[Mission 2022] ದೈನಂದಿನ ಪ್ರಚಲಿತ ಘಟನೆಗಳು ದಿನಾಂಕ – 16ನೇ ನವೆಂಬರ 2021 – INSIGHTSIAS

[ad_1]

 

 

ಪರಿವಿಡಿ:

 ಸಾಮಾನ್ಯ ಅಧ್ಯಯನ ಪತ್ರಿಕೆ 1:

1. ಕರ್ತಾರ್‌ಪುರ ಕಾರಿಡಾರ್.

 

ಸಾಮಾನ್ಯ ಅಧ್ಯಯನ ಪತ್ರಿಕೆ 2:

1. ಸಂಸದರು, ಶಾಸಕರಿಗಾಗಿ ವಿಶೇಷ ನ್ಯಾಯಾಲಯಗಳು.

2. CBI ಮತ್ತು ED ನಿರ್ದೇಶಕರ ಅಧಿಕಾರಾವಧಿಯನ್ನು ವಿಸ್ತರಿಸಲು ಸುಗ್ರೀವಾಜ್ಞೆ.

3. ವಿಶ್ವಸಂಸ್ಥೆಯ ಪರಮಾಣು ಸಂಸ್ಥೆಯ ಮುಖ್ಯಸ್ಥರನ್ನು ಮಾತುಕತೆಗಾಗಿ ಟೆಹ್ರಾನ್‌ಗೆ ಆಹ್ವಾನಿಸಿದ ಇರಾನ್.

 

ಸಾಮಾನ್ಯ ಅಧ್ಯಯನ ಪತ್ರಿಕೆ 3:

1. ರಾಷ್ಟ್ರೀಯ ಗೋಕುಲ್ ಮಿಷನ್.

2. ಗ್ರೀನ್ ಬಾಂಡ್ಸ್ ಎಂದರೇನು?

 

ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ಸಂಗತಿಗಳು:

1. ಅಫ್ಘಾನಿಸ್ತಾನದ ಹಜಾರಾಸ್.

2. ಬಿಜು ಸ್ವಾಸ್ಥ್ಯ ಕಲ್ಯಾಣ ಯೋಜನೆ.

 


ಸಾಮಾನ್ಯ ಅಧ್ಯಯನ ಪತ್ರಿಕೆ : 1


 

ವಿಷಯಗಳುಭಾರತೀಯ ಸಂಸ್ಕೃತಿಯು ಪ್ರಾಚೀನ ಕಾಲದಿಂದ ಆಧುನಿಕ ಕಾಲದವರೆಗೆ ಕಲಾ ಪ್ರಕಾರಗಳು, ಸಾಹಿತ್ಯ ಮತ್ತು ವಾಸ್ತುಶಿಲ್ಪದ ಪ್ರಮುಖ ಅಂಶಗಳನ್ನು ಒಳಗೊಂಡಿದೆ.

ಕರ್ತಾರ್‌ಪುರ ಕಾರಿಡಾರ್:


(Kartarpur Corridor)

ಸಂದರ್ಭ:

ಈ ವಾರ ಪಾಕಿಸ್ತಾನಕ್ಕೆ ಕರ್ತಾರ್‌ಪುರ ಸಾಹಿಬ್ ಗುರುದ್ವಾರ ಕಾರಿಡಾರ್’  (Kartarpur Sahib Gurudwara corridor) ಅನ್ನು ಪುನಃ ತೆರೆಯಲು ಸರ್ಕಾರ ಪರಿಗಣಿಸುತ್ತಿದೆ, ಇದು ಸಿಖ್ ಯಾತ್ರಾರ್ಥಿಗಳ ಗಡಿಯಾಚೆಗಿನ ಪ್ರಯಾಣವನ್ನು ಸುಗಮಗೊಳಿಸುತ್ತದೆ.   ಕೊರೊನಾವೈರಸ್ ಸಾಂಕ್ರಾಮಿಕ ರೋಗದಿಂದಾಗಿ, ಈ ಕಾರಿಡಾರ್ ಅನ್ನು ಸುಮಾರು 20 ತಿಂಗಳ ಹಿಂದೆ ಮುಚ್ಚಲಾಗಿತ್ತು ಎಂಬುದು ಗಮನಿಸಬೇಕಾದ ಅಂಶ.

  1. ಕಾರಿಡಾರ್ ಅನ್ನು ನವೆಂಬರ್ 19 ರಂದು ತೆರೆಯಲು ಯೋಜಿಸಲಾಗಿದೆ. ಈ ದಿನವು ಗುರುಪರಬ್’ ಅಥವಾ “ಪ್ರಕಾಶ ಪರ್ವ” ಎಂದೂ ಕರೆಯಲ್ಪಡುವ ಸಿಖ್ ಧರ್ಮದ ಸಂಸ್ಥಾಪಕ ಗುರುನಾನಕ್ ಅವರ ಜನ್ಮದಿನವನ್ನು ಸೂಚಿಸುತ್ತದೆ.

ಕರ್ತಾರ್‌ಪುರ ಕಾರಿಡಾರ್ ಒಪ್ಪಂದ:

ಕರ್ತಾರ್‌ಪುರ ಕಾರಿಡಾರ್ ಒಪ್ಪಂದ’ ಅಡಿಯಲ್ಲಿ, ಯಾತ್ರಾರ್ಥಿಗಳಿಗೆ  ವೀಸಾ ಮುಕ್ತವಾಗಿ ಈ ಕಾರಿಡಾರ್ ಮೂಲಕ ಪ್ರಯಾಣಿಸಲು ಅನುಮತಿಸಲಾಗಿದೆ ಎಂಬುದನ್ನು ದಯವಿಟ್ಟು ಗಮನಿಸಿ.

  1. ಎಲ್ಲಾ ಧರ್ಮದ ಭಾರತೀಯ ಯಾತ್ರಿಕರು ಮತ್ತು ಭಾರತೀಯ ಮೂಲದ ವ್ಯಕ್ತಿಗಳು ಈ ಕಾರಿಡಾರ್ ಅನ್ನು ಬಳಸಬಹುದು.
  2. ಯಾತ್ರಿಕರು ಮಾನ್ಯವಾದ ಪಾಸ್‌ಪೋರ್ಟ್ ಅನ್ನು ಮಾತ್ರ ಕೊಂಡೊಯ್ಯಬೇಕಾಗುತ್ತದೆ;
  3. ಭಾರತೀಯ ಮೂಲದ ವ್ಯಕ್ತಿಗಳು ತಮ್ಮ ದೇಶದ ಪಾಸ್‌ಪೋರ್ಟ್‌ನೊಂದಿಗೆ OCI ಕಾರ್ಡ್ ಅನ್ನು ಹೊಂದಿರಬೇಕು.
  4. ಈ ಕಾರಿಡಾರ್ ಬೆಳಿಗ್ಗೆಯಿಂದ ಸಂಜೆಯವರೆಗೆ ತೆರೆದಿರುತ್ತದೆ. ಬೆಳಗ್ಗೆ ಪ್ರಯಾಣಿಸುವ ಯಾತ್ರಾರ್ಥಿಗಳು ಅದೇ ದಿನ ಹಿಂತಿರುಗಬೇಕು.

ಕರ್ತಾರಪುರ ಕಾರಿಡಾರ್” ಯೋಜನೆ ಎಂದರೇನು?

‘ಕರ್ತಾರಪುರ ಸಾಹಿಬ್ ಗುರುದ್ವಾರ ಕಾರಿಡಾರ್’ ಅನ್ನು ಸಾಮಾನ್ಯವಾಗಿ “ಶಾಂತಿಯ ಹಾದಿ” ಎಂದು ಕರೆಯಲಾಗುತ್ತದೆ. ಈ ಕಾರಿಡಾರ್ ಭಾರತದ ಗುರುದಾಸ್‌ಪುರ ಜಿಲ್ಲೆಯಲ್ಲಿರುವ ‘ಗುರುದ್ವಾರ ಡೇರಾ ಬಾಬಾ ನಾನಕ್’ ಅನ್ನು ಪಾಕಿಸ್ತಾನದ ಕರ್ತಾರ್‌ಪುರದಲ್ಲಿರುವ ‘ಗುರುದ್ವಾರ ದರ್ಬಾರ್ ಸಾಹಿಬ್’ ನೊಂದಿಗೆ ಸಂಪರ್ಕಿಸುತ್ತದೆ.

ತೀರ್ಥ ಕ್ಷೇತ್ರ ಮತ್ತು ಅದರ ಪ್ರಾಮುಖ್ಯತೆ:

  1. ಕರ್ತಾರ್‌ಪುರ ಗುರುದ್ವಾರವು ಲಾಹೋರ್‌ನಿಂದ ಈಶಾನ್ಯಕ್ಕೆ ಸುಮಾರು 120 ಕಿಮೀ ದೂರದಲ್ಲಿ ರಾವಿ ನದಿಯ ದಡದಲ್ಲಿದೆ.
  2. ಈ ಸ್ಥಳದಲ್ಲಿಯೇ ಗುರುನಾನಕ್ ಅವರು ಸಿಖ್ ಸಮುದಾಯವನ್ನು ಒಟ್ಟುಗೂಡಿಸಿದರು ಮತ್ತು ಅವರ ಜೀವನದ ಕೊನೆಯ 18 ವರ್ಷಗಳನ್ನು 1539 ರ ವರೆಗೆ ಅವರ ಮರಣದ ತನಕ ಈ ಸ್ಥಳದಲ್ಲಿ ಕಳೆದರು.
  3. ಸಾಮಾನ್ಯವಾಗಿ, ಗಡಿಯಲ್ಲಿ ಬೆಳೆಯುವ ಆನೆ ಹುಲ್ಲನ್ನು ಪಾಕಿಸ್ತಾನಿ ಅಧಿಕಾರಿಗಳು ಕತ್ತರಿಸುತ್ತಾರೆ, ನಂತರ ಈ ‘ಗುರುದ್ವಾರ’ ಭಾರತದ ಗಡಿಯಿಂದ ಗೋಚರಿಸುತ್ತದೆ.
  4. ಭಾರತದ ಕಡೆಯಿಂದ ಹೆಚ್ಚಿನ ಸಂಖ್ಯೆಯ ಭಾರತೀಯ ಸಿಖ್ಖರು ದರ್ಶನಕ್ಕಾಗಿ ಸೇರುತ್ತಾರೆ ಮತ್ತು ಅವರ ಅನುಕೂಲಕ್ಕಾಗಿ ‘ಗುರುದ್ವಾರ ಡೇರಾ ಬಾಬಾ ನಾನಕ್’ ನಲ್ಲಿ ಬೈನಾಕ್ಯುಲರ್‌ಗಳನ್ನು ಅಳವಡಿಸಲಾಗಿದೆ.

current affairs

 


ಸಾಮಾನ್ಯ ಅಧ್ಯಯನ ಪತ್ರಿಕೆ : 2


 

ವಿಷಯಗಳು: ಸರ್ಕಾರದ ವಿವಿಧ ಅಂಗಗಳ ನಡುವೆ ಅಧಿಕಾರ ವಿಭಜನೆ, ವಿವಾದ ಪರಿಹಾರ ಕಾರ್ಯವಿಧಾನಗಳು ಮತ್ತು ಸಂಸ್ಥೆಗಳು.

ಸಂಸದರು, ಶಾಸಕರಿಗಾಗಿ ವಿಶೇಷ ನ್ಯಾಯಾಲಯಗಳು.


(Special courts to try MPs)

ಸಂದರ್ಭ:

ಇತ್ತೀಚೆಗೆ, ವಿವಿಧ ಅಪರಾಧಗಳಿಗಾಗಿ ಸಂಸತ್ತು ಮತ್ತು ರಾಜ್ಯ ಶಾಸಕಾಂಗಗಳ ಸದಸ್ಯರನ್ನು ವಿಚಾರಣೆಗೆ ಒಳಪಡಿಸಲು ನಿರ್ದಿಷ್ಟವಾಗಿ ಸ್ಥಾಪಿಸಲಾದ ವಿಶೇಷ ನ್ಯಾಯಾಲಯಗಳ’  (Special Courts)  ಕಾನೂನು ವ್ಯಾಪ್ತಿಯ ಅಧಿಕಾರಕ್ಕೆ ಸಂಬಂಧಿಸಿದಂತೆ ಎದ್ದಿರುವ ಪ್ರಶ್ನೆಗಳನ್ನು ಪರಿಶೀಲಿಸಲು ಸುಪ್ರೀಂ ಕೋರ್ಟ್ ನಿರ್ಧರಿಸಿದೆ.

ವಿಶೇಷ ನ್ಯಾಯಾಲಯಗಳ ಅವಶ್ಯಕತೆ:

  1. ದೇಶಾದ್ಯಂತ 4000 ಕ್ಕೂ ಹೆಚ್ಚು ಪ್ರಕರಣಗಳು ಶಾಸನ ರಚನೆಕಾರರ ವಿರುದ್ಧ ಬಾಕಿ ಉಳಿದಿವೆ. ಈ ಪೈಕಿ ಹಾಲಿ ಸಂಸದರು ಮತ್ತು ಶಾಸಕರ ವಿರುದ್ಧ 2,556 ಪ್ರಕರಣಗಳು ಇವೆ.
  2. ಈ ಸಂಸದರು ಮತ್ತು ಶಾಸಕರ ವಿರುದ್ಧ ಭ್ರಷ್ಟಾಚಾರ, ಅಕ್ರಮ ಹಣ ವರ್ಗಾವಣೆ, ಸಾರ್ವಜನಿಕ ಆಸ್ತಿ ಹಾನಿ, ಮಾನನಷ್ಟ ಮತ್ತು ವಂಚನೆ ಇತ್ಯಾದಿ ಪ್ರಕರಣಗಳು ಸೇರಿವೆ.
  3. ಈ ಹೆಚ್ಚಿನ ಪ್ರಕರಣಗಳು ಐಪಿಸಿಯ ಸೆಕ್ಷನ್ 188 ರ ಅಡಿಯಲ್ಲಿ ಸಾರ್ವಜನಿಕ ಸೇವಕರು ಹೊರಡಿಸಿದ ಆದೇಶಗಳ ಉಲ್ಲಂಘನೆಗೆ ಸಂಬಂಧಿಸಿವೆ.
  4. ಹೆಚ್ಚಿನ ಪ್ರಕರಣಗಳು ಮೊದಲ ಹಂತದ ವಿಚಾರಣೆಯಲ್ಲಿ ಬಾಕಿ ಉಳಿದಿವೆ ಮತ್ತು ನ್ಯಾಯಾಲಯಗಳು ಹೊರಡಿಸಿದ ಹಲವಾರು ‘ಜಾಮೀನು ರಹಿತ ವಾರಂಟ್’ಗಳು (NBWs) ಸಹ ಕಾರ್ಯಗತಗೊಂಡಿಲ್ಲ.
  5. ಜೊತೆಗೆ, ಬಿಹಾರದ 89% ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣೆಗೆ ಸ್ಪರ್ಧಿಸಿದ ಮೂರು ಅಥವಾ ಹೆಚ್ಚಿನ ಅಭ್ಯರ್ಥಿಗಳು ತಮ್ಮ ಚುನಾವಣಾ ಅಫಿಡವಿಟ್‌ಗಳಲ್ಲಿ ತಮ್ಮ ವಿರುದ್ಧ ಕ್ರಿಮಿನಲ್ ಮೊಕದ್ದಮೆಗಳು ಇವೆ ಎಂದು ಘೋಷಿಸಿದ್ದಾರೆ.

ಮದ್ರಾಸ್ ಉಚ್ಚ ನ್ಯಾಯಾಲಯದ ಅವಲೋಕನಗಳು:

ನವೆಂಬರ್ 2020 ರಲ್ಲಿ, ಮದ್ರಾಸ್ ಹೈಕೋರ್ಟ್‌ನ ಮೂವರು ನ್ಯಾಯಾಧೀಶರ ಸಮಿತಿಯು ಸಂಸದರು ಮತ್ತು ಶಾಸಕರು ಮಾಡಿದ ವಿವಿಧ ಅಪರಾಧಗಳನ್ನು ಪ್ರತ್ಯೇಕವಾಗಿ ವಿಚಾರಣೆ ಮಾಡಲು ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸುವುದರ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿದೆ.

ಹೈಕೋರ್ಟ್‌ನ ಪ್ರಕಾರ ಪ್ರತ್ಯೇಕ ನ್ಯಾಯಾಲಯಗಳನ್ನು ಏಕೆ ಸ್ಥಾಪಿಸಬಾರದು?

  1. ನ್ಯಾಯಾಲಯಗಳು ಅಪರಾಧ ಕೇಂದ್ರಿತ’ ಆಗಿರಬೇಕು ಮತ್ತು ‘ಅಪರಾಧಿ ಕೇಂದ್ರಿತ’ ಅಲ್ಲ.
  2. ವಿಶೇಷ ನ್ಯಾಯಾಲಯಗಳನ್ನು ಶಾಸನದ ಮೂಲಕ ಮಾತ್ರ ರಚಿಸಬಹುದು. ಇವುಗಳನ್ನು ಕಾರ್ಯನಿರ್ವಾಹಕ ಅಥವಾ ನ್ಯಾಯಾಂಗ ಆದೇಶದಿಂದ ಸ್ಥಾಪಿಸಲಾಗುವುದಿಲ್ಲ.

ಮದ್ರಾಸ್ ಉಚ್ಚ ನ್ಯಾಯಾಲಯದ ಅವಲೋಕನಗಳ ಮಹತ್ವ:

ವರದಿಯ ಸಮಯ: ಹೈಕೋರ್ಟ್ ಸಮಿತಿಯು ನೀಡಿದ ಈ ವರದಿಯು 2017 ರಲ್ಲಿ ಸುಪ್ರೀಂ ಕೋರ್ಟ್ ನೀಡಿದ ಆದೇಶಕ್ಕೆ ವಿರುದ್ಧವಾಗಿದೆ. ಸುಪ್ರೀಂ ಕೋರ್ಟ್ ತನ್ನ ಆದೇಶದಲ್ಲಿ ಕ್ರಿಮಿನಲ್ ರಾಜಕಾರಣಿಗಳನ್ನು ಪ್ರತ್ಯೇಕವಾಗಿ ವಿಚಾರಣೆ ಮಾಡಲು ದೇಶಾದ್ಯಂತ 12 ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಲು ಕೇಂದ್ರ ಸರ್ಕಾರಕ್ಕೆ ಅಧಿಕಾರ ನೀಡಿದೆ.

ಸುಪ್ರೀಂ ಕೋರ್ಟ್‌ನ ತ್ರಿಸದಸ್ಯ ನ್ಯಾಯಾಧೀಶರ ಪೀಠವು ಕೆಲವು ಪ್ರಕರಣಗಳಲ್ಲಿ ವಿಚಾರಣೆಗಳು ವರ್ಷಗಳ ಕಾಲ ಮತ್ತು ಇನ್ನೂ ಕೆಲವು ಪ್ರಕರಣಗಳಲ್ಲಿ ದಶಕಗಳಿಂದ ಬಾಕಿ ಉಳಿದಿರುವ ಈ ವಿಚಾರಣೆಯ ಪ್ರಕ್ರಿಯೆಯನ್ನು ತ್ವರಿತಗೊಳಿಸುವ ಮಾರ್ಗಗಳನ್ನು ನೋಡುತ್ತಿರುವ ಸಮಯದಲ್ಲಿ ಈ ವರದಿ ಬಂದಿದೆ.

ವಿಶೇಷ ನ್ಯಾಯಾಲಯಗಳಿಗೆ ಸಂಬಂಧಿಸಿದ ಸಮಸ್ಯೆಗಳು:

ವಿಶೇಷ ನ್ಯಾಯಾಲಯಗಳು ಆರೋಪಿಗಳು ಹೊಂದಿರುವ ಮೇಲ್ಮನವಿ ಸಲ್ಲಿಸುವ ಹಕ್ಕನ್ನು ಕಸಿದುಕೊಳ್ಳುತ್ತವೆ. ಒಬ್ಬ ಮ್ಯಾಜಿಸ್ಟ್ರೇಟ್ ವಿಚಾರಣೆ ನಡೆಸಬಹುದಾದ ಶಾಸಕ ಅಥವಾ ಸಂಸದರ ಅಪರಾಧ ಪ್ರಕರಣವನ್ನು ನೇರವಾಗಿ ವಿಶೇಷ ನ್ಯಾಯಾಲಯದ ಮುಂದೆ ಇರಿಸಿದರೆ, ಆರೋಪಿಯು ಮ್ಯಾಜಿಸ್ಟ್ರೇಟ್ ಮುಂದೆ ತನ್ನ ಪ್ರಕರಣವನ್ನು ಸಮರ್ಥಿಸಿಕೊಳ್ಳುವ ಹಕ್ಕಿನಿಂದ ವಂಚಿತನಾಗುತ್ತಾನೆ ಮತ್ತು ಅವರಿಂದ ‘ಸೆಷನ್ ಕೋರ್ಟ್’ಗೆ ಮೇಲ್ಮನವಿ ಸಲ್ಲಿಸುವ ಹಕ್ಕನ್ನು ಸಹ ಕಸಿದುಕೊಳ್ಳಲಾಗುತ್ತದೆ.

ಮುಂದಿನ ದಾರಿ:

  1. ರಾಜಕೀಯ ಪಕ್ಷಗಳು ಕಳಂಕಿತ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲು ನಿರಾಕರಿಸಬೇಕು.
  2. ಹೇಯ ಸ್ವರೂಪದ ಪ್ರಕರಣಗಳಲ್ಲಿ ಹೆಸರಿಸಲ್ಪಟ್ಟ ಅಭ್ಯರ್ಥಿಗಳನ್ನು ಚುನಾವಣೆಗೆ ಸ್ಪರ್ಧಿಸದಂತೆ ನಿಷೇಧಿಸಲು ಪ್ರಜಾಪ್ರತಿನಿಧಿ ಕಾಯ್ದೆಗೆ ತಿದ್ದುಪಡಿ ತರಬೇಕು.
  3. ಕಳಂಕಿತ ಶಾಸಕರಿಗೆ ಸಂಬಂಧಿಸಿದ ಪ್ರಕರಣಗಳನ್ನು ತ್ವರಿತ ನ್ಯಾಯಾಲಯಗಳ(Fast-track courts) ಮೂಲಕ ತ್ವರಿತವಾಗಿ ಇತ್ಯರ್ಥಪಡಿಸಬೇಕು.
  4. ಚುನಾವಣಾ ಪ್ರಚಾರದ ಹಣದಲ್ಲಿ ಹೆಚ್ಚಿನ ಪಾರದರ್ಶಕತೆ ತರಬೇಕು.
  5. ರಾಜಕೀಯ ಪಕ್ಷಗಳ ಹಣಕಾಸು ಖಾತೆಗಳ ಲೆಕ್ಕಪರಿಶೋಧನೆ ಮಾಡುವ ಅಧಿಕಾರವನ್ನು ಭಾರತೀಯ ಚುನಾವಣಾ ಆಯೋಗಕ್ಕೆ (Election Commission of India ECI) ನೀಡಬೇಕು.

 

ವಿಷಯಗಳು: ಸರ್ಕಾರದ ವಿವಿಧ ಅಂಗಗಳ ನಡುವೆ ಅಧಿಕಾರ ವಿಭಜನೆ, ವಿವಾದ ಪರಿಹಾರ ಕಾರ್ಯವಿಧಾನಗಳು ಮತ್ತು ಸಂಸ್ಥೆಗಳು.

CBI ಮತ್ತು ED ನಿರ್ದೇಶಕರ ಅಧಿಕಾರಾವಧಿಯನ್ನು ವಿಸ್ತರಿಸಲು ಸುಗ್ರೀವಾಜ್ಞೆ:


(Ordinances to extend the tenures of the directors of CBI and ED)

ಸಂದರ್ಭ:

ಇತ್ತೀಚೆಗೆ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ‘ಕೇಂದ್ರೀಯ ತನಿಖಾ ದಳದ’ (ಸಿಬಿಐ) ಮತ್ತು ‘ಜಾರಿ ನಿರ್ದೇಶನಾಲಯದ (ಇಡಿ)’ ನಿರ್ದೇಶಕರ ಅಧಿಕಾರಾವಧಿಯನ್ನು ಎರಡು ವರ್ಷಗಳಿಂದ ಐದು ವರ್ಷಗಳವರೆಗೆ ವಿಸ್ತರಿಸಲು  ಎರಡು ಸುಗ್ರೀವಾಜ್ಞೆಗಳನ್ನು ಹೊರಡಿಸಿದ್ದಾರೆ.

ಪ್ರಸ್ತುತ ಸಿಬಿಐ ಮತ್ತು ಜಾರಿ ನಿರ್ದೇಶನಾಲಯದ ಮುಖ್ಯಸ್ಥರ ಅಧಿಕಾರಾವಧಿಯನ್ನು ‘ಎರಡು ವರ್ಷ’ ಎಂದು ನಿಗದಿಪಡಿಸಲಾಗಿದೆ.

ಪರಿಷ್ಕೃತ/ತಿದ್ದುಪಡಿ ಮಾಡಿದ ಕಾನೂನುಗಳು:

  1. ದೆಹಲಿ ವಿಶೇಷ ಪೊಲೀಸ್ ಸ್ಥಾಪನೆ ಕಾಯಿದೆ’, 1946 ಕ್ಕೆ ತಿದ್ದುಪಡಿ ತರುವ ಮೂಲಕ, ಸಿಬಿಐ ನಿರ್ದೇಶಕರ ಅವಧಿಯಲ್ಲಿ ಬದಲಾವಣೆ ತರಲಾಗಿದೆ.
  2. ಜಾರಿ ನಿರ್ದೇಶನಾಲಯ (ಇಡಿ) ನಿರ್ದೇಶಕರ ಅಧಿಕಾರಾವಧಿಯಲ್ಲಿ ಬದಲಾವಣೆಗಾಗಿ 2003ರ ಸೆಂಟ್ರಲ್ ವಿಜಿಲೆನ್ಸ್ ಕಮಿಷನ್ ಆಕ್ಟ್’ಗೆ ತಿದ್ದುಪಡಿ ಮಾಡಲಾಗಿದೆ.

ಮೂಲಭೂತ ನಿಯಮಗಳು 1922’ ಗೆ ತಿದ್ದುಪಡಿ,:

ಅಧಿಕಾರಾವಧಿ ಬದಲಾವಣೆಯ ಪಟ್ಟಿಯಲ್ಲಿ ಇನ್ನೆರಡು ಹುದ್ದೆಗಳನ್ನು ಸೇರಿಸಲು 1922 ರ ಮೂಲಭೂತ ನಿಯಮಗಳಿಗೆ’ (Fundamental Rules, 1922) ತಿದ್ದುಪಡಿ ಮಾಡಲು ಸಿಬ್ಬಂದಿ ಸಚಿವಾಲಯವು ಆದೇಶವನ್ನು ಹೊರಡಿಸಿದೆ,ಆ ಮೂಲಕ ಅವರ ಸೇವೆಗಳನ್ನು “ಸಾರ್ವಜನಿಕ ಹಿತಾಸಕ್ತಿ” ಯ ದೃಷ್ಟಿಯಿಂದ ಎರಡು ವರ್ಷಗಳ ನಿಗದಿತ ಅಧಿಕಾರವಧಿಯನ್ನು ಮೀರಿ ಇನ್ನೂ ಎರಡು ವರ್ಷಗಳ ಹೆಚ್ಚುವರಿ ಅವಧಿಗೆ ವಿಸ್ತರಿಸಬಹುದಾಗಿದೆ.

  1. ಹಿಂದಿನ ಪಟ್ಟಿಯಲ್ಲಿ ರಕ್ಷಣಾ ಕಾರ್ಯದರ್ಶಿ, ವಿದೇಶಾಂಗ ಕಾರ್ಯದರ್ಶಿ, ಗೃಹ ಕಾರ್ಯದರ್ಶಿ, ಇಂಟೆಲಿಜೆನ್ಸ್ ಬ್ಯೂರೋ ನಿರ್ದೇಶಕ ಮತ್ತು ‘ಸಂಶೋಧನೆ ಮತ್ತು ವಿಶ್ಲೇಷಣೆ ವಿಭಾಗ’ (RAW) ಕಾರ್ಯದರ್ಶಿಗಳು ಸೇರಿದ್ದಾರೆ.

ಸಿಬಿಐ ನಿರ್ದೇಶಕ’ ಮತ್ತು ಅವರ ನೇಮಕಾತಿ ಕುರಿತು:

  1. 1946 ರ ದೆಹಲಿ ವಿಶೇಷ ಪೊಲೀಸ್ ಸ್ಥಾಪನಾ ಕಾಯ್ದೆಯ ಸೆಕ್ಷನ್ 4 ಎ ಪ್ರಕಾರ ಸಿಬಿಐ ನಿರ್ದೇಶಕರನ್ನು ನೇಮಕ ಮಾಡಲಾಗುತ್ತದೆ.
  2. ಲೋಕಪಾಲ್ ಮತ್ತು ಲೋಕಾಯುಕ್ತ ಕಾಯ್ದೆ (2013), ಮೂವರು ಸದಸ್ಯರ ಸಮಿತಿಯ ಶಿಫಾರಸಿನ ಮೇರೆಗೆ ಕೇಂದ್ರ ಸರ್ಕಾರ ಸಿಬಿಐ ನಿರ್ದೇಶಕರನ್ನು ನೇಮಿಸಬೇಕು ಎಂದು ಸೂಚಿಸುತ್ತದೆ. ಈ ಸಮಿತಿಯಲ್ಲಿ ಪ್ರಧಾನ ಮಂತ್ರಿಗಳು ಅಧ್ಯಕ್ಷತೆಯನ್ನು ವಹಿಸಿದರೆ, ಸದಸ್ಯರಾಗಿ, ಲೋಕಸಭೆಯಲ್ಲಿ ಪ್ರತಿಪಕ್ಷದ ನಾಯಕ ಮತ್ತು ಭಾರತದ ಮುಖ್ಯ ನ್ಯಾಯಮೂರ್ತಿ ಗಳನ್ನೊಳಗೊಂಡಿರುತ್ತದೆ ಅಥವಾ CJI ನಾಮನಿರ್ದೇಶನ ಮಾಡಿದ ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರು ಸದಸ್ಯರಾಗಿ ಇರುತ್ತಾರೆ.
  3. ಇದಲ್ಲದೆ, ದೆಹಲಿ ವಿಶೇಷ ಪೊಲೀಸ್ ಸ್ಥಾಪನೆ (ತಿದ್ದುಪಡಿ) ಕಾಯ್ದೆ, 2014 ಸಿ.ಬಿ.ಐ ನಿರ್ದೇಶಕರ ನೇಮಕಕ್ಕೆ ಸಂಬಂಧಿಸಿದ ಸಮಿತಿಯ ಸಂಯೋಜನೆಯಲ್ಲಿ ಬದಲಾವಣೆ ತಂದಿದೆ. ಲೋಕಸಭೆಯಲ್ಲಿ ಮಾನ್ಯತೆ ಪಡೆದ ಅಧಿಕೃತ ಪ್ರತಿಪಕ್ಷದ ನಾಯಕರಿಲ್ಲದಿದ್ದಲ್ಲಿ, ಲೋಕಸಭೆಯಲ್ಲಿನ ಏಕೈಕ ಅತಿದೊಡ್ಡ ವಿರೋಧ ಪಕ್ಷದ ನಾಯಕ ಆ ಸಮಿತಿಯ ಸದಸ್ಯನಾಗಿರುತ್ತಾನೆ ಎಂದು ಅದು ಹೇಳುತ್ತದೆ.

ಜಾರಿ ನಿರ್ದೇಶನಾಲಯದ ಕುರಿತು:

  1. ಈ ನಿರ್ದೇಶನಾಲಯದ ಮೂಲವು 1956 ರ ಮೇ 1 ರಂದು, ‘ವಿದೇಶಿ ವಿನಿಮಯ ನಿಯಂತ್ರಣ ಕಾಯ್ದೆ,1947’ ರ(FERA 47) ಅಡಿಯಲ್ಲಿ ವಿನಿಮಯ ನಿಯಂತ್ರಣ ಕಾಯ್ದೆಯ ಉಲ್ಲಂಘನೆಯನ್ನು ಎದುರಿಸಲು ಆರ್ಥಿಕ ವ್ಯವಹಾರಗಳ ಇಲಾಖೆಯಲ್ಲಿ ‘ಜಾರಿ ಘಟಕ‘ ರಚಿಸಯಿತು.
  2. 1957 ರಲ್ಲಿ, ಈ ಘಟಕದ ಹೆಸರನ್ನು ‘ಜಾರಿ ನಿರ್ದೇಶನಾಲಯ’ (Enforcement Directorate) ಎಂದು ಮರುನಾಮಕರಣ ಮಾಡಲಾಯಿತು.
  3. ಪ್ರಸ್ತುತ ಜಾರಿ ನಿರ್ದೇಶನಾಲಯವು ಹಣಕಾಸು ಸಚಿವಾಲಯದ ಅಡಿಯಲ್ಲಿ ಕಂದಾಯ ಇಲಾಖೆಯ ಒಂದು ಭಾಗವಾಗಿದೆ.
  4. ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ, 1999 (Foreign Exchange Management Act, 1999 -FEMA) ಮತ್ತು ಮನಿ ಲಾಂಡರಿಂಗ್ ತಡೆ ಕಾಯ್ದೆ, 2002 (Prevention of Money Laundering Act, 2002 -PMLA) ಎಂಬ ಎರಡು ವಿಶೇಷ ಹಣಕಾಸಿನ ಕಾನೂನುಗಳ ನಿಬಂಧನೆಗಳನ್ನು ಜಾರಿಗೊಳಿಸುವುದು ಈ ಸಂಸ್ಥೆಯ ಕಾರ್ಯವಾಗಿದೆ.

ಸಂಯೋಜನೆ:

ಸಿಬ್ಬಂದಿಗಳ ನೇರ ನೇಮಕಾತಿಯ ಹೊರತಾಗಿ, ಈ ನಿರ್ದೇಶನಾಲಯವು ವಿವಿಧ ತನಿಖಾ ಸಂಸ್ಥೆಗಳಿಂದ ಅಧಿಕಾರಿಗಳನ್ನು ಡೆಪ್ಯುಟೇಶನ್‌ನಲ್ಲಿ ಇರಿಸಿಕೊಳ್ಳುತ್ತದೆ, ಅಂದರೆ ಕಸ್ಟಮ್ಸ್ ಮತ್ತು ಕೇಂದ್ರ ಅಬಕಾರಿ, ಆದಾಯ ತೆರಿಗೆ, ಪೊಲೀಸ್ ಇತ್ಯಾದಿ.

ಇತರ ಕಾರ್ಯಗಳು:

  1. ಪರಾರಿಯಾದ ಆರ್ಥಿಕ ಅಪರಾಧಿಗಳ ಕಾಯ್ದೆ, (Fugitive Economic Offenders) 2018 ರ ಅಡಿಯಲ್ಲಿ ಭಾರತದಿಂದ ಪರಾರಿಯಾದ/ ಪರಾರಿಯಾದವರ ಪ್ರಕರಣಗಳನ್ನು ತನಿಖೆಗೆ ಒಳಪಡಿಸುವುದು.
  2. ಫೆಮಾ ಉಲ್ಲಂಘನೆಗಾಗಿ ‘ವಿದೇಶಿ ವಿನಿಮಯ ಸಂರಕ್ಷಣೆ ಮತ್ತು ಕಳ್ಳಸಾಗಣೆ ಚಟುವಟಿಕೆಗಳ ತಡೆಗಟ್ಟುವಿಕೆ ಕಾಯ್ದೆ 1974 (COFEPOSA) ಅಡಿಯಲ್ಲಿ ಪ್ರಕರಣಗಳನ್ನು ನಿಯೋಜಿಸುವುದು.

 

ವಿಷಯಗಳು: ಅನಿವಾಸಿ ಭಾರತೀಯರು ಮತ್ತು ಭಾರತದ ಹಿತಾಸಕ್ತಿಗಳ ಮೇಲೆ ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿ ಹೊಂದುತ್ತಿರುವ ದೇಶಗಳ ನೀತಿಗಳು ಮತ್ತು ರಾಜಕೀಯದ ಪರಿಣಾಮಗಳು.

ವಿಶ್ವಸಂಸ್ಥೆಯ ಪರಮಾಣು ಸಂಸ್ಥೆಯ ಮುಖ್ಯಸ್ಥರನ್ನು ಮಾತುಕತೆಗಾಗಿ ಟೆಹ್ರಾನ್‌ಗೆ ಆಹ್ವಾನಿಸಿದ ಇರಾನ್:


(Iran invites the UN nuclear body chief to Tehran for talks)

ಸಂದರ್ಭ:

ಇರಾನ್ ಅಧಿಕಾರಿಗಳೊಂದಿಗಿನ ಸಂಪರ್ಕದ ಕೊರತೆಯ ಬಗ್ಗೆ ವಿಶ್ವಸಂಸ್ಥೆಯ ಅಧಿಕಾರಿಗಳು ಕಳವಳ ವ್ಯಕ್ತಪಡಿಸಿದ ನಂತರ, ಇರಾನ್ ಯುಎನ್‌ನ ಪರಮಾಣು ಸಂಸ್ಥೆಯಾದ ಅಂತರರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆಯ (ಐಎಇಎ) ಮುಖ್ಯಸ್ಥರನ್ನು ಮಾತುಕತೆಗಾಗಿ ಟೆಹ್ರಾನ್‌ಗೆ ಆಹ್ವಾನಿಸಿದೆ.

  1. ಈ ಹಿಂದೆ, ‘ಕೇಂದ್ರಾಪಗಾಮಿ ಘಟಕಗಳ’ (centrifuge component) ಉತ್ಪಾದನಾ ಕಾರ್ಯಾಗಾರದಲ್ಲಿ ಉಪಕರಣಗಳನ್ನು ಪರಿಶೀಲಿಸಲು ‘ಅನಿವಾರ್ಯ’ ಪ್ರವೇಶವನ್ನು ನಿರಾಕರಿಸಲಾಗಿದೆ ಎಂದು IAEA ಆರೋಪಿಸಿತ್ತು.

ಈ ಕ್ರಮಗಳ ಅವಶ್ಯಕತೆ:

ವಿಶ್ವಸಂಸ್ಥೆಯ ಪರಮಾಣು ಕಾವಲು ಸಂಸ್ಥೆ(U.N. nuclear watchdog) ಯಾದ IAEA ಬಿಡುಗಡೆ ಮಾಡಿದ ವರದಿಗೆ ಹೋಲಿಸಿದರೆ,ಇರಾನ್ 120 ಕಿಲೋಗ್ರಾಂಗಳಿಗಿಂತ ಅಧಿಕ (265 ಪೌಂಡ್) 20% ಸಮೃದ್ಧಿಕರಿಸಿದ ಯುರೇನಿಯಂ ಅನ್ನು  ಉತ್ಪಾದಿಸಿದೆ.

ಹಿನ್ನೆಲೆ:

ಅಂತಾರಾಷ್ಟ್ರೀಯ ಅಣುಶಕ್ತಿ ಸಂಸ್ಥೆ (ಐಎಇಎ) ಬಿಡುಗಡೆ ಮಾಡಿದ ವರದಿಯ ಪ್ರಕಾರ, ಇರಾನ್‌ನ ಯುರೇನಿಯಂ ನಿಕ್ಷೇಪಗಳು ಸೆಪ್ಟೆಂಬರ್‌ನಲ್ಲಿ ಸುಮಾರು 84.3 ಕೆಜಿ (185 ಪೌಂಡ್) ಯುರೇನಿಯಂ ಅನ್ನು 20%ವರೆಗಿನ ಬಿರುಕು ಶುದ್ಧತೆಯೊಂದಿಗೆ ಒಳಗೊಂಡಿತ್ತು, ಮೂರು ತಿಂಗಳ ಹಿಂದೆ ಇದರ ಪರಿಮಾಣ ಸುಮಾರು 62.8 ಕೆಜಿ (138 ಪೌಂಡ್) ಆಗಿತ್ತು.

ಜಂಟಿ ಸಮಗ್ರ ಕ್ರಿಯಾ ಯೋಜನೆ(JCPOA) ಯ ಕುರಿತು:

ಇದನ್ನು,ಇರಾನ್ ಪರಮಾಣು ಒಪ್ಪಂದ ಎಂದು ಕರೆಯಲಾಗುತ್ತದೆ.

  1. ಈ ಒಪ್ಪಂದ, ಅಂದರೆ ‘ಜಂಟಿ ಸಮಗ್ರ ಕ್ರಿಯಾ ಯೋಜನೆ’, 2013 ರಿಂದ 2015 ರವರೆಗೆ ಇರಾನ್ ಮತ್ತು ಪಿ 5 + 1 (ಚೀನಾ, ಫ್ರಾನ್ಸ್, ರಷ್ಯಾ, ಯುನೈಟೆಡ್ ಕಿಂಗ್‌ಡಮ್, ಯುನೈಟೆಡ್ ಸ್ಟೇಟ್ಸ್ ಮತ್ತು ಜರ್ಮನಿ ಮತ್ತು ಯುರೋಪಿಯನ್ ಯೂನಿಯನ್) ನಡುವಿನ ಸುದೀರ್ಘ ಮಾತುಕತೆಗಳ ಫಲಿತಾಂಶವಾಗಿದೆ.
  2. 2015 ರಲ್ಲಿ ಸಹಿ ಮಾಡಲಾದ ಪರಮಾಣು ಒಪ್ಪಂದದ ಅಡಿಯಲ್ಲಿ ಇರಾನ್ ತನ್ನ ಪರಮಾಣು ಕಾರ್ಯಕ್ರಮಗಳನ್ನು ಸೀಮಿತಗೊಳಿಸಿದರೆ ಅದಕ್ಕೆ ಪ್ರತಿಯಾಗಿ ಆರ್ಥಿಕ ಪ್ರೋತ್ಸಾಹವನ್ನು ನೀಡಲು ಒಪ್ಪಿಕೊಳ್ಳಲಾಗಿದೆ. ಒಟ್ಟಿನಲ್ಲಿ ಈ ಒಪ್ಪಂದದ ಉದ್ದೇಶ ಇರಾನ್ ಪರಮಾಣು ಬಾಂಬನ್ನು ತಯಾರಿಸಿದಂತೆ ತಡೆಯುವುದಾಗಿದೆ.
  3. ಜಂಟಿ ಸಮಗ್ರ ಕ್ರಿಯಾ ಯೋಜನೆ (JCPOA) ಅಡಿಯಲ್ಲಿ, ಟೆಹ್ರಾನ್ ಮಧ್ಯಮ-ಪುಷ್ಟೀಕರಿಸಿದ ಯುರೇನಿಯಂನ ಸಂಗ್ರಹವನ್ನು ಸಂಪೂರ್ಣವಾಗಿ ತೆಗೆದುಹಾಕುತ್ತದೆ, ಕಡಿಮೆ-ಸಮೃದ್ಧ ಯುರೇನಿಯಂನ ಶೇಖರಣೆಯನ್ನು 98% ರಷ್ಟು ಕಡಿಮೆ ಮಾಡುತ್ತದೆ ಮತ್ತು ಮುಂದಿನ 13 ವರ್ಷಗಳಲ್ಲಿ ಅದರ ಮೂರನೇ ಎರಡರಷ್ಟು ಅನಿಲ ಕೇಂದ್ರಾಪಗಾಮಿಗಳನ್ನು ಕಡಿಮೆ ಮಾಡಲು ಒಪ್ಪಿಕೊಂಡಿತು.
  4. ಒಪ್ಪಂದದ ಅನುಷ್ಠಾನವನ್ನು ಮೇಲ್ವಿಚಾರಣೆ ಮಾಡಲು ಜಂಟಿ ಆಯೋಗವನ್ನು ಸ್ಥಾಪಿಸಲಾಯಿತು.
  5. ಅಮೆರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಜೆ. ಟ್ರಂಪ್ ಅವರು 2018 ರಲ್ಲಿ ಇರಾನ್ ನೊಂದಿಗಿನ (ಜಂಟಿ ಸಮಗ್ರ ಕ್ರಿಯಾಯೋಜನೆ- JCPOA) ಒಪ್ಪಂದವನ್ನು ಏಕಪಕ್ಷೀಯವಾಗಿ ರದ್ದುಗೊಳಿಸಿದರು ಆದರೆ ಬ್ರಿಟನ್, ಫ್ರಾನ್ಸ್, ಜರ್ಮನಿ, ಚೀನಾ ಮತ್ತು ರಷ್ಯಾ ಒಪ್ಪಂದವನ್ನು ಉಳಿಸಿಕೊಳ್ಳಲು ಪ್ರಯತ್ನಿಸಿವೆ.
  6. ವಿಶ್ವ ಶಕ್ತಿಗಳೊಂದಿಗಿನ ಈ ಒಪ್ಪಂದದಲ್ಲಿ, ಇರಾನ್ ತನ್ನ ಸಂಶೋಧನಾ ರಿಯಾಕ್ಟರ್‌ಗೆ ಅಗತ್ಯವಿರುವ 20% ಪುಷ್ಟೀಕರಿಸಿದ ಯುರೇನಿಯಂ ಅನ್ನು ಒದಗಿಸಲು ಈ ಒಪ್ಪಂದಕ್ಕೆ ಸಹಿ ಹಾಕಿದ ಇತರ ದೇಶಗಳು ಒಪ್ಪಿಕೊಂಡವು.
  7. ಪರಮಾಣು ಒಪ್ಪಂದದ ನಿಯಮಗಳ ಅಡಿಯಲ್ಲಿ, ಇರಾನ್ ತನ್ನ ಸಂಶೋಧನಾ ರಿಯಾಕ್ಟರ್ ಚಟುವಟಿಕೆಗಳನ್ನು ಹೊರತುಪಡಿಸಿ, 3.67% ಕ್ಕಿಂತ ಹೆಚ್ಚು ಸಮೃದ್ಧ ಯುರೇನಿಯಂ ಉತ್ಪಾದಿಸುವುದನ್ನು ನಿಷೇಧಿಸಲಾಗಿದೆ.

iran_nuclear

 

ಅಂತರರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ ಅಥವಾ ಇಂಧನ ಸಂಸ್ಥೆಯ (IAEA) ಕುರಿತು:

  1. ಅಂತರರಾಷ್ಟ್ರೀಯ ಪರಮಾಣು ಶಕ್ತಿ ಏಜೆನ್ಸಿಯನ್ನು 1957 ರಲ್ಲಿ ವಿಶ್ವಸಂಸ್ಥೆಯ ಕುಟುಂಬದಲ್ಲಿ ಒಂದಾಗಿ ‘ಜಾಗತಿಕ ಶಾಂತಿಗಾಗಿ ಪರಮಾಣು ಸಂಸ್ಥೆ’ ಎಂಬ ಸಂಘಟನೆಯಾಗಿ ಸ್ಥಾಪಿಸಲಾಯಿತು. ಇದೊಂದು ಅಂತರರಾಷ್ಟ್ರೀಯ ಸ್ವಾಯತ್ತ ಸಂಸ್ಥೆ ಯಾಗಿದೆ.
  2. ಜಗತ್ತಿನಲ್ಲಿ ಪರಮಾಣು ಶಕ್ತಿಯ ಶಾಂತಿಯುತ ಬಳಕೆಯನ್ನು ಖಚಿತಪಡಿಸಿಕೊಳ್ಳುವ ಗುರಿ ಹೊಂದಿದೆ. ಪರಮಾಣು ಶಕ್ತಿಯನ್ನು ಮಿಲಿಟರಿ ಬಳಕೆಯನ್ನು ಯಾವುದೇ ರೀತಿಯಲ್ಲಿ ತಡೆಯಲು ಅದು ಶ್ರಮಿಸುತ್ತದೆ.
  3. IAEA ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಮತ್ತು ಭದ್ರತಾ ಮಂಡಳಿ ಎರಡಕ್ಕೂ ವರದಿ ಮಾಡುತ್ತದೆ.
  4. ಪ್ರಧಾನ ಕಛೇರಿ ಆಸ್ಟ್ರಿಯಾದ ವಿಯನ್ನಾ ದಲ್ಲಿದೆ.

ಕಾರ್ಯಗಳು:

  1. ಪರಮಾಣು ತಂತ್ರಜ್ಞಾನಗಳ ಸುರಕ್ಷಿತ, ನಿರ್ಭೀತ ಮತ್ತು ಶಾಂತಿಯುತ ಬಳಕೆಯನ್ನು ಉತ್ತೇಜಿಸಲು IAEA ತನ್ನ ಸದಸ್ಯ ರಾಷ್ಟ್ರಗಳು ಮತ್ತು ವಿವಿಧ ಪಾಲುದಾರರೊಂದಿಗೆ ಕೆಲಸ ಮಾಡುತ್ತದೆ.
  2. ಪರಮಾಣು ಶಕ್ತಿಯ ಶಾಂತಿಯುತ ಬಳಕೆಯನ್ನು ಉತ್ತೇಜಿಸುವುದು ಮತ್ತು ಪರಮಾಣು ಶಸ್ತ್ರಾಸ್ತ್ರಗಳು ಸೇರಿದಂತೆ ಯಾವುದೇ ಮಿಲಿಟರಿ ಉದ್ದೇಶಕ್ಕಾಗಿ ಅದರ ಬಳಕೆಯನ್ನು ತಡೆಯುವುದು ಇದರ ಉದ್ದೇಶವಾಗಿದೆ.

ಆಡಳಿತ ಮಂಡಳಿ:

  1. 22 ಸದಸ್ಯ ರಾಷ್ಟ್ರಗಳು (ಪ್ರತಿಯೊಬ್ಬರಿಂದ ನಿರ್ಧರಿಸಲ್ಪಟ್ಟ ಭೌಗೋಳಿಕ ವೈವಿಧ್ಯತೆಯನ್ನು ಪ್ರತಿನಿಧಿಸುತ್ತವೆ) – ಸಾಮಾನ್ಯ ಸಮ್ಮೇಳನದ ಮೂಲಕ ಚುನಾವಣೆ (ಪ್ರತಿ ವರ್ಷ 11 ಸದಸ್ಯರು) – 2 ವರ್ಷಗಳ ಅವಧಿಗೆ ಆಯ್ಕೆ.
  2. ಕನಿಷ್ಠ 10 ಸದಸ್ಯ ರಾಷ್ಟ್ರಗಳು – ಹೊರಹೋಗುವ ಮಂಡಳಿಯಿಂದ ನಾಮನಿರ್ದೇಶನಗೊಳ್ಳುತ್ತವೆ.

IAEA ಪಾತ್ರಗಳು:

  1. IAEA, ಚಟುವಟಿಕೆಗಳು ಮತ್ತು ಬಜೆಟ್ ಕುರಿತು ಸಾಮಾನ್ಯ ಸಮಾವೇಶಕ್ಕೆ ಶಿಫಾರಸುಗಳನ್ನು ಮಾಡುತ್ತದೆ.
  2. IAEA, ಮಾನದಂಡಗಳನ್ನು ಪ್ರಕಟಿಸುವ ಜವಾಬ್ದಾರಿ ಹೊಂದಿದೆ.
  3. IAEA, ಸಂಸ್ಥೆಯ ಹೆಚ್ಚಿನ ನೀತಿಗಳ ಸೂತ್ರೀಕರಣ ಮಾಡುತ್ತದೆ.
  4. ಸಾಮಾನ್ಯ ಸಮ್ಮೇಳನದ ಅನುಮೋದನೆಯೊಂದಿಗೆ ಮಹಾನಿರ್ದೇಶಕರನ್ನು ನೇಮಿಸುತ್ತದೆ.

IAEA, ನಡೆಸುವ ಕಾರ್ಯಕ್ರಮಗಳು:

  1. ಕ್ಯಾನ್ಸರ್ ಥೆರಪಿಗಾಗಿ ಕ್ರಿಯಾ ಕಾರ್ಯಕ್ರಮ- (Program of Action for Cancer Therapy- PACT).
  2. ಮಾನವ ಆರೋಗ್ಯ ಕಾರ್ಯಕ್ರಮ.
  3. ನೀರಿನ ಲಭ್ಯತೆ ವರ್ಧನೆ ಯೋಜನೆ.
  4. ನವೀನ ಪರಮಾಣು ರಿಯಾಕ್ಟರ್‌ಗಳು ಮತ್ತು ಇಂಧನ ಚಕ್ರಗಳ ಕುರಿತಾದ ಅಂತರರಾಷ್ಟ್ರೀಯ ಯೋಜನೆ, 2000.

 


ಸಾಮಾನ್ಯ ಅಧ್ಯಯನ ಪತ್ರಿಕೆ : 3


 

ವಿಷಯಗಳು: ನೇರ ಮತ್ತು ಪರೋಕ್ಷ ಕೃಷಿ ಸಬ್ಸಿಡಿಗಳು ಮತ್ತು ಕನಿಷ್ಠ ಬೆಂಬಲ ಬೆಲೆಗೆ ಸಂಬಂಧಿಸಿದ ವಿಷಯಗಳು; ಸಾರ್ವಜನಿಕ ವಿತರಣಾ ವ್ಯವಸ್ಥೆ – ಉದ್ದೇಶಗಳು, ಕಾರ್ಯಗಳು, ಮಿತಿಗಳು, ಸುಧಾರಣೆಗಳು; ಬಫರ್ ಸ್ಟಾಕ್ ಮತ್ತು ಆಹಾರ ಭದ್ರತೆಗೆ ಸಂಬಂಧಿಸಿದ ವಿಷಯಗಳು; ತಂತ್ರಜ್ಞಾನ ಮಿಷನ್; ಪಶುಸಂಗೋಪನೆಗೆ ಸಂಬಂಧಿಸಿದ ಅರ್ಥಶಾಸ್ತ್ರ.

ರಾಷ್ಟ್ರೀಯ ಗೋಕುಲ್ ಮಿಷನ್:


(Rashtriya Gokul Mission)

ಸಂದರ್ಭ:

ಇತ್ತೀಚೆಗೆ ‘ರಾಷ್ಟ್ರೀಯ ಗೋಕುಲ್ ಮಿಷನ್’ (Rashtriya Gokul Mission) ಕಾರ್ಯಕ್ಷಮತೆಯ ಕುರಿತು ಪರಿಶೀಲನಾ ಸಭೆ ನಡೆಸಲಾಯಿತು.

‘ರಾಷ್ಟ್ರೀಯ ಗೋಕುಲ್ ಮಿಷನ್’ ಎಂದರೇನು?

ರಾಷ್ಟ್ರೀಯ ಗೋವಿನ ತಳಿಗಳನ್ನು ಸಂರಕ್ಷಣೆ ಮಾಡಲು ಮತ್ತು ಅಭಿವೃದ್ಧಿಪಡಿಸಲು ರಾಷ್ಟ್ರೀಯ ಗೋವಿನ ಸಂತಾನೋತ್ಪತ್ತಿ ಮತ್ತು ಡೈರಿ ಅಭಿವೃದ್ಧಿ (National Programme for Bovine Breeding and Dairy Development – NPBBD) ಕಾರ್ಯಕ್ರಮದ ಅಡಿಯಲ್ಲಿ 2014 ರಲ್ಲಿ ಸರ್ಕಾರವು ‘ರಾಷ್ಟ್ರೀಯ ಗೋಕುಲ್ ಮಿಷನ್’ ಅನ್ನು ಪ್ರಾರಂಭಿಸಿತು.

ಕಾರ್ಯಾಚರಣೆಯ ಮುಖ್ಯ ಉದ್ದೇಶಗಳು:

  1. ಹಾಲು ನೀಡುವ ಸ್ಥಳೀಯ ತಳಿಗಳ ಅಭಿವೃದ್ಧಿ ಮತ್ತು ಸಂರಕ್ಷಣೆ.
  2. ಇದರೊಂದಿಗೆ, ಪ್ರಾಣಿಗಳಲ್ಲಿ ಆನುವಂಶಿಕ ರಚನೆಯನ್ನು ಸುಧಾರಿಸಲು ಮತ್ತು ಪ್ರಾಣಿಗಳ ಸಂಖ್ಯೆಯಲ್ಲಿ ಹೆಚ್ಚಳ ಮಾಡಲು ಸ್ಥಳೀಯ ಪ್ರಾಣಿಗಳಿಗೆ ತಳಿ ಸುಧಾರಣೆ ಕಾರ್ಯಕ್ರಮ.
  3. ಹಾಲಿನ ಉತ್ಪಾದನೆ ಮತ್ತು ಉತ್ಪಾದಕತೆಯನ್ನು ಹೆಚ್ಚಿಸಲು.
  4. ಸಾಹಿವಾಲ್, ರಾಠಿ, ಡ್ಯೂನಿ, ಥಾರ್ಪಾರ್ಕರ್, ರೆಡ್ ಸಿಂಧಿ ಮತ್ತು ಇತರ ಗಣ್ಯ ಸ್ಥಳೀಯ ತಳಿಗಳ ಮೂಲಕ ಇತರ ತಳಿಗಳ ಉನ್ನತೀಕರಣ.
  5. ನೈಸರ್ಗಿಕ ಸೇವೆಗಾಗಿ ಹೆಚ್ಚಿನ ಆನುವಂಶಿಕ ಅರ್ಹತೆ ಹೊಂದಿರುವ ಗೂಳಿಗಳನ್ನು ವಿತರಣೆ ಮಾಡುವುದು.

ಅನುಷ್ಠಾನ:

  1. ರಾಷ್ಟ್ರೀಯ ಗೋಕುಲ್ ಮಿಷನ್ ಅನ್ನು ರಾಜ್ಯ ಜಾನುವಾರು ಅಭಿವೃದ್ಧಿ ಮಂಡಳಿಗಳಂತಹ ಸಂಸ್ಥೆಗಳ ಮೂಲಕ ಜಾರಿಗೊಳಿಸಲಾಗಿದೆ.
  2. ‘ರಾಜ್ಯ ಅನುಷ್ಠಾನ ಸಂಸ್ಥೆ(State Implementing Agency– SIA) ಯ ಅಡಿಯಲ್ಲಿ ‘ಜಾನುವಾರು ಅಭಿವೃದ್ಧಿ ಮಂಡಳಿ’ ಪ್ರಸ್ತಾಪವನ್ನು ಪ್ರಾಯೋಜಿಸಲು ಮತ್ತು ಈ ಪ್ರಾಯೋಜಿತ ಪ್ರಸ್ತಾವನೆಗಳನ್ನು ಮೇಲ್ವಿಚಾರಣೆ ಮಾಡಲು ರಾಜ್ಯ ಗೋಸೇವಾ ಆಯೋಗಕ್ಕೆ ಆದೇಶಿಸಲಾಗಿದೆ.
  3. ಸ್ಥಳೀಯ ಪ್ರಾಣಿ ವಿಭಾಗದಲ್ಲಿ ಅತ್ಯುತ್ತಮ ಜರ್ಮ್ ಪ್ಲಾಸ್ಮ್ ಸೇರಿದಂತೆ,ಸಿಸಿಬಿಎಫ್, ಭಾರತೀಯ ಕೃಷಿ ಸಂಶೋಧನಾ ಮಂಡಳಿ, ಕೃಷಿ ಅಥವಾ ಪಶು ಸಂಗೋಪನೆ ವಿಶ್ವವಿದ್ಯಾಲಯಗಳು, ಕಾಲೇಜುಗಳು, ಎನ್‌ಜಿಒಗಳು, ಸಹಕಾರ ಸಂಘಗಳು ಮತ್ತು ಗೋಶಾಲೆಗಳಂತಹ ಏಜೆನ್ಸಿಗಳು ಭಾಗವಹಿಸುವ ಏಜೆನ್ಸಿಗಳಾಗಿವೆ.

ಗೋಕುಲ್ ಗ್ರಾಮ ಎಂದರೇನು?

ಗೋಕುಲ್ ಗ್ರಾಮ ಸ್ಥಳೀಯ ಪ್ರಾಣಿ ಕೇಂದ್ರ ಮತ್ತು ಅಧಿಸೂಚಿತ ಸ್ಥಳೀಯ ತಳಿಗಳ ಅಭಿವೃದ್ಧಿಯ ಕೇಂದ್ರವಾಗಿ ಕೆಲಸ ಮಾಡುತ್ತಿವೆ.

  1. ಈ ಯೋಜನೆಗೆ ಹಣವನ್ನು ಸಮಗ್ರ ಸ್ಥಳೀಯ ಪ್ರಾಣಿ ಕೇಂದ್ರ, ಗೋಕುಲ್ ಗ್ರಾಮ್ ಸ್ಥಾಪನೆಗೆ ನೀಡಲಾಗುತ್ತದೆ.
  2. ಗೋಕುಲ್ ಗ್ರಾಮಗಳನ್ನು ಸ್ಥಳೀಯ ತಳಿ ಅಭಿವೃದ್ಧಿ ಪ್ರದೇಶಗಳ ಸಮೀಪದ ಮಹಾನಗರಗಳಲ್ಲಿ ಮತ್ತು ನಗರ ಜಾನುವಾರಗಳ ವಸತಿಗಾಗಿ ಮಹಾನಗರಗಳ ಹತ್ತಿರ ಸ್ಥಾಪಿಸಲಾಗಿದೆ.

ಗೋಕುಲ್ ಗ್ರಾಮದ ಪಾತ್ರ ಮತ್ತು ಜವಾಬ್ದಾರಿಗಳು:

  1. ಹಸುಗಳ ಸಂತಾನೋತ್ಪತ್ತಿ ಈ ಪ್ರದೇಶದ ರೈತರಿಗೆ ಹೆಚ್ಚಿನ ಆನುವಂಶಿಕ ಸಂತಾನೋತ್ಪತ್ತಿ ದಾಸ್ತಾನು ಪೂರೈಸಲು ಒಂದು ವಿಶ್ವಾಸಾರ್ಹ ಮೂಲವಾಗಿದೆ. ಗೋಕುಲ್ ಗ್ರಾಮ್ ರೈತರಿಗೆ ತರಬೇತಿ ಕೇಂದ್ರದಲ್ಲಿ ಆಧುನಿಕ ಸೌಲಭ್ಯಗಳನ್ನು ನೀಡುತ್ತದೆ.
  2. 1000 ಪ್ರಾಣಿಗಳ ಸಾಮರ್ಥ್ಯವಿರುವ ಈ ಗೋಕುಲ್ ಗ್ರಾಮಗಳಲ್ಲಿ ಹಾಲು ಉತ್ಪಾದಿಸುವ ಮತ್ತು ಅನುತ್ಪಾದಕ ಪ್ರಾಣಿಗಳ ಅನುಪಾತ 60:40.
  3. ಪ್ರಾಣಿಗಳ ಪೌಷ್ಟಿಕಾಂಶದ ಅಗತ್ಯಗಳನ್ನು ಪೂರೈಸಲು ಗೋಕುಲ್ ಗ್ರಾಂಗಳನ್ನು ಮನೆಯಲ್ಲಿಯೇ ಮೇವು ಉತ್ಪಾದಿಸಲು ವಿನ್ಯಾಸಗೊಳಿಸಲಾಗಿದೆ.
  4. ಗೋಕುಲ್ ಗ್ರಾಮ್ ಅನ್ನು ವಾಸ್ತವವಾಗಿ ಆರ್ಥಿಕ ಸಂಸ್ಥೆಯ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ, ಇದರಲ್ಲಿ ಈ ಕೆಳಗಿನ ವಸ್ತುಗಳ ಮಾರಾಟದ ಮೂಲಕ ಆರ್ಥಿಕ ಸಂಪನ್ಮೂಲಗಳನ್ನು ಉತ್ಪಾದಿಸಲಾಗುತ್ತದೆ: ಹಾಲು ಸಾವಯವ ಗೊಬ್ಬರ ಎರೆಹುಳು ಗೊಬ್ಬರ ಮೂತ್ರದ ಬಟ್ಟಿ ಇಳಿಸುವಿಕೆಯಿಂದ ದೇಶೀಯ ಬಳಕೆಗಾಗಿ ಜೈವಿಕ ಅನಿಲದಿಂದ ವಿದ್ಯುತ್ ಉತ್ಪಾದನೆ ಪ್ರಾಣಿ ಉತ್ಪನ್ನಗಳ ಮಾರಾಟ ಇತ್ಯಾದಿ.
  5. ಮಹಾನಗರಗಳ ಗೋಕುಲ್ ಗ್ರಾಮದಲ್ಲಿ ನಗರ ಜಾನುವಾರುಗಳ ಆನುವಂಶಿಕತೆಯ ಉನ್ನತೀಕರಣದ ಮೇಲೆ ಗಮನ ಕೇಂದ್ರೀಕರಿಸಲಾಗುವುದು.

 

ವಿಷಯಗಳು: ಸಂರಕ್ಷಣೆ, ಪರಿಸರ ಮಾಲಿನ್ಯ ಮತ್ತು ಅವನತಿ, ಪರಿಸರ ಪ್ರಭಾವದ ಮೌಲ್ಯಮಾಪನ.

ಗ್ರೀನ್ ಬಾಂಡ್ಸ್ ಎಂದರೇನು?


(Green Bonds)

ಸಂದರ್ಭ:

ಚಿಪ್ ತಯಾರಕ ಮೈಕ್ರಾನ್ ಟೆಕ್ನಾಲಜಿ Inc., ಚಿಲ್ಲರೆ ವ್ಯಾಪಾರಿ ವಾಲ್‌ಮಾರ್ಟ್ ಇಂಕ್(Inc) ಮತ್ತು ಡೇಟಾ-ಸೆಂಟರ್ ಕಂಪನಿ ಇಕ್ವಿನಿಕ್ಸ್ ಇಂಕ್ ಸೇರಿದಂತೆ ಯುಎಸ್ ಕಂಪನಿಗಳು ತಮ್ಮ ದೊಡ್ಡ ಸಾಂಪ್ರದಾಯಿಕ ‘ಬಾಂಡ್ ಕೊಡುಗೆಗಳ’ ಭಾಗವಾಗಿ ‘ಗ್ರೀನ್ ಬಾಂಡ್‌ಗಳನ್ನು’(Green Bonds) ಸೇರಿಸಿದ ನಂತರ, ‘ಕಾರ್ಪೊರೇಟ್ ಗ್ರೀನ್-ಬಾಂಡ್‌ಗಳ’ ವಿತರಣೆಯು ಹೊಸ ಗರಿಷ್ಠ ಮಟ್ಟವನ್ನು ತಲುಪಿದೆ.

ಅಗತ್ಯತೆ:

ಹೂಡಿಕೆದಾರರು, ನಿಯಂತ್ರಕರು ಮತ್ತು ಉದ್ಯೋಗಿಗಳಿಂದ ಪರಿಸರವನ್ನು ಸುಧಾರಿಸಲು ಕ್ರಮಗಳನ್ನು ತೆಗೆದುಕೊಳ್ಳುವಂತೆ ಕಂಪನಿಗಳು ಒತ್ತಡವನ್ನು ಎದುರಿಸಿದ ನಂತರ ಅವರು ಪರಿಸರ ಸ್ನೇಹಿ ಯೋಜನೆಗಳಿಗೆ ಹಣಕಾಸು ಒದಗಿಸುವ ‘ಗ್ರೀನ್ ಬಾಂಡ್‌ಗಳು’ / ಹಸಿರು ಬಾಂಡ್‌ಗಳನ್ನು’ ವಿತರಿಸುತ್ತಾರೆ. ಸುಸ್ಥಿರ ಗುರಿಗಳಿಗೆ ಸಂಬಂಧಿಸಿದ ಸಾಲಗಳನ್ನು ನೀಡುವ ಮೂಲಕವೂ ಇದನ್ನು ಮಾಡಬಹುದು.

ಗ್ರೀನ್ ಬಾಂಡ್ಸ್’ ಎಂದರೇನು?

‘ಗ್ರೀನ್ ಬಾಂಡ್‌ಗಳು’ ಒಂದು ರೀತಿಯ ‘ಸ್ಥಿರ ಆದಾಯ’ ಸಾಧನವಾಗಿದ್ದು, ಹವಾಮಾನ ಮತ್ತು ಪರಿಸರ ಸಂಬಂಧಿತ ಯೋಜನೆಗಳಿಗೆ ಹಣವನ್ನು ಸಂಗ್ರಹಿಸಲು ನಿರ್ದಿಷ್ಟವಾಗಿ ಮೀಸಲಿಡಲಾಗಿದೆ.

ಈ ಬಾಂಡ್‌ಗಳು ಸಾಮಾನ್ಯವಾಗಿ ಆಸ್ತಿಗೆ ಲಿಂಕ್ ಆಗಿರುತ್ತವೆ ಮತ್ತು ವಿತರಿಸುವ ಘಟಕದ ಬ್ಯಾಲೆನ್ಸ್ ಶೀಟ್‌ನಿಂದ ಬೆಂಬಲಿತವಾಗಿದೆ, ಆದ್ದರಿಂದ ಈ ಬಾಂಡ್‌ಗಳಿಗೆ ವಿತರಕರ ಇತರ ಸಾಲದ ಬಾಧ್ಯತೆಗಳಂತೆಯೇ ಅದೇ ‘ಕ್ರೆಡಿಟ್ ರೇಟಿಂಗ್’ ನೀಡಲಾಗುತ್ತದೆ.

  1. ‘ಗ್ರೀನ್ ಬಾಂಡ್’ಗಳಲ್ಲಿ ಹೂಡಿಕೆ ಮಾಡಲು ಹೂಡಿಕೆದಾರರನ್ನು ಆಕರ್ಷಿಸಲು ಪ್ರೋತ್ಸಾಹಕವಾಗಿ ‘ತೆರಿಗೆ’ ವಿನಾಯಿತಿಗಳಂತಹ ಕೆಲವು ಪ್ರೋತ್ಸಾಹಕಗಳನ್ನು ಸಹ ನೀಡಬಹುದು.
  2. ವಿಶ್ವ ಬ್ಯಾಂಕ್ ‘ಹಸಿರು ಬಾಂಡ್‌ಗಳು’ / ಗ್ರೀನ್ ಬಾಂಡ್‌ಗಳ ಪ್ರಮುಖ ವಿತರಕವಾಗಿದೆ. ಇದು 2008 ರಿಂದ 164 ‘ಗ್ರೀನ್ ಬಾಂಡ್’ಗಳನ್ನು ಬಿಡುಗಡೆ ಮಾಡಿದೆ, ಇದರ ಒಟ್ಟು ಮೌಲ್ಯ $14.4 ಬಿಲಿಯನ್. ‘ಕ್ಲೈಮೇಟ್ ಬಾಂಡ್ ಇನಿಶಿಯೇಟಿವ್’ ಪ್ರಕಾರ, 2020 ರಲ್ಲಿ ಸುಮಾರು $270 ಬಿಲಿಯನ್ ಮೌಲ್ಯದ ಹಸಿರು ಬಾಂಡ್‌ಗಳನ್ನು ವಿತರಿಸಲಾಗಿದೆ.

ಗ್ರೀನ್ ಬಾಂಡ್’ ಕಾರ್ಯನಿರ್ವಹಣೆ:

ಹಸಿರು ಬಾಂಡ್‌ಗಳು ಇತರ ಯಾವುದೇ ಕಾರ್ಪೊರೇಟ್ ಬಾಂಡ್ ಅಥವಾ ಸರ್ಕಾರಿ ಬಾಂಡ್‌ಗಳಂತೆಯೇ ಕಾರ್ಯನಿರ್ವಹಿಸುತ್ತವೆ.

  1. ಪರಿಸರ ವ್ಯವಸ್ಥೆಯ ಮರುಸ್ಥಾಪನೆ ಅಥವಾ ಮಾಲಿನ್ಯದ ತಗ್ಗಿಸುವಿಕೆಯಂತಹ ಸಕಾರಾತ್ಮಕ ಪರಿಸರ ಪ್ರಭಾವ’ವನ್ನು ಹೊಂದಿರುವ ಯೋಜನೆಗಳಿಗೆ ‘ಹಣಕಾಸು’ ಒದಗಿಸುವಿಕೆಯನ್ನು ಸುರಕ್ಷಿತಗೊಳಿಸಲು ಸಾಲಗಾರರಿಂದ ಈ ಭದ್ರತೆಗಳನ್ನು ನೀಡಲಾಗುತ್ತದೆ.
  2. ಈ ಬಾಂಡ್‌ಗಳನ್ನು ಖರೀದಿಸುವ ಹೂಡಿಕೆದಾರರು ತಮ್ಮ ಬಾಂಡ್ಗಳ ಅವಧಿಯ ಮುಕ್ತಾಯದ ಮೇಲೆ ಸಮಂಜಸವಾದ ಲಾಭವನ್ನು ಪಡೆಯುವುದನ್ನು ನಿರೀಕ್ಷಿಸಬಹುದು.
  3. ಹೆಚ್ಚುವರಿಯಾಗಿ, ಹಸಿರು ಬಾಂಡ್‌ಗಳಲ್ಲಿ ಹೂಡಿಕೆ ಮಾಡುವುದು ಸಾಮಾನ್ಯವಾಗಿ ತೆರಿಗೆ’ ಪ್ರಯೋಜನಗಳೊಂದಿಗೆ ಬರುತ್ತದೆ.

ಗ್ರೀನ್ ಬಾಂಡ್ Vs ಬ್ಲೂ ಬಾಂಡ್:

ಬ್ಲೂ ಬಾಂಡ್‌ಗಳು’ (Blue Bonds)ಸಾಗರ ಮತ್ತು ಸಂಬಂಧಿತ ಪರಿಸರ ವ್ಯವಸ್ಥೆಗಳನ್ನು ರಕ್ಷಿಸುವ ಯೋಜನೆಗಳಿಗೆ ಹಣಕಾಸು ನೀಡಲು ಒದಗಿಸಲಾದ ‘ಸುಸ್ಥಿರತೆಯ ಬಾಂಡ್‌ಗಳು’.

ಸಮರ್ಥನೀಯ ಮೀನುಗಾರಿಕೆ, ಹವಳದ ಬಂಡೆಗಳು ಮತ್ತು ಇತರ ದುರ್ಬಲ ಪರಿಸರ ವ್ಯವಸ್ಥೆಗಳನ್ನು ರಕ್ಷಿಸಲು ಅಥವಾ ಮಾಲಿನ್ಯ ಮತ್ತು ಆಮ್ಲೀಕರಣವನ್ನು ಕಡಿಮೆ ಮಾಡುವ ಯೋಜನೆಗಳಿಗೆ ಈ ಬಾಂಡ್‌ಗಳನ್ನು ನೀಡಬಹುದಾಗಿದೆ.

ಎಲ್ಲಾ ನೀಲಿ ಬಾಂಡ್ ಗಳು ‘ಹಸಿರು ಬಾಂಡ್ ಗಳು ಆದರೆ ಎಲ್ಲಾ ‘ಹಸಿರು ಬಾಂಡ್ ಗಳು ನೀಲಿ ಬಾಂಡ್ಗಳಲ್ಲ.

ಗ್ರೀನ್ ಬಾಂಡ್‌ಗಳು VS ಕ್ಲೈಮೇಟ್ ಬಾಂಡ್‌ಗಳು’:

ಹಸಿರು ಬಾಂಡ್‌ಗಳು” ಮತ್ತು “ಕ್ಲೈಮೇಟ್ ಬಾಂಡ್‌ಗಳನ್ನು” ಕೆಲವೊಮ್ಮೆ ಒಂದನ್ನು ಮತ್ತೊಂದರ ಪರ್ಯಾಯದಂತೆ ಬಳಸಲಾಗುತ್ತದೆ, ಆದರೆ ‘ಹವಾಮಾನ ಬಾಂಡ್ ಗಳು’ ಎಂಬ ಪದವನ್ನು ಕೆಲವು ಅಧಿಕಾರಿಗಳು ನಿರ್ದಿಷ್ಟವಾಗಿ ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡುವ ಅಥವಾ ಹವಾಮಾನ ಬದಲಾವಣೆಯ ಪರಿಣಾಮಗಳನ್ನು ತಗ್ಗಿಸುವ ಯೋಜನೆಗಳಿಗೆ ಬಳಸುತ್ತಾರೆ.

 


ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:


ಅಫ್ಘಾನಿಸ್ತಾನದ ಹಜಾರಾಗಳು:

  1. ಹಜಾರಾಗಳು, ಪರ್ಷಿಯನ್ ಮಾತನಾಡುವ ಜನಾಂಗೀಯ ಗುಂಪಾಗಿದ್ದು, ಮುಖ್ಯವಾಗಿ ಮಧ್ಯ ಅಫ್ಘಾನಿಸ್ತಾನದ ಹಜರಾಜತ್ (Hazarajat) ಪರ್ವತ ಪ್ರದೇಶದಲ್ಲಿ ಕಂಡುಬರುತ್ತಾರೆ.
  2. ಅವರು ಮಂಗೋಲ್ ಸಾಮ್ರಾಜ್ಯದ ಸ್ಥಾಪಕರಾದ ಗೆಂಘಿಸ್ ಖಾನ್ (Genghis Khan)ಮತ್ತು ಅವರ ಸೈನ್ಯದ ವಂಶಸ್ಥರು ಎಂದು ನಂಬಲಾಗಿದೆ, ಅದು 13 ನೇ ಶತಮಾನದಲ್ಲಿ ಇಡೀ ಪ್ರದೇಶವನ್ನು ಆಕ್ರಮಿಸಿಕೊಂಡಿತ್ತು.
  3. ಅವರ ವಿಭಿನ್ನ ಏಷಿಯಾಟಿಕ್ ಲಕ್ಷಣಗಳು ಮತ್ತು ಹಜರಗಿ (Hazaragi) ಎಂಬ ಪರ್ಷಿಯನ್ ಉಪಭಾಷೆಯ ಬಳಕೆಯು ಅವರನ್ನು ದೇಶದ ಉಳಿದ ಭಾಗಗಳಿಂದ ಪ್ರತ್ಯೇಕಿಸುತ್ತದೆ.
  4. ಹಜಾರಾ ಜನಾಂಗೀಯ ಗುಂಪನ್ನು ಅಫ್ಘಾನಿಸ್ತಾನದ ಅತ್ಯಂತ ತುಳಿತಕ್ಕೊಳಗಾದ ಗುಂಪುಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ.

ಸುದ್ದಿಯಲ್ಲಿರಲು ಕಾರಣ?

ಇತ್ತೀಚಿಗೆ ಅಪಘಾನಿಸ್ತಾನವನ್ನು ಆಕ್ರಮಿಸಿಕೊಂಡಿರುವ ತಾಲಿಬಾನಿಗಳು ಈ ಹಜಾರಾಗಳ ವಿರುದ್ಧ ದಮನಕಾರಿ ನೀತಿಯನ್ನು ಅನುಸರಿಸುತ್ತಿದ್ದಾರೆ.

 

ಬಿಜು ಸ್ವಾಸ್ಥ್ಯ ಕಲ್ಯಾಣ ಯೋಜನೆ:

(Biju Swasthya Kalyan Yojana)

  1. ಒಡಿಶಾ ಸರ್ಕಾರವು ಬಿಜು ಸ್ವಾಸ್ಥ್ಯ ಕಲ್ಯಾಣ ಯೋಜನೆ (BSKY) ಎಂಬ ಸ್ಮಾರ್ಟ್ ಕಾರ್ಡ್ ಯೋಜನೆಯನ್ನು ಆರಂಭಿಸಿದೆ.
  2. ಈ ಯೋಜನೆಯು ರಾಜ್ಯದ ಸುಮಾರು 96 ಲಕ್ಷ ಕುಟುಂಬಗಳಿಗೆ 5 ಲಕ್ಷದವರೆಗೆ ನಗದುರಹಿತ ಆರೋಗ್ಯ ರಕ್ಷಣೆಯ ಭರವಸೆ ನೀಡುತ್ತದೆ. BSKY ಅಡಿಯಲ್ಲಿ ಮಹಿಳಾ ಫಲಾನುಭವಿಗಳಿಗೆ ನೀಡಲಾಗುವ ಆರೋಗ್ಯ ವೆಚ್ಚದ ಮಿತಿ 10 ಲಕ್ಷ ರೂ.ಗಳಾಗಿದೆ.
  3. ಸ್ಮಾರ್ಟ್ ಕಾರ್ಡ್ ಹೊಂದಿರುವವರು ರಾಜ್ಯದ 200 ಕ್ಕೂ ಹೆಚ್ಚು ಸಂಯೋಜಿತ ಆಸ್ಪತ್ರೆಗಳಲ್ಲಿ ನಗದುರಹಿತ ಆರೋಗ್ಯ ರಕ್ಷಣೆಯನ್ನು / ಸೇವೆಯನ್ನು ಪಡೆಯುತ್ತಾರೆ.

  • Join our Official Telegram Channel HERE for Motivation and Fast Updates
  • Subscribe to our YouTube Channel HERE to watch Motivational and New analysis videos

[ad_2]

Leave a Comment