[Mission 2022] ದೈನಂದಿನ ಪ್ರಚಲಿತ ಘಟನೆಗಳು ದಿನಾಂಕ – 21ನೇ ಫೆಬ್ರುವರಿ 2022 – INSIGHTSIAS

[ad_1]

 

 

ಪರಿವಿಡಿ:

 ಸಾಮಾನ್ಯ ಅಧ್ಯಯನ ಪತ್ರಿಕೆ  1 :

1. ಗುರು ರವಿದಾಸ್.

 

ಸಾಮಾನ್ಯ ಅಧ್ಯಯನ ಪತ್ರಿಕೆ:2

1. ಸಮಗ್ರ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದ ಭಾರತ ಮತ್ತು ಯುಎಇ.

 

ಸಾಮಾನ್ಯ ಅಧ್ಯಯನ ಪತ್ರಿಕೆ 3:

1. ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ.

2. ಪ್ಲಾಸ್ಟಿಕ್ ಪ್ಯಾಕೇಜಿಂಗ್‌ನಲ್ಲಿ ಉತ್ಪಾದಕರ ವಿಸ್ತೃತ ಜವಾಬ್ದಾರಿ.

3. UNEP ಫ್ರಾಂಟಿಯರ್ಸ್ ವರದಿ.

4. ಇಂಟರ್-ಆಪರೇಬಲ್ ಕ್ರಿಮಿನಲ್ ಜಸ್ಟೀಸ್ ಸಿಸ್ಟಮ್ ಪ್ರಾಜೆಕ್ಟ್.

 

ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ಸಂಗತಿಗಳು:

1. ಟೊಂಗಾ ಜ್ವಾಲಾಮುಖಿ ಸ್ಫೋಟ.

2. REWARD ಯೋಜನೆ.

3. ಲಕ್ಷ್ಯ ಶೂನ್ಯ ಡಂಪ್‌ಸೈಟ್.

4. ತಾರಾಪುರ ಹತ್ಯಾಕಾಂಡ.

5. ಫಾಕ್ಲ್ಯಾಂಡ್ ದ್ವೀಪಗಳು.

6 ಕ್ರಿಟೊಡಾಕ್ಟಿಲಸ್ ಎಕ್ಸರ್ಸಿಟಸ್.

7. ಗ್ರೇಟ್ ಬ್ಯಾಕ್‌ಯಾರ್ಡ್ ಬರ್ಡ್ ಕೌಂಟ್ (GBBC).

 


ಸಾಮಾನ್ಯ ಅಧ್ಯಯನ ಪತ್ರಿಕೆ : 1


 

ವಿಷಯಗಳು: ಭಾರತೀಯ ಸಂಸ್ಕೃತಿಯು ಪ್ರಾಚೀನ ಕಾಲದಿಂದ ಆಧುನಿಕ ಕಾಲದವರೆಗೆ ಕಲಾ ಪ್ರಕಾರಗಳು, ಸಾಹಿತ್ಯ ಮತ್ತು ವಾಸ್ತುಶಿಲ್ಪದ ಪ್ರಮುಖ ಅಂಶಗಳನ್ನು ಒಳಗೊಂಡಿದೆ.

ಗುರು ರವಿದಾಸ್:


(Guru Ravidas)

 

ಸಂದರ್ಭ:

ಪಂಜಾಬ್‌ನಲ್ಲಿ, ದಲಿತರ ಒಟ್ಟು ಜನಸಂಖ್ಯೆಯ ಸುಮಾರು 21 ಪ್ರತಿಶತವು ರವಿದಾಸಿಯ ಸಮುದಾಯಕ್ಕೆ ಸೇರಿದೆ. ಫೆಬ್ರವರಿ 16 ರಂದು ಸಂತ ರವಿದಾಸ್ ಜಯಂತಿಯ ಕಾರಣ, ಪಂಜಾಬ್‌ನಲ್ಲಿ ವಿಧಾನಸಭಾ ಚುನಾವಣೆಯ ದಿನಾಂಕವನ್ನು ಫೆಬ್ರವರಿ 14 ರಿಂದ ಫೆಬ್ರವರಿ 20 ಕ್ಕೆ ಬದಲಾಯಿಸಲಾಗಿತ್ತು ಎಂಬ ಅಂಶದಿಂದ ಈ ಜನಸಂಖ್ಯೆಯ ಪ್ರಾಮುಖ್ಯತೆಯನ್ನು ಅರ್ಥಮಾಡಿಕೊಳ್ಳಬಹುದಾಗಿದೆ.

 

ಹಿನ್ನೆಲೆ:

ಫೆಬ್ರುವರಿ 16ರಂದು ಗುರು ರವಿದಾಸ್ ಜಯಂತಿ ಇತ್ತು. ಹೀಗಾಗಿ ಸುಮಾರು 20 ಲಕ್ಷದಷ್ಟು ಜನರು ಉತ್ತರ ಪ್ರದೇಶದ ಬನಾರಸ್‌ಗೆ ಭೇಟಿ ನೀಡಿ ಜಯಂತಿ ಆಚರಿಸಲಿದ್ದರು. ಅವರಲ್ಲಿ ಹಲವರು ಜಲಂಧರ್‌ನಲ್ಲಿರುವ ರವಿದಾಸ್ಸಿಯರ ಅತಿದೊಡ್ಡ ಡೇರಾ ಆದ ಡೇರಾ ಸಚ್‌ಖಂಡ್ ಬಲ್ಲನ್ (Dera Sachkhand Ballan) ಆಯೋಜಿಸಿರುವ ವಿಶೇಷ ರೈಲಿನಲ್ಲಿ ಪ್ರಯಾಣಿಸುವವರು. ಅವರಿಗೆ, ಮತದಾನದಲ್ಲಿ ಪಾಲ್ಗೊಳ್ಳಲು ತೊಂದರೆಯಾಗದಂತೆ ನೋಡಿಕೊಳ್ಳಲು, ಚುನಾವಣೆಯನ್ನು ಕನಿಷ್ಠ ಆರು ದಿನ ಮುಂದೂಡಬೇಕು ಎಂದು ಆಡಳಿತಾರೂಢ ಕಾಂಗ್ರೆಸ್ ಸೇರಿದಂತೆ, ಬಿಜೆಪಿ, ಪಂಜಾಬ್‌ ಲೋಕ ಕಾಂಗ್ರೆಸ್‌ ಹಾಗು ಇನ್ನಿತರ ಪಕ್ಷಗಳು ಮತದಾನ ದಿನಾಂಕವನ್ನು ಮುಂದೂಡುವಂತೆ ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದವು.

 

ರವಿದಾಸ್ಸಿಯಾಸ್ ಗಳು ಯಾರು?

ರವಿದಾಸ್ಸಿಯಾಗಳು ದಲಿತ ಸಮುದಾಯವಾಗಿದ್ದು, ಅವರಲ್ಲಿ ಬಹುಪಾಲು – ಸುಮಾರು 12 ಲಕ್ಷ – ಜನರು ದೋಬಾ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ವಿಶ್ವಾದ್ಯಂತ 20 ಲಕ್ಷ ಅನುಯಾಯಿಗಳನ್ನು ಹೊಂದಿರುವ ಅವರ ಅತಿದೊಡ್ಡ ಡೇರಾ ಆದ ಡೇರಾ ಸಚ್‌ಖಂಡ್ ಬಲ್ಲನ್ ಅನ್ನು 20 ನೇ ಶತಮಾನದ ಆರಂಭದಲ್ಲಿ ಬಾಬಾ ಸಂತ ಪಿಪಾಲ್ ದಾಸ್ ಸ್ಥಾಪಿಸಿದರು.

 

  1. ಒಮ್ಮೆ ಸಿಖ್ ಧರ್ಮದೊಂದಿಗೆ ನಿಕಟ ಸಂಪರ್ಕ ಹೊಂದಿದ್ದ ಡೇರಾ ಈ ದಶಕಗಳ-ಹಳೆಯ ಸಂಬಂಧಗಳನ್ನು 2010 ರಲ್ಲಿ ಕಡಿದುಕೊಂಡಿತು ಮತ್ತು ರವಿದಾಸ್ಸಿಯಾ ಧರ್ಮವನ್ನು ಅನುಸರಿಸುವುದಾಗಿ ಘೋಷಿಸಿತು. ವಾರಣಾಸಿಯಲ್ಲಿ ಗುರು ರವಿದಾಸ್ ಜಯಂತಿಯಂದು ಡೇರಾ ಈ ಘೋಷಣೆಯನ್ನು ಮಾಡಿತು.
  2. 2010 ರಿಂದ, ಡೇರಾ ಸಚ್‌ಖಂಡ್ ಬಲ್ಲನ್ ಗುರು ಗ್ರಂಥ ಸಾಹಿಬ್ ನ ಬದಲಿಗೆ ಗುರು ರವಿದಾಸ್ ಅವರು ಬರೆದ 200 ಸ್ತೋತ್ರಗಳನ್ನು ಹೊಂದಿರುವ ಗ್ರಂಥವಾದ ಅಮೃತಬಾನಿ (Amritbani) ಯನ್ನು ರವಿದಾಸ್ಸಿಯಾ ದೇವಾಲಯಗಳು ಮತ್ತು ಗುರುದ್ವಾರಗಳಲ್ಲಿ ಅನುಸರಿಸಲು ಪ್ರಾರಂಭಿಸಿತು.

Current Affairs

 

ಗುರು ರವಿದಾಸರ ಬಗ್ಗೆ:

  1. ಗುರು ರವಿದಾಸ್ ಭಕ್ತಿ ಚಳುವಳಿಯ ಉತ್ತರ ಭಾರತದ ಅತೀಂದ್ರಿಯ ಕವಿಯಾಗಿದ್ದಾರೆ.
  2. ಅವರ ಜನ್ಮದ ನಿಖರವಾದ ವರ್ಷ ತಿಳಿದಿಲ್ಲವಾದರೂ, ಸಂತನು 1377 CE ನಲ್ಲಿ ಜನಿಸಿದನೆಂದು ನಂಬಲಾಗಿದೆ.
  3. ಗುರು ರವಿದಾಸ್ ಜಯಂತಿಯನ್ನು ಮಾಘ ಪೂರ್ಣಿಮೆಯಂದು ಆಚರಿಸಲಾಗುತ್ತದೆ, ಇದು ಹಿಂದೂ ಪಾಂಚಂಗದ ಮಾಘ ಮಾಸದಲ್ಲಿನ ಹುಣ್ಣಿಮೆಯ ದಿನವಾಗಿದೆ.
  4. ಸಿಖ್ಖರ ಆದಿ ಗ್ರಂಥ, ಪಂಚವಾಣಿ ಜೊತೆಗೆ ಗುರು ರವಿದಾಸ್ ಅವರ ಸಾಹಿತ್ಯ ಕೃತಿಗಳು ಎರಡು ಹಳೆಯ ದಾಖಲಿತ ಮೂಲಗಳಾಗಿವೆ.
  5. ಗಮನಾರ್ಹವಾಗಿ, ಅವರು ಅಸ್ಪೃಶ್ಯ ಜಾತಿಗೆ ಸೇರಿದವರು ಮತ್ತು ಪರಿಣಾಮವಾಗಿ ಬಹಳಷ್ಟು ದೌರ್ಜನ್ಯಗಳನ್ನು ಅನುಭವಿಸಿದರು. ಆದಾಗ್ಯೂ, ಸಂತರು ಆಧ್ಯಾತ್ಮಿಕ ಅನ್ವೇಷಣೆಗಳ ಮೇಲೆ ತಮ್ಮ ಗಮನವನ್ನು ಕೇಂದ್ರೀಕರಿಸಲು ಆಯ್ಕೆ ಮಾಡಿದರು ಮತ್ತು 14 ರಿಂದ 16 ನೇ ಶತಮಾನದ CE ಅವಧಿಯಲ್ಲಿ ಭಕ್ತಿ ಚಳುವಳಿಯ ಮೇಲೆ ಭಾರಿ ಪ್ರಭಾವ ಬೀರಿದ ಹಲವಾರು ಭಕ್ತಿ ಗೀತೆಗಳ ರಚನೆ ಮಾಡಿದರು.
  6. ಅವರು ಭಕ್ತಿ ಸಂತ-ಕವಿ ರಮಾನಂದರ ಶಿಷ್ಯರು ಮತ್ತು ಭಕ್ತಿ ಸಂತ-ಕವಿ ಕಬೀರ್ ದಾಸ್ ಅವರ ಸಮಕಾಲೀನರು ಎಂದು ನಂಬಲಾಗಿದೆ.
  7. ಸಂತ ಮೀರಾಬಾಯಿ, ಅವರ ಪ್ರಸಿದ್ಧ ಶಿಷ್ಯರಲ್ಲಿ ಒಬ್ಬರು.
  8. ರವಿದಾಸ್ ಅವರ ನೈತಿಕ ಮತ್ತು ಬೌದ್ಧಿಕ ಸಾಧನೆಗಳ ಪೈಕಿ “ಬೇಗಂಪುರ” (Begampura )ಎಂಬ ಪರಿಕಲ್ಪನೆಯು ದುಃಖವನ್ನು ತಿಳಿಯದ ನಗರವಾಗಿದೆ; ಮತ್ತು ಜಾತಿ ಮತ್ತು ವರ್ಗವ ರಹಿತ ಸಮಾಜವನ್ನು ಹೊಂದಿದೆ.

Current Affairs

 

ಗುರು ರವಿದಾಸರ ಬೋಧನೆಗಳು:

  1. ಗುರು ರವಿದಾಸ್ ಅವರು ಜಾತಿ ವಿಭಜನೆಗಳ ವಿರುದ್ಧ ಮಾತನಾಡಿದರು ಮತ್ತು ಏಕತೆಯನ್ನು ಉತ್ತೇಜಿಸಲು ಅವುಗಳನ್ನು ತೊಡೆದುಹಾಕುವ ಮಾತನಾಡಿದರು. ಅವರ ಬೋಧನೆಗಳು ಜನರೊಂದಿಗೆ ಅನುರಣಿಸಿದವು, ಅಂತೆಯೇ ಅವರ ಬೋಧನೆಗಳ ಆಧಾರದ ಮೇಲೆ ರವಿದಾಸ್ಸಿಯಾ ಧರ್ಮ ಅಥವಾ ರವಿದಾಸ್ಸಿಯಾ ಧರಮ್ ಎಂಬ ಧರ್ಮವು ಹುಟ್ಟಲು ಕಾರಣವಾಯಿತು.
  2. ಅವರು ದೇವರ ಸರ್ವವ್ಯಾಪಿತ್ವದ ಬಗ್ಗೆ ಬೋಧಿಸಿದರು ಮತ್ತು ಮಾನವ ಆತ್ಮವು ದೇವರ ಒಂದು ಕಣವಾಗಿದೆ ಎಂದು ಹೇಳಿದರು ಮತ್ತು ಆದ್ದರಿಂದ ಕೆಳಜಾತಿಯ ಜನರು ದೇವರ ಸಾಕ್ಷಾತ್ಕಾರವನ್ನು ಪಡೆಯಲು ಸಾಧ್ಯವಿಲ್ಲ ಎಂಬ ಕಲ್ಪನೆಯನ್ನು ರವಿದಾಸ್ ತಿರಸ್ಕರಿಸಿದರು. ಮನಸ್ಸನ್ನು ದ್ವಂದ್ವದಿಂದ ಮುಕ್ತಗೊಳಿಸುವುದೇ ದೇವರನ್ನು ಕಾಣಲು ಇರುವ ಏಕೈಕ ಮಾರ್ಗ ಎಂದು ಅವರು ತಮ್ಮ ಬೋಧನೆಗಳಲ್ಲಿ ಹೇಳಿದ್ದಾರೆ.

 


ಸಾಮಾನ್ಯ ಅಧ್ಯಯನ ಪತ್ರಿಕೆ : 2


 

ವಿಷಯಗಳು: ಭಾರತ ಮತ್ತು ನೆರೆಹೊರೆಯ ದೇಶಗಳೊಂದಿಗೆ ಅದರ ಸಂಬಂಧಗಳು.

ಸಮಗ್ರ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದ ಭಾರತ ಮತ್ತು UAE:


(India, UAE sign Comprehensive Trade Agreement)

 

ಸಂದರ್ಭ:

ಭಾರತವು UAE ಯೊಂದಿಗೆ ಐತಿಹಾಸಿಕ ವ್ಯಾಪಾರ ಒಪ್ಪಂದ – ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದ(Comprehensive Economic Partnership Agreement (CEPA))ಕ್ಕೆ ಸಹಿ ಹಾಕಿದೆ.

Current Affairs

‘ಸಮಗ್ರ ಆರ್ಥಿಕ ವ್ಯಾಪಾರ ಒಪ್ಪಂದ'(CEPA) ಮತ್ತು ‘ಮುಕ್ತ ವ್ಯಾಪಾರ ಒಪ್ಪಂದ’ (FTA) ದ ನಡುವಿನ ವ್ಯತ್ಯಾಸ:

‘ಸಮಗ್ರ ಆರ್ಥಿಕ ವ್ಯಾಪಾರ ಒಪ್ಪಂದ’ (CECA) ವು ಒಂದು ರೀತಿಯ ‘ಮುಕ್ತ ವ್ಯಾಪಾರ ಒಪ್ಪಂದ'(Free Trade Pact)ವಾಗಿದ್ದು, ಇದು ಸೇವೆಗಳಲ್ಲಿ ವ್ಯಾಪಾರ ಮತ್ತು ಹೂಡಿಕೆ ಮತ್ತು ಆರ್ಥಿಕ ಪಾಲುದಾರಿಕೆಯ ಇತರ ಕ್ಷೇತ್ರಗಳ ಕುರಿತು ಮಾತುಕತೆಗಳನ್ನು ಒಳಗೊಂಡಿರುತ್ತದೆ.

  1. CECA ಅಡಿಯಲ್ಲಿ, ಕಸ್ಟಮ್ಸ್ ಸಹಕಾರ, ಸ್ಪರ್ಧೆ ಮತ್ತು ಬೌದ್ಧಿಕ ಆಸ್ತಿ ಹಕ್ಕುಗಳಂತಹ ಕ್ಷೇತ್ರಗಳಲ್ಲಿ ವ್ಯಾಪಾರ ಅನುಕೂಲ ಮತ್ತು ಮಾತುಕತೆಗಳನ್ನು ಸಹ ಪರಿಗಣಿಸಬಹುದು.
  2. ಪಾಲುದಾರಿಕೆ ಒಪ್ಪಂದಗಳು ಅಥವಾ ಸಹಕಾರ ಒಪ್ಪಂದಗಳು ಮುಕ್ತ ವ್ಯಾಪಾರ ಒಪ್ಪಂದಗಳಿಗಿಂತ (Free Trade Agreements – FTAs) ಹೆಚ್ಚು ಸಮಗ್ರವಾಗಿರುತ್ತವೆ.
  3. ‘ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದ’ (CEPA), ವ್ಯವಹಾರದ ನಿಯಂತ್ರಕ ಅಂಶವನ್ನು ಸಹ ನೋಡುತ್ತದೆ ಮತ್ತು ಇದು ನಿಯಂತ್ರಕ ಸಮಸ್ಯೆಗಳನ್ನು ಒಳಗೊಂಡ ಒಪ್ಪಂದಗಳನ್ನು ಸಹ ಒಳಗೊಂಡಿದೆ.

 

ಭಾರತ ಮತ್ತು ಯುಎಇ ನಡುವೆ ಸಹಿ ಮಾಡಲಾದ CEPA ಅನುಸಾರ:

  1. ಭಾರತದ ರಫ್ತುಗಳಲ್ಲಿ 90% ರಫ್ತುಗಳು ಯುಎಇಗೆ ‘ಸುಂಕ ಮುಕ್ತ’ ಪ್ರವೇಶವನ್ನು ಹೊಂದಿರುತ್ತದೆ.
  2. ಈ ರಫ್ತು ಸರಕುಗಳು, ಸೇವೆಗಳು ಮತ್ತು ಡಿಜಿಟಲ್ ವ್ಯಾಪಾರವನ್ನು ಒಳಗೊಂಡಿರುತ್ತದೆ.
  3. ಲಾಜಿಸ್ಟಿಕ್ಸ್, ಆರೋಗ್ಯ, ಆತಿಥ್ಯ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಯುಎಇ ನಮ್ಮ ದೇಶದಲ್ಲಿ, ವಿಶೇಷವಾಗಿ ಜಮ್ಮು–ಕಾಶ್ಮೀರದಲ್ಲಿ ಹೂಡಿಕೆ ಮಾಡುವುದನ್ನು ಭಾರತ ಸ್ವಾಗತಿಸುತ್ತದೆ.
  4. ಭಾರತ–ಯುಎಇ ಮಧ್ಯೆ ‘ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದ (ಸಿಇಪಿಎ) ನಡೆದಿದ್ದು, ಇದರಿಂದಾಗಿ ಭಾರತದಿಂದ ರಫ್ತಾಗುವ ಚಿನ್ನಾಭರಣಗಳಿಗೆ ಯುಎಇನಲ್ಲಿ ಸುಂಕ ಇರುವುದಿಲ್ಲ. ಇದು ಭಾರತದ ಹರಳು ಮತ್ತು ಚಿನ್ನಾಭರಣ ವಲಯಕ್ಕೆ ಹೆಚ್ಚಿನ ರಫ್ತು ಅವಕಾಶಗಳು ಕಲ್ಪಿಸಲಿದೆ.
  5. ಈ ಒಪ್ಪಂದವು ಮೇ 1ರಿಂದ ಜಾರಿಗೆ ಬರುವ ನಿರೀಕ್ಷೆ ಇದೆ. ಸದ್ಯ, ಭಾರತದಿಂದ ರಫ್ತಾಗುವ ಚಿನ್ನಾಭರಣಗಳಿಗೆ ಶೇ 5ರಷ್ಟು ಸುಂಕ ತೆರಬೇಕಾಗುತ್ತದೆ.
  6. ಯುಎಇನಿಂದ ಭಾರತಕ್ಕೆ ವಿನಾಯಿತಿ ದರದಲ್ಲಿ ಒಂದು ವರ್ಷದಲ್ಲಿ 200 ಟನ್‌ಗಳವರೆಗೆ ಚಿನ್ನವನ್ನು ಆಮದು ಮಾಡಿಕೊಳ್ಳಲು ಒಪ್ಪಂದವು ಅವಕಾಶ ಕಲ್ಪಿಸಿದೆ.

 

ಪ್ರಯೋಜನಗಳು:

  1. ಈ ದ್ವಿಪಕ್ಷೀಯ ವ್ಯಾಪಾರ ಒಪ್ಪಂದವು ಈ ಪ್ರದೇಶದಲ್ಲಿ ಭಾರತದ ಮೊದಲನೆಯದು ಮತ್ತು ಒಂದು ದಶಕದಲ್ಲಿ ಯಾವುದೇ ದೇಶದೊಂದಿಗೆ ಮೊದಲ ‘ಸಮಗ್ರ ವ್ಯಾಪಾರ ಒಪ್ಪಂದ’ವಾಗಿದೆ.
  2. ಸುಮಾರು $26 ಶತಕೋಟಿ ಮೌಲ್ಯದ ಭಾರತೀಯ ಉತ್ಪನ್ನಗಳು CEPA ಯಿಂದ ಪ್ರಯೋಜನ ಪಡೆಯುವ ಸಾಧ್ಯತೆಯಿದೆ.ಈ ಉತ್ಪನ್ನಗಳಿಗೆ ಪ್ರಸ್ತುತ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) 5% ಆಮದು ಸುಂಕವನ್ನು ವಿಧಿಸುತ್ತದೆ. US ಮತ್ತು ಚೀನಾ ನಂತರ UAE ಭಾರತದ ಮೂರನೇ ಅತಿದೊಡ್ಡ ವ್ಯಾಪಾರ ಪಾಲುದಾರ ದೇಶವಾಗಿದೆ.
  3. ಈ CEPA ಒಪ್ಪಂದದಿಂದ ಮುಂದಿನ 5 ವರ್ಷಗಳಲ್ಲಿ ಉಭಯ ದೇಶಗಳ ನಡುವಣ ಸರಕು ವಿಭಾಗದ ದ್ವಿಪಕ್ಷೀಯ ವಹಿವಾಟು 6,000 ಕೋಟಿ ಡಾಲರ್‌ನಿಂದ 10,000 ಕೋಟಿ ಡಾಲರ್‌ಗೆ ಹೆಚ್ಚಳವಾಗುವ ನಿರೀಕ್ಷೆಯಿದೆ.
  4. ಈ ಒಪ್ಪಂದದ ಮೂಲಕ, ಭಾರತೀಯ ರಫ್ತುದಾರರು ಅರೇಬಿಯಾ ಮತ್ತು ಆಫ್ರಿಕಾದಲ್ಲಿನ  ಅತಿದೊಡ್ಡ ವ್ಯಾಪಾರ ಮಾರುಕಟ್ಟೆಗಳಿಗೆ ಪ್ರವೇಶವನ್ನು ಪಡೆಯುತ್ತಾರೆ.

Current Affairs

 


ಸಾಮಾನ್ಯ ಅಧ್ಯಯನ ಪತ್ರಿಕೆ : 3


 

ವಿಷಯಗಳು:ನೇರ ಮತ್ತು ಪರೋಕ್ಷ ಕೃಷಿ ಸಬ್ಸಿಡಿಗಳು ಮತ್ತು ಕನಿಷ್ಠ ಬೆಂಬಲ ಬೆಲೆಗೆ ಸಂಬಂಧಿಸಿದ ವಿಷಯಗಳು; ಸಾರ್ವಜನಿಕ ವಿತರಣಾ ವ್ಯವಸ್ಥೆ – ಉದ್ದೇಶಗಳು, ಕಾರ್ಯಗಳು, ಮಿತಿಗಳು, ಸುಧಾರಣೆಗಳು; ಬಫರ್ ಸ್ಟಾಕ್ ಮತ್ತು ಆಹಾರ ಭದ್ರತೆಗೆ ಸಂಬಂಧಿಸಿದ ವಿಷಯಗಳು; ತಂತ್ರಜ್ಞಾನ ಮಿಷನ್; ಪಶುಸಂಗೋಪನೆಗೆ ಸಂಬಂಧಿಸಿದ ಅರ್ಥಶಾಸ್ತ್ರ.

ಪ್ರಧಾನ ಮಂತ್ರಿ ಫಸಲ್ ಬಿಮಾ (ಬೆಳೆ ವಿಮೆ) ಯೋಜನೆ:


(Pradhan Mantri Fasal Bima Yojana)

ಸಂದರ್ಭ:

ಪ್ರಧಾನ ಮಂತ್ರಿ ಫಸಲು ವಿಮಾ ಯೋಜನೆಯು (Pradhan Mantri Fasal Bima Yojana) ಏಳನೆಯ ವರ್ಷಕ್ಕೆ ಕಾಲಿಡುತ್ತಿದ್ದು, ಮುಂಬರುವ ಮುಂಗಾರು ಅವಧಿಯಲ್ಲಿ ವಿಮಾ ಪಾಲಿಸಿಗಳನ್ನು ರೈತರ ಮನೆಬಾಗಿಲಿಗೆ ತಲುಪಿಸುವ ಅಭಿಯಾನವನ್ನು ಕೇಂದ್ರ ಸರ್ಕಾರ ಆರಂಭಿಸಲಿದೆ.

ಈ ಯೋಜನೆಯನ್ನು 18 ಫೆಬ್ರವರಿ 2016ರಂದು ಜಾರಿಗೊಳಿಸಲಾಗಿತ್ತು.

 

ಮೇರಿ ಪಾಲಿಸಿ ಮೇರಿ ಹಾಥ್ ಅಭಿಯಾನದ ಜಾರಿ:

  1. ಪಾಲಿಸಿಯ ವಿವರ, ಜಮೀನಿನ ದಾಖಲೆಗಳು, ಕ್ಲೇಮ್‌ ಪ್ರಕ್ರಿಯೆ ಮತ್ತು ದೂರು ಹೇಳಿಕೊಳ್ಳುವ ಬಗ್ಗೆ ಎಲ್ಲ ರೈತರಿಗೂ ಗೊತ್ತಿರಬೇಕು ಎಂಬ ಉದ್ದೇಶವು ‘ಮೇರಿ ಪಾಲಿಸಿ ಮೇರಿ ಹಾಥ್’ ಹೆಸರಿನ ಈ ಅಭಿಯಾನಕ್ಕೆ ಇದೆ ಎಂದು ಕೇಂದ್ರ ಕೃಷಿ ಸಚಿವಾಲಯ ಹೇಳಿದೆ.
  2. ಯೋಜನೆಯು ಜಾರಿಯಲ್ಲಿ ಇರುವ ಎಲ್ಲ ರಾಜ್ಯಗಳಲ್ಲಿಯೂ ಈ ಅಭಿಯಾನ ಆರಂಭವಾಗಲಿದೆ.

 

PMFBY ಯ ಕಾರ್ಯಕ್ಷಮತೆ:

  1. ಇಲ್ಲಿಯವರೆಗೆ, ಈ ಯೋಜನೆಯಡಿ 29.16 ಕೋಟಿಗೂ ಹೆಚ್ಚು ರೈತರ ಅರ್ಜಿಗಳನ್ನು (ವರ್ಷದಿಂದ ವರ್ಷಕ್ಕೆ 5.5 ಕೋಟಿ ರೈತರಿಂದ ಅನ್ವಯಿಸಲಾಗಿದೆ) ಸ್ವೀಕರಿಸಿ ವಿಮೆಗೆ ಒಳಪಡಿಸಲಾಗಿದೆ.
  2. ಐದು ವರ್ಷಗಳ ಅವಧಿಯಲ್ಲಿ, 8.3 ಕೋಟಿಗೂ ಹೆಚ್ಚು ರೈತರ ಅರ್ಜಿಗಳು ಈ ಯೋಜನೆಯ ಲಾಭವನ್ನು ಪಡೆದುಕೊಂಡಿವೆ.
  3. ಇದಲ್ಲದೆ, ರೈತರ ಪಾಲು 20,000 ಕೋಟಿ ರೂ. ಇದ್ದು ಇದಕ್ಕೆ ಪ್ರತಿಯಾಗಿ 95,000 ಕೋಟಿ ರೂ. ಗಳನ್ನು ರೈತರಿಗೆ ಮರುಪಾವತಿಸಲಾಗಿದೆ.

 

ಪ್ರಧಾನಮಂತ್ರಿ ಬೆಳೆ ವಿಮಾ ಯೋಜನೆ (PMFBY) ಕುರಿತು:

  1. ಪ್ರಧಾನ್ ಮಂತ್ರಿ ಬೆಳೆ ವಿಮೆ ಯೋಜನೆ (PMFBY) ಯನ್ನು 13 ಜನವರಿ 2016 ರಂದು ಪ್ರಾರಂಭಿಸಲಾಯಿತು. ಇದು,ಪ್ರತಿಕೂಲ ಹವಾಮಾನ ಘಟನೆಗಳಿಂದಾಗಿ ಬೆಳೆಗಳಿಗೆ ಉಂಟಾಗುವ ಹಾನಿಗೆ ವಿಮೆ ರಕ್ಷಣೆ ನೀಡುತ್ತದೆ.
  2. ಈ ಯೋಜನೆಯಡಿ ರೈತರು ಪ್ರೀಮಿಯಂನ 1.5-2% ಪಾವತಿಸಬೇಕಾಗುತ್ತದೆ, ಮತ್ತು ಉಳಿದ ಮೊತ್ತವನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಪಾವತಿಸುತ್ತವೆ.
  3. ಇದು ಕೇಂದ್ರ ಪುರಸ್ಕೃತ ಯೋಜನೆಯಾಗಿದ್ದು, ಕೇಂದ್ರದ ಮಾರ್ಗಸೂಚಿಗಳ ಪ್ರಕಾರ ರಾಜ್ಯದ ಕೃಷಿ ಇಲಾಖೆಗಳು ಇದನ್ನು ಜಾರಿಗೆ ತಂದಿವೆ.
  4. ಈ ಯೋಜನೆಯಲ್ಲಿ, ಹಿಂದಿನ ರಾಷ್ಟ್ರೀಯ ಕೃಷಿ ವಿಮಾ ಯೋಜನೆ (NIAS) ಮತ್ತು ಪರಿಷ್ಕೃತ ರಾಷ್ಟ್ರೀಯ ಕೃಷಿ ವಿಮಾ ಯೋಜನೆ (MNIAS) ಯನ್ನು ವಿಲೀನಗೊಳಿಸಲಾಯಿತು.
  5. ಪ್ರೀಮಿಯಂ:ರೈತರ ಮೇಲಿನ ಪ್ರೀಮಿಯಂ ಹೊರೆಯನ್ನು ಕಡಿಮೆ ಮಾಡುವುದು ಮತ್ತು ವಿಮೆ ಮಾಡಿದ ಸಂಪೂರ್ಣ ಮೊತ್ತಕ್ಕೆ ಬೆಳೆ ವಿಮಾ ಹಕ್ಕುಗಳ ಆರಂಭಿಕ ಇತ್ಯರ್ಥವನ್ನು ಖಚಿತಪಡಿಸುವುದು ಈ ಯೋಜನೆಯ ಉದ್ದೇಶವಾಗಿದೆ.

 

ಉದ್ದೇಶಗಳು:

  1. ನೈಸರ್ಗಿಕ ವಿಪತ್ತುಗಳು, ಕೀಟಗಳು ಮತ್ತು ರೋಗಬಾಧೆಗಳ ಪರಿಣಾಮವಾಗಿ ಯಾವುದೇ ಅಧಿಸೂಚಿತ ಬೆಳೆಗಳು ವಿಫಲವಾದಾಗ ರೈತರಿಗೆ ವಿಮೆ ಮತ್ತು ಆರ್ಥಿಕ ನೆರವು ನೀಡುವುದು.
  2. ಕೃಷಿಯಲ್ಲಿ ತಮ್ಮ ನಿರಂತರತೆಯನ್ನು ಖಚಿತಪಡಿಸಿಕೊಳ್ಳಲು ರೈತರ ಆದಾಯವನ್ನು ಸ್ಥಿರಗೊಳಿಸುವುದು.
  3. ನವೀನ ಮತ್ತು ಆಧುನಿಕ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳಲು ರೈತರನ್ನು ಪ್ರೋತ್ಸಾಹಿಸುವುದು.
  4. ಕೃಷಿ ಕ್ಷೇತ್ರಕ್ಕೆ ಸಾಲದ ಹರಿವನ್ನು ಖಚಿತಪಡಿಸುವುದು.

 

ವ್ಯಾಪ್ತಿ:

ಈ ಯೋಜನೆಯಲ್ಲಿ, ಎಲ್ಲಾ ಆಹಾರ ಮತ್ತು ಎಣ್ಣೆಬೀಜ ಬೆಳೆಗಳು ಮತ್ತು ವಾರ್ಷಿಕ ವಾಣಿಜ್ಯ / ತೋಟಗಾರಿಕಾ ಬೆಳೆಗಳನ್ನು ಸೇರಿಸಲಾಗಿದೆ, ಇದಕ್ಕಾಗಿ ಹಿಂದಿನ ಇಳುವರಿ ಅಂಕಿಅಂಶಗಳು ಲಭ್ಯವಿವೆ ಮತ್ತು ಸಾಮಾನ್ಯ ಬೆಳೆ ಅಂದಾಜು ಸಮೀಕ್ಷೆ- (GCES ), ಬೆಳೆ ಕತ್ತರಿಸುವ ಪ್ರಯೋಗಗಳ- (CCEs) ಅಡಿಯಲ್ಲಿ ಸುಗ್ಗಿಯ ನಂತರದ ಅಗತ್ಯ ಸಂಖ್ಯೆಯ ಪ್ರಯೋಗಗಳ ಕಾರ್ಯಾಚರಣೆಗಳನ್ನು ನಡೆಸಲಾಗುತ್ತದೆ.

 

PMFBY ನಿಂದ PMFBY 2.0:

ಸಂಪೂರ್ಣವಾಗಿ ಸ್ವಯಂಪ್ರೇರಿತ: 2020 ಖಾರಿಫ್‌ ಹಂಗಾಮಿನಿಂದ ಎಲ್ಲಾ ರೈತರಿಗೆ ಈ ಯೋಜನೆಗೆ ಸೇರುವ ದಾಖಲಾತಿಯನ್ನು 100% ದಷ್ಟು ಸ್ವಯಂಪ್ರೇರಿತಗೊಳಿಸಲು ನಿರ್ಧರಿಸಲಾಗಿದೆ.

ಕೇಂದ್ರದ ಸಬ್ಸಿಡಿಗೆ ಮಿತಿ: ಕೇಂದ್ರ ಕ್ಯಾಬಿನೆಟ್ ನೀರಾವರಿ ಯಲ್ಲದ ಪ್ರದೇಶಗಳು / ಬೆಳೆಗಳಿಗೆ 30% ಮತ್ತು ನೀರಾವರಿ ಪ್ರದೇಶಗಳು / ಬೆಳೆಗಳಿಗೆ 25% ವರೆಗಿನ ಪ್ರೀಮಿಯಂ ದರಗಳನ್ನು ಈ ಯೋಜನೆಗಳ ಅಡಿಯಲ್ಲಿ ಕೇಂದ್ರದ ಪ್ರೀಮಿಯಂ ಸಬ್ಸಿಡಿಯನ್ನು ಮಿತಿ ಗೊಳಿಸಲು ನಿರ್ಧರಿಸಿದೆ.

ರಾಜ್ಯಗಳಿಗೆ ಹೆಚ್ಚಿನ ಸ್ವಾಯತ್ತತೆ: ಬಿತ್ತನೆ, ಸ್ಥಳೀಯ ವಿಪತ್ತು, ಸುಗ್ಗಿಯ ಸಮಯದಲ್ಲಿ ಪ್ರತಿಕೂಲ ಹವಾಮಾನ ಪರಿಸ್ಥಿತಿಗಳು, ಮತ್ತು ಸುಗ್ಗಿಯ ನಂತರದ ನಷ್ಟಗಳು ಇತ್ಯಾದಿಗಳ ಜೊತೆಗೆ ಪ್ರಧಾನ ಮಂತ್ರಿಯ ಬೆಳೆ ವಿಮಾ ಯೋಜನೆಯನ್ನು ಜಾರಿಗೆ ತರಲು ಕೇಂದ್ರ ಸರ್ಕಾರವು ರಾಜ್ಯಗಳಿಗೆ / ಕೇಂದ್ರಾಡಳಿತ ಪ್ರದೇಶಗಳಿಗೆ ವ್ಯಾಪಕ ಸ್ವಾತಂತ್ರ್ಯವನ್ನು ನೀಡಿದೆ. ಯಾವುದೇ ಹೆಚ್ಚುವರಿ ಅಪಾಯದ ಅಂಶಗಳು / ವೈಶಿಷ್ಟ್ಯಗಳ ಸೌಲಭ್ಯಗಳನ್ನು ಆಯ್ಕೆ ಮಾಡುವ ಆಯ್ಕೆಯನ್ನು ನೀಡಿದೆ.

ಬಾಕಿ ಉಳಿಸಿಕೊಂಡರೆ ದಂಡ ವಿಧಿಸುವುದು: ಪರಿಷ್ಕೃತ PMFBY ಅಡಿಯಲ್ಲಿ, ರಾಜ್ಯಗಳು ಖಾರಿಫ್  ಋತುವಿನಲ್ಲಿ ಮಾರ್ಚ್ 31 ರೊಳಗೆ ಮತ್ತು ರಬಿ ಋತುವಿಗೆ ಸೆಪ್ಟೆಂಬರ್ 30 ರೊಳಗೆ ತಮ್ಮ ಪಾಲನ್ನು ಬಿಡುಗಡೆ ಮಾಡದೆ ಹೋದರೆ  ನಂತರದ  ಋತುಗಳಲ್ಲಿ ಯೋಜನೆಯಲ್ಲಿ ಭಾಗವಹಿಸಲು ಅವರಿಗೆ ಅನುಮತಿ ನೀಡಲಾಗುವುದಿಲ್ಲ.

ICE ಚಟುವಟಿಕೆಗಳಲ್ಲಿ ಹೂಡಿಕೆ: ವಿಮಾ ಕಂಪನಿಗಳು ಈಗ ಸಂಗ್ರಹಿಸಿದ ಒಟ್ಟು ಪ್ರೀಮಿಯಂನ 0.5%ಮೊತ್ತವನ್ನು ಮಾಹಿತಿ, ಶಿಕ್ಷಣ ಮತ್ತು ಸಂವಹನ (ICE) ಚಟುವಟಿಕೆಗಳಿಗಾಗಿ ಖರ್ಚು ಮಾಡುವುದು ಕಡ್ಡಾಯವಾಗಿದೆ.

 

ವಿಷಯಗಳು: ಸಂರಕ್ಷಣೆ, ಪರಿಸರ ಮಾಲಿನ್ಯ ಮತ್ತು ಅವನತಿ, ಪರಿಸರ ಪ್ರಭಾವದ ಮೌಲ್ಯಮಾಪನ.

ಪ್ಲಾಸ್ಟಿಕ್ ಪ್ಯಾಕೇಜಿಂಗ್‌ನಲ್ಲಿ ಉತ್ಪಾದಕರ ವಿಸ್ತೃತ ಜವಾಬ್ದಾರಿ:


(Extended Producers Responsibility on plastic packaging)

 

ಸಂದರ್ಭ:

ಇತ್ತೀಚೆಗೆ, ಪ್ಲಾಸ್ಟಿಕ್ ಪ್ಯಾಕೇಜಿಂಗ್‌ನಲ್ಲಿನ ‘ಉತ್ಪಾದಕರವಿಸ್ತೃತ ಜವಾಬ್ದಾರಿ’ (Extended Producer Responsibility – EPR)  ಕುರಿತು ಮಾರ್ಗಸೂಚಿಗಳನ್ನು ಕೇಂದ್ರ ಸರ್ಕಾರವು ‘ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣಾ ನಿಯಮಗಳು’, 2016 ರ ಅಡಿಯಲ್ಲಿ ಅಧಿಸೂಚಿಸಿದೆ. ಈ ಮಾರ್ಗಸೂಚಿಗಳು 1 ಜುಲೈ 2022 ರಿಂದ ಜಾರಿಗೆ ಬರುತ್ತವೆ.

 ಹೊಸ ಮಾರ್ಗಸೂಚಿಗಳ ಅವಲೋಕನ:

ಹೊಸ ಮಾರ್ಗಸೂಚಿಗಳ ಅಡಿಯಲ್ಲಿ ‘ಪ್ಲಾಸ್ಟಿಕ್ ಪ್ಯಾಕೇಜಿಂಗ್’ ನ ನಾಲ್ಕು ವರ್ಗಗಳನ್ನು ನಿರ್ದಿಷ್ಟಪಡಿಸಲಾಗಿದೆ:

  1. ವರ್ಗ ಒಂದು ಹಾರ್ಡ್ ಪ್ಲಾಸ್ಟಿಕ್ ಪ್ಯಾಕೇಜಿಂಗ್ ಅನ್ನು ಒಳಗೊಂಡಿರುತ್ತದೆ.
  2. ವರ್ಗ ಎರಡು ಏಕ ಪದರ ಅಥವಾ ಬಹುಪದರದ ಮೃದುವಾದ ಪ್ಲಾಸ್ಟಿಕ್ ಪ್ಯಾಕೇಜಿಂಗ್ (ವಿವಿಧ ರೀತಿಯ ಪ್ಲಾಸ್ಟಿಕ್‌ಗಳೊಂದಿಗೆ ಒಂದಕ್ಕಿಂತ ಹೆಚ್ಚು ಪದರಗಳು), ಪ್ಲಾಸ್ಟಿಕ್ ಹಾಳೆಗಳು ಮತ್ತು ಪ್ಲಾಸ್ಟಿಕ್ ಹಾಳೆಗಳಿಂದ ಮಾಡಿದ ಕವರ್‌ಗಳು, ಕ್ಯಾರಿ ಬ್ಯಾಗ್‌ಗಳು, ಪ್ಲಾಸ್ಟಿಕ್ ಪೌಚ್‌ಗಳು ಅಥವಾ ಸ್ಯಾಚೆಟ್ ಗಳನ್ನು ಒಳಗೊಂಡಿರುತ್ತದೆ.
  3. ವರ್ಗ ಮೂರು ಬಹುಪದರದ/ಮಲ್ಟಿಲೇಯರ್ಡ್ ಪ್ಲಾಸ್ಟಿಕ್ ಪ್ಯಾಕೇಜಿಂಗ್ ಅನ್ನು ಒಳಗೊಂಡಿರುತ್ತದೆ (ಕನಿಷ್ಠ ಒಂದು ಪದರ (ಲೇಯರ್) ಪ್ಲಾಸ್ಟಿಕ್ ಮತ್ತು ಕನಿಷ್ಠ ಒಂದು ಲೇಯರ್ ಪ್ಲಾಸ್ಟಿಕ್ ಅನ್ನು ಹೊರತುಪಡಿಸಿದ ವಸ್ತು).
  4. ವರ್ಗ ನಾಲ್ಕರಲ್ಲಿ ಪ್ಲಾಸ್ಟಿಕ್ ಶೀಟ್‌ಗಳು ಅಥವಾ ಪ್ಯಾಕೇಜಿಂಗ್‌ಗೆ ಬಳಸುವ ವಸ್ತುಗಳು ಹಾಗೂ ಕಾಂಪೋಸ್ಟಬಲ್ ಪ್ಲಾಸ್ಟಿಕ್‌ನಿಂದ ಮಾಡಿದ ಕ್ಯಾರಿ ಬ್ಯಾಗ್‌ಗಳು ಸೇರಿವೆ.

 

ಹೊಸ ಮಾರ್ಗಸೂಚಿಗಳು ಈ ಕೆಳಗಿನವುಗಳನ್ನು ಸಹ ಒಳಗೊಂಡಿವೆ:

  1. ಮರುಬಳಕೆ, ಪುನರ್ನವೀಕರಣ, ಪುನರ್ನವೀಕರಣ ಮಾಡಲಾದ ಪ್ಲಾಸ್ಟಿಕ್ ವಸ್ತುಗಳ ಬಳಕೆ ಮತ್ತು ಮರುಬಳಕೆ ಮಾಡಲಾಗದ ಪ್ಲಾಸ್ಟಿಕ್ ಪ್ಯಾಕೇಜಿಂಗ್ ನ ಬಳಕೆಯನ್ನು ಅಂತ್ಯಗೊಳಿಸುವುದು.
  2. ಮಾರ್ಚ್ 31 ರೊಳಗೆ ಪ್ಲಾಸ್ಟಿಕ್ ಪ್ಯಾಕೇಜಿಂಗ್ ತ್ಯಾಜ್ಯ, ಪ್ಲಾಸ್ಟಿಕ್ ತ್ಯಾಜ್ಯ ಸಂಸ್ಕರಣೆದಾರರು ಉತ್ಪಾದಕರು, ಆಮದುದಾರರು ಮತ್ತು ಬ್ರಾಂಡ್-ಮಾಲೀಕರು ನೋಂದಣಿ ಮತ್ತು ವಾರ್ಷಿಕ ರಿಟರ್ನ್ಸ್ ಅನ್ನು ಸಲ್ಲಿಸಲು ‘ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ’ (CPCB) ಮೂಲಕ ಕೇಂದ್ರೀಕೃತ ಆನ್‌ಲೈನ್ ಪೋರ್ಟಲ್ ಅನ್ನು ಸ್ಥಾಪಿಸುವುದು.
  3. ಪ್ಲಾಸ್ಟಿಕ್ ಪ್ಯಾಕೇಜಿಂಗ್ ತಯಾರಕರು 2021-22 ರಲ್ಲಿ ಮೊದಲ ಹಂತದಲ್ಲಿ ಒಟ್ಟು ತ್ಯಾಜ್ಯದ 35% ಅನ್ನು ಸಂಗ್ರಹಿಸಿ ನಿರ್ವಹಿಸಬೇಕಾಗುತ್ತದೆ. Q1 ತ್ಯಾಜ್ಯ ಉತ್ಪಾದನೆಯನ್ನು ಕಳೆದ ಎರಡು ವರ್ಷಗಳಲ್ಲಿ ಮಾರಾಟವಾದ ಪ್ಲಾಸ್ಟಿಕ್ ಪ್ಯಾಕೇಜಿಂಗ್ ವಸ್ತು ಮತ್ತು ಪೂರ್ವ-ಗ್ರಾಹಕ ಪ್ಲಾಸ್ಟಿಕ್ ಪ್ಯಾಕೇಜಿಂಗ್ ತ್ಯಾಜ್ಯದ ಸರಾಸರಿ ತೂಕವನ್ನು ಸೇರಿಸುವ ಮೂಲಕ ಮತ್ತು ಬ್ರಾಂಡ್ ಮಾಲೀಕರಿಗೆ ಸರಬರಾಜು ಮಾಡಿದ ಪ್ಲಾಸ್ಟಿಕ್ ಪ್ಯಾಕೇಜಿಂಗ್‌ನ ವಾರ್ಷಿಕ ಪ್ರಮಾಣವನ್ನು ಕಳೆಯುವ ಮೂಲಕ ಲೆಕ್ಕಹಾಕಲಾಗುತ್ತದೆ.
  4. ‘ವಿಸ್ತೃತ ಉತ್ಪಾದಕರ ಜವಾಬ್ದಾರಿ’ (EPR) ಗುರಿಯನ್ನು 2022-23 ರಲ್ಲಿ 70% ಮತ್ತು 2023-24 ರ ವೇಳೆಗೆ 100% ಗೆ ಹೆಚ್ಚಿಸಲಾಗುವುದು.
  5. ಹಾರ್ಡ್ ಪ್ಲಾಸ್ಟಿಕ್‌ಗಳಿಗೆ ಉತ್ಪಾದಕರ ಮರುಬಳಕೆ ಹೊಣೆಗಾರಿಕೆಯು 2024-25ರಲ್ಲಿ 50%, 2025-26ರಲ್ಲಿ 60%, 2026-27ರಲ್ಲಿ 70% ಮತ್ತು 2027-28ರ ವೇಳೆಗೆ 80% ಆಗಿರುತ್ತದೆ.
  6. ಪರಿಸರದ ಗುಣಮಟ್ಟವನ್ನು ರಕ್ಷಿಸಲು ಮತ್ತು ಸುಧಾರಿಸಲು ಮತ್ತು ಪರಿಸರ ಮಾಲಿನ್ಯವನ್ನು ತಡೆಗಟ್ಟಲು, ನಿಯಂತ್ರಿಸಲು ಮತ್ತು ಕಡಿಮೆ ಮಾಡಲು ಉತ್ಪಾದಕರು, ಆಮದುದಾರರು ಮತ್ತು ಬ್ರಾಂಡ್ ಮಾಲೀಕರಿಂದ EPR ಗುರಿಗಳನ್ನು ಪೂರೈಸದಿರುವಿಕೆಗೆ ಸಂಬಂಧಿಸಿದಂತೆ ‘ಮಾಲಿನ್ಯಕಾರ ಪಾವತಿ ತತ್ವ’ ದ ಆಧಾರದ ಮೇಲೆ  ಪರಿಸರ ಪರಿಹಾರವನ್ನು ವಿಧಿಸಲಾಗುತ್ತದೆ.
  7. ಮಾರ್ಗಸೂಚಿಗಳಲ್ಲಿ, ಮೊದಲ ಬಾರಿಗೆ, ‘ಹೆಚ್ಚುವರಿ ವಿಸ್ತೃತ ನಿರ್ಮಾಪಕ ಜವಾಬ್ದಾರಿ’ ಪ್ರಮಾಣಪತ್ರಗಳ ಮಾರಾಟ ಮತ್ತು ಖರೀದಿಗೆ ಅನುಮತಿ ನೀಡಲಾಗಿದೆ. ಹೀಗಾಗಿ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆಗೆ ಮಾರುಕಟ್ಟೆ ಕಾರ್ಯವಿಧಾನವನ್ನು ಸ್ಥಾಪಿಸಲಾಗುವುದು.

 

ಮಹತ್ವ:

ಗುರುತಿಸಲಾದ ‘ಏಕ ಬಳಕೆಯ ಪ್ಲಾಸ್ಟಿಕ್ ವಸ್ತುಗಳ’ ನಿಷೇಧ ಸೇರಿದಂತೆ ಹೊಸ ಮಾರ್ಗಸೂಚಿಗಳು ಈ ಕೆಳಗಿನ ಉದ್ದೇಶಗಳನ್ನು ಹೊಂದಿವೆ:

  1. ಪ್ಲಾಸ್ಟಿಕ್ ತ್ಯಾಜ್ಯದಿಂದ ಉಂಟಾಗುವ ಮಾಲಿನ್ಯವನ್ನು ಕಡಿಮೆ ಮಾಡುವುದು.
  2. ಪ್ಲಾಸ್ಟಿಕ್‌ಗಳಿಗೆ ಹೊಸ ಪರ್ಯಾಯಗಳ ಅಭಿವೃದ್ಧಿಯನ್ನು ಉತ್ತೇಜಿಸುವುದು.
  3. ಸುಸ್ಥಿರ ಪ್ಲಾಸ್ಟಿಕ್ ಪ್ಯಾಕೇಜಿಂಗ್‌ನತ್ತ ಸಾಗಲು ವ್ಯಾಪಾರಗಳಿಗೆ ಮಾರ್ಗಸೂಚಿಯನ್ನು ಒದಗಿಸುವುದು.
  4. ಪ್ಲಾಸ್ಟಿಕ್ ಪ್ಯಾಕೇಜಿಂಗ್ ತ್ಯಾಜ್ಯದ ‘ಸರ್ಕ್ಯುಲರ್ ಆರ್ಥಿಕತೆ’ಯನ್ನು ಬಲಪಡಿಸಲು ಚೌಕಟ್ಟನ್ನು ಒದಗಿಸುವುದು.
  5. ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣಾ ವಲಯವನ್ನು ಔಪಚಾರಿಕಗೊಳಿಸಲು ಮತ್ತು ಮತ್ತಷ್ಟು ಅಭಿವೃದ್ಧಿಯನ್ನು ಉತ್ತೇಜಿಸುವುದು.

 

ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ನಿಯಮಗಳು:

ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು (MoEFCC) 18 ಮಾರ್ಚ್ 2016 ರಂದು ‘ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣಾ ನಿಯಮಗಳು’ (Plastic Waste Management Rules) ಮತ್ತು ಏಪ್ರಿಲ್ 8 ರಂದು ಘನ ತ್ಯಾಜ್ಯ ನಿರ್ವಹಣಾ ನಿಯಮಗಳನ್ನು ಅಧಿಸೂಚಿಸಿದೆ.

  1. ಪ್ಲಾಸ್ಟಿಕ್ ತ್ಯಾಜ್ಯವು ‘ಘನ ತ್ಯಾಜ್ಯ’ದ ಒಂದು ಭಾಗವಾಗಿರುವುದರಿಂದ, ದೇಶದಲ್ಲಿ ಪ್ಲಾಸ್ಟಿಕ್ ತ್ಯಾಜ್ಯದ ನಿರ್ವಹಣೆಗೆ ಎರಡೂ ನಿಯಮಗಳು ಅನ್ವಯಿಸುತ್ತವೆ.
  2. ‘ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣಾ ನಿಯಮಗಳ’ ಅಡಿಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯದ ಉತ್ಪಾದನೆಯನ್ನು ಕಡಿಮೆ ಮಾಡುವುದು, ಕಸ ಹಾಕುವುದನ್ನು ತಪ್ಪಿಸುವುದು, ತ್ಯಾಜ್ಯವನ್ನು ಮೂಲದಲ್ಲಿಯೇ ಪ್ರತ್ಯೇಕಿಸಿ ಶೇಖರಣೆಯನ್ನು ಖಚಿತಪಡಿಸುವುದು ಮತ್ತು ಅದನ್ನು ಹಸ್ತಾಂತರಿಸುವುದು ಕಡ್ಡಾಯವಾಗಿದೆ.
  3. ಈ ನಿಯಮಗಳು ‘ಪ್ಲಾಸ್ಟಿಕ್ ತ್ಯಾಜ್ಯ’ ನಿರ್ವಹಣೆಗಾಗಿ ಸ್ಥಳೀಯ ಸಂಸ್ಥೆಗಳು, ಗ್ರಾಮ ಪಂಚಾಯತ್‌ಗಳು, ತ್ಯಾಜ್ಯ ಉತ್ಪಾದಕರು, ಚಿಲ್ಲರೆ ವ್ಯಾಪಾರಿಗಳು ಮತ್ತು ಬೀದಿ ವ್ಯಾಪಾರಿಗಳ ಜವಾಬ್ದಾರಿಗಳನ್ನು ಕಡ್ಡಾಯಗೊಳಿಸುತ್ತವೆ.
  4. ನಿಯಮಗಳ ಅಡಿಯಲ್ಲಿ, ಉತ್ಪಾದಕರು, ಆಮದುದಾರರು ಮತ್ತು ಬ್ರಾಂಡ್-ಮಾಲೀಕರ ಮೇಲೆ ‘ವಿಸ್ತೃತ ಉತ್ಪಾದಕರ ಜವಾಬ್ದಾರಿ’ ಯನ್ನು (EPR) ವಿಧಿಸಲಾಗಿದೆ. ‘ವಿಸ್ತೃತ ಉತ್ಪಾದಕರ ಜವಾಬ್ದಾರಿ’ ಪೂರ್ವ-ಗ್ರಾಹಕ ಮತ್ತು ನಂತರದ ಪ್ಲಾಸ್ಟಿಕ್ ಪ್ಯಾಕೇಜಿಂಗ್ ತ್ಯಾಜ್ಯ ಎರಡಕ್ಕೂ ಅನ್ವಯಿಸುತ್ತದೆ.

 

ವಿಷಯಗಳು: ಸಂರಕ್ಷಣೆ, ಪರಿಸರ ಮಾಲಿನ್ಯ ಮತ್ತು ಅವನತಿ, ಪರಿಸರ ಪ್ರಭಾವದ ಮೌಲ್ಯಮಾಪನ.

UNEP ಫ್ರಾಂಟಿಯರ್ಸ್ ವರದಿ:


(UNEP Frontiers report)

ಸಂದರ್ಭ:

ಇತ್ತೀಚೆಗೆ, ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮವು (United Nations Environment Programme – UNEP) ತನ್ನ ಇತ್ತೀಚಿನ ವಾರ್ಷಿಕ ‘ಫ್ರಾಂಟಿಯರ್ಸ್ ವರದಿ’ಯನ್ನು ಬಿಡುಗಡೆ ಮಾಡಿದೆ.

  1. ಇದು ಫ್ರಾಂಟಿಯರ್ಸ್ ವರದಿಯ ನಾಲ್ಕನೇ ಆವೃತ್ತಿಯಾಗಿದೆ. ಈ ವರದಿಯನ್ನು ಮೊದಲ ಬಾರಿಗೆ 2016 ರಲ್ಲಿ ಪ್ರಕಟಿಸಲಾಯಿತು, COVID-19 ಸಾಂಕ್ರಾಮಿಕ ರೋಗ ಹರಡುವ ನಾಲ್ಕು ವರ್ಷಗಳ ಮೊದಲು, ಝೂನೋಟಿಕ್ ಕಾಯಿಲೆಗಳ ಅಪಾಯದ ಬಗ್ಗೆ ಎಚ್ಚರಿಕೆ ನೀಡಲಾಯಿತು.
  2. ವರದಿಯು ಸರ್ಕಾರಗಳ ಮತ್ತು ಸಾರ್ವಜನಿಕ ಗಮನ ಮತ್ತು ಕ್ರಮದ ಅಗತ್ಯವಿರುವ ಮೂರು ಪರಿಸರ ಸಮಸ್ಯೆಗಳನ್ನು ಗುರುತಿಸುತ್ತದೆ ಮತ್ತು ಪರಿಹಾರಗಳನ್ನು ನೀಡುತ್ತದೆ.

 

ವರದಿಯ ಪ್ರಮುಖ ಅಂಶಗಳು:

ಕೇಂದ್ರೀಕೃತ ಕ್ಷೇತ್ರಗಳು/ಫೋಕಸ್ ಏರಿಯಾಸ್:

ನಗರ ಶಬ್ದ ಮಾಲಿನ್ಯ, ಕಾಡ್ಗಿಚ್ಚು ಮತ್ತು ಫಿನಾಲಾಜಿಕಲ್ ಶಿಫ್ಟ್‌ಗಳು (Phenological shifts) – ಫ್ರಾಂಟಿಯರ್ಸ್ ವರದಿಯ ಮೂರು ವಿಷಯಗಳು – ಹವಾಮಾನ ಬದಲಾವಣೆ, ಮಾಲಿನ್ಯ ಮತ್ತು ಜೀವವೈವಿಧ್ಯದ ನಷ್ಟ – ಭೂಮಿಯ ಮೂರು ಸಮಸ್ಯೆಗಳನ್ನು ಪರಿಹರಿಸುವ ತುರ್ತು ಅಗತ್ಯವನ್ನು ಎತ್ತಿ ತೋರಿಸುವ ಸಮಸ್ಯೆಗಳಾಗಿವೆ.

 

ಪ್ರಮುಖ ಕಾಳಜಿಗಳು:

  1. ಮುಂಬರುವ ವರ್ಷಗಳು ಮತ್ತು ದಶಕಗಳಲ್ಲಿ, ‘ಕಾಡ್ಗಿಚ್ಚು’ (wild fires) ಉಲ್ಬಣಗೊಳ್ಳುವ ನಿರೀಕ್ಷೆಯಿದೆ. ವಾತಾವರಣದ ಹಸಿರುಮನೆ ಅನಿಲಗಳ ಹೆಚ್ಚುತ್ತಿರುವ ಸಾಂದ್ರತೆಗಳು ಮತ್ತು ‘ಕಾಡ್ಗಿಚ್ಚು’ ಅಪಾಯದ ಅಂಶಗಳ ಸಹವರ್ತಿ ಸಂಭವಿಸುವಿಕೆಯ ಹೆಚ್ಚಳದಿಂದಾಗಿ ಹೆಚ್ಚು ಅಪಾಯಕಾರಿ ‘ಬೆಂಕಿ-ಹವಾಮಾನ’ (fire weather) ದ ಪರಿಸ್ಥಿತಿಗಳ ಕಡೆಗೆ ಪ್ರವೃತ್ತಿಗಳು ಹೆಚ್ಚಾಗುವ ಸಾಧ್ಯತೆಯಿದೆ.
  2. ದುರ್ಬಲ ಪ್ರದೇಶಗಳು: ಇತ್ತೀಚಿನ ದಶಕಗಳಲ್ಲಿ ಅನೇಕ ಪ್ರದೇಶಗಳಲ್ಲಿ ಅರಣ್ಯ ಪ್ರದೇಶಗಳ ಕಡೆಗೆ ನಗರಗಳ ತ್ವರಿತ ವಿಸ್ತರಣೆ ಕಂಡುಬಂದಿದೆ. ಈ ಅರಣ್ಯ ಭೂಮಿ-ನಗರ ಸಂಪರ್ಕಸಾಧನವು ಕಾಡ್ಗಿಚ್ಚಿನ ಅಪಾಯವು ಹೆಚ್ಚು ಎದ್ದುಕಾಣುವ ಪ್ರದೇಶವಾಗಿದೆ. ಉದಾಹರಣೆಗೆ, USA, ಕ್ಯಾಲಿಫೋರ್ನಿಯಾದಲ್ಲಿ ಹೆಚ್ಚುತ್ತಿರುವ ಕಾಡ್ಗಿಚ್ಚಿನ ಘಟನೆಗಳು.
  3. ಮಿಂಚು ಮತ್ತು ಮಾಲಿನ್ಯ: ಕಾಡ್ಗಿಚ್ಚಿನ ಹೆಚ್ಚುತ್ತಿರುವ ಘಟನೆಗಳೊಂದಿಗೆ, ಪ್ರಪಂಚವು ಆಗ್ಗಾಗೆ ಮಿಂಚಿನ ಘಟನೆಗಳಿಗೆ ಸಾಕ್ಷಿಯಾಗುವ ಸಾಧ್ಯತೆಯಿದೆ.
  4. ಬೆಂಕಿ-ಪ್ರಚೋದಿತ ಗುಡುಗು ಸಿಡಿಲುಗಳು: ಹೆಚ್ಚುತ್ತಿರುವ ಕಾಡ್ಗಿಚ್ಚಿನ ಘಟನೆಗಳೊಂದಿಗೆ, ‘ಬೆಂಕಿ-ಪ್ರಚೋದಿತ ಗುಡುಗುಗಳು’ (Fire-induced thunderstorms) ಹೊಸ ಬೆದರಿಕೆಯಾಗಿ ಮಾರ್ಪಟ್ಟಿವೆ. ಈ ‘ಗುಡುಗು’ಗಳು ನೆಲದ ಮೇಲೆ ಬೆಂಕಿ ಹರಡಲು ಹೆಚ್ಚು ಅಪಾಯಕಾರಿ ಪರಿಸ್ಥಿತಿಗಳಿಗೆ ಕೊಡುಗೆ ನೀಡುತ್ತವೆ.
  5. ನಗರಗಳಲ್ಲಿ ಶಬ್ದ ಮಾಲಿನ್ಯವು ಸಾರ್ವಜನಿಕ ಆರೋಗ್ಯಕ್ಕೆ ಹೆಚ್ಚುತ್ತಿರುವ ಅಪಾಯ: ರಸ್ತೆ ಸಂಚಾರ, ರೈಲುಮಾರ್ಗಗಳು ಅಥವಾ ವಿರಾಮ ಚಟುವಟಿಕೆಗಳಿಂದ ಅನಗತ್ಯ, ಜೋರಾಗಿ ಮತ್ತು ಹೆಚ್ಚಿನ ಶಬ್ದಗಳು ಮಾನವನ ಆರೋಗ್ಯ ಮತ್ತು ಯೋಗಕ್ಷೇಮದ ಮೇಲೆ ಪರಿಣಾಮ ಬೀರುತ್ತವೆ.
  6. ಫಿನಾಲಾಜಿಕಲ್ ಬದಲಾವಣೆಗಳು (Phenological shifts): ಹವಾಮಾನ ಬದಲಾವಣೆಯಿಂದಾಗಿ ಬದಲಾಗುತ್ತಿರುವ ಪರಿಸರ ಪರಿಸ್ಥಿತಿಗಳಿಗೆ ಪ್ರತಿಕ್ರಿಯೆಯಾಗಿ ‘ಜೀವನ ಚಕ್ರ’ದ ಹಂತಗಳನ್ನು ಜೀವ ಪ್ರಭೇದಗಳು ಬದಲಾಯಿಸುತ್ತವೆ, ಇದರ ಪರಿಣಾಮವಾಗಿ ‘ಫಿನೋಲಾಜಿಕಲ್ ಬದಲಾವಣೆಗಳು’ ಉಂಟಾಗುತ್ತವೆ. ಆತಂಕಕಾರಿಯಾಗಿ, ಪರಿಸರ ವ್ಯವಸ್ಥೆಯಲ್ಲಿ ಸಂವಹನ ನಡೆಸುವ ಜಾತಿಗಳು ಯಾವಾಗಲೂ ಸಮಯವನ್ನು ಒಂದೇ ದಿಕ್ಕಿನಲ್ಲಿ ಅಥವಾ ಅದೇ ದರದಲ್ಲಿ ಬದಲಾಯಿಸುವುದಿಲ್ಲ ಎಂಬುದು ಪ್ರಮುಖ ಕಾಳಜಿಯಾಗಿದೆ.
  7. ಹವಾಮಾನ ಬದಲಾವಣೆಯಿಂದಾಗಿ ವೇಗವಾಗಿ ಒಡೆಯುವ ಫಿನಾಲಾಜಿಕಲ್ ಪಲ್ಲಟಗಳು, ಸಸ್ಯಗಳು ಮತ್ತು ಪ್ರಾಣಿಗಳನ್ನು ಅವುಗಳ ನೈಸರ್ಗಿಕ ಲಯಗಳೊಂದಿಗೆ ಸಿಂಕ್‌ನಿಂದ ಹೊರಹಾಕುತ್ತಿವೆ ಮತ್ತು ಹೊಂದಿಕೆಯಾಗದ ಪರಿಸ್ಥಿತಿಗಳಿಗೆ ಕಾರಣವಾಗುತ್ತವೆ. ಅಂತೆಯೇ, ಸಸ್ಯಗಳು ಸಸ್ಯಾಹಾರಿಗಳಿಗಿಂತ ವೇಗವಾಗಿ ಜೀವನ ಚಕ್ರದ ಹಂತಗಳನ್ನು ಬದಲಾಯಿಸುತ್ತವೆ.

 

ವರದಿಯಲ್ಲಿ ಮಾಡಲಾದ ಪ್ರಮುಖ ಶಿಫಾರಸುಗಳು:

  1. ನಗರ ಪರಿಸರದಲ್ಲಿ ಸಸ್ಯವರ್ಗವನ್ನು ಹೆಚ್ಚಿಸಬೇಕು.
  2. ಸೌಂಡ್‌ಸ್ಕೇಪ್ ಯೋಜನೆಗಳನ್ನು ರಚಿಸಬೇಕು(ಗ್ರಹಿಸಿದ ಅಕೌಸ್ಟಿಕ್ ಪ್ಯಾರಾಮೀಟರ್‌ಗಳು, ಭೌತಿಕ ಲಕ್ಷಣಗಳು, ನೈಸರ್ಗಿಕ ಅಂಶಗಳು, ಉದ್ದೇಶ, ಬಳಕೆ ಮತ್ತು ಬಳಕೆದಾರರ ಸಮುದಾಯವನ್ನು ಒಳಗೊಂಡಂತೆ  ಸ್ಥಳದ ಸಂದರ್ಭೋಚಿತ ಗುಣಲಕ್ಷಣಗಳನ್ನು ಪರಿಗಣಿಸುತ್ತದೆ).
  3. ಹೆದ್ದಾರಿಗಳು ಅಥವಾ ರೈಲ್ವೆಗಳ ಉದ್ದಕ್ಕೂ ‘ಶಬ್ದ ಮಾಲಿನ್ಯ ತಡೆ’ ವ್ಯವಸ್ಥೆಯನ್ನು ಅಳವಡಿಸಬೇಕು.
  4. ದುರ್ಬಲ ಗುಂಪುಗಳನ್ನು ಒಳಗೊಳ್ಳುವ ಮೂಲಕ ಅವಘಡ ತಡೆಗಟ್ಟುವ ವಿಧಾನವನ್ನು ಅಳವಡಿಸಿಕೊಳ್ಳಬೇಕು.
  5. ಸ್ಥಳೀಯ ಅಗ್ನಿ ನಿರ್ವಹಣೆ ತಂತ್ರಗಳನ್ನು ಉತ್ತೇಜಿಸಬೇಕು ಮತ್ತು ಅಳವಡಿಸಿಕೊಳ್ಳಬೇಕು.
  6. ದೀರ್ಘ-ಶ್ರೇಣಿಯ ಹವಾಮಾನ ಮುನ್ಸೂಚನೆ ಮತ್ತು ಉಪಗ್ರಹಗಳಂತಹ ರಿಮೋಟ್ ಸೆನ್ಸಿಂಗ್ ಸಾಮರ್ಥ್ಯಗಳ ಮೇಲೆ ಗಮನ ಕೇಂದ್ರೀಕರಿಸಬೇಕು.
  7. ಆವಾಸಸ್ಥಾನ ಕಾರಿಡಾರ್‌ಗಳ ಮೂಲಕ ಪರಿಸರ ಸಂಪರ್ಕವನ್ನು ಹೆಚ್ಚಿಸಬೇಕು.
  8. ಆನುವಂಶಿಕ ವೈವಿಧ್ಯತೆಯನ್ನು ಉತ್ತೇಜಿಸಬೇಕು ಮತ್ತು ಯಶಸ್ವಿ ಹೊಂದಾಣಿಕೆಯ ಸಾಧ್ಯತೆಗಳನ್ನು ಹೆಚ್ಚಿಸಬೇಕು.

 

ವಿಷಯಗಳು: ಸಂವಹನ ಜಾಲಗಳ ಮೂಲಕ ಆಂತರಿಕ ಭದ್ರತೆಗೆ ಸವಾಲು ಹಾಕುವುದು, ಆಂತರಿಕ ಭದ್ರತಾ ಸವಾಲುಗಳಲ್ಲಿ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳ ಪಾತ್ರ, ಸೈಬರ್ ಭದ್ರತೆಯ ಮೂಲಭೂತ ಅಂಶಗಳು, ಅಕ್ರಮ ಹಣ ವರ್ಗಾವಣೆ ಮತ್ತು ಅದನ್ನು ತಡೆಯುವುದು.

ಇಂಟರ್-ಆಪರೇಬಲ್ ಕ್ರಿಮಿನಲ್ ಜಸ್ಟೀಸ್ ಸಿಸ್ಟಮ್ ಪ್ರಾಜೆಕ್ಟ್:


(Inter-Operable Criminal Justice System Project)

 ಸಂದರ್ಭ:

ಇತ್ತೀಚೆಗೆ ಕೇಂದ್ರ ಸರ್ಕಾರವು ಗೃಹ ಸಚಿವಾಲಯದಿಂದ ‘ಇಂಟರ್-ಆಪರೇಬಲ್ ಕ್ರಿಮಿನಲ್ ಜಸ್ಟೀಸ್ ಸಿಸ್ಟಮ್ ಪ್ರಾಜೆಕ್ಟ್’ (Inter-Operable Criminal Justice System Project) ನ 2ನೇ ಹಂತವನ್ನು ಅನುಷ್ಠಾನಗೊಳಿಸಲು ಅನುಮತಿ ನೀಡಿದೆ.

ಇದಕ್ಕಾಗಿ 2022-23 ರಿಂದ 2025-26 ರವರೆಗಿನ ಅವಧಿಯಲ್ಲಿ ಒಟ್ಟು 3,375 ಕೋಟಿ ರೂ. ಗಳ ಹಣವನ್ನು ಮಂಜೂರು ಮಾಡಲಾಗಿದೆ.

ಈ ಯೋಜನೆಯನ್ನು ಕೇಂದ್ರ ವಲಯದ ಯೋಜನೆಯಾಗಿ ಜಾರಿಗೊಳಿಸಲಾಗುವುದು.

 

ಇಂಟರ್-ಆಪರೇಬಲ್ ಕ್ರಿಮಿನಲ್ ಜಸ್ಟೀಸ್ ಸಿಸ್ಟಮ್ ಪ್ರಾಜೆಕ್ಟ್ ಎಂದರೇನು?

ಇಂಟರ್-ಆಪರೇಬಲ್ ಕ್ರಿಮಿನಲ್ ಜಸ್ಟೀಸ್ ಸಿಸ್ಟಮ್ (ICJS) ಒಂದು ರಾಷ್ಟ್ರೀಯ ವೇದಿಕೆಯಾಗಿದೆ. ಇದು ದೇಶದಲ್ಲಿ ಕ್ರಿಮಿನಲ್ ನ್ಯಾಯವನ್ನು ವಿತರಿಸಲು ಬಳಸಲಾಗುವ ಮುಖ್ಯ ಐಟಿ ವ್ಯವಸ್ಥೆಯ ಏಕೀಕರಣವನ್ನು ಒಳಗೊಂಡಿರುತ್ತದೆ.

ಈ ಕೆಳಗಿನ ಐದು ಸ್ತಂಭಗಳ ಮೂಲಕ ದೇಶದಲ್ಲಿ ‘ಅಪರಾಧ ನ್ಯಾಯ’ವನ್ನು ಜಾರಿಗೆ ತರಲು ಬಳಸಲಾಗುತ್ತದೆ-

  1. ಪೊಲೀಸ್ (ಅಪರಾಧ ಮತ್ತು ಕ್ರಿಮಿನಲ್ ಟ್ರ್ಯಾಕಿಂಗ್ ಮತ್ತು ನೆಟ್‌ವರ್ಕ್ ವ್ಯವಸ್ಥೆಗಳು),
  2. ಫೋರೆನ್ಸಿಕ್ ಲ್ಯಾಬ್‌ಗಾಗಿ ಇ-ಫೋರೆನ್ಸಿಕ್ಸ್,
  3. ನ್ಯಾಯಾಲಯಗಳಿಗೆ ಇ-ನ್ಯಾಯಾಲಯಗಳು,
  4. ಪಬ್ಲಿಕ್ ಪ್ರಾಸಿಕ್ಯೂಟರ್‌ಗಳಿಗೆ ಇ-ಪ್ರಾಸಿಕ್ಯೂಷನ್
  5. ಕಾರಾಗೃಹಗಳಿಗೆ ಇ-ಜೈಲುಗಳು.

 

ಅನುಷ್ಠಾನ:

ICJS ವ್ಯವಸ್ಥೆಯನ್ನು ಹೆಚ್ಚಿನ ವೇಗದ ಸಂಪರ್ಕದೊಂದಿಗೆ ಮೀಸಲಾದ ಮತ್ತು ಸುರಕ್ಷಿತ ಕ್ಲೌಡ್-ಆಧಾರಿತ ಮೂಲಸೌಕರ್ಯದ ಮೂಲಕ ಲಭ್ಯವಾಗುವಂತೆ ಮಾಡಲಾಗುತ್ತದೆ.

  1. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ರಾಷ್ಟ್ರೀಯ ಮಾಹಿತಿ ಕೇಂದ್ರದ (NIC) ಸಹಯೋಗದೊಂದಿಗೆ ಯೋಜನೆಯ ಅನುಷ್ಠಾನದ ಜವಾಬ್ದಾರಿಯನ್ನು ಹೊಂದಿರುತ್ತದೆ.
  2. ಈ ಯೋಜನೆಯನ್ನು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸಹಯೋಗದಲ್ಲಿ ಜಾರಿಗೊಳಿಸಲಾಗುವುದು.

Current Affairs

 

ಯೋಜನೆಯ ಮಹತ್ವ:

‘ಇಂಟರ್-ಆಪರೇಬಲ್ ಕ್ರಿಮಿನಲ್ ಜಸ್ಟೀಸ್ ಸಿಸ್ಟಮ್ ಪ್ರಾಜೆಕ್ಟ್’ ಪರಿಣಾಮಕಾರಿ ಮತ್ತು ಆಧುನಿಕ ಪೋಲೀಸಿಂಗ್ ಅನ್ನು ಖಾತ್ರಿಪಡಿಸುವ ನಿಟ್ಟಿನಲ್ಲಿ ಒಂದು ಹೆಜ್ಜೆಯಾಗಿದೆ.

  1. ICJS ವ್ಯವಸ್ಥೆಯು ಕ್ರಿಮಿನಲ್ ನ್ಯಾಯದ ದಾಖಲೆಗಳನ್ನು ಡಿಜಿಟಲೀಕರಣಗೊಳಿಸುವ ಮೂಲಕ ಮತ್ತು ಕಾನೂನು ಜಾರಿ ಸಂಸ್ಥೆಗಳು, ಪ್ರಯೋಗಾಲಯಗಳು ಮತ್ತು ನ್ಯಾಯಾಲಯಗಳಿಗೆ ಪ್ರವೇಶಿಸುವಂತೆ ಮಾಡುವ ಮೂಲಕ ಈ ಪ್ರದೇಶದಲ್ಲಿ ಪ್ರಮುಖ ಪ್ರಗತಿಯಾಗಿದೆ.
  2. ಇದನ್ನು ಪರಿಚಯಿಸಿದಾಗ, ಶಿಕ್ಷೆಗೊಳಗಾದ ವ್ಯಕ್ತಿಗಳು ತಮ್ಮ ಕ್ರಿಯೆಗಳ ಪರಿಣಾಮಗಳನ್ನು ಅನುಭವಿಸುವುದರಿಂದ ತಪ್ಪಿಸಿಕೊಳ್ಳುವುದನ್ನು ಹೆಚ್ಚು ಕಷ್ಟಕರವಾಗಿಸುತ್ತದೆ, ಈ ವ್ಯವಸ್ಥೆಯು – ತಪ್ಪಿತಸ್ಥ ಅಥವಾ ನಿರಪರಾಧಿ – ಯಾರನ್ನೂ ಮರೆತುಬಿಡುವುದಿಲ್ಲ ಮತ್ತು ಎಲ್ಲರಿಗೂ ಸಮಾನ ನ್ಯಾಯ ನೀಡಲಾಗುತ್ತದೆ ಎಂದು ಖಚಿತಪಡಿಸುತ್ತದೆ.
  3. ಇದು ಸಮಯವನ್ನು ಉಳಿಸುವುದು ಮಾತ್ರವಲ್ಲದೆ ವ್ಯವಸ್ಥೆಯನ್ನು ಹೆಚ್ಚು ದೃಢಗೊಳಿಸುತ್ತದೆ ಮತ್ತು ಅಪರಾಧಿಗಳನ್ನು ಪತ್ತೆಹಚ್ಚಲು ಸಹಾಯ ಮಾಡುತ್ತದೆ, ಅಪರಾಧಗಳನ್ನು ಪರಿಹರಿಸುತ್ತದೆ ಮತ್ತು ಭಾರತವನ್ನು ಹೆಚ್ಚು ಸುರಕ್ಷಿತ ಸ್ಥಳವನ್ನಾಗಿ ಮಾಡುತ್ತದೆ.

Current Affairs

 


ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ಸಂಗತಿಗಳು:


  ಟೊಂಗಾ ಜ್ವಾಲಾಮುಖಿ ಸ್ಫೋಟ:

ಕಳೆದ ತಿಂಗಳು, ದಕ್ಷಿಣ ಪೆಸಿಫಿಕ್ ಮಹಾಸಾಗರದಲ್ಲಿರುವ ‘ಟೊಂಗಾ’ ದ್ವೀಪದಲ್ಲಿ ಜ್ವಾಲಾಮುಖಿ ಸ್ಫೋಟ ಸಂಭವಿಸಿದೆ, ಇದರಿಂದಾಗಿ ಪೆಸಿಫಿಕ್ ಸಾಗರದಲ್ಲಿ ‘ಸುನಾಮಿ ಅಲೆಗಳು’ ಏಳುತ್ತಿವೆ.

  1. ಇದು ‘ಸಮುದ್ರದೊಳಗಿನ ಜ್ವಾಲಾಮುಖಿ ಸ್ಫೋಟ’ (Undersea Volcanic Eruption) ವಾಗಿದ್ದು, ಸಣ್ಣ ಜನವಸತಿಯಿಲ್ಲದ ಎರಡು ದ್ವೀಪಗಳಾದ ಹುಂಗಾ-ಹಾ’ಪೈ (Hunga-Ha’apai) ಮತ್ತು ಹುಂಗಾ-ಟೋಂಗಾ (Hunga-Tonga) ಗಳನ್ನು ಒಳಗೊಂಡಿದೆ.
  2. ಟೊಂಗಾ ದ್ವೀಪಗಳು ‘ರಿಂಗ್ ಆಫ್ ಫೈರ್’ ನಲ್ಲಿವೆ. ಈ ಜ್ವಾಲಾಮುಖಿಯು ಪೆಸಿಫಿಕ್ ಮಹಾಸಾಗರದ ಜಲಾನಯನ ಪ್ರದೇಶದ ಸುತ್ತಲೂ ಹೆಚ್ಚಿನ ಜ್ವಾಲಾಮುಖಿ ಮತ್ತು ಭೂಕಂಪನ ಚಟುವಟಿಕೆಯ ಪರಿಧಿಯಾಗಿದೆ.

 

ಸುದ್ದಿಯಲ್ಲಿರಲು ಕಾರಣ:

ಟೋಂಗಾ ಜ್ವಾಲಾಮುಖಿ ಸ್ಫೋಟದಿಂದ ಬೂದಿಯ ಕಣಗಳು ಉಪಗ್ರಹಗಳು ಇದುವರೆಗೆ ದಾಖಲಿಸದ ಗರಿಷ್ಠ ಮಟ್ಟವನ್ನು ತಲುಪಿವೆ ಎಂದು ನಾಸಾ ವಿಜ್ಞಾನಿಗಳು ಹೇಳಿದ್ದಾರೆ.

  1. ಜನವರಿ 15ರ ಸ್ಫೋಟದಿಂದ ಹೊರಬಂದ ಬೂದಿ ಕಣಗಳು ವಾತಾವರಣದ ‘ಮೆಸೋಸ್ಪಿಯರ್’ ತಲುಪಿವೆ. ಈ ವಾತಾವರಣದ ‘ಮೆಸೋಸ್ಫಿಯರ್’ (Mesosphere) ನಲ್ಲಿ ನಕ್ಷತ್ರಗಳು ಒಡೆಯುವ ಘಟನೆಗಳು ನಡೆಯುತ್ತವೆ ಎಂದು ತಿಳಿಯಬೇಕು.
  2. 36-ಮೈಲಿ-ಎತ್ತರದವರೆಗೆ ಕಂಡುಬಂದಿರುವ ಬೂದಿ ಕಣಗಳು ಉಪಗ್ರಹಗಳು ಇದುವರೆಗೆ ಸೆರೆಹಿಡಿಯಲಾದ ಅತಿದೊಡ್ಡ ಜ್ವಾಲಾಮುಖಿ ಸ್ಫೋಟದ ಚಿತ್ರಣವಾಗಿದೆ.

Current Affairs

REWARD ಯೋಜನೆ:

ಇತ್ತೀಚೆಗಷ್ಟೇ, ಭಾರತ ಸರ್ಕಾರ, ಕರ್ನಾಟಕ ಮತ್ತು ಒಡಿಶಾ ರಾಜ್ಯ ಸರ್ಕಾರಗಳು ಮತ್ತು ವಿಶ್ವಬ್ಯಾಂಕ್‌ನ ನಡುವೆ $115 ಮಿಲಿಯನ್ ವೆಚ್ಚದಲ್ಲಿ ನವೀನ ಅಭಿವೃದ್ಧಿ ಕಾರ್ಯಕ್ರಮದ ಮೂಲಕ ಕೃಷಿ ಸ್ಥಿತಿಸ್ಥಾಪಕತ್ವಕ್ಕಾಗಿ ಜಲಾನಯನವನ್ನು ಪುನರುಜ್ಜೀವನ’ ಗೊಳಿಸುವ ಕಾರ್ಯಕ್ರಮಕ್ಕೆ ಸಹಿ ಹಾಕಲಾಗಿದೆ.

REWARD ಎಂದರೆ ‘ನವೀನ ಅಭಿವೃದ್ಧಿ ಕಾರ್ಯಕ್ರಮದ ಮೂಲಕ ಕೃಷಿ ಸ್ಥಿತಿಸ್ಥಾಪಕತ್ವಕ್ಕಾಗಿ ಜಲಾನಯನ ಪುನರುಜ್ಜೀವನ’ (Rejuvenating Watersheds for Agricultural Resilience through Innovative Development – REWARD) ಗೊಳಿಸುವುದಾಗಿದೆ.

ರಾಷ್ಟ್ರೀಯ ಮತ್ತು ರಾಜ್ಯ ಸಂಸ್ಥೆಗಳು ಉತ್ತಮ ಜಲಾನಯನ ನಿರ್ವಹಣಾ ಅಭ್ಯಾಸಗಳನ್ನು ಅಳವಡಿಸಿಕೊಳ್ಳಲು ಸಹಾಯ ಮಾಡುವುದು, ಹವಾಮಾನ ಬದಲಾವಣೆಗೆ ರೈತರ ಸ್ಥಿತಿಸ್ಥಾಪಕತ್ವವನ್ನು ಹೆಚ್ಚಿಸಲು ಸಹಾಯ ಮಾಡುವುದು, ಹೆಚ್ಚಿನ ಉತ್ಪಾದಕತೆ ಮತ್ತು ಉತ್ತಮ ಆದಾಯವನ್ನು ಉತ್ತೇಜಿಸುವುದು ಯೋಜನೆಯ ಉದ್ದೇಶವಾಗಿದೆ.

 

ಮಹತ್ವ:

ಭಾರತ ಸರ್ಕಾರವು 2030 ರ ವೇಳೆಗೆ ಸವಕಳಿಗೊಂಡ 26 ಮಿಲಿಯನ್ ಹೆಕ್ಟೇರ್ ಭೂಮಿಯನ್ನು ಪುನಃಸ್ಥಾಪಿಸಲು ಮತ್ತು 2023 ರ ವೇಳೆಗೆ ರೈತರ ಆದಾಯವನ್ನು ದ್ವಿಗುಣಗೊಳಿಸಲು ಬದ್ಧವಾಗಿದೆ. ಪರಿಣಾಮಕಾರಿ ಜಲಾನಯನ ನಿರ್ವಹಣೆಯು ಮಳೆಯಾಶ್ರಿತ ಪ್ರದೇಶಗಳಲ್ಲಿ ಜೀವನೋಪಾಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಮತ್ತು ಹೆಚ್ಚು ಸ್ಥಿತಿಸ್ಥಾಪಕ ಆಹಾರ ವ್ಯವಸ್ಥೆಯನ್ನು ರೂಪಿಸುತ್ತದೆ.

 

ಲಕ್ಷ್ಯ ಶೂನ್ಯ ಡಂಪ್‌ಸೈಟ್:

(Lakshya Zero Dumpsite)

ನಗರಗಳಲ್ಲಿ ಹಳೆಯ ಘನತ್ಯಾಜ್ಯ ಡಂಪ್ ಯಾರ್ಡ್‌ಗಳನ್ನು ಕಿತ್ತುಹಾಕುವ ಉಪಕ್ರಮದ ಭಾಗವಾಗಿ ಭಾರತ ಸರ್ಕಾರವು ಆಂಧ್ರಪ್ರದೇಶದ ರೂ 235 ಕೋಟಿ ವೆಚ್ಚದ ‘ಹಳೆಯ ತ್ಯಾಜ್ಯ ಸಂಸ್ಕರಣೆ’ ಪ್ರಸ್ತಾವನೆಯನ್ನು ಇತ್ತೀಚೆಗೆ ಅನುಮೋದಿಸಿದೆ.

  1. ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು “ಲಕ್ಷ್ಯ ಝೀರೋ ಡಂಪ್‌ಸೈಟ್” ಅಡಿಯಲ್ಲಿ ರಾಜ್ಯ ಸರ್ಕಾರವು ಸಲ್ಲಿಸಿದ 235 ಕೋಟಿ ರೂಪಾಯಿಗಳ ಪ್ರಸ್ತಾವನೆಗೆ 77.7 ಕೋಟಿ ರೂಪಾಯಿಗಳ ನೆರವನ್ನು ನೀಡುತ್ತದೆ.
  2. ಇಲ್ಲಿಯವರೆಗೆ, ಐದು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಾದ್ಯಂತ 260 ಕ್ಕೂ ಹೆಚ್ಚು ನಗರಗಳು ಕಸ ಮುಕ್ತ ನಗರ ವಿಧಾನದ ಭಾಗವಾಗಿ ‘ಹಳೆಯ ತ್ಯಾಜ್ಯ ಸಂಸ್ಕರಣೆ’ಗಾಗಿ ತಮ್ಮ ಕ್ರಿಯಾ ಯೋಜನೆಗಳನ್ನು ಸಲ್ಲಿಸಿವೆ.

ಅಕ್ಟೋಬರ್ 1 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಸ್ವಚ್ಛ ಭಾರತ್ ಮಿಷನ್-ಅರ್ಬನ್ 2.0 ಅಡಿಯಲ್ಲಿ ಭಾರತದ ನಗರಗಳನ್ನು ಕಸ ಮುಕ್ತಗೊಳಿಸುವ ಯೋಜನೆಯನ್ನು ಘೋಷಿಸಿದ್ದರು ಮತ್ತು ಮಿಷನ್ ಅಡಿಯಲ್ಲಿ ಪ್ರಮುಖ ಉದ್ದೇಶಗಳಲ್ಲಿ, ಸುಮಾರು 15,000 ಎಕರೆಗಳಷ್ಟು ನಗರದ ಭೂಮಿಯಲ್ಲಿ ಹರಡಿರುವ 160 ಮಿಲಿಯನ್ ಟನ್ಗಳಷ್ಟು ಹಳೆಯ ತ್ಯಾಜ್ಯದ ಡಂಪ್‌ಸೈಟ್‌ಗಳನ್ನು,ನಿರ್ಮೂಲನೆ ಮಾಡುವುದು ಈ ಮಿಷನ್ ಅಡಿಯಲ್ಲಿನ ಪ್ರಮುಖ ಉದ್ದೇಶಗಳಲ್ಲಿ ಒಂದಾಗಿದೆ. ಈ ಕಾರ್ಯಾಚರಣೆಯನ್ನು ‘ಟಾರ್ಗೆಟ್ ಝೀರೋ’ ಡಂಪ್‌ಸೈಟ್ ಎಂದು ಕರೆಯಲಾಗುತ್ತದೆ.

ಯೋಜನೆಯ ಪ್ರಾಮುಖ್ಯತೆ:

ಪಾರಂಪರಿಕ ಡಂಪ್‌ಸೈಟ್‌ಗಳು ಪರಿಸರಕ್ಕೆ ದೊಡ್ಡ ಅಪಾಯವನ್ನುಂಟುಮಾಡುತ್ತವೆ ಮತ್ತು ಅವು ವಾಯು ಮಾಲಿನ್ಯ ಮತ್ತು ಜಲ ಮಾಲಿನ್ಯವನ್ನು ಹೆಚ್ಚಿಸುತ್ತವೆ. ವರ್ಷಗಳಷ್ಟು ಹಳೆಯ ಈ ಕಸದ ಪರ್ವತಗಳನ್ನು ತೆರವುಗೊಳಿಸುವುದು ದೇಶದ ನಗರ ಭೂದೃಶ್ಯವನ್ನು ಪರಿವರ್ತಿಸಲು ಮಾತ್ರವಲ್ಲದೆ, ಸಾರ್ವಜನಿಕ ಆರೋಗ್ಯ ಮತ್ತು ಪರಿಸರ ಕಾಳಜಿಯ ಸಮಸ್ಯೆಯನ್ನು ಪರಿಹರಿಸಲು ಸಹ ನಿರ್ಣಾಯಕವಾಗಿದೆ.

 

ತಾರಾಪುರ ಹತ್ಯಾಕಾಂಡ:

(Tarapur Massacre)

ಬಿಹಾರ, ತಾರಾಪುರದಲ್ಲಿ (1932) ಬ್ರಿಟಿಷರಿಂದ ಕೊಲ್ಲಲ್ಪಟ್ಟ 34 ಸ್ವಾತಂತ್ರ್ಯ ಹೋರಾಟಗಾರರ ನೆನಪಿಗಾಗಿ ಫೆಬ್ರವರಿ 15 ಅನ್ನು “ಹುತಾತ್ಮರ ದಿನ” ಎಂದು ಆಚರಿಸಲಾಗುತ್ತದೆ.

  1. ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ನಂತರ (ಅಮೃತಸರ, 1919) ಬ್ರಿಟಿಷರು ನಡೆಸಿದ ಅತಿ ದೊಡ್ಡ ಹತ್ಯಾಕಾಂಡ ಇದಾಗಿದೆ.
  2. ಠಾಣಾ ಭವನದಲ್ಲಿ ಭಾರತದ ರಾಷ್ಟ್ರಧ್ವಜವನ್ನು ಹಾರಿಸಲು ಯುವ ಸ್ವಾತಂತ್ರ್ಯ ಹೋರಾಟಗಾರರ ಗುಂಪು ಯೋಜಿಸಿದ್ದ ಪ್ರತಿಭಟನೆಯ ಸಂದರ್ಭದಲ್ಲಿ ಹತ್ಯಾಕಾಂಡ ನಡೆದಿದೆ.

ಪ್ರತಿಭಟನೆಗೆ ಕಾರಣಗಳು:

  1. ಗಾಂಧಿ-ಇರ್ವಿನ್ ಒಪ್ಪಂದದ ವೈಫಲ್ಯದ ನಂತರ ಮಹಾತ್ಮ ಗಾಂಧಿಯವರ ಬಂಧನ (1932).
  2. ಭಗತ್ ಸಿಂಗ್, ಸುಖದೇವ್ ಮತ್ತು ರಾಜಗುರುಗಳನ್ನು ಲಾಹೋರ್‌ನಲ್ಲಿ ಗಲ್ಲಿಗೇರಿಸಲಾಯಿತು (1931).
  3. ನೆಹರು, ಪಟೇಲ್ ಮತ್ತು ರಾಜೇಂದ್ರ ಪ್ರಸಾದ್ ರ ಬಂಧನ.

 

ಫಾಕ್ಲ್ಯಾಂಡ್ ದ್ವೀಪಗಳು:

(Falkland Islands)

ಬ್ರಿಟನ್‌ನಿಂದ ನಿಯಂತ್ರಿಸಲ್ಪಡುತ್ತಿರುವ ಫಾಕ್‌ಲ್ಯಾಂಡ್ ದ್ವೀಪಗಳ ಮೇಲಿನ ಅರ್ಜೆಂಟೀನಾದ ಹಕ್ಕನ್ನು ಚೀನಾ ಬೆಂಬಲಿಸಿದೆ.

ಸ್ಥಳ:

  1. ಫಾಕ್‌ಲ್ಯಾಂಡ್ ದ್ವೀಪಗಳು ಯುನೈಟೆಡ್ ಕಿಂಗ್‌ಡಮ್‌ನ ಸಾಗರೋತ್ತರ ಪ್ರದೇಶವಾಗಿದ್ದು (Overseas Territory), ದಕ್ಷಿಣ ಅಮೆರಿಕಾದ ದಕ್ಷಿಣದ ತುದಿಯಲ್ಲಿರುವ ನೈಋತ್ಯ ಅಟ್ಲಾಂಟಿಕ್ ಮಹಾಸಾಗರದಲ್ಲಿದೆ.
  2. ಈ ದ್ವೀಪ ಸಮೂಹವು ಭೂಮಿಯ ದಕ್ಷಿಣ ಮತ್ತು ಪಶ್ಚಿಮ ಗೋಳಾರ್ಧಗಳಲ್ಲಿ ನೆಲೆಗೊಂಡಿದೆ.
  3. ಇವುಗಳನ್ನು ‘ಮಾಲ್ವಿನಾಸ್ ದ್ವೀಪಗಳು’ (Malvinas Islands) ಎಂದೂ ಕರೆಯುತ್ತಾರೆ.

ಅರ್ಜೆಂಟೀನಾ ಪ್ರತಿಪಾದಿಸುತ್ತಿರುವ ಹಕ್ಕುಗಳು:

  1. 1765 ರಲ್ಲಿ, ಬ್ರಿಟಿಷರು ವೆಸ್ಟ್ ಫಾಕ್ಲ್ಯಾಂಡ್ಸ್ನಲ್ಲಿ ನೆಲೆಸಿದ ಮೊದಲಿಗರಾಗಿದ್ದರು, ಆದರೆ 1770 ರಲ್ಲಿ ಸ್ಪ್ಯಾನಿಷ್ ರು ಬ್ರಿಟಿಷರನ್ನು ಅಲ್ಲಿಂದ ಓಡಿಸಿದರು.
  2. ಯುದ್ಧದ ಬೆದರಿಕೆಯ ನಂತರ 1771 ರಲ್ಲಿ ಪಶ್ಚಿಮ ಫಾಕ್ಲ್ಯಾಂಡ್ಸ್ನಲ್ಲಿ ಬ್ರಿಟಿಷ್ ಹೊರಠಾಣೆಯನ್ನು ಪುನಃಸ್ಥಾಪಿಸಲಾಯಿತು ಆದರೆ ನಂತರ ಬ್ರಿಟಿಷರು 1774 ರಲ್ಲಿ ಆರ್ಥಿಕ ಕಾರಣಗಳಿಗಳಿಂದಾಗಿ ದ್ವೀಪದಿಂದ ಹಿಂದೆ ಸರಿದರು, ಫಾಕ್ಲ್ಯಾಂಡ್ ಮೇಲಿನ ತಮ್ಮ ಹಕ್ಕುಗಳನ್ನು ಬಿಟ್ಟುಕೊಡಲಿಲ್ಲ.
  3. ಸ್ಪೇನ್ 1811 ರವರೆಗೆ ಪೂರ್ವ ಫಾಕ್ಲ್ಯಾಂಡ್ಸ್ (ಇದನ್ನು ಸೋಲೆಡಾಡ್ ದ್ವೀಪಗಳು ಎಂದು ಕರೆಯಲಾಗುತ್ತದೆ) ವಸಾಹತುಗಳ ಮೇಲೆ ತನ್ನ ನಿಯಂತ್ರಣವನ್ನು ಉಳಿಸಿಕೊಂಡಿತು.
  4. ಅರ್ಜೆಂಟೀನಾವು 1816 ರಲ್ಲಿ ಸ್ಪೇನ್‌ನಿಂದ ತನ್ನ ಸ್ವಾತಂತ್ರ್ಯವನ್ನು ಘೋಷಿಸಿದ ನಂತರ, ಅರ್ಜೆಂಟೀನಾದ ಸರ್ಕಾರವು 1820 ರಲ್ಲಿ ಫಾಕ್‌ಲ್ಯಾಂಡ್‌ನ ಮೇಲೆ ತನ್ನ ಸಾರ್ವಭೌಮತ್ವವನ್ನು ಘೋಷಿಸಿತು.

ಯುದ್ಧಗಳು ಮತ್ತು ವಿಶ್ವಸಂಸ್ಥೆಯಲ್ಲಿ ಚರ್ಚೆಗಳ ಹೊರತಾಗಿಯೂ, ಫಾಕ್ಲ್ಯಾಂಡ್ ದ್ವೀಪಗಳ ಮೇಲಿನ ಸಾರ್ವಭೌಮತ್ವದ ವಿಷಯವು ಇನ್ನೂ ವಿವಾದದ ವಿಷಯವಾಗಿ ಉಳಿದಿದೆ.

Current Affairs

 

ಕ್ರಿಟೊಡಾಕ್ಟಿಲಸ್ ಎಕ್ಸರ್ಸಿಟಸ್:

(Crytodactylus Exercitus)

ಇತ್ತೀಚಿಗೆ ಹರ್ಪಿಟಾಲಜಿಸ್ಟ್ ಗಳ ತಂಡವು ಮೇಘಾಲಯದ ಉಮ್ರೋಯ್ ಮಿಲಿಟರಿ ಸ್ಟೇಷನ್‌ನ ಕಾಡು ಭಾಗದಲ್ಲಿ ‘ಬೆಂಟ್-ಟೋಡ್ ಗೆಕ್ಕೊ’ (Bent-Toed Gecko)ಎಂಬ ಹಲ್ಲಿಯ ಹೊಸ ಜಾತಿಯನ್ನು ಕಂಡುಹಿಡಿದಿದೆ.

  1. ಈ ಜಾತಿಯ ವೈಜ್ಞಾನಿಕ ಹೆಸರು ‘ಕ್ರಿಟೊಡಾಕ್ಟಿಲಸ್ ಎಕ್ಸರ್ಸಿಟಸ್’ (Crytodactylus Exercitus)  ಮತ್ತು ಇದರ ಇಂಗ್ಲಿಷ್ ಹೆಸರು ‘ಇಂಡಿಯನ್ ಆರ್ಮಿಯ ಬೆಂಟ್-ಟೋಡ್ ಗೆಕ್ಕೊ'(Indian Army’s Bent-Toed Gecko).
  2. ಭಾರತದಲ್ಲಿ ಈಗ 40 ಪ್ರಬೇಧದ ‘ಬೆಂಟ್-ಟೋಡ್ ಗೆಕ್ಕೋಗಳನ್ನು ಗುರುತಿಸಲಾಗಿದೆ, ಅವುಗಳಲ್ಲಿ 16 ಜಾತಿಗಳು ಈಶಾನ್ಯದಲ್ಲಿ ಕಂಡುಬರುತ್ತವೆ.

Current Affairs

ಗ್ರೇಟ್ ಬ್ಯಾಕ್‌ಯಾರ್ಡ್ ಬರ್ಡ್ ಕೌಂಟ್ (GBBC):

(Great Backyard Bird Count)

ಗ್ರೇಟ್ ಬ್ಯಾಕ್‌ಯಾರ್ಡ್ ಬರ್ಡ್ ಕೌಂಟ್ (GBBC) ಜಾಗತಿಕ ಕಾರ್ಯಕ್ರಮವಾಗಿದ್ದು, ಫೆಬ್ರವರಿ 18 ರಿಂದ 21 ರವರೆಗೆ ನಾಲ್ಕು ದಿನಗಳ ಕಾಲ ವಿಶ್ವದಾದ್ಯಂತ ನಡೆಯಲಿದೆ ಮತ್ತು ಅದರ ಅಡಿಯಲ್ಲಿ ಸಂಗ್ರಹಿಸಿದ ಡೇಟಾವನ್ನು ‘ಸಂರಕ್ಷಣಾ’ ಕಾರ್ಯಕ್ಕಾಗಿ ಬಳಸಲಾಗುತ್ತದೆ.

  1. ಇದು ಆನ್‌ಲೈನ್ ‘ನಾಗರಿಕ ವಿಜ್ಞಾನ’ ಅಥವಾ ‘ಸಮುದಾಯ ವಿಜ್ಞಾನ’ ಯೋಜನೆಯಾಗಿದ್ದು 1998 ರಲ್ಲಿ ‘ಕಾರ್ನೆಲ್ ಲ್ಯಾಬ್ ಆಫ್ ಆರ್ನಿಥಾಲಜಿ’ ಮತ್ತು ‘ನ್ಯಾಷನಲ್ ಆಡುಬನ್ ಸೊಸೈಟಿ’ ಮೂಲಕ ಪ್ರಾರಂಭಿಸಲಾಯಿತು.
  2. ಭಾರತದಲ್ಲಿ ಇದನ್ನು ‘ಇ-ಬರ್ಡ್ ಇಂಡಿಯಾ’ ಮತ್ತು ‘ಬರ್ಡ್‌ಕೌಂಟ್-ಇಂಡಿಯಾ’ ಸಂಘಟಿಸುತ್ತಿದೆ.
  3. ಈ ಕಾರ್ಯಕ್ರಮವು ಪಕ್ಷಿಗಳ ಜನಸಂಖ್ಯೆಯ ಚಿತ್ರವನ್ನು ಒದಗಿಸಲು ಸಹಾಯ ಮಾಡುತ್ತದೆ ಮತ್ತು ಪಕ್ಷಿಗಳಿಗೆ ಅದನ್ನು ಬೆಂಬಲಿಸುವ ಪರಿಸರ ವ್ಯವಸ್ಥೆಯ ಮೇಲೆ ಬೆಳಕು ಚೆಲ್ಲುತ್ತದೆ.

  • Join our Official Telegram Channel HERE for Motivation and Fast Updates
  • Subscribe to our YouTube Channel HERE to watch Motivational and New analysis videos

[ad_2]

Leave a Comment