[ad_1]
CLICK HERE TO SUBSCRIBE
Course Starts from 24th June 2022
Fee: 29500/- incl. taxes
CLICK HERE TO DONWLOAD THE TIMETABLE
Orientation Session on 1st June 2022 at 4pm
Register Here for the Orientation Session
ಐಎಎಸ್ ಅಧಿಕಾರಿಯಾಗುವ ನಿಮ್ಮ ಐಚ್ಛಿಕ ವಿಷಯ ತಯಾರಿಯು ಅತ್ಯಂತ ಪ್ರಮುಖವಾದ ಹಂತ. ಪರೀಕ್ಷೆಯ ಬೇಡಿಕೆಗೆ ಅನುಗುಣವಾಗಿ ನಿಮ್ಮ ತಯಾರಿ ಇದ್ದಲ್ಲಿ ಮಾತ್ರ ಅತ್ಯುತ್ತಮ ಅಂಕಗಳನ್ನು ಪಡೆದು ತೇರ್ಗಡೆಯಾಗಿ ದೇಶ ಸೇವೆ ಮಾಡಲು ಸಾಧ್ಯ. ಹಾಗಾಗಿ, 10 ಕ್ಕೂ ಹೆಚ್ಚು ಬಾರಿ ಮುಖ್ಯ ಪರೀಕ್ಷೆ ಬರೆದ ಅನುಭವವುಳ್ಳ ಅಧ್ಯಾಪಕರಿಂದ ನಿಮಗೆ ತಯಾರಿಯ ನಿಟ್ಟಿನಲ್ಲಿ ಸಾಕಷ್ಟು ಉಪಯುಕ್ತ ಮಾಹಿತಿ, ಮಾರ್ಗದರ್ಶನ ದೊರೆಯಲಿದೆ. We assure you complete & comprehensive exam oriented preparation.
ಕನ್ನಡ ಸಾಹಿತ್ಯ ಕಳೆದ 9 ವರ್ಷಗಳಿಂದ ಬಹು ಭರವಸೆಯ ಐಚ್ಚಿಕ ವಿಷಯವಾಗಿ ಬಹುತೇಕ ವಿದ್ಯಾರ್ಥಿಗಳ ಆಯ್ಕೆಯಾಗಿರುವುದು ಜಾಹೀರಾದ ಸಂಗತಿ. 330 ರವರೆಗೂ ಇದರ ಅಂಕ ವ್ಯಾಪ್ತಿಯ ಸಾಧ್ಯತೆಯನ್ನು 2014 ರಿಂದ 2019 ರ ಸಾಲಿನಲ್ಲಿ ಮನಗಂಡಿದ್ದೇವೆ. ಅಲ್ಲದೇ 2016 ರಲ್ಲಿ ಇನ್ಸೈಟ್ಸ್ ನವರೇ ಆದ ಕೆ. ಆರ್ ನಂದಿನಿ ಅವರು ಕನ್ನಡ ಐಚ್ಚಿಕದಲ್ಲಿ ಅತಿ ಹೆಚ್ಚು ಅಂಕ ಗಳಿಸಿ ದೇಶಕ್ಕೆ ಪ್ರಥಮ ರಾಂಕ್ ಪಡೆದಿರುವುದೂ ಹೆಗ್ಗಳಿಕೆಯ ಸಂಗತಿ. ಆದರೆ ಇತ್ತೀಚಿನ ದಿನಗಳಲ್ಲಿ ಸರಾಸರಿ ಅಂಕ ಗಳಿಕೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿರುವುದನ್ನು ನಾವು ಅವಲೋಕಿಸಿದ್ದೇವೆ.
ಇದರ ಬಗ್ಗೆ ವಿಸ್ತೃತವಾಗಿ ಪರಿಶೀಲಿಸಿದಾಗ ಬಹುತೇಕವಾಗಿ ಇದಕ್ಕೆ ಮೂಲ ಕಾರಣ – ಸಿದ್ಧ ಮಾದರಿಯ ಸಾಮಾನ್ಯ ಉತ್ತರಗಳು (static answers & dependency on ready-made notes), ಉತ್ತರ ಪತ್ರಿಕೆಯ ಅಪೂರ್ಣತೆ, ಹಳೆಯ ಉದಾಹರಣೆಗಳ ಪುನರಾವರ್ತನೆ, ವಿಷಯದ ಮೇಲೆ ಹಿಡಿತದ ಕೊರತೆ ಹಾಗೂ ಅಗತ್ಯವಾದ ಉತ್ತರಾಭ್ಯಾಸದ ಕೊರತೆ ಎಂಬುದು ಮೇಲ್ನೋಟಕ್ಕೆ ಎದ್ದು ಕಾಣುತ್ತದೆ.
ಇವೆಲ್ಲವುಗಳನ್ನು ಮನಗಂಡು ನಮ್ಮ ಕನ್ನಡ ಸಾಹಿತ್ಯ ಐಚ್ಚಿಕ ವಿಷಯ ತರಗತಿಗಳನ್ನು ವಿಶೇಷವಾಗಿ ಈ ಕೆಳಗಿನ ಅಂಶಗಳೊಂದಿಗೆ ವಿನ್ಯಾಸ ಗೊಳಿಸಲಾಗಿದೆ.
*ಧ್ಯೇಯೋದ್ದೇಶ*
ಸಮರ್ಪಕ ಸಮಯದಲ್ಲಿ ಸಮಗ್ರವಾಗಿ ಪಠ್ಯವಾರು ಸಾಹಿತ್ಯದ ವಿಷಯಗಳ ಮೇಲೆ ಹಿಡಿತ ಸಾಧಿಸುವುದು ಹಾಗೂ ವಿಶ್ಲೇಷಣಾತ್ಮಕತೆಯ ಮನೋಭಾವವನ್ನು ಗಳಿಸಿ ಬರವಣಿಗೆಯ ಸತತಾಭ್ಯಾಸದ ಜೊತೆಗೆ ಪರಿಣಾಮಕಾರಿ ಉತ್ತರಗಳನ್ನು ಬರೆಯುವ ಸಾಮರ್ಥ್ಯ ಹೊಂದುವುದು.
ತರಗತಿಗಳ ವಿಶೇಷತೆ:
*ಶಿಸ್ತುಬದ್ಧತೆ* – ಪ್ರಪ್ರಥಮ ಬಾರಿಗೆ ವೇಳಾಪಟ್ಟಿ ಸಹಿತವಾದ ಕನ್ನಡ ಐಚ್ಚಿಕ ತರಗತಿಗಳು
*ಸತತಾಭ್ಯಾಸ* – ಪ್ರತಿ ಪಠ್ಯದ ನಂತರ ಹಿಂದಿನ ವರ್ಷಗಳ ಪ್ರಶ್ನೆಗಳ ಕುರಿತು ಸಮಗ್ರ ಚರ್ಚೆ
*ನಿರಂತರ ಮಾರ್ಗದರ್ಶನ* – ಉತ್ತರಗಳ ಚರ್ಚೆ ಹಾಗೂ ವ್ಯಕ್ತಿಗತವಾದ ಸಲಹೆಗಳು. ತರಗತಿಗಳು ಮುಗಿದ ನಂತರವೂ ನಿರಂತರವಾಗಿ ವಿದ್ಯಾರ್ಥಿಗಳ ಏಳಿಗೆಗಾಗಿ ಶ್ರಮಿಸುವ ಅಧ್ಯಾಪಕರು.
*ಅಗತ್ಯವಾದ ಪಠ್ಯ ಸಾಮಗ್ರಿ* – ಪರೀಕ್ಷೆಯ ಬೇಡಿಕೆಗೆ ಅನುಗುಣವಾಗಿ ಪರಿಷ್ಕಾರಗೊಂಡ, ಸಮರ್ಪಕ ಹಾಗೂ ಸಮಗ್ರ ಸಾಮಗ್ರಿ (Completely updated & comprehensive).
*ನುರಿತ ಅಧ್ಯಾಪಕ ವರ್ಗ* – ಯುಪಿಎಸ್ಸಿ ಮುಖ್ಯ ಪರೀಕ್ಷೆಯ ಅಗಾಧ ಅನುಭವದೊಂದಿಗೆ.
ನಾಡು – ನುಡಿಯ ಬಗೆಗಿನ ನಿಮ್ಮ ಅಭಿಮಾನ ಚಿರಂತನವಾಗಿರಲಿ. ತಾಯಿ ಭುವನೇಶ್ವರಿಯ ಕೃಪೆ ನಿಮ್ಮನ್ನು ಯಶಸ್ಸಿನ ಹಾದಿಯಲ್ಲಿ ನಡೆಸಲಿ ಎಂದು ಆಶಿಸುತ್ತೇವೆ. ಶುಭವಾಗಲಿ 😊
ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ
CLICK HERE TO SUBSCRIBE
Course Starts from 24th June 2022
Fee: 29500/- incl. taxes
CLICK HERE TO DONWLOAD THE TIMETABLE
For any queries contact,
mail : [email protected]/[email protected]
Contact:
Bangalore Office : 7483163074 / 9380863034
Delhi Office : 7303318519 / 011-49520205
Hyderabad Office : 8688512637
Srinagar Office : +91 143560002
Lucknow Office: 7897954757
Join our Official Telegram Channel HERE
Subscribe to our YouTube Channel HERE
Follow our Twitter Account HERE
[ad_2]