[Mission 2022] ದೈನಂದಿನ ಪ್ರಚಲಿತ ಘಟನೆಗಳು ದಿನಾಂಕ – 13ನೇ ಅಕ್ಟೋಬರ್ 2021 – INSIGHTSIAS

[ad_1]

 

 

ಪರಿವಿಡಿ:

ಸಾಮಾನ್ಯ ಅಧ್ಯಯನ ಪತ್ರಿಕೆ 2:

1. ರಾಷ್ಟ್ರೀಯ ಹಣಕಾಸು ವರದಿ ಪ್ರಾಧಿಕಾರ (NFRA).

2. ಬಾಕಿ ಇರುವ ಆರ್‌ಟಿಐ ಮನವಿಗಳು.

3. ಅಂತರಾಷ್ಟ್ರೀಯ ಇಂಧನ ಸಂಸ್ಥೆ (IEA).

4. ಭ್ರಷ್ಟಾಚಾರ ವಿರೋಧಿ ಕಾರ್ಯ ಗುಂಪು.

5. ಕ್ವಾಡ್ ರಾಷ್ಟ್ರಗಳ ಮಲಬಾರ್ ಸಮರಾಭ್ಯಾಸ.

 

ಸಾಮಾನ್ಯ ಅಧ್ಯಯನ ಪತ್ರಿಕೆ 3:

1. ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ (ITC).

 

ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:

1. ಅಂತರಾಷ್ಟ್ರೀಯ ಹೆಣ್ಣು ಮಗುವಿನ ದಿನ.

2. ಕೇಂದ್ರ ಮೃಗಾಲಯ ಪ್ರಾಧಿಕಾರ.

 


ಸಾಮಾನ್ಯ ಅಧ್ಯಯನ ಪತ್ರಿಕೆ : 2


 

ವಿಷಯಗಳು: ಶಾಸನಬದ್ಧ, ನಿಯಂತ್ರಕ ಮತ್ತು ವಿವಿಧ ಅರೆ-ನ್ಯಾಯಾಂಗ ಸಂಸ್ಥೆಗಳು.

ರಾಷ್ಟ್ರೀಯ ಹಣಕಾಸು ವರದಿ ಪ್ರಾಧಿಕಾರ (NFRA):


(National Financial Reporting Authority (NFRA)

ಸಂದರ್ಭ:

ಕೆಲವು ಸಮಯದ ಹಿಂದೆ, ಭಾರತೀಯ ಹಣಕಾಸು ವರದಿ ಪ್ರಾಧಿಕಾರ (National Financial Reporting Authority – NFRA) ವು ಮಾಡಿದ ಶಿಫಾರಸುಗಳ ಮೇಲೆ ಚಾರ್ಟರ್ಡ್ ಅಕೌಂಟೆಂಟ್‌ಗಳ ಉನ್ನತ ಸಂಸ್ಥೆಯಾಗಿರುವ ಭಾರತೀಯ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ (The Institute of Chartered Accountants of India – ICAI) ತೀವ್ರ ಪ್ರತಿಭಟನೆಯನ್ನು ವ್ಯಕ್ತಪಡಿಸುತ್ತ ಈ ‘ಕಾವಲುಗಾರ’ ಸಂಸ್ಥೆ (watchdog)ಗೆ’ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕಂಪನಿಗಳ ‘ಮೇಲ್ವಿಚಾರಣೆ ಮಾಡುವ ಅಧಿಕಾರವಿಲ್ಲ ಎಂದು ಹೇಳಿದೆ.

ಹಿನ್ನೆಲೆ:

ನ್ಯಾಷನಲ್ ಫೈನಾನ್ಶಿಯಲ್ ರಿಪೋರ್ಟಿಂಗ್ ಅಥಾರಿಟಿ/ ಭಾರತೀಯ ಹಣಕಾಸು ವರದಿ ಪ್ರಾಧಿಕಾರವು ಮೈಕ್ರೋ, ಸ್ಮಾಲ್ ಮತ್ತು ಮೀಡಿಯಂ ಕಂಪನಿಗಳಿಗೆ (MSMCs) ಶಾಸನಬದ್ಧ ಲೆಕ್ಕಪರಿಶೋಧನೆ ಮತ್ತು ಲೆಕ್ಕಪರಿಶೋಧನೆಯ ಮಾನದಂಡಗಳ ಕುರಿತು ಸಮಾಲೋಚನಾ ಪತ್ರವನ್ನು ಸಲ್ಲಿಸಿದ ಎರಡು ವಾರಗಳ ನಂತರ ICAI ನ ಟೀಕೆಗಳು ಬಂದಿವೆ.

ರಾಷ್ಟ್ರೀಯ ಹಣಕಾಸು ವರದಿ ಪ್ರಾಧಿಕಾರದ (NFRA) ಬಗ್ಗೆ:

‘ರಾಷ್ಟ್ರೀಯ ಹಣಕಾಸು ವರದಿ ಪ್ರಾಧಿಕಾರ’ವನ್ನು ಭಾರತ ಸರ್ಕಾರವು ಕಂಪನಿಗಳ ಕಾಯಿದೆ 2013 ರ ಸೆಕ್ಷನ್ 132 (1) ರ ಅಡಿಯಲ್ಲಿ 01 ಅಕ್ಟೋಬರ್, 2018 ರಂದು ರಚಿಸಿತು.

ಅದರ ಅಗತ್ಯತೆ ಏನಿತ್ತು?

ಇದರ ಉದ್ದೇಶ ಸ್ವತಂತ್ರ ನಿಯಂತ್ರಕರನ್ನು ಸ್ಥಾಪಿಸುವುದು ಮತ್ತು ಲೆಕ್ಕಪರಿಶೋಧನೆಯ ಮಾನದಂಡಗಳನ್ನು ಜಾರಿಗೊಳಿಸುವುದು, ಲೆಕ್ಕಪರಿಶೋಧನೆಯ ಗುಣಮಟ್ಟ ಮತ್ತು ಆಡಿಟ್ ಸಂಸ್ಥೆಗಳ ಸ್ವಾತಂತ್ರ್ಯವನ್ನು ಸುಧಾರಿಸುವುದು. ಆದ್ದರಿಂದ, ಕಂಪನಿಗಳ ಆರ್ಥಿಕ ಸ್ಥಿತಿಯನ್ನು ಬಹಿರಂಗಪಡಿಸುವಲ್ಲಿ ಹೂಡಿಕೆದಾರರ ಮತ್ತು ಸಾರ್ವಜನಿಕ ಯಂತ್ರಗಳ ವಿಶ್ವಾಸವನ್ನು ಹೆಚ್ಚಿಸುವ ಅವಶ್ಯಕತೆಯಿದೆ.

NFRA ಯ ಸಂರಚನೆ:

ಕಂಪನಿಗಳ ಕಾಯಿದೆಯ ನಿಯಮಗಳ ಪ್ರಕಾರ, ರಾಷ್ಟ್ರೀಯ ಹಣಕಾಸು ವರದಿ ಪ್ರಾಧಿಕಾರವು ಅಧ್ಯಕ್ಷರನ್ನು ಹೊಂದಿರುತ್ತದೆ ಮತ್ತು 15 ಕ್ಕಿಂತ ಹೆಚ್ಚು ಸದಸ್ಯರನ್ನು ಹೊಂದಿರುವುದಿಲ್ಲ. ಅಧ್ಯಕ್ಷರನ್ನು ಕೇಂದ್ರ ಸರ್ಕಾರ ನೇಮಿಸುತ್ತದೆ.

ಕಾರ್ಯಗಳು ಮತ್ತು ಕರ್ತವ್ಯಗಳು:

  1. ಕೇಂದ್ರ ಸರ್ಕಾರದ ಅನುಮೋದನೆಗಾಗಿ ಕಂಪನಿಗಳು ಅಳವಡಿಸಿಕೊಳ್ಳುವ ಅಕೌಂಟಿಂಗ್ ಮತ್ತು ಆಡಿಟ್ ನೀತಿಗಳು ಮತ್ತು ಮಾನದಂಡಗಳನ್ನು ಶಿಫಾರಸು ಮಾಡುವುದು;
  2. ಅಕೌಂಟಿಂಗ್ ಮಾನದಂಡಗಳು ಮತ್ತು ಲೆಕ್ಕಪರಿಶೋಧನೆಯ ಮಾನದಂಡಗಳನ್ನು ಒಳಗೊಂಡಂತೆ ಅನುಸರಣೆಯನ್ನು ಮೇಲ್ವಿಚಾರಣೆ ಮಾಡಿ ಮತ್ತು ಜಾರಿಗೊಳಿಸಿ;
  3. ಅಂತಹ ಮಾನದಂಡಗಳನ್ನು ಒಳಗೊಂಡಂತೆ ಅನುಸರಣೆಯನ್ನು ಖಾತ್ರಿಪಡಿಸುವ ವ್ಯವಹಾರಗಳ ಸೇವೆಯ ಗುಣಮಟ್ಟವನ್ನು ಮೇಲ್ವಿಚಾರಣೆ ಮಾಡಿ;
  4. ಮೇಲೆ ತಿಳಿಸಿದ ಕಾರ್ಯಗಳು ಮತ್ತು ಕರ್ತವ್ಯಗಳಿಗೆ ಅಗತ್ಯವಾದ ಅಥವಾ ಪ್ರಾಸಂಗಿಕವಾದ ಇತರ ಕಾರ್ಯಗಳು ಮತ್ತು ಕರ್ತವ್ಯಗಳನ್ನು ನಿರ್ವಹಿಸುವುದು.

ಅಧಿಕಾರಗಳು:

  1. NFRA ಪಟ್ಟಿ ಮಾಡಲಾದ ಕಂಪನಿಗಳು ಮತ್ತು ಪಟ್ಟಿ ಮಾಡದ ಸಾರ್ವಜನಿಕ ಕಂಪನಿಗಳನ್ನು ತನಿಖೆ ಮಾಡಬಹುದು, ಅವರ ಪಾವತಿಸಿದ ಬಂಡವಾಳವು ಐನೂರು ಕೋಟಿ ರೂಪಾಯಿಗಳಿಗಿಂತ ಕಡಿಮೆಯಿಲ್ಲದಂತೆ ಅಥವಾ ಒಂದು ಸಾವಿರ ಕೋಟಿ ರೂಪಾಯಿಗಳಿಗಿಂತ ಕಡಿಮೆಯಿಲ್ಲದಂತೆ ವಾರ್ಷಿಕ ವಹಿವಾಟು.
  2. ಇದು ನಿಗದಿತ ವರ್ಗದ ವಾಣಿಜ್ಯ ಸಂಸ್ಥೆ ಅಥವಾ ಯಾವುದೇ ವ್ಯಕ್ತಿಗೆ ಸಂಬಂಧಿಸಿದಂತೆ ಭಾರತೀಯ ಚಾರ್ಟರ್ಡ್ ಅಕೌಂಟೆಂಟ್‌ಗಳ ಸಂಸ್ಥೆ (ಐಸಿಎಐ) ಯ ಸದಸ್ಯರು ಮಾಡಿದ ವೃತ್ತಿಪರ ದುರ್ನಡತೆಯ ಬಗ್ಗೆ ತನಿಖೆ ಮಾಡಬಹುದು.

 

ವಿಷಯಗಳು: ಆಡಳಿತ, ಪಾರದರ್ಶಕತೆ ಮತ್ತು ಹೊಣೆಗಾರಿಕೆ, ಇ-ಆಡಳಿತ – ಅನ್ವಯಗಳು, ಮಾದರಿಗಳು, ಯಶಸ್ಸುಗಳು, ಮಿತಿಗಳು ಮತ್ತು ಭವಿಷ್ಯದ ಪ್ರಮುಖ ಅಂಶಗಳು; ನಾಗರಿಕರ ಸನ್ನದುಗಳು, ಪಾರದರ್ಶಕತೆ ಮತ್ತು ಉತ್ತರದಾಯಿತ್ವ ಮತ್ತು ಸಾಂಸ್ಥಿಕ ಮತ್ತು ಇತರ ಕ್ರಮಗಳು.

ಬಾಕಿ ಇರುವ ಆರ್‌ಟಿಐ ಮನವಿಗಳು:


(Pending RTI pleas)

ಸಂದರ್ಭ:

ಇತ್ತೀಚೆಗೆ, ಭಾರತದಲ್ಲಿ ಮಾಹಿತಿ ಆಯೋಗಗಳ ಕಾರ್ಯಕ್ಷಮತೆ, 2021’ (Performance of Information Commissions in India, 2021) ವರದಿಯನ್ನು ಬಿಡುಗಡೆ ಮಾಡಲಾಗಿದೆ.

ಪ್ರಮುಖ ಸಂಶೋಧನೆಗಳು:

  1. ಕೇಂದ್ರ ಮಾಹಿತಿ ಆಯೋಗದಲ್ಲಿ (Central Information Commission – CIC) ಮೂರು ಹುದ್ದೆಗಳು ಖಾಲಿ ಉಳಿದಿದ್ದು, 10 ಆಯುಕ್ತರ ಕೆಲಸವನ್ನು ಅವರ ಸಂಪೂರ್ಣ ಸಾಮರ್ಥ್ಯಕ್ಕೆ ಅನುಗುಣವಾಗಿ ನಿಯೋಜಿಸಲಾಗಿಲ್ಲ.
  2. ಸಿಬ್ಬಂದಿ ಕೊರತೆ ಮತ್ತು ಆಯೋಗಗಳ ಅಸಮರ್ಪಕ ನಿರ್ವಹಣೆ ಎರಡರಿಂದಲೂ ಪ್ರಕರಣಗಳ ವಿಲೇವಾರಿಯಲ್ಲಿ ವಿಳಂಬವಾಗಿದೆ.
  3. ಪ್ರಸ್ತುತ ಸಿಬ್ಬಂದಿ ಸಂಖ್ಯೆಯನ್ನು ಆಧರಿಸಿ,ದೇಶದ ಹನ್ನೆರಡು ರಾಜ್ಯ ಮಾಹಿತಿ ಆಯೋಗಗಳು ಮತ್ತು ಕೇಂದ್ರ ಮಾಹಿತಿ ಆಯೋಗಕ್ಕೆ (CIC) ತಮ್ಮ ಮುಂದೆ ಸಲ್ಲಿಸಿದ ಮೇಲ್ಮನವಿಗಳನ್ನು ವಿಲೇವಾರಿ ಮಾಡಲು ಕನಿಷ್ಠ ಒಂದು ವರ್ಷ ಸಮಯ ಬೇಕಾಗುತ್ತದೆ.

ಮಾಹಿತಿ ಹಕ್ಕು ಕಾಯ್ದೆ, 2005 ಕುರಿತು:

ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ ಕಾಯ್ದೆ), 2005 ನಾಗರಿಕರ ಮಾಹಿತಿ ಹಕ್ಕಿಗೆ ಸಂಬಂಧಿಸಿದ ನಿಯಮಗಳು ಮತ್ತು ಕಾರ್ಯವಿಧಾನಗಳನ್ನು ತಿಳಿಸುತ್ತದೆ.

ಇದು, ಹಿಂದಿನ ಮಾಹಿತಿ ಸ್ವಾತಂತ್ರ್ಯ ಕಾಯ್ದೆ,(Freedom of Information Act) 2002 ಅನ್ನು ಮಾಹಿತಿ ಹಕ್ಕು ಕಾಯ್ದೆ, 2005 ರಿಂದ ಬದಲಾಯಿಸಿದೆ.

  1. ‘ಅಭಿವ್ಯಕ್ತಿ ಸ್ವಾತಂತ್ರ್ಯ’ ಎಂಬ ಭಾರತೀಯ ಸಂವಿಧಾನದಲ್ಲಿ ನೀಡಲಾಗಿರುವ ಮೂಲಭೂತ ಹಕ್ಕನ್ನು ಬಲಪಡಿಸಲು ಈ ಕಾಯ್ದೆಯನ್ನು ಜಾರಿಗೆ ತರಲಾಯಿತು. ಭಾರತೀಯ ಸಂವಿಧಾನದ 19 ನೇ ಪರಿಚ್ಛೇದದ ಅಡಿಯಲ್ಲಿ ‘ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ’ದ ಹಕ್ಕಿನಲ್ಲಿ’ ಮಾಹಿತಿ ಹಕ್ಕು ‘ಪ್ರತಿಪಾದಿಸಲ್ಪಟ್ಟಿರುವುದರಿಂದ, ಇದು ಒಂದು ಅಂತರ್ಗತ ಮೂಲಭೂತ ಹಕ್ಕು ಆಗಿದೆ.

ಪ್ರಮುಖ ನಿಬಂಧನೆಗಳು :

  1. ಆರ್‌ಟಿಐ ಕಾಯ್ದೆಯ ಸೆಕ್ಷನ್ 4 ರ ಅಡಿಯಲ್ಲಿ, ಪ್ರತಿ ಸಾರ್ವಜನಿಕ ಪ್ರಾಧಿಕಾರದಿಂದ ಮಾಹಿತಿಯನ್ನು ಸ್ವಯಂ ಪ್ರಕಟಿಸಲು ಅವಕಾಶವಿದೆ.
  2. ಆರ್‌ಟಿಐ ಕಾಯ್ದೆಯ ಸೆಕ್ಷನ್ 8 (1) ರ ಅಡಿಯಲ್ಲಿ ಮಾಹಿತಿಯನ್ನು ಒದಗಿಸುವುದರ ವಿರುದ್ಧ ವಿನಾಯಿತಿ ನೀಡಿದೆ.
  3. ಸೆಕ್ಷನ್ 8 (2) ರ ಪ್ರಕಾರ, ಸಾರ್ವಜನಿಕ ಹಿತಾಸಕ್ತಿಗೆ ಮಹತ್ವದ್ದಾದರೆ, 1923 ರ ‘ಅಧಿಕೃತ ರಹಸ್ಯ ಕಾಯ್ದೆ’ (Official Secrets Act) ಅಡಿಯಲ್ಲಿ ವಿನಾಯಿತಿ ಪಡೆದ ಮಾಹಿತಿಯನ್ನು ಪ್ರಕಟಿಸಲು ಅವಕಾಶ ಕಲ್ಪಿಸಲಾಗಿದೆ.

ಮಾಹಿತಿ ಆಯುಕ್ತರು ಮತ್ತು ಸಾರ್ವಜನಿಕ ಮಾಹಿತಿ ಅಧಿಕಾರಿ (PIOs):

  1. ಕೇಂದ್ರ ಮತ್ತು ರಾಜ್ಯ ಮಟ್ಟದಲ್ಲಿ ಮಾಹಿತಿ ಆಯುಕ್ತರ ನೇಮಕಕ್ಕೆ ಈ ಕಾಯ್ದೆ ಅವಕಾಶ ನೀಡುತ್ತದೆ.
  2. ಅದರ ಕೆಲವು ಅಧಿಕಾರಿಗಳನ್ನು ಸಾರ್ವಜನಿಕ ಅಧಿಕಾರಿಗಳು ‘ಸಾರ್ವಜನಿಕ ಮಾಹಿತಿ ಅಧಿಕಾರಿಗಳು’ (PIOs) ಗಳನ್ನಾಗಿ ನೇಮಿಸುತ್ತಾರೆ. RTI ಕಾಯ್ದೆಯಡಿ ಮಾಹಿತಿ ಪಡೆಯುವ ವ್ಯಕ್ತಿಗೆ ಮಾಹಿತಿ ನೀಡುವ ಜವಾಬ್ದಾರಿ ಈ ಅಧಿಕಾರಿಗಳ ಮೇಲಿದೆ.

ಸಮಯಮಿತಿ:

ಸಾಮಾನ್ಯವಾಗಿ, ಸಾರ್ವಜನಿಕ ಪ್ರಾಧಿಕಾರವು ಅರ್ಜಿಯನ್ನು ಸ್ವೀಕರಿಸಿದ 30 ದಿನಗಳಲ್ಲಿ ಮಾಹಿತಿಯನ್ನು ಒದಗಿಸುವುದು ಕಡ್ಡಾಯವಾಗಿದೆ.

  1. ಕೋರಿದ ಮಾಹಿತಿಯು ವ್ಯಕ್ತಿಯ ಜೀವನ ಅಥವಾ ಸ್ವಾತಂತ್ರ್ಯಕ್ಕೆ ಸಂಬಂಧಪಟ್ಟರೆ, ಅದನ್ನು 48 ಗಂಟೆಗಳ ಒಳಗೆ ಒದಗಿಸಲಾಗುತ್ತದೆ.
  2. ಅರ್ಜಿಯನ್ನು ಸಹಾಯಕ ಸಾರ್ವಜನಿಕ ಮಾಹಿತಿ (Public Information Officer- PIO) ಅಧಿಕಾರಿ ಮೂಲಕ ಕಳುಹಿಸಿದರೆ ಅಥವಾ ತಪ್ಪಾದ ಸಾರ್ವಜನಿಕ ಪ್ರಾಧಿಕಾರಕ್ಕೆ ಕಳುಹಿಸಿದರೆ, ಮಾಹಿತಿಯನ್ನು ಒದಗಿಸಲು ನಿಗದಿತ ಮೂವತ್ತು ದಿನಗಳು ಅಥವಾ 48 ಗಂಟೆಗಳ ಅವಧಿಯಲ್ಲಿ ಐದು ದಿನಗಳ ಹೆಚ್ಚುವರಿ ಸಮಯವನ್ನು ಸೇರಿಸಲಾಗುತ್ತದೆ.

ಮಾಹಿತಿ ಹಕ್ಕು ಕಾಯ್ದೆಯ ಅನ್ವಯಿಸುವಿಕೆ:

ಖಾಸಗಿ ಸಂಸ್ಥೆಗಳು: (Private bodies)

ಖಾಸಗಿ ಸಂಸ್ಥೆಗಳು ನೇರವಾಗಿ ‘ಮಾಹಿತಿ ಹಕ್ಕು ಕಾಯ್ದೆ’ ವ್ಯಾಪ್ತಿಗೆ ಬರುವುದಿಲ್ಲ.

ಸರಬ್ಜಿತ್ ರಾಯ್ vs ದೆಹಲಿ ವಿದ್ಯುತ್ ನಿಯಂತ್ರಣ ಆಯೋಗದ ತೀರ್ಪಿನಲ್ಲಿ, ಕೇಂದ್ರೀಕೃತ ಮಾಹಿತಿ ಆಯೋಗವು ಖಾಸಗೀಕರಣಗೊಂಡ ಸಾರ್ವಜನಿಕ ಉಪಯುಕ್ತತೆ ಕಂಪನಿಗಳನ್ನು (privatised public utility companies ) ಆರ್‌ಟಿಐ ವ್ಯಾಪ್ತಿಗೆ ಒಳಪಡಿಸಲಾಗಿದೆ ಎಂದು ದೃಢಪಡಿಸಿತು.

ರಾಜಕೀಯ ಪಕ್ಷಗಳು:

ಕೇಂದ್ರ ಮಾಹಿತಿ ಆಯೋಗದ (CIC) ಪ್ರಕಾರ, ರಾಜಕೀಯ ಪಕ್ಷಗಳು ‘ಸಾರ್ವಜನಿಕ ಪ್ರಾಧಿಕಾರಗಳು’ ಮತ್ತು ಆರ್‌ಟಿಐ ಕಾಯ್ದೆಯಡಿ ನಾಗರಿಕರಿಗೆ ಜವಾಬ್ದಾರರಾಗಿರುತ್ತವೆ.

ಆದಾಗ್ಯೂ, ಆಗಸ್ಟ್ 2013 ರಲ್ಲಿ ಸರ್ಕಾರವು ‘ಮಾಹಿತಿ ಹಕ್ಕು (ತಿದ್ದುಪಡಿ) ಮಸೂದೆಯನ್ನು ಜಾರಿಗೆ ತಂದಿತು, ಇದು ರಾಜಕೀಯ ಪಕ್ಷಗಳನ್ನು ಕಾಯಿದೆಯ ವ್ಯಾಪ್ತಿಯಿಂದ ಹೊರಗಿಡಲು ಅವಕಾಶ ನೀಡುತ್ತದೆ.

  1. ಪ್ರಸ್ತುತ ಯಾವುದೇ ರಾಜಕೀಯ ಪಕ್ಷವು ಆರ್‌ಟಿಐ ಕಾಯ್ದೆಯ ವ್ಯಾಪ್ತಿಯಲ್ಲಿ ಇಲ್ಲ, ಆದರೆ ಎಲ್ಲಾ ರಾಜಕೀಯ ಪಕ್ಷಗಳನ್ನು ಆರ್‌ಟಿಐ ಕಾಯ್ದೆಯಡಿ ತರಲು ಪ್ರಕರಣ ದಾಖಲಿಸಲಾಗಿದೆ.

ಭಾರತದ ಮುಖ್ಯ ನ್ಯಾಯಮೂರ್ತಿ:

ಭಾರತದ ಮುಖ್ಯ ನ್ಯಾಯಮೂರ್ತಿ ಹುದ್ದೆಯನ್ನು ಮಾಹಿತಿ ಹಕ್ಕು (RTI) ಕಾಯ್ದೆಯ ವ್ಯಾಪ್ತಿಗೆ ತರುವ ದೆಹಲಿ ಹೈಕೋರ್ಟ್‌ನ ನಿರ್ಧಾರವನ್ನು ಭಾರತದ ಸುಪ್ರೀಂ ಕೋರ್ಟ್ 2019 ರ ನವೆಂಬರ್ 13 ರಂದು ಎತ್ತಿಹಿಡಿದಿದೆ.

 

2019 ರ RTI ತಿದ್ದುಪಡಿ ಕಾಯ್ದೆ  (RTI Amendment Act of 2019):

  1. ಮಾಹಿತಿ ಆಯುಕ್ತರ ವೇತನ ಮತ್ತು ಸೇವಾ ಪರಿಸ್ಥಿತಿಗಳನ್ನು ಕೇಂದ್ರ ಮಟ್ಟದಲ್ಲಿ ಮತ್ತು ರಾಜ್ಯ ಮಟ್ಟದಲ್ಲಿ ನಿರ್ಧರಿಸುವ ಅಧಿಕಾರ ಕೇಂದ್ರಕ್ಕೆ ಇರುತ್ತದೆ.
  2. ಕೇಂದ್ರ ಮುಖ್ಯ ಮಾಹಿತಿ ಆಯುಕ್ತರು ಮತ್ತು ಮಾಹಿತಿ ಆಯುಕ್ತರ ಅಧಿಕಾರಾವಧಿ: ಅವರ ನೇಮಕಾತಿ “ಕೇಂದ್ರ ಸರ್ಕಾರವು ನಿರ್ಧರಿಸುವ ಅವಧಿಗೆ” ಇರುತ್ತದೆ.
  3. ಮೂಲ ಕಾಯಿದೆಯಲ್ಲಿ, ರಾಜ್ಯದ ಮುಖ್ಯ ಮಾಹಿತಿ ಆಯುಕ್ತರ ವೇತನಗಳು, ಭತ್ಯೆಗಳು ಮತ್ತು ಸೇವೆಯ ಷರತ್ತುಗಳನ್ನು “ಚುನಾವಣಾ ಆಯುಕ್ತರಂತೆಯೇ” ಮತ್ತು ರಾಜ್ಯ ಮಾಹಿತಿ ಆಯುಕ್ತರ ವೇತನ ಮತ್ತು ಇತರ ಸೇವಾ ಷರತ್ತುಗಳನ್ನು “ಅದೇ ರೀತಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ” ಅವರಿಗೆ ಇರುವಂತೆ ಇರತಕ್ಕದ್ದು. ಈ ಕಾನೂನು ತಿದ್ದುಪಡಿಗಳು ಅವರ ಸಂಬಳ ಮತ್ತು ಸೇವಾ ಪರಿಸ್ಥಿತಿಗಳನ್ನು ‘ಕೇಂದ್ರ ಸರ್ಕಾರ ನಿರ್ಧರಿಸಿದಂತೆ ಇರುತ್ತವೆ’ ಎಂದು ಸೂಚಿಸುತ್ತವೆ.

 

ಈ ತಿದ್ದುಪಡಿಗಳನ್ನು ಏಕೆ ಟೀಕಿಸಲಾಗುತ್ತಿದೆ?

  1. ಈ ತಿದ್ದುಪಡಿಗಳನ್ನು ಕೇಂದ್ರ ಮಾಹಿತಿ ಆಯುಕ್ತರ ‘ಸ್ವಾತಂತ್ರ್ಯಕ್ಕೆ ಬೆದರಿಕೆ’ ಎಂದು ನೋಡಲಾಗುತ್ತದೆ.
  2. ಪ್ರಸ್ತುತ, ಮುಖ್ಯ ಮಾಹಿತಿ ಆಯುಕ್ತರು, ಮಾಹಿತಿ ಆಯುಕ್ತರು ಮತ್ತು ರಾಜ್ಯ ಮುಖ್ಯ ಮಾಹಿತಿ ಆಯುಕ್ತರು ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರಂತೆಯೇ ಸ್ಥಾನಮಾನವನ್ನು ಪಡೆಯುತ್ತಾರೆ. ಆದರೆ ಈ ತಿದ್ದುಪಡಿ ಗಳಿಂದ ಅವರ ಸ್ಥಾನಮಾನವನ್ನು ಕಡಿಮೆ ಮಾಡುವುದರಿಂದ ಸರ್ಕಾರದ ಹಿರಿಯ ಅಧಿಕಾರಿಗಳಿಗೆ ನಿರ್ದೇಶನಗಳನ್ನು ನೀಡುವ ಅವರ ಸಾಮರ್ಥ್ಯವು ಕಡಿಮೆಯಾಗುತ್ತದೆ.
  3. ತಿದ್ದುಪಡಿಯಡಿಯಲ್ಲಿ, ಕೇಂದ್ರ ಮುಖ್ಯ ಮಾಹಿತಿ ಆಯುಕ್ತರು ಮತ್ತು ಇತರ ಮಾಹಿತಿ ಆಯುಕ್ತರ ಅಧಿಕಾರಾವಧಿ, ಸಂಬಳ, ಭತ್ಯೆಗಳು ಮತ್ತು ಸೇವೆಯ ಇತರ ಷರತ್ತುಗಳನ್ನು ನಿರ್ಧರಿಸಲು ಕೇಂದ್ರ ಸರ್ಕಾರಕ್ಕೆ ಅಧಿಕಾರ ನೀಡಲಾಗಿದೆ.
  4. ಇದು ಮಾಹಿತಿ ಆಯೋಗದ ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ಸಾಮರ್ಥ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ, ಮತ್ತು ಈ ಮಾಹಿತಿ ಆಯೋಗ ಸಂಸ್ಥೆಯನ್ನು ಆಮೂಲಾಗ್ರವಾಗಿ ದುರ್ಬಲಗೊಳಿಸುತ್ತದೆ.
  5. ಈ ಮಸೂದೆಯ ಬಗ್ಗೆ ಸರ್ಕಾರದಿಂದ ಯಾವುದೇ ಸಾರ್ವಜನಿಕ ಸಮಾಲೋಚನೆ ನಡೆದಿಲ್ಲ.

ತಿದ್ದುಪಡಿಯನ್ನು ಅನುಷ್ಠಾನಗೊಳಿಸಲು ಸರ್ಕಾರ ನೀಡಿದ ಕಾರಣಗಳು:

‘ಆರ್‌ಟಿಐ ಕಾಯ್ದೆ’ ತಿದ್ದುಪಡಿಯ ಉದ್ದೇಶವು, “ಭಾರತದ ಚುನಾವಣಾ ಆಯೋಗ ಮತ್ತು ಕೇಂದ್ರ ಮತ್ತು ರಾಜ್ಯ ಮಾಹಿತಿ ಆಯೋಗಗಳ ಆದೇಶವು ವಿಭಿನ್ನವಾಗಿದೆ ಎಂದು ಹೇಳುತ್ತದೆ. ಆದ್ದರಿಂದ, ಅವರ ಸ್ಥಾನಮಾನ ಮತ್ತು ಸೇವಾ ನಿಯಮಗಳನ್ನು ಸಂದರ್ಭಕ್ಕೆ ತಕ್ಕಂತೆ ತರ್ಕಬದ್ಧಗೊಳಿಸುವ ಅವಶ್ಯಕತೆಯಿದೆ”.

  1. ಮುಖ್ಯ ಮಾಹಿತಿ ಆಯುಕ್ತರಿಗೆ (CIC) ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರ ಸ್ಥಾನಮಾನ ನೀಡಲಾಗಿದೆ, ಆದರೆ ಅವರ ತೀರ್ಪುಗಳನ್ನು ಹೈಕೋರ್ಟ್‌ಗಳಲ್ಲಿ ಪ್ರಶ್ನಿಸಬಹುದಾಗಿದೆ.
  2. ಆದ್ದರಿಂದ ಮಾಹಿತಿ ಹಕ್ಕು ಕಾಯ್ದೆ (RTI ACT)ಯಲ್ಲಿನ ಕೆಲವು ವ್ಯತ್ಯಾಸಗಳನ್ನು ಸರಿಪಡಿಸಲು ಈ ತಿದ್ದುಪಡಿಯನ್ನು ತರಲಾಗಿದೆ. ಈ ತಿದ್ದುಪಡಿಗಳು 2005 ರಲ್ಲಿ ತರಾತುರಿಯಲ್ಲಿ ಅಂಗೀಕರಿಸಿದ ಕಾಯಿದೆಯನ್ನು ದುರ್ಬಲಗೊಳಿಸುವುದಿಲ್ಲ. RTI ತಿದ್ದುಪಡಿಗಳು ಒಟ್ಟಾರೆಯಾಗಿ RTI ರಚನೆಯನ್ನು ಬಲಪಡಿಸುತ್ತದೆ.

 

ವಿಷಯಗಳು: ಪ್ರಮುಖ ಅಂತರರಾಷ್ಟ್ರೀಯ ಸಂಸ್ಥೆಗಳು, ಏಜೆನ್ಸಿಗಳು ಮತ್ತು ವೇದಿಕೆಗಳು, ಅವುಗಳ ರಚನೆ, ಮತ್ತು ಆದೇಶ.

ಅಂತರರಾಷ್ಟ್ರೀಯ ಇಂಧನ ಸಂಸ್ಥೆ: (IEA)


International Energy Agency:

ಸಂದರ್ಭ:

ಇತ್ತೀಚೆಗೆ, ಅಂತಾರಾಷ್ಟ್ರೀಯ ಇಂಧನ ಸಂಸ್ಥೆ (International Energy Agency – IEA) ಯು ವಿಶ್ವದ ಮೂರನೇ ಅತಿದೊಡ್ಡ ಇಂಧನ ಬಳಕೆದಾರ ದೇಶವಾದ ‘ಭಾರತ’ವನ್ನು IEA ಯ ಪೂರ್ಣಾವಧಿ ಸದಸ್ಯನಾಗಲು ಆಮಂತ್ರಣ ನೀಡಿದೆ.

ಪರಿಣಾಮಗಳು:

ಈ ಪ್ರಸ್ತಾವನೆಯನ್ನು ಭಾರತ ಸರ್ಕಾರವು ಒಪ್ಪಿಕೊಂಡರೆ, ನವದೆಹಲಿಯು, ಕಾರ್ಯತಂತ್ರದ / ಆಯಕಟ್ಟಿನ ತನ್ನ ತೈಲ ನಿಕ್ಷೇಪ(Strategic Oil Reserves) ವನ್ನು 90 ದಿನಗಳ ಪೂರೈಕೆಗೆ ಸಮನಾಗಿ ಹೆಚ್ಚಿಸಬೇಕಾಗುತ್ತದೆ. ಭಾರತದ ಪ್ರಸ್ತುತ ಕಾರ್ಯತಂತ್ರದ ತೈಲ ನಿಕ್ಷೇಪಗಳು ಅದರ ಅವಶ್ಯಕತೆಯ 9.5 ದಿನಗಳ ಪೂರೈಕೆಗೆ ಸಮಾನವಾಗಿದೆ.

ಹಿನ್ನೆಲೆ:

ಮಾರ್ಚ್ 2017 ರಲ್ಲಿ ಭಾರತವು ಅಂತಾರಾಷ್ಟ್ರೀಯ ಇಂಧನ ಏಜೆನ್ಸಿಯ (IEA) ಸಹ ಸದಸ್ಯತ್ವ ಪಡೆಯಿತು.

ಅಂತಾರಾಷ್ಟ್ರೀಯ ಇಂಧನ ಸಂಸ್ಥೆಯ ಕುರಿತು :

  1. ಅಂತಾರಾಷ್ಟ್ರೀಯ ಇಂಧನ ಸಂಸ್ಥೆಯು (IEA) ಅಂತರ್ ಸರ್ಕಾರಿ ಸ್ವಾಯತ್ತ ಸಂಸ್ಥೆಯಾಗಿದ್ದು ಇದನ್ನು ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿಗಾಗಿನ ಸಂಘಟನೆಯ (Organisation of Economic Cooperation and Development- OECD) ಫ್ರೇಮ್ವರ್ಕ್ ಪ್ರಕಾರ ಇದನ್ನು 1974 ರಲ್ಲಿ ಸ್ಥಾಪಿಸಲಾಯಿತು.
  2. ಅದರ ಕಾರ್ಯೋದ್ದೇಶವು ಮುಖ್ಯವಾಗಿ ನಾಲ್ಕು ಪ್ರಮುಖ ಕ್ಷೇತ್ರಗಳ ಮೇಲೆ ಕೇಂದ್ರೀಕರಿಸಿದೆ: ಇಂಧನ ಸುರಕ್ಷತೆ, ಆರ್ಥಿಕ ಅಭಿವೃದ್ಧಿ, ಪರಿಸರ ಜಾಗೃತಿ ಮತ್ತು ಜಾಗತಿಕ ಭಾಗವಹಿಸುವಿಕೆ.
  3. ಇದರ ಪ್ರಧಾನ ಕಚೇರಿಯು ( ಸಚಿವಾಲಯ) ಫ್ರಾನ್ಸ್‌ನ ಪ್ಯಾರಿಸ್‌ನಲ್ಲಿದೆ.

ಅದರ ಪಾತ್ರಗಳು ಮತ್ತು ಕಾರ್ಯಗಳು:

  1. 1973-1974ರ ತೈಲ ಬಿಕ್ಕಟ್ಟಿನ ಸಂದರ್ಭದಲ್ಲಿ ಅದರ ಸದಸ್ಯರಿಗೆ ಪ್ರಮುಖ ತೈಲ ಪೂರೈಕೆ ಅಡಚಣೆ ಗಳಿಗೆ ಸ್ಪಂದಿಸಲು ಅಂತರರಾಷ್ಟ್ರೀಯ ಇಂಧನ ಏಜೆನ್ಸಿಯನ್ನು ಸ್ಥಾಪಿಸಲಾಯಿತು. ಅದು ಇಂದಿಗೂ ತನ್ನ ಪಾತ್ರವನ್ನು ನಿರ್ವಹಿಸುತ್ತಿದೆ.
  2. ಜಾಗತಿಕವಾಗಿ ಪ್ರಮುಖ ಇಂಧನ ಪ್ರವೃತ್ತಿಗಳನ್ನು ಪತ್ತೆಹಚ್ಚುವುದು ಮತ್ತು ವಿಶ್ಲೇಷಿಸುವುದು, ಬಲವಾದ ಇಂಧನ ನೀತಿಗಳನ್ನು ಉತ್ತೇಜಿಸುವುದು ಮತ್ತು ಬಹುರಾಷ್ಟ್ರೀಯ ಇಂಧನ ತಂತ್ರಜ್ಞಾನ ಸಹಕಾರವನ್ನು ಉತ್ತೇಜಿಸಲು ಅಂತರರಾಷ್ಟ್ರೀಯ ಇಂಧನ ಸಂಸ್ಥೆ (IEA) ಆದೇಶವು ಕಾಲಾನಂತರದಲ್ಲಿ ವಿಸ್ತರಿಸಿದೆ.

IEA ಸಂಯೋಜನೆ ಮತ್ತು ಸದಸ್ಯತ್ವದ ಅರ್ಹತೆ:

Composition and eligibility:

  1. ಅಂತರರಾಷ್ಟ್ರೀಯ ಇಂಧನ ಸಂಸ್ಥೆ ಪ್ರಸ್ತುತ 30 ಸದಸ್ಯ ರಾಷ್ಟ್ರಗಳು ಮತ್ತು ಎಂಟು ಪಾಲುದಾರ ರಾಷ್ಟ್ರಗಳನ್ನು ಒಳಗೊಂಡಿದೆ. ಸದಸ್ಯರಾಗಲು, ದೇಶವೊಂದು ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಸ್ಥೆ (OECD) ಯಲ್ಲಿ ಸದಸ್ಯರಾಗುವುದು ಕಡ್ಡಾಯವಾಗಿದೆ. ಆದಾಗ್ಯೂ OECD ಯ ಎಲ್ಲಾ ಸದಸ್ಯರು IEA ಸದಸ್ಯರಲ್ಲ.
  2. ಅಂತರರಾಷ್ಟ್ರೀಯ ಇಂಧನ ಏಜೆನ್ಸಿಯ ಸದಸ್ಯತ್ವಕ್ಕಾಗಿ ಒಂದು ದೇಶವು ಈ ಕೆಳಗಿನ ಷರತ್ತುಗಳನ್ನು ಪೂರೈಸಬೇಕು:
  3. ಹಿಂದಿನ ವರ್ಷದ 90 ದಿನಗಳಲ್ಲಿ ಮಾಡಿದ ನಿವ್ವಳ ಆಮದಿಗೆ ಸಮನಾದ ಕಚ್ಚಾ ತೈಲ ಮತ್ತು / ಅಥವಾ ಉತ್ಪನ್ನ ನಿಕ್ಷೇಪಗಳನ್ನು ದೇಶದ ಸರ್ಕಾರವು ಹೊಂದಿರಬೇಕು. ಇವು ನೇರವಾಗಿ ಸರ್ಕಾರದ ಒಡೆತನದಲ್ಲಿಲ್ಲದಿದ್ದರೂ, ಜಾಗತಿಕ ತೈಲ ಪೂರೈಕೆಯಲ್ಲಿನ ಅಡೆತಡೆಯನ್ನು ನಿವಾರಿಸಲು ಇದನ್ನು ಬಳಸಬಹುದು.
  4. ದೇಶದಲ್ಲಿ ರಾಷ್ಟ್ರೀಯ ತೈಲ ಬಳಕೆಯನ್ನು 10% ರಷ್ಟು ಕಡಿಮೆ ಮಾಡಲು ‘ಬೇಡಿಕೆ ನಿಯಂತ್ರಣ ಕಾರ್ಯಕ್ರಮ’ ವನ್ನು ಜಾರಿಗೆ ತರಬೇಕು.
  5. ರಾಷ್ಟ್ರೀಯ ಆಧಾರಿತವಾಗಿ ಸಂಘಟಿತ ತುರ್ತು ಪ್ರತಿಕ್ರಿಯೆ ಕ್ರಮಗಳನ್ನು (Co-ordinated Emergency Response Measures- CERM) ಜಾರಿಗೆ ತರಲು ಶಾಸನ ಸಂಸ್ಥೆಗಳು ಇರಬೇಕು.
  6. ಕೋರಿಕೆಯ ಮೇರೆಗೆ, ದೇಶದ ವ್ಯಾಪ್ತಿಯಲ್ಲಿ ಕೆಲಸ ಮಾಡುವ ಎಲ್ಲಾ ತೈಲ ಕಂಪನಿಗಳು ಮಾಹಿತಿ ನೀಡುತ್ತಿವೆಯೇ ಎಂದು ಖಚಿತಪಡಿಸಿಕೊಳ್ಳಲು ಕಾನೂನು ಕ್ರಮಗಳು ಇರಬೇಕು.
  7. ಅಂತರರಾಷ್ಟ್ರೀಯ ಇಂಧನ ಏಜೆನ್ಸಿಯ ಸಾಮೂಹಿಕ ಕ್ರಮಕ್ಕೆ ಅದರ ಕೊಡುಗೆ ನೀಡುವುದನ್ನು ಖಚಿತಪಡಿಸಿಕೊಳ್ಳಲು ದೇಶದಲ್ಲಿ ಕಾನೂನುಗಳು ಅಥವಾ ಕ್ರಮಗಳು ಇರಬೇಕು.

ಅಂತರರಾಷ್ಟ್ರೀಯ ಇಂಧನ ಸಂಸ್ಥೆ ಪ್ರಕಟಿಸುವ ವರದಿಗಳು:

  1. ಜಾಗತಿಕ ಇಂಧನ ಮತ್ತು ಇಂಗಾಲದ ಡೈ ಆಕ್ಸೈಡ್ (CO2) ಸ್ಥಿತಿ ವರದಿ.(Global Energy & CO2 Status Report)
  2. ವಿಶ್ವ ಇಂಧನ ಮುನ್ನೋಟ.(World Energy Outlook)
  3. ವಿಶ್ವ ಇಂಧನ ಅಂಕಿಅಂಶಗಳು.(World Energy Statistics)
  4. ವಿಶ್ವ ಇಂಧನ ಸಮತೋಲನ.(World Energy Balances)
  5. ಇಂಧನ ತಂತ್ರಜ್ಞಾನದ ದೃಷ್ಟಿಕೋನಗಳು.(Energy Technology Perspectives)

 

ವಿಷಯಗಳು: ಪ್ರಮುಖ ಅಂತರರಾಷ್ಟ್ರೀಯ ಸಂಸ್ಥೆಗಳು, ಏಜೆನ್ಸಿಗಳು ಮತ್ತು ವೇದಿಕೆಗಳು, ಅವುಗಳ ರಚನೆ, ಮತ್ತು ಆದೇಶ.

ಭ್ರಷ್ಟಾಚಾರ ವಿರೋಧಿ ಕಾರ್ಯ ಗುಂಪು:


(The Anti-Corruption Working Group)

ಸಂದರ್ಭ:

G 20 ರ ಭ್ರಷ್ಟಾಚಾರ ವಿರೋಧಿ ಕಾರ್ಯ ಗುಂಪು (Anti-corruption Working Group – ACWG) ಭ್ರಷ್ಟಾಚಾರ ತಡೆಗಟ್ಟುವಿಕೆ ಮತ್ತು ಎದುರಿಸಲು ‘ಉನ್ನತ ಮಟ್ಟದ ತತ್ವಗಳ ಕರಡು’ ಕುರಿತು ಒಮ್ಮತವನ್ನು ತಲುಪಿದೆ.ಇತ್ತೀಚೆಗೆ, ‘ಭ್ರಷ್ಟಾಚಾರ ವಿರೋಧಿ ವರ್ಕಿಂಗ್ ಗ್ರೂಪ್’ ತನ್ನ ಆದೇಶದಲ್ಲಿ ಮೊದಲ ಬಾರಿಗೆ ‘ಸ್ಪೋರ್ಟ್ಸ್’ / ಕ್ರೀಡೆಯನ್ನು ನಿರ್ಧಿಷ್ಟತೆಯನ್ನಾಗಿ ಸೇರಿಸಿದೆ.

ಭ್ರಷ್ಟಾಚಾರ ವಿರೋಧಿ ವರ್ಕಿಂಗ್ ಗ್ರೂಪ್ ಬಗ್ಗೆ:

ಭ್ರಷ್ಟಾಚಾರ ವಿರೋಧಿ ಕಾರ್ಯ ಗುಂಪು (ACWG) ಅನ್ನು 2010 ರಲ್ಲಿ ಟೊರೊಂಟೊ ಶೃಂಗಸಭೆಯಲ್ಲಿ G20 ಗುಂಪಿನ ನಾಯಕರು ರಚಿಸಿದರು.

  1. ಇದು ಜಿ 20 ಭ್ರಷ್ಟಾಚಾರ ವಿರೋಧಿ ಕ್ರಿಯಾ ಯೋಜನೆಗಳನ್ನು ನವೀಕರಿಸುವ ಮತ್ತು ಅನುಷ್ಠಾನಗೊಳಿಸುವ ಜವಾಬ್ದಾರಿಯನ್ನು ಹೊಂದಿದೆ.
  2. ಈ ಕಾರ್ಯಕಾರಿ ಗುಂಪು ಜಿ 20 ನಾಯಕರಿಗೆ ವರದಿ ಸಲ್ಲಿಸುವ ಹೊಣೆ ಹೊತ್ತಿದೆ.
  3. ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಸ್ಥೆ, ವಿಶ್ವಸಂಸ್ಥೆ, ವಿಶ್ವ ಬ್ಯಾಂಕ್, ಅಂತರಾಷ್ಟ್ರೀಯ ಹಣಕಾಸು ನಿಧಿ ಮತ್ತು ಹಣಕಾಸು ಕ್ರಿಯಾ ಕಾರ್ಯಪಡೆ ಸೇರಿದಂತೆ ಸಂಬಂಧಿತ ಅಂತರಾಷ್ಟ್ರೀಯ ಸಂಸ್ಥೆಗಳ ಕೆಲಸಕ್ಕೆ ACWG ಸಹಕಾರ ನೀಡುತ್ತದೆ.

G 20 ಗುಂಪಿನ ಬಗ್ಗೆ:

ಜಿ 20 ವಿಶ್ವದ ಅತಿದೊಡ್ಡ ಮತ್ತು ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯನ್ನು ಹೊಂದಿರುವ ದೇಶಗಳ ನಾಯಕರ ಗುಂಪಾಗಿದೆ.

  1. ಈ ಗುಂಪು ವಿಶ್ವದ ಜಿಡಿಪಿಯ 85 ಪ್ರತಿಶತವನ್ನು ಹೊಂದಿದೆ ಮತ್ತು ವಿಶ್ವದ ಜನಸಂಖ್ಯೆಯ ಮೂರನೇ ಎರಡರಷ್ಟನ್ನು ಪ್ರತಿನಿಧಿಸುತ್ತದೆ.
  2. ಜಿ 20 ಶೃಂಗಸಭೆಯನ್ನು ಔಪಚಾರಿಕವಾಗಿ ಹಣಕಾಸು ಮಾರುಕಟ್ಟೆಗಳು ಮತ್ತು ಜಾಗತಿಕ ಆರ್ಥಿಕತೆಯ ಶೃಂಗಸಭೆ’ ಎಂದು ಕರೆಯಲಾಗುತ್ತದೆ.

G 20 ಸಂಘಟನೆಯ ಮೂಲ:

  1. 1997-98ರ ಏಷ್ಯನ್ ಆರ್ಥಿಕ ಬಿಕ್ಕಟ್ಟಿನ ನಂತರ, ಪ್ರಮುಖ ಉದಯೋನ್ಮುಖ ಆರ್ಥಿಕತೆಗಳಿಗೆ ಅಂತರರಾಷ್ಟ್ರೀಯ ಹಣಕಾಸು ವ್ಯವಸ್ಥೆಯ ಕುರಿತು ಚರ್ಚೆಗಳಲ್ಲಿ ಭಾಗವಹಿಸುವಿಕೆ ಅಗತ್ಯವೆಂದು ಗುರುತಿಸಲಾಯಿತು.
  2. 1999 ರಲ್ಲಿ, ಜಿ 20 ಹಣಕಾಸು ಮಂತ್ರಿಗಳು ಮತ್ತು ಕೇಂದ್ರ ಬ್ಯಾಂಕ್ ಗವರ್ನರ್‌ಗಳ ಸಭೆಯನ್ನು ಅನುಷ್ಠಾನಕ್ಕೆ ತರಲು ಜಿ 7 ಹಣಕಾಸು ಮಂತ್ರಿಗಳು ಒಪ್ಪಿಕೊಂಡರು.

G20 ರ ಪೂರ್ಣ ಸದಸ್ಯ ರಾಷ್ಟ್ರಗಳು:

ಅರ್ಜೆಂಟೀನಾ, ಆಸ್ಟ್ರೇಲಿಯಾ, ಬ್ರೆಜಿಲ್, ಕೆನಡಾ, ಚೀನಾ, ಫ್ರಾನ್ಸ್, ಜರ್ಮನಿ, ಭಾರತ, ಇಂಡೋನೇಷ್ಯಾ, ಇಟಲಿ, ಜಪಾನ್, ಮೆಕ್ಸಿಕೋ, ರಷ್ಯಾ, ಸೌದಿ ಅರೇಬಿಯಾ, ದಕ್ಷಿಣ ಆಫ್ರಿಕಾ, ದಕ್ಷಿಣ ಕೊರಿಯಾ, ಟರ್ಕಿ, ಯುನೈಟೆಡ್ ಕಿಂಗ್‌ಡಮ್, ಯುನೈಟೆಡ್ ಸ್ಟೇಟ್ಸ್ ಮತ್ತು ಯುರೋಪಿಯನ್ ಯೂನಿಯನ್.

‘G 20+’ ಎಂದರೇನು?

ಜಿ 20 ಅಭಿವೃದ್ಧಿಶೀಲ ರಾಷ್ಟ್ರಗಳು, ಈ ಸಂಘಟನೆಯನ್ನು G21 / G23 / G20 +ಎಂದೂ ಕರೆಯುತ್ತಾರೆ, ಆಗಸ್ಟ್ 20, 2003 ರಂದು ಸ್ಥಾಪಿತವಾದ ಅಭಿವೃದ್ಧಿಶೀಲ ರಾಷ್ಟ್ರಗಳ ಒಂದು ಗುಂಪು. ಇದು ಜಿ 20 ಪ್ರಮುಖ ಆರ್ಥಿಕತೆಗಳಿಗಿಂತ ಭಿನ್ನವಾಗಿದೆ.

  1. ಸೆಪ್ಟೆಂಬರ್ 2003 ರಲ್ಲಿ ಮೆಕ್ಸಿಕೋದ ಕ್ಯಾಂಕನ್ ನಲ್ಲಿ ನಡೆದ ವಿಶ್ವ ವ್ಯಾಪಾರ ಸಂಘಟನೆಯ ಐದನೇ ಮಂತ್ರಿ ಸಮ್ಮೇಳನದಲ್ಲಿ G20+ ಹುಟ್ಟಿಕೊಂಡಿತು.
  2. ಇದರ ಸ್ಥಾಪನೆಯ ಮೂಲವು ಭಾರತ, ಬ್ರೆಜಿಲ್ ಮತ್ತು ದಕ್ಷಿಣ ಆಫ್ರಿಕಾದ ವಿದೇಶಾಂಗ ಮಂತ್ರಿಗಳು 6 ಜೂನ್ 2003 ರಂದು ಸಹಿ ಹಾಕಿದ ಬ್ರೆಸಿಲಿಯಾ ಘೋಷಣೆಯೊಂದಿಗೆ ಗುರುತಿಸಬಹುದಾಗಿದೆ.
  3. ಜಿ 20+’ ವಿಶ್ವದ ಜನಸಂಖ್ಯೆಯ 60%, ಕೃಷಿ ರಫ್ತುಗಳ 26% ಮತ್ತು 70% ರೈತರನ್ನು ಪ್ರತಿನಿಧಿಸುತ್ತದೆ.

g20_g8_g7

 

ವಿಷಯಗಳು: ಪ್ರಮುಖ ಅಂತರರಾಷ್ಟ್ರೀಯ ಸಂಸ್ಥೆಗಳು, ಏಜೆನ್ಸಿಗಳು ಮತ್ತು ವೇದಿಕೆಗಳು, ಅವುಗಳ ರಚನೆ, ಮತ್ತು ಆದೇಶ.

ಕ್ವಾಡ್ ರಾಷ್ಟ್ರಗಳ ಮಲಬಾರ್ ಸಮರಾಭ್ಯಾಸ:


(The Malabar Exercise of Quad nations)

ಸಂದರ್ಭ:

ಇತ್ತೀಚೆಗೆ ಅಮೆರಿಕ, ನೌಕಾ ಸಮರಾಭ್ಯಾಸದಲ್ಲಿ ಹೆಚ್ಚು ಸಮಾನ ಮನಸ್ಕ ನೌಕಾಪಡೆಗಳು ಭಾಗವಹಿಸುವ ಸಂದರ್ಭದಲ್ಲಿ,ಬಹು ರಾಷ್ಟ್ರೀಯ ಮಲಬಾರ್ ಸಮರಾಭ್ಯಾಸದ ವ್ಯಾಪ್ತಿಯನ್ನು ಭವಿಷ್ಯದಲ್ಲಿ ವಿಸ್ತರಿಸಬಹುದು.ಮತ್ತು ಅದನ್ನು ವಿಸ್ತರಿಸುವ ಸಾಧ್ಯತೆಯನ್ನು ಕ್ವಾಡ್ ಗುಂಪಿನ ಸದಸ್ಯರು ಚರ್ಚಿಸಬಹುದು ಎಂದು ಹೇಳಿದೆ.

ಹಿನ್ನೆಲೆ:

ಭಾರತ, ಯುಎಸ್, ಜಪಾನ್ ಮತ್ತು ಆಸ್ಟ್ರೇಲಿಯಾ ನಡುವಿನ ಈ ವರ್ಷದ ಮಲಬಾರ್ ನೌಕಾಪಡೆಯ ಎರಡನೇ ಹಂತದ ಸಮರಾಭ್ಯಾಸವನ್ನು ಬಂಗಾಳ ಕೊಲ್ಲಿಯಲ್ಲಿ ಆರಂಭಿಸಲಾಗುತ್ತಿದೆ. ಇದರಲ್ಲಿ, ಆಗಸ್ಟ್ ತಿಂಗಳಲ್ಲಿ ಮೊದಲ ಹಂತದಲ್ಲಿ ನಡೆಸಲಾದ ನೌಕಾ ಸಮರಾಭ್ಯಾಸದ ಅಭಿವೃದ್ಧಿಪಡಿಸಿದ ಸಮನ್ವಯ ಮತ್ತು ಪರಸ್ಪರ ಕಾರ್ಯಸಾಧ್ಯತೆಯನ್ನು ಅಭಿವೃದ್ಧಿಪಡಿಸಲು ಪ್ರಯತ್ನಿಸಲಾಯಿತು.

ಮಲಬಾರ್ ಸಮರಾಭ್ಯಾಸದ ಬಗ್ಗೆ:

ಮಲಬಾರ್ ಸಮರಾಭ್ಯಾಸವು 1992 ರಲ್ಲಿ ಭಾರತ ಮತ್ತು ಯುಎಸ್ ನಡುವೆ ದ್ವಿಪಕ್ಷೀಯ ನೌಕಾ ಸಮರಾಭ್ಯಾಸವಾಗಿ ಆರಂಭವಾಯಿತು. 2015 ರಲ್ಲಿ ಈ ಸಮರಾಭ್ಯಾಸದಲ್ಲಿ ಜಪಾನ್ ನ ಸೇರ್ಪಡೆಯೊಂದಿಗೆ ಇದು ತ್ರಿಪಕ್ಷೀಯ ಮಿಲಿಟರಿ ಸಮರಾಭ್ಯಾಸವಾಗಿ ಮಾರ್ಪಟ್ಟಿದೆ.

‘ಕ್ವಾಡ್ ಗ್ರೂಪ್’  (Quad Group) ಎಂದರೇನು?

ಇದು ಜಪಾನ್, ಭಾರತ, ಯುನೈಟೆಡ್ ಸ್ಟೇಟ್ಸ್ ಮತ್ತು ಆಸ್ಟ್ರೇಲಿಯಾದಂತಹ ದೇಶಗಳ ಚತುಷ್ಕೋನ ಅಥವಾ ಚತುರ್ಭುಜ (quadrilateral) ಭದ್ರತಾ ಸಂಘಟನೆಯಾಗಿದೆ.

  1. ಈ ಗುಂಪಿನ ಎಲ್ಲಾ ಸದಸ್ಯ ರಾಷ್ಟ್ರಗಳು ಪ್ರಜಾಪ್ರಭುತ್ವ ರಾಷ್ಟ್ರಗಳು ಮತ್ತು ಅಡೆತಡೆಯಿಲ್ಲದ ಕಡಲ ವ್ಯಾಪಾರ ಮತ್ತು ಭದ್ರತೆಗೆ ಸಂಬಂಧಿಸಿದ ಹಿತಾಸಕ್ತಿಗಳನ್ನು ಹಂಚಿಕೊಳ್ಳುತ್ತವೆ.
  2. ಕ್ವಾಡ್ ಯಾವುದೇ ದೇಶದ ವಿರುದ್ಧ ಮಿಲಿಟರಿ ಸ್ಪರ್ಧೆ ಮಾಡುವುದಿಲ್ಲ ಎಂಬುದು ಸಾಮಾನ್ಯ ತಿಳುವಳಿಕೆಯಾಗಿದೆ. ಅದೇನೇ ಇದ್ದರೂ, ಇದನ್ನು ಉದಯೋನ್ಮುಖ “ಏಷ್ಯನ್ ನ್ಯಾಟೋ” ಅಥವಾ “ಮಿನಿ ನ್ಯಾಟೋ” ಎಂದು ವಿವರಿಸಲಾಗಿದೆ ಮತ್ತು ಇದನ್ನು ಇಂಡೋ- ಪೆಸಿಫಿಕ್ ಪ್ರದೇಶದಲ್ಲಿನ ಚೀನಾದ ಮಿಲಿಟರಿ ಮತ್ತು ಆರ್ಥಿಕ ಒತ್ತಡಕ್ಕೆ ಸಮರ್ಥ ಪ್ರತ್ಯುತ್ತರ ವೆಂದು ಪರಿಗಣಿಸಲಾಗುತ್ತದೆ.

ಕ್ವಾಡ್ ಗುಂಪಿನ ಮೂಲ:

  1. ಕ್ವಾಡ್ ಸಮೂಹದ ಮೂಲವನ್ನು 2004 ರ ಸುನಾಮಿಯ ನಂತರ ನಾಲ್ಕು ದೇಶಗಳು ಪರಿಹಾರ ಕಾರ್ಯಾಚರಣೆಗಾಗಿ ಸಂಘಟಿಸಿದ ಪ್ರಯತ್ನಗಳಿಂದ ಕಂಡುಹಿಡಿಯಬಹುದು.
  2. ತರುವಾಯ, 2007 ರ ಆಸಿಯಾನ್ ಶೃಂಗಸಭೆಯಲ್ಲಿ ನಾಲ್ಕು ದೇಶಗಳು ಮೊದಲ ಬಾರಿಗೆ ಭೇಟಿಯಾದವು.
  3. ಜಪಾನ್, ಭಾರತ, ಯುನೈಟೆಡ್ ಸ್ಟೇಟ್ಸ್ ಮತ್ತು ಆಸ್ಟ್ರೇಲಿಯಾ,ಈ ನಾಲ್ಕು ದೇಶಗಳ ನಡುವೆ ಕಡಲ ಸಹಕಾರವನ್ನು ಹೆಚ್ಚಿಸುವುದು ಇದರ ಉದ್ದೇಶವಾಗಿತ್ತು.

ಈ ಸಂಸ್ಥೆಯ ಪ್ರಾಮುಖ್ಯತೆ:

  1. ಕ್ವಾಡ್, ಸಮಾನ ಮನಸ್ಸಿನ ದೇಶಗಳಿಗೆ ಪರಸ್ಪರ ಮಾಹಿತಿಯನ್ನು ಹಂಚಿಕೊಳ್ಳಲು ಮತ್ತು ಪರಸ್ಪರ ಆಸಕ್ತಿಯ ಯೋಜನೆಗಳಲ್ಲಿ ಸಹಕರಿಸಲು ಒಂದು ಅವಕಾಶವಾಗಿದೆ.
  2. ಅದರ ಸದಸ್ಯ ರಾಷ್ಟ್ರಗಳು ಮುಕ್ತ ಮತ್ತು ಉಚಿತ ಇಂಡೋ-ಪೆಸಿಫಿಕ್ ವಲಯವನ್ನು ಹಂಚಿಕೊಳ್ಳುತ್ತವೆ.ಇಲ್ಲಿ ಪ್ರತಿಯೊಂದು ದೇಶವೂ ಆರ್ಥಿಕ ಅಭಿವೃದ್ಧಿ ಯೋಜನೆಗಳಲ್ಲಿ ಹಾಗೂ ಕಡಲ ಡೊಮೇನ್ ಜಾಗೃತಿ ಮತ್ತು ಕಡಲ ಸುರಕ್ಷತೆಯನ್ನು ಉತ್ತೇಜಿಸುವಲ್ಲಿ ತೊಡಗಿಸಿಕೊಂಡಿದೆ.
  3. ಇದು ಭಾರತ, ಆಸ್ಟ್ರೇಲಿಯಾ, ಜಪಾನ್ ಮತ್ತು ಯುಎಸ್ ನಡುವಿನ ಸಂವಾದದ ಹಲವಾರು ವೇದಿಕೆಗಳಲ್ಲಿ ಒಂದಾಗಿದೆ ಮತ್ತು ಇದನ್ನು ಯಾವುದೇ ನಿರ್ದಿಷ್ಟ ಸನ್ನಿವೇಶದಲ್ಲಿ ನೋಡಬಾರದು.

ಇತ್ತೀಚಿನ ಬೆಳವಣಿಗೆಗಳು:

  1. ಇಂಡೋ-ಪೆಸಿಫಿಕ್ ಮತ್ತು ಅದರಾಚೆ ಭದ್ರತೆ ಮತ್ತು ಸಮೃದ್ಧಿಯನ್ನು ಹೆಚ್ಚಿಸಲು ಮತ್ತು ಇವುಗಳಿಗೆ ಎದುರಾಗುವ ಬೆದರಿಕೆಗಳನ್ನು ಎದುರಿಸಲು ಅಂತರರಾಷ್ಟ್ರೀಯ ಕಾನೂನಿನಲ್ಲಿ ಅಂತರ್ಗತವಾಗಿರುವ ಉಚಿತ, ಮುಕ್ತ ನಿಯಮ-ಆಧಾರಿತ ವ್ಯವಸ್ಥೆಯನ್ನು ಉತ್ತೇಜಿಸಲು QUAD ವಾಗ್ದಾನ ಮಾಡಿದೆ.
  2. ಕ್ವಾಡ್ ಲಸಿಕೆ ಸಹಭಾಗಿತ್ವ: ಸಾಂಕ್ರಾಮಿಕ ರೋಗವನ್ನು ಎದುರಿಸಲು ಲಸಿಕೆಗಳಿಗೆ “ಸಮಾನ” ಪ್ರವೇಶವನ್ನು ಖಚಿತಪಡಿಸಿಕೊಳ್ಳುವುದು.
  3. 2020 ರಲ್ಲಿ, ಜಪಾನ್, ಭಾರತ, ಆಸ್ಟ್ರೇಲಿಯಾ ಮತ್ತು ಅಮೆರಿಕ ಸಂಯುಕ್ತ ಸಂಸ್ಥಾನ ಎಂಬ ನಾಲ್ಕು ಕ್ವಾಡ್ ದೇಶಗಳು ಮಲಬಾರ್ ಸಮರಾಭ್ಯಾಸದಲ್ಲಿ ಭಾಗವಹಿಸಿದ್ದವು. ಮಲಬಾರ್ ಸಮರಾಭ್ಯಾಸವು ಭಾರತ, ಜಪಾನ್ ಮತ್ತು ಯುಎಸ್ಎ ನೌಕಾಪಡೆಗಳ ನಡುವಿನ ವಾರ್ಷಿಕ ತ್ರಿಪಕ್ಷೀಯ ನೌಕಾ ಸಮರಾಭ್ಯಾಸವಾಗಿದ್ದು, ಇದನ್ನು ಹಿಂದೂ ಮಹಾಸಾಗರ ಮತ್ತು ಪೆಸಿಫಿಕ್ ಸಾಗರಗಳಲ್ಲಿ ಪರ್ಯಾಯವಾಗಿ ನಡೆಸಲಾಗುತ್ತದೆ.

ಈ ಬೆಳವಣಿಗೆಗಳ ಬಗ್ಗೆ ಚೀನಾ ಏಕೆ ಕಾಳಜಿ ವಹಿಸುತ್ತಿದೆ?

  1. ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಪ್ರಜಾಪ್ರಭುತ್ವಗಳ ಒಕ್ಕೂಟವನ್ನು ಬೀಜಿಂಗ್ ಬಹಳ ಹಿಂದಿನಿಂದಲೂ ವಿರೋಧಿಸುತ್ತಿದೆ.
  2. ಚೀನಾ ಕಡಲ ಚತುರ್ಭುಜ ಸಂಘಟನೆಯಾದ ಕ್ವಾಡ್ ಗುಂಪನ್ನು ಏಷ್ಯನ್-ನ್ಯಾಟೋ ಎಂದು ಪರಿಗಣಿಸುತ್ತದೆ. ಅದು ಚೀನಾದ ಬೆಳವಣಿಗೆಯನ್ನು ಕಟ್ಟಿಹಾಕಲು ರೂಪಿಸಲಾಗಿರುವ ಒಕ್ಕೂಟವಾಗಿದೆ ಎಂದು ಪರಿಗಣಿಸುತ್ತದೆ.
  3. ನಿರ್ದಿಷ್ಟವಾಗಿ ಹೇಳುವುದಾದರೆ, ಭಾರತೀಯ ಸಂಸತ್ತಿನಲ್ಲಿ ಜಪಾನಿನ ಪ್ರಧಾನಿ ಶಿಂಜೊ ಅಬೆ ಅವರ ‘ಎರಡು ಸಮುದ್ರಗಳ ಸಂಗಮ’ ಭಾಷಣವು ಕ್ವಾಡ್ ಪರಿಕಲ್ಪನೆಗೆ ಹೊಸ ಒತ್ತು ನೀಡಿದೆ. ಇದು ಉದಯೋನ್ಮುಖ ಆರ್ಥಿಕ ಶಕ್ತಿಯಾಗಿ ಭಾರತದ ಉದಯವನ್ನು ಗುರುತಿಸಿತು.
  4. ಅಲ್ಲದೆ, ಚೀನಾದೊಂದಿಗಿನ ದ್ವಿಪಕ್ಷೀಯ ಸಂಬಂಧಗಳು ಹದಗೆಟ್ಟಿರುವ ಸಮಯದಲ್ಲಿ, ಆಸ್ಟ್ರೇಲಿಯಾವನ್ನು ಮಲಬಾರ್ ಸಮರಾಭ್ಯಾಸದಲ್ಲಿ ಪಾಲ್ಗೊಳ್ಳುವಂತೆ ಮಾಡುವ ಭಾರತದ ಉದ್ದೇಶವನ್ನು ಬೀಜಿಂಗ್ ವಿರುದ್ಧದ ಕ್ರಮವೆಂದು ಮಾತ್ರ ಪರಿಗಣಿಸಬಹುದಾಗಿದೆ ಎಂದು ಚೀನಾ ಹೇಳಿದೆ.

ಔಪಚಾರಿಕತೆಯ ಅವಶ್ಯಕತೆ?

ನವೀಕರಿಸಿದ ಪ್ರಯತ್ನಗಳ ಹೊರತಾಗಿಯೂ, QUAD ಔಪಚಾರಿಕ ರಚನೆಯ ಕೊರತೆಯಿಂದಾಗಿ ಟೀಕೆಗಳನ್ನು ಎದುರಿಸುತ್ತಿದೆ. ಈ ಗುಂಪನ್ನು ಸಾಂಸ್ಥಿಕರಿಸಲು ಅಸಾಧಾರಣ ಚೀನಾ ವಿರೋಧಿ ಬಣವಾಗಿ ಪರಿವರ್ತಿಸುವ ಔಪಚಾರಿಕ ಒಪ್ಪಂದದ ಅಗತ್ಯತೆ ಇದೆ.

  1. ಕಳೆದ ಕೆಲವು ವರ್ಷಗಳಲ್ಲಿ ಜಾಗತಿಕ ರಾಜಕೀಯ ಪರಿಸ್ಥಿತಿ ಬಹಳಷ್ಟು ಬದಲಾಗಿದೆ. ಕ್ವಾಡ್ ನ ಪ್ರತಿಯೊಂದು ಸದಸ್ಯ ರಾಷ್ಟ್ರವೂ ಚೀನಾದಿಂದ ಹೆಚ್ಚುತ್ತಿರುವ ಆಕ್ರಮಣದ ಬಿಸಿಯನ್ನು ಎದುರಿಸುತ್ತಿವೆ.
  2. ಚೀನಾ ಶಕ್ತಿ ಮತ್ತು ಪ್ರಭಾವದಲ್ಲಿ ಬೆಳೆದಿದೆ ಮತ್ತು ಬೇರೆ ದೇಶಗಳೊಂದಿಗೆ ಕಾಲು ಕೆರೆದು ನಿಲ್ಲಲು ಉತ್ಸುಕವಾಗಿದೆ.
  3. ಆಸ್ಟ್ರೇಲಿಯಾದ ದೇಶೀಯ ನೀತಿಗಳ ಮೇಲೆ ಪ್ರಭಾವ ಬೀರಲು ಪ್ರಯತ್ನಿಸಿದ ನಂತರ, ಅದು ಚೀನಾ ದೇಶದ ಮೇಲೆ ದಂಡನಾತ್ಮಕ ಸುಂಕವನ್ನು ವಿಧಿಸಿತು.
  4. ಇದು ಭಾರತದೊಂದಿಗೆ ವಾಡಿಕೆಯ ಗಡಿ ವಿವಾದಗಳಲ್ಲಿ ನಿರತವಾಗಿದೆ.
  5. ಸೆಂಕಾಕು ದ್ವೀಪಗಳಿಗೆ ಸಂಬಂಧಿಸಿದಂತೆ ಜಪಾನ್‌ನೊಂದಿಗಿನ ಪ್ರಾದೇಶಿಕ ವಿವಾದಗಳನ್ನು ಚೀನಾ ಭುಗಿಲೆಬ್ಬಿಸಿದೆ ಮತ್ತು ಯುನೈಟೆಡ್ ಸ್ಟೇಟ್ಸ್‌ನೊಂದಿಗೆ ಪೂರ್ಣ ಪ್ರಮಾಣದ ವ್ಯಾಪಾರ ವಾಣಿಜ್ಯ ಸಮರದಲ್ಲಿ ತೊಡಗಿಸಿಕೊಂಡಿದೆ.

 


ಸಾಮಾನ್ಯ ಅಧ್ಯಯನ ಪತ್ರಿಕೆ : 3


 

ವಿಷಯಗಳು: ಭಾರತೀಯ ಆರ್ಥಿಕತೆ ಮತ್ತು ಯೋಜನೆ, ಸಂಪನ್ಮೂಲಗಳ ಕ್ರೋಡೀಕರಣ , ಪ್ರಗತಿ, ಅಭಿವೃದ್ಧಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಸಮಸ್ಯೆಗಳು.

ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ (ITC) ಎಂದರೇನು?


(What is Input Tax Credit (ITC)?

ಸಂದರ್ಭ:

ಜಿಎಸ್‌ಟಿ ನೆಟ್‌ವರ್ಕ್ ನೀಡಿದ ಮಾಹಿತಿಯ ಪ್ರಕಾರ, ‘ಸರಕು ಮತ್ತು ಸೇವಾ ತೆರಿಗೆ’ (Goods and Service Tax) ಅಡಿಯಲ್ಲಿ ನೋಂದಾಯಿಸಲಾದ 66,000 ವ್ಯವಹಾರಗಳ 14,000 ಕೋಟಿ ರೂಪಾಯಿಗಳ ‘ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್’ (Input Tax Credit – ITC) ಅನ್ನು ಸದ್ಯಕ್ಕೆ ತಡೆಹಿಡಿಯಲಾಗಿದೆ.

ಹಿನ್ನೆಲೆ:

ಡಿಸೆಂಬರ್ 2019 ರಲ್ಲಿ, ಕೇಂದ್ರ ಸರ್ಕಾರವು ‘GST ನಿಯಮಗಳಲ್ಲಿ’ ಹೊಸ ನಿಯಮ 86A ಅನ್ನು ಸೇರಿಸಿತ್ತು,   ತೆರಿಗೆದಾರರಿಗೆ ‘ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್’ (ITC) ವಂಚನೆಯಿಂದ ಲಾಭವಾಗಿದೆ ಎಂದು ತೆರಿಗೆ ಅಧಿಕಾರಿಯು ತೃಪ್ತಿಪಟ್ಟರೆ,ತೆರಿಗೆದಾರರ ಎಲೆಕ್ಟ್ರಾನಿಕ್ ಕ್ರೆಡಿಟ್ ಲೆಡ್ಜರ್‌ನಲ್ಲಿರುವ ‘ಐಟಿಸಿ’ ಅನ್ನು ನಿರ್ಬಂಧಿಸಬಹುದು, ಎಂಬ ಅಧಿಕಾರವನ್ನು ಹೊಸ ನಿಯಮ 86Aಯು ಅಧಿಕಾರಿಗೆ ನೀಡಿತ್ತು.

‘ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್’ (ಐಟಿಸಿ) ಎಂದರೇನು?

  1. ಇದು ಸರಕುಗಳ ‘ಖರೀದಿ’ಯ ಮೇಲೆ ವ್ಯಾಪಾರವು ಪಾವತಿಸುವ’ ತೆರಿಗೆ ‘, ಮತ್ತು ಸರಕುಗಳ ಮಾರಾಟದ ಮೇಲಿನ’ ತೆರಿಗೆ ಹೊಣೆಗಾರಿಕೆ (Tax Liability) ಯನ್ನು ‘ಕಡಿಮೆ ಮಾಡಲು ಇದನ್ನು ಬಳಸಬಹುದು.
  2. ಸರಳವಾಗಿ ಹೇಳುವುದಾದರೆ, ಇನ್ಪುಟ್ ಕ್ರೆಡಿಟ್ ಎಂದರೆ ಔಟ್ಪುಟ್ ಮೇಲೆ ತೆರಿಗೆ ಪಾವತಿಸುವ ಸಮಯದಲ್ಲಿ ಪಾವತಿಸಿದ ಮೊತ್ತವು ಇನ್ಪುಟ್ಗಳ ಮೇಲೆ ಕಡಿಮೆ ತೆರಿಗೆಯನ್ನು ಪಾವತಿಸುತ್ತದೆ.

ವಿನಾಯಿತಿ: ‘ಸಂಯೋಜನೆ ಯೋಜನೆ’ ಅಡಿಯಲ್ಲಿ ವ್ಯಾಪಾರವು ಇನ್ಪುಟ್ ತೆರಿಗೆ ಕ್ರೆಡಿಟ್ ಅನ್ನು ಪಡೆಯಲು ಸಾಧ್ಯವಿಲ್ಲ. ‘ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್’ (ಐಟಿಸಿ) ಅನ್ನು ವೈಯಕ್ತಿಕ ಬಳಕೆಗಾಗಿ ಅಥವಾ ವಿನಾಯಿತಿ ಪಡೆದ ಸರಕುಗಳ ಮೇಲೆ ಕ್ಲೇಮ್ ಮಾಡಲು ಬಳಸಲಾಗುವುದಿಲ್ಲ.

current affairs

ಇದರ ದುರುಪಯೋಗದ ಬಗ್ಗೆ ಕಾಳಜಿ:

  1. ಕೇವಲ ತೆರಿಗೆ ಕ್ರೆಡಿಟ್‌ಗಳನ್ನು ಪಡೆಯಲು ನಕಲಿ ಇನ್‌ವಾಯ್ಸ್‌ಗಳನ್ನು ರಚಿಸುವ ಮೂಲಕ ನಿರ್ಲಜ್ಜ ವ್ಯವಹಾರಗಳಿಂದ ಅವಕಾಶವನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆಗಳಿರಬಹುದು.
  2. ಒಟ್ಟು GST ಹೊಣೆಗಾರಿಕೆಯ 80% ವರೆಗೆ ಐಟಿಸಿ ಮೂಲಕ ಇತ್ಯರ್ಥವಾಗುತ್ತಿದೆ ಮತ್ತು ಕೇವಲ 20% ಮಾತ್ರ ನಗದು ರೂಪದಲ್ಲಿ ಜಮಾ ಮಾಡಲಾಗುತ್ತಿದೆ.
  3. ಪ್ರಸ್ತುತ ಆಡಳಿತದ ಅಡಿಯಲ್ಲಿ, ಏಕಕಾಲದಲ್ಲಿ ತೆರಿಗೆ ಮತ್ತು ಐಟಿಸಿ ಕ್ಲೈಮ್‌ಗಳಿಗೆ ಇನ್ಪುಟ್ ಪೂರೈಕೆದಾರರು ಈಗಾಗಲೇ ಪಾವತಿಸಿದ ತೆರಿಗೆಗಳೊಂದಿಗೆ ಯಾವುದೇ ಅವಕಾಶವಿಲ್ಲ.
  4. ಪ್ರಸ್ತುತ, ಐಟಿಸಿ ಕ್ಲೇಮ್ ಮತ್ತು ಪೂರೈಕೆದಾರರು ಪಾವತಿಸುವ ತೆರಿಗೆಗಳೊಂದಿಗೆ ಹೊಂದಾಣಿಕೆ ಮಾಡುವುದರ ನಡುವೆ ಸಮಯದ ಅಂತರವಿದೆ. ಆದ್ದರಿಂದ, ನಕಲಿ ಚಲನ್ ಆಧಾರದ ಮೇಲೆ ಐಟಿಸಿ ಕ್ಲೇಮ್ ಪಡೆಯುವ ಸಾಧ್ಯತೆಗಳು ಹೆಚ್ಚಿವೆ.

 


ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:


 ಅಂತರಾಷ್ಟ್ರೀಯ ಹೆಣ್ಣು ಮಗುವಿನ ದಿನ:

  1. ಪ್ರತಿ ವರ್ಷ ಅಕ್ಟೋಬರ್ 11 ಅನ್ನು ‘ಅಂತರಾಷ್ಟ್ರೀಯ ಹೆಣ್ಣು ಮಗುವಿನ ದಿನ’ (International Day of the Girl Child) ಎಂದು ಆಚರಿಸಲಾಗುತ್ತದೆ.
  2. ಈ ಸಂದರ್ಭವು ಹದಿಹರೆಯದ ಹೆಣ್ಣುಮಕ್ಕಳ ಪ್ರಾಮುಖ್ಯತೆಯನ್ನು ಗುರುತಿಸುತ್ತದೆ ಮತ್ತು ಅವರಿಗೆ ಅವಕಾಶಗಳನ್ನು ಒದಗಿಸುವ ಮೂಲಕ ಅವರ ಸಾಮರ್ಥ್ಯ ಮತ್ತು ಸಾಮರ್ಥ್ಯವನ್ನು ಗುರುತಿಸಲು ಪ್ರಯತ್ನಿಸುತ್ತದೆ.
  3. 19 ಡಿಸೆಂಬರ್ 2011 ರಂದು, ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಅಕ್ಟೋಬರ್ 11 ಅನ್ನು ಅಂತರಾಷ್ಟ್ರೀಯ ಹೆಣ್ಣು ಮಗುವಿನ ದಿನವೆಂದು ಘೋಷಿಸುವ ನಿರ್ಣಯವನ್ನು ಅಂಗೀಕರಿಸಿತು.
  4. ‘ಅಂತರಾಷ್ಟ್ರೀಯ ಹೆಣ್ಣು ಮಗುವಿನ ದಿನ’ದ ಥೀಮ್ 2021: ಡಿಜಿಟಲ್ ಪೀಳಿಗೆ, ನಮ್ಮ ಪೀಳಿಗೆ ‘(DIGITAL GENERATION. OUR GENERATION).

 

ಅಂತರಾಷ್ಟ್ರೀಯ ಹೆಣ್ಣು ಮಗುವಿನ ದಿನದ ಥೀಮ್ 2021: ಡಿಜಿಟಲ್ ಪೀಳಿಗೆ, ನಮ್ಮ ಪೀಳಿಗೆ(DIGITAL GENERATION. OUR GENERATION).

ಬೀಜಿಂಗ್ ಘೋಷಣೆ:

  1. ಮೊದಲನೆಯದಾಗಿ, ಬೀಜಿಂಗ್ ಘೋಷಣೆಯಲ್ಲಿ’ (Beijing Declaration) ಹೆಣ್ಣು ಮಗುವಿನ ಹಕ್ಕುಗಳನ್ನು ಗುರುತಿಸಲಾಗಿದೆ ಮತ್ತು ಅದಕ್ಕಾಗಿ ಈ ವಿಷಯವನ್ನು ಪ್ರಸ್ತಾಪಿಸಲಾಗಿದೆ.
  2. 1995 ರಲ್ಲಿ ಬೀಜಿಂಗ್‌ನಲ್ಲಿ ನಡೆದ ಮಹಿಳಾ ಜಾಗತಿಕ ಸಮ್ಮೇಳನದಲ್ಲಿ,ಭಾಗವಹಿಸುವ ದೇಶಗಳು ಒಮ್ಮತದಿಂದ ‘ಬೀಜಿಂಗ್ ಘೋಷಣೆ’ ಮತ್ತು ಕ್ರಿಯಾ ವೇದಿಕೆಯನ್ನು ಅಳವಡಿಸಿಕೊಂಡಿದ್ದವು. ಇದಕ್ಕಾಗಿ, ಇದು ಮಹಿಳೆಯರಿಗೆ ಮಾತ್ರವಲ್ಲದೆ ಹುಡುಗಿಯರ ಹಕ್ಕುಗಳನ್ನು ಮುಂದುವರೆಸಲು ಅತ್ಯಂತ ಪ್ರಗತಿಪರ ಚೌಕಟ್ಟು ಎಂದು ಪರಿಗಣಿಸಲಾಗಿದೆ.

current affairs

ಕೇಂದ್ರ ಮೃಗಾಲಯ ಪ್ರಾಧಿಕಾರ:

(Central Zoo Authority)

ಇದು ಭಾರತದ ಪ್ರಾಣಿಸಂಗ್ರಹಾಲಯಗಳ ಶಾಸನಬದ್ಧ ನಿಯಂತ್ರಣ ಸಂಸ್ಥೆಯಾಗಿದೆ. ಇದನ್ನು 1992 ರಲ್ಲಿ ಸ್ಥಾಪಿಸಲಾಯಿತು.

ಕೇಂದ್ರೀಯ ಮೃಗಾಲಯ ಪ್ರಾಧಿಕಾರದ (Central Zoo Authority- CZA) ಮುಖ್ಯ ಉದ್ದೇಶವೆಂದರೆ, ರಾಷ್ಟ್ರೀಯ ಮೃಗಾಲಯ ನೀತಿ’, 1998 ರ ಪ್ರಕಾರ, ದೇಶದ ಶ್ರೀಮಂತ ಜೀವವೈವಿಧ್ಯವನ್ನು, ವಿಶೇಷವಾಗಿ ಪ್ರಾಣಿಗಳನ್ನು ಸಂರಕ್ಷಿಸುವ ರಾಷ್ಟ್ರೀಯ ಪ್ರಯತ್ನವನ್ನು ಬೆಂಬಲಿಸುವುದಾಗಿದೆ.

ಪ್ರಮುಖ ಕಾರ್ಯಗಳು:

  1. ಭಾರತೀಯ ಮೃಗಾಲಯಗಳಲ್ಲಿ ಪ್ರಾಣಿಗಳ ನಿರ್ವಹಣೆ ಮತ್ತು ಆರೋಗ್ಯ ರಕ್ಷಣೆಗಾಗಿ ಕೇಂದ್ರ ಮೃಗಾಲಯ ಪ್ರಾಧಿಕಾರವು ಕನಿಷ್ಟ ಮಾನದಂಡಗಳನ್ನು ಮತ್ತು ನೇಮಗಳನ್ನು ಜಾರಿಗೊಳಿಸುತ್ತದೆ.
  2. ದೇಶದ ಪ್ರತಿಯೊಂದು ಮೃಗಾಲಯವು ಅದರ ಕಾರ್ಯಾಚರಣೆಗಾಗಿ ‘ಕೇಂದ್ರ ಮೃಗಾಲಯ ಪ್ರಾಧಿಕಾರ’ (CZA) ದಿಂದ ಮಾನ್ಯತೆ ಪಡೆಯಬೇಕು.
  3. ಇದು ಮೃಗಾಲಯಗಳ ಪರವಾನಿಗೆಯನ್ನು ರದ್ದುಪಡಿಸುವ ಅಧಿಕಾರವನ್ನು ಹೊಂದಿದೆ.

ಸುದ್ದಿಯಲ್ಲಿರಲು ಕಾರಣ:

ಇತ್ತೀಚೆಗೆ, ಭಾರತೀಯ ಮೃಗಾಲಯಗಳಿಗಾಗಿ ‘ವಿಷನ್ ಪ್ಲಾನ್ (2021-2031)’ ಅನ್ನು ಬಿಡುಗಡೆ ಮಾಡಲಾಗಿದೆ. ಭಾರತೀಯ ಪ್ರಾಣಿಸಂಗ್ರಹಾಲಯಗಳನ್ನು ಮೇಲ್ದರ್ಜೆಗೇರಿಸುವ ಮತ್ತು ಕೇಂದ್ರ ಮೃಗಾಲಯ ಪ್ರಾಧಿಕಾರವನ್ನು (CZA) ಬಲಪಡಿಸುವ ದೃಷ್ಟಿಕೋನವನ್ನು ಈ ಯೋಜನೆಯು ಹೊಂದಿದೆ.

current affairs


Join our Official Telegram Channel HERE for Motivation and Fast Updates

Subscribe to our YouTube Channel HERE to watch Motivational and New analysis videos

[ad_2]

Leave a Comment