[ad_1]
ಪರಿವಿಡಿ:
ಸಾಮಾನ್ಯ ಅಧ್ಯಯನ ಪತ್ರಿಕೆ 1:
1. ಪುರಿ ಹೆರಿಟೇಜ್ ಕಾರಿಡಾರ್ ಎಂದರೇನು?
2. ಅಲೆಕ್ಸಾಂಡರ್ ಮತ್ತು ಚಂದ್ರಗುಪ್ತ ಮೌರ್ಯ.
3. ಗುರು ನಾನಕ್ ದೇವ್ ಜಯಂತಿ.
ಸಾಮಾನ್ಯ ಅಧ್ಯಯನ ಪತ್ರಿಕೆ 2:
1. PESA ಕಾಯಿದೆ.
2. ಕಾಯ್ದೆಯನ್ನು ರದ್ದುಗೊಳಿಸುವ/ಹಿಂಪಡೆಯುವ ಪ್ರಕ್ರಿಯೆ.
ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ಸಂಗತಿಗಳು:
1. ಆಪರೇಷನ್ ಸಂಕಲ್ಪ.
ಸಾಮಾನ್ಯ ಅಧ್ಯಯನ ಪತ್ರಿಕೆ : 1
ವಿಷಯಗಳು: ಭಾರತೀಯ ಸಂಸ್ಕೃತಿಯು ಪ್ರಾಚೀನ ಕಾಲದಿಂದ ಆಧುನಿಕ ಕಾಲದವರೆಗೆ ಕಲಾ ಪ್ರಕಾರಗಳು, ಸಾಹಿತ್ಯ ಮತ್ತು ವಾಸ್ತುಶಿಲ್ಪದ ಪ್ರಮುಖ ಅಂಶಗಳನ್ನು ಒಳಗೊಂಡಿದೆ.
ಪುರಿ ಹೆರಿಟೇಜ್ ಕಾರಿಡಾರ್ ಎಂದರೇನು?
(What is the Puri heritage corridor?)
ಸಂದರ್ಭ:
ಒಡಿಶಾದಲ್ಲಿ 800 ಕೋಟಿ ರೂಪಾಯಿ ವೆಚ್ಚದಲ್ಲಿ ಪುರಿ ಹೆರಿಟೇಜ್ ಕಾರಿಡಾರ್ ಅನ್ನು ಅಭಿವೃದ್ಧಿಪಡಿಸಲಾಗುತ್ತಿದೆ.
ಪುರಿ ಹೆರಿಟೇಜ್ ಕಾರಿಡಾರ್ ಯೋಜನೆ ಎಂದರೇನು?
- 2016 ರಲ್ಲಿ ಕಲ್ಪಿಸಲಾದ ಈ ಯೋಜನೆಯು ಪವಿತ್ರ ಪಟ್ಟಣವಾದ ಪುರಿಯನ್ನು ಅಂತರರಾಷ್ಟ್ರೀಯ ಪರಂಪರೆಯ ಸ್ಥಳವನ್ನಾಗಿ ಪರಿವರ್ತಿಸುವ ಗುರಿಯನ್ನು ಹೊಂದಿದೆ.
- ಒಟ್ಟು 22 ವಿವಿಧ ಯೋಜನೆಗಳನ್ನು ಹಂತ ಹಂತವಾಗಿ ಕಾರ್ಯಗತಗೊಳಿಸಲಾಗುವುದು.
- ಪುರಿಯಲ್ಲಿ ಮೂಲ ಸೌಕರ್ಯಗಳ ವರ್ಧನೆ ಮತ್ತು ಪರಂಪರೆ ಮತ್ತು ವಾಸ್ತುಶಿಲ್ಪದ ಅಭಿವೃದ್ಧಿ (Augmentation of Basic Amenities and Development of Heritage and Architecture at Puri -ABADHA) ಎಂಬ ಒಡಿಶಾ ರಾಜ್ಯ ಸರ್ಕಾರದ ಯೋಜನೆಯ ಅಡಿಯಲ್ಲಿ ಹಣವನ್ನು ಹಂಚಿಕೆ ಮಾಡಲಾಗಿದೆ.
- ಯೋಜನೆಯು ಪುರಿ ಸರೋವರದ ಪುನರಾಭಿವೃದ್ಧಿ ಮತ್ತು ಮೂಸಾ ನದಿ ಪುನರುಜ್ಜೀವನ ಯೋಜನೆಯನ್ನು ಒಳಗೊಂಡಿದೆ.
ಪುರಿ ಜಗನ್ನಾಥ ದೇವಾಲಯದ ಬಗ್ಗೆ:
- ಇದು ಒಡಿಶಾದ ಪುರಿಯಲ್ಲಿರುವ ಶ್ರೀ ಕೃಷ್ಣನ ರೂಪವಾದ ಜಗನ್ನಾಥನಿಗೆ ಸಮರ್ಪಿತವಾದ ಪ್ರಮುಖ ವೈಷ್ಣವ ದೇವಾಲಯವಾಗಿದೆ.
- ಈ ದೇವಾಲಯವನ್ನು 12 ನೇ ಶತಮಾನದಲ್ಲಿ ಪೂರ್ವ ಗಂಗ ರಾಜವಂಶದ ರಾಜ ಅನತವರ್ಮನ್ ಚೋಡಗಂಗಾ ದೇವ (Anatavarman Chodaganga Deva)ನಿಂದ ನಿರ್ಮಿಸಲಾಗಿದೆ ಎಂದು ನಂಬಲಾಗಿದೆ.
- ಜಗನ್ನಾಥ ಪುರಿ ದೇವಸ್ಥಾನವನ್ನು ‘ಯಮನಿಕ ತೀರ್ಥ’ (Yamanika Tirtha) ಎಂದು ಕರೆಯಲಾಗುತ್ತದೆ, ಅಲ್ಲಿ ಹಿಂದೂ ನಂಬಿಕೆಗಳ ಪ್ರಕಾರ, ಪುರಿಯಲ್ಲಿ ಮೃತ್ಯು ದೇವತೆಯಾದ ‘ಯಮ’ನ ಶಕ್ತಿ, ಜಗನ್ನಾಥನ ಉಪಸ್ಥಿತಿಯಿಂದಾಗಿ ಶೂನ್ಯ ಗೊಂಡಿರುತ್ತದೆ.
- ಈ ದೇವಾಲಯವನ್ನು “ವೈಟ್ ಪಗೋಡ” ಎಂದು ಕರೆಯಲಾಗುತ್ತದೆ ಮತ್ತು ಇದು ಚಾರ್ ಧಾಮ್ ತೀರ್ಥಯಾತ್ರೆಗಳ ಭಾಗವಾಗಿದೆ (ಬದ್ರಿನಾಥ್, ದ್ವಾರಕಾ, ಪುರಿ, ರಾಮೇಶ್ವರಂ).
- ಪುರಿ ದೇವಸ್ಥಾನವು ವಾರ್ಷಿಕ ರಥ ಯಾತ್ರೆ ಅಥವಾ ರಥೋತ್ಸವಕ್ಕೆ ಹೆಸರುವಾಸಿಯಾಗಿದೆ, ಇದರಲ್ಲಿ ಮೂರು ಪ್ರಮುಖ ದೇವತೆಗಳನ್ನು ಬೃಹತ್ ಮತ್ತು ವಿಸ್ತಾರವಾಗಿ ಅಲಂಕರಿಸಿದ ದೇವಾಲಯದ ರಥಗಳಲ್ಲಿ ಕುಳ್ಳಿರಿಸಿ ಸೇವೆ ಸಲ್ಲಿಸಲಾಗುತ್ತದೆ.
ವಿಷಯಗಳು: ಭಾರತೀಯ ಸಂಸ್ಕೃತಿಯು ಪ್ರಾಚೀನ ಕಾಲದಿಂದ ಆಧುನಿಕ ಕಾಲದವರೆಗೆ ಕಲಾ ಪ್ರಕಾರಗಳು, ಸಾಹಿತ್ಯ ಮತ್ತು ವಾಸ್ತುಶಿಲ್ಪದ ಪ್ರಮುಖ ಅಂಶಗಳನ್ನು ಒಳಗೊಂಡಿದೆ.
ಅಲೆಕ್ಸಾಂಡರ್ ಮತ್ತು ಚಂದ್ರಗುಪ್ತ ಮೌರ್ಯ:
(Alexander and Chandragupta Maurya)
ಸಂದರ್ಭ:
ಇತ್ತೀಚೆಗೆ,ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಕ್ರಿಸ್ತಪೂರ್ವ 4 ನೇ ಶತಮಾನದಲ್ಲಿ ಮೌರ್ಯ ಸಾಮ್ರಾಜ್ಯವನ್ನು ಸ್ಥಾಪಿಸಿದ ಚಂದ್ರಗುಪ್ತ ಮೌರ್ಯ ಅವರು ಮ್ಯಾಸಿಡೋನಿಯಾದ ದೊರೆ ಅಲೆಕ್ಸಾಂಡರ್ ನನ್ನು ಯುದ್ಧದಲ್ಲಿ ಸೋಲಿಸಿದ್ದರು ಎಂದು ಹೇಳಿದರು ಆದರೆ, ಇತಿಹಾಸಕಾರರು ಇನ್ನೂ ಅಲೆಕ್ಸಾಂಡರ್ ನನ್ನು “ಮಹಾನ್ / ಗ್ರೇಟ್ ಎಂದು ಕರೆಯುತ್ತಾರೆ ಎಂದು ಹೇಳಿದ್ದಾರೆ.
ಪರಂಪರೆಗಳು ಅಲೆಕ್ಸಾಂಡರ್ VS ಚಂದ್ರಗುಪ್ತ:
ಅಲೆಕ್ಸಾಂಡರ್:
ಅಲೆಕ್ಸಾಂಡರ್ ಪ್ರಾಚೀನ ಗ್ರೀಸ್‌ನ ಪೆಲ್ಲಾದಲ್ಲಿ 356 BC ಯಲ್ಲಿ ಜನಿಸಿದರು ಮತ್ತು ಅವರ ತಂದೆ ರಾಜ ಫಿಲಿಪ್ II ರ ನಂತರ 20 ನೇ ವಯಸ್ಸಿನಲ್ಲಿ ಅಧಿಕಾರಕ್ಕೆ ಬಂದನು .
ಆತನ ಅದ್ಭುತ ಮಿಲಿಟರಿ ವಿಜಯಗಳಿಂದಾಗಿ ಅಲೆಕ್ಸಾಂಡರ್ ನು ‘ಶ್ರೇಷ್ಠ’/ಗ್ರೇಟ್ ಎಂದು ಕರೆಯಲ್ಪಟ್ಟಿದ್ದಾನೆ.
- ಅಲೆಕ್ಸಾಂಡರ್ ಗೆ 30 ವರ್ಷ ವಯಸ್ಸಾಗುವ ವೇಳೆಗೆ ಆಗಿನ ಕಾಲದಲ್ಲಿ ಜಗತ್ತು ಕಂಡ ಅತಿದೊಡ್ಡ ಸಾಮ್ರಾಜ್ಯವನ್ನು ಅವರು ಸ್ಥಾಪಿಸಿದರು, ಇದು ಆಧುನಿಕ ಪಶ್ಚಿಮ ಮತ್ತು ಮಧ್ಯ ಏಷ್ಯಾದಾದ್ಯಂತ ಗ್ರೀಸ್‌ನಿಂದ ಭಾರತದ ವಾಯುವ್ಯ ಗಡಿರೇಖೆಯವರೆಗೆ ಹರಡಿತ್ತು.
- ತರುವಾಯ, ಚೆಂಘಿಸ್ ಖಾನ್ (1162-1227) ಏಷ್ಯಾ ಮತ್ತು ಯುರೋಪ್‌ನ ದೊಡ್ಡ ಪ್ರದೇಶದ ಮೇಲೆ ತನ್ನ ಅಧಿಕಾರವನ್ನು ಸ್ಥಾಪಿಸಿದ್ದನು ಮತ್ತು ಇತರ ಪರಾಕ್ರಮಿ ದಿಗ್ವಿಜಯಿಗಳಾದ ಟ್ಯಾಮರ್ಲೇನ್, ಅಟಿಲ್ಲಾ ದಿ ಹೂನ್ ಮತ್ತು ಚಾರ್ಲೆಮ್ಯಾಗ್ನೆ, ಹಾಗೆಯೇ ಅಶೋಕ, ಅಕ್ಬರ್ ಮತ್ತು ಔರಂಗಜೇಬ್ ಅವರುಗಳು ಸಹ ತಮ್ಮದೇ ಆದ ಬೃಹತ್ ಸಾಮ್ರಾಜ್ಯಗಳನ್ನು ನಿರ್ಮಿಸಿದ್ದರು.
ಭಾರತದ ಮೇಲೆ ಅಲೆಗ್ಸಾಂಡರ್ ನ ದಾಳಿ:
- 327 BC ಯಲ್ಲಿ, ಅಲೆಕ್ಸಾಂಡರ್ ಹಳೆಯ ಪರ್ಷಿಯನ್ ಸಾಮ್ರಾಜ್ಯದ ಅತ್ಯಂತ ದೂರದ ಗಡಿಯಾದ ಸಿಂಧೂ ನದಿಯನ್ನು ದಾಟಿದನು ಮತ್ತು ಸುಮಾರು ಎರಡು ವರ್ಷಗಳ ಕಾಲ ತನ್ನ ಭಾರತೀಯ ಕಾರ್ಯಾಚರಣೆಯನ್ನು ಪ್ರಾರಂಭಿಸಿದನು.
- ತಕ್ಷಶಿಲೆಯ ರಾಜ ಅಲೆಕ್ಸಾಂಡರ್‌ಗೆ ಶರಣಾದನು.
- ನಂತರ ನಡೆದ ಹೈಡಾಸ್ಪೆಸ್ ಯುದ್ಧದಲ್ಲಿ (battle of Hydaspes) ಅಲೆಕ್ಸಾಂಡರ್ ನು ರಾಜ ಪೋರಸ್ ವಿರುದ್ಧ ಗೆದ್ದನು.
- ಪೋರಸ್‌ನ ಸೋಲಿನ ನಂತರ, ಅಲೆಕ್ಸಾಂಡರ್ ಗಂಗಾನದಿಯ ಜಲಾನಯನ ಪ್ರದೇಶದ ಹೃದಯಭಾಗಕ್ಕೆ ತೆರಳಲು ಬಯಸಿದನು – ಆದರೆ ಪಂಜಾಬ್‌ನ ಐದು ನದಿಗಳಲ್ಲಿ ಕೊನೆಯ ಬಿಯಾಸ್ ಅನ್ನು ತಲುಪಿದ ನಂತರ, ಅವನ ಜನರಲ್‌ಗಳು ಮುಂದೆ ಹೋಗಲು ನಿರಾಕರಿಸಿದರು.
- ಆವಾಗ ಅಲೆಕ್ಸಾಂಡರ್ ತನ್ನ ರಾಜ್ಯಕ್ಕೆ ಮರಳುವುದು ಅನಿವಾರ್ಯವಾಯಿತು, ಮತ್ತು ಅವನು ಸಿಂಧೂನದಿಯ ದಕ್ಷಿಣಕ್ಕೆ ಅದರ ಮುಖಜಭೂಮಿಯ ವರೆಗೂ ಹಿಂಬಾಲಿಸಿದನು, ಅಲ್ಲಿ ಅವನು ತನ್ನ ಸೈನ್ಯದ ಒಂದು ಭಾಗವನ್ನು ಸಮುದ್ರದ ಮೂಲಕ ಮೆಸೊಪಟ್ಯಾಮಿಯಾಕ್ಕೆ ಕಳುಹಿಸಿದನು, ಆದರೆ ಇನ್ನೊಂದು ಭಾಗವನ್ನು ಮಕ್ರಾನ್ ಕರಾವಳಿಯ ಉದ್ದಕ್ಕೂ ಭೂಪ್ರದೇಶದ ಮೂಲಕ ಮುನ್ನಡೆಸಿದನು.
ಪರಂಪರೆ:
ಅವನ ಸ್ಥಗಿತಗೊಂಡ ಭಾರತೀಯ ಅಭಿಯಾನದ ಹೊರತಾಗಿಯೂ, ಅಲೆಕ್ಸಾಂಡರ್ ಯಾವುದೇ ಯುದ್ಧದಲ್ಲಿ ಸಹ ಪರಾಜಿತನಾಗದೆ ಅಜೇಯವಾಗಿ ಸತ್ತನೆಂದು ನಂಬಲಾಗಿದೆ ಆತನು ಇಡೀ ಜಗತ್ತನ್ನು ಗೆಲ್ಲುತ್ತಾನೆ ಎಂಬ ದೇವವಾಣಿಗಳ ಭವಿಷ್ಯವಾಣಿಯನ್ನು ತೋರಿಕೆಯಲ್ಲಿ ಪೂರೈಸಿದ್ದಾನೆ.
ಚಂದ್ರಗುಪ್ತ:
- ಅವರು ಸಿಂಧೂ ಮತ್ತು ಗಂಗಾ ಎರಡರ ಬಯಲು ಪ್ರದೇಶಗಳನ್ನು ನಿಯಂತ್ರಿಸುವ ಮತ್ತು ಪೂರ್ವ ಮತ್ತು ಪಶ್ಚಿಮ ಸಾಗರಗಳವರೆಗೆ ವಿಸ್ತರಿಸಿದ ಸಾಮ್ರಾಜ್ಯದ ನಿರ್ಮಾಣಕಾರ.
- ಪಾಟಲಿಪುತ್ರವನ್ನು ತನ್ನ ಸಾಮ್ರಾಜ್ಯದ ಕೇಂದ್ರಭಾಗದಲ್ಲಿ ಹೊಂದಿದ್ದ, ಮೌರ್ಯ ಸಾಮ್ರಾಜ್ಯವು ಮೊದಲ ಬಾರಿಗೆ ದಕ್ಷಿಣ ಏಷ್ಯಾದ ಬಹುಭಾಗವನ್ನು ಏಕೀಕರಿಸಿತು.
- ಚಂದ್ರಗುಪ್ತ ಕೇಂದ್ರೀಕೃತ ಆಡಳಿತದ ವ್ಯಾಪಕ ಮತ್ತು ಸಮರ್ಥ ವ್ಯವಸ್ಥೆಯ ಅಡಿಪಾಯವನ್ನು ಹಾಕಿದರು ಮತ್ತು ತೆರಿಗೆ ಸಂಗ್ರಹವು ಅವನ ಸಾಮ್ರಾಜ್ಯದ ನೆಲೆಗಳನ್ನು ರೂಪಿಸಿತು.
- ಮೂಲಸೌಕರ್ಯಗಳ ನಿರ್ಮಾಣ ಮತ್ತು ತೂಕ ಮತ್ತು ಅಳತೆಗಳ ಪ್ರಮಾಣೀಕರಣದೊಂದಿಗೆ ವ್ಯಾಪಾರ ಮತ್ತು ಕೃಷಿಯನ್ನು ಸುಧಾರಿಸಲಾಯಿತು ಮತ್ತು ನಿಯಂತ್ರಿಸಲಾಯಿತು ಮತ್ತು ದೊಡ್ಡ ಸೈನ್ಯಕ್ಕಾಗಿ ನಿಬಂಧನೆಗಳನ್ನು ಮಾಡಲಾಯಿತು.
ಕೆಲವು ಗ್ರೀಕ್ ಮೂಲಗಳು ಚಂದ್ರಗುಪ್ತನು ಅಲೆಕ್ಸಾಂಡರ್‌ನ ಭಾರತೀಯ ಕಾರ್ಯಾಚರಣೆಯ ಸಮಯದಲ್ಲಿ ಅವನೊಂದಿಗೆ ಸಂವಹನ ನಡೆಸುತ್ತಿದ್ದನೆಂದು ಸೂಚಿಸುತ್ತವೆ.
ಪರಂಪರೆ:
ಚಂದ್ರಗುಪ್ತನು ಜನಪ್ರಿಯವಲ್ಲದ ನಂದ ವಂಶದ ಕೊನೆಯ ರಾಜ ಧನನಂದನನ್ನು ಪದಚ್ಯುತಗೊಳಿಸಿ ಅವನ ರಾಜಧಾನಿ ಪಾಟಲಿಪುತ್ರವನ್ನು ಆಕ್ರಮಿಸಿಕೊಂಡನು.
- ಕೌಟಿಲ್ಯನ ಕುತಂತ್ರ ಮತ್ತು ತಂತ್ರದಿಂದ ಮಾರ್ಗದರ್ಶಿಸಲ್ಪಟ್ಟ ಮತ್ತು ತನ್ನದೇ ಆದ ಮಹಾನ್ ಮಿಲಿಟರಿ ಪರಾಕ್ರಮದಿಂದ ಚಂದ್ರಗುಪ್ತನು ತನ್ನ ಸಾಮ್ರಾಜ್ಯಶಾಹಿ ಮಹತ್ವಾಕಾಂಕ್ಷೆಗಳನ್ನು ಪೂರೈಸಿಕೊಂಡನು.
- ಚಂದ್ರಗುಪ್ತನು ಒಮ್ಮೆ ಗಂಗಾನದಿಯ ಬಯಲಿನ ಮೇಲೆ ತನ್ನ ಅಧಿಪತ್ಯವನ್ನು ಸ್ಥಾಪಿಸಿದ ನಂತರ, ಅಲೆಕ್ಸಾಂಡರ್ನ ಸೈನ್ಯದ ಹಿಮ್ಮೆಟ್ಟುವಿಕೆಯಿಂದ ಆ ಪ್ರದೇಶದಲ್ಲಿ ಉಂಟಾಗಿದ್ದ ಶಕ್ತಿ ನಿರ್ವಾತವನ್ನು ತುಂಬಲು ಆತನು ವಾಯುವ್ಯ ಭಾಗದ ಕಡೆಗೆ ತೆರಳಿದನು.
ಚಂದ್ರಗುಪ್ತನು ಸಿಂಧೂ ಮತ್ತು ಗಂಗಾ ಬಯಲು ಪ್ರದೇಶಗಳನ್ನು ಮತ್ತು ಗಡಿನಾಡುಗಳನ್ನು ನಿಯಂತ್ರಿಸುವುದರೊಂದಿಗೆ ಯಾವುದೇ ಮಾನದಂಡಗಳ ಮೂಲಕ ಅಸಾಧಾರಣ ಸಾಮ್ರಾಜ್ಯ ಎಂದು ಕರೆಯಬಹುದಾದ ಮೌರ್ಯ ಸಾಮ್ರಾಜ್ಯದ ಪ್ರಾದೇಶಿಕ ಅಡಿಪಾಯವನ್ನು ಹಾಕಲಾಯಿತು.
ವಿಷಯಗಳು: ಭಾರತೀಯ ಸಂಸ್ಕೃತಿಯು ಪ್ರಾಚೀನ ಕಾಲದಿಂದ ಆಧುನಿಕ ಕಾಲದವರೆಗೆ ಕಲಾ ಪ್ರಕಾರಗಳು, ಸಾಹಿತ್ಯ ಮತ್ತು ವಾಸ್ತುಶಿಲ್ಪದ ಪ್ರಮುಖ ಅಂಶಗಳನ್ನು ಒಳಗೊಂಡಿದೆ.
ಗುರು ನಾನಕ್ ದೇವ್ ಜಯಂತಿ:
(Guru Nanak Dev Jayanti)
ಸಂದರ್ಭ:
ಗುರು ನಾನಕ್ ದೇವ್ ಜಿ ಜಯಂತಿ, ಗುರುನಾನಕ್ ಅವರ ಪ್ರಕಾಶ್ ಉತ್ಸವ ಮತ್ತು ಗುರು ನಾನಕ್ ದೇವ್ ಜಿ ಗುರುಪುರಬ್ ಎಂದೂ ಕರೆಯುತ್ತಾರೆ, ಇದು ಸಿಖ್ಖರ ಮೊದ್ಲ ಗುರುವಾದ ಗುರು ನಾನಕ್ ಅವರ ಜನ್ಮವನ್ನು ಆಚರಿಸುತ್ತದೆ.
- ಗುರುನಾನಕ್ ಜಯಂತಿಯನ್ನು ಕಾರ್ತಿಕ ಮಾಸದ ಹುಣ್ಣಿಮೆಯಂದು ಆಚರಿಸಲಾಗುತ್ತದೆ, ಇದನ್ನು ಕಾರ್ತಿಕ ಪೂರ್ಣಿಮೆ ಎಂದೂ ಕರೆಯುತ್ತಾರೆ.
- ಈ ವರ್ಷ, ಗುರುನಾನಕ್ ದೇವ್ ಜಿ ಅವರ ಅನುಯಾಯಿಗಳು ನವೆಂಬರ್ 19, 2021 ರಂದು ಗುರುನಾನಕ್ ಜಯಂತಿಯನ್ನು ಆಚರಿಸುತ್ತಾರೆ.
- ಅಂದು ಸಿಖ್ಖರ ಹತ್ತು ಗುರುಗಳಲ್ಲಿ ಮೊದಲನೆಯ ಗುರುಗಳಾದ ನಾನಕ್ ದೇವ್ ಜಿ ಅವರ 552 ನೇ ಜನ್ಮ ವಾರ್ಷಿಕೋತ್ಸವವನ್ನು ಆಚರಿಸಲಾಗುತ್ತದೆ.
ಗುರುನಾನಕ್ ದೇವ್ ಜಿ ಕುರಿತು:
- ಗುರುನಾನಕ್ ಅವರು ಲಾಹೋರ್ ಬಳಿಯ ತಲ್ವಾಂಡಿ ಎಂಬ ಹಳ್ಳಿಯಲ್ಲಿ ಜನಿಸಿದರು, (ನಂತರ ಇದನ್ನು ನಂಕಾನಾ ಸಾಹಿಬ್ ಎಂದು ಮರುನಾಮಕರಣ ಮಾಡಲಾಯಿತು).
- ಗುರುನಾನಕ್ ಅವರ ಅತ್ಯಂತ ಪ್ರಸಿದ್ಧ ಬೋಧನೆ ಎಂದರೆ ದೇವರು ಒಬ್ಬನೇ ಮತ್ತು ಯಾವುದೇ ಆಚರಣೆಗಳು ಅಥವಾ ಪುರೋಹಿತರ ಸಹಾಯವಿಲ್ಲದೆ ಪ್ರತಿಯೊಬ್ಬ ವ್ಯಕ್ತಿಯು ದೇವರನ್ನು ತಲುಪಬಹುದು.
- ಅವರ ಅತ್ಯಂತ ಮೂಲಭೂತವಾದ ಸಾಮಾಜಿಕ ಬೋಧನೆಗಳು ಜಾತಿ ವ್ಯವಸ್ಥೆಯನ್ನು ಖಂಡಿಸಿದವು. ಮತ್ತು ಜಾತಿ ಅಥವಾ ಲಿಂಗವನ್ನು ಲೆಕ್ಕಿಸದೆ ಪ್ರತಿಯೊಬ್ಬರೂ ಸಮಾನರು ಎಂದು ಬೋಧಿಸಿದರು.
- ಅವರು ದೇವರ ಪರಿಕಲ್ಪನೆಯನ್ನು ‘ವಾಹೆಗುರು’ ರೂಪದಲ್ಲಿ ಪ್ರಸ್ತುತಪಡಿಸಿದರು – ಅದರ ಪ್ರಕಾರ ದೇವರು ನಿರಾಕಾರ, ಕಾಲಾತೀತ, ಸರ್ವವ್ಯಾಪಿ ಮತ್ತು ಅಗೋಚರವಾಗಿರುವ ಒಂದು ಅಸ್ತಿತ್ವವಾಗಿದೆ. ಸಿಖ್ ಧರ್ಮದಲ್ಲಿ ‘ಈಶ್ವರ’ನನ್ನು ‘ಅಕಲ್ ಪುರಖ್’ ಮತ್ತು ‘ನಿರಂಕಾರ್’ ಎಂದೂ ಕರೆಯಲಾಗುತ್ತದೆ.
- ಸಿಖ್ಖರ ಪವಿತ್ರ ಗ್ರಂಥವಾದ ಗುರು ಗ್ರಂಥ ಸಾಹಿಬ್, ಗುರು ನಾನಕ್ ರಚಿಸಿದ 974 ಕಾವ್ಯಾತ್ಮಕ ಸ್ತೋತ್ರಗಳನ್ನು ಒಳಗೊಂಡಿದೆ.
- ಅವರು 16 ನೇ ಶತಮಾನದಲ್ಲಿ ಅಂತರ-ಧರ್ಮೀಯ ಚರ್ಚೆಯನ್ನು ಪ್ರಾರಂಭಿಸಿದರು ಮತ್ತು ಅವರ ಕಾಲದ ಹೆಚ್ಚಿನ ಧಾರ್ಮಿಕ ಪಂಗಡಗಳೊಂದಿಗೆ ಸಂಭಾಷಣೆಗಳನ್ನು ನಡೆಸಿದರು.
- ಐದನೇ ಸಿಖ್ ಗುರು ಅರ್ಜನ್ ದೇವ್ (1563-1606) ಸಂಕಲಿಸಿದ ಆದಿ ಗ್ರಂಥದಲ್ಲಿ ಗುರುನಾನಕ್ ದೇವ್ ಜಿ ಅವರ ಲಿಖಿತ ಸಂಯೋಜನೆಗಳನ್ನು ಸೇರಿಸಲಾಗಿದೆ.
- 10 ನೇ ಗುರು ಗುರು ಗೋಬಿಂದ್ ಸಿಂಗ್ (1666-1708) ಮಾಡಿದ ಸೇರ್ಪಡೆಗಳ ನಂತರ ಇದನ್ನು ಗುರು ಗ್ರಂಥ ಸಾಹಿಬ್ ಎಂದು ಕರೆಯಲಾಗುತ್ತದೆ.
ಗುರುನಾನಕ್ ಅವರ ಬೋಧನೆಗಳು: ಎಲ್ಲರಿಗೂ ಶಾಂತಿ ಮತ್ತು ಸಾಮರಸ್ಯ.
- ಗುರುನಾನಕ್ ಸಮಾನತೆಯ ಮಹಾನ್ ಹೋರಾಟಗಾರರಾಗಿದ್ದರು. ಯಾವುದೇ ಶ್ರೇಣೀಕರಣವಿಲ್ಲದ ಜಾತಿರಹಿತ ಸಮಾಜವನ್ನು ರಚಿಸುವ ಗುರಿಯನ್ನು ಅವರು ಹೊಂದಿದ್ದರು.
- ಅವರಿಗೆ ಜಾತಿ, ಮತ, ಧರ್ಮ ಮತ್ತು ಭಾಷೆಯ ಆಧಾರದ ಮೇಲೆ ಭಿನ್ನತೆಗಳು ಮತ್ತು ಬಹು ಗುರುತುಗಳು ಅಪ್ರಸ್ತುತವಾಗಿತ್ತು.
- ಅವರು ಹೇಳಿದ್ದರು, “ಅಪರಾಧವೆಂದರೆ ಜಾತಿ, ಜನ್ಮದ ವ್ಯತ್ಯಾಸವು ವ್ಯರ್ಥ. ಭಗವಂತ ಎಲ್ಲ ಜೀವಿಗಳಿಗೂ ಆಶ್ರಯ ನೀಡುತ್ತಾನೆ”.
- ಮಹಿಳೆಯರನ್ನು ಉಲ್ಲೇಖಿಸಿ ಗುರುನಾನಕ್ ಜಿ ಹೀಗೆ ಹೇಳುತ್ತಾರೆ: “ಪುರುಷರಿಗೆ ಜನ್ಮ ನೀಡುವ ಅವರು ಹೇಗೆ ಕಡಿಮೆ ದರ್ಜೆಯವರಾಗುತ್ತಾರೆ? ಮಹಿಳೆಯರು ಮತ್ತು ಪುರುಷರು ದೇವರ ಕೃಪೆಗೆ ಸಮಾನವಾಗಿ ಪಾತ್ರರಾಗುತ್ತಾರೆ ಮತ್ತು ಎಲ್ಲರೂ ತಮ್ಮ ಕರ್ಮ ಗಳಿಂದಾಗಿ ಆತನಿಗೆ ಸಮಾನವಾಗಿ ಜವಾಬ್ದಾರರಾಗಿರುತ್ತಾರೆ.
- ಒಟ್ಟಿಗೆ ವಾಸಿಸುವ ಮತ್ತು ಸಾಮರಸ್ಯದಿಂದ ಒಟ್ಟಿಗೆ ಕೆಲಸ ಮಾಡುವ ಮನೋಭಾವವು ಗುರುನಾನಕ್ ಸ್ತೋತ್ರಗಳ ಮೂಲಕ ಸಾಗುವ ಒಂದು ಸ್ಥಿರವಾದ ಚಿಂತನೆಯ ಎಳೆಯಾಗಿದೆ.
- ಅವರು ಸಿಖ್ ಧರ್ಮದ ಮೂರು ಸ್ತಂಭಗಳಾದ ನಾಮ್ ಜಪ್ನಾ, ಕಿರಾತ್ ಕರ್ಣಿ ಮತ್ತು ವಂದ್ ಚಕ್ನಾಗಳನ್ನು ಸ್ಥಾಪಿಸಿದರು.
- ಅವರು ಪ್ರಜ್ಞಾಪೂರ್ವಕವಾಗಿ ತಮ್ಮ ಇಬ್ಬರು ಸಹಚರರಾದ ಭಾಯಿ ಬಾಲಾ, ಎಂಬ ಓರ್ವ ಹಿಂದೂ ಮತ್ತು ಭಾಯಿ ಮರದಾನಾ, ಎಂಬ ಒಬ್ಬ ಮುಸಲ್ಮಾನರೊಂದಿಗೆ ದೂರ ದೂರದ ಸ್ಥಳಗಳಿಗೆ ಹೋಗಿ ಅನೇಕ ಸಂತರು ಮತ್ತು ಆಧ್ಯಾತ್ಮಿಕ ಶಕ್ತಿಗಳನ್ನು ಹೊಂದಿದ್ದ ಚಾರ್ಲಟನ್‌ಗಳು ಮತ್ತು ಸಾಮಾಜಿಕ ಅನುಯಾಯಿಗಳನ್ನು ಹೊಂದಿದ್ದ ಕೆಲವು ಸೂಫಿಗಳೊಂದಿಗೆ ಸಂವಾದ ನಡೆಸಿದರು.
ಅವರ ಬೋಧನೆಗಳ ಮಹತ್ವ ಮತ್ತು ಪ್ರಸ್ತುತತೆ:
ಗುರು ನಾನಕ್ ದೇವ್ ಜಿ,ಶ್ರೇಷ್ಠ ಆಧ್ಯಾತ್ಮಿಕ ನಾಯಕರಲ್ಲಿ ಒಬ್ಬ ಶ್ರೇಷ್ಠ ಸಂತ-ಸಂಯೋಜಕರಾಗಿದ್ದರು ಮತ್ತು, ಅವರ ಆಲೋಚನೆಗಳು, ಚಿಂತನೆಗಳು ಮತ್ತು ಬೋಧನೆಗಳು ಹಿಂದೆಂದಿಗಿಂತಲೂ ಇಂದು ಹೆಚ್ಚಿನ ಪ್ರಸ್ತುತತೆಯನ್ನು ಪಡೆದುಕೊಳ್ಳುತ್ತವೆ ಕಾರಣ ಅವುಗಳು ಜಗತ್ತಿನಾದ್ಯಂತ ಶಾಂತಿ, ಸಮಾನತೆ ಮತ್ತು ಸಮೃದ್ಧಿಯನ್ನು ಉತ್ತೇಜಿಸಬಹುದವಾಗಿವೆ.
ಸಾಮಾನ್ಯ ಅಧ್ಯಯನ ಪತ್ರಿಕೆ : 2
ವಿಷಯಗಳು: ಸರ್ಕಾರದ ನೀತಿಗಳು ಮತ್ತು ವಿವಿಧ ಕ್ಷೇತ್ರಗಳಲ್ಲಿನ ಅಭಿವೃದ್ಧಿಯ ಅಡಚಣೆಗಳು ಮತ್ತು ಅವುಗಳ ವಿನ್ಯಾಸ ಮತ್ತು ಅನುಷ್ಠಾನದಿಂದ ಉಂಟಾಗುವ ಸಮಸ್ಯೆಗಳು.
PESA ಕಾಯಿದೆ:
(PESA Act)
ಸಂದರ್ಭ:
ಆಜಾದಿ ಕಾ ಅಮೃತ್ ಮಹೋತ್ಸವದ ಭಾಗವಾಗಿ PESA ಕಾಯ್ದೆಯ 25 ನೇ ವರ್ಷವನ್ನು ಆಚರಿಸಲು ಪಂಚಾಯತ್‌ಗಳ (ಪರಿಶಿಷ್ಟ/ಬುಡಕಟ್ಟು ಪ್ರದೇಶಗಳಿಗೆ ವಿಸ್ತರಣೆ) ಕಾಯಿದೆ, 1996 (PESA) (Panchayats (Extension to the Scheduled Areas) Act, 1996 (PESA) to celebrate 25th year of PESA Act)ನಿಬಂಧನೆಗಳ ಕುರಿತು ಒಂದು ದಿನದ ರಾಷ್ಟ್ರೀಯ ಸಮ್ಮೇಳನವನ್ನು ಆಯೋಜಿಸಲಾಗಿದೆ.
PESA ಕಾಯಿದೆ, 1996 ಕುರಿತು:
ಪಂಚಾಯತ್‌ಗಳ (ಪರಿಶಿಷ್ಟ ಪ್ರದೇಶಗಳಿಗೆ ವಿಸ್ತರಣೆ) ಕಾಯಿದೆ, 1996 ಅಥವಾ PESA ಕಾಯಿದೆಯು ಭಾರತದ ಪರಿಶಿಷ್ಟ/ಬುಡಕಟ್ಟು ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಸಾಂಪ್ರದಾಯಿಕ ಗ್ರಾಮ ಸಭೆಗಳ ಮೂಲಕ ಸ್ವ-ಆಡಳಿತವನ್ನು ಖಾತ್ರಿಪಡಿಸಿಕೊಳ್ಳಲು ಭಾರತ ಸರ್ಕಾರವು ಜಾರಿಗೊಳಿಸಿದ ಕಾನೂನಾಗಿದೆ.
- ಇದನ್ನು 1996 ರಲ್ಲಿ ಸಂಸತ್ತು ಜಾರಿಗೊಳಿಸಿತು ಮತ್ತು ಡಿಸೆಂಬರ್ 24, 1996 ರಂದು ಜಾರಿಗೆ ಬಂದಿತು.
- PESA ಕಾಯ್ದೆಯನ್ನು ಭಾರತದಲ್ಲಿ ಬುಡಕಟ್ಟು ಶಾಸನದ ಬೆನ್ನೆಲುಬು ಎಂದು ಪರಿಗಣಿಸಲಾಗಿದೆ.
- PESA ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯ ಸಾಂಪ್ರದಾಯಿಕ ವ್ಯವಸ್ಥೆಯನ್ನು ಗುರುತಿಸುತ್ತದೆ ಮತ್ತು ಜನರ ಸ್ವ-ಆಡಳಿತವನ್ನು ಬೆಂಬಲಿಸುತ್ತದೆ.
ಹಿನ್ನೆಲೆ:
- ಗ್ರಾಮೀಣ ಭಾರತದಲ್ಲಿ ಸ್ಥಳೀಯ ಸ್ವ-ಆಡಳಿತವನ್ನು ಉತ್ತೇಜಿಸಲು, 1992 ರಲ್ಲಿ ಸಾಂವಿಧಾನಕ್ಕೆ 73 ನೇ ತಿದ್ದುಪಡಿಯನ್ನು ತರಲಾಯಿತು. ಈ ತಿದ್ದುಪಡಿಯ ಮೂಲಕ ಮೂರು ಹಂತದ ಪಂಚಾಯತ್ ರಾಜ್ ಸಂಸ್ಥೆಯನ್ನು ಶಾಸನಬದ್ಧ ಗೊಳಿಸಲಾಯಿತು.
- ಆದಾಗ್ಯೂ, ಅನುಚ್ಛೇದ 243(M) ಅಡಿಯಲ್ಲಿ ಪರಿಶಿಷ್ಟ ಮತ್ತು ಬುಡಕಟ್ಟು ಪ್ರದೇಶಗಳಿಗೆ ಅದರ ಅನ್ವಯವನ್ನು ನಿರ್ಬಂಧಿಸಲಾಗಿದೆ.
- 1995 ರಲ್ಲಿ ಭೂರಿಯಾ ಸಮಿತಿಯ ಶಿಫಾರಸುಗಳ ನಂತರ, ಭಾರತದ ಬುಡಕಟ್ಟು ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಬುಡಕಟ್ಟು ಸ್ವ-ಆಡಳಿತವನ್ನು ಖಾತ್ರಿಪಡಿಸಲು ಬುಡಕಟ್ಟು ಪ್ರದೇಶಗಳಿಗೆ ಪಂಚಾಯತ್ ವಿಸ್ತರಣೆ (PESA) ಕಾಯಿದೆ 1996 ಅಸ್ತಿತ್ವಕ್ಕೆ ಬಂದಿತು.
- PESA ಗ್ರಾಮ ಸಭೆಗೆ ಸಂಪೂರ್ಣ ಅಧಿಕಾರವನ್ನು ನೀಡಿದೆ, ಆದರೆ ರಾಜ್ಯ ಶಾಸಕಾಂಗವು ಪಂಚಾಯತ್ ಮತ್ತು ಗ್ರಾಮ ಸಭೆಗಳ ಸರಿಯಾದ ಕಾರ್ಯನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲು ಸಲಹಾತ್ಮಕ ಪಾತ್ರವನ್ನು ಹೊಂದಿದೆ.
- ಗ್ರಾಮ ಸಭೆಗೆ ನಿಯೋಜಿಸಲಾದ ಅಧಿಕಾರವನ್ನು ಉನ್ನತ ಮಟ್ಟದಿಂದ ಮೊಟಕುಗೊಳಿಸಲಾಗುವುದಿಲ್ಲ ಮತ್ತು ಅದು ತನ್ನ ಕಾರ್ಯವೈಖರಿಗೆ ಸಂಪೂರ್ಣ ಸ್ವಾತಂತ್ರವನ್ನು ಹೊಂದಿರುತ್ತದೆ.
ಗ್ರಾಮ ಸಭೆಗಳಿಗೆ ನೀಡಲಾದ ಅಧಿಕಾರಗಳು ಮತ್ತು ಕಾರ್ಯಗಳು:
- ಸ್ಥಳಾಂತರಗೊಂಡ ವ್ಯಕ್ತಿಗಳ ಭೂಸ್ವಾಧೀನ, ಪುನರ್ವಸತಿ ಮತ್ತು ಪುನರ್ವಸತಿಯಲ್ಲಿ ಕಡ್ಡಾಯ ಸಮಾಲೋಚನೆಯ ಹಕ್ಕು.
- ಸಾಂಪ್ರದಾಯಿಕ ನಂಬಿಕೆ, ಬುಡಕಟ್ಟು ಸಮುದಾಯಗಳ ಸಂಸ್ಕೃತಿಯ ರಕ್ಷಣೆ
- ಕಿರು ಅರಣ್ಯ ಉತ್ಪನ್ನಗಳ ಮಾಲೀಕತ್ವ
- ಸ್ಥಳೀಯ ವಿವಾದಗಳ ಪರಿಹಾರ
- ಭೂ ಪರಭಾರೆ ತಡೆಗಟ್ಟುವಿಕೆ
- ಗ್ರಾಮೀಣ ಮಾರುಕಟ್ಟೆಗಳ ನಿರ್ವಹಣೆ
- ಮದ್ಯದ ಉತ್ಪಾದನೆ, ಬಟ್ಟಿ ಇಳಿಸುವಿಕೆ ಮತ್ತು ನಿಷೇಧವನ್ನು ನಿಯಂತ್ರಿಸುವ ಹಕ್ಕು.
- ಲೇವಾದೇವಿ ವ್ಯವಹಾರದ ಮೇಲೆ ನಿಯಂತ್ರಣದ ಹಕ್ಕು.
- ಬುಡಕಟ್ಟು ಪಂಗಡಗಳನ್ನು ಒಳಗೊಂಡಿರುವ ಯಾವುದೇ ಇತರ ಹಕ್ಕುಗಳು.
PESA ಗೆ ಸಂಬಂಧಿಸಿದ ಸಮಸ್ಯೆಗಳು:
ರಾಷ್ಟ್ರೀಯ ಕಾನೂನಿಗೆ ಅನುಗುಣವಾಗಿ ರಾಜ್ಯ ಸರ್ಕಾರಗಳು ತಮ್ಮ ಬುಡಕಟ್ಟು ಪ್ರದೇಶಗಳಿಗೆ ರಾಜ್ಯ ಕಾನೂನುಗಳನ್ನು ಜಾರಿಗೊಳಿಸಬೇಕು. ಇದು PESA ಕಾಯ್ದೆಯನ್ನು ಭಾಗಶಃ ಜಾರಿಗೆ ತಂದಿದೆ ಅಥವಾ PESA ಕಾಯ್ದೆಯ ಸಂಪೂರ್ಣ ಜಾರಿಗೊಳಿಸುವಿಕೆಗೆ ತೊಡಕಾಗಿದೆ.
- PESA ಕಾಯ್ದೆಯ ಭಾಗಶಃ ಅನುಷ್ಠಾನವು ಜಾರ್ಖಂಡ್‌ನಂತೆಯೇ ಆದಿವಾಸಿ ಪ್ರದೇಶಗಳಲ್ಲಿ ಸ್ವ-ಆಡಳಿತ ವ್ಯವಸ್ಥೆಯನ್ನು ಹದಗೆಡಿಸಿದೆ.
- ಸ್ಪಷ್ಟತೆಯ ಕೊರತೆ, ಕಾನೂನು ದೌರ್ಬಲ್ಯ, ಅಧಿಕಾರಶಾಹಿ ನಿರಾಸಕ್ತಿ, ರಾಜಕೀಯ ಇಚ್ಛಾಶಕ್ತಿಯ ಕೊರತೆ, ಅಧಿಕಾರದ ಕ್ರಮಾನುಗತದಲ್ಲಿನ ಬದಲಾವಣೆಗೆ ಪ್ರತಿರೋಧ ಇತ್ಯಾದಿಗಳಿಂದಾಗಿ PESA ಕಾಯ್ದೆಯು ಪೂರ್ಣಪ್ರಮಾಣದಲ್ಲಿ ಅನುಷ್ಠಾನಗೊಂಡಿಲ್ಲ ಎಂದು ಅನೇಕ ತಜ್ಞರು ಪ್ರತಿಪಾದಿಸಿದ್ದಾರೆ.
- ರಾಜ್ಯಾದ್ಯಂತ ನಡೆಸಲಾದ ಸಾಮಾಜಿಕ ಲೆಕ್ಕಪರಿಶೋಧನೆಗಳ ಪ್ರಕಾರ,ವಾಸ್ತವವಾಗಿ ಯಾವುದೇ ಸಭೆಯನ್ನು ಕರೆದು ಚರ್ಚೆ ಮಾಡದೆ ಮತ್ತು ನಿರ್ಧಾರ ತೆಗೆದುಕೊಳ್ಳದೆ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಗ್ರಾಮ ಸಭೆಯಿಂದ ಕಾಗದದ ಮೇಲೆ ಮಂಜೂರಾತಿ ನೀಡಲಾಗಿದೆ.
ವಿಷಯಗಳು: ಸಂಸತ್ತು ಮತ್ತು ರಾಜ್ಯ ಶಾಸಕಾಂಗಗಳು – ರಚನೆ, ಕಾರ್ಯವೈಖರಿ, ವ್ಯವಹಾರದ ನಡಾವಳಿಗಳು, ಅಧಿಕಾರಗಳು ಮತ್ತು ಸವಲತ್ತುಗಳು ಮತ್ತು ಇವುಗಳಿಂದ ಉಂಟಾಗುವ ಸಮಸ್ಯೆಗಳು.
ಕಾಯ್ದೆಯನ್ನು ರದ್ದುಗೊಳಿಸುವ/ಹಿಂಪಡೆಯುವ ಪ್ರಕ್ರಿಯೆ:
(The process for repealing a law)
ಸಂದರ್ಭ:
ಪ್ರಧಾನಿ ನರೇಂದ್ರ ಮೋದಿ ಅವರು ನವೆಂಬರ್ 19 ರಂದು ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಮೂರು ವಿವಾದಾತ್ಮಕ ಕೃಷಿ ಕಾನೂನುಗಳನ್ನು ರದ್ದುಗೊಳಿಸುವುದಾಗಿ/ಹಿಂಪಡೆಯುವುದಾಗಿ ಘೋಷಿಸಿದರು.
ಈ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತ ಗುಂಪುಗಳಿಗೆ ಸಂಸತ್ತಿನ ಮುಂಬರುವ ಚಳಿಗಾಲದ ಅಧಿವೇಶನದಲ್ಲಿ ಮೂರು ವಿವಾದಾತ್ಮಕ ಕೃಷಿ ಕಾನೂನುಗಳ ರದ್ದುಪಡಿಸುವ ಶಾಸಕಾಂಗ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗುವುದು ಎಂದು ಅವರು ಭರವಸೆ ನೀಡಿದರು.
ಯಾವ ಕೃಷಿ ಕಾಯ್ದೆಗಳನ್ನು ಹಿಂಪಡೆಯಲಾಗಿದೆ?
- ಕೃಷಿ ಉತ್ಪನ್ನಗಳ ವ್ಯಾಪಾರ ಮತ್ತು ಮಾರಾಟ (ಉತ್ತೇಜನ–ಸೌಲಭ್ಯ) ಕಾಯ್ದೆ 2020 ಅಥವಾ ಕೃಷಿ ಮಾರುಕಟ್ಟೆ ಕಾಯ್ದೆ:
ಕೃಷಿ ಮಾರುಕಟ್ಟೆ ಕಾಯ್ದೆಯು ರೈತರು ಮತ್ತು ವ್ಯಾಪಾರಿಗಳಿಗೆ ಕೃಷಿ ಉತ್ಪನ್ನಗಳ ಮಾರಾಟ ಮತ್ತು ಖರೀದಿಯ ಸ್ವಾತಂತ್ರ್ಯ ನೀಡುತ್ತದೆ.
ರೈತರು ತಾವು ಬೆಳೆದ ಬೆಳೆಯನ್ನು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳ (ಎಪಿಎಂಸಿ) ಹೊರಗಡೆಯೂ ಮಾರಾಟ ಮಾಡಲು ಅವಕಾಶ ಕಲ್ಪಿಸುತ್ತದೆ. ಅಲ್ಲದೇ ರೈತರ ಜಮೀನಿಗೇ ತೆರಳಿ ಯಾರು ಬೇಕಾದರೂ ರೈತರಿಂದ ನೇರವಾಗಿ ಕೃಷಿ ಉತ್ಪನ್ನಗಳನ್ನು ಖರೀದಿಸಬಹುದು. ಇದರಿಂದಾಗಿ, ಎಪಿಎಂಸಿ ಮಂಡಿಗಳ ಮಧ್ಯವರ್ತಿಗಳು ಹಾಗೂ ರಾಜ್ಯ ಸರ್ಕಾರಗಳು ಕಮಿಷನ್ ಹಾಗೂ ಮಂಡಿ ಶುಲ್ಕ ಕಳೆದುಕೊಳ್ಳುತ್ತವೆ. ಸ್ಪರ್ಧೆಯಿಂದಾಗಿ ರೈತರು ತಮ್ಮ ಬೆಳೆಗಳಿಗೆ ಅತ್ಯುತ್ತಮ ಬೆಲೆಯನ್ನು ಪಡೆಯುತ್ತಾರೆ ಹಾಗೂ ಬೆಳೆಯನ್ನು ಸಾಗಿಸುವ ಖರ್ಚು ಕೂಡ ಉಳಿತಾಯವಾಗಲಿದೆ.
ಎಪಿಎಂಸಿಯಲ್ಲಿ ಕೃಷಿ ಉತ್ಪನ್ನಗಳನ್ನು ಖರೀದಿಸಿದರೆ ಸೆಸ್ ವಿಧಿಸಲಾಗುತ್ತದೆ. ಹೊರಗಡೆ ಖರೀದಿಗೂ ಸೆಸ್ ಪಾವತಿಸಬೇಕಿತ್ತು. ಆದರೆ, ಈಗ ವ್ಯಾಪಾರಿಗಳಿಗೆ ಸೆಸ್ ಪಾವತಿಯ ಹೊರೆ ಇಲ್ಲ. ಮಂಡಿಗಳ ಜೊತೆಗೆ, ಫಾರ್ಮ್‌ಗೇಟ್, ಶೈತ್ಯಾಗಾರ, ಗೋದಾಮು, ಸಂಸ್ಕರಣಾ ಘಟಕಗಳಲ್ಲಿ ವ್ಯಾಪಾರ ಮಾಡುವ ಸ್ವಾತಂತ್ರ್ಯ ದೊರೆಯುತ್ತದೆ.
- ಬೆಲೆ ಖಾತರಿ ಒಪ್ಪಂದ ಮತ್ತು ಕೃಷಿ ಸೇವೆಗಳ (ಸಬಲೀಕರಣ ಮತ್ತು ರಕ್ಷಣೆ) ಕಾಯ್ದೆ 2020:
ಬಿತ್ತನೆ ಹಂಗಾಮಿಗೆ ಮುನ್ನವೇ ರೈತರು, ಪೂರ್ವ ನಿರ್ಧರಿತ ಬೆಲೆಯೊಂದಿಗೆ ಖರೀದಿದಾರನ ಜೊತೆಗೆ ಒಪ್ಪಂದ ಮಾಡಿಕೊಳ್ಳಲು ಈ ಕಾಯ್ದೆಯು ಅನುವು ಮಾಡಿಕೊಡುತ್ತದೆ.
ಪೂರ್ವನಿಗದಿತ ಬೆಲೆಯಲ್ಲಿ, ರೈತರು ಕೃಷಿ ಸಂಬಂಧಿತ ಉದ್ಯಮ ನಡೆಸುವ ಕಂಪನಿಗಳು ಅಥವಾ ದೊಡ್ಡ ಪ್ರಮಾಣದ ಚಿಲ್ಲರೆ ವ್ಯಾಪಾರಿಗಳ ಜೊತೆ ಒಪ್ಪಂದ ಮಾಡಿಕೊಳ್ಳಲು ಅವಕಾಶ ಕಲ್ಪಿಸುತ್ತದೆ.
ಹೊಸ ಕಾಯ್ದೆಯು ಸಂಸ್ಕರಣ ಘಟಕಗಳು, ಸಗಟು ವ್ಯಾಪಾರಿಗಳು, ಒಟ್ಟುಗೂಡಿಸುವವರು, ದೊಡ್ಡ ಚಿಲ್ಲರೆ ವ್ಯಾಪಾರಿಗಳು, ರಫ್ತುದಾರರೊಂದಿಗೆ ವಹಿವಾಟು ನಡೆಸಲು ರೈತರಿಗೆ ಅನುವು ಮಾಡುತ್ತದೆ. ಬಿತ್ತನೆಗೆ ಮುನ್ನವೇ ದರದ ಭರವಸೆ ಸಿಗುತ್ತದೆ. ಮಾರುಕಟ್ಟೆ ಬೆಲೆ ಹೆಚ್ಚಾದ ಸಂದರ್ಭದಲ್ಲಿ, ರೈತರು ಕನಿಷ್ಠ ಬೆಂಬಲ ಬೆಲೆಯನ್ನು ಪಡೆಯುತ್ತಾರೆ.
ಇದರಿಂದ ರೈತರು, ಮಾರುಕಟ್ಟೆಯ ಅನಿಶ್ಚಿತತೆಯ ಅಪಾಯಕ್ಕೆ ಈಡಾಗುವುದನ್ನು ತಡೆಯುತ್ತದೆ ಹಾಗೂ ಸಣ್ಣ ಮತ್ತು ಮಧ್ಯಮ ರೈತರಿಗೆ ಅನುಕೂಲ ಮಾಡಿಕೊಡುತ್ತದೆ.
ಆಧುನಿಕ ತಂತ್ರಜ್ಞಾನ, ಉತ್ತಮ ಬೀಜ ಮತ್ತು ಇತರ ಸೌಲಭ್ಯಗಳನ್ನು ಪಡೆಯಲು ರೈತರಿಗೆ ಅನುವು ಮಾಡಿಕೊಡುತ್ತದೆ. ಮಾರುಕಟ್ಟೆ ವೆಚ್ಚ ಕಡಿಮೆ ಮಾಡುವುದರೊಂದಿಗೆ ರೈತರ ಆದಾಯವನ್ನು ಹೆಚ್ಚಿಸುತ್ತದೆ. ಕೃಷಿ ಕ್ಷೇತ್ರದಲ್ಲಿ ಸಂಶೋಧನೆ ಮತ್ತು ಹೊಸ ತಂತ್ರಜ್ಞಾನಕ್ಕೆ ಉತ್ತೇಜನ ದೊರಕುತ್ತದೆ.
ರೈತರು ಮತ್ತು ಖರೀದಿದಾರರ ನಡುವಿನ ವ್ಯಾಜ್ಯ ಪರಿಹಾರಕ್ಕಾಗಿ ಪರಿಣಾಮಕಾರಿ ವ್ಯವಸ್ಥೆಯನ್ನು ಒದಗಿಸಲಾಗಿದೆ.
- ಅಗತ್ಯ ವಸ್ತುಗಳ (ತಿದ್ದುಪಡಿ) ಕಾಯ್ದೆ 2020:
ಅಗತ್ಯ ವಸ್ತುಗಳ ಪಟ್ಟಿಯಿಂದ ಧಾನ್ಯಗಳು, ಬೇಳೆಕಾಳುಗಳು, ಎಣ್ಣೆಬೀಜಗಳು, ಖಾದ್ಯ ತೈಲಗಳು, ಈರುಳ್ಳಿ ಮತ್ತು ಆಲೂಗೆಡ್ಡೆ ಮುಂತಾದ ವಸ್ತುಗಳನ್ನು ಕೈಬಿಡಲು ಈ ತಿದ್ದುಪಡಿ ಕಾಯ್ದೆಯು ಅವಕಾಶ ಮಾಡಿಕೊಡುತ್ತದೆ.
ಯುದ್ಧ, ಬರಗಾಲ, ಅಸಾಧಾರಣ ಬೆಲೆ ಏರಿಕೆ ಮತ್ತು ನೈಸರ್ಗಿಕ ವಿಪತ್ತಿನಂಥ ಸಂದರ್ಭಗಳನ್ನು ಹೊರತುಪಡಿಸಿ, ಅಂತಹ ವಸ್ತುಗಳ ಸಂಗ್ರಹದ ಮಿತಿ ಮೇಲೆ ಇರುವ ನಿರ್ಬಂಧವನ್ನು ತೆಗೆದುಹಾಕುತ್ತದೆ.
ಇದರೊಂದಿಗೆ, ಕೃಷಿ ಕ್ಷೇತ್ರಕ್ಕೆ ಖಾಸಗಿ ವಲಯ ಹಾಗೂ ವಿದೇಶಿ ನೇರ ಹೂಡಿಕೆಯನ್ನು ಆಕರ್ಷಿಸುತ್ತದೆ.
ಕಾನೂನನ್ನು ರದ್ದುಗೊಳಿಸುವುದು ಎಂದರೆ ಏನರ್ಥ?
ಕಾನೂನನ್ನು ಪಡೆಯುವುದು ಕಾನೂನನ್ನು ರದ್ದುಗೊಳಿಸುವ ಮಾರ್ಗಗಳಲ್ಲಿ ಒಂದಾಗಿದೆ. ಇನ್ನು ಮುಂದೆ ಯಾವುದೇ ಕಾನೂನು ಅಸ್ತಿತ್ವದಲ್ಲಿರುವುದು ಅಗತ್ಯವಿಲ್ಲ ಎಂದು ಸಂಸತ್ತು ಭಾವಿಸಿದಾಗ ಕಾನೂನನ್ನು ರದ್ದು ಗೊಳಿಸುತ್ತದೆ ಅಥವಾ ಹಿಂಪಡೆಯುತ್ತದೆ.
ಯಾವುದೇ ಶಾಸನಕ್ಕೆ “ಸೂರ್ಯಾಸ್ತ” ಷರತ್ತನ್ನು ಸಹ ವಿಧಿಸಬಹುದಾಗಿದೆ, ಅಂದರೆ ನಿರ್ದಿಷ್ಟ ದಿನಾಂಕದ ನಂತರ ಅವುಗಳು ಅಸ್ತಿತ್ವದಲ್ಲಿರುವುದಿಲ್ಲ.
ಸರ್ಕಾರವು ಕಾನೂನನ್ನು ಹೇಗೆ ರದ್ದುಗೊಳಿಸಬಹುದು?
ಸರ್ಕಾರವು ಎರಡು ವಿಧಗಳಲ್ಲಿ ಕಾನೂನುಗಳನ್ನು ರದ್ದುಗೊಳಿಸಬಹುದು – ಅದು ವಿವಾದಿತ ಮೂರು ಕೃಷಿ ಕಾನೂನುಗಳನ್ನು ರದ್ದುಗೊಳಿಸಲು ಮಸೂದೆಯನ್ನು ತರಬಹುದು ಅಥವಾ ಆರು ತಿಂಗಳೊಳಗೆ ಮಸೂದೆಯೊಂದಿಗೆ ಬದಲಿಸಬೇಕಾದ ಸುಗ್ರೀವಾಜ್ಞೆಯನ್ನು ಹೊರಡಿಸಬಹುದು.
- ಕಾಯ್ದೆಯನ್ನು ರದ್ದುಪಡಿಸುವ, ಸಂಸತ್ತಿನ ಅಧಿಕಾರವು ಸಂವಿಧಾನದ ಅಡಿಯಲ್ಲಿ ಕಾನೂನನ್ನು ಜಾರಿಗೊಳಿಸುವಾಗ ಇರುವ ಅಧಿಕಾರದಂತೆಯೇ ಇರುತ್ತದೆ.
- ಸಂವಿಧಾನದ 245 ನೇ ವಿಧಿಯು ಸಂಸತ್ತಿಗೆ ಕಾನೂನುಗಳನ್ನು ರೂಪಿಸುವ ಅಧಿಕಾರವನ್ನು ನೀಡುತ್ತದೆ ಹಾಗೆಯೇ ಹಿಂಪಡೆಯುವ ಮತ್ತು ತಿದ್ದುಪಡಿ ಕಾಯಿದೆಯ ಮೂಲಕ ಅವುಗಳನ್ನು ರದ್ದುಗೊಳಿಸುವ ಅಧಿಕಾರವನ್ನು ಶಾಸಕಾಂಗ ಸಂಸ್ಥೆಗೆ ನೀಡುತ್ತದೆ.
- 1950 ರಲ್ಲಿ 72 ಕಾಯಿದೆಗಳನ್ನು ರದ್ದುಗೊಳಿಸಿದಾಗ ಈ ಕಾಯಿದೆಯನ್ನು ಮೊದಲು ಜಾರಿಗೊಳಿಸಲಾಯಿತು.
- ಯಾವುದೇ ಕಾನೂನನ್ನು ಸಂಪೂರ್ಣವಾಗಿ, ಭಾಗಶಃ ಅಥವಾ ಇತರ ಕಾನೂನುಗಳಿಗೆ ವಿರುದ್ಧವಾಗಿರುವ ಭಾಗದಷ್ಟನ್ನು ರದ್ದುಗೊಳಿಸಬಹುದು.
ಕಾನೂನನ್ನು ರದ್ದುಗೊಳಿಸುವ ಪ್ರಕ್ರಿಯೆ ಯಾವುದು?
ಕಾನೂನುಗಳನ್ನು ಎರಡು ವಿಧಗಳಲ್ಲಿ ರದ್ದುಗೊಳಿಸಬಹುದು – ಸುಗ್ರೀವಾಜ್ಞೆಯ ಮೂಲಕ ಅಥವಾ ಶಾಸನದ ಮೂಲಕ.
- ಒಂದು ವೇಳೆ ಸುಗ್ರೀವಾಜ್ಞೆಯ ಅವಕಾಶವನ್ನು ಬಳಸಿದರೆ, ಅದನ್ನು ಆರು ತಿಂಗಳೊಳಗೆ ಸಂಸತ್ತು ಅಂಗೀಕರಿಸಿದ ಕಾನೂನಿನಿಂದ ಬದಲಾಯಿಸಬೇಕಾಗುತ್ತದೆ.
- ಸಂಸತ್ತು ಅಂಗೀಕರಿಸದ ಕಾರಣ ಸುಗ್ರೀವಾಜ್ಞೆಯು ಬಿದ್ದುಹೋದರೆ, ರದ್ದುಗೊಂಡ ಕಾನೂನನ್ನು ಮತ್ತೆ ಪುನರುಜ್ಜೀವನಗೊಳಿಸಬಹುದು.
ಕೃಷಿ ಕಾನೂನುಗಳನ್ನು ರದ್ದುಗೊಳಿಸಲು ಸರ್ಕಾರವು ಕಾನೂನನ್ನು ಜಾರಿಗೆ ತರಬಹುದು.
- ಸಂಸತ್ತಿನ ಉಭಯ ಸದನಗಳು ಇದನ್ನು ಅಂಗೀಕರಿಸಬೇಕು ಮತ್ತು ಅದು ಜಾರಿಗೆ ಬರುವ ಮೊದಲು ರಾಷ್ಟ್ರಪತಿಗಳ ಒಪ್ಪಿಗೆಯನ್ನು ಪಡೆಯಬೇಕು.
- ಎಲ್ಲಾ ಮೂರು ಕೃಷಿ ಕಾನೂನುಗಳನ್ನು ಒಂದೇ ಶಾಸನದ ಮೂಲಕ ರದ್ದುಗೊಳಿಸಬಹುದು.
- ಸಾಮಾನ್ಯವಾಗಿ, ರದ್ದುಗೊಳಿಸುವಿಕೆ ಮತ್ತು ತಿದ್ದುಪಡಿಯ ಶೀರ್ಷಿಕೆಯ ಮಸೂದೆಗಳನ್ನು ಈ ಉದ್ದೇಶಕ್ಕಾಗಿ ಪರಿಚಯಿಸಲಾಗುತ್ತದೆ.
ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:
ಆಪರೇಷನ್ ಸಂಕಲ್ಪ:
(Operation Sankalp)
ಆಪರೇಷನ್ ಸಂಕಲ್ಪ್ ನ ಭಾಗವಾಗಿ ಐಎನ್‌ಎಸ್ ತ್ರಿಕಾಂಡ್ ಅನ್ನು ಪ್ರಸ್ತುತ ಪರ್ಷಿಯನ್ ಕೊಲ್ಲಿ ಮತ್ತು ಓಮನ್ ಕೊಲ್ಲಿಯಲ್ಲಿ ನಿಯೋಜಿಸಲಾಗಿದೆ.
- ಇರಾನ್ ಮತ್ತು ಅಮೆರಿಕ ಸಂಯುಕ್ತ ಸಂಸ್ಥಾನದ ನಡುವೆ ಹೆಚ್ಚಿದ ಉದ್ವಿಗ್ನತೆಯ ಮಧ್ಯೆ ಒಮಾನ್ ಕೊಲ್ಲಿಯಲ್ಲಿ ಎರಡು ತೈಲ ಟ್ಯಾಂಕರ್ ಹಡಗುಗಳಲ್ಲಿ ಸ್ಫೋಟಗಳು ಸಂಭವಿಸಿದ ನಂತರ ಜೂನ್ 2019 ರಲ್ಲಿ ಸಂಕಲ್ಪ್ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು.
- ವ್ಯಾಪಾರದ ಸುರಕ್ಷಿತ ಮತ್ತು ತೊಂದರೆ ರಹಿತ ಸರಕು ಸಾಗಣೆಯನ್ನು ಖಚಿತಪಡಿಸಿಕೊಳ್ಳಲು, ಕಡಲ ಸಮುದಾಯದಲ್ಲಿ ವಿಶ್ವಾಸವನ್ನು ತುಂಬಲು ಮತ್ತು ಪ್ರಾದೇಶಿಕ ಕಡಲ ಭದ್ರತೆಗೆ ಕೊಡುಗೆ ನೀಡಲು ಈ ಪ್ರದೇಶದಲ್ಲಿ ಮುಂಚೂಣಿ ಹಡಗನ್ನು ನಿರ್ವಹಿಸುವುದು ಭಾರತೀಯ ನೌಕಾಪಡೆಯ ಪ್ರಯತ್ನವಾಗಿದೆ.
[ad_2]