[ ದೈನಂದಿನ ಪ್ರಚಲಿತ ಘಟನೆಗಳು ] ದಿನಾಂಕ – 19ನೇ ಜೂನ್ 2021 – INSIGHTSIAS

[ad_1]

 

ಪರಿವಿಡಿ:

ಸಾಮಾನ್ಯ ಅಧ್ಯಯನ ಪತ್ರಿಕೆ 1:

1. ಧ್ವಜ ಸತ್ಯಾಗ್ರಹ.

 

ಸಾಮಾನ್ಯ ಅಧ್ಯಯನ ಪತ್ರಿಕೆ 2:

1. ವಿಚಾರಣೆಯಿಂದ ನ್ಯಾಯಾಧೀಶರ ಹಿಂದೆ ಸರಿಯುಯುವಿಕೆ.

2. ಚುನಾವಣಾ ಫಲಿತಾಂಶಗಳನ್ನು ಪ್ರಶ್ನಿಸಲಾಗುವ ವಿಧಾನ.

 

ಸಾಮಾನ್ಯ ಅಧ್ಯಯನ ಪತ್ರಿಕೆ 3:

1. ಆರ್ಡನೆನ್ಸ್ ಫ್ಯಾಕ್ಟರಿ ಬೋರ್ಡ್ ನ ಕಾರ್ಪೊರೇಟೀಕರಣ.

2. ಮಕ್ಕಳು ಮತ್ತು ಡಿಜಿಟಲ್ ಡಂಪ್‌ಸೈಟ್‌ಗಳ ವರದಿ.

3. ಚಂಡಮಾರುತದ ಬಿರುಗಾಳಿಗೆ ತಡೆ: ತನ್ನ ಕರಾವಳಿಯಲ್ಲಿ ಮ್ಯಾಂಗ್ರೋವ್‌ಗಳನ್ನು ಬೆಳೆಸಲು ಯೋಜನೆ ರೂಪಿಸಿದ ಒಡಿಶಾ.

 

ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:

1. ವೈದ್ಯಕೀಯ ಸಾಧನಗಳ ಭಾರತೀಯ ಪ್ರಮಾಣೀಕರಣ (ICMED) ಪ್ಲಸ್ ಯೋಜನೆ.

2. ಗಲ್ಫ್ ಆಫ್ ಏಡೆನ್.

3. ಇಂಟಿಗ್ರೇಟೆಡ್ ಥಿಯೇಟರ್ ಕಮಾಂಡ್.

 


ಸಾಮಾನ್ಯ ಅಧ್ಯಯನ ಪತ್ರಿಕೆ : 1


 

ವಿಷಯಗಳು: ಸ್ವಾತಂತ್ರ್ಯ ಹೋರಾಟ –  ಅದರ ವಿವಿಧ ಹಂತಗಳು ಮತ್ತು ದೇಶದ ವಿವಿಧ ಭಾಗಗಳಿಂದ ಪ್ರಮುಖ ಕೊಡುಗೆದಾರರು ಮತ್ತು ಅವರ ಕೊಡುಗೆಗಳು.

ಧ್ವಜ ಸತ್ಯಾಗ್ರಹ:


(Flag Satyagraha)

 ಸಂದರ್ಭ:

ಸಂಸ್ಕೃತಿ ಸಚಿವಾಲಯವು ಜೂನ್ 18 ರಂದು ಮಧ್ಯಪ್ರದೇಶದ ಜಬಲ್ಪುರದಲ್ಲಿ ಧ್ವಜ ಸತ್ಯಾಗ್ರಹವನ್ನು ಆಚರಿಸುವ ಕಾರ್ಯಕ್ರಮವನ್ನು ಆಯೋಜಿಸಿತ್ತು.

 

ಧ್ವಜ ಸತ್ಯಾಗ್ರಹ ಎಂದರೇನು?

  1. ಸ್ವಾತಂತ್ರ್ಯ ಹೋರಾಟಗಾರರ ಧ್ವಜ ಸತ್ಯಾಗ್ರಹ ಚಳುವಳಿಯು ಬ್ರಿಟಿಷ್ ಸರ್ಕಾರವನ್ನು ಬೆಚ್ಚಿಬೀಳಿಸಿತು ಮತ್ತು ಅದು ಸ್ವಾತಂತ್ರ್ಯ ಚಳವಳಿಯಲ್ಲಿ ಹೊಸಜೀವಕಳೆಯನ್ನು ತುಂಬಿತು.
  2. ಝಂಡಾ ಸತ್ಯಾಗ್ರಹ (Jhanda Satyagraha) ಎಂದೂ ಕರೆಯಲ್ಪಡುವ ಇದನ್ನು ಜಬಲ್ಪುರ ಮತ್ತು ನಾಗ್ಪುರದಲ್ಲಿ 1923 ರಲ್ಲಿ ನಡೆಸಲಾಯಿತು.
  3. ಜಬಲ್ಪುರದಲ್ಲಿ ಧ್ವಜಾರೋಹಣ ನೆರವೇರಿಸುವ ಸುದ್ದಿಯು ದೇಶದಲ್ಲಿ ಕಾಳ್ಗಿಚ್ಚಿನಂತೆ ಪಸರಿಸಿತು ಅನಂತರ ದೇಶಾದ್ಯಂತ ಹಲವಾರು ಸ್ಥಳಗಳಲ್ಲಿ ಧ್ವಜಗಳನ್ನು ಹಾರಿಸಲಾಯಿತು.

 

ಮಹತ್ವ:

ಇದು ಶಾಂತಿಯುತ ನಾಗರಿಕ ಅಸಹಕಾರದ ಅಭಿಯಾನವಾಗಿದ್ದು, ರಾಷ್ಟ್ರೀಯತಾವಾದಿ ಧ್ವಜವನ್ನು ಹಾರಿಸುವ ಹಕ್ಕು ಮತ್ತು ಸ್ವಾತಂತ್ರ್ಯವನ್ನು ಚಲಾಯಿಸುವುದರ ಮೇಲೆ ಗಮನ ಕೇಂದ್ರೀಕರಿಸುತ್ತದೆ ಮತ್ತು ನಾಗರಿಕ ಸ್ವಾತಂತ್ರ್ಯಗಳನ್ನು ನಿರ್ಬಂಧಿಸುವ ಕಾನೂನುಗಳನ್ನು ಧಿಕ್ಕರಿಸುವ ಮೂಲಕ ಭಾರತದಲ್ಲಿ ಬ್ರಿಟಿಷ್ ಆಡಳಿತದ ನ್ಯಾಯಸಮ್ಮತತೆಯನ್ನು ಪ್ರಶ್ನಿಸುತ್ತದೆ.

 

ಪರಿಣಾಮಗಳು:

 ಧ್ವಜವನ್ನು ಹಾರಿಸುವ ಹಕ್ಕನ್ನು ಕೋರಿದ ರಾಷ್ಟ್ರೀಯತಾವಾದಿ ಪ್ರತಿಭಟನಾಕಾರರ ಬಂಧನವು ಭಾರತದಾದ್ಯಂತ ಆಕ್ರೋಶವನ್ನು ಹುಟ್ಟುಹಾಕಿತು, ವಿಶೇಷವಾಗಿ ಆ ಸಂದರ್ಭದಲ್ಲಿ ಗಾಂಧೀಜಿಯವರನ್ನು ಬಂಧಿಸಿದ ನಂತರ ಈ ಆಕ್ರೋಶವೂ ಇನ್ನಷ್ಟು ಹೆಚ್ಚಾಯಿತು.

  1. ರಾಷ್ಟ್ರೀಯತಾವಾದಿ ನಾಯಕರಾದ ಸರ್ದಾರ್ ವಲ್ಲಭಭಾಯಿ ಪಟೇಲ್, ಜಮ್ನಾಲಾಲ್ ಬಜಾಜ್, ಚಕ್ರವರ್ತಿ ರಾಜಗೋಪಾಲಾಚಾರಿ, ಡಾ.ರಾಜೇಂದ್ರ ಪ್ರಸಾದ್ ಮತ್ತು ವಿನೋಬಾ ಭಾವೆ ಯವರು ಬೃಹತ್ ಹೋರಾಟವನ್ನು ಆಯೋಜಿಸಿದರು ಮತ್ತು ಸಾವಿರಾರು ಜನರು ನಾಗರಿಕ ಅಸಹಕಾರ ಚಳವಳಿಯಲ್ಲಿ ಭಾಗವಹಿಸಲು ದೇಶದ ವಿವಿಧ ಭಾಗಗಳಿಂದ ನಾಗ್ಪುರ ಮತ್ತು ಮಧ್ಯ ಪ್ರಾಂತ್ಯದ ಇತರ ಭಾಗಗಳಿಗೆ ಬಂದರು.
  2. ಕೊನೆಯಲ್ಲಿ, ಪ್ರತಿಭಟನಾಕಾರರಿಗೆ ಯಾವುದೇ ಅಡೆತಡೆಯಿಲ್ಲದೆ ತಮ್ಮ ಮೆರವಣಿಗೆಯನ್ನು ನಡೆಸಲು ಅನುಮತಿ ನೀಡುವ ಮತ್ತು ಬಂಧಿಸಲ್ಪಟ್ಟ ಎಲ್ಲರ ಬಿಡುಗಡೆಯನ್ನು ಮಾಡುವ ಒಪ್ಪಂದವನ್ನು ಬ್ರಿಟಿಷರು ಪಟೇಲ್ ಮತ್ತು ಇತರ ಕಾಂಗ್ರೆಸ್ ಮುಖಂಡರೊಂದಿಗೆ ಮಾಡಿಕೊಂಡರು.

 

ದಯವಿಟ್ಟು ಗಮನಿಸಿ:  

ಕರ್ನಾಟಕದಲ್ಲಿ ಧ್ವಜ ಸತ್ಯಾಗ್ರಹ:

  1.  ಭಾರತವನ್ನು ಪರಕೀಯರ ಆಡಳಿತದಿಂದ ಮುಕ್ತಿಗೊಳಿಸಲು ಬಾಪೂಜಿಯವರು ರೂಪಿಸಿದ ಎಲ್ಲಾ ಚಳವಳಿಗಳೂ ಅಹಿಂಸೆಯ ತಳಹದಿಯ ಮೇಲಿದ್ದವು. ನಮ್ಮ ಹಕ್ಕುಗಳನ್ನು ಒತ್ತಾಯಿಸುತ್ತಾ ಚಳವಳಿ ಹೂಡುವ ಪದ್ಧತಿ ಹೆಚ್ಚು ಪರಿಣಾಮಕಾರಿಯಾಗಿ ಮೂಡಿಬಂದಿದ್ದು ಈಗ ಚರಿತ್ರೆಯ ಪುಟಗಳಲ್ಲಿ ಸೇರಿಹೋಗಿದೆ.
  2. ಧ್ವಜ ನಮ್ಮ ಹಿರಿಮೆ ಗರಿಮೆಯ ಸಂಕೇತ.
  3. ನಮ್ಮ ಹೆಮ್ಮೆಯ ರಾಷ್ಟ್ರ ಸಂಕೇತಗಳಲ್ಲಿ ಧ್ವಜಕ್ಕೆ ಅಗ್ರಸ್ಥಾನ. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ವಿದೇಶದಲ್ಲಿ ರಾಷ್ಟ್ರ ಭಕ್ತೆ ಮೇಡಂ ಕಾಮಾಜಿ ಅವರು ಭಾರತದ ಬಾವುಟವನ್ನು ವಿನ್ಯಾಸಗೊಳಿಸಿ ಅದನ್ನು ಹಾರಿಸುವ ಮೂಲಕ ಸ್ವಾತಂತ್ರ್ಯ ಸಮರಕ್ಕೆ ಜೀವ ತುಂಬಿದ್ದರು. ಬಾಪೂಜಿಯವರು ಅಹಿಂಸಾತ್ಮಕ ಹೋರಾಟದಲ್ಲಿ ಧ್ವಜ ಸತ್ಯಾಗ್ರಹಕ್ಕೆ ಆದ್ಯತೆ ನೀಡಿದ್ದರು.
  4. 1920ರ ಸುಮಾರಿಗೆ ದೇಶದಾದ್ಯಾಂತ ಧ್ವಜ ಸತ್ಯಾಗ್ರಹ ಆರಂಭವಾಯಿತು. ಆಗ ಮೈಸೂರು ಸಂಸ್ಥಾನದಲ್ಲಿ ಸ್ವಾತಂತ್ರ್ಯ ಹೋರಾಟಕ್ಕೆ ಹೆಚ್ಚಿನ ಒತ್ತು ಸಿಕ್ಕಿರಲಿಲ್ಲ. ಆದರೆ, ಮೈಸೂರು ಪ್ರಾಂತ್ಯದಿಂದ ಸ್ವಯಂಸೇವಕರು ಬೇರೆ ಭಾಗಗಳಲ್ಲಿ ನಡೆಯುತ್ತಿದ್ದ ಹೋರಾಟಗಳಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದರು. ಅಂತಹ ಹೋರಾಟಗಳಲ್ಲಿ ಒಂದಾದ ನಾಗ್ಪುರ ಹೋರಾಟದಲ್ಲಿ (1923) ಬೆಂಗಳೂರಿನ ಅನೇಕ ಯುವಕರು ಭಾಗವಹಿಸಿದ್ದರು.
  5. ಬೆಂಗಳೂರಿನಲ್ಲಿ 1931ರಲ್ಲಿ ಧರ್ಮಾಂಬುದಿ (ಈಗಿನ ಸುಭಾಶ್ ನಗರ ಬಸ್ ನಿಲ್ದಾಣ) ಕೆರೆ ಅಂಗಳದಲ್ಲಿ ವಿಶಾಲ ವೇದಿಕೆ ರಚಿಸಿ 90 ಅಡಿ ಎತ್ತರದ ಕಂಬದಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸುವ ಮೂಲಕ ಸ್ವಾತಂತ್ರ್ಯ ಹೋರಾಟಗಾರರು ತಮ್ಮ ಹೋರಾಟದ ಸಂದೇಶವನ್ನು ಹೇಳಿದ್ದರು. ಆದರೆ, ಕಿಡಿಗೇಡಿಗಳು ಈ ಕಂಬವನ್ನು ಕೆಡವಿದ ವಿಷಯ ತಿಳಿದು ಬೆಂಗಳೂರಿನ ಕಾರ್ಮಿಕರು ಇದರ ವಿರುದ್ಧ ಪ್ರತಿಭಟನೆ ಮಾಡಿದ ನಂತರ ಧ್ವಜ ಸತ್ಯಾಗ್ರಹಕ್ಕೆ ಹೆಚ್ಚಿನ ಒತ್ತು ದೊರೆಯತೊಡಗಿತು.
  6. ಸ್ವಾತಂತ್ರ್ಯ ಸಮರದಲ್ಲಿ ಪಾಲ್ಗೊಳ್ಳುವ ಹಾಗೂ ಬೇರೆ ಬೇರೆ ಕಾರ್ಯಕ್ರಮಗಳಲ್ಲಿ ಹೋರಾಟವನ್ನು ಬಿಂಬಿಸುವುದಕ್ಕೆ ಧ್ವಜ ಸತ್ಯಾಗ್ರಹವನ್ನು ಸಾಂಕೇತಿಕವಾಗಿ ಬಳಸಲು ಆರಂಭಿಸಲಾಯಿತು. 1938ರಲ್ಲಿ ಶಿವಪುರದಲ್ಲಿ ನಡೆದ ಸತ್ಯಾಗ್ರಹವು ಧ್ವಜ ಸತ್ಯಾಗ್ರಹಕ್ಕೆ ಹೆಚ್ಚಿನ ಪ್ರಾಧಾನ್ಯ ನೀಡಿತು. ಧ್ವಜ ಹಾರಿಸಬಾರದೆಂಬ ಆದೇಶ ಹಾಗೂ ಪೊಲೀಸರಿಂದ ಬಲ ಪ್ರಯೋಗದ ಸಾಧ್ಯತೆಗಳಿದ್ದರೂ ತ್ರಿವರ್ಣ ಧ್ವಜ ಹಾರಿಸುವ ಕಾರ್ಯವನ್ನು ಕಾಂಗ್ರೆಸ್ ಕಾರ್ಯಕರ್ತರು ನಡೆಸಿ ಬಂಧನಕ್ಕೊಳಗಾದರು. ಪ್ರತಿದಿನವೂ ಧ್ವಜ ಸತ್ಯಾಗ್ರಹವನ್ನು ನಡೆಸುವ ಸಂಪ್ರದಾಯವನ್ನು ಶಿವಪುರ ಸತ್ಯಾಗ್ರಹದಲ್ಲಿ ಆರಂಭಿಸಲಾಯಿತು.
  7. ಶಿವಪುರ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದ ಸ್ವಯಂ ಸೇವಕರು ತಮ್ಮ ಊರುಗಳಿಗೆ ತೆರಳಿದ ಮೇಲೆ ಧ್ವಜ ಸತ್ಯಾಗ್ರಹವನ್ನು ಶುರುವಿಟ್ಟುಕೊಂಡರು. ಬೆಂಗಳೂರಿನಲ್ಲಿ ಪ್ರತಿಬಂಧಕಾಜ್ಞೆ ಇದ್ದರೂ ಧ್ವಜ ಸತ್ಯಾಗ್ರಹ ಮಾಡಲು ಸ್ವಾತಂತ್ರ್ಯ ಹೋರಾಟಗಾರರು ನಿರ್ಧರಿಸಿದರು. 1938ರ ಏಪ್ರಿಲ್ 17ಕ್ಕೆ ಆಗಿನ ಕಾಂಗ್ರೆಸ್ ಮುಖಂಡರಾದ ಕೆಂಗಲ್ ಹನುಮಂತಯ್ಯ,
  8. ಡಾ. ಪಾರ್ಥನಾರಾಯಣ ಪಂಡಿತ್, ರಾಮಲಾಲ್ ತಿವಾರಿ ಮೊದಲಾದವರು ಧ್ವಜ ಸತ್ಯಾಗ್ರಹ ನಡೆಸುವ ಮೂಲಕ ದಸ್ತಗಿರಿಯಾದರು. ಆದರೆ, ಧ್ವಜ ಸತ್ಯಾಗ್ರಹ ಪ್ರತಿದಿನ ನಡೆಯುತ್ತಲೇ ಹೋಯಿತು. ಹಾಗೆಯೇ ಬಂಧಿತರ ಸಂಖ್ಯೆಯೂ ಹೆಚ್ಚುತ್ತಾ ಹೋಯಿತು. ಆಗ ಕೋಲಾರ ಜಿಲ್ಲೆ ವ್ಯಾಪ್ತಿಗೆ ಬರುತ್ತಿದ್ದ ಯಾತ್ರಾಸ್ಥಳ ವಿದುರಾಶ್ವಥದಲ್ಲಿ ವ್ಯವಸ್ಥೆಯಾಗಿದ್ದ ಕಾಂಗ್ರೆಸ್ ಅಧಿವೇಶನದಲ್ಲಿ ಧ್ವಜ ಸತ್ಯಾಗ್ರಹ ಮಾಡುತ್ತಿದ್ದವರ ಮೇಲೆ ಪೊಲೀಸರು ಗೋಲಿಬಾರ್ ನಡೆಸಿದಾಗ ಹಲವು ಮಂದಿ ಪ್ರಾಣ ಕಳೆದುಕೊಂಡು ನೂರಾರು ಮಂದಿಗೆ ಗಾಯಗಳಾದವು. ಅಸಂಖ್ಯಾತ ಮಂದಿಯನ್ನು ಈ ಸಂಬಂಧ ಪೊಲೀಸರು ಬಂಧಿಸಿ ಬೆಂಗಳೂರಿನ ಸೆಂಟ್ರಲ್ ಜೈಲ್‌ನಲ್ಲಿ ಕೂಡಿಹಾಕಿದರು.
  9. ಮೈಸೂರು ಸಂಸ್ಥಾನದಲ್ಲಿ ನಡೆದ ಈ ದುರ್ಘಟನೆಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಲು ಬಾಪೂಜಿಯವರು ಕಾಂಗ್ರೆಸ್ ಮುಂದಾಳುಗಳಾದ ಸರ್ದಾರ್ ವಲ್ಲಭಬಾಯಿ ಪಟೇಲ್, ಜೆ.ಬಿ.ಕೃಪಲಾನಿ ಅವರನ್ನು ಬೆಂಗಳೂರಿಗೆ ಕಳುಹಿಸಿದರು. ಈ ಮುಖಂಡರು ಬೆಂಗಳೂರಿನ ಸೆಂಟ್ರಲ್ ಜೈಲಿನಲ್ಲಿದ್ದ ನಾಯಕರೊಂದಿಗೆ ಮಾತನಾಡಿ ಕೊನೆಗೆ ಮೈಸೂರು ಸಂಸ್ಥಾನದ ದಿವಾನರ ಜೊತೆಗೆ ಚರ್ಚೆ ನಡೆಸಿದರು. ಆಗ ಮಿರ್ಜಾ ಇಸ್ಮಾಯಿಲ್ ಅವರು ದಿವಾನರಾಗಿದ್ದರು. ಇಡೀ ದೇಶದಲ್ಲಿ ಶಾಂತಿ ಪ್ರಿಯ ಸಂಸ್ಥಾನವಾಗಿದ್ದ ಮೈಸೂರಿನಲ್ಲಿ ಸ್ವಾತಂತ್ರ್ಯ ಹೋರಾಟವು ಶಾಂತಿಯುತವಾಗಿಯೇ ನಡೆಯಬೇಕೆಂಬ ಉದ್ದೇಶದಿಂದ ಮೈಸೂರು ಸಂಸ್ಥಾನದ ಆಡಳಿತ ಹಾಗೂ ಸ್ವಾತಂತ್ರ್ಯ ಚಳವಳಿಕಾರರ ನಡುವೆ ಒಡಂಬಡಿಕೆಯೊಂದನ್ನು ಜಾರಿಗೆ ತರಲಾಯಿತು. ಅದರ ಪ್ರಕಾರ ತ್ರಿವರ್ಣ ಧ್ವಜದ ಜೊತೆಗೆ ಮೈಸೂರು ಸಂಸ್ಥಾನದ ಗಂಡಭೇರುಂಡ ಧ್ವಜವನ್ನೂ ಒಟ್ಟಿಗೆ ಹಾರಿಸಬೇಕೆಂದು ತೀರ್ಮಾನವಾಯಿತು.
  10. ಬೆಂಗಳೂರಿನಲ್ಲಿ ಸ್ವಾತಂತ್ರ್ಯ ಸಮರದ ಬಿಸಿ ಜೋರಾಗುತ್ತಿದ್ದಂತೆ ಮಹಿಳೆಯರು ಚಳವಳಿಯಲ್ಲಿ ಸೇರ್ಪಡೆಗೊಂಡರು. ಸಾರ್ವಜನಿಕ ಸಭೆಗಳಲ್ಲಿ, ಪ್ರತಿಭಟನಾ ಮೆರವಣಿಗೆಗಳಲ್ಲಿ ಸ್ತ್ರೀಯರು ಭಾಗವಹಿಸುತ್ತಿದ್ದರು. ಧ್ವಜ ಸತ್ಯಾಗ್ರಹದಲ್ಲಿ ಮಹಿಳೆಯರು ಹೆಚ್ಚಾಗಿ ಪಾಲ್ಗೊಂಡರು. ಪೊಲೀಸರು ಮಹಿಳೆಯರನ್ನೂ ಬಂಧಿಸಲು ಕ್ರಮ ಕೈಗೊಂಡರು. ಬೆಂಗಳೂರಿನಲ್ಲಿ ಧ್ವಜ ಸತ್ಯಾಗ್ರಹ ಸಂದರ್ಭದಲ್ಲಿ ಲಲಿತಮ್ಮ ಜಿ.ಆರ್. ಸ್ವಾಮಿಯವರು ಪೊಲೀಸರಿಂದ ಬಂಧನಕ್ಕೆ ಒಳಗಾದ ಮೊದಲ ಮಹಿಳೆ.

 

ಸ್ವಾತಂತ್ರ್ಯ ಹೋರಾಟಕ್ಕೆ ಸಂಬಂಧಿಸಿದ ಎಲ್ಲಾ ಕಾರ್ಯಕ್ರಮಗಳಲ್ಲೂ ತ್ರಿವರ್ಣ ಧ್ವಜ ಹಾರಾಡುವುದು ಸಾಮಾನ್ಯವಾಯಿತು.

 


ಸಾಮಾನ್ಯ ಅಧ್ಯಯನ ಪತ್ರಿಕೆ : 2


 

ವಿಷಯಗಳು: ಸರ್ಕಾರದ ವಿವಿಧ ಅಂಗಗಳ ನಡುವೆ ಅಧಿಕಾರ ವಿಭಜನೆ, ವಿವಾದ ಪರಿಹಾರ ಕಾರ್ಯವಿಧಾನಗಳು ಮತ್ತು ಸಂಸ್ಥೆಗಳು.

ವಿಚಾರಣೆಯಿಂದ ನ್ಯಾಯಾಧೀಶರ ಹಿಂದೆ ಸರಿಯುಯುವಿಕೆ:


(Recusal of Judges)

 ಸಂದರ್ಭ:

ಪಶ್ಚಿಮ ಬಂಗಾಳದಲ್ಲಿ ನಡೆದ ಚುನಾವಣೋತ್ತರ ಹಿಂಸಾಚಾರದಲ್ಲಿ ಹತ್ಯೆಗೀಡಾದ ಇಬ್ಬರು ಬಿಜೆಪಿ ಕಾರ್ಯಕರ್ತರ ಕುಟುಂಬಗಳು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯಿಂದ ನ್ಯಾಯಮೂರ್ತಿ ಇಂದಿರಾ ಬ್ಯಾನರ್ಜಿಯವರು ಸ್ವಯಂ ಆಗಿ ಹಿಂದೆ ಸರಿದಿದ್ದಾರೆ.

 

ಹಿನ್ನೆಲೆ:

ರಾಜ್ಯದಲ್ಲಿ “ಪ್ರತೀಕಾರದ” ಮನೋಭಾವದ ಆಡಳಿತ ಪಕ್ಷವು ಚುನಾವಣಾ ಫಲಿತಾಂಶದ ನಂತರ ಪಶ್ಚಿಮ ಬಂಗಾಳದಲ್ಲಿ ಮುಗ್ಧ ಜನರನ್ನು “ವಿವೇಚನೆಯಿಲ್ಲದೆ” ಹತ್ಯೆ ಮಾಡಿದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.

 

‘ನ್ಯಾಯಾಂಗ ಅನರ್ಹತೆ’ ಅಥವಾ ‘ವಿಚಾರಣೆಯ ನಿರಾಕರಣೆ’ ಎಂದರೇನು?

(What is Judicial Disqualification or Recusal?)

 ಹಿತಾಸಕ್ತಿಯ ಸಂಘರ್ಷದಿಂದಾಗಿ ವಿಚಾರಣೆಯ ಪೀಠ ಅಲಂಕರಿಸುವ ನ್ಯಾಯಾಂಗ ಅಧಿಕಾರಿ ಅಥವಾ ಆಡಳಿತಾಧಿಕಾರಿಯು ಯಾವುದೇ ನ್ಯಾಯಾಂಗ ವಿಚಾರಣೆಯಲ್ಲಿ ಅಥವಾ ಅಧಿಕೃತ ಕ್ರಿಯೆಯಲ್ಲಿ ಭಾಗವಹಿಸುವಿಕೆಯಿಂದ ದೂರವಿರುವುದನ್ನು ಅಥವಾ ಹಿಂದೆ ಸರಿಯುವುದನ್ನು ನ್ಯಾಯಾಂಗ ಅನರ್ಹತೆ (Judicial disqualification), ‘ವಿಚಾರಣೆಯ ನಿರಾಕರಣೆ’ ಅಥವಾ ‘ಮರುಪಡೆಯುವಿಕೆ’ (Recusal) ಎಂದು ಕರೆಯಲಾಗುತ್ತದೆ.

 

ಯಾವುದೇ ಪ್ರಕರಣದ ವಿಚಾರಣೆಯಿಂದ ನ್ಯಾಯಮೂರ್ತಿಗಳು ಹಿಂದೆ ಸರಿಯುವುದಕ್ಕೆ ಇಂಗ್ಲಿಷ್‌ನಲ್ಲಿ ‘Recuse’ (ರೆಕ್ಯೂಸ್) ಎಂದು ಕರೆಯುತ್ತಾರೆ. ‘ಪ್ರಕರಣದ ಬಗ್ಗೆ ಪರ– ವಿರುದ್ಧದ ನಿಲುವು ಹೊಂದಿದ್ದರೆ ಅವುಗಳ ವಿಚಾರಣೆ ನಿರಾಕರಿಸಬೇಕು’ ಎಂಬುದು ಇದರರ್ಥ.

 

‘ವಿಚಾರಣೆಯ ನಿರಾಕರಣೆ’ಗೆ ಸಾಮಾನ್ಯ ಆಧಾರಗಳು:

  1. ನ್ಯಾಯಾಧೀಶರು ಒಂದು ಪಕ್ಷದ ಬಗ್ಗೆ ಉತ್ತಮ ನಂಬಿಕೆ, ಅಥವಾ ಇತರ ಪಕ್ಷದ ಬಗ್ಗೆ ಪ್ರತಿಕೂಲ ಧೋರಣೆ ಹೊಂದಿದ್ದರೆ ಅಥವಾ ನ್ಯಾಯಾಧೀಶರು ಯಾರೋ ಒಬ್ಬರ ಬಗ್ಗೆ ಸಮಂಜಸವಾಗಿ ಪಕ್ಷಪಾತ ಹೊಂದಿರಬಹುದು ಎಂದು ನಿಷ್ಪಕ್ಷಪಾತ ಅಥವಾ ವಸ್ತುನಿಷ್ಠ ವೀಕ್ಷಕನು ಭಾವಿಸಿದರೆ.
  2. ನ್ಯಾಯಾಧೀಶರು ಪ್ರಕರಣದಲ್ಲಿ ವೈಯಕ್ತಿಕ ಹಿತಾಸಕ್ತಿಯನ್ನು ಹೊಂದಿದ್ದರೆ ಅಥವಾ ಪ್ರಕರಣದಲ್ಲಿ ವೈಯಕ್ತಿಕ ಹಿತಾಸಕ್ತಿಯನ್ನು ಹೊಂದಿರುವ ಯಾವುದೇ ವ್ಯಕ್ತಿಯೊಂದಿಗೆ ಸಂಬಂಧ ಹೊಂದಿದ್ದರೆ.
  3. ನ್ಯಾಯಾಧೀಶರ ಹಿನ್ನೆಲೆ ಅಥವಾ ಅನುಭವ, ಉದಾಹರಣೆಗೆ ನ್ಯಾಯಾಧೀಶರಾಗುವುದಕ್ಕಿಂತ ಮುಂಚೆ ವಕೀಲರಾಗಿ ಮಾಡಿದ ಕೆಲಸ.
  4. ವಾದಿ ಮತ್ತು ಪ್ರತಿವಾದಿಗಳ ಕುರಿತು ಹೊಂದಿರುವ ವೈಯಕ್ತಿಕ ತಿಳುವಳಿಕೆ ಅಥವಾ ಪ್ರಕರಣದ ಸಂಗತಿಗಳ ಕುರಿತ ಜ್ಞಾನ.
  5. ವಕೀಲರು ಅಥವಾ ವಕೀಲರಲ್ಲದವರೊಂದಿಗೆ ಏಕಪಕ್ಷೀಯ/ಖಾಸಗಿ ಸಂವಾದ.
  6. ನ್ಯಾಯಾಧೀಶರ ತೀರ್ಪುಗಳು, ಪ್ರತಿಕ್ರಿಯೆಗಳು ಅಥವಾ ನಡವಳಿಕೆ.

 

ಈ ನಿಟ್ಟಿನಲ್ಲಿ ಯಾವುದೇ ಕಾನೂನುಗಳಿವೆಯೇ?

ನ್ಯಾಯಾಧೀಶರು ‘ವಿಚಾರಣೆಯನ್ನು ನಿರಾಕರಿಸಲು’ ಅಥವಾ ವಿಚಾರಣೆಯಿಂದ ಹಿಂದೆ ಸರಿಯಲು ಯಾವುದೇ ನಿರ್ದಿಷ್ಟ ನಿಯಮಗಳಿಲ್ಲ.

  1. ಆದಾಗ್ಯೂ, ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ಗಳ ನ್ಯಾಯಾಧೀಶರು ಪ್ರಮಾಣವಚನ ಸ್ವೀಕರಿಸುವ ಸಮಯದಲ್ಲಿ,ತಮ್ಮ ಕರ್ತವ್ಯಗಳನ್ನು ನಿರ್ವಹಿಸಲು, ನ್ಯಾಯದಾನ ಮಾಡಲು, ಭಯ ಅಥವಾ ಅನುಗ್ರಹವಿಲ್ಲದೆ, ವಾತ್ಸಲ್ಯ ಅಥವಾ ಬಾಂಧವ್ಯಕ್ಕೆ ಒಳಗಾಗದೆ ಅಥವಾ ತಿರಸ್ಕಾರವಿಲ್ಲದೆ ಅಥವಾ ಯಾವುದೇ ದುರುದ್ದೇಶವಿಲ್ಲದೆ ತಮ್ಮ ಕರ್ತವ್ಯಗಳನ್ನು ಪ್ರಾಮಾಣಿಕವಾಗಿ ಮತ್ತು ನಿಷ್ಪಕ್ಷಪಾತವಾಗಿ ನಿರ್ವಹಿಸುವ ವಚನವನ್ನು ನೀಡುತ್ತಾರೆ.

 

ಈ ಕುರಿತು ಸುಪ್ರೀಂ ಕೋರ್ಟ್ ಹೇಳಿರುವುದೇನು ?

ನ್ಯಾಯಮೂರ್ತಿ ಜೆ. ಚೆಲಮೇಶ್ವರ್ ಅವರು ಸುಪ್ರೀಂ ಕೋರ್ಟ್ ಅಡ್ವೊಕೇಟ್ಸ್-ಆನ್-ರೆಕಾರ್ಡ್ ಅಸೋಸಿಯೇಶನ್ VS ಯೂನಿಯನ್ ಆಫ್ ಇಂಡಿಯಾ (2015) ಪ್ರಕರಣದ ತೀರ್ಪು ನೀಡುವಾಗ ನ್ಯಾಯಾಧೀಶರು ಆರ್ಥಿಕ ಹಿತಾಸಕ್ತಿಯನ್ನು ಹೊಂದಿರುವುದು ಕಂಡು ಬಂದರೆ ಅದು ಪಕ್ಷಪಾತದ ಕುರಿತ ‘ನಿಜವಾದ ಅಪಾಯ’ ಅಥವಾ ಆಗ ‘ಸಮಂಜಸವಾದ ಅನುಮಾನ’ ಇದೆಯೇ ಎಂಬ ಬಗ್ಗೆ ಹೆಚ್ಚಿನ ತನಿಖೆ ನಡೆಸುವ ಅಗತ್ಯವಿಲ್ಲ “ ಎಂದು ಅಭಿಪ್ರಾಯಪಟ್ಟಿದ್ದಾರೆ.

 

ವಿಷಯಗಳು: ಪ್ರಜಾ ಪ್ರಾತಿನಿಧ್ಯ ಕಾಯ್ದೆಯ ಪ್ರಮುಖ ಲಕ್ಷಣಗಳು.

ಚುನಾವಣಾ ಫಲಿತಾಂಶಗಳನ್ನು ಪ್ರಶ್ನಿಸಲಾಗುವ ವಿಧಾನ:


ಸಂದರ್ಭ:

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸ್ಪರ್ಧಿಸಿ ಸೋತಿದ್ದ ನಂದಿಗ್ರಾಮ್ ವಿಧಾನಸಭಾ ಕ್ಷೇತ್ರದ ವಿಧಾನಸಭಾ ಚುನಾವಣಾ ಫಲಿತಾಂಶವನ್ನು ಪ್ರಶ್ನಿಸಿ ಕಲ್ಕತ್ತಾ ಹೈಕೋರ್ಟ್‌ನಲ್ಲಿ ಚುನಾವಣಾ ತಕರಾರು ಅರ್ಜಿ ಸಲ್ಲಿಸಿದ್ದಾರೆ.

ಏನಿದು ಸಮಸ್ಯೆ?

ರಿಟರ್ನಿಂಗ್ ಆಫೀಸರ್ ಅಥವಾ ಚುನಾವಣಾ ಅಧಿಕಾರಿಯು ನಡೆಸಿದ ಮತ ಎಣಿಕೆ ಕಾರ್ಯವಿಧಾನದಲ್ಲಿನ ಭ್ರಷ್ಟಾಚಾರ ಮತ್ತು ವ್ಯತ್ಯಾಸಗಳ ಆಧಾರದ ಮೇಲೆ ಸುವೆಂದು ಅಧಿಕಾರಿಯ ಚುನಾವಣಾ ಗೆಲುವನ್ನು ಅನೂರ್ಜಿತವೆಂದು ಘೋಷಿಸುವಂತೆ ಅವರು ಕೋರಿದ್ದಾರೆ.

 

ಚುನಾವಣಾ ತಕರಾರು ಅರ್ಜಿ ಎಂದರೇನು?

ಚುನಾವಣಾ ಫಲಿತಾಂಶಗಳನ್ನು ಘೋಷಿಸಿದ ನಂತರ, ಚುನಾವಣೆಯಲ್ಲಿ ದುಷ್ಕೃತ್ಯ ನಡೆದಿದೆ ಎಂದು ಭಾವಿಸುವ ಮತದಾರನಿಗೆ ಅಥವಾ ಪರಾಜಿತ ಅಭ್ಯರ್ಥಿಗೆ ಚುನಾವಣಾ ತಕರಾರು ಅರ್ಜಿಯ ಸಲ್ಲಿಕೆಯೊಂದೇ ಲಭ್ಯವಿರುವ ಏಕೈಕ ಕಾನೂನು ಪರಿಹಾರವಾಗಿದೆ.

ಚುನಾವಣಾ ತಕರಾರು ಅರ್ಜಿಯನ್ನು ವಿಧಾನಸಭಾ ಕ್ಷೇತ್ರ ಇರುವ ರಾಜ್ಯದ ಹೈಕೋರ್ಟ್‌ಗೆ ಸಲ್ಲಿಸಬೇಕಾಗುತ್ತದೆ.

ಚುನಾವಣಾ ಫಲಿತಾಂಶ ಘೋಷಣೆಯಾದ ದಿನಾಂಕದಿಂದ 45 ದಿನಗಳ ಒಳಗೆ ಅಂತಹ ಚುನಾವಣಾ ತಕರಾರು ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ; ಅದರ ನಂತರ ಸಲ್ಲಿಸುವ ಅರ್ಜಿಗಳನ್ನು ನ್ಯಾಯಾಲಯಗಳು ಸ್ವೀಕರಿಸುವುದಿಲ್ಲ.

1951 ರ ಪ್ರಜಾ ಪ್ರಾತಿನಿಧ್ಯ ಕಾಯ್ದೆಯು, ಚುನಾವಣಾ ತಕರಾರು ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಆರು ತಿಂಗಳೊಳಗೆ ಮುಕ್ತಾಯಗೊಳಿಸಲು ಪ್ರಯತ್ನಿಸಬೇಕು ಎಂದು ಸೂಚಿಸುತ್ತದೆಯಾದರೂ, ಇದು ಸಾಮಾನ್ಯವಾಗಿ ಹೆಚ್ಚು ಕಾಲದವರಿಗೆ, ಕೆಲವೊಮ್ಮೆ ವರ್ಷಗಳವರೆಗೆ ಮುಂದುವರಿಯುತ್ತದೆ.

ಪ್ರಜಾ ಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್ 100 ರ ಅಡಿಯಲ್ಲಿ, ಚುನಾವಣಾ ಅರ್ಜಿಯನ್ನು ಸಲ್ಲಿಸಬಹುದು:

 

  1. ಪ್ರಜಾ ಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್ 123 ಲಂಚ, ಬಲ ಉಪಯೋಗ ಅಥವಾ ಬಲವಂತವಾಗಿ ಮನವೊಲಿಸುವುದು, ಮತ ಚಲಾಯಿಸಲು ಮನವಿ ಮಾಡುವುದು ಅಥವಾ ಧರ್ಮ, ಜನಾಂಗ, ಸಮುದಾಯ ಮತ್ತು ಭಾಷೆಯ ಆಧಾರದ ಮೇಲೆ ಮತದಾನದಿಂದ ದೂರವಿರುವಂತೆ ಮಾಡುವುದು ಸೇರಿದಂತೆ ಭ್ರಷ್ಟ ಅಭ್ಯಾಸ (ಚುನಾವಣಾ ಅಕ್ರಮ) ದ ವಿವರವಾದ ಪಟ್ಟಿಯನ್ನು ಹೊಂದಿದೆ.
  2. ವಿಜೇತ ಅಭ್ಯರ್ಥಿಯ ನಾಮನಿರ್ದೇಶನವನ್ನು ಕಾನೂನಿಗೆ ವಿರುದ್ಧವಾಗಿ ಒಪ್ಪಿಕೊಳ್ಳುವುದು ಅಥವಾ ಚುನಾವಣಾ ಅಭ್ಯರ್ಥಿಯ ನಾಮನಿರ್ದೇಶನವನ್ನು ಸರಿಯಾಗಿ ಪರಿಶೀಲಿಸದೆ ತಿರಸ್ಕರಿಸುವುದು.
  3. ಮತಗಳ ಎಣಿಕೆಯ ಪ್ರಕ್ರಿಯೆಯಲ್ಲಿನ ದುಷ್ಕೃತ್ಯ, ಇದರಲ್ಲಿ ಯಾವುದೇ ಮತವನ್ನು ಅನುಚಿತವಾಗಿ ಗಣನೆಗೆ ತೆಗೆದುಕೊಳ್ಳುವುದು, ನಿರಾಕರಿಸುವುದು ಅಥವಾ ಯಾವುದೇ ಮತವನ್ನು ಅನೂರ್ಜಿತಗೊಳಿಸುವುದು ಅಥವಾ ಅನುಚಿತವಾದ ಮತವನ್ನು ಪರಿಗಣಿಸುವುದು.
  4. ಸಂವಿಧಾನ ಅಥವಾ ಪ್ರಜಾ ಪ್ರಾತಿನಿಧ್ಯ ಕಾಯ್ದೆಯ ನಿಬಂಧನೆಗಳು ಅಥವಾ ಜನಪ್ರತಿನಿಧಿ ಕಾಯ್ದೆಯಡಿ ಮಾಡಿದ ಯಾವುದೇ ನಿಯಮಗಳು ಅಥವಾ ಆದೇಶಗಳನ್ನು ಪಾಲಿಸದಿರುವುದು.

 

ಚುನಾವಣಾ ಅಕ್ರಮಗಳ ಕುರಿತು ಮಾಡಿದ ಆರೋಪಗಳು ಸರಿಯಾಗಿದೆ ಎಂದು ನ್ಯಾಯಾಲಯವು ಮಾನ್ಯ ಮಾಡಿದರೆ ಮುಂದಿನ ಕ್ರಮವೇನು?

ಚುನಾವಣಾ ತಕರಾರು ಅರ್ಜಿಯ ಕುರಿತು ನ್ಯಾಯಾಲಯದ ತೀರ್ಪು ಅರ್ಜಿದಾರರ ಪರವಾಗಿ ಬಂದರೆ ನ್ಯಾಯಾಲಯವು ಹೊಸದಾಗಿ ಚುನಾವಣೆಗಳನ್ನು ನಡೆಸುವಂತೆ ಆದೇಶಿಸಬಹುದು ಇಲ್ಲವೇ ನ್ಯಾಯಾಲಯವು ಹೊಸ ವಿಜೇತ ಅಭ್ಯರ್ಥಿಯ ಹೆಸರನ್ನು ಘೋಷಿಸಬಹುದು.

 

ಪ್ರಸಿದ್ಧ ಉದಾಹರಣೆಗಳು:

  1. 1975 ರ ಅಲಹಾಬಾದ್ ಹೈಕೋರ್ಟ್ ತೀರ್ಪು ಅತ್ಯಂತ ಪ್ರಸಿದ್ಧವಾದುದು, ಇದು ಇಂದಿರಾ ಗಾಂಧಿಯವರ ಚುನಾವಣೆ ಆಯ್ಕೆಯನ್ನು ರಾಯ್ ಬರೇಲಿ ಕ್ಷೇತ್ರದಿಂದ ಭ್ರಷ್ಟಾಚಾರದ ಆಧಾರದ ಮೇಲೆ ಅನೂರ್ಜಿತಗೊಳಿಸಿತು.
  2. ರಾಜಸ್ಥಾನ ವಿಧಾನಸಭೆಗೆ 2008 ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕ ಸಿ ಪಿ ಜೋಶಿ ಅವರು ಒಂದು ಮತದಿಂದ ಸೋತಿರುವುದು ಮತ್ತೊಂದು ಉನ್ನತ ಪ್ರಕರಣವಾಗಿದೆ.

 


ಸಾಮಾನ್ಯ ಅಧ್ಯಯನ ಪತ್ರಿಕೆ : 3


 

ವಿಷಯಗಳು: ಆರ್ಥಿಕತೆಯ ಮೇಲೆ ಉದಾರೀಕರಣದ ಪರಿಣಾಮ, ಕೈಗಾರಿಕಾ ನೀತಿಯಲ್ಲಿನ ಬದಲಾವಣೆಗಳು ಮತ್ತು ಕೈಗಾರಿಕಾ ಅಭಿವೃದ್ಧಿಯ ಮೇಲೆ ಅವುಗಳ ಪ್ರಭಾವ.

ಆರ್ಡನೆನ್ಸ್ ಫ್ಯಾಕ್ಟರಿ ಬೋರ್ಡ್ ನ ಕಾರ್ಪೊರೇಟೀಕರಣ:


(Corporatization of ordnance factory board)

 

ಸಂದರ್ಭ:

ಆರ್ಡ್‌ನೆನ್ಸ್ ಫ್ಯಾಕ್ಟರಿ ಬೋರ್ಡ್ (ordnance factory board) ಅನ್ನು ಕಾರ್ಪೊರೇಟೀಕರಣ ಅಥವಾ ಸಂಸ್ಥೀಕರಣ ಮಾಡುವ ಯೋಜನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.

 

ಆರ್ಡನೆನ್ಸ್ ಫ್ಯಾಕ್ಟರಿ ಬೋರ್ಡ್ (OFB):

ಇದು ಆರ್ಡನೆನ್ಸ್ ಕಾರ್ಖಾನೆಗಳು ಮತ್ತು ಸಂಬಂಧಿತ ಸಂಸ್ಥೆಗಳಿಗೆ ಒಂದು ನಿಗದಿತ ಮಾನದಂಡವನ್ನು ಹೊಂದಿರುವ ಸಂಸ್ಥೆಯಾಗಿದ್ದು, ಪ್ರಸ್ತುತ ಇದು ರಕ್ಷಣಾ ಸಚಿವಾಲಯದ (Ministry of Defence -MoD) ಅಡಿಯಲ್ಲಿ ಕಾರ್ಯನಿರ್ವಹಿಸುವ ಕಚೇರಿಯಾಗಿದೆ.

 

ಭಾರತದ ಮೊದಲ ಆರ್ಡನೆನ್ಸ್ ಕಾರ್ಖಾನೆಯನ್ನು 1712 ರಲ್ಲಿ ಡಚ್ ಕಂಪನಿಯು ಗನ್‌ಪೌಡರ್ ತಯಾರಿಸುವ ಕಾರ್ಖಾನೆಯ ರೂಪದಲ್ಲಿ ಪಶ್ಚಿಮ ಬಂಗಾಳದಲ್ಲಿ ಸ್ಥಾಪಿಸಿತು.

 

  1. ಯುದ್ಧಸಾಮಗ್ರಿ ಮತ್ತು ಸ್ಫೋಟಕಗಳ ಗುಂಪಿನಂತಹ ವಿವಿಧ ಯುದ್ಧ ಸಾಮಗ್ರಿಗಳನ್ನು ತಯಾರಿಸಲು OFB ಗಳು ಜವಾಬ್ದಾರರಾಗಿರುತ್ತವೆ ಮತ್ತು ವಾಹನಗಳ ಗುಂಪು ರಕ್ಷಣಾ ಚಲನಶೀಲತೆ ಮತ್ತು ಯುದ್ಧ ವಾಹನಗಳ ಉತ್ಪಾದನೆಯಲ್ಲಿ ತೊಡಗುತ್ತದೆ.

 

ಏನು ಬದಲಾಗುತ್ತದೆ?

ಯೋಜನೆಯ ಪ್ರಕಾರ, 41 ಕಂಪನಿಗಳನ್ನು ಹೊಸ ಘಟಕಗಳ ಅಡಿಯಲ್ಲಿ ವರ್ಗೀಕರಿಸಲಾಗುವುದು, ಅದು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ಅಥವಾ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL) ನಂತಹ ಅಸ್ತಿತ್ವದಲ್ಲಿರುವ ಯಾವುದೇ ಸಾರ್ವಜನಿಕ ವಲಯದ (DPSU) ರಕ್ಷಣಾ ಕಂಪನಿಯಂತೆ ಕಾರ್ಯನಿರ್ವಹಿಸುತ್ತದೆ.

 

ಪುನರ್ರಚನೆಗೆ ಕಾರಣವೇನು?

 ಆರ್ಡನೆನ್ಸ್ ಕಾರ್ಖಾನೆಗಳ ಕುರಿತಾದ ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾಲೆಕ್ಕ ಪರಿಶೋಧಕ (Comptroller and Auditor General (CAG) ರವರ ವರದಿಯ ಪ್ರಕಾರ:

  1. ಕಾರ್ಖಾನೆಗಳಲ್ಲಿನ ಉತ್ಪಾದನೆಯು ನಿಗದಿ ಪಡಿಸಿದ ಗುರಿಗಳಿಗಿಂತ ಕಡಿಮೆಯಾಗುತ್ತಲೇ ಇತ್ತು ಮತ್ತು ವಿವಿಧ ಆರ್ಡನೆನ್ಸ್ ಕಾರ್ಖಾನೆಗಳು 2017-18ರಲ್ಲಿ ಯುದ್ಧ ಸಾಮಗ್ರಿಗಳ ಉತ್ಪಾದನೆಯಲ್ಲಿ ಕೇವಲ 49 ಪ್ರತಿಶತದಷ್ಟು ಮಾತ್ರ ಗುರಿ ಸಾಧಿಸಬಲ್ಲವಾಗಿದ್ದವು.
  2. 31 ಮಾರ್ಚ್ 2018 ರ ಹೊತ್ತಿಗೆ ಕೆಲವು ಪ್ರಮುಖ ಮದ್ದುಗುಂಡು ಸಾಮಗ್ರಿಗಳ ಕುರಿತು ಸೈನ್ಯದ ಬೇಡಿಕೆಗೆ ಹೋಲಿಸಿದರೆ ಪೂರೈಕೆಯು ಗಮನಾರ್ಹ ಪ್ರಮಾಣದಲ್ಲಿ ಬಾಕಿ ಉಳಿದಿದೆ, ಅದು ಸೈನ್ಯದ ಮಿಲಿಟರಿ ಕಾರ್ಯಾಚರಣೆಯ ಸಿದ್ಧತೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದಾಗಿದೆ.

ಆದ್ದರಿಂದ, ಉತ್ಪಾದನೆಯಲ್ಲಿನ ಅಸಮರ್ಥತೆ ಮತ್ತು ವಿಳಂಬವು OFB ಯ ಕೂಲಂಕುಷ ಪರೀಕ್ಷೆಯ ಹಿಂದಿನ ಒಂದು ಪ್ರಮುಖ ಕಾರಣವೆಂದು ಪರಿಗಣಿಸಬಹುದು.

 

OFBಗಳ ನವೀನ ರಚನೆ:

  1.  ಆರ್ಡನೆನ್ಸ್ ಕಾರ್ಖಾನೆಗಳ ಪುನರ್ರಚನೆಯ ಉದ್ದೇಶವು, ಅವುಗಳನ್ನು ಉತ್ಪಾದಕ ಮತ್ತು ಲಾಭದಾಯಕ ಸ್ವತ್ತುಗಳಾಗಿ ಪರಿವರ್ತಿಸುವುದಾಗಿದೆ, ಉತ್ಪನ್ನ ಶ್ರೇಣಿಯಲ್ಲಿ ಅವುಗಳ ವಿಶೇಷತೆಯನ್ನು ಹೆಚ್ಚಿಸುವುದು, ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವುದು ಮತ್ತು ಗುಣಮಟ್ಟ ಮತ್ತು ವೆಚ್ಚ-ದಕ್ಷತೆಯನ್ನು ಸುಧಾರಿಸುವುದಾಗಿದೆ.
  2.  ಅಸಮರ್ಪಕ ಪೂರೈಕೆ ಸರಪಳಿಗಳನ್ನು ತೆಗೆದುಹಾಕುವ ಮೂಲಕ ಅಸ್ತಿತ್ವದಲ್ಲಿರುವ OFBಯ ವ್ಯವಸ್ಥೆಯಲ್ಲಿನ ಹಲವಾರು ನ್ಯೂನತೆಗಳನ್ನು ನಿವಾರಿಸಲು ಪುನರ್ರಚನೆಯು ಸಹಾಯ ಮಾಡುತ್ತದೆ ಮತ್ತು ಈ ಕಂಪನಿಗಳಿಗೆ ಸ್ಪರ್ಧಾತ್ಮಕವಾಗಲು ಮತ್ತು ಮಾರುಕಟ್ಟೆಯಲ್ಲಿ ಹೊಸ ಅವಕಾಶಗಳನ್ನು ಅನ್ವೇಷಿಸಲು ಪ್ರೋತ್ಸಾಹವನ್ನು ನೀಡುತ್ತದೆ.
  3. ಇದು ಈ ಕಂಪನಿಗಳ ಸ್ವಾಯತ್ತತೆಯನ್ನು ಅನುಮತಿಸುತ್ತದೆ ಮತ್ತು ಹೊಣೆಗಾರಿಕೆ ಮತ್ತು ದಕ್ಷತೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.

 

ಸಾಂಸ್ಥಿಕೀಕರಣದ ಕಳವಳಗಳು / ನ್ಯೂನತೆಗಳು:

  1. ಸಾಂಸ್ಥಿಕೀಕರಣವು ಅಂತಿಮವಾಗಿ ಖಾಸಗೀಕರಣಕ್ಕೆ ಕಾರಣವಾಗುತ್ತದೆ.
  2. ಹೊಸ ಕಾರ್ಪೊರೇಟ್ ಘಟಕಗಳು ಅಸ್ಥಿರ ಬೇಡಿಕೆ ಮತ್ತು ಪೂರೈಕೆ ಡೈನಾಮಿಕ್ಸ್ ಹೊಂದಿರುವ ರಕ್ಷಣಾ ಕ್ಷೇತ್ರದ ಉತ್ಪನ್ನಗಳ ವಿಶಿಷ್ಟ ಮಾರುಕಟ್ಟೆ ವಾತಾವರಣವನ್ನು ಉಳಿಸಿಕೊಳ್ಳಲು ಸಾಧ್ಯವಾಗುವುದಿಲ್ಲ.
  3. OFB ಗಳ ಪುನರ್ರಚನೆಯು ಅವುಗಳಿಗೆ ಹೆಚ್ಚಿನ ಸ್ವಾಯತ್ತತೆ ನೀಡುತ್ತದೆ ಮತ್ತು ಅವುಗಳ ಮೇಲೆ ಸರ್ಕಾರದ ನಿಯಂತ್ರಣದ ಕಡಿತಕ್ಕೂ ಕಾರಣವಾಗುತ್ತದೆ ಆದರೆ ಇಲ್ಲಿ ಉದ್ಯೋಗ ನಷ್ಟದ ಭೀತಿ ಇದೆ.

 

ವಿಷಯಗಳು: ಸಂರಕ್ಷಣೆ, ಪರಿಸರ ಮಾಲಿನ್ಯ ಮತ್ತು ಅವನತಿ, ಪರಿಸರ ಪ್ರಭಾವದ ಮೌಲ್ಯಮಾಪನ.

ಮಕ್ಕಳು ಮತ್ತು ಡಿಜಿಟಲ್ ಡಂಪ್‌ಸೈಟ್‌ಗಳ ವರದಿ:


(Children and Digital Dumpsites report)

ಸಂದರ್ಭ:

ಇತ್ತೀಚಿಗೆ ವಿಶ್ವ ಆರೋಗ್ಯ ಸಂಸ್ಥೆಯು ಮಕ್ಕಳು ಮತ್ತು ಡಿಜಿಟಲ್ ಡಂಪ್‌ಸೈಟ್‌ಗಳು (Children and Digital Dumpsites) ಎಂಬ ಶೀರ್ಷಿಕೆಯ ಹೊಸ ವರದಿಯನ್ನು ಬಿಡುಗಡೆ ಮಾಡಿದೆ.

 

ಪ್ರಮುಖ ಆವಿಷ್ಕಾರಗಳು:

ಕಡಿಮೆ ಮತ್ತು ಮಧ್ಯಮ-ಆದಾಯದ ದೇಶಗಳಲ್ಲಿ ಇ-ತ್ಯಾಜ್ಯ ಡಂಪ್‌ಸೈಟ್‌ಗಳಲ್ಲಿ ಕೆಲಸ ಮಾಡುತ್ತಿರುವ 18 ದಶಲಕ್ಷಕ್ಕೂ ಹೆಚ್ಚು ಮಕ್ಕಳು ಮತ್ತು ಹದಿಹರೆಯದವರು ತೀವ್ರ ಆರೋಗ್ಯದ ಅಪಾಯವನ್ನು ಎದುರಿಸುತ್ತಿದ್ದಾರೆ.

ಹೆಚ್ಚಿನ ಆದಾಯದ ದೇಶಗಳು ಉಪಯೋಗಿಸಿ ಎಸೆದ ಎಲೆಕ್ಟ್ರಾನಿಕ್ ಸಾಧನಗಳು ಅಥವಾ ಇ-ತ್ಯಾಜ್ಯಗಳಿಂದಾಗಿ ಮಕ್ಕಳು ಅಪಾಯವನ್ನು ಎದುರಿಸುತ್ತಿದ್ದಾರೆ.

 

ಕಾಳಜಿಯ ವಿಷಯವೇನು?

ಇ-ತ್ಯಾಜ್ಯವು 1,000 ಕ್ಕೂ ಹೆಚ್ಚು ಅಮೂಲ್ಯ ಲೋಹಗಳನ್ನು ಮತ್ತು ಚಿನ್ನ, ತಾಮ್ರ, ಪಾದರಸ ಮತ್ತು ಪಾಲಿಸಿಕ್ಲಿಕ್ ಆರೊಮ್ಯಾಟಿಕ್ ಹೈಡ್ರೋಕಾರ್ಬನ್‌ಗಳಂತಹ ಇತರ ವಸ್ತುಗಳನ್ನು ಒಳಗೊಂಡಿದೆ.

  1. ಸಂಸ್ಕರಣೆಯನ್ನು ಸರಿಯಾದ ಸುರಕ್ಷತಾ ನಿಯಂತ್ರಣವನ್ನು ಹೊಂದಿಲ್ಲದ ಕಡಿಮೆ-ಆದಾಯದ ದೇಶಗಳಲ್ಲಿ ಮಾಡಲಾಗುತ್ತದೆ, ಮತ್ತು ಇದು ಸಂಸ್ಕರಣ ಪ್ರಕ್ರಿಯೆಯನ್ನು ಇನ್ನಷ್ಟು ಅಪಾಯಕಾರಿಯನ್ನಾಗಿ ಮಾಡುತ್ತದೆ.
  2. ಸಣ್ಣ ಮತ್ತು ಕೌಶಲ್ಯಪೂರ್ಣ ಕೈಗಳಿಂದಾಗಿ ಮಕ್ಕಳಿಗೆ ಈ ಡಂಪ್‌ಸೈಟ್‌ಗಳಲ್ಲಿ ವಿಶೇಷವಾಗಿ ಆದ್ಯತೆ ನೀಡಲಾಗುತ್ತದೆ.
  3. ಮಗುವಿನ ನಿರೀಕ್ಷೆಯಲ್ಲಿರುವ ತಾಯಂದಿರು ಸೇರಿದಂತೆ ಹಲವಾರು ಮಹಿಳೆಯರು ಸಹ ಅಲ್ಲಿ ಕೆಲಸ ಮಾಡುತ್ತಾರೆ. ಇ-ತ್ಯಾಜ್ಯವನ್ನು ಸಂಸ್ಕರಿಸುವುದರಿಂದ ಅವರ ಮತ್ತು ಅವರ ಮಕ್ಕಳು ಈ ವಿಷಕಾರಿ ಲೋಹಗಳಿಗೆ ಒಡ್ಡಿಕೊಳ್ಳುತ್ತಾರೆ, ಇದು ಅವಧಿಪೂರ್ವ ಜನನ ಮತ್ತು ಹೆರಿಗೆಗೆ ಕಾರಣವಾಗಬಹುದು.
  4. ಅಂತಹ ಅಪಾಯಕಾರಿ ಸೈಟ್‌ಗಳಲ್ಲಿ ಕೆಲಸ ಮಾಡುವ ಪರಿಣಾಮವನ್ನು ಕುಟುಂಬಗಳು ಮತ್ತು ಇ-ತ್ಯಾಜ್ಯ ಡಂಪ್‌ಸೈಟ್‌ಗಳ ಸುತ್ತಮುತ್ತಲಿನ ಸಮುದಾಯಗಳು ಸಹ ಅನುಭವಿಸುತ್ತವೆ.

 

ಪ್ರಪಂಚದಾದ್ಯಂತ ಉತ್ಪತ್ತಿಯಾಗುವ ಇ-ತ್ಯಾಜ್ಯದ ಪ್ರಮಾಣ:

 ಉತ್ಪತ್ತಿಯಾಗುವ ಇ-ತ್ಯಾಜ್ಯದ ಪ್ರಮಾಣವು ಜಗತ್ತಿನಾದ್ಯಂತ ವೇಗವಾಗಿ ಹೆಚ್ಚಾಗುತ್ತಿದೆ. 2019 ರಲ್ಲಿ ಸುಮಾರು 53.6 ದಶಲಕ್ಷ ಟನ್ ಇ-ತ್ಯಾಜ್ಯ ಉತ್ಪತ್ತಿಯಾಗಿದೆ.

ಈ ಇ-ತ್ಯಾಜ್ಯದ ಶೇಕಡಾ 17.4 ರಷ್ಟು ಪ್ರಮಾಣ ಮಾತ್ರ  ಔಪಚಾರಿಕ ಮರುಬಳಕೆ ಸೌಲಭ್ಯ ಕೇಂದ್ರಗಳಲ್ಲಿ ಸಂಸ್ಕರಿಸಲ್ಪಡುತ್ತದೆ. ಅದರ ಉಳಿದ ಭಾಗವನ್ನು ಅನೌಪಚಾರಿಕ ಕೌಶಲ್ಯ ರಹಿತ ಕೆಲಸಗಾರರಿಂದ ಅಕ್ರಮ ಸಂಸ್ಕರಣೆಗಾಗಿ ಕಡಿಮೆ ಅಥವಾ ಮಧ್ಯಮ-ಆದಾಯದ ದೇಶಗಳಲ್ಲಿ ಸುರಿಯಲಾಗುತ್ತದೆ.

ಸ್ಮಾರ್ಟ್ಫೋನ್ ಮತ್ತು ಕಂಪ್ಯೂಟರ್ಗಳ ಸಂಖ್ಯೆಯಲ್ಲಿನ ಹೆಚ್ಚಳದಿಂದಾಗಿ ಮುಂಬರುವ ವರ್ಷಗಳಲ್ಲಿ ಇ-ತ್ಯಾಜ್ಯದ ಪ್ರಮಾಣವು ಇನ್ನಷ್ಟು ಹೆಚ್ಚಾಗುವ ಸಾಧ್ಯತೆಯಿದೆ.

 

ನಿಜವಾಗಿ ಇ-ತ್ಯಾಜ್ಯ ಎಂದರೇನು?

ಎಲೆಕ್ಟ್ರಾನಿಕ್-ತ್ಯಾಜ್ಯಕ್ಕೆ ಇ-ತ್ಯಾಜ್ಯ (E-Waste) ಎಂದು ಚಿಕ್ಕದಾಗಿ ಹೇಳಲಾಗುತ್ತದೆ ಮತ್ತು  ಇ-ತ್ಯಾಜ್ಯ ಎಂಬ ಪದವನ್ನು ಹಳೆಯ, ಪೂರ್ಣವಾಗಿ ಬಳಸಿದ ಅಥವಾ ಬಳಸಿ ಎಸೆಯಲ್ಪಟ್ಟ ಎಲೆಕ್ಟ್ರಾನಿಕ್ ಉಪಕರಣಗಳನ್ನು ವಿವರಿಸಲು ಬಳಸಲಾಗುತ್ತದೆ. ಇದರಲ್ಲಿ ಅವುಗಳ ಘಟಕಗಳು, ಭಾಗಗಳು ಉಪಭೋಗ್ಯ ವಸ್ತುಗಳು ಮತ್ತು ಬಿಡಿಭಾಗಗಳನ್ನು ಒಳಗೊಂಡಿವೆ.

 

ಭಾರತದಲ್ಲಿ ಇ-ತ್ಯಾಜ್ಯ ನಿರ್ವಹಣೆ:

ಭಾರತದಲ್ಲಿ,ಇ-ತ್ಯಾಜ್ಯವನ್ನು ನಿರ್ವಹಿಸುವ ಕಾನೂನುಗಳು 2011 ರಿಂದ ಜಾರಿಯಲ್ಲಿವೆ,  ಇ-ತ್ಯಾಜ್ಯವನ್ನು ಅಧಿಕೃತವಾಗಿ ವಿಭಜಿಸುವ / ಸಂಸ್ಕರಿಸುವವರು (dismantlers) ಮತ್ತು ಮರುಬಳಕೆದಾರರು ಮಾತ್ರ ಇ-ತ್ಯಾಜ್ಯವನ್ನು ಸಂಗ್ರಹಿಸಬೇಕೆಂದು ನಿಯಮವಿದೆ. ಇ-ತ್ಯಾಜ್ಯ (ನಿರ್ವಹಣೆ) ನಿಯಮಗಳು, 2016 (E-waste (Management) Rules, 2016) ಅನ್ನು 2017 ರಲ್ಲಿ ಜಾರಿಗೆ ತರಲಾಯಿತು.

 

ಭಾರತದಲ್ಲಿ ಇ-ತ್ಯಾಜ್ಯ ಉತ್ಪಾದನೆ:

ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (Central Pollution Control Board -CPCB) ಪ್ರಕಾರ, ಭಾರತವು 2019-20ರಲ್ಲಿ 10 ಲಕ್ಷ ಟನ್‌ಗಿಂತ ಹೆಚ್ಚು ಇ-ತ್ಯಾಜ್ಯವನ್ನು ಉತ್ಪಾದಿಸಿದೆ, ಇದು 2017-18ರಲ್ಲಿದ್ದ 7 ಲಕ್ಷ ಟನ್‌ಗಳಿಂದ ಹೆಚ್ಚಾಗಿದೆ. ಇದರ ವಿರುದ್ಧ, 2017-18 ರಿಂದ  ಇ-ತ್ಯಾಜ್ಯವನ್ನು ಸಂಸ್ಕರಿಸುವ ಸಾಮರ್ಥ್ಯವನ್ನು 7.82 ಲಕ್ಷ ಟನ್‌ಗಳಿಂದ ಹೆಚ್ಚಿಸಲಾಗಿಲ್ಲ.

 

ಚಂಡಮಾರುತದ ಬಿರುಗಾಳಿಗೆ ತಡೆ: ತನ್ನ ಕರಾವಳಿಯಲ್ಲಿ ಮ್ಯಾಂಗ್ರೋವ್‌ಗಳನ್ನು ಬೆಳೆಸಲು ಯೋಜಿಸಿದ ಒಡಿಶಾ:

(Barrier to cyclone storms: Odisha plans to plant mangroves along its coast)

ಸಂದರ್ಭ:

ಕರಾವಳಿ ತೀರದಲ್ಲಿ ಮ್ಯಾಂಗ್ರೋವ್ ಮತ್ತು ಕ್ಯಾಸುಆರಿನಾಸ್ ತೋಟ(casuarinas plantation)ವನ್ನು ಬೆಳೆಸಲು ಒಡಿಶಾ ಸರ್ಕಾರ ಪ್ರಸ್ತಾಪಿಸಿದೆ.

ಇತ್ತೀಚಿಗೆ ಉಂಟಾದ, ಯಾಸ್ ಚಂಡಮಾರುತದ ಸಮಯದಲ್ಲಿ ಭಿತರ್ ಕನಿಕಾ ರಾಷ್ಟ್ರೀಯ ಉದ್ಯಾನವನ್ನು ಚಂಡಮಾರುತದ ಗಾಳಿಗೆ ತುತ್ತಾಗದಂತೆ ಮ್ಯಾಂಗ್ರೋವ್ಗಳು ನೈಸರ್ಗಿಕ ತಡೆಗೋಡೆಯಾಗಿ ಕಾರ್ಯನಿರ್ವಹಿಸಿದ್ದವು.

 

ಹಿನ್ನೆಲೆ:

ಒಡಿಶಾ ತನ್ನ ವಿಶಿಷ್ಟ ಭೂ-ಹವಾಮಾನ ಪರಿಸ್ಥಿತಿಯಿಂದಾಗಿ ಚಂಡಮಾರುತ, ಪ್ರವಾಹ, ಆಲಿಕಲ್ಲು ಮಳೆ, ಬರಗಾಲದಂತಹ ವಿವಿಧ ನೈಸರ್ಗಿಕ ವಿಕೋಪಗಳಿಗೆ ಒಳಗಾಗುತ್ತದೆ.

ಮ್ಯಾಂಗ್ರೋವ್ಸ್(ಉಬ್ಬರವಿಳಿತ) ಅರಣ್ಯಗಳು ಎಂದರೇನು?

ಮ್ಯಾಂಗ್ರೋವ್‌ಗಳು ವಿಶ್ವಾದ್ಯಂತ ಉಷ್ಣವಲಯ ಮತ್ತು ಉಪೋಷ್ಣವಲಯಗಳಲ್ಲಿ ಕಂಡುಬರುತ್ತವೆ, ಮುಖ್ಯವಾಗಿ 30 ° ಉತ್ತರ ಮತ್ತು 30 ° ದಕ್ಷಿಣ ಅಕ್ಷಾಂಶಗಳ ನಡುವೆ, ಕಂಡುಬರುತ್ತವೆ. ಸಮಭಾಜಕ ವೃತ್ತದ 5° ವಲಯದಲ್ಲಿ ಮ್ಯಾಂಗ್ರೋವ್ ಗಳು ದೊಡ್ಡ ಪ್ರಮಾಣದಲ್ಲಿ ಕಂಡುಬರುತ್ತವೆ.

  1. ಮ್ಯಾಂಗ್ರೋವ್ ಒಂದು ಪೊದೆಸಸ್ಯ ಅಥವಾ ಸಣ್ಣ ಮರವಾಗಿದ್ದು ಅದು ಕರಾವಳಿಯ ಲವಣಯುಕ್ತ ಅಥವಾ ಉಪ್ಪುನೀರಿನಲ್ಲಿ ಬೆಳೆಯುತ್ತದೆ.
  2. ಮ್ಯಾಂಗ್ರೋವ್‌ಗಳು ಉಪ್ಪು-ಸಹಿಷ್ಣು ಮರಗಳು, ಅವುಗಳನ್ನು ಹ್ಯಾಲೊಫೈಟ್‌ಗಳು(halophytes) ಎಂದೂ ಕರೆಯುತ್ತಾರೆ ಮತ್ತು ಅವು ಕಠಿಣ ಕರಾವಳಿ ಪರಿಸ್ಥಿತಿಗಳಲ್ಲಿ ಜೀವಿಸಲು ಹೊಂದಿಕೊಂಡಿವೆ.
  3. ಮ್ಯಾಂಗ್ರೋವ್‌ಗಳು ಉಪ್ಪುನೀರಿನ ಮುಳುಗಿಸುವಿಕೆ ಮತ್ತು ತರಂಗ ಕ್ರಿಯೆಯನ್ನು ನಿಭಾಯಿಸಲು ಸಂಕೀರ್ಣ ಉಪ್ಪು ಶೋಧನೆ ವ್ಯವಸ್ಥೆಯನ್ನು ಹೊಂದಿವೆ ಮತ್ತು ಸಂಕೀರ್ಣ ಮೂಲ ವ್ಯವಸ್ಥೆಯನ್ನು ಒಳಗೊಂಡಿರುತ್ತವೆ.
  4. ಮ್ಯಾಂಗ್ರೋವ್‌ಗಳು ಕುರುಡು ಬೇರುಗಳನ್ನು ಹೊಂದಿದ್ದು, ಆ ಮೂಲಕ ಈ ಬೇರುಗಳು ಆಮ್ಲಜನಕರಹಿತ ಮಣ್ಣಿನಲ್ಲಿ ಉಸಿರಾಡಲು ಈ ಮರಗಳಿಗೆ ಸಹಾಯ ಮಾಡುತ್ತವೆ.
  5. ಮ್ಯಾಂಗ್ರೋವ್ ಅರಣ್ಯದ ಮರಗಳ ಬೀಜಗಳು ಕೆಳಗೆ ಬೀಳುವ ಮೊದಲು ಮರಗಳಲ್ಲಿಯೇ ಮೊಳಕೆಯೊಡೆಯುತ್ತವೆ – ಇದನ್ನು ವಿವಿಪಾರಿಟಿ ಮೋಡ್ ಆಫ್ (Viviparity mode of reproduction) ರಿಪ್ರೊಡಕ್ಷನ್ (ಸಂತಾನೋತ್ಪತ್ತಿ) ಎಂದು ಕರೆಯಲಾಗುತ್ತದೆ.

 

ಮ್ಯಾಂಗ್ರೋವ್‌ಗಳ ಪ್ರಾಮುಖ್ಯತೆ:

  1. ಮ್ಯಾಂಗ್ರೋವ್ ಮರಗಳ ಬೇರುಗಳು ನೀರಿನ ಹರಿವನ್ನು ತಡೆಯಲು ಸಹಾಯ ಮಾಡುತ್ತದೆ ಮತ್ತು ಆ ಮೂಲಕ ಕೆಸರಿನ ಶೇಖರಣೆಯನ್ನು ಹೆಚ್ಚಿಸುತ್ತವೆ (ಇದು ಈಗಾಗಲೇ ಸಂಭವಿಸುತ್ತಿದೆ), ಕರಾವಳಿ ತೀರಗಳನ್ನು ಸ್ಥಿರಗೊಳಿಸುತ್ತದೆ, ಮೀನುಗಳಿಗೆ ಸಂತಾನೋತ್ಪತ್ತಿ ಮಾಡುವ ಸ್ಥಳವನ್ನು ಒದಗಿಸುತ್ತದೆ.
  2. ಮ್ಯಾಂಗ್ರೋವ್‌ಗಳು ಮುಂಗಾರು ಉಬ್ಬರವಿಳಿತದ ಪ್ರವಾಹವನ್ನು ತಗ್ಗಿಸುತ್ತವೆ ಮತ್ತು ಕರಾವಳಿ ತಗ್ಗು ಪ್ರದೇಶದ ಒಳಹರಿವನ್ನು ಕಡಿಮೆ ಮಾಡುತ್ತವೆ.
  3. ಅವು ಕರಾವಳಿ ತೀರದ ಮಣ್ಣಿನ ಸವೆತವನ್ನು ತಡೆಯುತ್ತವೆ.
  4. ಮ್ಯಾಂಗ್ರೋವ್‌ಗಳು ಕರಾವಳಿ ಭೂಮಿಯನ್ನು ಸುನಾಮಿ, ಚಂಡಮಾರುತ ಮತ್ತು ಸಾಗರ ಪ್ರವಾಹದಿಂದ ರಕ್ಷಿಸುತ್ತವೆ.
  5. ಮ್ಯಾಂಗ್ರೋವ್‌ಗಳು ಪೋಷಕಾಂಶಗಳ ನೈಸರ್ಗಿಕ ಮರುಬಳಕೆಯನ್ನು ಹೆಚ್ಚಿಸುತ್ತವೆ.
  6. ಮ್ಯಾಂಗ್ರೋವ್‌ಗಳು ಹಲವಾರು ಸಸ್ಯಗಳು, ಪ್ರಾಣಿಸಂಕುಲ ಮತ್ತು ವನ್ಯಜೀವಿಗಳನ್ನು ಬೆಂಬಲಿಸುತ್ತದೆ.
  7. ಮ್ಯಾಂಗ್ರೋವ್‌ಗಳು ಹಲವಾರು ಪ್ರಭೇದದ ಮೀನುಗಳ ಸಂತಾನೋತ್ಪತ್ತಿಗೆ, ಮೊಟ್ಟೆಯಿಡಲು, ಪಾಲನೆಗಾಗಿ ಸುರಕ್ಷಿತ ಮತ್ತು ಅನುಕೂಲಕರ ವಾತಾವರಣವನ್ನು ಒದಗಿಸುತ್ತವೆ.
  8. ಅವರು ಸ್ಥಳೀಯ ಜನರಿಗೆ ಕಟ್ಟಿಗೆ, ಉರುವಲು ಕಟ್ಟಿಗೆ, ಔಷಧೀಯ ಸಸ್ಯಗಳು ಮತ್ತು ಖಾದ್ಯ ಸಸ್ಯಗಳನ್ನು ಪೂರೈಸುತ್ತವೆ.
  9. ಮ್ಯಾಂಗ್ರೋವ್‌ಗಳು ಸ್ಥಳೀಯ ಸಮುದಾಯಗಳಿಗೆ ಹಲವಾರು ಉದ್ಯೋಗಾವಕಾಶಗಳನ್ನು ಒದಗಿಸುತ್ತವೆ ಮತ್ತು ಅವರ ಜೀವನೋಪಾಯಕ್ಕೆ ಹೊಸ ಅವಕಾಶಗಳನ್ನು ಹೆಚ್ಚಿಸುತ್ತವೆ.
  10. ಅವುಗಳು ಜೈವಿಕ ಪರಿಸರ ಸಮತೋಲನವನ್ನು ಕಾಪಾಡುತ್ತವೆ. ಹೀಗೆ ಮ್ಯಾಂಗ್ರೋವ್‌ (ಉಬ್ಬರವಿಳಿತ) ಅರಣ್ಯಗಳು ಜನಜೀವನ ಹಾಗೂ ಮಾನವನ ಚಟುವಟಿಕೆಗಳ ಮೇಲೆ ಮಹತ್ವದ ಪ್ರಭಾವವನ್ನು ಬೀರುತ್ತವೆ.

 

ಹೆಚ್ಚಿನ ಮಾಹಿತಿ:

ವಿಶ್ವ ಪರಿಸರ ದಿನಾಚರಣೆಯಂದು, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಮುಂದಿನ ದಿನಗಳಲ್ಲಿ ಸುಂದರ್‌ಬನ್‌ಗಳಲ್ಲಿ 50 ದಶಲಕ್ಷ ಮ್ಯಾಂಗ್ರೋವ್‌ ಮರಗಳನ್ನು ನೆಡುವುದಾಗಿ ಘೋಷಿಸಿದರು.

  1. ಈ ಮೆಗಾ ಮ್ಯಾಂಗ್ರೋವ್ ಪ್ಲಾಂಟೇಶನ್ ಡ್ರೈವ್ ಅನ್ನು ಮುಖ್ಯವಾಗಿ ಆಂಫಾನ್ ಚಂಡಮಾರುತದ ಸಮಯದಲ್ಲಿ ಉಂಟಾದ ಮ್ಯಾಂಗ್ರೋವ್ ಸಸ್ಯಗಳ ನಾಶವನ್ನು ಸರಿದೂಗಿಸಲು ಕೈಗೊಳ್ಳಲಾಗಿದೆ.

 


ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:


 ವೈದ್ಯಕೀಯ ಸಾಧನಗಳ ಭಾರತೀಯ ಪ್ರಮಾಣೀಕರಣ (ICMED) ಪ್ಲಸ್ ಯೋಜನೆ:

(Indian Certification of Medical Devices (ICMED) Plus Scheme)

 ಇದನ್ನು ಕ್ವಾಲಿಟಿ ಕೌನ್ಸಿಲ್ ಆಫ್ ಇಂಡಿಯಾ (Quality Council of India -QCI) ಪ್ರಾರಂಭಿಸಿದೆ.

  1. ಇದು ICMEDಯ ನವೀಕರಿಸಿದ ಯೋಜನೆಯಾಗಿದ್ದು, ಇದನ್ನು ವೈದ್ಯಕೀಯ ಸಾಧನಗಳ ಪ್ರಮಾಣೀಕರಣಕ್ಕಾಗಿ 2016 ರಲ್ಲಿ ಪ್ರಾರಂಭಿಸಲಾಯಿತು.
  2. ಹೊಸ ಯೋಜನೆಗೆ ICMED 13485 ಪ್ಲಸ್, ಎಂದು ನಾಮಕರಣ ಮಾಡಲಾಗಿದೆ,ಇದು ವೈದ್ಯಕೀಯ ಸಾಧನಗಳ ಗುಣಮಟ್ಟ, ಸುರಕ್ಷತೆ ಮತ್ತು ಪರಿಣಾಮಕಾರಿತ್ವದ ಪರಿಶೀಲನೆಯನ್ನು ಕೈಗೊಳ್ಳುತ್ತದೆ.

 ಏಡೆನ್ ಖಾರಿ:

(Gulf Of Aden)

 ಭಾರತೀಯ ನೌಕಾಪಡೆ ಮತ್ತು – ಯುರೋಪಿಯನ್ ಒಕ್ಕೂಟದ ನೌಕಾಪಡೆಯ ನಡುವಿನ ಪ್ರಥಮ (EUNAVFOR) ನೌಕಾ ಸಮರಾಭ್ಯಾಸವನ್ನು ಗಲ್ಫ್ ಆಫ್ ಏಡೆನ್‌ನಲ್ಲಿ ನಡೆಸಲಾಯಿತು.

  1. ಗಲ್ಫ್ ಆಫ್ ಬೆರ್ಬೆರಾ ಎಂದೂ ಕರೆಯಲ್ಪಡುವ ಗಲ್ಫ್ ಆಫ್ ಏಡೆನ್, ನ ಉತ್ತರಕ್ಕೆ ಯೆಮೆನ್, ಪೂರ್ವಕ್ಕೆ ಅರೇಬಿಯನ್ ಸಮುದ್ರ, ಪಶ್ಚಿಮಕ್ಕೆ ಜಿಬೌಟಿ, ಮತ್ತು ದಕ್ಷಿಣಕ್ಕೆ ಇರುವ ಗಾರ್ಡಫುಯಿ ಚಾನೆಲ್, ಸೊಕೊತ್ರಾ (ಯೆಮೆನ್) ಸೊಮಾಲಿಯಾ ಗಳ ನಡುವಿನ ಆಳವಾದ ನೀರಿನ (deep water gulf) ಕೊಲ್ಲಿಯಾಗಿದೆ.
  2. ವಾಯುವ್ಯದಲ್ಲಿ, ಇದು ಬಾಬ್-ಎಲ್-ಮಾಂಡೆಬ್ ಜಲಸಂಧಿಯ ಮೂಲಕ ಕೆಂಪು ಸಮುದ್ರದೊಂದಿಗೆ ಸಂಪರ್ಕಿಸುತ್ತದೆ ಮತ್ತು ಇದು ಪೂರ್ವಕ್ಕೆ ಅರೇಬಿಯನ್ ಸಮುದ್ರವನ್ನುಸಂಪರ್ಕಿಸುತ್ತದೆ. ಪಶ್ಚಿಮಕ್ಕೆ, ಇದು ಜಿಬೌಟಿಯ ತಡ್ಜೌರಾ ಕೊಲ್ಲಿಯಲ್ಲಿ (Gulf of Tadjoura in Djibouti) ಸಂಕುಚಿತಗೊಂಡಿದೆ.

ಇಂಟಿಗ್ರೇಟೆಡ್ ಥಿಯೇಟರ್ ಕಮಾಂಡ್:

(Integrated Theatre Command)

 ಇಂಟಿಗ್ರೇಟೆಡ್ ಥಿಯೇಟರ್ ಕಮಾಂಡ್, ಇದು ಒಂದೇ ಕಮಾಂಡರ್ ಅಡಿಯಲ್ಲಿ, ಕಾರ್ಯತಂತ್ರದ ಮತ್ತು ಭದ್ರತಾ ಕಾಳಜಿಯನ್ನು ಹೊಂದಿರುವ ಭೌಗೋಳಿಕ ಪ್ರದೇಶಗಳಿಗೆ  ಮೂರು ಸೇವೆಗಳ ಏಕೀಕೃತ ಕಮಾಂಡ್ ಅನ್ನು ರಚಿಸುತ್ತದೆ.

  1. ಅಂತಹ ಪಡೆಯ ಕಮಾಂಡರ್ ಎಲ್ಲಾ ಸಂಪನ್ಮೂಲಗಳನ್ನು ತನ್ನ ಇತ್ಯರ್ಥಕ್ಕೆ ಅನುಗುಣವಾಗಿ – ಸೈನ್ಯ, ಭಾರತೀಯ ವಾಯುಪಡೆ ಮತ್ತು ನೌಕಾಪಡೆಯಿಂದ – ತಡೆರಹಿತ ಪರಿಣಾಮಕಾರಿತ್ವದೊಂದಿಗೆ ಹೊರಲು ಸಾಧ್ಯವಾಗುತ್ತದೆ.
  2. ಇಂಟಿಗ್ರೇಟೆಡ್ ಥಿಯೇಟರ್ ಕಮಾಂಡರ್ ಪ್ರತಿಯೊಂದು ಸೇವಾ(ಭೂ- ನೌಕಾಪಡೆ ಮತ್ತು ವಾಯು)ಪಡೆಗಳಿಗೆ ಉತ್ತರದಾಯಿಯಲ್ಲ ಅಥವಾ ಜವಾಬ್ದಾರನಾಗಿರುವುದಿಲ್ಲ.
  3. ಮೂರು ಪಡೆಗಳ ಏಕೀಕರಣ ಮತ್ತು ಸಂಯೋಜನೆಯು ಅನವಶ್ಯಕವಾಗಿ ಸಂಪನ್ಮೂಲಗಳು ಪೋಲಾಗುವುದನ್ನು ತಪ್ಪಿಸುತ್ತದೆ. ಪ್ರತಿ ಸೇವಾ ಪಡೆಯ ಅಡಿಯಲ್ಲಿ ಲಭ್ಯವಿರುವ ಸಂಪನ್ಮೂಲಗಳು ಇತರ ಸೇವೆಗಳಿಗೂ ಲಭ್ಯವಿರುತ್ತವೆ.
  4. ಚೀನಾ ಗಡಿಗೆ ಉತ್ತರ ಕಮಾಂಡ್, ಪಾಕಿಸ್ತಾನ ಗಡಿಗೆ ಪಶ್ಚಿಮ ಕಮಾಂಡ್, ಮತ್ತು ಕಡಲ ರಕ್ಷಣೆಗಾಗಿ ದಕ್ಷಿಣ ಕಮಾಂಡ್ – ಎಂಬ 3 ಇಂಟಿಗ್ರೇಟೆಡ್ ಥಿಯೇಟರ್ ಕಮಾಂಡ್ ಗಳನ್ನು ರಚಿಸಲು ಶೆಕಾಟ್ಕರ್ ಸಮಿತಿಯು ಶಿಫಾರಸು ಮಾಡಿದೆ.

 ಸುದ್ದಿಯಲ್ಲಿರಲು ಕಾರಣ?

ಇತ್ತೀಚಿಗೆ, ಇಂಟಿಗ್ರೇಟೆಡ್ ಟ್ರೈಸರ್ವಿಸ್ ಥಿಯೇಟರ್ ಕಮಾಂಡ್ ಗಳ ರಚನೆ ಕುರಿತು ವ್ಯಾಪಕ ಸಮಾಲೋಚನೆಗಾಗಿ ಎಲ್ಲ ಮೂರೂಪಡೆಗಳ ಪ್ರತಿನಿಧಿಗಳು ಮತ್ತು ಸಂಬಂಧಪಟ್ಟ ಸಚಿವಾಲಯಗಳನ್ನು ಒಳಗೊಂಡ ಉನ್ನತ ಮಟ್ಟದ ಸಮಿತಿಯನ್ನು ರಚಿಸಲಾಗಿದೆ.

 


  • Join our Official Telegram Channel HERE for Motivation and Fast Updates
  • Subscribe to our YouTube Channel HERE to watch Motivational and New analysis videos

[ad_2]

Leave a Comment