[Mission 2022] ದೈನಂದಿನ ಪ್ರಚಲಿತ ಘಟನೆಗಳು ದಿನಾಂಕ – 20ನೇ ಡಿಸೆಂಬರ್ 2021 – INSIGHTSIAS

[ad_1]

 

 

ಪರಿವಿಡಿ:

 ಸಾಮಾನ್ಯ ಅಧ್ಯಯನ ಪತ್ರಿಕೆ 1:

1. ಗೋವಾ ವಿಮೋಚನಾ ದಿನ.

 

ಸಾಮಾನ್ಯ ಅಧ್ಯಯನ ಪತ್ರಿಕೆ 2:

1. ಲಿಂಚಿಂಗ್/ಗುಂಪು ಹತ್ಯೆ ತಡೆ ಕುರಿತ ಮಸೂದೆಯ ಅಗತ್ಯತೆ.

2. ಆಧಾರ್ ಕಾರ್ಡ್ ನೊಂದಿಗೆ ಮತದಾರರ ಚೀಟಿ ಜೋಡಿಸುವ ಕುರಿತ ಮಸೂದೆ.

3. ಪೋಶನ್ ಟ್ರ್ಯಾಕರ್.

4. ಪಾರ್ವೊವೈರಸ್ ಎಂದರೇನು?

5. ಕರ್ನಾಟಕದ ಮತಾಂತರ ವಿರೋಧಿ ಕರಡು ಮಸೂದೆ.

6. ಇಸ್ಲಾಮಿಕ್ ಸಹಕಾರ ಸಂಘಟನೆ.

 

ಸಾಮಾನ್ಯ ಅಧ್ಯಯನ ಪತ್ರಿಕೆ 3:

1. ನ್ಯಾ.ಲೋಕೂರ್ ಆಯೋಗ.

 


ಸಾಮಾನ್ಯ ಅಧ್ಯಯನ ಪತ್ರಿಕೆ : 1


 

ವಿಷಯಗಳು: ಸ್ವಾತಂತ್ರ್ಯ ನಂತರದ ಬಲವರ್ಧನೆ.

ಗೋವಾ ವಿಮೋಚನಾ ದಿನ:


(Goa Liberation Day)

ಸಂದರ್ಭ:

ಡಿಸೆಂಬರ್ 19, 2021 ರಂದು, ಪೋರ್ಚುಗೀಸ್ ವಸಾಹತುಶಾಹಿ ಆಳ್ವಿಕೆಯಿಂದ ಗೋವಾವನ್ನು ವಿಮೋಚನೆಗೊಳಿಸಿದ ಭಾರತೀಯ ಸಶಸ್ತ್ರ ಪಡೆಗಳ ಸ್ಮರಣಾರ್ಥವಾಗಿ 60 ನೇ ಗೋವಾ ವಿಮೋಚನಾ ದಿನ’ (Goa Liberation Day) ವನ್ನು ಆಚರಿಸಲಾಯಿತು.

ಭಾರತೀಯ ಇತಿಹಾಸದಲ್ಲಿ ಈ ಘಟನೆಯ ಮಹತ್ವ:

ಭಾರತವು 1947 ರಲ್ಲಿ ಬ್ರಿಟಿಷ್ ಆಳ್ವಿಕೆಯಿಂದ ಸ್ವಾತಂತ್ರ್ಯವನ್ನು ಪಡೆದಿದ್ದರೂ, ಗೋವಾವನ್ನು – ಪೋರ್ಚುಗೀಸ್ ವಸಾಹತು – ವಿದೇಶಿ ನಿಯಂತ್ರಣದಿಂದ ಮುಕ್ತಗೊಳಿಸಲು ಇನ್ನೂ 14 ವರ್ಷಗಳನ್ನು ತೆಗೆದುಕೊಂಡಿತು.

ಅಂತಿಮವಾಗಿ, 19 ಡಿಸೆಂಬರ್ 1961 ರಂದು, ಭಾರತೀಯ ಸಶಸ್ತ್ರ ಪಡೆಗಳು, ಸುಮಾರು 450 ವರ್ಷಗಳ ವಸಾಹತುಶಾಹಿ ಆಳ್ವಿಕೆಯನ್ನು ಕೊನೆಗೊಳಿಸುವ ಮೂಲಕ ಪೋರ್ಚುಗೀಸರಿಂದ ಗೋವಾದ ಮೇಲೆ ತಮ್ಮ ನಿಯಂತ್ರಣವನ್ನು ಮರಳಿ ಪಡೆದರು.

ಆಪರೇಷನ್ ವಿಜಯ್ ಕುರಿತು:

ಪೋರ್ಚುಗೀಸರು, ಭಾರತದಲ್ಲಿ ತಮ್ಮ ವಸಾಹತುಗಳನ್ನು ಸ್ಥಾಪಿಸಿದ ಮೊದಲ ವಸಾಹತುಶಾಹಿ ಆಡಳಿತಗಾರರಾಗಿದ್ದಾರೆ ಮತ್ತು ದೇಶವನ್ನು ತೊರೆದ ಕೊನೆಯ ವಸಾಹತುಶಾಹಿಗಳೂ ಸಹ ಆಗಿದ್ದಾರೆ.

ಪೋರ್ಚುಗೀಸರು 1510 ರಲ್ಲಿ ಗೋವಾವನ್ನು ವಶಪಡಿಸಿಕೊಂಡರು.

  1. ಅಂದಿನ ಪ್ರಧಾನಿ ಜವಾಹರಲಾಲ್ ನೆಹರು ಅವರು ಭಾರತೀಯ ಸಶಸ್ತ್ರ ಪಡೆಗಳಿಗೆ ಗೋವಾದ ಮೇಲೆ ದಾಳಿ ನಡೆಸಲು ಆದೇಶಿಸಿದ ನಂತರ 17 ಡಿಸೆಂಬರ್ 1961 ರಂದು ಆಪರೇಷನ್ ವಿಜಯ್ (Operation Vijay) ಅನ್ನು ಪ್ರಾರಂಭಿಸಲಾಯಿತು. ಈ ಅಭಿಯಾನದ ಭಾಗವಾಗಿ, ಸುಮಾರು 30,000 ಭಾರತೀಯ ಸೈನಿಕರು ಯಾವುದೇ ರೀತಿಯ ಯುದ್ಧಸನ್ನದ್ಧತೆ ಹೊಂದಿರದ 3,000 ಪೋರ್ಚುಗೀಸ್ ಸೈನಿಕರನ್ನು ಸುಲಭವಾಗಿ ಸೋಲಿಸಿ ಗೋವಾದ ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸಿದರು.
  2. ಕನಿಷ್ಠ ರಕ್ತಪಾತದೊಂದಿಗೆ, ಭಾರತೀಯ ಸೇನೆಯ ಕಾರ್ಯಾಚರಣೆಯು ಯಶಸ್ವಿಯಾಯಿತು ಮತ್ತು ಪೋರ್ಚುಗೀಸ್ ನಿಯಂತ್ರಣದಲ್ಲಿರುವ ಇತರ ಭಾರತೀಯ ಪ್ರದೇಶಗಳಾದ ದಮನ್ ಮತ್ತು ದಿಯುವನ್ನು ಸ್ವಾಧೀನಪಡಿಸಿಕೊಳ್ಳಲು ಕಾರ್ಯಾಚರಣೆಯನ್ನು ಮುಂದುವರೆಸಲಾಯಿತು.
  3. ಏತನ್ಮಧ್ಯೆ, ಡಿಸೆಂಬರ್ 18 ರಂದು, ಪೋರ್ಚುಗೀಸ್ ಗವರ್ನರ್ ಜನರಲ್ ವಸ್ಸಲೋ ಡಾ ಸಿಲ್ವಾ’ (Vassalo da Silva) ಕೇಂದ್ರಾಡಳಿತ ಪ್ರದೇಶಗಳಾದ ಗೋವಾ, ದಮನ್ ಮತ್ತು ದಿಯು ಮೇಲಿನ ತನ್ನ ನಿಯಂತ್ರಣವನ್ನು ತ್ಯಜಿಸಿದರು.

 


ಸಾಮಾನ್ಯ ಅಧ್ಯಯನ ಪತ್ರಿಕೆ : 2


 

ವಿಷಯಗಳು: ಸರ್ಕಾರದ ನೀತಿಗಳು ಮತ್ತು ವಿವಿಧ ಕ್ಷೇತ್ರಗಳಲ್ಲಿನ ಅಭಿವೃದ್ಧಿಯ ಅಡಚಣೆಗಳು ಮತ್ತು ಅವುಗಳ ವಿನ್ಯಾಸ ಮತ್ತು ಅನುಷ್ಠಾನದಿಂದ ಉಂಟಾಗುವ ಸಮಸ್ಯೆಗಳು.

ಲಿಂಚಿಂಗ್/ಗುಂಪು ಹತ್ಯೆ ತಡೆ ಕುರಿತ ಮಸೂದೆಯ ಅಗತ್ಯತೆ:


(Need for a Bill on lynching)

ಸಂದರ್ಭ:

ಡಿಸೆಂಬರ್ 18 ರಂದು, ಅಮೃತಸರದ ಶ್ರೀ ಹರ್ಮಂದಿರ್ ಸಾಹಿಬ್ ಗುರುದ್ವಾರದಲ್ಲಿ (ಸ್ವರ್ಣಮಂದಿರ) ಸಿಖ್ ಧರ್ಮದ ಪವಿತ್ರ ಗ್ರಂಥವಾದ ಶ್ರೀ ಗುರು ಗ್ರಂಥ ಸಾಹಿಬ್ ಗೆ ಅಗೌರವ ತೋರಲು ಯತ್ನಿಸಿದ ಆರೋಪದ ಮೇಲೆ ಸಿಖ್ ಸಂಗತ್ (ಸಿಖ್ ಧರ್ಮದ ಭಕ್ತರು) ಒಬ್ಬ ವ್ಯಕ್ತಿಯನ್ನು  ಥಳಿಸಿ ಹತ್ಯೆ ಮಾಡಿದ್ದಾರೆ.

ವರದಿಗಳ ಪ್ರಕಾರ, ಕೊಲೆ ಮಾಡಿದ ಗುಂಪು ಹತ್ಯೆಗೀಡಾದ ವ್ಯಕ್ತಿಯು ಶ್ರೀ ಗುರು ಗ್ರಂಥ ಸಾಹಿಬ್ ಅನ್ನು ಅಪವಿತ್ರಗೊಳಿಸಲು ಪ್ರಯತ್ನಿಸುತ್ತಿದ್ದನು ಎಂದು ಆರೋಪಿಸಿದ್ದಾರೆ.

ಸಂಬಂಧಿತ ಪ್ರಕರಣ:

ಗಮನಾರ್ಹವಾಗಿ, ಸಿಖ್ ಧರ್ಮಕ್ಕೆ ಸಂಬಂಧಿಸಿದ ಪವಿತ್ರ ಗ್ರಂಥವನ್ನು ಅಪವಿತ್ರಗೊಳಿಸಿದ ಆರೋಪದ ಮೇಲೆ ಯಾರೋ ಒಬ್ಬರು ಕೊಲೆಯಾಗಿರುವುದು ಇದೇ ಮೊದಲೇನಲ್ಲ. ಇತ್ತೀಚಿನ ದಿನಗಳಲ್ಲಿ ಇಂತಹ  ಹಲವಾರು ಗುಂಪು ಹತ್ಯೆ ಪ್ರಕರಣಗಳು ನಡೆದಿವೆ.

  1. ಆದರೂ, ಯಾವುದೇ ರಾಜಕೀಯ ನಾಯಕರಾಗಲೀ ಅಥವಾ ಪೊಲೀಸರಾಗಲೀ ಪವಿತ್ರ ಗ್ರಂಥಕ್ಕೆ ಅಗೌರವ ತೋರಿದ್ದಕ್ಕಾಗಿ ಜನರು ಕಾನೂನನ್ನು ಕೈಗೆತ್ತಿಕೊಂಡು ವ್ಯಕ್ತಿಗಳನ್ನು ಗುಂಪು ಹತ್ಯೆ ಮಾಡುತ್ತಿರುವ ಬಗ್ಗೆ ಒಂದೇ ಒಂದು ಮಾತನ್ನೂ ಹೇಳಿಲ್ಲ.

ಇತ್ತೀಚಿನ ಗುಂಪು ಹತ್ಯೆ ಪ್ರಕರಣಗಳು:

  1. ಕಳೆದ ತಿಂಗಳು, ಅಸ್ಸಾಂನಲ್ಲಿ 23 ವರ್ಷದ ವಿದ್ಯಾರ್ಥಿ ನಾಯಕನನ್ನು ಗುಂಪೊಂದು ಹತ್ಯೆ ಮಾಡಿತ್ತು.
  2. ಅಕ್ಟೋಬರ್‌ನಲ್ಲಿ, ‘ಮೂರು ಕೃಷಿ ಕಾನೂನು’ಗಳ ವಿರುದ್ಧ ರೈತರ ಪ್ರತಿಭಟನೆಯ ಸ್ಥಳವಾದ ಸಿಂಘು ಗಡಿಯಲ್ಲಿ ಒಬ್ಬ ವ್ಯಕ್ತಿಯನ್ನು ಹೊಡೆದು ಕೊಂದು, ಅವನ ಕೈಕಾಲುಗಳನ್ನು ಕತ್ತರಿಸಿ ಸಾಯಲು ಬಿಡಲಾಯಿತು.
  3. ಆಗಸ್ಟ್‌ನಲ್ಲಿ, ಇಂದೋರ್‌ನಲ್ಲಿ ಬಳೆ ಮಾರಾಟಗಾರನೊಬ್ಬ ತನ್ನ ಗುರುತನ್ನು ಮರೆಮಾಚಿದ್ದಕ್ಕಾಗಿ ಗುಂಪೊಂದು ಥಳಿಸಿತ್ತು. ಆ ವ್ಯಕ್ತಿ ಹೇಗೋ ಬದುಕುಳಿದಿದ್ದು, ನಂತರ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.
  4. ಈ ವರ್ಷದ ಮೇ ತಿಂಗಳಲ್ಲಿ, ಗುರುಗ್ರಾಮ್‌ನ 25 ವರ್ಷದ ವ್ಯಕ್ತಿಯೊಬ್ಬ ಔಷಧಿ ಖರೀದಿಸಲು ಹೊರಗೆ ಹೋಗಿದ್ದಾಗ ಅವರನ್ನು ಹತ್ಯೆ ಮಾಡಲಾಗಿತ್ತು.

ಲಿಂಚಿಂಗ್ ಎಂದರೇನು?

  1. ಧರ್ಮ, ಜನಾಂಗ, ಜಾತಿ, ಲಿಂಗ, ಹುಟ್ಟಿದ ಸ್ಥಳ, ಭಾಷೆ, ಆಹಾರ ಪದ್ಧತಿಗಳು, ಲೈಂಗಿಕ ದೃಷ್ಟಿಕೋನ, ರಾಜಕೀಯ ಸಂಬಂಧ, ಜನಾಂಗೀಯತೆ ಅಥವಾ ಯಾವುದೇ ಇತರ ಸಂಬಂಧಿತ ಆಧಾರಗಳ ಮೇಲೆ ಯಾವುದೇ ಕೃತ್ಯ ಅಥವಾ ಸರಣಿಯ ಹಿಂಸಾಚಾರ ದಂತಹ ಕೃತ್ಯ/ಕೃತ್ಯಗಳಿಗೆ ಕುಮ್ಮಕ್ಕು ನೀಡುವುದು, ಸ್ವಯಂಪ್ರೇರಿತವಾಗಿ ಅಥವಾ ಯೋಜಿತವಾಗಿ, ಸಹಾಯ ಮಾಡುವುದು (ಪ್ರೋತ್ಸಾಹಿಸುವುದು) ಲಿಂಚಿಂಗ್ ಅಥವಾ ಗುಂಪು ಹತ್ಯೆ ಆಗಿದೆ.
  2. ಇದರಲ್ಲಿ, ತಪ್ಪಿತಸ್ಥನು ತನ್ನ ಅಪರಾಧಕ್ಕಾಗಿ ಅನಿಯಂತ್ರಿತ ಜನಸಮೂಹದಿಂದ ಶಿಕ್ಷೆಗೊಳಗಾಗುತ್ತಾನೆ ಅಥವಾ ಕೆಲವೊಮ್ಮೆ ಕೇವಲ ವದಂತಿಗಳ ಆಧಾರದ ಮೇಲೆ, ಅಪರಾಧ ಮಾಡದೆ ಇದ್ದರೂ ಸಹ ತಕ್ಷಣ ಶಿಕ್ಷೆಗೊಳಗಾಗುತ್ತಾನೆ, ಅಥವಾ ಅವನನ್ನು ಹೊಡೆದು ಸಾಯಿಸಲಾಗುತ್ತದೆ.

ಈ ಪ್ರಕರಣಗಳನ್ನು ಹೇಗೆ ನಿರ್ವಹಿಸಲಾಗುತ್ತದೆ?

ಅಸ್ತಿತ್ವದಲ್ಲಿರುವ ಭಾರತೀಯ ದಂಡ ಸಂಹಿತೆ (ಐಪಿಸಿ) ಯ ಅಡಿಯಲ್ಲಿ ಇಂತಹ ಘಟನೆಗಳಿಗೆ “ಪ್ರತ್ಯೇಕ” ವ್ಯಾಖ್ಯಾನವಿಲ್ಲ. ಹತ್ಯೆ ಘಟನೆಗಳನ್ನು ಐಪಿಸಿ ಸೆಕ್ಷನ್ 300 ಮತ್ತು 302 ರ ಅಡಿಯಲ್ಲಿ ವ್ಯವಹರಿಸಲಾಗುತ್ತದೆ.

  1. IPC ಸೆಕ್ಷನ್ 302 ಪ್ರಕಾರ ಕೊಲೆ ಮಾಡಿದವರಿಗೆ ಮರಣದಂಡನೆ ಅಥವಾ ಜೀವಾವಧಿ ಶಿಕ್ಷೆ ವಿಧಿಸಲಾಗುತ್ತದೆ ಮತ್ತು ದಂಡವನ್ನು ಸಹ ವಿಧಿಸಬಹುದಾಗಿದೆ. ಕೊಲೆ ಅಪರಾಧವು ಒಂದು ಕಾಗ್ನಿಜಬಲ್, ಜಾಮೀನು ರಹಿತ ಮತ್ತು ಸಂಯುಕ್ತವಲ್ಲದ ಅಪರಾಧವಾಗಿದೆ.

ಸುಪ್ರೀಮ್ ಕೋರ್ಟ್ ಮಾರ್ಗಸೂಚಿಗಳು:

  1. ಹತ್ಯೆಗೆ “ಪ್ರತ್ಯೇಕ ಅಪರಾಧ” ಸಂಹಿತೆ ಇರಬೇಕು ಮತ್ತು ವಿಚಾರಣಾ ನ್ಯಾಯಾಲಯಗಳು ಸಾಮಾನ್ಯವಾಗಿ ಗುಂಪು ಹಿಂಸಾಚಾರದ ಪ್ರಕರಣಗಳಲ್ಲಿ ಕಠಿಣ ಉದಾಹರಣೆ ನೀಡಲು ಆರೋಪಿತ ವ್ಯಕ್ತಿಗೆ ಅಥವಾ ವ್ಯಕ್ತಿಗಳ ಗುಂಪಿಗೆ ಗರಿಷ್ಠ ಶಿಕ್ಷೆಯನ್ನು ನೀಡಬೇಕು.
  2. ಗುಂಪು ಹಿಂಸೆ ಮತ್ತು ಹತ್ಯಾಕಾಂಡದ ಘಟನೆಗಳನ್ನು ತಡೆಯಲು ರಾಜ್ಯ ಸರ್ಕಾರಗಳು ಪ್ರತಿ ಜಿಲ್ಲೆಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಯನ್ನು ನೇಮಿಸಬೇಕು.
  3. ರಾಜ್ಯ ಸರ್ಕಾರಗಳು ಇತ್ತೀಚಿನ ದಿನಗಳಲ್ಲಿ ಹತ್ಯಾಕಾಂಡ ಮತ್ತು ಗುಂಪು ಹಿಂಸಾಚಾರದ ಪ್ರಕರಣಗಳು ವರದಿಯಾಗಿರುವ ಜಿಲ್ಲೆಗಳು, ಉಪ ವಿಭಾಗಗಳು ಮತ್ತು ಹಳ್ಳಿಗಳನ್ನು ಗುರುತಿಸಬೇಕು.
  4. ಲಿಂಚಿಂಗ್ ಮತ್ತು ಗುಂಪು ಹಿಂಸೆ ಸಂಬಂಧಿತ ಸಮಸ್ಯೆಗಳನ್ನು ನಿಭಾಯಿಸಲು ಕಾರ್ಯತಂತ್ರ ರೂಪಿಸಲು ಯಾವುದೇ ಅಂತರ್ ಜಿಲ್ಲಾ ಸಮನ್ವಯ ಸಮಸ್ಯೆಗಳ ಕುರಿತು ನೋಡಲ್ ಅಧಿಕಾರಿಗಳು ಡಿಜಿಪಿಯ ಗಮನಕ್ಕೆ ತರಬೇಕು.
  5. ಪ್ರತಿಯೊಬ್ಬ ಪೊಲೀಸ್ ಅಧಿಕಾರಿಯು ಜಾಗರೂಕತೆಯಿಂದ ಮಾರು ವೇಷದಲ್ಲಿ ಹಿಂಸೆಯನ್ನು ಉಂಟುಮಾಡುವ ಪ್ರವೃತ್ತಿಯನ್ನು ಹೊಂದಿರುವ ಗುಂಪುಗಳನ್ನು ಚದುರಿಸಲು ಕ್ರಮ ಕೈಗೊಳ್ಳುವುದನ್ನು ಖಚಿತಪಡಿಸಿಕೊಳ್ಳಬೇಕು.
  6. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೇಡಿಯೋ, ದೂರದರ್ಶನ ಮತ್ತು ಇತರ ಮಾಧ್ಯಮ ವೇದಿಕೆಗಳಲ್ಲಿ ಗುಂಪು ಹತ್ಯೆ ಮತ್ತು ಗುಂಪು ಹಿಂಸೆಯ ಗಂಭೀರ ಪರಿಣಾಮಗಳ ಬಗ್ಗೆ ಪ್ರಸಾರ ಮಾಡಬೇಕು.
  7. ರಾಜ್ಯ ಪೊಲೀಸರು ತೆಗೆದುಕೊಂಡ ಕ್ರಮಗಳ ಹೊರತಾಗಿಯೂ, ಹತ್ಯೆ ಅಥವಾ ಗುಂಪು ಹಿಂಸಾಚಾರದಂತಹ ಕಳವಳಕಾರಿ ಘಟನೆಗಳು ಸ್ಥಳೀಯ ಪೊಲೀಸರ ಗಮನಕ್ಕೆ ಬಂದರೆ, ನ್ಯಾಯವ್ಯಾಪ್ತಿಯ ಪೊಲೀಸ್ ಠಾಣೆಯು ತಕ್ಷಣವೇ FIR ಅನ್ನು ದಾಖಲಿಸಬೇಕು.
  8. ರಾಜ್ಯ ಸರ್ಕಾರಗಳು CRPCಯ ಸೆಕ್ಷನ್ 357 A ಯ ನಿಬಂಧನೆಗಳ ಅಡಿಯಲ್ಲಿ ಹತ್ಯೆ/ಗುಂಪು ಹತ್ಯೆಯ ಸಂತ್ರಸ್ತರಿಗೆ ಪರಿಹಾರ ಯೋಜನೆಯನ್ನು ಸಿದ್ಧಪಡಿಸಬೇಕು.
  9. ಯಾವುದೇ ಒಬ್ಬ ಪೊಲೀಸ್ ಅಧಿಕಾರಿ ಅಥವಾ ಜಿಲ್ಲಾಡಳಿತದ ಅಧಿಕಾರಿ ತನ್ನ ಕರ್ತವ್ಯವನ್ನು ನಿರ್ವಹಿಸಲು ವಿಫಲವಾದಲ್ಲಿ, ಅದನ್ನು ಉದ್ದೇಶಪೂರ್ವಕ ನಿರ್ಲಕ್ಷ್ಯದ ಕ್ರಮವೆಂದು ಪರಿಗಣಿಸಲಾಗುತ್ತದೆ.

ಈ ಸಮಯದ ಅವಶ್ಯಕತೆ:

  1. ಪ್ರತಿ ಬಾರಿಯೂ ಮರ್ಯಾದಾ ಹತ್ಯೆ, ದ್ವೇಷದ ಅಪರಾಧಗಳು, ಮಾಟಗಾತಿ ಹತ್ಯೆ ಅಥವಾ ಗುಂಪು ಹತ್ಯೆಯ ಪ್ರಕರಣಗಳು ವರದಿಯಾದಾಗ ಈ ಅಪರಾಧಗಳನ್ನು ಎದುರಿಸಲು ವಿಶೇಷ ಕಾನೂನಿನ ಬೇಡಿಕೆಗಳನ್ನು ಎತ್ತಲಾಗುತ್ತದೆ.
  2. ಆದರೆ, ಈ ಅಪರಾಧಗಳು ಕೊಲೆಗಳಲ್ಲದೆ ಬೇರೇನೂ ಅಲ್ಲ ಮತ್ತು ಐಪಿಸಿ ಮತ್ತು ಸಿಆರ್‌ಪಿಸಿ ಅಡಿಯಲ್ಲಿ ಈಗ ಅಸ್ತಿತ್ವದಲ್ಲಿರುವ ನಿಬಂಧನೆಗಳು ಇಂತಹ ಅಪರಾಧಗಳನ್ನು ನಿಭಾಯಿಸಲು ಸಾಕಾಗುತ್ತದೆ ಎಂಬುದು ವಾಸ್ತವವಾಗಿದೆ.
  3. ಪೂನಾವಾಲಾ ಪ್ರಕರಣದಲ್ಲಿ ನೀಡಲಾದ ಮಾರ್ಗಸೂಚಿಗಳೊಂದಿಗೆ ಸೇರಿಕೊಂಡು, ಗುಂಪು ಹತ್ಯೆಯನ್ನು ಎದುರಿಸಲು ಸರ್ಕಾರವು ಸಾಕಷ್ಟು ಶ್ರಮ ವಹಿಸುತ್ತಿದೆ. ಆದಾಗ್ಯೂ, ನಮ್ಮಲ್ಲಿ ಕೊರತೆಯಿರುವುದು ಅಸ್ತಿತ್ವದಲ್ಲಿರುವ ಕಾನೂನುಗಳ ಸರಿಯಾದ ಜಾರಿ ಮತ್ತು ಜಾರಿ ಸಂಸ್ಥೆಗಳ ಜವಾಬ್ದಾರಿಯುತ ಹೊಣೆಗಾರಿಕೆ.

ಈ ನಿಟ್ಟಿನಲ್ಲಿ ವಿವಿಧ ರಾಜ್ಯಗಳ ಪ್ರಯತ್ನಗಳು:

  1. ಮಣಿಪುರ ಸರ್ಕಾರವು 2018 ರಲ್ಲಿ ಗುಂಪು ಹತ್ಯಾಕಾಂಡದ ವಿರುದ್ಧ ಒಂದು ಮಸೂದೆಯನ್ನು ಮಂಡಿಸಿತು, ಇದು ಕೆಲವು ತಾರ್ಕಿಕ ಮತ್ತು ಸಂಬಂಧಿತ ನಿಬಂಧನೆಗಳನ್ನು ಒಳಗೊಂಡಿದೆ.
  2. ರಾಜಸ್ಥಾನ ಸರ್ಕಾರವು 2019 ರ ಆಗಸ್ಟ್ ನಲ್ಲಿ ಹತ್ಯಾಕಾಂಡದ ವಿರುದ್ಧ ಮಸೂದೆಯನ್ನು ಅಂಗೀಕರಿಸಿತು.
  3. ಪಶ್ಚಿಮ ಬಂಗಾಳವು ಗುಂಪು ಹತ್ಯೆಯ ವಿರುದ್ಧ ಹೆಚ್ಚು ಕಠಿಣ ನಿಬಂಧನೆಗಳನ್ನು ಹೊಂದಿರುವ ವಿಧೇಯಕವನ್ನು ಜಾರಿಗೊಳಿಸಿತು.

 

ವಿಷಯಗಳುಪ್ರಜಾ ಪ್ರಾತಿನಿಧ್ಯ ಕಾಯ್ದೆಯ ಪ್ರಮುಖ ಲಕ್ಷಣಗಳು.

ಆಧಾರ್ ಕಾರ್ಡ್ ನೊಂದಿಗೆ ಮತದಾರರ ಚೀಟಿ ಜೋಡಿಸುವ ಕುರಿತ ಮಸೂದೆ:


(Bill on voter ID-Aadhaar link)

ಸಂದರ್ಭ:

ಇತ್ತೀಚೆಗೆ, ಮತದಾರರ ಗುರುತಿನ ಚೀಟಿಯನ್ನು ಆಧಾರ್ ಕಾರ್ಡ್‌ನೊಂದಿಗೆ ಸ್ವಯಂಪ್ರೇರಿತವಾಗಿ ಲಿಂಕ್ ಮಾಡುವುದು ಸೇರಿದಂತೆ ಇತರ ಪ್ರಮುಖ ಸುಧಾರಣೆಗಳನ್ನು ಮಾಡಲು ಪ್ರಜಾಪ್ರತಿನಿಧಿ ಕಾಯ್ದೆ’ಗೆ ತಿದ್ದುಪಡಿ ಮಾಡುವ ಉದ್ದೇಶದಿಂದಚುನಾವಣಾ ಕಾನೂನುಗಳು (ತಿದ್ದುಪಡಿ) ಮಸೂದೆ’, 2021 (Election Laws (Amendment) Bill, 2021) ಅನ್ನು ಸಂಸತ್ತಿನಲ್ಲಿ ಮಂಡಿಸಲು ಕೇಂದ್ರ ಸಚಿವ ಸಂಪುಟವು ಅನುಮೋದನೆ ನೀಡಿದೆ.

ಆಧಾರ್ ಕಾರ್ಡ್ ನೊಂದಿಗೆ ಮತದಾರರ ಚೀಟಿ ಜೋಡಿಸುವ ಅಗತ್ಯತೆ:

ಭಾರತೀಯ ಚುನಾವಣಾ ಆಯೋಗ (ECI) 2015 ರಿಂದ ಈ ಬೇಡಿಕೆಯನ್ನು ಮಂಡಿಸುತ್ತಿದೆ. ಮತದಾರರ ಗುರುತಿನ ಚೀಟಿ ಸಂಖ್ಯೆಯೊಂದಿಗೆ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡಲು ಚುನಾವಣಾ ಆಯೋಗವು ರಾಷ್ಟ್ರೀಯ ಚುನಾವಣಾ ಕಾನೂನು ಶುದ್ಧೀಕರಣ ಮತ್ತು ದೃಢೀಕರಣ ಕಾರ್ಯಕ್ರಮವನ್ನು (National Electoral Law Purification and Authentication Programme) ಪ್ರಾರಂಭಿಸಿದೆ. ಆಯೋಗದ ಪ್ರಕಾರ, ಈ ಲಿಂಕ್ ಮಾಡುವಿಕೆಯು ವ್ಯಕ್ತಿಯ ಹೆಸರಿನಲ್ಲಿ ಇರುವ ಬಹು ನಾಮನಿರ್ದೇಶನಗಳನ್ನು ಗುರುತಿಸಲು ಮತ್ತು ಅವುಗಳನ್ನು ತೆಗೆದುಹಾಕಲು ಹಾಗೂ ನಕಲಿ ಗುರುತಿನ ಚೀಟಿ ಗಳಿಗೆ ಕಡಿವಾಣ ಹಾಕಲು ಸಾಧ್ಯವಾಗುತ್ತದೆ.

  1. ಆ ಸಮಯದಲ್ಲಿ, ಕಲ್ಯಾಣ ಯೋಜನೆಗಳ ಪ್ರಯೋಜನವನ್ನು ಪಡೆಯಲು ‘ಆಧಾರ್ ಸಂಖ್ಯೆ’ ಯ ಬಳಕೆಯು ಐಚ್ಛಿಕವಾಗಿರುತ್ತದೆ ಎಂದು ಸುಪ್ರೀಂ ಕೋರ್ಟ್ ಆದೇಶ ನೀಡಿದ್ದರಿಂದ ಕಾರ್ಯಕ್ರಮವನ್ನು ತಡೆಹಿಡಿಯಲಾಯಿತು.
  2. ತರುವಾಯ, ಚುನಾವಣಾ ಆಯೋಗವು ತನ್ನ ಪ್ರಸ್ತಾವನೆಯನ್ನು ತಿದ್ದುಪಡಿ ಮಾಡಿತು ‘ಲಿಂಕಿಂಗ್’ ಮಾಡುವುದು ಐಚ್ಛಿಕವಾಗಿರುತ್ತದೆ ಎಂದು ಹೇಳಿತು.

ಮಸೂದೆಯಲ್ಲಿನ ಇತರ ನಿಬಂಧನೆಗಳು:

ಮಸೂದೆಯಲ್ಲಿ, ಪ್ರತಿ ವರ್ಷ ನಾಲ್ಕು ‘ಅರ್ಹತಾ ದಿನಾಂಕ’ಗಳಲ್ಲಿ ಹೊಸ ಮತದಾರರ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ, ಪ್ರಸ್ತುತ ಜನವರಿ 1 ಅನ್ನು ಹೊಸ ಮತದಾರರ ನೋಂದಣಿಗೆ ‘ಅರ್ಹತಾ ದಿನಾಂಕ’ ಎಂದು ಪರಿಗಣಿಸಲಾಗಿದೆ.

  1. ಪ್ರಸ್ತುತ, ಜನವರಿ 1 ರಂದು ಅಥವಾ ಅದಕ್ಕಿಂತ ಮೊದಲು 18 ವರ್ಷಗಳನ್ನು ಪೂರ್ಣಗೊಳಿಸಿದ ಯಾರಾದರೂ ಮತದಾರರಾಗಿ ನೋಂದಾಯಿಸಲು ಅರ್ಹರಾಗಿದ್ದಾರೆ.
  2. ಒಂದೇ ಒಂದು ಕಟ್-ಆಫ್ ದಿನಾಂಕದೊಂದಿಗೆ, ಜನವರಿ 2ರ ನಂತರ 18 ವರ್ಷ ಪೂರೈಸಿದ ಅಥವಾ ಜನಿಸಿದ ಜನರು ಪಟ್ಟಿಗೆ ಹೆಸರು ನೋಂದಾಯಿಸಲು ಸಾಧ್ಯವಾಗುತ್ತಿರಲಿಲ್ಲ ಮತ್ತು ನೋಂದಾಯಿಸಲು ಮುಂದಿನ ವರ್ಷದ ಜನೆವರಿ 1 ರ ವರೆಗೆ ಕಾಯಬೇಕಿತ್ತು.
  3. ಈಗ ಈನಿಯಮಕ್ಕೆ ಬದಲಾವಣೆ ತರಲಾಗುತ್ತಿದ್ದು, ಪ್ರತಿ ಕ್ಯಾಲೆಂಡರ್ ವರ್ಷದಲ್ಲಿ, ಮತದಾರರ ನೋಂದಣಿಗಾಗಿ ಜನವರಿ 1 ಮತ್ತು ಇತರ ಮೂರು ಅರ್ಹತಾ ದಿನಾಂಕಗಳು – ಏಪ್ರಿಲ್ 1, ಜುಲೈ 1 ಮತ್ತು ಅಕ್ಟೋಬರ್ 1 ಇರುತ್ತವೆ ಮತ್ತು ಆ ದಿನಗಳಂದು 18 ವರ್ಷ ತುಂಬಿದವರು ಮತದಾರರ ಪಟ್ಟಿಗೆ ಹೆಸರು ಸೇರಿಸಲು ಅವಕಾಶ ನೀಡಲಾಗುತ್ತದೆ.

‘ಸೇವಾ ಮತದಾರರಿಗೆ’ (Service Voters) ಚುನಾವಣಾ ಆಯೋಗವನ್ನು ‘ಲಿಂಗ ತಟಸ್ಥ’ ವನ್ನಾಗಿ ಮಾಡಲು ತಿದ್ದುಪಡಿ ಮಸೂದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ.

  1. ತಿದ್ದುಪಡಿಯ ಅಡಿಯಲ್ಲಿ, ‘ಹೆಂಡತಿ’ (Spouse) ಪದವನ್ನು ‘ಸಂಗಾತಿ’(ಪತಿ ಅಥವಾ ಪತ್ನಿ) ಎಂದು ಬದಲಿಸಲಾಗುತ್ತದೆ, ಆ ಮೂಲಕ ಈ ಕಾನೂನನ್ನು ‘ಲಿಂಗ ತಟಸ್ಥ’ (Gender Neutral) ವಾಗಿ ಮಾಡಲಾಗುತ್ತದೆ.
  2. ಪ್ರಸ್ತುತ ಸಶಸ್ತ್ರ ಪಡೆಗಳ ಪುರುಷ ಸಿಬ್ಬಂದಿಯ ‘ಪತ್ನಿ’ ‘ಸೇವಾ ಮತದಾರರಾಗಿ’ ದಾಖಲಾಗಲು ಅರ್ಹಳಾಗಿರುತ್ತಾರೆ, ಆದರೆ ಈ ಸೌಲಭ್ಯವು ‘ಲೇಡಿ ಆಫೀಸರ್’ ಪತಿಗೆ ಲಭ್ಯವಿಲ್ಲ. ಹೆಂಡತಿ ಎಂಬ ಪದದ ಬದಲಿಗೆ ಗಂಡ/ಹೆಂಡತಿಅಥವಾ ಸಂಗಾತಿ ಎಂಬ ಪದದ ಬಳಕೆಯು ಇದನ್ನು ಬದಲಾಯಿಸುತ್ತದೆ.

ವೋಟರ್ ಐಡಿ-ಆಧಾರ್ ಕಾರ್ಡ್ ಜೋಡಣೆಗೆ ಸಂಬಂಧಿಸಿದ ಸಮಸ್ಯೆಗಳು:

  1. ತಿದ್ದುಪಡಿ ಪ್ರಸ್ತಾವನೆಯು ‘ಭಾರತೀಯ ಚುನಾವಣಾ ಆಯೋಗ’ (ECI) ಮತ್ತು UIDAI ಡೇಟಾಬೇಸ್‌ಗಳನ್ನು ಎಷ್ಟು ಮಟ್ಟಿಗೆ ಹಂಚಿಕೊಳ್ಳಲಾಗುತ್ತದೆ, ಮತದಾರರಿಂದ ಒಪ್ಪಿಗೆ ಪಡೆಯುವ ಪ್ರಕ್ರಿಯೆ ಏನು ಮತ್ತು ಡೇಟಾಬೇಸ್ ಅನ್ನು ಲಿಂಕ್ ಮಾಡಲು ನೀಡಿದ ಒಪ್ಪಿಗೆಯನ್ನು ಹಿಂಪಡೆಯಬಹುದೇ, ಇಂತಹ ಪ್ರಶ್ನೆಗಳನ್ನು ಸ್ಪಷ್ಟಪಡಿಸಲು ವಿಫಲವಾಗಿದೆ.
  2. ಬಲವಾದ ‘ವೈಯಕ್ತಿಕ ಡೇಟಾ ರಕ್ಷಣೆ ಕಾನೂನಿನ’ ಅನುಪಸ್ಥಿತಿಯಲ್ಲಿ, ‘ಡೇಟಾ ಹಂಚಿಕೆ’ಯನ್ನು ಅನುಮತಿಸುವ ಯಾವುದೇ ಕ್ರಮವು ಸಮಸ್ಯಾತ್ಮಕವೆಂದು ಸಾಬೀತುಪಡಿಸಬಹುದು. ಇದು ವ್ಯಕ್ತಿಯ ಖಾಸಗಿತನದ ಮೇಲಿನ ಆಕ್ರಮಣವಾಗುತ್ತದೆ. ‘ವೈಯಕ್ತಿಕ ಡೇಟಾ ಸಂರಕ್ಷಣಾ ಕಾಯ್ದೆ’ಗೆ ಸಂಬಂಧಿಸಿದ ಮಸೂದೆ ಪ್ರಸ್ತುತ ಸಂಸತ್ತಿನಲ್ಲಿ ಇನ್ನೂ ಪರಿಗಣನೆಯಲ್ಲಿದೆ.

 

ವಿಷಯಗಳು: ಆರೋಗ್ಯ, ಶಿಕ್ಷಣ, ಸಾಮಾಜಿಕ ವಲಯ / ಸೇವೆಗಳ ಅಭಿವೃದ್ಧಿ ಮತ್ತು ನಿರ್ವಹಣೆಗೆ ಸಂಬಂಧಿಸಿದ ಮಾನವ ಸಂಪನ್ಮೂಲ ಸಂಬಂಧಿತ ವಿಷಯಗಳು.

ಪೋಶನ್ ಟ್ರ್ಯಾಕರ್:


(Poshan Tracker)

ಸಂದರ್ಭ:

‘ಮಹಿಳೆಯರು ಮತ್ತು ಮಕ್ಕಳ ಖಾಸಗಿತನ’ದ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ‘ಪೋಶನ್ (ನ್ಯೂಟ್ರಿಷನ್) ಟ್ರ್ಯಾಕರ್’ (Poshan Tracker) ನಲ್ಲಿ ದಾಖಲಾಗಿರುವ ದತ್ತಾಂಶವನ್ನು ಸಾರ್ವಜನಿಕಗೊಳಿಸಲಾಗಿಲ್ಲ ಎಂದು ಭಾರತ ಸರ್ಕಾರವು ಲೋಕಸಭೆಯಲ್ಲಿ ಮಾಹಿತಿ ನೀಡಿದೆ.

  1. ಇದು ದೇಶದಲ್ಲಿರುವ ಅಂಗನವಾಡಿ ವ್ಯವಸ್ಥೆಗಳ ಮೂಲಕ ರಾಜ್ಯ ಸರ್ಕಾರಗಳ ಸಹಯೋಗದೊಂದಿಗೆ ಭಾರತ ಸರ್ಕಾರವು ಒದಗಿಸುವ ಸೇವೆಗಳನ್ನು ಪಡೆಯುವ ಮಹಿಳೆಯರು ಮತ್ತು ಮಕ್ಕಳ ಗೌಪ್ಯತೆಯನ್ನು ಗೌರವಿಸುವ ಗುರಿಯನ್ನು ಹೊಂದಿದೆ.

‘ಪೋಶನ್ (ನ್ಯೂಟ್ರಿಷನ್) ಟ್ರ್ಯಾಕರ್’ ಕುರಿತು:

  1. ಪೋಶನ್ ಟ್ರ್ಯಾಕರ್ ಅನ್ನು ಅದರ ಹಿಂದಿನ ಆವೃತ್ತಿಯಲ್ಲಿ ಸಮಗ್ರ ಮಕ್ಕಳ ಅಭಿವೃದ್ಧಿ ಸೇವೆಗಳು-ಸಾಮಾನ್ಯ ಅಪ್ಲಿಕೇಶನ್ ಸಾಫ್ಟ್‌ವೇರ್’ (Integrated Child Development Services-Common Application Software: ICDS-CAS) ಎಂದು ಕರೆಯಲಾಗುತ್ತಿತ್ತು. ಇದನ್ನು, ಅಂಗನವಾಡಿಗಳ ಮೂಲಕ ವಿತರಿಸಲಾದ ವಿವಿಧ ಸೇವೆಗಳನ್ನು ಪತ್ತೆಹಚ್ಚಲು ಮತ್ತು ಸುಧಾರಿಸಲು ಮತ್ತು ಫಲಾನುಭವಿಗಳ ಪೌಷ್ಟಿಕಾಂಶದ ನಿರ್ವಹಣೆಯನ್ನು ಖಚಿತಪಡಿಸಿಕೊಳ್ಳುವ ಉದ್ದೇಶದಿಂದ ವಿನ್ಯಾಸಗೊಳಿಸಲಾಗಿದೆ.
  2. ಈ ನೈಜ ಸಮಯದ ಮೇಲ್ವಿಚಾರಣಾ ವ್ಯವಸ್ಥೆಯು ಪೋಶನ್ ಅಭಿಯಾನದ ಪ್ರಮುಖ ಸ್ತಂಭಗಳಲ್ಲಿ ಒಂದಾಗಿದೆ, ಇದು ನವೆಂಬರ್ 2017 ರಲ್ಲಿ ಕೇಂದ್ರ ಸಚಿವ ಸಂಪುಟವು ಮೂರು ವರ್ಷಗಳ ಅವಧಿಗೆ ರೂ.9,000 ಕೋಟಿಗಳ ಆರ್ಥಿಕ ವೆಚ್ಚದೊಂದಿಗೆ ಅನುಮೋದಿಸಿತು.
  3. ಈ ಟ್ರ್ಯಾಕರ್ ಅನ್ನು ಅಭಿವೃದ್ಧಿಪಡಿಸಲು ಸರ್ಕಾರದಿಂದ ₹ 1,053 ಕೋಟಿ ವೆಚ್ಚ ಮಾಡಲಾಗಿದೆ.

ಮಹತ್ವ:

  1. ಪೋಶನ್ (ನ್ಯೂಟ್ರಿಷನ್) ಟ್ರ್ಯಾಕರ್ ಪೋಶನ್ ಅಭಿಯಾನದ ಪ್ರಮುಖ ಸ್ತಂಭಗಳಲ್ಲಿ ಒಂದಾಗಿದೆ.
  2. ಇದು 12.3 ಲಕ್ಷ ಅಂಗನವಾಡಿ ಕೇಂದ್ರಗಳಲ್ಲಿ ಒದಗಿಸುವ ಸೇವೆಗಳನ್ನು ಮೇಲ್ವಿಚಾರಣೆ ಮಾಡಲು ಸರ್ಕಾರಕ್ಕೆ ಸಹಾಯ ಮಾಡುತ್ತದೆ.
  3. ಆರು ತಿಂಗಳಿಂದ ಆರು ವರ್ಷದೊಳಗಿನ ಮಕ್ಕಳು, ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರು ಸೇರಿದಂತೆ 9.8 ಲಕ್ಷ ಫಲಾನುಭವಿಗಳ ಪೌಷ್ಟಿಕಾಂಶದ ಸೂಚಕಗಳನ್ನು ಇದು ದಾಖಲಿಸುತ್ತದೆ.
  4. ಅಂಗನವಾಡಿ ಕೇಂದ್ರಗಳಲ್ಲಿ, ಬೇಯಿಸಿದ ಬಿಸಿ ಊಟದ ರೂಪದಲ್ಲಿ ಪೂರಕ ಪೌಷ್ಠಿಕಾಂಶ, ಮತ್ತು ಮನೆಗೆ ಕೊಂಡೊಯ್ಯುವ ಪಡಿತರ, ಲಸಿಕಾಕರಣ ಮತ್ತು ಶಾಲಾಪೂರ್ವ ಶಿಕ್ಷಣ ಸೇರಿದಂತೆ ಆರು ಸೇವೆಗಳನ್ನು ಒದಗಿಸಲಾಗುತ್ತದೆ.

ಏನಿದು ಪ್ರಕರಣ?

  1. ಸಂಸದೀಯ ಸಮಿತಿಯು ತನ್ನ ವರದಿಯಲ್ಲಿ ‘ನ್ಯೂಟ್ರಿಷನ್ ಟ್ರ್ಯಾಕರ್’ ನ ಪರಿಣಾಮಕಾರಿ ಬಳಕೆಯ ಕುರಿತು ಹಲವಾರು ಪ್ರಶ್ನೆಗಳನ್ನು ಎತ್ತಿದೆ.
  2. ಪ್ರಮುಖ ಕಾರ್ಯನಿರ್ವಹಣೆಯ ಸೂಚಕಗಳನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಬೇಕು ಮತ್ತು ಅದನ್ನು ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಬೇಕು ಮತ್ತು ರಾಜ್ಯವಾರು ಪ್ರಗತಿ ವರದಿಯನ್ನು ನಿರ್ವಹಿಸಬೇಕು, “ಇದರಿಂದ ಸಮಯಕ್ಕೆ ಸರಿಯಾಗಿ ಪ್ರಯೋಜನಗಳಿಂದ ವಂಚಿತರಾದ ಜನರನ್ನು ನೈಜ ಸಮಯದ ಆಧಾರದ ಮೇಲೆ ಗುರುತಿಸಬಹುದು ಮತ್ತು ಅದಕ್ಕೆ ಸಮಯೋಚಿತ ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳಬಹುದು”ಎಂದು ಸಮಿತಿಯು ಒತ್ತಾಯಿಸಿದೆ.
  3. ಅಂಗನವಾಡಿ ಫಲಾನುಭವಿಗಳಿಗೆ ಆಹಾರ ಪೊಟ್ಟಣ ವಿತರಣೆಯಲ್ಲಿ ಯಾವುದೇ ಲೋಪವಾಗದಂತೆ ನೋಡಿಕೊಳ್ಳಲು ಮೇಲ್ವಿಚಾರಣಾ ವ್ಯವಸ್ಥೆ ರೂಪಿಸುವಂತೆ ಸಮಿತಿಯು ಸಚಿವಾಲಯಕ್ಕೆ ಶಿಫಾರಸು ಮಾಡಿದೆ.

ಪೋಶನ್ ಅಭಿಯಾನದ ಬಗ್ಗೆ:

  1. ಮಕ್ಕಳು, ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರಿಗೆ ಪೌಷ್ಟಿಕಾಂಶದ ಫಲಿತಾಂಶಗಳನ್ನು ಸುಧಾರಿಸಲು ಕಾರ್ಯಕ್ರಮವನ್ನು ಪ್ರಾರಂಭಿಸಲಾಗಿದೆ.
  2. ಈ ಕಾರ್ಯಕ್ರಮವನ್ನು 2022 ರ ವೇಳೆಗೆ ನಿರ್ದಿಷ್ಟ ಗುರಿಗಳನ್ನು ಪೂರ್ಣಗೊಳಿಸುವ ಉದ್ದೇಶದೊಂದಿಗೆ 2018 ರಲ್ಲಿ ಪ್ರಾರಂಭಿಸಲಾಯಿತು.

ಕಾರ್ಯಕ್ರಮದ ಉದ್ದೇಶ:

  1. ಮಕ್ಕಳಲ್ಲಿ ಕುಂಠಿತ ಬೆಳವಣಿಗೆ ಮತ್ತು ದೌರ್ಬಲ್ಯವನ್ನು ವರ್ಷಕ್ಕೆ 2% ರಷ್ಟು ಕಡಿಮೆ ಮಾಡಲು (2022 ರ ವೇಳೆಗೆ ಒಟ್ಟು 6%).
  2. ಮಕ್ಕಳು, ಹದಿಹರೆಯದ ಹುಡುಗಿಯರು ಮತ್ತು ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರಲ್ಲಿ ರಕ್ತಹೀನತೆಯನ್ನು ವರ್ಷಕ್ಕೆ 3% ರಷ್ಟು ಕಡಿಮೆಗೊಳಿಸುವುದು (2022 ರ ಹೊತ್ತಿಗೆ ಒಟ್ಟು 9%).

2022 ರ ವೇಳೆಗೆ 0-6 ವರ್ಷ ವಯಸ್ಸಿನ ಮಕ್ಕಳಲ್ಲಿ ಕುಂಠಿತ ಬೆಳವಣಿಗೆಯನ್ನು 38.4% ರಿಂದ 25% ಕ್ಕೆ ತಗ್ಗಿಸುವ ಗುರಿಯನ್ನು ಈ ಮಿಷನ್ ಹೊಂದಿದೆ.

ಹಿನ್ನೆಲೆ:

ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮೂರನೇ ಒಂದು ಭಾಗದಷ್ಟು ಮಕ್ಕಳು ಕುಂಠಿತ ಬೆಳವಣಿಗೆ ಮತ್ತು ದುರ್ಬಲರಾಗಿದ್ದಾರೆ ಮತ್ತು ಒಂದರಿಂದ ನಾಲ್ಕು ವರ್ಷ ವಯಸ್ಸಿನ 40% ಮಕ್ಕಳು ರಕ್ತಹೀನತೆಯಿಂದ ಬಳಲುತ್ತಿದ್ದಾರೆ. 2016 ರಲ್ಲಿ ಬಿಡುಗಡೆಯಾದ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ 4 ರ ಪ್ರಕಾರ, 50% ಕ್ಕಿಂತ ಹೆಚ್ಚು ಗರ್ಭಿಣಿ ಮತ್ತು ಇತರ ಮಹಿಳೆಯರು ರಕ್ತಹೀನತೆಯಿಂದ ಬಳಲುತ್ತಿದ್ದಾರೆ.

NITI ಆಯೋಗ ನೀಡಿದ ಸಲಹೆಗಳು:

  1. 2022 ರ ವೇಳೆಗೆ ಬೊಜ್ಜು, ಕುಂಠಿತ ಬೆಳವಣಿಗೆ ಮತ್ತು ರಕ್ತಹೀನತೆಯನ್ನು ಕಡಿಮೆ ಮಾಡಲು ಕೇಂದ್ರವು ನಿಗದಿಪಡಿಸಿದ ಗುರಿಗಳನ್ನು ಪೂರೈಸಲು ಈ ಕಾರ್ಯಕ್ರಮವನ್ನು ಮುಂದುವರಿಸಬೇಕು.
  2. ಪೋಶನ್ ಪ್ಲಸ್ ಕಾರ್ಯತಂತ್ರಕ್ಕಾಗಿ, NHM/ICDS ವಿತರಣಾ ಕಾರ್ಯವಿಧಾನದ ಸವಾಲುಗಳನ್ನು ಎದುರಿಸಲು ಅಭಿಯಾನದಲ್ಲಿ ನಾಲ್ಕು ಪ್ರಮುಖ ಸ್ತಂಭಗಳನ್ನು ಸಶಕ್ತಗೊಳಿಸುವುದರ ಜೊತೆಗೆ ಇತರ ಸಾಮಾಜಿಕ ನಿರ್ಧಾರಕಗಳ ಮೇಲೆ ನವೀಕರಿಸಿದ ಗಮನವನ್ನು ಕೇಂದ್ರೀಕರಿಸುವ ಅಗತ್ಯವಿದೆ.
  3. ಸ್ತನ್ಯಪಾನದ ಜೊತೆಗೆ ಪೂರಕ ಆಹಾರವನ್ನು ಒದಗಿಸುವ ಬಗ್ಗೆಯೂ ಒತ್ತು ನೀಡಬೇಕು. ಇದರೊಂದಿಗೆ, ಭಾರತದಲ್ಲಿ ಕುಂಠಿತ ಬೆಳವಣಿಗೆಯ ಒಟ್ಟು ಪ್ರಕರಣಗಳನ್ನು 60% ರಷ್ಟು ತಡೆಯಲು ಸಹಾಯ ಮಾಡುತ್ತದೆ.

ಮಿಷನ್ ನ್ಯೂಟ್ರಿಷನ್ / ಪೋಶನ್ 2.0:

  1. ಪೋಶನ್ 2.0 (POSHAN 2.0) ಸಮಗ್ರ ಮಕ್ಕಳ ಅಭಿವೃದ್ಧಿ ಸೇವೆಗಳು (ICDS) ಅಂದರೆ ಅಂಗನವಾಡಿ ಸೇವೆಗಳು, ಪೋಶನ್ ಅಭಿಯಾನ, ಹದಿಹರೆಯದ ಬಾಲಕಿಯರ ಯೋಜನೆ, ರಾಷ್ಟ್ರೀಯ ಶಿಶು ಗೃಹ ಯೋಜನೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವನ್ನು ಒಳಗೊಂಡಿರುವ ಒಂದು ಅಂಬ್ರೆಲಾ ಯೋಜನೆಯಾಗಿದೆ.
  2. ಈ ಮಿಷನ್ ಅನ್ನು, ಪೂರಕ ಪೌಷ್ಟಿಕಾಂಶ ಕಾರ್ಯಕ್ರಮಗಳು ಮತ್ತು ಪೋಶನ್ ಅಭಿಯಾನವನ್ನು ವಿಲೀನಗೊಳಿಸುವ ಮೂಲಕ 2021-22ರ ಕೇಂದ್ರ ಬಜೆಟ್‌ನಲ್ಲಿ ಘೋಷಿಸಲಾಗಿದೆ.
  3. ಈ ಮಿಷನ್ ಅನ್ನು, ಆರೋಗ್ಯಕ್ಕೆ ಅಗತ್ಯವಾದ ಪೋಷಣೆಯನ್ನು ಒದಗಿಸಲು ಮತ್ತು ದೇಶದಲ್ಲಿ ರೋಗ ಮತ್ತು ಅಪೌಷ್ಟಿಕತೆಗೆ ಪ್ರತಿರಕ್ಷೆಯನ್ನು ಪೋಷಿಸುವ ಪ್ರಕ್ರಿಯೆಗಳನ್ನು ಅಭಿವೃದ್ಧಿಪಡಿಸುವುದರ ಮೇಲೆ ನವೀಕರಿಸಿದ ಗಮನದೊಂದಿಗೆ ಪೌಷ್ಟಿಕಾಂಶದ ವಿಷಯ, ವಿತರಣೆ, ಪ್ರಭಾವ ಮತ್ತು ಫಲಿತಾಂಶಗಳನ್ನು ಬಲಪಡಿಸುವ ಉದ್ದೇಶದೊಂದಿಗೆ ಪ್ರಾರಂಭಿಸಲಾಗಿದೆ.

 

ವಿಷಯಗಳು: ಆರೋಗ್ಯ, ಶಿಕ್ಷಣ, ಸಾಮಾಜಿಕ ವಲಯ / ಸೇವೆಗಳ ಅಭಿವೃದ್ಧಿ ಮತ್ತು ನಿರ್ವಹಣೆಗೆ ಸಂಬಂಧಿಸಿದ ಮಾನವ ಸಂಪನ್ಮೂಲ ಸಂಬಂಧಿತ ವಿಷಯಗಳು.

ಪಾರ್ವೊವೈರಸ್ ಎಂದರೇನು?


(What is parvovirus?)

ಸಂದರ್ಭ:

ಅಮರಾವತಿ ನಗರದಲ್ಲಿ ಕಳೆದ ತಿಂಗಳು ಸುಮಾರು 2,000 ಸಾಕುಪ್ರಾಣಿಗಳು ಮತ್ತು ಬೀದಿ ನಾಯಿಗಳು ‘ಕನೈನ್ ಪಾರ್ವೊವೈರಸ್’ (canine parvovirus) ನಿಂದ ಪ್ರಭಾವಿತವಾಗಿವೆ. ಈ ಗಂಭೀರ ಏಕಾಏಕಿ / ಔಟ್ ಬ್ರೆಕ್ ಬಗ್ಗೆ ಪಶುವೈದ್ಯರು ಈಗಾಗಲೇ ಸಾಕುಪ್ರಾಣಿ ಮಾಲೀಕರಿಗೆ ಎಚ್ಚರಿಕೆ ನೀಡಿದ್ದಾರೆ.

ಪಾರ್ವೊವೈರಸ್ ಎಂದರೇನು?

  1. ಪಾರ್ವೊವೈರಸ್ (Parvovirus), ನಾಯಿಮರಿಗಳು ಮತ್ತು ನಾಯಿಗಳ ಮೇಲೆ ಪರಿಣಾಮ ಬೀರುವ ಹೆಚ್ಚು ಸಾಂಕ್ರಾಮಿಕ ವೈರಲ್ ರೋಗವಾಗಿದೆ.
  2. ಇದರ ಸೋಂಕು ನಾಯಿಗಳ ಕರುಳಿನ ಮೇಲೆ ಪರಿಣಾಮ ಬೀರುತ್ತದೆ, ಮತ್ತು ನಾಯಿಮರಿಗಳು (Puppies) ಈ ರೋಗಕ್ಕೆ ಹೆಚ್ಚು ಒಳಗಾಗುತ್ತವೆ.
  3. ಈ ಕಾಯಿಲೆಗೆ ತುತ್ತಾದಾಗ, ರಕ್ತಸಿಕ್ತ ಭೇದಿ, ವಾಂತಿ, ಅತಿಯಾದ ತೂಕ ನಷ್ಟ, ನಿರ್ಜಲೀಕರಣ ಮತ್ತು ಆಲಸ್ಯದಂತಹ ಲಕ್ಷಣಗಳು ಕಂಡುಬರುತ್ತವೆ.
  4. ಈ ವೈರಸ್ ಸೋಂಕಿಗೆ ಒಳಗಾದಾಗ 90 ಪ್ರತಿಶತ ಮರಣ ಪ್ರಮಾಣ ವರದಿಯಾಗಿದೆ.

ಈ ವೈರಸ್ ಅನ್ನು ಮೊದಲು 1967 ರಲ್ಲಿ ಕಂಡುಹಿಡಿಯಲಾಯಿತು, ಮತ್ತು ಇದು ವೇಗವಾಗಿ ನಾಯಿಗಳ ಆರೋಗ್ಯಕ್ಕೆ ಗಂಭೀರ ಅಪಾಯವಾಗಿ ಮಾರ್ಪಟ್ಟಿದೆ.ಇದರ ತೀವ್ರತೆಗೆ ಮುಖ್ಯ ಕಾರಣವೆಂದರೆ ಈ ವೈರಸ್ ಅನ್ನು ಕೊಲ್ಲುವುದು ತುಂಬಾ ಕಷ್ಟ ಮತ್ತು ಇದು ಪರಿಸರದಲ್ಲಿ ದೀರ್ಘಕಾಲ ಬದುಕಬಲ್ಲದು.ಇದಲ್ಲದೆ, ಇದು ಸೋಂಕಿತ ನಾಯಿಗಳಿಂದ ಬಹಳ ವೇಗವಾಗಿ ಹರಡುತ್ತದೆ.

ಈ ವೈರಸ್ ನಾಯಿಗಳಲ್ಲಿ ಹೇಗೆ ಹರಡುತ್ತದೆ?

ನಾಯಿಗಳಲ್ಲಿ ಈ ವೈರಸ್ ಸೋಂಕಿತ ನಾಯಿಯೊಂದಿಗಿನ ನೇರ ಸಂಪರ್ಕದ ಮೂಲಕ ಅಥವಾ ಸೋಂಕಿತ ನಾಯಿಗಳನ್ನು ನಿರ್ವಹಿಸುವ ಜನರ ಕೈಗಳು ಮತ್ತು ಬಟ್ಟೆಗಳನ್ನು ಒಳಗೊಂಡಂತೆ ಕಲುಷಿತ ವಸ್ತುವಿನ ಪರೋಕ್ಷ ಸಂಪರ್ಕದ ಮೂಲಕ ಹರಡುತ್ತದೆ.

ಸೋಂಕು ಪ್ರಕರಣಗಳ ಸಂಖ್ಯೆ ಹೆಚ್ಚಾಗಲು ಕಾರಣ:

  1. ಸಾಕುಪ್ರಾಣಿಗಳಲ್ಲಿ ‘ಪಾರ್ವೋ ವೈರಸ್’ ಪ್ರಕರಣಗಳಲ್ಲಿ ಇತ್ತೀಚಿನ ಹೆಚ್ಚಳವು COVID-19 ಸಾಂಕ್ರಾಮಿಕ ರೋಗದಿಂದಾಗಿ, ಇದು ಅನೇಕ ಸಾಕುಪ್ರಾಣಿಗಳ ಮಾಲೀಕರಿಗೆ ಸಮಯಕ್ಕೆ ಸರಿಯಾಗಿ ತಮ್ಮ ನಾಯಿಗಳಿಗೆ ಲಸಿಕೆ ಒದಗಿಸಲು ಸಾಧ್ಯವಾಗಲಿಲ್ಲ.
  2. ಇದಲ್ಲದೆ, ಪ್ರಾಣಿಗಳ ಜನನ ನಿಯಂತ್ರಣ ಕಾರ್ಯಕ್ರಮಗಳು, ನಾಯಿಗಳಿಗೆ ಲಸಿಕೆಗಳು ಮತ್ತು ರೇಬೀಸ್ ಲಸಿಕೆ ನೀಡಿಕೆಯನ್ನು ಅನುಷ್ಠಾನಗೊಳಿಸದ ಕಾರಣ ಕಳೆದ ಮೂರು ವರ್ಷಗಳಿಂದ ನಗರಗಳಲ್ಲಿ ‘ಬೀದಿ ನಾಯಿಗಳಲ್ಲಿ ಪಾರ್ವೋ ವೈರಸ್’ ಪ್ರಕರಣಗಳು ಹೆಚ್ಚುತ್ತಿವೆ.

ಚಿಕಿತ್ಸೆ:

ಪ್ರಸ್ತುತ ‘ಪಾರ್ವೊವೈರಸ್’ಗೆ ಯಾವುದೇ ಚಿಕಿತ್ಸೆ ಇಲ್ಲ, ಮತ್ತು ನಾಯಿಮರಿ ಅಥವಾ ನಾಯಿಗೆ ಲಸಿಕೆ ಹಾಕುವ ಮೂಲಕ ಅವುಗಳನ್ನು ಸೋಂಕಿನಿಂದ ರಕ್ಷಿಸಬಹುದಾಗಿದೆ.

 

ವಿಷಯಗಳು: ಸರ್ಕಾರದ ನೀತಿಗಳು ಮತ್ತು ವಿವಿಧ ಕ್ಷೇತ್ರಗಳಲ್ಲಿನ ಅಭಿವೃದ್ಧಿಯ ಅಡಚಣೆಗಳು ಮತ್ತು ಅವುಗಳ ವಿನ್ಯಾಸ ಮತ್ತು ಅನುಷ್ಠಾನದಿಂದ ಉಂಟಾಗುವ ಸಮಸ್ಯೆಗಳು.

ಕರ್ನಾಟಕದ ಮತಾಂತರ ವಿರೋಧಿ ಕರಡು ಮಸೂದೆ:


(Karnataka’s draft anti-conversion Bill)

ಸಂದರ್ಭ:

ಇತ್ತೀಚೆಗೆ ಕರ್ನಾಟಕ ಸರ್ಕಾರದಿಂದ ‘ಮತಾಂತರ ನಿಷೇಧ ಮಸೂದೆ’ ಯು ಸಿದ್ಧಗೊಂಡಿದೆ. ಮೊದಲ ನೋಟದಲ್ಲಿ, ಉತ್ತರ ಪ್ರದೇಶ ರಾಜ್ಯವು ಜಾರಿಗೊಳಿಸಿದ ಇದೇ ರೀತಿಯ ಕಾನೂನಿನ ಆಧಾರದ ಮೇಲೆ ಮಸೂದೆಯನ್ನು ರಚಿಸಲಾಗಿದೆ ಎಂದು ತೋರುತ್ತದೆ.

  1. ಕರ್ನಾಟಕದ ‘ಧಾರ್ಮಿಕ ಸ್ವಾತಂತ್ರ್ಯಸಂರಕ್ಷಣೆ ಹಕ್ಕು’ ಮಸೂದೆ, 2021 ರ (Karnataka Protection of Right to Freedom of Religion Bill, 2021) ಉತ್ತರ ಪ್ರದೇಶದಲ್ಲಿ ಜಾರಿಯಲ್ಲಿರುವ ಕಾನೂನಿನಂತೆ, ಈ ಉದ್ದೇಶಿತ ಮಸೂದೆಯು ಇತರರನ್ನು ‘ವಂಚನೆ’ ಅಥವಾ ‘ಮದುವೆ’ ಮೂಲಕ ಮತಾಂತರಿಸಲು ಅಥವಾ ಮತಾಂತರಿಸಲು ಪ್ರಯತ್ನಿಸುವವರನ್ನು ಶಿಕ್ಷಿಸುವ ಗುರಿಯನ್ನು ಹೊಂದಿದೆ.

ಕರ್ನಾಟಕದ ‘ಧಾರ್ಮಿಕ ಸ್ವಾತಂತ್ರ್ಯಸಂರಕ್ಷಣೆ ಹಕ್ಕು’ ಮಸೂದೆ, 2021 ರ ಪ್ರಮುಖ ಅಂಶಗಳು:

ಒತ್ತಾಯ, ಆಮಿಷ ಒಡ್ಡಿ ಮತಾಂತರಗಳನ್ನು ನಿಷೇಧಿಸುವ ಪ್ರಸ್ತಾವ ಈ ಮಸೂದೆಯಲ್ಲಿದೆ.

  1. ಪರಿಶಿಷ್ಟ (ಎಸ್‌ಸಿ, ಎಸ್‌ಟಿ), ಅಪ್ರಾಪ್ತರು, ಮಹಿಳೆಯರು, ಬುದ್ಧಿಮಾಂದ್ಯರನ್ನು ಮತಾಂತರ ಮಾಡಿದವನಿಗೆ ಕನಿಷ್ಠ 3 ವರ್ಷದಿಂದ 10 ವರ್ಷದವರೆಗೆ ಜೈಲು, ₹ 50 ಸಾವಿರ ದಂಡ ವಿಧಿಸಲು ಅವಕಾಶ ಕಲ್ಪಿಸಲಾಗಿದೆ.
  2. ಕಾನೂನುಬಾಹಿರವಾಗಿ ಇತರ ವರ್ಗದವರನ್ನು ಮತಾಂತರ ಮಾಡಿದ ಯಾವುದೇ ವ್ಯಕ್ತಿಗೆ ಕನಿಷ್ಠ 3 ವರ್ಷದಿಂದ 5 ವರ್ಷದವರೆಗೆ ಜೈಲು ಮತ್ತು ₹ 25 ಸಾವಿರ ದಂಡ,ವಿಧಿಸಲು ಅವಕಾಶವಿದೆ.
  3. ಸಾಮೂಹಿಕ ಮತಾಂತರ ಮಾಡಿದವನಿಗೆ 3ರಿಂದ 10 ವರ್ಷದವರೆಗೆ ಜೈಲು ಶಿಕ್ಷೆ ಮತ್ತು ₹ 1 ಲಕ್ಷ ದಂಡ ವಿಧಿಸಲು ಅವಕಾಶವಿದೆ.
  4. ಮತಾಂತರಗೊಳಿಸಿರುವುದು ನ್ಯಾಯಾಲಯದಲ್ಲಿ ಸಾಬೀತಾದರೆ, ಮತಾಂತರಕ್ಕೆ ಒಳಗಾದವನಿಗೆ ಮತಾಂತರ ಮಾಡಿದವನು ಸೂಕ್ತ ಪರಿಹಾರ ನೀಡಲು ಕೂಡಾ ಈ ಕಾಯ್ದೆಯಲ್ಲಿ ಅವಕಾಶ ಕಲ್ಪಿಸಲು ಮಸೂದೆಯಲ್ಲಿ ಉಲ್ಲೇಖಿಸಲಾಗಿದೆ. ಮತಾಂತರಕ್ಕೆ ಒಳಗಾದವನಿಗೆ ಗರಿಷ್ಠ ₹ 5 ಲಕ್ಷ ಪರಿಹಾರ ನೀಡಬೇಕು ಎಂದು ನ್ಯಾಯಾಲಯವು ಆರೋಪಿಗೆ ಆದೇಶಿಸ ಬಹುದಾಗಿದೆ. ಅಲ್ಲದೆ, ಹೆಚ್ಚುವರಿಯಾಗಿ ದಂಡ ನೀಡಬೇಕು. ಈ ಹಿಂದೆಯೂ ಮತಾಂತರ ಮಾಡಿದ್ದರೆ, ಅಂಥವರಿಗೆ ಎರಡು ಪಟ್ಟು ಶಿಕ್ಷೆ ವಿಧಿಸಲು ಕೂಡಾ ಮಸೂದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ.
  5. ಯಾವುದೇ ವ್ಯಕ್ತಿಯು ಸ್ವಯಂ ಪ್ರೇರಣೆಯಿಂದ ಧರ್ಮ ಬದಲಿಸುವುದಾದರೆ ಜಿಲ್ಲಾಧಿಕಾರಿಗಳಿಗೆ 60 ದಿನಗಳ ಮೊದಲು ನಮೂನೆ 1ರಲ್ಲಿ ಅರ್ಜಿ ಸಲ್ಲಿಸಬೇಕು. ಮತಾಂತರ ಮಾಡುವ ವ್ಯಕ್ತಿಯು ನಮೂನೆ ಎರಡರಲ್ಲಿ ಅರ್ಜಿ ಸಲ್ಲಿಸಬೇಕು. ಬಳಿಕ ಜಿಲ್ಲಾಧಿಕಾರಿಯು ಮತಾಂತರಗೊಳ್ಳುವವನನ್ನು ಮತ್ತು ಮತಾಂತರ ಮಾಡುವವನನ್ನು ಪೊಲೀಸರ ನೆರವಿನಿಂದ ವಿಚಾರಣೆ ನಡೆಸಬೇಕು. ನಮೂನೆ 3ರಲ್ಲಿ ಮಾಹಿತಿಯನ್ನು ಪಡೆದುಕೊಳ್ಳಬೇಕು. ಬಳಿಕ ಜಿಲ್ಲಾಧಿಕಾರಿಗಳು ಮತಾಂತರಗೊಂಡ ವ್ಯಕ್ತಿಯ ಶಾಲೆ, ಕಾಲೇಜುಗಳ ಸಕ್ಷಮ ಪ್ರಾಧಿಕಾರಕ್ಕೆ ಮತ ಬದಲಾವಣೆಗೆ ಸೂಚಿಸಬೇಕು. ಆ ಮೂಲಕ, ಮತಾಂತರಗೊಂಡ ಪರಿಶಿಷ್ಟರಿಗೆ ಸಿಗುವ ಜಾತಿ ಮೀಸಲಾತಿ ಮತ್ತು ಇತರ ಸೌಲಭ್ಯಗಳು ಸ್ಥಗಿತಗೊಳ್ಳಲಿವೆ.
  6. ಅಲ್ಲದೆ, ಶಿಕ್ಷಣ ಸಂಸ್ಥೆಗಳು, ಅನಾಥಾಶ್ರಮಗಳು, ವೃದ್ಧಾಶ್ರಮಗಳು, ಆಸ್ಪತ್ರೆ, ಧಾರ್ಮಿಕ ಮಿಷನರಿಗಳು, ಸರ್ಕಾರೇತರ ಸಂಸ್ಥೆಗಳು (ಎನ್‌ಜಿಒ) ಸೇರಿದಂತೆ ನಿರ್ದಿಷ್ಟ ಸಂಸ್ಥೆಗಳು ಇಬ್ಬರು ಅಥವಾ ಹೆಚ್ಚು ಮಂದಿಯ ಸಾಮೂಹಿಕ ಮತಾಂತರ ಪ್ರಕ್ರಿಯೆಯಲ್ಲಿ ಭಾಗಿಯಾದರೆ ಅಂಥ ಸಂಸ್ಥೆಗಳಿಗೆ ಸರ್ಕಾರದಿಂದ ಅನುದಾನ ನಿಲ್ಲಿಸುವ ಬಗ್ಗೆ ಪ್ರಸ್ತಾವವಿದೆ.
  7. ಆಮಿಷ ಒಡ್ಡಿ ಮತಾಂತರಗೊಂಡು ವಿವಾಹ ಆಗಿದ್ದರೆ ಅಂಥ ವಿವಾಹವನ್ನು ಅಸಿಂಧು ಎಂದು ಘೋಷಿಸಲು ಕುಟುಂಬ ನ್ಯಾಯಾಲಯಕ್ಕೆ ಅವಕಾಶ ನೀಡಲಾಗಿದೆ. ಅಲ್ಲದೆ, ಮತಾಂತರ ಅಪರಾಧವನ್ನು ಜಾಮೀನುರಹಿತ ಮತ್ತು ಸಂಜ್ಞೆಯ ಅಪರಾಧ (ನೇರವಾಗಿ ವಿಚಾರಣೆಗೆ ಕೈಗೆತ್ತಿಕೊಳ್ಳಬಹುದು) ಎಂದು ಪರಿಗಣಿಸಬಹುದು. ಒತ್ತಾಯಪೂರ್ವವಾಗಿ ಮತಾಂತರ ಮಾಡುತ್ತಿದ್ದರೆ ಪೊಲೀಸರಿಗೆ ಮಾಹಿತಿ ನೀಡಬಹುದು. ಒತ್ತಾಯದ ಮತಾಂತರ ಅಸಿಂಧುವಾಗುತ್ತದೆ ಎಂದೂ ಮಸೂದೆಯಲ್ಲಿದೆ.

ಯಾವುದು ಕಾನೂನುಬಾಹಿರ: ಮಸೂದೆಯ ಪ್ರಕಾರ, ಯಾವುದೇ ರೀತಿಯ ವಸ್ತು, ಹಣದ ರೂಪದಲ್ಲಿ ಉಡುಗೊರೆ, ಯಾವುದೇ ಧರ್ಮದ ಪ್ರತಿಷ್ಠಿತ ಸಂಸ್ಥೆಯಲ್ಲಿ ಉದ್ಯೋಗ, ಉಚಿತ ಶಿಕ್ಷಣ, ವಿವಾಹವಾಗುವುದಾಗಿ ಆಮಿಷ ಅಥವಾ ಉತ್ತಮ ಜೀವನಶೈಲಿ, ಭಾವನಾತ್ಮಕವಾಗಿ ಸೆಳೆದು ಬಲವಂತವಾಗಿ ಮತಾಂತರ ಮಾಡುವುದು ಕಾನೂನುಬಾಹಿರ.

ಕಾನೂನು ಆಯೋಗ ಶಿಫಾರಸು: ಸಂವಿಧಾನದ ಅನುಚ್ಚೇದ 25ರಲ್ಲಿ ಎಲ್ಲರಿಗೂ ಅವರವರ ಧರ್ಮವನ್ನು ಅನುಸರಿಸಲು ಮತ್ತು ಪ್ರಚಾರ ಮಾಡಲು ಅವಕಾಶ ನೀಡಲಾಗಿದೆ. ಆದರೆ, ರೆವರೆಂಡ್‌ ಸ್ಟೇನಿಲಡ್‌ ವರ್ಸಸ್‌ ಮಧ್ಯಪ್ರದೇಶ ಪ್ರದೇಶ ಸರ್ಕಾರದ ಪ್ರಕರಣದಲ್ಲಿ ತೀರ್ಪು ನೀಡಿರುವ ಸುಪ್ರೀಂ ಕೋರ್ಟ್‌, ಧರ್ಮದ ಪ್ರಚಾರ ಮಾಡಬಹುದು ಎಂಬ ಕಾರಣಕ್ಕೆ ಮತಾಂತರಕ್ಕೆ ಅವಕಾಶ ಇದೆಯೆಂದು ಹೇಳಲಾಗದು ಎಂದು ಸ್ಪಷ್ಟವಾಗಿ ಹೇಳಿದೆ. ಇತ್ತೀಚಿನ ದಿನಗಳಲ್ಲಿ ಸಂವಿಧಾನದ ಅನುಚ್ಛೇದ 25ನ್ನು ದುರ್ಬಳಕೆ ಮಾಡಿಕೊಂಡು ಮತಾಂತರ ಮಾಡಿರುವ ಹಲವು ಪ್ರಕರಣಗಳು ನಡೆದಿವೆ. ಅದನ್ನು ನಿಲ್ಲಿಸುವುದು ಈ ಕಾನೂನಿನ ಉದ್ದೇಶವಾಗಿದೆ. ಸಾಮಾಜಿಕ ಸುವ್ಯವಸ್ಥೆ ಧಕ್ಕೆ ಬರುವಂತೆ ವರ್ತಿಸಿದರೆ ಅವುಗಳನ್ನು ನಿಯಂತ್ರಿಸಲು ಅವಕಾಶವಿದೆ.

ಮತಾಂತರ ಮಾಡುವವರು ಎಂದರೆ?

ಒಂದು ಧರ್ಮದಿಂದ ಇನ್ನೊಂದು ಧರ್ಮಕ್ಕೆ ಮತಾಂತರ ಮಾಡುವವರು. ಅವರು ಫಾದರ್‌ಗಳು, ಧಾರ್ಮಿಕ ಗುರುಗಳು, ಪುರೋಹಿತರು, ಪಂಡಿತ್‌, ಮೌಲ್ವಿಗಳು, ಮುಲ್ಲಾಗಳು…ಹೀಗೆ ಯಾವುದೇ ಹೆಸರಿನಲ್ಲಿ ಕರೆಸಿಕೊಂಡಿರಬಹುದು ಎಂದು ಮತಾಂತರ ಮಾಡುವವರನ್ನು ಗುರುತಿಸಲಾಗುವುದು ಎಂದು ಮಸೂದೆ ವಿವರಿಸಿದೆ.

ಮುಂದಿರುವ ಸವಾಲುಗಳು:

ಕರ್ನಾಟಕ ಸರ್ಕಾರವು ತನ್ನ ಮತಾಂತರ ವಿರೋಧಿ ಕಾನೂನಿನ ಅಡಿಯಲ್ಲಿ ಜಾರಿಗೊಳಿಸಲು ಉದ್ದೇಶಿಸಿರುವ ಕೆಲವು ನಿಬಂಧನೆಗಳ ಮೇಲೆ ಬಿಜೆಪಿ ಆಡಳಿತದ ಮತ್ತೊಂದು ರಾಜ್ಯವಾದ ಗುಜರಾತ್‌ನಲ್ಲಿ ತಡೆ ನೀಡಲಾಗಿದೆ.

  1. 2020 ರಲ್ಲಿ ಗುಜರಾತ್ ಸರ್ಕಾರವು ಪರಿಷ್ಕೃತ ಮತಾಂತರ ವಿರೋಧಿ ಕಾನೂನನ್ನು ಸಹ ಜಾರಿಗೊಳಿಸಿತು. ಆದಾಗ್ಯೂ, ಆಗಸ್ಟ್ 2021 ರಲ್ಲಿ ಗುಜರಾತ್ ಹೈಕೋರ್ಟ್ ಅದರ ಕೆಲವು ನಿಬಂಧನೆಗಳಿಗೆ ತಡೆ ನೀಡಿತ್ತು, ಉದಾಹರಣೆಗೆ ಅಂತರ್-ಧರ್ಮೀಯ ವಿವಾಹಗಳನ್ನು ಮಾಡಿ ಕೊಳ್ಳುವವರ ಮೇಲೆ ‘ಸಾಕ್ಷಿ ಒದಗಿಸುವ ಹೊರೆ’ (burden of proof) ಯನ್ನು ಇರಿಸುವಂತಹ ನಿಬಂಧನೆಗಳು.
  2. ಈ ನಿಬಂಧನೆಯು ಭಾರತದ ಸಂವಿಧಾನದ ಅಡಿಯಲ್ಲಿ ಖಾತರಿಪಡಿಸಲಾದ ‘ಆಯ್ಕೆಯ ಹಕ್ಕು ಮತ್ತು ವ್ಯಕ್ತಿಯ ಸ್ವಾತಂತ್ರ್ಯ’ವನ್ನು ಉಲ್ಲಂಘಿಸುತ್ತದೆ ಎಂದು ಗುಜರಾತ್ ಹೈಕೋರ್ಟ್ ಹೇಳಿದೆ.

ಕರ್ನಾಟಕ ಸರ್ಕಾರವು ಪರಿಚಯಿಸಿದ ಮಸೂದೆಯಲ್ಲಿಯೂ ಸಹ ಇದೇ ರೀತಿಯ ನಿಬಂಧನೆಗಳನ್ನು ಸೇರಿಸಿರುವುದರ ಅರ್ಥ,   ಈ ಕಾನೂನು ಸಂವಿಧಾನವು ಖಾತರಿಪಡಿಸಿದ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂಬುದಾಗಿದೆ.

ಹಿನ್ನೆಲೆ:

ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದಂತಹ ರಾಜ್ಯಗಳು ಈಗಾಗಲೇ ಬಲವಂತದ ಮತಾಂತರದ ವಿರುದ್ಧ ಕಠಿಣ ಕಾನೂನುಗಳನ್ನು ಜಾರಿಗೆ ತಂದಿವೆ. ಹರಿಯಾಣ ಮತ್ತು ಕರ್ನಾಟಕ ಕೂಡ ಇಂತಹ ಕಾನೂನುಗಳನ್ನು ಮಾಡುವ ಉದ್ದೇಶವನ್ನು ಘೋಷಿಸಿವೆ.

ಆದರೆ, ಕೇಂದ್ರ ಕಾನೂನಿಗೆ ಬೇಡಿಕೆ ಇಟ್ಟವರು ದೇಶದಲ್ಲಿ ಇತ್ತೀಚಿನ ಘಟನೆಗಳು ಇದು ಪ್ಯಾನ್-ಇಂಡಿಯಾ ರಾಕೆಟ್ ಎಂದು ಸಾಬೀತುಪಡಿಸಿವೆ ಆದ್ದರಿಂದ ಕೇಂದ್ರ ಕಾನೂನನ್ನು ಜಾರಿಗೆ ತರುವ ಅವಶ್ಯಕತೆಯಿದೆ ಎಂದು ಹೇಳುತ್ತಾರೆ.

‘ಮತಾಂತರ-ವಿರೋಧಿ ಕಾನೂನುಗಳ ಜಾರಿ’ಯ ಹಿಂದಿನ ಕಾರಣ:

  1. ಬಲವಂತದ ಮತಾಂತರದ ಬೆದರಿಕೆಗಳು.
  2. ಪ್ರಚೋದನೆಯ ಸಮಸ್ಯೆ.
  3. ‘ಧಾರ್ಮಿಕ ಮತಾಂತರ’ವು, ಮೂಲಭೂತ ಹಕ್ಕಲ್ಲ.

ವಿಮರ್ಶಕರು ಹೇಳುವುದೇನು?

ಹಲವಾರು ಕಾನೂನು ಪಂಡಿತರು ‘ಲವ್ ಜಿಹಾದ್’ ಪರಿಕಲ್ಪನೆಗೆ ಯಾವುದೇ ಸಾಂವಿಧಾನಿಕ ಅಥವಾ ಕಾನೂನು ಆಧಾರಗಳಿಲ್ಲ ಎಂದು ವಾದಿಸಿ ಈ ಕಾನೂನನ್ನು ತೀವ್ರ ಟೀಕೆಗೆ ಗುರಿ ಪಡಿಸಿದ್ದಾರೆ.

  1. ಒಬ್ಬರು ತಮ್ಮ ಆಯ್ಕೆಯ ವ್ಯಕ್ತಿಯನ್ನು ಮದುವೆಯಾಗುವ ಹಕ್ಕನ್ನು ಖಾತರಿಪಡಿಸುವ ಸಂವಿಧಾನದ 21 ನೇ ವಿಧಿಯನ್ನು ಅವರು ಸೂಚಿಸಿದ್ದಾರೆ.
  2. ಅಲ್ಲದೆ, ಸಂವಿಧಾನದ 25 ನೆಯ ವಿಧಿಯು ಅಂತಃಸಾಕ್ಷಿ ಸ್ವಾತಂತ್ರ್ಯ ಮತ್ತು ಧರ್ಮದ ಅಭಾದಿತ ಅವಲಂಬನೆ, ಆಚರಣೆ ಮತ್ತು ಪ್ರಚಾರದ ಸ್ವಾತಂತ್ರ್ಯ ನೀಡುತ್ತದೆ.

ಮದುವೆ ಮತ್ತು ಮತಾಂತರದ ಕುರಿತು ಸುಪ್ರೀಂ ಕೋರ್ಟ್ ಅಭಿಪ್ರಾಯ:

  1. ಭಾರತದ ಸರ್ವೋಚ್ಚ ನ್ಯಾಯಾಲಯವು ತನ್ನ ಹಲವಾರು ತೀರ್ಪುಗಳಲ್ಲಿ, ಜೀವನ ಸಂಗಾತಿಯನ್ನು ಆಯ್ಕೆ ಮಾಡುಕೊಳ್ಳುವ ವಯಸ್ಕರ ಸಂಪೂರ್ಣ ಹಕ್ಕಿನ ಕುರಿತು ಮಧ್ಯಪ್ರವೇಶಿಸಿಸಲು ರಾಜ್ಯ ಮತ್ತು ನ್ಯಾಯಾಲಯಗಳಿಗೆ ಯಾವುದೇ ಅಧಿಕಾರವಿಲ್ಲ ಎಂದು ಅಭಿಪ್ರಾಯಪಟ್ಟಿದೆ.
  2. ಭಾರತದ ಸುಪ್ರೀಂ ಕೋರ್ಟ್, ಲಿಲಿ ಥಾಮಸ್ ಮತ್ತು ಸರಳಾ ಮುದ್ಗಲ್ ಎರಡೂ ಪ್ರಕರಣಗಳಲ್ಲಿ, ಧಾರ್ಮಿಕ ಮತಾಂತರಗಳು ನಂಬಿಕೆಯಿಲ್ಲದೆ ನಡೆದಿವೆ ಮತ್ತು ಕೆಲವು ಕಾನೂನು ಪ್ರಯೋಜನವನ್ನು ಪಡೆಯುವ ಏಕೈಕ ಉದ್ದೇಶಕ್ಕಾಗಿ ನಡೆದಿವೆ ಎಂದು ಹೇಳುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಹೇಳಿದೆ.
  3. ಅಲಹಾಬಾದ್ ಹೈಕೋರ್ಟ್, 2020 ರ ಸಾಲಮತ್ ಅನ್ಸಾರಿ-ಪ್ರಿಯಾಂಕ ಖರ್ವಾರ್ ಪ್ರಕರಣದ ತೀರ್ಪು ನೀಡುವಾಗ, ಸಂಗಾತಿಯನ್ನು ಆಯ್ಕೆ ಮಾಡುವ ಅಥವಾ ಆತನ/ಆಕೆಯ ಆಯ್ಕೆಯ ವ್ಯಕ್ತಿಯೊಂದಿಗೆ ಬದುಕುವ ಹಕ್ಕು ನಾಗರಿಕರ ‘ಜೀವನ ಮತ್ತು ಸ್ವಾತಂತ್ರ್ಯದ ಮೂಲಭೂತ ಹಕ್ಕಿ’ನ (ಆರ್ಟಿಕಲ್ 21) ಭಾಗವಾಗಿದೆ.

ಈ ಸಮಯದ ಅವಶ್ಯಕತೆ:

  1. ಏಕರೂಪತೆಯ ಅವಶ್ಯಕತೆ: ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆಯ (UDHR) ಅನುಚ್ಛೇದ 18 ರ ಪ್ರಕಾರ, ಎಲ್ಲಾ ವ್ಯಕ್ತಿಗಳು ಮತಾಂತರದ ಹಕ್ಕು ಸೇರಿದಂತೆ ಧಾರ್ಮಿಕ ಸ್ವಾತಂತ್ರ್ಯದ ಹಕ್ಕನ್ನು ಹೊಂದಿದ್ದಾರೆ. ಇದು ರಾಜ್ಯ ವಿಷಯವಾಗಿರುವುದರಿಂದ, ಕೇಂದ್ರ ಸರ್ಕಾರವು ಈ ವಿಷಯದ ಕುರಿತು ಗುತ್ತಿಗೆ ಕೃಷಿಯ ಮಾದರಿ ಕಾನೂನಿನಂತೆ ಯಾವುದೇ ಒಂದು ಕಾನೂನು ಕಾನೂನನ್ನು ಮಾಡಬಹುದು.
  2. ಮತಾಂತರ ವಿರೋಧಿ ಕಾನೂನುಗಳನ್ನು ಜಾರಿಗೊಳಿಸುವಾಗ, ರಾಜ್ಯಗಳು ಸ್ವಯಂಪ್ರೇರಣೆಯಿಂದ ಮತಾಂತರಗೊಳ್ಳುವ ವ್ಯಕ್ತಿಗೆ ಯಾವುದೇ ಅಸ್ಪಷ್ಟ ಅಥವಾ ದ್ವಂದ್ವಾರ್ಥದ ನಿಬಂಧನೆಗಳನ್ನು ಹಾಕಬಾರದು.
  3. ಮತಾಂತರ-ವಿರೋಧಿ ಕಾನೂನುಗಳಲ್ಲಿ, ಅಲ್ಪಸಂಖ್ಯಾತ ಸಮುದಾಯ ಸಂಸ್ಥೆಗಳಿಂದ ಮತಾಂತರಕ್ಕೆ ಮಾನ್ಯವಾದ ಕಾನೂನು ಹಂತಗಳನ್ನು ನಮೂದಿಸುವ ಒಂದು ನಿಬಂಧನೆಯನ್ನು ಒಳಗೊಂಡಿರುವ ಅವಶ್ಯಕತೆಯೂ ಇದೆ.
  4. ಬಲವಂತದ ಮತಾಂತರಗಳು, ಪ್ರೇರಣೆ ಅಥವಾ ಪ್ರಚೋದನೆ ಇತ್ಯಾದಿಗಳಿಗೆ ಸಂಬಂಧಿಸಿದ ನಿಬಂಧನೆಗಳು ಮತ್ತು ವಿಧಾನಗಳ ಬಗ್ಗೆ ಜನರಿಗೆ ಶಿಕ್ಷಣ ನೀಡುವ ಅವಶ್ಯಕತೆಯೂ ಇದೆ.

 

ವಿಷಯಗಳು: ಪ್ರಮುಖ ಅಂತರರಾಷ್ಟ್ರೀಯ ಸಂಸ್ಥೆಗಳು, ಏಜೆನ್ಸಿಗಳು ಮತ್ತು ವೇದಿಕೆಗಳು, ಅವುಗಳ ರಚನೆ, ಮತ್ತು ಆದೇಶ.

ಇಸ್ಲಾಮಿಕ್ ಸಹಕಾರ ಸಂಘಟನೆ:


(Organization of Islamic Cooperation)

ಸಂದರ್ಭ:

ಅಫ್ಘಾನಿಸ್ತಾನವನ್ನು ಸನ್ನಿಹಿತವಾದ ಆರ್ಥಿಕ ಕುಸಿತದಿಂದ ರಕ್ಷಿಸಲು ಇಸ್ಲಾಮಿಕ್ ಸಹಕಾರ ಸಂಘಟನೆ (Organisation of Islamic Conference -OIC) ಯು ಇತ್ತೀಚೆಗೆ ಇಸ್ಲಾಮಾಬಾದ್‌ನಲ್ಲಿ ಸಭೆಯನ್ನು ಕರೆಯಿತು. ಅಫ್ಘಾನಿಸ್ತಾನದ ಆರ್ಥಿಕ ವೈಫಲ್ಯವು “ಭಯಾನಕ” ಜಾಗತಿಕ ಪರಿಣಾಮವನ್ನು ಬೀರುವ ಸಾಧ್ಯತೆಯಿದೆ.

  1. ಶೃಂಗಸಭೆಯಲ್ಲಿ ಡಜನ್ಗಟ್ಟಲೆ ವಿದೇಶಾಂಗ ಮಂತ್ರಿಗಳು ಹಾಗೂ ಚೀನಾ, ಯುಎಸ್ ಮತ್ತು ರಷ್ಯಾ ಮತ್ತು ಅಫ್ಘಾನಿಸ್ತಾನ ಸೇರಿದಂತೆ ಪ್ರಮುಖ ದೇಶಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

ಫಲಿತಾಂಶ:

ಇಸ್ಲಾಮಿಕ್ ಡೆವಲಪ್‌ಮೆಂಟ್ ಬ್ಯಾಂಕ್ (IDB) ಮೂಲಕ ಮಾನವೀಯ ನೆರವು ನೀಡಲು ನಿಧಿಯನ್ನು ಸ್ಥಾಪಿಸುವ ಭರವಸೆಯೊಂದಿಗೆ ಸಭೆ ಕೊನೆಗೊಂಡಿತು. ಈ ನಿಧಿಯು ಅಫ್ಘಾನಿಸ್ತಾನದ ತಾಲಿಬಾನ್ ಆಡಳಿತಗಾರರೊಂದಿಗೆ ನೇರವಾಗಿ ವ್ಯವಹರಿಸಿದೇ ವಿವಿಧ ದೇಶಗಳು ಈ ನಿಧಿಗೆ ದೇಣಿಗೆ ನೀಡಲು ಒಂದು ಕವರ್ ಅನ್ನು ಒದಗಿಸುತ್ತದೆ.

ಏನಿದು ಪ್ರಕರಣ?

ಇತ್ತೀಚೆಗೆ, ಅಫ್ಘಾನಿಸ್ತಾನದಲ್ಲಿ ಸಿಲುಕಿರುವ $10 ಶತಕೋಟಿಗಿಂತ ಹೆಚ್ಚಿನ ನಿಶ್ಚಲ ಆಸ್ತಿಯನ್ನು ‘ಬಿಡುಗಡೆ’ ಮಾಡುವಂತೆ US ಮತ್ತು ಇತರ ದೇಶಗಳ ಮೇಲೆ ಬೇಡಿಕೆ ಹೆಚ್ಚುತ್ತಿದೆ.

  1. ಆದರೆ, ಇದಕ್ಕೂ ಮುನ್ನ ಅಲ್-ಖೈದಾದಿಂದ 9/11 ಭಯೋತ್ಪಾದಕ ದಾಳಿಯ ಬಲಿಪಶುಗಳು ಮತ್ತು ಬಲಿಪಶುಗಳ ಕುಟುಂಬಗಳನ್ನು ಒಳಗೊಂಡಿರುವ ಮೊಕದ್ದಮೆಯಲ್ಲಿ ಈ ಮೊತ್ತದ ಕೆಲವು ಭಾಗವಾಗವು ಸಿಲುಕಿದೆ ಎಂದು ಅಮೆರಿಕ ಹೇಳಿತ್ತು.
  2. ಅಫ್ಘಾನಿಸ್ತಾನಕ್ಕೆ ನೆರವು ನೀಡಲು ಒಟ್ಟಾಗಿ ವಿಶ್ವಸಂಸ್ಥೆ ಮತ್ತು ಅಂತರರಾಷ್ಟ್ರೀಯ ಬ್ಯಾಂಕಿಂಗ್ ಸಂಸ್ಥೆಗಳೊಂದಿಗೆ ದೇಶದ ಬ್ಯಾಂಕಿಂಗ್ ವ್ಯವಸ್ಥೆಯನ್ನು ಶೀಘ್ರವಾಗಿ ತೆರೆಯಲು ಹಲವಾರು ರಾಷ್ಟ್ರಗಳು ಕರೆ ನೀಡಿವೆ.

ಇಸ್ಲಾಮಿಕ್ ಸಹಕಾರ ಸಂಘಟನೆಯ ಕುರಿತು:

  1. OIC,1969 ರಲ್ಲಿ ಸ್ಥಾಪಿಸಲಾದ ಅಂತರರಾಷ್ಟ್ರೀಯ ಸಂಸ್ಥೆಯಾಗಿದ್ದು, ಪ್ರಸ್ತುತ 57 ಸದಸ್ಯ ರಾಷ್ಟ್ರಗಳನ್ನು ಒಳಗೊಂಡಿದೆ.
  2. ಇದು ವಿಶ್ವಸಂಸ್ಥೆಯ ನಂತರ ಎರಡನೇ ಅತಿ ದೊಡ್ಡ ಅಂತರಸರ್ಕಾರಿ ಸಂಸ್ಥೆಯಾಗಿದೆ.
  3. ಸಂಘಟನೆಯು ಇದು “ಮುಸ್ಲಿಂ ಪ್ರಪಂಚದ ಸಾಮೂಹಿಕ ಧ್ವನಿ ಎಂದು ಹೇಳುತ್ತದೆ, ಮತ್ತು ಇದು ಅಂತರರಾಷ್ಟ್ರೀಯ ಶಾಂತಿ ಮತ್ತು ಸೌಹಾರ್ದತೆಯನ್ನು ಉತ್ತೇಜಿಸುವ ಜೊತೆಗೆ ವಿಶ್ವದ ಮುಸ್ಲಿಂ ಸಮುದಾಯಗಳ ಹಿತಾಸಕ್ತಿಗಳನ್ನು ಕಾಪಾಡುವ ಮತ್ತು ಸಂರಕ್ಷಿಸುವ ಗುರಿಯನ್ನು ಹೊಂದಿದೆ.
  4. OIC ವಿಶ್ವಸಂಸ್ಥೆ ಮತ್ತು ಯುರೋಪಿಯನ್ ಒಕ್ಕೂಟಕ್ಕೆ ಶಾಶ್ವತ ನಿಯೋಗಗಳನ್ನು ಹೊಂದಿದೆ.
  5. ಇದರ ಶಾಶ್ವತ ಸಚಿವಾಲಯವು ಸೌದಿ ಅರೇಬಿಯಾದ ಜೆಡ್ಡಾದಲ್ಲಿದೆ.

ಭಾರತಕ್ಕೆ OIC ಯ ಮಹತ್ವ:

ಇತ್ತೀಚಿನ ದಿನಗಳಲ್ಲಿ ಭಾರತ ಮತ್ತು OIC ನಡುವೆ ಬೆಳೆಯುತ್ತಿರುವ ಆರ್ಥಿಕ ಮತ್ತು ಇಂಧನದ ಪರಸ್ಪರ ಅವಲಂಬನೆಯು ವಿಶೇಷವಾಗಿ ಮಹತ್ವದ್ದಾಗಿದೆ.

 


ಸಾಮಾನ್ಯ ಅಧ್ಯಯನ ಪತ್ರಿಕೆ : 3


 

ವಿಷಯಗಳು:ಆಂತರಿಕ ಭದ್ರತೆಗೆ ಸವಾಲನ್ನು ಒಡ್ಡುವ ಆಡಳಿತ ವಿರೋಧಿ ಅಂಶಗಳ ಪಾತ್ರ.

ಲೋಕೂರ್ ಆಯೋಗ:


(Lokur Commission)

ಸಂದರ್ಭ:

ಇತ್ತೀಚೆಗೆ, ಇಸ್ರೇಲಿ ಸೈಬರ್-ಗುಪ್ತಚರ ಕಂಪನಿ NSO ಗ್ರೂಪ್ ಅಭಿವೃದ್ಧಿಪಡಿಸಿದ ಮಿಲಿಟರಿ ದರ್ಜೆಯ ‘ಪೆಗಾಸಸ್ ಸ್ಪೈವೇರ್’ ಮೂಲಕ ‘ಮೊಬೈಲ್ ಫೋನ್’ಗಳ ಕದ್ದಾಲಿಕೆಯ ತನಿಖೆಗಾಗಿ ಪಶ್ಚಿಮ ಬಂಗಾಳ ಸರ್ಕಾರವು ರಚಿಸಿದ್ದ ನ್ಯಾಯಮೂರ್ತಿ ಮದನ್ ಲೋಕೂರ್ ಆಯೋಗ (Lokur Commission)ದ ಮುಂದೆ ಇದ್ದ ಎಲ್ಲಾ ಪ್ರಕ್ರಿಯೆಗಳ  ಸುಪ್ರೀಂ ಕೋರ್ಟ್ ತಡೆ ನೀಡಿದೆ.

ಸರ್ವೋಚ್ಚ ನ್ಯಾಯಾಲಯವು ಈ ವಿಷಯವನ್ನು ಅಖಿಲ ಭಾರತ ಸಮಸ್ಯೆ ಎಂದು ಕರೆದಿದ್ದರೂ, ಆಯೋಗವು ಕಾರ್ಯನಿರ್ವಹಿಸುವುದನ್ನು ಮುಂದುವರೆಸಿದೆ ಮತ್ತು ಆಯೋಗದ ಕೆಲಸವನ್ನು ತಡೆಯುವುದಾಗಿ ರಾಜ್ಯವು ಭರವಸೆ ನೀಡಿದ ನಂತರವೂ ಅದನ್ನು ಉಲ್ಲಂಘಿಸಲಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಹಿನ್ನೆಲೆ:

ಜುಲೈ 2021 ರಲ್ಲಿ, ಪಶ್ಚಿಮ ಬಂಗಾಳ ಸರ್ಕಾರದ ‘ವಿಚಾರಣೆಯ ಆಯೋಗಗಳು, 1952’ ರ(Commissions of Inquiry Act, 1952) ಅಡಿಯಲ್ಲಿ, ‘ಇಸ್ರೇಲಿ ಸೈಬರ್-ಗುಪ್ತಚರ ಕಂಪನಿ NSO ಗ್ರೂಪ್ ಅಭಿವೃದ್ಧಿಪಡಿಸಿದ ‘ಪೆಗಾಸಸ್ ಸ್ಪೈವೇರ್’ ಅನ್ನು ಬಳಸಿಕೊಂಡು ಟೆಲಿಫೋನ್’ಗಳ ಮೇಲೆ ಕಣ್ಗಾವಲು ಇಡಲಾಗಿದೆ ಎಂಬ ವಿಷಯದ ಬಗ್ಗೆ ತನಿಖೆ ಮಾಡಲು ‘ತನಿಖಾ ಆಯೋಗ’ ( ಲೋಕೂರ್ ಕಮಿಷನ್) ವನ್ನು ಸ್ಥಾಪಿಸಿತ್ತು.

  1. ಈ ಆಯೋಗಕ್ಕೆ ವಿವಿಧ ವ್ಯಕ್ತಿಗಳ ಖಾಸಗಿತನದ ಉಲ್ಲಂಘನೆಯ ತನಿಖೆಯ ಜವಾಬ್ದಾರಿಯನ್ನು ವಹಿಸಲಾಗಿತ್ತು.

ಅಂತಹ ಆಯೋಗಗಳನ್ನು ರಚಿಸುವ ಅಧಿಕಾರ:

ಅಂತಹ ತನಿಖಾ ಆಯೋಗಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ರಚಿಸಬಹುದಾದರೂ, ರಾಜ್ಯ ಸರ್ಕಾರಗಳು ಕಾನೂನುಗಳನ್ನು ಮಾಡಲು ಅಧಿಕಾರ ಹೊಂದಿರುವ ವಿಷಯಗಳ ಮೇಲೆ ಮಾತ್ರ ‘ತನಿಖಾ ಆಯೋಗಗಳನ್ನು’ ರಚಿಸುವಂತೆ ನಿರ್ಬಂಧಿಸಲಾಗಿದೆ.

  1. ಕೇಂದ್ರ ಸರ್ಕಾರವು ಯಾವುದೇ ವಿಷಯದ ಬಗ್ಗೆ ಈ ಮೊದಲೇ ಆಯೋಗವನ್ನು ರಚಿಸಿದ್ದರೆ, ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದ ಅನುಮೋದನೆಯಿಲ್ಲದೆ ಅದೇ ವಿಷಯದ ಮೇಲೆ ಮತ್ತೊಂದು ಸಮಾನಾಂತರ ತನಿಖಾ ಆಯೋಗವನ್ನು ರಚಿಸಲು ಸಾಧ್ಯವಿಲ್ಲ.
  2. ಆದರೆ, ರಾಜ್ಯ ಸರ್ಕಾರವು ‘ತನಿಖಾ ಆಯೋಗ’ವನ್ನು ರಚಿಸಿದರೆ ಮತ್ತು ಈ ವಿಷಯದ ಬಗ್ಗೆ ಎರಡು ಅಥವಾ ಹೆಚ್ಚಿನ ರಾಜ್ಯಗಳಿಗೆ ವಿಚಾರಣೆಯ ವ್ಯಾಪ್ತಿಯನ್ನು ವಿಸ್ತರಿಸಬಹುದು ಎಂದು ಕೇಂದ್ರ ಸರ್ಕಾರವು ಭಾವಿಸಿದರೆ, ಅದೇ ವಿಷಯದ ಮೇಲೆ ಕೇಂದ್ರ ಸರ್ಕಾರವು ಇನ್ನೊಂದು ತನಿಖಾ ಆಯೋಗವನ್ನು ರಚಿಸಬಹುದು.

ವಿಚಾರಣಾ ಆಯೋಗದ ಅಧಿಕಾರಗಳು:

1952 ರ ವಿಚಾರಣಾ ಆಯೋಗದ ಕಾಯ್ದೆಯ ಅಡಿಯಲ್ಲಿ ಸರ್ಕಾರವು ರಚಿಸಿರುವ ಆಯೋಗವು, 1908 ರ ಸಿವಿಲ್ ಪ್ರೊಸೀಜರ್ ಕೋಡ್’ (Code of Civil Procedure, 1908) ಅಡಿಯಲ್ಲಿ ಪ್ರಕರಣದ ವಿಚಾರಣೆಯ ಸಮಯದಲ್ಲಿ ಸಿವಿಲ್ ನ್ಯಾಯಾಲಯದ  ಅಧಿಕಾರವನ್ನು ಹೊಂದಿರುತ್ತದೆ.

  1. ಇದರರ್ಥ ಆಯೋಗವು ಭಾರತದ ಯಾವುದೇ ಮೂಲೆಯಿಂದ ಯಾವುದೇ ವ್ಯಕ್ತಿಯನ್ನು ವಿಚಾರಣೆಗಾಗಿ ಕರೆಸುವ ಮತ್ತು ಹಾಜರುಪಡಿಸುವ ಅಧಿಕಾರವನ್ನು ಹೊಂದಿದೆ, ಪ್ರಮಾಣ ವಚನದ ಮೇಲೆ ವಿಚಾರಣೆ ನಡೆಸಲು ಮತ್ತು ಅಫಿಡವಿಟ್‌ಗಳ ಮೇಲೆ ಸಾಕ್ಷ್ಯವನ್ನು ಪಡೆಯುವ ಅಧಿಕಾರವನ್ನು ಅವರು ಹೊಂದಿದೆ.
  2. ತನಿಖಾ ಆಯೋಗವು ಯಾವುದೇ ನ್ಯಾಯಾಲಯ ಅಥವಾ ಕಚೇರಿಗೆ ಯಾವುದೇ ಸಾರ್ವಜನಿಕ ದಾಖಲೆ ಅಥವಾ ಅದರ ನಕಲು ಪ್ರತಿಯನ್ನು ಒದಗಿಸುವಂತೆ ಆದೇಶಿಸಬಹುದು.

ಆಯೋಗವು ಯಾವ ವಿಷಯಗಳ ಮೇಲೆ ತನಿಖೆ ನಡೆಸಬಹುದು?

  1. ಸಂವಿಧಾನದ ಏಳನೇ ಶೆಡ್ಯೂಲ್‌ನಲ್ಲಿರುವ ಪಟ್ಟಿ-I (ಯೂನಿಯನ್ ಪಟ್ಟಿ) ಅಥವಾ ಪಟ್ಟಿ-II (ರಾಜ್ಯ ಪಟ್ಟಿ) ಅಥವಾ ಪಟ್ಟಿ-III (ಸಮವರ್ತಿ ಪಟ್ಟಿ) ಯಲ್ಲಿ ಒಳಗೊಂಡಿರುವ ಯಾವುದೇ ನಮೂದಿಗೆ ಸಂಬಂಧಿಸಿದ ಯಾವುದೇ ವಿಷಯದ ಬಗ್ಗೆ ಕೇಂದ್ರ ಸರ್ಕಾರದಿಂದ ರಚಿಸಲ್ಪಟ್ಟ ಆಯೋಗವು ವಿಚಾರಣೆ ನಡೆಸಬಹುದು.
  2. ಆದರೆ, ರಾಜ್ಯ ಸರ್ಕಾರಗಳು ಸ್ಥಾಪಿಸಿದ ಆಯೋಗಗಳು ಏಳನೇ ಶೆಡ್ಯೂಲ್ನ ಪಟ್ಟಿ-II ಅಥವಾ ಪಟ್ಟಿ-III ರಲ್ಲಿ ಒಳಗೊಂಡಿರುವ ನಮೂದುಗಳಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ವಿಚಾರಣೆ ನಡೆಸಬಹುದು.

ಪೆಗಾಸಸ್ ತನಿಖಾ ಆಯೋಗ ಪ್ರಕರಣವು ಯಾವ ಪಟ್ಟಿಗೆ ಸಂಬಂಧಿಸಿದೆ?

  1. ಪಶ್ಚಿಮ ಬಂಗಾಳ ಸರ್ಕಾರವು ಪಬ್ಲಿಕ್ ಆರ್ಡರ್ ಮತ್ತು ಪೊಲೀಸ್ ನಮೂದುಗಳನ್ನು ‘ತನಿಖಾ ಆಯೋಗ’ವನ್ನು ಸ್ಥಾಪಿಸಲು ಉಲ್ಲೇಖಿಸಿದೆ. ಕಾರಣ ಈ ವಿಷಯಗಳು ಏಳನೇ ಶೆಡ್ಯೂಲ್‌ನ ‘ರಾಜ್ಯ ಪಟ್ಟಿ’ ಅಡಿಯಲ್ಲಿ ಬರುತ್ತವೆ, ಆದಾಗ್ಯೂ, ಈ ಪ್ರಕರಣದಲ್ಲಿ ತನಿಖೆ’/ ವಿಚಾರಣೆಯ ವಿಷಯವು ಮುಖ್ಯವಾಗಿ ಕೇಂದ್ರ ಪಟ್ಟಿಯ ಅಡಿಯಲ್ಲಿ ಬರುತ್ತದೆ ಎಂದು ವಾದವನ್ನು ಮಾಡಬಹುದು.
  2. ಹೆಚ್ಚುವರಿಯಾಗಿ, ಪೋಸ್ಟ್ ಮತ್ತು ಟೆಲಿಗ್ರಾಫ್, ಟೆಲಿಫೋನ್, ವೈರ್‌ಲೆಸ್, ಪ್ರಸಾರ ಮತ್ತು ಇತರ ಸಂವಹನ ವಿಧಾನಗಳು ಕೇಂದ್ರ ಪಟ್ಟಿಯ ನಮೂದು 31 ಕ್ಕೆ ಸಂಬಂಧಿಸಿದೆ.

ಈ ರೀತಿಯ ತನಿಖಾ ಆಯೋಗದ ವರದಿಗೆ ಇರುವ ಪ್ರಾಮುಖ್ಯತೆ:

  1. ಅಂತಹ ಆಯೋಗಗಳ ಸಂಶೋಧನೆಗಳನ್ನು ಆಯೋಗವನ್ನು ಯಾರು ರಚಿಸುತ್ತಾರೆ ಎಂಬುದರ ಆಧಾರದ ಮೇಲೆ, ಸಾಮಾನ್ಯವಾಗಿ ವಿಧಾನಮಂಡಲ ಅಥವಾ ಸಂಸತ್ತಿನಲ್ಲಿ ಪ್ರಸ್ತುತಪಡಿಸಲಾಗುತ್ತದೆ.
  2. ಆಯೋಗದ ವರದಿಯನ್ನು ಸಾರ್ವಜನಿಕಗೊಳಿಸಲು ಸರ್ಕಾರ ಬದ್ಧವಾಗಿಲ್ಲ ಮತ್ತು ಆಯೋಗದ ಆವಿಷ್ಕಾರಗಳು ಕಾರ್ಯಂಗದ ಮೇಲೆ ಬದ್ಧವಾಗಿಲ್ಲದಿದ್ದರೂ, ಈ ಸಂಶೋಧನೆಗಳನ್ನು ನ್ಯಾಯಾಲಯಗಳು ಸಾಕ್ಷ್ಯವಾಗಿ ಪರಿಗಣಿಸಬಹುದು.

  • Join our Official Telegram Channel HERE for Motivation and Fast Updates
  • Subscribe to our YouTube Channel HERE to watch Motivational and New analysis videos

[ad_2]

Leave a Comment