[ ದೈನಂದಿನ ಪ್ರಚಲಿತ ಘಟನೆಗಳು ] ದಿನಾಂಕ – 26ನೇ ಜೂನ್ 2021 – INSIGHTSIAS

[ad_1]

 

ಪರಿವಿಡಿ:

 ಸಾಮಾನ್ಯ ಅಧ್ಯಯನ ಪತ್ರಿಕೆ 1:

1. ಸಂತ ಕಬೀರ್ ದಾಸ್ ಜಯಂತಿ.

 

ಸಾಮಾನ್ಯ ಅಧ್ಯಯನ ಪತ್ರಿಕೆ 2:

1. ಜಾರಿ ನಿರ್ದೇಶನಾಲಯವು, 8,441.50 ಕೋಟಿ ಮೌಲ್ಯದ ಆಸ್ತಿಯನ್ನು ಬ್ಯಾಂಕುಗಳಿಗೆ ವರ್ಗಾಯಿಸಿದೆ.

2. ಗುಜರಾತ್ ಅಂತರರಾಷ್ಟ್ರೀಯ ಕಡಲ ಮಧ್ಯಸ್ಥಿಕೆ ಕೇಂದ್ರ (GIMAC)

3. ಅಂತರರಾಷ್ಟ್ರೀಯ ಕಾರ್ಮಿಕ ಸಂಘಟನೆಯ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಭಾರತದ ಅವಧಿ ಕೊನೆಗೊಂಡಿದೆ.

 

ಸಾಮಾನ್ಯ ಅಧ್ಯಯನ ಪತ್ರಿಕೆ 3:

1. FATF ಬೂದು ಪಟ್ಟಿಯಲ್ಲಿಯೇ ಉಳಿಯಲಿರುವ ಪಾಕಿಸ್ತಾನ.

 

ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:

1. ಕಡಲ ರಾಜ್ಯ ಅಭಿವೃದ್ಧಿ ಮಂಡಳಿ (MSDC)

2. ಪ್ರಾಜೆಕ್ಟ್ ಸೀಬರ್ಡ್.

3. ಚೀನಾ ಭಾರತದ ಗಡಿಯ ಸಮೀಪ ಟಿಬೆಟ್‌ನಲ್ಲಿ ಮೊದಲ ಬುಲೆಟ್ ರೈಲು ಸಂಚಾರ ಆರಂಭಿಸಿದೆ.

 


ಸಾಮಾನ್ಯ ಅಧ್ಯಯನ ಪತ್ರಿಕೆ : 1


 

ವಿಷಯಗಳು: ಭಾರತೀಯ ಸಂಸ್ಕೃತಿಯು ಪ್ರಾಚೀನ ಕಾಲದಿಂದ ಆಧುನಿಕ ಕಾಲದವರೆಗೆ ಕಲಾ ಪ್ರಕಾರಗಳು, ಸಾಹಿತ್ಯ ಮತ್ತು ವಾಸ್ತುಶಿಲ್ಪದ ಪ್ರಮುಖ ಅಂಶಗಳನ್ನು ಒಳಗೊಂಡಿದೆ.

ಸಂತ ಕಬೀರ್ ದಾಸ್ ಜಯಂತಿ:


ಸಂದರ್ಭ:

ಸಂತ ಕಬೀರ್ ದಾಸ್ ಅವರ ಜನ್ಮ ದಿನಾಚರಣೆಯನ್ನು ಈ ವರ್ಷ ಜೂನ್ 24 ರಂದು ಆಚರಿಸಲಾಯಿತು. ಹಿಂದೂ ಚಂದ್ರಮಾನ ಕ್ಯಾಲೆಂಡರ್ (Hindu Lunar Calendar) ಪ್ರಕಾರ, ಕಬೀರ್ ದಾಸ್ ಜಯಂತಿಯನ್ನು ಜೇಷ್ಠ ಪೂರ್ಣಿಮೆಯಂದು ಆಚರಿಸಲಾಗುತ್ತದೆ.

 

ಸಂತ ಕಬೀರ್ ದಾಸ್ ರವರ ಕುರಿತು:

  1. ಸಂತ ಕಬೀರ್ ದಾಸ್ 15 ನೇ ಶತಮಾನದ ಭಾರತದ ಅತ್ಯಂತ ಪ್ರಸಿದ್ಧ ಸಂತ, ಕವಿ ಮತ್ತು ಸಾಮಾಜಿಕ ಸುಧಾರಕ. ಪರಮಾತ್ಮನ ಏಕತೆ ಮತ್ತು ಶ್ರೇಷ್ಠತೆಯನ್ನು ಅವರ ಪ್ರಸಿದ್ಧ ಮತ್ತು ಗೌರವಾನ್ವಿತ ಕೃತಿಗಳು ಮತ್ತು ಕವಿತೆಗಳಲ್ಲಿ ವಿವರಿಸಲಾಗಿದೆ.
  2. ಅವರು ಭಕ್ತಿ ಚಳವಳಿಯ ಅಗ್ರಗಣ್ಯ ಸಂತರಲ್ಲಿ ಒಬ್ಬರು.
  3. ಅವರು ಯಾವುದೇ ಧಾರ್ಮಿಕ ತಾರತಮ್ಯವನ್ನು ನಂಬಲಿಲ್ಲ ಮತ್ತು ಎಲ್ಲಾ ಧರ್ಮಗಳನ್ನು ಸುಲಭವಾಗಿ ಒಪ್ಪಿಕೊಂಡರು.
  4. ಅವರು ‘ಕಬೀರ್ ಪಂಥ’ ಎಂಬ ಹೆಸರಿನಿಂದ ಧಾರ್ಮಿಕ ಸಮುದಾಯವನ್ನು ಸ್ಥಾಪಿಸಿದರು ಮತ್ತು ಅದರ ಅನುಯಾಯಿಗಳನ್ನು ಕಬೀರ್ ಪಂಥಿಗಳು’ ಎಂದು ಕರೆಯಲಾಗುತ್ತದೆ.
  5. ವೈಷ್ಣವ ಸಂತ ಸ್ವಾಮಿ ರಾಮಾನಂದರು ಕಬೀರ್ ದಾಸ್ ಅವರ ಸಿದ್ಧಾಂತದ ಮೇಲೆ ಹೆಚ್ಚಿನ ಪ್ರಭಾವ ಬೀರಿದರು. ರಾಮಾನಂದರು ಕಬೀರ ದಾಸರನ್ನು ತನ್ನ ಶಿಷ್ಯನಾಗಿ ಸ್ವೀಕರಿಸಿದರು.

 

ಕಬೀರದಾಸರ ಪ್ರಸಿದ್ಧ ಸಾಹಿತ್ಯಿಕ ಕೃತಿಗಳು:

  1. ಬಿಜಾಕ್, ಸಖಿ ಗ್ರಂಥ, ಕಬೀರ್ ಗ್ರಂಥಾವಳಿ ಮತ್ತು ಅನುರಾಗ್ ಸಾಗರ್.
  2. ಅವರ ಪದ್ಯಗಳನ್ನು ಸಿಖ್ ಧರ್ಮದ ಪವಿತ್ರ ಗ್ರಂಥವಾದ ‘ಗುರು ಗ್ರಂಥ ಸಾಹಿಬ್’ ನಲ್ಲಿ ಸೇರಿಸಲಾಗಿದೆ.
  3. ಅವರ ಅನೇಕ ಪ್ರಮುಖ ಕೃತಿಗಳನ್ನು ಸಿಖ್ಖರ ಐದನೇ ಗುರು ಅರ್ಜನ್ ದೇವ್ ಸಂಗ್ರಹಿಸಿದ್ದಾರೆ.
  4. ಸಂತ ಕಬೀರ್‌ದಾಸ್ ಅವರ ಸಂಯೋಜನೆಗಳಲ್ಲಿ, ವಿಶಿಷ್ಟ ಲಕ್ಷಣವೆಂದರೆ ಅವರ ಎರಡು ಸಾಲಿನ ಜೋಡಿಗಳು ಅತ್ಯಂತ ಪ್ರಸಿದ್ಧವಾಗಿವೆ, ಇದಕ್ಕಾಗಿ ಅವುಗಳನ್ನು ಕಬೀರ್ ಕೆ ದೋಹೆ’ ಎಂದು ಕರೆಯಲಾಗುತ್ತದೆ.

 


ಸಾಮಾನ್ಯ ಅಧ್ಯಯನ ಪತ್ರಿಕೆ : 2


 

ವಿಷಯಗಳು: ಶಾಸನಬದ್ಧ ನಿಯಂತ್ರಕ ಮತ್ತು ವಿವಿಧ ಅರೆ- ನ್ಯಾಯಿಕ ಸಂಸ್ಥೆಗಳು.

ಜಾರಿ ನಿರ್ದೇಶನಾಲಯವು, 8,441.50 ಕೋಟಿ ಮೌಲ್ಯದ ಆಸ್ತಿಯನ್ನು ಬ್ಯಾಂಕುಗಳಿಗೆ ವರ್ಗಾಯಿಸಿದೆ:


(ED transfers assets worth ₹8,441.50 cr. To banks)

 ಸಂದರ್ಭ:

ಇತ್ತೀಚೆಗೆ, ಸಾರ್ವಜನಿಕ ವಲಯದ ಬ್ಯಾಂಕುಗಳಿಗೆ 22,585.83 ಕೋಟಿ ರೂ.ಗಳನ್ನೂ ವಂಚಿಸಿ ವಿದೇಶಕ್ಕೆ ಪರಾರಿಯಾದ ಆರೋಪದ ಮೇಲೆ ವಿಜಯ್ ಮಲ್ಯ, ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿ ಅವರ ಕೆಲವು ಆಸ್ತಿಗಳನ್ನು ಜಾರಿ ನಿರ್ದೇಶನಾಲಯ (Enforcement Directorate- ED) ವಶಪಡಿಸಿಕೊಂಡಿದೆ ಮತ್ತು ಅವುಗಳಿಂದ ಪಡೆದ 8,441.50 ಕೋಟಿ ರೂ.ಗಳನ್ನು ಬ್ಯಾಂಕ್‌ಗಳಿಗೆ ವರ್ಗಾಯಿಸಲಾಗಿದೆ.

 

ಏನಿದು ಸಮಸ್ಯೆ?

ಜಾರಿ ನಿರ್ದೇಶನಾಲಯ (ಇಡಿ) ಪ್ರಾರಂಭಿಸಿದ ಹಣ ವರ್ಗಾವಣೆಯ (Money Laundering) ತನಿಖೆಯು ದೇಶೀಯ ಮತ್ತು ಅಂತರಾಷ್ಟ್ರೀಯ ವಹಿವಾಟಿನ ಸಂಕೀರ್ಣ ಜಾಲವನ್ನು ಪತ್ತೆಹಚ್ಚಿದೆ, ಈ ಮೂಲಕ ಆರೋಪಿಗಳು ಮತ್ತು ಅವರ ಸಹಚರರು ವಿದೇಶದಲ್ಲಿ ಸಂಗ್ರಹಿಸಿರುವ ಸ್ವತ್ತುಗಳನ್ನು ಸಹ ಬಹಿರಂಗಪಡಿಸಲಾಗಿದೆ.

  1. ಈ ಆರೋಪಿಗಳು ತಮ್ಮ ನಿಯಂತ್ರಣದಲ್ಲಿರುವ ‘ನಕಲಿ ಕಂಪೆನಿ’ಗಳನ್ನು ಬಳಸಿಕೊಂಡು ಬ್ಯಾಂಕುಗಳಿಂದ ಪಡೆದ ಹಣವನ್ನು ಬೇರೆಡೆಗೆ ತಿರುಗಿಸಲು ಮತ್ತು ಅದನ್ನು ದೇಶದಿಂದ ಅಪ್ರಾಮಾಣಿಕವಾಗಿ ವಿದೇಶಕ್ಕೆ ಕಳುಹಿಸುತ್ತಿದ್ದರು.
  2. ಇದಾದ ನಂತರ ಮೂವರು ಆರೋಪಿಗಳು ವಿದೇಶಕ್ಕೆ ಪರಾರಿಯಾಗಿದ್ದಾರೆ.
  3. ಹಣ ವರ್ಗಾವಣೆ ತಡೆ (Prevention of Money Laundering Act) ಕಾಯ್ದೆಯಡಿ ತನಿಖೆ ಪೂರ್ಣಗೊಂಡ ನಂತರ ಮೂವರು ಆರೋಪಿಗಳ ವಿರುದ್ಧ ಪ್ರಾಸಿಕ್ಯೂಷನ್ ಪ್ರಕರಣಗಳನ್ನು ದಾಖಲಿಸಲಾಗಿದೆ.

 

ಹಸ್ತಾಂತರದ ಪ್ರಸ್ತುತ ಸ್ಥಿತಿ:

  1. ವಿಜಯ್ ಮಲ್ಯ ಅವರನ್ನು ಹಸ್ತಾಂತರಿಸುವಂತೆ UK ನ ವೆಸ್ಟ್ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಆದೇಶಿಸಿದೆ, ಮತ್ತು ಇದನ್ನು ಯುನೈಟೆಡ್ ಕಿಂಗ್ಡಮ್ ನ ಹೈಕೋರ್ಟ್ ಸಹ ದೃಢಪಡಿಸಿದೆ. ಈ ವಿಷಯವು ಪ್ರಸ್ತುತ ಯುಕೆ ಗೃಹ ಇಲಾಖೆಯಲ್ಲಿ ಸ್ವಲ್ಪ ಸಮಯದಿಂದ ಬಾಕಿ ಉಳಿದಿದೆ.
  2. ‘ನೀರವ್ ಮೋದಿಯವರನ್ನು’ ಭಾರತಕ್ಕೆ ಹಸ್ತಾಂತರಿಸುವಂತೆ ವೆಸ್ಟ್ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಆದೇಶಿಸಿದೆ.
  3. ಇತ್ತೀಚೆಗೆ ಮೆಹುಲ್ ಚೋಕ್ಸಿಯನ್ನು ಡೊಮಿನಿಕಾದಲ್ಲಿ ಬಂಧಿಸಲಾಯಿತು.

 

ಜಾರಿ ನಿರ್ದೇಶನಾಲಯದ ಕುರಿತು:

  1. ಈ ನಿರ್ದೇಶನಾಲಯದ ಮೂಲವು 1956 ರ ಮೇ 1 ರಂದು, ವಿದೇಶಿ ವಿನಿಮಯ ನಿಯಂತ್ರಣ ಕಾಯ್ದೆ,1947’ ರ(FERA 47) ಅಡಿಯಲ್ಲಿ ವಿನಿಮಯ ನಿಯಂತ್ರಣ ಕಾಯ್ದೆಯ ಉಲ್ಲಂಘನೆಯನ್ನು ಎದುರಿಸಲು ಆರ್ಥಿಕ ವ್ಯವಹಾರಗಳ ಇಲಾಖೆಯಲ್ಲಿ ಜಾರಿ ಘಟಕ‘ ರಚಿಸಯಿತು.
  2. 1957 ರಲ್ಲಿ, ಈ ಘಟಕದ ಹೆಸರನ್ನು ಜಾರಿ ನಿರ್ದೇಶನಾಲಯ’ (Enforcement Directorate) ಎಂದು ಮರುನಾಮಕರಣ ಮಾಡಲಾಯಿತು.
  3. ಪ್ರಸ್ತುತ ಜಾರಿ ನಿರ್ದೇಶನಾಲಯವು ಹಣಕಾಸು ಸಚಿವಾಲಯದ ಅಡಿಯಲ್ಲಿ ಕಂದಾಯ ಇಲಾಖೆಯ ಒಂದು ಭಾಗವಾಗಿದೆ.
  4.  ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ, 1999 (Foreign Exchange Management Act, 1999 -FEMA) ಮತ್ತು ಮನಿ ಲಾಂಡರಿಂಗ್ ತಡೆ ಕಾಯ್ದೆ, 2002 (Prevention of Money Laundering Act, 2002 -PMLA) ಎಂಬ ಎರಡು ವಿಶೇಷ ಹಣಕಾಸಿನ ಕಾನೂನುಗಳ ನಿಬಂಧನೆಗಳನ್ನು ಜಾರಿಗೊಳಿಸುವುದು ಈ ಸಂಸ್ಥೆಯ ಕಾರ್ಯವಾಗಿದೆ.

 

ಸಂಯೋಜನೆ:

ಸಿಬ್ಬಂದಿಗಳ ನೇರ ನೇಮಕಾತಿಯ ಹೊರತಾಗಿ, ಈ ನಿರ್ದೇಶನಾಲಯವು ವಿವಿಧ ತನಿಖಾ ಸಂಸ್ಥೆಗಳಿಂದ ಅಧಿಕಾರಿಗಳನ್ನು ಡೆಪ್ಯುಟೇಶನ್‌ನಲ್ಲಿ ಇರಿಸಿಕೊಳ್ಳುತ್ತದೆ, ಅಂದರೆ ಕಸ್ಟಮ್ಸ್ ಮತ್ತು ಕೇಂದ್ರ ಅಬಕಾರಿ, ಆದಾಯ ತೆರಿಗೆ, ಪೊಲೀಸ್ ಇತ್ಯಾದಿ.

 

ಇತರ ಕಾರ್ಯಗಳು:

  1. ಪರಾರಿಯಾದ ಆರ್ಥಿಕ ಅಪರಾಧಿಗಳ ಕಾಯ್ದೆ, (Fugitive Economic Offenders) 2018 ರ ಅಡಿಯಲ್ಲಿ ಭಾರತದಿಂದ ಪರಾರಿಯಾದ/ ಪರಾರಿಯಾದವರ ಪ್ರಕರಣಗಳನ್ನು ತನಿಖೆಗೆ ಒಳಪಡಿಸುವುದು.
  2. ಫೆಮಾ ಉಲ್ಲಂಘನೆಗಾಗಿ ‘ವಿದೇಶಿ ವಿನಿಮಯ ಸಂರಕ್ಷಣೆ ಮತ್ತು ಕಳ್ಳಸಾಗಣೆ ಚಟುವಟಿಕೆಗಳ ತಡೆಗಟ್ಟುವಿಕೆ ಕಾಯ್ದೆ 1974 (COFEPOSA) ಅಡಿಯಲ್ಲಿ ಪ್ರಕರಣಗಳನ್ನು ನಿಯೋಜಿಸುವುದು.

 

ವಿಶೇಷ ನ್ಯಾಯಾಲಯಗಳು:

  1. PMLA ಯ ಸೆಕ್ಷನ್ 4 ರ ಅಡಿಯಲ್ಲಿ ಶಿಕ್ಷಿಸಬಹುದಾದ ಅಪರಾಧಗಳ ವಿಚಾರಣೆಗಾಗಿ, ಕೇಂದ್ರ ಸರ್ಕಾರವು (ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶರೊಂದಿಗೆ ಸಮಾಲೋಚಿಸಿ) ಒಂದು ಅಥವಾ ಹೆಚ್ಚಿನ ಸೆಷನ್ಸ್ ನ್ಯಾಯಾಲಯಗಳನ್ನು ವಿಶೇಷ ನ್ಯಾಯಾಲಯಗಳಾಗಿ ರಚಿಸಬಹುದು.ಈ ನ್ಯಾಯಾಲಯಗಳನ್ನು “ಪಿಎಂಎಲ್‌ಎ ನ್ಯಾಯಾಲಯಗಳು” ಎಂದೂ ಕರೆಯಲಾಗುತ್ತದೆ.
  2. PMLA ನ್ಯಾಯಾಲಯವು ಜಾರಿಗೊಳಿಸಿದ ಯಾವುದೇ ಆದೇಶದ ವಿರುದ್ಧ ಯಾವುದೇ ಮೇಲ್ಮನವಿಯನ್ನು ನೇರವಾಗಿ ಆ ನ್ಯಾಯಾಧಿಕಾರದ ವ್ಯಾಪ್ತಿಯಲ್ಲಿನ ಹೈಕೋರ್ಟ್‌ ಗೆ ಸಲ್ಲಿಸಬಹುದು.

 

ವಿಷಯಗಳು: ಶಾಸನಬದ್ಧ ನಿಯಂತ್ರಕ ಮತ್ತು ವಿವಿಧ ಅರೆ- ನ್ಯಾಯಿಕ ಸಂಸ್ಥೆಗಳು.

ಗುಜರಾತ್ ಅಂತರರಾಷ್ಟ್ರೀಯ ಕಡಲ ಮಧ್ಯಸ್ಥಿಕೆ ಕೇಂದ್ರ (GIMAC):


(Gujarat International Maritime Arbitration Centre)

 ಸಂದರ್ಭ:

ಇತ್ತೀಚೆಗೆ, ‘ಗಿಫ್ಟ್ ಸಿಟಿ’ (GIFT City) ನಲ್ಲಿ  ‘ಗುಜರಾತ್ ಅಂತರರಾಷ್ಟ್ರೀಯ ಕಡಲ ಮಧ್ಯಸ್ಥಿಕೆ ಕೇಂದ್ರ’(GIMAC) ಸ್ಥಾಪಿಸಲು ಗುಜರಾತ್ ಮ್ಯಾರಿಟೈಮ್ ಯೂನಿವರ್ಸಿಟಿ ಮತ್ತು ಅಂತರಾಷ್ಟ್ರೀಯ ಹಣಕಾಸು ಸೇವೆಗಳ ಕೇಂದ್ರ ಪ್ರಾಧಿಕಾರದ’ (International Financial Services Centres Authority- IFSCA) ನಡುವೆ ತಿಳುವಳಿಕೆ ಒಪ್ಪಂದಕ್ಕೆ (MOU) ಸಹಿ ಹಾಕಲಾಯಿತು.

ಈ ಮಧ್ಯಸ್ಥಿಕೆ ಕೇಂದ್ರವು ಗುಜರಾತ್ ನ ಗಾಂಧಿನಗರದ ‘ಗಿಫ್ಟ್ ಸಿಟಿ’ಯಲ್ಲಿ ಗುಜರಾತ್ ಮ್ಯಾರಿಟೈಮ್ ಬೋರ್ಡ್ (GMB) ಸ್ಥಾಪಿಸುವ ‘ಮ್ಯಾರಿಟೈಮ್ ಕ್ಲಸ್ಟರ್’ನ ಒಂದು ಭಾಗವಾಗಿರಲಿದೆ.

 

GIMAC ಕಾರ್ಯಗಳು:

 ಗುಜರಾತ್ ಇಂಟರ್ನ್ಯಾಷನಲ್ ಮ್ಯಾರಿಟೈಮ್ ಆರ್ಬಿಟ್ರೇಷನ್ ಸೆಂಟರ್ (ಜಿಮಾಕ್) ಕಡಲ ಮತ್ತು ಹಡಗು ಕ್ಷೇತ್ರಕ್ಕೆ ಸಂಬಂಧಿಸಿದ ವಿವಾದಗಳಲ್ಲಿ ಮಧ್ಯಸ್ಥಿಕೆ ಕ್ರಮಗಳನ್ನು ನಿರ್ವಹಿಸುವ ದೇಶದ ಈ ರೀತಿಯ ಮೊದಲನೆಯ ಕೇಂದ್ರವಾಗಿದೆ.

 

GIMAC ಅನ್ನು ಸ್ಥಾಪಿಸಲು ಕಾರಣ:

ಭಾರತದಲ್ಲಿ ವ್ಯಾಪಾರ ಮಾಡುವ ಕಂಪನಿಗಳ ನಡುವಿನ ವಾಣಿಜ್ಯ ಮತ್ತು ಆರ್ಥಿಕ ವಿವಾದಗಳನ್ನು ಪರಿಹರಿಸಲು ಸಹಾಯ ಮಾಡಲು ಕಡಲ ಮತ್ತು ಹಡಗು ವಿವಾದಗಳ ಮೇಲೆ ಕೇಂದ್ರೀಕರಿಸಿದ ವಿಶ್ವ ದರ್ಜೆಯ ಮಧ್ಯಸ್ಥಿಕೆ ಕೇಂದ್ರವನ್ನು ಸ್ಥಾಪಿಸುವ ಗುರಿ ಹೊಂದಲಾಗಿದೆ.

  1. ಪ್ರಸ್ತುತ, ಭಾರತದಲ್ಲಿ 35 ಕ್ಕೂ ಹೆಚ್ಚು ಮಧ್ಯಸ್ಥಿಕೆ ಕೇಂದ್ರಗಳಿವೆ, ಆದರೆ ಅವುಗಳಲ್ಲಿ ಯಾವುದೂ ಕಡಲ ವಲಯದಲ್ಲಿನ ವಿವಾದಗಳ ಇತ್ಯರ್ಥಕ್ಕೆ ನಿರ್ದಿಷ್ಟವಾಗಿ ವ್ಯವಹರಿಸುವುದಿಲ್ಲ.
  2. ಇಲ್ಲಿಯವರೆಗೆ,ಸಿಂಗಾಪುರ ಮಧ್ಯಸ್ಥಿಕೆ ಕೇಂದ್ರದಲ್ಲಿ ಭಾರತೀಯ ಪಕ್ಷಗಳನ್ನು ಒಳಗೊಂಡ ಮಧ್ಯಸ್ಥಿಕೆ ಪ್ರಕರಣಗಳು ಕೇಳಿಬರುತ್ತಿವೆ.

 

GIFT ಸಿಟಿ ಎಂದರೇನು?

 ಗುಜರಾತ್ ಇಂಟರ್ನ್ಯಾಷನಲ್ ಫೈನಾನ್ಸ್ ಟೆಕ್-ಸಿಟಿ: (Gujarat International Finance Tec-City: GIFT City) ಗುಜರಾತ್‌ ನ ಅಹಮದಾಬಾದ್ ಬಳಿಯ ಒಂದು ವ್ಯಾಪಾರ ಜಿಲ್ಲೆಯಾಗಿದೆ.

  1.  ಇದು ಭಾರತದ ಮೊದಲ ಕಾರ್ಯಾಚರಣೆಯ ಗ್ರೀನ್‌ಫೀಲ್ಡ್ ಸ್ಮಾರ್ಟ್ ಸಿಟಿ’ ಮತ್ತು ಅಂತರರಾಷ್ಟ್ರೀಯ ಹಣಕಾಸು ಸೇವೆಗಳ ಕೇಂದ್ರವಾಗಿದೆ. ಇದಕ್ಕಾಗಿ ಗುಜರಾತ್ ಸರ್ಕಾರ ಇದನ್ನು ‘ಗ್ರೀನ್‌ಫೀಲ್ಡ್ ಯೋಜನೆ’ ಯಾಗಿ ಪ್ರಚಾರ ಮಾಡುತ್ತಿದೆ.
  2. ನಗರವು ಸಬರಮತಿ ನದಿಯ ದಡದಲ್ಲಿದೆ.

 

ಅಂತರಾಷ್ಟ್ರೀಯ ಹಣಕಾಸು ಸೇವಾ ಕೇಂದ್ರ (IFSC) ಗಳು ಯಾವುವು? (International Financial Services Centres)

  1. ಅಂತರರಾಷ್ಟ್ರೀಯ ಹಣಕಾಸು ಸೇವಾ ಕೇಂದ್ರಗಳು (IFSC) ದೇಶೀಯ ಆರ್ಥಿಕತೆಯ ವ್ಯಾಪ್ತಿಯಿಂದ ಹೊರಗಿನ ಗ್ರಾಹಕರಿಗೆ ಹಣಕಾಸು ಸೇವೆಗಳನ್ನು ಒದಗಿಸುತ್ತವೆ.
  2. ಗಡಿಯಾಚೆಗಿನ ಹಣಕಾಸು ಹರಿವುಗಳು, ಹಣಕಾಸು ಉತ್ಪನ್ನಗಳು ಮತ್ತು ಸೇವೆಗಳೊಂದಿಗೆ IFSC ವ್ಯವಹರಿಸುತ್ತದೆ.
  3. ಲಂಡನ್, ನ್ಯೂಯಾರ್ಕ್ ಮತ್ತು ಸಿಂಗಾಪುರವನ್ನು ಜಾಗತಿಕ ಹಣಕಾಸು ಕೇಂದ್ರಗಳಾಗಿ ಪರಿಗಣಿಸಬಹುದು.

 IFSC ಒದಗಿಸುವ ಸೇವೆಗಳು:

  1.  ವ್ಯಕ್ತಿಗಳು, ನಿಗಮಗಳು ಮತ್ತು ಸರ್ಕಾರಗಳಿಗೆ ಹಣ ಸಂಗ್ರಹಿಸುವ ಸೇವೆಗಳು.
  2. ವಿಮಾ ಕಂಪನಿಗಳು ಮತ್ತು ಮ್ಯೂಚುವಲ್ ಫಂಡ್‌ಗಳು ಕೈಗೊಂಡ ಪಿಂಚಣಿ ನಿಧಿಗಳು, ಆಸ್ತಿ ನಿರ್ವಹಣೆ ಮತ್ತು ಜಾಗತಿಕ ಬಂಡವಾಳ (Global Portfolio Diversification) ವೈವಿಧ್ಯೀಕರಣ.
  3. ಆರ್ಥಿಕ ನಿರ್ವಹಣೆ (Wealth management).
  4. ಜಾಗತಿಕ ತೆರಿಗೆ ನಿರ್ವಹಣೆ ಮತ್ತು ಗಡಿಯಾಚೆಗಿನ ತೆರಿಗೆ ಹೊಣೆಗಾರಿಕೆ ಆಪ್ಟಿಮೈಸೇಶನ್ (Cross-Border Tax Liability Optimization), ಇದು ಹಣಕಾಸು ಮಧ್ಯವರ್ತಿಗಳು, ಅಕೌಂಟೆಂಟ್‌ಗಳು ಮತ್ತು ಕಾನೂನು ಸಂಸ್ಥೆಗಳಿಗೆ ವ್ಯಾಪಾರ ಅವಕಾಶವನ್ನು ಒದಗಿಸುತ್ತದೆ.
  5. ನಿಧಿಸಂಗ್ರಹಣೆ, ದ್ರವ್ಯತೆ ಹೂಡಿಕೆ ಮತ್ತು ನಿರ್ವಹಣೆ, ಮತ್ತು ಆಸ್ತಿ-ಹೊಣೆಗಾರಿಕೆ ಹೊಂದಾಣಿಕೆ ಸೇರಿದಂತೆ ಜಾಗತಿಕ ಮತ್ತು ಪ್ರಾದೇಶಿಕ ಕಾರ್ಪೊರೇಟ್ ಖಜಾನೆ ನಿರ್ವಹಣಾ ಕಾರ್ಯಾಚರಣೆಗಳು.
  6. ವಿಮೆ ಮತ್ತು ಮರುವಿಮೆಯಂತಹ ಅಪಾಯ ನಿರ್ವಹಣಾ ಕಾರ್ಯಾಚರಣೆಗಳು.
  7. ಅಂತರ್-ರಾಷ್ಟ್ರೀಯ ಸಂಸ್ಥೆಗಳ ನಡುವೆ ವಿಲೀನ ಮತ್ತು ಸ್ವಾಧೀನ ಚಟುವಟಿಕೆಗಳು.

 

ವಿಷಯಗಳು: ಪ್ರಮುಖ ಅಂತರರಾಷ್ಟ್ರೀಯ ಸಂಸ್ಥೆಗಳು, ಏಜೆನ್ಸಿಗಳು ಮತ್ತು ವೇದಿಕೆಗಳು, ಅವುಗಳ ರಚನೆ, ಮತ್ತು ಆದೇಶ.

ಅಂತರರಾಷ್ಟ್ರೀಯ ಕಾರ್ಮಿಕ ಸಂಘಟನೆಯ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಭಾರತದ ಅವಧಿ ಕೊನೆಗೊಂಡಿದೆ:


(India completes term as Chair of ILO”s Governing Body)

 ಸಂದರ್ಭ:

ಇತ್ತೀಚೆಗೆ, ಅಂತರರಾಷ್ಟ್ರೀಯ ಕಾರ್ಮಿಕ ಸಂಘಟನೆಯ (ILO) ‘ಆಡಳಿತ ಮಂಡಳಿಯ’ (Governing Body) ಅಧ್ಯಕ್ಷರಾಗಿ ಭಾರತದ ಅವಧಿ (ಅಕ್ಟೋಬರ್ 2020- ಜೂನ್ 2021) ಕೊನೆಗೊಂಡಿತು.

ಕಳೆದ ವರ್ಷ, ಭಾರತವು 35 ವರ್ಷಗಳ ಅಂತರದ ನಂತರ ಅಂತರರಾಷ್ಟ್ರೀಯ ಕಾರ್ಮಿಕ ಸಂಘಟನೆಯ ಆಡಳಿತ ಮಂಡಳಿಯ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡಿತ್ತು.

 

ಆಡಳಿತ ಮಂಡಳಿಯ ಕುರಿತು:

ಇದು ಅಂತರರಾಷ್ಟ್ರೀಯ ಕಾರ್ಮಿಕ ಸಂಘಟನೆಯ (ಐಎಲ್‌ಒ) ಉನ್ನತ ಕಾರ್ಯನಿರ್ವಾಹಕ ಸಂಸ್ಥೆಯಾಗಿದೆ. ಇದು ನೀತಿಗಳು, ಕಾರ್ಯಕ್ರಮಗಳು, ಕಾರ್ಯಸೂಚಿ, ಬಜೆಟ್ ಅನ್ನು ನಿರ್ಧರಿಸುತ್ತದೆ ಮತ್ತು ಮಹಾನಿರ್ದೇಶಕರನ್ನು ಆಯ್ಕೆ ಮಾಡುತ್ತದೆ. ಇದು ಸ್ವಿಟ್ಜರ್ಲೆಂಡ್‌ನ ಜಿನೀವಾದಲ್ಲಿ ಸಂಧಿಸುತ್ತದೆ.

 

ILO ಬಗ್ಗೆ:

  1. ಮೊದಲ ವಿಶ್ವಯುದ್ಧದ ನಂತರ ಲೀಗ್ ಆಫ್ ನೇಷನ್ಸ್‌ನ ಏಜೆನ್ಸಿಯಾಗಿ ಅಂತರರಾಷ್ಟ್ರೀಯ ಕಾರ್ಮಿಕ ಸಂಸ್ಥೆ (ILO) ಯನ್ನು ಸ್ಥಾಪಿಸಲಾಯಿತು.
  2. ಇದನ್ನು ವರ್ಸೈಲ್ಸ್ ಒಪ್ಪಂದದ ಪ್ರಕಾರ (Treaty of Versailles) 1919 ರಲ್ಲಿ ಸ್ಥಾಪಿಸಲಾಯಿತು.
  3. ಅಂತರರಾಷ್ಟ್ರೀಯ ಕಾರ್ಮಿಕ ಸಂಸ್ಥೆಯು 1946 ರಲ್ಲಿ ವಿಶ್ವಸಂಸ್ಥೆಯ ಮೊದಲ ವಿಶೇಷ ಸಂಸ್ಥೆಯಾಯಿತು.
  4. ಇದಕ್ಕೆ 1969 ರಲ್ಲಿ ಶಾಂತಿ ನೊಬೆಲ್ ಪ್ರಶಸ್ತಿ ನೀಡಲಾಯಿತು.
  5. ಇದು ವಿಶ್ವಸಂಸ್ಥೆಯ ಏಕೈಕ ತ್ರಿಪಕ್ಷೀಯ ಏಜೆನ್ಸಿಯಾಗಿದ್ದು, ಇದರಲ್ಲಿ ಸರ್ಕಾರಗಳು, ಉದ್ಯೋಗದಾತರು ಮತ್ತು ಕಾರ್ಮಿಕರು ಒಟ್ಟಾಗಿ ತೊಡಗಿಸಿಕೊಂಡಿದ್ದಾರೆ.
  6. ಪ್ರಧಾನ ಕಚೇರಿ: ಜಿನೀವಾ, ಸ್ವಿಟ್ಜರ್ಲೆಂಡ್.

 

ಪ್ರಮುಖ ವರದಿಗಳು:

  1. ವಿಶ್ವ ಉದ್ಯೋಗ ಮತ್ತು ಸಾಮಾಜಿಕ ದೃಷ್ಟಿಕೋನ (World Employment and Social Outlook).
  2. ಜಾಗತಿಕ ವೇತನ ವರದಿ (Global Wage Report).

 


ಸಾಮಾನ್ಯ ಅಧ್ಯಯನ ಪತ್ರಿಕೆ : 3


 

ವಿಷಯಗಳು: ಭಾರತ ಮತ್ತು ಅದರ ನೆರೆ ಹೊರೆಯ ದೇಶಗಳು, ಪ್ರಮುಖ ಅಂತರರಾಷ್ಟ್ರೀಯ ಸಂಸ್ಥೆಗಳು, ಏಜೆನ್ಸಿಗಳು ಮತ್ತು ವೇದಿಕೆಗಳು, ಅವುಗಳ ರಚನೆ, ಮತ್ತು ಆದೇಶ.

FATF ಬೂದು ಪಟ್ಟಿಯಲ್ಲಿಯೇ ಉಳಿಯಲಿರುವ ಪಾಕಿಸ್ತಾನ:


(Pakistan to remain on FATF grey list)

 ಸಂದರ್ಭ:

ಇತ್ತೀಚೆಗೆ, ‘ಹಣಕಾಸು ಕ್ರಿಯಾ ಕಾರ್ಯಪಡೆ’ (Financial Action Task Force- FATF)ಯು ಪಾಕಿಸ್ತಾನವನ್ನು ‘ಬೂದುಪಟ್ಟಿ’ ಯಿಂದ  (Grey List) ಹೊರಗೆ ತೆಗೆಯಲು ನಿರಾಕರಿಸಿದೆ. FATF ಪ್ರಕಾರ, ವಿಶ್ವಸಂಸ್ಥೆಯು ಗೊತ್ತುಪಡಿಸಿದ ಭಯೋತ್ಪಾದಕರಾದ 26/11 ರ ದಾಳಿಯ ಆರೋಪಿಗಳಾದ ಹಫೀಜ್ ಸಯೀದ್ ಮತ್ತು ಜೈಶ್-ಎ-ಮೊಹಮ್ಮದ್ (JeM) ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಪಾಕಿಸ್ತಾನ ವಿಫಲವಾಗಿದೆ.

 

ಹಿನ್ನೆಲೆ:

2018 ರ ಜೂನ್‌ನಲ್ಲಿ, ಪ್ಯಾರಿಸ್ ಮೂಲದ ‘ಹಣಕಾಸು ಕ್ರಿಯಾ ಕಾರ್ಯಪಡೆ (FATF) ಯು ಪಾಕಿಸ್ತಾನವನ್ನು ‘ಬೂದು ಪಟ್ಟಿಯಲ್ಲಿ’(grey list ) ಇರಿಸಿದೆ ಮತ್ತು ಅಂದಿನಿಂದ ಈ ಪಟ್ಟಿಯಿಂದ ಹೊರಬರಲು ಪಾಕಿಸ್ತಾನವು ಹೆಣಗಾಡುತ್ತಿದೆ.

  1. ಪಾಕಿಸ್ತಾನಕ್ಕೆ 2018 ರಲ್ಲಿ 27 ಮಾನದಂಡಗಳನ್ನು (ಆಕ್ಷನ್ ಪಾಯಿಂಟ್‌ಗಳನ್ನು) ಜಾರಿಗೆ ತರಲು ಗಡುವು ನೀಡಲಾಗಿತ್ತು, ಈ ಪೈಕಿ ಪಾಕಿಸ್ತಾನವು ಇದುವರೆಗೆ 26 ಆಕ್ಷನ್ ಪಾಯಿಂಟ್‌ಗಳನ್ನು ಜಾರಿಗೆ ತಂದಿದೆ ಅಥವಾ ಪೂರೈಸಿದೆ.

FATF ನ ಕುರಿತು:

  1. ಪ್ಯಾರಿಸ್ ನಲ್ಲಿ ನಡೆದ ಜಿ -7 ದೇಶಗಳ ಸಭೆಯ ಉಪಕ್ರಮದ ಅನ್ವಯ 1989 ರಲ್ಲಿ, ಹಣಕಾಸು ಕ್ರಿಯಾ ಕಾರ್ಯಪಡೆಯು ಒಂದು ಅಂತರ್ ಸರ್ಕಾರಿ ಸಂಸ್ಥೆಯ ರೂಪದಲ್ಲಿ ರಚನೆಯಾಯಿತು.
  2. ಇದು ‘ನೀತಿ-ರೂಪಿಸುವ ಸಂಸ್ಥೆ’ ಆಗಿದ್ದು, ರಾಷ್ಟ್ರಮಟ್ಟದಲ್ಲಿ ವಿವಿಧ ಹಂತಗಳಲ್ಲಿ ಶಾಸಕಾಂಗ ಮತ್ತು ನಿಯಂತ್ರಕ ಸುಧಾರಣೆಗಳನ್ನು ಕೈಗೊಳ್ಳಲು ಅಗತ್ಯವಾದ ರಾಜಕೀಯ ಇಚ್ಛಾಶಕ್ತಿಯನ್ನು ಸೃಷ್ಟಿಸುತ್ತದೆ.
  3. ಇದರ ಸಚಿವಾಲಯ ಅಥವಾ ಕೇಂದ್ರ ಕಚೇರಿಯನ್ನು ಪ್ಯಾರಿಸ್‌ನ ‘ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಕೇಂದ್ರ (Economic Cooperation and Development- OECD) ಕಚೇರಿಯಲ್ಲಿ ಸ್ಥಾಪಿಸಲಾಗಿದೆ.

 

ಪಾತ್ರಗಳು ಮತ್ತು ಕಾರ್ಯಗಳು:

  1. ಹಣ ವರ್ಗಾವಣೆಯನ್ನು ಎದುರಿಸುವ ಕ್ರಮಗಳನ್ನು ತನಿಖೆ ಮಾಡಲು ಮತ್ತು ಅಭಿವೃದ್ಧಿಪಡಿಸಲು FATF ಅನ್ನು ಆರಂಭದಲ್ಲಿ ಸ್ಥಾಪಿಸಲಾಯಿತು.
  2. ಅಕ್ಟೋಬರ್ 2001 ರಲ್ಲಿ, ಹಣ ವರ್ಗಾವಣೆಯ ಜೊತೆಗೆ ಭಯೋತ್ಪಾದಕ ಹಣಕಾಸನ್ನು ಎದುರಿಸುವ ಪ್ರಯತ್ನಗಳನ್ನು ಸೇರಿಸಲು ಎಫ್‌ಎಟಿಎಫ್ ತನ್ನ ಆದೇಶವನ್ನು ವಿಸ್ತರಿಸಿತು.
  3. ಏಪ್ರಿಲ್ 2012 ರಲ್ಲಿ, ಸಾಮೂಹಿಕ ವಿನಾಶದ ಶಸ್ತ್ರಾಸ್ತ್ರಗಳ ಪ್ರಸರಣಕ್ಕಾಗಿ ಹಣವನ್ನು ನಿರ್ಬಂಧಿಸುವ ತನ್ನ ಪ್ರಯತ್ನಗಳಿಗೆ ಅದು ಸೇರಿಸಿತು.

 

ಸಂಯೋಜನೆ:

‘ಹಣಕಾಸು ಕ್ರಿಯಾ ಕಾರ್ಯಪಡೆಯು’ /  (Financial Action Task Force- FATF) ಪ್ರಸ್ತುತ 39 ಸದಸ್ಯರನ್ನು ಒಳಗೊಂಡಿದೆ. ಇದರ ಸದಸ್ಯರು ವಿಶ್ವದ ಎಲ್ಲಾ ಭಾಗಗಳಲ್ಲಿನ ಹಣಕಾಸು ಕೇಂದ್ರಗಳನ್ನು ಪ್ರತಿನಿಧಿಸುತ್ತಾರೆ. ಇದು 2 ಪ್ರಾದೇಶಿಕ ಸಂಸ್ಥೆಗಳನ್ನು ಒಳಗೊಂಡಿದೆ – ಗಲ್ಫ್ ಆಫ್ ಕೋಆಪರೇಷನ್ ಕೌನ್ಸಿಲ್ (GCC) ಮತ್ತು ಯುರೋಪಿಯನ್ ಕಮಿಷನ್ (EC). ಇದು ವೀಕ್ಷಕರನ್ನು ಮತ್ತು ಸಹಾಯಕ ಸದಸ್ಯರನ್ನು (ದೇಶಗಳು) ಸಹ ಹೊಂದಿದೆ.

 

ಏನಿದು FATF ನ ಕಪ್ಪು ಪಟ್ಟಿ ಮತ್ತು ಬೂದು ಪಟ್ಟಿ?

ಕಪ್ಪು ಪಟ್ಟಿ: ಭಯೋತ್ಪಾದಕರಿಗೆ ಹಣಕಾಸು ನೆರವು ಮತ್ತು ಅಕ್ರಮ ಹಣ ವರ್ಗಾವಣೆಗೆ ಸಂಬಂಧಿತ ಚಟುವಟಿಕೆಗಳನ್ನು ಬೆಂಬಲಿಸುವ ಮತ್ತು ಈ ಚಟುವಟಿಕೆಗಳನ್ನು ನಿಷೇಧಿಸುವ ಜಾಗತಿಕ ನಿಬಂಧನೆಗಳೊಂದಿಗೆ ಸಹಕರಿಸದ ಸಹಕಾರೇತರ ದೇಶಗಳನ್ನು (Non-Cooperative Countries or Territories- NCCTs) ‘ಕಪ್ಪು ಪಟ್ಟಿಯಲ್ಲಿ’ ಇರಿಸಲಾಗಿದೆ. ‘ಹಣಕಾಸು ಕ್ರಿಯಾ ಕಾರ್ಯಪಡೆಯು’ ಹೊಸ ನಮೂದುಗಳನ್ನು ಸೇರಿಸಲು ಅಥವಾ ತೆಗೆದುಹಾಕಲು ಕಪ್ಪುಪಟ್ಟಿಯನ್ನು ನಿಯಮಿತವಾಗಿ ತಿದ್ದುಪಡಿ ಮಾಡುತ್ತದೆ.

 

ಬೂದು ಪಟ್ಟಿ: ಭಯೋತ್ಪಾದಕರಿಗೆ ಹಣಕಾಸು ನೆರವು ಮತ್ತು ಅಕ್ರಮ ಹಣ ವರ್ಗಾವಣೆಗೆ  ಸಂಬಂಧಿತ ಚಟುವಟಿಕೆಗಳಿಗೆ ಸುರಕ್ಷಿತವೆಂದು ಪರಿಗಣಿಸಲಾದ ದೇಶಗಳನ್ನು FATF ‘ಬೂದು ಪಟ್ಟಿಯಲ್ಲಿ’ ಸೇರಿಸುತ್ತದೆ. ಈ ಬೂದು ಪಟ್ಟಿಗೆ ಸೇರುವ ದೇಶಕ್ಕೆ ಕಪ್ಪುಪಟ್ಟಿಗೆ ಪ್ರವೇಶಿಸಬಹುದಾದ ಎಚ್ಚರಿಕೆಯ ಗಂಟೆಯಾಗಿ FATF ಕಾರ್ಯನಿರ್ವಹಿಸುತ್ತದೆ.

 

‘ಬೂದು ಪಟ್ಟಿಯಲ್ಲಿ’ ಸೇರ್ಪಡೆಗೊಂಡ ದೇಶಗಳು ಈ ಕೆಳಗಿನ ಸಂದರ್ಭಗಳನ್ನು ಎದುರಿಸಬೇಕಾಗುತ್ತದೆ:

  1. IMF, ವಿಶ್ವ ಬ್ಯಾಂಕ್, ADBಯಿಂದ ಆರ್ಥಿಕ ನಿರ್ಬಂಧಗಳು.
  2. ಐಎಂಎಫ್, ವಿಶ್ವ ಬ್ಯಾಂಕ್, ಎಡಿಬಿ ಮತ್ತು ಇತರ ದೇಶಗಳಿಂದ ಸಾಲ ಪಡೆಯುವಲ್ಲಿ ಸಮಸ್ಯೆ.
  3. ಅಂತರರಾಷ್ಟ್ರೀಯ ವ್ಯಾಪಾರದಲ್ಲಿ ಕಡಿತ.
  4. ಅಂತರರಾಷ್ಟ್ರೀಯ ವೇದಿಕೆಗಳಿಂದ ಬಹಿಷ್ಕಾರ.

 


ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:


ಕಡಲ ರಾಜ್ಯ ಅಭಿವೃದ್ಧಿ ಮಂಡಳಿ (MSDC):

  1. ಕಡಲ ರಾಜ್ಯ ಅಭಿವೃದ್ಧಿ ಮಂಡಳಿ (Maritime State Development Council) ಯು ಕಡಲ ಕ್ಷೇತ್ರದ ಅಭಿವೃದ್ಧಿಗೆ ಒಂದು ಉನ್ನತ ಸಲಹಾ ಸಂಸ್ಥೆಯಾಗಿದ್ದು, ಪ್ರಮುಖ ಮತ್ತು ಪ್ರಮುಖೇತರ ಬಂದರುಗಳ ಸಮಗ್ರ ಅಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳುವ ಗುರಿಯನ್ನು ಹೊಂದಿದೆ.
  2. ಆಯಾ ಕಡಲ ರಾಜ್ಯಗಳಲ್ಲಿ ಅಸ್ತಿತ್ವದಲ್ಲಿರುವ ಮತ್ತು ಹೊಸ ಸಣ್ಣ ಬಂದರುಗಳ ಭವಿಷ್ಯದ ಅಭಿವೃದ್ಧಿಯನ್ನು ನೇರವಾಗಿ ಅಥವಾ ಬಂಧಿತ ಬಳಕೆದಾರ ಮತ್ತು ಖಾಸಗಿ ಸಹಭಾಗಿತ್ವದ ಮೂಲಕ ನಿರ್ಣಯಿಸಲು ರಾಜ್ಯ ಸರ್ಕಾರಗಳೊಂದಿಗೆ ಸಮಾಲೋಚಿಸಿ ಇದನ್ನು ಮೇ 1997 ರಲ್ಲಿ ರಚಿಸಲಾಯಿತು.
  3. ಇದಲ್ಲದೆ, ಕಡಲ ರಾಜ್ಯಗಳಲ್ಲಿನ ಸಣ್ಣ ಬಂದರುಗಳು, ಕ್ಯಾಪ್ಟಿವ್ ಬಂದರುಗಳು ಮತ್ತು ಖಾಸಗಿ ಬಂದರುಗಳ ಅಭಿವೃದ್ಧಿಯನ್ನೂ MSDC ನೋಡಿಕೊಳ್ಳುತ್ತದೆ.

 

ಪ್ರಾಜೆಕ್ಟ್ ಸೀಬರ್ಡ್:

(Project Seabird)

ಇದು ಭಾರತದ ಅತಿದೊಡ್ಡ ನೌಕಾ ಮೂಲಸೌಕರ್ಯ ಯೋಜನೆಯಾಗಿದೆ.

  1. ಭಾರತದ ಪಶ್ಚಿಮ ಕರಾವಳಿಯಲ್ಲಿನ ಕಾರವಾರ ದಲ್ಲಿ ನೌಕಾ ನೆಲೆಯನ್ನು ನಿರ್ಮಿಸುವುದು ಈ ಯೋಜನೆಯ ಉದ್ದೇಶವಾಗಿದೆ.
  2. ಕಾರವಾರ ನೌಕಾ ನೆಲೆಯು, ಈ ಯೋಜನೆ ಪೂರ್ಣಗೊಂಡ ನಂತರ, ಭಾರತೀಯ ನೌಕಾಪಡೆಗೆ ಪಶ್ಚಿಮ ಕರಾವಳಿಯಲ್ಲಿ ಭಾರತದ ಅತಿದೊಡ್ಡ ನೌಕಾ ನೆಲೆಯಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಸೂಯೆಜ್ ಕಾಲುವೆಯ ಪೂರ್ವಕ್ಕೆ ಅತಿದೊಡ್ಡ ನೌಕಾ ನೆಲೆಯಾಗಲಿದೆ.
  3. ಇದು ಸಶಸ್ತ್ರ ಪಡೆಗಳ ಮಿಲಿಟರಿ ಕಾರ್ಯಾಚರಣೆಯ ಸನ್ನದ್ಧತೆಯನ್ನು ಮತ್ತಷ್ಟು ಬಲಪಡಿಸುತ್ತದೆ ಮತ್ತು ವ್ಯಾಪಾರ, ಆರ್ಥಿಕತೆ ಮತ್ತು ಮಾನವೀಯ ನೆರವು ಕಾರ್ಯಾಚರಣೆಗಳನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

 

ಚೀನಾ ಭಾರತದ ಗಡಿಯ ಸಮೀಪ ಟಿಬೆಟ್‌ನಲ್ಲಿ ಮೊದಲ ಬುಲೆಟ್ ರೈಲು ಸಂಚಾರ ಆರಂಭಿಸಿದೆ.

(China launches first bullet train in Tibet, close to Indian border)

  1.  ಚೀನಾ ತನ್ನ ಮೊದಲ ಸಂಪೂರ್ಣ ವಿದ್ಯುದ್ದೀಕೃತ ಬುಲೆಟ್ ರೈಲನ್ನು ದೂರದ ಹಿಮಾಲಯದ ಟಿಬೆಟ್‌ ಪ್ರಾಂತ್ಯದಲ್ಲಿ ಚಲಾಯಿಸಲು ಪ್ರಾರಂಭಿಸಿದೆ.
  2. ಈ ಬುಲೆಟ್ ರೈಲು ಟಿಬೆಟಿಯನ್ ಪ್ರಾಂತ್ಯದ ರಾಜಧಾನಿಯಾದ ಲ್ಹಾಸಾ ಮತ್ತು ಅರುಣಾಚಲ ಪ್ರದೇಶಕ್ಕೆ ಸಮೀಪವಿರುವ ಆಯಕಟ್ಟಿನ ಟಿಬೆಟಿಯನ್ ಗಡಿ ನಗರವಾದ ನೈಂಗ್ಚಿ (Nyingchi) ಯನ್ನು ಸಂಪರ್ಕಿಸುತ್ತದೆ.
  3.  ಈ ರೈಲ್ವೆ ಮಾರ್ಗವು ಸಿಚುವಾನ್-ಟಿಬೆಟ್ ರೈಲ್ವೆಯ ಒಂದು ವಿಭಾಗವಾಗಿದೆ.
  4. ಈ ರೈಲ್ವೆ ಮಾರ್ಗವು ಸ್ಥಳೀಯವಾಗಿ ಯಾರ್ಲುಂಗ್ ಜಾಂಗ್ಬೋ ಎಂದು ಕರೆಯಲ್ಪಡುವ ಬ್ರಹ್ಮಪುತ್ರ ನದಿಯನ್ನು 16 ಬಾರಿ ದಾಟುತ್ತದೆ.

 


  • Join our Official Telegram Channel HERE for Motivation and Fast Updates
  • Subscribe to our YouTube Channel HERE to watch Motivational and New analysis videos

[ad_2]

Leave a Comment