[ad_1]
ಪರಿವಿಡಿ:
ಸಾಮಾನ್ಯ ಅಧ್ಯಯನ ಪತ್ರಿಕೆ 2 :
1. 3 ರಾಜಧಾನಿಗಳಿಗೆ ಕಾನೂನು ರೂಪಿಸುವ ಅಧಿಕಾರ ಸರ್ಕಾರಕ್ಕೆ ಇಲ್ಲ: ಹೈಕೋರ್ಟ್
2. ರಕ್ಷಣಾ ಸ್ವಾಧೀನ ಪ್ರಕ್ರಿಯೆ.
3. ಏಷ್ಯನ್ ಇನ್ಫ್ರಾಸ್ಟ್ರಕ್ಚರ್ ಇನ್ವೆಸ್ಟ್ಮೆಂಟ್ ಬ್ಯಾಂಕ್ (AIIB).
ಸಾಮಾನ್ಯ ಅಧ್ಯಯನ ಪತ್ರಿಕೆ 3:
1. ಸೌರ ಸಂಯೋಗದ ಘಟನೆ.
2. UNEP ಪ್ಲಾಸ್ಟಿಕ್ ಮಾಲಿನ್ಯ ನಿರ್ಣಯ.
ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ಸಂಗತಿಗಳು:
1. ವಾಟ್ಸ್ ಆನ್ ದಿ ಮೂನ್ ಚಾಲೆಂಜ್.
2. ಕೋನಾರ್ಕ್ ದೇವಾಲಯ ಪಟ್ಟಣವು 100 ಪ್ರತಿಶತ ಸೌರ ಪಟ್ಟಣವಾಗಲಿದೆ.
3. ಸಹ-ಸ್ಥಳ ಎಂದರೇನು?
4. ಸಮರ್ಥ ರಾಮದಾಸ್.
5. ಗ್ರಾಮ ರಕ್ಷಣಾ ಗುಂಪುಗಳನ್ನು ಪಡೆಯಲಿರುವ ಜಮ್ಮು.
ಸಾಮಾನ್ಯ ಅಧ್ಯಯನ ಪತ್ರಿಕೆ : 2
ವಿಷಯಗಳು: ಸರ್ಕಾರದ ನೀತಿಗಳು ಮತ್ತು ವಿವಿಧ ಕ್ಷೇತ್ರಗಳಲ್ಲಿನ ಅಭಿವೃದ್ಧಿಯ ಅಡಚಣೆಗಳು ಮತ್ತು ಅವುಗಳ ವಿನ್ಯಾಸ ಮತ್ತು ಅನುಷ್ಠಾನದಿಂದ ಉಂಟಾಗುವ ಸಮಸ್ಯೆಗಳು.
3 ರಾಜಧಾನಿಗಳಿಗೆ ಕಾನೂನು ರೂಪಿಸುವ ಅಧಿಕಾರ ಸರ್ಕಾರಕ್ಕೆ ಇಲ್ಲ: ಹೈಕೋರ್ಟ್:
(Govt has no right to enact law for 3 capitals: HC)
ಸಂದರ್ಭ:
ಆಂಧ್ರಪ್ರದೇಶದ ಹೈಕೋರ್ಟ್ ಅಮರಾವತಿಯನ್ನು ರಾಜ್ಯದ ರಾಜಧಾನಿಯಾಗಿ ಅಭಿವೃದ್ಧಿಪಡಿಸಲು ಮತ್ತು ಮೂರು ರಾಜಧಾನಿಗಳಿಗೆ ಹೊಸ ಶಾಸನವನ್ನು ಜಾರಿಗೊಳಿಸುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇಲ್ಲ ಎಂದು ತೀರ್ಪು ನೀಡಿ ಆದೇಶ ಹೊರಡಿಸಿದೆ.
ಕೋರ್ಟ್ ಏನು ಹೇಳಿದೆ?
ರಾಜ್ಯ ಶಾಸಕಾಂಗಕ್ಕೆ, ‘ಆಂಧ್ರ ಪ್ರದೇಶ ಕ್ಯಾಪಿಟಲ್ ಲ್ಯಾಂಡ್ ಪೂಲಿಂಗ್ ಸ್ಕೀಮ್ ರೂಲ್ಸ್, 2015’ ಅಡಿಯಲ್ಲಿ ಅಧಿಸೂಚಿತ ಗೊಳಿಸಿದ ಭೂಮಿಯನ್ನು ಮತ್ತು ಆಂಧ್ರ ಪ್ರದೇಶ ರಾಜಧಾನಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಕಾಯ್ದೆ, 2014 ರ ಸೆಕ್ಷನ್ 3 ರ ಅಡಿಯಲ್ಲಿ (Andhra Pradesh Capital Region Development Authority Act, 2014 – APCRDA) ರಾಜಧಾನಿಯನ್ನು ವರ್ಗಾಯಿಸಲು, ಎರಡಾಗಿ ವಿಭಜಿಸಲು ಅಥವಾ ಮೂರು ಭಾಗಗಳಾಗಿ ವಿಂಗಡಿಸಲು ಹಾಗೂ ಹೈಕೋರ್ಟ್ ಸೇರಿದಂತೆ ಸರ್ಕಾರದ ಮೂರು ಅಂಗಗಳಿಗೆ ಸಂಬಂಧಿಸಿದ ಇಲಾಖೆಗಳ ಪ್ರಧಾನ ಕಛೇರಿಯನ್ನು ಅಧಿಸೂಚಿತ ರಾಜಧಾನಿ ಪ್ರದೇಶವನ್ನು ಹೊರತುಪಡಿಸಿ ಬೇರೆ ಯಾವುದೇ ಪ್ರದೇಶಕ್ಕೆ ವಿಭಜಿಸಲು ಮತ್ತು ವರ್ಗಾಯಿಸಲು ಯಾವುದೇ ಕಾನೂನನ್ನು ಮಾಡಲು ಯಾವುದೇ ಅಧಿಕಾರವಿಲ್ಲ ಎಂದು ಉಚ್ಚ ನ್ಯಾಯಾಲಯವು ಹೇಳಿದೆ.
- ಸಂವಿಧಾನದ 4 ನೇ ವಿಧಿಯಲ್ಲಿ ಹೇಳಲಾದ ಭಾಷೆಯ ಪ್ರಕಾರ, ರಾಜ್ಯದಲ್ಲಿ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಅಂಗಗಳ ಸ್ಥಾಪನೆಗೆ ಸಂಬಂಧಿಸಿದ ವಿಷಯಗಳನ್ನು ನಿರ್ಧರಿಸುವ ಅಧಿಕಾರವನ್ನು ಸಂಸತ್ತು ಮಾತ್ರ ಹೊಂದಿದೆ.
- ಆರ್ಟಿಕಲ್ 4 ರ ಪ್ರಕಾರ, ಹೊಸ ರಾಜ್ಯಗಳ ಪ್ರವೇಶ ಅಥವಾ ಸ್ಥಾಪನೆಗಾಗಿ (ಆರ್ಟಿಕಲ್ 2 ರ ಅಡಿಯಲ್ಲಿ) ಮತ್ತು ಹೊಸ ರಾಜ್ಯಗಳ ರಚನೆಗಾಗಿ ಮತ್ತು ಅಸ್ತಿತ್ವದಲ್ಲಿರುವ ರಾಜ್ಯಗಳ ಪ್ರದೇಶಗಳು, ಗಡಿಗಳು ಅಥವಾ ಹೆಸರುಗಳ ಬದಲಾವಣೆಗಾಗಿ ಮಾಡಿದ ಕಾನೂನುಗಳನ್ನು (ಆರ್ಟಿಕಲ್ 3 ರ ಅಡಿಯಲ್ಲಿ) ಆರ್ಟಿಕಲ್ 368 ರ ಅಡಿಯಲ್ಲಿ ಸಾಂವಿಧಾನಿಕ ತಿದ್ದುಪಡಿ ಎಂದು ಪರಿಗಣಿಸಲಾಗುವುದಿಲ್ಲ.
ಏನಿದು ಪ್ರಕರಣ?
ನವೆಂಬರ್ 2021 ರಲ್ಲಿ, ಆಂಧ್ರ ಪ್ರದೇಶ ಸರ್ಕಾರವು ಮೂರು ರಾಜಧಾನಿಗಳ ರಚನೆಗೆ ಸಂಬಂಧಿಸಿದ ಕಾನೂನನ್ನು ರದ್ದುಗೊಳಿಸಿತು, ಈ ನಿಟ್ಟಿನಲ್ಲಿ ಸರ್ಕಾರದಿಂದ ಯಾವುದೇ ಕಾನೂನು ಅಡೆತಡೆಗಳು ಬರದಂತೆ ಖಚಿತಪಡಿಸಿಕೊಳ್ಳಲು ಹೊಸ ಫುಲ್-ಪ್ರೂಫ್ ಕಾನೂನನ್ನು ಜಾರಿಗೆ ತರಲಾಗುವುದು ಎಂದು ಹೇಳಿದೆ.ಆದರೆ ಸರ್ಕಾರವು ರದ್ದುಪಡಿಸಿದ ಈ ಕಾನೂನಿನ ವಿರುದ್ಧ ಈ ಮೊದಲು ಸಲ್ಲಿಸಲಾದ ಅರ್ಜಿಗಳ ವಿಚಾರಣೆಯನ್ನು ನ್ಯಾಯಾಲಯವು ಮುಂದುವರಿಸಿದೆ.
- ಆಂಧ್ರ ಪ್ರದೇಶ ವಿಧಾನಸಭೆಯು ಆಂಧ್ರ ಪ್ರದೇಶ ವಿಕೇಂದ್ರೀಕರಣ ಮತ್ತು ಎಲ್ಲಾ ಪ್ರದೇಶಗಳ ಅಂತರ್ಗತ ಅಭಿವೃದ್ಧಿ ಕಾಯಿದೆ (A.P. Decentralisation and Inclusive Development of All Regions Act), 2020 (ಮೂರು ರಾಜಧಾನಿಗಳನ್ನು ಸ್ಥಾಪಿಸುವ ಗುರಿಯೊಂದಿಗೆ), ಮತ್ತು ‘ಆಂಧ್ರ ಪ್ರದೇಶ ರಾಜಧಾನಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ (ರದ್ದು) ಕಾಯಿದೆ,2020’ (ರಾಜಧಾನಿ ಪ್ರದೇಶ ಅಭಿವೃದ್ಧಿ 2020 ರ ಪ್ರಾಧಿಕಾರ (CRDA) ರದ್ದತಿ ಕಾಯಿದೆ) (Capital Region Development Authority (CRDA) Repeal Act of 2020), ಮಸೂದೆಯನ್ನು ಅಂಗೀಕರಿಸಿದೆ.
- ವಿಕೇಂದ್ರೀಕರಣದ ನೀತಿಗೆ ಹೆಚ್ಚಿನ ಸ್ಪಷ್ಟತೆ ಮತ್ತು ಎಲ್ಲಾ ವರ್ಗದ ಜನರಿಗೆ ಸಮಗ್ರ ವಿವರಣೆಯನ್ನು ಒದಗಿಸುವುದು ಈ ಹಿಂದೆ ಅಂಗೀಕರಿಸಲ್ಪಟ್ಟ ಕಾಯಿದೆಗಳನ್ನು ರದ್ದುಗೊಳಿಸುವುದರ ಹಿಂದಿನ ಉದ್ದೇಶವಾಗಿತ್ತು.
- ಅಮರಾವತಿಯಲ್ಲಿ ಭೂಮಿ ನೀಡುವವರ ತಪ್ಪು ಕಲ್ಪನೆಗಳನ್ನು ನಿವಾರಿಸಲು ಮತ್ತು ಹೈಕೋರ್ಟ್ನಲ್ಲಿ ಅರ್ಜಿದಾರರು ಎತ್ತಿದ ಪ್ರಶ್ನೆಗಳ ಬಗ್ಗೆ ತನ್ನ ನಿಲುವು ಸ್ಪಷ್ಟಪಡಿಸಲು ಸರ್ಕಾರ ಹೆಚ್ಚು ಸಮಗ್ರ ಕಾನೂನನ್ನು ತರಲು ಯೋಜಿಸುತ್ತಿದೆ.
ಮೂರು ರಾಜಧಾನಿಗಳು:
ಆಂಧ್ರಪ್ರದೇಶದ ವಿಕೇಂದ್ರೀಕರಣ ಮತ್ತು ಎಲ್ಲಾ ಪ್ರದೇಶಗಳ ಅಂತರ್ಗತ ಅಭಿವೃದ್ಧಿ ಕಾಯಿದೆ, 2020 ಮತ್ತು ಆಂಧ್ರ ಪ್ರದೇಶ ರಾಜಧಾನಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ (ರದ್ದತಿ) ಕಾಯಿದೆ, 2020 ಅನ್ನು ರಾಜ್ಯ ಸರ್ಕಾರವು ಜುಲೈ 31 ರಂದು ಅಧಿಸೂಚಿಸಿದೆ.
ಈ ಕಾಯಿದೆಯು ಆಂಧ್ರಪ್ರದೇಶ ರಾಜ್ಯಕ್ಕೆ ಮೂರು ರಾಜಧಾನಿಗಳನ್ನು ಹೊಂದಲು ಅವಕಾಶ ಮಾಡಿಕೊಡುತ್ತದೆ.
- ಅಮರಾವತಿ – ಶಾಸಕಾಂಗ ರಾಜಧಾನಿ.
- ವಿಶಾಖಪಟ್ಟಣಂ – ಕಾರ್ಯಾಂಗ ರಾಜಧಾನಿ.
- ಕರ್ನೂಲ್ – ನ್ಯಾಯಾಂಗ ರಾಜಧಾನಿ.
ಮೂರು ರಾಜಧಾನಿಗಳ ಅಗತ್ಯತೆ:
- ರಾಜ್ಯ ಸರ್ಕಾರವು ತಾನು ರಾಜ್ಯದ ಇತರ ಭಾಗಗಳನ್ನು ನಿರ್ಲಕ್ಷಿಸಿ ಬೃಹತ್ ರಾಜಧಾನಿಯನ್ನು ನಿರ್ಮಿಸುವುದರ ವಿರುದ್ಧವಾಗಿರುವುದಾಗಿ ಹೇಳುತ್ತದೆ. ರಾಜ್ಯವು ಮೂರು ರಾಜಧಾನಿಗಳನ್ನು ಹೊಂದುವುದು ರಾಜ್ಯದ ವಿವಿಧ ಪ್ರದೇಶಗಳ ಸಮಾನ ಅಭಿವೃದ್ಧಿಯನ್ನು ಖಚಿತಪಡಿಸುತ್ತದೆ.
- ಆಂಧ್ರಪ್ರದೇಶದ ರಾಜಧಾನಿಗೆ ಸೂಕ್ತವಾದ ಸ್ಥಳವನ್ನು ಸೂಚಿಸಲು ರಚಿಸಲಾದ ಎಲ್ಲಾ ಪ್ರಮುಖ ಸಮಿತಿಗಳ ಶಿಫಾರಸುಗಳಲ್ಲಿ ವಿಕೇಂದ್ರೀಕರಣವು ಕೇಂದ್ರ ವಿಷಯವಾಗಿದೆ. ಈ ಸಮಿತಿಗಳಲ್ಲಿ ನ್ಯಾಯಮೂರ್ತಿ ಬಿಎನ್ ಶ್ರೀಕೃಷ್ಣ ಸಮಿತಿ, ಕೆ ಶಿವರಾಮಕೃಷ್ಣನ್ ಸಮಿತಿ, ಮತ್ತು ಜಿಎನ್ ರಾವ್ ಸಮಿತಿ ಇತ್ಯಾದಿ ಸೇರಿವೆ.
ಈ ಕಲ್ಪನೆಯನ್ನು ಕಾರ್ಯಗತಗೊಳಿಸುವಲ್ಲಿ ಸಮಸ್ಯೆ:
ಸಮನ್ವಯ ಮತ್ತು ಲಾಜಿಸ್ಟಿಕ್ಸ್ ಭಯ: ವಿವಿಧ ನಗರಗಳಲ್ಲಿ ನೆಲೆಗೊಂಡಿರುವ ಶಾಸಕಾಂಗ ಮತ್ತು ಕಾರ್ಯಾಂಗದ ನಡುವೆ ಸಮನ್ವಯವನ್ನು ಸ್ಥಾಪಿಸುವುದು ಹೇಳಲು ಸುಲಭ ಆದರೆ ಮಾಡಲು ತುಂಬಾ ಕಷ್ಟಕರವಾಗಿದೆ ಮತ್ತು, ಇದನ್ನು ಹೊರತುಪಡಿಸಿ, ಈ ಸಂದರ್ಭದಲ್ಲಿ ಸರ್ಕಾರದಿಂದ ಯೋಜನೆಯ ಕುರಿತು ಯಾವುದೇ ವಿವರಗಳನ್ನು ನೀಡಲಾಗಿಲ್ಲ, ಇದರಿಂದಾಗಿ ಅಧಿಕಾರಿಗಳು ಮತ್ತು ಸಾಮಾನ್ಯ ನಾಗರಿಕರು ಇದರ ಅನುಷ್ಠಾನದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.
ಸಾರಿಗೆ ವೆಚ್ಚ ಮತ್ತು ಸಮಯ: ಕಾರ್ಯಾಂಗೀಯ ರಾಜಧಾನಿ ವಿಶಾಖಪಟ್ಟಣಂ ನ್ಯಾಯಾಂಗ ರಾಜಧಾನಿ ಕರ್ನೂಲ್ನಿಂದ 700 ಕಿಮೀ ಮತ್ತು ಶಾಸಕಾಂಗ ರಾಜಧಾನಿ ಅಮರಾವತಿಯಿಂದ 400 ಕಿಮೀ ದೂರದಲ್ಲಿದೆ. ಅಮರಾವತಿ ಮತ್ತು ಕರ್ನೂಲ್ ನಡುವಿನ ಅಂತರ 370 ಕಿ.ಮೀ. ಮೂರು ರಾಜಧಾನಿಗಳೊಂದಿಗೆ, ಪ್ರಯಾಣದ ಸಮಯ ಮತ್ತು ವೆಚ್ಚವು ತುಂಬಾ ದುಬಾರಿಯಾಗಿದೆ.
ಒಂದಕ್ಕಿಂತ ಹೆಚ್ಚು ರಾಜಧಾನಿಗಳನ್ನು ಹೊಂದಿರುವ ಭಾರತೀಯ ರಾಜ್ಯಗಳು:
- ಮಹಾರಾಷ್ಟ್ರ: ಎರಡು ರಾಜಧಾನಿಗಳನ್ನು ಹೊಂದಿದೆ – ಮುಂಬೈ ಮತ್ತು ನಾಗ್ಪುರ (ರಾಜ್ಯ ವಿಧಾನಮಂಡಲದ ಚಳಿಗಾಲದ ಅಧಿವೇಶನ).
- ಹಿಮಾಚಲ ಪ್ರದೇಶ: ಶಿಮ್ಲಾ ಮತ್ತು ಧರ್ಮಶಾಲಾ (ಚಳಿಗಾಲ)ಎರಡು ರಾಜಧಾನಿಗಳನ್ನು ಹೊಂದಿವೆ.
- ಹಿಂದಿನ ಜಮ್ಮು ಮತ್ತು ಕಾಶ್ಮೀರ ರಾಜ್ಯವು ಶ್ರೀನಗರ ಮತ್ತು ಜಮ್ಮು (ಚಳಿಗಾಲ) ಎಂಬ ಎರಡು ರಾಜಧಾನಿಗಳನ್ನು ಹೊಂದಿತ್ತು.
ವಿಷಯಗಳು: ಸರ್ಕಾರದ ನೀತಿಗಳು ಮತ್ತು ವಿವಿಧ ಕ್ಷೇತ್ರಗಳಲ್ಲಿನ ಅಭಿವೃದ್ಧಿಯ ಅಡಚಣೆಗಳು ಮತ್ತು ಅವುಗಳ ವಿನ್ಯಾಸ ಮತ್ತು ಅನುಷ್ಠಾನದಿಂದ ಉಂಟಾಗುವ ಸಮಸ್ಯೆಗಳು.
ರಕ್ಷಣಾ ಸ್ವಾಧೀನ ಪ್ರಕ್ರಿಯೆ:
(Defence Acquisition Procedure)
ಸಂದರ್ಭ:
ರಕ್ಷಣಾ ವಲಯದಲ್ಲಿ ಆತ್ಮ ನಿರ್ಭರತೆ / ಸ್ವಾವಲಂಬನೆಯನ್ನು ಸಾಧಿಸಲು ನವೀಕೃತ ಪುಶ್ನಲ್ಲಿ, ಉದ್ಯಮವು- ವಿನ್ಯಾಸಗೊಳಿಸಿದ ಮತ್ತು ಅಭಿವೃದ್ಧಿಪಡಿಸಿದ ಹಲವಾರು ಸ್ಥಳೀಯ ರಕ್ಷಣಾ ಯೋಜನೆಗಳಿಗೆ ಸರ್ಕಾರವು ತಾತ್ವಿಕ ಅನುಮೋದನೆಯನ್ನು ನೀಡಿದೆ.
- ರಕ್ಷಣಾ ಸಚಿವಾಲಯವು ಅಂತಹ ಒಂಬತ್ತು ಯೋಜನೆಗಳನ್ನು ಅನುಮೋದಿಸಿದೆ: ಇವುಗಳಲ್ಲಿ ನಾಲ್ಕು ಯೋಜನೆಗಳನ್ನು ‘ಮೇಕ್-I’ ವಿಭಾಗದಡಿ ರಕ್ಷಣಾ ಸ್ವಾಧೀನ ಪ್ರಕ್ರಿಯೆ 2020 ಮತ್ತು ಐದು ಯೋಜನೆಗಳನ್ನು ‘ಮೇಕ್-II’ ವರ್ಗಗಳ ಅಡಿಯಲ್ಲಿ ಮಂಜೂರು ಮಾಡಲಾಗಿದೆ.
- ಅನುಮೋದಿತ ಯೋಜನೆಗಳಲ್ಲಿ ಹಗುರ ಯುದ್ಧ (ಲೈಟ್) ಟ್ಯಾಂಕ್ಗಳ ಅಭಿವೃದ್ಧಿ, ಭಾರತೀಯ ಭದ್ರತಾ ಪ್ರೋಟೋಕಾಲ್ಗಳೊಂದಿಗೆ ಸಂವಹನ ಉಪಕರಣಗಳು, ನೆಲ-ಆಧಾರಿತ ವ್ಯವಸ್ಥೆಗಳೊಂದಿಗೆ ವಾಯುಗಾಮಿ ಎಲೆಕ್ಟ್ರೋ-ಆಪ್ಟಿಕಲ್ ಪಾಡ್ಗಳು ಮತ್ತು ವಾಯುಗಾಮಿ ಸ್ಟ್ಯಾಂಡ್-ಆಫ್ ಜಾಮರ್ಗಳು ಸೇರಿವೆ.
DAP 2020 ಕುರಿತು:
ರಕ್ಷಣಾ ಸ್ವಾಧೀನ ಪ್ರಕ್ರಿಯೆ-2020 (Defence Acquisition Procedure- DAP 2020) ಅನ್ನು ಈ ವರ್ಷದ ಸೆಪ್ಟೆಂಬರ್ನಲ್ಲಿ ಬಿಡುಗಡೆ ಮಾಡಲಾಗಿದೆ.
ಅಕ್ಟೋಬರ್ 1 ರಿಂದ ಜಾರಿಗೆ ಬರುವಂತೆ, ‘ರಕ್ಷಣಾ ಸಂಗ್ರಹಣೆ ಪ್ರಕ್ರಿಯೆ’- 2016 ಅನ್ನು ಹೊಸ ನೀತಿಯಿಂದ ರದ್ದುಗೊಳಿಸಲಾಗಿದೆ.
- ‘ರಕ್ಷಣಾ ಸ್ವಾಧೀನ ಪ್ರಕ್ರಿಯೆ’ (DAP) ಕೋಸ್ಟ್ ಗಾರ್ಡ್ ಸೇರಿದಂತೆ ಸಶಸ್ತ್ರ ಪಡೆಗಳ ಆಧುನೀಕರಣಕ್ಕಾಗಿ ‘ರಕ್ಷಣಾ ಸಚಿವಾಲಯ’ದ ಬಂಡವಾಳ ಬಜೆಟ್ನಿಂದ ಸಂಗ್ರಹಣೆ ಮತ್ತು ಸ್ವಾಧೀನ ನೀತಿಗಳು ಮತ್ತು ಕಾರ್ಯವಿಧಾನಗಳನ್ನು ಒಳಗೊಂಡಿದೆ.
ಹೊಸ ನೀತಿಯ ಪ್ರಮುಖ ಅಂಶಗಳು:
- ಸ್ಥಳೀಯ ಸಂಸ್ಥೆಗಳಿಗೆ ಮೀಸಲಾತಿ:
ನೀತಿಯಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಹಲವಾರು ಸಂಗ್ರಹಣೆ ವರ್ಗಗಳನ್ನು (Procurement Procedure) ಕಾಯ್ದಿರಿಸಲಾಗಿದೆ.
DAP 2020 ‘ಭಾರತೀಯ ಮಾರಾಟಗಾರ’ ರನ್ನು ನಿವಾಸಿ ಭಾರತೀಯ ನಾಗರಿಕರ ಮಾಲೀಕತ್ವದ ಮತ್ತು ನಿಯಂತ್ರಿಸಲ್ಪಡುವ ಕಂಪನಿ ಎಂದು ವ್ಯಾಖ್ಯಾನಿಸುತ್ತದೆ ಮತ್ತು ಇದರಲ್ಲಿ ವಿದೇಶಿ ನೇರ ಹೂಡಿಕೆ (FDI) 49 ಪ್ರತಿಶತವನ್ನು ಮೀರುವಂತಿಲ್ಲ.
- ಹೊಸ ಖರೀದಿ (ಭಾರತದಲ್ಲಿ ಜಾಗತಿಕ-ತಯಾರಿಕೆ) ವರ್ಗ:
ತಂತ್ರಜ್ಞಾನದ ವರ್ಗಾವಣೆ ಸೇರಿದಂತೆ ಭಾರತದಲ್ಲಿ ಉತ್ಪಾದನೆ ಮಾಡುವ ಉದ್ದೇಶದಿಂದ ಮಾಡಿದ ವಿದೇಶಿ ಖರೀದಿಗಳ ಒಟ್ಟಾರೆ ಒಪ್ಪಂದದ ಮೌಲ್ಯದ ಕನಿಷ್ಠ 50 ಪ್ರತಿಶತದಷ್ಟು ಸ್ವದೇಶೀಕರಣವನ್ನು ಇದು ಕಡ್ಡಾಯಗೊಳಿಸುತ್ತದೆ.
- ಸ್ಥಳೀಯ ಪದಾರ್ಥಗಳ ಗರಿಷ್ಠ ಬಳಕೆ:
ಇದು ಪರವಾನಗಿ ಅಡಿಯಲ್ಲಿ ಭಾರತದಲ್ಲಿ ತಯಾರಿಸಿದ ಉಪಕರಣಗಳನ್ನು ಒಳಗೊಂಡಂತೆ ಮಿಲಿಟರಿ ಸಂಗ್ರಹಣೆಗಾಗಿ ಶಸ್ತ್ರಾಸ್ತ್ರಗಳು ಮತ್ತು ಉಪಕರಣಗಳಲ್ಲಿ ಸ್ವದೇಶಿ ವಸ್ತುಗಳ ಬಳಕೆಯನ್ನು ಉತ್ತೇಜಿಸುತ್ತದೆ. ಹೆಚ್ಚಿನ ಸ್ವಾಧೀನ ವಿಭಾಗಗಳಲ್ಲಿ, ಡಿಫೆನ್ಸ್ ಪ್ರೊಕ್ಯೂರ್ಮೆಂಟ್ ಪ್ರೊಸೀಜರ್ (ಡಿಎಪಿ) 2016 ಕ್ಕೆ ಹೋಲಿಸಿದರೆ ಡಿಎಪಿ-2020 ಶೇಕಡಾ 10 ರಷ್ಟು ಹೆಚ್ಚು ಸ್ವದೇಶೀಕರಣ ಒಪ್ಪಂದಗಳನ್ನು ಒಳಗೊಂಡಿದೆ.
- ಆಮದು ನಿರ್ಬಂಧ ಪಟ್ಟಿ (Import embargo list):
ಕಳೆದ ತಿಂಗಳಲ್ಲಿ ಸರ್ಕಾರವು ಘೋಷಣೆ ಮಾಡಿದ 101 ವಸ್ತುಗಳ ಆಮದು ನಿಷೇಧ ಪಟ್ಟಿಯನ್ನು ವಿಶೇಷವಾಗಿ/ನಿರ್ದಿಷ್ಟವಾಗಿ ರಕ್ಷಣಾ ಸ್ವಾಧೀನ ಪ್ರಕ್ರಿಯೆ 2020 ರಲ್ಲಿ ಸೇರಿಸಲಾಗಿದೆ. (ವ್ಯಾಪಾರದ ನಿಷೇಧವು ಸರ್ಕಾರಿ ಆದೇಶವಾಗಿದೆ, ಇದರಲ್ಲಿ ನಿರ್ದಿಷ್ಟ ದೇಶದೊಂದಿಗೆ ನಿರ್ದಿಷ್ಟ ಸರಕುಗಳ ವ್ಯಾಪಾರ ಅಥವಾ ವಿನಿಮಯವನ್ನು ನಿಷೇಧಿಸಲಾಗಿದೆ.)
- ಆಫ್ಸೆಟ್ ಹೊಣೆಗಾರಿಕೆ(Offset liability):
ಸರ್ಕಾರದ ನಿರ್ಧಾರದ ಪ್ರಕಾರ- ಅಂತರ್-ಸರ್ಕಾರಿ ಒಪ್ಪಂದ (ಐಜಿಎ), ಸರ್ಕಾರದಿಂದ ಸರ್ಕಾರ ಅಥವಾ ಆರಂಭಿಕ ಏಕ ಮಾರಾಟಗಾರರ ಮೂಲಕ ಒಪ್ಪಂದವನ್ನು ಮಾಡಿದರೆ, ರಕ್ಷಣಾ ಉಪಕರಣಗಳ ಖರೀದಿಯಲ್ಲಿ ಆಫ್ಸೆಟ್ ಷರತ್ತುಗಳನ್ನು ಹೊಂದದಿರಲು ಸರ್ಕಾರವು ನಿರ್ಧರಿಸಿದೆ.
- ಆಫ್ಸೆಟ್ ಷರತ್ತಿನ ನಿಬಂಧನೆಯ ಅಡಿಯಲ್ಲಿ, ವಿದೇಶಿ ಮಾರಾಟಗಾರನು ‘ಒಪ್ಪಂದದ ಮೌಲ್ಯ’ದ ಒಂದು ಭಾಗವನ್ನು ಭಾರತದಲ್ಲಿ ಹೂಡಿಕೆ ಮಾಡುವುದು ಅತ್ಯಗತ್ಯವಾಗಿದೆ.
ವಿಷಯಗಳು: ಪ್ರಮುಖ ಅಂತರರಾಷ್ಟ್ರೀಯ ಸಂಸ್ಥೆಗಳು, ಏಜೆನ್ಸಿಗಳು ಮತ್ತು ವೇದಿಕೆಗಳು, ಅವುಗಳ ರಚನೆ, ಆದೇಶ.
ಏಷ್ಯಾದ ಮೂಲಸೌಕರ್ಯ ಹೂಡಿಕೆ ಬ್ಯಾಂಕ್ (AIIB):
(Asian Infrastructure Investment Bank)
ಸಂದರ್ಭ:
ಏಷ್ಯನ್ ಮೂಲಸೌಕರ್ಯ ಹೂಡಿಕೆ ಬ್ಯಾಂಕ್ / ಏಷ್ಯನ್ ಇನ್ಫ್ರಾಸ್ಟ್ರಕ್ಚರ್ ಇನ್ವೆಸ್ಟ್ಮೆಂಟ್ ಬ್ಯಾಂಕ್ (AIIB) ಪ್ರಸ್ತುತ ಉಕ್ರೇನ್ನಲ್ಲಿ ನಡೆಯುತ್ತಿರುವ ಯುದ್ಧದ ಹಿನ್ನೆಲೆಯಲ್ಲಿ ರಷ್ಯಾ ಮತ್ತು ಬೆಲಾರಸ್ ಗಳಿಗೆ ಸಂಬಂಧಿಸಿದ ಎಲ್ಲಾ ಚಟುವಟಿಕೆಗಳನ್ನು ಸ್ಥಗಿತಗೊಳಿಸಿದೆ ಮತ್ತು ಅವುಗಳನ್ನು ಪರಿಶೀಲನೆಗೆ ಒಳಪಡಿಸಿದೆ.
- ಏಷ್ಯನ್ ಇನ್ಫ್ರಾಸ್ಟ್ರಕ್ಚರ್ ಇನ್ವೆಸ್ಟ್ಮೆಂಟ್ ಬ್ಯಾಂಕ್ (AIIB) ನಿಂದ ಈ ಪರಿಸ್ಥಿತಿಯನ್ನು “ಉಕ್ರೇನ್ನಲ್ಲಿ ಯುದ್ಧ” (war in Ukraine) ಎಂದು ಉಲ್ಲೇಖಿಸಲಾಗಿದೆ, ಈ ಪದವನ್ನು ಇದುವರೆಗೆ ಚೀನಾ ಸರ್ಕಾರದೊಂದಿಗೆ ಸಂಯೋಜಿತವಾಗಿರುವ ಯಾವುದೇ ಸಂಸ್ಥೆಯು ಪೂರ್ವ ಯುರೋಪಿಯನ್ ದೇಶದ ಪರಿಸ್ಥಿತಿಯನ್ನು ವಿವರಿಸಲು ಬಳಸಿದ “ಆಕ್ರಮಣ”(Invasion) ಎಂಬ ಪದಕ್ಕೆ ತುಂಬಾ ಹತ್ತಿರವಾಗಿದೆ.
ಅಂತಹ ನಿರ್ಬಂಧಗಳಿಂದ ಉಂಟಾಗುವ ಪರಿಣಾಮಗಳು:
ಬೆಳೆಯುತ್ತಿರುವ ಮತ್ತು ಜಾಗತಿಕವಾಗಿ ಸಂಪರ್ಕ ಹೊಂದಿದ ಆರ್ಥಿಕತೆಯಲ್ಲಿ ವರ್ಷಗಳ ವರೆಗೆ ಜೀವನ ನಡೆಸಿದ ನಂತರ, ರಷ್ಯಾದ ನಾಗರಿಕರು ಈಗ ಪ್ರಪಂಚದಿಂದ ಹೆಚ್ಚು ಪ್ರತ್ಯೇಕ ಗೊಂಡಿರುವ ದೇಶದಲ್ಲಿ ತಮ್ಮನ್ನು ತಾವು ಕಂಡುಕೊಳ್ಳುತ್ತಾರೆ.
- ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ರ ಉಕ್ರೇನ್ ಮೇಲಿನ ಆಕ್ರಮಣದ ನಂತರ, ಯುರೋಪಿಯನ್ ಯೂನಿಯನ್ ಮತ್ತು ಅಮೆರಿಕಾದಿಂದ ಹೇರಲಾದ ನಿರ್ಬಂಧಗಳ ಹೊಡೆತ ಮತ್ತು ದೇಶದಿಂದ ವಿದೇಶಿ ಕಂಪನಿಗಳು ಮತ್ತು ಹೂಡಿಕೆದಾರರ ನಿರ್ಗಮನದೊಂದಿಗೆ ಸಂಯೋಜಿಸಲ್ಪಟ್ಟಿದೆ, ಒಟ್ಟಾರೆಯಾಗಿ ರಷ್ಯಾವನ್ನು ಹೆಚ್ಚು ಪ್ರತ್ಯೇಕವಾಗಿಸಿ ಅಥವಾ ಏಕಾಂಗಿಯಾಗಿಸಿ ಮತ್ತು ಆರ್ಥಿಕವಾಗಿ ನಿರ್ಬಂಧಿಸಿದೆ.
- ಹಲವಾರು ದಿನಗಳವರೆಗೆ ಎಲೆಕ್ಟ್ರಾನಿಕ್ ಬ್ಯಾಂಕಿಂಗ್ ವಿಫಲವಾಗಬಹುದೆಂಬ ಭಯದ ನಡುವೆ ರಷ್ಯಾದಲ್ಲಿ ಜನರು ವಿದೇಶಿ ಕರೆನ್ಸಿ ಮತ್ತು ರೂಬಲ್ ಎರಡರಲ್ಲೂ ಹಣವನ್ನು ಹಿಂಪಡೆಯಲು ಧಾವಿಸಿದ್ದರಿಂದ ‘ATM’ಗಳ ಬಳಿ ಉದ್ದನೆಯ ಸರತಿ ಸಾಲುಗಳು ರೂಪುಗೊಂಡವು.
- ರೂಬಲ್ನ ಬೆಲೆಯು 1 ಸೆಂಟ್ (1 ಸೆಂಟ್) ಗಿಂತ ಕಡಿಮೆಯಾಗಿ ದಾಖಲೆಯ ಕನಿಷ್ಠ ಮಟ್ಟಕ್ಕೆ ಕುಸಿದಿದೆ ಮತ್ತು ಜನರು ತಮ್ಮ ಉಳಿತಾಯದಲ್ಲಾದ ನಷ್ಟವನ್ನು ನೋಡುತ್ತಾ ಮೂಗ ಪ್ರೇಕ್ಷಕರಾದರು.
- ಕ್ರೆಮ್ಲಿನ್ ಎಲ್ಲಾ ರಷ್ಯನ್ನರಿಗೆ ಇತರ ದೇಶಗಳಿಗೆ ‘ವಿದೇಶಿ ಕರೆನ್ಸಿ ವರ್ಗಾವಣೆ’ ಮಾಡುವುದನ್ನು ನಿಷೇಧಿಸಿದೆ ಮತ್ತು ರಫ್ತುದಾರರಿಗೆ ಅವರ ‘ವಿದೇಶಿ ವಿನಿಮಯ ಗಳಿಕೆಯ’ 80% ಅನ್ನು ರೂಬಲ್ಗಳಿಗೆ ಪರಿವರ್ತಿಸಲು ಆದೇಶಿಸಿದೆ.
- ಸಾಮಾಜಿಕ ಮಾಧ್ಯಮದಲ್ಲಿ, ರಷ್ಯಾದ ಶಾಪರ್ಸ್ ಕೆಲವು ಉತ್ಪನ್ನಗಳ ಬೆಲೆಗಳಲ್ಲಿ ತ್ವರಿತ ಹೆಚ್ಚಳವನ್ನು ನೋಡುತ್ತಿದ್ದಾರೆ, ವಿಶೇಷವಾಗಿ ಎಲೆಕ್ಟ್ರಾನಿಕ್ಸ್ ಮತ್ತು ಉಪಕರಣಗಳು.
- ವಿದೇಶಿ ಕಂಪನಿಗಳಲ್ಲಿ ಕೆಲಸ ಮಾಡುವ ಅನೇಕ ರಷ್ಯನ್ನರು ತಮ್ಮ ಸಂಬಳವನ್ನು ಪಡೆಯುವ ಬಗ್ಗೆ ಕಾಳಜಿ ವಹಿಸುತ್ತಾರೆ, ಏಕೆಂದರೆ ರಷ್ಯಾದ ಪ್ರಮುಖ ಬ್ಯಾಂಕುಗಳ ಮೊದಲ ಬ್ಯಾಚ್, ತೈಲ ಮತ್ತು ಅನಿಲ ಲಾಭವನ್ನು ಗುರಿಯಾಗಿಟ್ಟುಕೊಂಡು, ಇಂಟರ್ಬ್ಯಾಂಕ್ SWIFT ವ್ಯವಸ್ಥೆಯನ್ನು ಬಳಸುತ್ತಿದೆ.
- ಅಂತರರಾಷ್ಟ್ರೀಯ ಕಲಾವಿದರು ಮತ್ತು ಸಾಂಸ್ಕೃತಿಕ ಸಂಸ್ಥೆಗಳು ರಷ್ಯಾದ ಮೇಲೆ ತಮ್ಮದೇ ಆದ ನಿರ್ಬಂಧಗಳನ್ನು ವಿಧಿಸಿವೆ.
- ತೈಲ ಬೆಲೆಗಳ ಮೇಲೆ ಪರಿಣಾಮ: ರಷ್ಯಾ ವಿಶ್ವದ ಮೂರನೇ ಅತಿದೊಡ್ಡ ತೈಲ ಉತ್ಪಾದಕ (ಯುಎಸ್ ಮತ್ತು ಸೌದಿ ಅರೇಬಿಯಾ ನಂತರ) ಮತ್ತು ಎರಡನೇ ಅತಿದೊಡ್ಡ ನೈಸರ್ಗಿಕ ಅನಿಲ ಉತ್ಪಾದಕ (ಯುಎಸ್ ನಂತರ). ಜೊತೆಗೆ, ಇದು ವಿಶ್ವದ ಮೂರನೇ ಅತಿದೊಡ್ಡ ಕಲ್ಲಿದ್ದಲು ರಫ್ತುದಾರ (ಆಸ್ಟ್ರೇಲಿಯಾ ಮತ್ತು ಇಂಡೋನೇಷ್ಯಾ ನಂತರ). ಇದು ವಿಶ್ವದಲ್ಲೇ ಎರಡನೇ ಅತಿ ದೊಡ್ಡ ಗೋಧಿ ರಫ್ತುದಾರ ದೇಶವಾಗಿದೆ.
ಏಷ್ಯಾದ ಮೂಲಸೌಕರ್ಯ ಹೂಡಿಕೆ ಬ್ಯಾಂಕ್ ಕುರಿತು:
ಏಷ್ಯಾದ ಮೂಲಸೌಕರ್ಯ ಹೂಡಿಕೆ ಬ್ಯಾಂಕ್ (AIIB), ಇದು ಏಷ್ಯಾ ಮತ್ತು ಅದರಾಚೆಗಿನ ಪ್ರದೇಶಗಳ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಗಳನ್ನು ಸುಧಾರಿಸುವ ಉದ್ದೇಶವನ್ನು ಹೊಂದಿರುವ ಬಹುಪಕ್ಷೀಯ ಅಭಿವೃದ್ಧಿ ಬ್ಯಾಂಕ್ ಆಗಿದೆ.
ಈ ಒಪ್ಪಂದಕ್ಕೆ ಸಹಿ ಹಾಕಿದ ದೇಶಗಳು (57 ಸ್ಥಾಪಕ ಸದಸ್ಯರು) AIIB ಬ್ಯಾಂಕಿನ ಸದಸ್ಯತ್ವವನ್ನು ಹೊಂದಿರುತ್ತವೆ.
ಪ್ರಧಾನ ಕಛೇರಿ ಬೀಜಿಂಗ್ ನಲ್ಲಿದೆ.
- ಬ್ಯಾಂಕಿನ ಅಧಿಕೃತ ಬಂಡವಾಳ ಸ್ಟಾಕ್ನಲ್ಲಿ ಆರಂಭಿಕ 50% ಪಾಲನ್ನು ಹೊಂದಿರುವ 10 ಸದಸ್ಯ ರಾಷ್ಟ್ರಗಳು ಅನುಮೋದಿಸಿದ ನಂತರ 25 ಡಿಸೆಂಬರ್ 2015 ರಂದು ‘ಒಪ್ಪಂದ’ ಜಾರಿಗೆ ಬಂದ ನಂತರ AIIB ಕಾರ್ಯಾಚರಣೆಯನ್ನು ಪ್ರಾರಂಭಿಸಿತು.
- ಜನವರಿ 2016 ರಿಂದ ಈ ಬ್ಯಾಂಕ್ ಕಾರ್ಯಾರಂಭ ಮಾಡಿತು.
ಗುರಿ:
ಇಂದು ಸುಸ್ಥಿರ ಮೂಲಸೌಕರ್ಯ ಮತ್ತು ಇತರ ಉತ್ಪಾದಕ ಕ್ಷೇತ್ರಗಳಲ್ಲಿ ಹೂಡಿಕೆ ಮಾಡುವ ಮೂಲಕ, ಕಾಲಾನಂತರದಲ್ಲಿ ಕೋಟ್ಯಂತರ ಜನರ ಜೀವನದ ಮೇಲೆ ಪರಿಣಾಮ ಬೀರುವ ಮತ್ತು ಉತ್ತಮ ಭವಿಷ್ಯವನ್ನು ನಿರ್ಮಿಸುವ ದೃಷ್ಟಿಯಿಂದ ಜನರು, ಸೇವೆಗಳು ಮತ್ತು ಮಾರುಕಟ್ಟೆಗಳನ್ನು ಸಂಪರ್ಕಿಸುವ ಗುರಿಯನ್ನು ಹೊಂದಿದೆ.
ಸದಸ್ಯತ್ವ:
ಈಗ 100 ಕ್ಕೂ ಹೆಚ್ಚು ಸದಸ್ಯರಿದ್ದಾರೆ.
ಫ್ರಾನ್ಸ್, ಜರ್ಮನಿ, ಇಟಲಿ ಮತ್ತು ಯುನೈಟೆಡ್ ಕಿಂಗ್ಡಮ್ ಸೇರಿದಂತೆ ಜಿ -20 ರಾಷ್ಟ್ರಗಳಲ್ಲಿ ಹದಿನಾಲ್ಕು ರಾಷ್ಟ್ರಗಳು AIIB ಸದಸ್ಯತ್ವವನ್ನು ಹೊಂದಿವೆ.
ಮತದಾನದ ಹಕ್ಕುಗಳು:
- ಚೀನಾವು 26.61% ರಷ್ಟು ಮತಗಳನ್ನು ಹೊಂದುವ ಮೂಲಕ ಅತಿದೊಡ್ಡ ಷೇರುದಾರನಾಗಿದ್ದು, ನಂತರದ ಸ್ಥಾನದಲ್ಲಿ ಭಾರತ (7.6%), ರಷ್ಯಾ (6.01%) ಮತ್ತು ಜರ್ಮನಿ (4.2%) ಇವೆ.
- ಪ್ರಾದೇಶಿಕ ಸದಸ್ಯರು ಬ್ಯಾಂಕಿನಲ್ಲಿ ಒಟ್ಟು ಮತದಾನದ 75% ರಷ್ಟು ಭಾಗವನ್ನು ಹೊಂದಿದ್ದಾರೆ.
AIIB ಯ ವಿವಿಧ ಅಂಗಗಳು:
ಆಡಳಿತ ಮಂಡಳಿ: (Board of Governors) ಆಡಳಿತ ಮಂಡಳಿಯು ಪ್ರತಿ ಸದಸ್ಯ ರಾಷ್ಟ್ರದಿಂದ ನೇಮಕಗೊಂಡ ಒಬ್ಬ ಗವರ್ನರ್ ಮತ್ತು ಒಬ್ಬ ಪರ್ಯಾಯ ಗವರ್ನರ್ ರನ್ನು ಒಳಗೊಂಡಿದೆ. ಗವರ್ನರ್ಗಳು ಮತ್ತು ಪರ್ಯಾಯ ಗವರ್ನರ್ಗಳು ನೇಮಕ ಮಾಡುವ ಸದಸ್ಯರ ಇಚ್ಛೆಯಮೇರೆಗೆ ಸೇವೆ ಸಲ್ಲಿಸುತ್ತಾರೆ.
ನಿರ್ದೇಶಕ ಮಂಡಳಿ: ( Board of Directors) ಅನಿವಾಸಿ ನಿರ್ದೇಶಕರ ಮಂಡಳಿಯು ಬ್ಯಾಂಕಿನ ಸಾಮಾನ್ಯ ಕಾರ್ಯಾಚರಣೆಗಳ ನಿರ್ದೇಶನದ ಜವಾಬ್ದಾರಿಯನ್ನು ಹೊಂದಿದ್ದು, ಆಡಳಿತ ಮಂಡಳಿಯಿಂದ ನಿಯೋಜಿಸಲಾದ ಎಲ್ಲಾ ಅಧಿಕಾರಗಳನ್ನು ಚಲಾಯಿಸುತ್ತದೆ.
ಅಂತರರಾಷ್ಟ್ರೀಯ ಸಲಹಾ ಸಮಿತಿ: (International Advisory Panel ) ಬ್ಯಾಂಕಿನ ಕಾರ್ಯತಂತ್ರಗಳು ಮತ್ತು ನೀತಿಗಳ ಬಗ್ಗೆ ಮತ್ತು ಸಾಮಾನ್ಯ ಕಾರ್ಯಾಚರಣೆಯ ವಿಷಯಗಳ ಬಗ್ಗೆ ಅಧ್ಯಕ್ಷ ಮತ್ತು ಹಿರಿಯ ನಿರ್ವಾಹಕರಿಗೆ ಸಹಾಯ ಮಾಡಲು ಬ್ಯಾಂಕ್ ಅಂತರರಾಷ್ಟ್ರೀಯ ಸಲಹಾ ಸಮಿತಿಯನ್ನು (IAP) ಸ್ಥಾಪಿಸಿದೆ.
ಸಾಮಾನ್ಯ ಅಧ್ಯಯನ ಪತ್ರಿಕೆ : 3
ವಿಷಯಗಳು: ಮಾಹಿತಿ ತಂತ್ರಜ್ಞಾನ, ಬಾಹ್ಯಾಕಾಶ, ಕಂಪ್ಯೂಟರ್, ರೊಬೊಟಿಕ್ಸ್, ನ್ಯಾನೊ-ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ಬೌದ್ಧಿಕ ಆಸ್ತಿ ಹಕ್ಕುಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಜಾಗೃತಿ.
ಸೌರ ಸಂಯೋಗದ ಘಟನೆ:
(Solar Conjunction event)
ಸಂದರ್ಭ:
ಇತ್ತೀಚೆಗೆ, ಇಸ್ರೋದ ವಿವಿಧ ಘಟಕಗಳ ವಿಜ್ಞಾನಿಗಳ ತಂಡವು ‘ಸೌರ ಕರೋನಾ’ ಅಧ್ಯಯನ ಮಾಡಲು ಮತ್ತು ಸೂರ್ಯನ ತಾಪಮಾನವು ಹಠಾತ್ ಏರಿಕೆಯಾಗುವ ಪ್ರದೇಶವನ್ನು ಕಂಡುಹಿಡಿಯಲು ಭಾರತದ ಮಾರ್ಸ್ ಆರ್ಬಿಟರ್ ‘ಮಂಗಳ ಯಾನ’ ದಿಂದ ‘ಸೋಲಾರ್ ಕರೋನಾ’ ಕಳುಹಿಸಲಾದ ಎಸ್-ಬ್ಯಾಂಡ್ ರೇಡಿಯೋ ಸಿಗ್ನಲ್ಗಳನ್ನು ಬಳಸಿದೆ.
- ಈ ಕುರಿತು ಹೆಚ್ಚಿನ ವಿವರಗಳು ಇನ್ನಷ್ಟೇ ಪ್ರಕಟವಾಗಬೇಕಿದೆ.
ಅಧ್ಯಯನದ ಮಹತ್ವ:
- ‘ಸೌರ ಸಂಯೋಗ’ ಅಥವಾ ‘ ಸೋಲಾರ್ ಕಂಜಂಕ್ಷನ್’ ಎಂಬ ವಿದ್ಯಮಾನವನ್ನು ವಿಜ್ಞಾನಿಗಳು ಭೂಮಿ ಮತ್ತು ಮಂಗಳ ಸೂರ್ಯನ ವಿರುದ್ಧ ಬದಿಗಳಲ್ಲಿದ್ದಾಗ ಬಳಸಿಕೊಂಡರು.
- ಮಂಗಳ ಗ್ರಹಕ್ಕೆ ‘ಸಂಯೋಗ’ ಅಥವಾ ‘ಸಂಯೋಜನೆ’ ಸ್ಥಿತಿಯು ಎರಡು ವರ್ಷಗಳಿಗೊಮ್ಮೆ ಸಂಭವಿಸುತ್ತದೆ, ಈ ಸಮಯದಲ್ಲಿ ಮಂಗಳದಿಂದ ಕಳುಹಿಸಲಾದ ರೇಡಿಯೋ ಸಿಗ್ನಲ್ ಗಳು ಸೌರ ಕರೋನಾದ – ಮೂಲಕ ಸುಮಾರು 10 ಸೌರ ತ್ರಿಜ್ಯಗಳು (10 solar radii) ಅಥವಾ 69,57,000 ಕಿಮೀ- ಮೂಲಕ ಹಾದುಹೋಗುತ್ತದೆ.
- ಈ ಪರಿಸ್ಥಿತಿಯು ವಿಜ್ಞಾನಿಗಳಿಗೆ ಸೌರ ಡೈನಾಮಿಕ್ಸ್ ಅನ್ನು ಅಧ್ಯಯನ ಮಾಡಲು ಒಂದು ಅನನ್ಯ ಅವಕಾಶವನ್ನು ನೀಡುತ್ತದೆ. ಪ್ರತಿ ಸೌರ ತ್ರಿಜ್ಯದ ಉದ್ದವು ಸರಿಸುಮಾರು 6,95,700 ಕಿ.ಮೀ. ಇರುತ್ತದೆ.
‘ಸೌರ ಸಂಯೋಗ’ ಅಥವಾ ‘ ಸೋಲಾರ್ ಕಂಜಂಕ್ಷನ್’ ಕುರಿತು:
‘ಸೌರ ಸಂಯೋಗ’ (Solar Conjunction) ಎಂದರೆ ಭೂಮಿ ಮತ್ತು ಮಂಗಳವು ಸೂರ್ಯನ ಸುತ್ತ ತಮ್ಮ ಅನಂತ ಕ್ರಾಂತಿಯ ಅವಧಿಯಲ್ಲಿ, ಸೂರ್ಯನು ಬೆಂಕಿಯ ವಸ್ತುವಿನ ಮಧ್ಯದಲ್ಲಿ ಬಂದಾಗ, ಅವುಗಳು ಪರಸ್ಪರರ ದೃಷ್ಟಿಗೆ ಮರೆಯಾಗುತ್ತವೆ.
- ಭೂಮಿ ಮತ್ತು ಮಂಗಳ ಎರಡೂ – ದೈತ್ಯ ದೀಪೋತ್ಸವದ ಎರಡೂ ಬದಿಯಲ್ಲಿರುವ ನರ್ತಕರಂತೆ – ಪರಸ್ಪರ ತಾತ್ಕಾಲಿಕವಾಗಿ ಅದೃಶ್ಯರಾಗುತ್ತಾರೆ.
- ‘ಸೌರ ಸಂಯೋಗ’ದ ವಿದ್ಯಮಾನವು ಪ್ರತಿ ಎರಡು ವರ್ಷಗಳಿಗೊಮ್ಮೆ ಸಂಭವಿಸುತ್ತದೆ.
ಬಾಹ್ಯಾಕಾಶ ಕಾರ್ಯಾಚರಣೆಗಳ ಮೇಲೆ ಈ ಘಟನೆಯ ಪ್ರಭಾವ:
ಈ ಘಟನೆಯು ಸಂಭವಿಸಿದಾಗ, NASA ದ ಜೆಟ್ ಪ್ರೊಪಲ್ಷನ್ ಲ್ಯಾಬೊರೇಟರಿಯಲ್ಲಿನ ಮಿಷನ್ ನಿಯಂತ್ರಕಗಳು ಹಲವು ರೀತಿಯಲ್ಲಿ ಪ್ರತಿಕ್ರಿಯಿಸುತ್ತವೆ.
- ಸೌರ ಸಂಯೋಗ ಸಂಭವಿಸುವ ಮೊದಲು ಮಿಷನ್ ತಂಡದಿಂದ ಯಾವುದೇ ಅಗತ್ಯ ಸೂಚನೆಗಳನ್ನು ಕಳುಹಿಸಲಾಗುತ್ತದೆ.
- ಕೆಲವು ಉಪಕರಣಗಳನ್ನು ಮಿಷನ್ ತಂಡವು ಆಫ್ ಮಾಡುತ್ತದೆ ಮತ್ತು ಅವರು ಇತರ ಉಪಕರಣಗಳಿಂದ ಡೇಟಾವನ್ನು ಸಂಗ್ರಹಿಸುತ್ತಾರೆ ಮತ್ತು ಏಕಿಕರಿಸುತ್ತಾರೆ.
- ಕೆಲವು ಸಂದರ್ಭಗಳಲ್ಲಿ, ಮಿಷನ್ ತಂಡಗಳು ಕೆಲವು ಡೇಟಾ ಕಳೆದುಹೋಗಬಹುದು ಎಂದು ತಿಳಿದುಕೊಂಡು ಭೂಮಿಗೆ ಡೇಟಾವನ್ನು ಕಳುಹಿಸುವುದನ್ನು ಮುಂದುವರಿಸುತ್ತವೆ.
- ಸೌರ ಸಂಯೋಗದ ಸಮಯದಲ್ಲಿ, ಮಂಗಳ ಗ್ರಹಕ್ಕೆ ಹೊಸ ಸೂಚನೆಗಳನ್ನು ಕಳುಹಿಸಲು ಯಾರೂ ಪ್ರಯತ್ನಿಸುವುದಿಲ್ಲ.
ವಿಷಯಗಳು: ಸಂರಕ್ಷಣೆ, ಪರಿಸರ ಮಾಲಿನ್ಯ ಮತ್ತು ಅವನತಿ, ಪರಿಸರ ಪ್ರಭಾವದ ಮೌಲ್ಯಮಾಪನ.
UNEP ಪ್ಲಾಸ್ಟಿಕ್ ಮಾಲಿನ್ಯ ನಿರ್ಣಯ:
(UNEA plastic pollution resolution)
ಸಂದರ್ಭ:
ನೈರೋಬಿಯಲ್ಲಿ ನಡೆದ ಐದನೇ ‘ಯುನೈಟೆಡ್ ನೇಷನ್ಸ್ ಎನ್ವಿರಾನ್ಮೆಂಟ್ ಅಸೆಂಬ್ಲಿ’ (United Nations Environment Assembly – UNEA-5.2) ನ ಇತ್ತೀಚಿನ ಅಧಿವೇಶನದಲ್ಲಿ, 2024 ರ ವೇಳೆಗೆ ‘ಪ್ಲಾಸ್ಟಿಕ್ ಮಾಲಿನ್ಯ’ವನ್ನು ಕೊನೆಗೊಳಿಸುವ ‘ಸಂಕಲ್ಪ’ ಮತ್ತು ಅಂತರರಾಷ್ಟ್ರೀಯ ಕಾನೂನುಬದ್ಧ ಒಪ್ಪಂದವನ್ನು ರೂಪಿಸಲು ವಿನಂತಿಸಲಾಗಿದೆ. ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮವು (UN Environment Programme) ಈ ಅಧಿವೇಶನವನ್ನು ಆಯೋಜಿಸಿದೆ.
- ನಿರ್ಣಯವು ಸಮುದ್ರ ಪರಿಸರ ವ್ಯವಸ್ಥೆಗಳಿಗೆ ಸಂಬಂಧಿಸಿದೆ ಮತ್ತು ಸದಸ್ಯ ರಾಷ್ಟ್ರಗಳಿಗೆ ಬಾಧ್ಯಸ್ತಕಾರಿ ಮತ್ತು ಸ್ವಯಂಪ್ರೇರಿತ ವಿಧಾನಗಳನ್ನು ಒಳಗೊಂಡಿರುತ್ತದೆ.
ಪ್ಲಾಸ್ಟಿಕ್ ಮಾಲಿನ್ಯವನ್ನು ಮಿತಿಗೊಳಿಸಲು ‘ಕಂಪಲ್ಸಿವ್ ರೆಸಲ್ಯೂಶನ್’ ನ ಅಗತ್ಯತೆ:
ಕಳೆದ ದಶಕಗಳಲ್ಲಿ ಪ್ಲಾಸ್ಟಿಕ್ ಉತ್ಪಾದನೆಯು ಆಘಾತಕಾರಿ ವೇಗದಲ್ಲಿ ಬೆಳೆದಿದೆ ಮತ್ತು ಪ್ರಸ್ತುತ ವರ್ಷಕ್ಕೆ ಸುಮಾರು 400 ಮಿಲಿಯನ್ ಟನ್ಗಳ ದರದಲ್ಲಿದೆ – ಈ ಅಂಕಿ ಅಂಶಗಳು 2040 ರ ವೇಳೆಗೆ ದ್ವಿಗುಣಗೊಳ್ಳುತ್ತವೆ.
- ಪ್ಲಾಸ್ಟಿಕ್ಗಳಿಗೆ ಒಡ್ಡಿಕೊಳ್ಳುವುದರಿಂದ ಮಾನವನ ಆರೋಗ್ಯಕ್ಕೆ ಹಾನಿಯಾಗುತ್ತದೆ ಮತ್ತು ಫಲವತ್ತತೆ, ಹಾರ್ಮೋನುಗಳು, ಚಯಾಪಚಯ ಮತ್ತು ನರವೈಜ್ಞಾನಿಕ ಚಟುವಟಿಕೆಗಳ ಮೇಲೆ ಸಂಭಾವ್ಯ ಪರಿಣಾಮ ಬೀರಬಹುದು. ಇದಲ್ಲದೇ ಬಯಲಿನಲ್ಲಿ ಪ್ಲಾಸ್ಟಿಕ್ ಸುಡುವುದರಿಂದ ವಾಯು ಮಾಲಿನ್ಯವೂ ಹೆಚ್ಚುತ್ತದೆ.
- 2050 ರ ವೇಳೆಗೆ ಪ್ಲಾಸ್ಟಿಕ್ ಉತ್ಪಾದನೆ, ಬಳಕೆ ಮತ್ತು ವಿಲೇವಾರಿಗೆ ಸಂಬಂಧಿಸಿದ ಹಸಿರುಮನೆ ಅನಿಲ ಹೊರಸೂಸುವಿಕೆಯು ಜಾಗತಿಕ ತಾಪಮಾನವನ್ನು 5 °C (34.7 °F) ಗೆ ಸೀಮಿತಗೊಳಿಸುವ ಗುರಿಯಡಿಯಲ್ಲಿ ಅನುಮತಿಸಲಾದ ಹೊರಸೂಸುವಿಕೆಯ 15 ಪ್ರತಿಶತವನ್ನು ಹೊಂದಿದೆ.
- ಸೇವನೆ, ಸಿಕ್ಕಿಹಾಕಿಕೊಳ್ಳುವಿಕೆ ಮತ್ತು ಇತರ ಬೆದರಿಕೆಗಳಿಂದಾಗಿ, 800 ಕ್ಕೂ ಹೆಚ್ಚು ಸಮುದ್ರ ಮತ್ತು ಕರಾವಳಿ ಪ್ರಭೇದಗಳು ಪ್ಲಾಸ್ಟಿಕ್ ಮಾಲಿನ್ಯದಿಂದ ಪ್ರಭಾವಿತವಾಗಿವೆ.
- ವಾರ್ಷಿಕವಾಗಿ ಸುಮಾರು 11 ಮಿಲಿಯನ್ ಟನ್ ಪ್ಲಾಸ್ಟಿಕ್ ತ್ಯಾಜ್ಯ ಸಾಗರಗಳನ್ನು ಸೇರುತ್ತದೆ. 2040 ರ ವೇಳೆಗೆ ಈ ಪ್ರಮಾಣವು ಮೂರು ಪಟ್ಟು ಹೆಚ್ಚಾಗಬಹುದು.
ಒಂದು ವೃತ್ತಾಕಾರದ ಆರ್ಥಿಕತೆಯಲ್ಲಿ ಪರಿವರ್ತನೆಯು 2040 ರ ವೇಳೆಗೆ ಸಾಗರಗಳನ್ನು ಪ್ರವೇಶಿಸುವ ಪ್ಲಾಸ್ಟಿಕ್ ಪ್ರಮಾಣವನ್ನು 80 ಪ್ರತಿಶತಕ್ಕಿಂತ ಹೆಚ್ಚು ಕಡಿಮೆ ಮಾಡಬಹುದು; ಮುಟ್ಟದ ಪ್ಲಾಸ್ಟಿಕ್ ಉತ್ಪಾದನೆಯಲ್ಲಿ 55 ಪ್ರತಿಶತ ಕಡಿತ; 2040 ರ ವೇಳೆಗೆ ಸರ್ಕಾರಗಳಿಗೆ US$70 ಶತಕೋಟಿ ಉಳಿತಾಯ; ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು 25 ಪ್ರತಿಶತದಷ್ಟು ಕಡಿತಗೊಳಿಸಬಹುದು ಮತ್ತು ಹೆಚ್ಚುವರಿಯಾಗಿ, ಮುಖ್ಯವಾಗಿ ಜಾಗತಿಕ ದಕ್ಷಿಣದಲ್ಲಿ 700,000 ಉದ್ಯೋಗಗಳನ್ನು ಸೃಷ್ಟಿಸಬಹುದು.
ಪ್ಲಾಸ್ಟಿಕ್ ಮಾಲಿನ್ಯವನ್ನು ಕೊನೆಗೊಳಿಸುವ ವಿಷಯದ ಕುರಿತು ಈ ಸಭೆಯ ಫಲಿತಾಂಶಗಳು:
- ಪ್ರಪಂಚದ ಎಲ್ಲಾ ಪರಿಸರ ಮಂತ್ರಿಗಳು ಪ್ಲಾಸ್ಟಿಕ್ ಮಾಲಿನ್ಯವನ್ನು ಕೊನೆಗೊಳಿಸಲು ಅಂತರಾಷ್ಟ್ರೀಯ ಕಾನೂನು ಬದ್ಧ ಒಪ್ಪಂದವನ್ನು ಅಭಿವೃದ್ಧಿಪಡಿಸಲು ಅಂತರಸರ್ಕಾರಿ ಸಮಾಲೋಚನ ಸಮಿತಿಯನ್ನು (Intergovernmental Negotiating Committee – INC) ಸ್ಥಾಪಿಸಲು ಒಪ್ಪಿಕೊಂಡಿದ್ದಾರೆ.
- ಇಂಟರ್ಗವರ್ನಮೆಂಟಲ್ ನೆಗೋಷಿಯೇಟಿಂಗ್ ಕಮಿಟಿ (INC) 2022 ರಲ್ಲಿ ತನ್ನ ಕೆಲಸವನ್ನು ಪ್ರಾರಂಭಿಸುತ್ತದೆ, 2024 ರ ಅಂತ್ಯದ ವೇಳೆಗೆ ಜಾಗತಿಕ ಕಾನೂನುಬದ್ಧ ಒಪ್ಪಂದದ ಕರಡನ್ನು ಪೂರ್ಣಗೊಳಿಸುವ ಆದೇಶದೊಂದಿಗೆ.
- ಮಾಲಿನ್ಯವನ್ನು ಪರಿಹರಿಸುವಲ್ಲಿನ ಬೆಳವಣಿಗೆಯನ್ನು 2015 ರ ಪ್ಯಾರಿಸ್ ಒಪ್ಪಂದದ ನಂತರ ಅತ್ಯಂತ ಪ್ರಮುಖ ಪರಿಸರ ಒಪ್ಪಂದವೆಂದು ಗುರುತಿಸಲ್ಪಟ್ಟಿದೆ.
ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮದ ಬಗ್ಗೆ:
- ಯುನೈಟೆಡ್ ನೇಷನ್ಸ್ ಎನ್ವಿರಾನ್ಮೆಂಟ್ ಪ್ರೋಗ್ರಾಂ (UNEP) ಪರಿಸರ ಸಮಸ್ಯೆಗಳ ಕುರಿತ ಪ್ರಮುಖ ಜಾಗತಿಕ ಧ್ವನಿಯಾಗಿದೆ.
- ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮವನ್ನು (UNEP) 1972 ರಲ್ಲಿ ‘ಮಾನವ ಪರಿಸರದ ವಿಶ್ವಸಂಸ್ಥೆಯ ಐತಿಹಾಸಿಕ ಸಮ್ಮೇಳನ’ದ ನಂತರ ಸ್ಥಾಪಿಸಲಾಯಿತು.
- ಪರಿಸರದ ಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲು, ‘ವೈಜ್ಞಾನಿಕ ಜ್ಞಾನದೊಂದಿಗೆ ನೀತಿ ರಚನೆ’ ಮತ್ತು ‘ವಿಶ್ವದ ಪರಿಸರ ಸವಾಲುಗಳಿಗೆ ಪ್ರತಿಕ್ರಿಯೆಯನ್ನು ಸಂಘಟಿಸಲು’ UNEP ಅನ್ನು ರೂಪಿಸಲಾಗಿದೆ.
- ಯುಎನ್ಇಪಿ ಭಾಗವಹಿಸುವಿಕೆಯನ್ನು ಪ್ರೋತ್ಸಾಹಿಸುತ್ತದೆ ಮತ್ತು ಭವಿಷ್ಯದ ಪೀಳಿಗೆಗೆ ರಾಜಿಯಾಗದಂತೆ ರಾಷ್ಟ್ರಗಳು ಮತ್ತು ಜನರು ತಮ್ಮ ಜೀವನದ ಗುಣಮಟ್ಟವನ್ನು ಸುಧಾರಿಸಲು ಪ್ರೇರೇಪಿಸುವ, ತಿಳಿಸುವ ಮತ್ತು ಸಕ್ರಿಯಗೊಳಿಸುವ ಮೂಲಕ ಪರಿಸರದ ಆರೈಕೆಯಲ್ಲಿ ನಾಯಕತ್ವವನ್ನು ಒದಗಿಸುತ್ತದೆ.
ವಿಶ್ವಸಂಸ್ಥೆಯ ಪರಿಸರ ಅಸೆಂಬ್ಲಿ ಕುರಿತು:
ವಿಶ್ವಸಂಸ್ಥೆಯ ಪರಿಸರ ಅಸೆಂಬ್ಲಿ ಯು (United Nations Environment Assembly – UNEA) ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮದ ಆಡಳಿತ ಮಂಡಳಿಯಾಗಿದೆ.
- ಇದು ಪರಿಸರದ ವಿಷಯಗಳಲ್ಲಿ ನಿರ್ಧಾರ ತೆಗೆದುಕೊಳ್ಳುವ ವಿಶ್ವದ ಅತ್ಯುನ್ನತ ಸಂಸ್ಥೆಯಾಗಿದೆ.
- ‘ಪರಿಸರ ಸಭೆ’ಯು ವಿಶ್ವಸಂಸ್ಥೆಯ 193 ಸದಸ್ಯ ರಾಷ್ಟ್ರಗಳನ್ನು ಒಳಗೊಂಡಿದೆ ಮತ್ತು ಜಾಗತಿಕ ಪರಿಸರ ಆಡಳಿತ ವ್ಯವಸ್ಥೆಯನ್ನು ಮುನ್ನಡೆಸಲು ಪ್ರತಿ ಎರಡು ವರ್ಷಗಳಿಗೊಮ್ಮೆ ಅದರ ಅಧಿವೇಶನಗಳನ್ನು ನಡೆಸಲಾಗುತ್ತದೆ.
- ಜೂನ್ 2012 ರಲ್ಲಿ ನಡೆದ ‘ಯುನೈಟೆಡ್ ನೇಷನ್ಸ್ ಸಸ್ಟೈನಬಲ್ ಡೆವಲಪ್ಮೆಂಟ್ ಕಾನ್ಫರೆನ್ಸ್’ ಸಮಯದಲ್ಲಿ ಇದನ್ನು ರಚಿಸಲಾಯಿತು. ಈ ಸಮಾವೇಶವನ್ನು ‘ರಿಯೊ+20’ ಎಂದೂ ಕರೆಯಲಾಗುತ್ತದೆ.
ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ಸಂಗತಿಗಳು:
ವಾಟ್ಸ್ ಆನ್ ದಿ ಮೂನ್ ಚಾಲೆಂಜ್:
ನಾಸಾ ಆರಂಭಿಸಿದ ವಾಟ್ಸ್ ಆನ್ ದಿ ಮೂನ್ ಚಾಲೆಂಜ್ ಶಕ್ತಿಯ ವಿತರಣೆ, ನಿರ್ವಹಣೆ ಮತ್ತು/ಅಥವಾ ಸಂಗ್ರಹಣೆಗೆ ಪರಿಹಾರಗಳನ್ನು ಕಂಡುಕೊಳ್ಳುವ ಗುರಿಯನ್ನು ಹೊಂದಿದೆ,NASA ದ ತಂತ್ರಜ್ಞಾನದ ಅಂತರವನ್ನು ಪರಿಹರಿಸುವ ಸಾಮರ್ಥ್ಯವನ್ನು ಹೊಂದಿರುವವರು ಮತ್ತು ಚಂದ್ರನ ಮೇಲ್ಮೈ ಮತ್ತು ಇತರ ಭವಿಷ್ಯದ ಕಾರ್ಯಕ್ರಮಗಳಲ್ಲಿ ಬಾಹ್ಯಾಕಾಶ ಹಾರಾಟಕ್ಕಾಗಿ ಇನ್ನಷ್ಟು ಅಭಿವೃದ್ಧಿಪಡಿಸಬಹುದು.
ಪ್ರಾಮುಖ್ಯತೆ: ಈ ನವೀನ ಪರಿಹಾರಗಳು ಚಂದ್ರನ ಪರಿಶೋಧನೆ ಮತ್ತು ಬಾಹ್ಯಾಕಾಶ ಪರಿಶೋಧನೆಯಲ್ಲಿ ಕೇವಲ ವ್ಯತ್ಯಾವನ್ನು ಉಂಟುಮಾಡುವುದಿಲ್ಲ, ಆದರೆ NASA ದ ‘ವ್ಯಾಟ್ಸ್ ಆನ್ ದಿ ಮೂನ್’ ಸ್ಪರ್ಧೆಯ ಸಮಯದಲ್ಲಿ ಕಂಡುಹಿಡಿದ ತಂತ್ರಜ್ಞಾನಗಳು ಭೂಮಿಯ ಮೇಲೆ ಹೊಸ ಶಕ್ತಿಯ ಆಯ್ಕೆಗಳನ್ನು ಸುಲಭಗೊಳಿಸಲು ಸಹಾಯ ಮಾಡುತ್ತದೆ.
ಈ ಸವಾಲನ್ನು ಕ್ಲೀವ್ಲ್ಯಾಂಡ್ನಲ್ಲಿರುವ NASA ದ ಗ್ಲೆನ್ ಸಂಶೋಧನಾ ಕೇಂದ್ರವು ನಿರ್ವಹಿಸುತ್ತಿದೆ ಮತ್ತು ಅಲಬಾಮಾದ ಹಂಟ್ಸ್ವಿಲ್ಲೆಯಲ್ಲಿರುವ ಏಜೆನ್ಸಿಯ ಮಾರ್ಷಲ್ ಸ್ಪೇಸ್ ಫ್ಲೈಟ್ ಸೆಂಟರ್ನಲ್ಲಿರುವ ಸೆಂಟೆನರಿ ಚಾಲೆಂಜ್ನ ಭಾಗವಾಗಿದೆ.
ಕೋನಾರ್ಕ್ ದೇವಾಲಯ ಪಟ್ಟಣವು 100 ಪ್ರತಿಶತ ಸೌರ ಪಟ್ಟಣವಾಗಲಿದೆ:
ಒಡಿಶಾ ಕರಾವಳಿಯ ದೇವಾಲಯ ಪಟ್ಟಣವಾದ ಕೊನಾರ್ಕ್ ಅನ್ನು 100 ಪ್ರತಿಶತ ಸೌರ ಪಟ್ಟಣವನ್ನಾಗಿ ಮಾಡಲು ಯೋಜಿಸಿದೆ ಮತ್ತು ಭಾರತದ ಮೊದಲ ಕೆಲವೇ ಕೆಲವು ಶೂನ್ಯ ಹೊರಸೂಸುವಿಕೆ ನಗರಗಳು ಅಥವಾ ಪಟ್ಟಣಗಳಲ್ಲಿ ಇದನ್ನು ಒಂದಾಗಿಸಲು ಯೋಜಿಸುತ್ತಿದೆ.
ಕೊನಾರ್ಕ್ ಸೂರ್ಯ ದೇವಾಲಯದ ಕುರಿತು:
- 13ನೇ ಶತಮಾನದಲ್ಲಿ ನಿರ್ಮಿಸಲಾದ ಕೋನಾರ್ಕ್ ಸೂರ್ಯ ದೇವಾಲಯವನ್ನು 12 ಜೊತೆ ಸೊಗಸಾದ ಅಲಂಕೃತವಾದ ಚಕ್ರ ಗಳೊಂದಿಗೆ ಏಳು ಕುದುರೆಗಳಿಂದ ಎಳೆಯಲ್ಪಟ್ಟು ಸೂರ್ಯದೇವರ ಬೃಹತ್ ರಥವೆಂದು ಊಹಿಸಲಾಗಿದೆ.
- ಇದನ್ನು ಗಂಗ ರಾಜವಂಶದ ಶ್ರೇಷ್ಠ ಆಡಳಿತಗಾರ ರಾಜ 1 ನೆಯ ನರಸಿಂಹದೇವ ನಿರ್ಮಿಸಿದ.
- ವಾಸ್ತುಶಿಲ್ಪದ ಮಹತ್ವ ಮತ್ತು ಶ್ರೀಮಂತ ಮತ್ತು ಸಮೃದ್ಧ ಅತ್ಯಾಧುನಿಕ ಶಿಲ್ಪಕಲೆಗಾಗಿ ಈ ದೇವಾಲಯವನ್ನು 1984 ರಲ್ಲಿ ಯುನೆಸ್ಕೋದ ‘ವಿಶ್ವ ಪರಂಪರೆಯ ತಾಣ’ದಲ್ಲಿ ಸೇರಿಸಲಾಯಿತು.
ವಿಶ್ವ ಪಾರಂಪರಿಕ ದಿನಾಚರಣೆ ಏಪ್ರಿಲ್ 18.
- ಈ ದೇವಾಲಯವು ಕಳಿಂಗ ವಾಸ್ತುಶಿಲ್ಪ, ಪರಂಪರೆ, ಆಕರ್ಷಕ ಕಡಲತೀರಗಳು ಮತ್ತು ವಿಶಿಷ್ಟವಾದ ನೈಸರ್ಗಿಕ ಸೌಂದರ್ಯದ ಪರಿಪೂರ್ಣ ಮಿಶ್ರಣವಾಗಿದೆ.
- ಇದನ್ನು ಪ್ರಾಚೀನ ಸ್ಮಾರಕಗಳು ಮತ್ತು ಪುರಾತತ್ವ ತಾಣಗಳು ಮತ್ತು ಅವಶೇಷಗಳ ಕಾಯ್ದೆ (Ancient Monuments and Archaeological Sites and Remains- AMASR), (1958) ಮತ್ತು ಅದರ ನಿಯಮಗಳು (1959), ರ ರಾಷ್ಟ್ರೀಯ ಚೌಕಟ್ಟಿನಡಿಯಲ್ಲಿ ರಕ್ಷಿಸಲಾಗಿದೆ.
- ಕೊನಾರ್ಕ್ ಒಡಿಶಾದ ಸುವರ್ಣ ತ್ರಿಕೋನದ ಮೂರನೇ ಕೊಂಡಿಯಾಗಿದೆ. ಈ ಸುವರ್ಣ ತ್ರಿಕೋನದ ಮೊದಲ ಕೊಂಡಿ ಜಗನ್ನಾಥ ಪುರಿ ಮತ್ತು ಎರಡನೇ ಕೊಂಡಿ ಭುವನೇಶ್ವರ (ಒಡಿಶಾದ ರಾಜಧಾನಿ) ಆಗಿದೆ.
- ಗಾಢವಾದ ಬಣ್ಣದಿಂದಾಗಿ ಈ ದೇವಾಲಯವನ್ನು ‘ಕಪ್ಪು ಪಗೋಡಾ’ ಎಂದೂ ಕರೆಯುತ್ತಾರೆ ಮತ್ತು ಇದನ್ನು ಒಡಿಶಾದ ಪ್ರಾಚೀನ ಸಮುದ್ರಯಾನಕಾರರು ನ್ಯಾವಿಗೇಷನಲ್ ತಾಣವಾಗಿ ಅಥವಾ ಹೆಗ್ಗುರುತಾಗಿ ಬಳಸುತ್ತಿದ್ದರು. ಅದೇ ರೀತಿ ಪುರಿಯ ಜಗನ್ನಾಥ ದೇವಾಲಯವನ್ನು “ಬಿಳಿ ಪಗೋಡ” ಎಂದು ಕರೆಯಲಾಗುತ್ತದೆ.
- ಇದು ಹಿಂದೂಗಳಿಗೆ ಪ್ರಮುಖ ಯಾತ್ರಾಸ್ಥಳವಾಗಿದ್ದು, ಪ್ರತಿವರ್ಷ ಫೆಬ್ರವರಿ ತಿಂಗಳಲ್ಲಿ ಚಂದ್ರಭಾಗ ಜಾತ್ರೆಗಾಗಿ ಸೇರಲಾಗುತ್ತದೆ.
ಸಹ-ಸ್ಥಳ ಎಂದರೇನು?
(What is co-location?)
- ಸಹ-ಸ್ಥಳ ಅಥವಾ ಕೋ-ಲೊಕೇಶನ್ ಎಂಬುದು ದಲ್ಲಾಳಿಗಳಿಗೆ ಹೆಚ್ಚುವರಿ ಶುಲ್ಕದ ಪಾವತಿಯ ಮೇಲೆ ತಮ್ಮ ಸರ್ವರ್ಗಳಿಗೆ ಹತ್ತಿರವಾಗಿ ಕೆಲಸ ಮಾಡಲು ಅನುಕೂಲ ಒದಗಿಸುತ್ತದೆ.
- ಸಹ-ಸ್ಥಳ ಸೌಲಭ್ಯವು ಸರ್ವರ್ಗಳನ್ನು ಹೊಂದಿಸಲು ಮತ್ತು ಡೇಟಾವನ್ನು ಸಂಗ್ರಹಿಸಲು ವಿದ್ಯುತ್ ಸರಬರಾಜು, ಬ್ಯಾಂಡ್ವಿಡ್ತ್ ಮತ್ತು ಕೂಲಿಂಗ್ನಂತಹ ಮೂಲಸೌಕರ್ಯಗಳನ್ನು ಒದಗಿಸುತ್ತದೆ.
- ಏಕೆಂದರೆ, ಸಹ-ಸ್ಥಳ ಸೌಲಭ್ಯವನ್ನು ವಿನಿಮಯ ಸರ್ವರ್ನ ಬಳಿ ಸ್ಥಾಪಿಸಲಾಗಿದೆ, ಇದರಿಂದಾಗಿ ಡೇಟಾ ಪ್ರಸರಣವು ಕಡಿಮೆ ಸಮಯವನ್ನು ತೆಗೆದುಕೊಳ್ಳುತ್ತದೆ ಮತ್ತು ಇತರರ ಮೇಲೆ ಪ್ರಯೋಜನವನ್ನು ಪಡೆಯಲು ದಲ್ಲಾಳಿಗಳಿಗೆ ಸಹಾಯ ಮಾಡುತ್ತದೆ.
- ಸೌಲಭ್ಯದ ಪ್ರಯೋಜನವನ್ನು ಪಡೆಯದ ವ್ಯಕ್ತಿಗಳ ಆರ್ಡರ್ಗಳು ಸೌಲಭ್ಯದ ಪ್ರಯೋಜನವನ್ನು ಪಡೆಯದ ವ್ಯಕ್ತಿಗಳಿಗಿಂತ ವೇಗವಾಗಿ ಎಕ್ಸ್ಚೇಂಜ್ ಸರ್ವರ್ಗಳನ್ನು ತಲುಪುತ್ತವೆ.
ಸುದ್ದಿಯಲ್ಲಿರಲು ಕಾರಣ:
ಓರ್ವ ನಿಗೂಢ ‘ಯೋಗಿ’ಯ ಆಪಾದಿತ ಪ್ರಭಾವದಿಂದ ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್ನ (NSE) ಮಾಜಿ MD ಮತ್ತು CEO ತೆಗೆದುಕೊಂಡ ನಿರ್ಧಾರಗಳನ್ನು ಅನುಮೋದಿಸುವ ‘ಮಾರುಕಟ್ಟೆ ನಿಯಂತ್ರಕ ನೀಡಿದ ಇತ್ತೀಚಿನ ಆದೇಶ’ದ ದೃಷ್ಟಿಯಿಂದ ಸಹ-ಸ್ಥಳದ ಸಮಸ್ಯೆ ಮತ್ತೊಮ್ಮೆ ಚರ್ಚೆಯಲ್ಲಿ ಬಂದಿದೆ.
ಸಮರ್ಥ ರಾಮದಾಸ್:
‘ಸಮರ್ಥ ರಾಮದಾಸ್’ ಕುರಿತು ಮಹಾರಾಷ್ಟ್ರ ರಾಜ್ಯಪಾಲ ‘ಬಿಎಸ್ ಕೋಶ್ಯಾರಿ’ ಅವರು ಇತ್ತೀಚೆಗೆ ನೀಡಿದ ಹೇಳಿಕೆಗೆ ಹಲವಾರು ರಾಜಕಾರಣಿಗಳು ತಮ್ಮ ಅಸಮ್ಮತಿ ವ್ಯಕ್ತಪಡಿಸಿದ್ದಾರೆ. ಸಮಾರಂಭವೊಂದರಲ್ಲಿ ರಾಜ್ಯಪಾಲರು ‘ಸಮರ್ಥ ರಾಮದಾಸ್’ ಅವರನ್ನು ಛತ್ರಪತಿ ಶಿವಾಜಿ ಮಹಾರಾಜರ ಗುರು ಎಂದು ಬಣ್ಣಿಸಿದ್ದರು.
- ಸಮರ್ಥ ರಾಮದಾಸ್ ಅವರನ್ನು ಸಂತ ರಾಮದಾಸ್ ಅಥವಾ ರಾಮದಾಸ್ ಸ್ವಾಮಿ ಎಂದೂ ಕರೆಯಲಾಗುತ್ತದೆ.
- ಅವರು ಭಾರತೀಯ ಮರಾಠಿ ಹಿಂದೂ ಸಂತ, ಕವಿ, ತತ್ವಜ್ಞಾನಿ, ಬರಹಗಾರ ಮತ್ತು ಆಧ್ಯಾತ್ಮಿಕ ನಾಯಕರಾಗಿದ್ದರು.
- ಅವರು ಹಿಂದೂ ದೇವರುಗಳಾದ ರಾಮ ಮತ್ತು ಹನುಮಂತನ ಭಕ್ತರಾಗಿದ್ದರು ಮತ್ತು ಮೊದಲು ನಾರಾಯಣ ಎಂಬ ಹೆಸರಿನಿಂದ ಪ್ರಸಿದ್ಧರಾಗಿದ್ದರು.
- ಅವರು ಇಂದಿನ ಮಹಾರಾಷ್ಟ್ರದ ಜಲ್ನಾ ಜಿಲ್ಲೆಯ ‘ಜಾಂಬ್’ ಎಂಬ ಹಳ್ಳಿಯಲ್ಲಿ ಜನಿಸಿದರು.
- ಅವರ ಸಾಹಿತ್ಯ ಕೃತಿಗಳು, ಕರುಣಾಷ್ಟಕಗಳು, ದಶಬೋಧ, ಯುದ್ಧಕಾಂಡ, ಸುಂದರಕಾಂಡ, ಪೂರ್ವಭಾವ, ಅಂತರಭಾವ, ಚತುರ್ಥಮನ, ಆತ್ಮರಂ, ಪಂಚಮನ್, ಪಂಚಸಮಾಸಿ, ಮನಪಂಚಕ, ಜನಸ್ವಭಾಗೋಸವಿ ಇತ್ಯಾದಿ.
- ಬಾಲಗಂಗಾಧರ ತಿಲಕ್, ರಾಜವಾಡೆ, ಕೇಶವ ಹೆಡಗೇವಾರ್ ಮತ್ತು ರಾಮಚಂದ್ರ ರಾನಡೆ ಸೇರಿದಂತೆ 19ನೇ ಮತ್ತು 20ನೇ ಶತಮಾನದ ಅನೇಕ ಭಾರತೀಯ ಚಿಂತಕರು, ಇತಿಹಾಸಕಾರರು ಮತ್ತು ಸಮಾಜ ಸುಧಾರಕರಿಗೆ ರಾಮದಾಸ್ ಸ್ಫೂರ್ತಿಯಾಗಿದ್ದಾರೆ.
ಗ್ರಾಮ ರಕ್ಷಣಾ ಗುಂಪುಗಳನ್ನು ಪಡೆಯಲಿರುವ ಜಮ್ಮು:
ಕೇಂದ್ರಾಡಳಿತ ಪ್ರದೇಶದ ಡಿಲಿಮಿಟೇಶನ್ ಪ್ರಕ್ರಿಯೆ ಪ್ರಾರಂಭವಾಗುವ ಮೊದಲು, ಜಮ್ಮು ಮತ್ತು ಕಾಶ್ಮೀರದ ಹಳ್ಳಿಗಳ ನಿವಾಸಿಗಳನ್ನು ಸ್ಥಳೀಯ ಭದ್ರತೆಗಾಗಿ ದಾಖಲಿಸಲಾಗುತ್ತದೆ. ಗ್ರಾಮ ರಕ್ಷಣಾ ಗುಂಪುಗಳ (Village Defence Groups – VDG) ರಚನೆಗೆ ಸರ್ಕಾರ ಅನುಮೋದನೆ ನೀಡಿದೆ.
- ಸ್ಥಳೀಯ ಪೊಲೀಸ್ ಉಪಸ್ಥಿತಿ ಕಡಿಮೆ ಇರುವ ಪ್ರದೇಶಗಳಲ್ಲಿ ಬೆದರಿಕೆಗಳಿಗೆ ಪ್ರತಿಕ್ರಿಯಿಸಲು ಈ ‘ಗ್ರಾಮ ರಕ್ಷಣಾ ಗುಂಪು’ಗಳನ್ನು ರಚಿಸಲಾಗುತ್ತದೆ.
- ಪ್ರತಿ ‘ಗ್ರಾಮ ರಕ್ಷಣಾ ಗುಂಪು’ (ವಿಡಿಜಿ) ಒಂದೇ ಶ್ರೇಣಿಯಲ್ಲಿ 8 ರಿಂದ 10 ಸದಸ್ಯರನ್ನು ನೇಮಕ ಮಾಡಿಕೊಳ್ಳುತ್ತದೆ ಮತ್ತು ವೇತನವನ್ನು ನೀಡುತ್ತದೆ ಮತ್ತು ಅವರ ವೇತನವನ್ನು ಸರ್ಕಾರವು ಪ್ರತಿ ತಿಂಗಳು ಅವರ ಖಾತೆಗಳಿಗೆ ಜಮಾ ಮಾಡುತ್ತದೆ.
- 1 ಅಥವಾ 2 ವಿಶೇಷ ಪೊಲೀಸ್ ಅಧಿಕಾರಿಗಳನ್ನು ‘ಗ್ರಾಮ ರಕ್ಷಣಾ ಗುಂಪು’ಗಳಲ್ಲಿ ನಿಯೋಜಿಸುವ ಅಸ್ತಿತ್ವದಲ್ಲಿರುವ ವ್ಯವಸ್ಥೆಯನ್ನು ಸ್ಥಗಿತಗೊಳಿಸಲಾಗುತ್ತದೆ.
- ‘ಗ್ರಾಮ ರಕ್ಷಣಾ ಗುಂಪುಗಳು’ ಕಾಶ್ಮೀರ ಕಣಿವೆಯ ಕೆಲವು ಭಾಗಗಳಲ್ಲಿ ಸಹ ಕಾರ್ಯನಿರ್ವಹಿಸುತ್ತವೆ.
[ad_2]