[Mission 2022] ದೈನಂದಿನ ಪ್ರಚಲಿತ ಘಟನೆಗಳು ದಿನಾಂಕ – 9ನೇ ಮಾರ್ಚ್ 2022 – INSIGHTSIAS

[ad_1]

 

 

ಪರಿವಿಡಿ:

 ಸಾಮಾನ್ಯ ಅಧ್ಯಯನ ಪತ್ರಿಕೆ  1 :

1. ಪಾಲ್-ದಧ್ವವ್ ಹತ್ಯಾಕಾಂಡ.

 

ಸಾಮಾನ್ಯ ಅಧ್ಯಯನ ಪತ್ರಿಕೆ 2:

1. VVPAT ಕುರಿತ ತುರ್ತು ವಿಚಾರಣೆಯನ್ನು ಕೈಗೊಳ್ಳಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.

2. ಸಮೀಕರಣ ಲೆವಿ.

3. ಖಾದ್ಯ ತೈಲ ಬೆಲೆಗಳು.

4. ಮೋಟಾರು ವಾಹನ ಒಪ್ಪಂದ.

 

ಸಾಮಾನ್ಯ ಅಧ್ಯಯನ ಪತ್ರಿಕೆ 3:

1. ಸೂರ್ಯನ ವರ್ಣಗೋಳದಾದ್ಯಂತ ಸಂಭವಿಸುವ ಪ್ಲಾಸ್ಮಾದ ಜೆಟ್‌ಗಳ ಹಿಂದಿನ ವಿಜ್ಞಾನವನ್ನು ಬಿಚ್ಚಿಟ್ಟ ವಿಜ್ಞಾನಿಗಳು.

 

ಸಾಮಾನ್ಯ ಅಧ್ಯಯನ ಪತ್ರಿಕೆ 4:

1. ಡಿಜಿಟಲ್ ಮಾಧ್ಯಮಕ್ಕೆ ಸಂಬಂಧಿಸಿದಂತೆ ನೀತಿಸಂಹಿತೆ ಮತ್ತು ಕಾರ್ಯವಿಧಾನ ಮತ್ತು ಸುರಕ್ಷತೆಗಳು.

 

ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ಸಂಗತಿಗಳು:

1. SLINEX.

2. ಸ್ಟಾರ್ಟ್ಅಪ್ ವಿಲೇಜ್ ಎಂಟರ್ಪ್ರೆನ್ಯೂರ್ಶಿಪ್ ಪ್ರೋಗ್ರಾಂ (SVEP).

3. ಅಂತರರಾಷ್ಟ್ರೀಯ ಚುನಾವಣಾ ಸಂದರ್ಶಕರ ಕಾರ್ಯಕ್ರಮ (IEVP).

4. ಮಹಿಳೆಯರಿಗಾಗಿ “ಸಮರ್ಥ್” ವಿಶೇಷ ಉದ್ಯಮಶೀಲತೆ ಪ್ರಚಾರ ಅಭಿಯಾನ.

 


ಸಾಮಾನ್ಯ ಅಧ್ಯಯನ ಪತ್ರಿಕೆ : 1


 

ವಿಷಯಗಳು: ಆಧುನಿಕ ಭಾರತದ ಇತಿಹಾಸ.

 ಪಾಲ್-ದಧ್ವವ್ ಹತ್ಯಾಕಾಂಡ:


(Pal-Dadhvav massacre)

 ಸಂದರ್ಭ:

ಗುಜರಾತ್‌ನಲ್ಲಿ ನಡೆದ ‘ಪಾಲ್-ದಧ್ವವ್ ಹತ್ಯಾಕಾಂಡ’ವು, 2022ರ ಮಾರ್ಚ್ 7 ರಂದು 100 ವರ್ಷಗಳನ್ನು ಪೂರೈಸಿತು.ಗುಜರಾತ್ ಸರ್ಕಾರ ಇದನ್ನು “ಜಲಿಯನ್ ವಾಲಾಬಾಗ್ ಹತ್ಯಾಕಾಂಡಕ್ಕಿಂತ ದೊಡ್ಡ ಹತ್ಯಾಕಾಂಡ” ಎಂದು ಬಣ್ಣಿಸಿದೆ.

 

ಪಾಲ್-ದಧ್ವವ್ ಹತ್ಯಾಕಾಂಡದ ಕುರಿತು:

ಹತ್ಯಾಕಾಂಡವು ಮಾರ್ಚ್ 7, 1922 ರಂದು ಸಬರ್ಕಾಂತ ಜಿಲ್ಲೆಯ ಪಾಲ್, ಚಿಟಾರಿಯಾ ಮತ್ತು ದಾಧ್ವಾವ್ ಗ್ರಾಮಗಳಲ್ಲಿ ನಡೆಯಿತು, ಆ ಸಮಯದಲ್ಲಿ ಈ ಗ್ರಾಮಗಳು ಇಡಾರ್ ರಾಜ್ಯದ (Idar State) (ಇಂದಿನ ಗುಜರಾತ್) ಭಾಗವಾಗಿದ್ದವು.

  1. ಮೋತಿಲಾಲ್ ತೇಜಾವತ್ ನೇತೃತ್ವದ ‘ಏಕಿ ಆಂದೋಲನ’ದ ಅಂಗವಾಗಿ ಪಾಲ್, ದಧ್ವಾವ್ ಮತ್ತು ಚಿತಾರಿಯಾ ಗ್ರಾಮಸ್ಥರು ವಾರಿಸ್ ನದಿಯ ದಡದಲ್ಲಿ ಜಮಾಯಿಸಿದ್ದರು.
  2. ಬ್ರಿಟಿಷರು ಮತ್ತು ಊಳಿಗಮಾನ್ಯ ಪ್ರಭುಗಳು ರೈತರ ಮೇಲೆ ಹೇರಿದ ಭೂಕಂದಾಯ ತೆರಿಗೆಯನ್ನು (ಲಗಾನ್) ವಿರೋಧಿಸಿ ಈ ಆಂದೋಲನವನ್ನು / ಚಳುವಳಿಯನ್ನು ಮಾಡಲಾಗುತ್ತಿತ್ತು.
  3. ಬ್ರಿಟಿಷರ ಅರೆಸೇನಾ ಪಡೆಗಳು ‘ತೇಜಾವತ್’ಗಾಗಿ ಬಹಳ ದಿನಗಳಿಂದ ಹುಡುಕಾಟ ನಡೆಸಿದ್ದವು. ಈ ಸಭೆಯ ಬಗ್ಗೆ ತಿಳಿದ ತಕ್ಷಣ ಈ ಪಡೆಗಳು ಸ್ಥಳಕ್ಕೆ ತಲುಪಿದವು.
  4. ತೇಜಾವತ್ ನೇತೃತ್ವದಲ್ಲಿ, ಸುಮಾರು 200 ಭಿಲ್ಲರು ತಮ್ಮ ಬಿಲ್ಲು ಮತ್ತು ಬಾಣಗಳನ್ನು ಕೈಗೆತ್ತಿಕೊಂಡರು ಮತ್ತು ಬಾಡಿಗೆ ಪಾವತಿಸುವುದಿಲ್ಲ ಎಂದು ಘೋಷಣೆಗಳನ್ನು ಕೂಗಲು ಪ್ರಾರಂಭಿಸಿದರು.ಇವರ ಮೇಲೆ, ಬ್ರಿಟಿಷ್ ಕಮಾಂಡರ್ HG ಸುಟ್ಟನ್ (HG Sutton) ಗ್ರಾಮಸ್ಥರ ಮೇಲೆ ಗುಂಡು ಹಾರಿಸಲು ಆದೇಶಿಸಿದರು, ಮತ್ತು ಈ ವಿವೇಚನಾರಹಿತ ಗುಂಡಿನ ದಾಳಿಯಲ್ಲಿ ಸುಮಾರು 1,000 ಆದಿವಾಸಿಗಳು (ಭಿಲ್ಲರು) ಕೊಲ್ಲಲ್ಪಟ್ಟರು.
  5. ಆದಾಗ್ಯೂ, ಮೋತಿಲಾಲ್ ತೇಜಾವತ್ ಅವರು ಶೂಟೌಟ್‌ನಲ್ಲಿ ಬದುಕುಳಿದರು ಮತ್ತು ನಂತರ ಇಲ್ಲಿಗೆ ಹಿಂದಿರುಗಿಬಂದು ಮತ್ತು ಈ ಸ್ಥಳಕ್ಕೆ ‘ವೀರಭೂಮಿ’ ಎಂದು ಹೆಸರಿಸಿದರು.

 

ಪರಂಪರೆ:

ಈ ಹತ್ಯಾಕಾಂಡದ ಶತಮಾನೋತ್ಸವದಂದು ಗುಜರಾತ್ ಸರ್ಕಾರ ಹೊರಡಿಸಿದ ಪ್ರಕಟಣೆಯು ಈ ಘಟನೆಯನ್ನು “1919 ರ ಜಲಿಯನ್ ವಾಲಾಬಾಗ್ ಹತ್ಯಾಕಾಂಡಕ್ಕಿಂತ ಹೆಚ್ಚು ಕ್ರೂರವಾದುದಾಗಿದೆ” ಎಂದು ವಿವರಿಸಿದೆ.

 


ಸಾಮಾನ್ಯ ಅಧ್ಯಯನ ಪತ್ರಿಕೆ : 2


 

ವಿಷಯಗಳು: ಪ್ರಜಾ ಪ್ರಾತಿನಿಧ್ಯ ಕಾಯ್ದೆಗೆ ಸಂಬಂಧಿಸಿದ ಪ್ರಮುಖ ಅಂಶಗಳು.

 VVPAT ಕುರಿತ ತುರ್ತು ವಿಚಾರಣೆಯನ್ನು ಕೈಗೊಳ್ಳಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ:


(Supreme Court declines urgent hearing on VVPAT)

 

ಸಂದರ್ಭ:

ಇತ್ತೀಚೆಗೆ, ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (PIL) ಕುರಿತು ತುರ್ತು ವಿಚಾರಣೆಯನ್ನು ನಡೆಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಈ ಅರ್ಜಿಯಲ್ಲಿ, 2019 ರಲ್ಲಿ ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಐದು ರಾಜ್ಯಗಳಲ್ಲಿ ಮಾರ್ಚ್ 10 ರಂದು ನಡೆಯಲಿರುವ ಮತಗಳ ಎಣಿಕೆಗಾಗಿ EVM-VVPAT ಪರಿಶೀಲನೆಗಾಗಿ ಬೂತ್‌ಗಳ ಸಂಖ್ಯೆಯನ್ನು,ಪ್ರತಿ ಕ್ಷೇತ್ರಕ್ಕೆ 5 ರಿಂದ 25 ಅಥವಾ ಅದಕ್ಕಿಂತ ಹೆಚ್ಚಿಗೆ ಮಾಡಬೇಕೆಂಬ ಮನವಿ ಇದೆ.

 

VVPAT ಪರಿಶೀಲನೆಗಾಗಿ ಏಪ್ರಿಲ್ 18, 2019 ರಂದು ಸುಪ್ರೀಂ ಕೋರ್ಟ್ ನೀಡಿದ ನಿರ್ದೇಶನ:

  1. ಸಾರ್ವತ್ರಿಕ ಚುನಾವಣೆಯ ಸಂದರ್ಭದಲ್ಲಿ, ಸಂಸತ್ತಿನ ಕ್ಷೇತ್ರದ (Parliamentary Constituency)ಪ್ರತಿ ವಿಧಾನಸಭಾ ವಿಭಾಗದಲ್ಲಿ ಐದು ಇವಿಎಂಗಳ ವಿವಿಪ್ಯಾಟ್ ಸ್ಲಿಪ್‌ಗಳನ್ನು ಭೌತಿಕವಾಗಿ ಎಣಿಸಲಾಗುತ್ತದೆ.
  2. ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ವಿವಿಪ್ಯಾಟ್ ಪರಿಶೀಲನೆಯು ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಯಾವುದೇ ಐದು ಯಾದೃಚ್ಛಿಕ ಇವಿಎಂಗಳಿಗೆ ವಿಸ್ತರಿಸಲಿದೆ.

 

EVM-VVPAT ಪರಿಶೀಲನೆಗಾಗಿ ಬೂತ್‌ಗಳ ಸಂಖ್ಯೆಯನ್ನು ಹೆಚ್ಚಿಸುವುದಕ್ಕೆ ಸಂಬಂಧಿಸಿದ ಸವಾಲುಗಳು:

VVPAT ಸ್ಲಿಪ್‌ಗಳ ಎಣಿಕೆಯನ್ನು ವಿಶೇಷವಾಗಿ ರಚಿಸಲಾದ VVPAT ಎಣಿಕೆ ಬೂತ್‌ಗಳಲ್ಲಿ ಚುನಾವಣಾಧಿಕಾರಿಯ ನಿಕಟ ಮೇಲ್ವಿಚಾರಣೆಯಲ್ಲಿ ಮತ್ತು ಮೇಲ್ವಿಚಾರಕರ ನೇರ ಮೇಲ್ವಿಚಾರಣೆಯಲ್ಲಿ ಮಾಡಲಾಗುತ್ತದೆ. VVPAT ಸ್ಲಿಪ್‌ಗಳ ಎಣಿಕೆಯನ್ನು ಹೆಚ್ಚಿಸಲು, ಕ್ಷೇತ್ರದಲ್ಲಿ ಚುನಾವಣಾ ಅಧಿಕಾರಿಗಳಿಗೆ ವ್ಯಾಪಕ ತರಬೇತಿ ಮತ್ತು ಸಾಮರ್ಥ್ಯವನ್ನು ಹೆಚ್ಚಿಸುವ ಅಗತ್ಯವಿರುತ್ತದೆ.

 

ಏನಿದು VVPAT?

  1. ಮತದಾರರ ಪರಿಶೀಲಿಸಬಹುದಾದ ಪೇಪರ್ ಆಡಿಟ್ ಟ್ರಯಲ್ (VVPAT) ಎಲೆಕ್ಟ್ರಾನಿಕ್ ಮತದಾನ ಯಂತ್ರಗಳನ್ನು (EVM) ಬಳಸುವ ಮತದಾರರಿಗೆ ಪ್ರತಿಕ್ರಿಯೆ ನೀಡುವ ಒಂದು ವಿಧಾನವಾಗಿದೆ.
  2. VVPAT ಸ್ವತಂತ್ರ ಪರಿಶೀಲನಾ ವ್ಯವಸ್ಥೆಯನ್ನು ಮತದಾರರಿಗೆ ಒದಗಿಸುತ್ತದೆ, ಅದರಂತೆ ಇದನ್ನು ಮತದಾರರು ತಮ್ಮ ಮತವನ್ನು ಸರಿಯಾಗಿ ಚಲಾಯಿಸಲಾಗಿದೆಯೆ ಎಂದು ಪರಿಶೀಲಿಸಲು ಅನುಕೂಲವಾಗುವಂತೆ ವಿನ್ಯಾಸಗೊಳಿಸಲಾಗಿದೆ. ಇದಲ್ಲದೆ, ಸಂಗ್ರಹಿಸಿದ ಎಲೆಕ್ಟ್ರಾನಿಕ್ ಫಲಿತಾಂಶಗಳ ಲೆಕ್ಕಪರಿಶೋಧನೆಗೆ ಇದು ಒಂದು ಮಾರ್ಗವನ್ನು ಸಹ ಒದಗಿಸುತ್ತದೆ.
  3. ಇದರಲ್ಲಿ, ಯಾವ ಅಭ್ಯರ್ಥಿಗೆ ಮತ ಚಲಾಯಿಸಲಾಗಿದೆ ಮತ್ತು ಪಕ್ಷ ಅಥವಾ ಅಭ್ಯರ್ಥಿಯ ಚುನಾವಣಾ ಚಿಹ್ನೆಯನ್ನು ದಾಖಲಿಸಲಾಗುತ್ತದೆ.

vvpat

VVPAT ಗಳ ಮಹತ್ವ ಮತ್ತು ಅವಶ್ಯಕತೆ:

  1. ಎಲೆಕ್ಟ್ರಾನಿಕ್ ಮತದಾನ ಯಂತ್ರದ ಅಸಮರ್ಪಕ ಕಾರ್ಯಗಳು ಅಥವಾ ಚುನಾವಣಾ ವಂಚನೆಯನ್ನು ಕಂಡುಹಿಡಿಯಲು ವಿವಿಪಿಎಟಿ ಸಹಾಯ ಮಾಡುತ್ತದೆ.
  2. ಸಂಗ್ರಹಿಸಿದ ಎಲೆಕ್ಟ್ರಾನಿಕ್ ಫಲಿತಾಂಶಗಳ ಲೆಕ್ಕಪರಿಶೋಧನೆಗೆ ಇದು ಒಂದು ಮಾರ್ಗವನ್ನು ಒದಗಿಸುತ್ತದೆ. ಮತಗಳನ್ನು ಬದಲಾಯಿಸಲು ಅಥವಾ ನಾಶಮಾಡಲು ಇದು ಹೆಚ್ಚುವರಿ ತಡೆಗೋಡೆಯಾಗಿ ಕಾರ್ಯನಿರ್ವಹಿಸುತ್ತದೆ.
  3. VVPAT ವ್ಯವಸ್ಥೆಯೊಂದಿಗಿನ EVM ಗಳು ಮತದಾನ ವ್ಯವಸ್ಥೆಯ ನಿಖರತೆಯನ್ನು ಸಂಪೂರ್ಣ ಪಾರದರ್ಶಕತೆಯಿಂದ ಖಚಿತಪಡಿಸುತ್ತವೆ ಮತ್ತು ಮತದಾರರ ವಿಶ್ವಾಸವನ್ನು ಪುನಃಸ್ಥಾಪಿಸುತ್ತವೆ.
  4. EVMಗಳು ಮತ್ತು VVPATಗಳು ಚುನಾವಣಾ ಪ್ರಕ್ರಿಯೆಯನ್ನು ವೇಗಗೊಳಿಸುತ್ತವೆ ಏಕೆಂದರೆ EVMಗಳಲ್ಲಿ ಮತಗಳನ್ನು ಎಣಿಸುವುದು ಕಾಗದದ ಮತಪತ್ರಗಳನ್ನು ಎಣಿಸುವುದಕ್ಕಿಂತ ಕಡಿಮೆ ಸಮಯ ತೆಗೆದುಕೊಳ್ಳುತ್ತದೆ.

 

ಈ ಸಮಯದ ಅವಶ್ಯಕತೆ:

ಆದಾಗ್ಯೂ, ಇವಿಎಂ ಅಸಮರ್ಪಕ ಕಾರ್ಯದ ಬಗ್ಗೆ ಆತಂಕಗಳು ಇನ್ನೂ ಉಳಿದಿವೆ ಮತ್ತು ಹೀಗಾಗಿ ಪ್ರಜಾಸತ್ತಾತ್ಮಕ ರಾಜಕೀಯ ವ್ಯವಸ್ಥೆಯ ಪ್ರಮುಖ ಲಕ್ಷಣವಾದ ಚುನಾವಣೆಯ ಬಗ್ಗೆ ಯಾವುದೇ ಆತಂಕವನ್ನು ನಿವಾರಿಸಲು ಸಂಪೂರ್ಣ ತನಿಖೆಯನ್ನು ಮಾಡಬೇಕಾದ ಅಗತ್ಯವಿದೆ.

 

ವಿಷಯಗಳು:ಅನಿವಾಸಿ ಭಾರತೀಯರು ಮತ್ತು ಭಾರತದ ಹಿತಾಸಕ್ತಿಗಳ ಮೇಲೆ ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿ ಹೊಂದುತ್ತಿರುವ ದೇಶಗಳ ನೀತಿಗಳು ಮತ್ತು ರಾಜಕೀಯದ ಪರಿಣಾಮಗಳು.

ಖಾದ್ಯ ತೈಲ ಬೆಲೆಗಳು:


(Edible Oil Prices)

ಸಂದರ್ಭ:

ಸರ್ಕಾರವು ತೆಗೆದುಕೊಂಡ ಕಟ್ಟುನಿಟ್ಟಿನ ಕ್ರಮಗಳಿಂದಾಗಿ, ಕೋವಿಡ್ ಪರಿಸ್ಥಿತಿಯ ಹೊರತಾಗಿಯೂ ಕಳೆದ ಎರಡು ವರ್ಷಗಳಿಂದ ಖಾದ್ಯ ತೈಲ ಬೆಲೆಗಳು ನಿಯಂತ್ರಣದಲ್ಲಿವೆ.

  1. ಆದಾಗ್ಯೂ, ಉಕ್ರೇನ್‌ನಲ್ಲಿ ನಡೆಯುತ್ತಿರುವ ಯುದ್ಧದಿಂದಾಗಿ, ಖಾದ್ಯ ತೈಲಗಳು ಸೇರಿದಂತೆ ಅನೇಕ ಸರಕುಗಳ ಬೆಲೆಗಳು ಕ್ರಮೇಣ ಹೆಚ್ಚಾಗುತ್ತಿವೆ.

 

ಏನಿದು ಸಮಸ್ಯೆ?

ಸೂರ್ಯಕಾಂತಿ ಎಣ್ಣೆಯ ಭಾರತದ ದೇಶೀಯ ಉತ್ಪಾದನೆಯು ದೇಶದ ಬೇಡಿಕೆಯ ಕಾಲು ಭಾಗಕ್ಕಿಂತ ಕಡಿಮೆಯಿರುತ್ತದೆ ಮತ್ತು ಅದರ ಹೆಚ್ಚಿನ ಪೂರೈಕೆಯು ಉಕ್ರೇನ್‌ನಿಂದ ಆಗುತ್ತಿತ್ತು. ಉಕ್ರೇನಿಯನ್ ಯುದ್ಧದ ಪ್ರಭಾವದಿಂದ, ಈ ಪೂರೈಕೆಯು ಸಂಪೂರ್ಣ ಸ್ಥಗಿತಗೊಂಡಿದೆ.

  1. ಸೂರ್ಯಕಾಂತಿ ಎಣ್ಣೆಯ ಪೂರೈಕೆ ಕಡಿಮೆಯಾಗಿ, ಗ್ರಾಹಕರು ಕಡಲೆಕಾಯಿ ಮತ್ತು ತಾಳೆ ಎಣ್ಣೆಯತ್ತ ಮುಖ ಮಾಡುತ್ತಿದ್ದಾರೆ, ಇದರಿಂದಾಗಿ ಅವುಗಳ ಬೆಲೆಯಲ್ಲೂ ಹೆಚ್ಚಳ ಕಂಡುಬರುತ್ತಿದೆ.

 

ಈ ಮೊದಲು ಖಾದ್ಯ ತೈಲದ ಬೆಲೆ ಏರಿಕೆಗೆ ಕಾರಣಗಳು:

  1. ಜಾಗತಿಕ ಬೆಲೆಗಳಲ್ಲಿ ಜಿಗಿತ, ಮತ್ತು ಸೋಯಾಬೀನ್‌ ನ ಕಡಿಮೆ ದೇಶೀಯ ಉತ್ಪಾದನೆ. ಸೋಯಾಬೀನ್ ಭಾರತದ ಅತಿದೊಡ್ಡ ಎಣ್ಣೆಬೀಜದ ಬೆಳೆಯಾಗಿದೆ.
  2. ಚೀನಾದಿಂದ ಖಾದ್ಯ ತೈಲದ ಅತಿಯಾದ ಖರೀದಿ.
  3. ಜೈವಿಕ ಇಂಧನ ನೀತಿಗಳನ್ನು ಅನೇಕ ಪ್ರಮುಖ ತೈಲ ಉತ್ಪಾದಕರು ಆಕ್ರಮಣಕಾರಿಯಾಗಿ ಅನುಸರಿಸುತ್ತಿದ್ದಾರೆ, ಖಾದ್ಯ ತೈಲ ಬೆಳೆಗಳನ್ನು ಬಳಸಿ ‘ಜೈವಿಕ ಇಂಧನ’ ವನ್ನುಉತ್ಪಾದಿಸುತ್ತಿದ್ದಾರೆ.
  4. ಸರ್ಕಾರಿ ತೆರಿಗೆಗಳು ಮತ್ತು ಸುಂಕಗಳು ಭಾರತದಲ್ಲಿ ಖಾದ್ಯ ತೈಲಗಳ ಚಿಲ್ಲರೆ ಬೆಲೆಯ ಪ್ರಮುಖ ಭಾಗವಾಗಿದೆ.

 

ಖಾದ್ಯ ತೈಲ ಆಮದಿನ ಮೇಲೆ ಭಾರತದ ಅವಲಂಬನೆ:

  1. ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಸಸ್ಯಜನ್ಯ ಎಣ್ಣೆಯನ್ನು ಆಮದು ಮಾಡಿಕೊಳ್ಳುವ ದೇಶವಾಗಿದೆ.
  2. ಭಾರತವು ತನ್ನ ಖಾದ್ಯ ತೈಲ ಅಗತ್ಯತೆಗಳ ಸುಮಾರು 60% ಅನ್ನು ಆಮದು ಮಾಡಿಕೊಳ್ಳುತ್ತದೆ, ಇದರಿಂದಾಗಿ ದೇಶದಲ್ಲಿ ಖಾದ್ಯ ತೈಲದ ಚಿಲ್ಲರೆ ಬೆಲೆಗಳು ಅಂತರಾಷ್ಟ್ರೀಯ ಮಾರುಕಟ್ಟೆಯ ಒತ್ತಡಗಳಿಗೆ ಗುರಿಯಾಗುತ್ತವೆ.
  3. ದೇಶವು ಮುಖ್ಯವಾಗಿ ಇಂಡೋನೇಷ್ಯಾ ಮತ್ತು ಮಲೇಷಿಯಾದಿಂದ ತಾಳೆ ಎಣ್ಣೆ, ಬ್ರೆಜಿಲ್ ಮತ್ತು ಅರ್ಜೆಂಟೀನಾದಿಂದ ಸೋಯಾ ಎಣ್ಣೆ ಮತ್ತು ರಷ್ಯಾ ಮತ್ತು ಉಕ್ರೇನ್ ನಿಂದ ಸೂರ್ಯಕಾಂತಿ ಎಣ್ಣೆಯನ್ನು ಆಮದು ಮಾಡಿಕೊಳ್ಳುತ್ತದೆ.

 

ಖಾದ್ಯ ತೈಲಗಳ ಬಗೆಗಿನ ಸಂಗತಿಗಳು:

ಖಾದ್ಯ ತೈಲದ ಪ್ರಾಥಮಿಕ ಮೂಲಗಳು, ಸೋಯಾಬೀನ್, ಬಿಳಿ ಸಾಸಿವೆ (ರಾಪ್ಸೀಡ್) ಮತ್ತು ಸಾಸಿವೆ, ನೆಲಗಡಲೆ, ಸೂರ್ಯಕಾಂತಿ, ಕುಸುಬೆ ಮತ್ತು ನೈಜರ್.

ಖಾದ್ಯ ತೈಲದ ದ್ವಿತೀಯ ಮೂಲಗಳು ‘ತಾಳೆ ಎಣ್ಣೆ’, ತೆಂಗಿನಕಾಯಿ, ಅಕ್ಕಿ ಹೊಟ್ಟು, ಹತ್ತಿ ಬೀಜಗಳು ಮತ್ತು ಮರದಿಂದ ಉತ್ಪನ್ನವಾಗುವ ಎಣ್ಣೆಬೀಜಗಳು (Tree Borne Oilseeds).

 

ಭಾರತದಲ್ಲಿ ಎಣ್ಣೆಕಾಳು ಉತ್ಪಾದನೆಯಲ್ಲಿ ಪ್ರಮುಖ ಸವಾಲುಗಳು:

  1. ಎಣ್ಣೆಕಾಳುಗಳನ್ನು ಮುಖ್ಯವಾಗಿ ‘ಮಳೆಯಾಶ್ರಿತ’ ಪ್ರದೇಶಗಳಲ್ಲಿ ಉತ್ಪಾದಿಸಲಾಗುತ್ತದೆ (ಸುಮಾರು 70% ಪ್ರದೇಶ),
  2. ಬೀಜಗಳಿಗೆ ಹೆಚ್ಚಿನ ಬೆಲೆ (ಕಡಲೆಕಾಯಿ ಮತ್ತು ಸೋಯಾಬೀನ್),
  3. ಸೀಮಿತ ಸಂಪನ್ಮೂಲಗಳೊಂದಿಗೆ ಸಣ್ಣ ಹಿಡುವಳಿಗಳು,
  4. ಕಡಿಮೆ ಬೀಜ ಬದಲಿ ದರ ಮತ್ತು ಕಡಿಮೆ ಉತ್ಪಾದಕತೆ.

ಇತ್ತೀಚೆಗೆ, ದೇಶೀಯ ಎಣ್ಣೆಕಾಳು ಉತ್ಪಾದನೆಯನ್ನು ಉತ್ತೇಜಿಸಲು ಮತ್ತು ದೇಶವನ್ನು ‘ಅಡುಗೆ ಎಣ್ಣೆಯಲ್ಲಿ’ ಸ್ವಾವಲಂಬಿಯನ್ನಾಗಿ ಮಾಡಲು ಸರ್ಕಾರವು ‘ ರಾಷ್ಟ್ರೀಯ ಖಾದ್ಯ ತೈಲ ಮಿಷನ್ ಆಯಿಲ್ ಪಾಮ್’ (National Mission on Edible Oil-Oil Palm – NMEO-OP) ಅನ್ನು ಪ್ರಾರಂಭಿಸಿದೆ.

 

ವಿಷಯಗಳು: ಭಾರತ ಮತ್ತು ನೆರೆಹೊರೆಯ ದೇಶಗಳೊಂದಿಗೆ ಅದರ ಸಂಬಂಧಗಳು.

ಮೋಟಾರು ವಾಹನ ಒಪ್ಪಂದ:


(Motor vehicles agreement)

 ಸಂದರ್ಭ: 

ಇತ್ತೀಚೆಗೆ, ಮೂರು ದೇಶಗಳು – ಬಾಂಗ್ಲಾದೇಶ, ಭಾರತ ಮತ್ತು ನೇಪಾಳ – ಸರಕು ಮತ್ತು ಜನರ ಮುಕ್ತ ಸಂಚಾರ-ಸಾಗಣೆಗಾಗಿ ಉಪ-ಪ್ರಾದೇಶಿಕ ಬಾಂಗ್ಲಾದೇಶ-ಭೂತಾನ್-ಭಾರತ-ನೇಪಾಳ (BBIN) ಗುಂಪಿನ ‘ಮೋಟಾರು ವಾಹನ ಒಪ್ಪಂದ’ವನ್ನು (Motor Vehicles Agreement (MVA) of the sub-regional Bangladesh-Bhutan-India-Nepal (BBIN) grouping) ಕಾರ್ಯಗತಗೊಳಿಸುವ ಮುಂದಿನ ಕ್ರಮಗಳ ಕುರಿತು ಚರ್ಚಿಸಲು ಮೂರು ದೇಶಗಳ ಸಭೆಯನ್ನು ಆಯೋಜಿಸಲಾಗಿತ್ತು.

 

  1. ಒಪ್ಪಂದಕ್ಕೆ ಸಹಿ ಹಾಕಲು ನಿರಾಕರಿಸಿರುವ  ಭೂತಾನ್ ಈ ಒಪ್ಪಂದ ತನಗೆ ಇಷ್ಟವಿಲ್ಲ ಎಂದು ಈಗಾಗಲೇ ಘೋಷಿಸಿದೆ.

ತೀರಾ ಇತ್ತೀಚಿನ ಸಭೆಯ ಫಲಿತಾಂಶಗಳು:

COVID-19 ಸಾಂಕ್ರಾಮಿಕ ರೋಗ ಹರಡಿದ ನಂತರ ‘ಮೋಟಾರು ವಾಹನ ಒಪ್ಪಂದ’ (MVA) ಕುರಿತು ಚರ್ಚಿಸಲು BBIN ಗುಂಪಿನ ಮೊದಲ ವ್ಯಕ್ತಿಗತ ಸಭೆ ಇದಾಗಿದೆ. ಕೊನೆಯ ಸಭೆಯು ಫೆಬ್ರವರಿ 2020 ರಲ್ಲಿ ನವದೆಹಲಿಯಲ್ಲಿ ನಡೆದಿತ್ತು. ಸಭೆಯಲ್ಲಿ ಭಾಗವಹಿಸಿದ್ದ ಪ್ರತಿನಿಧಿಗಳು BBIN MVA ಅನುಷ್ಠಾನಕ್ಕಾಗಿ ಪ್ರಯಾಣಿಕರ ಮತ್ತು ಕಾರ್ಗೋ ಪ್ರೋಟೋಕಾಲ್‌ ಗೆ ಆದಷ್ಟು ಬೇಗ ಅಂತಿಮ ರೂಪ ನೀಡಲು ನಿರ್ದಿಷ್ಟ ಹಂತಗಳನ್ನು ರೂಪಿಸಲು ಮತ್ತು ಸಮಯಾವಧಿಗಳನ್ನು ನಿಗದಿಪಡಿಸಲು ಒಪ್ಪಿಕೊಂಡರು.

ಮೋಟಾರು ವಾಹನ ಒಪ್ಪಂದದ ಕುರಿತು:

ಮೂಲ’ಬಾಂಗ್ಲಾದೇಶ-ಭೂತಾನ್-ಭಾರತ-ನೇಪಾಳ – ಮೋಟಾರು ವಾಹನ ಒಪ್ಪಂದ’ ಕ್ಕೆ (Bangladesh-Bhutan-India-Nepal – Motor Vehicles Agreement अर्थात BBIN- MVA) ಎಲ್ಲಾ ನಾಲ್ಕು ದೇಶಗಳು ಜೂನ್ 2015 ರಲ್ಲಿ ಸಹಿ ಹಾಕಿದ್ದವು ಆದರೆ ಸುಸ್ಥಿರತೆ ಮತ್ತು ಪರಿಸರ ಕಾಳಜಿಗಳ ಬಗ್ಗೆ ಭೂತಾನ್‌ನಲ್ಲಿ ಆಕ್ಷೇಪಣೆಗಳು ವ್ಯಕ್ತವಾದ ನಂತರ, ಭೂತಾನ್ ಸಂಸತ್ತು ಈ ಯೋಜನೆಯನ್ನು ಅನುಮೋದಿಸದಿರಲು ನಿರ್ಧರಿಸಿತು.

  1. ಈ ಒಪ್ಪಂದವು ಸಾಗಣೆ ವೆಚ್ಚವನ್ನು ಕಡಿಮೆಗೊಳಿಸುವುದಲ್ಲದೆ,  ನಾಲ್ಕು ರಾಷ್ಟ್ರಗಳ ನಡುವೆ ವ್ಯಾಪಾರ ಚಟುವಟಿಕೆಯನ್ನೂ ಹೆಚ್ಚಸಲಿದೆ ಎನ್ನಲಾಗಿದೆ.‘ನಾಲ್ಕು ರಾಷ್ಟ್ರಗಳ ಮೋಟಾರು ವಾಹನಗಳು ಈ ವಲಯದಲ್ಲಿ ಮುಕ್ತವಾಗಿ ಸಂಚರಿಸಲು ಈ ಒಪ್ಪಂದ ಅನುವು ಮಾಡಿಕೊಡುತ್ತದೆ.ಕಸ್ಟಮ್ಸ್ ಸುಂಕಗಳು ಮತ್ತು ತೆರಿಗೆಗಳನ್ನು ಆಯಾ ದೇಶಗಳು ನಿರ್ಧರಿಸುತ್ತವೆ ಮತ್ತು ದ್ವಿಪಕ್ಷೀಯ ಮತ್ತು ತ್ರಿಪಕ್ಷೀಯ ವೇದಿಕೆಗಳಲ್ಲಿ ಅಂತಿಮಗೊಳಿಸಲಾಗುತ್ತದೆ.
  2. ಈ ಯೋಜನೆಗೆ ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್ ತನ್ನ ‘ದಕ್ಷಿಣ ಏಷ್ಯಾದ ಉಪಪ್ರಾದೇಶಿಕ ಆರ್ಥಿಕ ಸಹಕಾರ ಕಾರ್ಯಕ್ರಮ’ದ ಭಾಗವಾಗಿ ಬೆಂಬಲ ನೀಡುತ್ತಿದೆ.

 

ಈ ಯೋಜನೆಯಿಂದ ಭೂತಾನ್ ಹೊರಗುಳಿಯಲು ಕಾರಣ?

ದೇಶದಲ್ಲಿ “ಅಸ್ತಿತ್ವದಲ್ಲಿರುವ ಮೂಲಸೌಕರ್ಯ” ಮತ್ತು “ಇಂಗಾಲ-ಋಣಾತ್ಮಕ” ದೇಶವಾಗಿ ಉಳಿಯುವ ಅದರ ಪ್ರಮುಖ ಆದ್ಯತೆಯನ್ನು ಪರಿಗಣಿಸಿ, ‘ಮೋಟಾರು ವಾಹನ ಒಪ್ಪಂದ’ (MVA) ಕ್ಕೆ ಸೇರುವುದನ್ನು ಪರಿಗಣಿಸಲು ಸಾಧ್ಯವಿಲ್ಲ ಎಂದು ಭೂತಾನ್ ಹೇಳಿದೆ.

ಪ್ರಾಮುಖ್ಯತೆ:

ಪ್ರಯಾಣಿಕ ಮತ್ತು ಕಾರ್ಗೋ ಪ್ರೋಟೋಕಾಲ್‌ಗಳನ್ನು ಒಪ್ಪಿಕೊಂಡ ನಂತರ ‘ಮೋಟಾರು ವಾಹನ ಒಪ್ಪಂದ’ (MVA) ಅನುಷ್ಠಾನ ಗೊಳಿಸುವ ಮೂಲಕ, ಉಪ-ಪ್ರಾದೇಶಿಕ ಸಹಕಾರವನ್ನು ಬೆಳೆಸಿ, ‘ಬಾಂಗ್ಲಾದೇಶ-ಭೂತಾನ್-ಭಾರತ-ನೇಪಾಳ’ (BBIN) ದೇಶಗಳ ನಡುವೆ ಮತ್ತು ವ್ಯಕ್ತಿಗಳ ನಡುವೆ ಸಂಪರ್ಕ-ಸಂಬಂಧಗಳ ಸಂಪೂರ್ಣ ಸಾಮರ್ಥ್ಯವನ್ನು ಬಳಸಿಕೊಳ್ಳುವಲ್ಲಿ ಇದು ಸಹಕಾರಿಯಾಗಲಿದೆ.

 

ವಿಷಯಗಳು: ಸರ್ಕಾರದ ನೀತಿಗಳು ಮತ್ತು ವಿವಿಧ ಕ್ಷೇತ್ರಗಳಲ್ಲಿನ ಅಭಿವೃದ್ಧಿಯ ಅಡಚಣೆಗಳು ಮತ್ತು ಅವುಗಳ ವಿನ್ಯಾಸ ಮತ್ತು ಅನುಷ್ಠಾನದಿಂದ ಉಂಟಾಗುವ ಸಮಸ್ಯೆಗಳು.

ಸಮೀಕರಣ ಲೆವಿ:


(Equalisation Levy)

 

ಸಂದರ್ಭ:

ಬಹುರಾಷ್ಟ್ರೀಯ ಉದ್ಯಮಗಳು ಪೂರೈಸುವ ಸೇವೆಗಳ ಮೇಲೆ ಭಾರತವು ವಿಧಿಸಿರುವ 2 ಪರ್ಸೆಂಟ್ ಸಮೀಕರಣ ಲೆವಿಯನ್ನು (Equalisation Levy)

ಸಮರ್ಥಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ದೇಶದಲ್ಲಿ ‘ವ್ಯಾಪಾರ ಚಟುವಟಿಕೆಗಳಿಂದ’ ಗಳಿಸಿದ ಆದಾಯಕ್ಕೆ ತೆರಿಗೆ ವಿಧಿಸುವುದು ನಮ್ಮ ದೇಶದ ಸಾರ್ವಭೌಮ ಹಕ್ಕು ಎಂದು ಹೇಳಿದ್ದಾರೆ.

 

ಸಮೀಕರಣ ಲೆವಿಯ ಕುರಿತು:

ಆನ್‌ಲೈನ್ ಜಾಹೀರಾತು ಸೇವೆಗಳಿಗೆ ಮಾತ್ರ ಲೆವಿ ಸೀಮಿತವಾಗಿದ್ದರೂ, 2016 ರಲ್ಲಿ 6 ಪ್ರತಿಶತದಷ್ಟು ‘ಸಾಮಾನಿಕರಣ ಲೆವಿ’ (Equalisation Levy) ಯನ್ನು ಪರಿಚಯಿಸಿದ ಮೊದಲ ದೇಶಗಳಲ್ಲಿ ಭಾರತವೂ ಒಂದು.

ಆದಾಗ್ಯೂ, ಭಾರತದಲ್ಲಿ ಗ್ರಾಹಕರಿಗೆ ಆನ್‌ಲೈನ್ ಸರಕು ಮತ್ತು ಸೇವೆಗಳನ್ನು ಮಾರಾಟ ಮಾಡುವ ಮತ್ತು 2 ಕೋಟಿ ರೂ.ಗಿಂತ ಹೆಚ್ಚಿನ ವಾರ್ಷಿಕ ಆದಾಯವನ್ನು ತೋರಿಸುವ ವಿದೇಶಿ ಕಂಪನಿಗಳ ಮೇಲೆ ಡಿಜಿಟಲ್ ತೆರಿಗೆ ವಿಧಿಸುವಿಕೆ ಯನ್ನು 2020 ರ ಏಪ್ರಿಲ್‌ನಿಂದ ಪರಿಚಯಿಸಲಾಯಿತು.

ಅನ್ವಯಿಸುವಿಕೆ:

ಭಾರತವು ಕಳೆದ ಕೆಲವು ವರ್ಷಗಳಿಂದ, ‘ಸಾಮಾನಿಕರಣ ಲೆವಿ’(ತೆರಿಗೆ)ಯ ವ್ಯಾಪ್ತಿಯನ್ನು ದೇಶದ ಹೊರಗೆ ಇರುವ ಅನಿವಾಸಿ ಡಿಜಿಟಲ್ ಘಟಕಗಳಿಗೂ ವಿಸ್ತರಿಸಿದೆ.

 

  1. 2019-20ರ ವರೆಗೆ ಶೇಕಡಾ 6 ದರದಲ್ಲಿ ಡಿಜಿಟಲ್ ಜಾಹೀರಾತು ಸೇವೆಗಳಿಗೆ ಮಾತ್ರ ಈಕ್ವಲೈಸೇಶನ್ ಲೆವಿ ಅನ್ವಯವಾಗಿದ್ದರೂ, ಸರ್ಕಾರವು ಕಳೆದ ವರ್ಷ ಏಪ್ರಿಲ್‌ನಲ್ಲಿ ಈ ಡಿಜಿಟಲ್ ತೆರಿಗೆಯ ವ್ಯಾಪ್ತಿಯನ್ನು 2 ಕೋಟಿ ರೂ.ಗಿಂತ ಹೆಚ್ಚಿನ ವಾರ್ಷಿಕ ವ್ಯವಹಾರ ಹೊಂದಿರುವ ಅನಿವಾಸಿ ಇ-ಕಾಮರ್ಸ್ ಕಂಪನಿಗಳ ಮೇಲೆ ಶೇಕಡಾ 2 ರಷ್ಟು ತೆರಿಗೆ ವಿಧಿಸಲು ವಿಸ್ತರಿಸಲಾಯಿತು.
  2. ಹಣಕಾಸು ಕಾಯ್ದೆ 2021-22ರಲ್ಲಿ, ಇ-ಕಾಮರ್ಸ್ ಸರಬರಾಜು ಅಥವಾ ಸೇವೆಗಳನ್ನು ನಿವ್ವಳ ತೆರಿಗೆ ಅಡಿಯಲ್ಲಿ ತರಲು ಡಿಜಿಟಲ್ ತೆರಿಗೆಯ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸಲಾಯಿತು.
  3. ಮೇ 2021 ರಿಂದ ಜಾರಿಗೆ ಬರುವಂತೆ, ಭಾರತದಲ್ಲಿ 3 ಲಕ್ಷಕ್ಕೂ ಹೆಚ್ಚು ಬಳಕೆದಾರರೊಂದಿಗೆ ವ್ಯವಸ್ಥಿತವಾಗಿ ಮತ್ತು ನಿರಂತರವಾಗಿ ವ್ಯಾಪಾರ ಮಾಡುವ ಎಲ್ಲಾ ಘಟಕಗಳಿಗೆ ಡಿಜಿಟಲ್ ತೆರಿಗೆಯ ವ್ಯಾಪ್ತಿಯನ್ನು ವಿಸ್ತರಿಸಲಾಗಿದೆ.

 

ಯಾವ ಸಂದರ್ಭಗಳಲ್ಲಿ ಈ ತೆರಿಗೆ ವಿನಾಯಿತಿ ನೀಡಲಾಗುತ್ತದೆ?

ಭಾರತೀಯ ಘಟಕದ ಮೂಲಕ ಮಾರಾಟ ಮಾಡುವ ಕಡಲಾಚೆಯ ಇ-ಕಾಮರ್ಸ್ ಸಂಸ್ಥೆಗಳು ಈ ತೆರಿಗೆಯನ್ನು ಪಾವತಿಸಬೇಕಾಗಿಲ್ಲ.

  1. ಇದರರ್ಥ, ವಿದೇಶಿ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ಮಾರಾಟವಾಗುವ ಸರಕು ಮತ್ತು ಸೇವೆಗಳು ಭಾರತೀಯ ನಿವಾಸಿ ಅಥವಾ ಭಾರತ ಮೂಲದ ಶಾಶ್ವತ ಸ್ಥಾಪನೆಯ ಒಡೆತನದಲ್ಲಿದ್ದರೆ, ಅವುಗಳ ಮೇಲೆ ಶೇಕಡಾ 2 ರಷ್ಟು ‘ಈಕ್ವಲೈಸೇಶನ್ ಲೆವಿ’ ಅಥವಾ ಸಮೀಕರಣ ಲೆವಿ ವಿಧಿಸಲಾಗುವುದಿಲ್ಲ.

 

ಅದನ್ನು ಏಕೆ ವಿಧಿಸಲಾಯಿತು?

‘ಭಾರತದಲ್ಲಿ ತೆರಿಗೆ ಪಾವತಿಸುವ ಭಾರತೀಯ ವ್ಯವಹಾರಗಳು ಮತ್ತು ಭಾರತದಲ್ಲಿ ವ್ಯಾಪಾರ ಮಾಡುವ ಆದರೆ ಇಲ್ಲಿ ಯಾವುದೇ ಆದಾಯ ತೆರಿಗೆ ಪಾವತಿಸದ ವಿದೇಶಿ ಇ-ಕಾಮರ್ಸ್ ಕಂಪನಿಗಳ ನಡುವೆ ಸಮಾನ ಅವಕಾಶವನ್ನು ಒದಗಿಸಲು’ ಈಕ್ವಲೈಸೇಶನ್ ಲೆವಿ ‘ಅನ್ನು ಪರಿಚಯಿಸಲಾಯಿತು.

 

ಇತರ ಯಾವ ದೇಶಗಳಲ್ಲಿ ಡಿಜಿಟಲ್ ಮಾರಾಟಗಾರರ ಮೇಲೆ ಇಂತಹ ತೆರಿಗೆಯನ್ನು ವಿಧಿಸಲಾಗುತ್ತದೆ?

  1. ಫ್ರಾನ್ಸ್‌ನಲ್ಲಿ 3 ಪ್ರತಿಶತ ಡಿಜಿಟಲ್ ಸೇವೆಗಳ ತೆರಿಗೆ ವಿಧಿಸಲಾಗುತ್ತದೆ.
  2. ಆಸಿಯಾನ್ ಪ್ರದೇಶದಲ್ಲಿ, ಸಿಂಗಾಪುರ, ಇಂಡೋನೇಷ್ಯಾ ಮತ್ತು ಮಲೇಷ್ಯಾ ಡಿಜಿಟಲ್ ಸೇವೆಗಳ ತೆರಿಗೆಯನ್ನು ವಿಧಿಸುತ್ತವೆ ಮತ್ತು ಇತ್ತೀಚೆಗೆ ಥೈಲ್ಯಾಂಡ್ ವಿದೇಶಿ ತನ್ನ ಡಿಜಿಟಲ್ ಸೇವಾ ಪೂರೈಕೆದಾರರಿಗೆ ತೆರಿಗೆ ವಿಧಿಸುವ ಯೋಜನೆಯನ್ನು ಪ್ರಕಟಿಸಿದೆ.
  3. ಅಂತರ್ಜಾಲ ಆರ್ಥಿಕತೆಗಳ ತ್ವರಿತ ಅಭಿವೃದ್ಧಿಯ ದೃಷ್ಟಿಯಿಂದ, ಅಂತರರಾಷ್ಟ್ರೀಯ ತೆರಿಗೆ ನಿಯಮಗಳನ್ನು ಬದಲಾಯಿಸಲು 140 ದೇಶಗಳನ್ನು ಒಳಗೊಂಡ ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಸ್ಥೆ (OECD) ಯಲ್ಲಿ ಮಾತುಕತೆ ನಡೆಯುತ್ತಿದೆ.

 

ಈ ತೆರಿಗೆಯು ತಾರತಮ್ಯದಿಂದ ಕೂಡಿದೆ ಎಂದು ಅಮೆರಿಕಾದ ಟ್ರೇಡ್ ರೆಪ್ರೆಸೆಂಟೇಟಿವ್ (USTR) ಏಕೆ ವಾದಿಸುತ್ತದೆ?

  1. ಮೊದಲನೆಯದಾಗಿ, USTR ಹೇಳುವಂತೆ, ‘ಡಿಜಿಟಲ್ ಸರ್ವೀಸಸ್ ಟ್ಯಾಕ್ಸ್’ (DST) ಯುಎಸ್ ಡಿಜಿಟಲ್ ವ್ಯವಹಾರಗಳ ವಿರುದ್ಧ ತಾರತಮ್ಯವನ್ನು ತೋರಿಸುತ್ತದೆ, ಏಕೆಂದರೆ ಭಾರತವು ನಿರ್ದಿಷ್ಟವಾಗಿ ತನ್ನ ದೇಶೀಯ ಡಿಜಿಟಲ್ ವ್ಯವಹಾರಗಳನ್ನು ತೆರಿಗೆ ನಿವ್ವಳ ಅಡಿಯಲ್ಲಿ ತಂದಿಲ್ಲ ಎಂದು ಅದು ವಾದಿಸುತ್ತದೆ.
  2. ಡಿಜಿಟಲ್ ಅಲ್ಲದ ಸೇವಾ ಪೂರೈಕೆದಾರರು ಒದಗಿಸುವ ಇದೇ ರೀತಿಯ ಸೇವೆಗಳಿಗೆ DST ಅನ್ವಯಿಸುವುದಿಲ್ಲ ಎಂದು USTR ಹೇಳುತ್ತದೆ.

 

ಭಾರತವು ಡಿಜಿಟಲ್ ಸೇವಾ ತೆರಿಗೆಯನ್ನು ತಾರತಮ್ಯರಹಿತವೆಂದು ಏಕೆ ಹೇಳಿಕೊಳ್ಳುತ್ತದೆ? ಮತ್ತು ಅದರ ಅವಶ್ಯಕತೆ:

  1. ಅನಿವಾಸಿ ಡಿಜಿಟಲ್ ಸೇವಾ ಪೂರೈಕೆದಾರರು ಬಳಸುವ ವ್ಯವಹಾರ ಮಾದರಿಗಳು, ಭಾರತದಲ್ಲಿ ಭೌತಿಕ ಉಪಸ್ಥಿತಿಯನ್ನು ಹೊಂದುವ ಅಗತ್ಯವನ್ನು ನಿವಾರಿಸುತ್ತದೆ ಮತ್ತು ಇಲ್ಲಿ ಗಳಿಸಿದ ಲಾಭದ ಮೇಲೆ ಆದಾಯ ತೆರಿಗೆ ಪಾವತಿಸುವುದನ್ನು ಸುಲಭವಾಗಿ ತಪ್ಪಿಸಬಹುದು. ಆದ್ದರಿಂದ, ಅಂತಹ ತೆರಿಗೆ ವಿಧಿಸುವುದು ಅವಶ್ಯಕ.
  2. ಬದಲಾಯಿಸುತ್ತಿರುವ ಅಂತರರಾಷ್ಟ್ರೀಯ ಆರ್ಥಿಕ ಕ್ರಮ: ಡಿಜಿಟಲ್ ನಿಗಮಗಳಿಗೆ / ಕಾರ್ಪೊರೇಷನ್ ಗಳಿಗೆ ದೊಡ್ಡ ಮಾರುಕಟ್ಟೆಗಳನ್ನು ಒದಗಿಸುವ ಭಾರತದಂತಹ ದೇಶಗಳು ತಮ್ಮ ದೇಶದಲ್ಲಿ ಗಳಿಸಿದ ಆದಾಯಕ್ಕೆ ತೆರಿಗೆ ವಿಧಿಸುವ ಹಕ್ಕನ್ನು ಹೊಂದಿರಬೇಕು.

 

ಸಂಬಂಧಿತ ಕಾಳಜಿಗಳು:

  1. ಅಂತಿಮವಾಗಿ, ಈ ತೆರಿಗೆ ಡಿಜಿಟಲ್ ಗ್ರಾಹಕರಿಗೆ ಹೊರೆಯಾಗಬಹುದು.
  2. ಇದರ ಪರಿಣಾಮವಾಗಿ, ಭಾರತದ ಮೇಲೂ ಇಂತಹ ಪ್ರತೀಕಾರದ ತೆರಿಗೆಗಳನ್ನು ವಿಧಿಸಲು ಕಾರಣವಾಗಬಹುದು.(ಉದಾಹರಣೆಗೆ ಯುಎಸ್ ಇತ್ತೀಚೆಗೆ ಘೋಷಿಸಿದ ತೆರಿಗೆ). ಕೆಲವು ಸಮಯದ ಹಿಂದೆ ಇದೇ ರೀತಿಯ ಸುಂಕವನ್ನು ಯುಎಸ್ ಫ್ರಾನ್ಸ್ ಮೇಲೆ ಹೇರಿತು.
  3. ಇದು ಡಬಲ್ ತೆರಿಗೆಯಾಗಿಯೂ ಬದಲಾಗಬಹುದು. ಅಂದರೆ ಎರಡೆರಡು ಬಾರಿ ತೆರಿಗೆ ವಿಧಿಸುವಿಕೆಗೆ ಕಾರಣವಾಗಬಹುದು.

 

ನಿಮಗಿದು ಗೊತ್ತೆ?

ಅಕ್ಟೋಬರ್ 2021 ರಲ್ಲಿ, G20 ದೇಶಗಳು 15 ಪ್ರತಿಶತ ಕನಿಷ್ಠ ಕಾರ್ಪೊರೇಟ್ ತೆರಿಗೆಯನ್ನು ವಿಧಿಸಲು ಮತ್ತು ದೊಡ್ಡ-ಲಾಭದಾಯಕ ಬಹುರಾಷ್ಟ್ರೀಯ ಉದ್ಯಮಗಳ ಮೇಲೆ (MNEs) – ಅವುಗಳು ವ್ಯಾಪಾರ ವಹಿವಾಟು ನಡೆಸುವ ದೇಶಗಳಿಗೆ ತೆರಿಗೆ ವಿಧಿಸುವ ಅಧಿಕಾರವನ್ನು ನೀಡಲು ಜಾಗತಿಕ ಒಪ್ಪಂದವನ್ನು ಅನುಮೋದಿಸಲಾಗಿದೆ.

 


ಸಾಮಾನ್ಯ ಅಧ್ಯಯನ ಪತ್ರಿಕೆ : 3


 

ವಿಷಯಗಳು: ಮಾಹಿತಿ ತಂತ್ರಜ್ಞಾನ, ಬಾಹ್ಯಾಕಾಶ, ಕಂಪ್ಯೂಟರ್, ರೊಬೊಟಿಕ್ಸ್, ನ್ಯಾನೊ-ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ಬೌದ್ಧಿಕ ಆಸ್ತಿ ಹಕ್ಕುಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಜಾಗೃತಿ.

 ಸೂರ್ಯನ ವರ್ಣಗೋಳದಾದ್ಯಂತ ಸಂಭವಿಸುವ ಪ್ಲಾಸ್ಮಾದ ಜೆಟ್‌ಗಳ ಹಿಂದಿನ ವಿಜ್ಞಾನವನ್ನು ಬಿಚ್ಚಿಟ್ಟ ವಿಜ್ಞಾನಿಗಳು:


(Scientists unravell the science behind jets of plasma occurring all over Sun’s chromosphere)

 

ಸಂದರ್ಭ:

ಇತ್ತೀಚೆಗೆ, ವಿಜ್ಞಾನಿಗಳು ಸೂರ್ಯನ ಸಂಪೂರ್ಣ ವರ್ಣಗೋಳ (Chromosphere) ದಲ್ಲಿ ಹುಟ್ಟುವ ವಿದ್ಯುದಾವೇಶದ ಕಣಗಳಿಂದ ರಚಿಸಲಾದ ‘ದ್ರವ್ಯದ ನಾಲ್ಕನೇ ಸ್ಥಿತಿ’ (Fourth State of Matter) – ‘ಪ್ಲಾಸ್ಮಾದ ವೇಗದ ಪ್ರವಾಹಗಳು’ ಅಂದರೆ ‘ಜೆಟ್ಸ್ ಆಫ್ ಪ್ಲಾಸ್ಮಾ’ (Jets of Plasma) ದ  ಹಿಂದಿನ ವಿಜ್ಞಾನವನ್ನು ಕಂಡುಹಿಡಿದಿದ್ದಾರೆ. ಸೌರ ವರ್ಣಗೋಳ, ಅಂದರೆ ‘ಕ್ರೋಮೋಸ್ಪಿಯರ್’, ಇದು ಸೂರ್ಯನ ಗೋಚರ ಮೇಲ್ಮೈಗಿಂತ ಸ್ವಲ್ಪ ಮೇಲಿರುವ ವಾತಾವರಣದ ಪದರವಾಗಿದೆ.

 

‘ಜೆಟ್ಸ್ ಆಫ್ ಪ್ಲಾಸ್ಮಾ’ (Jets of Plasma)ಕುರಿತು:

  1. ಜೆಟ್‌ಗಳು, ಅಥವಾ ‘ಸ್ಪಿಕ್ಯೂಲ್‌ಗಳು’, ತೆಳುವಾದ ಹುಲ್ಲಿನಂತಿರುವ ‘ಪ್ಲಾಸ್ಮಾ ರಚನೆಗಳಂತೆ’ ಗೋಚರಿಸುತ್ತವೆ, ಅದು ನಿರಂತರವಾಗಿ ಮೇಲ್ಮೈ ಮೇಲೆ ಏರುತ್ತದೆ ಮತ್ತು ನಂತರ ಗುರುತ್ವಾಕರ್ಷಣೆಯಿಂದ ಕೆಳಗೆ ಬೀಳುತ್ತದೆ.
  2. ಈ ಜೆಟ್‌ಗಳು ಅಥವಾ ಸ್ಪಿಕ್ಯೂಲ್‌ಗಳಲ್ಲಿ ಇರುವ ಶಕ್ತಿ ಮತ್ತು ಆವೇಗದ ವಿಭವವು ಸೌರ ಮತ್ತು ಪ್ಲಾಸ್ಮಾ ಖಗೋಳ ಭೌತಶಾಸ್ತ್ರದಲ್ಲಿ ಕುತೂಹಲಕ್ಕೆ ಮೂಲ ಕಾರಣವಾಗಿದೆ.

Current Affairs

 

ಅವು ಹೇಗೆ ರೂಪುಗೊಳ್ಳುತ್ತವೆ? ಇತ್ತೀಚಿನ ಸಂಶೋಧನೆಗಳು ಯಾವುವು?

ಇತ್ತೀಚೆಗೆ ‘ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್’ ಖಗೋಳಶಾಸ್ತ್ರಜ್ಞರು ಈ ‘ಜೆಟ್ಸ್ ಆಫ್ ಪ್ಲಾಸ್ಮಾ’ದ ಹಿಂದಿನ ವಿಜ್ಞಾನವನ್ನು ಅರ್ಥಮಾಡಿಕೊಳ್ಳಲು ಪ್ರಯೋಗವನ್ನು ಮಾಡಿದ್ದಾರೆ.

  1. ಒಂದು ಸ್ಟಿಕ್ಕರ್ ಅನ್ನು ಗಟ್ಟಿಯಾಗಿ ನುಡಿಸಿದಾಗ ಸ್ಪೀಕರ್‌ನಲ್ಲಿ ಚಿತ್ರಿಸಿದ ಜೆಟ್‌ಗಳ ಆಧಾರವಾಗಿರುವ ಭೌತಶಾಸ್ತ್ರವು ‘ಸೌರ ಪ್ಲಾಸ್ಮಾ ಜೆಟ್‌ಗಳಿಗೆ’ ಹೋಲುತ್ತದೆ ಎಂದು ಈ ವಿಜ್ಞಾನಿಗಳು ಕಂಡುಕೊಂಡಿದ್ದಾರೆ.
  2. ದ್ರವವನ್ನು ಸ್ಪೀಕರ್‌ನ ಮೇಲೆ ಇರಿಸಿದಾಗ ಮತ್ತು ಸಂಗೀತವು ಆನ್ ಆಗಿರುವಾಗ, ದ್ರವದ ‘ಮುಕ್ತ ಮೇಲ್ಮೈ’ ನಿರ್ದಿಷ್ಟ ಆವರ್ತನವನ್ನು ಮೀರಿ ‘ಅಸ್ಥಿರ’ ಆಗುತ್ತದೆ ಮತ್ತು ಕಂಪಿಸಲು ಪ್ರಾರಂಭಿಸುತ್ತದೆ.

ಇದರ ಮೇಲೆ, ಈ ಪೇಂಟ್ ಜೆಟ್‌ಗಳ ಆಧಾರವಾಗಿರುವ ಹಿಂದಿನ ಭೌತಶಾಸ್ತ್ರವು ಸೌರ ಪ್ಲಾಸ್ಮಾ ಜೆಟ್‌ಗಳಿಗೆ ಹೊಂದಿಕೆಯಾಗಬೇಕು ಎಂದು ಸಂಶೋಧಕರು ತೀರ್ಮಾನಿಸಿದ್ದಾರೆ.

ಗೋಚರ ಸೌರ ಮೇಲ್ಮೈಗಿಂತ ಸ್ವಲ್ಪ ಕೆಳಗಿರುವ ಪ್ಲಾಸ್ಮಾ (ದ್ಯುತಿಗೋಳ) ಯಾವಾಗಲೂ ಸಂವಹನ ಸ್ಥಿತಿಯಲ್ಲಿದೆ ಮತ್ತು ಕೆಳಭಾಗದಲ್ಲಿ ಬಿಸಿಮಾಡಿದ ಪಾತ್ರೆಯಲ್ಲಿ ಕುದಿಯುವ ನೀರಿನಂತೆ ಎಂದು ವಿಜ್ಞಾನಿಗಳು ವಿವರಿಸುತ್ತಾರೆ.

  1. ಈ ಪ್ಲಾಸ್ಮಾ, ಅಂತಿಮವಾಗಿ, ಬಿಸಿ-ದಟ್ಟವಾದ ಕೋರ್‌ನಲ್ಲಿ ಬಿಡುಗಡೆಯಾದ ಪರಮಾಣು ಶಕ್ತಿಯಿಂದ ನಡೆಸಲ್ಪಡುತ್ತದೆ. ‘ಸಂವಹನ’ದ ಕ್ರಿಯೆಯು ಬಹುತೇಕ ನಿಯತಕಾಲಿಕವಾಗಿ ಕಾರ್ಯನಿರ್ವಹಿಸುತ್ತದೆ, ಆದರೆ ಪ್ಲಾಸ್ಮಾವನ್ನು ಮುಂದೂಡಲು ‘ಸೌರ ವರ್ಣಗೋಳ’ದಲ್ಲಿ ಇತರ ಶಕ್ತಿಯುತ ಅಂಶಗಳು/ಪ್ರಕ್ಷೇಪಗಳಿವೆ.
  2. ಸೂರ್ಯನ ವರ್ಣಗೋಳವು ದ್ಯುತಿ ಗೋಳದ ಮೇಲ್ಮೈಯಲ್ಲಿರುವ ಪ್ಲಾಸ್ಮಾಕ್ಕಿಂತ 500 ಪಟ್ಟು ಹಗುರವಾಗಿರುತ್ತದೆ.ಆದ್ದರಿಂದ, ಕೆಳಗಿನ ಮೇಲ್ಮೈಯಿಂದ ಈ ಬಲವಾದ ಪ್ರಕ್ಷೇಪಣಗಳು ಅಥವಾ ಒದೆತಗಳು ತೆಳುವಾದ ಸ್ಟ್ರೀಮ್‌ಗಳು ಅಥವಾ ಸ್ಪಿಕ್ಯೂಲ್‌ಗಳ ರೂಪದಲ್ಲಿ ‘ಅಲ್ಟ್ರಾಸಾನಿಕ್ ವೇಗದಲ್ಲಿ’ ‘ಕ್ರೋಮೋಸ್ಫಿರಿಕ್ ಪ್ಲಾಸ್ಮಾ’ವನ್ನು ಹೊರಕ್ಕೆ ಹಾರಿಸುತ್ತವೆ.

Current Affairs

 

 


ಸಾಮಾನ್ಯ ಅಧ್ಯಯನ ಪತ್ರಿಕೆ : 4


 

ವಿಷಯಗಳು: ನೈತಿಕತೆ ಮತ್ತು ಸಮಗ್ರತೆ.

ಡಿಜಿಟಲ್ ಮಾಧ್ಯಮಕ್ಕೆ ಸಂಬಂಧಿಸಿದಂತೆ ನೀತಿಸಂಹಿತೆ ಮತ್ತು ಕಾರ್ಯವಿಧಾನ ಮತ್ತು ಸುರಕ್ಷತೆಗಳು:


(The code of ethics and procedure, and safeguards in relation to the digital media)

 ಸಂದರ್ಭ:

ಮಾಹಿತಿ ಮತ್ತು ಪ್ರಸಾರ ಸಚಿವಾಲಯ (I&B ಸಚಿವಾಲಯ) ವು, ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶ ಸರ್ಕಾರಗಳ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ನಿರ್ದೇಶನಾಲಯವನ್ನು (DIPR) ಸಂಪರ್ಕಿಸಿದ್ದು, ತಮ್ಮ ಅಧಿಕಾರಿಗಳಿಗೆ ‘ನೀತಿ ಸಂಹಿತೆ ಮತ್ತು ಕಾರ್ಯವಿಧಾನ ಮತ್ತು ಡಿಜಿಟಲ್ ಮಾಧ್ಯಮಕ್ಕೆ ಸಂಬಂಧಿಸಿದಂತೆ ‘ಸುರಕ್ಷತಾ ಕ್ರಮಗಳು’ ಕುರಿತು ಜಾಗೃತಿ ಮೂಡಿಸಲು ಜಾಗೃತಿ ಅಭಿಯಾನವನ್ನು ಪ್ರಾರಂಭಿಸಲು ಸೂಚಿಸಿದೆ.

  1. 2021ರ ಫೆಬ್ರವರಿ 25 ರಂದು,ಕೇಂದ್ರವು ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಸಂಸ್ಥೆಗಳಿಗೆ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮೀಡಿಯಾ ನೀತಿ ಸಂಹಿತೆ) ನಿಯಮಗಳು 2021 (the Information Technology (Intermediary Guidelines and Digital Media Ethics Code) Rules 2021) ಅನ್ನು  ಮಾಹಿತಿ ತಂತ್ರಜ್ಞಾನ ಕಾಯ್ದೆ 2000 ರ ಸೆಕ್ಷನ್ 87 (2) ರ ಅಡಿಯಲ್ಲಿ ಅಧಿಕಾರವನ್ನು ಚಲಾಯಿಸುವ ಮೂಲಕ ಮತ್ತು ಹಿಂದಿನ ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗಸೂಚಿಗಳು) ನಿಯಮಗಳು 2011 (Information Technology (Intermediary Guidelines) Rules 2011),ಅನ್ನು ರೂಪಿಸಿದ್ದು ಇದು ಡಿಜಿಟಲ್ ಸುದ್ದಿ ಪ್ರಕಾಶಕರಿಗೆ ಸಂಬಂಧಿಸಿದೆ.
  2. ಈ ನಿಯಮಗಳನ್ನು ‘ಮಾಹಿತಿ ಮತ್ತು ಪ್ರಸಾರ ಸಚಿವಾಲಯ’ದ ಮೇಲ್ವಿಚಾರಣೆಯಲ್ಲಿ ಜಾರಿಗೊಳಿಸಲಾಗುತ್ತಿದೆ.

 

ಹೊಸ ನಿಯಮಗಳ ಅವಲೋಕನ:

  1. ಇದು OTT ಸೇವಾ ಪೂರೈಕೆದಾರರು ಮತ್ತು ಡಿಜಿಟಲ್ ಪೋರ್ಟಲ್ ಗಳಿಗೆ ಕುಂದುಕೊರತೆ ನಿವಾರಣಾ ವ್ಯವಸ್ಥೆ ಯನ್ನು ರೂಪಿಸುವುದನ್ನು ಕಡ್ಡಾಯಗೊಳಿಸುತ್ತದೆ. ಸಾಮಾಜಿಕ ಮಾಧ್ಯಮದ ದುರುಪಯೋಗದ ವಿರುದ್ಧ ತಮ್ಮ ಕುಂದುಕೊರತೆಗಳನ್ನು ವ್ಯಕ್ತಪಡಿಸಲು ಸೋಶಿಯಲ್ ಮೀಡಿಯಾದ ಗ್ರಾಹಕರಿಗೆ ಇದು ಅತ್ಯವಶ್ಯಕವಾಗಿದೆ.
  2. ಮಹತ್ವದ ಸಾಮಾಜಿಕ ಮಾಧ್ಯಮ ಸಂಸ್ಥೆಗಳು ಮುಖ್ಯ ಅನುಸರಣೆ ಅಧಿಕಾರಿಯನ್ನು(chief compliance officer) ನೇಮಿಸುವುದು ಸಹ ಕಡ್ಡಾಯವಾಗಿರುತ್ತದೆ ಮತ್ತು ಕಾನೂನು ಜಾರಿ ಸಂಸ್ಥೆಗಳೊಂದಿಗೆ 24 × 7 ಸಮನ್ವಯಕ್ಕಾಗಿ ಸಾಮಾಜಿಕ ಮಾಧ್ಯಮ ಮಧ್ಯವರ್ತಿಗಳು (social media intermediaries ) ನೋಡಲ್ ಸಂಪರ್ಕ ವ್ಯಕ್ತಿಯನ್ನು (nodal contact person)ನೇಮಿಸುವುದು ಕಡ್ಡಾಯವಾಗಿರುತ್ತದೆ.
  3. ಕುಂದುಕೊರತೆ ನಿವಾರಣಾ ಅಧಿಕಾರಿ: ಸಾಮಾಜಿಕ ಮಾಧ್ಯಮ ಸಂಸ್ಥೆಗಳು ದೂರುಗಳನ್ನು ನಿರ್ವಹಿಸಲು ಕುಂದುಕೊರತೆ ನಿವಾರಣಾ ಅಧಿಕಾರಿಯನ್ನು ನೇಮಿಸಬೇಕಾಗುತ್ತದೆ. ಅವರು ದೂರನ್ನು 24 ಗಂಟೆಗಳ ಒಳಗೆ ದಾಖಲಿಸಿಕೊಂಡು 15 ದಿನಗಳಲ್ಲಿ ವಿಲೇವಾರಿ ಮಾಡಬೇಕಾಗುತ್ತದೆ.
  4. ವಿಷಯವನ್ನು ತೆಗೆದುಹಾಕುವುದು: ಬಳಕೆದಾರರ ಘನತೆಗೆ ವಿರುದ್ಧವಾಗಿ, ವಿಶೇಷವಾಗಿ ಮಹಿಳೆಯರ – ಬಹಿರಂಗಗೊಂಡ ಅವರ ವೈಯಕ್ತಿಕ ಖಾಸಗಿ ಅಂಗಗಳ ಬಗ್ಗೆ ಅಥವಾ ನಗ್ನತೆ ಅಥವಾ ಲೈಂಗಿಕ ಕ್ರಿಯೆ ಅಥವಾ ಸೋಗು ಹಾಕುವಿಕೆ ಇತ್ಯಾದಿಗಳ ಬಗ್ಗೆ ದೂರುಗಳಿದ್ದರೆ – ದೂರು ನೀಡಿದ 24 ಗಂಟೆಗಳ ಒಳಗೆ ಅದನ್ನು ತೆಗೆದುಹಾಕಲು ಸಾಮಾಜಿಕ ಮಾಧ್ಯಮ ವೇದಿಕೆಗಳು ಕ್ರಮಕೈಗೊಳ್ಳುವುದು ಅಗತ್ಯವಾಗಿರುತ್ತದೆ.
  5. ಮಾಸಿಕ ವರದಿ: ಸ್ವೀಕರಿಸಿದ ಒಟ್ಟು ದೂರುಗಳ ಸಂಖ್ಯೆ ಮತ್ತು ಪರಿಹಾರದ ಸ್ಥಿತಿಯ ಬಗ್ಗೆ ಅವರು ಮಾಸಿಕ ವರದಿಯನ್ನು ಪ್ರಕಟಿಸಬೇಕಾಗುತ್ತದೆ.
  6. ಸುದ್ದಿ ಪ್ರಕಾಶಕರಿಗೆ ಮೂರು ಹಂತದ ನಿಯಂತ್ರಣ ಇರುತ್ತದೆ – ಸ್ವಯಂ ನಿಯಂತ್ರಣ,ನಿವೃತ್ತ ನ್ಯಾಯಾಧೀಶರು ಅಥವಾ ಶ್ರೇಷ್ಠ ವ್ಯಕ್ತಿಯ ನೇತೃತ್ವದ ಸ್ವಯಂ-ನಿಯಂತ್ರಕ ಸಂಸ್ಥೆ, ಮತ್ತು ಅಭ್ಯಾಸಗಳ ಸಂಹಿತೆಗಳು ಮತ್ತು ಕುಂದುಕೊರತೆ ನಿವಾರಣಾ ಸಮಿತಿ ಸೇರಿದಂತೆ,ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಮೇಲ್ವಿಚಾರಣೆ.

 

ಮಹತ್ವದ ಸಾಮಾಜಿಕ ಮಾಧ್ಯಮ ಮಧ್ಯವರ್ತಿ ಸಂಸ್ಥೆಗಳು ಎಂದರೇನು? ಮತ್ತು ಅದರ ಅಡಿಯಲ್ಲಿ ಪಡೆದ ಲಾಭಗಳು ಯಾವುವು?

ಹೊಸ ಮಾನದಂಡಗಳ ಪ್ರಕಾರ, 50 ಲಕ್ಷಕ್ಕೂ ಹೆಚ್ಚು ನೋಂದಾಯಿತ ಬಳಕೆದಾರರನ್ನು ಹೊಂದಿರುವ ಸಾಮಾಜಿಕ ಮಾಧ್ಯಮ ಕಂಪನಿಗಳನ್ನು ‘ಮಹತ್ವದ ಸಾಮಾಜಿಕ ಮಾಧ್ಯಮ ಮಧ್ಯವರ್ತಿಗಳು’ ಎಂದು ಪರಿಗಣಿಸಲಾಗುತ್ತದೆ.

 

ಹೊಸ ನಿಯಮಗಳನ್ನು ಅನುಸರಿಸದಿದ್ದರೆ ಆಗುವ ಪರಿಣಾಮಗಳು:

  1. ಸಾಮಾಜಿಕ ಮಾಧ್ಯಮ ದೈತ್ಯ ಸಂಸ್ಥೆಗಳಾದ ಫೇಸ್‌ಬುಕ್, ಟ್ವಿಟರ್, ಇನ್‌ಸ್ಟಾಗ್ರಾಮ್ ಮತ್ತು ವಾಟ್ಸಾಪ್ ಮೆಸೆಂಜರ್ ಹೊಸ ಮಾಹಿತಿ ತಂತ್ರಜ್ಞಾನ ನಿಯಮಗಳನ್ನು ಪಾಲಿಸದಿದ್ದರೆ ನಿಷೇಧವನ್ನು(could face a ban) ಎದುರಿಸಬೇಕಾಗುತ್ತದೆ.
  2. ಅವರು “ಸಾಮಾಜಿಕ ಮಾಧ್ಯಮ ಮಧ್ಯವರ್ತಿಗಳು” ಎಂಬ ಸ್ಥಾನಮಾನವನ್ನು ಕಳೆದುಕೊಳ್ಳುವ ಅಪಾಯವನ್ನು ಸಹ ಎದುರಿಸಬೇಕಾಗುತ್ತದೆ ಮತ್ತು ಅವರು ಪರಿಷ್ಕೃತ ನಿಯಮಗಳನ್ನು ಪಾಲಿಸದಿದ್ದರೆ ಕ್ರಿಮಿನಲ್ ಕ್ರಮಗಳನ್ನು ಎದುರಿಸಲು ಹೊಣೆಗಾರರಾಗಬಹುದು.

 

ಸಂಬಂಧಿತ ಕಳವಳಗಳು:

  1. ವಿಶೇಷವಾಗಿ ಸಾಂಕ್ರಾಮಿಕ ರೋಗದ ದೃಷ್ಟಿಯಿಂದ, ಹಲವು ಉದ್ಯಮ ಸಂಸ್ಥೆಗಳು ಒಂದು ವರ್ಷದವರೆಗೆ ಅನುಸರಣಾ ವಿಂಡೋಗಾಗಿ ಸರ್ಕಾರಕ್ಕೆ ಪತ್ರ ಬರೆದಿವೆ.
  2. ಹೊಸ ನಿಯಮಗಳ ಅಡಿಯಲ್ಲಿ ಐಟಿ ಕಾಯ್ದೆಯ ಸೆಕ್ಷನ್ 79 ರ ಅಡಿಯಲ್ಲಿ ಮಧ್ಯವರ್ತಿಗಳಿಗೆ ನೀಡಲಾಗುವ ‘ಸುರಕ್ಷಿತ ಬಂದರು’ (ಸೇಫ್ ಹಾರ್ಬರ್ ನಿಬಂಧನೆಗಳನ್ನು) ಭದ್ರತೆ ಲಭ್ಯವಿಲ್ಲದಿರುವ ಬಗ್ಗೆಯೂ ಕಳವಳ ವ್ಯಕ್ತಪಡಿಸಲಾಗಿದೆ.
  3. ಇದು,ಮಧ್ಯವರ್ತಿಗಳ ಅನುಸರಣೆಗಾಗಿ ನೌಕರರ ಮೇಲೆ ಕ್ರಿಮಿನಲ್ ಹೊಣೆಗಾರಿಕೆಯನ್ನು ಹೇರಲು ಕಾರಣವಾಗಬಹುದಾದ, ನಿಯಮಗಳಲ್ಲಿನ ಒಂದು ಷರತ್ತಿನ್ನು ಮರು-ಪರಿಶೀಲಿಸುವಂತೆ ಅವರು ವಿನಂತಿಸಿದ್ದಾರೆ, ವ್ಯವಹಾರವನ್ನು ಸುಲಭಗೊಳಿಸುವ ಹಿತದೃಷ್ಟಿಯಿಂದ ಅದನ್ನು ಕೈಬಿಡಬೇಕೆಂದು ಕೇಳಿಕೊಳ್ಳುತ್ತಾರೆ.
  4. ಎಂಡ್-ಟು-ಎಂಡ್ ಎನ್‌ಕ್ರಿಪ್ಟ್ ಮಾಡಲಾದ ಪ್ಲ್ಯಾಟ್‌ಫಾರ್ಮ್‌ಗಳಲ್ಲಿನ ಮಾಹಿತಿಯ ಮೊದಲ ಮೂಲ ವ್ಯಕ್ತಿಯ ಅಥವಾ ಒರಿಜಿನೇಟರ್ ನ ಪತ್ತೆಹಚ್ಚುವಿಕೆ ಆದೇಶವು ಸಾಮಾಜಿಕ ಮಾಧ್ಯಮ ವೇದಿಕೆಯ ಭದ್ರತಾ ವಿನ್ಯಾಸವನ್ನು ದುರ್ಬಲಗೊಳಿಸಬಹುದು. ಇದು ಇಡೀ ಸಾಮಾಜಿಕ ಮಾಧ್ಯಮ ಬಳಕೆದಾರರನ್ನು ಪ್ರತಿಕೂಲ ವ್ಯಕ್ತಿಗಳಿಂದ ಸೈಬರ್‌ ದಾಳಿಗೆ ಗುರಿಯಾಗಿಸಬಹುದು.
  5. ಹೆಚ್ಚುವರಿಯಾಗಿ, ಅಸ್ತಿತ್ವದಲ್ಲಿರುವ ದತ್ತಾಂಶ ಉಳಿಸಿಕೊಳ್ಳುವ ಆದೇಶವು ಭದ್ರತಾ ಅಪಾಯಗಳು ಮತ್ತು ತಾಂತ್ರಿಕ ಸಂಕೀರ್ಣತೆಗಳ ಜೊತೆಗೆ ಭಾರತ ಮತ್ತು ವಿದೇಶಗಳಲ್ಲಿನ ಬಳಕೆದಾರರ ಗೌಪ್ಯತೆಗೆ ಅಪಾಯವನ್ನುಂಟುಮಾಡುತ್ತದೆ, ಇದು ಅಸ್ತಿತ್ವದಲ್ಲಿರುವ ಪರಿಸರ ವ್ಯವಸ್ಥೆಯೊಂದಿಗೆ ಏಕೀಕರಣದ ಮೊದಲು ಅಭಿವೃದ್ಧಿ ಮತ್ತು ಪರೀಕ್ಷೆಗೆ ಸಾಕಷ್ಟು ಸಮಯ ಬೇಕಾಗುತ್ತದೆ.

 


ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ಸಂಗತಿಗಳು:


 SLINEX:

  1. ಶ್ರೀಲಂಕಾ-ಭಾರತ ನೌಕಾ ಸಮರಾಭ್ಯಾಸ (Sri Lanka–India Naval Exercise – SLINEX) ದ ಭಾರತ-ಶ್ರೀಲಂಕಾ ದ್ವಿಪಕ್ಷೀಯ ಕಡಲ ಸಮರಾಭ್ಯಾಸದ ಒಂಬತ್ತನೇ ಆವೃತ್ತಿಯನ್ನು ವಿಶಾಖಪಟ್ಟಣಂನಲ್ಲಿ ನಡೆಸಲಾಗುತ್ತಿದೆ.
  2. ‘Slinex’ ನ ಉದ್ದೇಶವು ಪರಸ್ಪರ ಕಾರ್ಯಸಾಧ್ಯತೆಯನ್ನು ಹೆಚ್ಚಿಸುವುದು, ಪರಸ್ಪರ ತಿಳುವಳಿಕೆಯನ್ನು ಸುಧಾರಿಸುವುದು ಮತ್ತು ಎರಡು ನೌಕಾಪಡೆಗಳ ನಡುವಿನ ಬಹುಮುಖಿ ಸಮುದ್ರ ಕಾರ್ಯಾಚರಣೆಗಳಿಗಾಗಿ ಉತ್ತಮ ಅಭ್ಯಾಸಗಳು ಮತ್ತು ಕಾರ್ಯವಿಧಾನಗಳನ್ನು ವಿನಿಮಯ ಮಾಡಿಕೊಳ್ಳುವುದು.

 

ಭಾರತ ಮತ್ತು ಶ್ರೀಲಂಕಾ ನಡುವಿನ ಇತರ ಸಮರಾಭ್ಯಾಸಗಳ ಬಗ್ಗೆ ನಿಮಗೆ ತಿಳಿದಿದೆಯೇ?

  1. ‘ಮಿತ್ರ ಶಕ್ತಿ’ (ಮಿಲಿಟರಿ ವ್ಯಾಯಾಮ).
  2. ‘ದೋಸ್ತಿ’ ತ್ರಿಪಕ್ಷೀಯ ವ್ಯಾಯಾಮ (ಭಾರತ, ಮಾಲ್ಡೀವ್ಸ್ ಮತ್ತು ಶ್ರೀಲಂಕಾದ ಕೋಸ್ಟ್ ಗಾರ್ಡ್ ಪಡೆಗಳ ನಡುವೆ).

 

ಸ್ಟಾರ್ಟ್ಅಪ್ ವಿಲೇಜ್ ಎಂಟರ್ಪ್ರೆನ್ಯೂರ್ಶಿಪ್ ಪ್ರೋಗ್ರಾಂ (SVEP):

ದೀನದಯಾಳ್ ಅಂತ್ಯೋದಯ ಯೋಜನೆ-ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ (DAY-NRLM) ನ ಉಪ-ಘಟಕವಾದ ಸ್ಟಾರ್ಟ್-ಅಪ್ ವಿಲೇಜ್ ಎಂಟರ್‌ಪ್ರೆನ್ಯೂರ್‌ಶಿಪ್ ಪ್ರೋಗ್ರಾಂ (SVEP) ಅನ್ನು ಗ್ರಾಮೀಣಾಭಿವೃದ್ಧಿ ಸಚಿವಾಲಯವು 2016 ರಲ್ಲಿ ಉಪ-ಯೋಜನೆಯಾಗಿ ಪ್ರಾರಂಭಿಸಿತು.

ಯೋಜನೆಯ ಗಮನ: ಉದ್ಯಮಗಳನ್ನು ಉತ್ತೇಜಿಸಲು ಸ್ಥಳೀಯ ಸಮುದಾಯ ಕೇಡರ್ ಅನ್ನು ರಚಿಸುವಾಗ ವ್ಯಾಪಾರ ನಿರ್ವಹಣೆ ಮತ್ತು ಸಾಫ್ಟ್ ಸ್ಕಿಲ್‌ಗಳಲ್ಲಿ ಹಣಕಾಸಿನ ನೆರವು ಮತ್ತು ತರಬೇತಿಯೊಂದಿಗೆ ಸ್ವಯಂ ಉದ್ಯೋಗ ಅವಕಾಶಗಳನ್ನು ಒದಗಿಸುವುದು.

ಅಹಮದಾಬಾದ್‌ನ ವಾಣಿಜ್ಯೋದ್ಯಮ ಅಭಿವೃದ್ಧಿ ಸಂಸ್ಥೆ (EDII), SVEP ಯ ತಾಂತ್ರಿಕ ಬೆಂಬಲ ಪಾಲುದಾರನಾಗಿದೆ.

SVEP ವೈಯಕ್ತಿಕ ಮತ್ತು ಗುಂಪು ಉದ್ಯಮಗಳನ್ನು ಉತ್ತೇಜಿಸುತ್ತದೆ, ಪ್ರಾಥಮಿಕವಾಗಿ ಉತ್ಪಾದನೆ, ವ್ಯಾಪಾರ ಮತ್ತು ಸೇವಾ ವಲಯಗಳಲ್ಲಿ ಉದ್ಯಮಗಳನ್ನು ಸ್ಥಾಪಿಸುತ್ತದೆ ಮತ್ತು ಉತ್ತೇಜಿಸುತ್ತದೆ.

 

ಸಮುದಾಯ ಸಂಪನ್ಮೂಲ ವ್ಯಕ್ತಿಗಳು:

ಈ ಕಾರ್ಯಕ್ರಮದ ಇನ್ನೊಂದು ಉದ್ದೇಶವೆಂದರೆ ವಾಣಿಜ್ಯೋದ್ಯಮ ಪ್ರಚಾರ (Community Resource Persons – Enterprise Promotion – CRP-EP) ‘ಸಮುದಾಯ ಸಂಪನ್ಮೂಲ ವ್ಯಕ್ತಿಗಳ’ ಒಂದು ಪೂಲ್ ಅನ್ನು ಅಭಿವೃದ್ಧಿಪಡಿಸುವುದು. ಈ ಗುಂಪು ಸ್ಥಳೀಯ ಜನರ ಗುಂಪಾಗಿರುತ್ತದೆ, ಅವರು ಗ್ರಾಮೀಣ ಉದ್ಯಮಗಳನ್ನು ಸ್ಥಾಪಿಸುವ ಉದ್ಯಮಿಗಳಿಗೆ ಬೆಂಬಲವನ್ನು ನೀಡುತ್ತಾರೆ.

ಸುದ್ದಿಯಲ್ಲಿರಲು ಕಾರಣ?

ಇತ್ತೀಚೆಗೆ, ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯದ ಅಡಿಯಲ್ಲಿ ಸ್ವಾಯತ್ತ ಸಂಸ್ಥೆಯಾದ ರಾಷ್ಟ್ರೀಯ ಉದ್ಯಮಶೀಲತೆ ಮತ್ತು ಸಣ್ಣ ಉದ್ಯಮ ಅಭಿವೃದ್ಧಿ ಸಂಸ್ಥೆ (NIESBUD), ಸ್ಟಾರ್ಟ್-ಅಪ್ ವಿಲೇಜ್ ಎಂಟರ್‌ಪ್ರೆನ್ಯೂರ್‌ಶಿಪ್ ಪ್ರೋಗ್ರಾಂ (Startup Village Entrepreneurship Programme – SVEP) ಉಪಕ್ರಮವನ್ನು ತಳಮಟ್ಟದಲ್ಲಿ ಉದ್ಯಮಶೀಲತೆಯನ್ನು ಉತ್ತೇಜಿಸಲು ಸುಸ್ಥಿರ ಮಾದರಿಯನ್ನು ಅಭಿವೃದ್ಧಿಪಡಿಸಲು ಗ್ರಾಮೀಣಾಭಿವೃದ್ಧಿ ಸಚಿವಾಲಯದೊಂದಿಗೆ ಜ್ಞಾಪನಾ ಪಾತ್ರಕ್ಕೆ (MoU) ಸಹಿ ಹಾಕಲಾಗಿದೆ.

  

ಅಂತರರಾಷ್ಟ್ರೀಯ ಚುನಾವಣಾ ಸಂದರ್ಶಕರ ಕಾರ್ಯಕ್ರಮ (IEVP).

(International Election Visitors Programme (IEVP)

 ಇತ್ತೀಚೆಗೆ, ಅಂತರರಾಷ್ಟ್ರೀಯ ವರ್ಚುವಲ್ ಚುನಾವಣಾ ಸಂದರ್ಶಕರ ಕಾರ್ಯಕ್ರಮ 2022 ಅನ್ನು ಭಾರತದ ಚುನಾವಣಾ ಆಯೋಗ ಆಯೋಜಿಸಿತ್ತು.

  1. 32 ದೇಶಗಳ ಚುನಾವಣಾ ನಿರ್ವಹಣಾ ಸಂಸ್ಥೆಗಳು (EMB) ಮತ್ತು ಮೂರು ಅಂತರರಾಷ್ಟ್ರೀಯ ಸಂಸ್ಥೆಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವು.
  2. 2012 ರ ಚುನಾವಣೆಗಳಿಂದ ಭಾರತವು ಅಂತರರಾಷ್ಟ್ರೀಯ ಚುನಾವಣಾ ಸಂದರ್ಶಕರ ಕಾರ್ಯಕ್ರಮವನ್ನು (IEVP) ಆಯೋಜಿಸುತ್ತಿದೆ, ಅಲ್ಲಿ ಅಂತರರಾಷ್ಟ್ರೀಯ ಪ್ರತಿನಿಧಿಗಳನ್ನು ಮತದಾನ ಕೇಂದ್ರಗಳಿಗೆ ಭೇಟಿ ನೀಡಲು ಮತ್ತು ಪ್ರಸ್ತುತ ಚುನಾವಣಾ ಪ್ರಕ್ರಿಯೆಗಳನ್ನು ವೀಕ್ಷಿಸಲು  ವೈಯಕ್ತಿಕವಾಗಿ ಆಹ್ವಾನಿಸಲಾಗುತ್ತದೆ.

Current Affairs  

 

 

ಮಹಿಳೆಯರಿಗಾಗಿ “ಸಮರ್ಥ್” ವಿಶೇಷ ಉದ್ಯಮಶೀಲತೆ ಪ್ರಚಾರ ಅಭಿಯಾನ:

(“SAMARTH” Special Entrepreneurship Promotion Drive for Women)

ಇತ್ತೀಚೆಗೆ, ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ 2022 ರ ಸಂದರ್ಭದಲ್ಲಿ, ‘ಮಹಿಳೆಯರಿಗಾಗಿ ವಿಶೇಷ ಉದ್ಯಮಶೀಲತೆ ಪ್ರಚಾರ ಅಭಿಯಾನ’ – “ಸಮರ್ಥ” ಅನ್ನು ಕೇಂದ್ರ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ (MSMEs) ಸಚಿವರು ಪ್ರಾರಂಭಿಸಿದರು.

ಸಚಿವಾಲಯದ ಸಮರ್ಥ್ ಉಪಕ್ರಮದ ಅಡಿಯಲ್ಲಿ, ಮಹತ್ವಾಕಾಂಕ್ಷಿ ಮತ್ತು ಅಸ್ತಿತ್ವದಲ್ಲಿರುವ ಮಹಿಳಾ ಉದ್ಯಮಿಗಳಿಗೆ ಈ ಕೆಳಗಿನ ಪ್ರಯೋಜನಗಳು ಲಭ್ಯವಿರುತ್ತವೆ:

  1. ಸಚಿವಾಲಯದ ಕೌಶಲ್ಯಾಭಿವೃದ್ಧಿ ಯೋಜನೆಗಳ ಅಡಿಯಲ್ಲಿ ಆಯೋಜಿಸಲಾದ ಉಚಿತ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಮಹಿಳೆಯರಿಗೆ ಶೇ.20 ರಷ್ಟು ಸೀಟುಗಳನ್ನು ಹಂಚಿಕೆ ಮಾಡಲಾಗುವುದು. ಇದರಿಂದ 7500ಕ್ಕೂ ಹೆಚ್ಚು ಮಹಿಳೆಯರಿಗೆ ಅನುಕೂಲವಾಗಲಿದೆ.
  2. ಸಚಿವಾಲಯವು ಜಾರಿಗೆ ತಂದಿರುವ ಮಾರ್ಕೆಟಿಂಗ್ ಸಹಾಯದ ಯೋಜನೆಗಳ ಅಡಿಯಲ್ಲಿ, ದೇಶೀಯ ಮತ್ತು ಅಂತರಾಷ್ಟ್ರೀಯ ಪ್ರದರ್ಶನಗಳಿಗೆ ಕಳುಹಿಸಲಾದ MSME ವ್ಯಾಪಾರ ನಿಯೋಗಗಳಲ್ಲಿ 20 ಪ್ರತಿಶತವನ್ನು ಮಹಿಳಾ ಮಾಲೀಕತ್ವದ MSME ಗಳಿಗೆ ಸಮರ್ಪಿಸಲಾಗುವುದು.
  3. ರಾಷ್ಟ್ರೀಯ ಸಣ್ಣ ಕೈಗಾರಿಕೆಗಳ ನಿಗಮದ (NSIC) ಯ ವಾಣಿಜ್ಯ ಯೋಜನೆಗಳಲ್ಲಿ ವಾರ್ಷಿಕ ಸಂಸ್ಕರಣಾ ಶುಲ್ಕದ ಮೇಲೆ 20% ರಿಯಾಯಿತಿ.
  4. ಎಂಟರ್‌ಪ್ರೈಸ್ ನೋಂದಣಿ ಅಡಿಯಲ್ಲಿ ಮಹಿಳಾ ಮಾಲೀಕತ್ವದ ಎಂಎಸ್‌ಎಂಇಗಳ ನೋಂದಣಿಗಾಗಿ ವಿಶೇಷ ಡ್ರೈವ್.

Current Affairs

 


  • Join our Official Telegram Channel HERE for Motivation and Fast Updates
  • Subscribe to our YouTube Channel HERE to watch Motivational and New analysis videos

[ad_2]

Leave a Comment