಿರಳವಾಗಿ ಅನುಸರಿಸಲಾಗುತ್ತದೆ.
  4. ಇದೆಲ್ಲದರ ಹೊರತಾಗಿ, ಸಂಸ್ಥೆಗಳ ಕೆಲಸದಲ್ಲಿ ಆಂತರಿಕ ಪಾರದರ್ಶಕತೆ ಮತ್ತು ಹೊಣೆಗಾರಿಕೆಯ ಸಮಸ್ಯೆಯೂ ಇದೆ. ಅಲ್ಲದೆ, ಈ ಏಜೆನ್ಸಿಗಳನ್ನು ನಿಯಮಿತವಾಗಿ ತಪಾಸಣೆಗೆ ಒಳಪಡಿಸಲು ಮತ್ತು ನಿಯಂತ್ರಿಸಲು ಯಾವುದೇ ಪ್ರತ್ಯೇಕ ಮತ್ತು ಪರಿಣಾಮಕಾರಿ ಕಾರ್ಯವಿಧಾನವಿಲ್ಲ.

ಈ ಸಂದರ್ಭದಲ್ಲಿ, ಭಾರತದ ರಾಜಕೀಯ ಇತಿಹಾಸದಲ್ಲಿ ಒಂದು ಹೆಗ್ಗುರುತು ನಡೆಯಾದ ‘ಲೋಕಪಾಲ್’ ಎಂಬ ಸ್ವತಂತ್ರ ಸಂಸ್ಥೆಯು ಎಂದಿಗೂ ಅಂತ್ಯವಿಲ್ಲದ ಭ್ರಷ್ಟಾಚಾರದ ಪಿಡುಗಿಗೆ ಪರಿಹಾರವನ್ನು ನೀಡಿದೆ.

 

ವಿಷಯಗಳು: ಆಡಳಿತ, ಪಾರದರ್ಶಕತೆ ಮತ್ತು ಹೊಣೆಗಾರಿಕೆ, ಇ-ಆಡಳಿತ – ಅನ್ವಯಗಳು, ಮಾದರಿಗಳು, ಯಶಸ್ಸುಗಳು, ಮಿತಿಗಳು ಮತ್ತು ಭವಿಷ್ಯದ ಪ್ರಮುಖ ಅಂಶಗಳು; ನಾಗರಿಕರ ಚಾರ್ಟರ್, ಪಾರದರ್ಶಕತೆ ಮತ್ತು ಉತ್ತರದಾಯಿತ್ವ ಮತ್ತು ಸಾಂಸ್ಥಿಕ ಮತ್ತು ಇತರ ಕ್ರಮಗಳು.

ಚುನಾವಣಾ ಬಾಂಡ್ ಗಳು:


(Electoral Bonds)

ಸಂದರ್ಭ:

ಈ ವರ್ಷದ ಜನವರಿ ತಿಂಗಳಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಒಟ್ಟು ₹ 1,213 ಕೋಟಿ ಮೊತ್ತದ ಎಲೆಕ್ಟ್ರೋರಲ್ ಬಾಂಡ್’ಗಳನ್ನು (Electoral Bonds) ಮಾರಾಟ ಮಾಡಿದೆ.

ಈ ಹೆಚ್ಚಿನ ಬಾಂಡ್‌ಗಳು (₹784.84 ಕೋಟಿ) ಎಸ್‌ಬಿಐನ ನವದೆಹಲಿ ಶಾಖೆಯಲ್ಲಿ ಎನ್‌ಕ್ಯಾಶ್ ಆಗಿದ್ದು, ರಾಷ್ಟ್ರೀಯ ಪಕ್ಷಗಳಿಗೆ ದೇಣಿಗೆ ನೀಡಿರುವುದನ್ನು ಸೂಚಿಸಲಾಗಿದೆ. ಎಸ್‌ಬಿಐನ ಮುಂಬೈ ಶಾಖೆಯಿಂದ ಅತಿ ಹೆಚ್ಚು ‘ಎಲೆಕ್ಟ್ರೋರಲ್ ಬಾಂಡ್‌ಗಳು’ (₹ 489.6 ಕೋಟಿ ಮೌಲ್ಯ) ಮಾರಾಟವಾಗಿದೆ.

Current Affairs

ಚುನಾವಣಾ ಬಾಂಡುಗಳು ಎಂದರೇನು?

  1. ಈ ಯೋಜನೆಯನ್ನು 2017 ರ ಕೇಂದ್ರ ಬಜೆಟ್ ನಲ್ಲಿ ಘೋಷಿಸಲಾಯಿತು. ಚುನಾವಣಾ ಬಾಂಡ್ (electoral bond) ಯೋಜನೆಯು ಬಡ್ಡಿರಹಿತ ಧಾರಕ ಹಣವನ್ನು (Interest-Free Bearer Instrument) ರಾಜಕೀಯ ಪಕ್ಷಗಳಿಗೆ ಅನಾಮಧೇಯವಾಗಿ ದೇಣಿಗೆ ನೀಡುವ ಆರ್ಥಿಕ ಸಾಧನವಾಗಿದೆ ಅಥವಾ ರಾಜಕೀಯ ಪಕ್ಷಗಳಿಗೆ ಅನಾಮಧೇಯವಾಗಿ ಹಣ ಒದಗಿಸಲು ಬಳಸುವ ಬಡ್ಡಿರಹಿತ ವಿಶೇಷ ಪಾವತಿ ಸಾಧನಗಳಾಗಿವೆ.
  2. ಬಾಂಡ್‌ಗಳಲ್ಲಿ ದಾನಿಗಳ ಹೆಸರನ್ನಾಗಲಿ ಪಡೆಯುವವರ ಹೆಸರನ್ನಾಗಲಿ ಉಲ್ಲೇಖಿಸಲಾಗುವದಿಲ್ಲ.
  3. ಬಾಂಡ್ ಗಳ ರೂಪದಲ್ಲಿ ಆರ್ಥಿಕ ಸಹಾಯ ಪಡೆಯುವವರನ್ನು (ಮುಖ್ಯವಾಗಿ ರಾಜಕೀಯ ಪಕ್ಷ) ಅದರ ಮಾಲೀಕರು ಎಂದು ಭಾವಿಸಲಾಗುತ್ತದೆ.
  4. ಈ ಬಾಂಡ್‌ಗಳಿಗೆ 1,000 ರೂ, 10,000 ರೂ, 1 ಲಕ್ಷ, 10 ಲಕ್ಷ ಮತ್ತು 1 ಕೋಟಿ ರೂ.ಗಳಂತೆ ದ್ವಿಗುಣ ರೂಪದಲ್ಲಿ ನೀಡಲಾಗುತ್ತದೆ ಮತ್ತು ಇದಕ್ಕಾಗಿ ಗರಿಷ್ಠ ಮಿತಿಯನ್ನು ನಿಗದಿಪಡಿಸಲಾಗಿಲ್ಲ ಮತ್ತು ಭಾರತೀಯ ಸ್ಟೇಟ್ ಬ್ಯಾಂಕ್ (SBI) ಮಾತ್ರ ಈ ಬಾಂಡ್ ಗಳನ್ನು ಮಾರಾಟ ಮಾಡಲು ಅಧಿಕಾರ ಹೊಂದಿರುವ ಏಕೈಕ ಬ್ಯಾಂಕ್ ಆಗಿದೆ.
  5. ಈ ಬಾಂಡ್‌ಗಳನ್ನು ವಿತರಿಸಲು ಮತ್ತು ಎನ್ ಕ್ಯಾಶ್ ಮಾಡಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಕ್ಕೆ ಅಧಿಕಾರ ನೀಡಲಾಗಿದೆ.ಈ ಬಾಂಡ್‌ಗಳು ವಿತರಣೆಯ ದಿನಾಂಕದಿಂದ ಹದಿನೈದು ದಿನಗಳವರೆಗೆ ಮಾನ್ಯವಾಗಿರುತ್ತವೆ.
  6. ದಾನಿಗಳು ಈ ಬಾಂಡ್ ಗಳನ್ನು ಖರೀದಿಸಿ ರಾಜಕೀಯ ಪಕ್ಷಗಳಿಗೆ ದಾನ ಮಾಡಬಹುದು ಮತ್ತು ದಾನವಾಗಿ ಪಡೆದ ರಾಜಕೀಯ ಪಕ್ಷವು ಅದರ ಅಧಿಕೃತ/ಗೊತ್ತುಪಡಿಸಿದ ಖಾತೆಯ ಮೂಲಕ 15 ದಿನಗಳೊಳಗೆ ಎನ್ ಕ್ಯಾಶ್ ಮಾಡಿಕೊಳ್ಳಬಹುದು ಅಥವಾ ಈ ಬಾಂಡ್‌ಗಳನ್ನು ನಗದೀಕರಿಸಿ ಕೊಳ್ಳಬಹುದಾಗಿದೆ.
  7. ಒಬ್ಬ ವ್ಯಕ್ತಿ ಅಥವಾ ಒಂದು ಸಂಸ್ಥೆಯು ಎಷ್ಟು ಬೇಕಾದರೂ ಬಾಂಡ್ ಗಳನ್ನು ಖರೀದಿಸಬಹುದು ಇದಕ್ಕೆ ಯಾವುದೇ ಮಿತಿಯಿಲ್ಲ.
  8. ಒಂದು ವೇಳೆ ರಾಜಕೀಯ ಪಕ್ಷವೂ 15 ದಿನಗಳೊಳಗಾಗಿ ಈ ಬಾಂಡುಗಳನ್ನು ನಗದೀಕರಿಸಿಕೊಳ್ಳದಿದ್ದರೆ ಭಾರತೀಯ ಸ್ಟೇಟ್ ಬ್ಯಾಂಕ್ ಇವುಗಳನ್ನು ಪ್ರಧಾನಮಂತ್ರಿಗಳ ಪರಿಹಾರ ನಿಧಿಗೆ ಜಮೆ ಮಾಡುತ್ತದೆ.

Current Affairs

 

ಯೋಜನೆಗೆ ಸಂಬಂಧಿಸಿದ ಸಮಸ್ಯೆಗಳು:

ಎಲೆಕ್ಟೋರಲ್ ಬಾಂಡ್’ ಯೋಜನೆಯು ಸಾಂಪ್ರದಾಯಿಕ ‘ಮೇಜಿನ ಕೆಳಗಿನ’ ದೇಣಿಗೆಗೆ ಪ್ರತಿಬಂಧಕವಾಗಿ ಕಾರ್ಯನಿರ್ವಹಿಸುತ್ತದೆ, ಏಕೆಂದರೆ ವಹಿವಾಟುಗಳನ್ನು ಚೆಕ್ ಮತ್ತು ಡಿಜಿಟಲ್ ಮಾಧ್ಯಮದ ಮೂಲಕ ಮಾಡಲಾಗುತ್ತದೆ. ಆದಾಗ್ಯೂ, ಈ ಯೋಜನೆಯ ಹಲವಾರು ಪ್ರಮುಖ ನಿಬಂಧನೆಗಳು ಇದನ್ನು ಹೆಚ್ಚು ವಿವಾದಾತ್ಮಕವಾಗಿಸುತ್ತದೆ.

ಅನಾಮಧೇಯತೆ (Anonymity): ಯೋಜನೆಯ ಅಡಿಯಲ್ಲಿ, ಅನುದಾನ ನೀಡುವವರು/ದೇಣಿಗೆದಾರರು (ವ್ಯಕ್ತಿ ಅಥವಾ ಕಾರ್ಪೊರೇಟ್ ಆಗಿರಬಹುದು) ಅವರ ಮಾಹಿತಿಯನ್ನು ನೀಡಲು ಬಾಧ್ಯತೆ ಹೊಂದಿಲ್ಲ, ಮತ್ತು ರಾಜಕೀಯ ಪಕ್ಷವು ಯಾವ ವ್ಯಕ್ತಿ ಅಥವಾ ಸಂಸ್ಥೆಯಿಂದ ದೇಣಿಗೆ ಬಂದಿದೆ ಎಂಬುದನ್ನು ತಿಳಿಸಲು ಬಾಧ್ಯತೆ ಹೊಂದಿಲ್ಲ.

ಅಸಮಪಾರ್ಶ್ವವಾಗಿ ಅಪಾರದರ್ಶಕ (Asymmetrically Opaque): ಬಾಂಡ್‌ಗಳನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಮೂಲಕ ಖರೀದಿಸುವುದರಿಂದ, ಸರ್ಕಾರವು ಯಾವಾಗಲೂ ದಾನಿ ಯಾರೆಂದು ತಿಳಿಯುವ ಸ್ಥಿತಿಯಲ್ಲಿರುತ್ತದೆ.

ಕಪ್ಪುಹಣದ ಮಾರ್ಗ: ಕಾರ್ಪೊರೇಟ್ ದೇಣಿಗೆಗಳ ಮೇಲಿನ 7.5% ಮಿತಿಯನ್ನು ತೆಗೆದುಹಾಕುವುದು, ಲಾಭ ಮತ್ತು ನಷ್ಟದ ಹೇಳಿಕೆಗಳಲ್ಲಿ ರಾಜಕೀಯ ಅನುದಾನವನ್ನು ಬಹಿರಂಗಪಡಿಸುವ ಅಗತ್ಯವನ್ನು ತೆಗೆದುಹಾಕುವುದು ಇತ್ಯಾದಿ.

 

ವಿಷಯಗಳು: ಭಾರತ ಮತ್ತು ನೆರೆಹೊರೆಯ ದೇಶಗಳೊಂದಿಗಿನ ಅದರ ಸಂಬಂಧಗಳು.

‘ಶಾಶ್ವತ ಸಿಂಧೂ ಆಯೋಗ’:


(Permanent Indus Commission)

ಸಂದರ್ಭ:

ಭಾರತ ಮತ್ತು ಪಾಕಿಸ್ತಾನದ ನಡುವೆ ಶಾಶ್ವತ ಸಿಂಧೂ ಆಯೋಗ’ (Permanent Indus Commission)ವಾರ್ಷಿಕ ಸಭೆ ನಡೆಯಲಿದೆ, ಆದರೆ ಇನ್ನೂ ಯಾವುದೇ ವೇಳಾಪಟ್ಟಿಯನ್ನು ಅಂತಿಮಗೊಳಿಸಲಾಗಿಲ್ಲ.

  1. ಸಿಂಧೂ ಜಲ ಒಪ್ಪಂದದ (Indus Water Treaty) ಅಡಿಯಲ್ಲಿ, ಶಾಶ್ವತ ಸಿಂಧೂ ಆಯೋಗವು ಪ್ರತಿ ವರ್ಷ ಒಮ್ಮೆಯಾದರೂ ಸಭೆ ಸೇರುವುದನ್ನು ಕಡ್ಡಾಯಗೊಳಿಸಲಾಗಿದೆ ಮತ್ತು ಅದರ ಪ್ರಕಾರ ಮಾರ್ಚ್ 31 ರಂದು ಮುಕ್ತಾಯವಾಗುತ್ತದೆ.

Current Affairs

 

ಭಾರತ ಮತ್ತು ಪಾಕಿಸ್ತಾನದ ನಡುವೆ ಸಿಂಧೂ ನದಿ ನೀರಿನ ಹಂಚಿಕೆ:

ಇದು ನೀರಿನ ಹಂಚಿಕೆ ಒಪ್ಪಂದವಾಗಿದ್ದು, 1960 ರಲ್ಲಿ ಭಾರತದ ಪ್ರಧಾನಿ ಜವಾಹರಲಾಲ್ ನೆಹರು ಮತ್ತು ಪಾಕಿಸ್ತಾನದ ಅಧ್ಯಕ್ಷ ಅಯೂಬ್ ಖಾನ್ ಅವರು ವಿಶ್ವಬ್ಯಾಂಕ್ ಮಧ್ಯಸ್ತಿಕೆಯಲ್ಲಿ ಸಹಿ ಹಾಕಿದರು.

ಸಿಂಧೂ ಜಲ ಒಪ್ಪಂದದ (Indus Water Treaty- IWT) ಪ್ರಕಾರ, ಮೂರು ಪೂರ್ವದ ನದಿಗಳಾದ ರಾವಿ, ಬಿಯಾಸ್ ಮತ್ತು ಸಟ್ಲೆಜ್ ನೀರಿನ (33 ಮಿಲಿಯನ್ ಎಕರೆ ಫೀಟ್) ಮೇಲೆ ಭಾರತಕ್ಕೆ ಸಂಪೂರ್ಣ ನಿಯಂತ್ರಣ ನೀಡಲಾಯಿತು.

ಪಾಕಿಸ್ತಾನವು ಪಶ್ಚಿಮ ನದಿಗಳನ್ನು (135MAF) ನಿಯಂತ್ರಿಸುತ್ತದೆ – ಸಿಂಧೂ, ಚೆನಾಬ್ ಝೆಲಮ್.

ಒಪ್ಪಂದದ ಪ್ರಕಾರ, ಪಾಕಿಸ್ತಾನ ಮತ್ತು ಭಾರತದ ಜಲ ಆಯುಕ್ತರು ವರ್ಷಕ್ಕೆ ಎರಡು ಬಾರಿ ಭೇಟಿಯಾಗಿ ಯೋಜನೆಯ ಸ್ಥಳಗಳ ತಾಂತ್ರಿಕ ಅಂಶಗಳು ಮತ್ತು ನದಿಯಲ್ಲಿ ನಡೆಯುತ್ತಿರುವ ಪ್ರಮುಖ ಕಾರ್ಯಗಳ ಬಗ್ಗೆ ಪರಸ್ಪರ ತಿಳಿಸಬೇಕಾಗುತ್ತದೆ.

ಒಪ್ಪಂದದ ಅಡಿಯಲ್ಲಿ, ಎರಡೂ ಕಡೆಯವರು ನೀರಿನ ಹರಿವು ಮತ್ತು ನೀರಿನ ಬಳಕೆಯ ಪ್ರಮಾಣವನ್ನು ಕುರಿತು ಮಾಹಿತಿ ಹಂಚಿಕೊಳ್ಳುತ್ತಾರೆ.

ಜಲ ವಿದ್ಯುದುತ್ಪಾದನಾ ಹಕ್ಕು:

ಸಿಂಧೂ ಜಲ ಒಪ್ಪಂದದ ಅಡಿಯಲ್ಲಿ, ‘ವಿನ್ಯಾಸ ಮತ್ತು ಕಾರ್ಯಾಚರಣೆಗೆ ನಿರ್ದಿಷ್ಟ ಮಾನದಂಡಕ್ಕೆ ಒಳಪಟ್ಟು’ ಹರಿಯುತ್ತಿರುವ ಪಶ್ಚಿಮದ ನದಿಗಳ ಮೇಲೆ ಯೋಜನೆಗಳ ಮೂಲಕ ಜಲವಿದ್ಯುತ್ ಉತ್ಪಾದಿಸಲು ಭಾರತಕ್ಕೆ ಅಧಿಕಾರ ನೀಡಲಾಗಿದೆ.

  1. ಒಪ್ಪಂದದ ಅಡಿಯಲ್ಲಿ, ಪಾಕಿಸ್ತಾನವು ಪಶ್ಚಿಮ ನದಿಗಳ ಮೇಲಿನ ಭಾರತೀಯ ಜಲವಿದ್ಯುತ್ ಯೋಜನೆಗಳ ವಿನ್ಯಾಸದ ಬಗ್ಗೆ ಕಳವಳ ವ್ಯಕ್ತಪಡಿಸುವ ಹಕ್ಕನ್ನು ಹೊಂದಿದೆ.

ಶಾಶ್ವತ ಸಿಂಧೂ ಆಯೋಗ:

  1. ಸಿಂಧೂ ಜಲ ಒಪ್ಪಂದ, 1960 ರ ಗುರಿಗಳನ್ನು ಕಾರ್ಯಗತಗೊಳಿಸಲು ಮತ್ತು ನಿರ್ವಹಿಸಲು ಭಾರತ ಮತ್ತು ಪಾಕಿಸ್ತಾನದ ಅಧಿಕಾರಿಗಳನ್ನು ಒಳಗೊಂಡ ದ್ವಿಪಕ್ಷೀಯ ಆಯೋಗವಾದ ಶಾಶ್ವತ ಸಿಂಧೂ ಆಯೋಗ (Permanent Indus Commission) ವನ್ನು ರಚಿಸಲಾಯಿತು.
  2. ‘ಸಿಂಧೂ ಜಲ ಒಪ್ಪಂದ’ದ ಪ್ರಕಾರ, ಈ ಆಯೋಗದ ಸಭೆಯು ನಿಯಮಿತವಾಗಿ ಭಾರತ ಮತ್ತು ಪಾಕಿಸ್ತಾನದಲ್ಲಿ ವರ್ಷಕ್ಕೊಮ್ಮೆಯಾದರೂ ನಡೆಯಬೇಕು.

ಆಯೋಗದ ಕಾರ್ಯಗಳು:

  1. ನದಿಗಳ ನೀರಿನ ಅಭಿವೃದ್ಧಿಗೆ ಸಂಬಂಧಿಸಿದ ಯಾವುದೇ ಸಮಸ್ಯೆಯನ್ನು ಅಧ್ಯಯನ ಮಾಡುವುದು ಮತ್ತು ಎರಡೂ ಸರ್ಕಾರಗಳಿಗೆ ವರದಿ ಮಾಡುವುದು.
  2. ನೀರಿನ ಹಂಚಿಕೆಯ ಬಗ್ಗೆ ಉಂಟಾಗುವ ವಿವಾದಗಳನ್ನು ಪರಿಹರಿಸುವುದು.
  3. ಯೋಜನೆಯ ತಾಣಗಳು ಮತ್ತು ನದಿಯ ಪ್ರಮುಖ ಭಾಗಗಳಲ್ಲಿ ಕೆಲಸ ಮಾಡಲು ತಾಂತ್ರಿಕ ತಪಾಸಣೆ ವ್ಯವಸ್ಥೆ ಮಾಡುವುದು.
  4. ಯೋಜನೆಯ ತಾಣಗಳಿಗೆ ಮತ್ತು ನದಿಯ ಪ್ರಮುಖ ಕಾರ್ಯಚಟುವಟಿಕೆಯ ಕೇಂದ್ರಗಳಿಗೆ ಮುಖ್ಯಸ್ಥರು ಭೇಟಿ ನೀಡಿ ತಾಂತ್ರಿಕ ತಪಾಸಣೆ ಕೈಗೊಳ್ಳಲು ವ್ಯವಸ್ಥೆ ಮಾಡುವುದು.
  5. ಪ್ರತಿ ಐದು ವರ್ಷಗಳಿಗೊಮ್ಮೆ, ನದಿಗಳನ್ನು ಪರಿಶೀಲಿಸಲು ಸಾಮಾನ್ಯ ಪ್ರವಾಸ ಕೈಗೊಳ್ಳುವುದು.
  6. ಒಪ್ಪಂದದ ನಿಬಂಧನೆಗಳ ಅನುಷ್ಠಾನಕ್ಕೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವುದು.

 


ಸಾಮಾನ್ಯ ಅಧ್ಯಯನ ಪತ್ರಿಕೆ : 3


 

ವಿಷಯಗಳು: ಸರ್ಕಾರಿ ಬಜೆಟ್.

ವರ್ಚುವಲ್ ಡಿಜಿಟಲ್ ಸ್ವತ್ತುಗಳು ಯಾವುವು?


(What are virtual digital assets?)

ಸಂದರ್ಭ:

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1 ರಂದು ತಮ್ಮ ಬಜೆಟ್ ಭಾಷಣದಲ್ಲಿ ‘ವರ್ಚುವಲ್ ಡಿಜಿಟಲ್ ಸ್ವತ್ತು’ ಗಳಿಂದ ಬರುವ ಆದಾಯದ ಮೇಲೆ 30 ಪ್ರತಿಶತ ತೆರಿಗೆಯನ್ನು ವಿಧಿಸುವುದಾಗಿ ಘೋಷಿಸಿದ್ದಾರೆ.

ಈ ನಿರ್ಧಾರದ ಹಿಂದಿನ ತಾರ್ಕಿಕತೆ:

ಇತ್ತೀಚಿನ ವರ್ಷಗಳಲ್ಲಿ, ಡಿಜಿಟಲ್ ಮಾಧ್ಯಮದ ಮೂಲಕ ನಡೆಯುವ ವಹಿವಾಟುಗಳಲ್ಲಿ ಅಭೂತಪೂರ್ವ ಬೆಳವಣಿಗೆ ಕಂಡುಬಂದಿದೆ ಮತ್ತು ಈ ವಹಿವಾಟುಗಳ ಪ್ರಮಾಣ ಮತ್ತು ಆವರ್ತನದಿಂದಾಗಿ, ನಿರ್ದಿಷ್ಟ ‘ತೆರಿಗೆ ಪದ್ಧತಿ’ಯನ್ನು ಒದಗಿಸುವುದು ಅನಿವಾರ್ಯವಾಗಿದೆ.

ವರ್ಚುವಲ್ ಡಿಜಿಟಲ್ ಸ್ವತ್ತುಗಳು ಯಾವುವು ಮತ್ತು ಅವು ಡಿಜಿಟಲ್ ಕರೆನ್ಸಿ ಯಿಂದ ಹೇಗೆ ಭಿನ್ನವಾಗಿವೆ?

ಸರಳವಾಗಿ ಹೇಳುವುದಾದರೆ, ‘ವರ್ಚುವಲ್ ಡಿಜಿಟಲ್ ಸ್ವತ್ತುಗಳು’ ಕ್ರಿಪ್ಟೋಕರೆನ್ಸಿಗಳು, ವಿಕೇಂದ್ರೀಕೃತ ಹಣಕಾಸು (Decentralised Finance – DeFi) ಮತ್ತು ಫಂಜಿಬಲ್ ಅಲ್ಲದ ಟೋಕನ್‌ಗಳನ್ನು (Non-Fungible Tokens – NFTs) ಒಳಗೊಂಡಿರುತ್ತವೆ. ಪ್ರಾಥಮಿಕವಾಗಿ, ಇದು ಡಿಜಿಟಲ್ ಚಿನ್ನ, ಕೇಂದ್ರ ಬ್ಯಾಂಕ್ ಡಿಜಿಟಲ್ ಕರೆನ್ಸಿ (CBDC) ಅಥವಾ ಯಾವುದೇ ಇತರ ಸಾಂಪ್ರದಾಯಿಕ ಡಿಜಿಟಲ್ ಆಸ್ತಿಯನ್ನು / ಸ್ವತ್ತನ್ನು ಒಳಗೊಂಡಿಲ್ಲ. ಆದ್ದರಿಂದ, ಸರ್ಕಾರದ ಈ ಮೇಲಿನ ಕ್ರಮವು ನಿರ್ದಿಷ್ಟವಾಗಿ ಕ್ರಿಪ್ಟೋಕರೆನ್ಸಿಗಳ ಮೇಲೆ ‘ತೆರಿಗೆ’ ವಿಧಿಸುವ ಗುರಿಯನ್ನು ಹೊಂದಿದೆ.

ಹಣಕಾಸು ಮಸೂದೆಯ ಪ್ರಕಾರ, ವರ್ಚುವಲ್ ಡಿಜಿಟಲ್ ಆಸ್ತಿ ಎಂದರೆ “ಕ್ರಿಪ್ಟೋಗ್ರಾಫಿಕ್ ವಿಧಾನಗಳ ಮೂಲಕ ಅಥವಾ ಯಾವುದೇ ಇತರ ವಿಧಾನದಿಂದ ಉದ್ಭವಿಸುವ, ಯಾವುದೇ ಹೆಸರಿನಿಂದ ಕರೆಯಲ್ಪಡುತ್ತಿದ್ದರೂ, ಅದು ವಿನಿಮಯಕ್ಕಾಗಿ ಡಿಜಿಟಲ್ ರೂಪದಲ್ಲಿ ಪ್ರತಿನಿಧಿಸಿದರೆ, ಆಧಾರವಾಗಿರುವ ಬೆಲೆಯ ಭರವಸೆ ಅಥವಾ ಪ್ರಾತಿನಿಧ್ಯ, ಅಥವಾ ಮೌಲ್ಯದ ಅಂಗಡಿಯಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಹೂಡಿಕೆ ಯೋಜನೆಗಳನ್ನು ಒಳಗೊಂಡಂತೆ ಆದರೆ ಸೀಮಿತವಾಗಿರದೆ ಯಾವುದೇ ಹಣಕಾಸಿನ ವಹಿವಾಟು ಅಥವಾ ಹೂಡಿಕೆಯಲ್ಲಿ ಬಳಸಲಾಗುತ್ತದೆ,ಮತ್ತು ಯಾವುದೇ ಮಾಹಿತಿ ಅಥವಾ ಕೋಡ್ ಅಥವಾ ಸಂಖ್ಯೆ ಅಥವಾ ಟೋಕನ್ (ಭಾರತೀಯ ಕರೆನ್ಸಿ ಅಥವಾ ಯಾವುದೇ ವಿದೇಶಿ ಕರೆನ್ಸಿ ಹೊರತುಪಡಿಸಿ) ವಿದ್ಯುನ್ಮಾನವಾಗಿ ವರ್ಗಾಯಿಸಬಹುದು, ಸಂಗ್ರಹಿಸಬಹುದು ಅಥವಾ ವ್ಯಾಪಾರ ಮಾಡಬಹುದು”. ‘ನಾನ್-ಫಂಗಬಲ್ ಟೋಕನ್’ (Non fungible token) ಮತ್ತು ಇದೇ ರೀತಿಯ ಇತರ ಯಾವುದೇ ಟೋಕನ್ ಅನ್ನು ‘ವರ್ಚುವಲ್ ಡಿಜಿಟಲ್ ಆಸ್ತಿ’ ವ್ಯಾಖ್ಯಾನದಲ್ಲಿ ಸೇರಿಸಲಾಗಿದೆ. ಅಥವಾ

ಹಣಕಾಸು ಮಸೂದೆಯ ಪ್ರಕಾರ, ವರ್ಚುವಲ್ ಡಿಜಿಟಲ್ ಆಸ್ತಿಯನ್ನು ಯಾವುದೇ ಮಾಹಿತಿ ಅಥವಾ ಕೋಡ್ ಅಥವಾ ಸಂಖ್ಯೆ ಅಥವಾ ಟೋಕನ್ ಸೂಚಿಸಲು ಪ್ರಸ್ತಾಪಿಸಲಾಗಿದೆ (ಭಾರತೀಯ ಕರೆನ್ಸಿ ಅಥವಾ ಯಾವುದೇ ವಿದೇಶಿ ಕರೆನ್ಸಿ ಅಲ್ಲ), ಕ್ರಿಪ್ಟೋಗ್ರಾಫಿಕ್ ವಿಧಾನಗಳ ಮೂಲಕ ಅಥವಾ ಯಾವುದೇ ಹೆಸರಿನಿಂದ ಕರೆಯಲ್ಪಡುವ ಮೂಲಕ, ಅಂತರ್ಗತ ಮೌಲ್ಯವನ್ನು ಹೊಂದಿರುವ ಭರವಸೆ ಅಥವಾ ಪ್ರಾತಿನಿಧ್ಯದೊಂದಿಗೆ ಪರಿಗಣನೆಯೊಂದಿಗೆ ಅಥವಾ ಪರಿಗಣಿಸದೆ ವಿನಿಮಯವಾಗುವ ಮೌಲ್ಯದ ಡಿಜಿಟಲ್ ಪ್ರಾತಿನಿಧ್ಯವನ್ನು ಒದಗಿಸುತ್ತದೆ. ಅಥವಾ ಮೌಲ್ಯದ ಅಂಗಡಿಯಾಗಿ ಅಥವಾ ಖಾತೆಯ ಘಟಕವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಯಾವುದೇ ಹಣಕಾಸಿನ ವಹಿವಾಟು ಅಥವಾ ಹೂಡಿಕೆಯಲ್ಲಿ ಅದರ ಬಳಕೆಯನ್ನು ಒಳಗೊಂಡಿರುತ್ತದೆ, ಆದರೆ ಹೂಡಿಕೆ ಯೋಜನೆಗಳಿಗೆ ಸೀಮಿತವಾಗಿಲ್ಲ ಮತ್ತು ವಿದ್ಯುನ್ಮಾನವಾಗಿ ವರ್ಗಾಯಿಸಬಹುದು, ಸಂಗ್ರಹಿಸಬಹುದು ಅಥವಾ ವ್ಯಾಪಾರ ಮಾಡಬಹುದು.

ವರ್ಚುವಲ್ ಡಿಜಿಟಲ್ ಸ್ವತ್ತುಗಳ ಮೇಲೆ 30% ತೆರಿಗೆ ವಿಧಿಸುವುದು ಎಂದರೆ ಭಾರತದಲ್ಲಿ ಕ್ರಿಪ್ಟೋ ಸ್ವತ್ತುಗಳನ್ನು ಕಾನೂನುಬದ್ಧಗೊಳಿಸಲಾಗುವುದು ಎಂದರ್ಥವೇ?

ಒಂದು ‘ತೆರಿಗೆ ಕಾನೂನು’ ಯಾವುದನ್ನೂ ಕಾನೂನು ಬದ್ಧ ಅಥವಾ ಕಾನೂನುಬಾಹಿರವಾಗಿ ಮಾಡಲು ಸಾಧ್ಯವಿಲ್ಲ – ಅದರ ಕಾನೂನುಬದ್ಧತೆಯನ್ನು ಪ್ರತ್ಯೇಕ ಕಾನೂನಿನ ಮೂಲಕ ಮಾಡಲಾಗುತ್ತದೆ.

 

ವಿಷಯಗಳು: ವಿಜ್ಞಾನ ಮತ್ತು ತಂತ್ರಜ್ಞಾನ- ಬೆಳವಣಿಗೆಗಳು ಮತ್ತು ಅವುಗಳ ಅನ್ವಯಗಳು ಮತ್ತು ದೈನಂದಿನ ಜೀವನದಲ್ಲಿ ಅವುಗಳ ಪರಿಣಾಮಗಳು ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಭಾರತೀಯರ ಸಾಧನೆಗಳು; ತಂತ್ರಜ್ಞಾನದ ದೇಶೀಕರಣ ಮತ್ತು ಹೊಸ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವುದು.

ಹ್ಯಾಕ್ ಪ್ರೂಫ್ ಕ್ವಾಂಟಮ್ ಸಂವಹನವನ್ನು ಪ್ರದರ್ಶಿಸಿದ ISRO:


(ISRO demonstrates hack-proof quantum communication)

ಸಂದರ್ಭ:

ಉಪಗ್ರಹ ಆಧಾರಿತ ಕ್ವಾಂಟಮ್ ಸಂವಹನದ (Quantum Communication) ಕಡೆಗೆ ಒಂದು ಪ್ರಮುಖ ಹೆಜ್ಜೆಯನ್ನು ಇಡುತ್ತಾ, ಇತ್ತೀಚೆಗೆ ಅಹಮದಾಬಾದ್‌ನಲ್ಲಿರುವ ‘ಸ್ಪೇಸ್ ಅಪ್ಲಿಕೇಷನ್ಸ್ ಸೆಂಟರ್’ ಮತ್ತು ‘ಫಿಸಿಕಲ್ ರಿಸರ್ಚ್ ಲ್ಯಾಬೋರೇಟರಿ’ ವಿಜ್ಞಾನಿಗಳು ಯಶಸ್ವಿಯಾಗಿ ‘ಕ್ವಾಂಟಮ್ ಎಂಟ್ಯಾಂಗಲ್‌ಮೆಂಟ್’ (Quantum Entanglement) ಅನ್ನು ಪ್ರದರ್ಶಿಸಿದರು.

  1. ನೈಜ-ಸಮಯದ ಕ್ವಾಂಟಮ್ ಕೀ ಡಿಸ್ಟ್ರಿಬ್ಯೂಷನ್’ (Quantum Key Distribution- QKD) ತಂತ್ರಜ್ಞಾನವನ್ನು ಬಳಸಿಕೊಂಡು, ವಿಜ್ಞಾನಿಗಳು ಎರಡು ವಿಭಿನ್ನ ಸ್ಥಳಗಳ ನಡುವೆ 300 ಮೀಟರ್ ಅಂತರವನ್ನು ಇಟ್ಟುಕೊಂಡು ಹ್ಯಾಕ್-ಪ್ರೂಫ್ ಸಂವಹನವನ್ನು ಪ್ರದರ್ಶಿಸಿದರು.

ಪ್ರಾಮುಖ್ಯತೆ:

ಕ್ವಾಂಟಮ್ ಸಂವಹನವು ಎರಡು ಸ್ಥಳಗಳನ್ನು ಉನ್ನತ ಮಟ್ಟದ ಕೋಡ್ ಮತ್ತು ಕ್ವಾಂಟಮ್ ಕ್ರಿಪ್ಟೋಗ್ರಫಿ ಮೂಲಕ ಸಂಪರ್ಕಿಸುವ ಅತ್ಯಂತ ಸುರಕ್ಷಿತ ಮಾರ್ಗಗಳಲ್ಲಿ ಒಂದಾಗಿದೆ, ಕ್ವಾಂಟಮ್ ಕ್ರಿಪ್ಟೋಗ್ರಫಿಯನ್ನು ಯಾವುದೇ ಬಾಹ್ಯ ಸಾಧನದಿಂದ ಡೀಕ್ರಿಪ್ಟ್ ಮಾಡಲು ಅಥವಾ ಬೇಧಿಸಲು ಸಾಧ್ಯವಿಲ್ಲ.

  1. ಕ್ವಾಂಟಮ್ ಸಂವಹನದಲ್ಲಿ ಯಾವುದೇ ಸಂದೇಶವನ್ನು ಭೇದಿಸಲು ಹ್ಯಾಕರ್ ಪ್ರಯತ್ನಿಸಿದರೆ, ಸಂದೇಶವು ಸಂದೇಶವನ್ನು ಕಳುಹಿಸುವವರಿಗೆ ಎಚ್ಚರಿಕೆ ನೀಡುವ ರೀತಿಯಲ್ಲಿ ಅದರ ಸ್ವರೂಪವನ್ನು ಬದಲಾಯಿಸುತ್ತದೆ ಮತ್ತು ಸಂದೇಶವನ್ನು ಬದಲಾಯಿಸುತ್ತದೆ ಅಥವಾ ಅಳಿಸುತ್ತದೆ.

Current Affairs

 

ಕ್ವಾಂಟಮ್ ಕೀ ಡಿಸ್ಟ್ರಿಬ್ಯೂಷನ್ (QKD) ತಂತ್ರಜ್ಞಾನದ ಬಗ್ಗೆ:

ಗೂಢಲಿಪೀಕರಣವು ಸಾಂಪ್ರದಾಯಿಕ ಗಣಿತಶಾಸ್ತ್ರದ ಮೇಲೆ ಆದರ್ಶಪ್ರಾಯವಾಗಿ ಅವಲಂಬಿತವಾಗಿದೆ ಮತ್ತು ಪ್ರಸ್ತುತ ಅಗತ್ಯಗಳಿಗೆ ಒಂದು ಹಂತದವರೆಗೆ ಪರಿಪೂರ್ಣವಾಗಿದೆ ಮತ್ತು ಹ್ಯಾಕಿಂಗ್‌ನಿಂದ ಸುರಕ್ಷಿತವಾಗಿದೆ, ಆದಾಗ್ಯೂ, ಕ್ವಾಂಟಮ್ ಕಂಪ್ಯೂಟಿಂಗ್‌ನ ಅಭಿವೃದ್ಧಿಯೊಂದಿಗೆ, ಈ ತಂತ್ರಜ್ಞಾನವು ಅಪಾಯಕ್ಕೆ ಒಳಗಾಗಬಹುದು.

  1. ಕ್ವಾಂಟಮ್ ಕಂಪ್ಯೂಟಿಂಗ್ ವೇಗವಾದ ಮತ್ತು ಹೆಚ್ಚು ಶಕ್ತಿಶಾಲಿ ಕಂಪ್ಯೂಟರ್‌ಗಳ ಹೊಸ ಯುಗವನ್ನು ಸೂಚಿಸುತ್ತದೆ ಮತ್ತು ಈ ತಂತ್ರಜ್ಞಾನವು ಪ್ರಸ್ತುತ ಮಟ್ಟದ ಎನ್‌ಕ್ರಿಪ್ಶನ್ (Encryption) ಅನ್ನು ಮುರಿಯಲು ಸಾಧ್ಯವಾಗುತ್ತದೆ ಎಂದು ನಂಬಲಾಗಿದೆ.
  2. ಕ್ವಾಂಟಮ್ ಕೀ ವಿತರಣೆ (QKD) ತಂತ್ರಜ್ಞಾನದಲ್ಲಿ ಡೇಟಾವನ್ನು ವರ್ಗಾಯಿಸಲು ಫೋಟಾನ್‌ಗಳು – ಬೆಳಕನ್ನು ಹೊರಸೂಸುವ ಕಣಗಳು – ಬಳಸಲ್ಪಡುತ್ತವೆ.
  3. QKD ಯಲ್ಲಿ ಈಗಾಗಲೇ ರಹಸ್ಯ ಕೀಲಿಯನ್ನು ಹೊಂದಿರದ ಇಬ್ಬರು ದೂರದ ಬಳಕೆದಾರರು ‘ರಹಸ್ಯ ಕೀ’(secret key) ಎಂದು ಕರೆಯಲ್ಪಡುವ ರಹಸ್ಯ ಬಿಟ್‌ಗಳ ಸಾಮೂಹಿಕ, ಯಾದೃಚ್ಛಿಕ ಸ್ಟ್ರಿಂಗ್ (random string) ಅನ್ನು ರಚಿಸಲು ಸಮರ್ಥರಾಗಿದ್ದಾರೆ.
  4. ಈ ಕೀಲಿಯು ಒಂದು-ಬಾರಿ ಪ್ಯಾಡ್ ಎನ್‌ಕ್ರಿಪ್ಶನ್ ಅನ್ನು ಬಳಸಿಕೊಂಡು ಸಂದೇಶವನ್ನು ಎನ್‌ಕ್ರಿಪ್ಟ್ ಮಾಡಲು ಮತ್ತು ಡೀಕ್ರಿಪ್ಟ್ ಮಾಡಲು ಸುರಕ್ಷಿತವಾಗಿದೆ ಎಂದು ಸಾಬೀತಾಗಿದೆ, ಮತ್ತು ಈ ರೀತಿಯ ಸಂದೇಶವನ್ನು ಯಾವುದೇ ಪ್ರಮಾಣಿತ ಸಂವಹನ ಚಾನಲ್‌ನಲ್ಲಿ ಸುರಕ್ಷಿತವಾಗಿ ಕಳುಹಿಸಬಹುದು.

ಈ ತಂತ್ರಜ್ಞಾನದ ಮಹತ್ವ:

  1. ಫೋಟಾನ್‌ಗಳ ಮೂಲಕ ಡೇಟಾ ರವಾನೆಯಾಗುವುದರಿಂದ ಈ ತಂತ್ರದ ಮೂಲಕ ಮಾಡಿದ ಗೂಢಲಿಪೀಕರಣವು ‘ಅಭೇಧ್ಯ’ವಾಗಿದೆ. ಫೋಟಾನ್ ಅನ್ನು ಸಂಪೂರ್ಣವಾಗಿ ನಕಲಿಸಲಾಗುವುದಿಲ್ಲ ಮತ್ತು ಅಂತಹ ಯಾವುದೇ ಪ್ರಯತ್ನವು ಸಂದೇಶವನ್ನು ವಿರೂಪಗೊಳಿಸುತ್ತದೆ. ಇದಲ್ಲದೆ, ಡೇಟಾವನ್ನು ಪ್ರತಿಬಂಧಿಸಲು ಪ್ರಯತ್ನಿಸುತ್ತಿರುವ ವ್ಯಕ್ತಿಯನ್ನು ಸಹ ಪತ್ತೆಹಚ್ಚಲಾಗುತ್ತದೆ.
  2. ಈ ತಂತ್ರಜ್ಞಾನವು ಸೈಬರ್ ಭದ್ರತೆಯ ಮೇಲೆ ಪ್ರಮುಖ ಪರಿಣಾಮಗಳನ್ನು ಬೀರಬಹುದು. ಇದು ವ್ಯವಹಾರಗಳನ್ನು ಸುರಕ್ಷಿತ ರೀತಿಯಲ್ಲಿ ಮಾಡಲು ಅನುಮತಿಸುತ್ತದೆ, ಆದರೆ ಅದೇ ಸಮಯದಲ್ಲಿ ಸಂದೇಶಗಳನ್ನು ಹ್ಯಾಕ್ ಮಾಡುವುದು ಸರ್ಕಾರಗಳಿಗೆ ಹೆಚ್ಚು ಕಷ್ಟಕರವಾಗುತ್ತದೆ.

 


ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ಸಂಗತಿಗಳು:


ಆಂಧ್ರಪ್ರದೇಶದ CLAP ಅಭಿಯಾನ:

‘ಸ್ವಚ್ಛ ಆಂಧ್ರ ಪ್ರದೇಶ – ಜಗನ್ನ ಸ್ವಚ್ಛ ಸಂಕಲ್ಪ ಕಾರ್ಯಕ್ರಮ’ವನ್ನು (Clean Andhra Pradesh (CLAP) – Jagananna Swachha Sankalpam programme) ಆಂಧ್ರಪ್ರದೇಶ ಸರ್ಕಾರವು ಅಕ್ಟೋಬರ್ 2 ರಂದು ಗ್ರಾಮೀಣ ಪ್ರದೇಶಗಳನ್ನು ಸ್ವಚ್ಛಗೊಳಿಸುವ, ನೈರ್ಮಲ್ಯ ಪರಿಸ್ಥಿತಿಗಳನ್ನು ಸುಧಾರಿಸುವ ಮತ್ತು ಸಾರ್ವಜನಿಕ ಸಹಭಾಗಿತ್ವದೊಂದಿಗೆ ತ್ಯಾಜ್ಯವನ್ನು ನಿರ್ವಹಿಸುವ ಉದ್ದೇಶದಿಂದ ಪ್ರಾರಂಭಿಸಿತು.

  1. ಈ ಅಭಿಯಾನದಡಿಯಲ್ಲಿ, ಗ್ರಾಮೀಣ ಕುಟುಂಬಗಳಿಗೆ ಕಸವನ್ನು ರಸ್ತೆಗಳಲ್ಲಿ ಎಸೆಯದಂತೆ ಮತ್ತು ಅದನ್ನು ಕಸ ಸಂಗ್ರಾಹಕರಿಗೆ ಹಸ್ತಾಂತರಿಸುವಂತೆ ಒತ್ತಾಯಿಸಲಾಗುವುದು.
  2. ಮನೆ-ಮನೆಯಿಂದ ತ್ಯಾಜ್ಯ ಸಂಗ್ರಹಣೆಯ ಹೊರತಾಗಿ, ಈ ಅಭಿಯಾನದ ಉದ್ದೇಶವು ಹಸಿ ಮತ್ತು ಒಣ ತ್ಯಾಜ್ಯಗಳನ್ನು ಪ್ರತ್ಯೇಕಿಸುವುದು, ತ್ಯಾಜ್ಯವನ್ನು ಸ್ಥಳದಲ್ಲೇ ಸಂಸ್ಕರಣೆ ಮಾಡುವುದು ಮತ್ತು ಮನೆಯ ಹಂತದಲ್ಲೇ ಸಾವಯವ ಗೊಬ್ಬರವನ್ನು ತಯಾರಿಸಲು ಉತ್ತೇಜಿಸುವುದಾಗಿದೆ.

 

ಹಿನ್ನಿವ್ಟ್ರೆಪ್ ನ್ಯಾಷನಲ್ ಲಿಬರೇಶನ್ ಕೌನ್ಸಿಲ್ (HNLC):

(Hynniewtrep National Liberation Council – HNLC)

ಇತ್ತೀಚೆಗೆ ಸಂಭವಿಸಿದ ಕಡಿಮೆ ತೀವ್ರತೆಯ ಐಇಡಿ ಸ್ಫೋಟದ ಹೊಣೆಗಾರಿಕೆಯನ್ನು ನಿಷೇಧಿತ ಉಗ್ರಗಾಮಿ ಸಂಘಟನೆಯಾದ ಹೈನಿಟ್ರಾಪ್ ನ್ಯಾಷನಲ್ ಲಿಬರೇಶನ್ ಕೌನ್ಸಿಲ್ (Hynniewtrep National Liberation Council – HNLC) ಹೊತ್ತುಕೊಂಡಿದೆ.

  1. ಹೈನಿಟ್ರೆಪ್ ನ್ಯಾಷನಲ್ ಲಿಬರೇಶನ್ ಕೌನ್ಸಿಲ್ (HNLC), ಮೇಘಾಲಯದಲ್ಲಿ ಸಾರ್ವಭೌಮ ಖಾಸಿ ತಾಯ್ನಾಡಿನ ಬೇಡಿಕೆಯನ್ನು ಹೊಂದಿದ್ದು, 1980 ರ ದಶಕದ ಮಧ್ಯಭಾಗದಲ್ಲಿ ರಾಜ್ಯದ ಮೊದಲ ಉಗ್ರಗಾಮಿ ಬುಡಕಟ್ಟು ಸಂಘಟನೆಯಾದ ಹೈನ್ನಿವ್ಟ್ರೆಪ್ ಅಚಿಕ್ ಲಿಬರೇಶನ್ ಕೌನ್ಸಿಲ್ (Hynniewtrep Achik Liberation Council – HALC) ನಿಂದ ಬೇರ್ಪಟ್ಟಿತು.
  2. ಹಿನ್ನಿವ್ಟ್ರೆಪ್ (Hynniewtrep), ಖಾಸಿ ಮತ್ತು ಜೈನ್ತಿಯಾ ಸಮುದಾಯಗಳನ್ನು ಪ್ರತಿನಿಧಿಸುತ್ತದೆ ಮತ್ತು ‘ಅಚಿಕ್’ ಗಾರೋ ಸಮುದಾಯವನ್ನು ಸೂಚಿಸುತ್ತದೆ.

HNLC ಅನ್ನು ಖಾಸಿ ಗುರುತು ಮತ್ತು ಹೆಮ್ಮೆಯ ಪ್ರತಿನಿಧಿಯಾಗಿ ನೋಡಲಾಗುತ್ತದೆ ಮತ್ತು ಉನ್ನತ ಹಂತದ ನಾಯಕತ್ವವು ಬಾಂಗ್ಲಾದೇಶದಿಂದ ಹೊರಗಿದೆ.

 

ಸಾಫ್ರನ್ ಬೌಲ್ ಪ್ರಾಜೆಕ್ಟ್:

(Safforn Bowl Project)

‘ನಾರ್ತ್ ಈಸ್ಟ್ ಸೆಂಟರ್ ಫಾರ್ ಟೆಕ್ನಾಲಜಿ ಅಪ್ಲಿಕೇಶನ್ ಮತ್ತು ರೀಚ್’ (NECTAR) ‘ಕೇಸರಿ ಬಟ್ಟಲು ಯೋಜನೆ’ (Safforn Bowl Project) ಯೋಜನೆಯಡಿ  ಅರುಣಾಚಲ ಪ್ರದೇಶ ಮತ್ತು ಮೇಘಾಲಯದ ಕೆಲವು ಸ್ಥಳಗಳನ್ನು ಕೇಸರಿ ಕೃಷಿಗಾಗಿ ಗುರುತಿಸಿದೆ.

  1. ಕೇಸರಿ ಉತ್ಪಾದನೆಯು ಜಮ್ಮು ಮತ್ತು ಕಾಶ್ಮೀರದ ಕೇಂದ್ರಾಡಳಿತ ಪ್ರದೇಶದಲ್ಲಿರುವ ಸೀಮಿತ ಭೌಗೋಳಿಕ ಪ್ರದೇಶಕ್ಕೆ ಬಹಳ ಹಿಂದಿನಿಂದಲೂ ಸೀಮಿತವಾಗಿದೆ.
  2. ಕಾಶ್ಮೀರದ ‘ಪಾಂಪೋರ್ ಪ್ರದೇಶ’ (Pampore Region) ಸಾಮಾನ್ಯವಾಗಿ ಕಾಶ್ಮೀರದ ‘ಕೇಸರಿ ಬಟ್ಟಲು’ ಎಂದು ಕರೆಯಲ್ಪಡುತ್ತದೆ, ಈ ಪ್ರವೇಶವು ಭಾರತದಲ್ಲಿ ಕೇಸರಿ ಉತ್ಪಾದನೆಗೆ ಪ್ರಮುಖ ಕೊಡುಗೆದಾರನಾಗಿದೆ, ನಂತರದ ಸ್ಥಾನದಲ್ಲಿ ಬುಡ್ಗಾಮ್, ಶ್ರೀನಗರ ಮತ್ತು ಕಿಶ್ತ್ವಾರ್ ಜಿಲ್ಲೆಗಳಿವೆ.
  3. ಕೇಸರಿ ಸಾಂಪ್ರದಾಯಿಕವಾಗಿ ಪ್ರಸಿದ್ಧ ಕಾಶ್ಮೀರಿ ಪಾಕಪದ್ಧತಿಯೊಂದಿಗೆ ಸಂಬಂಧ ಹೊಂದಿದೆ.
  4. ಇದರ ಔಷಧೀಯ ಮೌಲ್ಯಗಳನ್ನು ಕಾಶ್ಮೀರದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯ ಭಾಗವೆಂದು ಪರಿಗಣಿಸಲಾಗಿದೆ.
  5. ಕೇಸರಿ ಬೆಳೆಯುವಿಕೆಯು ಕಾಶ್ಮೀರದ ನಿರ್ದಿಷ್ಟ ಪ್ರದೇಶಗಳಿಗೆ ಸೀಮಿತವಾಗಿದ್ದರಿಂದ, ಅದರ ಉತ್ಪಾದನೆಯು ಇಲ್ಲಿಯವರೆಗೆ ಸೀಮಿತವಾಗಿತ್ತು.
  6. ‘ರಾಷ್ಟ್ರೀಯ ಕೇಸರಿ ಮಿಷನ್’ ಅಡಿಯಲ್ಲಿ ಅದರ ಕೃಷಿಯನ್ನು ಸುಧಾರಿಸಲು ಹಲವಾರು ಕ್ರಮಗಳನ್ನು ಕೇಂದ್ರೀಕರಿಸಲಾಗಿದೆಯಾದರೂ, ಈ ಕ್ರಮಗಳು ಇನ್ನೂ ಕಾಶ್ಮೀರದ ನಿರ್ದಿಷ್ಟ ಪ್ರದೇಶಗಳಿಗೆ ಸೀಮಿತವಾಗಿವೆ.

  • Join our Official Telegram Channel HERE for Motivation and Fast Updates
  • Subscribe to our YouTube Channel HERE to watch Motivational and New analysis videos

[ad_2]

Leave a Comment