[Mission 2022] ದೈನಂದಿನ ಪ್ರಚಲಿತ ಘಟನೆಗಳು ದಿನಾಂಕ – 13ನೇ ನವೆಂಬರ 2021 – INSIGHTSIAS

[ad_1]

 

 

ಪರಿವಿಡಿ:

 ಸಾಮಾನ್ಯ ಅಧ್ಯಯನ ಪತ್ರಿಕೆ 1:

1. ಮಹಿಳಾ ಅಧಿಕಾರಿಗಳಿಗೆ ಶಾಶ್ವತ ಆಯೋಗ.

 

ಸಾಮಾನ್ಯ ಅಧ್ಯಯನ ಪತ್ರಿಕೆ 3:

1. ಹೊಸ RBI ಉಪಕ್ರಮಗಳು.

2. ಏಳು ರಾಜ್ಯಗಳಿಗೆ ಹೆಚ್ಚು ಸಾಲ ಪಡೆಯಲು ಅನುಮತಿ ನೀಡಿದ ಕೇಂದ್ರ

3. ಸಾಂಕ್ರಾಮಿಕ ಸಮಯದಲ್ಲಿ ಸೈಬರ್ ಕ್ರೈಮ್ 500% ರಷ್ಟು ಹೆಚ್ಚಳಗೊಂಡಿದೆ.

4. ವೈಯಕ್ತಿಕ ಡೇಟಾ ಸಂರಕ್ಷಣಾ ಮಸೂದೆ, 2019.

5. ಸುಪ್ರೀಂ ಕೋರ್ಟ್‌ನಲ್ಲಿ ದ್ವೇಷ ಭಾಷಣದ ಕುರಿತ ಅರ್ಜಿ.

 

ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ಸಂಗತಿಗಳು:

1. ಅಫ್ಘಾನಿಸ್ತಾನದ ಕುರಿತು ದೆಹಲಿ ಘೋಷಣೆ.

2. ಮುಂದಿನ COP ಸ್ಥಳಗಳು.

3. ಕಾಶಿ ಕಾರಿಡಾರ್ ಯೋಜನೆ.

 


ಸಾಮಾನ್ಯ ಅಧ್ಯಯನ ಪತ್ರಿಕೆ : 1


 

ವಿಷಯಗಳು: ಮಹಿಳೆಯರು ಮತ್ತು ಮಹಿಳಾ ಸಂಘಟನೆಯ ಪಾತ್ರ, ಜನಸಂಖ್ಯೆ ಮತ್ತು ಸಂಬಂಧಿತ ಸಮಸ್ಯೆಗಳು, ಬಡತನ ಮತ್ತು ಅಭಿವೃದ್ಧಿ ಸಮಸ್ಯೆಗಳು, ನಗರೀಕರಣ, ಅವುಗಳ ಸಮಸ್ಯೆಗಳು ಮತ್ತು ಪರಿಹಾರಗಳು.

ಮಹಿಳಾ ಅಧಿಕಾರಿಗಳಿಗೆ ಶಾಶ್ವತ ಆಯೋಗ:


(Permanent Commission for Women Officers)

ಸಂದರ್ಭ:

ಭಾರತೀಯ ಸೇನೆಯ ಮೇಲೆ ನ್ಯಾಯಾಂಗ ನಿಂದನೆ ಪ್ರಕರಣದ ಅಡಿಯಲ್ಲಿ ಕ್ರಮ ಕೈಗೊಳ್ಳುವುದಾಗಿ ಸುಪ್ರೀಂ ಕೋರ್ಟ್ ಎಚ್ಚರಿಕೆ ನೀಡಿದ ನಂತರ,ಎಲ್ಲಾ ಅರ್ಹ ಮಹಿಳಾ ಸೇನಾ ಅಧಿಕಾರಿಗಳಿಗೆ ಖಾಯಂ ನೇಮಕಾತಿ (Permanent Commission – PC)’ ಯನ್ನು ನೀಡುವುದಾಗಿ ಕೇಂದ್ರ ಸರ್ಕಾರವು ನ್ಯಾಯಾಲಯಕ್ಕೆ ಭರವಸೆ ನೀಡಿದೆ.

ಏನಿದು ಪ್ರಕರಣ?

ಫೆಬ್ರವರಿ 2020 ರಲ್ಲಿ ಸುಪ್ರೀಂ ಕೋರ್ಟ್, ಸಶಸ್ತ್ರ ಪಡೆಗಳಲ್ಲಿ ಅರ್ಹ ಮಹಿಳಾ ಅಧಿಕಾರಿಗಳಿಗೆ ‘ಶಾಶ್ವತ ಕಮಿಷನ್’ ಮತ್ತು ಯುದ್ಧವನ್ನು ಹೊರತುಪಡಿಸಿ ಎಲ್ಲಾ ಸೇವೆಗಳಲ್ಲಿ ‘ಕಮಾಂಡ್ ಪೋಸ್ಟಿಂಗ್’ ನೀಡುವುದನ್ನು ಖಚಿತಪಡಿಸಿಕೊಳ್ಳಲು ಸರ್ಕಾರಕ್ಕೆ ನಿರ್ದೇಶನ ನೀಡಿತ್ತು.

ಲೆಫ್ಟಿನೆಂಟ್ ಕರ್ನಲ್ ನಿತೀಶ ವರ್ಸಸ್ ಯೂನಿಯನ್ ಆಫ್ ಇಂಡಿಯಾ’ ಪ್ರಕರಣ: 25 ಮಾರ್ಚ್ 2021 ರಂದು, ಸರ್ವೋಚ್ಚ ನ್ಯಾಯಾಲಯವು ಸೇನೆಯ ‘ಆಯ್ದ ಮೌಲ್ಯಮಾಪನ ಪ್ರಕ್ರಿಯೆ’ಯು ‘ಶಾಶ್ವತ ಆಯೋಗ’ ಕೋರುವ ಮಹಿಳಾ ಅಧಿಕಾರಿಗಳ ವಿರುದ್ಧ ತಾರತಮ್ಯವನ್ನು ಹೊಂದಿದೆ ಮತ್ತು ಈ ಮಹಿಳಾ ಅಧಿಕಾರಿಗಳು ಅಸಮಂಜಸವಾಗಿ ಪ್ರಭಾವಿತರಾಗಿದ್ದಾರೆ ಎಂದು ಅಭಿಪ್ರಾಯಪಟ್ಟಿದೆ.

ಖಾಯಂ ನೇಮಕಾತಿ (Permanent Commission) ಎಂದರೇನು?

‘ಶಾಶ್ವತ ಆಯೋಗ’ / ಖಾಯಂ ನೇಮಕಾತಿ (Permanent Commission)  ಎಂದರೆ ಸೇನೆಯಲ್ಲಿ ನಿವೃತ್ತಿಯಾಗುವವರೆಗೆ ಅಧಿಕಾರಾವಧಿ ಹೊಂದಿರುವುದು ಅಥವಾ ವೃತ್ತಿಜೀವನ ಮುಂದುವರೆಸುವುದು. ಆದರೆ, ಶಾರ್ಟ್ ಸರ್ವಿಸ್ ಕಮಿಷನ್’ 10 ವರ್ಷಗಳ ಅವಧಿಯನ್ನು ಹೊಂದಿದೆ ಮತ್ತು 10 ವರ್ಷಗಳ ಸೇವೆಯ ಕೊನೆಯಲ್ಲಿ ‘ಖಾಯಂ ಆಯೋಗ’ವನ್ನು ತೊರೆಯುವ ಅಥವಾ ಆಯ್ಕೆ ಮಾಡುವ ಆಯ್ಕೆಯನ್ನು ಹೊಂದಿದೆ. ಒಬ್ಬ ಅಧಿಕಾರಿಯು ‘ಶಾಶ್ವತ ಕಮಿಷನ್’/ ಖಾಯಂ ನೇಮಕಾತಿಯನ್ನು ಪಡೆಯಲು ಸಾಧ್ಯವಾಗದಿದ್ದರೆ, ಆ ಅಧಿಕಾರಿ ತನ್ನ ಅಧಿಕಾರಾವಧಿಯನ್ನು ‘ನಾಲ್ಕು ವರ್ಷಗಳ’ ವಿಸ್ತರಣೆಯನ್ನು ಆಯ್ಕೆ ಮಾಡಬಹುದು.

ಸೇನೆಯಲ್ಲಿ ಮಹಿಳೆಯರು: ಪ್ರಕರಣದ ಹಿನ್ನೆಲೆ

ಸೇನೆಯಲ್ಲಿ ‘ಮಹಿಳಾ ಅಧಿಕಾರಿಗಳ’ ಸೇರ್ಪಡೆ 1992 ರಲ್ಲಿ ಪ್ರಾರಂಭವಾಯಿತು.

  1. ‘ಆರ್ಮಿ ಎಜುಕೇಶನ್ ಕಾರ್ಪ್ಸ್’, ಸಿಗ್ನಲ್ ಕಾರ್ಪ್ಸ್, ಇಂಟೆಲಿಜೆನ್ಸ್ ಕಾರ್ಪ್ಸ್ ಮತ್ತು ಕಾರ್ಪ್ಸ್ ಆಫ್ ಇಂಜಿನಿಯರ್ಸ್‌ಗಳಂತಹ ಆಯ್ದ ಶಾಖೆಗಳಲ್ಲಿ ‘ಮಹಿಳಾ ಅಧಿಕಾರಿಗಳನ್ನು’ ಐದು ವರ್ಷಗಳ ಅವಧಿಗೆ ನಿಯೋಜಿಸಲಾಯಿತು. ಮಹಿಳಾ ವಿಶೇಷ ಪ್ರವೇಶ ಯೋಜನೆ (WSES)’ ಅಡಿಯಲ್ಲಿ ನೇಮಕಗೊಳ್ಳುವ ಮಹಿಳೆಯರಿಗೆ, ಶಾರ್ಟ್ ಸರ್ವಿಸ್ ಕಮಿಷನ್ (SSC) ಯೋಜನೆಯಡಿ ನೇಮಕಗೊಂಡ ಪುರುಷ ಕೌಂಟರ್‌ಪಾರ್ಟ್‌ಗಳಿಗೆ ಹೋಲಿಸಿದರೆ ಪೂರ್ವ-ಕಮಿಷನ್ ತರಬೇತಿಯ ಅವಧಿಯು ಕಡಿಮೆಯಾಗಿದೆ.
  2. 2006 ರಲ್ಲಿ, WSES ಯೋಜನೆಯನ್ನು SSC ಯೋಜನೆಯಾಗಿ ಬದಲಾಯಿಸಲಾಯಿತು ಮತ್ತು ಮಹಿಳಾ ಅಧಿಕಾರಿಗಳಿಗೆ ವಿಸ್ತರಿಸಲಾಯಿತು. ಇದರ ಅಡಿಯಲ್ಲಿ, ಮಹಿಳಾ ಅಧಿಕಾರಿಗಳನ್ನು 10 ವರ್ಷಗಳ ಅವಧಿಗೆ ನಿಯೋಜಿಸಲಾಯಿತು, ಇದನ್ನು ಒಟ್ಟು 14 ವರ್ಷಗಳವರೆಗೆ ವಿಸ್ತರಿಸಬಹುದು.
  3. ಸೇವೆ ಸಲ್ಲಿಸುತ್ತಿರುವ WSES ಅಧಿಕಾರಿಗಳಿಗೆ ಹೊಸ SSC ಯೋಜನೆಗೆ ಬದಲಾಯಿಸಲು ಅಥವಾ ಹಿಂದಿನ WSES ಅಡಿಯಲ್ಲಿ ಸೇವೆಯನ್ನು ಮುಂದುವರಿಸಲು ಆಯ್ಕೆಯನ್ನು ನೀಡಲಾಯಿತು. ಆದಾಗ್ಯೂ, ಅವರು ಹಿಂದೆ ಗೊತ್ತುಪಡಿಸಿದ ಶಾಖೆಗಳಿಗೆ ನಿಯೋಜಿಸಲಾದ ಪಾತ್ರಗಳಿಗೆ ಸೀಮಿತರಾಗಿರ ಬೇಕಿತ್ತು – ಇದು ‘ಪದಾತಿದಳ’ ಮತ್ತು ಶಸ್ತ್ರಸಜ್ಜಿತ ದಳಗಳಂತಹ ಯುದ್ಧ ಶಾಖೆಗಳನ್ನು ಒಳಗೊಂಡಿರಲಿಲ್ಲ.

ಪ್ರಸ್ತುತ ಮುಖ್ಯ ಸಮಸ್ಯೆ ಏನು?

ಪ್ರಸ್ತುತ, ಪುರುಷ SSC ಅಧಿಕಾರಿಗಳು 10 ವರ್ಷಗಳ ಸೇವೆಯ ಕೊನೆಯಲ್ಲಿ ‘ಪರ್ಮನೆಂಟ್ ಕಮಿಷನ್’ ಅನ್ನು ಆಯ್ಕೆ ಮಾಡಬಹುದಾಗಿದೆ, ಆದರೆ ಈ ಆಯ್ಕೆಯು ಮಹಿಳಾ ಅಧಿಕಾರಿಗಳಿಗೆ ಲಭ್ಯವಿರಲಿಲ್ಲ. ಅದೇ ರೀತಿ ಮಹಿಳಾ ಅಧಿಕಾರಿಗಳನ್ನು ಕೂಡ ‘ಕಮಾಂಡ್ ಪೋಸ್ಟಿಂಗ್’ನಿಂದ ಹೊರಗಿಡಲಾಗಿದೆ.ಇದಲ್ಲದೆ, ‘ಸರ್ಕಾರಿ ಪಿಂಚಣಿ’ಗೆ ಅರ್ಹತೆ ಪಡೆಯಲು ಅಧಿಕಾರಿಯಾಗಿ ಕನಿಷ್ಠ 20 ವರ್ಷಗಳ ಸೇವೆಯ ಅಗತ್ಯವಿದೆ ಮತ್ತು ಮಹಿಳಾ ಅಧಿಕಾರಿಗಳು ಗರಿಷ್ಠ 14 ವರ್ಷಗಳ ಸೇವೆ ಸಲ್ಲಿಸಿದ ನಂತರ ಸೇನೆಯಿಂದ ನಿವೃತ್ತರಾಗಿರುವುದರಿಂದ, ಮಹಿಳಾ ಅಧಿಕಾರಿಗಳು ಸರ್ಕಾರಿ ಪಿಂಚಣಿ ಪಡೆಯಲು ಅರ್ಹರಾಗಿರುವುದಿಲ್ಲ.

ಮಹಿಳಾ ಅಧಿಕಾರಿಗಳಿಗೆ ಖಾಯಂ ನೇಮಕಾತಿಯ  ಅವಕಾಶದ ವಿರುದ್ಧ ಸರ್ಕಾರದ ವಾದಗಳು:

  1. ತಾಯ್ತನ, ಮಗುವಿನ ಆರೈಕೆ, ಮಾನಸಿಕ ಮಿತಿಗಳು ಇತ್ಯಾದಿಗಳು ಸೇನೆಯಲ್ಲಿನ ಮಹಿಳಾ ಅಧಿಕಾರಿಗಳ ಕೆಲಸದ ಮೇಲೆ ಪ್ರಭಾವ ಬೀರುತ್ತವೆ.
  2. ಕುಟುಂಬದಿಂದ ಬೇರ್ಪಡುವಿಕೆ, ಸಂಗಾತಿಯ ವೃತ್ತಿಜೀವನದ ನಿರೀಕ್ಷೆಗಳು, ಮಕ್ಕಳ ಶಿಕ್ಷಣ, ಗರ್ಭಾವಸ್ಥೆಯ ಕಾರಣದಿಂದಾಗಿ ದೀರ್ಘಾವಧಿಯ ಅನುಪಸ್ಥಿತಿ, ಮಾತೃತ್ವ ಅವಧಿ ಇತ್ಯಾದಿಗಳು ಮಿಲಿಟರಿ ಸೇವೆಗಳ ಅವಶ್ಯಕತೆಗಳನ್ನು ಪೂರೈಸಲು ಮಹಿಳೆಯರಿಗೆ ಪ್ರಮುಖ ಸವಾಲಾಗಿದೆ.
  3. ದೈಹಿಕ ಮಿತಿಗಳು: ಸೈನಿಕರು ಕಷ್ಟಕರವಾದ ಭೂಪ್ರದೇಶದಲ್ಲಿ, ಪ್ರತ್ಯೇಕವಾದ ಹೊರಠಾಣೆಗಳಲ್ಲಿ ಮತ್ತು ಪ್ರತಿಕೂಲ ಹವಾಮಾನ ಪರಿಸ್ಥಿತಿಗಳಲ್ಲಿ ಕೆಲಸ ಮಾಡಬೇಕಾಗುತ್ತದೆ. ಅಧಿಕಾರಿಗಳು ಸೈನ್ಯದ ಮುಂಚೂಣಿಯಲ್ಲಿದ್ದುಕೊಂಡು ಮುನ್ನಡೆಸಬೇಕು. ಯುದ್ಧ ಕಾರ್ಯಾಚರಣೆಗಳಿಗೆ ಅವರು ಅತ್ಯುತ್ತಮ ದೈಹಿಕ ಸಾಮರ್ಥ್ಯವನ್ನು ಹೊಂದಿರಬೇಕು. ಸರ್ಕಾರದ ಪ್ರಕಾರ, ಮಹಿಳೆಯರು ಯುದ್ಧಭೂಮಿಯಲ್ಲಿ ನೇರವಾಗಿ ಕೆಲಸ ಮಾಡಲು ಯೋಗ್ಯರಲ್ಲ.
  4. ವರ್ತನೆಯ ಮತ್ತು ಮಾನಸಿಕ ಸವಾಲುಗಳು: ಸೇನಾ ಘಟಕಗಳು “ಎಲ್ಲಾ ಪುರುಷರಿಗೆ ವಿಶಿಷ್ಟವಾದ ವಾತಾವರಣವನ್ನು” ಹೊಂದಿವೆ. ಘಟಕಗಳಲ್ಲಿ ಮಹಿಳಾ ಅಧಿಕಾರಿಗಳ ಉಪಸ್ಥಿತಿಗೆ “ಸ್ವಲ್ಪ ಸೌಮ್ಯ ನಡವಳಿಕೆ”ಯ ಅಗತ್ಯವಿರುತ್ತದೆ. ಸೇನೆಯಲ್ಲಿರುವ ಪುರುಷ-ಸೈನಿಕರು ಮುಖ್ಯವಾಗಿ ಗ್ರಾಮೀಣ ಹಿನ್ನೆಲೆಯಿಂದ ಬಂದವರು ಮತ್ತು ಮಹಿಳಾ ನಾಯಕಿಯ ಆದೇಶಗಳನ್ನು ಸ್ವೀಕರಿಸುವ ಸ್ಥಿತಿಯಲ್ಲಿರುವುದಿಲ್ಲ.

 


ಸಾಮಾನ್ಯ ಅಧ್ಯಯನ ಪತ್ರಿಕೆ : 3


 

ವಿಷಯಗಳು: ಭಾರತೀಯ ಆರ್ಥಿಕತೆ ಮತ್ತು ಯೋಜನೆ, ಸಂಪನ್ಮೂಲಗಳ ಕ್ರೋಡೀಕರಣ , ಪ್ರಗತಿ, ಅಭಿವೃದ್ಧಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಸಮಸ್ಯೆಗಳು.

RBI ಹೊಸ ಉಪಕ್ರಮಗಳು:


(New RBI initiatives?

ಸಂದರ್ಭ:

ಇತ್ತೀಚೆಗೆ, ಪ್ರಧಾನಿ ನರೇಂದ್ರ ಮೋದಿ ಅವರು ಭಾರತೀಯ ರಿಸರ್ವ್ ಬ್ಯಾಂಕ್ (RBI) ನ ಎರಡು ನವೀನ ಗ್ರಾಹಕ ಕೇಂದ್ರಿತ ಉಪಕ್ರಮಗಳನ್ನು ಪ್ರಾರಂಭಿಸಿದರು.

  1. ‘ಭಾರತೀಯ ರಿಸರ್ವ್ ಬ್ಯಾಂಕ್ ನ – ಚಿಲ್ಲರೆ ನೇರ ಯೋಜನೆ’ (RBI – Retail Direct Scheme) ಮತ್ತು
  2. ರಿಸರ್ವ್ ಬ್ಯಾಂಕ್-ಏಕೀಕೃತ ಲೋಕಪಾಲ ಯೋಜನೆ (Reserve Bank-Integrated Ombudsman Scheme – RB-IOS)

ಎರಡೂ ಯೋಜನೆಗಳು ದೇಶದಲ್ಲಿ ಹೂಡಿಕೆಯ ವ್ಯಾಪ್ತಿಯನ್ನು ವಿಸ್ತರಿಸುತ್ತವೆ ಮತ್ತು ಬಂಡವಾಳ ಮಾರುಕಟ್ಟೆಗಳಿಗೆ ಪ್ರವೇಶವನ್ನು ಸುಲಭ ಮತ್ತು ಹೂಡಿಕೆದಾರರಿಗೆ ಹೆಚ್ಚು ಸುರಕ್ಷಿತಗೊಳಿಸುತ್ತವೆ.

ಭಾರತೀಯ ರಿಸರ್ವ್ ಬ್ಯಾಂಕ್ – ನೇರ ಚಿಲ್ಲರೆ (RBI-RD) ಯೋಜನೆ’ ಎಂದರೇನು?

RBI-RD  (RBI – Retail Direct Scheme) ಯೋಜನೆಯ ಉದ್ದೇಶವು ಚಿಲ್ಲರೆ ಹೂಡಿಕೆದಾರರಿಗೆ ಸರ್ಕಾರಿ ಭದ್ರತೆಗಳ ಮಾರುಕಟ್ಟೆಗೆ ಪ್ರವೇಶವನ್ನು ಹೆಚ್ಚಿಸುವುದಾಗಿದೆ.

  1. ಚಿಲ್ಲರೆ ನೇರ ಯೋಜನೆಯು ಸರ್ಕಾರಿ ಭದ್ರತೆಗಳಲ್ಲಿ ದೇಶದ ಸಣ್ಣ ಹೂಡಿಕೆದಾರರಿಗೆ ಹೂಡಿಕೆ ಮಾಡಲು ಹೂಡಿಕೆಯ ಸುಲಭ ಮತ್ತು ಸುರಕ್ಷಿತ ಮಾರ್ಗವನ್ನು ಒದಗಿಸುತ್ತದೆ.
  2. ಇದರ ಅಡಿಯಲ್ಲಿ, ಹೂಡಿಕೆದಾರರು ತಮ್ಮ ಸರ್ಕಾರಿ ಸೆಕ್ಯುರಿಟೀಸ್ ಖಾತೆಯನ್ನು ಆರ್‌ಬಿಐನಲ್ಲಿ ಉಚಿತವಾಗಿ ತೆರೆಯಲು ಮತ್ತು ನಿರ್ವಹಿಸಲು ಸಾಧ್ಯವಾಗುತ್ತದೆ.
  3. ಈ ಯೋಜನೆಯು ಕೇಂದ್ರ ಸರ್ಕಾರದ ಭದ್ರತೆಗಳು, ಖಜಾನೆ ಬಿಲ್‌ಗಳು, ರಾಜ್ಯ ಅಭಿವೃದ್ಧಿ ಸಾಲಗಳು ಮತ್ತು ಸಾವರಿನ್ ಗೋಲ್ಡ್ ಬಾಂಡ್‌ಗಳಲ್ಲಿ (SGB) ಹೂಡಿಕೆ ಮಾಡಲು ಪೋರ್ಟಲ್ ಅನ್ನು ಸುಗಮಗೊಳಿಸುತ್ತದೆ.
  4. ಈ ಯೋಜನೆಯ ಅನುಷ್ಠಾನದ ನಂತರ, ಅಂತಹ ಸೌಲಭ್ಯವನ್ನು ಒದಗಿಸುವ ಆಯ್ದ ದೇಶಗಳ ಪಟ್ಟಿಯಲ್ಲಿ ಭಾರತವನ್ನು ಸೇರಿಸಲಾಗುತ್ತದೆ.

ರಿಸರ್ವ್ ಬ್ಯಾಂಕ್-ಇಂಟಿಗ್ರೇಟೆಡ್ ಒಂಬುಡ್ಸ್‌ಮನ್ ಸ್ಕೀಮ್(ಏಕೀಕೃತ ಲೋಕಪಾಲ ಯೋಜನೆ) ಬಗ್ಗೆ:

ರಿಸರ್ವ್ ಬ್ಯಾಂಕ್-ಏಕೀಕೃತ ಲೋಕಪಾಲ ಯೋಜನೆಯು (Reserve Bank-Integrated Ombudsman Scheme)  ಕೇಂದ್ರ ಬ್ಯಾಂಕ್‌ನಿಂದ ನಿಯಂತ್ರಿಸಲ್ಪಡುವ ಘಟಕಗಳ ವಿರುದ್ಧ ಗ್ರಾಹಕರ ದೂರುಗಳ ಪರಿಹಾರಕ್ಕಾಗಿ ಕುಂದುಕೊರತೆ ಪರಿಹಾರ ಕಾರ್ಯವಿಧಾನವನ್ನು ಇನ್ನಷ್ಟು ಸುಧಾರಿಸುವ ಗುರಿಯನ್ನು ಹೊಂದಿದೆ.

  1. ಯೋಜನೆಯ ಮುಖ್ಯ ವಿಷಯವು ಒಂದು ರಾಷ್ಟ್ರ-ಒಂದು ಲೋಕಪಾಲ್’ ಅನ್ನು ಆಧರಿಸಿದೆ, ಇದು ಗ್ರಾಹಕರು ತಮ್ಮ ಕುಂದುಕೊರತೆಗಳನ್ನು ನೋಂದಾಯಿಸಲು ಒಂದು ಪೋರ್ಟಲ್, ಒಂದು ಇಮೇಲ್ ಮತ್ತು ಒಂದು ವಿಳಾಸವನ್ನು ಹೊಂದಿರುತ್ತದೆ.
  2. ರಿಸರ್ವ್ ಬ್ಯಾಂಕ್ ಮೂರು ಒಂಬುಡ್ಸ್‌ಮನ್ ಯೋಜನೆಗಳನ್ನು ಒಂದು ಯೋಜನೆಯಾಗಿ ಕ್ರೋಢೀಕರಿಸಲು ನಿರ್ಧರಿಸಿದೆ ಮತ್ತು ಪ್ರಕ್ರಿಯೆಯ ದಕ್ಷತೆಯನ್ನು ಹೆಚ್ಚಿಸಲು, ಸೇವೆಯಲ್ಲಿನ ಲೋಪಗಳಿಗೆ ಸಂಬಂಧಿಸಿದ ಎಲ್ಲಾ ದೂರುಗಳನ್ನು ಒಳಗೊಂಡಂತೆ ದೂರುಗಳ ಸ್ವೀಕೃತಿ ಮತ್ತು ಪ್ರಾಥಮಿಕ ವಿಚಾರಣೆಯನ್ನು ಕೇಂದ್ರೀಕರಿಸುವ ಮೂಲಕ ಯೋಜನೆಯನ್ನು ಸರಳಗೊಳಿಸಿದೆ.
  3. ರಿಸರ್ವ್ ಬ್ಯಾಂಕ್-ಇಂಟಿಗ್ರೇಟೆಡ್ ಒಂಬುಡ್ಸ್‌ಮನ್ ಸ್ಕೀಮ್ (RB-IOS) ಅಡಿಯಲ್ಲಿ, ನ್ಯಾಯವ್ಯಾಪ್ತಿಯ ಮಿತಿಗಳೊಂದಿಗೆ ದೂರುಗಳನ್ನು ನೀಡಲು ಇದ್ದ ಸೀಮಿತ ಆಧಾರದ ಸಮಸ್ಯೆಯನ್ನು ತೆಗೆದುಹಾಕಲಾಗಿದೆ. ಆರ್‌ಬಿಐ ಗ್ರಾಹಕರಿಗೆ ದಾಖಲೆಗಳನ್ನು ಸಲ್ಲಿಸಲು, ಸಲ್ಲಿಸಿದ ದೂರುಗಳ ಸ್ಥಿತಿಯನ್ನು ಟ್ರ್ಯಾಕ್ ಮಾಡಲು ಮತ್ತು ಪ್ರತಿಕ್ರಿಯೆ ನೀಡಲು ‘ಸಿಂಗಲ್ ರೆಫರೆನ್ಸ್ ಪಾಯಿಂಟ್’ ಅನ್ನು ಒದಗಿಸುತ್ತದೆ.

ದಯವಿಟ್ಟು ಗಮನಿಸಿ:

ಕೇಂದ್ರೀಯ ಬ್ಯಾಂಕ್‌ನ ಪರ್ಯಾಯ ಕುಂದುಕೊರತೆ ಪರಿಹಾರ ಕಾರ್ಯವಿಧಾನದಲ್ಲಿ, RBI ನಲ್ಲಿ ಪ್ರಸ್ತುತ  ಮೂರು ಒಂಬುಡ್ಸ್‌ಮನ್ ಯೋಜನೆಗಳು ಅಸ್ತಿತ್ವದಲ್ಲಿವೆ, ಅವುಗಳೆಂದರೆ,1955 ರಲ್ಲಿ ಆರಂಭಿಸಲಾದ ಬ್ಯಾಂಕಿಂಗ್ ಒಂಬುಡ್ಸ್‌ಮನ್ ಯೋಜನೆ,; ಬ್ಯಾಂಕಿಂಗ್ ಅಲ್ಲದ ಹಣಕಾಸು ಕಂಪನಿಗಳಿಗೆ ಒಂಬುಡ್ಸ್‌ಮನ್ ಯೋಜನೆ, 2018; ಮತ್ತು ಡಿಜಿಟಲ್ ವಹಿವಾಟುಗಳಿಗಾಗಿ ಓಂಬುಡ್ಸ್‌ಮನ್ ಯೋಜನೆ, 2019 ಅನ್ನು ಸಂಯೋಜಿಸಲಾಗಿದೆ.

ಈ ಯೋಜನೆಗಳ ಪ್ರಾಮುಖ್ಯತೆ:

  1. ಹಣದುಬ್ಬರ ಏರಿಕೆಯಿಂದಾಗಿ ಆರ್‌ಬಿಐ ಮೇಲಿನ ಒತ್ತಡ ಹೆಚ್ಚುತ್ತಿರುವ ಸಂದರ್ಭದಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಈ ಕ್ರಮ ಕೈಗೊಂಡಿದೆ.
  2. ಬಿಗಿಯಾದ ವಿತ್ತೀಯ ನೀತಿಯ ಹೇರಿಕೆಯು ಬಾಂಡ್‌ಗಳ ಬೇಡಿಕೆಯನ್ನು ದುರ್ಬಲಗೊಳಿಸುವ ಸಾಧ್ಯತೆಯಿದೆ, ಇದು ಮುಂಬರುವ ದಾಖಲೆಯ ಕಡಿಮೆ-ಸಾಲ ಕಾರ್ಯಕ್ರಮವನ್ನು ಕಾರ್ಯಗತಗೊಳಿಸಲು ಸರ್ಕಾರಕ್ಕೆ ಸವಾಲಾಗಿದೆ.
  3. ಫಿಲಿಪೈನ್ಸ್ ನಂತಹ ಏಷ್ಯಾದ ಇತರ ಉದಯೋನ್ಮುಖ ಮಾರುಕಟ್ಟೆ ದೇಶಗಳು ಸಹ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ನಾಗರಿಕರಿಂದ ಹಣವನ್ನು ಸಂಗ್ರಹಿಸಲು ಪ್ರಯತ್ನಿಸುತ್ತಿವೆ.

 

ವಿಷಯಗಳು: ಆರ್ಥಿಕತೆಯ ಮೇಲೆ ಉದಾರೀಕರಣದ ಪರಿಣಾಮ, ಕೈಗಾರಿಕಾ ನೀತಿಯಲ್ಲಿನ ಬದಲಾವಣೆಗಳು ಮತ್ತು ಕೈಗಾರಿಕಾ ಅಭಿವೃದ್ಧಿಯ ಮೇಲೆ ಅವುಗಳ ಪ್ರಭಾವ:

ಏಳು ರಾಜ್ಯಗಳಿಗೆ ಹೆಚ್ಚು ಸಾಲ ಪಡೆಯಲು ಅನುಮತಿ ನೀಡಿದ ಕೇಂದ್ರ:


(Centre allows seven states to borrow more)

ಸಂದರ್ಭ:

ಛತ್ತೀಸ್‌ಗಢ, ಕೇರಳ, ಮಧ್ಯಪ್ರದೇಶ, ಮೇಘಾಲಯ, ಪಂಜಾಬ್, ರಾಜಸ್ಥಾನ ಮತ್ತು ತೆಲಂಗಾಣ ಎಂಬ ಏಳು ರಾಜ್ಯಗಳು ಹಣಕಾಸು ವರ್ಷ 2021-22 ರ ಎರಡನೇ ತ್ರೈಮಾಸಿಕದ ವೇಳೆಗೆ ಬಂಡವಾಳ ವೆಚ್ಚಕ್ಕಾಗಿ ಹಣಕಾಸು ಸಚಿವಾಲಯ ನಿಗದಿಪಡಿಸಿದ ಗುರಿಯನ್ನು ಸಾಧಿಸಿವೆ. ಈ ಹಿನ್ನೆಲೆಯಲ್ಲಿ ಹೆಚ್ಚುವರಿಯಾಗಿ 16691 ಕೋಟಿ ರೂಪಾಯಿಗಳ ಸಾಲ ಪಡೆಯಲು ವಿತ್ತ ಸಚಿವಾಲಯವು ಈ ರಾಜ್ಯಗಳಿಗೆ ಅನುಮತಿ ನೀಡಿದೆ.

ಹಿನ್ನೆಲೆ:

  1. ಹೆಚ್ಚುತ್ತಿರುವ ಸಾಲಕ್ಕೆ ಅರ್ಹರಾಗಲು, 2021-22 ರ ಎರಡನೇ ತ್ರೈಮಾಸಿಕದ ಅಂತ್ಯದ ವೇಳೆಗೆ ರಾಜ್ಯಗಳು ತಮ್ಮ ಬಂಡವಾಳ ವೆಚ್ಚದ ಗುರಿಯ ಕನಿಷ್ಠ 45 ಪ್ರತಿಶತವನ್ನು ಪೂರೈಸುವ ಅಗತ್ಯವಿದೆ.
  2. ಛತ್ತೀಸ್‌ಗಢ, ಕೇರಳ, ಮಧ್ಯಪ್ರದೇಶ, ಮೇಘಾಲಯ, ಪಂಜಾಬ್, ರಾಜಸ್ಥಾನ ಮತ್ತು ತೆಲಂಗಾಣ ರಾಜ್ಯಗಳು 2021-22ರ ಮೊದಲಾರ್ಧದಲ್ಲಿ ನಿಗದಿಪಡಿಸಿದ ಗುರಿಗಳನ್ನು ತಲುಪಿವೆ.

ಸಾಲ ಪಡೆಯಲು ರಾಜ್ಯಗಳಿಗೆ ಕೇಂದ್ರದಿಂದ ಅನುಮತಿ ಪಡೆಯುವ ಅವಶ್ಯಕತೆ:

ಸಂವಿಧಾನದ ಪರಿಚ್ಛೇದ 293(3)ರ ಪ್ರಕಾರ, ರಾಜ್ಯಗಳು ಹಿಂದಿನ ಸಾಲದ ಮೇಲೆ ಕೇಂದ್ರಕ್ಕೆ ಋಣಿಯಾಗಿದ್ದಾರೆ, ರಾಜ್ಯಗಳು ಸಾಲ ಪಡೆಯಲು ಕೇಂದ್ರದ ಒಪ್ಪಿಗೆಯನ್ನು ಪಡೆಯಬೇಕಾಗುತ್ತದೆ.

  1. ಆರ್ಟಿಕಲ್ 293 (4) ಅಡಿಯಲ್ಲಿ, ಕೆಲವು ಷರತ್ತುಗಳಿಗೆ ಒಳಪಟ್ಟು ಸಾಲವನ್ನು ಪಡೆಯಲು ಕೇಂದ್ರವು ರಾಜ್ಯಗಳಿಗೆ ಒಪ್ಪಿಗೆಯನ್ನು ಸಹ ನೀಡಬಹುದು.
  2. ಪ್ರಾಯೋಗಿಕವಾಗಿ, ಹಣಕಾಸು ಆಯೋಗದ ಶಿಫಾರಸುಗಳಿಗೆ ಅನುಗುಣವಾಗಿ ಕೇಂದ್ರವು ಈ ಅಧಿಕಾರವನ್ನು ಚಲಾಯಿಸುತ್ತಿದೆ.
  3. ಪ್ರಸ್ತುತ, ಪ್ರತಿ ರಾಜ್ಯವು ಕೇಂದ್ರಕ್ಕೆ ಋಣಿಯಾಗಿದೆ ಹಾಗಾಗಿ, ಎಲ್ಲಾ ರಾಜ್ಯಗಳು ಸಾಲ ಪಡೆಯಲು ಕೇಂದ್ರದ ಒಪ್ಪಿಗೆ ಪಡೆಯುವ ಅಗತ್ಯವಿದೆ.

ಈ ನಿಬಂಧನೆಯ ಅಡಿಯಲ್ಲಿ ಷರತ್ತುಗಳನ್ನು ವಿಧಿಸಲು ಕೇಂದ್ರಕ್ಕೆ ಅನಿಯಂತ್ರಿತ ಅಧಿಕಾರವಿದೆಯೇ?

  1. ಮೇಲಿನ ನಿಬಂಧನೆಯು ಸ್ವತಃ ಈ ವಿಷಯದ ಬಗ್ಗೆ ಯಾವುದೇ ಮಾರ್ಗದರ್ಶನಗಳನ್ನು ನೀಡುವುದಿಲ್ಲ ಮತ್ತು ಅನುಸರಿಸಬೇಕಾದ ಷರತ್ತುಗಳನ್ನು ಅಡೆತಡೆಯಿಲ್ಲದೆ ಜಾರಿಗೊಳಿಸಲು ಕೇಂದ್ರಕ್ಕೆ ಯಾವುದೇ ಪೂರ್ವನಿದರ್ಶನವಿಲ್ಲ.
  2. ಕುತೂಹಲಕಾರಿಯಾಗಿ, ಈ ಪ್ರಶ್ನೆಯನ್ನು 15 ನೇ ಹಣಕಾಸು ಆಯೋಗದ ಉಲ್ಲೇಖದ ನಿಯಮಗಳಲ್ಲಿ ಸೇರಿಸಲಾಗಿದೆ, ಆದರೆ ಹಣಕಾಸು ಆಯೋಗದ ಮಧ್ಯಂತರ ವರದಿಯಲ್ಲಿ ಅದನ್ನು ಉಲ್ಲೇಖಿಸಲಾಗಿಲ್ಲ.

ಯಾವಾಗ ಕೇಂದ್ರವು ರಾಜ್ಯಗಳಿಗೆ ಷರತ್ತುಗಳನ್ನು ವಿಧಿಸಬಹುದು?

ಸಾಲ ತೆಗೆದುಕೊಳ್ಳಲು ಒಪ್ಪಿಗೆ ನೀಡುವ ಸಮಯದಲ್ಲಿ ರಾಜ್ಯಗಳಿಗೆ ಷರತ್ತುಗಳನ್ನು ಕೇಂದ್ರವು ವಿಧಿಸಬಹುದು ಮತ್ತು ರಾಜ್ಯಗಳು ಕೇಂದ್ರ ಸರ್ಕಾರಕ್ಕೆ ಋಣಿಯಾಗಿದ್ದರೆ ಮಾತ್ರ ಈ ಒಪ್ಪಿಗೆಯನ್ನು ನೀಡಬಹುದು.

ಈ ನಿರ್ಬಂಧಗಳ ಅಗತ್ಯತೆ:

  1. ಕೇಂದ್ರಕ್ಕೆ ಈ ಅಧಿಕಾರವನ್ನು ನೀಡುವ ಒಂದು ಸಂಭಾವ್ಯ ಉದ್ದೇಶವೆಂದರೆ ಸಾಲ ಪಡೆಯುವ ರಾಜ್ಯದ ಸಾಮರ್ಥ್ಯಗಳನ್ನು ನೋಡುವ ಮೂಲಕ ಅದರ ಹಿತಾಸಕ್ತಿಗಳನ್ನು ರಕ್ಷಿಸುವುದು.
  2. ರಾಜ್ಯದ ಋಣಭಾರವು ಒಟ್ಟಾರೆಯಾಗಿ ದೇಶದ ಆರ್ಥಿಕ ಆರೋಗ್ಯದ ಮೇಲೆ ಋಣಾತ್ಮಕವಾಗಿ ಪರಿಣಾಮ ಬೀರುವುದರಿಂದ, ‘ಸ್ಥೂಲ ಆರ್ಥಿಕ ಸ್ಥಿರತೆ’ಯನ್ನು ಖಾತ್ರಿಪಡಿಸುವುದು ಇದರ ಮತ್ತೊಂದು ಪ್ರಮುಖ ಉದ್ದೇಶವಾಗಿದೆ.

 

ವಿಷಯಗಳು: ಸಂವಹನ ಜಾಲಗಳ ಮೂಲಕ ಆಂತರಿಕ ಭದ್ರತೆಗೆ ಸವಾಲು ಹಾಕುವುದು, ಆಂತರಿಕ ಭದ್ರತಾ ಸವಾಲುಗಳಲ್ಲಿ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳ ಪಾತ್ರ, ಸೈಬರ್ ಭದ್ರತೆಯ ಮೂಲಭೂತ ಅಂಶಗಳು, ಅಕ್ರಮ ಹಣ ವರ್ಗಾವಣೆ ಮತ್ತು ಅದನ್ನು ತಡೆಯುವುದು.

ಸಾಂಕ್ರಾಮಿಕ ಸಮಯದಲ್ಲಿ ಸೈಬರ್ ಕ್ರೈಮ್ 500% ರಷ್ಟು ಹೆಚ್ಚಳಗೊಂಡಿದೆ:


(Cybercrime went up by 500% during pandemic)

ಸಂದರ್ಭ:

14 ನೇ ಆವೃತ್ತಿಯ ವಾರ್ಷಿಕ ಸೈಬರ್ ಭದ್ರತೆ ಮತ್ತು ಹ್ಯಾಕಿಂಗ್ ಕಾನ್ಫರೆನ್ಸ್ ‘c0c0n’ ಅನ್ನು ಕೇರಳ ಪೊಲೀಸರು ಆಯೋಜಿಸುತ್ತಿದ್ದಾರೆ.

ಈ ಸಂದರ್ಭದಲ್ಲಿ, ರಕ್ಷಣಾ ಸಿಬ್ಬಂದಿ ಮುಖ್ಯಸ್ಥ (Chief of Defence Staff -CDS) ಜನರಲ್ ಬಿಪಿನ್ ರಾವತ್ ಅವರು ದೇಶದಲ್ಲಿ ಹೆಚ್ಚುತ್ತಿರುವ ಸೈಬರ್ ದಾಳಿಯನ್ನು ತಡೆಯಲು ರಾಷ್ಟ್ರೀಯ ಚೌಕಟ್ಟಿನ ಅಗತ್ಯವನ್ನು ಒತ್ತಿ ಹೇಳಿದರು.

ಸೈಬರ್ ಭದ್ರತೆಯ ಅವಶ್ಯಕತೆ:

ಸಾಂಕ್ರಾಮಿಕ ಸಮಯದಲ್ಲಿ ಅನೇಕ ಸಂಸ್ಥೆಗಳು ಉದ್ಯೋಗಿಗಳಿಗೆ ತಮ್ಮ ಮನೆಗಳಿಂದ ಕೆಲಸ ಮಾಡಲು ಅವಕಾಶ ನೀಡುವುದರ ಪರಿಣಾಮವಾಗಿ, ತೆರೆದ ಡೊಮೇನ್‌ನಲ್ಲಿ ಡೇಟಾವನ್ನು ಹೆಚ್ಚು ಪ್ರವೇಶಿಸಲಾಗುತ್ತಿದೆ, ಇದು ಸೂಕ್ಷ್ಮ ಮಾಹಿತಿಯನ್ನು ಭದ್ರತಾ ದೋಷಗಳಿಗೆ ಗುರಿಯಾಗಿಸುತ್ತದೆ. ಡಿಜಿಟಲ್ ಪಾವತಿಗಳ ಹೆಚ್ಚಳದೊಂದಿಗೆ, ಸಂಕೀರ್ಣ ಸೈಬರ್ ಅಪರಾಧಗಳೂ ಹೆಚ್ಚಿವೆ.

  1. ಇದಲ್ಲದೆ, ಜಾಗತಿಕ ಸಾಂಕ್ರಾಮಿಕ ಸಮಯದಲ್ಲಿ ಭಾರತದಲ್ಲಿ ಸೈಬರ್ ಅಪರಾಧಗಳು ಸುಮಾರು 500 ಪ್ರತಿಶತದಷ್ಟು ಹೆಚ್ಚಾಗಿದೆ.
  2. ಸೈಬರ್ ಭದ್ರತೆ ಮತ್ತು ಸೈಬರ್ ಅಪರಾಧಗಳಿಗೆ ಸಂಬಂಧಿಸಿದ ‘ಮಾಹಿತಿ ತಂತ್ರಜ್ಞಾನ ಕಾಯಿದೆ, 2000’ (Information Technology Act, 2000) ರ ನಿಬಂಧನೆಗಳು ವ್ಯವಹಾರಗಳು ಕಾರ್ಯನಿರ್ವಹಿಸುವ ವಿಧಾನದಲ್ಲಿನ ಬದಲಾವಣೆಗಳನ್ನು ಮತ್ತು ಸೈಬರ್‌ಸ್ಪೇಸ್‌ನಲ್ಲಿ ಅಪರಾಧಗಳ ಹೊಸ ಯುಗದ ಬದಲಾವಣೆಗಳನ್ನು ಪರಿಗಣಿಸಲು ಸಾಕಷ್ಟು ಸಜ್ಜುಗೊಂಡಿಲ್ಲ.

ಈ ಸಮಯದ ಅವಶ್ಯಕತೆ:

  1. ದೇಶದಲ್ಲಿ ಹೊಸ ‘ರಾಷ್ಟ್ರೀಯ ಸೈಬರ್ ಭದ್ರತಾ ಕಾರ್ಯತಂತ್ರ’ (National Cybersecurity Strategy) ಜಾರಿಗೆ ಬರಲು ಸಿದ್ಧವಾಗಿದ್ದರೂ, ಸಾಂಕ್ರಾಮಿಕ ನಂತರದ ಯುಗದಲ್ಲಿ, ‘ಡೇಟಾ’ ವನ್ನು ಸೈಬರ್ ಅಪರಾಧಿಗಳು ರಾಷ್ಟ್ರೀಯ ಭದ್ರತೆಯ ವಿರುದ್ಧ ಅಸ್ತ್ರವಾಗಿ ಬಳಸುತ್ತಿದ್ದಾರೆ. ದೇಶಕ್ಕೆ ದತ್ತಾಂಶ ಸಂರಕ್ಷಣಾ ಕಾಯಿದೆ’ಯ ಅಗತ್ಯವಿದೆ.
  2. ಡ್ರೋನ್‌ಗಳು, ransomware, ಇಂಟರ್ನೆಟ್ ಆಫ್ ಥಿಂಗ್ಸ್ (IoT) ಸಾಧನಗಳಂತಹ ಹೊಸ ತಂತ್ರಜ್ಞಾನಗಳಿಂದ ಹೊರಹೊಮ್ಮುತ್ತಿರುವ ಬೆದರಿಕೆಗಳನ್ನು ನಾವು ಪರಿಗಣಿಸಬೇಕಾಗಿದೆ ಮತ್ತು ಅಂತಹ ಸೈಬರ್ ದಾಳಿಯಲ್ಲಿ ರಾಜ್ಯದ ಪಾತ್ರವನ್ನು ಸಹ ನಾವು ಪರಿಗಣಿಸಬೇಕಾಗಿದೆ.

ಸೈಬರ್ ಅಪರಾಧಗಳ ಬಗ್ಗೆ ಅರಿವು ಮೂಡಿಸಲು ಸರ್ಕಾರ ಕೈಗೊಂಡ ಕ್ರಮಗಳು:

  1. ಮಕ್ಕಳ ಅಶ್ಲೀಲತೆ (Child pornography)/ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ವಿಷಯ ವಸ್ತು,(Child Sexual Abuse Material ) ಅತ್ಯಾಚಾರ / ಸಾಮೂಹಿಕ ಅತ್ಯಾಚಾರ ಚಿತ್ರಣಗಳು ಅಥವಾ ಲೈಂಗಿಕವಾಗಿ ಸ್ಪಷ್ಟವಾದ ವಿಷಯಗಳಿಗೆ (sexually explicit content ) ಸಂಬಂಧಿಸಿದ ದೂರುಗಳನ್ನು ವರದಿ ಮಾಡಲು ದೂರುದಾರರಿಗೆ ಅನುವು ಮಾಡಿಕೊಡಲು ಆನ್‌ಲೈನ್ ಸೈಬರ್ ಅಪರಾಧ ವರದಿ ಮಾಡುವ ಪೋರ್ಟಲ್ (Online cybercrime reporting portal) ಅನ್ನು ಪ್ರಾರಂಭಿಸಲಾಗಿದೆ.
  2. ಸೈಬರ್ ಅಪರಾಧ ಸಂಬಂಧಿತ ಸಮಸ್ಯೆಗಳನ್ನು ದೇಶದಲ್ಲಿ ಸಮಗ್ರ ಮತ್ತು ಸಂಘಟಿತ ರೀತಿಯಲ್ಲಿ ಪರಿಹರಿಸಲು ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರವನ್ನು (Indian Cyber Crime Coordination Centre –I 4 C) ಸ್ಥಾಪಿಸಲು ಯೋಜಿಸಲಾಗಿದೆ.
  3. ದೇಶದ ಪ್ರಮುಖ ಮಾಹಿತಿ ಮೂಲಸೌಕರ್ಯಗಳನ್ನು ರಕ್ಷಿಸಲು ‘ರಾಷ್ಟ್ರೀಯ ವಿಮರ್ಶಾತ್ಮಕ ಮಾಹಿತಿ ಮೂಲಸೌಕರ್ಯ ಸಂರಕ್ಷಣಾ ಕೇಂದ್ರ – (National Critical Information Infrastructure Protection Centre– NCIIPC) ಸ್ಥಾಪನೆ ಮಾಡಲಾಗಿದೆ.
  4. ಭಾರತದ ಕಂಪ್ಯೂಟರ್‌ ತುರ್ತು ಸ್ಪಂದನಾ ತಂಡ (CERT-In) ನಲ್ಲಿ ಸೈಬರ್ ಭದ್ರತಾ ಘಟನೆಗಳನ್ನು ತ್ವರಿತವಾಗಿ ವರದಿ ಮಾಡುವುದು ಡಿಜಿಟಲ್ ಸೇವೆಗಳನ್ನು ಒದಗಿಸುವ ಎಲ್ಲಾ ಸಂಸ್ಥೆಗಳಿಗೆ ಕಡ್ಡಾಯವಾಗಿದೆ.
  5. ದುರುದ್ದೇಶಪೂರಿತ ಕಾರ್ಯಕ್ರಮಗಳು ಮತ್ತು ಉಚಿತ ಸಾಧನಗಳನ್ನು ಪತ್ತೆಹಚ್ಚಲು ಮತ್ತು ತೆಗೆದುಹಾಕಲು ಸೈಬರ್ ಸ್ವಚ್ಛತಾ ಕೇಂದ್ರವನ್ನು (Cyber Swachhta Kendra) ಪ್ರಾರಂಭಿಸಲಾಗಿದೆ.
  6. ಸೈಬರ್ ದಾಳಿ ಮತ್ತು ಸೈಬರ್ ಭಯೋತ್ಪಾದನೆಯನ್ನು ಎದುರಿಸಲು ಬಿಕ್ಕಟ್ಟು ನಿರ್ವಹಣಾ ಯೋಜನೆಯನ್ನು (Crisis Management Plan) ರೂಪಿಸುವುದು.

ಮುಂದೆ ಕೈಗೊಳ್ಳಬೇಕಾದ ಇತರೆ ಕ್ರಮಗಳು:

  1. ನಿಯಮಿತ ಎಚ್ಚರಿಕೆಗಳು / ಸಲಹೆಗಳನ್ನು ನೀಡುವುದು.
  2. ಕಾನೂನು ಜಾರಿ ಸಿಬ್ಬಂದಿ / ಪ್ರಾಸಿಕ್ಯೂಟರ್ / ನ್ಯಾಯಾಂಗ ಅಧಿಕಾರಿಗಳಿಗೆ ಸಾಮರ್ಥ್ಯ ವೃದ್ಧಿ / ತರಬೇತಿ ನೀಡುವುದು.
  3. ಸೈಬರ್ ಫೊರೆನ್ಸಿಕ್ ಸೌಲಭ್ಯಗಳನ್ನು ಸುಧಾರಿಸುವುದು.
  4. ತನಿಖೆಯನ್ನು ಚುರುಕು ಅಥವಾ ವೇಗ ಗೊಳಿಸುವುದು.

ಅಂತಿಮವಾಗಿ, ‘ಪೊಲೀಸ್’ ಮತ್ತು ‘ಸಾರ್ವಜನಿಕ ಸುವ್ಯವಸ್ಥೆ’ ಯು ಭಾರತದ ಸಂವಿಧಾನದ ಪ್ರಕಾರ ರಾಜ್ಯ ಪಟ್ಟಿಯಲ್ಲಿನ ವಿಷಯಗಳಾಗಿವೆ. ರಾಜ್ಯಗಳು / ಕೇಂದ್ರಾಡಳಿತ ಪ್ರದೇಶಗಳು ತಮ್ಮ ಕಾನೂನು ಜಾರಿ ಸಂಸ್ಥೆಗಳ ಮೂಲಕ ಅಪರಾಧಗಳ ತಡೆಗಟ್ಟುವಿಕೆ, ಪತ್ತೆ, ತನಿಖೆ ಮತ್ತು ವಿಚಾರಣೆಗೆ ಮುಖ್ಯವಾಗಿ ಕಾರಣವಾಗಿವೆ.

 

ವಿಷಯಗಳು: ಸಂವಹನ ಜಾಲಗಳ ಮೂಲಕ ಆಂತರಿಕ ಭದ್ರತೆಗೆ ಸವಾಲು ಹಾಕುವುದು, ಆಂತರಿಕ ಭದ್ರತಾ ಸವಾಲುಗಳಲ್ಲಿ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳ ಪಾತ್ರ, ಸೈಬರ್ ಭದ್ರತೆಯ ಮೂಲಭೂತ ಅಂಶಗಳು, ಅಕ್ರಮ ಹಣ ವರ್ಗಾವಣೆ ಮತ್ತು ಅದನ್ನು ತಡೆಯುವುದು.

ವೈಯಕ್ತಿಕ ಡೇಟಾ ಸಂರಕ್ಷಣಾ ಮಸೂದೆ, 2019:


(Personal Data Protection Bill, 2019)

ಸಂದರ್ಭ:

ಇತ್ತೀಚೆಗೆ, ‘ವೈಯಕ್ತಿಕ ಡೇಟಾ ಸಂರಕ್ಷಣಾ ಮಸೂದೆ’ (Personal Data Protection Bill) ಕುರಿತು ಚರ್ಚಿಸಲು ರಚಿಸಲಾದ ‘ಸಂಸದೀಯ ಸಮಿತಿ’ ಈ ಕೆಳಗಿನ ಶಿಫಾರಸುಗಳನ್ನು ಮಾಡಿದೆ:

  1. ಪ್ರಸ್ತುತ ಕರಡು ಮಸೂದೆಯಲ್ಲಿ, ‘ಸರ್ಕಾರಕ್ಕೆ ವಿನಾಯಿತಿ’ಗಳನ್ನು ಉಲ್ಲೇಖಿಸಿ, ಸೂಕ್ತವಾದ ನಿರ್ಬಂಧಗಳನ್ನು ವಿಧಿಸುವ ಮೂಲಕ ಈ ವಿನಾಯಿತಿಗಳ ಪ್ರಯೋಜನಗಳನ್ನು ಸೀಮಿತಗೊಳಿಸಬಹುದು.
  2. ಸರ್ಕಾರವು “ಸಮಾನ, ನ್ಯಾಯೋಚಿತ, ಸಮಂಜಸ ಮತ್ತು ಪ್ರಮಾಣಾನುಗುಣವಾದ ಪ್ರಕ್ರಿಯೆ” ಅಡಿಯಲ್ಲಿ ಮಾತ್ರ ವಿನಾಯಿತಿ ನೀಡಬೇಕು.
  3. ಸರ್ಕಾರವು “ಅನಾಮಧೇಯ ಡೇಟಾ ಸೇರಿದಂತೆ” ವೈಯಕ್ತಿಕವಲ್ಲದ ಡೇಟಾವನ್ನು ಖಾಸಗಿ ಡೇಟಾ ಸಂರಕ್ಷಣಾ ಮಸೂದೆಯ ವ್ಯಾಪ್ತಿಯಿಂದ ಹೊರಗಿಡಬಹುದು.

ಹಿನ್ನೆಲೆ:

ಕರಡು ‘ಖಾಸಗಿ ಡೇಟಾ ಸಂರಕ್ಷಣಾ ಮಸೂದೆ’ 2019 ಅನ್ನು 2019 ರಲ್ಲಿ ‘ಜಂಟಿ ಸಂಸದೀಯ ಸಮಿತಿ’ (JPC) ಗೆ ಕಳುಹಿಸಲಾಗಿದೆ. ಈ ಸಮಿತಿಗೆ ಮಸೂದೆಯಲ್ಲಿನ ವಿವಿಧ ನಿಬಂಧನೆಗಳ ಕುರಿತು ತನ್ನ ವರದಿ ಮತ್ತು ಶಿಫಾರಸನ್ನು ನೀಡುವ ಕಾರ್ಯವನ್ನು ವಹಿಸಲಾಯಿತು.

ಏನಿದು ಪ್ರಕರಣ?

ಪ್ರಸ್ತುತ, ಕರಡು ಡೇಟಾ ಸಂರಕ್ಷಣಾ ಮಸೂದೆಯ ವಿವಾದಾತ್ಮಕ ಆರ್ಟಿಕಲ್ 35 ಯಾವುದೇ ನಿರ್ಬಂಧವಿಲ್ಲದೆ, ಮಸೂದೆಯ ಯಾವುದೇ ಮತ್ತು ಎಲ್ಲಾ ನಿಬಂಧನೆಗಳನ್ನು ಅನುಸರಿಸುವುದರಿಂದ ಸರ್ಕಾರ ಮತ್ತು ಅದರ ಏಜೆನ್ಸಿಗಳಿಗೆ ಸಂಪೂರ್ಣ ವಿನಾಯಿತಿ ನೀಡುತ್ತದೆ.

  1. ಆಧಾರ್ ಪ್ರಾಧಿಕಾರ ಯುಐಡಿಎಐ ಮತ್ತು ಆದಾಯ ತೆರಿಗೆ ಇಲಾಖೆಯಂತಹ ಏಜೆನ್ಸಿಗಳು ಈಗಾಗಲೇ ಮಸೂದೆಯ ನಿಬಂಧನೆಗಳಿಂದ ವಿನಾಯಿತಿ ನೀಡುವಂತೆ ಒತ್ತಾಯಿಸುತ್ತಿವೆ.

ವೈಯಕ್ತಿಕ ದತ್ತಾಂಶ ಸಂರಕ್ಷಣೆ (PDP) ಮಸೂದೆ 2019:

ಈ ಮಸೂದೆಯ ಮೂಲವು ನ್ಯಾಯಮೂರ್ತಿ ಬಿ.ಎನ್.ಶ್ರೀಕೃಷ್ಣ ನೇತೃತ್ವದ ತಜ್ಞರ ಸಮಿತಿಯು ಸಿದ್ಧಪಡಿಸಿದ ವರದಿಯಲ್ಲಿದೆ.

ಖಾಸಗಿತನದ ಹಕ್ಕು ಪ್ರಕರಣ(ನ್ಯಾಯಮೂರ್ತಿ ಕೆ.ಎಸ್. ಪುಟ್ಟಸ್ವಾಮಿ ವಿರುದ್ಧ ಭಾರತ ಒಕ್ಕೂಟ)ದ ಕುರಿತು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದ್ದ ಸಂದರ್ಭದಲ್ಲಿ ಸರ್ಕಾರವು ಈ ಸಮಿತಿಯನ್ನು ರಚಿಸಿದೆ.

ಡೇಟಾವನ್ನು ನಿಯಂತ್ರಿಸಲು ಮಸೂದೆಯು ಹೇಗೆ ಪ್ರಯತ್ನಿಸುತ್ತದೆ?

ಮಸೂದೆಯು 3 ವೈಯಕ್ತಿಕ ಮಾಹಿತಿ ಪ್ರಕಾರಗಳನ್ನು ಒಳಗೊಂಡಿದೆ:

  1. ಗಂಭೀರ (Critical)
  2. ಸಂವೇದನಾಶೀಲ/ಸೂಕ್ಷ್ಮ(Sensitive)
  3. ಸಾಮಾನ್ಯ (General)

ಇತರ ಪ್ರಮುಖ ನಿಬಂಧನೆಗಳು:

ಡೇಟಾ ಪ್ರಿನ್ಸಿಪಾಲ್: ಮಸೂದೆಯ ಪ್ರಕಾರ,ಇಲ್ಲಿ ವ್ಯಕ್ತಿಯ ಡೇಟಾವನ್ನು ಸಂಗ್ರಹಿಸಲಾಗುತ್ತದೆ ಮತ್ತು ಪ್ರಕ್ರಿಯೆಗೊಳಿಸಲಾಗುತ್ತದೆ.

ಸಾಮಾಜಿಕ ಮಾಧ್ಯಮ ಕಂಪನಿಗಳು: ದತ್ತಾಂಶದ ಪರಿಮಾಣ ಮತ್ತು ಸೂಕ್ಷ್ಮತೆ ಹಾಗೂ ಅವುಗಳ ವಹಿವಾಟು ಮುಂತಾದ ಅಂಶಗಳ ಆಧಾರದ ಮೇಲೆ ಗಮನಾರ್ಹವಾದ ದತ್ತಾಂಶ ವಿಶ್ವಾಸಿಗಳೆಂದು ಪರಿಗಣಿಸಲಾಗುವ ಸಾಮಾಜಿಕ ಮಾಧ್ಯಮ ಕಂಪನಿಗಳು,ತಮ್ಮದೇ ಆದ ಬಳಕೆದಾರ ಪರಿಶೀಲನಾ ಕಾರ್ಯವಿಧಾನವನ್ನು ಅಭಿವೃದ್ಧಿಪಡಿಸಬೇಕು.

ಡೇಟಾ ಪ್ರೊಟೆಕ್ಷನ್ ಏಜೆನ್ಸಿ (DPA) ಎಂಬ ಸ್ವತಂತ್ರ ನಿಯಂತ್ರಕದ ಮೂಲಕ ಮೌಲ್ಯಮಾಪನಗಳು ಮತ್ತು ಲೆಕ್ಕಪರಿಶೋಧನೆಗಳು ಮತ್ತು ವ್ಯಾಖ್ಯಾನ ತಯಾರಿಕೆಯ ಮೇಲ್ವಿಚಾರಣೆಯನ್ನು ಮಾಡುವುದು.

ಪ್ರತಿ ಕಂಪನಿಯು ದತ್ತಾಂಶ ಸಂರಕ್ಷಣಾ ಅಧಿಕಾರಿಯನ್ನು (DPO) ಹೊಂದಿರುತ್ತದೆ ಅವರು ಲೆಕ್ಕಪರಿಶೋಧನೆ, ಕುಂದುಕೊರತೆ ಪರಿಹಾರ, ದಾಖಲೆ ನಿರ್ವಹಣೆ ಮತ್ತು ಹೆಚ್ಚಿನವುಗಳಿಗಾಗಿ DPA ಯೊಂದಿಗೆ ಸಂಪರ್ಕ ಸಾಧಿಸುತ್ತಾರೆ.

ಈ ಮಸೂದೆಯು ವ್ಯಕ್ತಿಗಳಿಗೆ ಡೇಟಾ ಪೋರ್ಟೆಬಿಲಿಟಿ ಹಕ್ಕನ್ನು ನೀಡುತ್ತದೆ ಮತ್ತು ಇದು ಪ್ರತಿಯೊಬ್ಬರೂ ತಮ್ಮ ಸ್ವಂತ ಡೇಟಾವನ್ನು ಪ್ರವೇಶಿಸುವ ಮತ್ತು ವರ್ಗಾಯಿಸುವ ಅಧಿಕಾರವನ್ನು ನೀಡುತ್ತದೆ.

ಮರೆತುಹೋಗುವ ಹಕ್ಕು: ಈ ಹಕ್ಕು ಪ್ರತಿ ವ್ಯಕ್ತಿಗೆ ಡೇಟಾ ಸಂಗ್ರಹಣೆ ಮಾಡಲು ಮತ್ತು ಅದನ್ನು ಪ್ರಕಟಿಸಲು  ಸಮ್ಮತಿಯನ್ನು ನಿರಾಕರಿಸುವ ಅಧಿಕಾರವನ್ನು ನೀಡುತ್ತದೆ.

ವಿನಾಯಿತಿಗಳು:

ವೈಯಕ್ತಿಕ ಡೇಟಾ ಸಂರಕ್ಷಣಾ (PDP) ಮಸೂದೆ 2019 ವಿವಾದಾತ್ಮಕ ಸೆಕ್ಷನ್ 35 ಅನ್ನು ಹೊಂದಿದೆ, ಇದು “ಭಾರತದ ಸಾರ್ವಭೌಮತೆ ಮತ್ತು ಸಮಗ್ರತೆ”, “ಸಾರ್ವಜನಿಕ ಸುವ್ಯವಸ್ಥೆ”, “ವಿದೇಶಿ ರಾಜ್ಯಗಳೊಂದಿಗೆ ಸ್ನೇಹ ಸಂಬಂಧಗಳು” ಮತ್ತು “ರಾಜ್ಯದ ಭದ್ರತೆ” ಯನ್ನು ಆಹ್ವಾನಿಸುತ್ತದೆ. ಈ ವಿವಾದಾತ್ಮಕ ಸೆಕ್ಷನ್ 35 ಸರ್ಕಾರಿ ಏಜೆನ್ಸಿಗಳಿಗಾಗಿ ವೈಯಕ್ತಿಕ ಡೇಟಾ ಸಂರಕ್ಷಣಾ ಕಾಯ್ದೆಯ ಎಲ್ಲಾ ಅಥವಾ ಯಾವುದೇ ನಿಬಂಧನೆಗಳನ್ನು  ಅಮಾನತುಗೊಳಿಸಲು ಕೇಂದ್ರ ಸರ್ಕಾರಕ್ಕೆ ಅಧಿಕಾರವನ್ನು ನೀಡುತ್ತದೆ.

ಮಸೂದೆಯ ಬಗ್ಗೆ ಕಾಳಜಿ ಏಕೆ?

ಈ ಮಸೂದೆಯು ಎರಡು ಅಲಗಿನ ಕತ್ತಿಯಂತಿದೆ. ಒಂದೆಡೆ ಈ ಮಸೂದೆಯು ಭಾರತೀಯರಿಗೆ ಡೇಟಾ ಮಾಲೀಕತ್ವದ ಹಕ್ಕುಗಳನ್ನು ನೀಡುವ ಮೂಲಕ ಭಾರತೀಯರ ವೈಯಕ್ತಿಕ ಡೇಟಾವನ್ನು ರಕ್ಷಿಸುವ ಕೆಲಸ ಮಾಡುತ್ತದೆ. ಮತ್ತೊಂದೆಡೆ,ಇದು ವೈಯಕ್ತಿಕ ಡೇಟಾವನ್ನು ಪ್ರಕ್ರಿಯೆಗೊಳಿಸುವ ತತ್ವಗಳಿಗೆ ವಿರುದ್ಧವಾದ ವಿನಾಯಿತಿಗಳೊಂದಿಗೆ ಕೇಂದ್ರ ಸರ್ಕಾರಕ್ಕೆ ಅನುಮತಿಯನ್ನು ನೀಡುತ್ತದೆ.

  1. ಸರ್ಕಾರವು ಅಗತ್ಯವಿದ್ದಾಗ ಡೇಟಾ ಪ್ರಿನ್ಸಿಪಾಲ್‌ಗಳಿಂದ ಸ್ಪಷ್ಟ ಅನುಮತಿಯಿಲ್ಲದೆ ಸೂಕ್ಷ್ಮವಾದ ವೈಯಕ್ತಿಕ ಡೇಟಾವನ್ನು ಸಹ ಪ್ರಕ್ರಿಯೆಗೊಳಿಸಬಹುದು.

 

ವಿಷಯಗಳು: ಸಂವಹನ ಜಾಲಗಳ ಮೂಲಕ ಆಂತರಿಕ ಭದ್ರತೆಗೆ ಸವಾಲು ಹಾಕುವುದು, ಆಂತರಿಕ ಭದ್ರತಾ ಸವಾಲುಗಳಲ್ಲಿ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳ ಪಾತ್ರ, ಸೈಬರ್ ಭದ್ರತೆಯ ಮೂಲಭೂತ ಅಂಶಗಳು, ಅಕ್ರಮ ಹಣ ವರ್ಗಾವಣೆ ಮತ್ತು ಅದನ್ನು ತಡೆಯುವುದು.

ಸುಪ್ರೀಂ ಕೋರ್ಟ್‌ನಲ್ಲಿ ದ್ವೇಷ ಭಾಷಣದ ಕುರಿತ ಅರ್ಜಿ:


(Plea on Hate Speech in Supreme Court)

ಸಂದರ್ಭ:

ಇತ್ತೀಚಿನ ದಿನಗಳಲ್ಲಿ, ದ್ವೇಷದ ಭಾಷಣಗಳ ಕುರಿತು ಸುಪ್ರೀಂ ಕೋರ್ಟ್‌ನಲ್ಲಿ ಎರಡು ಅರ್ಜಿಗಳು ದಾಖಲಾಗಿವೆ.

  1. ಒಂದು ಅರ್ಜಿಯಲ್ಲಿ ಇಂತಹ ಪ್ರಕರಣಗಳಲ್ಲಿ ಕ್ರಮ ಕೈಗೊಳ್ಳಲು ನಿರ್ದೇಶನ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಸಲ್ಲಿಸಲಾಗಿದೆ. ಮತ್ತು,
  2. ಎರಡನೇ ಅರ್ಜಿಯಲ್ಲಿ ‘ದ್ವೇಷ ಭಾಷಣ’ಕ್ಕೆ ಸಂಬಂಧಿಸಿದಂತೆ ವಿಶೇಷ ನಿಬಂಧನೆಗಳನ್ನು ಮಾಡಬೇಕೆಂಬ ಆಗ್ರಹ ಕೇಳಿ ಬಂದಿದೆ. ‘ದ್ವೇಷ ಭಾಷಣ’ ಮತ್ತು ‘ವದಂತಿಗಳನ್ನು ಹರಡುವುದನ್ನು’ ಎದುರಿಸಲು ‘ಭಾರತೀಯ ದಂಡ ಸಂಹಿತೆ’(IPC)ಯ ನಿಬಂಧನೆಗಳು ಸಾಕಾಗುವುದಿಲ್ಲ ಎಂದು ಅರ್ಜಿಯಲ್ಲಿ ಪ್ರತಿಪಾದಿಸಲಾಗಿದೆ.

ಎರಡೂ ಅರ್ಜಿಗಳು ಅಮಿಶ್ ದೇವಗನ್ ಪ್ರಕರಣದಲ್ಲಿ 2020 ರ ಸುಪ್ರೀಂ ಕೋರ್ಟ್ ತೀರ್ಪನ್ನು ಆಧರಿಸಿವೆ, ಇದರಲ್ಲಿ “ದ್ವೇಷ ಭಾಷಣ”(Hate Speech), ವು,ಏಕತೆ ಮತ್ತು ಭ್ರಾತೃತ್ವದ ಉಲ್ಲಂಘನೆ ಮತ್ತು ಸಂವಿಧಾನದ 21 ನೇ ವಿಧಿಯ ಅಡಿಯಲ್ಲಿ ‘ಜೀವನ ಮತ್ತು ಸ್ವಾತಂತ್ರ್ಯದ ಹಕ್ಕಿನ’ ಅತ್ಯಗತ್ಯ ಅಂಶವಾದ ‘ಮಾನವ ಘನತೆ’ಯ ಉಲ್ಲಂಘನೆಯನ್ನು ಎತ್ತಿ ತೋರಿಸಲಾಗಿದೆ.

ಏನಿದು ಪ್ರಕರಣ?

ಸರಣಿ ರ್ಯಾಲಿಗಳು ಮತ್ತು ದ್ವೇಷದ ಭಾಷಣಗಳ ಮೂಲಕ ಮುಸ್ಲಿಮರ ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಬಹಿಷ್ಕಾರವನ್ನು ಗುರಿಯಾಗಿಸಿಕೊಂಡ ಸಂಘಟಿತ ಘಟನೆಗಳಿಂದ ಕಳವಳಗೊಂಡ ಅರ್ಜಿದಾರರು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿಗಳನ್ನು ಸಲ್ಲಿಸಿದ್ದಾರೆ.

  1. ಅರ್ಜಿದಾರರು 2014 ರಲ್ಲಿ ದ್ವೇಷ ಭಾಷಣ ಮತ್ತು 2018 ರಲ್ಲಿ ಗುಂಪು ಹಿಂಸಾಚಾರ ಮತ್ತು ಗುಂಪು ಹತ್ಯೆ ಘಟನೆಗಳ ಕುರಿತು ಸುಪ್ರೀಂ ಕೋರ್ಟ್ ಹೊರಡಿಸಿದ ಮಾರ್ಗಸೂಚಿಗಳನ್ನು ಜಾರಿಗೆ ತರಲು ಕೋರಿದ್ದಾರೆ.

ದ್ವೇಷ ಭಾಷಣ’ ಎಂದರೇನು?

  1. ‘ದ್ವೇಷ ಭಾಷಣ’ ಎನ್ನುವುದು ಧಾರ್ಮಿಕ ನಂಬಿಕೆಗಳು, ಲೈಂಗಿಕ ದೃಷ್ಟಿಕೋನ, ಲಿಂಗ ಇತ್ಯಾದಿಗಳ ಆಧಾರದ ಮೇಲೆ ಅಂಚಿನಲ್ಲಿರುವ ವ್ಯಕ್ತಿಗಳ ನಿರ್ದಿಷ್ಟ ಗುಂಪಿನ ವಿರುದ್ಧ ದ್ವೇಷವನ್ನು ಪ್ರಚೋದಿಸುವುದಾಗಿದೆ.
  2. ಕಾನೂನು ಆಯೋಗ, ದ್ವೇಷ ಭಾಷಣ ಕುರಿತ ತನ್ನ 267 ನೇ ವರದಿಯಲ್ಲಿ, ಇಂತಹ ಮಾತುಗಳು ಭಯೋತ್ಪಾದನೆ, ನರಮೇಧ ಮತ್ತು ಜನಾಂಗೀಯ ವಿನಾಶದಂತಹ ಕೃತ್ಯಗಳನ್ನು ಮಾಡಲು ವ್ಯಕ್ತಿಗಳು ಮತ್ತು ಸಮಾಜವನ್ನು ಪ್ರಚೋದಿಸುವ ಸಾಮರ್ಥ್ಯವನ್ನು ಹೊಂದಿವೆ ಎಂದು ಹೇಳಿದೆ.

ದ್ವೇಷದ ಭಾಷಣವನ್ನು ಏಕೆ ತಡೆಯಬೇಕು?

  1. ಆಂತರಿಕ ಭದ್ರತೆ: ಕೋಮು ಭಾವೋದ್ರೇಕಗಳನ್ನು ಪ್ರಚೋದಿಸುವ ನಕಲಿ ವೀಡಿಯೊದಿಂದ 2013 ರಲ್ಲಿ ಮುಜಫರ್ ನಗರ ಗಲಭೆಗಳು ಪ್ರಚೋದಿಸಲ್ಪಟ್ಟವು.
  2. ‘ದ್ವೇಷ ಭಾಷಣ’ ಉಗ್ರ ಭಾವನೆಗಳನ್ನು ಪ್ರಚೋದಿಸುತ್ತದೆ.
  3. ಗುಂಪು ಹಲ್ಲೆ.(Mob Lynching)
  4. ತಪ್ಪು ಮಾಹಿತಿ ಮತ್ತು ಹಾದಿ ತಪ್ಪಿಸುವ ಸುಳ್ಳು ಮಾಹಿತಿ ಹರಡದಂತೆ ತಡೆಯಲು: ದೆಹಲಿ ಗಲಭೆಗಳು.

ಕ್ರಮಗಳು:

  1. ಫೇಸ್‌ಬುಕ್, ಗೂಗಲ್, ಟ್ವಿಟರ್ ಮತ್ತು ಬೈಟ್‌ಡ್ಯಾನ್ಸ್ ಸೇರಿದಂತೆ ವಿಶ್ವದ ಅತಿದೊಡ್ಡ ಸಾಮಾಜಿಕ ಮಾಧ್ಯಮ ಕಂಪನಿಗಳು ಭಾರತದಲ್ಲಿನ ತಮ್ಮ ಪ್ಲ್ಯಾಟ್‌ಫಾರ್ಮ್‌ಗಳಲ್ಲಿ ನಕಲಿ ಸುದ್ದಿಗಳನ್ನು ನಿಗ್ರಹಿಸಲು ಉದ್ಯಮದಾದ್ಯಂತದ ಮೈತ್ರಿಯನ್ನು / ಸಹಕಾರವನ್ನು ಎದುರು ನೋಡುತ್ತಿವೆ.
  2. ಅಂತಹ ಸುದ್ದಿಗಳ ಸೃಷ್ಟಿಕರ್ತನನ್ನು ಗುರುತಿಸಲು ಭಾರತದ ಚುನಾವಣಾ ಆಯೋಗವು ಟೆಕ್ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಳ್ಳಬೇಕು.
  3. ಅಂತಿಮ ಬಳಕೆದಾರರಿಗೆ ತಿಳಿವಳಿಕೆ ನೀಡುವುದು.
  4. ಇಂಟರ್ನೆಟ್ ಮೆಸೇಜಿಂಗ್ ಪ್ಲಾಟ್‌ಫಾರ್ಮ್‌ಗಳಿಂದ ಉಂಟಾಗುವ ಅಪಾಯಗಳ ಕುರಿತು ಆಳವಾದ ಮಟ್ಟದಲ್ಲಿ ತೊಡಗಿಸಿಕೊಳ್ಳಲು ಸರ್ಕಾರವು ನೀತಿ ಚೌಕಟ್ಟನ್ನು ಜಾರಿಗೆ ತರಬೇಕಾಗಿದೆ.
  5. ಜರ್ಮನಿಯಂತೆ ಭಾರಿ ದಂಡ ವಿಧಿಸುವುದು, ಅಲ್ಲಿ ಸಾಮಾಜಿಕ ಮಾಧ್ಯಮ ಕಂಪನಿಗಳು ತಮ್ಮ ಸೈಟ್‌ಗಳಿಂದ ಕಾನೂನುಬಾಹಿರ ವಿಷಯವನ್ನು ತೆಗೆದುಹಾಕುವಲ್ಲಿ ನಿರಂತರವಾಗಿ ವಿಫಲವಾದರೆ 50 ಮಿಲಿಯನ್ € ದಂಡವನ್ನು ಎದುರಿಸಬೇಕಾಗುತ್ತದೆ.

ಈ ಸಮಯದ ಅವಶ್ಯಕತೆ:

  1. ದ್ವೇಷ ಭಾಷಣವು ಸಮಾಜದ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಕ್ಷೇತ್ರಗಳಿಂದ ಅಂಚಿನಲ್ಲಿರುವ ಗುಂಪುಗಳನ್ನು ತಳ್ಳುವ ವಿವಾದಾತ್ಮಕ ಪ್ರಕ್ರಿಯೆಯಾಗಿದೆ, ಇದು ದ್ವೇಷವನ್ನು ಮತ್ತು ತಾರತಮ್ಯವನ್ನು ಉತ್ತೇಜಿಸುತ್ತದೆ. ಅದರ ಅತ್ಯಂತ ಅಪಾಯಕಾರಿ ರೂಪದಲ್ಲಿ, ಇದನ್ನು ‘ಜನಾಂಗೀಯ ನರಮೇಧ’ದ ಪೂರ್ವಗಾಮಿ ಎಂದು ವ್ಯಾಪಕವಾಗಿ ಪರಿಗಣಿಸಲಾಗಿದೆ.
  2. ‘ಕಣ್ಗಾವಲು ಕರ್ತವ್ಯವನ್ನು ನಿರ್ಲಕ್ಷಿಸಿದ’ ಮತ್ತು ನ್ಯಾಯಾಲಯದ ಆದೇಶಗಳನ್ನು ಪಾಲಿಸದಿರುವ ಸಾರ್ವಜನಿಕ ಅಧಿಕಾರಿಗಳು ಮತ್ತು ಕೋಮು ಸೌಹಾರ್ದತೆಯನ್ನು ಕದಡಲು ಪ್ರಚೋದಿಸುವ, ದೇಶದ ನಾಗರಿಕರ ವಿರುದ್ಧ ದ್ವೇಷವನ್ನು ಹರಡಲು ಮತ್ತು ಕಾನೂನುಗಳನ್ನು ತಮ್ಮ ಕೈಗೆ ತೆಗೆದುಕೊಳ್ಳುವ ಗುಂಪುಗಳನ್ನು ತಡೆಯಲು ಕ್ರಮ ತೆಗೆದುಕೊಳ್ಳದಿದ್ದಕ್ಕಾಗಿ ಅಧಿಕಾರಿಗಳನ್ನು ಸಹ ಹೊಣೆಗಾರರನ್ನಾಗಿ ಮಾಡಬೇಕು.

 


ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:


ಅಫ್ಘಾನಿಸ್ತಾನದ ಕುರಿತು ದೆಹಲಿ ಘೋಷಣೆ:

(Delhi Declaration on Afghanistan)

  1. ಇತ್ತೀಚೆಗೆ, ಭಾರತವು ಪ್ರಾದೇಶಿಕ ಭದ್ರತಾ ಶೃಂಗಸಭೆಯನ್ನು ಆಯೋಜಿಸಿತ್ತು. ಈ ಶೃಂಗಸಭೆಯಲ್ಲಿ ಇರಾನ್ ಮತ್ತು ರಷ್ಯಾ ಸೇರಿದಂತೆ ಎಂಟು ದೇಶಗಳು ಭಾಗವಹಿಸಿದ್ದವು.
  2. ಇದು ಪ್ರಾದೇಶಿಕ ಭದ್ರತಾ ಸಂವಾದದ (Regional Security Dialogue) ಮೂರನೇ ಸಭೆಯಾಗಿದೆ (ಹಿಂದಿನ ಎರಡು ಸಭೆಗಳು 2018 ಮತ್ತು 2019 ರಲ್ಲಿ ಇರಾನ್‌ನಲ್ಲಿ ನಡೆದಿದ್ದವು).
  3. ಸಮ್ಮೇಳನದ ಸಮಯದಲ್ಲಿ, ಅಫ್ಘಾನಿಸ್ತಾನ ಮತ್ತು ಅದರ ಪ್ರದೇಶಗಳನ್ನು ಭಯೋತ್ಪಾದಕರಿಗೆ ಆಶ್ರಯ ನೀಡಲು ಅಥವಾ ತರಬೇತಿ ನೀಡಲು ಅಥವಾ ಯಾವುದೇ ಭಯೋತ್ಪಾದನಾ ಕೃತ್ಯಗಳಿಗೆ ಹಣಕಾಸು ಒದಗಿಸಲು ಬಳಸಲಾಗುವುದಿಲ್ಲ ಎಂದು ಘೋಷಿಸಲಾಯಿತು.
  4. ದೇಶಗಳು ಜಂಟಿ ಹೇಳಿಕೆಯನ್ನು ನೀಡಿದ್ದು, ಅದನ್ನು “ಅಫ್ಘಾನಿಸ್ತಾನದ ಕುರಿತು ದೆಹಲಿ ಘೋಷಣೆ” (Delhi Declaration on Afghanistan) ಎಂದು ಹೆಸರಿಸಲಾಗಿದೆ.
  5. ಘೋಷಣೆಯಲ್ಲಿ, “ಸುರಕ್ಷಿತ ಮತ್ತು ಸ್ಥಿರವಾದ ಅಫ್ಘಾನಿಸ್ತಾನ, ಭಯೋತ್ಪಾದನೆಯ ಖಂಡನೆ, ಮೂಲಭೂತ ಹಕ್ಕುಗಳನ್ನು ಖಾತರಿಪಡಿಸುವುದು, ಸಾಮೂಹಿಕ ಸಹಕಾರ ಮತ್ತು ವಿಶ್ವಸಂಸ್ಥೆಯ ಪಾತ್ರ” ದ ಮೇಲೆ ಒತ್ತು ನೀಡಲಾಗಿದೆ.

 

ಮುಂದಿನ COP ಸ್ಥಳಗಳು:

(Next COP venues)

COP26, ಯುನೈಟೆಡ್ ನೇಷನ್ಸ್ ಕ್ಲೈಮೇಟ್ ಚೇಂಜ್ ಕಾನ್ಫರೆನ್ಸ್-2021,(ಸಂಸ್ಥೆಯ ಹವಾಮಾನ ಬದಲಾವಣೆ ಸಮ್ಮೇಳನ 2021) ಇತ್ತೀಚೆಗೆ ಯುನೈಟೆಡ್ ಕಿಂಗ್‌ಡಂನ ಗ್ಲಾಸ್ಗೋದಲ್ಲಿ ಮುಕ್ತಾಯವಾಯಿತು.

ಸಮ್ಮೇಳನದ ಕೊನೆಯಲ್ಲಿ, COP27 ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಸಮ್ಮೇಳನವನ್ನು 2022 ರಲ್ಲಿ ಈಜಿಪ್ಟ್‌ನ ಶರ್ಮ್ ಎಲ್-ಶೇಖ್‌ನಲ್ಲಿ ನಡೆಸಲಾಗುವುದು ಮತ್ತು COP28 ಅನ್ನು 2023 ರಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ನಡೆಸಲಾಗುವುದು ಎಂದು ನಿರ್ಧರಿಸಲಾಯಿತು.

 

 

ಕಾಶಿ ಕಾರಿಡಾರ್ ಯೋಜನೆ.

(Kashi corridor project)

ಈ ಯೋಜನೆಯಡಿಯಲ್ಲಿ, ಕಾಶಿಯ ದೇವಾಲಯಗಳನ್ನು ಗಂಗಾನದಿಯ ಘಾಟ್‌ಗಳಿಗೆ ಸುಮಾರು 320 ಮೀಟರ್ ಉದ್ದ ಮತ್ತು 20 ಮೀಟರ್ ಅಗಲದ ಸುಸಜ್ಜಿತ ಕಾಲುದಾರಿ ಮೂಲಕ ಜೋಡಿಸಲಾಗಿದೆ.

ಯೋಜನೆಯಲ್ಲಿ, ವಸ್ತುಸಂಗ್ರಹಾಲಯ, ಗ್ರಂಥಾಲಯ, ಯಾತ್ರಾರ್ಥಿಗಳಿಗೆ ಅನುಕೂಲ ಕೇಂದ್ರ ಮತ್ತು ಮುಮುಕ್ಷ್ ಭವನ (ಮುಕ್ತಿ ಗೃಹ) ಸಹ ನಿರ್ಮಿಸಲಾಗುವುದು.

 


  • Join our Official Telegram Channel HERE for Motivation and Fast Updates
  • Subscribe to our YouTube Channel HERE to watch Motivational and New analysis videos

[ad_2]

Leave a Comment