[Mission 2022] ದೈನಂದಿನ ಪ್ರಚಲಿತ ಘಟನೆಗಳು ದಿನಾಂಕ – 2ನೇ ಫೆಬ್ರುವರಿ 2022 – INSIGHTSIAS

[ad_1]

 

 

ಪರಿವಿಡಿ:

 ಸಾಮಾನ್ಯ ಅಧ್ಯಯನ ಪತ್ರಿಕೆ  2 :

1. ನ್ಯಾಯಾಂಗ ನಿಂದನೆ.

 

ಸಾಮಾನ್ಯ ಅಧ್ಯಯನ ಪತ್ರಿಕೆ 3:

1. ಕೇಂದ್ರ ಬಜೆಟ್ 2022-23 ರ ಮುಖ್ಯಾಂಶಗಳು.

2. ‘ನಲ್ ಸೇ ಜಲ್’ ಯೋಜನೆ.

3. ಕೇಂದ್ರ ಬಜೆಟ್‌ನಲ್ಲಿ ಐದು ನದಿ ಜೋಡಣೆ ಯೋಜನೆಗಳ ಘೋಷಣೆ.

4. ಅಂತರರಾಷ್ಟ್ರೀಯ ಮಧ್ಯಸ್ಥಿಕೆ ಕೇಂದ್ರ.

5. ಬಜೆಟ್‌ನಲ್ಲಿ ಸೀತಾರಾಮನ್ ಘೋಷಿಸಿದ ಡಿಜಿಟಲ್ ರೂಪಾಯಿ ಎಂದರೇನು?

 

ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ಸಂಗತಿಗಳು:

1. ಪೀಪಲ್ಸ್ ಲಿಬರೇಶನ್ ಆರ್ಮಿ (PLA) ಯ ಹೊಸ ಇತಿಹಾಸದಲ್ಲಿ 1962 ರ ಯುದ್ಧದ ಉಲ್ಲೇಖ.

 


ಸಾಮಾನ್ಯ ಅಧ್ಯಯನ ಪತ್ರಿಕೆ : 2


 

ವಿಷಯಗಳು: ಸರ್ಕಾರದ ವಿವಿಧ ಅಂಗಗಳ ನಡುವೆ ಅಧಿಕಾರ ವಿಭಜನೆ, ವಿವಾದ ಪರಿಹಾರ ಕಾರ್ಯವಿಧಾನಗಳು ಮತ್ತು ಸಂಸ್ಥೆಗಳು.

ನ್ಯಾಯಾಂಗ ನಿಂದನೆ:


(Contempt of Court)

ಸಂದರ್ಭ:

ಭಾರತದ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮನ್ ಅವರು ಗುರುಗ್ರಾಮ್‌ನಲ್ಲಿ ಶುಕ್ರವಾರದ ಪ್ರಾರ್ಥನೆ ಸಲ್ಲಿಸುವವರ ಮೇಲೆ ‘ಕೋಮು ದ್ವೇಷ ಮತ್ತು ಆತಂಕದ ವಾತಾವರಣ’ ಸೃಷ್ಟಿಸಿದ ‘ಗೂಂಡಾ’ಗಳಿಗೆ ಲಗಾಮು ಹಾಕದ, ಹರಿಯಾಣ ಸರ್ಕಾರದ ಅಧಿಕಾರಿಗಳ ವಿರುದ್ಧ ‘ನ್ಯಾಯಾಂಗ ನಿಂದನೆ ಪ್ರಕ್ರಿಯೆ’ ಆರಂಭಿಸುವಂತೆ ಕೋರಿ ಸಲ್ಲಿಸಲಾಗಿರುವ ಅರ್ಜಿಯನ್ನು ತಕ್ಷಣವೇ ವಿಚಾರಣೆಗೆ ಪಟ್ಟಿ ಮಾಡಲು ಸಮ್ಮತಿ ನೀಡಿದ್ದಾರೆ.

ಏನಿದು ಪ್ರಕರಣ?

ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಲಾದ ಅರ್ಜಿಯು ಹರಿಯಾಣದ ಅಧಿಕಾರಿಗಳ ನಿಷ್ಕ್ರಿಯತೆಯನ್ನು ಖಂಡಿಸಿದ್ದು, ಇದು 2018 ರ ಸುಪ್ರೀಂ ಕೋರ್ಟ್‌ನ ತೀರ್ಪಿನ ಉಲ್ಲಂಘನೆಯಾಗಿದೆ ಎಂದು ಬಣ್ಣಿಸಿದೆ. ಕೋಮುಗಲಭೆಯ ವಿಷಯದಲ್ಲಿ ಅಧಿಕಾರಿಗಳು ಮೂಕ ಪ್ರೇಕ್ಷಕರಾಗಬಾರದು ಮತ್ತು ಅದನ್ನು ಸಹಿಸಬಾರದು ಮತ್ತು ದ್ವೇಷದ ಅಪರಾಧಗಳ ವಿರುದ್ಧ ಕಾನೂನನ್ನು ಬಳಸಬೇಕು ಎಂದು ನ್ಯಾಯಾಲಯವು ತನ್ನ ತೀರ್ಪಿನಲ್ಲಿ ಹೇಳಿದೆ.

ನ್ಯಾಯಾಂಗ ನಿಂದನೆ ಎಂದರೇನು?

ನ್ಯಾಯಾಲಯದ ಆದೇಶಗಳನ್ನು ಗೌರವಿಸದವರನ್ನು ಶಿಕ್ಷಿಸುವುದೇ ‘ನ್ಯಾಯಾಂಗ ನಿಂದನೆ ಕಾನೂನಿನ’ (Contempt Law) ಮೂಲ ಕಲ್ಪನೆ. ಆದರೆ ಭಾರತೀಯ ಸಂದರ್ಭದಲ್ಲಿ, ನ್ಯಾಯಾಲಯದ ಘನತೆಯನ್ನು ಕಡಿಮೆ ಮಾಡುವ ಮತ್ತು ನ್ಯಾಯಾಂಗ ಆಡಳಿತದಲ್ಲಿ ಹಸ್ತಕ್ಷೇಪ ಮಾಡುವ ಭಾಷಣ ಅಥವಾ ಅಭಿವ್ಯಕ್ತಿಗಳನ್ನು ಶಿಕ್ಷಿಸಲು ನ್ಯಾಯಾಂಗ ನಿಂದನೆ ಕಾನೂನನ್ನು ಬಳಸಲಾಗುತ್ತದೆ.

ನ್ಯಾಯಾಂಗ ನಿಂದನೆ: ಎರಡು ವಿಧಗಳು.

ನ್ಯಾಯಾಲಯಗಳ ನಿಂದನೆ ಕಾಯ್ದೆ 1971 ನಾಗರಿಕ ಮತ್ತು ಕ್ರಿಮಿನಲ್ ನ್ಯಾಯಾಂಗ ನಿಂದನೆ ಯನ್ನು ವ್ಯಾಖ್ಯಾನಿಸುತ್ತದೆ, ಮತ್ತು ನ್ಯಾಯಾಲಯಗಳು ನಿಂದನೆ ಮಾಡಿದ್ದಕ್ಕೆ ಶಿಕ್ಷೆ ವಿಧಿಸುವ ಅಧಿಕಾರಗಳು ಮತ್ತು ಕಾರ್ಯವಿಧಾನಗಳನ್ನು ಮತ್ತು ನ್ಯಾಯಾಲಯಗಳ ಘನತೆಗೆ ಧಕ್ಕೆ ತಂದ ಅಪರಾಧಕ್ಕೆ ಶಿಕ್ಷೆಯನ್ನು ವಿಧಿಸಬಹುದು.

ನಾಗರಿಕ / ಸಿವಿಲ್: ನ್ಯಾಯಾಲಯದ ಯಾವುದೇ ತೀರ್ಪು, ಆದೇಶ, ನಿರ್ದೇಶನ, ರಿಟ್ ಅಥವಾ ಇತರ ಕಾರ್ಯವಿಧಾನಗಳ ಉದ್ದೇಶಪೂರ್ವಕ ಉಲ್ಲಂಘನೆಯನ್ನು ನಾಗರಿಕ ನ್ಯಾಯಾಂಗ ನಿಂದನೆಗೆ ಒಳಪಡಿಸಲಾಗುತ್ತದೆ.

ಕ್ರಿಮಿನಲ್ / Criminal: ಯಾವುದೇ ವಿಷಯವನ್ನು ಪ್ರಕಟಿಸುವ ಮೂಲಕ (ಮೌಖಿಕ ಅಥವಾ ಲಿಖಿತ ಪದಗಳು, ಚಿಹ್ನೆಗಳು, ದೃಶ್ಯ ಪ್ರತಿಫಲನಗಳು ಅಥವಾ ಇನ್ನಾವುದೇ ರೀತಿಯಲ್ಲಿ) ನ್ಯಾಯಾಲಯವನ್ನು ದೂಷಿಸುವ ಅಥವಾ ನ್ಯಾಯಾಂಗ ವಿಚಾರಣೆಯಲ್ಲಿ ಹಸ್ತಕ್ಷೇಪ ಮಾಡುವ ಅಥವಾ ತಡೆಯುವ ಯಾವುದೇ ಪ್ರಯತ್ನವನ್ನು ಒಳಗೊಂಡಿರುವ ಅಪರಾಧವು ಕ್ರಿಮಿನಲ್ ನ್ಯಾಯಾಂಗ ನಿಂದನೆ ವ್ಯಾಪ್ತಿಗೆ ಬರುತ್ತದೆ.

ಸಂಬಂಧಿತ ನಿಬಂಧನೆಗಳು:

  1. ನ್ಯಾಯಾಲಯದ ನಿಂದನೆ ಮಾಡಿದ್ದಕ್ಕಾಗಿ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಲು ಭಾರತದ ಸಂವಿಧಾನದ 129 ಮತ್ತು 215 ನೇ ವಿಧಿಗಳು ಕ್ರಮವಾಗಿ ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ ಗಳಿಗೆ ಅಧಿಕಾರ ನೀಡಿವೆ.
  2. 1971 ರ ನ್ಯಾಯಾಂಗ ನಿಂದನೆ ಕಾಯ್ದೆಯ ಸೆಕ್ಷನ್ 10 ಹೈಕೋರ್ಟ್ ಗಳಿಗೆ ತನ್ನ ಅಧೀನ ನ್ಯಾಯಾಲಯಗಳ ನ್ಯಾಯಾಂಗ ನಿಂದನೆ ಕಾರ್ಯವೈಖರಿಗೆ ಶಿಕ್ಷಿಸುವ ಅಧಿಕಾರವನ್ನು ವ್ಯಾಖ್ಯಾನಿಸುತ್ತದೆ.
  3. ಸಾರ್ವಜನಿಕ ಸುವ್ಯವಸ್ಥೆ ಮತ್ತು ಮಾನಹಾನಿಯಂತಹ ಅಂಶಗಳೊಂದಿಗೆ, ಸಂವಿಧಾನವು 19 ನೇ ವಿಧಿ ಅಡಿಯಲ್ಲಿ ನೀಡಲಾಗಿರುವ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಸಮಂಜಸವಾದ ನಿರ್ಬಂಧವಾಗಿ ನ್ಯಾಯಾಂಗ ನಿಂದನೆಯನ್ನು ಅಡಕಗೊಳಿಸಿದೆ.

ದಯವಿಟ್ಟು ಗಮನಿಸಿ:

ಸುಪ್ರೀಂ ಕೋರ್ಟಿಗೆ ಕ್ರಿಮಿನಲ್ ನ್ಯಾಯಾಂಗ ನಿಂದನೆಯ ವಿಚಾರಣೆಯನ್ನು ಪ್ರಾರಂಭಿಸಲು ಅಟಾರ್ನಿ ಜನರಲ್ ಒಪ್ಪಿಗೆ ಪಡೆಯುವ ಅಗತ್ಯವಿಲ್ಲ.ಏಕೆಂದರೆ ನ್ಯಾಯಾಲಯವು ನ್ಯಾಯಾಂಗದ ನಿಂದನೆಗಾಗಿ ಶಿಕ್ಷೆ ವಿಧಿಸಲು ಸಂವಿಧಾನ ದತ್ತವಾಗಿ ನೀಡಲಾಗಿರುವ ತನ್ನ ಅಂತರ್ಗತ ಅಧಿಕಾರವನ್ನು ಚಲಾಯಿಸುತ್ತದೆ ಮತ್ತು ಅಂತಹ ಸಾಂವಿಧಾನಿಕ ಅಧಿಕಾರಗಳನ್ನು ನಿರ್ಬಂಧಿಸಲಾಗುವುದಿಲ್ಲ. ಆದ್ದರಿಂದ ಸಂವಿಧಾನವು ನೀಡಿರುವ ಅಧಿಕಾರಗಳನ್ನು ಚಲಾಯಿಸಿ ‘ಶೋ ಕಾಸ್’ ನೋಟಿಸ್ ನೀಡುವ ಮೂಲಕ ವರಿಷ್ಠ ನ್ಯಾಯಾಲಯ ಕ್ರಿಮಿನಲ್ ನ್ಯಾಯಾಂಗ ನಿಂದನೆಯ ವಿಚಾರಣೆಯನ್ನು ಪ್ರಾರಂಭಿಸಬಹುದು.

 


ಸಾಮಾನ್ಯ ಅಧ್ಯಯನ ಪತ್ರಿಕೆ : 3


 

ವಿಷಯಗಳು: ಸರ್ಕಾರಿ ಬಜೆಟ್.

ಕೇಂದ್ರ ಬಜೆಟ್ 2022-23 ರ ಮುಖ್ಯಾಂಶಗಳು:


ಸಂದರ್ಭ:

ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು 2022 ರ ಫೆಬ್ರವರಿ 1 ರಂದು ರೂ.39.45 ಲಕ್ಷ ಕೋಟಿಗಳ ಕೇಂದ್ರ ಬಜೆಟ್ ಅನ್ನು ‘ಧರ್ಮದ ಹಾದಿಯಲ್ಲಿ ಸರ್ಕಾರವನ್ನು ನಡೆಸುವ ದೊರೆ, ಪ್ರಜೆಗಳ ಕಲ್ಯಾಣಕ್ಕಾಗಿ ವಿವಿಧ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು’ ಎಂಬ ಮಹಾಭಾರತದ ಶಾಂತಿಪರ್ವದ ಶ್ಲೋಕವನ್ನು ಹೇಳುವ ಮೂಲಕ ಮಂಡಿಸಿದರು.

ಗಮನಿಸಿ: ಬಜೆಟ್, ಅದರ ಅರ್ಥ, ಸಂಬಂಧಿತ ಸಾಂವಿಧಾನಿಕ ನಿಬಂಧನೆಗಳು ಮತ್ತು ಪ್ರಸ್ತುತಿಯ ಹಂತಗಳ ಬಗ್ಗೆ ತಿಳಿಯಿರಿ.

2022-23ರ ಕೇಂದ್ರ ಬಜೆಟ್‌ನ ಮುಖ್ಯಾಂಶಗಳು:

ಒಟ್ಟು ಖರ್ಚು ಮತ್ತು ಮುಖ್ಯ ಫೋಕಸ್:

  1. ಉದ್ಯೋಗ ಸೃಷ್ಟಿಯನ್ನು ಹೆಚ್ಚಿಸಲು ಮತ್ತು ಆರ್ಥಿಕ ಚಟುವಟಿಕೆಗಳನ್ನು ಉತ್ತೇಜಿಸಲು.
  2. ಬಜೆಟ್‌ನಲ್ಲಿ ಒಟ್ಟಾರೆ ಸರ್ಕಾರದ ವೆಚ್ಚವು ಪ್ರಸಕ್ತ ವರ್ಷಕ್ಕಿಂತ ಶೇ.4.6 ರಷ್ಟು ಹೆಚ್ಚಿಗೆ ಇರುತ್ತದೆ ಮತ್ತು ರಾಜ್ಯಗಳಿಗೆ 1 ಲಕ್ಷ ಕೋಟಿ ರೂಪಾಯಿಗಳ ಹೆಚ್ಚುವರಿ ಬೆಂಬಲವನ್ನು ಘೋಷಿಸಲಾಗಿದೆ.
  3. 2022-23 ರಲ್ಲಿ ಒಟ್ಟು ವೆಚ್ಚವು ₹.45 ಲಕ್ಷ ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ, ಆದರೆ ಸಾಲಗಳನ್ನು ಹೊರತುಪಡಿಸಿ ಒಟ್ಟು ಸ್ವೀಕೃತಿಗಳು ₹.22.84 ಲಕ್ಷ ಕೋಟಿ ಎಂದು ಅಂದಾಜಿಸಲಾಗಿದೆ.
  4. 2022-23ರಲ್ಲಿ ಬಂಡವಾಳ ವೆಚ್ಚದ ವೆಚ್ಚವನ್ನು ಮತ್ತೆ ಶೇಕಡಾ 35.4 ರಿಂದ 7.50 ಲಕ್ಷ ಕೋಟಿಗೆ ಹೆಚ್ಚಿಸಲಾಗುತ್ತಿದೆ. ಪ್ರಸಕ್ತ ವರ್ಷದಲ್ಲಿ ಬಂಡವಾಳ ವೆಚ್ಚಕ್ಕಾಗಿ 5.54 ಲಕ್ಷ ಕೋಟಿ ರೂ. ಗಳನ್ನು ತೆಗೆದಿರಿಸಲಾಗಿತ್ತು.

Current Affairs

 

ದೇಶದ ಆರ್ಥಿಕ ಸ್ಥಿತಿಯ ಬಗ್ಗೆ ಸಂಕ್ಷಿಪ್ತ ಅವಲೋಕನಗಳು:

  1. ಭಾರತದ ಆರ್ಥಿಕ ಬೆಳವಣಿಗೆ ದರವು 9.2 ಪ್ರತಿಶತ ಎಂದು ಅಂದಾಜಿಸಲಾಗಿದೆ, ಇದು ಎಲ್ಲಾ ಪ್ರಮುಖ ಆರ್ಥಿಕತೆಗಳಲ್ಲಿ ಅತ್ಯಧಿಕವಾಗಿದೆ.
  2. ಡಾಲರ್ ಲೆಕ್ಕದಲ್ಲಿ, ಭಾರತದ ‘ಒಟ್ಟು ದೇಶೀಯ ಉತ್ಪನ್ನ’ (GDP) ಈಗಾಗಲೇ $3 ಟ್ರಿಲಿಯನ್ ದಾಟಿದೆ.
  3. ಪ್ರಸಕ್ತ ಹಣಕಾಸು ವರ್ಷದಲ್ಲಿ ‘ವಿತ್ತೀಯ ಕೊರತೆ’ಯು ಶೇಕಡಾ 6.9 ಎಂದು ಅಂದಾಜಿಸಲಾಗಿದೆ. ಈ ಹಿಂದೆ ವಿತ್ತೀಯ ಕೊರತೆಯು ಶೇ.6.8 ರಷ್ಟು ಇರಲಿದೆ ಎಂದು ಅಂದಾಜಿಸಲಾಗಿತ್ತು. 2022-23ರಲ್ಲಿ ಸರಕಾರದ ವಿತ್ತೀಯ ಕೊರತೆಯು 16,61,196 ಕೋಟಿ ರೂ. ಎಂದು ಅಂದಾಜಿಸಲಾಗಿದೆ.
  4. ಏರುತ್ತಿರುವ ಹಣದುಬ್ಬರದ ಮಟ್ಟವು ಆರ್ಥಿಕತೆಗೆ ಕಳವಳಕಾರಿ ವಿಷಯವಾಗಿ ಉಳಿದಿದೆ.
  5. ಜನವರಿ 21 ರಂದು ‘ವಿದೇಶಿ ವಿನಿಮಯ ಮೀಸಲು’ $634.287 ಶತಕೋಟಿಯಷ್ಟಿದೆ, ಇದು 2021-22 ಕ್ಕೆ ಅಂದಾಜಿಸಲಾದ 13 ತಿಂಗಳ ಆಮದುಗಳ ಮೌಲ್ಯಕ್ಕೆ ಸಮಾನವಾದ ರಕ್ಷಣೆಯನ್ನು ಒದಗಿಸುತ್ತದೆ.

ಮೂಲಸೌಕರ್ಯ ಅಭಿವೃದ್ಧಿಗೆ ಬಜೆಟ್‌ನಲ್ಲಿ ಹಣಕಾಸು ಹಂಚಿಕೆ:

‘ಪ್ರಧಾನಮಂತ್ರಿ ಗತಿ ಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್’: ಆರ್ಥಿಕ ಬೆಳವಣಿಗೆ ಮತ್ತು ಸುಸ್ಥಿರ ಅಭಿವೃದ್ಧಿ ಸಾಧ್ಯವಾಗಿಸುವ ನಿಟ್ಟಿನಲ್ಲಿ ಆರಂಭಿಸಿರುವ ‘ಪ್ರಧಾನಮಂತ್ರಿ ಗತಿ ಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್’ ನ ಅಡಿಯಲ್ಲಿ (PM GatiShakti National Master Plan) ತಡೆರಹಿತ, ಬಹುಮಾಧ್ಯಮ ಸಂಪರ್ಕ ಹಾಗೂ ದಕ್ಷ ಸಾರಿಗೆಯನ್ನು ಒಳಗೊಳ್ಳುವ ಏಳು ಎಂಜಿನ್‌ಗಳು ಕೆಲಸ ಮಾಡಲಿವೆ.

ಏಳು ಎಂಜಿನ್‌ಗಳು; ರಸ್ತೆಗಳು, ರೈಲ್ವೆ, ವಿಮಾನ ನಿಲ್ದಾಣಗಳು, ಬಂದರುಗಳು, ಸಮೂಹ ಸಾರಿಗೆ, ಜಲಮಾರ್ಗಗಳು ಮತ್ತು ಸಾರಿಗೆ ಮೂಲಸೌಕರ್ಯ ಸಾರಿಗೆ ಮೂಲಸೌಕರ್ಯ ವಲಯಗಳು ಇಲ್ಲಿ ಆದ್ಯತೆ ಪಡೆಯಲಿವೆ.

ಇದು ವಿಭಿನ್ನ ವಿಧಾನಗಳ ಮೂಲಕ ಸರಕುಗಳ ಸರಾಗ ಸಂಚಾರ ಸಾಧ್ಯವಾಗಿಸುತ್ತದೆ. ಸಾಗಣೆ ವೆಚ್ಚ ಮತ್ತು ಸಮಯ ಕಡಿಮೆ ಮಾಡುತ್ತದೆ. ಯುವಜನರಿಗೆ ಉದ್ಯೋಗ ಮತ್ತು ಉದ್ಯಮಶೀಲತೆಯ ಅವಕಾಶಗಳನ್ನು ಇದು ತೆರೆಯಲಿದೆ ಎಂದು ಸರ್ಕಾರ ತಿಳಿಸಿದೆ.

2022-23ರಲ್ಲಿ ಖಾಸಗಿ–ಸಾರ್ವಜನಿಕ ಸಹಭಾಗಿತ್ವದಡಿ ನಾಲ್ಕು ಸ್ಥಳಗಳಲ್ಲಿ ಬಹುವಿಧದ ‘ಲಾಜಿಸ್ಟಿಕ್ಸ್ ಪಾರ್ಕ್‌’ ಅನುಷ್ಠಾನಕ್ಕೆ ಗುತ್ತಿಗೆ ನೀಡಲಾಗುತ್ತದೆ.

ಹೊಸದಾಗಿ 400 ‘ವಂದೇ ಭಾರತ್ ರೈಲು’ಗಳನ್ನು ಪರಿಚಯಿಸುವುದಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್‌ನಲ್ಲಿ ಘೋಷಿಸಿದ್ದಾರೆ. ಇಂಧನ ದಕ್ಷತೆ ಮತ್ತು ಪ್ರಯಾಣಿಕ ಸ್ನೇಹಿ ತಂತ್ರಜ್ಞಾನದೊಂದಿಗೆ ಹೊಸ ತಲೆಮಾರಿನ ವಂದೇ ಭಾರತ್ ರೈಲುಗಳನ್ನು ಮುಂದಿನ ಮೂರು ವರ್ಷಗಳಲ್ಲಿ ತಯಾರಿಸಲಾಗುವುದು ಎಂದು ತಿಳಿಸಿದ್ದಾರೆ.

ಸಣ್ಣ ರೈತರು ಹಾಗೂ ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳ ಸರಕುಗಳನ್ನು ಸಾಗಿಸಲು ದಕ್ಷ ಸರಕು ಸಾಗಣೆ ಸೇವೆಗಳನ್ನು ರೈಲ್ವೆ ಅಭಿವೃದ್ಧಿಪಡಿಸಲಿದೆ. ಜೊತೆಗೆ ಪಾರ್ಸೆಲ್‌ಗಳ ತಡೆರಹಿತ ಸಂಚಾರಕ್ಕೆ ಅನುಕೂಲವಾಗುವಂತೆ ಅಂಚೆ ಮತ್ತು ರೈಲ್ವೆ ನಡುವೆ ಸಂಪರ್ಕ ಸಾಧಿಸಲು ರೈಲ್ವೆ ಮುಂದಾಳತ್ವ ವಹಿಸಲಿದೆ.

ರೈಲಿನ ತೂಕವನ್ನು ಸುಮಾರು 50 ಟನ್ ಕಡಿಮೆ ಮಾಡಲಾಗಿದ್ದು, ಹಗುರ ತೂಕದ ಅಲ್ಯುಮಿನಿಯಂ ಅನ್ನು ಬಳಸಿ ಇವುಗಳನ್ನು ತಯಾರಿಸಲಾಗುತ್ತದೆ. ಇದರಿಂದ ಇಂಧನದ ಉಳಿತಾಯವಾಗುತ್ತದೆ. ಪಿಎಂ ಗತಿಶಕ್ತಿ ಯೋಜನೆಯಡಿ 100 ಸರಕು ಟರ್ಮಿನಲ್‌ಗಳನ್ನು ಮುಂದಿನ 3 ವರ್ಷಗಳಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದೆ.

ಜನರು ಮತ್ತು ಸರಕುಗಳ ವೇಗದ ಸಂಚಾರಕ್ಕೆ ಅನುಕೂಲವಾಗುವಂತೆ 2022-23ರಲ್ಲಿ ಎಕ್ಸ್‌ಪ್ರೆಸ್‌ ಹೆದ್ದಾರಿಗಳಿಗಾಗಿ ಮಾಸ್ಟರ್ ಪ್ಲಾನ್ ರೂಪಿಸಲಾಗುವುದು.

ಸ್ಥಳೀಯ ವ್ಯಾಪಾರಗಳು ಮತ್ತು ಪೂರೈಕೆ ಸರಪಳಿಗಳಿಗೆ ಸಹಾಯ ಮಾಡಲು ‘ಒಂದು ನಿಲ್ದಾಣ-ಒಂದು ಉತ್ಪನ್ನ’ ಪರಿಕಲ್ಪನೆಯನ್ನು ಜನಪ್ರಿಯಗೊಳಿಸಲಾಗುತ್ತದೆ.

ಆತ್ಮನಿರ್ಭರ ಭಾರತ್‌ ಭಾಗವಾಗಿ 2022-23ರಲ್ಲಿ ಸುರಕ್ಷತೆ ಮತ್ತು ಸಾಮರ್ಥ್ಯ ವರ್ಧನೆಗಾಗಿ 2,000 ಕಿ.ಮೀ. ಜಾಲವನ್ನು ‘ಕವಚ್’ ಅಡಿಯಲ್ಲಿ ತರಲಾಗುವುದು.

ನಗರಗಳ ಸಮೂಹ ಸಾರಿಗೆ ಮತ್ತು ರೈಲು ನಿಲ್ದಾಣಗಳ ನಡುವೆ ಬಹು ಮಾದರಿ ಸಂಪರ್ಕವನ್ನು ಆದ್ಯತೆಯ ಮೇಲೆ ಸುಗಮಗೊಳಿಸಲಾಗುವುದು.

ಹೆದ್ದಾರಿಗಳಿಗೆ ಮಾಸ್ಟರ್ ಪ್ಲಾನ್ ಸಿದ್ಧಪಡಿಸಲಾಗಿದ್ದು, ಇದರಡಿ 2022-23ರಲ್ಲಿ 25,000 ಕಿ.ಮೀ ರಾಷ್ಟ್ರೀಯ ಹೆದ್ದಾರಿ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ.

ಹಸಿರು ಮೂಲ ಸೌಕರ್ಯಕ್ಕಾಗಿ ಸಂಪನ್ಮೂಲಗಳನ್ನು ಕ್ರೋಢೀಕರಿಸಲು ಸಾವರಿನ್ ಗ್ರೀನ್ ಬಾಂಡ್ ಗಳನ್ನು ನೀಡಲಾಗುವುದು.

ಡೇಟಾ ಸೆಂಟರ್ ಗಳು ಮತ್ತು ಎನರ್ಜಿ ಸ್ಟೋರೇಜ್ ಸಿಸ್ಟಂಗಳಿಗೆ ಮೂಲಸೌಕರ್ಯದ ಸ್ಥಾನ ಮಾನವನ್ನು ನೀಡಲಾಗುವುದು.

ರಕ್ಷಣಾ ಕ್ಷೇತ್ರ:

ರಕ್ಷಣಾ ಉತ್ಪಾದನೆ: ಸ್ವಾವಲಂಬನೆ ಮಂತ್ರ

ದೇಶದ ರಕ್ಷಣಾ ಬಜೆಟ್‌ನ ಗಾತ್ರವನ್ನು ಹೆಚ್ಚಿಸಲಾಗಿದೆ. 2022–23ನೇ ಸಾಲಿನಲ್ಲಿ ರಕ್ಷಣಾ ವಲಯಕ್ಕೆ ₹5.25 ಲಕ್ಷ ಕೋಟಿ ಮೀಸಲಿಡಲಾಗಿದೆ. ಕಳೆದ ವರ್ಷ ₹4.78 ಕೋಟಿ ನೀಡಲಾಗಿತ್ತು. ಸೇನಾ ಉಪಕರಣಗಳ ತಯಾರಿಕೆಯಲ್ಲಿ ಸ್ವಾವಲಂಬನೆಯನ್ನು ಖಾತ್ರಿಪಡಿಸುವುದನ್ನು ಈ ಬಾರಿಯ ಬಜೆಟ್ ಒತ್ತಿ ಹೇಳಿದೆ. ಆಮದುಗಳನ್ನು ಕಡಿಮೆ ಮಾಡಲು ಮತ್ತು ಸಶಸ್ತ್ರ ಪಡೆಗಳಿಗೆ ಉಪಕರಣಗಳನ್ನು ಉತ್ಪಾದಿಸುವಲ್ಲಿ ಸ್ವಾವಲಂಬನೆಯನ್ನು ಉತ್ತೇಜಿಸಲು ಸರ್ಕಾರ ಮುಂದಾಗಿದೆ.

ಹೊಸ ಶಸ್ತ್ರಾಸ್ತ್ರಗಳು, ವಿಮಾನಗಳು, ಯುದ್ಧನೌಕೆಗಳು ಮತ್ತು ಇತರ ಮಿಲಿಟರಿ ಯುದ್ಧೋಪಕರಣಗಳ ಖರೀದಿ ಒಳಗೊಂಡಂತೆ ಬಂಡವಾಳ ವೆಚ್ಚಕ್ಕಾಗಿ ಒಟ್ಟು ₹1,52,369 ಕೋಟಿ ಮೀಸಲಿಡಲಾಗಿದೆ. ಕಳೆದ ಬಾರಿ ಬಂಡವಾಳ ವೆಚ್ಚಕ್ಕಾಗಿ ₹1.34 ಲಕ್ಷ ಕೋಟಿ ನೀಡಲಾಗಿತ್ತು. ವೇತನ ಪಾವತಿ ಮತ್ತು ಸಂಸ್ಥೆಗಳ ನಿರ್ವಹಣೆ ವೆಚ್ಚಗಳನ್ನು ಒಳಗೊಂಡ ವೆಚ್ಚಕ್ಕಾಗಿ ₹2,33,000 ಕೋಟಿ ತೆಗೆದಿರಿಸಲು ನಿರ್ಧರಿಸಲಾಗಿದೆ. ರಕ್ಷಣಾ ಪಿಂಚಣಿಗಾಗಿ ₹1,19,696 ಕೋಟಿ, ರಕ್ಷಣಾ ಸಚಿವಾಲಯಕ್ಕೆ (ನಾಗರಿಕ) ₹20,100 ಕೋಟಿ ಮೀಸಲು ಇಡಲಾಗಿದೆ.

ರಕ್ಷಣಾ ವಲಯದಲ್ಲಿ ಬಂಡವಾಳ ಸಂಗ್ರಹದ ಶೇ 68ರಷ್ಟನ್ನು ದೇಶೀಯ ಕೈಗಾರಿಕೆಗಳಿಗೆ ಮೀಸಲಿಡಲು ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ. ಇದು ಸ್ಥಳೀಯ ಉತ್ಪನ್ನಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಮಹತ್ವದ ಕ್ರಮವಾಗಿದ್ದು, ದೇಶೀಯ ರಕ್ಷಣಾ ಉದ್ಯಮಗಳಿಗೆ ಉತ್ತೇಜನ ನೀಡುತ್ತದೆ ಎಂದು ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ನವೋದ್ಯಮ ಮತ್ತು ಖಾಸಗಿ ಸಂಸ್ಥೆಗಳ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿಗಾಗಿ (ಆರ್ & ಡಿ) ಬಜೆಟ್‌ನ ಶೇಕಡಾ 25ರಷ್ಟು ಮೀಸಲಿಡುವ ಪ್ರಸ್ತಾಪವವನ್ನೂ ಅವರು ಸ್ವಾಗತಿಸಿದ್ದಾರೆ.

ಕೃಷಿ ಮತ್ತು ಆಹಾರ ಸಂಸ್ಕರಣೆ ವಲಯ:

ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯಕ್ಕೆ ಬಜೆಟ್ ಹಂಚಿಕೆ: 2022-23 ಹಣಕಾಸು ವರ್ಷಕ್ಕೆ 1,32,513 ಕೋಟಿ ರೂ. ನಿಗದಿಪಡಿಸಲಾಗಿದೆ.

ಬೆಳೆಗಳ ಸಮೀಕ್ಷೆ, ಜಮೀನಿನ ದಾಖಲೆಗಳ ಡಿಜಿಟಲೀಕರಣ, ಕೀಟನಾಶಕಗಳು ಹಾಗೂ ಪೋಷಕಾಂಶಗಳ  ಸಿಂಪಡಣೆಗೆ ಕಿಸಾನ್ ಡ್ರೋನ್‌ಗಳ ಬಳಕೆಯನ್ನು ಉತ್ತೇಜಿಸಲಾಗುತ್ತದೆ.

ನಬಾರ್ಡ್ ಮೂಲಕ, ಕೃಷಿ ಮತ್ತು ಗ್ರಾಮೀಣ ಉದ್ಯಮಕ್ಕೆ ಸಂಬಂಧಿಸಿದ ಸ್ಟಾರ್ಟಪ್‌ಗಳಿಗೆ ಆರ್ಥಿಕ ಸಹಾಯಕ್ಕಾಗಿ ಮಿಶ್ರ ಬಂಡವಾಳ ನಿಧಿಯ ಸೌಲಭ್ಯವನ್ನು ಒದಗಿಸಲಾಗುತ್ತದೆ.

ನೈಸರ್ಗಿಕ ಕೃಷಿಯ ಜೊತೆಗೆ ಶೂನ್ಯ ಬಂಡವಾಳ ಹಾಗೂ ಸಾವಯವ ಕೃಷಿ ಪದ್ಧತಿಗಳನ್ನು ಪ್ರೋತ್ಸಾಹಿಸುವುದು, ಕೃಷಿಯಲ್ಲಿ ಆಧುನಿಕ ಪದ್ಧತಿಗಳ ಅಳವಡಿಕೆ, ಮೌಲ್ಯವರ್ಧನೆ ಹಾಗೂ ಸಮರ್ಪಕ ನಿರ್ವಹಣೆ ಅಗತ್ಯ. ಕೃಷಿ ಕ್ಷೇತ್ರದ ಅಗತ್ಯಗಳನ್ನು ಪೂರೈಸುವ ಸಲುವಾಗಿ ಕೃಷಿ ವಿಶ್ವವಿದ್ಯಾಲಯಗಳು ತಮ್ಮ ಪಠ್ಯಕ್ರಮಗಳನ್ನು ಪರಿಷ್ಕರಿಸಬೇಕು.ಹಾಗಾಗಿ, ಪಠ್ಯಕ್ರಮಗಳ ಪರಿಷ್ಕರಣೆ ಮಾಡಲು ರಾಜ್ಯಗಳನ್ನು ಉತ್ತೇಜಸಲಾಗುವುದು.

ಎಣ್ಣೆಕಾಳುಗಳ ಉತ್ಪಾದನೆ ಹೆಚ್ಚಳಕ್ಕೆ ಕ್ರಮ: ಎಣ್ಣೆಕಾಳುಗಳನ್ನು ಆಮದು ಮಾಡಿಕೊಳ್ಳುವುದರ ಮೇಲಿನ ಅವಲಂಬನೆಯನ್ನು ಕಡಿಮೆಗೊಳಿಸಲು ಬಜೆಟ್‌ ನಲ್ಲಿ ಯೋಜನೆಯನ್ನು ಪ್ರಕಟಸಲಾಗಿದೆ. ದೇಶದ ಎಣ್ಣೆಕಾಳುಗಳ ಉತ್ಪಾದನೆಯನ್ನು ಹೆಚ್ಚಿಸುವ ಸಲುವಾಗಿ ಸಮಗ್ರವಾದ ಹಾಗೂ ವ್ಯವಸ್ಥಿತವಾದ ಯೋಜನೆಯನ್ನು ಅನುಷ್ಠಾನಗೊಳಿಸಲಾಗುವುದು ಎಂದೂ ನಿರ್ಮಲಾ ಘೋಷಿಸಿದ್ದಾರೆ.

ಸಿರಿಧಾನ್ಯಗಳ ಮಾರುಕಟ್ಟೆ ವಿಸ್ತರಣೆ: 2023 ಅನ್ನು ‘ಅಂತರರಾಷ್ಟ್ರೀಯ ಸಿರಿಧಾನ್ಯಗಳ ವರ್ಷ’ ಎಂಬುದಾಗಿ ಘೋಷಿಸಲಾಗಿದೆ. ಹೀಗಾಗಿ, ಸಿರಿಧಾನ್ಯಗಳ ಕೃಷಿಯನ್ನು ಪ್ರೋತ್ಸಾಹಿಸುವ ಜೊತೆಗೆ, ಕೊಯ್ಲು ನಂತರ ಮೌಲ್ಯವರ್ಧನೆ, ದೇಶೀ ಯವಾಗಿ ಮಾರುಕಟ್ಟೆ ವಿಸ್ತರಣೆಗೆ ಒತ್ತು ನೀಡಲಾಗುವುದು. ಜೊತೆಗೆ, ಸಿರಿಧಾನ್ಯಗಳಿಗೆ ಬ್ರ್ಯಾಂಡ್‌ ರೂಪ ನೀಡಿ, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆ ಒದಗಿಸಲು ಯೋಜನೆ ಜಾರಿಗೆ ತರಲಾಗುವುದು ಎಂದು ಪ್ರಕಟಿಸಿದ್ದಾರೆ.

ಬಂಡವಾಳ ಹೂಡಿಕೆಗೆ ಒತ್ತು: ಕೃಷಿ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆಯನ್ನು ಹೆಚ್ಚಿಸಲು ನಬಾರ್ಡ್‌ ಮೂಲಕ ವಿವಿಧ ಕಾರ್ಯಕ್ರಮಗಳನ್ನು ಜಾರಿಗೊಳಿಸುವದಾಗಿ ನಿರ್ಮಲಾ ಸೀತಾರಾಮನ್‌ ಪ್ರಕಟಿಸಿದರು.

ಸ್ಟಾರ್ಟ್‌ಅಪ್‌ಗಳು ಬಂಡವಾಳ ಹೂಡುವುದನ್ನು ಪ್ರೋತ್ಸಾಹಿಸಲು ‘ಸಹ–ಹೂಡಿಕೆ ಮಾದರಿ’ ಎಂಬ ಪರಿಕಲ್ಪನೆಯನ್ನು ನಬಾರ್ಡ್‌ ಮೂಲಕ ಅನುಷ್ಠಾನಗೊಳಿಸಲಾಗುತ್ತದೆ. ಕೃಷಿ ಮತ್ತು ಗ್ರಾಮೀಣ ಉದ್ದಿಮೆಗಳಲ್ಲಿ ಬಂಡವಾಳ ಹೂಡಿಕೆ ಈ ಯೋಜನೆಯ ಉದ್ದೇಶ. ಕೃಷಿಕರ ಸಂಘಗಳು, ರೈತರಿಗೆ ಬಾಡಿಗೆ ಆಧಾರದ ಮೇಲೆ ಕೃಷಿ ಉಪಕರಣಗಳನ್ನು ನೀಡುವುದು, ಮಾಹಿತಿ ತಂತ್ರಜ್ಞಾನ ಆಧಾರಿತ ನೆರವನ್ನು ರೈತರಿಗೆ ಒದಗಿಸುವುದು ಈ ಯೋಜನೆ ಒಳಗೊಂಡಿದೆ.

MSP: ₹2.37 ಲಕ್ಷ ಕೋಟಿ ಮೀಸಲು

ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಯೋಜನೆಯಡಿ ಕೃಷಿ ಉತ್ಪನ್ನಗಳ ಖರೀದಿಗೆ ₹2.37 ಲಕ್ಷ ಕೋಟಿ ತೆಗೆದಿರಿಸಲಾಗುವುದು ಎಂದು ಬಜೆಟ್‌ನಲ್ಲಿ ಘೋಷಿಸಲಾಗಿದೆ. ಕಳೆದ ವರ್ಷ ಈ ಮೊತ್ತ ₹2.42 ಲಕ್ಷ ಕೋಟಿ ಇತ್ತು.

2021–22ನೇ ಸಾಲಿನ ಹಿಂಗಾರು ಹಂಗಾಮಿ ಗೋಧಿ ಹಾಗೂ ಮುಂಗಾರು ಹಂಗಾಮಿನ ಭತ್ತ ಸೇರಿದಂತೆ ಒಟ್ಟು 1,208 ಲಕ್ಷ ಟನ್‌ ಕೃಷಿ ಉತ್ಪನ್ನಗಳನ್ನು ಖರೀದಿಸಲಾಗುತ್ತದೆ. 1.63 ಕೋಟಿ ರೈತರಿಗೆ ಇದರಿಂದ ಲಾಭವಾಗಲಿದೆ. ತಮಗೆ ಹೊಂದುವಂತಹ ತರಕಾರಿ ಹಾಗೂ ಹಣ್ಣುಗಳ ಕೃಷಿಯನ್ನು ರೈತರು ಕೈಗೊಳ್ಳಲು ಹಾಗೂ ಅವುಗಳ ಕೊಯ್ಲು, ಸಾಗಣೆಗಾಗಿ ನೆರವು ನೀಡಲಾಗುವುದು. ಈ ಉದ್ದೇಶಕ್ಕೆ ರಾಜ್ಯ ಸರ್ಕಾರಗಳ ಪಾಲುದಾರಿಕೆಯೂ ಇರಲಿದೆ.

ತಂತ್ರಜ್ಞಾನ: ಖಾಸಗಿ ಸಹಭಾಗಿತ್ವಕ್ಕೆ ಅವಕಾಶ.

ಡಿಜಿಟಲ್‌ ಹಾಗೂ ಹೈ–ಟೆಕ್‌ ಸೇವೆಗಳನ್ನು ಅನ್ನದಾತನ ಮನೆಗೆ ತಲುಪಿಸಲು ಸರ್ಕಾರ–ಖಾಸಗಿ ಸಹಭಾಗಿತ್ವ (PPP) ವಿಧಾನದಡಿ ಯೋಜನೆಗೆ ಜಾರಿಗೊಳಿಸಲು ಕೇಂದ್ರ ಸರ್ಕಾರ ಘೋಷಿಸಿದೆ.

ಈ ಕಾರ್ಯದಲ್ಲಿ ಸಾರ್ವಜನಿಕ ವಲಯದ ಸಂಶೋಧನಾ ಸಂಸ್ಥೆಗಳು, ವಿಸ್ತರಣಾ ಕೇಂದ್ರಗಳಲ್ಲದೇ, ಕೃಷಿ ತಂತ್ರಜ್ಞಾನ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಖಾಸಗಿ ಉದ್ದಿಮೆಗಳನ್ನು ಒಳಗೊಳ್ಳುವಂತೆ ಮಾಡಲಾಗುವುದು. ಖಾಸಗಿ ವಲಯವನ್ನು ಸಹ ಕೃಷಿ ಕ್ಷೇತ್ರದ ಭಾಗಿದಾರರನ್ನಾಗಿ ಮಾಡುವ ಚಿಂತನೆಯನ್ನು ಸಚಿವೆ ನಿರ್ಮಲಾ ಸೀತಾರಾಮನ್‌ ಮುಂದಿಟ್ಟಿದ್ದಾರೆ.

ಬಾಹ್ಯಾಕಾಶ, ರಕ್ಷಣಾ ಕ್ಷೇತ್ರದಲ್ಲಿ ಡ್ರೋನ್‌ಗಳ ಬಳಕೆ ಈ ವ್ಯಾಪಕವಾಗಿದೆ. ಈ ಕ್ಷೇತ್ರದಲ್ಲಿಯೂ ಅವುಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ‘ಕಿಸಾನ್‌ ಡ್ರೋನ್‌’ ಯೋಜನೆಯನ್ನು ಜಾರಿಗೊಳಿಸಲಾಗುವುದು ಎಂದುಪ್ರಕಟಿಸಿದ್ದಾರೆ.

ಶಿಕ್ಷಣ:

ಡಿಜಿಟಲ್ ವಿಶ್ವವಿದ್ಯಾಲಯ: ದೇಶದ ಎಲ್ಲ ಭಾಗದ ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾಗಲು ಜಾಗತಿಕ ಮಟ್ಟದ ಡಿಜಿಟಲ್‌ ವಿಶ್ವವಿದ್ಯಾಲಯವನ್ನು ಸ್ಥಾಪಿಸಲಾಗುವುದು. ಇದು ವಿದ್ಯಾರ್ಥಿಗಳಿಗೆ ತಮ್ಮ ಮನೆ ಬಾಗಿಲಿನಲ್ಲಿಯೇ ಕಲಿಕೆಯ ಅನುಭವ ನೀಡಲಿದೆ. ದೇಶದ ವಿವಿಧ ಭಾಷೆಗಳ ಮೂಲಕ ಇದರಲ್ಲಿ ಶಿಕ್ಷಣ ದೊರೆಯಲಿದೆ. ದೇಶದ ಅತ್ಯುತ್ತಮ ಸರ್ಕಾರಿ ವಿಶ್ವವಿದ್ಯಾಲಯಗಳು ಮತ್ತು ಸಂಸ್ಥೆಗಳು ಈ ಕಾರ್ಯಕ್ರಮಕ್ಕೆ ಸಹಕರಿಸಲಿವೆ ಎಂದು ಸಚಿವರು ತಿಳಿಸಿದರು.

ನಗರ ಯೋಜನೆ ಮತ್ತು ವಿನ್ಯಾಸದಲ್ಲಿ ಭಾರತದ ನಿರ್ದಿಷ್ಟ ಜ್ಞಾನವನ್ನು ಅಭಿವೃದ್ಧಿಪಡಿಸಲಾಗುತ್ತದೆ. ಇದಕ್ಕಾಗಿ ಈ ಕ್ಷೇತ್ರದಲ್ಲಿ ಪ್ರಮಾಣೀಕೃತ ತರಬೇತಿ ನೀಡಲಾಗುತ್ತದೆ. ಅಲ್ಲದೆ ಇದಕ್ಕಾಗಿ ದೇಶದ ವಿವಿಧೆಡೆ ಐದು ಶೈಕ್ಷಣಿಕ ಸಂಸ್ಥೆಗಳನ್ನು ಪರಿಣಿತಿ ಕೇಂದ್ರಗಳನ್ನಾಗಿ ಗುರುತಿಸಲಾಗುತ್ತದೆ.

ಈ ಕೇಂದ್ರಗಳಿಗೆ ತಲಾ ₹250 ಕೋಟಿ ದತ್ತಿ ನಿಧಿಯನ್ನು ಒದಗಿಸಲಾಗುತ್ತದೆ

‘ಒನ್‌ ಕ್ಲಾಸ್‌– ಒನ್‌ ಟಿವಿ ಚಾನೆಲ್‌’ ಕಾರ್ಯಕ್ರಮದಡಿ 200 ಚಾನೆಲ್‌ಗಳು, ಕೌಶಲ ವೃದ್ಧಿಗೆ ವರ್ಚುವಲ್‌ ಲ್ಯಾಬ್‌ ಮತ್ತು ಇ–ಲ್ಯಾಬ್‌ಗಳ ನಿರ್ಮಾಣ, ಗುಣಮಟ್ಟದ ‘ಇ– ಕಂಟೆಂಟ್‌’ ಸಿದ್ಧಪಡಿಸುವಿಕೆ, ‘ಡಿಜಿಟಲ್‌ ವಿಶ್ವವಿದ್ಯಾಲಯ’ ಸ್ಥಾಪನೆ ಸೇರಿದಂತೆ ಶಿಕ್ಷಣ ಕ್ಷೇತ್ರಕ್ಕೆ ಹಲವು ಹೊಸ ಕಾರ್ಯಕ್ರಮಗಳನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಬಜೆಟ್‌ನಲ್ಲಿ ಪ್ರಕಟಿಸಿದರು.

‘ಪಿಎಂ ಇ–ವಿದ್ಯಾ’ ಯೋಜನೆಯಡಿ ‘ಒಂದು ಕ್ಲಾಸ್‌– ಒನ್‌ ಟಿವಿ ಚಾನೆಲ್‌’ ಕಾರ್ಯಕ್ರಮವನ್ನು 12ರಿಂದ 200 ಟಿವಿ ಚಾನೆಲ್‌ಗಳಿಗೆ ವಿಸ್ತರಿಸಲಾಗುತ್ತದೆ. ಇದು ಎಲ್ಲ ರಾಜ್ಯಗಳ 1ರಿಂದ 12ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಪ್ರಾದೇಶಿಕ ಭಾಷೆಗಳಲ್ಲಿ ಪೂರಕ ಶಿಕ್ಷಣ ಒದಗಿಸಲಿದೆ ಎಂದು ಸಚಿವರು ಹೇಳಿದರು.

ವೃತ್ತಿಪರ ಕೋರ್ಸ್‌ಗಳ ವಿದ್ಯಾರ್ಥಿಗಳಲ್ಲಿ ವಿಮರ್ಶಾತ್ಮಕ ಕೌಶಲ ಉತ್ತೇಜಿಸಲು ಹಾಗೂ ಸೃಜನಶೀಲತೆಗೆ ಬೆಳೆಸಲು ವಿಜ್ಞಾನ ಮತ್ತು ಗಣಿತ ವಿಷಯದಲ್ಲಿ 750 ‘ವರ್ಚುವಲ್‌ ಲ್ಯಾಬ್‌’ಗಳು ಹಾಗೂ 75 ‘ಇ–ಲ್ಯಾಬ್‌’ಗಳನ್ನು ಸ್ಥಾಪಿಸಲಾಗುವುದು.

ದೇಶದ ಎಲ್ಲ ಪ್ರಾದೇಶಿಕ ಭಾಷೆಗಳಲ್ಲಿ ಉತ್ತಮ ಗುಣಮಟ್ಟದ ‘ಇ–ಕಂಟೆಂಟ್‌’ ಅಭಿವೃದ್ಧಿಪಡಿಸಲಾಗುತ್ತದೆ. ಅದನ್ನು ಇಂಟರ್‌ನೆಟ್‌, ಮೊಬೈಲ್‌, ಟಿ.ವಿ ಹಾಗೂ ರೇಡಿಯೊ ಮೂಲಕ ವಿದ್ಯಾರ್ಥಿಗಳಿಗೆ ದೊರೆಯುವಂತೆ ವ್ಯವಸ್ಥೆ ಮಾಡಲಾಗುವುದು. ಗುಣಮಟ್ಟದ ‘ಇ–ಕಂಟೆಂಟ್‌’ ಅಭಿವೃದ್ಧಿಗೆ ಪೂರಕವಾಗಿ ಶಿಕ್ಷಕರನ್ನು ಸಶಕ್ತಗೊಳಿಸಿ, ಡಿಜಿಟಲ್‌ ಉಪಕರಣಗಳೊಂದಿಗೆ ಸಜ್ಜುಗೊಳಿಸಲಾಗುತ್ತದೆ.

ಆರೋಗ್ಯ ಕ್ಷೇತ್ರ:

ಗುಣಮಟ್ಟದ ಮಾನಸಿಕ ಆರೋಗ್ಯ ಸಮಾಲೋಚನೆ ಮತ್ತು ಆರೈಕೆ ಸೇವೆಗಳ ಸುಧಾರಣೆಗೆ ‘ರಾಷ್ಟ್ರೀಯ ಟೆಲಿ ಮಾನಸಿಕ ಆರೋಗ್ಯ ಕಾರ್ಯಕ್ರಮ’ವನ್ನು ಪ್ರಾರಂಭಿಸಲಾಗುವುದು.

ಕಾರ್ಯಕ್ರಮವು 23 ಟೆಲಿ-ಮೆಂಟಲ್ ಹೆಲ್ತ್ ಸೆಂಟರ್ ಆಫ್ ಎಕ್ಸಲೆನ್ಸ್‌ನ ನೆಟ್‌ವರ್ಕ್ ಅನ್ನು ಒಳಗೊಂಡಿರುತ್ತದೆ. ನಿಮ್ಹಾನ್ಸ್ ನೋಡಲ್ ಕೇಂದ್ರವಾಗಿದೆ. ಬೆಂಗಳೂರಿನ ಅಂತರರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಯು (ಐಐಐಟಿ–ಬಿ) ತಂತ್ರಜ್ಞಾನ ಒದಗಿಸಲಿದೆ.

ರಾಷ್ಟ್ರೀಯ ಆರೋಗ್ಯ ಮಿಷನ್ ಗೆ ಮೀಸಲಿರುವ ಅನುದಾನ 37000 ಕೋಟಿ ರೂ ಗಳು.

ತೆರಿಗೆ ಪ್ರಸ್ತಾವನೆ:

ಆದಾಯ ತೆರಿಗೆ ಲೆಕ್ಕಪತ್ರ(ITR) ಸಲ್ಲಿಕೆಯಲ್ಲಿ ಆಗುವ ದೋಷಗಳನ್ನು ಸರಿಪಡಿಸಲು ಅವಕಾಶ ಸಿಗಲಿದೆ. ಐಟಿಆರ್‌ ತಿದ್ದುಪಡಿಗೆ ಏಕಗವಾಕ್ಷಿ: ಆದಾಯ ತೆರಿಗೆ ಲೆಕ್ಕಪತ್ರ (ಐಟಿಆರ್‌) ಸಲ್ಲಿಕೆಯಲ್ಲಿ ಆಗುವ ದೋಷಗಳನ್ನು ಸರಿಪಡಿಸಲು ಏಕಗವಾಕ್ಷಿ ವ್ಯವಸ್ಥೆಯನ್ನು ಸರ್ಕಾರ ನೀಡಲಿದೆ. ಪರಿಷ್ಕೃತ ಐಟಿಆರ್ ಅನ್ನು ಎರಡು ವರ್ಷಗಳ ಒಳಗಾಗಿ ಸಲ್ಲಿಸಬೇಕು.

ಕ್ರಿಪ್ಟೊಕರೆನ್ಸಿಗಳ ವರ್ಗಾವಣೆಯಿಂದ ಬರುವ ಆದಾಯಕ್ಕೆ ಶೇಕಡ 30ರಷ್ಟು ತೆರಿಗೆ ವಿಧಿಸಲು ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ. ಸಂಸತ್‌ನಲ್ಲಿ ಕೇಂದ್ರ ಬಜೆಟ್‌ ಅಂಗೀಕಾರವಾದ ನಂತರ, ಏಪ್ರಿಲ್‌ 1ರಿಂದ ಪ್ರಸ್ತಾವಿತ ತೆರಿಗೆಯು ಜಾರಿಗೆ ಬರಲಿದೆ.

ಕ್ರಿಪ್ಟೊಕರೆನ್ಸಿ ಮಾರಾಟದಿಂದ ಬರುವ ಆದಾಯಕ್ಕೆ ಶೇ 30ರಷ್ಟು ತೆರಿಗೆ ವಿಧಿಸಿರುವುದು ಲಾಟರಿ, ಗೇಮ್‌ ಷೋ ಮತ್ತು ಪಜಲ್‌ಗಳಲ್ಲಿ ಗೆಲ್ಲುವುದರಿಂದ ಬರುವ ತೆರಿಗೆಗೆ ಸಮನಾಗಿದೆ ಎಂದು ತಜ್ಞರು ಹೇಳಿದ್ದಾರೆ.

ಈ ಮೂಲಕ ಕ್ರಿಪ್ಟೊಕರೆನ್ಸಿಗಳನ್ನೂ ತೆರಿಗೆ ವ್ಯಾಪ್ತಿಗೆ ತರುವ ಕುರಿತು ಕೇಂದ್ರ ಸರ್ಕಾರವು ತನ್ನ ನಿರ್ಧಾರ ಸ್ಪಷ್ಟಪಡಿಸಿದೆ. ಒಂದು ವರ್ಷದಲ್ಲಿ ₹10 ಸಾವಿರಕ್ಕಿಂತ ಹೆಚ್ಚಿನ ಮೊತ್ತದ ವರ್ಚುವಲ್‌ ಕರೆನ್ಸಿಗಳ ವರ್ಗಾವಣೆಯ ಮೇಲೆ ಶೇ 1ರಷ್ಟು ಟಿಡಿಎಸ್‌ (ಮೂಲದಲ್ಲೇ ತೆರಿಗೆ ಕಡಿತ) ಮಾಡುವ ಕುರಿತು ಪ್ರಸ್ತಾಪಿಸಲಾಗಿದೆ. ಕ್ರಿಪ್ಟೊ ಮತ್ತು ಡಿಜಿಟಲ್‌ ಸ್ವತ್ತನ್ನು ಉಡುಗೊರೆಯಾಗಿ ನೀಡುವುದಕ್ಕೂ ತೆರಿಗೆ ಕೊಡಬೇಕಾಗುತ್ತದೆ.

ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) 2022ರ ಏಪ್ರಿಲ್‌ನಿಂದ ಡಿಜಿಟಲ್ ಕರೆನ್ಸಿಯನ್ನು ಹೊರತರಲಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ಕೇಂದ್ರೀಯ ಬ್ಯಾಂಕ್‌ನ ಡಿಜಿಟಲ್‌ ಕರೆನ್ಸಿಯನ್ನು (ಸಿಬಿಡಿಸಿ) ಪರಿಚಯಿಸುವುದರಿಂದ ಡಿಜಿಟಲ್‌ ಆರ್ಥಿಕತೆಗೆ ದೊಡ್ಡ ಉತ್ತೇಜನ ಸಿಗಲಿದೆ. ಡಿಜಿಟಲ್‌ ಕರೆನ್ಸಿಯಿಂದಾಗಿ ಕರೆನ್ಸಿ ನಿರ್ವಹಣಾ ವ್ಯವಸ್ಥೆಯಲ್ಲಿ ದಕ್ಷತೆಯೂ ಬರಲಿದೆ ಎಂದು ನಿರ್ಮಲಾ ಸೀತಾರಾಮನ್‌ ತಿಳಿಸಿದ್ದಾರೆ.

ಸಿಬಿಡಿಸಿ ಡಿಜಿಟಲ್‌ ಅಥವಾ ವರ್ಚುವಲ್‌ ಕರೆನ್ಸಿ ಆಗಿರಲಿದ್ದು, ಇದನ್ನು ಖಾಸಗಿ ವರ್ಚುವಲ್‌ ಕರೆನ್ಸಿ ಅಥವಾ ಕ್ರಿಪ್ಟೊಕರೆನ್ಸಿಗಳ ಜೊತೆ ಹೋಲಿಕೆ ಮಾಡಲಾಗದು. ನಿರ್ದಿಷ್ಟ ವಿತರಕರು ಇಲ್ಲದಿರುವುದರಿಂದ ಖಾಸಗಿ ವರ್ಚುವಲ್ ಕರೆನ್ಸಿಗಳು ಯಾವುದೇ ವ್ಯಕ್ತಿಯ ಸಾಲ ಅಥವಾ ಹೊಣೆಗಾರಿಕೆಗಳನ್ನು ಪ್ರತಿನಿಧಿಸುವುದಿಲ್ಲ. ಅವು ಹಣವಲ್ಲ ಮತ್ತು ಕರೆನ್ಸಿಯಂತೂ ಅಲ್ಲವೇ ಅಲ್ಲ.

MSME ಗಳಿಗೆ ಉತ್ತೇಜನ:

MSMEಗಳಿಗಾಗಿ 5 ವರ್ಷಗಳ ‘MSME ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಮತ್ತು ವೇಗಗೊಳಿಸುವ’ (RAMP) (Raising and Accelerating MSME Performance (RAMP) programme) ಕಾರ್ಯಕ್ರಮವನ್ನು ರೂ.6,000 ಕೋಟಿ ವೆಚ್ಚದಲ್ಲಿ ಪ್ರಾರಂಭಿಸಲಾಗುವುದು.

ಎಮರ್ಜೆನ್ಸಿ ಕ್ರೆಡಿಟ್ ಲೈನ್ ಗ್ಯಾರಂಟಿ ಸ್ಕೀಮ್ (ECLGS) ಅಡಿಯಲ್ಲಿ 130 ಲಕ್ಷ MSME ಗಳಿಗೆ ಹೆಚ್ಚುವರಿ ಕ್ರೆಡಿಟ್ ನೀಡಲಾಗಿದೆ, ಇದನ್ನು ಮಾರ್ಚ್ 2023 ರವರೆಗೆ ವಿಸ್ತರಿಸಲಾಗುವುದು.

ECLGS ಅಡಿಯಲ್ಲಿ ಗ್ಯಾರಂಟಿ ಕವರ್ ಅನ್ನು 50000 ಕೋಟಿಗಳಿಂದ ಒಟ್ಟು 5 ಲಕ್ಷ ಕೋಟಿಗಳಿಗೆ ಹೆಚ್ಚಿಸಲಾಗುವುದು.

ಈಶಾನ್ಯ ಭಾರತಕ್ಕೆ ಪ್ರಧಾನ ಮಂತ್ರಿಗಳ ಅಭಿವೃದ್ಧಿ ಉಪಕ್ರಮ (PM-DevINE):

ಈಶಾನ್ಯ ಭಾರತದಲ್ಲಿ ಮೂಲಸೌಕರ್ಯ ಮತ್ತು ಸಾಮಾಜಿಕ ಅಭಿವೃದ್ಧಿ ಯೋಜನೆಗಳಿಗೆ ಹಣ ನೀಡಲು ಹೊಸ ಯೋಜನೆ PM-DevINE ಅನ್ನು ಪ್ರಾರಂಭಿಸಲಾಗಿದೆ.

ಈ ಯೋಜನೆಯಡಿ ಯುವಕರು ಮತ್ತು ಮಹಿಳೆಯರಿಗೆ ಜೀವನೋಪಾಯ ಚಟುವಟಿಕೆಗಳನ್ನು ಸಕ್ರಿಯಗೊಳಿಸಲು 1,500 ಕೋಟಿ ರೂಪಾಯಿಗಳ ಆರಂಭಿಕ ಹಂಚಿಕೆ  ಮಾಡಲಾಗಿದೆ.

ನವೋದ್ಯಮಕ್ಕೆ ಪ್ರೋತ್ಸಾಹ ಮುಂದುವರಿಕೆ:

ದೇಶದ ಆರ್ಥಿಕತೆಯ ಬೆಳವಣಿಗೆಗೆ ‘ಚಾಲಕ’ ಎಂಬಂತೆ ಸ್ಟಾರ್ಟ್ಅಪ್‌ಗಳು (ನವೋದ್ಯಮ) ಹೊರಹೊಮ್ಮಿದ್ದು, ಅನೇಕ ನವೋದ್ಯಮಗಳು ಯಶಸ್ಸು ಕಂಡಿವೆ. 2022ರ ಮಾರ್ಚ್‌ 31ಕ್ಕೂ ಮುನ್ನ ಸ್ಥಾಪಿಸಲಾಗಿರುವ ಅರ್ಹ ನವೋದ್ಯಮಗಳಿಗೆ ಪ್ರೋತ್ಸಾಹದಾಯಕವಾಗಿ ತೆರಿಗೆ ವಿನಾಯ್ತಿ ನೀಡಲಾಗಿದೆ. ಕೋವಿಡ್ ಸಾಂಕ್ರಾಮಿಕ ರೋಗದ ಕಾರಣ ಈ ವರ್ಷವೂ ಸ್ಟಾರ್ಟ್‌ಅಪ್‌ಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ತೆರಿಗೆ ರಿಯಾಯಿತಿ ನೀಡಲಾಗುತ್ತದೆ.

ಇ–ಪಾಸ್‌ಪೋರ್ಟ್:

ಎಂಬೆಡೆಡ್ ಚಿಪ್ ಮತ್ತು ಫ್ಯೂಚರಿಸ್ಟಿಕ್ ತಂತ್ರಜ್ಞಾನವನ್ನು ಬಳಸಿಕೊಂಡು ಇ-ಪಾಸ್‌ಪೋರ್ಟ್‌ಗಳ ವಿತರಣೆಗೆ ಚಾಲನೆ. ವಿದೇಶ ಪ್ರವಾಸ ಮತ್ತಷ್ಟು ಸರಳಗೊಳಿಸಲು ಆಧುನಿಕ ತಂತ್ರಜ್ಞಾನ ಜಾರಿ.

ಮಹಿಳಾ ಸಬಲೀಕರಣ, ಮಕ್ಕಳ ಆರೋಗ್ಯಕ್ಕೆ ಒತ್ತು:

‘ಸಕ್ಷಮ್‌ ಅಂಗನವಾಡಿಗಳ ಯೋಜನೆಯಡಿ ಎರಡು ಲಕ್ಷ ಅಂಗನವಾಡಿಗಳನ್ನು ಮೇಲ್ದರ್ಜೆಗೇರಿಸಲಾಗುವುದು. ಇದು ಹೊಸ ಪೀಳಿಗೆಯ ಅಂಗನವಾಡಿಗಳಿಗೆ ಬೇಕಾಗಿರುವ ಮೂಲ ಸೌಕರ್ಯಗಳು ಹಾಗೂ ಮಕ್ಕಳ ಆರಂಭಿಕ ಅಭಿವೃದ್ಧಿಗೆ ನೆರವಾಗಲು ಧ್ವನಿ–ದೃಶ್ಯ ಸಾಧನಗಳನ್ನು ಒದಗಿಸಲು ನೆರವಾಗಲಿದೆ’ ಎಂದು ಕೇಂದ್ರ ಹಣಕಾಸು ಸಚಿವರು ತಿಳಿಸಿದ್ದಾರೆ.

2022–23 ನೇ ಸಾಲಿನ ಬಜೆಟ್‌ ಮಂಡಿಸಿದ ಸೀತಾರಾಮನ್‌ ಅವರು,‘ ಭಾರತದ ಉಜ್ವಲ ಭವಿಷ್ಯದ ಮುಂಚೂಣಿಯಲ್ಲಿ ‘ನಾರಿ ಶಕ್ತಿ’ಯ ಮಹತ್ವ ಮತ್ತು ‘ಅಮೃತ ಕಾಲ’ ದಲ್ಲಿ ಮಹಿಳಾ ನೇತೃತ್ವದ ಅಭಿವೃದ್ಧಿಯನ್ನು ಗುರುತಿಸಿರುವ ಸರ್ಕಾರ,ಮಹಿಳಾ ಸಚಿವಾಲಯದ ಯೋಜನೆಗಳನ್ನು ಸಮಗ್ರವಾಗಿ ಪರಿಷ್ಕರಿಸಿದೆ’ ಎಂದರು.

ಮಹಿಳೆಯರು ಮತ್ತು ಮಕ್ಕಳ ಸಮಗ್ರ ಅಭಿವೃದ್ಧಿಗಾಗಿ 3 ಯೋಜನೆಗಳನ್ನು ಆರಂಭಿಸಲಾಗಿದೆ. ಮಿಷನ್ ಶಕ್ತಿ, ಮಿಷನ್ ವಾತ್ಸಲ್ಯ, ಸಕ್ಷಮ್‌ ಅಂಗನವಾಡಿ ಹಾಗೂ ಪೋಷಣ್‌ 2.0 ಯೋಜನೆಯನ್ನು ಜಾರಿಗೆ ತರಲಾಗಿದೆ.

2022-23ರ ಬಜೆಟ್‌ನಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯಕ್ಕೆ ಕಳೆದ ವರ್ಷಕ್ಕಿಂತ ಶೇಕಡ 3 ರಷ್ಟು ಹೆಚ್ಚು ಹಣ ಹಂಚಿಕೆ ಮಾಡಲಾಗಿದೆ.  2021-22ರ ಸಾಲಿನಲ್ಲಿ ₹24,435 ಕೋಟಿ ನೀಡಲಾಗಿತ್ತು. ಇದೀಗ ಪ್ರಸಕ್ತ ಸಾಲಿನಲ್ಲಿ ಈ ಮೊತ್ತವನ್ನು ₹25,172.28 ಕೋಟಿಗೆ ಏರಿಕೆ ಮಾಡಲಾಗಿದೆ.

ನಗರಾಭಿವೃದ್ಧಿ:

  1. ನಗರ ಯೋಜನೆ ಮತ್ತು ವಿನ್ಯಾಸದಲ್ಲಿ ನಿರ್ದಿಷ್ಟ ಜ್ಞಾನ ಅಭಿವೃದ್ಧಿಪಡಿಸಲು ಮತ್ತು ಈ ಕ್ಷೇತ್ರದಲ್ಲಿ ಉನ್ನತಮಟ್ಟದ ತರಬೇತಿ ನೀಡಲು ಸುಮಾರು ಐದು ಸಂಸ್ಥೆಗಳನ್ನು ದೇಶದ ವಿವಿಧ ಭಾಗಗಳಲ್ಲಿ ಸ್ಥಾಪಿಸಲಾಗುವುದು. ಈ ಕೇಂದ್ರಗಳಿಗೆ ತಲಾ ₹250 ಕೋಟಿ ದತ್ತಿ ನೀಡಲಾಗುವುದು.
  2. ದೇಶಕ್ಕೆ ಸ್ವಾತಂತ್ರ್ಯ ಬಂದು 100 ವರ್ಷ ತುಂಬುವಷ್ಟರಲ್ಲಿ ದೇಶದ ಅರ್ಧದಷ್ಟು ಜನಸಂಖ್ಯೆ ನಗರಗಳಲ್ಲಿ ವಾಸಿಸಲಿದ್ದಾರೆ. ಆ ದಿನಗಳಿಗಾಗಿ ನಗರಗಳನ್ನು ಅಣಿಗೊಳಿಸಬೇಕು. ಅದಕ್ಕಾಗಿ ಬೃಹತ್‌ ನಗರಗಳನ್ನು ಉತ್ತಮಪಡಿಸಬೇಕು. ಎರಡು ಮತ್ತು ಮೂರನೇ ಹಂತದ ನಗರಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ.
  3. ನಗರ ವಲಯ ನೀತಿಗಳು, ಕಟ್ಟಡಗಳ ಸಾಮರ್ಥ್ಯ, ನಗರಗಳ ಯೋಜನೆ ಮತ್ತು ಆಡಳಿತ ಕುರಿತು ಶಿಫಾರಸ್ಸುಗಳನ್ನು ನೀಡುವ ಸಲುವಾಗಿ ನಗರಗಳ ಯೋಜನೆ ಮಾಡವವರು, ಅರ್ಥಶಾಸ್ತ್ರಜ್ಞರು, ಸಂಸ್ಥೆಗಳನ್ನು ಒಳಗೊಂಡಿರುವ ಉನ್ನತ ಮಟ್ಟದ ಸಮಿತಿ ರಚನೆ.

ಕೌಶಲಾಭಿವೃದ್ಧಿಗೆ ಒತ್ತು:

ಕೌಶಲಾಭಿವೃದ್ಧಿ ಸುಸ್ಥಿರತೆ ಮತ್ತು ಉದ್ಯೋಗವನ್ನು ಹೆಚ್ಚಿಸಲು ಮರು ದೃಷ್ಟಿಕೋನದ ಮೂಲಕ ಉದ್ಯಮ ವಲಯದ ಪಾಲುದಾರಿಕೆ ಮತ್ತು ಕೌಶಲ ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗುವುದು. ಕ್ರಿಯಾತ್ಮಕ ಕೈಗಾರಿಕಾ ವಲಯದ ಅಗತ್ಯಗಳಿಗೆ ಹೊಂದಿಕೆಯಾಗುವಂತೆ ರಾಷ್ಟ್ರೀಯ ಕೌಶಲ ಅರ್ಹತಾ ಚೌಕಟ್ಟು (NSQF) ರೂಪಿಸಲಾಗುವುದು.

ಕೌಶಲ ಮತ್ತು ಜೀವನೋಪಾಯಕ್ಕಾಗಿ ಡಿಜಿಟಲ್ ಪರಿಸರ ವ್ಯವಸ್ಥೆಯನ್ನು (ದೇಶ ಸ್ಟಾಕ್ ಇ- ಪೋರ್ಟಲ್) ಪ್ರಾರಂಭಿಸಲಾಗುವುದು.

ವಿವಿಧ ಅಪ್ಲಿಕೇಶನ್ಗಳ ಮೂಲಕ ಮತ್ತು ಡ್ರೋನ್ ಆಸ್ಎ ಸರ್ವಿಸ್ ಗಾಗಿ ಡ್ರೋನ್ ಶಕ್ತಿಯ ಮೂಲಕ ನವೋದ್ಯಮ ಗಳನ್ನು ಉತ್ತೇಜಿಸಲಾಗುವುದು.

 

ವಿಷಯಗಳು: ಸಂರಕ್ಷಣೆ ಮತ್ತು ಜೀವವೈವಿಧ್ಯತೆಗೆ ಸಂಬಂಧಿತ ಸಮಸ್ಯೆಗಳು.

‘ಹರ್‌ ಘರ್‌ ನಲ್ ಸೇ ಜಲ್’ ಯೋಜನೆ:


ಸಂದರ್ಭ:

ಪ್ರತಿ ಮನೆಗಳಿಗೆ ಶುದ್ಧವಾದ ಕುಡಿಯುವ ನೀರು ಒದಗಿಸುವ ‘ಹರ್‌ ಘರ್‌ ನಲ್ ಸೇ ಜಲ್’ ಯೋಜನೆ ಅಡಿಯಲ್ಲಿ 2022–23ನೇ ಸಾಲಿನಲ್ಲಿ 3.8 ಕೋಟಿ ಕುಟುಂಬಗಳಿಗೆ ನಲ್ಲಿ ನೀರಿನ ಸಂಪರ್ಕ ಕಲ್ಪಿಸಲು ₹60ಸಾವಿರ ಕೋಟಿ ಮೀಸಲಿಡಲಾಗಿದೆ ಎಂದು ಹಣಕಾಸು ಸಚಿವರು ತಿಳಿಸಿದ್ದಾರೆ.

ಈ ಯೋಜನೆಯು ಪ್ರಸ್ತುತ 8.7 ಕೋಟಿ ಕುಟುಂಬಗಳ ವ್ಯಾಪ್ತಿಯನ್ನು ಹೊಂದಿದ್ದು, ಕಳೆದೆರಡು ವರ್ಷಗಳಲ್ಲಿ 5.5 ಕೋಟಿ ಕುಟುಂಬಗಳಿಗೆ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಲಾಗಿದೆ.

‘ಹರ್‌ ಘರ್‌ ನಲ್ ಸೇ ಜಲ್’ ಯೋಜನೆ:

ಯೋಜನೆಯ ಪ್ರಾರಂಭ: 2019 ರಲ್ಲಿ.

ನೋಡಲ್ ಏಜೆನ್ಸಿ: ಜಲ ಶಕ್ತಿ ಸಚಿವಾಲಯ

ಉದ್ದೇಶ: 2024 ರ ವೇಳೆಗೆ ಪ್ರತಿ ಗ್ರಾಮೀಣ ಮನೆಗಳಿಗೆ ಪೈಪ್ ಮೂಲಕ ಕುಡಿಯುವ ನೀರು ಒದಗಿಸುವುದು.

ಇದು ಸರ್ಕಾರದ ಪ್ರಮುಖ ಕಾರ್ಯಕ್ರಮ ಜಲ್ ಜೀವನ್ ಮಿಷನ್’ ನ ಒಂದು ಅಂಶವಾಗಿದೆ.

ಅನುಷ್ಠಾನ:

  1. ಯೋಜನೆಯು ವಿಶಿಷ್ಟ ಮಾದರಿಯನ್ನು ಆಧರಿಸಿದೆ. ಇದರಲ್ಲಿ ಗ್ರಾಮಸ್ಥರನ್ನು ಒಳಗೊಂಡ ಜಲ ಸಮಿತಿ’ (water committee) ಗಳನ್ನು ರಚಿಸಲಾಗುವುದು ಮತ್ತು ಈ ಸಮಿತಿಗಳು ಗ್ರಾಮಸ್ಥರು ತಾವು ಉಪಭೋಗಿಸುವ ನೀರಿಗೆ ಏನು ಪಾವತಿಸಬೇಕೆಂದು ನಿರ್ಧರಿಸುತ್ತವೆ.
  2. ನೀರಿನ ಸಮಿತಿಗಳು ನಿಗದಿಪಡಿಸಿದ ಶುಲ್ಕವು ಗ್ರಾಮದ ಎಲ್ಲಾ ನಿವಾಸಿಗಳಿಗೆ ಏಕರೂಪವಾಗಿರುವುದಿಲ್ಲ.ದೊಡ್ಡ ಕುಟುಂಬಗಳನ್ನು ಹೊಂದಿರುವವರು ಹೆಚ್ಚು ಪಾವತಿಸುತ್ತಾರೆ, ಆದರೆ ಬಡ ಕುಟುಂಬಗಳು ಅಥವಾ ಯಾವುದೇ ಸಂಪಾದನೆ ಮಾಡುವ ಸದಸ್ಯರಿಲ್ಲದ ಕುಟುಂಬಗಳಿಗೆ ಈ ಶುಲ್ಕದಿಂದ ವಿನಾಯಿತಿ ನೀಡಲಾಗುತ್ತದೆ.

ಅವಶ್ಯಕತೆ:

  1. 2018 ರಲ್ಲಿ ಬಿಡುಗಡೆಯಾದ NITI ಆಯೋಗದ ವರದಿಯ ಪ್ರಕಾರ, 600 ಮಿಲಿಯನ್ ಭಾರತೀಯರು ತೀವ್ರ ನೀರಿನ ಕೊರತೆಯನ್ನು ಎದುರಿಸುತ್ತಿದ್ದಾರೆ ಮತ್ತು ಸುರಕ್ಷಿತ ನೀರಿನ ಅಸಮರ್ಪಕ ಪೂರೈಕೆಯು ಪ್ರತಿ ವರ್ಷ ಸುಮಾರು ಎರಡು ಲಕ್ಷ ಸಾವುಗಳಿಗೆ ಕಾರಣವಾಗುತ್ತದೆ.
  2. 2030 ರ ವೇಳೆಗೆ, ದೇಶದ ನೀರಿನ ಬೇಡಿಕೆಯು ಲಭ್ಯವಿರುವ ಪೂರೈಕೆಗಿಂತ ದ್ವಿಗುಣಗೊಳ್ಳುವ ನಿರೀಕ್ಷೆಯಿದೆ, ಇದರರ್ಥ ಕೋಟ್ಯಂತರ ಜನರು ತೀವ್ರ ನೀರಿನ ಕೊರತೆಯನ್ನು ಎದುರಿಸುತ್ತಾರೆ ಎಂಬುದಾಗಿದೆ ಮತ್ತು ದೇಶದ ಜಿಡಿಪಿಗೆ ಸುಮಾರು 6% ರಷ್ಟು ನಷ್ಟಕ್ಕೆ ಕಾರಣವಾಗುತ್ತದೆ.
  3. 84% ಗ್ರಾಮೀಣ ಕುಟುಂಬಗಳಿಗೆ ಪೈಪ್‌ಲೈನ್‌ ಮೂಲಕ ನೀರು ಲಭ್ಯವಿಲ್ಲ ಮತ್ತು ದೇಶದ 70% ಕ್ಕಿಂತ ಹೆಚ್ಚು ನೀರು ಕಲುಷಿತವಾಗಿದೆ ಎಂದು ಅಧ್ಯಯನಗಳು ತೋರಿಸುತ್ತವೆ.

ಜಲ ಜೀವನ್ ಮಿಷನ್ ಬಗ್ಗೆ:

2024 ರ ವೇಳೆಗೆ ಪ್ರತಿ ಗ್ರಾಮೀಣ ಕುಟುಂಬದ ಪ್ರತಿ ವ್ಯಕ್ತಿಗೆ ದಿನಕ್ಕೆ 55 ಲೀಟರ್ ನೀರನ್ನು ಮನೆಗಳಿಗೆ ಕ್ರಿಯಾತ್ಮಕ ನಲ್ಲಿ ಸಂಪರ್ಕದ (Functional Household Tap Connections -FHTC) ಮೂಲಕ ಪೂರೈಸಲು JJM ಉದ್ದೇಶಿಸಿದೆ.

  1. ಇದು ಜಲಶಕ್ತಿ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ.
  2. ಯೋಜನೆಯನ್ನು 2019 ರಲ್ಲಿ ಆರಂಭಿಸಲಾಯಿತು.

ಇದು ಒಳಗೊಂಡಿರುವುದು:

  1. ಗುಣಮಟ್ಟದ ಕೊರತೆ ಇರುವ ಪ್ರದೇಶಗಳಲ್ಲಿ, ಬರ ಪೀಡಿತ ಮತ್ತು ಮರುಭೂಮಿ ಪ್ರದೇಶಗಳಲ್ಲಿನ ಗ್ರಾಮಗಳು, ಸಂಸದ ಆದರ್ಶ ಗ್ರಾಮ ಯೋಜನೆ (SAGY) ಅಡಿಯಲ್ಲಿರುವ ಗ್ರಾಮಗಳು, ಇತ್ಯಾದಿಗಳಲ್ಲಿ ಮನೆಗಳಿಗೆ ಕ್ರಿಯಾತ್ಮಕ ನಲ್ಲಿ ಸಂಪರ್ಕದ (FHTCs) ಜೋಡಣೆಗೆ ಆದ್ಯತೆ ನೀಡುವುದು.
  2. ಶಾಲೆಗಳು, ಅಂಗನವಾಡಿ ಕೇಂದ್ರಗಳು, ಗ್ರಾಮ ಪಂಚಾಯಿತಿ ಕಟ್ಟಡಗಳು, ಆರೋಗ್ಯ ಕೇಂದ್ರಗಳು, ಕಲ್ಯಾಣ ಕೇಂದ್ರಗಳು ಮತ್ತು ಸಮುದಾಯ ಕಟ್ಟಡಗಳಿಗೆ ಕ್ರಿಯಾತ್ಮಕ ಟ್ಯಾಪ್ / ನಲ್ಲಿ ಸಂಪರ್ಕವನ್ನು ಒದಗಿಸುವುದು.
  3. ನೀರಿನ-ಗುಣಮಟ್ಟದ ಸಮಸ್ಯೆಗೆ ಕಾರಣವಾದ ಮಾಲಿನ್ಯಕಾರಕಗಳನ್ನು ತೆಗೆದುಹಾಕಲು ತಂತ್ರಜ್ಞಾನದ ಉಪಯೋಗ ಮಾಡುವುದು.

ಅನುಷ್ಠಾನ:

  1. ‘ಜಲ ಜೀವನ್ ಮಿಷನ್’ ನೀರಿನ ಸಮುದಾಯ ವಿಧಾನವನ್ನು ಆಧರಿಸಿದೆ ಮತ್ತು ವ್ಯಾಪಕವಾದ ಮಾಹಿತಿ, ಶಿಕ್ಷಣ ಮತ್ತು ಸಂವಹನವನ್ನು ಮಿಷನ್‌ನ ಪ್ರಮುಖ ಅಂಶವಾಗಿ ಒಳಗೊಂಡಿದೆ.
  2. ನೀರಿಗಾಗಿ ಜನಾಂದೋಲನವನ್ನು ರೂಪಿಸುವುದು ಈ ಕಾರ್ಯಾಚರಣೆಯ ಉದ್ದೇಶವಾಗಿದೆ, ಅದರ ಮೂಲಕ ಅದು ಎಲ್ಲರ ಆದ್ಯತೆಯಾಗುವಂತೆ ಮಾಡುವುದಾಗಿದೆ.
  3. ಈ ಜಲಜೀವನ್ ಮಿಷನ್ ಗಾಗಿ, ಕೇಂದ್ರ ರಾಜ್ಯಗಳ ನಡುವೆ ಅನುದಾನದ ಹಂಚಿಕೆಯ ಅನುಪಾತವು ಹಿಮಾಲಯನ್ ಮತ್ತು ಈಶಾನ್ಯ ರಾಜ್ಯಗಳಿಗೆ 90:10 ಇದ್ದರೆ, ಇತರ ರಾಜ್ಯಗಳಿಗೆ 50:50 ಅನುಪಾತದಲ್ಲಿದೆ; ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರವು 100% ಆರ್ಥಿಕ ನೆರವು ನೀಡಲಿದೆ.

ಯೋಜನೆಯ ಕಾರ್ಯಕ್ಷಮತೆ:

ಇಲ್ಲಿಯವರೆಗೆ, 772,000 (ಶೇ. 76) ಶಾಲೆಗಳು ಮತ್ತು 748,000 (ಶೇ. 67.5) ಅಂಗನವಾಡಿ ಕೇಂದ್ರಗಳಲ್ಲಿ ‘ಟ್ಯಾಪ್ ವಾಟರ್ ಪೂರೈಕೆಯನ್ನು’ ಖಾತ್ರಿಪಡಿಸಲಾಗಿದೆ.

 

ವಿಷಯಗಳು: ಸಂರಕ್ಷಣೆ, ಪರಿಸರ ಮಾಲಿನ್ಯ ಮತ್ತು ಅವನತಿ, ಪರಿಸರ ಪ್ರಭಾವದ ಮೌಲ್ಯಮಾಪನ.

ಕೇಂದ್ರ ಬಜೆಟ್‌ನಲ್ಲಿ ಐದು ನದಿ ಜೋಡಣೆ ಯೋಜನೆಗಳ ಘೋಷಣೆ:


(Five river linking projects announced in Union Budget)

ಸಂದರ್ಭ:

ಕರ್ನಾಟಕದ ಕಾವೇರಿ ಮತ್ತು ಆಂಧ್ರದ ಪೆನ್ನಾರ್‌ ನದಿಗಳ ಜೋಡಣೆ ಸೇರಿದಂತೆ ವಿವಿಧ ನದಿಗಳನ್ನು ಸಂಪರ್ಕಿಸುವ ಮಹತ್ವದ ಐದು ನದಿ ಜೋಡಣಾ ಯೋಜನೆಯನ್ನು ಕೇಂದ್ರ ಸರ್ಕಾರ ಪ್ರಕಟಿಸಿದೆ.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಒಮ್ಮೆ ಫಲಾನುಭವಿ ರಾಜ್ಯಗಳ ನಡುವೆ ಸಹಮತ ಏರ್ಪಡುತ್ತಿದ್ದಂತೆ ಕಾರ್ಯಗತಗೊಳಿಸಲಾಗುವುದು ಎಂದಿದ್ದಾರೆ.

ನದಿ ಜೋಡಣೆಗೆ ಗುರುತಿಸಲಾದ ನದಿಗಳು:

ದಾಮನಗಂಗಾ–ಪಿಂಜಲ್‌, ಪರ್‌–ತಪಿ–ನರ್ಮದಾ, ಗೋದಾವರಿ–ಕೃಷ್ಣಾ, ಕೃಷ್ಣಾ–ಪೆನ್ನಾರ್‌, ಪೆನ್ನಾರ್‌–ಕಾವೇರಿ ನದಿಗಳ ಜೋಡಣೆ ಸಂಬಂಧ ಸಮಗ್ರ ಯೋಜನಾ ವರದಿ ಸಜ್ಜಾಗಿದೆ.

ಈ ನದಿಗಳ ಸಂಕ್ಷಿಪ್ತ ಅವಲೋಕನ:

  1. ಕೃಷ್ಣಾ ನದಿ ಭಾರತದ ನಾಲ್ಕನೇ ದೊಡ್ಡ ನದಿಯಾಗಿದೆ. ಇದು ಮಹಾರಾಷ್ಟ್ರದ ಮಹಾಬಲೇಶ್ವರದಲ್ಲಿ ಹುಟ್ಟಿ ಮಹಾರಾಷ್ಟ್ರ, ಕರ್ನಾಟಕ, ತೆಲಂಗಾಣ ಮತ್ತು ಆಂಧ್ರಪ್ರದೇಶದ ಮೂಲಕ ಹರಿಯುತ್ತದೆ.
  2. ಕಾವೇರಿ ನದಿಯು ‘ಕೊಡಗಿನ ಬ್ರಹ್ಮಗಿರಿ ಬೆಟ್ಟದಲ್ಲಿ’ ಹುಟ್ಟಿ ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಹರಿಯುತ್ತದೆ.
  3. ಪೆನ್ನಾರ್ ನದಿಯು ‘ಚಿಕ್ಕಬಳ್ಳಾಪುರ’ದಲ್ಲಿ ಹುಟ್ಟಿ ಕರ್ನಾಟಕ, ತಮಿಳುನಾಡು ಮತ್ತು ಆಂಧ್ರಪ್ರದೇಶಗಳಲ್ಲಿ ಹರಿಯುತ್ತದೆ.
  4. ಗೋದಾವರಿ ನದಿಯು ಭಾರತದ ಮೂರನೇ ಅತಿದೊಡ್ಡ ನದಿಯಾಗಿದೆ. ಇದು ನಾಸಿಕ್‌ನಲ್ಲಿ ಹುಟ್ಟಿ ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ, ಛತ್ತೀಸ್‌ಗಢ ಮತ್ತು ಒರಿಸ್ಸಾ ಮೂಲಕ ಹರಿಯುತ್ತದೆ.
  5. ದಮನಗಂಗಾ-ಪಿಂಜಾಲ್ ನದಿ ಜೋಡಣೆ (Damanganga-Pinjal river linking) ಯೋಜನೆಯು ಮುಂಬೈ ನಗರಕ್ಕೆ ದೇಶೀಯ ನೀರನ್ನು ಒದಗಿಸಲು ದಮನಗಂಗಾ ಜಲಾನಯನ ಪ್ರದೇಶದಿಂದ ನಗರಕ್ಕೆ ಹೆಚ್ಚುವರಿ ನೀರನ್ನು ತಿರುಗಿಸುವ ಗುರಿಯನ್ನು ಹೊಂದಿದೆ.
  6. ಪರ್-ತಾಪಿ-ನರ್ಮದಾ ಯೋಜನೆ’ (Par-Tapi-Narmada project) ಅಡಿಯಲ್ಲಿ, ಉತ್ತರ ಮಹಾರಾಷ್ಟ್ರ ಮತ್ತು ದಕ್ಷಿಣ ಗುಜರಾತ್‌ನ ಪಶ್ಚಿಮ ಘಟ್ಟಗಳ ಪ್ರದೇಶದಲ್ಲಿರುವ ಏಳು ಜಲಾಶಯಗಳಿಂದ ಹೆಚ್ಚುವರಿ ನೀರನ್ನು ಕಚ್ ಮತ್ತು ಸೌರಾಷ್ಟ್ರದ ಬರಪೀಡಿತ ಪ್ರದೇಶಗಳಿಗೆ ತಿರುಗಿಸಲು ಉದ್ದೇಶಿಸಲಾಗಿದೆ.

ಇಂಟರ್ಲಿಂಕಿಂಗ್ ನ ಪ್ರಯೋಜನಗಳು:

  1. ನೀರು ಮತ್ತು ಆಹಾರ ಭದ್ರತೆಯಲ್ಲಿ ಹೆಚ್ಚಳ
  2. ನೀರಿನ ಸರಿಯಾದ ಬಳಕೆ.
  3. ಕೃಷಿಯನ್ನು ಉತ್ತೇಜಿಸಬಹುದು
  4. ವಿಪತ್ತು ತಗ್ಗಿಸುವಿಕೆ
  5. ಸಾರಿಗೆಗೆ ಉತ್ತೇಜನ.

ಸಮಸ್ಯೆಗಳು ಮತ್ತು ಕಾಳಜಿಗಳು:

  1. ನದಿಗಳ ಜೋಡಣೆಯು ಅತ್ಯಂತ ದುಬಾರಿ ಪ್ರಸ್ತಾವನೆಯಾಗಿದೆ. ಇದು ಭೂಮಿ, ಅರಣ್ಯ, ಜೀವವೈವಿಧ್ಯ, ನದಿಗಳು ಮತ್ತು ಲಕ್ಷಾಂತರ ಜನರ ಜೀವನೋಪಾಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ.
  2. ನದಿಗಳ ಜೋಡಣೆಯು ಕಾಡುಗಳು, ಜೌಗು ಪ್ರದೇಶಗಳು ಮತ್ತು ಸ್ಥಳೀಯ ಜಲಮೂಲಗಳ ನಾಶಕ್ಕೆ ಕಾರಣವಾಗುತ್ತದೆ. ಆರ್ದ್ರಭೂಮಿಗಳು / ತರಿಭೂಮಿಗಳು ಅಂತರ್ಜಲ ಮರುಪೂರಣದ ಪ್ರಮುಖ ಮೂಲಗಳಾಗಿವೆ.
  3. ಇಂತಹ ಯೋಜನೆಗಳು ಜನರ ಸಾಮೂಹಿಕ ಸ್ಥಳಾಂತರಕ್ಕೆ ಕಾರಣವಾಗುತ್ತವೆ. ಇದರಿಂದ ನಿರಾಶ್ರಿತರ ಪುನರ್ವಸತಿ ಸಮಸ್ಯೆಯನ್ನು ನಿಭಾಯಿಸಲು ಸರ್ಕಾರದ ಮೇಲೆ ಹೆಚ್ಚಿನ ಹೊರೆ ಬೀಳುತ್ತದೆ.
  4. ನದಿಗಳ ಜೋಡಣೆಯು ಸಮುದ್ರಕ್ಕೆ ಹೋಗಿ ಸೇರುವ ಸಿಹಿ ನೀರಿನ ಪ್ರಮಾಣವನ್ನು ಕಡಿಮೆ ಮಾಡುತ್ತದೆ ಮತ್ತು ಇದು ಸಮುದ್ರ ಜೀವಿಗಳಿಗೆ ಗಂಭೀರ ಅಪಾಯವನ್ನುಂಟುಮಾಡುತ್ತದೆ.

 

ವಿಷಯಗಳು: ಆರ್ಥಿಕತೆಯ ಮೇಲೆ ಉದಾರೀಕರಣದ ಪರಿಣಾಮ, ಕೈಗಾರಿಕಾ ನೀತಿಯಲ್ಲಿನ ಬದಲಾವಣೆಗಳು ಮತ್ತು ಕೈಗಾರಿಕಾ ಅಭಿವೃದ್ಧಿಯ ಮೇಲೆ ಅವುಗಳ ಪ್ರಭಾವ.

ಅಂತರರಾಷ್ಟ್ರೀಯ ಮಧ್ಯಸ್ಥಿಕೆ ಕೇಂದ್ರ:


(International arbitration centre)

ಸಂದರ್ಭ:

‘ವಿವಾದ ಪರಿಹಾರ’ವನ್ನು ತ್ವರಿತಗೊಳಿಸಲು, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್ ಭಾಷಣದಲ್ಲಿ ಗುಜರಾತ್‌ನಗುಜರಾತ್ ಇಂಟರ್ನ್ಯಾಷನಲ್ ಫೈನಾನ್ಸ್ ಟೆಕ್-ಸಿಟಿ’ (Gujarat International Finance Tec-City: GIFT City), ಯಲ್ಲಿ ‘ಅಂತರರಾಷ್ಟ್ರೀಯ ಮಧ್ಯಸ್ಥಿಕೆ ಕೇಂದ್ರ’ವನ್ನು ಸ್ಥಾಪಿಸುವುದಾಗಿ ಘೋಷಿಸಿದ್ದಾರೆ.

ಈ ಕೇಂದ್ರವನ್ನು ಸಿಂಗಪುರ ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ಕೇಂದ್ರ’ ಅಥವಾ ‘ಲಂಡನ್ ವಾಣಿಜ್ಯ ಮಧ್ಯಸ್ಥಿಕೆ ಕೇಂದ್ರ’ ಮಾದರಿಯಲ್ಲಿ ಸ್ಥಾಪಿಸಲಾಗುವುದು.

ಅಂತರಾಷ್ಟ್ರೀಯ ಹಣಕಾಸು ಸೇವಾ ಕೇಂದ್ರ (IFSC) ಕುರಿತು:

ಅಂತರಾಷ್ಟ್ರೀಯ ಹಣಕಾಸು ಸೇವಾ ಕೇಂದ್ರಗಳು (International Financial Services Centres – IFSC) ದೇಶೀಯ ಆರ್ಥಿಕತೆಯ ವ್ಯಾಪ್ತಿಯ ಹೊರಗಿನ ಗ್ರಾಹಕರ ಹಣಕಾಸಿನ ಅಗತ್ಯಗಳನ್ನು ಪೂರೈಸುತ್ತವೆ.

  1. IFSC ಗಡಿಯಾಚೆಗಿನ ಹಣಕಾಸು ಹರಿವುಗಳು, ಹಣಕಾಸು ಉತ್ಪನ್ನಗಳು ಮತ್ತು ಸೇವೆಗಳೊಂದಿಗೆ ವ್ಯವಹರಿಸುತ್ತದೆ.
  2. ಲಂಡನ್, ನ್ಯೂಯಾರ್ಕ್ ಮತ್ತು ಸಿಂಗಾಪುರಗಳನ್ನು ಜಾಗತಿಕ ಹಣಕಾಸು ಕೇಂದ್ರಗಳೆಂದು ಪರಿಗಣಿಸಬಹುದು.
  3. ಪ್ರಸ್ತುತ GIFT – IFSCA ಭಾರತದಲ್ಲಿನ ಮೊದಲ ಅಂತಾರಾಷ್ಟ್ರೀಯ ಹಣಕಾಸು ಸೇವೆಗಳ ಕೇಂದ್ರವಾಗಿದೆ.

ನಿಯಂತ್ರಣ: (IFSCA ಕುರಿತು)

ಅಂತರಾಷ್ಟ್ರೀಯ ಹಣಕಾಸು ಸೇವೆಗಳ ಕೇಂದ್ರ ಪ್ರಾಧಿಕಾರವು (International Financial Services Centres Authority -IFSCA) ಗುಜರಾತಿನ ಗಾಂಧಿನಗರದ GIFT-ಸಿಟಿಯಲ್ಲಿ ಪ್ರಧಾನ ಕಛೇರಿಯನ್ನು ಹೊಂದಿದೆ.

  1. ಇದನ್ನು ‘ಅಂತರರಾಷ್ಟ್ರೀಯ ಹಣಕಾಸು ಸೇವಾ ಕೇಂದ್ರ ಪ್ರಾಧಿಕಾರ ಕಾಯಿದೆ’, 2019 ರ ಅಡಿಯಲ್ಲಿ ಸ್ಥಾಪಿಸಲಾಗಿದೆ.
  2. ಈ ಸಂಸ್ಥೆಯು ಭಾರತದಲ್ಲಿನ ಅಂತರಾಷ್ಟ್ರೀಯ ಹಣಕಾಸು ಸೇವಾ ಕೇಂದ್ರದಲ್ಲಿ ಹಣಕಾಸು ಉತ್ಪನ್ನಗಳು, ಹಣಕಾಸು ಸೇವೆಗಳು ಮತ್ತು ಹಣಕಾಸು ಸಂಸ್ಥೆಗಳ ನಿಯಂತ್ರಣ ಮತ್ತು ಅಭಿವೃದ್ಧಿಗಾಗಿ ಏಕೀಕೃತ ಪ್ರಾಧಿಕಾರವಾಗಿ ಕಾರ್ಯನಿರ್ವಹಿಸುತ್ತದೆ.

IFSC ಒದಗಿಸುವ ಸೇವೆಗಳು:

  1. ವ್ಯಕ್ತಿಗಳು, ನಿಗಮಗಳು ಮತ್ತು ಸರ್ಕಾರಗಳಿಗೆ ನಿಧಿ ಸಂಗ್ರಹಿಸುವ ಸೇವೆಗಳು.
  2. ಪಿಂಚಣಿ ನಿಧಿಗಳು, ವಿಮಾ ಕಂಪನಿಗಳು ಮತ್ತು ಮ್ಯೂಚುವಲ್ ಫಂಡ್‌ಗಳಿಂದ ಆಸ್ತಿ ನಿರ್ವಹಣೆ (Asset management) ಮತ್ತು ಜಾಗತಿಕ ಪೋರ್ಟ್‌ಫೋಲಿಯೊ ವೈವಿಧ್ಯೀಕರಣವನ್ನು (Global Portfolio Diversification) ಕೈಗೊಳ್ಳಲಾಗುತ್ತದೆ.
  3. ಆರ್ಥಿಕ ನಿರ್ವಹಣೆ (Wealth management).
  4. ಜಾಗತಿಕ ತೆರಿಗೆ ನಿರ್ವಹಣೆ ಮತ್ತು ಕ್ರಾಸ್-ಬಾರ್ಡರ್ ತೆರಿಗೆ ಹೊಣೆಗಾರಿಕೆ ಆಪ್ಟಿಮೈಸೇಶನ್ (Cross-Border Tax Liability Optimization), ಇದು ಹಣಕಾಸಿನ ಮಧ್ಯವರ್ತಿಗಳು, ಲೆಕ್ಕಪರಿಶೋಧಕರು ಮತ್ತು ಕಾನೂನು ಸಂಸ್ಥೆಗಳಿಗೆ ವ್ಯಾಪಾರ ಅವಕಾಶವನ್ನು ಒದಗಿಸುತ್ತದೆ.
  5. ಜಾಗತಿಕ ಮತ್ತು ಪ್ರಾದೇಶಿಕ ಕಾರ್ಪೊರೇಟ್ ಖಜಾನೆ ನಿರ್ವಹಣಾ ಕಾರ್ಯಾಚರಣೆಗಳು, ನಿಧಿ ಸಂಗ್ರಹಣೆ, ದ್ರವ್ಯತೆ ಹೂಡಿಕೆ ಮತ್ತು ನಿರ್ವಹಣೆ, ಮತ್ತು ಆಸ್ತಿ-ಬಾಧ್ಯತೆಯ ಹೊಂದಾಣಿಕೆಯನ್ನು ಒಳಗೊಂಡಿರುತ್ತದೆ.
  6. ವಿಮೆ ಮತ್ತು ಮರುವಿಮೆಯಂತಹ ಅಪಾಯ ನಿರ್ವಹಣೆ ಕಾರ್ಯಾಚರಣೆಗಳು.
  7. ಅಂತರಾಷ್ಟ್ರೀಯ ಸಂಸ್ಥೆಗಳ ನಡುವೆ ವಿಲೀನ ಮತ್ತು ಸ್ವಾಧೀನ ಚಟುವಟಿಕೆಗಳು.

IFSC ಅನ್ನು ‘ವಿಶೇಷ ಆರ್ಥಿಕ ವಲಯ’ (SEZ) ನಲ್ಲಿ ಸ್ಥಾಪಿಸಬಹುದೇ?

  1. SEZ ಕಾಯಿದೆ, 2005 ರಲ್ಲಿ ಕೇಂದ್ರ ಸರ್ಕಾರದ ಅನುಮೋದನೆಯ ನಂತರ ‘ವಿಶೇಷ ಆರ್ಥಿಕ ವಲಯ’ (Special Economic Zone- SEZ) ದಲ್ಲಿ ಅಥವಾ SEZ ರೂಪದಲ್ಲಿ ಅಂತರಾಷ್ಟ್ರೀಯ ಹಣಕಾಸು ಸೇವಾ ಕೇಂದ್ರವನ್ನು (IFSC) ಸ್ಥಾಪಿಸಲು ಅನುಮತಿ ನೀಡಲಾಗಿದೆ.

ಭಾರತದಲ್ಲಿ ಅಂತರಾಷ್ಟ್ರೀಯ ಹಣಕಾಸು ಸೇವಾ ಕೇಂದ್ರಗಳು:

ಭಾರತದಲ್ಲಿ ಮೊದಲ ಅಂತರಾಷ್ಟ್ರೀಯ ಹಣಕಾಸು ಸೇವಾ ಕೇಂದ್ರವನ್ನು (IFSC) ಗಾಂಧಿನಗರದಲ್ಲಿರುವ ಗುಜರಾತ್ ಇಂಟರ್ನ್ಯಾಷನಲ್ ಫೈನಾನ್ಸ್ ಟೆಕ್-ಸಿಟಿ  (Gujarat International Finance Tec-City) GIFT ಸಿಟಿಯಲ್ಲಿ ಸ್ಥಾಪಿಸಲಾಗಿದೆ.

ಸಿಂಗಾಪುರ ಅಂತರಾಷ್ಟ್ರೀಯ ಮಧ್ಯಸ್ಥಿಕೆ ಕೇಂದ್ರದ (SIAC) ಬಗ್ಗೆ:

ಇದು ಸಿಂಗಾಪುರ ಮೂಲದ ಲಾಭರಹಿತ ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ಸಂಸ್ಥೆಯಾಗಿದೆ, ಇದು ತನ್ನದೇ ಆದ ಮಧ್ಯಸ್ಥಿಕೆ ನಿಯಮಗಳ ಅಡಿಯಲ್ಲಿ ಮತ್ತು ವಿಶ್ವಸಂಸ್ಥೆಯ ಅಂತರರಾಷ್ಟ್ರೀಯ ವ್ಯಾಪಾರ ಕಾನೂನು (UNCITRAL) ಮಧ್ಯಸ್ಥಿಕೆ ಆಯೋಗದ ನಿಯಮಗಳ ಅಡಿಯಲ್ಲಿ ಮಧ್ಯಸ್ಥಿಕೆಗಳನ್ನು ನಿರ್ವಹಿಸುತ್ತದೆ.

 

ವಿಷಯಗಳುವಿಜ್ಞಾನ ಮತ್ತು ತಂತ್ರಜ್ಞಾನ- ಬೆಳವಣಿಗೆಗಳು ಮತ್ತು ಅವುಗಳ ಅನ್ವಯಗಳು ಮತ್ತು ದೈನಂದಿನ ಜೀವನದಲ್ಲಿ ಅವುಗಳ ಪರಿಣಾಮಗಳು ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಭಾರತೀಯರ ಸಾಧನೆಗಳು; ತಂತ್ರಜ್ಞಾನದ ದೇಶೀಕರಣ ಮತ್ತು ಹೊಸ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವುದು.

ಬಜೆಟ್‌ನಲ್ಲಿ ಸೀತಾರಾಮನ್ ಘೋಷಿಸಿದ  ಡಿಜಿಟಲ್ ರೂಪಾಯಿ ಎಂದರೇನು?


(What is the Digital Rupee announced by Sitharaman in Budget?)

ಸಂದರ್ಭ:

ಕೇಂದ್ರೀಯ ಬ್ಯಾಂಕ್ ಡಿಜಿಟಲ್ ಕರೆನ್ಸಿ (CBDC) ‘ಡಿಜಿಟಲ್ ರೂಪಾಯಿ’ ಬಿಡುಗಡೆಯನ್ನು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರು 2022-23 ರ ಬಜೆಟ್ ಭಾಷಣದಲ್ಲಿ ಘೋಷಿಸಿದ್ದಾರೆ.

ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) 2022ರ ಏಪ್ರಿಲ್‌ನಿಂದ ‘ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ’ (Central Bank Digital Currency – CBDC) ಯನ್ನು ಹೊರತರಲಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

  1. ಕೇಂದ್ರೀಯ ಬ್ಯಾಂಕ್‌ನ ಡಿಜಿಟಲ್‌ ಕರೆನ್ಸಿಯನ್ನು (ಸಿಬಿಡಿಸಿ) ಪರಿಚಯಿಸುವುದರಿಂದ ಡಿಜಿಟಲ್‌ ಆರ್ಥಿಕತೆಗೆ ದೊಡ್ಡ ಉತ್ತೇಜನ ಸಿಗಲಿದೆ. ಡಿಜಿಟಲ್‌ ಕರೆನ್ಸಿಯಿಂದಾಗಿ ಕರೆನ್ಸಿ ನಿರ್ವಹಣಾ ವ್ಯವಸ್ಥೆಯಲ್ಲಿ ದಕ್ಷತೆಯೂ ಬರಲಿದೆ ಎಂದು ನಿರ್ಮಲಾ ಸೀತಾರಾಮನ್‌ ತಿಳಿಸಿದ್ದಾರೆ.

CBDC ಅಥವಾ ‘ರಾಷ್ಟ್ರೀಯ ಡಿಜಿಟಲ್ ಕರೆನ್ಸಿ’ ಎಂದರೇನು?

ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ (CBDC), ಅಥವಾ ರಾಷ್ಟ್ರೀಯ ಡಿಜಿಟಲ್ ಕರೆನ್ಸಿ, ಒಂದು ದೇಶದ ಫಿಯಟ್ ಕರೆನ್ಸಿಯ ಡಿಜಿಟಲ್ ರೂಪವಾಗಿದೆ.ಇದಕ್ಕಾಗಿ, ಕಾಗದದ ಕರೆನ್ಸಿ ಅಥವಾ ನಾಣ್ಯಗಳನ್ನು ಟಂಕಿಸುವ ಬದಲು, ಕೇಂದ್ರೀಯ ಬ್ಯಾಂಕ್ ಎಲೆಕ್ಟ್ರಾನಿಕ್ ಟೋಕನ್ಗಳನ್ನು ನೀಡುತ್ತದೆ. ಈ ಟೋಕನ್ ಮೌಲ್ಯವು ಸರ್ಕಾರದ ಸಂಪೂರ್ಣ ನಂಬಿಕೆ ಮತ್ತು ವಿಶ್ವಾಸಾರ್ಹತೆಯನ್ನು ಹೊಂದಿರುತ್ತದೆ.

ಹಣಕಾಸು ಸಲಹಾ ಸೇವೆಗಳ ಸಂಸ್ಥೆಯು ಭಾರತೀಯ ಸಂದರ್ಭದಲ್ಲಿ CBDC ಯ ನಾಲ್ಕು ಪ್ರಮುಖ ಉಪಯೋಗಗಳನ್ನು ಪಟ್ಟಿ ಮಾಡಿದೆ. ಅವುಗಳೆಂದರೆ;

  1. ಒಂದು ದೇಶದಲ್ಲಿ ‘ಫಿಟ್-ಫಾರ್-ಪರ್ಪಸ್’ (‘Fit-for-Purpose’ Money) ಹಣವನ್ನು ಸಾಮಾಜಿಕ ಪ್ರಯೋಜನಗಳು ಮತ್ತು ಇತರ ಉದ್ದೇಶಿತ ಪಾವತಿಗಳಿಗೆ ಬಳಸಲಾಗುವುದು. ಅಂತಹ ಸಂದರ್ಭಗಳಲ್ಲಿ, ಪೂರ್ವ-ಪ್ರೋಗ್ರಾಮ್ ಮಾಡಲಾದ ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿ (CBDC) ಪಾವತಿಯನ್ನು ಕೇಂದ್ರೀಯ ಬ್ಯಾಂಕ್‌ನಿಂದ ಉದ್ದೇಶಿತ ಫಲಾನುಭವಿಗಳಿಗೆ ನೀಡಬಹುದು, ಇದು ನಿರ್ದಿಷ್ಟ ಉದ್ದೇಶಕ್ಕಾಗಿ ಮಾತ್ರ ಮಾನ್ಯವಾಗಿರುತ್ತದೆ.
  2. ವಿದೇಶದಿಂದ ದೇಶಕ್ಕೆ ತ್ವರಿತ ರವಾನೆಗಾಗಿ ಹಣ ಪಾವತಿಗಳು CBDC ಅನ್ನು ಬಳಸಬಹುದು. ಭಾರತ ಸೇರಿದಂತೆ ವಿಶ್ವದ ಪ್ರಮುಖ ಆರ್ಥಿಕತೆಗಳಲ್ಲಿ ಅಂತಾರಾಷ್ಟ್ರೀಯ ಸಹಕಾರದ ಮೂಲಕ ‘ಸಿಬಿಡಿಸಿ’ಗಳ ವರ್ಗಾವಣೆ ಮತ್ತು ಪರಿವರ್ತನೆಗೆ ಅಗತ್ಯ ಮೂಲಸೌಕರ್ಯ ಮತ್ತು ಕಾರ್ಯವಿಧಾನಗಳನ್ನು ರಚಿಸಬಹುದು.
  3. ‘ಸಿಬಿಡಿಸಿ’ಗಳ ಮೂಲಕ ಪಾವತಿ ವಹಿವಾಟುಗಳಿಗೆ’ ಪಾವತಿ ಸಲಕರಣೆಗಳನ್ನು ‘ಒದಗಿಸಬಹುದು. ಇದರ ಜೊತೆಯಲ್ಲಿ, CBDC ಗಳಿಗೆ ಸಾರ್ವತ್ರಿಕ ಪ್ರವೇಶವನ್ನು ಹೊಂದಲು, ‘ಆಫ್‌ಲೈನ್ ಪಾವತಿ’ಗಳನ್ನು ಸಹ ಅದರ ಕೆಲಸದಲ್ಲಿ ಸೇರಿಸಿಕೊಳ್ಳಬಹುದು.
  4. CBDC ನೆರವಿನಿಂದ, ಭಾರತದಲ್ಲಿ ‘ಸೂಕ್ಷ್ಮ,ಸಣ್ಣ ಮತ್ತು ಮಧ್ಯಮ ಉದ್ಯಮ’ (MSMEs) ಗಳಿಗೆ ತ್ವರಿತ ಸಾಲಗಳನ್ನು ನೀಡಲು ಸಾಧ್ಯವಾಗುತ್ತದೆ.

CBDC ಯ ಅವಶ್ಯಕತೆ:

  1. ಅಧಿಕೃತ ಡಿಜಿಟಲ್ ಕರೆನ್ಸಿ ಯಾವುದೇ ಅಂತರ-ಬ್ಯಾಂಕ್ ಪಾವತಿ ಇಲ್ಲದೆ ‘ನೈಜ-ಸಮಯದ ಪಾವತಿಗಳನ್ನು’ ಸಕ್ರಿಯಗೊಳಿಸುವ ಮೂಲಕ ಕರೆನ್ಸಿ ನಿರ್ವಹಣೆಯ ವೆಚ್ಚವನ್ನು ಕಡಿಮೆ ಮಾಡುತ್ತದೆ.
  2. ಭಾರತದ ಗಮನಾರ್ಹವಾಗಿ ಹೆಚ್ಚಿನ ಕರೆನ್ಸಿ-ಜಿಡಿಪಿ ಅನುಪಾತವು ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿಯ (CBDC) ಮತ್ತೊಂದು ಪ್ರಯೋಜನವಾಗಿದೆ – ಇದರ ಮೂಲಕ, ದೊಡ್ಡ ಮೊತ್ತದ ನಗದು ಬಳಕೆಯನ್ನು ಸಿಬಿಡಿಸಿಗಳ ಮೂಲಕ ಬದಲಾಯಿಸಬಹುದು ಮತ್ತು ಕಾಗದದ ಕರೆನ್ಸಿಯನ್ನು ಮುದ್ರಿಸುವುದು, ಸಾಗಿಸುವುದು ಮತ್ತು ಸಂಗ್ರಹಿಸುವ ವೆಚ್ಚವನ್ನು ಗಣನೀಯವಾಗಿ ಕಡಿಮೆ ಮಾಡಬಹುದು.
  3. ಈ ವ್ಯವಸ್ಥೆಯಲ್ಲಿ, ವ್ಯಕ್ತಿಯಿಂದ ವ್ಯಕ್ತಿಗೆ ಹಣ ವರ್ಗಾವಣೆಯು ಕೇಂದ್ರ ಬ್ಯಾಂಕಿನ ಜವಾಬ್ದಾರಿಯಾಗಿರುವುದರಿಂದ, ‘ಅಂತರ-ಬ್ಯಾಂಕ್ ವಸಾಹತು’ / ‘ಅಂತರ-ಬ್ಯಾಂಕ್ ಮಧ್ಯಸ್ಥಿಕೆಯ’ ಅಗತ್ಯವನ್ನು ತೆಗೆದುಹಾಕಲಾಗುತ್ತದೆ.

ರಾಷ್ಟ್ರೀಯ ಡಿಜಿಟಲ್ ಕರೆನ್ಸಿಯನ್ನು ಪ್ರಾರಂಭಿಸುವಲ್ಲಿನ ಸವಾಲುಗಳು:

  1. ಸಂಭಾವ್ಯ ಸೈಬರ್ ಭದ್ರತಾ ಬೆದರಿಕೆ.
  2. ಜನರಲ್ಲಿ ಡಿಜಿಟಲ್ ಸಾಕ್ಷರತೆಯ ಕೊರತೆ.
  3. ಡಿಜಿಟಲ್ ಕರೆನ್ಸಿಯ ಪರಿಚಯದೊಂದಿಗೆ, ನಿಯಂತ್ರಣ, ಹೂಡಿಕೆಗಳು ಮತ್ತು ಖರೀದಿಗಳನ್ನು ಪತ್ತೆಹಚ್ಚುವುದು, ವ್ಯಕ್ತಿಗಳಿಗೆ ತೆರಿಗೆ ವಿಧಿಸುವುದು ಇತ್ಯಾದಿಗಳಿಗೆ ಸಂಬಂಧಿಸಿದ ವಿವಿಧ ಸವಾಲುಗಳು ಸಹ ಉದ್ಭವಿಸುತ್ತವೆ.
  4. ಗೌಪ್ಯತೆಗೆ ಬೆದರಿಕೆ: ಡಿಜಿಟಲ್ ಕರೆನ್ಸಿಗೆ ವ್ಯಕ್ತಿಯ ಕೆಲವು ಮೂಲಭೂತ ಮಾಹಿತಿಯನ್ನು ಸಂಗ್ರಹಿಸುವ ಅಗತ್ಯವಿರುತ್ತದೆ, ಇದರಿಂದಾಗಿ ವ್ಯಕ್ತಿಯು ಅವನು ಅಥವಾ ಅವಳು ಆ ಡಿಜಿಟಲ್ ಕರೆನ್ಸಿಯನ್ನು ಹೊಂದಿರುವವರು ಎಂದು ಸಾಬೀತುಪಡಿಸಬಹುದು.

ಎಸ್‌ಸಿ ಗರ್ಗ್ ಸಮಿತಿ ಶಿಫಾರಸುಗಳು (2019):

  1. ಯಾವುದೇ ರೂಪದಲ್ಲಿ ಕ್ರಿಪ್ಟೋಕರೆನ್ಸಿಗಳಲ್ಲಿ ಹೂಡಿಕೆ, ಮಾಲೀಕತ್ವ, ವಹಿವಾಟು ಅಥವಾ ವ್ಯವಹಾರವನ್ನು ನಡೆಸುವ ಯಾವುದೇ ವ್ಯಕ್ತಿಯನ್ನಾದರೂ ನಿಷೇಧಿಸಬೇಕು.
  2. ಸಮಿತಿಯಿಂದ, ಡಿಜಿಟಲ್ ಕರೆನ್ಸಿಯಲ್ಲಿ ವಿನಿಮಯ ವಹಿವಾಟು ಅಥವಾ ವ್ಯಾಪಾರ ಮಾಡುವವರಿಗೆ ಒಂದರಿಂದ 10 ವರ್ಷಗಳವರೆಗೆ ಜೈಲು ಶಿಕ್ಷೆಯನ್ನು ಶಿಫಾರಸು ಮಾಡಲಾಗಿದೆ.
  3. ಕ್ರಿಪ್ಟೋಕರೆನ್ಸಿ ಬಳಕೆದಾರರು ಗಳಿಸಿದ ಬೊಕ್ಕಸ ಅಥವಾ ಲಾಭದಿಂದ ಉಂಟಾಗುವ ನಷ್ಟ ಯಾವುದು ಹೆಚ್ಚೋ ಅದರ ಪ್ರಕಾರ ಮೂರು ಪಟ್ಟು ಹೆಚ್ಚಿನ ಮೊತ್ತದ ವಿತ್ತೀಯ ದಂಡವನ್ನು ವಿಧಿಸುವ ಕುರಿತು ಸಮಿತಿ ಪ್ರಸ್ತಾಪಿಸಿತು.
  4. ಆದರೆ, ‘ಭಾರತೀಯ ರಿಸರ್ವ್ ಬ್ಯಾಂಕ್ ನಿಂದ ಕ್ರಿಪ್ಟೋಕರೆನ್ಸಿಗಳನ್ನು ನೀಡುವ ಸಂಭಾವ್ಯತೆಯ’ ಬಗ್ಗೆ ಸರ್ಕಾರವು ಮುಕ್ತ ಮನಸ್ಸು ಇಟ್ಟುಕೊಳ್ಳಬೇಕೆಂದು ಸಮಿತಿಯು ಸಲಹೆ ನೀಡಿತು.

 


ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ಸಂಗತಿಗಳು:


ಪೀಪಲ್ಸ್ ಲಿಬರೇಶನ್ ಆರ್ಮಿ (PLA) ಯ ಹೊಸ ಇತಿಹಾಸದಲ್ಲಿ 1962 ರ ಯುದ್ಧದ ಉಲ್ಲೇಖ:

ಈ ವರ್ಷದ ಅಕ್ಟೋಬರ್‌ನಲ್ಲಿ 1962 ರ ಇಂಡೋ-ಚೀನಾ ಯುದ್ಧದ 60ನೇ ವಾರ್ಷಿಕೋತ್ಸವದ ಮೊದಲು, ಅಧಿಕೃತ ಚೀನೀ ಮಿಲಿಟರಿ ಸಂಶೋಧಕರು ಯುದ್ಧದ ಹೊಸ ಇತಿಹಾಸವನ್ನು ಸಂಕಲಿಸಿದ್ದಾರೆ, ಯುದ್ಧದ ಪ್ರಾಮುಖ್ಯತೆ ಮತ್ತು ಪರಂಪರೆಯನ್ನು ಮರು-ಮೌಲ್ಯಮಾಪನ ಮಾಡಿದ್ದಾರೆ. ಭಾರತ ಮತ್ತು ಚೀನಾ ನಡುವಿನ ಸಂಬಂಧಗಳಲ್ಲಿನ ಪ್ರಸ್ತುತ ಉದ್ವಿಗ್ನತೆಯ ನಡುವೆ 1962 ರ ಯುದ್ಧದ ಚರ್ಚೆಯು ಪುನರಾರಂಭವಾಗಿದೆ.

ಏನಿದು ಪ್ರಕರಣ?

  1. 1962 ರ ಯುದ್ಧದ ಹಿಂದಿನ ವಾರ್ಷಿಕೋತ್ಸವಗಳಿಗೆ ಚೀನಾದಲ್ಲಿ ಮಾತ್ರ ಸಾಧಾರಣ ಗಮನವನ್ನು ನೀಡಲಾಯಿತು – ಭಾರತಕ್ಕಿಂತ ಕಡಿಮೆ – ಮತ್ತು ಕೆಲವು ಚೀನೀ ಮಿಲಿಟರಿ ವಿದ್ವಾಂಸರು ಇದನ್ನು ಹಿಂದೆ ಭಾರತದೊಂದಿಗೆ ಮರೆತುಹೋದ ಯುದ್ಧವೆಂದು ಪರಿಗಣಿಸುತ್ತಾರೆ.
  2. ಆದರೆ, ಈಗ ಈ ಮನೋಭಾವ ಬದಲಾಗುತ್ತಿದೆ. ಏಪ್ರಿಲ್ 2020 ರಲ್ಲಿ ಪ್ರಾರಂಭವಾದ ಲೈನ್ ಆಫ್ ಆಕ್ಚುವಲ್ ಕಂಟ್ರೋಲ್ (LAC) ಬಿಕ್ಕಟ್ಟಿನ ನಂತರ ಮತ್ತು ವಿಶೇಷವಾಗಿ ಜೂನ್ 15, 2020 ರಂದು ಗಾಲ್ವಾನ್ ಕಣಿವೆಯಲ್ಲಿ ನಡೆದ ಸಂಘರ್ಷದ ನಂತರ 1962 ರ ಯುದ್ಧದ ಕುರಿತು ಹೊಸ ಗಮನವನ್ನು ನೀಡಲಾಗುತ್ತಿದೆ.
  3. ಈ ಹಿಂದೆ ಭಾರತ ಮತ್ತು ಚೀನಾ ನಡುವಿನ ಸಂಬಂಧಗಳ ಸಾಮಾನ್ಯೀಕರಣವು 1962 ರ ಯುದ್ಧಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡದ ಕಾರಣವಾಗಿದ್ದರೆ, ಉಭಯ ದೇಶಗಳ ನಡುವಿನ ಸಂಬಂಧಗಳಲ್ಲಿ ಇತ್ತೀಚಿನ ಕುಸಿತವು 1962 ರ ಯುದ್ಧಕ್ಕೆ ನೀಡಿದ ಹೆಚ್ಚಿನ ಪ್ರಾಮುಖ್ಯತೆ ಮತ್ತು ಗಡಿ ವಿವಾದದೊಂದಿಗೆ ಬಂದಿದೆ.

ಹಿನ್ನೆಲೆ:

20 ಅಕ್ಟೋಬರ್ 1962 ರಂದು, ಲಡಾಖ್ ಮತ್ತು ಮೆಕ್ ಮಹೊನ್ ಲೈನ್ ಎರಡರಲ್ಲೂ ಚೀನಾದ ದಾಳಿಯೊಂದಿಗೆ ಚೀನಾ-ಭಾರತ ಯುದ್ಧವು ಪ್ರಾರಂಭವಾಯಿತು. ಒಂದು ತಿಂಗಳ ಕಾಲ ಹೋರಾಡಿದ ನಂತರ, ಚೀನಾದಿಂದ ಕದನ ವಿರಾಮ ಘೋಷಣೆಯೊಂದಿಗೆ ಯುದ್ಧವು ಕೊನೆಗೊಂಡಿತು.

  1. ಹಿಮಾಲಯ ಪ್ರದೇಶದಲ್ಲಿನ ಗಡಿ ವಿವಾದವು ಈ ಯುದ್ಧದ ಪ್ರಮುಖ ನೆಪವಾಗಿತ್ತು. ಲಡಾಖ್, ಕಾಶ್ಮೀರದ ಅಕ್ಸಾಯ್ ಚಿನ್ ಪ್ರದೇಶ ಮತ್ತು ಅರುಣಾಚಲ ಪ್ರದೇಶದ ತವಾಂಗ್ ಪ್ರದೇಶ ತನ್ನದು (ಅಕ್ಸಾಯ್ ಚಿನ್ ಅದರ ಕ್ಸಿಂಗ್‌ಜಿಯಾಂಗ್ ಪ್ರಾಂತ್ಯದ ಭಾಗವಾಗಿ ಮತ್ತು ತವಾಂಗ್ ಟಿಬೆಟ್‌ನ ಭಾಗ) ಎಂದು ಚೀನಾ ಹಕ್ಕು ಸಾಧಿಸುತ್ತಿದೆ.

  • Join our Official Telegram Channel HERE for Motivation and Fast Updates
  • Subscribe to our YouTube Channel HERE to watch Motivational and New analysis videos

[ad_2]

Leave a Comment