[Mission 2022] ದೈನಂದಿನ ಪ್ರಚಲಿತ ಘಟನೆಗಳು ದಿನಾಂಕ – 27 ನೇ ಸೆಪ್ಟೆಂಬರ್ 2021 – INSIGHTSIAS

[ad_1]

 

 

ಪರಿವಿಡಿ:

ಸಾಮಾನ್ಯ ಅಧ್ಯಯನ ಪತ್ರಿಕೆ 1:

1. ಗುಲಾಬ್ ಚಂಡಮಾರುತ.

 

ಸಾಮಾನ್ಯ ಅಧ್ಯಯನ ಪತ್ರಿಕೆ 2:

  1. ಭಾರತದ ಸ್ಪರ್ಧಾ ಆಯೋಗ ಮತ್ತು ಕಾರ್ಟಲೀಕರಣ.
  2. ಮಹಾರಾಷ್ಟ್ರದಲ್ಲಿ ಬಹು ಸದಸ್ಯರ ವಾರ್ಡ್ ವ್ಯವಸ್ಥೆ.
  3. PM ಕೇರ್ಸ್ ಫಂಡ್.

 

ಸಾಮಾನ್ಯ ಅಧ್ಯಯನ ಪತ್ರಿಕೆ 3:

  1. ಡಾರ್ಕ್ ಎನರ್ಜಿ ಎಂದರೇನು?
  2. ಚೆನ್ನೈನ ಪ್ರವಾಹದ ಕುರಿತು ರಾಜ್ಯ ಸರ್ಕಾರದ ವರದಿ.

 

ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:

  1. ಸಾಮಾಜಿಕ ಹೊಣೆಗಾರಿಕೆ ಕಾನೂನಿಗಾಗಿ ಅಭಿಯಾನವನ್ನು ಆರಂಭಿಸಲಾಗಿದೆ.

 


ಸಾಮಾನ್ಯ ಅಧ್ಯಯನ ಪತ್ರಿಕೆ : 1


 

ವಿಷಯಗಳು:ಭೂಕಂಪಗಳು, ಸುನಾಮಿ, ಜ್ವಾಲಾಮುಖಿ ಚಟುವಟಿಕೆಗಳು ಚಂಡಮಾರುತ ಮುಂತಾದ ಪ್ರಮುಖ ಭೌಗೋಳಿಕ ವಿದ್ಯಮಾನಗಳು, ಭೌಗೋಳಿಕ ಲಕ್ಷಣಗಳು ಮತ್ತು ಅವುಗಳ ಸ್ಥಳ- ನಿರ್ಣಾಯಕ ಭೌಗೋಳಿಕ ವೈಶಿಷ್ಟ್ಯಗಳಲ್ಲಿನ ಬದಲಾವಣೆಗಳು (ಸಾಗರಗಳು ಮತ್ತು ಐಸ್-ಕ್ಯಾಪ್ಗಳು ಸೇರಿದಂತೆ) ಮತ್ತು ಸಸ್ಯ ಮತ್ತು ಪ್ರಾಣಿ ಮತ್ತು ಅಂತಹ ಬದಲಾವಣೆಗಳ ಪರಿಣಾಮಗಳು.

ಗುಲಾಬ್ ಚಂಡಮಾರುತ:


(Cyclone Gulab)

ಸಂದರ್ಭ:

ಗುಲಾಬ್ ಚಂಡಮಾರುತವು (Cyclone Gulab) ಭಾರತದ ಪೂರ್ವ ಕರಾವಳಿಯನ್ನು ಅಪ್ಪಳಿಸುವ ಸಾಧ್ಯತೆಯಿದೆ. ಇದು ಬಂಗಾಳ ಕೊಲ್ಲಿ ಪ್ರದೇಶದಲ್ಲಿ ರೂಪುಗೊಂಡಿದೆ. ಬಂಗಾಳಕೊಲ್ಲಿಯ ಈಶಾನ್ಯ ಮತ್ತು ಪೂರ್ವ ಮಧ್ಯಭಾಗದಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಓಡಿಶಾ ಮತ್ತು ಆಂಧ್ರಪ್ರದೇಶದ ಕರಾವಳಿ ಭಾಗದಲ್ಲಿ ಈ ಚಂಡಮಾರುತವು ಅಪ್ಪಳಿಸುವ ಸಾಧ್ಯತೆ ಇದೆಯೆಂದು ಭಾರತೀಯ ಹವಾಮಾನ ಇಲಾಖೆಯು ತಿಳಿಸಿದೆ.

ಈ ಹೆಸರನ್ನು ನೀಡಿದ್ದು ಯಾರು?

ಈ ಚಂಡಮಾರುತಕ್ಕೆ ಗುಲಾಬ್ ಎಂಬ ಹೆಸರನ್ನು ಪಾಕಿಸ್ತಾನವು ಸೂಚಿಸಿದೆ.

ನೋಟ್: ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ಗುಲಾಬ್ ಚಂಡಮಾರುತವು ಭಾನುವಾರ ರಾತ್ರಿ ಒಡಿಶಾ-ಆಂಧ್ರಪ್ರದೇಶ ಗಡಿಭಾಗದಲ್ಲಿ ನೆಲಸ್ಪರ್ಶಮಾಡಿದೆ. ಒಡಿಶಾದ ಗೋಪಾಲಪುರಂ ಮತ್ತು ಆಂಧ್ರಪ್ರದೇಶದ ಕಳಿಂಗಪಟ್ಟಣಂನಲ್ಲಿ ಚಂಡಮಾರುತವು ಭೂ ಪ್ರವೇಶ ಮಾಡಿದೆ.

ಚಂಡಮಾರುತಗಳು ಹೇಗೆ ರೂಪುಗೊಳ್ಳುತ್ತವೆ?

ಉಷ್ಣವಲಯದ ಪ್ರದೇಶಗಳಲ್ಲಿನ, ಸಮುದ್ರದ ನೀರಿನ ಮೇಲೆ ಚಂಡಮಾರುತಗಳು ರೂಪುಗೊಳ್ಳುತ್ತವೆ.

ಈ ಪ್ರದೇಶಗಳು ಹೆಚ್ಚಿನ ಪ್ರಮಾಣದ ಸೌರ ಬೆಳಕನ್ನು ಹೊಂದಿವೆ, ಇದು ಭೂಮಿಯ ಮತ್ತು ಜಲಭಾಗಗಳ   ಮೇಲ್ಮೈಯನ್ನು ಬಿಸಿಮಾಡುತ್ತದೆ ಅಥವಾ ಬೆಚ್ಚಗಾಗಿಸುತ್ತದೆ. ಮೇಲ್ಮೈ ಬಿಸಿಯಾಗುತ್ತಿದ್ದಂತೆ, ಸಮುದ್ರದ ಮೇಲಿರುವ ಬೆಚ್ಚಗಿನ ಆರ್ದ್ರ ಗಾಳಿಯು ಮೇಲಕ್ಕೆ ಏರಲು ಪ್ರಾರಂಭಿಸುತ್ತದೆ, ಅದರ ನಂತರ ತಂಪಾದ ಗಾಳಿಯು ಖಾಲಿ ಜಾಗಗಳನ್ನು ಅಥವಾ ನಿರ್ವಾತವನ್ನು ತುಂಬಲು ವೇಗವಾಗಿ ಧಾವಿಸುತ್ತದೆ, ನಂತರ ಅದುಕೂಡ ಬಿಸಿಯಾಗುವುದರ ಮೂಲಕ ಮೇಲಕ್ಕೆ ಏರುತ್ತದೆ ಮತ್ತು ಈ ಚಕ್ರವು ನಿರಂತರವಾಗಿ ಹೀಗೆಯೇ ಮುಂದುವರಿಯುತ್ತದೆ.

meteorological_dep

ಈ ಗಾಳಿಯ ಚಕ್ರವು ನಿರ್ಮಾಣಗೊಳ್ಳಲು ಕಾರಣ?

ಗಾಳಿ ಯಾವಾಗಲೂ ಅಧಿಕ ಒತ್ತಡದ ಪ್ರದೇಶದಿಂದ ಕಡಿಮೆ ಒತ್ತಡದ ಪ್ರದೇಶಗಳಿಗೆ ಬೀಸುತ್ತದೆ. ಶೀತ ಪ್ರದೇಶಗಳಲ್ಲಿ ಅಧಿಕ ಒತ್ತಡದ ಪ್ರದೇಶಗಳು ರೂಪುಗೊಳ್ಳುತ್ತವೆ, ಆದರೆ ಕಡಿಮೆ ಒತ್ತಡದ ಪರಿಸ್ಥಿತಿಗಳು ಬೆಚ್ಚಗಿನ ಅಥವಾ ಬಿಸಿ ಪ್ರದೇಶಗಳಲ್ಲಿ ರೂಪುಗೊಳ್ಳುತ್ತವೆ. ಧ್ರುವ ಪ್ರದೇಶಗಳಲ್ಲಿನ ಸೌರ ಬೆಳಕಿನ ಪ್ರಮಾಣವು ಉಷ್ಣವಲಯದ ಪ್ರದೇಶಗಳಿಗಿಂತ ತೀರಾ ಕಡಿಮೆ, ಆದ್ದರಿಂದ ಇವು ಸಾಮಾನ್ಯವಾಗಿ ಅಧಿಕ ಒತ್ತಡದ ಪ್ರದೇಶಗಳಾಗಿವೆ. ಆದ್ದರಿಂದಲೇ ಗಾಳಿಯು ಧ್ರುವ ಪ್ರದೇಶಗಳಿಂದ ಉಷ್ಣವಲಯದ ಪ್ರದೇಶಗಳಿಗೆ ಹೆಚ್ಚಾಗಿ ಬೀಸುತ್ತದೆ.

  1. ಇದರ ನಂತರ, ಭೂಮಿಯ ಚಲನೆಯು ಮಹತ್ವದ ಪಾತ್ರವನ್ನು ವಹಿಸುತ್ತದೆ, ಅದು ಪಶ್ಚಿಮದಿಂದ ಪೂರ್ವಕ್ಕೆ. ಭೂಮಿಯು ತನ್ನದೇ ಆದ ಅಕ್ಷದಲ್ಲಿ ಪರಿಭ್ರಮಿಸುತ್ತಿರುವುದರಿಂದ, ಎರಡೂ ಧ್ರುವಗಳಿಂದ ಬೀಸುವ ಗಾಳಿಯು ಉಷ್ಣವಲಯದಲ್ಲಿ ವಿಚಲಣೆ ಗೊಳ್ಳುತ್ತದೆ, ಏಕೆಂದರೆ ಭೂಮಿಯು ಗೋಳಾಕಾರ ವಾಗಿರುವುದರಿಂದ, ಧ್ರುವಗಳಿಗಿಂತ ಉಷ್ಣವಲಯದಲ್ಲಿ ಭೂಮಿಯ ತಿರುಗುವಿಕೆಯ ವೇಗ ಹೆಚ್ಚಿರುತ್ತದೆ. ಆರ್ಕ್ಟಿಕ್ ಪ್ರದೇಶದಿಂದ ಬರುವ ಗಾಳಿಯು ಬಲಕ್ಕೆ ತಿರುಗುತ್ತದೆ ಮತ್ತು ಅಂಟಾರ್ಕ್ಟಿಕ್ ಪ್ರದೇಶದಿಂದ ಬರುವ ಗಾಳಿಯು ಎಡಕ್ಕೆ ತಿರುಗುತ್ತದೆ.
  2. ಹೀಗಾಗಿ, ಈಗಾಗಲೇ ನಿರ್ದಿಷ್ಟ ದಿಕ್ಕುಗಳಲ್ಲಿ ಬೀಸುತ್ತಿರುವ ಗಾಳಿಯು, ಬೆಚ್ಚಗಿನ ಸ್ಥಳವನ್ನು ತಲುಪಿದ ನಂತರ,ಖಾಲಿ ಜಾಗವನ್ನು ತುಂಬಲು ತಂಪಾದ ಗಾಳಿಯು ಕೇಂದ್ರದ ಕಡೆಗೆ ಆಕರ್ಷಿತವಾಗಲು ಪ್ರಾರಂಭಿಸುತ್ತದೆ. ಕೇಂದ್ರದ ಕಡೆಗೆ ಚಲಿಸುವಾಗ, ತಂಪಾದ ಗಾಳಿಯು ಗಾಳಿಯ ಚಲನೆಯ ಪ್ರಸರಣದ ಪರಿಣಾಮವಾಗಿ ತಿರುಗುತ್ತಲೇ ಇರುತ್ತದೆ ಮತ್ತು ಇದು ಚಂಡಮಾರುತದ ತಾಣವನ್ನು ಮುಟ್ಟುವವರೆಗೂ ಅಂದರೆ ಹೀಗೆ ರೂಪುಗೊಳ್ಳುವ ಚಂಡಮಾರುತವು ಭೂಮಿಗೆ ಅಪ್ಪಳಿಸುವ ವರೆಗೆ ಈ ಪ್ರಕ್ರಿಯೆಯು ಮುಂದುವರಿಯುತ್ತದೆ.

ಚಂಡಮಾರುತವು ಭೂಮಿಗೆ ಅಪ್ಪಳಿಸಿದಾಗ ಆಗುವ ಪರಿಣಾಮಗಳು?

ಭೂಮಿಯನ್ನು ತಲುಪಿದ ನಂತರ ಅಥವಾ ಭೂಮಿಗೆ ಅಪ್ಪಳಿಸಿದ ನಂತರ ಚಂಡಮಾರುತವು ವಿಭಜನೆಗೊಂಡು ಕೊನೆಗೊಳ್ಳುತ್ತದೆ, ಏಕೆಂದರೆ ಬಿಸಿಯಾದನೀರು ಮೇಲಕ್ಕೇರುವ ಮೂಲಕ ತಂಪಾದ ನೀರಿಗೆ ಸ್ಥಳಾವಕಾಶವನ್ನು ಸೃಷ್ಟಿಸುತ್ತದೆ, ಆದರೆ ಆದರೆ ಭೂಮಿಯ ಮೇಲೆ ಸಾಕಷ್ಟು ಪ್ರಮಾಣದಲ್ಲಿ ತಂಪು ನೀರು ಲಭ್ಯವಿರುವುದಿಲ್ಲ, ಇದರ ಜೊತೆಗೆ ಎತ್ತರದ ಆರ್ದ್ರ(ತೇವಾಂಶಭರಿತ) ಗಾಳಿಯು ಮೋಡಗಳು ರೂಪುಗೊಳ್ಳಲು ಕಾರಣೀಭೂತವಾಗುತ್ತದೆ, ಇದು ಚಂಡಮಾರುತಗಳ ಸಮಯದಲ್ಲಿ ಬಲವಾದ ಗಾಳಿಯೊಂದಿಗೆ ತೀವ್ರವಾದ ಮಳೆಯಾಗಲು ಕಾರಣವಾಗುತ್ತದೆ.

ಚಂಡಮಾರುತಗಳು ಹೆಚ್ಚಲು ಕಾರಣಗಳೇನು?

  1. ಮುಂಗಾರು ಋತುವಿಗೆ ಮೊದಲು ಮತ್ತು ಮುಂಗಾರು ಋತುವಿನ ನಂತರ ಸಮುದ್ರದಲ್ಲಿ ಉಂಟಾಗುವ ಚಂಡಮಾರುತಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಹವಾಮಾನ ಬದಲಾವಣೆಯಿಂದಾಗಿ ಸಾಗರದ ಮೇಲ್ಮೈಯ ತಾಪದಲ್ಲಿ ಏರಿಕೆ ಇದಕ್ಕೆ ಮುಖ್ಯ ಕಾರಣ ಎಂದು ವಿಜ್ಞಾನಿಗಳು ಗುರುತಿಸಿದ್ದಾರೆ. 2014ರಲ್ಲಿ ನಡೆಸಿದ ಅಧ್ಯಯನದ ಪ್ರಕಾರ, ಹಿಂದೂ ಮಹಾಸಾಗರದ ಮೇಲ್ಮೈಯ ಸರಾಸರಿ ತಾಪವು 0.7 ಡಿಗ್ರಿ ಸೆಲ್ಸಿಯಸ್‌ನಷ್ಟು ಏರಿದೆ. ಇತರ ಸಾಗರಗಳಿಗೆ ಹೋಲಿಸಿದರೆ ಹಿಂದೂ ಮಹಾಸಾಗರವು ಹೆಚ್ಚು ತಂಪು. ಹಾಗಿದ್ದರೂ ಬೇಸಿಗೆಯ ಅವಧಿಯಲ್ಲಿ ಸಾಗರದ ಮೇಲ್ಮೈ ತಾಪವು 1.2 ಡಿಗ್ರಿ ಸೆಲ್ಸಿಯಸ್‌ ಏರಿಕೆಯಾಗಿತ್ತು.
  2. ಹಸಿರುಮನೆ ಅನಿಲಗಳು ಹೊರಸೂಸುವ ತಾಪದ ಶೇ 90ರಷ್ಟನ್ನು ಸಮುದ್ರವು ಹೀರಿಕೊಳ್ಳುತ್ತದೆ. ಮಾರುತಗಳಿಗೆ ಶಕ್ತಿ ನೀಡುವುದೇ ನೀರಿನ ತಾಪ. ಇತರ ಸಮುದ್ರಗಳಿಗೆ ಹೋಲಿಸಿದರೆ ಅರಬ್ಬಿಸಮುದ್ರದ ತಾಪವು ಅತ್ಯಂತ ವೇಗವಾಗಿ ಏರಿಕೆಯಾಗುತ್ತಿದೆ ಎಂದು ಗುರುತಿಸಲಾಗಿದೆ.
  3. ಹವಾಮಾನ ಬದಲಾವಣೆಯಿಂದಾಗಿ ಸಮುದ್ರ ಮಟ್ಟ ಏರಿಕೆಯಾಗುತ್ತದೆ ಮತ್ತು ಚಂಡಮಾರುತದ ವೇಗ ಹೆಚ್ಚಳವಾಗುತ್ತದೆ. ಇದು ಮಾರುತವು ಕರಾವಳಿಯನ್ನು ಪ್ರವೇಶಿಸಿದ ನಂತರ ಪರಿಣಾಮ ಬೀರುವ ಭೂ ಪ್ರದೇಶದ ವ್ಯಾಪ್ತಿಯನ್ನೂ ಹೆಚ್ಚಿಸುತ್ತದೆ. ಚಂಡಮಾರುತದ ಅವಧಿಯಲ್ಲಿ ಬೀಳುವ ಮಳೆಯ ಪ್ರಮಾಣ ಹೆಚ್ಚಳವಾಗಿ, ಜಲಾವೃತಗೊಳ್ಳುವ ಪ್ರದೇಶವೂ ಹೆಚ್ಚುತ್ತದೆ.ಯೋಜಿತವಲ್ಲದ ನಗರಾಭಿವೃದ್ಧಿ, ಕಾಂಡ್ಲಾವನಗಳ ನಾಶ ಚಂಡಮಾರುತಗಳ ಪರಿಣಾಮವನ್ನು ತೀವ್ರವಾಗಿಸುತ್ತವೆ ಎಂಬುದು ತಜ್ಞರ ವಿಶ್ಲೇಷಣೆ.
  4. ಬಂಗಾಳ ಕೊಲ್ಲಿ ಮತ್ತು ಅರಬ್ಬಿ ಸಮುದ್ರಗಳೆರಡಲ್ಲೂ ಚಂಡಮಾರುತಗಳು ಸೃಷ್ಟಿಯಾಗುತ್ತಿವೆ. ಬಂಗಾಳ ಕೊಲ್ಲಿಗೆ ಹೋಲಿಸಿದರೆ ಅರಬ್ಬಿ ಸಮುದ್ರದಲ್ಲಿ ಚಂಡಮಾರುತಗಳ ಸಂಖ್ಯೆ ಕಡಿಮೆ. 1891ರಿಂದ 2,000ದವರೆಗೆ ಬಂಗಾಳ ಕೊಲ್ಲಿಯಲ್ಲಿ 308 ಚಂಡಮಾರುತಗಳು ಸೃಷ್ಟಿ ಯಾಗಿವೆ. ಅವುಗಳ ಪೈಕಿ 103 ತೀವ್ರವಾಗಿದ್ದವು. ಅರಬ್ಬಿ ಸಮುದ್ರದಲ್ಲಿ ಸೃಷ್ಟಿಯಾದ 48 ಬಿರುಗಾಳಿಗಳಲ್ಲಿ 24 ತೀವ್ರ ಪರಿಣಾಮ ಉಂಟು ಮಾಡಿದ್ದವು.

ನಾಮಕರಣ ಹೇಗೆ?

  1. ಚಂಡಮಾರುತಗಳು ಒಂದು ವಾರ ಅಥವಾ ಅದಕ್ಕಿಂತ ಹೆಚ್ಚು ಸಮಯ ಇರಬಹುದು. ಹಾಗಾಗಿ, ಒಂದೇ ಸಮಯದಲ್ಲಿ ಒಂದಕ್ಕಿಂತ ಹೆಚ್ಚು ಚಂಡಮಾರುತ ಬೀಸುವ ಸಾಧ್ಯತೆ ಇದೆ. ಹಾಗಾದಾಗ ಗೊಂದಲ ಸಹಜ. ಈ ಗೊಂದಲ ನಿವಾರಣೆಗಾಗಿ ಚಂಡಮಾರುತಗಳಿಗೆ ಹೆಸರು ಇರಿಸುವ ಪರಿಪಾಟ ಶುರುವಾಯಿತು. ಪ್ರಾದೇಶಿಕವಾಗಿ ಒಪ್ಪಿತವಾದ ನಿಯಮಾನುಸಾರ ಹೆಸರು ಇರಿಸಲಾಗುತ್ತದೆ.
  2. ಚಂಡಮಾರುತಗಳ ಮೇಲೆ ನಿಗಾ ಇರಿಸುವ ಆರು ಪ್ರಾದೇಶಿಕ ವಿಶೇಷ ಹವಾಮಾನ ಕೇಂದ್ರಗಳು (RSMC) ಮತ್ತು ಐದು ಪ್ರಾದೇಶಿಕ ಚಂಡಮಾರುತ ಎಚ್ಚರಿಕೆ ಕೇಂದ್ರಗಳು (TCWC) ಇವೆ. ಚಂಡಮಾರುತದ ಮುನ್ನೆಚ್ಚರಿಕೆ ನೀಡುವುದು ಮತ್ತು ಹೆಸರು ಇರಿಸುವುದು ಈ ಕೇಂದ್ರಗಳ ಹೊಣೆಯಾಗಿದೆ. ಹಿಂದೂ ಮಹಾಸಾಗರ ಪ್ರದೇಶದ 13 ದೇಶಗಳಿಗೆ ಚಂಡಮಾರುತ ಎಚ್ಚರಿಕೆ ನೀಡುವುದು ದೆಹಲಿಯಲ್ಲಿರುವ ಆರ್‌ಎಸ್‌ಎಂಸಿಯ ಜವಾಬ್ದಾರಿ. ಈ 13 ದೇಶಗಳೆಂದರೆ, ಬಾಂಗ್ಲಾದೇಶ, ಭಾರತ, ಇರಾನ್‌, ಮಾಲ್ಡೀವ್ಸ್‌, ಮ್ಯಾನ್ಮಾರ್‌, ಒಮಾನ್‌, ಪಾಕಿಸ್ತಾನ, ಕತಾರ್‌, ಸೌದಿ ಅರೇಬಿಯಾ, ಶ್ರೀಲಂಕಾ, ಥಾಯ್ಲೆಂಡ್‌, ಅರಬ್‌ ಸಂಯುಕ್ತ ಸಂಸ್ಥಾನ ಮತ್ತು ಯೆಮನ್‌.
  3. ಅರಬ್ಬಿ ಸಮುದ್ರ ಮತ್ತು ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾಗುವ ಚಂಡಮಾರುತಳಿಗೆ ಹೆಸರು ಇರಿಸುವುದು ಕೂಡ ದೆಹಲಿಯ ಆರ್‌ಎಸ್‌ಎಂಸಿಯ ಹೊಣೆ. ಈ ಪ್ರದೇಶದ ದೇಶಗಳು ಸೂಚಿಸಿದ ಹೆಸರುಗಳನ್ನು ಪಟ್ಟಿ ಮಾಡಿ ಇರಿಸಲಾಗುತ್ತದೆ. ಈ ಪಟ್ಟಿಯಲ್ಲಿರುವ ಹೆಸರುಗಳನ್ನು ಸರದಿಯಂತೆ ಇರಿಸಬೇಕಾಗುತ್ತದೆ. ಚಂಡಮಾರುತ ಸೃಷ್ಟಿಯಾಗುವುದಕ್ಕೆ ಎಷ್ಟೋ ವರ್ಷ ಮೊದಲೇ ಹೆಸರು ನಿರ್ಧಾರ ಆಗಿರುತ್ತದೆ.
  4. 2004ರಲ್ಲಿ ರೂಪಿಸಿದ್ದ 64 ಹೆಸರುಗಳ ಪಟ್ಟಿಯಲ್ಲಿದ್ದ ಕೊನೆಯ ಹೆಸರನ್ನು ಕಳೆದ ವರ್ಷ ಬೀಸಿದ ಆಂಫನ್‌ ಚಂಡಮಾರುತಕ್ಕೆ ಇರಿಸಲಾಗಿದೆ.
  5. ಭಾರತೀಯ ಹವಾಮಾನ ಇಲಾಖೆಯು 2020ರಲ್ಲಿ ಹೊಸ ಪಟ್ಟಿ ರೂಪಿಸಿದೆ. 13 ದೇಶಗಳು ಸೂಚಿಸಿದ ತಲಾ 13 ಹೆಸರುಗಳು ಹೊಸ ಪಟ್ಟಿಯಲ್ಲಿ ಸೇರಿವೆ. ಒಟ್ಟು 169 ಹೆಸರುಗಳಿವೆ. ಈಗ ಹೊಸ ಪಟ್ಟಿಯಲ್ಲಿರುವ ಹೆಸರುಗಳನ್ನು ಬಳಸಲಾಗುತ್ತಿದೆ. ಈ ವಾರ ಅಪ್ಪಳಿಸಲಿರುವ ಚಂಡಮಾರುತ ‘ಯಸ್‌’ ಹೆಸರನ್ನು ಒಮಾನ್‌ ಸೂಚಿಸಿದೆ. ಮುಂದಿನ ಚಂಡಮಾರುತದ ಹೆಸರು ‘ಗುಲಾಬ್‌’, ಇದನ್ನು ‍ಪಾಕಿಸ್ತಾನ ಸೂಚಿಸಿದೆ.

ಇತ್ತೀಚಿನ ಕೆಲವು ಚಂಡಮಾರುತಗಳು:

  1. ಕಳೆದ ವರ್ಷ ಬಂಗಾಳ ಕೊಲ್ಲಿಗೆ ಅಪ್ಪಳಿಸಿ ಅತಿಹೆಚ್ಚು ಹಾನಿ ಮಾಡಿದ ಆಂಪನ್ ಚಂಡಮಾರುತವು ‘ಸೂಪರ್ ಸೈಕ್ಲೋನ್’ ಎಂದು ಕರೆಸಿಕೊಂಡಿತು. ಬಂಗಾಳದಲ್ಲಿ 72 ಜನರು, ಬಾಂಗ್ಲಾದೇಶದಲ್ಲಿ 12 ಜನರು ಇದಕ್ಕೆ ಬಲಿಯಾಗಿದ್ದರು. ಬಂಗಾಳದಲ್ಲಿ 1.40 ಕೋಟಿ ಜನರು ವಿದ್ಯುತ್‌ ಸಂಪರ್ಕ ಕಳೆದುಕೊಂಡಿದ್ದರು. ಗಂಟೆಗೆ 160 ಕಿಲೋಮೀಟರ್ ವೇಗದಲ್ಲಿ ಬೀಸಿದ ಇದು, ಒಟ್ಟು ₹95,000 ಕೋಟಿ ನಷ್ಟ ಉಂಟು ಮಾಡಿತ್ತು ಎಂದು ಅಂದಾಜಿಸಲಾಗಿದೆ.
  2. ಕಳೆದ ವರ್ಷ ಅರಬ್ಬೀ ಸಮುದ್ರದ ಮೂಲಕ ‘ನಿಸರ್ಗ’ ಚಂಡಮಾರುತವು ಮುಂಬೈ ಕರಾವಳಿಗೆ ಅಪ್ಪಳಿಸಿತ್ತು. ಆಗ ಮುಂಬೈನಲ್ಲಿ ಕೋವಿಡ್‌ನ ಮೊದಲ ಅಲೆ ಭಾರಿ ಜೋರಾಗಿತ್ತು. ಆದರೆ ಚಂಡಮಾರುತ ಒಮಾನ್ ಕಡೆಗೆ ದಿಕ್ಕು ಬದಲಿಸಿದ್ದರಿಂದ, ಭಾರಿ ಪ್ರಮಾಣದ ಹಾನಿ ತಪ್ಪಿತು.
  3. ‘ಫನಿ’ ಚಂಡಮಾರುತವು 1998ರ ಒಡಿಶಾ ಚಂಡಮಾರುತದ ನಂತರ ಒಡಿಶಾಗೆ ಅಪ್ಪಳಿಸಿದ ಪ್ರಬಲ ಉಷ್ಣವಲಯದ ಚಂಡಮಾರುತವಾಗಿದೆ. 2019ರಲ್ಲಿ ಒಡಿಶಾ, ಪಶ್ಚಿಮ ಬಂಗಾಳ, ಆಂಧ್ರಪ್ರದೇಶ ಮತ್ತು ಪೂರ್ವ ಭಾರತದಲ್ಲಿ ಭಾರಿ ಪ್ರಮಾಣದ ಜೀವ ಮತ್ತು ಆಸ್ತಿ ನಷ್ಟ ಉಂಟುಮಾಡಿತು. ಬಾಂಗ್ಲಾದೇಶ, ಭೂತಾನ್ ಮತ್ತು ಶ್ರೀಲಂಕಾಗೂ ಅಪ್ಪಳಿಸಿತ್ತು.
  4. ‘ನಿವಾರ್’ ಚಂಡಮಾರುತವು 2020ರಲ್ಲಿ ತಮಿಳುನಾಡು, ಪುದುಚೇರಿಗೆ ಅಪ್ಪಳಿಸಿ ರೌದ್ರಾವತಾರ ತೋರಿತ್ತು. ಮುಂಜಾಗ್ರತಾ ಕ್ರಮ ತೆಗೆದುಕೊಂಡಿದ್ದರಿಂದ ಹೆಚ್ಚಿನ ಸಾವುನೋವು ಉಂಟಾಗದಿದ್ದರೂ, ರೈತಾಪಿ ವರ್ಗ ಕಷ್ಟ ಅನುಭವಿಸಿತು.
  5. 2019ರಲ್ಲಿ ‘ಬುಲ್‌ಬುಲ್’ ಚಂಡಮಾರುತವು ಭಾರತದ ಪಶ್ಚಿಮ ಬಂಗಾಳವನ್ನು ಅಪ್ಪಳಿಸಿದ ತೀವ್ರ ಸ್ವರೂಪದ ಚಂಡಮಾರುತವಾಗಿತ್ತು. ಇದು ಭಾರಿ ಮಳೆ, ಪ್ರವಾಹ ಇತ್ಯಾದಿಗಳಿಗೆ ಕಾರಣವಾಯಿತು. ಇದರಿಂದಾಗಿ ಜೀವ ಮತ್ತು ಆಸ್ತಿ ನಾಶವಾಯಿತು. ಭಾರತದ ಹೊರಗೆ ಅದು ಬಾಂಗ್ಲಾದೇಶಕ್ಕೂ ತೊಂದರೆ ಕೊಟ್ಟಿತ್ತು.
  6. ‘ವಾಯು’ ಚಂಡಮಾರುತವು ಅರಬ್ಬೀ ಸಮುದ್ರದ ಮೂಲಕ ಅಪ್ಪಳಿಸಿ ಗುಜರಾತ್ ರಾಜ್ಯದಲ್ಲಿ ಜೀವ ಮತ್ತು ಆಸ್ತಿಗೆ ಒಂದಿಷ್ಟು ಹಾನಿಯನ್ನುಂಟುಮಾಡಿತು. ಇದು 1998ರ ಗುಜರಾತ್ ಚಂಡಮಾರುತದ ನಂತರ ರಾಜ್ಯಕ್ಕೆ ಅಪ್ಪಳಿಸಿದ ಪ್ರಬಲ ಚಂಡಮಾರುತವಾಗಿತ್ತು. ಇದು ಮಾಲ್ಡೀವ್ಸ್, ಪಾಕಿಸ್ತಾನ ಮತ್ತು ಒಮಾನ್‌ಗಳ ಮೇಲೂ ಪರಿಣಾಮ ಬೀರಿತು.

 


ಸಾಮಾನ್ಯ ಅಧ್ಯಯನ ಪತ್ರಿಕೆ : 2


 

ವಿಷಯಗಳು: ಶಾಸನಬದ್ಧ, ನಿಯಂತ್ರಕ ಮತ್ತು ವಿವಿಧ ಅರೆ-ನ್ಯಾಯಾಂಗ ಸಂಸ್ಥೆಗಳು.

ಭಾರತದ ಸ್ಪರ್ಧಾ ಆಯೋಗ ಮತ್ತು ಕಾರ್ಟಲೀಕರಣ:


(Competition Commission of India and Cartelisation)

ಸಂದರ್ಭ:

ಕಳೆದ ವಾರ, ಭಾರತದ ಸ್ಪರ್ಧಾ ಆಯೋಗವು (Competition Commission of India) ಮೂರು ಬಿಯರ್ ಕಂಪನಿಗಳು 2009 ಮತ್ತು 2018 ರ ನಡುವಣ ಪೂರ್ಣ ದಶಕದವರೆಗೆ ಬಿಯರ್ ಬೆಲೆಯನ್ನು ನಿಗದಿಪಡಿಸಲು ಸಹಕರಿಸಿವೆ/ಹೊಂದಾಣಿಕೆ ಮಾಡಿಕೊಂಡಿವೆ ಎಂದು ಕಂಡುಹಿಡಿದಿದೆ.

ಇದರ ಪರಿಣಾಮವಾಗಿ, 10 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಬಿಯರ್ ಮಾರಾಟ ಮತ್ತು ಪೂರೈಕೆಯಲ್ಲಿ ಕಾರ್ಟಲೀಕರಣಕ್ಕಾಗಿ (cartelisation) CCI, ಈ ಕಂಪನಿಗಳಿಗೆ 873 ಕೋಟಿ ದಂಡವನ್ನು ವಿಧಿಸಿದೆ.

ಕಾರ್ಟೆಲ್ ಎಂದರೇನು?

CCI ಪ್ರಕಾರ, “ಕಾರ್ಟೆಲ್ ಎಂದರೆ, ಇದು ಉತ್ಪಾದಕರು, ಮಾರಾಟಗಾರರು, ವಿತರಕರು, ವ್ಯಾಪಾರಿಗಳು ಅಥವಾ ಸೇವಾ ಪೂರೈಕೆದಾರರ ಸಂಘವನ್ನು ಒಳಗೊಂಡಿರುತ್ತದೆ, ಅವರು ತಮ್ಮ ನಡುವೆ ಒಪ್ಪಂದದ ಮೂಲಕ, ಮಿತಿ, ನಿಯಂತ್ರಣ ಅಥವಾ ಉತ್ಪಾದನೆ, ವಿತರಣೆ, ಮಾರಾಟ ಅಥವಾ ಬೆಲೆ, ಅಥವಾ, ಸರಕುಗಳ ವ್ಯಾಪಾರವನ್ನು ಅಥವಾ ಸೇವೆಗಳನ್ನು ಒದಗಿಸುವುದನ್ನು ನಿಯಂತ್ರಿಸಲು ಪ್ರಯತ್ನಿಸುತ್ತಾರೆ”.

ಕಾರ್ಟೆಲ್‌ನ ಮೂರು ಸಾಮಾನ್ಯ ಅಂಶಗಳು:

  1. ಒಂದು ಒಪ್ಪಂದವಾಗಿದೆ.
  2. ಸ್ಪರ್ಧಿಗಳ ನಡುವೆ.
  3. ಸ್ಪರ್ಧೆಯನ್ನು ನಿರ್ಬಂಧಿಸಲು.

ಕಾರ್ಟೆಲ್ ನ ವೈಶಿಷ್ಟ್ಯಗಳು:

ಕಾರ್ಟೆಲ್ ಅನ್ನು ರೂಪಿಸುವ ಒಪ್ಪಂದವು ಔಪಚಾರಿಕ ಅಥವಾ ಲಿಖಿತವಾಗಿರಬೇಕಾಗಿಲ್ಲ.

ಕಾರ್ಟೆಲ್‌ಗಳು ಏಕರೂಪವಾಗಿ ರಹಸ್ಯ ಪಿತೂರಿಗಳನ್ನು ಒಳಗೊಂಡಿರುತ್ತವೆ.

ಇಲ್ಲಿ, ಪ್ರತಿಸ್ಪರ್ಧಿಗಳು ಸರಕುಗಳನ್ನು ಮಾರಾಟ ಮಾಡಲು ಅಥವಾ ಸೇವೆಗಳನ್ನು ಒದಗಿಸಲು ಪರಸ್ಪರ ನೇರ ಪೈಪೋಟಿಯಲ್ಲಿರುವ ಆರ್ಥಿಕತೆಯ ಅದೇ ಮಟ್ಟದ ಕಂಪನಿಗಳನ್ನು (ತಯಾರಕರು, ವಿತರಕರು ಅಥವಾ ಚಿಲ್ಲರೆ ವ್ಯಾಪಾರಿಗಳು) ಉಲ್ಲೇಖಿಸುತ್ತಾರೆ.

ಈ ಕಾರ್ಟೆಲ್‌ಗಳು ಏನು ಮಾಡುತ್ತವೆ?

  1. ಬೆಲೆ ನಿಗದಿ.
  2. ಔಟ್ಪುಟ್ ನಿರ್ಬಂಧಗಳು.
  3. ಮಾರುಕಟ್ಟೆ ಹಂಚಿಕೆ.
  4. ಬಿಡ್-ರಿಗ್ಗಿಂಗ್.

ಸರಳವಾಗಿ ಹೇಳುವುದಾದರೆ, “ಹಾರ್ಡ್-ಕೋರ್ ಕಾರ್ಟೆಲ್‌ಗಳಲ್ಲಿ ಭಾಗವಹಿಸುವವರು ಸ್ಪರ್ಧಾತ್ಮಕ ಮಾರುಕಟ್ಟೆಯ ಕಠಿಣತೆಯಿಂದ ತಮ್ಮನ್ನು ಬೇರ್ಪಡಿಸಲು ಒಪ್ಪಿಕೊಳ್ಳುತ್ತಾರೆ, ಸ್ಪರ್ಧೆಗೆ ಬದಲಿಯಾಗಿ ಸಹಕಾರವನ್ನು ಬಳಸುತ್ತಾರೆ”.

ಕಾರ್ಟೆಲ್‌ಗಳಿಂದ ಉಂಟಾಗುವ ಸವಾಲುಗಳು:

  1. ಗ್ರಾಹಕರಿಗೆ ಮಾತ್ರವಲ್ಲ, ಪರೋಕ್ಷವಾಗಿ, ಒಟ್ಟಾರೆ ಆರ್ಥಿಕ ದಕ್ಷತೆ ಮತ್ತು ನಾವೀನ್ಯತೆಗಳನ್ನು ದುರ್ಬಲಗೊಳಿಸುತ್ತದೆ.
  2. ಪೂರೈಕೆಯನ್ನು ಕೃತಕವಾಗಿ ತಡೆಹಿಡಿಯುವ ಮೂಲಕ ಅಥವಾ ಸಮನ್ವಯದ ರೀತಿಯಲ್ಲಿ ಬೆಲೆಗಳನ್ನು ಹೆಚ್ಚಿಸುವ ಮೂಲಕ, ಕಂಪನಿಗಳು ಸರಕನ್ನು (ಬಿಯರ್) ಹೆಚ್ಚು ವಿರಳವನ್ನಾಗಿಸುವ ಮೂಲಕ ಅಥವಾ ಮುಕ್ತ ಸ್ಪರ್ಧೆಯು ಅನುಮತಿಸದ ರೀತಿಯಲ್ಲಿ ಲಾಭವನ್ನು ಗಳಿಸುವ ಮೂಲಕ ಕೆಲವು ಗ್ರಾಹಕರನ್ನು ಮಾರುಕಟ್ಟೆಯಿಂದ ಹೊರಹಾಕುತ್ತವೆ.
  3. ಒಂದು ಕಾರ್ಟೆಲ್ ತನ್ನ ಸದಸ್ಯರನ್ನು ಮಾರುಕಟ್ಟೆ ಶಕ್ತಿಗಳಿಗೆ ಸಂಪೂರ್ಣವಾಗಿ ಒಡ್ಡಿಕೊಳ್ಳುವುದರಿಂದ ರಕ್ಷಣೆ ನೀಡುತ್ತದೆ, ವೆಚ್ಚಗಳನ್ನು ನಿಯಂತ್ರಿಸಲು ಮತ್ತು ಹೊಸತನವನ್ನು ಹುಡುಕಲು ಅವರ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ.

ಕಂಪನಿಗಳು ಕಾರ್ಟೆಲೈಸೇಶನ್ ಅನ್ನು ಏಕೆ ಅವಲಂಬಿಸುತ್ತವೆ?

ಕಂಪನಿಗಳು ಸರ್ಕಾರದ ನಿಯಮಗಳನ್ನು ದೂಷಿಸಿವೆ, ಏಕೆಂದರೆ, ಯಾವುದೇ ಬೆಲೆ ಪರಿಷ್ಕರಣೆಗಾಗಿ ಅವರು ರಾಜ್ಯ ಪ್ರಾಧಿಕಾರಗಳಿಂದ ಅನುಮೋದನೆಗಳನ್ನು ಪಡೆಯಬೇಕು, ಇದು ಕಾರ್ಟೆಲ್ ಅನ್ನು ರೂಪಿಸಲು ಮುಖ್ಯ ಕಾರಣವಾಗಿದೆ.

ಭಾರತದ ಸ್ಪರ್ಧಾತ್ಮಕ ಆಯೋಗದ ಬಗ್ಗೆ:

ಭಾರತ ಸ್ಪರ್ಧಾತ್ಮಕ ಆಯೋಗ (CCI) ವು ಭಾರತ ಸರ್ಕಾರದ ಶಾಸನಬದ್ಧ ಸಂಸ್ಥೆಯಾಗಿದೆ. ಕಾಯಿದೆಯ ಆಡಳಿತ, ಅನುಷ್ಠಾನ ಮತ್ತು ಜಾರಿಗಾಗಿ ಇದನ್ನು ಸ್ಪರ್ಧಾತ್ಮಕ ಕಾಯ್ದೆ 2002 (Competition Act, 2002) ರ ಅಡಿಯಲ್ಲಿ ಸ್ಥಾಪಿಸಲಾಯಿತು ಮತ್ತು ಇದನ್ನು ಮಾರ್ಚ್ 2009 ರಲ್ಲಿ ಸರಿಯಾಗಿ ರಚಿಸಲಾಯಿತು. ಇದರ ಅಧ್ಯಕ್ಷರು ಮತ್ತು ಸದಸ್ಯರನ್ನು ಕೇಂದ್ರ ಸರ್ಕಾರ ನೇಮಿಸುತ್ತದೆ.

CCI ನ ಕಾರ್ಯಗಳು:

  1. ಸ್ಪರ್ಧೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಅಭ್ಯಾಸಗಳನ್ನು ತೊಡೆದುಹಾಕುವುದು, ಸ್ಪರ್ಧೆಯನ್ನು ಉತ್ತೇಜಿಸುವುದು ಮತ್ತು ಮುಂದುವರಿಸುವುದು, ಗ್ರಾಹಕರ ಹಿತಾಸಕ್ತಿಗಳನ್ನು ರಕ್ಷಿಸುವುದು ಮತ್ತು ಭಾರತೀಯ ಮಾರುಕಟ್ಟೆಗಳಲ್ಲಿ ವ್ಯಾಪಾರದ ಸ್ವಾತಂತ್ರ್ಯವನ್ನು ಖಚಿತಪಡಿಸುವುದು ಭಾರತದ ಸ್ಪರ್ಧಾ ಆಯೋಗದ ಕರ್ತವ್ಯವಾಗಿದೆ.
  2. ಆಯೋಗವು ಯಾವುದೇ ಕಾನೂನಿನಡಿಯಲ್ಲಿ ಸ್ಥಾಪಿಸಲಾದ ಯಾವುದೇ ಶಾಸನಬದ್ಧ ಪ್ರಾಧಿಕಾರದಿಂದ ಪಡೆದ ಉಲ್ಲೇಖಗಳ ಮೇಲೆ, ಸ್ಪರ್ಧೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಸಲಹೆಗಳನ್ನು ನೀಡುತ್ತದೆ ಮತ್ತು ಸ್ಪರ್ಧೆಯ ಮನೋಭಾವವನ್ನು ಕಾಪಾಡಿಕೊಳ್ಳುತ್ತದೆ.
  3. ಇದಲ್ಲದೆ, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಮತ್ತು ಸ್ಪರ್ಧೆಯ ವಿಷಯಗಳ ಬಗ್ಗೆ ತರಬೇತಿ ನೀಡುವುದು ಸಹ ಆಯೋಗದಿಂದ ಒದಗಿಸಲ್ಪಟ್ಟಿದೆ.

ಸ್ಪರ್ಧಾ ಕಾಯ್ದೆ:

(The Competition Act)

ರಾಘವನ್ ಸಮಿತಿಯ ಶಿಫಾರಸುಗಳ ಮೇರೆಗೆ, ‘ಏಕಸ್ವಾಮ್ಯ ಮತ್ತು ನಿರ್ಬಂಧಿತ ವ್ಯಾಪಾರ ಅಭ್ಯಾಸ ಕಾಯ್ದೆ’, 1969 (Monopolies and Restrictive Trade Practices Act, 1969) ಅಂದರೆ MRTP ಕಾಯ್ದೆಯನ್ನು ರದ್ದುಪಡಿಸಲಾಯಿತು ಮತ್ತು ‘ಸ್ಪರ್ಧಾ ಕಾಯ್ದೆ’, 2002 ರಿಂದ ಬದಲಾಯಿಸಲಾಯಿತು.

  1. ಸ್ಪರ್ಧಾತ್ಮಕ ಕಾಯ್ದೆ, 2002 ರ ತಿದ್ದುಪಡಿ ರೂಪವಾದ ಸ್ಪರ್ಧೆ (ತಿದ್ದುಪಡಿ) ಕಾಯ್ದೆ 2007, ಸ್ಪರ್ಧಾತ್ಮಕ-ವಿರೋಧಿ ಒಪ್ಪಂದಗಳನ್ನು ನಿಷೇಧಿಸುತ್ತದೆ, ಉದ್ಯಮಗಳಿಂದ ಪ್ರಾಬಲ್ಯದ ಸ್ಥಾನವನ್ನು ದುರುಪಯೋಗಪಡಿಸಿ ಕೊಳ್ಳುವುದನ್ನು ನಿಷೇಧಿಸುತ್ತದೆ ಮತ್ತು ಸಂಯೋಜನೆಗಳನ್ನು ನಿಯಂತ್ರಿಸುತ್ತದೆ (M&A ಸ್ವಾಧೀನ, ನಿಯಂತ್ರಣ ಮತ್ತು ಸ್ವಾಧೀನ);ಈ ಸಂಯೋಜನೆಗಳು ಭಾರತದಲ್ಲಿನ ಸ್ಪರ್ಧೆಯ ಮೇಲೆ ಹೆಚ್ಚು ವ್ಯತಿರಿಕ್ತ ಪರಿಣಾಮ ಬೀರಬಹುದು ಅಥವಾ ಉಂಟುಮಾಡಬಹುದು.

 

ವಿಷಯಗಳು: ಕೇಂದ್ರ ಮತ್ತು ರಾಜ್ಯಗಳ ಕಾರ್ಯಗಳು ಮತ್ತು ಜವಾಬ್ದಾರಿಗಳು, ಫೆಡರಲ್ ರಚನೆಗೆ ಸಂಬಂಧಿಸಿದ ಸಮಸ್ಯೆಗಳು ಮತ್ತು ಸವಾಲುಗಳು, ಸ್ಥಳೀಯ ಮಟ್ಟದಲ್ಲಿ ಅಧಿಕಾರ ಮತ್ತು ಹಣಕಾಸು ಹಂಚಿಕೆ ಮತ್ತು ಅದರಲ್ಲಿನ ಸವಾಲುಗಳು.

ಮಹಾರಾಷ್ಟ್ರದಲ್ಲಿ ಬಹು ಸದಸ್ಯರ ವಾರ್ಡ್ ವ್ಯವಸ್ಥೆ:


(Multi-member ward system in Maharashtra)

ಸಂದರ್ಭ:

ಮುಂಬೈ ಮುನ್ಸಿಪಲ್ ಕಾರ್ಪೊರೇಶನ್‌ ಹೊರತುಪಡಿಸಿ ಇತರೆ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಬಹು ಸದಸ್ಯರ ವಾರ್ಡ್‌ಗಳ ಯೋಜನೆಯನ್ನು ಮಹಾರಾಷ್ಟ್ರ ಕ್ಯಾಬಿನೆಟ್ ಇತ್ತೀಚೆಗೆ ಅನುಮೋದಿಸಿದೆ.

  1. ಇದರೊಂದಿಗೆ,ಮುಂಬೈ ಹೊರತುಪಡಿಸಿ ರಾಜ್ಯದ ಎಲ್ಲಾ ಮುನ್ಸಿಪಲ್ ಕಾರ್ಪೊರೇಶನ್‌ಗಳು ಮತ್ತು ಮುನ್ಸಿಪಲ್ ಕೌನ್ಸಿಲ್‌ಗಳಲ್ಲಿ ಪ್ರತಿ ವಾರ್ಡ್‌ನಿಂದ ಅನೇಕ ಕೌನ್ಸಿಲರ್‌ಗಳು ಅಥವಾ ಕಾರ್ಪೊರೇಟರ್‌ಗಳನ್ನು ಆಯ್ಕೆ ಮಾಡುವ ವ್ಯವಸ್ಥೆಗೆ ರಾಜ್ಯವು ಮರಳಿದೆ.
  2. ರಾಜ್ಯ ಸರ್ಕಾರವು, ರಾಜ್ಯದ ಮುನ್ಸಿಪಲ್ ಕಾಯ್ದೆಗೆ ತಿದ್ದುಪಡಿ ಮಾಡಲು ಸುಗ್ರೀವಾಜ್ಞೆಯನ್ನು ಹೊರಡಿಸುವುದು.

ಮಹಾರಾಷ್ಟ್ರದಲ್ಲಿ ಏನು ಪ್ರಸ್ತಾಪಿಸಲಾಗಿದೆ?

ಹೊಸ ವ್ಯವಸ್ಥೆಯಲ್ಲಿ, ಮುನ್ಸಿಪಲ್ ಕಾರ್ಪೊರೇಶನ್ ಪ್ರದೇಶಗಳಲ್ಲಿನ ಪ್ರತಿಯೊಂದು ವಾರ್ಡ್‌ಗಳಲ್ಲಿ ಮತದಾರರು ಮೂರು ಸದಸ್ಯರ ಸಮಿತಿಯನ್ನು ಆಯ್ಕೆ ಮಾಡುತ್ತಾರೆ.

  1. ಮುನ್ಸಿಪಲ್ ಕೌನ್ಸಿಲ್ ಪ್ರದೇಶಗಳಲ್ಲಿ, ಮತದಾರರು ಇಬ್ಬರು ಸದಸ್ಯರ ಸಮಿತಿಯನ್ನು ಆಯ್ಕೆ ಮಾಡುತ್ತಾರೆ.
  2. ಏಕ-ಸದಸ್ಯ ವಾರ್ಡ್ ವ್ಯವಸ್ಥೆಯಲ್ಲಿ, ಒಬ್ಬ ಮತದಾರನು ಒಬ್ಬ ಅಭ್ಯರ್ಥಿಗೆ ಮತ ಹಾಕುತ್ತಾನೆ.

ವಾರ್ಡ್‌ಗಳು ಅಥವಾ ಕಾರ್ಪೊರೇಟರ್‌ಗಳ ಸಂಖ್ಯೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ; ಚುನಾವಣೆಯ ಉದ್ದೇಶಕ್ಕಾಗಿ ಮಾತ್ರ ವಾರ್ಡ್‌ಗಳನ್ನು ಒಟ್ಟುಗೂಡಿಸಲಾಗುತ್ತದೆ.

current affairs

ಇದರ ಕಾರ್ಯನಿರ್ವಹಣೆ ಹೇಗಿದೆ?

ಗೊತ್ತುಪಡಿಸಿದ ಬಹು-ಸದಸ್ಯ ವಾರ್ಡ್‌ನಾದ್ಯಂತ ಒಂದೇ ಪಕ್ಷ ಅಥವಾ ಮೈತ್ರಿಕೂಟದಿಂದ ಸ್ಪರ್ಧಿಸುವ ಯಾವುದೇ ಅಭ್ಯರ್ಥಿಯು ಎರಡು ಅಥವಾ ಮೂರು ವಾರ್ಡ್‌ಗಳಲ್ಲಿ ಪ್ರಚಾರ ಮಾಡಬಹುದು, ಆದರೂ ಅವರು ಪ್ರತ್ಯೇಕ ವಾರ್ಡ್‌ಗಳಿಂದ ತಮ್ಮ ನಾಮಪತ್ರ ಸಲ್ಲಿಸುತ್ತಾರೆ.

  1. ಒಂದು ವೇಳೆ ಚುನಾಯಿತರಾದರೆ, ಪ್ರತಿಯೊಬ್ಬರೂ ಪ್ರತ್ಯೇಕ ವಾರ್ಡ್ ಅನ್ನು ಮಾತ್ರ ಪ್ರತಿನಿಧಿಸುತ್ತಾರೆ. ಆದಾಗ್ಯೂ, ಮತದಾರರು ತಮ್ಮದೇ ವಾರ್ಡ್‌ನಲ್ಲಿ ಹಾಗೂ ಬಹು-ಸದಸ್ಯರ ವಾರ್ಡ್‌ನಲ್ಲಿ ಒಟ್ಟುಗೂಡಿಸಿರುವ ಇತರ ವಾರ್ಡ್‌ಗಳಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಸಾಧ್ಯವಾಗುತ್ತದೆ.
  2. ಬಹು-ಸದಸ್ಯರ ವಾರ್ಡ್‌ನಲ್ಲಿ ಒಂದೇ ಪಕ್ಷದ/ಮೈತ್ರಿಯ ಅಭ್ಯರ್ಥಿಗಳನ್ನು “ಪ್ಯಾನಲ್” ಎಂದು ಕರೆಯಲಾಗುತ್ತದೆಯಾದರೂ, ಮತದಾರನು ಪ್ಯಾನಲ್ ಅನ್ನು ಆಯ್ಕೆ ಮಾಡುವುದಿಲ್ಲ.ಆದರೆ ವೈಯಕ್ತಿಕ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತಾನೆ ಅವರು ಒಂದೇ ಪಕ್ಷದಿಂದ ಇರಬಹುದು ಅಥವಾ ಬೇರೆ ಬೇರೆ ಪಕ್ಷಗಳಿಂದ ಇರಬಹುದು.
  3. ಮತದಾರನಿಗೆ ಕೇವಲ ಒಬ್ಬ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಹಕ್ಕಿದೆ. ಆದರೆ ಈ ಕುರಿತು ಮತದಾರರು ಮತಗಟ್ಟೆಯ ಅಧಿಕಾರಿಗೆ ಲಿಖಿತ ರೂಪದಲ್ಲಿ ಸಲ್ಲಿಸಬೇಕು. ಇದು ಓರ್ವ ಅಭ್ಯರ್ಥಿಯು ಇತರರಿಗಿಂತ ಕಡಿಮೆ ಮತಗಳನ್ನು ಹೇಗೆ ಪಡೆದರು ಎಂದು ಪ್ರಶ್ನಿಸಿ ಒಂದು ಪಕ್ಷ ಅಥವಾ ಅಭ್ಯರ್ಥಿಯು ನ್ಯಾಯಾಲಯದ ಮೊರೆ ಹೋದರೆ ಆಗ ಇದನ್ನು ಡಾಕ್ಯುಮೆಂಟರಿ ಪುರಾವೆಯಾಗಿ ಬಳಸಿಕೊಳ್ಳಲಾಗುವುದು.

ಬಹು-ಸದಸ್ಯ ವ್ಯವಸ್ಥೆಗೆ ಸಂಬಂಧಿಸಿದ ಪ್ರಯೋಜನಗಳು:

ಈ ಬಹು-ಸದಸ್ಯ ವ್ಯವಸ್ಥೆಯು ಒಂದು ಪಕ್ಷ ಅಥವಾ ಮೈತ್ರಿಕೂಟವು ತನ್ನ ಸ್ಥಾನಗಳನ್ನು ಗರಿಷ್ಠಗೊಳಿಸಲು ಸಹಾಯ ಮಾಡುತ್ತದೆ.

ಒಂದು ಪಕ್ಷವು ಬಹು ಸದಸ್ಯರ ವಾರ್ಡ್‌ನಲ್ಲಿ ಪ್ರಬಲ ಅಭ್ಯರ್ಥಿಗಳೊಂದಿಗೆ ದುರ್ಬಲ ಅಭ್ಯರ್ಥಿಗಳನ್ನು ಸರಿದೂಗಿಸಬಹುದು.

ಈ ಭರವಸೆಯ ಹೊರತಾಗಿಯೂ, ಪ್ರಬಲ ಅಭ್ಯರ್ಥಿಗಳು “ಪ್ಯಾನಲ್” ನಲ್ಲಿರುವ ಇತರರಿಗೆ ಅನುಕೂಲ ಮಾಡಿಕೊಡುವರು ಎಂಬ ಭರವಸೆ ಇದೆ ಆದರೆ ಇದಕ್ಕೆ ಯಾವುದೇ ಗ್ಯಾರಂಟಿ ಇಲ್ಲ.

ಸಂಬಂಧಿಸಿದ ಸಮಸ್ಯೆಗಳು ಮತ್ತು ಕಾಳಜಿಗಳು:

ಸಾಮಾನ್ಯವಾಗಿ, ಬಹು ಸದಸ್ಯರ ವಾರ್ಡ್‌ನಲ್ಲಿ, ಯಾವುದೇ ಕಾರ್ಪೊರೇಟರ್ ಇತರರು ಸರಿಯಾಗಿ ಕೆಲಸ ಮಾಡಲು ಅನುಮತಿಸುವುದಿಲ್ಲ ಮತ್ತು ಎಲ್ಲರೂ ಪ್ರತಿಯೊಬ್ಬರ ಕರ್ತವ್ಯದಲ್ಲಿ ಅಡಚಣೆ ಉಂಟು ಮಾಡಲು ಪ್ರಯತ್ನಿಸುತ್ತಾರೆ.

 

ವಿಷಯಗಳು: ಸರ್ಕಾರದ ವಿವಿಧ ಅಂಗಗಳ ನಡುವೆ ಅಧಿಕಾರ ವಿಭಜನೆ, ವಿವಾದ ಪರಿಹಾರ ಕಾರ್ಯವಿಧಾನಗಳು ಮತ್ತು ಸಂಸ್ಥೆಗಳು.

PM ಕೇರ್ಸ್ ಫಂಡ್:


(PM CARES)

ಸಂದರ್ಭ:

‘ಪಿಎಂ ಕೇರ್ಸ್ ಫಂಡ್’ ಸರ್ಕಾರದ ನಿಧಿಯಲ್ಲ. ಅದಕ್ಕೆ ನೀಡುವ ದೇಣಿಗೆಗಳು ಭಾರತದ ಬೊಕ್ಕಸಕ್ಕೆ ಹೋಗುವುದಿಲ್ಲ ಎಂದು ದೆಹಲಿ ಹೈಕೋರ್ಟ್‌ಗೆ ಕೇಂದ್ರ ಸರ್ಕಾರ ಗುರುವಾರ ಮಾಹಿತಿ ನೀಡಿದೆ. ಮಾಹಿತಿ ಹಕ್ಕು ಕಾಯ್ದೆಯ (RTI) ಅಡಿಯಲ್ಲಿ ಈ ನಿಧಿಗೆ ಸಂಬಂಧಿಸಿದ ಮಾಹಿತಿ ಹಂಚಿಕೊಳ್ಳಲು ಸಾಧ್ಯವಿಲ್ಲ ಎಂದು ತಿಳಿಸಿದೆ.

ಹಿನ್ನೆಲೆ:

ಆರ್‌ಟಿಐ ಕಾಯ್ದೆಯಡಿ ಪಿಎಂ ಕೇರ್ಸ್ ಅನ್ನು ‘ಸಾರ್ವಜನಿಕ ಪ್ರಾಧಿಕಾರ’ ಎಂದು ಘೋಷಿಸಲು ನಿರ್ದೇಶನ ನೀಡುವಂತೆ ಹಾಗೂ ಇದನ್ನು ‘ಸರ್ಕಾರಿ’ ನಿಧಿ ಎಂದು ಘೋಷಿಸಲು ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಗೆ ಉತ್ತರವಾಗಿ ಕೇಂದ್ರ ಸರ್ಕಾರವು ಈ ಪ್ರಮಾಣಪತ್ರ ಸಲ್ಲಿಸಿದೆ. ಅಲ್ಲದೆ,ಪ್ರಧಾನಿ ಕಚೇರಿಯು (PMO)  ಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಿದ್ದು ಇದರಲ್ಲಿ, ಪಿಎಂ ಕೇರ್ಸ್ ಟ್ರಸ್ಟ್‌ ಪಾರದರ್ಶಕತೆಯಿಂದ ಕಾರ್ಯ ನಿರ್ವಹಿಸುತ್ತಿದ್ದು, ಹಣವನ್ನು ಲೆಕ್ಕ ಪರಿಶೋಧಕರಿಂದ ಪರಿಶೋಧನೆಗೆ ಒಳಪಡಿಸ ಲಾಗುತ್ತಿದೆ ಎಂದು ಪ್ರಮಾಣಪತ್ರದಲ್ಲಿ ತಿಳಿಸಲಾಗಿದೆ.

 

ಸರ್ಕಾರದ ವಾದವೇನು?

‘ಸಂವಿಧಾನದ 12ನೇ ಪರಿಚ್ಛೇದದ ಅರ್ಥದಲ್ಲಿ ಈ ಟ್ರಸ್ಟ್ ‘ಸರ್ಕಾರಿ’ ಎಂದಾಗಲೀ, ಅಥವಾ ಆರ್‌ಟಿಐ ಕಾಯ್ದೆಯ ನಿಬಂಧನೆಗಳ ಅರ್ಥದಲ್ಲಿ ‘ಸಾರ್ವಜನಿಕ ಪ್ರಾಧಿಕಾರ’ ಎಂದಾಗಲೀ ಘೋಷಿಸಿಲ್ಲ. ಹಾಗಾಗಿ ಮೂರನೆಯವರಿಗೆ ಮಾಹಿತಿ ಬಹಿರಂಗ ಸಾಧ್ಯವಿಲ್ಲ’ ಎಂದು ಪ್ರಮಾಣಪತ್ರ ಉಲ್ಲೇಖಿಸಿದೆ.  ಮತ್ತು

‘ಪಾರದರ್ಶಕತೆಯನ್ನು ಖಚಿತಪಡಿಸಿಕೊಳ್ಳಲು ಲೆಕ್ಕಪರಿಶೋಧನೆಯ ವರದಿಯನ್ನು ಟ್ರಸ್ಟ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿ ಸ್ವೀಕರಿಸಿದ ನಿಧಿಯ ಬಳಕೆಯ ವಿವರಗಳೊಂದಿಗೆ ಪ್ರಕಟಿಸಲಾಗಿದೆ’ ಎಂದು ತಿಳಿಸಲಾಗಿದೆ.

ಎಲ್ಲಾ ದೇಣಿಗೆಗಳನ್ನು ಆನ್‌ಲೈನ್ ಪಾವತಿಗಳು, ಚೆಕ್‌ಗಳು ಅಥವಾ ಡಿಮಾಂಡ್ ಡ್ರಾಫ್ಟ್‌ಗಳ ಮೂಲಕ ಟ್ರಸ್ಟ್ ಸ್ವೀಕರಿಸಿದ್ದು, ಈ ಮೊತ್ತವನ್ನು ಲೆಕ್ಕಪರಿಶೋಧನೆಯ ವರದಿಯೊಂದಿಗೆ ಪರಿಶೀಲಿಸಲಾಗುತ್ತದೆ. ಟ್ರಸ್ಟ್ ನಿಧಿಯ ವೆಚ್ಚವನ್ನು ವೆಬ್‌ಸೈಟ್‌ನಲ್ಲಿ ಪ್ರದರ್ಶಿಸಲಾಗುತ್ತದೆ ಎಂದು ತಿಳಿಸಲಾಗಿದೆ.

‘ಟ್ರಸ್ಟ್ ಪಾರದರ್ಶಕತೆ ಮತ್ತು ಸಾರ್ವಜನಿಕ ಹಿತದ ತತ್ವಗಳ ಮೇಲೆ ಕಾರ್ಯನಿರ್ವಹಿಸುತ್ತಿದೆ. ಇತರ ಯಾವುದೇ ಚಾರಿಟಬಲ್ ಟ್ರಸ್ಟ್‌ಗಳಂತೆಯೇ ಸಾರ್ವಜನಿಕ ಹಿತಾಸಕ್ತಿ ಹೊಂದಿದೆ’ ಎಂದು ತಿಳಿಸಲಾಗಿದೆ.

ಪಿಎಂ ಕೇರ್ಸ್ ನಿಧಿಯು ಸರ್ಕಾರಿ ನಿಧಿ ಎಂದು ಪ್ರತಿಪಾದಿಸಿ ಸಮ್ಯಕ್ ಗಂಗ್ವಾಲ್ ಅವರು ಸಲ್ಲಿಸಿದ ಅರ್ಜಿಯನ್ನು ನ್ಯಾಯಾಲಯವು ವಿಚಾರಣೆ ನಡೆಸುತ್ತಿದೆ. ಸಾರ್ವಜನಿಕರ ನೆರವಿನೊಂದಿಗೆ ದೇಶದ ನಾಗರಿಕರಿಗೆ ನೆರವು ನೀಡಲು ಇದನ್ನು 2020ರ ಮಾರ್ಚ್ 27ರಂದು ಪ್ರಧಾನಿ ರಚಿಸಿದ್ದರು.

‘ಪಿಎಂ ಕೇರ್ಸ್’ ಒಂದು ಚಾರಿಟಬಲ್ ಟ್ರಸ್ಟ್ ಆಗಿದ್ದು, ಸಂವಿಧಾನದ ಅಡಿಯಲ್ಲಿ ಅಥವಾ ಸಂಸತ್ತಿನಿಂದ ಅಥವಾ ಯಾವುದೇ ರಾಜ್ಯ ಶಾಸಕಾಂಗದಿಂದ ರಚಿಸಲ್ಪಟ್ಟಿಲ್ಲ.

-ಕೇಂದ್ರ ಸರ್ಕಾರ.

ಪಿ.ಎಂ ಕೇರ್ಸ್ ನಿಧಿಯ ಕುರಿತು:

ಕೋವಿಡ್ -19 ಸಾಂಕ್ರಾಮಿಕ ಮತ್ತು ಇದೆ ರೀತಿಯ ಇತರ ತುರ್ತು ಪರಿಸ್ಥಿತಿಗಳಲ್ಲಿ ದೇಣಿಗೆ ಸ್ವೀಕರಿಸಲು ಮತ್ತು ಪರಿಹಾರವನ್ನು ಒದಗಿಸಲು ಪ್ರಧಾನ ಮಂತ್ರಿ ನಾಗರಿಕ ಸಹಾಯ ಮತ್ತು ತುರ್ತು ಪರಿಸ್ಥಿತಿಗಳಲ್ಲಿ ಪರಿಹಾರ (The Prime Minister’s Citizen Assistance and Relief in Emergency Situations – PM-CARES) ನಿಧಿಯನ್ನು ಸ್ಥಾಪಿಸಲಾಯಿತು.

PM-CARES ನಿಧಿ:

ಮಾರ್ಚ್ 27, 2020 ರಂದು ‘ನೋಂದಣಿ ಕಾಯ್ದೆ, 1908’ ಅನ್ವಯ ಟ್ರಸ್ಟ್ ಉಯಿಲಿನೊಂದಿಗೆ ಪಿಎಂ-ಕೇರ್ಸ್ ಅನ್ನು ಸಾರ್ವಜನಿಕ ದತ್ತಿ ಟ್ರಸ್ಟ್ ಆಗಿ ಸ್ಥಾಪಿಸಲಾಯಿತು.

ಇದು ವಿದೇಶಿ ಕೊಡುಗೆಯಿಂದ ಕೂಡ ದೇಣಿಗೆ ಪಡೆಯಬಹುದು ಮತ್ತು ಈ ನಿಧಿಗೆ ನೀಡುವ ದೇಣಿಗೆಯು 100% ತೆರಿಗೆ ವಿನಾಯಿತಿಯನ್ನು ಹೊಂದಿರುತ್ತದೆ.

PM-CARES ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಗಿಂತ (PMNRF) ಭಿನ್ನವಾಗಿದೆ.

PM-CARES ನಿಧಿಯನ್ನು ಯಾರು ನಿರ್ವಹಿಸುತ್ತಾರೆ?

ಪ್ರಧಾನ ಮಂತ್ರಿಯವರು ಪಿಎಂ ಕೇರ್ಸ್ ನಿಧಿಯ ಎಕ್ಸ್ ಆಫಿಸಿಯೊ ಚೇರ್ಮನ್ ಆಗಿದ್ದಾರೆ ಮತ್ತು ಭಾರತ ಸರ್ಕಾರದ ರಕ್ಷಣಾ ಸಚಿವರು, ಗೃಹ ವ್ಯವಹಾರಗಳ ಸಚಿವರು ಮತ್ತು ಹಣಕಾಸು ಸಚಿವರು, ಈ ನಿಧಿಯ ಎಕ್ಸ್-ಆಫಿಸಿಯೊ ಟ್ರಸ್ಟಿಗಳು ಆಗಿದ್ದಾರೆ.

 


ಸಾಮಾನ್ಯ ಅಧ್ಯಯನ ಪತ್ರಿಕೆ : 3


 

ವಿಷಯಗಳು: ಮಾಹಿತಿ ತಂತ್ರಜ್ಞಾನ, ಬಾಹ್ಯಾಕಾಶ, ಕಂಪ್ಯೂಟರ್, ರೊಬೊಟಿಕ್ಸ್, ನ್ಯಾನೊ-ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ಬೌದ್ಧಿಕ ಆಸ್ತಿ ಹಕ್ಕುಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಜಾಗೃತಿ.

ಡಾರ್ಕ್ ಎನರ್ಜಿ ಎಂದರೇನು?


(What is dark energy?)

ಸಂದರ್ಭ:

ಇತ್ತೀಚೆಗೆ, ಅಂತರಾಷ್ಟ್ರೀಯ ಸಂಶೋಧಕರ ತಂಡವು ಡಾರ್ಕ್ ಎನರ್ಜಿಯನ್ನು ಮೊದಲ ಬಾರಿಗೆ ನೇರವಾಗಿ ಪತ್ತೆಹಚ್ಚಿದ್ದಾರೆ.

ಅವರು XENON1T ಪ್ರಯೋಗದಲ್ಲಿ ಕೆಲವು ಅನಿರೀಕ್ಷಿತ ಫಲಿತಾಂಶಗಳನ್ನು ಗಮನಿಸಿದರು ಮತ್ತು ಡಾರ್ಕ್ ಎನರ್ಜಿ ಇದಕ್ಕೆ ಕಾರಣವಾಗಿರಬಹುದು ಎಂದು ತೀರ್ಮಾನಿಸಿದ್ದಾರೆ.

ಡಾರ್ಕ್ ಎನರ್ಜಿ ಎಂದರೇನು?

ಡಾರ್ಕ್ ಎನರ್ಜಿಯ ಕುರಿತು ತಿಳಿದಿರುವುದಕ್ಕಿಂತ ತಿಳಿಯದಿರುವುದೇ ಹೆಚ್ಚು. ಬ್ರಹ್ಮಾಂಡದ ವಿಸ್ತರಣೆಯ ಮೇಲೆ ಅದು ಹೇಗೆ ಪರಿಣಾಮ ಬೀರುತ್ತದೆ ಎಂದು ನಮಗೆ ತಿಳಿದಿರುವ ಕಾರಣ ಎಷ್ಟು ಡಾರ್ಕ್ ಎನರ್ಜಿಯಿದೆ ಎಂದು ನಮಗೆ ತಿಳಿದಿದೆ. ಅದನ್ನು ಹೊರತುಪಡಿಸಿ, ಇದು ಸಂಪೂರ್ಣ ರಹಸ್ಯವಾಗಿದೆ. ಆದರೆ ಇದು ಒಂದು ಪ್ರಮುಖ ರಹಸ್ಯವಾಗಿದೆ. ಇದು ಬ್ರಹ್ಮಾಂಡದ ಸುಮಾರು 68% ರಷ್ಟಿದೆ.

ಡಾರ್ಕ್ ಎನರ್ಜಿಯು ಒಂದು ಊಹಾತ್ಮಕ ಶಕ್ತಿಯ ರೂಪವಾಗಿದ್ದು ಅದು ಗುರುತ್ವಾಕರ್ಷಣೆಯ ವಿರುದ್ಧವಾಗಿ ವರ್ತಿಸುವ ಋಣಾತ್ಮಕ, ವಿಕರ್ಷಣ ಒತ್ತಡವನ್ನು ಬೀರುತ್ತದೆ.

  1. ಇದು ನಮ್ಮ ಬ್ರಹ್ಮಾಂಡದ ವಿಸ್ತರಣೆಯ ದರವನ್ನು ನಿಧಾನಗೊಳಿಸುವ ಬದಲು ಕಾಲಕ್ರಮೇಣ ವೇಗಗೊಳಿಸಲು ಕಾರಣವಾಗುತ್ತದೆ. ಈ ವಿದ್ಯಮಾನವು ಬಿಗ್ ಬ್ಯಾಂಗ್ ನಲ್ಲಿ ಆರಂಭವಾದ ವಿಶ್ವದಿಂದ ಒಬ್ಬರು ಏನನ್ನು ನಿರೀಕ್ಷಿಸಬಹುದು ಎಂಬುದಕ್ಕೆ ವಿರುದ್ಧವಾಗಿದೆ.

current affairs

 

ಡಾರ್ಕ್ ಎನರ್ಜಿ ಡಾರ್ಕ್ ಮ್ಯಾಟರ್‌ಗಿಂತ ಹೇಗೆ ಭಿನ್ನವಾಗಿದೆ?

ನಮಗೆ ತಿಳಿದಂತೆ ಎಲ್ಲವೂ ಅಂದರೆ, ಗ್ರಹಗಳು, ಚಂದ್ರಗಳು, ಬೃಹತ್ ಗೆಲಕ್ಸಿಗಳು – ಬ್ರಹ್ಮಾಂಡದ 5% ಕ್ಕಿಂತ ಕಡಿಮೆ ಇದೆ. ಸುಮಾರು 27% ಡಾರ್ಕ್ ಮ್ಯಾಟರ್ ಮತ್ತು 68% ಡಾರ್ಕ್ ಎನರ್ಜಿ ಇದೆ (About 27% is dark matter and 68% is dark energy).

ಡಾರ್ಕ್ ಮ್ಯಾಟರ್ ಗ್ಯಾಲಕ್ಸಿಗಳನ್ನು ಆಕರ್ಷಿಸುತ್ತದೆ ಮತ್ತು ಹಿಡಿದಿಟ್ಟುಕೊಳ್ಳುತ್ತದೆ, ಅದೇವೇಳೆ ಡಾರ್ಕ್ ಎನರ್ಜಿಯು ಹಿಮ್ಮೆಟ್ಟಿಸುತ್ತದೆ ಮತ್ತು ನಮ್ಮ ಬ್ರಹ್ಮಾಂಡದ ವಿಸ್ತರಣೆಗೆ ಕಾರಣವಾಗುತ್ತದೆ.

  1. ಡಾರ್ಕ್ ಮ್ಯಾಟರ್ ನ ಅಸ್ತಿತ್ವವನ್ನು 1920 ರಲ್ಲೇ ಸೂಚಿಸಲಾಗಿತ್ತು, ಆದರೆ 1998 ರವರೆಗೆ ಡಾರ್ಕ್ ಎನರ್ಜಿಯು ಪತ್ತೆಯಾಗಿರಲಿಲ್ಲ.

current affairs

 

XENON1T ಪ್ರಯೋಗದ ಬಗ್ಗೆ:

  1. ಇದು ವಿಶ್ವದ ಅತ್ಯಂತ ಸೂಕ್ಷ್ಮವಾದ ಡಾರ್ಕ್ ಮ್ಯಾಟರ್ ಪ್ರಯೋಗವಾಗಿದೆ ಮತ್ತು ಇದನ್ನು ಇಟಲಿಯ INFN ಲ್ಯಾಬೋರೇಟರಿ ನಾಜಿಯೊನಾಲಿ ಡೆಲ್ ಗ್ರಾನ್ ಸಾಸ್ಸೊದಲ್ಲಿ (INFN Laboratori Nazionali del Gran Sasso) ಆಳವಾದ ಭೂಗತ ಕಾರ್ಯಾಚರಣೆಯನ್ನು ನಡೆಸಲಾಯಿತು.
  2. ಇದು ಡ್ಯುಯಲ್-ಫೇಸ್ (ಲಿಕ್ವಿಡ್/ಗ್ಯಾಸ್) ಕ್ಸೆನಾನ್ ತಂತ್ರವನ್ನು ಬಳಸುತ್ತದೆ ಮತ್ತು ಇದು ಇಟಲಿಯ INFN ನ ಲ್ಯಾಬೋರೇಟರಿ ನಾಜಿಯೊನಾಲಿ ಡೆಲ್ ಗ್ರ್ಯಾನ್ ಸಾಸ್ಸೊದಲ್ಲಿ ಭೂಗರ್ಭದಲ್ಲಿದೆ.

ಸಾಮಾನ್ಯ ಸಾಪೇಕ್ಷತೆಯ ಸಿದ್ಧಾಂತ:

ಆದಾಗ್ಯೂ, ಪ್ರಮುಖ ಸಿದ್ಧಾಂತವಾದ ಸಾಮಾನ್ಯ ಸಾಪೇಕ್ಷತೆಯ ಸಿದ್ಧಾಂತವು, ಡಾರ್ಕ್ ಎನರ್ಜಿಯನ್ನು ಬಾಹ್ಯಾಕಾಶದ ಆಸ್ತಿಯೆಂದು ಪರಿಗಣಿಸುತ್ತದೆ. ಬಾಹ್ಯಾಕಾಶವು ಖಾಲಿ ಜಾಗವಲ್ಲ ಎಂದು ಮೊದಲು ಅರ್ಥಮಾಡಿಕೊಂಡವರು ಆಲ್ಬರ್ಟ್ ಐನ್‌ಸ್ಟೈನ್. ಬಾಹ್ಯಾಕಾಶದ ಹೆಚ್ಚಿನ ಜಾಗವು ಅಸ್ತಿತ್ವಕ್ಕೆ ಬರುವುದನ್ನು ಮುಂದುವರಿಸಬಹುದು ಎಂದು ಅರ್ಥಮಾಡಿಕೊಂಡರು ಐನ್ ಸ್ಟೀನ್ ಅವರೇ . ಐನ್ ಸ್ಟೀನ್ ತನ್ನ ಸಾಮಾನ್ಯ ಸಾಪೇಕ್ಷತಾ ಸಿದ್ಧಾಂತದಲ್ಲಿ, ವಿಜ್ಞಾನಿಗಳು ಅಸ್ತಿತ್ವದಲ್ಲಿದೆ ಎಂದು ಭಾವಿಸಿರುವ ಸ್ಥಿರ ಬ್ರಹ್ಮಾಂಡವನ್ನು ಲೆಕ್ಕಹಾಕಲು ವಿಶ್ವವಿಜ್ಞಾನದ ಸ್ಥಿರಾಂಕವನ್ನು ಸೇರಿಸಿದರು.

  1. ಹಬಲ್ ದೂರದರ್ಶಕವು ವಿಸ್ತರಿಸುತ್ತಿರುವ ಬ್ರಹ್ಮಾಂಡದ ಕುರಿತು ಘೋಷಿಸಿದ ನಂತರ, ಐನ್‌ಸ್ಟೈನ್ ತನ್ನ ಸ್ಥಿರತೆಯ ವಾದವನ್ನು ತನ್ನ ಅತ್ಯಂತ “ದೊಡ್ಡ ಪ್ರಮಾದ” ಎಂದು ಕರೆದನು.
  2. ಆದರೆ ಖಾಲಿ ಅಂತರಿಕ್ಷವು ತನ್ನದೇಯಾದ ಶಕ್ತಿಯನ್ನು ಹೊಂದಬಹುದು ಎಂದು ಊಹಿಸುವ ಮೂಲಕ ಐನ್‌ಸ್ಟೀನ್‌ನ ಪ್ರಮಾದವು ಡಾರ್ಕ್ ಎನರ್ಜಿಗೆ ಸೂಕ್ತವಾಗಿ ಹೊಂದಬಹುದು. ಸ್ಥಿರವು ಹೆಚ್ಚು ಜಾಗವನ್ನು ಹೊರಹೊಮ್ಮಿದಂತೆ, ಬ್ರಹ್ಮಾಂಡಕ್ಕೆ ಹೆಚ್ಚಿನ ಶಕ್ತಿಯನ್ನು ಸೇರಿಸಲಾಗುತ್ತದೆ, ಅದರ ವಿಸ್ತರಣೆಯನ್ನು ಹೆಚ್ಚಿಸುತ್ತದೆ ಎಂದು ಸೂಚಿಸುತ್ತದೆ.

 

ವಿಷಯಗಳು: ಸಂರಕ್ಷಣೆ ಮತ್ತು ವಿಪತ್ತು ನಿರ್ವಹಣೆಗೆ ಸಂಬಂಧಿಸಿದ ಸಮಸ್ಯೆಗಳು.

ಚೆನ್ನೈನ ಪ್ರವಾಹದ ಕುರಿತು ರಾಜ್ಯ ಸರ್ಕಾರದ ವರದಿ:


(State government report on Chennai’s flood)

ಸಂದರ್ಭ:

ತಮಿಳುನಾಡು ರಾಜ್ಯ ಸರ್ಕಾರವು ಪ್ರವಾಹ ಮರುಕಳಿಸುವುದನ್ನು ತಡೆಗಟ್ಟುವ ಕ್ರಮಗಳಿಗೆ ಸಂಬಂಧಿಸಿದಂತೆ ಸರ್ಕಾರ ತೆಗೆದುಕೊಂಡ ಕ್ರಮದ ಕುರಿತು ವರದಿಯನ್ನು ಬಿಡುಗಡೆ ಮಾಡಿದೆ.

  1. ಈ ವರದಿಯು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (NGT) ಸ್ವಯಂ ಪ್ರೇರಿತವಾಗಿ ದಾಖಲಿಸಿಕೊಂಡ ಪ್ರಕರಣಕ್ಕೆ ಪ್ರತಿಕ್ರಿಯೆಯಾಗಿದೆ.ನವೆಂಬರ್ 30, 2020 ರಂದು ನಗರದ ಒಳಚರಂಡಿ ತುಂಬಿರುವುದಕ್ಕೆ ಪೂರಕವಾಗಿ ಪತ್ರಿಕೆಗಳು ವ್ಯಾಪಕವಾಗಿ ವರದಿ ಮಾಡಿದ ನಂತರ ನ್ಯಾಯಾಲಯವು ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿತ್ತು.

ವರದಿಯಲ್ಲಿರುವುದೇನು?

ಪ್ರವಾಹಕ್ಕೆ ಕಾರಣಗಳು:

  1. ಅತಿಕ್ರಮಣಗಳು, ದೋಷಯುಕ್ತ ಒಳಚರಂಡಿ ವ್ಯವಸ್ಥೆಗಳು ಮತ್ತು ನೀರಿನ ಸಹಜ ಹಾದಿಯನ್ನು ಹಾಳುಮಾಡುವುದು ಮಹಾನಗರವನ್ನು ಪ್ರತಿ ವರ್ಷ ಪ್ರವಾಹಕ್ಕೆ ತುತ್ತಾಗುವಂತೆ ಮಾಡಿತು.
  2. ಗ್ರೇಟರ್ ಚೆನ್ನೈ ಮತ್ತು ಅದರ ಸುತ್ತಮುತ್ತಲಿನ ನಗರಗಳ ತ್ವರಿತ ನಗರೀಕರಣವು ಭೂ ಬಳಕೆಯ ಮಾದರಿಗಳಲ್ಲಿ ಬೃಹತ್ ಬದಲಾವಣೆಗಳಿಗೆ ಕಾರಣವಾಯಿತು, ಏಕೆಂದರೆ ಕೃಷಿ ಪ್ರದೇಶಗಳಲ್ಲಿ ವಸತಿ ಪ್ರದೇಶಗಳು ಹುಟ್ಟಿಕೊಂಡಿವೆ.
  3. ಸಾಂಪ್ರದಾಯಿಕ ಕೆರೆಗಳಿಂದ ಹೆಚ್ಚುವರಿ ನೀರಿನ ಹರಿವನ್ನು ಹಾಗೂ ಜಲಾನಯನ ಪ್ರದೇಶಗಳಿಂದ ಪ್ರವಾಹವನ್ನು ನಿರ್ವಹಿಸಲು ಸರಿಯಾದ ಒಳಚರಂಡಿ ವ್ಯವಸ್ಥೆಗೆ ಅಗತ್ಯ ಬದಲಾವಣೆಗಳನ್ನು ಮಾಡದೆಯೇ ಭೂ ಬಳಕೆಯ ಮಾದರಿಗಳಲ್ಲಿ ಬದಲಾವಣೆಗಳನ್ನು ಮಾಡಲಾಯಿತು.
  4. ನೀರಾವರಿ ಕೆರೆಗಳು ತ್ಯಾಜ್ಯ, ಕೆಸರು ಮತ್ತು ಭಗ್ನಾವಶೇಷಗಳಿಂದ ಉಸಿರುಗಟ್ಟಿದವು, ಇದರಿಂದಾಗಿ ಪ್ರವಾಹದ ನೀರಿನ ಹರಿವಿಗೆ ಅಡ್ಡಿಯಾಯಿತು. ಇದು ಜೌಗು ಪ್ರದೇಶದ ನೀರನ್ನು ಹೀರಿಕೊಳ್ಳುವ ಮತ್ತು ಅಂತರ್ಜಲ ಮರುಪೂರಣ ಸಾಮರ್ಥ್ಯವನ್ನು ಕಡಿಮೆ ಮಾಡಿತು.

ಸೂಚಿಸಿದ ಕ್ರಮಗಳು:

ಚೆನ್ನೈಗೆ ಪ್ರವಾಹವನ್ನು ತಡೆಗಟ್ಟಲು ಹೆಚ್ಚುವರಿ ಮಳೆನೀರು ಮತ್ತು ಡೀಸಿಲ್ಟ್ ಚಾನೆಲ್‌ಗಳನ್ನು ಹೊರಹಾಕಲು ಸರಿಯಾದ ಸೌಲಭ್ಯಗಳೊಂದಿಗೆ ಸಮಗ್ರ ಪ್ರವಾಹ ನಿರ್ವಹಣಾ ವ್ಯವಸ್ಥೆಯ ಅಗತ್ಯವಿದೆ.

  1. ವರದಿಯು ಸಮಗ್ರ ರಸ್ತೆ ಮತ್ತು ಬೀದಿ ಬದಿಯ ಚರಂಡಿ ನೀರಿನ ಒಳಚರಂಡಿ ಜಾಲ, ನೇರ ಕಟ್ ಡೈವರ್ಷನ್ ಚಾನಲ್‌ಗಳು, ಮ್ಯಾಕ್ರೋ ಸ್ಟಾರ್ಮ್ ವಾಟರ್ ಚರಂಡಿಗಳು, ಚೆಕ್ ಡ್ಯಾಂಗಳು, ಬ್ಯಾರೇಜ್‌ಗಳು ಮತ್ತು ಆಣೆಕಟ್ಟುಗಳನ್ನು ಅಂತಹ ವ್ಯವಸ್ಥೆಯ ಭಾಗವಾಗಿ ಶಿಫಾರಸು ಮಾಡಿದೆ.

ಭಾರತದ ನಗರ ಪ್ರವಾಹಗಳು- ಒಂದು ಅವಲೋಕನ:

ನಗರ ಪ್ರವಾಹವು ನಿರ್ಮಿತ ಪರಿಸರದಲ್ಲಿ ಭೂಮಿ ಅಥವಾ ಆಸ್ತಿಯನ್ನು ಮುಳುಗಿಸುವುದು, ವಿಶೇಷವಾಗಿ ಹೆಚ್ಚು ಜನನಿಬಿಡ ಪ್ರದೇಶಗಳಲ್ಲಿ, ಒಳಚರಂಡಿ ವ್ಯವಸ್ಥೆಗಳ ಸಾಮರ್ಥ್ಯವನ್ನು ಅತಿಕ್ರಮಿಸುವ ಮಳೆಯಿಂದ ಉಂಟಾಗುತ್ತದೆ.

  1. ಅನೇಕ ಭಾರತೀಯ ನಗರಗಳಲ್ಲಿ, ಇತ್ತೀಚಿನ ವರ್ಷಗಳಲ್ಲಿ ನಗರ ಪ್ರವಾಹಗಳು ಆಗಾಗ್ಗೆ ಸಂಭವಿಸುವ ವಿದ್ಯಮಾನವಾಗಿದೆ.

ನಗರ ಪ್ರವಾಹಕ್ಕೆ ಕಾರಣವಾಗುವ ಅವೈಜ್ಞಾನಿಕ ನಗರೀಕರಣ:

ನೈಸರ್ಗಿಕ ಅಂಶಗಳು:

  1. ಹೆಚ್ಚುತ್ತಿರುವ ಮಳೆ.
  2. ಚಂಡಮಾರುತಗಳು ಮತ್ತು ಗುಡುಗು ಸಹಿತ ಭಾರಿ ಮಳೆ.
  3. ಕರಾವಳಿ ನಗರಗಳಲ್ಲಿ ಒಳಚರಂಡಿಗೆ ಅಡ್ಡಿಯಾಗುವ ಹೆಚ್ಚಿನ ಮಳೆ.

ಮಾನವಜನ್ಯ ಅಂಶಗಳು:

  1. ಕಾಂಕ್ರೀಟೈಸೇಶನ್.
  2. ಜೌಗು ಪ್ರದೇಶಗಳಿಂದ ನೀರಿನ ಒಸರುವಿಕೆ.
  3. ಕಳಪೆ ನೀರು ಮತ್ತು ಒಳಚರಂಡಿ ನಿರ್ವಹಣೆ.
  4. ಅತಿಕ್ರಮಣ ಮತ್ತು ಅಕ್ರಮ ನಿರ್ಮಾಣ ಚಟುವಟಿಕೆಗಳು.
  5. ಅರಣ್ಯನಾಶ.

ಆಡಳಿತಾತ್ಮಕ ಅಂಶಗಳು:

  1. ಪ್ರವಾಹ ನಿಯಂತ್ರಣ ಕ್ರಮಗಳ ಕೊರತೆ.
  2. ನಗರದಲ್ಲಿ ಅನೇಕ ಪ್ರಾಧಿಕಾರಿಗಳು ಇವೆ ಆದರೆ ಯಾರೂ ಸಹ ಜವಾಬ್ದಾರಿ ಹೊರಲು ಸಿದ್ಧರಿಲ್ಲ.

ಅಗತ್ಯ ಕ್ರಮಗಳು:

ರಚನಾತ್ಮಕ ಕ್ರಮಗಳು:

  1. ಸರೋವರಗಳು, ಕೊಳಗಳು, ತೊರೆಗಳಂತಹ ನಗರ ಪ್ರದೇಶಗಳಲ್ಲಿ ಜೌಗು ಪ್ರದೇಶಗಳ ಸಂರಕ್ಷಣೆ.
  2. ಜಲಾಶಯಗಳಿಗೆ ಹೆಚ್ಚುವರಿ ನೀರನ್ನು ಹರಿಸಲು ಪಾದಚಾರಿ ಮಾರ್ಗಗಳು, ರಸ್ತೆಗಳ ಉದ್ದಕ್ಕೂ ಭೇದಾತ್ಮಕ ಇಳಿಜಾರಿನ ನಿರ್ಮಾಣ.
  3. ಚಂಡಮಾರುತದ ನೀರಿನ ಒಳಚರಂಡಿ ವ್ಯವಸ್ಥೆಯನ್ನು ಬಲಪಡಿಸುವುದು.
  4. ಮಾನ್ಸೂನ್ ಪೂರ್ವದ ಎಲ್ಲಾ ಪ್ರಮುಖ ಚರಂಡಿಗಳ ಡಿಸಿಲ್ಟಿಂಗ್ ಅನ್ನು ಪ್ರತಿ ವರ್ಷ ಮಾರ್ಚ್ 31 ರೊಳಗೆ ಪೂರ್ಣಗೊಳಿಸಲಾಗುವುದು.
  5. ನಗರ ಪ್ರದೇಶದ ಪ್ರತಿಯೊಂದು ಕಟ್ಟಡವು ಮಳೆನೀರು ಕೊಯ್ಲನ್ನು ಕಟ್ಟಡದ ಉಪಯುಕ್ತತೆಯ ಅವಿಭಾಜ್ಯ ಅಂಗವಾಗಿ ಹೊಂದಿರಬೇಕು.
  6. ಸಾರ್ವಜನಿಕ ಉದ್ಯಾನವನಗಳ ಯೋಜನೆಯಲ್ಲಿ ಮಳೆ ತೋಟಗಳ ಪರಿಕಲ್ಪನೆಯನ್ನು ಅಳವಡಿಸಬೇಕು ಮತ್ತು ದೊಡ್ಡ ಕಾಲೋನಿಗಳು ಮತ್ತು ಸೈಟ್ಗಳಿಗೆ ಸ್ಥಳದಲ್ಲೇ ಚಂಡಮಾರುತದ ನೀರಿನ ನಿರ್ವಹಣೆಯನ್ನು ಅಭಿವೃದ್ಧಿಪಡಿಸಬೇಕು.
  7. ಚರಂಡಿ ಚರಂಡಿಗೆ ಹೋಗುವ ಘನ ತ್ಯಾಜ್ಯದ ಪ್ರಮಾಣವನ್ನು ಕಡಿಮೆ ಮಾಡಲು ಬಲೆಗಳು, ಕಸದ ಚರಣಿಗೆಗಳಂತಹ ಒಳಚರಂಡಿ ವ್ಯವಸ್ಥೆಯಲ್ಲಿ ಸೂಕ್ತ ಮಧ್ಯಸ್ಥಿಕೆಗಳನ್ನು ಒದಗಿಸಬಹುದು.

ರಚನಾತ್ಮಕವಲ್ಲದ ಕ್ರಮಗಳು:

  1. NDMA ಪ್ರಕಾರ ರಾಷ್ಟ್ರೀಯ ಜಲ-ಹವಾಮಾನ ಜಾಲವು (National Hydro-meteorological Network) ಭಾರತದ ಎಲ್ಲಾ ನಗರ ನಗರಗಳಿಗೆ ಅಗತ್ಯವಿದೆ.
  2. ಪ್ರವಾಹದ ಅಪಾಯದ ಮೌಲ್ಯಮಾಪನಗಳನ್ನು ಭವಿಷ್ಯದಲ್ಲಿ ನಿರೀಕ್ಷಿತ ತೀವ್ರತೆ ಮತ್ತು ಮಳೆಯ ಅವಧಿ ಮತ್ತು ಭೂ ಬಳಕೆಯ ಬದಲಾವಣೆಗಳ ಆಧಾರದ ಮೇಲೆ ಮಾಡಬೇಕು.
  3. ಮಳೆ ಘಟನೆಗಳ ಉತ್ತಮ ಮುನ್ಸೂಚನೆ; ಸಾಮೂಹಿಕ ಮಾಹಿತಿಗೆ ಸಕಾಲಿಕ ಪ್ರಸರಣ- ‘ನೌಕಾಸ್ಟಿಂಗ್’ ಎಚ್ಚರಿಕೆಗಳು ಅಥವಾ ನೈಜ-ಸಮಯದ ಹವಾಮಾನ ವರದಿಗಳು.
  4. ನೈಸರ್ಗಿಕ ಒಳಚರಂಡಿ ಪ್ರದೇಶಗಳಲ್ಲಿ ಅತಿಕ್ರಮಣಗಳನ್ನು ನಿರ್ಬಂಧಿಸಿ; ನದಿ ಹಾಸಿಗೆಗಳ ತೆರವು, ಕರಾವಳಿ ನಿಯಂತ್ರಣ ವಲಯ ನಿಯಮಗಳ ಸರಿಯಾದ ಅನುಷ್ಠಾನ.
  5. ಕಟ್ಟಡಗಳ ಪ್ರವಾಹ-ನಿರೋಧಕದ ನಿಬಂಧನೆಗಳು
  6. ಚಂಡಮಾರುತದ ನೀರಿನ ಮಾಲಿನ್ಯ ನಿಯಂತ್ರಣ, ಅಂದರೆ ನಗರ ಪರಿಸರದಲ್ಲಿ ತ್ಯಾಜ್ಯನೀರು ಮತ್ತು ಘನ ತ್ಯಾಜ್ಯ ವಿಲೇವಾರಿಗೆ ಗುಣಮಟ್ಟದ ಮಾನದಂಡಗಳನ್ನು ವಿಧಿಸುವ ಮೂಲಕ ಜಲ ಮೂಲವನ್ನು ನಿಯಂತ್ರಿಸಲಾಗುತ್ತದೆ.

 


ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:


 

ಸಾಮಾಜಿಕ ಹೊಣೆಗಾರಿಕೆ ಕಾನೂನಿಗಾಗಿ ಅಭಿಯಾನವನ್ನು ಆರಂಭಿಸಲಾಗಿದೆ:

(Campaign launched for social accountability law)

ಮುಂದಿನ ವಿಧಾನಸಭೆ ಅಧಿವೇಶನದಲ್ಲಿ ಸಾಮಾಜಿಕ ಉತ್ತರದಾಯಿತ್ವ (social accountability) ಕಾನೂನಿನ ಅಂಗೀಕಾರಕ್ಕಾಗಿ ರಾಜಸ್ಥಾನದಲ್ಲಿ ರಾಜ್ಯಾದ್ಯಂತ ಅಭಿಯಾನವನ್ನು ಆರಂಭಿಸಲಾಗಿದೆ.

  1. “ಸಾಮಾಜಿಕ ಉತ್ತರದಾಯಿತ್ವ” ಅಥವಾ ಸಾಮಾಜಿಕ ಹೊಣೆಗಾರಿಕೆ ಎಂದರೆ ನಾಗರಿಕ ಗುಂಪುಗಳು ಸಾರ್ವಜನಿಕ ಅಧಿಕಾರಿಗಳು, ರಾಜಕಾರಣಿಗಳು ಮತ್ತು ಸೇವಾ ಪೂರೈಕೆದಾರರನ್ನು ತಮ್ಮ ಕರ್ತವ್ಯಗಳು ಮತ್ತು ಕಾರ್ಯಕ್ಷಮತೆಗಾಗಿ ಸೇವೆಗಳನ್ನು ತಲುಪಿಸುವ, ಜನರ ಕಲ್ಯಾಣವನ್ನು ಸುಧಾರಿಸುವ ಮತ್ತು ಜನರ ಹಕ್ಕುಗಳನ್ನು ರಕ್ಷಿಸುವ ನಿಟ್ಟಿನಲ್ಲಿ ನಡೆಸುವ ಕ್ರಮಗಳನ್ನು ಸೂಚಿಸುತ್ತದೆ.

Join our Official Telegram Channel HERE for Motivation and Fast Updates

Subscribe to our YouTube Channel HERE to watch Motivational and New analysis videos

[ad_2]

Leave a Comment