[Mission 2022] ದೈನಂದಿನ ಪ್ರಚಲಿತ ಘಟನೆಗಳು ದಿನಾಂಕ – 24ನೇ ಜನೇವರಿ 2022 – INSIGHTSIAS

[ad_1]

 

 

ಪರಿವಿಡಿ:

 ಸಾಮಾನ್ಯ ಅಧ್ಯಯನ ಪತ್ರಿಕೆ  1 :

1. ಸುಭಾಷ್ ಚಂದ್ರ ಬೋಸ್.

 

ಸಾಮಾನ್ಯ ಅಧ್ಯಯನ ಪತ್ರಿಕೆ 2:

1. ನ್ಯಾಯಾಂಗ ನಿಂದನೆ ವಿಚಾರಣೆಯನ್ನು ಕೈಗೊಳ್ಳಲು ಅಟಾರ್ನಿ ಜನರಲ್ ರವರ ಒಪ್ಪಿಗೆ.

2. ಜಿಲ್ಲಾ ಉತ್ತಮ ಆಡಳಿತ ಸೂಚ್ಯಂಕ.

3. ಚೀನಾ,ಲಡಾಖ್‌ನ ಪ್ಯಾಂಗಾಂಗ್ ಸರೋವರದ ಮೇಲೆ ನಿರ್ಮಿಸುತ್ತಿರುವ ಸೇತುವೆಯ ಆಯಕಟ್ಟಿನ ಪ್ರಾಮುಖ್ಯತೆ.

 

ಸಾಮಾನ್ಯ ಅಧ್ಯಯನ ಪತ್ರಿಕೆ 3:

1. ಹುಲಿ ಸಂರಕ್ಷಣೆ ಕುರಿತು 4ನೇ ಏಷ್ಯಾ ಸಚಿವರ ಸಮ್ಮೇಳನ.

2. ಸರಸ್ವತಿ ನದಿಯ ಪುನರುಜ್ಜೀವನ.

 

ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ಸಂಗತಿಗಳು:

1. ಗೆರ್ಕಿನ್ಸ್.

2. ಅಬೈಡ್ ವಿತ್ ಮಿ.

3. ಜೀವಂತ ಬೇರು ಸೇತುವೆಗಳು.

 


ಸಾಮಾನ್ಯ ಅಧ್ಯಯನ ಪತ್ರಿಕೆ : 1


 

ವಿಷಯಗಳು: ಆಧುನಿಕ ಭಾರತದ ಇತಿಹಾಸ- ಹದಿನೆಂಟನೇ ಶತಮಾನದ ಮಧ್ಯಭಾಗದಿಂದ ಇಂದಿನವರೆಗಿನ- ಮಹತ್ವದ ಘಟನೆಗಳು, ವ್ಯಕ್ತಿತ್ವಗಳು, ಸಮಸ್ಯೆಗಳು.

ಸುಭಾಷ್ ಚಂದ್ರ ಬೋಸ್:


ಸಂದರ್ಭ:

ಇತ್ತೀಚೆಗೆ, ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125 ನೇ ಜನ್ಮ ವಾರ್ಷಿಕೋತ್ಸವದ ಸ್ಮರಣಾರ್ಥ ಮತ್ತು ವರ್ಷವಿಡೀ ಆಚರಣೆಗಳ ಭಾಗವಾಗಿ ಇಂಡಿಯಾ ಗೇಟ್‌ನಲ್ಲಿ ಅವರ ಭವ್ಯವಾದ ಪ್ರತಿಮೆಯನ್ನು ಸ್ಥಾಪಿಸಲು ಸರ್ಕಾರವು ನಿರ್ಧರಿಸಿದೆ.

ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಬಗ್ಗೆ:

ಸುಭಾಷ್ ಚಂದ್ರ ಬೋಸ್ ಅವರು 23 ಜನವರಿ 1897 ರಂದು ಅಂದಿನ ಬಂಗಾಳ ಪ್ರಾಂತ್ಯದ ಒರಿಸ್ಸಾ ವಿಭಾಗದ ಕಟಕ್ ನಗರದಲ್ಲಿ ಜನಿಸಿದರು.

ಅವರ ಜನ್ಮದಿನವಾದ ಜನವರಿ 23 ಅನ್ನು ಪರಾಕ್ರಮ್ ದಿವಸ್’ ಎಂದು ಆಚರಿಸಲಾಗುತ್ತದೆ.

  1. ಸುಭಾಷ್ ಚಂದ್ರ ಬೋಸ್ ಎರಡು ಬಾರಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾಗಿ (1938-ಹರಿಪುರ ಮತ್ತು 1939-ತ್ರಿಪುರಿ) ಆಯ್ಕೆಯಾಗಿದ್ದರು.
  2. ಅವರು 1939 ರಲ್ಲಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಬಂಗಾಳದಲ್ಲಿ ಕಾಂಗ್ರೆಸ್ ನ ಒಳಗೆ ಅಖಿಲ ಭಾರತ ಫಾರ್ವರ್ಡ್ ಬ್ಲಾಕ್ ಅನ್ನು ಸಂಘಟಿಸಿದರು.
  3. 1919 ರಲ್ಲಿ, ಅವರು ಭಾರತೀಯ ನಾಗರಿಕ ಸೇವೆಗಳ (ICS) ಪರೀಕ್ಷೆಯಲ್ಲಿ ಉತ್ತೀರ್ಣರಾದರು, ಆದಾಗ್ಯೂ, ಬೋಸ್ ಅವರು ನಂತರ ಕೆಲಸಕ್ಕೆ ರಾಜೀನಾಮೆ ನೀಡಿದರು.
  4. ಅವರು ವಿವೇಕಾನಂದರ ಬೋಧನೆಗಳಿಂದ ಹೆಚ್ಚು ಪ್ರಭಾವಿತರಾಗಿದ್ದರು ಮತ್ತು ಅವರನ್ನು ತಮ್ಮ ಆಧ್ಯಾತ್ಮಿಕ ಗುರು ಎಂದು ಪರಿಗಣಿಸಿದರು.
  5. ಚಿತ್ತರಂಜನ್ ದಾಸ್ ಅವಾರ ರಾಜಕೀಯ ಗುರುಗಳಾಗಿದ್ದರು.

ಆಜಾದ್ ಹಿಂದ್ ಸರ್ಕಾರದ ಬಗ್ಗೆ:

ಎರಡನೇ ವಿಶ್ವಯುದ್ಧದ ಸಮಯದಲ್ಲಿ ಜಪಾನ್ ವಶಪಡಿಸಿಕೊಂಡಿದ್ದ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳನ್ನು ಆಜಾದ್ ಹಿಂದ್ ಸರ್ಕಾರಕ್ಕೆ ಹಸ್ತಾಂತರಿಸಿದ ನಂತರ ಬೋಸ್ ರವರು  ಪೋರ್ಟ್ ಬ್ಲೇರ್, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಿಗೆ 1943ರಲ್ಲಿ ಆಗಮಿಸಿದ್ದರು.

  1. ನೇತಾಜಿ ಸುಭಾಷ್ ಚಂದ್ರ ಬೋಸ್ ಸಿಂಗಾಪುರದಲ್ಲಿ ತಮ್ಮ ಆಜಾದ್ ಹಿಂದ್ ನ ತಾತ್ಕಾಲಿಕ ಸರ್ಕಾರವನ್ನು ಸ್ಥಾಪಿಸುವುದಾಗಿ ಘೋಷಿಸಿದ್ದರು.
  2. ಅರ್ಜಿ ಹುಕುಮಾತ್-ಎ-ಆಜಾದ್ ಹಿಂದ್ ಎಂದು ಕರೆಯಲ್ಪಡುವ ಇದನ್ನು ಆಕ್ಸಿಸ್ ಬಣದ ಇಂಪೀರಿಯಲ್ ಜಪಾನ್, ನಾಜಿ ಜರ್ಮನಿ, ಇಟಾಲಿಯನ್ ಸೋಷಿಯಲ್ ರಿಪಬ್ಲಿಕ್ ಮತ್ತು ಅವುಗಳ ಮಿತ್ರ ರಾಷ್ಟ್ರಗಳು ಬೆಂಬಲಿಸಿದವು.
  3. ಎರಡನೆಯ ಮಹಾಯುದ್ಧದ ನಂತರದಲ್ಲಿ ದೇಶಭ್ರಷ್ಟ ಸರ್ಕಾರ ಅಥವಾ ಗಡಿಪಾರಿನಲ್ಲಿರುವ –ತಾತ್ಕಾಲಿಕ ಸರ್ಕಾರ– ಎಂಬ ಹೆಸರಿನಲ್ಲಿ ಅವರು ಭಾರತವನ್ನು ಬ್ರಿಟಿಷ್ ಆಡಳಿತದಿಂದ ಮುಕ್ತಗೊಳಿಸುವ ಹೋರಾಟವನ್ನು ಪ್ರಾರಂಭಿಸಿದ್ದರು.

ಇದರಲ್ಲಿ ಭಾಗಿಯಾದವರು?

ಇವರ ನೇತೃತ್ವದ ತಾತ್ಕಾಲಿಕ ಸರ್ಕಾರದ ಅಡಿಯಲ್ಲಿ, ವಿದೇಶದಲ್ಲಿ ವಾಸಿಸುವ ಭಾರತೀಯರು ಒಂದುಗೂಡಿದರು.ಭಾರತೀಯ ರಾಷ್ಟ್ರೀಯ ಸೇನೆಯು ಮಲಯ (ಇಂದಿನ ಮಲೇಷ್ಯಾ) ಮತ್ತು ಬರ್ಮಾದಲ್ಲಿದ್ದ (ಈಗಿನ ಮ್ಯಾನ್ಮಾರ್) ಭಾರತೀಯ ವಲಸಿಗ ಜನಸಂಖ್ಯೆಯಿಂದ ಮಾಜಿ ಕೈದಿಗಳು ಮತ್ತು ಸಾವಿರಾರು ಸ್ವಯಂಸೇವಕರನ್ನು ಸೆಳೆಯಿತು.

  1. ತಾತ್ಕಾಲಿಕ ಸರ್ಕಾರದಲ್ಲಿ, ಬೋಸ್ ರವರು ರಾಷ್ಟ್ರದ ಮುಖ್ಯಸ್ಥ, ಪ್ರಧಾನಿ ಮತ್ತು ಯುದ್ಧ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವರಾಗಿದ್ದರು.
  2. ಕ್ಯಾಪ್ಟನ್ ಲಕ್ಷ್ಮಿ ಸೆಹೆಗಲ್ ಮಹಿಳಾ ಸಂಘಟನೆಯ ನೇತೃತ್ವ ವಹಿಸಿದರೆ, ಎಸ್ ಎ ಅಯ್ಯರ್ ರವರು ಪ್ರಚಾರ ತಂತ್ರ ವಿಭಾಗದ ಮುಖ್ಯಸ್ಥರಾಗಿದ್ದರು.
  3. ಕ್ರಾಂತಿಕಾರಿ ನಾಯಕ ರಾಸ್ ಬಿಹಾರಿ ಬೋಸ್ ಅವರನ್ನು ಸರ್ವೋಚ್ಚ ಸಲಹೆಗಾರರನ್ನಾಗಿ ನೇಮಿಸಲಾಯಿತು.

ಸುಭಾಷ್ ಚಂದ್ರ ಬೋಸ್ ಆಪದಾ ಪ್ರಬಂಧನ್ ಪುರಸ್ಕಾರ:

ದೇಶದಲ್ಲಿ ವಿಪತ್ತು ನಿರ್ವಹಣಾ ಕ್ಷೇತ್ರದಲ್ಲಿ ವೈಯಕ್ತಿಕ ಮತ್ತು ಸಂಸ್ಥೆಗಳು ಸಲ್ಲಿಸಿದ ಅಮೂಲ್ಯ ಕೊಡುಗೆ ಮತ್ತು ನಿಸ್ವಾರ್ಥ ಸೇವೆಯನ್ನು ಗುರುತಿಸಲು ಮತ್ತು ಗೌರವಿಸಲು, ಭಾರತ ಸರ್ಕಾರವು ಸುಭಾಸ್ ಚಂದ್ರ ಬೋಸ್ ಆಪದಾ ಪ್ರಬಂಧನ್ ಪುರಸ್ಕಾರ ಎಂಬ ವಾರ್ಷಿಕ ಪ್ರಶಸ್ತಿಯನ್ನು ಸ್ಥಾಪಿಸಿದೆ.

  1. ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನವಾದ ಜನವರಿ 23 ರಂದು ಪ್ರತಿ ವರ್ಷ ಪ್ರಶಸ್ತಿಯನ್ನು ಘೋಷಿಸಲಾಗುತ್ತದೆ.
  2. ಸಂಸ್ಥೆ ಹಾಗೂ ವ್ಯಕ್ತಿಗತ ವಿಭಾಗದಲ್ಲಿ ಪ್ರಶಸ್ತಿಯನ್ನು ನೀಡಲಾಗುತ್ತದೆ. ಪ್ರಶಸ್ತಿ ಮೊತ್ತವು ಸಂಸ್ಥೆಗಳಿಗೆ 51 ಲಕ್ಷ, ಹಾಗೂ ಪ್ರಮಾಣ ಪತ್ರ ಮತ್ತು ವ್ಯಕ್ತಿಗಳಿಗೆ ರೂ.5 ಲಕ್ಷ ನಗದು ಹಾಗೂ ಪ್ರಮಾಣ ಪತ್ರವನ್ನು ನೀಡಲಾಗುತ್ತದೆ.
  3. 2022 ನೇ ಸಾಲಿನ ‘ಸುಭಾಷ್ ಚಂದ್ರ ಬೋಸ್ ಆಪದಾ ಪ್ರಬಂಧನ್ ಪುರಸ್ಕಾರ್’ ಪ್ರಶಸ್ತಿಗೆ ಗುಜರಾತ್ ಪ್ರಾಕೃತಿಕ ವಿಕೋಪ ನಿರ್ವಹಣಾ ಸಂಸ್ಥೆ ಮತ್ತು ಸಿಕ್ಕಿಂ ಪ್ರಾಕೃತಿಕ ವಿಕೋಪ ಪ್ರಾಧಿಕಾರದ ಉಪಾಧ್ಯಕ್ಷ ವಿನೋದ್ ಶರ್ಮ ಅವರನ್ನು ಆಯ್ಕೆ ಮಾಡಲಾಗಿದೆ.

 


ಸಾಮಾನ್ಯ ಅಧ್ಯಯನ ಪತ್ರಿಕೆ : 2


 

ವಿಷಯಗಳು: ಭಾರತೀಯ ಸಂವಿಧಾನ- ಐತಿಹಾಸಿಕ ಆಧಾರಗಳು, ವಿಕಸನ, ವೈಶಿಷ್ಟ್ಯಗಳು, ತಿದ್ದುಪಡಿಗಳು, ಮಹತ್ವದ ನಿಬಂಧನೆಗಳು ಮತ್ತು ಮೂಲ ರಚನೆ.

ನ್ಯಾಯಾಂಗ ನಿಂದನೆ ವಿಚಾರಣೆಯನ್ನು ಕೈಗೊಳ್ಳಲು ಅಟಾರ್ನಿ ಜನರಲ್ ರವರ ಒಪ್ಪಿಗೆ:


(Consent of AG to initiate Contempt Proceedings)

ಸಂದರ್ಭ:

ಇತ್ತೀಚೆಗಷ್ಟೇ ಭಾರತದ ಅಟಾರ್ನಿ ಜನರಲ್ ‘ಕೆಕೆ ವೇಣುಗೋಪಾಲ್’ ಅವರು ‘ಧರ್ಮ ಸಂಸದ್’ ನಾಯಕ ಯತಿ ನರಸಿಂಹಾನಂದರ ವಿರುದ್ಧ ಸಂವಿಧಾನ ಮತ್ತು ಸುಪ್ರೀಂ ಕೋರ್ಟ್‌ನ ವಿರುದ್ಧ ಹೇಳಿಕೆ ನೀಡಿದ್ದಕ್ಕಾಗಿ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸಲು ಒಪ್ಪಿಗೆ ನೀಡಿದ್ದಾರೆ.

ಒಪ್ಪಿಗೆಯ ಅಗತ್ಯತೆ:

ಈ ಒಪ್ಪಿಗೆಯನ್ನು, ನ್ಯಾಯಾಂಗ ನಿಂದನೆ ಕಾಯಿದೆ 1971 ರ ಸೆಕ್ಷನ್ 15 ರ ಅಡಿಯಲ್ಲಿ ನ್ಯಾಯಾಂಗ ನಿಂದನೆ ಮೊಕದ್ದಮೆಯನ್ನು ಆರಂಭಿಸಲು ಒಪ್ಪಿಗೆ ನೀಡಲಾಗಿದೆ, 1975 ರ ಸುಪ್ರೀಂ ಕೋರ್ಟ್ ನಿಂದನೆಗಾಗಿ ಕಾರ್ಯವಿಧಾನಗಳನ್ನು ನಿಯಂತ್ರಿಸುವ ನಿಯಮಗಳ ನಿಯಮ 3 (ಸಿ) ಯ ಅಡಿಯಲ್ಲಿ ನೀಡಲಾಗಿದೆ.

ನ್ಯಾಯಾಂಗ ನಿಂದನೆ ಕಾಯಿದೆ, 1971 ರ ಸೆಕ್ಷನ್ 15 ರ ಪ್ರಕಾರ, ಅಟಾರ್ನಿ ಜನರಲ್ ಆಫ್ ಇಂಡಿಯಾ ಅಥವಾ ಸಾಲಿಸಿಟರ್ ಜನರಲ್ ಅವರ ಅನುಮತಿಯು ಸುಪ್ರೀಂ ಕೋರ್ಟ್‌ನಲ್ಲಿ ಕ್ರಿಮಿನಲ್ ನಿಂದನೆ ಪ್ರಕ್ರಿಯೆಗಳನ್ನು ಪ್ರಾರಂಭಿಸಲು ಕಡ್ಡಾಯ ಷರತ್ತಾಗಿದೆ.

ಏನದು ನ್ಯಾಯಾಂಗ ನಿಂದನೆ ಕಾನೂನು?

ನ್ಯಾಯಾಲಯಗಳ ನಿಂದನೆ ಕಾಯ್ದೆ 1971 ನಾಗರಿಕ ಮತ್ತು ಕ್ರಿಮಿನಲ್ ನ್ಯಾಯಾಂಗ ನಿಂದನೆಯನ್ನು ವ್ಯಾಖ್ಯಾನಿಸುತ್ತದೆ, ಮತ್ತು ನ್ಯಾಯಾಲಯಗಳು ನಿಂದನೆ ಮಾಡಿದ್ದಕ್ಕೆ ಶಿಕ್ಷೆ ವಿಧಿಸುವ ಅಧಿಕಾರಗಳು ಮತ್ತು ಕಾರ್ಯವಿಧಾನಗಳನ್ನು ಮತ್ತು ನ್ಯಾಯಾಲಯಗಳ ಘನತೆಗೆ ಧಕ್ಕೆ ತಂದ ಅಪರಾಧಕ್ಕೆ ಶಿಕ್ಷೆಯನ್ನು ವಿಧಿಸಬಹುದು.

  1. ನ್ಯಾಯಾಲಯದ ನಿಂದನೆಯು ನ್ಯಾಯಾಲಯದ ಅಧಿಕಾರ ಮತ್ತು ನ್ಯಾಯ ಮತ್ತು ಘನತೆಯನ್ನು ವಿರೋಧಿಸುವ ಅಥವಾ ಧಿಕ್ಕರಿಸುವ ವರ್ತನೆಯ ರೂಪದಲ್ಲಿ ನ್ಯಾಯಾಲಯ ಮತ್ತು ಅದರ ನ್ಯಾಯಿಕ ಅಧಿಕಾರಿಗಳಿಗೆ ಅವಿಧೇಯತೆ ಅಥವಾ ಅಗೌರವ ತೋರುವ ಅಪರಾಧವಾಗಿದೆ.

ನ್ಯಾಯಾಂಗ ನಿಂದನೆಯ ಪ್ರಕ್ರಿಯೆಯನ್ನು ಆರಂಭಿಸಲು ಅಟಾರ್ನಿ ಜನರಲ್ ರವರ ಒಪ್ಪಿಗೆ ಏಕೆ ಬೇಕು?

ದೂರಿನ ತಿರುಳನ್ನು ತಿಳಿದುಕೊಳ್ಳುವ ಮೊದಲು ಅಟಾರ್ನಿ ಜನರಲ್ ಒಪ್ಪಿಗೆ ಪಡೆಯುವ ಹಿಂದಿನ ಉದ್ದೇಶವೆಂದರೆ ನ್ಯಾಯಾಲಯದ ಸಮಯವನ್ನು ಉಳಿಸುವುದು.

  1. ಕ್ಷುಲ್ಲಕ ಅರ್ಜಿಗಳನ್ನು ಸಲ್ಲಿಸಿ ನ್ಯಾಯಾಂಗದ ಸಮಯವನ್ನು ಹಾಳುಮಾಡಲಾಗುತ್ತದೆ ಮತ್ತು ನ್ಯಾಯಾಲಯವು ಅಂತಹ ಅರ್ಜಿಗಳ ವಿಚಾರಣೆ ಮಾಡುವ ಮೊದಲ ವೇದಿಕೆಯಾಗಿದೆ.
  2. A-G ಯವರ ಒಪ್ಪಿಗೆಯನ್ನು ಕ್ಷುಲ್ಲಕ ಅರ್ಜಿಗಳ ವಿರುದ್ಧದ ರಕ್ಷಣೆ ಎಂದು ಅರ್ಥೈಸಲಾಗುತ್ತದೆ, ಏಕೆಂದರೆ A-G, ನ್ಯಾಯಾಲಯದ ಅಧಿಕಾರಿಯಾಗಿ, ನೀಡಲಾದ ದೂರು ನಿಜಕ್ಕೂ ಮಾನ್ಯವಾಗಿದೆಯೇ ಎಂದು ಸ್ವತಂತ್ರವಾಗಿ ನಿರ್ಧರಿಸುತ್ತಾರೆ.

ಯಾವ ಸಂದರ್ಭಗಳಲ್ಲಿ ಅಟಾರ್ನಿ ಜನರಲ್ ರವರ ಒಪ್ಪಿಗೆಯ ಅಗತ್ಯವಿಲ್ಲ?

ಒಬ್ಬ ಖಾಸಗಿ ನಾಗರಿಕನು ಇನ್ನೋರ್ವ ವ್ಯಕ್ತಿಯ ವಿರುದ್ಧ ನ್ಯಾಯಾಂಗ ನಿಂದನೆಯ ಪ್ರಕರಣವನ್ನು ಪ್ರಾರಂಭಿಸಲು ಬಯಸಿದಾಗ A-G ಒಪ್ಪಿಗೆ ಪಡೆಯುವುದು ಕಡ್ಡಾಯವಾಗಿದೆ.

ಆದಾಗ್ಯೂ, ನ್ಯಾಯಾಲಯವು ಸ್ವತಃ ನ್ಯಾಯಾಂಗ ನಿಂದನೆಯ ಪ್ರಕರಣವನ್ನು ಆರಂಭಿಸಿದರೆ ಎಜಿಯ ಒಪ್ಪಿಗೆ ಪಡೆಯುವ ಅಗತ್ಯವಿಲ್ಲ.

  1. ಏಕೆಂದರೆ ನ್ಯಾಯಾಲಯವು ನ್ಯಾಯಾಂಗದ ನಿಂದನೆ ಗಾಗಿ ಶಿಕ್ಷೆ ವಿಧಿಸಲು ಸಂವಿಧಾನ ದತ್ತವಾಗಿ ನೀಡಲಾಗಿರುವ ತನ್ನ ಅಂತರ್ಗತ ಅಧಿಕಾರವನ್ನು ಚಲಾಯಿಸುತ್ತಿದೆ ಮತ್ತು ಅಂತಹ ಸಾಂವಿಧಾನಿಕ ಅಧಿಕಾರಗಳನ್ನು ನಿರ್ಬಂಧಿಸಲಾಗುವುದಿಲ್ಲ ಏಕೆಂದರೆ A-G ಒಪ್ಪಿಗೆ ನೀಡಲು ನಿರಾಕರಿಸಿದರೆ ಎಂಬ ಅಂಶವನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಸಾಂವಿಧಾನಿಕ ಪ್ರಾವಧಾನವನ್ನು ನೀಡಲಾಗಿದೆ.

ಒಂದು ವೇಳೆ ಅಟಾರ್ನಿ ಜನರಲ್ ಒಪ್ಪಿಗೆ ನೀಡುವುದನ್ನು ನಿರಾಕರಿಸಿದರೆ ಆಗುವ ಪರಿಣಾಮವೇನು?

AG ಒಪ್ಪಿಗೆಯನ್ನು ನಿರಾಕರಿಸಿದರೆ, ವಿಷಯವು ಅಲ್ಲಿಯೇ ಕೊನೆಗೊಳ್ಳುತ್ತದೆ.

ಆದಾಗ್ಯೂ, ದೂರುದಾರರು ಪ್ರತ್ಯೇಕವಾಗಿ ಈ ವಿಷಯವನ್ನು ನ್ಯಾಯಾಲಯದ ಗಮನಕ್ಕೆ ತರಬಹುದು ಮತ್ತು ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಳ್ಳುವಂತೆ ನ್ಯಾಯಾಲಯವನ್ನು ಒತ್ತಾಯಿಸಬಹುದು.

  1. ಸಂವಿಧಾನದ 129 ನೇ ವಿಧಿಯು ಸುಪ್ರೀಂ ಕೋರ್ಟ್‌ಗೆ ಸ್ವಂತವಾಗಿ ನ್ಯಾಯಾಂಗ ನಿಂದನೆ ಪ್ರಕರಣಗಳನ್ನು ಪ್ರಾರಂಭಿಸುವ ಅಧಿಕಾರವನ್ನು ನೀಡುತ್ತದೆ, ಈ ಪ್ರಕ್ರಿಯೆಯು AG ಅಥವಾ AG ಯ ಒಪ್ಪಿಗೆಯೊಂದಿಗೆ ಅದರ ಮುಂದೆ ತರುವ ನಿರ್ಣಯದಿಂದ ಸ್ವತಂತ್ರವಾಗಿದೆ.

 

ವಿಷಯಗಳು: ಆಡಳಿತ, ಪಾರದರ್ಶಕತೆ ಮತ್ತು ಹೊಣೆಗಾರಿಕೆ, ಇ-ಆಡಳಿತ – ಅನ್ವಯಗಳು, ಮಾದರಿಗಳು, ಯಶಸ್ಸುಗಳು, ಮಿತಿಗಳು ಮತ್ತು ಭವಿಷ್ಯದ ಪ್ರಮುಖ ಅಂಶಗಳು; ನಾಗರಿಕರ ಸನ್ನದು, ಪಾರದರ್ಶಕತೆ ಮತ್ತು ಉತ್ತರದಾಯಿತ್ವ ಮತ್ತು ಸಾಂಸ್ಥಿಕ ಮತ್ತು ಇತರ  ಕ್ರಮಗಳು.

ಜಿಲ್ಲಾ ಉತ್ತಮ ಆಡಳಿತ ಸೂಚ್ಯಂಕ:


(District Good Governance Index)

ಸಂದರ್ಭ:

ಇತ್ತೀಚೆಗೆ, ಕೇಂದ್ರ ಗೃಹ ಸಚಿವ ಅಮಿತ್ ಶಾ ಜಮ್ಮು ಮತ್ತು ಕಾಶ್ಮೀರದಲ್ಲಿ ‘ಜಿಲ್ಲಾ ಉತ್ತಮ ಆಡಳಿತ ಸೂಚ್ಯಂಕ’ (District Good Governance Index – DGGI)ವನ್ನು ಬಿಡುಗಡೆ ಮಾಡಿದರು.

ಜಮ್ಮು ಮತ್ತು ಕಾಶ್ಮೀರ, ಇಂತಹ ಸೂಚ್ಯಂಕವನ್ನು ಬಿಡುಗಡೆ ಮಾಡಿದ ಭಾರತದ ಮೊದಲ ಕೇಂದ್ರಾಡಳಿತ ಪ್ರದೇಶವಾಗಿದೆ.

ಜಿಲ್ಲಾ ಉತ್ತಮ ಆಡಳಿತ ಸೂಚ್ಯಂಕ(DGGI) ಕುರಿತು:

ಈ ಸೂಚ್ಯಂಕವನ್ನು ಜಮ್ಮು ಮತ್ತು ಕಾಶ್ಮೀರದ 20 ಜಿಲ್ಲೆಗಳಿಗೆ ಬಿಡುಗಡೆ ಮಾಡಲಾಗಿದೆ.

ಈ ಸೂಚ್ಯಂಕವನ್ನು ಜಮ್ಮು ಮತ್ತು ಕಾಶ್ಮೀರ ಸರ್ಕಾರದ ಸಹಭಾಗಿತ್ವದಲ್ಲಿ ಆಡಳಿತ ಸುಧಾರಣೆಗಳು ಮತ್ತು ಸಾರ್ವಜನಿಕ ಕುಂದುಕೊರತೆಗಳ ಇಲಾಖೆ (DARPG) ಯು ಸಿದ್ಧಪಡಿಸಿದೆ.

ಸೂಚ್ಯಂಕದ ಅಡಿಯಲ್ಲಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನೀತಿಗಳು, ಯೋಜನೆಗಳು ಮತ್ತು ಕಾರ್ಯಕ್ರಮಗಳ ಮೇಲ್ವಿಚಾರಣೆಯನ್ನು ಜಿಲ್ಲಾಮಟ್ಟದಲ್ಲಿ ಮಾಡಲಾಗುತ್ತದೆ.

ಸೂಚ್ಯಂಕದ ಪ್ರಾಮುಖ್ಯತೆ:

J&K ನಲ್ಲಿ ಪ್ರಾರಂಭವಾದ ನಂತರ, ಈ ಸೂಚ್ಯಂಕವು ಇತರ ಎಲ್ಲಾ ರಾಜ್ಯಗಳಿಗೆ ನಿಧಾನವಾಗಿ ಮತ್ತು ಕ್ರಮೇಣವಾಗಿ ವಿಸ್ತರಿಸುತ್ತದೆ ಮತ್ತು ದೇಶದ ಪ್ರತಿ ಜಿಲ್ಲೆಯಲ್ಲೂ ಜನಾಧಾರಿತ ಉತ್ತಮ ಆಡಳಿತ ನೀಡಲು ಆರೋಗ್ಯಕರ ಪೈಪೋಟಿಯೂ ಆರಂಭವಾಗಲಿದೆ.

J&K ಜಿಲ್ಲಾ ಉತ್ತಮ ಆಡಳಿತ ಸೂಚ್ಯಂಕವು ಆಡಳಿತದ 10 ಕ್ಷೇತ್ರಗಳು ಮತ್ತು 58 ಸೂಚಕಗಳನ್ನು ಒಳಗೊಂಡಿದೆ.

ಈ ಗುಡ್ ಗವರ್ನೆನ್ಸ್ ಇಂಡೆಕ್ಸ್ ಮೂಲಕ ಕೇಂದ್ರಾಡಳಿತ ಪ್ರದೇಶದ ಜಿಲ್ಲೆಗಳ ನಡುವಿನ ಸ್ಪರ್ಧೆಯು ಜಮ್ಮು ಮತ್ತು ಕಾಶ್ಮೀರದ ಸಾಮಾನ್ಯ ಜನರಿಗೆ ಹೆಚ್ಚಿನ ಪ್ರಯೋಜನವನ್ನು ನೀಡುತ್ತದೆ. ಇದು ಸೇವೆಗಳ ಗುಣಮಟ್ಟವನ್ನು ಸುಧಾರಿಸುತ್ತದೆ ಮತ್ತು ಇದು J&K ನಲ್ಲಿ ದೊಡ್ಡ ಬದಲಾವಣೆಯನ್ನು ತರುತ್ತದೆ.

ಸೂಚ್ಯಂಕದ ಪ್ರಮುಖ ಅಂಶಗಳು:

  1. ‘ಜಿಲ್ಲಾ ಉತ್ತಮ ಆಡಳಿತ ಸೂಚ್ಯಂಕ’ (DGGI) ನ ಒಟ್ಟಾರೆ ಶ್ರೇಯಾಂಕದಲ್ಲಿ, ‘ಜಮ್ಮು ಜಿಲ್ಲೆ’ ಅಗ್ರಸ್ಥಾನದಲ್ಲಿದೆ, ಜಮ್ಮು ವಿಭಾಗದ ದೋಡಾ ಮತ್ತು ಸಾಂಬಾ ಜಿಲ್ಲೆಗಳು ನಂತರದ ಸ್ಥಾನದಲ್ಲಿವೆ.
  2. ಇದರ ನಂತರ, ಶ್ರೀನಗರ ವಿಭಾಗದ ಪುಲ್ವಾಮಾ ಜಿಲ್ಲೆ ನಾಲ್ಕನೇ ಸ್ಥಾನದಲ್ಲಿ ಮತ್ತು ಶ್ರೀನಗರ ಜಿಲ್ಲೆ ಐದನೇ ಸ್ಥಾನದಲ್ಲಿದೆ.
  3. ರಾಜೌರಿ ಜಿಲ್ಲೆ ಸೂಚ್ಯಂಕದಲ್ಲಿ ಕೊನೆಯ ಸ್ಥಾನದಲ್ಲಿದ್ದರೆ, ಪೂಂಚ್ ಮತ್ತು ಶೋಪಿಯಾನ್ ಜಿಲ್ಲೆಗಳು ಸಹ ಶ್ರೇಯಾಂಕದ ಕೆಳಭಾಗದಲ್ಲಿ ಸ್ಥಾನ ಪಡೆದಿವೆ.
  4. ಶ್ರೀನಗರ ಜಿಲ್ಲೆ ‘ಸಾರ್ವಜನಿಕ ಮೂಲಸೌಕರ್ಯ ಮತ್ತು ಉಪಯುಕ್ತತೆ ವಲಯ’ದಲ್ಲಿ ಮೊದಲ ಸ್ಥಾನವನ್ನು ಪಡೆದುಕೊಂಡಿದೆ.
  5. ‘ಕಾಶ್ಮೀರ ವಿಭಾಗ’ದಲ್ಲಿರುವ ಶ್ರೀನಗರ ಜಿಲ್ಲೆ 5.313 ಅಂಕಗಳೊಂದಿಗೆ ‘ಉತ್ತಮ ಆಡಳಿತ ಸೂಚ್ಯಂಕ’ದ ಒಟ್ಟಾರೆ ಶ್ರೇಯಾಂಕದಲ್ಲಿ ಅಗ್ರ 5 ಜಿಲ್ಲೆಗಳಲ್ಲಿ ಒಂದಾಗಿದೆ.

ನ್ಯಾಷನಲ್ ಗುಡ್ ಗವರ್ನೆನ್ಸ್ ಇಂಡೆಕ್ಸ್’ ನಲ್ಲಿ J&K ನ ಕಾರ್ಯಕ್ಷಮತೆ:

ಇದಕ್ಕೂ ಮುನ್ನ ಕಳೆದ ವರ್ಷ ಡಿಸೆಂಬರ್ 25ರಂದು ಕೇಂದ್ರ ಸರ್ಕಾರವು ‘ರಾಷ್ಟ್ರೀಯ ಉತ್ತಮ ಆಡಳಿತ ಸೂಚ್ಯಂಕ’ (National Good Governance Index) ವನ್ನು ಬಿಡುಗಡೆ ಮಾಡಿತ್ತು.

  1. ಉತ್ತಮ ಆಡಳಿತ ಸೂಚ್ಯಂಕ-2021 ರ ಪ್ರಕಾರ, ಜಮ್ಮು ಮತ್ತು ಕಾಶ್ಮೀರವು 2019 ರಿಂದ 2021 ರ ಅವಧಿಯಲ್ಲಿ ಉತ್ತಮ ಆಡಳಿತ ಸೂಚಕಗಳಲ್ಲಿ 3.7 ಶೇಕಡಾ ಹೆಚ್ಚಳವನ್ನು ದಾಖಲಿಸಿದೆ.
  2. ರಾಜ್ಯವು ವಾಣಿಜ್ಯ ಮತ್ತು ಕೈಗಾರಿಕೆ, ಕೃಷಿ ಮತ್ತು ಸಂಬಂಧಿತ ವಲಯಗಳು, ಸಾರ್ವಜನಿಕ ಮೂಲಸೌಕರ್ಯ ಮತ್ತು ಉಪಯುಕ್ತತೆಗಳು, ನ್ಯಾಯಾಂಗ ಮತ್ತು ಸಾರ್ವಜನಿಕ ಭದ್ರತೆಯಲ್ಲಿ ಘನ ಸಾಧನೆಯನ್ನು ಕಂಡಿದೆ.

 

ವಿಷಯಗಳು: ಭಾರತ ಮತ್ತು ನೆರೆಹೊರೆ ದೇಶಗಳೊಂದಿಗೆ ಅದರ ಸಂಬಂಧಗಳು.

ಚೀನಾ,ಲಡಾಖ್‌ನ ಪ್ಯಾಂಗಾಂಗ್ ಸರೋವರದ ಮೇಲೆ ನಿರ್ಮಿಸುತ್ತಿರುವ ಸೇತುವೆಯ ಆಯಕಟ್ಟಿನ ಪ್ರಾಮುಖ್ಯತೆ:


(Strategic significance of bridge China is building on Pangong lake)

ಸಂದರ್ಭ:

ಪ್ಯಾಂಗೊಂಗ್ ತ್ಸೋ (Pangong Tso) ಸರೋವರದ ಮೇಲೆ ಚೀನಾ ನಿರ್ಮಿಸುತ್ತಿರುವ ಸೇತುವೆಯು ಪೂರ್ವ ಲಡಾಖ್‌ನಲ್ಲಿ ಭಾರತ ಮತ್ತು ಚೀನಾ ನಡುವಿನ ಸಂಘರ್ಷದ ಸರಣಿಗೆ ಹೊಸ ಸೇರ್ಪಡೆಯಾಗಿದೆ.

ಚೀನಾ ನಿರ್ಮಿಸುತ್ತಿರುವ ಸೇತುವೆಯು ಇರುವ ಸ್ಥಳ:

ಈ ಸೇತುವೆಯನ್ನು ಚೀನಾವು ಪಾಂಗೊಂಗ್ ತ್ಸೋ ಸರೋವರ’ದ ಉತ್ತರ ದಂಡೆಯಲ್ಲಿ ಮತ್ತು ದಕ್ಷಿಣ ದಂಡೆಯ ಚುಶುಲ್ ಉಪ-ವಲಯದಲ್ಲಿ ನಿರ್ಮಿಸುತ್ತಿದೆ.

ಸೇತುವೆಯು ಭಾರತವು ಹಕ್ಕು ಸಾಧಿಸುವ ಪ್ರದೇಶದೊಳಗಿದೆ, ಆದರೂ ಈ ಪ್ರದೇಶವು 1958 ರಿಂದ ಚೀನಾದ ನಿಯಂತ್ರಣದಲ್ಲಿದೆ.

ಭಾರತಕ್ಕೆ ಈ ಸೇತುವೆಯ ಮಹತ್ವ:

  1. ಈ ಸೇತುವೆಯು, ಸರೋವರದ ಎರಡು ದಡಗಳ ನಡುವಿನ ಕಿರಿದಾದ ಬಿಂದುಗಳಲ್ಲಿ ಪೀಪಲ್ಸ್ ಲಿಬರೇಶನ್ ಆರ್ಮಿ (PLA) ಯ ಪಡೆಗಳನ್ನು ತ್ವರಿತವಾಗಿ ಸಾಗಿಸಲು ಪ್ಯಾಂಗೊಂಗ್ ತ್ಸೊ ಸಹಾಯ ಮಾಡುತ್ತದೆ.
  2. ಕೈಲಾಸ ಪರ್ವತ ಶ್ರೇಣಿಯು ಈ ಸೇತುವೆಯ ಪಶ್ಚಿಮಕ್ಕೆ ಸುಮಾರು 35 ಕಿಮೀ ದೂರದಲ್ಲಿದೆ. ಸೇತುವೆ ನಿರ್ಮಾಣವಾದ ನಂತರ, ಚೀನಾದ ಸೈನಿಕರು ‘ಕೈಲಾಸ ಪರ್ವತ ಶ್ರೇಣಿ’ಯನ್ನು ಸುಲಭವಾಗಿ ದಾಟಲು ಸಾಧ್ಯವಾಗುತ್ತದೆ ಮತ್ತು ಅದನ್ನು ದಾಟಲು ತೆಗೆದುಕೊಳ್ಳುವ ಸಮಯ ಸುಮಾರು 12 ಗಂಟೆಗಳಿಂದ ಸುಮಾರು ನಾಲ್ಕು ಗಂಟೆಗಳಿಗೆ ಕಡಿಮೆಯಾಗುತ್ತದೆ.
  3. ಇದರಿಂದ ಈ ಪ್ರದೇಶದಲ್ಲಿ ಬೀಜಿಂಗ್ ಪ್ರತಿಪಾದಿಸುತ್ತಿರುವ ಹಕ್ಕಿಗೆ ಬಲ ಸಿಗುತ್ತದೆ.

ಪ್ಯಾಂಗೊಂಗ್ ತ್ಸೊ ಕುರಿತು:

  1. ಪ್ಯಾಂಗೊಂಗ್ ತ್ಸೊ ಎಂದರೆ ಅಕ್ಷರಶಃ “ಕಾನ್ಕ್ಲೇವ್ ಸರೋವರ” (conclave lake) ಎಂದಾಗುತ್ತದೆ. ಲಡಾಖಿ ಭಾಷೆಯಲ್ಲಿ ಪ್ಯಾಂಗೊಂಗ್ ಎಂದರೆ ಕಾನ್ಕ್ಲೇವ್ (conclave) ಮತ್ತು ಟಿಬೆಟಿಯನ್ ಭಾಷೆಯಲ್ಲಿ ತ್ಸೊ (Tso) ಎಂದರೆ ಸರೋವರ ಎಂದರ್ಥ.
  2. 14,000 ಅಡಿಗಳಷ್ಟು ಎತ್ತರದಲ್ಲಿರುವ ಈ ಸರೋವರವು ಸುಮಾರು 135 ಕಿ.ಮೀ. ವಿಸ್ತೀರ್ಣ ಹೊಂದಿದೆ.
  3. ಇದು ಟೆಥಿಸ್ ಜಿಯೋಸಿಂಕ್ಲೈನ್‌ನಿಂದ (Tethys geosyncline) ರೂಪುಗೊಂಡಿದೆ.
  4. ಕಾರಕೋರಂ ಪರ್ವತ ಶ್ರೇಣಿ ಯು ಪಂಗೊಂಗ್ ತ್ಸೊದ ಉತ್ತರ ದಂಡೆಯಲ್ಲಿ ಕೊನೆಗೊಳ್ಳುತ್ತದೆ.
  5. ವಿಶ್ವದ ಎರಡನೇ ಅತಿ ಎತ್ತರದ ಶಿಖರವಾದ K2 ಸೇರಿದಂತೆ 6,000 ಮೀಟರ್‌ಗಿಂತಲೂ ಹೆಚ್ಚಿನ ಎತ್ತರದ ಪರ್ವತಗಳನ್ನು ಹೊಂದಿರುವ ಕಾರಕೋರಂ ಪರ್ವತ ಶ್ರೇಣಿಯು ತಜಕಿಸ್ತಾನ್, ಅಫ್ಘಾನಿಸ್ತಾನ, ಪಾಕಿಸ್ತಾನ, ಚೀನಾ ಮತ್ತು ಭಾರತದ ಮೂಲಕ ಹಾದು ಹೋಗುತ್ತದೆ ಮತ್ತು ಇದು ಪಾಂಗಾಂಗ್ ತ್ಸೋದ ಉತ್ತರದ ದಂಡೆಯಲ್ಲಿ ಕೊನೆಗೊಳ್ಳುತ್ತದೆ.
  6. ಇದರ ದಕ್ಷಿಣದ ದಂಡೆಯಲ್ಲಿನ ಎತ್ತರದ ಮುರಿದ ಪರ್ವತಗಳು, ದಕ್ಷಿಣದಲ್ಲಿ ಸ್ಪಂಗೂರ್ ಸರೋವರದ (Spangur Lake) ಕಡೆಗೆ ಇಳಿಜಾರು ಹೊಂದಿದೆ.
  7. ಈ ಸರೋವರದ ನೀರು ಸ್ಫಟಿಕದಂತೆ ಸ್ಪಷ್ಟವಾಗಿದ್ದರೂ ‘ಉಪ್ಪು’ ನೀರಾಗಿರುವುದರಿಂದ ಕುಡಿಯಲು ಯೋಗ್ಯವಾಗಿಲ್ಲ.

ಈ ಪ್ರದೇಶವು ವಿವಾದಗ್ರಸ್ತವಾಗಿದೆ ಏಕೆ?

1962 ರಿಂದ ಭಾರತೀಯ ಮತ್ತು ಚೀನೀ ಸೈನಾ ಪಡೆಗಳನ್ನು ಬೇರ್ಪಡಿಸುವ ರೇಖೆಯಾದ – ವಾಸ್ತವ ನಿಯಂತ್ರಣ ರೇಖೆ (LAC) ಯು ಸಾಮಾನ್ಯವಾಗಿ ಪಾಂಗೊಂಗ್ ತ್ಸೋ (Pangong Tso)  ಸರೋವರದ ವಲಯವನ್ನು ಹೊರತುಪಡಿಸಿ ಭೂ ಗಡಿರೇಖೆಯ ಉದ್ದಕ್ಕೂ ಇದೆ. ಇಲ್ಲಿ, ನೀರಿನ ಮೂಲಕವೂ ಗಡಿಯನ್ನು ಗುರುತಿಸಲಾಗುತ್ತದೆ.

ಯಾವ ಪ್ರದೇಶ ಯಾರಿಗೆ ಸೇರಿದೆ ಎಂದು ಎರಡೂ ದೇಶದವರು ತಮ್ಮ ಪ್ರದೇಶಗಳನ್ನು ಗುರುತಿಸಿದ್ದಾರೆ.

ಭಾರತವು ಪಾಂಗೊಂಗ್ ತ್ಸೋ ವಲಯದ ಸುಮಾರು 45 ಕಿ.ಮೀ. ಪ್ರದೇಶವನ್ನು ನಿಯಂತ್ರಿಸಿದರೆ ಚೀನಾ ಉಳಿದ ಪ್ರದೇಶವನ್ನು ನಿಯಂತ್ರಿಸುತ್ತದೆ.

ಫಿಂಗರ್ಸ್ ಎಂದರೇನು?

ಸರೋವರವನ್ನು ಬೆರಳುಗಳು ( fingers )  ಎಂಬ ವಿಭಾಗಗಳಾಗಿ ವಿಂಗಡಿಸಲಾಗಿದೆ:

ಅವುಗಳಲ್ಲಿ ಎಂಟು ವಿವಾದಗ್ರಸ್ಥವಾಗಿವೆ. LAC ಎಲ್ಲಿ ಹಾದುಹೋಗುತ್ತದೆ ಎಂಬುದರ ಬಗ್ಗೆ ಭಾರತ ಮತ್ತು ಚೀನಾ ವಿಭಿನ್ನ ತಿಳುವಳಿಕೆಯನ್ನು ಹೊಂದಿವೆ.

ಪಾಂಗಾಂಗ್ ತ್ಸೋ ಸರೋವರದಲ್ಲಿ, ‘ಚಾಂಗ್ ಚೆನ್ಮೋ ಶ್ರೇಣಿಯ’ (Chang Chenmo range) ಪರ್ವತಗಳು ಚಾಚಿಕೊಂಡಿವೆ, ಇವುಗಳನ್ನು ‘ಬೆರಳುಗಳು’ ಎಂದು ಕರೆಯಲಾಗುತ್ತದೆ.

  1. ಇವುಗಳಲ್ಲಿ 8 ಬೆರಳುಗಳು ವಿವಾದಿತವಾಗಿವೆ. ಈ ಪ್ರದೇಶದಲ್ಲಿ, LAC ಬಗ್ಗೆ ಭಾರತ ಮತ್ತು ಚೀನಾ ನಡುವೆ ಭಿನ್ನಾಭಿಪ್ರಾಯವಿದೆ.
  2. ಚೀನಾದ ಅಂತಿಮ ಮಿಲಿಟರಿ ಪೊಸ್ಟ್ ಆದ ಫಿಂಗರ್ 8 ಮೂಲಕ LAC ಹಾದುಹೋಗಲಿದೆ ಎಂದು ಭಾರತ ಹೇಳಿದೆ.
  3. ಭಾರತವು ಈ ಭೂಪ್ರದೇಶದ ಸ್ವರೂಪದಿಂದಾಗಿ – ಫಿಂಗರ್ 8 ರವರೆಗಿನ ಪ್ರದೇಶದಲ್ಲಿ ಹೆಚ್ಚಾಗಿ ಕಾಲ್ನಡಿಗೆಯಲ್ಲಿ ಗಸ್ತು ತಿರುಗುತ್ತಿದೆ – ಆದರೆ ಭಾರತೀಯ ಪಡೆಗಳು ಫಿಂಗರ್ 4 ಅನ್ನು ಮೀರಿ ಸಕ್ರಿಯ ನಿಯಂತ್ರಣವನ್ನು ಹೊಂದಿಲ್ಲ.
  4. ಮತ್ತೊಂದೆಡೆ, ಚೀನಾ LAC ಯು ಫಿಂಗರ್ 2 ಮೂಲಕ ಹಾದುಹೋಗುತ್ತದೆ ಎಂದು ಹೇಳುತ್ತದೆ. ಇದು ಹೆಚ್ಚಾಗಿ ಲಘು ವಾಹನಗಳಲ್ಲಿ ಫಿಂಗರ್ 4 ರವರೆಗೆ ಮತ್ತು ಕೆಲವೊಮ್ಮೆ ಫಿಂಗರ್ 2 ವರೆಗೆ ಗಸ್ತು ತಿರುಗುತ್ತದೆ.

ಪ್ಯಾಂಗೊಂಗ್ ತ್ಸೊಗೆ ಹೊಂದಿಕೊಂಡಿರುವ ಪ್ರದೇಶಗಳನ್ನು, ಚೀನಾ ಏಕೆ ಆಕ್ರಮಿಸಿಕೊಳ್ಳಲು ಬಯಸುತ್ತದೆ?

ಭಾರತ ಮತ್ತು ಚೀನಾ ನಡುವಿನ 1962 ರ ಯುದ್ಧದ ಸಮಯದಲ್ಲಿ ಮುಂಚೂಣಿ ಯುದ್ಧಭೂಮಿಯಲ್ಲಿ ಒಂದಾದ ಚುಸುಲ್ ಕಣಿವೆ (Chusul Valley) ಗೆ ಇದು ತುಂಬಾ ಹತ್ತಿರದಲ್ಲಿರುವುದರಿಂದ ಪಂಗೊಂಗ್ ತ್ಸೊ ಆಯಕಟ್ಟಿನ ನಿರ್ಣಾಯಕ ಪ್ರದೇಶವಾಗಿದೆ.

ಚುಶುಲ್ ಕಣಿವೆಯ ಮಾರ್ಗವು ಪ್ಯಾಂಗೊಂಗ್ ತ್ಸೋ ಸರೋವರದ ಮೂಲಕ ಹಾದುಹೋಗುತ್ತದೆ, ಇದು ಭಾರತದ ಅಧಿಕೃತ ಪ್ರದೇಶವನ್ನು ವಶಪಡಿಸಿಕೊಳ್ಳಲು ಚೀನಾ ಬಳಸಬಹುದಾದ ಪ್ರಮುಖ ಮಾರ್ಗವಾಗಿದೆ.

  1. ಎಲ್‌ಎಸಿ ಬಳಿ ಎಲ್ಲಿಯೂ ಭಾರತ ತನ್ನ ಮೂಲಸೌಕರ್ಯವನ್ನು ಹೆಚ್ಚಿಸಿಕೊಳ್ಳುವುದನ್ನು ಚೀನಾ ಬಯಸುವುದಿಲ್ಲ.ಅಕ್ಸಾಯ್ ಚಿನ್ ಮತ್ತು ಲಾಸಾ-ಕಾಶ್ಗರ್ ಹೆದ್ದಾರಿಯನ್ನು (Aksai Chin and Lhasa-Kashgar highway) ಭಾರತವು ಆಕ್ರಮಿಸಿಕೊಳ್ಳುವ ಅಪಾಯವಿದೆ ಎಂಬುದು ಚೀನಾದ ಆತಂಕವಾಗಿದೆ.
  2. ಈ ಹೆದ್ದಾರಿಗೆ ಎದುರಾಗುವ ಯಾವುದೇ ಬೆದರಿಕೆಯು ಪಾಕಿಸ್ತಾನ ಆಕ್ರಮಿತ ಪ್ರದೇಶಗಳಾದ ಲಡಾಖ್ ಮತ್ತು ಜಮ್ಮು ಮತ್ತು ಕಾಶ್ಮೀರಗಳಲ್ಲಿ ಮತ್ತು ಪಾಕಿಸ್ತಾನದ ಆಚೆಗೂ ಸಹ ಚೀನಾದ ಸಾಮ್ರಾಜ್ಯಶಾಹಿ ಯೋಜನೆಗಳಿಗೆ ಬೆದರಿಕೆಯೊಡ್ಡ ಬಲ್ಲದ್ದಾಗಿದೆ.

 


ಸಾಮಾನ್ಯ ಅಧ್ಯಯನ ಪತ್ರಿಕೆ : 3


 

ವಿಷಯಗಳು: ಸಂರಕ್ಷಣೆ ಮತ್ತು ಜೀವವೈವಿಧ್ಯತೆಗೆ ಸಂಬಂಧಿತ ಸಮಸ್ಯೆಗಳು:

ಹುಲಿ ಸಂರಕ್ಷಣೆ ಕುರಿತು 4ನೇ ಏಷ್ಯಾ ಸಚಿವರ ಸಮ್ಮೇಳನ:


(4th Asia Ministerial Conference on tiger conservation)

ಸಂದರ್ಭ:

ಇತ್ತೀಚೆಗೆ, ಮಲೇಷ್ಯಾ ಸರ್ಕಾರ ಮತ್ತು ಗ್ಲೋಬಲ್ ಟೈಗರ್ ಫೋರಮ್ (Global Tiger Forum – GTF) ವತಿಯಿಂದ ಹುಲಿ ಸಂರಕ್ಷಣೆ ಕುರಿತ ನಾಲ್ಕನೇ ಏಷ್ಯಾ ಸಚಿವರ ಸಮ್ಮೇಳನ’ (4th Asia Ministerial Conference on Tiger Conservation) ವನ್ನು ಆಯೋಜಿಸಲಾಗಿತ್ತು.

ಈ ಸಮ್ಮೇಳನವು ‘ಜಾಗತಿಕ ಹುಲಿ ಪುನಶ್ಚೇತನ ಕಾರ್ಯಕ್ರಮ’ (Global Tiger Recovery Programme) ಮತ್ತು ಹುಲಿ ಸಂರಕ್ಷಣೆಯ ಬದ್ಧತೆಗಳ ಪ್ರಗತಿಯನ್ನು ಪರಿಶೀಲಿಸುವ ಒಂದು ಪ್ರಮುಖ ಘಟನೆಯಾಗಿದೆ.

ಫಲಿತಾಂಶ:

ಫಲಿತಾಂಶ: ಈ ಸಮ್ಮೇಳನದಲ್ಲಿ ಕೌಲಾಲಂಪುರ್ ಜಂಟಿ ಹೇಳಿಕೆಯನ್ನು ಅಂಗೀಕರಿಸಲಾಯಿತು.

ಶೃಂಗಸಭೆಯಲ್ಲಿ ಭಾರತದ ಹೇಳಿಕೆ:

ಈ ವರ್ಷದ ಕೊನೆಯಲ್ಲಿ ರಷ್ಯಾದ ವ್ಲಾಡಿವೋಸ್ಟಾಕ್‌ನಲ್ಲಿ ನಡೆಯಲಿರುವ ಜಾಗತಿಕ ಹುಲಿ ಶೃಂಗಸಭೆಗೆ ನವದೆಹಲಿ ಘೋಷಣೆಯನ್ನು ಅಂತಿಮಗೊಳಿಸುವಲ್ಲಿ ಭಾರತವು ಹುಲಿ ಶ್ರೇಣಿಯ ದೇಶಗಳಿಗೆ ಅನುಕೂಲಗಳನ್ನು ಒದಗಿಸಲಿದೆ.

2010 ರಲ್ಲಿ ನವದೆಹಲಿಯಲ್ಲಿ ಪ್ರಿ ಟೈಗರ್ ಶೃಂಗಸಭೆ ಸಭೆಯನ್ನು ನಡೆಸಲಾಯಿತು ಇದರಲ್ಲಿ ಜಾಗತಿಕ ಹುಲಿ ಶೃಂಗಸಭೆಗಾಗಿ ಹುಲಿ ಸಂರಕ್ಷಣೆಯ ಕರಡು ಘೋಷಣೆಯನ್ನು ಅಂತಿಮಗೊಳಿಸಲಾಯಿತು.

ಹುಲಿ ಸಂರಕ್ಷಣೆಯಲ್ಲಿ ಭಾರತದ ಪ್ರಯತ್ನಗಳು:

  1. ಭಾರತವು 2022 ರ ಗುರಿಯ ವರ್ಷಕ್ಕಿಂತ 4 ವರ್ಷಗಳ ಮುಂಚಿತವಾಗಿ 2018 ರಲ್ಲಿಯೇ ಹುಲಿಗಳ ಸಂಖ್ಯೆಯನ್ನು ದ್ವಿಗುಣಗೊಳಿಸುವ ಗಮನಾರ್ಹ ಸಾಧನೆಯನ್ನು ಸಾಧಿಸಿದೆ.
  2. ಭಾರತದಲ್ಲಿ ಹುಲಿ ನಿರ್ವಹಣೆಯ ಯಶಸ್ಸಿನ ಮಾದರಿಯನ್ನು ಈಗ ಇತರ ವನ್ಯಜೀವಿಗಳಾದ ಸಿಂಹಗಳು, ಡಾಲ್ಫಿನ್‌ಗಳು, ಚಿರತೆಗಳು, ಹಿಮ ಚಿರತೆಗಳು ಮತ್ತು ಇತರ ಸಣ್ಣ ಕಾಡು ಬೆಕ್ಕುಗಳಂತಹ ಇತರ ವನ್ಯಜೀವಿಗಳಿಗೆ ಪುನರಾವರ್ತಿಸಲಾಗುತ್ತಿದೆ.
  3. ಹುಲಿ ಸಂರಕ್ಷಣೆ ಕಾರ್ಯಕ್ರಮಗಳಿಗೆ ಬಜೆಟ್‌ ಸಂಚಿಕೆಯನ್ನು 2014ರಲ್ಲಿ ಇದ್ದ 185 ಕೋಟಿ ರೂ.ಗಳಿಂದ 2022ರಲ್ಲಿ 300 ಕೋಟಿ ರೂ.ಗೆ ಹೆಚ್ಚಿಸಲಾಗಿದೆ.
  4. ಭಾರತದಲ್ಲಿನ 14 ಹುಲಿ ಸಂರಕ್ಷಿತ ಪ್ರದೇಶಗಳು ಈಗಾಗಲೇ ಅಂತರಾಷ್ಟ್ರೀಯ ಸಿಎ/ಟಿಎಸ್ ಮಾನ್ಯತೆಯನ್ನು ಪಡೆದಿವೆ ಮತ್ತು ಹೆಚ್ಚಿನ ಹುಲಿ ಸಂರಕ್ಷಿತ ಪ್ರದೇಶಗಳನ್ನು ಸಿಎ/ಟಿಎಸ್ ಮಾನ್ಯತೆಯ (CA|TS accreditation) ಅಡಿಯಲ್ಲಿ ತರಲು ಪ್ರಯತ್ನಗಳು ನಡೆಯುತ್ತಿವೆ.
  5. ಭಾರತದಲ್ಲಿನ 51 ಹುಲಿ ಸಂರಕ್ಷಿತ ಪ್ರದೇಶಗಳಿಂದ ಸುಮಾರು 4.3 ಮಿಲಿಯನ್ ಮಾನವ ದಿನಗಳ ಉದ್ಯೋಗಗಳು ಸೃಷ್ಟಿಯಾಗುತ್ತಿವೆ ಮತ್ತು ಹುಲಿ ಸಂರಕ್ಷಿತ ಪ್ರದೇಶದ ಪ್ರಮುಖ ಪ್ರದೇಶಗಳಿಂದ ಸ್ವಯಂಪ್ರೇರಿತ ಗ್ರಾಮ ಪುನರ್ವಸತಿಯನ್ನು ಉತ್ತೇಜಿಸಲು ಪರಿಹಾರ ಅರಣ್ಯೀಕರಣ ನಿಧಿ ನಿರ್ವಹಣೆ ಮತ್ತು ಯೋಜನಾ ಪ್ರಾಧಿಕಾರದಿಂದ (CAMPA) ಹಣವನ್ನು ಬಳಸಿಕೊಳ್ಳಲಾಗುತ್ತಿದೆ.
  6. ಭಾರತವು,ಟೈಗರ್ ರೇಂಜ್ ದೇಶಗಳ ಅಂತರ್ ಸರ್ಕಾರಿ ವೇದಿಕೆಯಾದ, ‘ಗ್ಲೋಬಲ್ ಟೈಗರ್ ಫೋರಮ್’ (GTF) ನ ಸ್ಥಾಪಕ ಸದಸ್ಯರಲ್ಲಿ ಒಂದಾಗಿದೆ ಮತ್ತು ಇತ್ತೀಚಿನ ವರ್ಷಗಳಲ್ಲಿ GTF ಭಾರತ ಸರ್ಕಾರ ಮತ್ತು ಭಾರತದ ಹುಲಿ ಜನಸಂಖ್ಯೆಯ ರಾಜ್ಯಗಳು ಮತ್ತು ಹುಲಿ ವ್ಯಾಪ್ತಿಯ ದೇಶಗಳೊಂದಿಗೆ ನಿಕಟವಾಗಿ ಕೆಲಸ ಮಾಡುವುದರೊಂದಿಗೆ ಅನೇಕ ವಿಷಯಾಧಾರಿತ ಕ್ಷೇತ್ರಗಳಲ್ಲಿ ತನ್ನ ಕಾರ್ಯಕ್ರಮಗಳನ್ನು ವಿಸ್ತರಿಸುತ್ತಿದೆ.
  7. ‘ಗ್ಲೋಬಲ್ ಟೈಗರ್ ಫೋರಮ್’ ಎಂಬುದು ಹುಲಿ ಸಂರಕ್ಷಣೆಗಾಗಿ ಕಾರ್ಯನಿರ್ವಹಿಸುತ್ತಿರುವ ಏಕೈಕ ಅಂತರ ಸರ್ಕಾರಿ ಅಂತರಾಷ್ಟ್ರೀಯ ಸಂಸ್ಥೆಯಾಗಿದೆ. ಹುಲಿಗಳ ಸಂರಕ್ಷಣೆಗಾಗಿ ಜಾಗತಿಕ ಅಭಿಯಾನವನ್ನು ಪ್ರಾರಂಭಿಸಲು ಹುಲಿ ಸಂರಕ್ಷಣೆಯಲ್ಲಿ ಆಸಕ್ತಿ ಹೊಂದಿರುವ ಸದಸ್ಯ ರಾಷ್ಟ್ರಗಳ ಮೂಲಕ ಇದನ್ನು ಸ್ಥಾಪಿಸಲಾಗಿದೆ.

ಭಾರತದಲ್ಲಿ ಹುಲಿ ಚೇತರಿಕೆ (Tiger Recovery) ಯಶಸ್ವಿಯಾಗಲು ಸಹಾಯಕವಾದ ಎರಡು ಕಾನೂನು ಸಾಧನಗಳು:

  1. ವನ್ಯಜೀವಿ ಸಂರಕ್ಷಣಾ ಕಾಯಿದೆ 1972.
  2. ಅರಣ್ಯ (ಸಂರಕ್ಷಣೆ) ಕಾಯಿದೆ, 1980. ಈ ಕಾಯಿದೆಯ ಅಡಿಯಲ್ಲಿ ‘ಪ್ರಾಜೆಕ್ಟ್ ಟೈಗರ್’ ಅನ್ನು ಬಲಪಡಿಸಲಾಯಿತು.

ಹುಲಿಯ ಸಂರಕ್ಷಣಾ ಸ್ಥಿತಿ:

  1. ಭಾರತೀಯ ವನ್ಯಜೀವಿ (ರಕ್ಷಣೆ) ಕಾಯಿದೆ, 1972 ರ ಅನುಸೂಚಿ I ರಲ್ಲಿ ಪಟ್ಟಿಮಾಡಲಾಗಿದೆ.
  2. ಇಂಟರ್ನ್ಯಾಷನಲ್ ಯೂನಿಯನ್ ಫಾರ್ ಕನ್ಸರ್ವೇಶನ್ ಆಫ್ ನೇಚರ್ (IUCN) ಕೆಂಪು ಪಟ್ಟಿ: ಅಳಿವಿನಂಚಿನಲ್ಲಿರುವ (Endangered).
  3. ಅಳಿವಿನಂಚಿನಲ್ಲಿರುವ ವನ್ಯಜೀವಿ ಮತ್ತು ಸಸ್ಯ ಪ್ರಭೇದಗಳಲ್ಲಿ (CITES) ಅಂತರರಾಷ್ಟ್ರೀಯ ವ್ಯಾಪಾರದ ಸಮಾವೇಶದ ಅನುಬಂಧ-I ರಲ್ಲಿ ಪಟ್ಟಿಮಾಡಲಾಗಿದೆ.

ಸಂರಕ್ಷಣೆ ಭರವಸೆ | ಹುಲಿ ಮಾನದಂಡಗಳು (CA | TS) ಎಂದರೇನು?

CA | TS ಅನ್ನು ಹುಲಿಗಳನ್ನು ಹೊಂದಿರುವ ದೇಶಗಳ ಜಾಗತಿಕ ಒಕ್ಕೂಟವು (TRCs) ಮಾನ್ಯತೆಯ ಸಾಧನವಾಗಿ ಸ್ವೀಕರಿಸಿದೆ ಮತ್ತು ಇದನ್ನು ಹುಲಿ ಮತ್ತು ಸಂರಕ್ಷಿತ ಪ್ರದೇಶಗಳ ತಜ್ಞರು ಅಭಿವೃದ್ಧಿಪಡಿಸಿದ್ದಾರೆ.

  1. ಇದನ್ನು ಅಧಿಕೃತವಾಗಿ 2013 ರಲ್ಲಿ ಪ್ರಾರಂಭಿಸಲಾಯಿತು.
  2. ಈ ಮಾನದಂಡವು ಉದ್ದೇಶಿತ ಜಾತಿಗಳ ಪರಿಣಾಮಕಾರಿ ನಿರ್ವಹಣೆಗೆ ಕನಿಷ್ಠ ಮಾನದಂಡಗಳನ್ನು ಹೊಂದಿಸುತ್ತದೆ ಮತ್ತು ಸಂಬಂಧಿತ ಸಂರಕ್ಷಿತ ಪ್ರದೇಶಗಳಲ್ಲಿ ಈ ಮಾನದಂಡಗಳ ಮೌಲ್ಯಮಾಪನವನ್ನು ಪ್ರೋತ್ಸಾಹಿಸುತ್ತದೆ.
  3. CA | TS ಎನ್ನುವುದು ವಿಭಿನ್ನ ನಿಯತಾಂಕಗಳ ಅಥವಾ ಮಾನದಂಡಗಳ ಒಂದು ಗುಂಪಾಗಿದ್ದು ಅದು ಹುಲಿ ತಾಣಗಳು ಅವುಗಳ ನಿರ್ವಹಣೆ ಯಶಸ್ವಿ ಹುಲಿ ಸಂರಕ್ಷಣೆಗೆ ಕಾರಣವಾಗುತ್ತದೆಯೇ ಎಂದು ಪರೀಕ್ಷಿಸಲು ಅನುವು ಮಾಡಿಕೊಡುತ್ತದೆ.
  4. ಹುಲಿ ಸಂರಕ್ಷಣೆಗಾಗಿ ಕೆಲಸ ಮಾಡುವ ಅಂತರಾಷ್ಟ್ರೀಯ ಸರ್ಕಾರೇತರ ಸಂಸ್ಥೆ ಜಾಗತಿಕ ಹುಲಿ ವೇದಿಕೆ (GTF), ಮತ್ತು ವಿಶ್ವ ವನ್ಯಜೀವಿ ನಿಧಿ ಭಾರತ (WWI), ಭಾರತದಲ್ಲಿ CA | TS ಮೌಲ್ಯಮಾಪನಕ್ಕಾಗಿ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಎರಡು ಅನುಷ್ಠಾನ ಪಾಲುದಾರರಾಗಿದ್ದಾರೆ.
  5. ಏಳು ಹುಲಿ ಸಂರಕ್ಷಿತ ದೇಶಗಳ 125 ತಾಣಗಳಲ್ಲಿ ಸಿಎ/ ಟಿಎಸ್ ಮಾನ್ಯತೆಯನ್ನು ಜಾರಿಗೆ ತರಲಾಗುತ್ತಿದೆ. ಭಾರತದಲ್ಲಿ ಗರಿಷ್ಠ ಪ್ರಮಾಣದಲ್ಲಿ ಅಂದರೆ 94 ತಾಣಗಳು ಈ ಮಾನ್ಯತೆಗೆ ಒಳಪಟ್ಟಿವೆ. ಡಬ್ಲ್ಯುಡಬ್ಲ್ಯುಎಫ್ ಇಂಡಿಯಾದ ಪ್ರಕಾರ, ಈ ವರ್ಷ 20 ಹುಲಿ ಮೀಸಲು ಅರಣ್ಯ ಪ್ರದೇಶಗಳ ಮೌಲ್ಯಮಾಪನ ಪೂರ್ಣಗೊಂಡಿದೆ.

CA | TS ಮಾನ್ಯತೆ ಪಡೆದ ಹುಲಿ ಮೀಸಲು:

ಭಾರತದ 14 ಹುಲಿ ಸಂರಕ್ಷಿತ ಪ್ರದೇಶಗಳಿಗೆ ಸರ್ಕಾರವು ‘ಜಾಗತಿಕ ಸಂರಕ್ಷಣೆ ಖಾತ್ರಿ’ ಎಂದು ಹೆಸರಿಸಿದೆ. ಹುಲಿ ಮಾನದಂಡಗಳ (CA | TS) ಮಾನ್ಯತೆ ಪಡೆದ ಬಗ್ಗೆ ಸರ್ಕಾರದಿಂದ ಮಾಹಿತಿ ನೀಡಲಾಗಿದೆ. CA | TS ನಿಂದ ಗುರುತಿಸಲ್ಪಟ್ಟ 14 ಹುಲಿ ಮೀಸಲುಗಳು ಇಂತಿವೆ:

  1. ಅಸ್ಸಾಂನ ಮಾನಸ್, ಕಾಜಿರಂಗ ಮತ್ತು ಒರಾಂಗ್,
  2. ಮಧ್ಯಪ್ರದೇಶದ ಸತ್ಪುರ, ಕನ್ಹಾ ಮತ್ತು ಪನ್ನಾ,
  3. ಮಹಾರಾಷ್ಟ್ರದ ಪೆಂಚ್ ಹುಲಿ ಮೀಸಲು ಪ್ರದೇಶ,
  4. ಬಿಹಾರದಲ್ಲಿ ವಾಲ್ಮೀಕಿ ಹುಲಿ ಸಂರಕ್ಷಿತ ಪ್ರದೇಶ
  5. ಉತ್ತರ ಪ್ರದೇಶದ ದುಧ್ವಾ,
  6. ಪಶ್ಚಿಮ ಬಂಗಾಳದ ಸುಂದರ್‌ಬನ್ಸ್
  7. ಕೇರಳದ ಪರಂಬಿಕುಲಂ,
  8. ಕರ್ನಾಟಕದಲ್ಲಿ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ಮತ್ತು
  9. ತಮಿಳುನಾಡಿನ ಮುದುಮಲೈ ಮತ್ತು ಅಣ್ಣಾಮಲೈ ಹುಲಿ ಸಂರಕ್ಷಿತ ಪ್ರದೇಶಗಳು.

 

ದಯವಿಟ್ಟು ಗಮನಿಸಿ:

ಪರಿಸರ ವ್ಯವಸ್ಥೆಯಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುವ ಹುಲಿಯ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸಲು ಜುಲೈ 29 ಅನ್ನು ಪ್ರತಿ ವರ್ಷ ಅಂತರರಾಷ್ಟ್ರೀಯ ಹುಲಿ ದಿನವನ್ನಾಗಿ ಆಚರಿಸಲಾಗುತ್ತದೆ.

ಆಹಾರ ಸರಪಣಿಯಲ್ಲೂ ಹುಲಿ ಅತ್ಯಂತ ಪ್ರಮುಖ ಸ್ಥಾನದಲ್ಲಿದೆ. ಆದರೆ ಪರಿಸರ ನಾಶ, ಹುಲಿಯ ಕಳ್ಳಬೇಟೆ, ಅಭಿವೃದ್ಧಿಯ ಹೆಸರಿನಲ್ಲಿ ನಡೆಸಲಾಗುವ ಕೆಲವೊಂದು ಕಾರ್ಯಗಳು ಹುಲಿ ಸಂತತಿ ಕ್ಷೀಣಿಸಲು ಕಾರಣವಾಗುತ್ತಿದೆ.

2010ರಲ್ಲಿ ಜುಲೈ 29ರಂದು ರಷ್ಯಾದ ಸೈಂಟ್ ಪೀಟರ್ಸ್‌ಬರ್ಗ್‌ನಲ್ಲಿ ನಡೆದ ಹುಲಿ ಸಮಾವೇಶದಲ್ಲಿ ಜಗತ್ತಿನ ಬಹುತೇಕ ರಾಷ್ಟ್ರಗಳು ಹುಲಿ ಸಂರಕ್ಷಣೆಗೆ ಪಣ ತೊಟ್ಟು, ಒಪ್ಪಂದಕ್ಕೆ ಸಹಿ ಹಾಕಿದವು. ಅಂದಿನಿಂದ, ಈ ದಿನವನ್ನು ಪ್ರತಿ ವರ್ಷ ಜಾಗತಿಕವಾಗಿ ಅಂತರರಾಷ್ಟ್ರೀಯ ಹುಲಿ ದಿನವನ್ನಾಗಿ ಆಚರಿಸಲಾಗುತ್ತಿದೆ.

ಹುಲಿ ಸಂರಕ್ಷಣೆ, ಸಂಖ್ಯೆ ವೃದ್ಧಿ, ಅವುಗಳ ಓಡಾಟ, ಆಹಾರಕ್ಕೆ ಪೂರಕ ವಾತಾವರಣ ಕಲ್ಪಿಸುವುದು ಮತ್ತು ಸರ್ಕಾರ, ಸರ್ಕಾರೇತರ ಸಂಸ್ಥೆಗಳು ಹುಲಿ ರಕ್ಷಣೆಗೆ ಕ್ರಮ ಕೈಗೊಳ್ಳುವುದು ಅಂತರರಾಷ್ಟ್ರೀಯ ಹುಲಿ ದಿನಾಚರಣೆಯ ಪ್ರಮುಖ ಅಂಶವಾಗಿದೆ.

2021 ರಲ್ಲಿ ‘ಹುಲಿಗಳ ಉಳಿವು ನಮ್ಮ ಕೈಯಲ್ಲಿದೆಎನ್ನುವ ಘೋಷವಾಕ್ಯದೊಂದಿಗೆ ಅಂತರರಾಷ್ಟ್ರೀಯ ಹುಲಿ ದಿನ ಆಚರಿಸಲಾಗುತ್ತದೆ. ಜಾಗತಿಕ ಹುಲಿಗಳ ಸಂಖ್ಯೆಯ ಶೇ 70ರಷ್ಟು ನಮ್ಮ ದೇಶದಲ್ಲೇ ಇವೆ ಎನ್ನುವುದು ಹೆಮ್ಮೆಯ ವಿಚಾರವಾಗಿದೆ. ವರ್ಲ್ಡ್ ವೈಲ್ಡ್‌ಲೈಫ್ ಫಂಡ್ ಪ್ರಕಾರ ಜಾಗತಿಕವಾಗಿ 3,900 ಹುಲಿಗಳಷ್ಟೇ ಇವೆ.

 

ವಿಷಯಗಳು: ಸಂರಕ್ಷಣೆ, ಪರಿಸರ ಮಾಲಿನ್ಯ ಮತ್ತು ಅವನತಿ, ಪರಿಸರ ಪ್ರಭಾವದ ಮೌಲ್ಯಮಾಪನ.

ಸರಸ್ವತಿ ನದಿಯ ಪುನರುಜ್ಜೀವನ:


(Rivival of Saraswati river)

ಸಂದರ್ಭ:

ಇತ್ತೀಚೆಗೆ, ಹರಿಯಾಣ ಮತ್ತು ಹಿಮಾಚಲ ಪ್ರದೇಶ ಸರ್ಕಾರಗಳು ಯಮುನಾನಗರ ಜಿಲ್ಲೆಯ ‘ಆದಿ ಬದ್ರಿ’ (Adi Badri) ಎಂಬ ಸ್ಥಳದಲ್ಲಿ ಅಣೆಕಟ್ಟು ನಿರ್ಮಿಸಲು ಒಪ್ಪಂದಕ್ಕೆ ಸಹಿ ಹಾಕಿವೆ. ಈ ಒಪ್ಪಂದವು ಇತರ ವಿಷಯಗಳ ಜೊತೆಗೆ, ‘ಪೌರಾಣಿಕ ಸರಸ್ವತಿ ನದಿ’ಯನ್ನು ಪುನರುಜ್ಜೀವನಗೊಳಿಸುವ ಗುರಿಯನ್ನು ಹೊಂದಿದೆ.

  1. ಹಿಮಾಚಲ ಪ್ರದೇಶದ ಗಡಿಯ ಸಮೀಪ ಹರಿಯಾಣದಲ್ಲಿರುವ ‘ಆದಿ ಬದ್ರಿ’ ಯು ಸರಸ್ವತಿ ನದಿಯ ಮೂಲಸ್ಥಳ ಎಂದು ನಂಬಲಾಗಿದೆ.

ಪೌರಾಣಿಕ ಸರಸ್ವತಿ ನದಿಯ ಅಧ್ಯಯನಕ್ಕೆ ಸಮಿತಿ:

ಪೌರಾಣಿಕ ‘ಸರಸ್ವತಿ’ ನದಿಯ ಅಧ್ಯಯನಕ್ಕಾಗಿ ಯೋಜನೆಯನ್ನು ರೂಪಿಸಲು ಮುಂದಿನ ಎರಡು ವರ್ಷಗಳಲ್ಲಿ ಕೇಂದ್ರ ಸರ್ಕಾರವು 2021 ರಲ್ಲಿ ಸಲಹಾ ಸಮಿತಿಯನ್ನು ಪುನರ್ ರೂಪಿಸಿದೆ. ಈ ಹಿಂದೆ ರಚಿಸಲಾದ ಸಮಿತಿಯ ಅಧಿಕಾರಾವಧಿ 2019 ರಲ್ಲಿ ಕೊನೆಗೊಂಡಿತ್ತು.

  1. ಆರ್ಕಿಯಲಾಜಿಕಲ್ ಸರ್ವೆ ಆಫ್ ಇಂಡಿಯಾ (ಭಾರತೀಯ ಪುರಾತತ್ವ ಶಾಸ್ತ್ರ ಇಲಾಖೆ-ASI) ಈ ವಿಷಯದ ಕುರಿತು ಅಧ್ಯಯನ ಮಾಡಲು, ಮೊದಲ ಬಾರಿಗೆ ಡಿಸೆಂಬರ್ 28, 2017 ರಂದು ಎರಡು ವರ್ಷಗಳ ಅವಧಿಗೆ ಒಂದು ಸಮಿತಿಯನ್ನು ರಚಿಸಿತ್ತು.

ಸಮಿತಿಯ ಸಂಯೋಜನೆ:

ಈ ಸಮಿತಿಯ ನೇತೃತ್ವವನ್ನು ಕೇಂದ್ರ ಸಂಸ್ಕೃತಿ ಸಚಿವರು ವಹಿಸಲಿದ್ದು, ಸಂಸ್ಕೃತಿ, ಪ್ರವಾಸೋದ್ಯಮ, ಜಲಸಂಪನ್ಮೂಲ, ಪರಿಸರ ಮತ್ತು ಅರಣ್ಯ, ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಅಧಿಕಾರಿಗಳನ್ನು ಒಳಗೊಂಡಿರುತ್ತದೆ; ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಪ್ರತಿನಿಧಿ; ಗುಜರಾತ್, ಹರಿಯಾಣ ಮತ್ತು ರಾಜಸ್ಥಾನ ಸರ್ಕಾರಗಳ ಅಧಿಕಾರಿಗಳು; ಮತ್ತು ಆರ್ಕಿಯಲಾಜಿಕಲ್ ಸರ್ವೆ ಆಫ್ ಇಂಡಿಯಾ ಅಧಿಕಾರಿಗಳನ್ನು ಒಳಗೊಂಡಿರುತ್ತದೆ.

ಸರಸ್ವತಿ ನದಿಯ ಕುರಿತು:

ಸರಸ್ವತಿ ನದಿಯು ಹಿಮಾಲಯದ ಕೈಲಾಶ್ ಪರ್ವತದ ಪಶ್ಚಿಮಕ್ಕೆ ಕಪಾಲ್ ತೀರ್ಥದಿಂದ ಉಗಮವಾಗುತ್ತದೆ ಮತ್ತು ಅದರ ಮೂಲದಿಂದ ದಕ್ಷಿಣದ ಮಾನಸರೋವರ್‌ಗೆ ಹರಿಯಿತು, ನಂತರ ಪಶ್ಚಿಮ ದಿಕ್ಕಿಗೆ ತಿರುಗಿತು ಎಂದು ನಂಬಲಾಗಿದೆ.

ಈ ನದಿ ಹರಿಯಾಣ, ರಾಜಸ್ಥಾನ ಮತ್ತು ಉತ್ತರ ಗುಜರಾತ್ ಮೂಲಕ ಹರಿಯಿತು ಮತ್ತು ರಣ್ ಆಫ್ ಕಚ್ ಮೂಲಕ ಪಶ್ಚಿಮ ಸಮುದ್ರಕ್ಕೆ ಸೇರುವ ಮೊದಲು ಪಾಕಿಸ್ತಾನದ ಮೂಲಕವೂ ಹರಿಯಿತು. ಸರಸ್ವತಿ ನದಿಯ ಒಟ್ಟು ಉದ್ದ ಸುಮಾರು 4,000 ಕಿ.ಮೀ.

ಸರಸ್ವತಿ ನದಿಯು ಎರಡು ಶಾಖೆಗಳನ್ನು ಹೊಂದಿತ್ತು: ಪಶ್ಚಿಮ ಮತ್ತು ಪೂರ್ವ.

  1. ವರ್ತಮಾನದ ಘಗ್ಗರ್-ಪಟಿಯಲಿವಾಲಿ ತೊರೆಗಳ ಮೂಲಕ ಹರಿಯುವ ಹಿಮಾಲಯದಿಂದ ಹುಟ್ಟಿದ ಹಿಂದಿನ ‘ಸಟ್ಲಜ್’ ಅನ್ನು ಪ್ರಾಚೀನ ಸರಸ್ವತಿ ನದಿಯ ಪಶ್ಚಿಮ ಶಾಖೆ ಎಂದು ಪರಿಗಣಿಸಲಾಗಿದೆ.
  2. ಮತ್ತೊಂದೆಡೆ ಮಾರ್ಕಂಡ್ ಮತ್ತು ಸರಸೂತಿ, ಟ್ರಾನ್ಸ್-ಯಮುನಾ ಎಂದು ಕರೆಯಲ್ಪಡುವ ಸರಸ್ವತಿ ನದಿಯ ಪಶ್ಚಿಮ ಶಾಖೆಯನ್ನು ಪ್ರತಿನಿಧಿಸಿದವು.
  3. ಈ ಶಾಖೆಗಳ ಸಂಗಮವು ಪಟಿಯಾಲದಿಂದ ದಕ್ಷಿಣಕ್ಕೆ 25 ಕಿ.ಮೀ ದೂರದಲ್ಲಿ ‘ಶೂತ್ರಾನಾ’ ಎಂಬ ಸ್ಥಳದ ಬಳಿ ಇತ್ತು. ತದನಂತರ ಇದ್ದಕ್ಕಿದ್ದಂತೆ, ಅದು ಮರುಭೂಮಿಯನ್ನು ದಾಟಿ (Rann of Kutch) ಮತ್ತು ಪಶ್ಚಿಮ ಸಮುದ್ರದ ಕೊಲ್ಲಿಯಲ್ಲಿ ವಿಲೀನಗೊಂಡಿತು.

ಐತಿಹಾಸಿಕ ಪುರಾವೆಗಳು:

  1. ಸರಸ್ವತಿ ನದಿ ಋಗ್ವೇದ ಕಾಲದ ಪ್ರಮುಖ ನದಿಗಳಲ್ಲಿ ಒಂದಾಗಿದೆ ಮತ್ತು ಇದನ್ನು ಋಗ್ವೇದ ಮತ್ತು ಆನಂತರದ ವೈದಿಕ ಮತ್ತು ವೈದಿಕೋತ್ತರ ವೇದ ಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ.
  2. ಋಗ್ವೇದದ ಆರನೇ ಭಾಗದಲ್ಲಿ ಸರಸ್ವತಿ ನದಿಯನ್ನು ‘ಪರಿಪೂರ್ಣ ತಾಯಿ, ಅನನ್ಯ ನದಿ ಮತ್ತು ಸರ್ವೋತ್ತಮ ದೇವತೆ’ ಎಂದು ಹೊಗಳಿದ ‘ನದಿಸ್ತುತಿ ಸೂಕ್ತ’ ಎಂಬ ಶ್ಲೋಕಗಳಿವೆ.
  3. ಕ್ರಿ.ಪೂ 6000 ಮತ್ತು ಕ್ರಿ.ಪೂ 4000 ರ ನಡುವೆ, ಸರಸ್ವತಿ ನದಿಯು 2000 ವರ್ಷಗಳ ಕಾಲ ಶ್ರೇಷ್ಠ ನದಿಯಾಗಿ ಹರಿಯಿತು.

 


ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ಸಂಗತಿಗಳು:


ಗೆರ್ಕಿನ್ಸ್ (Gherkins):

ಭಾರತವು ಸೌತೆಕಾಯಿ ಮತ್ತು ಗೆರ್ಕಿನ್ಸ್‌  (Cucumber and Gherkins) ನ ಅತಿದೊಡ್ಡ ರಫ್ತುದಾರನಾಗಿ ಹೊರಹೊಮ್ಮಿದೆ.

  1. ಇದನ್ನು ಜಾಗತಿಕವಾಗಿ ಸೌತೆಕಾಯಿ ಉಪ್ಪಿನಕಾಯಿ ಎಂದು ಕರೆಯಲಾಗುತ್ತದೆ.
  2. ಸೌತೆಕಾಯಿಯನ್ನು ಎರಡು ವರ್ಗಗಳ ಅಡಿಯಲ್ಲಿ ರಫ್ತು ಮಾಡಲಾಗುತ್ತದೆ ಮತ್ತು ಇದನ್ನು ವಿನೆಗರ್ ಅಥವಾ ಅಸಿಟಿಕ್ ಆಮ್ಲದ ಮೂಲಕ ತಯಾರಿಸಲಾಗುತ್ತದೆ ಮತ್ತು ಸಂರಕ್ಷಿಸಲಾಗಿದೆ,
  3. ಸೌತೆಕಾಯಿ ಕೃಷಿ, ಸಂಸ್ಕರಣೆ ಮತ್ತು ರಫ್ತು ಭಾರತದಲ್ಲಿ 1990 ರ ದಶಕದಲ್ಲಿ ಕರ್ನಾಟಕದಲ್ಲಿ ಸಣ್ಣ ಪ್ರಮಾಣದಲ್ಲಿ ಪ್ರಾರಂಭವಾಯಿತು ಮತ್ತು ನಂತರ ನೆರೆಯ ರಾಜ್ಯಗಳಾದ ತಮಿಳುನಾಡು, ಆಂಧ್ರ ಪ್ರದೇಶ ಮತ್ತು ತೆಲಂಗಾಣಕ್ಕೆ ವಿಸ್ತರಿಸಿತು.
  4. ವಿಶ್ವದ ಸೌತೆಕಾಯಿಯ ಅಗತ್ಯದ ಸುಮಾರು 15% ಅನ್ನು ಭಾರತದಲ್ಲಿ ಉತ್ಪಾದಿಸಲಾಗುತ್ತದೆ.

 

ಅಬೈಡ್ ವಿತ್ ಮಿ:

(Abide With Me)

ಅಬೈಡ್ ವಿತ್ ಮಿ ಎಂಬುದು ಕ್ರಿಶ್ಚಿಯನ್ ಸ್ತೋತ್ರ/ಭಜನೆಯಾಗಿದೆ.

  1. ಈ ಹಾಡನ್ನು ಆಧುನಿಕ-ಪೂರ್ವ ಜಗತ್ತಿನಲ್ಲಿ ಸ್ಕಾಟ್ಲೆಂಡ್‌ನ ಆಂಗ್ಲಿಕನ್ ಮಂತ್ರಿ ಹೆನ್ರಿ ಫ್ರಾನ್ಸಿಸ್ ಲೈಟ್ (Henry Francis Lyte) ಬರೆದಿದ್ದಾರೆ. ಇದು ಚರ್ಚ್‌ನಲ್ಲಿ ಹಾಡುವ ಒಂದು ರೀತಿಯ ಧಾರ್ಮಿಕ ಭಜನೆ, ಇದನ್ನು ಸ್ತೋತ್ರ (Hymn) ಎಂದು ಕರೆಯಲಾಗುತ್ತದೆ.
  2. ಈ ನಿರ್ದಿಷ್ಟ ಸ್ತೋತ್ರವು ಸರಳತೆ ಮತ್ತು ದುಃಖದ ಸಂದರ್ಭದ ಸ್ತೋತ್ರವಾಗಿದೆ, ಇದನ್ನು ಸಾಮಾನ್ಯವಾಗಿ ಇಂಗ್ಲಿಷ್ ಸಂಯೋಜಕ ವಿಲಿಯಂ ಹೆನ್ರಿ ಮಾಂಕ್ ಅವರ ಸಂಯೋಜಿಸಿದ ರಾಗಕ್ಕೆ ತಕ್ಕಂತೆ ಹಾಡಲಾಗುತ್ತದೆ. 1950 ರಿಂದ ಇಂಡಿಯನ್ ಬೀಟಿಂಗ್ ರಿಟ್ರೀಟ್ ಫೆಸ್ಟಿವಲ್‌ನಲ್ಲಿ ಇದೇ ಹಾಡನ್ನು ನುಡಿಸಲಾಗುತ್ತಿದೆ.
  3. ಸೈನಿಕರು ರೈಸಿನಾ ಹಿಲ್‌ನಿಂದ ಸೈನಿಕರು ಇಳಿಯುವ ಮೊದಲು ಕವಿ ಅಲ್ಲಾಮ ಇಕ್ಬಾಲ್ ಸಂಯೋಜಿಸಿದ ‘ಸಾರೆಜಹಾನ್ ಸೆ ಅಚ್ಚಾ’ ರಾಗಕ್ಕೆ ವಾದ್ಯ ನುಡಿಸುತ್ತಾರೆ. ‘ಬ್ರಾಸ್ ಬ್ಯಾಂಡ್’ ನುಡಿಸುವ ಈ ಬೀಟಿಂಗ್ ರಿಟ್ರೀಟ್ ಹಾಡು ಯಾವಾಗಲೂ ಕೊನೆಯ ಭಾಗವಾಗಿರುತ್ತದೆ.

ಇತ್ತೀಚೆಗಷ್ಟೇ ಕೇಂದ್ರ ಸರ್ಕಾರದಿಂದ ‘ಬೀಟಿಂಗ್ ರಿಟ್ರೀಟ್ ಸೆರಮನಿ’ಯಿಂದ ‘ಅಬೈಡ್ ವಿತ್ ಮಿ’ ಹಾಡನ್ನು ಕೈಬಿಡಲಾಗಿದೆ.ಅಬೈಡ್ ವಿತ್ ಮಿಬದಲಿಗೆ ಕವಿ ಪ್ರದೀಪ್ ಅವರು ರಚಿಸಿದ ಗೀತೆ ‘ಏ ಮೇರೆ ವತನ್ ಕೆ ಲೋಗೋನ್’  ಪ್ಲೇ ಆಗಲಿದೆ.

ಈ ಹಾಡನ್ನು ಕವಿ ಪ್ರದೀಪ್ ಅವರು ‘ಭಾರತ-ಚೀನಾ ಯುದ್ಧ’ದ ಸಮಯದಲ್ಲಿ ರಚಿಸಿದ್ದಾರೆ, ಇದು ಭಾರತೀಯ ರಾಷ್ಟ್ರೀಯತೆಯ ಧ್ಯೋತಕವಾಯಿತು.

ಬೀಟಿಂಗ್ ರಿಟ್ರೀಟ್ ಸಮಾರಂಭದ ಕುರಿತು:

  1. ಇದು ಅಧಿಕೃತವಾಗಿ ಗಣರಾಜ್ಯೋತ್ಸವದ ಸಮಾರೋಪವನ್ನು ಸೂಚಿಸುತ್ತದೆ.
  2. ಇದು ಗಣರಾಜ್ಯೋತ್ಸವದ ನಂತರದ ಮೂರನೇ ದಿನವಾದ ಜನವರಿ 29 ರ ಸಂಜೆ ನಡೆಯುತ್ತದೆ.
  3. ಇದನ್ನು ರಕ್ಷಣಾ ಸಚಿವಾಲಯದ ‘ವಿಭಾಗ ಡಿ’ ಆಯೋಜಿಸುತ್ತದೆ.

 

ಜೀವಂತ ಬೇರು ಸೇತುವೆಗಳು:

(Living root bridges)

ಜೀವಂತ ಬೇರುಗಳಿಂದ ನಿರ್ಮಿಸಲಾದ ಸೇತುವೆಗಳನ್ನು ‘ಜಿಂಗ್ ಕಿಯೆಂಗ್ ಜ್ರಿ’ ( Jing Kieng Jri)ಎಂದೂ ಕರೆಯಲಾಗುತ್ತದೆ.

ಇವು ಭಾರತೀಯ ರಬ್ಬರ್ ಮರದ ಬೇರುಗಳನ್ನು ನೇಯ್ಗೆ ಮಾಡುವ ಮೂಲಕ ಮಾಡಿದ ವೈಮಾನಿಕ ಸೇತುವೆಗಳಾಗಿವೆ (ಫಿಕಸ್ ಎಲಾಸ್ಟಿಕಾ – Ficus Elastica).

ಈ ಸೇತುವೆಗಳು ಮೇಘಾಲಯದಲ್ಲಿ ‘ಎರಡು ಸ್ಥಳಗಳನ್ನು ಸಂಪರ್ಕಿಸುವ’ ಕೆಲಸವನ್ನು ತಲೆಮಾರುಗಳಿಂದ ಮಾಡುತ್ತಿವೆ.

ಶತಮಾನಗಳಿಂದ ನಿರ್ಮಿಸಲಾದ ಈ ಸೇತುವೆಗಳು ಮುಖ್ಯವಾಗಿ ನದಿಗಳು ಮತ್ತು ತೊರೆಗಳನ್ನು ದಾಟುವ ಸಾಧನವಾಗಿ ಮಾರ್ಪಟ್ಟಿವೆ ಮತ್ತು ವಿಶ್ವಪ್ರಸಿದ್ಧ ಪ್ರವಾಸಿ ಆಕರ್ಷಣೆಯಾಗಿಯೂ ಮಾರ್ಪಟ್ಟಿವೆ.

ಸುದ್ದಿಯಲ್ಲಿರಲು ಕಾರಣ:

ಝೂಲಾಜಿಕಲ್ ಸರ್ವೆ ಆಫ್ ಇಂಡಿಯಾವು ಮೇಘಾಲಯದ ‘ಜೀವಂತ ಬೇರು ಸೇತುವೆಗಳಿಗೆ’ (Living root bridges) ‘ಯುನೆಸ್ಕೋ ವಿಶ್ವ ಪರಂಪರೆಯ ತಾಣ’ ಎಂಬ ಟ್ಯಾಗ್ ಪಡೆಯಲು ಕೆಲವು ಹಸಿರು ನಿಯಮಗಳನ್ನು ನಿಗದಿಪಡಿಸಿದೆ.


  • Join our Official Telegram Channel HERE for Motivation and Fast Updates
  • Subscribe to our YouTube Channel HERE to watch Motivational and New analysis videos

[ad_2]

Leave a Comment