[Mission 2022] ದೈನಂದಿನ ಪ್ರಚಲಿತ ಘಟನೆಗಳು ದಿನಾಂಕ – 25ನೇ ಜನೇವರಿ 2022 – INSIGHTSIAS

[ad_1]

 

 

ಪರಿವಿಡಿ:

 ಸಾಮಾನ್ಯ ಅಧ್ಯಯನ ಪತ್ರಿಕೆ  2 :

1. ರಾಜಕೀಯ ಪಕ್ಷಗಳಿಗೆ ಮಾನ್ಯತೆ ನೀಡುವುದು /ಮಾನ್ಯತೆಯನ್ನು ರದ್ದುಪಡಿಸುವುದು.

2. ಕ್ರಿಮಿನಲ್ ನ್ಯಾಯ ಸುಧಾರಣೆಗಳು.

3. ಉಕ್ರೇನ್ ಬಿಕ್ಕಟ್ಟಿನ ನಡುವೆ ಪೂರ್ವ ಯುರೋಪ್ ಗೆ ಹಡಗು, ಯುದ್ಧವಿಮಾನ ನಿಯೋಜಿಸಿದ

4. ಚೀನಾ-ತೈವಾನ್ ಸಂಬಂಧಗಳು.

 

ಸಾಮಾನ್ಯ ಅಧ್ಯಯನ ಪತ್ರಿಕೆ 3:

1. ಆಹಾರ ಬಲವರ್ಧನೆ.

 

ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ಸಂಗತಿಗಳು:

1. INC ಯ G23 ಎಂದರೇನು?

2. ಪ್ರಮಾಣವಚನ ಸ್ವೀಕರಿಸಿದ ಪಾಕಿಸ್ತಾನದ ಮೊದಲ ಮಹಿಳಾ ಸುಪ್ರೀಂ ಕೋರ್ಟ್ ಜಡ್ಜ್.

3. ಐಸಿಸಿ ವರ್ಷದ ಮಹಿಳಾ ಕ್ರಿಕೆಟ್ ಆಟಗಾರ್ತಿ ಪ್ರಶಸ್ತಿಗೆ ಭಾಜನರಾದ ಸ್ಮೃತಿ ಮಂಧಾನ.

 


ಸಾಮಾನ್ಯ ಅಧ್ಯಯನ ಪತ್ರಿಕೆ : 2


 

ವಿಷಯಗಳು: ಪ್ರಜಾ ಪ್ರಾತಿನಿಧ್ಯ ಕಾಯ್ದೆಯ ಪ್ರಮುಖ ಲಕ್ಷಣಗಳು.

ರಾಜಕೀಯ ಪಕ್ಷಗಳಿಗೆ ಮಾನ್ಯತೆ ನೀಡುವುದು /ಮಾನ್ಯತೆಯನ್ನು ರದ್ದುಪಡಿಸುವುದು:


(Recognition/derecognition of political parties)

ಸಂದರ್ಭ:

ಇತ್ತೀಚೆಗೆ, ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಲಾದ ಅರ್ಜಿಯಲ್ಲಿ, ಚುನಾವಣೆಗೆ ಮುನ್ನ ‘ಸಾರ್ವಜನಿಕ ನಿಧಿ ಯಿಂದ ತರ್ಕಬದ್ಧವಲ್ಲದ ಉಚಿತ ಸೌಲಭ್ಯಗಳು ಅಥವಾ ಸೌಕರ್ಯಗಳನ್ನು’ ಒದಗಿಸುವುದಾಗಿ ಭರವಸೆ ನೀಡುವ ಅಥವಾ ವಿತರಿಸುವ ರಾಜಕೀಯ ಪಕ್ಷಗಳ ಚುನಾವಣಾ ಚಿಹ್ನೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಅಥವಾ ಅಂತಹ ರಾಜಕೀಯ ಪಕ್ಷಗಳ ನೋಂದಣಿ ರದ್ದುಗೊಳಿಸುವಂತೆ, ಭಾರತೀಯ ಚುನಾವಣಾ ಆಯೋಗಕ್ಕೆ (ಇಸಿಐ) ನಿರ್ದೇಶನ ನೀಡುವಂತೆ ಕೋರಿ ಬೇಡಿಕೆ ಇಡಲಾಗಿದೆ.

ಮತದಾರರಿಂದ ಅನಗತ್ಯ ರಾಜಕೀಯ ಲಾಭ ಪಡೆಯಲು ಇಂತಹ ಜನಪರ ಕಾರ್ಯಕ್ರಮಗಳ ಘೋಷಣೆಯು ಸಂವಿಧಾನದ ಉಲ್ಲಂಘನೆಯಾಗಿದ್ದು, ಅವುಗಳನ್ನು ಸಂಪೂರ್ಣವಾಗಿ ನಿಷೇಧಿಸಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ ಹಾಗೂ ಚುನಾವಣಾ ಆಯೋಗ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.

ಅಗತ್ಯತೆ:

  1. ಚುನಾವಣೆಗೂ ಮುನ್ನ ಸಾರ್ವಜನಿಕ ನಿಧಿಯಿಂದ  ತರ್ಕಬದ್ಧವಲ್ಲದ ಉಚಿತ ಸೌಲಭ್ಯಗಳನ್ನು ಒದಗಿಸುವ ಭರವಸೆಗಳನ್ನು ನೀಡುವುದು ಮತದಾರರ ಮೇಲೆ ಅನಗತ್ಯ ಪ್ರಭಾವ ಬೀರಿ, ಸಮಾನ ಅವಕಾಶಗಳನ್ನು ಹಾಳುಮಾಡಿ ಚುನಾವಣಾ ಪ್ರಕ್ರಿಯೆಯ ಶುದ್ಧತೆಯನ್ನು ಹಾಳು ಮಾಡುವುದಕ್ಕೆ ಸಮ ಎಂದು ಘೋಷಿಸಬೇಕು ಎಂದು ಅರ್ಜಿಯಲ್ಲಿ ಒತ್ತಾಯಿಸಲಾಗಿದೆ.
  2. ಇಂತಹ ಅನೈತಿಕ ಕೃತ್ಯಗಳು ಅಧಿಕಾರದಲ್ಲಿ ಉಳಿಯಲು ಸಾರ್ವಜನಿಕ ಖಜಾನೆಯ ವೆಚ್ಚದಲ್ಲಿ ಮತದಾರರಿಗೆ ಲಂಚ ನೀಡುವುದಕ್ಕೆ ಸಮನಾಗಿರುತ್ತದೆ ಮತ್ತು ಪ್ರಜಾಸತ್ತಾತ್ಮಕ ತತ್ವಗಳು ಮತ್ತು ಆಚರಣೆಗಳನ್ನು ಸಂರಕ್ಷಿಸಲು ಅಂತಹ ದುಷ್ಕೃತ್ಯಗಳನ್ನು ತಪ್ಪಿಸಬೇಕು.

ರಾಜಕೀಯ ಪಕ್ಷಗಳ ನೋಂದಣಿ:

ರಾಜಕೀಯ ಪಕ್ಷಗಳ ನೋಂದಣಿಯನ್ನು 1951 ರ ಪ್ರಜಾ ಪ್ರಾತಿನಿಧ್ಯ ಕಾಯ್ದೆಯ ( ಜನಪ್ರತಿನಿಧಿ ಕಾಯ್ದೆ) ಸೆಕ್ಷನ್ 29 ಎ ನಿಬಂಧನೆಗಳ ಅಡಿಯಲ್ಲಿ ಮಾಡಲಾಗುತ್ತದೆ.

  1. ರಾಜಕೀಯ ಪಕ್ಷವನ್ನು ನೋಂದಾಯಿಸಲು, ರಚನೆಯಾದ 30 ದಿನಗಳ ಅವಧಿಯಲ್ಲಿ, ಮೇಲಿನ ವಿಭಾಗದ ಅಡಿಯಲ್ಲಿ ಭಾರತದ ಚುನಾವಣಾ ಆಯೋಗಕ್ಕೆ ಅರ್ಜಿಯನ್ನು ಸಲ್ಲಿಸಬೇಕು. ಇದಕ್ಕಾಗಿ, ಭಾರತದ ಚುನಾವಣಾ ಆಯೋಗವು ಭಾರತದ ಸಂವಿಧಾನದ 324 ನೇ ವಿಧಿ ಮತ್ತು 1951 ರ ಪ್ರಜಾ ಪ್ರಾತಿನಿಧ್ಯ ಕಾಯ್ದೆ’ ಯ ಸೆಕ್ಷನ್ 29 ಎ ಯಿಂದ ನೀಡಲ್ಪಟ್ಟ ಅಧಿಕಾರವನ್ನು ಚಲಾಯಿಸಲು ಮಾರ್ಗಸೂಚಿಗಳನ್ನು ನೀಡುತ್ತದೆ.

ಭಾರತದ ‘ರಾಷ್ಟ್ರೀಯ ರಾಜಕೀಯ ಪಕ್ಷ’ವಾಗಿ ಅರ್ಹತೆ ಪಡೆಯಲು:

  1. ರಾಜಕೀಯ ಪಕ್ಷವನ್ನು ರಾಷ್ಟ್ರೀಯ ಪಕ್ಷವೆಂದು ಗುರುತಿಸಬೇಕಾದರೆ, ಯಾವುದೇ ನಾಲ್ಕು ಅಥವಾ ಹೆಚ್ಚಿನ ರಾಜ್ಯಗಳಲ್ಲಿ ಸಾರ್ವತ್ರಿಕ ಚುನಾವಣೆಗಳಲ್ಲಿ ಅಥವಾ ವಿಧಾನಸಭಾ ಚುನಾವಣೆಗಳಲ್ಲಿ ಒಟ್ಟು ಆರು ಪ್ರತಿಶತದಷ್ಟು ಮಾನ್ಯವಾದ ಮತಗಳನ್ನು ಪಡೆಯುವುದು ಕಡ್ಡಾಯವಾಗಿದೆ.
  2. ಅಲ್ಲದೆ, ಇದಕ್ಕಾಗಿ ಯಾವುದೇ ರಾಜ್ಯ ಅಥವಾ ರಾಜ್ಯಗಳಿಂದ ಕನಿಷ್ಠ ನಾಲ್ಕು ಲೋಕಸಭಾ ಸ್ಥಾನಗಳನ್ನು ಗೆಲ್ಲಬೇಕು.
  3. ಲೋಕಸಭಾ ಚುನಾವಣೆಯಲ್ಲಿ, ಒಟ್ಟು ಲೋಕಸಭಾ ಸ್ಥಾನಗಳಲ್ಲಿ 2 ಪ್ರತಿಶತ (ಪ್ರಸ್ತುತ 543 ಸದಸ್ಯರ ಪೈಕಿ 11 ಸದಸ್ಯರು) ಆ ರಾಜಕೀಯ ಪಕ್ಷದಿಂದ ಗೆದ್ದಿದ್ದರೆ ಮತ್ತು ಈ ಸದಸ್ಯರು ಕನಿಷ್ಠ ಮೂರು ವಿಭಿನ್ನ ರಾಜ್ಯಗಳಿಂದ ಆಯ್ಕೆ ಯಾಗಿರಬೇಕು.

ರಾಜ್ಯ ರಾಜಕೀಯ ಪಕ್ಷವಾಗಿ (ಪ್ರಾದೇಶಿಕ ಪಕ್ಷ ) ಅರ್ಹತೆ ಪಡೆಯಲು:

  1. ರಾಜಕೀಯ ಪಕ್ಷವನ್ನು ‘ರಾಜ್ಯ ಮಟ್ಟದ ರಾಜಕೀಯ ಪಕ್ಷ’ ಎಂದು ಗುರುತಿಸಬೇಕಾದರೆ, ರಾಜ್ಯದಲ್ಲಿ ನಡೆಯುವ ಲೋಕಸಭೆ ಅಥವಾ ವಿಧಾನಸಭಾ ಚುನಾವಣೆಯಲ್ಲಿ ಒಟ್ಟು ಶೇಕಡಾ 6 ರಷ್ಟು ಮಾನ್ಯ ಮತಗಳನ್ನು ಪಡೆಯುವುದು ಕಡ್ಡಾಯವಾಗಿದೆ.
  2. ಇದಲ್ಲದೆ, ಅದು ಸಂಬಂಧಪಟ್ಟ ರಾಜ್ಯದ ವಿಧಾನಸಭೆಯಲ್ಲಿ ಕನಿಷ್ಠ ಎರಡು ಸ್ಥಾನಗಳನ್ನು ಗೆಲ್ಲಬೇಕು.
  3. ರಾಜಕೀಯ ಪಕ್ಷವೊಂದು, ರಾಜ್ಯ ವಿಧಾನಸಭೆಯ ಚುನಾವಣೆಯಲ್ಲಿ ವಿಧಾನಸಭೆಯ ಒಟ್ಟು ಸ್ಥಾನಗಳಲ್ಲಿ 3 ಪ್ರತಿಶತ ಅಥವಾ 3 ಸ್ಥಾನಗಳು, ಯಾವುದು ಹೆಚ್ಚೋ ಅದನ್ನು ಪಡೆಯಬೇಕು.

ಪ್ರಯೋಜನಗಳು:

  1. ರಾಜ್ಯ ಮಟ್ಟದ ರಾಜಕೀಯ ಪಕ್ಷ’ ಎಂದು ಗುರುತಿಸಲ್ಪಟ್ಟ ಯಾವುದೇ ನೋಂದಾಯಿತ ಪಕ್ಷವು ಪಕ್ಷಕ್ಕೆ ಕಾಯ್ದಿರಿಸಿದ ಚುನಾವಣಾ ಚಿಹ್ನೆಯನ್ನು ಆಯಾ ರಾಜ್ಯದ ಅಭ್ಯರ್ಥಿಗಳಿಗೆ ಹಂಚುವ ಅರ್ಹತೆಯನ್ನು ಹೊಂದಿದೆ. ಮತ್ತು, ‘ರಾಷ್ಟ್ರೀಯ ರಾಜಕೀಯ ಪಕ್ಷ’ ಎಂದು ಗುರುತಿಸಲ್ಪಟ್ಟ ಯಾವುದೇ ನೋಂದಾಯಿತ ಪಕ್ಷವು ಭಾರತದಾದ್ಯಂತ ತನ್ನ ಅಭ್ಯರ್ಥಿಗಳಿಗೆ ಪಕ್ಷಕ್ಕೆ ಕಾಯ್ದಿರಿಸಿದ ಚಿಹ್ನೆಯನ್ನು ನಿಗದಿಪಡಿಸುವ ಅರ್ಹತೆಯನ್ನು ಹೊಂದಿರುತ್ತದೆ.
  2. ಮಾನ್ಯತೆ ಪಡೆದ ರಾಷ್ಟ್ರೀಯ ಅಥವಾ ರಾಜ್ಯಮಟ್ಟದ ರಾಜಕೀಯ ಪಕ್ಷಗಳ ಅಭ್ಯರ್ಥಿಗಳಿಗೆ ತಮ್ಮ ನಾಮಪತ್ರಗಳನ್ನು ಸಲ್ಲಿಸುವಾಗ ಕೇವಲ ಒಬ್ಬ ಪ್ರಸ್ತಾಪಕರ ಅಗತ್ಯವಿದೆ. ಅಲ್ಲದೆ, ಮತದಾರರ ಪಟ್ಟಿಗಳ ತಿದ್ದುಪಡಿ ಸಮಯದಲ್ಲಿ ಎರಡು ಸೆಟ್ ಮತದಾರರ ಪಟ್ಟಿಗಳನ್ನು ಉಚಿತವಾಗಿ ಪಡೆಯಲು ಅವರಿಗೆ ಅಧಿಕಾರವಿದೆ ಮತ್ತು ಸಾರ್ವತ್ರಿಕ ಚುನಾವಣೆಯ ಸಮಯದಲ್ಲಿ ಒಂದು ಸೆಟ್ ಮತದಾರರ ಪಟ್ಟಿಯ ಒಂದು ನಕಲು ಪ್ರತಿಯನ್ನು ಸಂಬಂಧಿಸಿದ ಪಕ್ಷದ ಅಭ್ಯರ್ಥಿಗಳು ಉಚಿತವಾಗಿ ಪಡೆಯುತ್ತಾರೆ.
  3. ಸಾರ್ವತ್ರಿಕ ಚುನಾವಣೆಯ ಸಮಯದಲ್ಲಿ ಅವರಿಗೆ ಆಕಾಶವಾಣಿ ಮತ್ತು ದೂರದರ್ಶನದಲ್ಲಿ ಪ್ರಸಾರ ಮಾಡುವ ಸೌಲಭ್ಯವನ್ನು ಒದಗಿಸಲಾಗುತ್ತದೆ.
  4. ಮಾನ್ಯತೆ ಪಡೆದ ರಾಜಕೀಯ ಪಕ್ಷಗಳಿಗೆ, ಸಾರ್ವತ್ರಿಕ ಚುನಾವಣೆಗಳಲ್ಲಿ ಸ್ಟಾರ್ ಪ್ರಚಾರಕರ ಪ್ರಯಾಣದ ವೆಚ್ಚವನ್ನು ಆ ಪಕ್ಷದ ಅಭ್ಯರ್ಥಿ ಅಥವಾ ಪಕ್ಷದ ವೆಚ್ಚಗಳಿಗೆ ಸೇರಿಸಲಾಗುವುದಿಲ್ಲ.

 

ವಿಷಯಗಳು: ಸರ್ಕಾರದ ವಿವಿಧ ಅಂಗಗಳ ನಡುವೆ ಅಧಿಕಾರ ವಿಭಜನೆ, ವಿವಾದ ಪರಿಹಾರ ಕಾರ್ಯವಿಧಾನಗಳು ಮತ್ತು ಸಂಸ್ಥೆಗಳು.

ಕ್ರಿಮಿನಲ್ ನ್ಯಾಯ ಸುಧಾರಣೆಗಳು:


(Criminal justice reforms)

ಸಂದರ್ಭ:

ಇತ್ತೀಚೆಗೆ, ತಜ್ಞರು “ತ್ವರಿತಗತಿಯ ನ್ಯಾಯವನ್ನು ಖಚಿತಪಡಿಸಿಕೊಳ್ಳಲು ‘ಕ್ರಿಮಿನಲ್ ನ್ಯಾಯ ವ್ಯವಸ್ಥೆ’ (Criminal Justice System) ಯಲ್ಲಿನ ಸುಧಾರಣೆಗಳ ನಿಧಾನಗತಿಯ ಬಗ್ಗೆ ಗಂಭೀರ ಕಳವಳಗಳನ್ನು ವ್ಯಕ್ತಪಡಿಸಿದ್ದಾರೆ”.

ಪ್ರಸ್ತುತ ಕಾಳಜಿಗಳು/ಸವಾಲುಗಳು:

  1. ಪ್ರಕರಣಗಳ ವಿಲೇವಾರಿಯಲ್ಲಿನ ವಿಳಂಬವು ವಿಚಾರಣಾಧೀನ ಕೈದಿಗಳ ಮತ್ತು ಅಪರಾಧಿಗಳ ಮಾನವ ಹಕ್ಕುಗಳ ಉಲ್ಲಂಘನೆಗೆ ಕಾರಣವಾಗುತ್ತದೆ.
  2. ಪೊಲೀಸ್ ಸುಧಾರಣೆಗಳ ಕುರಿತು ಸುಪ್ರೀಂ ಕೋರ್ಟ್‌ನ ನಿರ್ದೇಶನಗಳ ಹೊರತಾಗಿಯೂ, ಯಾವುದೇ ಬದಲಾವಣೆಗಳಾಗಿಲ್ಲ.
  3. ಒಬ್ಬ ವ್ಯಕ್ತಿಯನ್ನು ಅಪರಾಧಿ ಎಂದು ಪರಿಗಣಿಸುವ ನ್ಯಾಯಾಲಯದ ಆದೇಶಗಳು ಅನುಷ್ಠಾನಗೊಳ್ಳಲು ವರ್ಷಗಳನ್ನು ತೆಗೆದುಕೊಳ್ಳುತ್ತಿವೆ.

ಸೂಚಿಸಲಾದ ಸುಧಾರಣೆಗಳು:

  1. ಪ್ರತಿ ಪೊಲೀಸ್ ಠಾಣೆಯಲ್ಲಿನ ಪ್ರಕರಣಗಳ ದಟ್ಟಣೆಯನ್ನು ಕಡಿಮೆ ಮಾಡಲು, ಭಾರತೀಯ ದಂಡ ಸಂಹಿತೆಯ ಅಡಿಯಲ್ಲಿ ಕೆಲವು ಅಪರಾಧಗಳನ್ನು ವಿಶೇಷ ಕಾನೂನು ಮತ್ತು ತ್ವರಿತ ನ್ಯಾಯಾಲಯಗಳಲ್ಲಿ ಪರಿಗಣಿಸಬಹುದು.
  2. ದಾಖಲೆಗಳ ಡಿಜಿಟಲೀಕರಣವನ್ನು ಮಾಡಬೇಕು, ಇದು ತನಿಖೆ ಮತ್ತು ವಿಚಾರಣೆಯನ್ನು ವೇಗಗೊಳಿಸಲು ಸಹಾಯ ಮಾಡುತ್ತದೆ.
  3. ಹೊಸ ಅಪರಾಧಗಳ ಸೃಷ್ಟಿ ಮತ್ತು ಅಪರಾಧಗಳ ಅಸ್ತಿತ್ವದಲ್ಲಿರುವ ವರ್ಗೀಕರಣಗಳ ನವೀಕರಣವು ಕಳೆದ ನಾಲ್ಕು ದಶಕಗಳಲ್ಲಿ ಗಣನೀಯವಾಗಿ ಬದಲಾಗಿರುವ ಕ್ರಿಮಿನಲ್ ನ್ಯಾಯಶಾಸ್ತ್ರದ ತತ್ವಗಳಿಂದ ಮಾರ್ಗದರ್ಶನ ಪಡೆಯಬೇಕು.
  4. ಅಪರಾಧಗಳ ವರ್ಗೀಕರಣವನ್ನು ಭವಿಷ್ಯದಲ್ಲಿ ಅಪರಾಧಗಳ ನಿರ್ವಹಣೆಗೆ ಅನುಕೂಲವಾಗುವ ರೀತಿಯಲ್ಲಿ ಮಾಡಬೇಕು.
  5. ಒಂದೇ ಸ್ವರೂಪದ ಅಪರಾಧಗಳಿಗೆ ವಿವಿಧ ಶಿಕ್ಷೆಗಳ ಪ್ರಮಾಣ ಮತ್ತು ಸ್ವರೂಪವನ್ನು ನಿರ್ಧರಿಸುವಲ್ಲಿ ನ್ಯಾಯಾಧೀಶರ ವಿವೇಚನೆಯೂ ನ್ಯಾಯಿಕ ಪೂರ್ವನಿದರ್ಶನದ ತತ್ತ್ವಗಳನ್ನು ಆಧರಿಸಿರಬೇಕು.

ಭಾರತದಲ್ಲಿ ಕ್ರಿಮಿನಲ್ ಕಾನೂನು:

  1. ಭಾರತದಲ್ಲಿ ಚಾಲ್ತಿಯಲ್ಲಿರುವ ಕ್ರಿಮಿನಲ್ ಕಾನೂನು ಹಲವಾರು ಮೂಲಗಳಲ್ಲಿ ಬೇರೂರಿದೆ –ಭಾರತೀಯ ದಂಡ ಸಂಹಿತೆ, 1860, ನಾಗರಿಕ ಹಕ್ಕುಗಳ ಕಾಯ್ದೆ, 1955, ವರದಕ್ಷಿಣೆ ನಿಷೇಧ ಕಾಯಿದೆ, 1961 ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯಿದೆ, 1989.
  2. ಕ್ರಿಮಿನಲ್ ನ್ಯಾಯ ವ್ಯವಸ್ಥೆಯು ಸ್ಥಾಪಿತ ಕಾನೂನುಗಳನ್ನು ಉಲ್ಲಂಘಿಸುವವರಿಗೆ ದಂಡ ವಿಧಿಸಬಹುದು.
  3. ಕ್ರಿಮಿನಲ್ ಕಾನೂನು ಮತ್ತು ಕ್ರಿಮಿನಲ್ ಪ್ರಕ್ರಿಯೆಯನ್ನು ಸಂವಿಧಾನದ ಏಳನೇ ಅನುಸೂಚಿಯ ಸಮವರ್ತಿ ಪಟ್ಟಿಯಲ್ಲಿ ಸೇರಿಸಲಾಗಿದೆ.
  4. ಲಾರ್ಡ್ ಥಾಮಸ್ ಬಾಬಿಂಗ್ಟನ್ ಮೆಕಾಲೆಯನ್ನು (Lord Thomas Babington Macaulay) ಭಾರತದಲ್ಲಿ ಕ್ರಿಮಿನಲ್ ಕಾನೂನುಗಳ ಕ್ರೋಡೀಕರಣದ ಮುಖ್ಯ ವಾಸ್ತುಶಿಲ್ಪಿ ಎಂದು ಹೇಳಲಾಗುತ್ತದೆ.

ಸುಧಾರಣೆಗಳ ಅಗತ್ಯತೆ:

  1. ವಸಾಹತುಶಾಹಿ ಯುಗದ ಕಾನೂನುಗಳು.
  2. ನಿಷ್ಫಲತೆ.
  3. ನ್ಯಾಯದಾನಕ್ಕಾಗಿ ಬಾಕಿ ಇರುವ ಪ್ರಕರಣಗಳ ಸಂಖ್ಯೆಯಲ್ಲಿನ ಹೆಚ್ಚಳ.
  4. ಬೃಹತ್ ವಿಚಾರಣಾ ವ್ಯಾಜ್ಯಗಳು.

ಕ್ರಿಮಿನಲ್ ಕಾನೂನಿನ ಸುಧಾರಣಾ ಸಮಿತಿ:

  1. ಕ್ರಿಮಿನಲ್ ಕಾನೂನನ್ನು ಸುಧಾರಿಸಲು ಗೃಹ ಸಚಿವಾಲಯವು (MHA) ರಾಷ್ಟ್ರೀಯ ಮಟ್ಟದ ಸಮಿತಿಯನ್ನು ರಚಿಸಿದೆ.
  2. ಈ ಸಮಿತಿಯ ಅಧ್ಯಕ್ಷರು ರಣಬೀರ್ ಸಿಂಗ್ (ಉಪಕುಲಪತಿ, ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯ ದೆಹಲಿ).
  3. ಈ ಸಮಿತಿಯು ಸರ್ಕಾರಕ್ಕೆ ಸಲ್ಲಿಸುವ ವರದಿಗಾಗಿ ಆನ್‌ಲೈನ್‌ನಲ್ಲಿ ತಜ್ಞರೊಂದಿಗೆ ಸಮಾಲೋಚಿಸಿ ಅಭಿಪ್ರಾಯಗಳನ್ನು ಸಂಗ್ರಹಿಸುತ್ತದೆ ಮತ್ತು ಲಭ್ಯವಿರುವ ವಸ್ತುಗಳನ್ನು ಸಂಗ್ರಹಿಸುತ್ತದೆ.

ಕ್ರಿಮಿನಲ್ ಕಾನೂನಿನ ಸುಧಾರಣಾ ಸಮಿತಿ:

  1. ಕ್ರಿಮಿನಲ್ ಕಾನೂನನ್ನು ಸುಧಾರಿಸಲು ಗೃಹ ಸಚಿವಾಲಯವು (MHA) ರಾಷ್ಟ್ರೀಯ ಮಟ್ಟದ ಸಮಿತಿಯನ್ನು ರಚಿಸಿದೆ.
  2. ಈ ಸಮಿತಿಯ ಅಧ್ಯಕ್ಷರು ರಣಬೀರ್ ಸಿಂಗ್ (ಉಪಕುಲಪತಿ, ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯ ದೆಹಲಿ).
  3. ಈ ಸಮಿತಿಯು ಸರ್ಕಾರಕ್ಕೆ ಸಲ್ಲಿಸುವ ವರದಿಗಾಗಿ ಆನ್‌ಲೈನ್‌ನಲ್ಲಿ ತಜ್ಞರೊಂದಿಗೆ ಸಮಾಲೋಚಿಸಿ ಅಭಿಪ್ರಾಯಗಳನ್ನು ಸಂಗ್ರಹಿಸುತ್ತದೆ ಮತ್ತು ಲಭ್ಯವಿರುವ ವಸ್ತುಗಳನ್ನು ಸಂಗ್ರಹಿಸುತ್ತದೆ.

ಕ್ರಿಮಿನಲ್  ಕಾನೂನುಗಳಿಗೆ ಸಂಬಂಧಿಸಿದಂತೆ ಈ ಹಿಂದಿನ ಸಮಿತಿಗಳು:

ಮಾಧವ್ ಮೆನನ್ ಕಮಿಟಿ: ಇದು 2007 ರಲ್ಲಿ CJSI ನಲ್ಲಿನ ಸುಧಾರಣೆಗಳ ಕುರಿತು ವಿವಿಧ ಶಿಫಾರಸುಗಳನ್ನು ಸೂಚಿಸಿ ತನ್ನ ವರದಿಯನ್ನು ಸಲ್ಲಿಸಿತು.

ಮಳಿಮಠ ಸಮಿತಿ ವರದಿ: ಇದು 2003 ರಲ್ಲಿ ಕ್ರಿಮಿನಲ್ ಜಸ್ಟಿಸ್ ಸಿಸ್ಟಮ್ ಇನ್ ಇಂಡಿಯಾ (CJSI) ಕುರಿತು ತನ್ನ ವರದಿಯನ್ನು ಸಲ್ಲಿಸಿತು.

Current Affairs

 

ವಿಷಯಗಳು: ಪ್ರಮುಖ ಅಂತರರಾಷ್ಟ್ರೀಯ ಸಂಸ್ಥೆಗಳು, ಏಜೆನ್ಸಿಗಳು ಮತ್ತು ವೇದಿಕೆಗಳು, ಅವುಗಳ ರಚನೆ, ಮತ್ತು ಆದೇಶ.

ಉಕ್ರೇನ್ ಬಿಕ್ಕಟ್ಟಿನ ನಡುವೆ ಪೂರ್ವ ಯುರೋಪ್ ಗೆ ಹಡಗು, ಯುದ್ಧವಿಮಾನ ನಿಯೋಜಿಸಿದ NATO:


(Amid Ukraine crisis, NATO sends planes, ships to eastern Europe)

ಸಂದರ್ಭ:

ಉತ್ತರ ಅಟ್ಲಾಂಟಿಕ್‌ ಒಕ್ಕೂಟದ (ನ್ಯಾಟೊ) ಮಿತ್ರ ರಾಷ್ಟ್ರಗಳು ಸೇನೆಯನ್ನು ಸಜ್ಜಾಗಿರಿಸಿದ್ದು ಪೂರ್ವ ಯುರೋಪಿನತ್ತ ಹಡಗುಗಳು ಮತ್ತು ಯುದ್ಧ ವಿಮಾನಗಳನ್ನು ಕಳುಹಿಸಿವೆ ಎಂದು ನ್ಯಾಟೊ   ಹೇಳಿದೆ. ಉಕ್ರೇನ್ ಸುತ್ತಲೂ ರಷ್ಯಾದ ಮಿಲಿಟರಿ ಪಡೆಗಳ ಸನ್ನದ್ಧತೆಯಿಂದ ಉಂಟಾಗಿರುವ ಉದ್ವಿಗ್ನ ಪರಿಸ್ಥಿತಿಯನ್ನು ಮನಗಂಡು ರಕ್ಷಣೆಯನ್ನು ಹೆಚ್ಚಿಸಲು ಈ ಕ್ರಮ ಕೈಗೊಳ್ಳಲಾಗಿದೆ.

ಏನಿದು ವಿವಾದ?

  1. ಹಿಂದಿನ ಸೋವಿಯತ್ ಒಕ್ಕೂಟದ ಭಾಗವಾಗಿದ್ದ ಉಕ್ರೇನ್ ಮತ್ತು ರಷ್ಯಾ ನಡುವಿನ ಉದ್ವಿಗ್ನತೆಗಳು 2013 ರ ಕೊನೆಯಲ್ಲಿ “ಐರೋಪ್ಯ ಒಕ್ಕೂಟದೊಂದಿಗಿನ ಐತಿಹಾಸಿಕ ರಾಜಕೀಯ ಮತ್ತು ವ್ಯಾಪಾರ ಒಪ್ಪಂದ” ದ ಮೇಲೆ ಉಲ್ಬಣಗೊಂಡವು. ಉಕ್ರೇನ್‌ನ ಅಂದಿನ ರಷ್ಯಾದ ಪರ-ಅಧ್ಯಕ್ಷ ವಿಕ್ಟರ್ ಯಾನುಕೋವಿಚ್ ಮಾತುಕತೆಗಳನ್ನು ರದ್ದುಗೊಳಿಸಿದ ನಂತರ, ರಾಜಧಾನಿ ಕೀವ್ ವಾರಗಳ ಪ್ರತಿಭಟನೆಗಳಿಗೆ ಸಾಕ್ಷಿಯಾಯಿತು, ಅದು ಹಿಂಸಾಚಾರಕ್ಕೆ ತಿರುಗಿತು.
  2. ನಂತರ, ಮಾರ್ಚ್ 2014 ರಲ್ಲಿ, ರಷ್ಯಾ ತನ್ನ ಹಿತಾಸಕ್ತಿಗಳನ್ನು ಮತ್ತು ರಷ್ಯನ್ ಭಾಷೆ ಮಾತನಾಡುವ ನಾಗರಿಕರ ಹಿತಾಸಕ್ತಿಗಳನ್ನು ರಕ್ಷಿಸುವ ನೆಪದಲ್ಲಿ ತನ್ನ ಪ್ರಬಲ ನಿಷ್ಠಾವಂತರ ಸಹಾಯದಿಂದ ದಕ್ಷಿಣ ಉಕ್ರೇನ್‌ನ ಸ್ವಾಯತ್ತ ಕ್ರಿಮಿಯನ್ ಪರ್ಯಾಯ ದ್ವೀಪವನ್ನು ಸ್ವಾಧೀನಪಡಿಸಿಕೊಂಡಿತು.
  3. ಸ್ವಲ್ಪ ಸಮಯದ ನಂತರ, ಉಕ್ರೇನ್‌ನ ಡೊನೆಟ್ಸ್ಕ್ ಮತ್ತು ಲುಹಾನ್ಸ್ಕ್ ಪ್ರದೇಶಗಳಲ್ಲಿ ರಷ್ಯಾದ ಪರ ಪ್ರತ್ಯೇಕತಾವಾದಿಗಳು ಕೀವ್‌ನಿಂದ ತಮ್ಮ ಸ್ವಾತಂತ್ರ್ಯವನ್ನು ಘೋಷಿಸಿದರು, ನಂತರ ತಿಂಗಳುಗಟ್ಟಲೆ ಭಾರೀ ಹೋರಾಟಗಳು ನಡೆದವು. 2015 ರಲ್ಲಿ, ಫ್ರಾನ್ಸ್ ಮತ್ತು ಜರ್ಮನಿ ಗಳ ಮಧ್ಯಸ್ತಿಕೆಯಲ್ಲಿ ‘ಮಿನ್ಸ್ಕ್’ ನಲ್ಲಿ ‘ಕೀವ್’ ಮತ್ತು ‘ಮಾಸ್ಕೋ’ ನಡುವೆ ಶಾಂತಿ ಒಪ್ಪಂದ ಏರ್ಪಟ್ಟಿತು, ಇದರ ಹೊರತಾಗಿಯೂ ‘ಉಕ್ರೇನ್’ ಮತ್ತು ‘ರಷ್ಯಾ’ ನಡುವೆ ಪದೇ ಪದೇ ಕದನ ವಿರಾಮ ಉಲ್ಲಂಘನೆ ಪ್ರಕರಣಗಳು ನಡೆಯುತ್ತಿವೆ.

ಇತ್ತೀಚಿನ ಬೆಳವಣಿಗೆಗಳು:

ಯುನೈಟೆಡ್ ಸ್ಟೇಟ್ಸ್, ನ್ಯಾಟೋ ಮತ್ತು ಉಕ್ರೇನ್‌ನ ಅಧಿಕಾರಿಗಳು ಉಕ್ರೇನಿಯನ್ ಗಡಿಯ ಬಳಿ ರಷ್ಯಾದ ಅಸಾಮಾನ್ಯ ಮಿಲಿಟರಿ ಚಟುವಟಿಕೆಗಳ ಬಗ್ಗೆ ಸುಮಾರು ಎರಡು ವಾರಗಳಿಂದ ಹೇಳಿಕೆಗಳನ್ನು ನೀಡುತ್ತಿದ್ದಾರೆ.

  1. ಮಹತ್ವಾಕಾಂಕ್ಷಿ NATO ಸದಸ್ಯ ರಾಷ್ಟ್ರವಾದ ಉಕ್ರೇನ್‌ನ ಗಡಿಯಲ್ಲಿ ರಷ್ಯಾ 1,00,000 ಕ್ಕೂ ಹೆಚ್ಚು ಸೈನಿಕರನ್ನು ನಿಯೋಜನೆ ಮಾಡಿದೆ.

ಏನಿದು ಪ್ರಕರಣ? ರಷ್ಯಾದ ಬೇಡಿಕೆಗಳೇನು?

  1. ಮೇ 1997 ರ ನಂತರ ನ್ಯಾಟೋ ಒಕ್ಕೂಟಕ್ಕೆ ಸೇರಿದ ಯುರೋಪಿನ ಎಲ್ಲಾ ದೇಶಗಳಿಂದ ನ್ಯಾಟೋ ತಮ್ಮ ಪಡೆಗಳನ್ನು ಹಿಂತೆಗೆದುಕೊಂಡರೆ ಮಾತ್ರ ತನ್ನ ಸೈನ್ಯದ ಜಮಾವಣೆಯನ್ನು ಹಿಂಪಡೆಯುವುದಾಗಿ ರಷ್ಯಾ ಹೇಳಿದೆ.
  2. ರಷ್ಯಾ ದೊಂದಿಗೆ ಗಡಿ ಹಂಚಿಕೊಂಡಿರುವ ಬಾಲ್ಟಿಕ್ ರಾಷ್ಟ್ರಗಳಾದ (ಲಾಟ್ವಿಯಾ, ಎಸ್ಟೋನಿಯಾ, ಲಿಥುವೇನಿಯಾ), ಮಧ್ಯ ಯುರೋಪಿಯನ್ ರಾಜ್ಯಗಳಾದ ಪೋಲೆಂಡ್, ಹಂಗೇರಿ ಮತ್ತು ಜೆಕ್ ಗಣರಾಜ್ಯ ಮತ್ತು ಕ್ರೊಯೇಷಿಯಾ ಮತ್ತು ಸ್ಲೊವೇನಿಯಾದಂತಹ ಬಾಲ್ಕನ್ ರಾಜ್ಯಗಳಲ್ಲಿ NATO ಕಾರ್ಯನಿರ್ವಹಿಸಲು ಸಾಧ್ಯವಿಲ್ಲ ಎಂದು ಇದು ಪರಿಣಾಮಕಾರಿಯಾಗಿ ಅರ್ಥೈಸುತ್ತದೆ.
  3. NATO ಯಾವುದೇ ಹೆಚ್ಚಿನ ‘ವಿಸ್ತರಣೆ’ಯ ಯೋಜನೆಗಳನ್ನು ಕೈಬಿಡಬೇಕೆಂದು ರಷ್ಯಾ ಬಯಸುತ್ತದೆ, ಅಂದರೆ ಉಕ್ರೇನ್ ಮತ್ತು ಜಾರ್ಜಿಯಾವನ್ನು NATO ದ ಸದಸ್ಯರಾಗಿ ಸ್ವೀಕರಿಸದಿರಲು ಬದ್ಧವಾಗಿರುವುದು. ರಷ್ಯಾದಿಂದ ಪೂರ್ವಾನುಮತಿ ಪಡೆಯದೆ ಪೂರ್ವ ಯುರೋಪ್, ಉಕ್ರೇನ್ ಮತ್ತು ಜಾರ್ಜಿಯಾದಲ್ಲಿ ನ್ಯಾಟೋ ತನ್ನ ಸದಸ್ಯ ದೇಶಗಳೊಂದಿಗೆ ಸಮರಭ್ಯಾಸ ನಡೆಸಬಾರದು ಎಂಬುದು ಇನ್ನೊಂದು ಬೇಡಿಕೆಯಾಗಿದೆ.

ಪಶ್ಚಿಮ ದೇಶಗಳ ಪ್ರತಿಕ್ರಿಯೆ:

  1. ಯುಎಸ್ ಮತ್ತು ನ್ಯಾಟೋ ಅಧಿಕಾರಿಗಳು ರಷ್ಯಾದ ಪ್ರಸ್ತಾಪಗಳು ಅವಾಸ್ತವಿಕವೆಂದು ಸ್ಪಷ್ಟವಾಗಿ ಹೇಳಿದ್ದಾರೆ. ಉಕ್ರೇನ್ ಮತ್ತು ಇತರ ಪ್ರತಿಯೊಂದು ದೇಶವು ತನ್ನದೇ ಆದ ವಿದೇಶಾಂಗ ನೀತಿಯನ್ನು ನಿರ್ಧರಿಸುವ ಹಕ್ಕನ್ನು ಹೊಂದಿವೆ ಎಂದು ಅವರು ಒತ್ತಿ ಹೇಳಿದ್ದಾರೆ.
  2. ಸಾರ್ವಭೌಮತ್ವದ ತತ್ವವನ್ನು ಉಲ್ಲೇಖಿಸುತ್ತ, ಯುಎಸ್ ಮತ್ತು ನ್ಯಾಟೋದ ಅಧಿಕಾರಿಗಳು ಉಕ್ರೇನ್ ಮತ್ತು ಪೂರ್ವ ಯುರೋಪಿನ ಇತರ ಪ್ರತಿಯೊಂದು ದೇಶವು ತನ್ನ ವಿದೇಶಾಂಗ ನೀತಿಯನ್ನು ಹೊರಗಿನ ಯಾವುದೇ ದೇಶದ ಹಸ್ತಕ್ಷೇಪವಿಲ್ಲದೆ ಸ್ವತಂತ್ರವಾಗಿ ನಿರ್ಧರಿಸುವ ಹಕ್ಕನ್ನು ಹೊಂದಿವೆ ಮತ್ತು ಅವುಗಳು ತಾವು ಬಯಸಿದ ಮೈತ್ರಿಕೂಟವನ್ನು ಸೇರುವ ಹಕ್ಕನ್ನು ಹೊಂದಿದೆ ಎಂದು ಅವರು ಸಮರ್ಥಿಸಿದ್ದಾರೆ.
  3. ಯಾರು NATO ಸದಸ್ಯರಾಗುತ್ತಾರೆ ಎಂಬುದರ ಮೇಲೆ ರಷ್ಯಾ ವೀಟೋ ಅಧಿಕಾರವನ್ನು ಹೊಂದಿದೆ ಎಂಬ ಕಲ್ಪನೆಯನ್ನು ಅವರು ತಳ್ಳಿಹಾಕಿದ್ದಾರೆ, ಮತ್ತು ಸಂಬಂಧಿತ ದೇಶಗಳನ್ನು ಒಳಗೊಳ್ಳದೆ ಪೂರ್ವ ಯುರೋಪಿನ ಮೇಲೆ ಪರಿಣಾಮ ಬೀರುವ ನಿರ್ಧಾರಗಳನ್ನು NATO ತೆಗೆದುಕೊಳ್ಳುವುದಿಲ್ಲ ಎಂದು ಸೂಚಿಸಿದ್ದಾರೆ.

ಅಂತಾರಾಷ್ಟ್ರೀಯ ಗಮನದ ಅಗತ್ಯತೆ:

ದೇಶದ ಪೂರ್ವ ಭಾಗದಲ್ಲಿ ‘ಕೀವ್’ ಮತ್ತು ರಷ್ಯಾದ ಪರ ಬಂಡುಕೋರರ ನಡುವೆ ನಡೆಯುತ್ತಿರುವ ಕಾಳಗದಲ್ಲಿ ಹದಿನಾಲ್ಕು ಸಾವಿರ ಮಂದಿ ಸಾವನ್ನಪ್ಪಿದ್ದಾರೆ. ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೈ ಕಮಿಷನರ್ ಕಚೇರಿಯ ಅಕ್ಟೋಬರ್ 2021 ರ ವರದಿಯ ಪ್ರಕಾರ, ಇದರಲ್ಲಿ   3,393 ನಾಗರಿಕರು ಹತ್ಯೆಗೀಡಾಗಿದ್ದಾರೆ.

ಉತ್ತರ ಅಟ್ಲಾಂಟಿಕ್ ಒಪ್ಪಂದ ಸಂಘಟನೆ-(NATO) ಕುರಿತು:

  1. ಉತ್ತರ ಅಟ್ಲಾಂಟಿಕ್ ಒಪ್ಪಂದ ಸಂಘಟನೆ- NATO ಒಂದು ಅಂತರ್ ಸರ್ಕಾರಿ ಮಿಲಿಟರಿ ಮೈತ್ರಿಕೂಟವಾಗಿದೆ.
  2. ಇದನ್ನು ವಾಷಿಂಗ್ಟನ್ ಒಪ್ಪಂದದ ಮೂಲಕ ಏಪ್ರಿಲ್ 4, 1949 ರಂದು ಸ್ಥಾಪಿಸಲಾಯಿತು.
  3. ಈ ಒಪ್ಪಂದಕ್ಕೆ 1949 ರ ಏಪ್ರಿಲ್ 4 ರಂದು ಸಹಿ ಹಾಕಲಾಯಿತು.
  4. ಪ್ರಧಾನ ಕಚೇರಿ – ಬ್ರಸೆಲ್ಸ್, ಬೆಲ್ಜಿಯಂ.
  5. ಮೈತ್ರಿಕೂಟದ ಕಮಾಂಡ್ ಕಾರ್ಯಾಚರಣೆಗಳ ಪ್ರಧಾನ ಕಚೇರಿ – ಮೊನ್ಸ್, ಬೆಲ್ಜಿಯಂ.

ಸಂರಚನೆ:

  1. ಉತ್ತರ ಅಟ್ಲಾಂಟಿಕ್ ಒಪ್ಪಂದ ಸಂಘಟನೆ (NATO) ಯು 12 ಮೂಲ ಸ್ಥಾಪಕ ಸದಸ್ಯ ದೇಶಗಳಿಂದ ಸ್ಥಾಪಿತವಾಯಿತು, ಪ್ರಸ್ತುತ ಅದರ ಸದಸ್ಯತ್ವ 30 ಕ್ಕೆ ಹೆಚ್ಚಳಗೊಂಡಿದೆ. ಈ ಗುಂಪಿಗೆ ಸೇರ್ಪಡೆಗೊಂಡ ಇತ್ತೀಚಿನ ದೇಶ ಉತ್ತರ ಮ್ಯಾಸಿಡೋನಿಯಾ, ಇದನ್ನು ಮಾರ್ಚ್ 27, 2020 ರಂದು ನ್ಯಾಟೋದಲ್ಲಿ ಅಧಿಕೃತವಾಗಿ ಸೇರ್ಪಡೆಗೊಳಿಸಲಾಯಿತು.
  2. ನ್ಯಾಟೋ ಸದಸ್ಯತ್ವವು ‘ಈ ಒಪ್ಪಂದದ ತತ್ವಗಳನ್ನು ಮತ್ತಷ್ಟು ಹೆಚ್ಚಿಸುವ, ಗೌರವಿಸುವ ಮತ್ತು ಉತ್ತರ ಅಟ್ಲಾಂಟಿಕ್ ಪ್ರದೇಶದ ಸುರಕ್ಷತೆಗೆ ಕೊಡುಗೆ ನೀಡುವ ಯಾವುದೇ ಯುರೋಪಿಯನ್ ದೇಶಕ್ಕೆ’ ಮುಕ್ತವಾಗಿದೆ.

ಉದ್ದೇಶಗಳು:

ರಾಜಕೀಯ–ನ್ಯಾಟೋ ಪ್ರಜಾಪ್ರಭುತ್ವ ಮೌಲ್ಯಗಳನ್ನು ಉತ್ತೇಜಿಸುತ್ತದೆ ಮತ್ತು ಸಮಸ್ಯೆಗಳನ್ನು ಪರಿಹರಿಸಲು, ಪರಸ್ಪರ ನಂಬಿಕೆಯನ್ನು ಬೆಳೆಸಲು ಮತ್ತು ದೀರ್ಘಾವಧಿಯಲ್ಲಿ ಸಂಘರ್ಷವನ್ನು ತಡೆಗಟ್ಟಲು ರಕ್ಷಣಾ ಮತ್ತು ಸುರಕ್ಷತೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಸಮಾಲೋಚಿಸಲು ಮತ್ತು ಸಹಕರಿಸಲು ಸದಸ್ಯ ರಾಷ್ಟ್ರಗಳಿಗೆ ಅನುವು ಮಾಡಿಕೊಡುತ್ತದೆ.

ಮಿಲಿಟರಿ–ವಿವಾದಗಳನ್ನು ಶಾಂತಿಯುತವಾಗಿ ಪರಿಹರಿಸಲು ನ್ಯಾಟೋ ಬದ್ಧವಾಗಿದೆ. ರಾಜತಾಂತ್ರಿಕ ಪ್ರಯತ್ನಗಳು ವಿಫಲವಾದರೆ, ಬಿಕ್ಕಟ್ಟು-ನಿರ್ವಹಣಾ ಕಾರ್ಯಾಚರಣೆಗಳನ್ನು ಕೈಗೊಳ್ಳಲು ಅದು ಮಿಲಿಟರಿ ಶಕ್ತಿಯನ್ನು ಹೊಂದಿದೆ. ಈ ಪ್ರಕ್ರಿಯೆಗಳನ್ನು ನ್ಯಾಟೋದ ಸಂಸ್ಥಾಪಕ ಒಪ್ಪಂದದ (ವಾಷಿಂಗ್ಟನ್ ಒಪ್ಪಂದ) ಸಾಮೂಹಿಕ ರಕ್ಷಣಾ ಷರತ್ತು (ವಿಧಿ 5) ಅಥವಾ ವಿಶ್ವಸಂಸ್ಥೆಯ ಆದೇಶದ ಅಡಿಯಲ್ಲಿ ಏಕಾಂಗಿಯಾಗಿ ಅಥವಾ ಇತರ ದೇಶಗಳು ಮತ್ತು ಅಂತರಾಷ್ಟ್ರೀಯ ಸಂಘಟನೆಗಳ ಸಹಕಾರದೊಂದಿಗೆ ಜಾರಿಗೆ ತರಲಾಗುವುದು.

ಮಿನ್ಸ್ಕ್ ಒಪ್ಪಂದಗಳು (Minsk Agreements):

ಮೊದಲ ಮಿನ್ಸ್ಕ್ ಒಪ್ಪಂದ (Minsk I): ಉಕ್ರೇನ್ ಮತ್ತು ರಷ್ಯಾದ ಬೆಂಬಲಿತ ಪ್ರತ್ಯೇಕತಾವಾದಿಗಳು ಸೆಪ್ಟೆಂಬರ್ 2014 ರಲ್ಲಿ ಬೆಲಾರಸ್ ರಾಜಧಾನಿ ಮಿನ್ಸ್ಕ್ ನಲ್ಲಿ 12 ಅಂಶಗಳ ಕದನ ವಿರಾಮ ಒಪ್ಪಂದವನ್ನು ಅಂಗೀಕರಿಸಿದರು.

ಅದರ ನಿಬಂಧನೆಗಳು ಕೈದಿಗಳ ವಿನಿಮಯ, ಮಾನವೀಯ ನೆರವು ವಿತರಣೆ ಮತ್ತು ಭಾರೀ ಶಸ್ತ್ರಾಸ್ತ್ರಗಳನ್ನು ನಿಯೋಜನೆಯಿಂದ ತೆಗೆದುಹಾಕುವುದು.

ಎರಡೂ ಪಕ್ಷಗಳು ಈ ಒಪ್ಪಂದವನ್ನು ಉಲ್ಲಂಘನೆ ಮಾಡುವುದರೊಂದಿಗೆ ಒಪ್ಪಂದವು ಮುರಿದುಬಿದ್ದಿತು.

ಎರಡನೇ ಮಿನ್ಸ್ಕ್ ಒಪ್ಪಂದ (Minsk II):

2015 ರಲ್ಲಿ, ಫ್ರಾನ್ಸ್ ಮತ್ತು ಜರ್ಮನಿಯ ಮಧ್ಯಸ್ಥಿಕೆಯಲ್ಲಿ ‘ಎರಡನೇ ಮಿನ್ಸ್ಕ್ ಶಾಂತಿ ಒಪ್ಪಂದ’ಕ್ಕೆ ಸಹಿ ಹಾಕಿದ ನಂತರ ಮುಕ್ತ ಸಂಘರ್ಷವನ್ನು ತಪ್ಪಿಸಲಾಯಿತು.

  1. ಈ ಒಪ್ಪಂದವನ್ನು ಬಂಡುಕೋರ ಪ್ರದೇಶಗಳಲ್ಲಿ ಹೋರಾಟವನ್ನು ಕೊನೆಗೊಳಿಸಲು ಮತ್ತು ಉಕ್ರೇನಿಯನ್ ರಾಷ್ಟ್ರೀಯ ಪಡೆಗಳಿಗೆ ಗಡಿಯನ್ನು ಹಸ್ತಾಂತರಿಸಲು ವಿನ್ಯಾಸಗೊಳಿಸಲಾಗಿದೆ.

 

ವಿಷಯಗಳು: ಭಾರತ ಮತ್ತು ನೆರೆಹೊರೆಯ ದೇಶಗಳೊಂದಿಗೆ ಅದರ ಸಂಬಂಧಗಳು.

ಚೀನಾ-ತೈವಾನ್ ಸಂಬಂಧಗಳು:


(China- Taiwan relations)

ಸಂದರ್ಭ:

ಇತ್ತೀಚೆಗೆ ಚೀನಾ ತನ್ನ 39 ಯುದ್ಧವಿಮಾನಗಳನ್ನು ತೈವಾನ್‌ ಬಳಿ ಕಳುಹಿಸಿದೆ. ಹಳೆಯ ಮಾದರಿಯನ್ನೇ ಮುಂದುವರಿಸಿದ ಚೀನಾ ಹೊಸ ವರ್ಷದಲ್ಲಿ ಮೊದಲ ಬಾರಿಗೆ ತೈವಾನ್ ಮೇಲೆ ಸೇನಾ ಒತ್ತಡವನ್ನು ಹೇರಿತು. ಇದಕ್ಕೆ ತಕ್ಕ ಪ್ರತ್ಯುತ್ತರ ನೀಡಲು, ದ್ವೀಪ ರಾಷ್ಟ್ರವಾದ ತೈವಾನ್ ತನ್ನ ಜೆಟ್‌ಗಳನ್ನು ಕಳುಹಿಸಿತು.

ಅಂತಹ ಕೃತ್ಯಗಳ ಹಿಂದಿನ ತರ್ಕ:

  1. ತೈವಾನ್ ಮಾಡಿದ ಯಾವುದೋ ಕಾರ್ಯ ಅಥವಾ ಪ್ರಜಾಪ್ರಭುತ್ವ ಆಡಳಿತದ ದ್ವೀಪಕ್ಕೆ ಅಂತಾರಾಷ್ಟ್ರೀಯ ಬೆಂಬಲ, ಅದರಲ್ಲೂ ವಿಶೇಷವಾಗಿ ತೈವಾನ್‌ನ ಪ್ರಮುಖ ಶಸ್ತ್ರಾಸ್ತ್ರ ಪೂರೈಕೆದಾರದೇಶವಾದ ಅಮೇರಿಕಾ ನೀಡಿದ ಬೆಂಬಲಗಳಿಗೆ ಅಸಮಾಧಾನ ವ್ಯಕ್ತಪಡಿಸಲು ಚೀನಾ ಇಂತಹ ಕಾರ್ಯಾಚರಣೆಗಳನ್ನು ಮಾಡುತ್ತದೆ.
  2. ತನ್ನ ದೇಶದ ಸಾರ್ವಭೌಮತ್ವವನ್ನು ರಕ್ಷಿಸಲು ಮತ್ತು ತೈಪೆ ಮತ್ತು ವಾಷಿಂಗ್ಟನ್ ನಡುವಿನ “ಒಳಸಂಚು” ಗಳೊಂದಿಗೆ ವ್ಯವಹರಿಸಲು ಚೀನಾ ಈ ಕ್ರಮಗಳನ್ನು ಕೈಗೊಳ್ಳುತ್ತಿರುವುದಾಗಿ ವಿವರಿಸಿದೆ.

ತೈವಾನ್‌ನ ಸರ್ಕಾರವು ನಿಯಮಿತವಾಗಿ ಡೇಟಾವನ್ನು ಪ್ರಕಟಿಸಲು ಪ್ರಾರಂಭಿಸಿದಾಗಿನಿಂದ ಚೀನಾದ ಪೈಲಟ್‌ಗಳು ಕಳೆದ ಒಂದೂವರೆ ವರ್ಷಗಳಿಂದ ಬಹುತೇಕ ಪ್ರತಿದಿನ ತೈವಾನ್‌ ನ ವಾಯು ಗಡಿ ಪ್ರದೇಶದ ಮೇಲೆ ಯುದ್ಧ ವಿಮಾನಗಳನ್ನು ಹಾರಿಸುತ್ತಿದ್ದಾರೆ. ಕಳೆದ ಅಕ್ಟೋಬರ್ ನಲ್ಲಿ ಒಂದೇ ದಿನದಲ್ಲಿ ಚೀನಾದ 56 ಯುದ್ಧವಿಮಾನಗಳು ತೈವಾನ್‌ ನ ವಾಯು ಗಡಿ ಪ್ರದೇಶದ ಉಲ್ಲಂಘನೆಯನ್ನು ಮಾಡಿದ್ದವು, ಇದು ಇಲ್ಲಿಯವರೆಗಿನ ಅತಿ ದೊಡ್ಡ ಸೇನಾ ಒತ್ತಡವಾಗಿದೆ.

ಏನಿದು ವಿವಾದ?

ಪ್ರಜಾಸತ್ತಾತ್ಮಕ ದ್ವೀಪವಾದ ತೈವಾನ್ ಬಳಿ ತನ್ನ ಯುದ್ಧವಿಮಾನಗಳ ಪುನರಾವರ್ತಿತ ಕಾರ್ಯಾಚರಣೆಗಳನ್ನು ಒಳಗೊಂಡಂತೆ ಮಿಲಿಟರಿ ಒತ್ತಡವನ್ನು ಚೀನಾವು ಹೆಚ್ಚಿಸಿದೆ, ಅಲ್ಲದೆ ಬೀಜಿಂಗ್ ತೈವಾನ್ ಅನ್ನು ತನ್ನದೇ ಎಂದು ಹೇಳಿಕೊಳ್ಳುತ್ತದೆ ಮತ್ತು ಬಲಪ್ರಯೋಗದ ಮೂಲಕವಾದರೂ ಸರಿ ಅದನ್ನು ವಶಕ್ಕೆ ಪಡೆಯುವುದರಿಂದ ಹಿಂಜರಿಯುವುದಿಲ್ಲ ಎಂದು ಹೇಳಿದೆ.

ಇತ್ತೀಚಿನ ಬೆಳವಣಿಗೆಗಳು:

ತೈವಾನ್‌ಗೆ ಯುರೋಪಿಯನ್ ಪಾರ್ಲಿಮೆಂಟ್‌ನ ಮೊದಲ ಅಧಿಕೃತ ನಿಯೋಗವು ತೈವಾನ್‌ಗೆ ಬೆಂಬಲವಾಗಿ ಬಂದಿದೆ ಮತ್ತು ರಾಜತಾಂತ್ರಿಕವಾಗಿ ಪ್ರತ್ಯೇಕವಾಗಿರುವ ದ್ವೀಪವು ಏಕಾಂಗಿಯಾಗಿಲ್ಲ ಎಂದು ಹೇಳಿದೆ. ತೈಪೆಯು ಬೀಜಿಂಗ್‌ನಿಂದ ಹೆಚ್ಚಿನ ಒತ್ತಡವನ್ನು ಎದುರಿಸುತ್ತಿರುವ ಕಾರಣ EU-ತೈವಾನ್ ಸಂಬಂಧಗಳನ್ನು ಬಲಪಡಿಸಲು ದಿಟ್ಟ ಕ್ರಮಗಳನ್ನು ಕೈಗೊಳ್ಳಲು ಯುರೋಪಿಯನ್ ಪಾರ್ಲಿಮೆಂಟ್‌ನ ಮೊದಲ ಅಧಿಕೃತ ನಿಯೋಗವು ಕರೆ ನೀಡಿದೆ.

  1. ಸಣ್ಣ ವ್ಯಾಟಿಕನ್ ನಗರವನ್ನು ಹೊರತುಪಡಿಸಿ ಯುರೋಪಿಯನ್ ಒಕ್ಕೂಟದ ಯಾವುದೇ ಸದಸ್ಯ ರಾಷ್ಟ್ರಗಳೊಂದಿಗೆ ಔಪಚಾರಿಕ ರಾಜತಾಂತ್ರಿಕ ಸಂಬಂಧಗಳನ್ನು ಹೊಂದಿಲ್ಲದ ತೈವಾನ್, ಯುರೋಪಿಯನ್ ಒಕ್ಕೂಟದ ಸದಸ್ಯರೊಂದಿಗೆ ಸಂಬಂಧವನ್ನು ಗಾಢಗೊಳಿಸಲು ಉತ್ಸುಕವಾಗಿದೆ.

ಚೀನಾ ಮತ್ತು ತೈವಾನ್ ನಡುವಿನ ಇತ್ತೀಚಿನ ಘರ್ಷಣೆಗಳು:

ಏನಿದು ಪ್ರಕರಣ?

  1. ಚೀನಾ ತೈವಾನ್ ಮೇಲೆ ರಾಜತಾಂತ್ರಿಕ, ಆರ್ಥಿಕ ಮತ್ತು ಮಿಲಿಟರಿ ಒತ್ತಡವನ್ನು ಹೆಚ್ಚಿಸಿದೆ, ಆದರೆ ದ್ವೀಪರಾಷ್ಟ್ರದ ನಿವಾಸಿಗಳು ಚೀನಾ ಮುಖ್ಯ ಭೂಭಾಗದೊಂದಿಗೆ ರಾಜಕೀಯ ಏಕೀಕರಣಕ್ಕಾಗಿ ಬೀಜಿಂಗ್‌ನ ಬೇಡಿಕೆಯನ್ನು ಬಲವಾಗಿ ತಿರಸ್ಕರಿಸುತ್ತಾರೆ.
  2. ವಿಶ್ವಸಂಸ್ಥೆ ಮತ್ತು ಇತರ ಅಂತರಾಷ್ಟ್ರೀಯ ಸಂಸ್ಥೆಗಳಲ್ಲಿ ಭಾಗವಹಿಸದಂತೆ ಚೀನಾ ತೈವಾನ್ ಅನ್ನು ಬಹಳ ಹಿಂದಿನಿಂದಲೂ ನಿರ್ಬಂಧಿಸಿದೆ ಮತ್ತು 2016 ರಲ್ಲಿ ತೈವಾನ್ ಅಧ್ಯಕ್ಷರಾಗಿ ಸಾಯ್ ಇಂಗ್-ವೆನ್ (Tsai Ing-wen) ಆಯ್ಕೆಯಾದ ನಂತರ ಅಂತಹ ಒತ್ತಡವನ್ನು ಇನ್ನಷ್ಟು ಹೆಚ್ಚಿಸಿದೆ.
  3. ಚೀನಾ ಪ್ರಜಾಪ್ರಭುತ್ವ ತೈವಾನ್ ಅನ್ನು ತನ್ನ ಪ್ರತ್ಯೇಕ ಪ್ರಾಂತ್ಯವೆಂದು ನೋಡಿದರೆ, ತೈವಾನ್ ತನ್ನದೇ ಆದ ಸಂವಿಧಾನ ಮತ್ತು ಮಿಲಿಟರಿಯನ್ನು ಮತ್ತು ಚುನಾಯಿತ ನಾಯಕರನ್ನು ಹೊಂದಿರುವ ಸಾರ್ವಭೌಮ ರಾಷ್ಟ್ರವೆಂದು ಪರಿಗಣಿಸುತ್ತದೆ.

ಚೀನಾ- ತೈವಾನ್ ಸಂಬಂಧಗಳು-

ಹಿನ್ನೆಲೆ:

ಚೀನಾದ ಅಂತರ್ಯುದ್ಧದಲ್ಲಿ ಸೋಲಿಸಲ್ಪಟ್ಟ ರಾಷ್ಟ್ರೀಯವಾದಿಗಳನ್ನು 1949 ರಲ್ಲಿ  ತೈವಾನ್ ದ್ವೀಪಕ್ಕೆ ಒತ್ತಾಯಪೂರ್ವಕವಾಗಿ ಪಲಾಯನ ಮಾಡಿಸಿದಂದಿನಿಂದ ಚೀನಾ ತನ್ನ “ಒಂದು ಚೀನಾ” (One China) ನೀತಿಯ ಮೂಲಕ ತೈವಾನ್‌ ಮೇಲೆ ಹಕ್ಕು ಸಾಧಿಸುತ್ತಿದ್ದು, ಅಗತ್ಯವೆನಿಸಿದರೆ ಅದನ್ನು ಬಲಪ್ರಯೋಗದ ಮೂಲಕ ಬೀಜಿಂಗ್ ನ ಆಳ್ವಿಕೆಯ ಅಡಿಯಲ್ಲಿ ತರುವುದಾಗಿ ಶಪಥ ಮಾಡಿದೆ.

ಚೀನಾ ತೈವಾನ್‌ನ ಉನ್ನತ ವ್ಯಾಪಾರ ಪಾಲುದಾರನಾಗಿದ್ದು, 2018 ರಲ್ಲಿ ವ್ಯಾಪಾರವು $ 226 ಬಿಲಿಯನ್ ಆಗಿದೆ. ತೈವಾನ್ ಚೀನಾದೊಂದಿಗೆ ದೊಡ್ಡ ವ್ಯಾಪಾರ ಕೊರತೆಯನ್ನು ಹೊ೦ದಿದೆ.

  1. ತೈವಾನ್ ಸ್ವಯಂ ಆಡಳಿತ ಹೊಂದಿದೆ (Taiwan is self-governed) ಮತ್ತು ವಾಸ್ತವಿಕವಾಗಿ ಸ್ವತಂತ್ರವಾಗಿದ್ದರೂ, ಅದು ಎಂದಿಗೂ ಔಪಚಾರಿಕವಾಗಿ ಚೀನಾ -ಮುಖ್ಯ ಭೂಭಾಗದಿಂದ ಸ್ವಾತಂತ್ರ್ಯವನ್ನು ಘೋಷಿಸಿಕೊಂಡಿಲ್ಲ.
  2. “ಒಂದು ದೇಶ, ಎರಡು ಆಡಳಿತ ವ್ಯವಸ್ಥೆಗಳು” ಸೂತ್ರದಡಿಯಲ್ಲಿ, (one country, two systems) ತೈವಾನ್‌ಗೆ ತನ್ನದೇ ಆದ ಆಡಳಿತ ವ್ಯವಹಾರಗಳನ್ನು ನಡೆಸುವ ಹಕ್ಕಿದೆ; ಇದೇ ರೀತಿಯ ವ್ಯವಸ್ಥೆಯನ್ನು ಹಾಂಗ್ ಕಾಂಗ್‌ನಲ್ಲಿಯೂ ಬಳಸಲಾಗುತ್ತದೆ.
  3. ತೈವಾನ್ ವಿವಿಧ ಹೆಸರುಗಳಲ್ಲಿ ವಿಶ್ವ ವ್ಯಾಪಾರ ಸಂಘಟನೆ , ಏಷ್ಯಾ-ಪೆಸಿಫಿಕ್ ಆರ್ಥಿಕ ಸಹಕಾರ ಮತ್ತು ಏಷ್ಯನ್ ಅಭಿವೃದ್ಧಿ ಬ್ಯಾಂಕ್ ಗಳ ಸದಸ್ಯತ್ವ ವನ್ನು ಹೊಂದಿದೆ.

ಪ್ರಸ್ತುತ, ತೈವಾನ್ ಮೇಲೆ ಚೀನಾ ಹಕ್ಕು ಸಾಧಿಸುತ್ತಿದೆ, ಅಲ್ಲದೆ ಈ ಪ್ರಜಾಪ್ರಭುತ್ವವಾದಿ ತೈವಾನ್ ಅನ್ನು ಗುರುತಿಸುವ ದೇಶಗಳೊಂದಿಗೆ ರಾಜತಾಂತ್ರಿಕ ಸಂಬಂಧವನ್ನು ಚೀನಾ ನಿರಾಕರಿಸುತ್ತದೆ.

ಇಂಡೋ- ತೈವಾನ್ ಸಂಬಂಧಗಳು:

  1. ಎರಡೂ ದೇಶಗಳ ಮಧ್ಯೆ ಔಪಚಾರಿಕ ರಾಜತಾಂತ್ರಿಕ ಸಂಬಂಧಗಳಿಲ್ಲದಿದ್ದರೂ, ತೈವಾನ್ ಮತ್ತು ಭಾರತ ವಿವಿಧ ಕ್ಷೇತ್ರಗಳಲ್ಲಿ ಸಹಕರಿಸುತ್ತಿವೆ.
  2. 2010 ರಿಂದ “ಒಂದು-ಚೀನಾ” ನೀತಿಯನ್ನು ಅನುಮೋದಿಸಲು ಭಾರತ ನಿರಾಕರಿಸಿದೆ.

Current Affairs

 


ಸಾಮಾನ್ಯ ಅಧ್ಯಯನ ಪತ್ರಿಕೆ : 3


 

ವಿಷಯಗಳು: ನೇರ ಮತ್ತು ಪರೋಕ್ಷ ಕೃಷಿ ಸಬ್ಸಿಡಿಗಳು ಮತ್ತು ಕನಿಷ್ಠ ಬೆಂಬಲ ಬೆಲೆಗೆ ಸಂಬಂಧಿಸಿದ ವಿಷಯಗಳು; ಸಾರ್ವಜನಿಕ ವಿತರಣಾ ವ್ಯವಸ್ಥೆ – ಉದ್ದೇಶಗಳು, ಕಾರ್ಯಗಳು, ಮಿತಿಗಳು, ಸುಧಾರಣೆಗಳು; ಬಫರ್ ಸ್ಟಾಕ್ ಮತ್ತು ಆಹಾರ ಭದ್ರತೆಗೆ ಸಂಬಂಧಿಸಿದ ವಿಷಯಗಳು; ತಂತ್ರಜ್ಞಾನ ಮಿಷನ್; ಪಶುಸಂಗೋಪನೆಗೆ ಸಂಬಂಧಿಸಿದ ಅರ್ಥಶಾಸ್ತ್ರ.

ಆಹಾರ ಬಲವರ್ಧನೆ:


(Food fortification)

ಸಂದರ್ಭ:

ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ (FSSAI) ಆಹಾರ ಬಲವರ್ಧನೆ ಸಂಪನ್ಮೂಲ ಕೇಂದ್ರ (FFRC) ಒದಗಿಸಿದ ಮಾಹಿತಿಯ ಪ್ರಕಾರ, ಭಾರತದ ಜನಸಂಖ್ಯೆಯ 70% ಕ್ಕಿಂತ ಹೆಚ್ಚು ಜನರು ಶಿಫಾರಸು ಮಾಡಿದ ದೈನಂದಿನ ಸೇವನೆಯ ಅರ್ಧಕ್ಕಿಂತ ಕಡಿಮೆ ಸೂಕ್ಷ್ಮ ಪೋಷಕಾಂಶಗಳನ್ನು / ಮೈಕ್ರೋನ್ಯೂಟ್ರಿಯಂಟ್ ಗಳನ್ನು (micronutrients) ಸೇವಿಸುತ್ತಾರೆ.

ಇಂತಹ ಕೊರತೆಗಳು ಗ್ರಾಮೀಣ ಪ್ರದೇಶಗಳಲ್ಲಿನ ಮಹಿಳೆಯರು ಮತ್ತು ಮಕ್ಕಳಲ್ಲಿ ಮಾತ್ರ ಕಂಡುಬರುವುದಿಲ್ಲ, ಆದರೆ ನಗರ ಭಾರತದ ಜನಸಂಖ್ಯೆಯ ಗುಂಪುಗಳ ಮೇಲೂ ಪರಿಣಾಮ ಬೀರುತ್ತವೆ.

ಪೌಷ್ಟಿಕಾಂಶದ ಕೊರತೆಯನ್ನು ಹೋಗಲಾಡಿಸುವ ಕೀಲಿಕೈ:

ಜನಸಂಖ್ಯೆಯ ಒಂದು ವರ್ಗವು ಪೌಷ್ಟಿಕ ಆಹಾರದ ಸೀಮಿತ ಪ್ರವೇಶವನ್ನು ಹೊಂದಿರುವ ಕಾರಣ, ಪೌಷ್ಟಿಕಾಂಶದ ಕೊರತೆಯನ್ನು ಪರಿಹರಿಸಲು ‘ಬಲವರ್ಧನೆ’ಯು ನಿರ್ಣಾಯಕವಾಗಿದೆ.

  1. ದೇಶದಲ್ಲಿನ ರಕ್ತಹೀನತೆ ಮತ್ತು ಸೂಕ್ಷ್ಮ ಪೋಷಕಾಂಶಗಳ ಕೊರತೆಯನ್ನು ನೇರವಾಗಿ ಪರಿಹರಿಸುವ ಪ್ರಯತ್ನದ ಭಾಗವಾಗಿ ಕೇಂದ್ರ ಸರ್ಕಾರವು ಇತ್ತೀಚೆಗೆ “ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ ಅಕ್ಕಿಯ ಬಲವರ್ಧನೆ ಮತ್ತು ಅದರ ವಿತರಣೆ” (Fortification of Rice & its Distribution under Public Distribution System) ಕುರಿತು ಪ್ರಾಯೋಗಿಕ ಯೋಜನೆಯೊಂದನ್ನು ಅನುಮೋದಿಸಿದೆ.
  2. ಆಂಧ್ರಪ್ರದೇಶ, ಗುಜರಾತ್, ಮಹಾರಾಷ್ಟ್ರ, ತಮಿಳುನಾಡು, ಛತ್ತೀಸ್‌ಗಢ, ಉತ್ತರ ಪ್ರದೇಶ, ಒಡಿಶಾ, ತೆಲಂಗಾಣ, ಉತ್ತರಾಖಂಡ ಮತ್ತು ಮಧ್ಯಪ್ರದೇಶ ಸೇರಿದಂತೆ ಹಲವು ರಾಜ್ಯಗಳ ಸಹಯೋಗದಲ್ಲಿ ಕೇಂದ್ರ ಸರ್ಕಾರದ ಫುಡ್- ಫೋರ್ಟಿಫಿಕೇಷನ್ / ‘ಆಹಾರ ಬಲವರ್ಧನೆ’ ಉಪಕ್ರಮವನ್ನು ಈಗಾಗಲೇ ಪ್ರಾರಂಭಿಸಲಾಗಿದೆ ಮತ್ತು ಇದರ ಅಡಿಯಲ್ಲಿ ‘ಪೈಲಟ್ ಪ್ರೋಗ್ರಾಂ’ (ಪ್ರಯೋಗಿಕ ಕಾರ್ಯಕ್ರಮ) ಅಡಿಯಲ್ಲಿ ಬಲವರ್ಧಿತ ಅಕ್ಕಿ ವಿತರಣೆಯನ್ನು ಪ್ರಾರಂಭಿಸಲಾಗುತ್ತಿದೆ.
  3. ಪ್ರಮುಖ ಸೂಕ್ಷ್ಮ ಪೋಷಕಾಂಶಗಳೊಂದಿಗೆ ಪ್ರಮುಖ ಆಹಾರಗಳು ಮತ್ತು ಮಸಾಲೆಗಳ ಪುಷ್ಟೀಕರಣವು ಪೌಷ್ಟಿಕಾಂಶದ ಕೊರತೆಯನ್ನು ಪರಿಹರಿಸಲು ಇರುವ ಒಂದು ಪರಿಣಾಮಕಾರಿ ಮಾರ್ಗವಾಗಿದೆ.
  4. ‘ಫೋರ್ಟಿಫಿಕೇಶನ್ ಇನಿಶಿಯೇಟಿವ್’ ಅಥವಾ ಬಲವರ್ಧನೆ ಉಪಕ್ರಮದ ಭಾಗವಾಗಿ ಸಾಮಾಜಿಕ ಮತ್ತು ಪೌಷ್ಟಿಕಾಂಶದ ಭದ್ರತಾ ಕಾರ್ಯಕ್ರಮಗಳಲ್ಲಿ ಆಹಾರ ಬಲವರ್ಧನೆಯನ್ನು ಸಮಯೋಚಿತವಾಗಿ ಅಳವಡಿಸಿಕೊಳ್ಳುವುದು ಭಾರತದಲ್ಲಿನ ಅಪೌಷ್ಟಿಕತೆಯ ಸಮಸ್ಯೆಯನ್ನು ಪರಿಹರಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.

ಹಿನ್ನೆಲೆ:

2024 ರ ವೇಳೆಗೆ ಸಾರ್ವಜನಿಕ ವಿತರಣಾ ವ್ಯವಸ್ಥೆ (PDS) ಮತ್ತು ಮಧ್ಯಾಹ್ನದ ಊಟ ಸೇರಿದಂತೆ ಸರ್ಕಾರದ ವಿವಿಧ ಯೋಜನೆಗಳ ಅಡಿಯಲ್ಲಿ ಬಲವರ್ಧಿತ ಅಕ್ಕಿಯನ್ನು ವಿತರಿಸಲಾಗುವುದು.

ಅಕ್ಕಿ ಬಲವರ್ಧನೆಯ ಅಗತ್ಯತೆ:

  1. ದೇಶದಲ್ಲಿ ಮಹಿಳೆಯರು ಮತ್ತು ಮಕ್ಕಳಲ್ಲಿ ಹೆಚ್ಚಿನ ಪ್ರಮಾಣದ ಅಪೌಷ್ಟಿಕತೆ ಇರುವುದರಿಂದ ಈ ಘೋಷಣೆ ಮಹತ್ವದ್ದಾಗಿದೆ.
  2. ಆಹಾರ ಸಚಿವಾಲಯದ ಪ್ರಕಾರ, ದೇಶದ ಪ್ರತಿ ಎರಡನೇ ಮಹಿಳೆ ರಕ್ತಹೀನತೆಯಿಂದ ಬಳಲುತ್ತಿದ್ದರೆ ಮತ್ತು ದೇಶದ ಪ್ರತಿ ಮೂರನೇ ಮಗು ಕುಂಠಿತ ಬೆಳವಣಿಗೆಯನ್ನು ಹೊಂದಿದೆ.
  3. ಭಾರತವು ಜಾಗತಿಕ ಹಸಿವು ಸೂಚ್ಯಂಕದ ಪಟ್ಟಿಯಲ್ಲಿನ 107 ದೇಶಗಳ ಪೈಕಿ 94 ನೇ ಸ್ಥಾನದಲ್ಲಿದೆ ಮತ್ತು ಜಾಗತಿಕ ಹಸಿವು ಸೂಚ್ಯಂಕದ (Global Hunger Index (GHI) ‘ಗಂಭೀರ ಹಸಿವು’ ವಿಭಾಗದಲ್ಲಿ ಸ್ಥಾನ ಪಡೆದಿದೆ.
  4. ಬಡ ಮಹಿಳೆಯರು ಮತ್ತು ಬಡ ಮಕ್ಕಳಲ್ಲಿ ಅಪೌಷ್ಟಿಕತೆ ಮತ್ತು ಅಗತ್ಯ ಪೋಷಕಾಂಶಗಳ ಕೊರತೆಯು ಅವರ ಬೆಳವಣಿಗೆಯಲ್ಲಿ ಪ್ರಮುಖ ಅಡೆತಡೆಗಳನ್ನು ಉಂಟುಮಾಡುತ್ತದೆ.

ಆಹಾರ ಬಲವರ್ಧನೆ/ ಫುಡ್- ಫೋರ್ಟಿಫಿಕೇಷನ್ ಎಂದರೇನು?

ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ, ಆಹಾರ ಪೂರೈಕೆಯ ಪೌಷ್ಠಿಕಾಂಶದ ಗುಣಮಟ್ಟವನ್ನು ಸುಧಾರಿಸಲು ಅಗತ್ಯವಾದ ಸೂಕ್ಷ್ಮ ಪೋಷಕಾಂಶಗಳ ಪ್ರಮಾಣ ಅಂದರೆ ಜೀವಸತ್ವಗಳು ಮತ್ತು ಖನಿಜಗಳು ಅದರಲ್ಲಿ ಎಚ್ಚರಿಕೆಯಿಂದ ಸಾರ್ವಜನಿಕ ಆರೋಗ್ಯಕ್ಕೆ ಕನಿಷ್ಠ ಅಪಾಯದೊಂದಿಗೆ ಹೆಚ್ಚಿಸುವುದಾಗಿದೆ. ಇದರ ಉದ್ದೇಶವು ಸರಬರಾಜು ಮಾಡಿದ ಆಹಾರ ಧಾನ್ಯಗಳ ಪೌಷ್ಟಿಕಾಂಶದ ಗುಣಮಟ್ಟವನ್ನು ಸುಧಾರಿಸುವುದು ಮತ್ತು ಕನಿಷ್ಠ ಅಪಾಯದೊಂದಿಗೆ ಸಾರ್ವಜನಿಕರಿಗೆ ಆರೋಗ್ಯ ಪ್ರಯೋಜನಗಳನ್ನು ಒದಗಿಸುವುದು.

ಸರಬರಾಜು ಮಾಡಿದ ಆಹಾರ ಧಾನ್ಯಗಳ ಪೌಷ್ಟಿಕಾಂಶದ ಗುಣಮಟ್ಟವನ್ನು ಸುಧಾರಿಸುವುದು ಮತ್ತು ಗ್ರಾಹಕರಿಗೆ ಕನಿಷ್ಠ ಅಪಾಯದೊಂದಿಗೆ ಆರೋಗ್ಯ ಪ್ರಯೋಜನಗಳನ್ನು ಒದಗಿಸುವುದು ಇದರ ಉದ್ದೇಶವಾಗಿದೆ.

ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ವು, ದೇಶದಲ್ಲಿ ಆಹಾರ ಪದಾರ್ಥಗಳಿಗೆ ಮಾನದಂಡಗಳನ್ನು ಹೊಂದಿಸುತ್ತದೆ, ಹಾಗೂ ಆಹಾರದ ಬಲವರ್ಧನೆಯನ್ನು ವ್ಯಾಖ್ಯಾನಿಸುತ್ತದೆ. FSSAI ಪ್ರಕಾರ, ಆಹಾರ ಬಲವರ್ಧನೆ ಎಂದರೆ,  “ಆಹಾರದಲ್ಲಿ ಅಗತ್ಯವಾದ ಸೂಕ್ಷ್ಮ ಪೋಷಕಾಂಶಗಳ ಅಂಶವನ್ನು ಉದ್ದೇಶಪೂರ್ವಕವಾಗಿ ಹೆಚ್ಚಿಸುವ ಮೂಲಕ ಆಹಾರದ ಪೌಷ್ಟಿಕಾಂಶದ ಗುಣಮಟ್ಟವನ್ನು ಸುಧಾರಿಸಲು ಮತ್ತು ಸಾರ್ವಜನಿಕ ಆರೋಗ್ಯಕ್ಕೆ ಕನಿಷ್ಠ ಅಪಾಯದೊಂದಿಗೆ ಆರೋಗ್ಯ ಪ್ರಯೋಜನವನ್ನು ಒದಗಿಸುವುದಾಗಿದೆ”.

ಆಹಾರಕ್ರಮವನ್ನು ಸುಧಾರಿಸಲು ಮತ್ತು ಸೂಕ್ಷ್ಮ ಪೋಷಕಾಂಶಗಳ ಕೊರತೆಯನ್ನು ತಡೆಗಟ್ಟಲು ಇದು ಸಾಬೀತಾದ, ಸುರಕ್ಷಿತ ಮತ್ತು ವೆಚ್ಚ-ಪರಿಣಾಮಕಾರಿ ತಂತ್ರವಾಗಿದೆ.

ಬಲವರ್ಧಿತ ಅಕ್ಕಿ:

(Fortified rice)

ಆಹಾರ ಸಚಿವಾಲಯದ ಪ್ರಕಾರ, ಆಹಾರದಲ್ಲಿ ವಿಟಮಿನ್ ಮತ್ತು ಖನಿಜಾಂಶವನ್ನು ಹೆಚ್ಚಿಸಲು ಅಕ್ಕಿಯ ಬಲವರ್ಧನೆಯು ವೆಚ್ಚ-ಪರಿಣಾಮಕಾರಿ ಮತ್ತು ಪೂರಕ ತಂತ್ರವಾಗಿದೆ.

  1. FSSAI ಮಾನದಂಡಗಳ ಪ್ರಕಾರ, 1 ಕೆಜಿ ಬಲವರ್ಧಿತ ಅಕ್ಕಿಯಲ್ಲಿ ಕಬ್ಬಿಣ (28 ಮಿಗ್ರಾಂ -42.5 ಮಿಗ್ರಾಂ), ಫೋಲಿಕ್ ಆಮ್ಲ (75-125 ಮೈಕ್ರೋಗ್ರಾಮ್) ಮತ್ತು ವಿಟಮಿನ್ ಬಿ -12 (0.75-1.25 ಮೈಕ್ರೋಗ್ರಾಮ್) ಇರುತ್ತದೆ.
  2. ಇದರ ಜೊತೆಯಲ್ಲಿ, ಅಕ್ಕಿಯನ್ನು ಮೈಕ್ರೋನ್ಯೂಟ್ರಿಯಂಟ್‌ಗಳೊಂದಿಗೆ, ಅಕ್ಕಿಯನ್ನು ಪ್ರತ್ಯೇಕವಾಗಿ ಅಥವಾ ಸಂಯೋಜನೆಯಲ್ಲಿ ಬಲ ವರ್ಧಿಸಬಹುದು. ಪ್ರತಿ ಕೆಜಿ ಅಕ್ಕಿಗೆ ಸತು (10 ಮಿಗ್ರಾಂ -15 ಮಿಗ್ರಾಂ), ವಿಟಮಿನ್ ಎ (500-750 ಮೈಕ್ರೋಗ್ರಾಮ್ RE), ವಿಟಮಿನ್ ಬಿ 1 (1 ಮಿಗ್ರಾಂ -1.5 ಮಿಗ್ರಾಂ), ವಿಟಮಿನ್ ಬಿ 2 (1.25 mg-1.75 mg), ವಿಟಮಿನ್ B3 (12.5 mg-20 mg) ಮತ್ತು ವಿಟಮಿನ್ B6 (1.5 mg-2.5 mg) ಪ್ರಮಾಣದಲ್ಲಿ ಬರೆಸುವ ಮೂರಕ ಬಲ ವರ್ಧಿಸಬಹುದು.

‘ಆಹಾರ ಬಲವರ್ಧನೆಯ’ ಪ್ರಯೋಜನಗಳು:

ವ್ಯಾಪಕವಾಗಿ ಸೇವಿಸುವ ಪ್ರಧಾನ ಆಹಾರಗಳಿಗೆ ಪೋಷಕಾಂಶಗಳನ್ನು ಸೇರಿಸುವುದನ್ನು ‘ಆಹಾರ ಬಲವರ್ಧನೆ’ಯು ಒಳಗೊಂಡಿರುವುದರಿಂದ, ಜನಸಂಖ್ಯೆಯ ದೊಡ್ಡ ಭಾಗದ ಆರೋಗ್ಯವನ್ನು ಸುಧಾರಿಸಲು ಇದು ಅತ್ಯುತ್ತಮ ಮಾರ್ಗವಾಗಿದೆ.

  1. ‘ಫೋರ್ಟಿಫಿಕೇಶನ್’ ಎನ್ನುವುದು ವ್ಯಕ್ತಿಗಳಲ್ಲಿ ಪೌಷ್ಟಿಕಾಂಶವನ್ನು ಸುಧಾರಿಸಲು ಒಂದು ಸುರಕ್ಷಿತ ಮಾರ್ಗವಾಗಿದೆ ಮತ್ತು ಆಹಾರಕ್ಕೆ ಸೂಕ್ಷ್ಮ ಪೋಷಕಾಂಶಗಳನ್ನು ಸೇರಿಸುವುದರಿಂದ ಜನರ ಆರೋಗ್ಯಕ್ಕೆ ಯಾವುದೇ ಅಪಾಯವಿಲ್ಲ.
  2. ಈ ವಿಧಾನವು ಜನರ ಆಹಾರ ಪದ್ಧತಿ ಮತ್ತು ಮಾದರಿಗಳಲ್ಲಿ ಯಾವುದೇ ಬದಲಾವಣೆಯ ಅಗತ್ಯವಿಲ್ಲ ಮತ್ತು ಇದು ಜನರಿಗೆ ಪೌಷ್ಟಿಕಾಂಶಗಳನ್ನು ತಲುಪಿಸಲು ಸಾಮಾಜಿಕ-ಸಾಂಸ್ಕೃತಿಕವಾಗಿ ಸ್ವೀಕಾರಾರ್ಹ ಮಾರ್ಗವಾಗಿದೆ.
  3. ‘ಆಹಾರ ಬಲವರ್ಧನೆ’ ಆಹಾರದ ಗುಣಲಕ್ಷಣಗಳನ್ನು ಬದಲಿಸುವುದಿಲ್ಲ – ರುಚಿ, ಭಾವನೆ, ನೋಟ.
  4. ಇದನ್ನು ತ್ವರಿತವಾಗಿ ಅನ್ವಯಿಸಬಹುದು ಹಾಗೂ ತುಲನಾತ್ಮಕವಾಗಿ ಆರೋಗ್ಯ ಸುಧಾರಣೆಯ ಫಲಿತಾಂಶಗಳನ್ನು ಕಡಿಮೆ ಅವಧಿಯಲ್ಲಿ ತೋರಿಸಬಹುದು.
  5. ಈಗಿರುವ ತಂತ್ರಜ್ಞಾನ ಮತ್ತು ವಿತರಣಾ ವೇದಿಕೆಯನ್ನು ಸದುಪಯೋಗಪಡಿಸಿಕೊಂಡರೆ ಇದು ಅತ್ಯಂತ ವೆಚ್ಚ-ಪರಿಣಾಮಕಾರಿ ವಿಧಾನವೆಂದು ಸಾಬೀತುಪಡಿಸಬಹುದು.

‘ಆಹಾರ ಬಲವರ್ಧನೆ’ಗೆ ಸಂಬಂಧಿಸಿದ ಸಮಸ್ಯೆಗಳು:

  1. ಪ್ರಸ್ತುತ, ‘ಆಹಾರ ಬಲವರ್ಧನೆ’ಯನ್ನು ಬೆಂಬಲಿಸುವ ಪುರಾವೆಗಳು ಅಪೂರ್ಣವಾಗಿವೆ ಮತ್ತು ಮಹತ್ವದ ರಾಷ್ಟ್ರೀಯ ನೀತಿಯನ್ನು ಕಾರ್ಯಗತಗೊಳಿಸಲು ಖಂಡಿತವಾಗಿಯೂ ಸಾಕಾಗುವುದಿಲ್ಲ.
  2. ‘ಆಹಾರ ಬಲವರ್ಧನೆ’ಯನ್ನು ಉತ್ತೇಜಿಸಲು,’ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ‘(Food Safety and Standards Authority of India – FSSAI) ವು ಹಲವು ಅಧ್ಯಯನ-ವರದಿಗಳನ್ನು ಉಲ್ಲೇಖಿಸುತ್ತದೆ, ಆ ಹೆಚ್ಚಿನ ಅಧ್ಯಯನಗಳನ್ನು ‘ಆಹಾರ ಕಂಪನಿಗಳು’ ಪ್ರಾಯೋಜಿಸಿವೆ, ಅವು ‘ಆಹಾರ ಬಲವರ್ಧನೆಯಿಂದ’ ಪ್ರಯೋಜನ ಪಡೆಯುತ್ತವೆ ಮುಂದೆ ಇದು ಹಿತಾಸಕ್ತಿ ಸಂಘರ್ಷಗಳಿಗೆ ಕಾರಣವಾಗುತ್ತದೆ.
  3. ‘ಆಹಾರ ಬಲವರ್ಧನೆ’ಗೆ ಈ ಆದೇಶವು ಭಾರತೀಯ ರೈತರು ಮತ್ತು ಸ್ಥಳೀಯ ತೈಲ ಮತ್ತು ಅಕ್ಕಿ ಗಿರಣಿಗಳು ಸೇರಿದಂತೆ ಆಹಾರ ಸಂಸ್ಕಾರಕಗಳ ವಿಶಾಲ ಅನೌಪಚಾರಿಕ ಆರ್ಥಿಕತೆಗೆ ಹಾನಿ ಮಾಡುತ್ತದೆ ಮತ್ತು ಬಹುರಾಷ್ಟ್ರೀಯ ಕಂಪನಿಗಳ ಒಂದು ಸಣ್ಣ ಗುಂಪು ಮಾತ್ರ ಪ್ರಯೋಜನ ಪಡೆಯುತ್ತದೆ.
  4. ಅಲ್ಲದೆ, ಆಹಾರಗಳ ರಾಸಾಯನಿಕ ಬಲವರ್ಧನೆಯ ಒಂದು ಪ್ರಮುಖ ಸಮಸ್ಯೆ ಎಂದರೆ ಪೋಷಕಾಂಶಗಳು ಪ್ರತ್ಯೇಕವಾಗಿ ಕಾರ್ಯನಿರ್ವಹಿಸುವುದಿಲ್ಲ, ಆದರೆ ಅವು ಅತ್ಯುತ್ತಮವಾದ ಹೀರಿಕೊಳ್ಳುವಿಕೆಗೆ ಪರಸ್ಪರ ಒಟ್ಟಾಗಿರಬೇಕು.

ಅವಶ್ಯಕತೆ:

ಭಾರತದಲ್ಲಿ ಅಪೌಷ್ಟಿಕತೆಗೆ ಒಂದು ಕಾರಣವೆಂದರೆ, ಇಲ್ಲಿನ ಜನರು ಯಾವಾಗಲೂ ಒಂದೇ ರೀತಿಯ ಏಕದಳ ಧಾನ್ಯ ಆಧಾರಿತ ಆಹಾರವನ್ನು ಮತ್ತು, ಕಡಿಮೆ ತರಕಾರಿ ಮತ್ತು ಪ್ರಾಣಿ ಜನ್ಯ ಉತ್ಪನ್ನಗಳಲ್ಲಿನ ಪ್ರೋಟೀನ್‌ಗಳನ್ನು ಸೇವಿಸುವುದಾಗಿದೆ. ಆದ್ದರಿಂದ, ಆಹಾರವನ್ನು ಬಲಪಡಿಸುವ ಬದಲು, ‘ಆಹಾರದಲ್ಲಿ ವೈವಿಧ್ಯತೆ’ ಯನ್ನು ತರುವುದು ಅಪೌಷ್ಟಿಕತೆಯ ವಿರುದ್ಧ ಹೋರಾಡಲು ಇರುವ ಹೆಚ್ಚು ಆರೋಗ್ಯಕರ ಮತ್ತು ವೆಚ್ಚ-ಪರಿಣಾಮಕಾರಿ ಮಾರ್ಗವಾಗಿದೆ.

 


ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ಸಂಗತಿಗಳು:


INC ಯ G23 ಎಂದರೇನು?

ಇದು 23 ಹಿರಿಯ ಕಾಂಗ್ರೆಸ್ ನಾಯಕರ ಗುಂಪಾಗಿದೆ. ಚುನಾವಣೆಯಲ್ಲಿ ಸತತ ಸೋಲುಗಳ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಸಂಘಟನಾ ಸುಧಾರಣೆಗಾಗಿ ಆಗ್ರಹಿಸುತ್ತಿದ್ದಾರೆ.

  1. ಇದರಲ್ಲಿ ಗುಲಾಂ ನಬಿ ಆಜಾದ್, ಕಪಿಲ್ ಸಿಬಲ್, ಶಶಿ ತರೂರ್, ಮನೀಶ್ ತಿವಾರಿ ಮುಂತಾದ ಪ್ರಮುಖ ನಾಯಕರು ಇದ್ದಾರೆ. ಅವರಲ್ಲಿ ಹಲವರು ಕೇಂದ್ರ ಸಚಿವರು, ಮುಖ್ಯಮಂತ್ರಿಗಳು ಅಥವಾ ಪಕ್ಷದ ರಾಜ್ಯ ಘಟಕದ ಮುಖ್ಯಸ್ಥರಾಗಿದ್ದವರು.

ಸುಧಾರಣೆಗಳಿಗೆ ಬೇಡಿಕೆ:

2014ರ ಲೋಕಸಭೆ ಚುನಾವಣೆಯ ಸೋಲಿನೊಂದಿಗೆ ಕಾಂಗ್ರೆಸ್ ಪಕ್ಷದ ಚುನಾವಣಾ ಪತನ ಆರಂಭವಾಯಿತು. ಕೆಲವು ರಾಜ್ಯಗಳನ್ನು ಹೊರತುಪಡಿಸಿ, ಹಳೆಯ ಪಕ್ಷದ ಬೆಂಬಲದ ನೆಲೆಯು ದೇಶಾದ್ಯಂತ ದುರ್ಬಲಗೊಳ್ಳಲು ಪ್ರಾರಂಭಿಸಿತು, ಆಂತರಿಕವಾಗಿ ಕಾಂಗ್ರೆಸ್‌ನಲ್ಲಿ ಸುಧಾರಣೆಯ ಅಗತ್ಯತೆಯ ಬಗ್ಗೆ  ಪಿಸುಮಾತುಗಳನ್ನು ಪ್ರೇರೇಪಿಸಿತು.

Current Affairs 

 

 

ಪ್ರಮಾಣವಚನ ಸ್ವೀಕರಿಸಿದ ಪಾಕಿಸ್ತಾನದ ಮೊದಲ ಮಹಿಳಾ ಸುಪ್ರೀಂ ಕೋರ್ಟ್ ಜಡ್ಜ್:

  1. ಇತ್ತೀಚೆಗೆ, ಪಾಕಿಸ್ತಾನದ ಮೊದಲ ಮಹಿಳಾ ಸುಪ್ರೀಂ ಕೋರ್ಟ್ ನ್ಯಾಯಾಧೀಶರು ರಾಜಧಾನಿ ಇಸ್ಲಾಮಾಬಾದ್‌ನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
  2. 55ರ ಹರೆಯದ ಆಯೇಶಾ ಮಲಿಕ್ ಈಗ ಮುಸ್ಲಿಂ ಬಾಹುಳ್ಯದ ದೇಶದ ಉನ್ನತ ನ್ಯಾಯಾಲಯದಲ್ಲಿ 16 ಇತರ ಪುರುಷ ಸಹೋದ್ಯೋಗಿಗಳೊಂದಿಗೆ ಸೇವೆ ಸಲ್ಲಿಸಲಿದ್ದಾರೆ.
  3. ವಕೀಲರು ಮತ್ತು ಕಾರ್ಯಕರ್ತರು ಇದು ಪಾಕಿಸ್ತಾನದ ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರ ಪ್ರಾತಿನಿಧ್ಯಕ್ಕಾಗಿ ದಶಕಗಳ ಹೋರಾಟದ ನಂತರ ದಕ್ಕಿದ ಅಪರೂಪದ ಗೆಲುವು ಎಂದು ಕರೆದಿದ್ದಾರೆ.

ಇಲ್ಲಿಯವರೆಗೆ, ಹ್ಯೂಮನ್ ರೈಟ್ಸ್ ವಾಚ್ ಪ್ರಕಾರ, ಇದುವರೆಗೆ ಮಹಿಳಾ ಸುಪ್ರೀಂ ಕೋರ್ಟ್ ನ್ಯಾಯಾಧೀಶರನ್ನು ಹೊಂದಿರದ ಏಕೈಕ ದಕ್ಷಿಣ ಏಷ್ಯಾದ ದೇಶವಾಗಿದೆ ಪಾಕಿಸ್ತಾನ. ಇದಲ್ಲದೆ, ಪಾಕಿಸ್ತಾನದ ಹೈಕೋರ್ಟ್‌ ಗಳಲ್ಲಿನ ಒಟ್ಟು ನ್ಯಾಯಾಧೀಶರಲ್ಲಿ ಮಹಿಳಾ ನ್ಯಾಯಾಧೀಶರ ಪ್ರಮಾಣ ಕೇವಲ 4% ಮಾತ್ರ.

CUrrent Affairs

ಐಸಿಸಿ ವರ್ಷದ ಮಹಿಳಾ ಕ್ರಿಕೆಟ್ ಆಟಗಾರ್ತಿ ಪ್ರಶಸ್ತಿಗೆ ಭಾಜನರಾದ ಸ್ಮೃತಿ ಮಂಧಾನ:

  1. ಭಾರತ ಮಹಿಳಾ ಕ್ರಿಕೆಟ್ ತಂಡದ ಅಬ್ಬರದ ಆರಂಭಿಕ ಬ್ಯಾಟರ್ ಸ್ಮೃತಿ ಮಂಧಾನ ಅವರು 2021 ರಲ್ಲಿ ಐಸಿಸಿ ವರ್ಷದ ಮಹಿಳಾ ಕ್ರಿಕೆಟ್ ಆಟಗಾರ್ತಿ ಎಂದು ಹೆಸರಿಸಲ್ಪಟ್ಟಿದ್ದಾರೆ. 2021 ರಲ್ಲಿ ಅವರು ಕ್ರಿಕೆಟ್ನ ಎಲ್ಲಾ ಫಾರ್ಮೆಟ್ ಗಳಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ್ದಾರೆ.
  2. ಇದರ ಜೊತೆಗೆ ಇಂಗ್ಲೆಂಡ್‌ನ ಟಮ್ಮಿ ಬ್ಯೂಮಾಂಟ್, ದಕ್ಷಿಣ ಆಫ್ರಿಕಾದ ಲಿಸೆಲ್ ಲೀ ಮತ್ತು ಐರ್ಲೆಂಡ್‌ನ ಗೇಬಿ ಲೂಯಿಸ್ ಅವರೊಂದಿಗೆ ಮಂಧಾನಾ ರಾಚೆಲ್ ಹೇಹೋ ಫ್ಲಿಂಟ್ ಟ್ರೋಫಿಗೆ ಆಯ್ಕೆಯಾಗಿದ್ದಾರೆ.

  • Join our Official Telegram Channel HERE for Motivation and Fast Updates
  • Subscribe to our YouTube Channel HERE to watch Motivational and New analysis videos

[ad_2]

Leave a Comment