[ad_1]
ಪರಿವಿಡಿ:
ಸಾಮಾನ್ಯ ಅಧ್ಯಯನ ಪತ್ರಿಕೆ 2:
1. ರಾಜಕೀಯ ಪಕ್ಷಗಳ ಚಿಹ್ನೆಗಳನ್ನು ಚುನಾವಣಾ ಆಯೋಗ ಹೇಗೆ ನಿರ್ಧರಿಸುತ್ತದೆ?
2. ಇನ್ನರ್ ಲೈನ್ ಪರ್ಮಿಟ್/ಪರವಾನಗಿಗಳು.
3. ಚೀನಾ-ತೈವಾನ್ ಸಂಬಂಧಗಳು.
4. ವಿಶ್ವಸಂಸ್ಥೆಯ ಭದ್ರತಾ ಮಂಡಳಿ.
ಸಾಮಾನ್ಯ ಅಧ್ಯಯನ ಪತ್ರಿಕೆ 3:
1. ಜಲ ಜೀವನ ಮಿಷನ್.
2. ವಿದ್ಯುತ್ (ಗ್ರಾಹಕರ ಹಕ್ಕುಗಳು) ತಿದ್ದುಪಡಿ ನಿಯಮಗಳು, 2021ರ ಕರಡು.
ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:
1. ಸತ್ಯ ಮತ್ತು ಸಮನ್ವಯಕ್ಕಾಗಿ ರಾಷ್ಟ್ರೀಯ ದಿನ.
2. ಅಂತರರಾಷ್ಟ್ರೀಯ ಕಾಫಿ ದಿನ 2021.
3. ಗೇಮಿಂಗ್ ಡಿಸಾರ್ಡರ್.
4. ಬ್ರಹ್ಮಪುತ್ರ ಪರಂಪರೆ ಕೇಂದ್ರ.
ಸಾಮಾನ್ಯ ಅಧ್ಯಯನ ಪತ್ರಿಕೆ : 2
ವಿಷಯಗಳು: ಸರ್ಕಾರದ ವಿವಿಧ ಅಂಗಗಳ ನಡುವೆ ಅಧಿಕಾರ ವಿಭಜನೆ, ವಿವಾದ ಪರಿಹಾರ ಕಾರ್ಯವಿಧಾನಗಳು ಮತ್ತು ಸಂಸ್ಥೆಗಳು.
ರಾಜಕೀಯ ಪಕ್ಷಗಳ ಚಿಹ್ನೆಗಳನ್ನು ಚುನಾವಣಾ ಆಯೋಗ ಹೇಗೆ ನಿರ್ಧರಿಸುತ್ತದೆ?
(How Election Commission decides on party symbols?)
ಸಂದರ್ಭ:
ಭಾರತೀಯ ಚುನಾವಣಾ ಆಯೋಗವು (ECI) ಲೋಕ ಜನಶಕ್ತಿ ಪಕ್ಷದ (LJP) ಅಧಿಕೃತ ಚುನಾವಣಾ ಚಿಹ್ನೆಯನ್ನು (ಬಂಗಲೆ) ತೆಡೆ ಹಿಡಿದಿದೆ. ಈ ಕಾರಣದಿಂದ ಬಿಹಾರದ ‘ಕುಶೇಶ್ವರ ಅಸ್ಥಾನ್’ ಮತ್ತು ‘ತಾರಾಪುರ’ ಸ್ಥಾನಗಳಿಗೆ ಮುಂಬರುವ ವಿಧಾನಸಭಾ ಉಪಚುನಾವಣೆಯಲ್ಲಿ ಪಕ್ಷದ ಎರಡು ಬಣಗಳಲ್ಲಿ ಯಾವುದಕ್ಕೂ ಕೂಡ ಈ ಚಿನ್ಹೆಯನ್ನು ಬಳಸಲು ಸಾಧ್ಯವಾಗುವುದಿಲ್ಲ.
ಹಿನ್ನೆಲೆ:
ರಾಜಕೀಯ ಪಕ್ಷಗಳ ಚುನಾವಣಾ ಚಿಹ್ನೆಗಳ ಮೇಲೆ ಚುನಾವಣಾ ಆಯೋಗ ನಿಷೇಧ ಹೇರುವುದು ಹೊಸ ವಿಷಯವಲ್ಲ. ಕಳೆದ ಕೆಲವು ವರ್ಷಗಳಲ್ಲಿ, 2017 ರ ಇತರ ಎರಡು ಪ್ರಮುಖ ಪ್ರಕರಣಗಳಲ್ಲಿ ‘ಸಮಾಜವಾದಿ ಪಕ್ಷ’ (ಸೈಕಲ್) ಮತ್ತು ‘ಎಐಎಡಿಎಂಕೆ’ (ಎರಡು ಎಲೆಗಳು) ಗೆ ಸಂಬಂಧಿಸಿದಂತೆ, ಪಕ್ಷಗಳ ವಿಭಜನೆಯ ನಂತರ ‘ಚುನಾವಣಾ ಚಿಹ್ನೆ’ ಕುರಿತು ವಿವಾದವನ್ನು ಸೃಷ್ಟಿಸಿತ್ತು.
ರಾಜಕೀಯ ಪಕ್ಷಗಳಿಗೆ ಚಿಹ್ನೆಗಳನ್ನು ಹೇಗೆ ನೀಡಲಾಗುತ್ತದೆ?
ಚುನಾವಣಾ ಆಯೋಗದ ಮಾರ್ಗಸೂಚಿಗಳ ಪ್ರಕಾರ – ರಾಜಕೀಯ ಪಕ್ಷಕ್ಕೆ ಚುನಾವಣಾ ಚಿಹ್ನೆಯನ್ನು ಹಂಚಿಕೊಳ್ಳಲು ಈ ಕೆಳಗಿನ ವಿಧಾನವನ್ನು ಅನುಸರಿಸಲಾಗುತ್ತದೆ:
- ನಾಮಪತ್ರ ಸಲ್ಲಿಸುವ ಸಮಯದಲ್ಲಿ, ರಾಜಕೀಯ ಪಕ್ಷ / ಅಭ್ಯರ್ಥಿಯು ಚುನಾವಣಾ ಆಯೋಗದ ಉಚಿತ ಚಿಹ್ನೆಗಳ ಪಟ್ಟಿಯಿಂದ ಮೂರು ಚಿಹ್ನೆಗಳನ್ನು ಒದಗಿಸಬೇಕಾಗುತ್ತದೆ.
- ಅವುಗಳಲ್ಲಿ, ರಾಜಕೀಯ ಪಕ್ಷ / ಅಭ್ಯರ್ಥಿಗೆ ‘ಮೊದಲು ಬಂದವರಿಗೆ ಮೊದಲ ಆದ್ಯತೆ’ ಆಧಾರದ ಮೇಲೆ ಚುನಾವಣಾ ಚಿಹ್ನೆ ನೀಡಲಾಗುತ್ತದೆ.
- ಮಾನ್ಯತೆ ಪಡೆದ ರಾಜಕೀಯ ಪಕ್ಷವು ವಿಭಜನೆ ಗೊಂಡಾಗ, ಪಕ್ಷಕ್ಕೆ ನಿಗದಿಪಡಿಸಿದ ಚಿಹ್ನೆ / ಚುನಾವಣಾ ಚಿಹ್ನೆಯನ್ನು ನಿಯೋಜಿಸುವ ನಿರ್ಧಾರವನ್ನು ಚುನಾವಣಾ ಆಯೋಗ ತೆಗೆದುಕೊಳ್ಳುತ್ತದೆ.
ಚುನಾವಣಾ ಆಯೋಗದ ಅಧಿಕಾರಗಳು:
- ಚುನಾವಣಾ ಗುರುತುಗಳು (ಮೀಸಲಾತಿ ಮತ್ತು ಹಂಚಿಕೆ) ಆದೇಶ, 1968 ರ ಅಡಿಯಲ್ಲಿ, ರಾಜಕೀಯ ಪಕ್ಷಗಳನ್ನು ಗುರುತಿಸಲು ಮತ್ತು ಚಿಹ್ನೆಗಳನ್ನು ಹಂಚಲು ಚುನಾವಣಾ ಆಯೋಗಕ್ಕೆ ಅಧಿಕಾರ ನೀಡಲಾಗಿದೆ.
- ಆದೇಶದ 15 ನೇ ಪ್ಯಾರಾಗ್ರಾಫ್ ಅಡಿಯಲ್ಲಿ, ಪಕ್ಷದ ಹೆಸರು ಮತ್ತು ಚಿಹ್ನೆಗೆ ಸಂಬಂಧಿಸಿದ ಹಕ್ಕುಗಳ ಪ್ರಕರಣಗಳನ್ನು ಚುನಾವಣಾ ಆಯೋಗವು ಪ್ರತಿಸ್ಪರ್ಧಿ ಗುಂಪುಗಳು ಅಥವಾ ಮಾನ್ಯತೆ ಪಡೆದ ರಾಜಕೀಯ ಪಕ್ಷದ ಬಣಗಳಿಂದ ನಿರ್ಧರಿಸಬಹುದು.
- ರಾಜಕೀಯ ಪಕ್ಷಗಳ ಯಾವುದೇ ವಿವಾದ ಅಥವಾ ವಿಲೀನದ ಬಗ್ಗೆ ತೀರ್ಮಾನ ತೆಗೆದುಕೊಳ್ಳುವ ಏಕೈಕ ಪ್ರಾಧಿಕಾರ ಚುನಾವಣಾ ಆಯೋಗವಾಗಿದೆ. ಸಾದಿಕ್ ಅಲಿ ಮತ್ತು ಇತರರು VS ಭಾರತದ ಚುನಾವಣಾ ಆಯೋಗ (ECI) ಪ್ರಕರಣದಲ್ಲಿ (1971) ಸುಪ್ರೀಂ ಕೋರ್ಟ್ ಅದರ ಸಿಂಧುತ್ವವನ್ನು ಎತ್ತಿಹಿಡಿದಿದೆ.
ಚುನಾವಣಾ ಚಿಹ್ನೆಗಳ ವಿಧಗಳು:
ಚುನಾವಣಾ ಗುರುತುಗಳು (ಮೀಸಲಾತಿ ಮತ್ತು ಹಂಚಿಕೆ) (ತಿದ್ದುಪಡಿ) ಆದೇಶ, 2017 ರ ಪ್ರಕಾರ, ರಾಜಕೀಯ ಪಕ್ಷಗಳ ಚಿಹ್ನೆಗಳು ಈ ಕೆಳಗಿನಂತೆ ಎರಡು ಪ್ರಕಾದವುಗಳಾಗಿವೆ:
- ಕಾಯ್ದಿರಿಸಲಾಗಿದೆ (Reserved): ದೇಶಾದ್ಯಂತ ಎಂಟು ರಾಷ್ಟ್ರೀಯ ಪಕ್ಷಗಳು ಮತ್ತು 64 ರಾಜ್ಯ ಪಕ್ಷಗಳಿಗೆ / ಪ್ರಾದೇಶಿಕ ಪಕ್ಷಗಳಿಗೆ ‘ಕಾಯ್ದಿರಿಸಿದ’ ಚಿಹ್ನೆಗಳನ್ನು ನೀಡಲಾಗಿದೆ.
- ಉಚಿತ (Free): ಚುನಾವಣಾ ಆಯೋಗವು ಸುಮಾರು 200 ‘ಉಚಿತ’ ಚಿಹ್ನೆಗಳ ಸಂಗ್ರಹವನ್ನು ಹೊಂದಿದೆ, ಇವುಗಳನ್ನು ಗುರುತಿಸಲಾಗದ ಸಾವಿರಾರು ಪ್ರಾದೇಶಿಕ ಪಕ್ಷಗಳಿಗೆ ಹಂಚಿಕೆ ಮಾಡಲಾಗಿದೆ.
ರಾಜಕೀಯ ಪಕ್ಷದ ವಿಭಜನೆಯ ಸಂದರ್ಭದಲ್ಲಿ ‘ಚುನಾವಣಾ ಚಿಹ್ನೆ’ಗೆ ಸಂಬಂಧಿಸಿದಂತೆ ವಿವಾದದ ಕುರಿತು ಚುನಾವಣಾ ಆಯೋಗದ ಅಧಿಕಾರಗಳು:
ಶಾಸಕಾಂಗದ ಹೊರಗೆ ರಾಜಕೀಯ ಪಕ್ಷದ ವಿಭಜನೆಯ ಸಂದರ್ಭದಲ್ಲಿ, ‘ಚುನಾವಣಾ ಚಿಹ್ನೆಗಳು (ಮೀಸಲಾತಿ ಮತ್ತು ಹಂಚಿಕೆ) ಆದೇಶದ ಪ್ಯಾರಾ 15, 1968 ಹೇಳುತ್ತದೆ:
“ಗುರುತಿಸಲ್ಪಟ್ಟ ರಾಜಕೀಯ ಪಕ್ಷದಲ್ಲಿ ಎರಡು ಅಥವಾ ಹೆಚ್ಚು ಪ್ರತಿಸ್ಪರ್ಧಿ ವರ್ಗಗಳು ಅಥವಾ ಗುಂಪುಗಳಿವೆ ಎಂದು ಚುನಾವಣಾ ಆಯೋಗವು ತೃಪ್ತಿಗೊಂಡಾಗ ಮತ್ತು ಪ್ರತಿಸ್ಪರ್ಧಿ ವರ್ಗ ಅಥವಾ ಗುಂಪು ಆ ‘ರಾಜಕೀಯ ಪಕ್ಷ’ ಕ್ಕಾಗಿ ಹಕ್ಕು ಸಾಧಿಸುತ್ತಿರುವ, ಅಂತಹ ಸಂದರ್ಭದಲ್ಲಿ, ಚುನಾವಣಾ ಆಯೋಗವು ಈ ಪ್ರತಿಸ್ಪರ್ಧಿ ವರ್ಗಗಳು ಅಥವಾ ಗುಂಪುಗಳಲ್ಲಿ ಯಾವುದನ್ನಾದರೂ ‘ರಾಜಕೀಯ ಪಕ್ಷ’ ಎಂದು ಗುರುತಿಸಬೇಕೇ ಅಥವಾ ಅವುಗಳಲ್ಲಿ ಯಾವುದನ್ನೂ ಗುರುತಿಸಬಾರದೆ ಎಂದು ನಿರ್ಧರಿಸುವ ಅಧಿಕಾರ ಹೊಂದಿರುತ್ತದೆ, ಮತ್ತು ಆಯೋಗದ ನಿರ್ಧಾರವು ಈ ಎಲ್ಲಾ ಪ್ರತಿಸ್ಪರ್ಧಿ ವರ್ಗಗಳು ಅಥವಾ ಗುಂಪುಗಳ ಮೇಲೆ ಬದ್ಧವಾಗಿರುತ್ತದೆ.
- ಈ ನಿಬಂಧನೆಯು ಎಲ್ಲಾ ರಾಷ್ಟ್ರೀಯ ಮತ್ತು ರಾಜ್ಯ ಪಕ್ಷಗಳ (ಮಾನ್ಯತೆ ಪಡೆದ) ನಡುವಿನ ವಿವಾದಗಳಿಗೂ ಅನ್ವಯಿಸುತ್ತದೆ (ಈ ಸಂದರ್ಭದಲ್ಲಿ LJP ಪಕ್ಷದಂತೆ).
- ನೋಂದಾಯಿತ ಆದರೆ ಚುನಾವಣಾ ಆಯೋಗದಿಂದ ಗುರುತಿಸದ ಪಕ್ಷಗಳ ನಡುವೆ ವಿಭಜನೆಯ ಸಂದರ್ಭದಲ್ಲಿ,ಚುನಾವಣಾ ಆಯೋಗವು ಸಾಮಾನ್ಯವಾಗಿ ಸಂಘರ್ಷದ ಬಣಗಳಿಗೆ ತಮ್ಮ ಭಿನ್ನಾಭಿಪ್ರಾಯಗಳನ್ನು ಆಂತರಿಕವಾಗಿ ಪರಿಹರಿಸಿಕೊಳ್ಳಲು ಅಥವಾ ನ್ಯಾಯಾಲಯವನ್ನು ಸಂಪರ್ಕಿಸಲು ಸಲಹೆ ನೀಡುತ್ತದೆ.
ದಯವಿಟ್ಟು ಗಮನಿಸಿ: 1968 ಕ್ಕಿಂತ ಮೊದಲು, ಅಧಿಸೂಚನೆಗಳು ಮತ್ತು ಕಾರ್ಯಕಾರಿ ಆದೇಶಗಳನ್ನು ಚುನಾವಣಾ ಆಯೋಗವು ‘ಚುನಾವಣಾ ನಡವಳಿಕೆ ನಿಯಮಗಳು’, 1961 ರ ಅಡಿಯಲ್ಲಿ ನೀಡುತ್ತಿತ್ತು.
ವಿಷಯಗಳು: ಸರ್ಕಾರದ ನೀತಿಗಳು ಮತ್ತು ವಿವಿಧ ಕ್ಷೇತ್ರಗಳಲ್ಲಿನ ಅಭಿವೃದ್ಧಿಯ ಅಡಚಣೆಗಳು ಮತ್ತು ಅವುಗಳ ವಿನ್ಯಾಸ ಮತ್ತು ಅನುಷ್ಠಾನದಿಂದ ಉಂಟಾಗುವ ಸಮಸ್ಯೆಗಳು.
ಇನ್ನರ್ ಲೈನ್ ಪರ್ಮಿಟ್ / ಪರವಾನಗಿಗಳು.
(Inner Line Permits)
ಸಂದರ್ಭ:
ಈಶಾನ್ಯ ರಾಜ್ಯ ಅರುಣಾಚಲ ಪ್ರದೇಶದಲ್ಲಿ ಕೋವಿಡ್ -19 ರ ಪರಿಸ್ಥಿತಿಯು “ನಿಯಂತ್ರಣದಲ್ಲಿದೆ” ಮತ್ತು ಇದರ ದೃಷ್ಟಿಯಿಂದ, ರಾಜ್ಯದಲ್ಲಿ ಪ್ರವಾಸೋದ್ಯಮ ಕ್ಷೇತ್ರವನ್ನು ಪುನಃ ತೆರೆಯುವ ಸಲುವಾಗಿ, ಪ್ರಯಾಣಿಕರಿಗಾಗಿ ‘ಇನ್ನರ್ ಲೈನ್ ಪರ್ಮಿಟ್’ (Inner Line Permits) ಮತ್ತು ‘ಸಂರಕ್ಷಿತ ಪ್ರದೇಶ ಅನುಮತಿ’(Protected Area Permit) ವಿತರಣೆಯ ಮೇಲಿನ ನಿಷೇಧವನ್ನು ತೆಗೆದುಹಾಕಲು ನಿರ್ಧರಿಸಿದೆ.
ಇನ್ನರ್ ಲೈನ್ ಪರ್ಮಿಟ್ ಎಂದರೇನು?
ಇದು ಸ್ಥಳೀಯ ನಿವಾಸಿಗಳಲ್ಲದವರು ಐಎಲ್ಪಿ ವ್ಯವಸ್ಥೆಯಡಿಯಲ್ಲಿ ರಕ್ಷಿಸಲ್ಪಟ್ಟಿರುವ ರಾಜ್ಯಕ್ಕೆ ಭೇಟಿ ನೀಡಲು ಅಥವಾ ಉಳಿದುಕೊಳ್ಳಲು ಅಗತ್ಯವಿರುವ ದಾಖಲೆಯಾಗಿದೆ.
ಪ್ರಸ್ತುತ, ILP ಯು ಈಶಾನ್ಯದ ನಾಲ್ಕು ರಾಜ್ಯಗಳನ್ನು ಒಳಗೊಂಡಿದೆ, ಅವುಗಳೆಂದರೆ, ಅರುಣಾಚಲ ಪ್ರದೇಶ, ಮಿಜೋರಾಂ, ಮಣಿಪುರ ಮತ್ತು ನಾಗಾಲ್ಯಾಂಡ್.
- ನೀಡುವ ILP ಯು ವಾಸ್ತವ್ಯದ ಅವಧಿ ಮತ್ತು ಪ್ರವೇಶಿಸಲು ಅನುಮತಿಸಲಾದ ಪ್ರದೇಶಗಳು ಎರಡನ್ನೂ ನಿರ್ಧರಿಸುತ್ತದೆ.
- ರಾಜ್ಯ ಸರ್ಕಾರವು ನೀಡುವ ILP ಯನ್ನು ಆನ್ಲೈನ್ ಅಥವಾ ವೈಯಕ್ತಿಕವಾಗಿ ಅರ್ಜಿ ಸಲ್ಲಿಸುವ ಮೂಲಕ ಪಡೆಯಬಹುದು.
ILP ಯು ದೇಶೀಯ ಪ್ರವಾಸಿಗರಿಗೆ ಮಾತ್ರ ಮಾನ್ಯವಾಗಿರುತ್ತದೆ.
ಇದರ ಹಿಂದಿನ ತರ್ಕ :
ಇನ್ನರ್ ಲೈನ್ ಪರ್ಮಿಟ್ “ಬಂಗಾಳ ಪೂರ್ವ ಗಡಿನಾಡು ನಿಯಂತ್ರಣ ಕಾಯ್ದೆ 1873” ರ ವಿಸ್ತರಣೆಯಾಗಿದೆ.
ಬ್ರಿಟಿಷರು ಈಶಾನ್ಯ ಪ್ರದೇಶವನ್ನು ಆಕ್ರಮಿಸಿಕೊಂಡ ನಂತರ, ವಸಾಹತುಶಾಹಿಗಳು ಈ ಪ್ರದೇಶವನ್ನು ಮತ್ತು ಅದರ ಸಂಪನ್ಮೂಲಗಳನ್ನು ಆರ್ಥಿಕ ಲಾಭಕ್ಕಾಗಿ ಶೋಷಿಸಲು ಪ್ರಾರಂಭಿಸಿದರು.
- ಅವರು ಮೊದಲು ಬ್ರಹ್ಮಪುತ್ರ ಕಣಿವೆಯಲ್ಲಿ ಚಹಾ ತೋಟಗಳು ಮತ್ತು ತೈಲ ಉದ್ಯಮಗಳನ್ನು ಪ್ರಾರಂಭಿಸಿದರು.
- ಬೆಟ್ಟ ಪ್ರದೇಶಗಳಲ್ಲಿ ವಾಸಿಸುವ ಸ್ಥಳೀಯ ಬುಡಕಟ್ಟು ಜನಾಂಗದವರು ನಿಯಮಿತವಾಗಿ ಬಯಲು ಪ್ರದೇಶಗಳಲ್ಲಿ ಲೂಟಿಗಾಗಿ ದಾಳಿ ನಡೆಸುತ್ತಿದ್ದರು ಮತ್ತು ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ ಸ್ಥಾಪಿಸಿದ ಚಹಾತೋಟ ಹಾಗೂ ತೈಲ ಬಾವಿಗಳು ಮತ್ತು ಟ್ರೇಡಿಂಗ್ ಪೋಸ್ಟ್ಗಳನ್ನು ದೋಚುತ್ತಿದ್ದರು.
- ಈ ಕಾರಣಕ್ಕಾಗಿಯೇ BEFR 1873 ಅನ್ನು ಜಾರಿಗೊಳಿಸಲಾಯಿತು.
ವಿಷಯಗಳು: ಭಾರತ ಮತ್ತು ಅದರ ನೆರೆಹೊರೆಯ ದೇಶಗಳೊಂದಿಗೆ ಸಂಬಂಧಗಳು.
ಚೀನಾ-ತೈವಾನ್ ಸಂಬಂಧಗಳು:
(China- Taiwan relations)
ಸಂದರ್ಭ:
ತೈವಾನ್ ಇತ್ತೀಚೆಗೆ, ಚೀನಾದ 38 ಮಿಲಿಟರಿ ಜೆಟ್ಗಳು ತನ್ನ ರಕ್ಷಣಾ ವಾಯುಪ್ರದೇಶದ ಮೇಲೆ ಹಾರುವುದನ್ನು ವರದಿ ಮಾಡಿದೆ. ಇದು ತನ್ನ ವಾಯು ಪ್ರದೇಶದ ಮೇಲೆ ಚೀನಾ ನಡೆಸಿದ ಅತಿ ದೊಡ್ಡ ಆಕ್ರಮಣ ಎಂದು ತೈವಾನ್ ಹೇಳಿಕೊಂಡಿದೆ.
ಚೀನಾ ಮತ್ತು ತೈವಾನ್ ನಡುವಿನ ಇತ್ತೀಚಿನ ಘರ್ಷಣೆಗಳು:
ಏನಿದು ಪ್ರಕರಣ?
ತನ್ನ ದೇಶದ ಸಾರ್ವಭೌಮತ್ವವನ್ನು ರಕ್ಷಿಸಲು ಮತ್ತು ತೈಪೆ ಮತ್ತು ವಾಷಿಂಗ್ಟನ್ ನಡೆಸುತ್ತಿರುವ “ಒಳಸಂಚು” ಗಳಿಗೆ ತಕ್ಕ ಉತ್ತರ ನೀಡಲು ಚೀನಾ ಈ ಕ್ರಮಗಳನ್ನು ಕೈಗೊಳ್ಳುತ್ತಿರುವುದಾಗಿ ವಿವರಿಸಿದೆ.
- ಚೀನಾ ತೈವಾನ್ ಮೇಲೆ ರಾಜತಾಂತ್ರಿಕ, ಆರ್ಥಿಕ ಮತ್ತು ಮಿಲಿಟರಿ ಒತ್ತಡವನ್ನು ಹೆಚ್ಚಿಸಿದೆ, ಆದರೆ ದ್ವೀಪರಾಷ್ಟ್ರದ ನಿವಾಸಿಗಳು ಚೀನಾ ಮುಖ್ಯ ಭೂಭಾಗದೊಂದಿಗೆ ರಾಜಕೀಯ ಏಕೀಕರಣಕ್ಕಾಗಿ ಬೀಜಿಂಗ್ನ ಬೇಡಿಕೆಯನ್ನು ಬಲವಾಗಿ ತಿರಸ್ಕರಿಸುತ್ತಾರೆ.
- ವಿಶ್ವಸಂಸ್ಥೆ ಮತ್ತು ಇತರ ಅಂತರಾಷ್ಟ್ರೀಯ ಸಂಸ್ಥೆಗಳಲ್ಲಿ ಭಾಗವಹಿಸದಂತೆ ಚೀನಾ ತೈವಾನ್ ಅನ್ನು ಬಹಳ ಹಿಂದಿನಿಂದಲೂ ನಿರ್ಬಂಧಿಸಿದೆ ಮತ್ತು 2016 ರಲ್ಲಿ ತೈವಾನ್ ಅಧ್ಯಕ್ಷರಾಗಿ ಸಾಯ್ ಇಂಗ್-ವೆನ್ (Tsai Ing-wen) ಆಯ್ಕೆಯಾದ ನಂತರ ಅಂತಹ ಒತ್ತಡವನ್ನು ಇನ್ನಷ್ಟು ಹೆಚ್ಚಿಸಿದೆ.
- ಚೀನಾ ಪ್ರಜಾಪ್ರಭುತ್ವ ತೈವಾನ್ ಅನ್ನು ತನ್ನ ಪ್ರತ್ಯೇಕ ಪ್ರಾಂತ್ಯವೆಂದು ನೋಡಿದರೆ, ತೈವಾನ್ ತನ್ನದೇ ಆದ ಸಂವಿಧಾನ ಮತ್ತು ಮಿಲಿಟರಿಯನ್ನು ಮತ್ತು ಚುನಾಯಿತ ನಾಯಕರನ್ನು ಹೊಂದಿರುವ ಸಾರ್ವಭೌಮ ರಾಷ್ಟ್ರವೆಂದು ಪರಿಗಣಿಸುತ್ತದೆ.
ಚೀನಾ- ತೈವಾನ್ ಸಂಬಂಧಗಳು-
ಹಿನ್ನೆಲೆ:
ಚೀನಾದ ಅಂತರ್ಯುದ್ಧದಲ್ಲಿ ಸೋಲಿಸಲ್ಪಟ್ಟ ರಾಷ್ಟ್ರೀಯವಾದಿಗಳನ್ನು 1949 ರಲ್ಲಿ ತೈವಾನ್ ದ್ವೀಪಕ್ಕೆ ಒತ್ತಾಯಪೂರ್ವಕವಾಗಿ ಪಲಾಯನ ಮಾಡಿಸಿದಂದಿನಿಂದ ಚೀನಾ ತನ್ನ “ಒಂದು ಚೀನಾ” (One China) ನೀತಿಯ ಮೂಲಕ ತೈವಾನ್ ಮೇಲೆ ಹಕ್ಕು ಸಾಧಿಸುತ್ತಿದ್ದು, ಅಗತ್ಯವೆನಿಸಿದರೆ ಅದನ್ನು ಬಲಪ್ರಯೋಗದ ಮೂಲಕ ಬೀಜಿಂಗ್ ನ ಆಳ್ವಿಕೆಯ ಅಡಿಯಲ್ಲಿ ತರುವುದಾಗಿ ಶಪಥ ಮಾಡಿದೆ.
ಚೀನಾ ತೈವಾನ್ನ ಉನ್ನತ ವ್ಯಾಪಾರ ಪಾಲುದಾರನಾಗಿದ್ದು, 2018 ರಲ್ಲಿ ವ್ಯಾಪಾರವು $ 226 ಬಿಲಿಯನ್ ಆಗಿದೆ. ತೈವಾನ್ ಚೀನಾದೊಂದಿಗೆ ದೊಡ್ಡ ವ್ಯಾಪಾರ ಕೊರತೆಯನ್ನು ಹೊ೦ದಿದೆ.
- ತೈವಾನ್ ಸ್ವಯಂ ಆಡಳಿತ ಹೊಂದಿದೆ (Taiwan is self-governed) ಮತ್ತು ವಾಸ್ತವಿಕವಾಗಿ ಸ್ವತಂತ್ರವಾಗಿದ್ದರೂ, ಅದು ಎಂದಿಗೂ ಔಪಚಾರಿಕವಾಗಿ ಚೀನಾ -ಮುಖ್ಯ ಭೂಭಾಗದಿಂದ ಸ್ವಾತಂತ್ರ್ಯವನ್ನು ಘೋಷಿಸಿಕೊಂಡಿಲ್ಲ.
- “ಒಂದು ದೇಶ, ಎರಡು ಆಡಳಿತ ವ್ಯವಸ್ಥೆಗಳು” ಸೂತ್ರದಡಿಯಲ್ಲಿ, (one country, two systems) ತೈವಾನ್ಗೆ ತನ್ನದೇ ಆದ ಆಡಳಿತ ವ್ಯವಹಾರಗಳನ್ನು ನಡೆಸುವ ಹಕ್ಕಿದೆ; ಇದೇ ರೀತಿಯ ವ್ಯವಸ್ಥೆಯನ್ನು ಹಾಂಗ್ ಕಾಂಗ್ನಲ್ಲಿಯೂ ಬಳಸಲಾಗುತ್ತದೆ.
- ತೈವಾನ್ ವಿವಿಧ ಹೆಸರುಗಳಲ್ಲಿ ವಿಶ್ವ ವ್ಯಾಪಾರ ಸಂಘಟನೆ , ಏಷ್ಯಾ-ಪೆಸಿಫಿಕ್ ಆರ್ಥಿಕ ಸಹಕಾರ ಮತ್ತು ಏಷ್ಯನ್ ಅಭಿವೃದ್ಧಿ ಬ್ಯಾಂಕ್ ಗಳ ಸದಸ್ಯತ್ವ ವನ್ನು ಹೊಂದಿದೆ.
- ಪ್ರಸ್ತುತ, ತೈವಾನ್ ಮೇಲೆ ಚೀನಾ ಹಕ್ಕು ಸಾಧಿಸುತ್ತಿದೆ, ಅಲ್ಲದೆ ಈ ಪ್ರಜಾಪ್ರಭುತ್ವವಾದಿ ತೈವಾನ್ ಅನ್ನು ಗುರುತಿಸುವ ದೇಶಗಳೊಂದಿಗೆ ರಾಜತಾಂತ್ರಿಕ ಸಂಬಂಧವನ್ನು ಚೀನಾ ನಿರಾಕರಿಸುತ್ತದೆ.
ಇಂಡೋ- ತೈವಾನ್ ಸಂಬಂಧಗಳು:
- ಎರಡೂ ದೇಶಗಳ ಮಧ್ಯೆ ಔಪಚಾರಿಕ ರಾಜತಾಂತ್ರಿಕ ಸಂಬಂಧಗಳಿಲ್ಲದಿದ್ದರೂ, ತೈವಾನ್ ಮತ್ತು ಭಾರತ ವಿವಿಧ ಕ್ಷೇತ್ರಗಳಲ್ಲಿ ಸಹಕರಿಸುತ್ತಿವೆ.
- 2010 ರಿಂದ “ಒಂದು-ಚೀನಾ” ನೀತಿಯನ್ನು ಅನುಮೋದಿಸಲು ಭಾರತ ನಿರಾಕರಿಸಿದೆ.
ವಿಷಯಗಳು: ಪ್ರಮುಖ ಅಂತರರಾಷ್ಟ್ರೀಯ ಸಂಸ್ಥೆಗಳು, ಏಜೆನ್ಸಿಗಳು ಮತ್ತು ವೇದಿಕೆಗಳು, ಅವುಗಳ ರಚನೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿ:
(United Nations Security Council)
ಸಂದರ್ಭ:
ಇತ್ತೀಚೆಗೆ, ಉತ್ತರ ಕೊರಿಯಾ ತನ್ನ ದೇಶದ ಕ್ಷಿಪಣಿ ಕಾರ್ಯಕ್ರಮವನ್ನು ಟೀಕಿಸದಂತೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ (United Nations Security Council) ಎಚ್ಚರಿಕೆ ನೀಡಿದೆ.
ಏನಿದು ಪ್ರಕರಣ?
- ‘ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು’ ಉತ್ತರ ಕೊರಿಯಾದ ಸಾರ್ವಭೌಮತ್ವವನ್ನು ಉಲ್ಲಂಘಿಸಲು ಪ್ರಯತ್ನಿಸಿದರೆ, ಅದು ಭವಿಷ್ಯದಲ್ಲಿ ಅದರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಉತ್ತರ ಕೊರಿಯಾವು ‘ವಿಶ್ವಸಂಸ್ಥೆಯ ಭದ್ರತಾ ಮಂಡಳಿ’ (UNSC) ಗೆ ಎಚ್ಚರಿಕೆ ನೀಡಿದೆ.
- ಅದೇ ಸಮಯದಲ್ಲಿ, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು,“ಡಬಲ್ ಡೀಲಿಂಗ್ ಸ್ಟಾಂಡರ್ಡ್ ಅನ್ನು” ಅಳವಡಿಸಿಕೊಂಡಿದೆ ಎಂದು ಉತ್ತರ ಕೊರಿಯಾ ಆರೋಪಿಸಿದೆ. ಕಾರಣ, ಯುನೈಟೆಡ್ ನೇಷನ್ಸ್ ಸೆಕ್ಯುರಿಟಿ ಕೌನ್ಸಿಲ್ ಅಮೆರಿಕ ಮತ್ತು ಅದರ ಮಿತ್ರರಾಷ್ಟ್ರಗಳು ಇದೇ ರೀತಿಯ ಶಸ್ತ್ರಾಸ್ತ್ರಗಳನ್ನು ಪರೀಕ್ಷಿಸುವ ಸಮಸ್ಯೆಯನ್ನು ಸಮಾನವಾಗಿ ಸ್ವೀಕರಿಸುವುದಿಲ್ಲ ಎಂದು ಹೇಳಿದೆ.
ಹಿನ್ನೆಲೆ:
ಆರು ತಿಂಗಳ ವಿರಾಮದ ನಂತರ, ಉತ್ತರ ಕೊರಿಯಾ ಸೆಪ್ಟೆಂಬರ್ನಲ್ಲಿ ಕ್ಷಿಪಣಿ ಪರೀಕ್ಷೆಯನ್ನು ಪುನರಾರಂಭಿಸಿತು ಮತ್ತು ಹೊಸದಾಗಿ ಅಭಿವೃದ್ಧಿಪಡಿಸಿದ ಹಲವಾರು ಕ್ಷಿಪಣಿಗಳನ್ನು ಒಳಗೊಂಡಂತೆ ದಕ್ಷಿಣ ಕೊರಿಯಾ ಮತ್ತು ಜಪಾನ್ ಗಳ ಮೇಲೆ ನಿಖರ ದಾಳಿಮಾಡುವ ಸಾಮರ್ಥ್ಯವಿರುವ ಪರಮಾಣು ಸಾಮರ್ಥ್ಯದ ಆಯುಧಗಳನ್ನು ಅಭಿವೃದ್ಧಿಪಡಿಸಿದೆ.
ಪ್ರಸ್ತುತ ಸನ್ನಿವೇಶ:
ಉತ್ತರ ಕೊರಿಯಾ ತನ್ನ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ಪರಮಾಣು ಶಸ್ತ್ರಾಸ್ತ್ರಗಳಿಂದ ಸಜ್ಜುಗೊಳಿಸುವ ಗುರಿಯನ್ನು ಹೊಂದಿರುವುದರಿಂದ, ಹಲವಾರು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯಗಳ ಅಡಿಯಲ್ಲಿ, ಉತ್ತರ ಕೊರಿಯಾವನ್ನು ಯಾವುದೇ ಬ್ಯಾಲಿಸ್ಟಿಕ್ ಕ್ಷಿಪಣಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದನ್ನು ನಿಷೇಧಿಸಲಾಗಿದೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿ (UNSC) ಯ ಕುರಿತು:
- ವಿಶ್ವಸಂಸ್ಥೆಯ ಭದ್ರತಾ ಮಂಡಳಿ (UNSC) ಸೇರಿದಂತೆ ವಿಶ್ವಸಂಸ್ಥೆಯ ಆರು ಪ್ರಮುಖ ಅಂಗಗಳನ್ನು ವಿಶ್ವಸಂಸ್ಥೆಯ ಚಾರ್ಟರ್ ಸ್ಥಾಪಿಸಿದೆ.
- ಚಾರ್ಟರ್ ಅಡಿಯಲ್ಲಿ, ಭದ್ರತಾ ಮಂಡಳಿಗೆ ನಿರ್ಧಾರ ತೆಗೆದುಕೊಳ್ಳುವ ಅಧಿಕಾರವನ್ನು ನೀಡಲಾಗುತ್ತದೆ ಮತ್ತು ಅದರ ನಿರ್ಧಾರಗಳು ಸದಸ್ಯ ರಾಷ್ಟ್ರಗಳ ಮೇಲೆ ಬಾಧ್ಯಸ್ಥ ವಾಗಿರುತ್ತವೆ.
- ಖಾಯಂ ಮತ್ತು ಶಾಶ್ವತವಲ್ಲದ ಸದಸ್ಯರು: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು 15 ಸದಸ್ಯರನ್ನು ಒಳಗೊಂಡಿದೆ, ಅದರಲ್ಲಿ 5 ಖಾಯಂ ಮತ್ತು 10 ಶಾಶ್ವತವಲ್ಲದ ರಾಷ್ಟ್ರಗಳು.
- ಪ್ರತಿ ವರ್ಷ, ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಐದು ಖಾಯಂ ಅಲ್ಲದ ಸದಸ್ಯರನ್ನು ಎರಡು ವರ್ಷಗಳ ಅವಧಿಗೆ ಆಯ್ಕೆ ಮಾಡುತ್ತದೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಅಧ್ಯಕ್ಷತೆಯ ಬಗ್ಗೆ:
- ಸದಸ್ಯ ರಾಷ್ಟ್ರಗಳ ಇಂಗ್ಲಿಷ್ ಹೆಸರಿನ ಮೊದಲ ಅಕ್ಷರಗಳ ಅನುಕ್ರಮದಲ್ಲಿ ಆಯಾ ರಾಷ್ಟ್ರಗಳಿಗೆ ಅಧ್ಯಕ್ಷ ಸ್ಥಾನವನ್ನು ಒಂದು ತಿಂಗಳು ಅವಧಿಗೆ ನೀಡಲಾಗುತ್ತದೆ.
- ಈ ಅನುಕ್ರಮವು ‘ಭದ್ರತಾ ಮಂಡಳಿ’ಯ 15 ಸದಸ್ಯ-ರಾಷ್ಟ್ರಗಳ ನಡುವೆ ಮಾಸಿಕವಾಗಿ ಮುಂದುವರಿಯುತ್ತದೆ.
- ಸದಸ್ಯ ರಾಷ್ಟ್ರದ ನಿಯೋಗದ ಮುಖ್ಯಸ್ಥರನ್ನು ‘ವಿಶ್ವಸಂಸ್ಥೆಯ ಭದ್ರತಾ ಮಂಡಳಿ’ ಅಧ್ಯಕ್ಷ ಎಂದು ಕರೆಯಲಾಗುತ್ತದೆ.
- ಭದ್ರತಾ ಮಂಡಳಿಯ ಅಧ್ಯಕ್ಷರು ಕೌನ್ಸಿಲ್ನ ಕಾರ್ಯಗಳನ್ನು ಸಮನ್ವಯಗೊಳಿಸುತ್ತಾರೆ, ನೀತಿ ವಿವಾದಗಳನ್ನು ನಿರ್ಧರಿಸುತ್ತಾರೆ ಮತ್ತು ಕೆಲವೊಮ್ಮೆ ಸಂಘರ್ಷದ ಗುಂಪುಗಳ ನಡುವೆ ರಾಜತಾಂತ್ರಿಕ ಅಥವಾ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸುತ್ತಾರೆ.
- ಭಾರತವು ಆಗಸ್ಟ್ 1ರಿಂದ ಒಂದು ತಿಂಗಳ ಅವಧಿಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಅಧ್ಯಕ್ಷತೆ ವಹಿಸಿಕೊಂಡಿದೆ. ಈ ಅವಧಿಯಲ್ಲಿ ಕಡಲ ಭದ್ರತೆ, ಶಾಂತಿ ಪಾಲನೆ ಮತ್ತು ಭಯೋತ್ಪಾದನೆ ನಿಗ್ರಹಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಆಯೋಜಿಸಲು ಸಿದ್ಧತೆ ನಡೆಸಿದೆ.
- ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಶಾಶ್ವತವಲ್ಲದ ಸದಸ್ಯ ರಾಷ್ಟ್ರವಾಗಿರುವ ಭಾರತದ ಎರಡು ವರ್ಷಗಳ ಅಧಿಕಾರಾವಧಿಯು 2021ರ ಜನವರಿ 1ರಿಂದ ಆರಂಭವಾಗಿದೆ. ಮುಂದಿನ ವರ್ಷ ಡಿಸೆಂಬರ್ನಲ್ಲಿ ಮತ್ತೆ ಭದ್ರತಾ ಮಂಡಳಿಯ ಅಧ್ಯಕ್ಷ ಸ್ಥಾನ ಭಾರತಕ್ಕೆ ಸಿಗಲಿದೆ.
ಭದ್ರತಾ ಮಂಡಳಿಗೆ ಜುಲೈ ತಿಂಗಳಲ್ಲಿ ಫ್ರಾನ್ಸ್ ಅಧ್ಯಕ್ಷತೆ ವಹಿಸಿತ್ತು.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಪ್ರಸ್ತಾವಿತ ಸುಧಾರಣೆಗಳು:
ವಿಶ್ವಸಂಸ್ಥೆಯ ಭದ್ರತಾ ಮಂಡಳಿ (UNSC) ಯನ್ನು ಐದು ಪ್ರಮುಖ ವಿಷಯಗಳಲ್ಲಿ ಸುಧಾರಣೆ ಮಾಡಲು ಉದ್ದೇಶಿಸಲಾಗಿದೆ:
ಸದಸ್ಯತ್ವದ ವರ್ಗಗಳು,
- ಐದು ಖಾಯಂ ಸದಸ್ಯರು ಹೊಂದಿರುವ ವೀಟೋ ಅಧಿಕಾರದ ಪ್ರಶ್ನೆ,
- ಪ್ರಾದೇಶಿಕ ಪ್ರಾತಿನಿಧ್ಯ,
- ವಿಸ್ತರಿತ ಮಂಡಳಿಯ ಗಾತ್ರ ಮತ್ತು ಅದರ ಕಾರ್ಯವೈಖರಿ, ಮತ್ತು,
- ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಮತ್ತು ವಿಶ್ವಸಂಸ್ಥೆಯ ಸಾಮಾನ್ಯ ಸಭೆ ನಡುವಿನ ಸಂಬಂಧಗಳು.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತದ ಖಾಯಂ ಸದಸ್ಯತ್ವಕ್ಕಾಗಿ ಪ್ರಮುಖ ಅಂಶಗಳು:
- ಭಾರತವು, ವಿಶ್ವಸಂಸ್ಥೆಯ ಸ್ಥಾಪಕ ಸದಸ್ಯ ದೇಶವಾಗಿದೆ.
- ಅತ್ಯಂತ ಮುಖ್ಯವಾದ ವಿಷಯವೆಂದರೆ,
- ಭಾರತವು ವಿವಿಧ ಕಾರ್ಯಾಚರಣೆಗಳಲ್ಲಿ ನಿಯೋಜಿಸಿರುವ ಶಾಂತಿಪಾಲಕರ ಸಂಖ್ಯೆಯು, P5 ದೇಶಗಳಿಗಿಂತ ಸುಮಾರು ಎರಡು ಪಟ್ಟು ಹೆಚ್ಚಾಗಿದೆ.
- ಭಾರತವು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ಮತ್ತು ಎರಡನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿದೆ.
- ಭಾರತವು ಮೇ 1998 ರಲ್ಲಿ ಪರಮಾಣು ಶಸ್ತ್ರಾಸ್ತ್ರ ರಾಷ್ಟ್ರದ (Nuclear Weapons State – NWS) ಸ್ಥಾನಮಾನವನ್ನು ಪಡೆಯಿತು.ಮತ್ತು ಅಸ್ತಿತ್ವದಲ್ಲಿರುವ ಖಾಯಂ ಸದಸ್ಯರಂತೆಯೇ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿದೆ.ಈ ಆಧಾರದ ಮೇಲೆ ಭಾರತವು ಭದ್ರತಾ ಮಂಡಳಿಯಲ್ಲಿ ಶಾಶ್ವತ ಸದಸ್ಯತ್ವಕ್ಕಾಗಿ ಸ್ವಾಭಾವಿಕ ಹಕ್ಕುದಾರನಾಗುತ್ತದೆ.
- ಭಾರತವು ತೃತೀಯ ಜಗತ್ತಿನ ರಾಷ್ಟ್ರಗಳ ನಿರ್ವಿವಾದ ನಾಯಕ ದೇಶವಾಗಿದೆ ಮತ್ತು ಇದು ‘ಅಲಿಪ್ತ ಚಳುವಳಿ’ ಮತ್ತು ಜಿ -77 ಗುಂಪಿನಲ್ಲಿ ಭಾರತ ನಿರ್ವಹಿಸಿದ ನಾಯಕತ್ವದ ಪಾತ್ರದಲ್ಲಿ ಇದು ಸ್ಪಷ್ಟವಾಗಿ ಪ್ರತಿಫಲಿಸುತ್ತದೆ.
ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತ :
- ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ 1950–51ರಿಂದ 2011–12ರವರೆಗೆ ಭಾರತವು ಏಳು ಬಾರಿ ಖಾಯಂ ಅಲ್ಲದ ಸದಸ್ಯ ರಾಷ್ಟ್ರವಾಗಿ ಆಯ್ಕೆಯಾಗಿದೆ.
- 1950-51ರಲ್ಲಿ, ಕೊರಿಯನ್ ಯುದ್ಧದ ಸಮಯದಲ್ಲಿ ಯುದ್ಧವನ್ನು ಕೊನೆಗೊಳಿಸಲು ಮತ್ತು ಕೊರಿಯಾ ಗಣರಾಜ್ಯದ ಸಹಾಯಕ್ಕಾಗಿ ಒತ್ತಾಯಿಸುವ ನಿರ್ಣಯಗಳನ್ನು ಅಂಗೀಕರಿಸಲು ಭಾರತ ಅಧ್ಯಕ್ಷತೆ ವಹಿಸಿತ್ತು.
- 1972-73ರಲ್ಲಿ ಭಾರತವು ವಿಶ್ವಸಂಸ್ಥೆಯಲ್ಲಿ ಬಾಂಗ್ಲಾದೇಶದ ಸದಸ್ಯತ್ವಕ್ಕಾಗಿ ಬಲವಾಗಿ ಬೆಂಬಲಿಸಿತು. ಆದರೆ, ಖಾಯಂ ಸದಸ್ಯ ರಾಷ್ಟ್ರವೊಂದರ ವೀಟೋ ಕಾರಣ ದಿಂದಾಗಿ ನಿರ್ಣಯವನ್ನು ಅಂಗೀಕರಿಸಲಾಗಿಲ್ಲ.
- 1977-78ರಲ್ಲಿ ಭಾರತವು UNSC ಯಲ್ಲಿ ಆಫ್ರಿಕಾಕ್ಕೆ ಬಲವಾದ ಧ್ವನಿಯಾಗಿ ವರ್ಣಭೇದ ನೀತಿಯ ವಿರುದ್ಧ ಮಾತನಾಡಿತು. 1978 ರಲ್ಲಿ ನಮೀಬಿಯಾದ ಸ್ವಾತಂತ್ರ್ಯಕ್ಕಾಗಿ ವಿದೇಶಾಂಗ ಸಚಿವ ಅಟಲ್ ಬಿಹಾರಿ ವಾಜಪೇಯಿ UNSC ಯಲ್ಲಿ ಮಾತನಾಡಿದರು.
- 1984-85ರಲ್ಲಿ, ಮಧ್ಯಪ್ರಾಚ್ಯದಲ್ಲಿ, ವಿಶೇಷವಾಗಿ ಪ್ಯಾಲೆಸ್ಟೈನ್ ಮತ್ತು ಲೆಬನಾನ್ಗಳ ವಿವಾದಗಳನ್ನು ಬಗೆಹರಿಸಲು UNSC ಯಲ್ಲಿ ಭಾರತ ಪ್ರಮುಖ ಧ್ವನಿಯಾಗಿತ್ತು.
- 2011-2012ರಲ್ಲಿ, ಭಾರತವು ಅಭಿವೃದ್ಧಿಶೀಲ ರಾಷ್ಟ್ರಗಳ ಪರವಾಗಿ, ಶಾಂತಿಪಾಲನೆ, ಭಯೋತ್ಪಾದನೆ ನಿಗ್ರಹ ಮತ್ತು ಆಫ್ರಿಕಾದ ದೇಶಗಳಿಗೆ ಬಲವಾದ ಧ್ವನಿಯಾಗಿತ್ತು.
- ಭಯೋತ್ಪಾದನೆ ನಿಗ್ರಹಕ್ಕೆ ಸಂಬಂಧಿಸಿದ UNSC 1373 ಸಮಿತಿ, ಭಯೋತ್ಪಾದಕ ಕೃತ್ಯಗಳಿಂದ ಅಂತರರಾಷ್ಟ್ರೀಯ ಶಾಂತಿ ಮತ್ತು ಭದ್ರತೆಗೆ ಬೆದರಿಕೆ ಹಾಕುವ ಬಗ್ಗೆ 1566 ಕಾರ್ಯನಿರತ ಗುಂಪು , ಮತ್ತು ಭಯೋತ್ಪಾದಕ ಕೃತ್ಯಗಳಿಂದ ಸುರಕ್ಷತೆ, ಮತ್ತು ಸೊಮಾಲಿಯಾ ಮತ್ತು ಎರಿಟ್ರಿಯಾಕ್ಕೆ ಸಂಬಂಧಿಸಿದ ಭದ್ರತಾ ಮಂಡಳಿ 751/1907 ಸಮಿತಿಯ ಅಧ್ಯಕ್ಷತೆಯನ್ನು ಭಾರತ ವಹಿಸಿದೆ.
- ಭಾರತ ಈ ಹಿಂದೆ ಹಲವು ಭಾರಿ ಭದ್ರತಾ ಮಂಡಳಿಯ ಕಾಯಂ ಅಲ್ಲದ ಸದಸ್ಯ ದೇಶವಾಗಿ ಆಯ್ಕೆಯಾಗಿತ್ತು. 1950-1951, 1967-1968, 1972-1973, 1977-1978, 1984-1985, 1991-1992 ಮತ್ತು ಇತ್ತೀಚೆಗೆ 2011-2012ರಲ್ಲಿ ಖಾಯಂ ಅಲ್ಲದ ಸದಸ್ಯ ರಾಷ್ಟ್ರವಾಗಿ ಭದ್ರತಾ ಮಂಡಳಿಗೆ ಪ್ರವೇಶಿಸಿತ್ತು.
- ‘ಜಗತ್ತಿನ ದೊಡ್ಡ ಪ್ರಜಾಪ್ರಭುತ್ವ ದೇಶವಾದ ಭಾರತ ಪ್ರಜಾತಂತ್ರ, ಮಾನವ ಹಕ್ಕುಗಳು ಹಾಗೂ ಅಭಿವೃದ್ಧಿ ಸೇರಿದಂತೆ ಮೂಲಭೂತ ಮೌಲ್ಯಗಳನ್ನು ಎತ್ತಿ ಹಿಡಿಯಲು ಸದಾ ಶ್ರಮಿಸುತ್ತದೆ’ ಎಂದು ವಿಶ್ವಸಂಸ್ಥೆಯಲ್ಲಿ ಭಾರತದ ಕಾಯಂ ಪ್ರತಿನಿಧಿ ಟಿ.ಎಸ್.ತಿರುಮೂರ್ತಿ ಹೇಳಿದ್ದಾರೆ.
- ‘ವಿಶ್ವಸಂಸ್ಥೆ ವಿವಿಧತೆಯಲ್ಲಿ ಏಕತೆಯನ್ನು ಪ್ರತಿಬಿಂಬಿಸುತ್ತದೆ. ಅದರ ಆಶಯದ ಚೌಕಟ್ಟಿನಲ್ಲಿಯೇ ವೈವಿಧ್ಯವು ಪ್ರಜ್ವಲಿಸಬೇಕು ಎಂಬ ತತ್ವಕ್ಕೆ ಭಾರತ ಬದ್ಧವಾಗಿದೆ. ಇದೇ ಆಶಯದೊಂದಿಗೆ ಭಾರತ ಭದ್ರತಾ ಮಂಡಳಿಯಲ್ಲಿ ಕಾರ್ಯ ನಿರ್ವಹಿಸಲಿದೆ’.
ಸಾಮಾನ್ಯ ಅಧ್ಯಯನ ಪತ್ರಿಕೆ : 3
ವಿಷಯಗಳು: ಸಂರಕ್ಷಣೆ ಮತ್ತು ಜೀವವೈವಿಧ್ಯತೆಗೆ ಸಂಬಂಧಿತ ಸಮಸ್ಯೆಗಳು.
ಜಲ ಜೀವನ್ ಮಿಷನ್ (JJM):
(Jal Jeevan Mission (JJM)
ಸಂದರ್ಭ:
ಪ್ರಧಾನಿ ನರೇಂದ್ರ ಮೋದಿಯವರು ಅಕ್ಟೋಬರ್ 2, 2021 ರಂದು ಗಾಂಧಿ ಜಯಂತಿಯ ಸಂದರ್ಭದಲ್ಲಿ ಜನರಲ್ಲಿ ಹೆಚ್ಚಿನ ಅರಿವು ಮೂಡಿಸಲು ಮತ್ತು ಮಿಷನ್ ಅಡಿಯಲ್ಲಿ ಯೋಜನೆಗಳ ಹೆಚ್ಚಿನ ಪಾರದರ್ಶಕತೆ ಮತ್ತು ಹೊಣೆಗಾರಿಕೆಗಾಗಿ ಹೊಸದಾಗಿ ವಿನ್ಯಾಸಗೊಳಿಸಿದ ಜಲ ಜೀವನ ಮಿಷನ್ (JJM) ಮೊಬೈಲ್ ಅಪ್ಲಿಕೇಶನ್ ಅನ್ನು ಪ್ರಾರಂಭಿಸಿದ್ದಾರೆ.
- ಪ್ರಧಾನಮಂತ್ರಿಯವರು ‘ರಾಷ್ಟ್ರೀಯ ಜಲ ಜೀವನ ಕೋಷ್’ ಅನ್ನು ಪ್ರಾರಂಭಿಸಿದರು, ಇದರಲ್ಲಿ ಯಾವುದೇ ವ್ಯಕ್ತಿ, ಸಂಸ್ಥೆ, ನಿಗಮ ಅಥವಾ ಲೋಕೋಪಕಾರಿ, ಭಾರತದಲ್ಲಿರಲಿ ಅಥವಾ ವಿದೇಶದಲ್ಲಿರಲಿ, ಪ್ರತಿ ಗ್ರಾಮೀಣ ಮನೆ, ಶಾಲೆ, ಅಂಗನವಾಡಿ ಕೇಂದ್ರ, ಆಶ್ರಮ ಶಾಲೆ ಮತ್ತು ಇತರ ಸಾರ್ವಜನಿಕ ಸಂಸ್ಥೆಗಳಲ್ಲಿ ನಲ್ಲಿಯ ಮೂಲಕ ನೀರನ್ನು ತಲುಪಿಸಲು ಸಹಾಯ ಮಾಡಲು ಕೊಡುಗೆ ನೀಡಬಹುದು.
ಹಿನ್ನೆಲೆ:
‘ಜಲ ಜೀವನ್ ಅಭಿಯಾನ’ವು, 100% ವ್ಯಾಪ್ತಿಯನ್ನು ಸಾಧಿಸುವ ಗುರಿ ಹೊಂದಿದೆ ಮತ್ತು ಪ್ರತಿ ಶಾಲೆ, ಅಂಗನವಾಡಿ ಮತ್ತು ಆಶ್ರಮಶಾಲಾ ಅಥವಾ ವಸತಿ ಬುಡಕಟ್ಟು ಶಾಲೆಯಲ್ಲಿ ಕುಡಿಯಲು ಮತ್ತು ಅಡುಗೆ ಮಾಡಲು, ಯೋಗ್ಯವಾದ ನೀರಿನ ಪೂರೈಕೆಗಾಗಿ, ಮತ್ತು ಶೌಚಾಲಯದಲ್ಲಿ ಕೈ ತೊಳೆಯಲು ಟ್ಯಾಪ್ ವಾಟರ್ ಒದಗಿಸುವ ಉದ್ದೇಶವನ್ನು ಹೊಂದಿದೆ.
ಜಲ ಜೀವನ್ ಮಿಷನ್ ಬಗ್ಗೆ:
2024 ರ ವೇಳೆಗೆ ಪ್ರತಿ ಗ್ರಾಮೀಣ ಕುಟುಂಬದ ಪ್ರತಿ ವ್ಯಕ್ತಿಗೆ ದಿನಕ್ಕೆ 55 ಲೀಟರ್ ನೀರನ್ನು ಮನೆಗಳಿಗೆ ಕ್ರಿಯಾತ್ಮಕ ನಲ್ಲಿ ಸಂಪರ್ಕದ (Functional Household Tap Connections -FHTC) ಮೂಲಕ ಪೂರೈಸಲು JJM ಉದ್ದೇಶಿಸಿದೆ.
ಇದು ಜಲಶಕ್ತಿ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ.
- ಯೋಜನೆಯನ್ನು 2019 ರಲ್ಲಿ ಆರಂಭಿಸಲಾಯಿತು.
ಇದು ಒಳಗೊಂಡಿರುವುದು:
- ಗುಣಮಟ್ಟದ ಕೊರತೆ ಇರುವ ಪ್ರದೇಶಗಳಲ್ಲಿ, ಬರ ಪೀಡಿತ ಮತ್ತು ಮರುಭೂಮಿ ಪ್ರದೇಶಗಳಲ್ಲಿನ ಗ್ರಾಮಗಳು, ಸಂಸದ ಆದರ್ಶ ಗ್ರಾಮ ಯೋಜನೆ (SAGY) ಅಡಿಯಲ್ಲಿರುವ ಗ್ರಾಮಗಳು, ಇತ್ಯಾದಿಗಳಲ್ಲಿ ಮನೆಗಳಿಗೆ ಕ್ರಿಯಾತ್ಮಕ ನಲ್ಲಿ ಸಂಪರ್ಕದ (FHTCs) ಜೋಡಣೆಗೆ ಆದ್ಯತೆ ನೀಡುವುದು.
- ಶಾಲೆಗಳು, ಅಂಗನವಾಡಿ ಕೇಂದ್ರಗಳು, ಗ್ರಾಮ ಪಂಚಾಯಿತಿ ಕಟ್ಟಡಗಳು, ಆರೋಗ್ಯ ಕೇಂದ್ರಗಳು, ಕಲ್ಯಾಣ ಕೇಂದ್ರಗಳು ಮತ್ತು ಸಮುದಾಯ ಕಟ್ಟಡಗಳಿಗೆ ಕ್ರಿಯಾತ್ಮಕ ಟ್ಯಾಪ್ / ನಲ್ಲಿ ಸಂಪರ್ಕವನ್ನು ಒದಗಿಸುವುದು.
- ನೀರಿನ-ಗುಣಮಟ್ಟದ ಸಮಸ್ಯೆಗೆ ಕಾರಣವಾದ ಮಾಲಿನ್ಯಕಾರಕಗಳನ್ನು ತೆಗೆದುಹಾಕಲು ತಂತ್ರಜ್ಞಾನದ ಉಪಯೋಗ ಮಾಡುವುದು.
ಅನುಷ್ಠಾನ:
- ‘ಜಲ ಜೀವನ್ ಮಿಷನ್’ ನೀರಿನ ಸಮುದಾಯ ವಿಧಾನವನ್ನು ಆಧರಿಸಿದೆ ಮತ್ತು ವ್ಯಾಪಕವಾದ ಮಾಹಿತಿ, ಶಿಕ್ಷಣ ಮತ್ತು ಸಂವಹನವನ್ನು ಮಿಷನ್ನ ಪ್ರಮುಖ ಅಂಶವಾಗಿ ಒಳಗೊಂಡಿದೆ.
- ನೀರಿಗಾಗಿ ಜನಾಂದೋಲನವನ್ನು ರೂಪಿಸುವುದು ಈ ಕಾರ್ಯಾಚರಣೆಯ ಉದ್ದೇಶವಾಗಿದೆ, ಅದರ ಮೂಲಕ ಅದು ಎಲ್ಲರ ಆದ್ಯತೆಯಾಗುವಂತೆ ಮಾಡುವುದಾಗಿದೆ.
- ಈ ಜಲಜೀವನ್ ಮಿಷನ್ ಗಾಗಿ, ಕೇಂದ್ರ ರಾಜ್ಯಗಳ ನಡುವೆ ಅನುದಾನದ ಹಂಚಿಕೆಯ ಅನುಪಾತವು ಹಿಮಾಲಯನ್ ಮತ್ತು ಈಶಾನ್ಯ ರಾಜ್ಯಗಳಿಗೆ 90:10 ಇದ್ದರೆ, ಇತರ ರಾಜ್ಯಗಳಿಗೆ 50:50 ಅನುಪಾತದಲ್ಲಿದೆ; ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರವು 100% ಆರ್ಥಿಕ ನೆರವು ನೀಡಲಿದೆ.
ಯೋಜನೆಯ ಕಾರ್ಯಕ್ಷಮತೆ:
ಇಲ್ಲಿಯವರೆಗೆ, 772,000 (ಶೇ. 76) ಶಾಲೆಗಳು ಮತ್ತು 748,000 (ಶೇ. 67.5) ಅಂಗನವಾಡಿ ಕೇಂದ್ರಗಳಲ್ಲಿ ‘ಟ್ಯಾಪ್ ವಾಟರ್ ಪೂರೈಕೆಯನ್ನು’ ಖಾತ್ರಿಪಡಿಸಲಾಗಿದೆ.
ವಿಷಯಗಳು: ಮೂಲಸೌಕರ್ಯ ಇಂಧನ.
ವಿದ್ಯುತ್ (ಗ್ರಾಹಕರ ಹಕ್ಕುಗಳು) ತಿದ್ದುಪಡಿ ನಿಯಮಗಳು, 2021ರ ಕರಡು.
(The Draft Electricity (Rights of Consumers) Amendment Rules, 2021)
ಸಂದರ್ಭ:
ಇತ್ತೀಚೆಗೆ ಸೆಪ್ಟೆಂಬರ್ 30, 2021 ರಂದು, ವಿದ್ಯುತ್ (ಗ್ರಾಹಕರ ಹಕ್ಕುಗಳು) ತಿದ್ದುಪಡಿ ನಿಯಮಗಳು, 2021 ಕರಡನ್ನು ಪ್ರಕಟಿಸಲಾಯಿತು.
- ದಯವಿಟ್ಟು ಗಮನಿಸಿ, ಈ ‘ಕರಡು ತಿದ್ದುಪಡಿಯಿಂದ’ ‘ವಿದ್ಯುತ್ (ಗ್ರಾಹಕರ ಹಕ್ಕುಗಳು) ನಿಯಮಗಳು, 2020’ ಕ್ಕೆ ಕೆಲವು ಪ್ರಮುಖ ಸೇರ್ಪಡೆಗಳು ಮತ್ತು ತಿದ್ದುಪಡಿಗಳನ್ನುಮಾಡಲಾಗಿದೆ.
ಹೊಸ ನಿಯಮಗಳ ಅವಲೋಕನ:
- ವಿತರಣಾ ಪರವಾನಗಿದಾರರು ಎಲ್ಲಾ ಗ್ರಾಹಕರಿಗೆ 24×7 ತಡೆರಹಿತ ವಿದ್ಯುತ್ ಪೂರೈಕೆಯನ್ನು ಖಚಿತಪಡಿಸಿಕೊಳ್ಳಬೇಕು, ಹೀಗಾಗಿ ವಿದ್ಯುತ್ ಪೂರೈಕೆಗಾಗಿ ‘ಡೀಸೆಲ್-ಚಾಲಿತ’ ಉತ್ಪಾದಿಸುವ ಸೆಟ್ ಗಳನ್ನು ಬಳಸುವ ಅಗತ್ಯವಿರುವುದಿಲ್ಲ.
- ವಿದ್ಯುತ್ ನಿಯಂತ್ರಣ ಆಯೋಗ: ವಿತರಣಾ ಕಂಪನಿಯು ಮೂಲಸೌಕರ್ಯ ವಲಯದಲ್ಲಿ ಹೂಡಿಕೆ ಮಾಡಲು ಬಯಸಿ ಹಣದ ಅಗತ್ಯವಿದ್ದಲ್ಲಿ, ವಿದ್ಯುತ್ ನಿಯಂತ್ರಣ ಆಯೋಗವು ಪ್ರತ್ಯೇಕ ವಿಶ್ವಾಸಾರ್ಹತೆಯ ಶುಲ್ಕವನ್ನು ವಿತರಣಾ ಕಂಪನಿಗಾಗಿ ಪರಿಗಣಿಸಬಹುದು.
- ರಾಜ್ಯ ವಿದ್ಯುತ್ ನಿಯಂತ್ರಣ ಆಯೋಗ:ವಿತರಣಾ ಕಂಪನಿಯು ನಿಗದಿತ ಮಾನದಂಡಗಳನ್ನು ಪೂರೈಸದಿದ್ದಲ್ಲಿ ರಾಜ್ಯ ವಿದ್ಯುತ್ ನಿಯಂತ್ರಣ ಆಯೋಗವು ವಿತರಣಾ ಕಂಪನಿಗೆ ದಂಡ ವಿಧಿಸುವ ನಿಬಂಧನೆಯನ್ನು ಒದಗಿಸಬಹುದು.
ವಿದ್ಯುತ್ (ಗ್ರಾಹಕರ ಹಕ್ಕುಗಳು) ನಿಯಮಗಳು, 2020:
ಇತ್ತೀಚೆಗೆ, ಕೇಂದ್ರ ವಿದ್ಯುತ್ ಸಚಿವಾಲಯವು ದೇಶದಲ್ಲಿ ವಿದ್ಯುತ್ ಗ್ರಾಹಕರ ಹಕ್ಕುಗಳನ್ನು ಸೂಚಿಸುವ ನಿಯಮಗಳನ್ನು ಜಾರಿಗೆ ತಂದಿದೆ. ಈ ನಿಯಮಗಳು ಗ್ರಾಹಕರಿಗೆ ಗುಣಮಟ್ಟದ, ವಿಶ್ವಾಸಾರ್ಹ ಮತ್ತು ನಿರಂತರ ವಿದ್ಯುಚ್ಛಕ್ತಿಯ ಪೂರೈಕೆಯ ಹಕ್ಕನ್ನು ಬಲಪಡಿಸುತ್ತದೆ.
ಈ ಕೆಳಗಿನ ಪ್ರಮುಖ ಅಂಶಗಳನ್ನು ವಿದ್ಯುತ್ (ಗ್ರಾಹಕ ಹಕ್ಕುಗಳು) ನಿಯಮಗಳು ಒಳಗೊಂಡಿದೆ:
- ಗ್ರಾಹಕರ ಹಕ್ಕುಗಳು ಮತ್ತು ವಿತರಣಾ ಪರವಾನಗಿದಾರರ ಹೊಣೆಗಾರಿಕೆಗಳು
- ಹೊಸ ಸಂಪರ್ಕದ ಬಿಡುಗಡೆ ಮತ್ತು ಅಸ್ತಿತ್ವದಲ್ಲಿರುವ ಸಂಪರ್ಕದ ಮಾರ್ಪಾಡು
- ಮೀಟರ್ ನಿರ್ವಹಣೆ
- ಬಿಲ್ಲಿಂಗ್ ಮತ್ತು ಪಾವತಿ
- ಸಂಪರ್ಕ ಕಡಿತ ಮತ್ತು ಮರುಸಂಪರ್ಕ
- ಪೂರೈಕೆಯ ವಿಶ್ವಾಸಾರ್ಹತೆ
- ಪ್ರೋಸ್ಯುಮರ್ ರೂಪದಲ್ಲಿ ಗ್ರಾಹಕರು
- ಪರವಾನಗಿದಾರರ ಕಾರ್ಯಕ್ಷಮತೆಯ ಮಾನದಂಡಗಳು
- ಪರಿಹಾರದ ಕಾರ್ಯವಿಧಾನ
- ಗ್ರಾಹಕ ಸೇವೆಗಳಿಗಾಗಿ ಕಾಲ್ ಸೆಂಟರ್
- ಕುಂದುಕೊರತೆ ಪರಿಹಾರ ವ್ಯವಸ್ಥೆ .
ಪ್ರಮುಖ ನಿಬಂಧನೆಗಳು:
- ಎಲ್ಲಾ ರಾಜ್ಯಗಳು ಈ ನಿಯಮಗಳನ್ನು ಜಾರಿಗೊಳಿಸುವುದು ಕಡ್ಡಾಯವಾಗಿರುತ್ತದೆ ಮತ್ತು ವಿದ್ಯುತ್ ಸಂಪರ್ಕಗಳನ್ನು ಒದಗಿಸುವಲ್ಲಿ ಮತ್ತು ನವೀಕರಣಗಳನ್ನು ಮಾಡುವಲ್ಲಿ ವಿಳಂಬದಂತಹ ಸಮಸ್ಯೆಗಳಿಗೆ ಡಿಸ್ಕಾಮ್ಗಳನ್ನು ಹೊಣೆಗಾರರನ್ನಾಗಿ ಮಾಡಲಾಗುತ್ತದೆ.
- ವಿದ್ಯುತ್ ಸಚಿವಾಲಯದ ಪ್ರಕಾರ, ಎಲ್ಲಾ ರಾಜ್ಯಗಳು ಸಹ ಗ್ರಾಹಕರಿಗೆ ದಿನದ 24 ಗಂಟೆಗಳು ಕೂಡ ವಿದ್ಯುತ್ ನೀಡಲು ಬದ್ಧವಾಗಿವೆ.
- ನಿಯಮಗಳ ಅನುಸರಣೆಯನ್ನು ಖಚಿತಪಡಿಸಿಕೊಳ್ಳಲು, ಸರ್ಕಾರವು ಗ್ರಾಹಕರ ಖಾತೆಯಲ್ಲಿ ಜಮಾ ಮಾಡಲ್ಪಡುವ ಜವಾಬ್ದಾರಿಯುತ ಘಟಕಗಳ ಮೇಲೆ ದಂಡವನ್ನು ವಿಧಿಸುತ್ತದೆ.
- ವಿಶೇಷವಾಗಿ,ಕೃಷಿ ಉದ್ದೇಶಗಳಿಗಾಗಿನ ವಿದ್ಯುತ್ ಬಳಕೆಗೆ ಸಂಬಂಧಿಸಿದಂತೆ ಈ ನಿಯಮಗಳ ಅಡಿಯಲ್ಲಿ ಕೆಲವು ವಿನಾಯಿತಿಗಳನ್ನು ಸೇರಿಸಲಾಗಿದೆ.
ಹಿನ್ನೆಲೆ:
ವಿದ್ಯುತ್ ಸಮವರ್ತಿ ಪಟ್ಟಿಯಲ್ಲಿನ (ಏಳನೇ ವೇಳಾಪಟ್ಟಿ) ಒಂದು ವಿಷಯವಾಗಿದೆ ಮತ್ತು ಈ ವಿಷಯದ ಮೇಲೆ ಕಾನೂನುಗಳನ್ನು ಮಾಡುವ ಅಧಿಕಾರವನ್ನು ಕೇಂದ್ರ ಸರ್ಕಾರ ಹೊಂದಿದೆ.
ದಯವಿಟ್ಟು ಗಮನಿಸಿ:
- ಕೇಂದ್ರ ಸರ್ಕಾರವು 2003ರ ವಿದ್ಯುತ್ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿದೆ. ವಿದ್ಯುತ್ (ತಿದ್ದುಪಡಿ) ಕಾಯ್ದೆ 2020ರ ಕರಡು ಪ್ರತಿಯನ್ನು ಏಪ್ರಿಲ್ 17ರಂದೇ ಪ್ರಕಟಿಸಲಾಗಿದೆ. ವಿದ್ಯುತ್ ವಿತರಣೆ ರಂಗದಲ್ಲಿ ಮಹತ್ವದ ಹಲವು ಬದಲಾವಣೆಗಳ ಉದ್ದೇಶದ ಈ ತಿದ್ದುಪಡಿಗೆ ವಿವಿಧ ವರ್ಗಗಳಿಂದ ಆಕ್ಷೇಪವೂ ವ್ಯಕ್ತವಾಗಿದೆ.
- ಪ್ರಸ್ತಾವಿತ ತಿದ್ದುಪಡಿಯು ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣ ಮಾಡುವ ಹುನ್ನಾರವನ್ನು ಹೊಂದಿದೆ ಎಂದು ಅಖಿಲ ಭಾರತ ವಿದ್ಯುತ್ ಎಂಜಿನಿಯರ್ಗಳ ಒಕ್ಕೂಟವು (ಎಐಪಿಇಎಫ್) ಆರೋಪಿಸಿದೆ. ಸರ್ಕಾರದ ಈ ಪ್ರಯತ್ನವನ್ನು ವಿರೋಧಿಸಿ ಜೂನ್ 1ರಂದು ‘ಪ್ರತಿಭಟನಾ ದಿನ’ ಆಚರಿಸುವುದಾಗಿ ಒಕ್ಕೂಟ ಪ್ರಕಟಿಸಿದೆ.
- ಕೇಂದ್ರದ ವಿದ್ಯುತ್ ಸಚಿವ ಆರ್.ಕೆ.ಸಿಂಗ್ ಅವರಿಗೆ ಒಕ್ಕೂಟವು ಪತ್ರ ಬರೆದು ಅಸಮಾಧಾನ ವ್ಯಕ್ತಪಡಿಸಿದೆ. ಸಾರ್ವಜನಿಕರ ಹಣದಿಂದ ಸೃಷ್ಟಿಸಲಾದ ಆಸ್ತಿ ಮತ್ತು ನೈಸರ್ಗಿಕ ಸಂಪನ್ಮೂಲವನ್ನು ಖಾಸಗಿ ಕಂಪನಿಗಳಿಗೆ ವರ್ಗಾಯಿಸಲು ಮುಂದಾಗಿರುವುದು ತೀವ್ರ ಕಳವಳಕಾರಿ ಎಂದು ಒಕ್ಕೂಟವು ಹೇಳಿದೆ.
- ತಿದ್ದುಪಡಿಯ ಕರಡು ಪ್ರಕಟವಾದ ಸಮಯದ ಬಗ್ಗೆಯೂ ಆಕ್ಷೇಪ ವ್ಯಕ್ತವಾಗಿದೆ. ಇಡೀ ದೇಶವು ಕೋವಿಡ್–19 ಪಿಡುಗಿನ ವಿರುದ್ಧ ಹೋರಾಡುತ್ತಿರುವಾಗ ಮತ್ತು ದೇಶದಾದ್ಯಂತ ಲಾಕ್ಡೌನ್ ಇರುವ ಸಂದರ್ಭದಲ್ಲಿ ವಿದ್ಯುತ್ ಸಚಿವಾಲಯವು ಜನರ ವಿದ್ಯುತ್ ಹಕ್ಕುಗಳನ್ನು ದಮನ ಮಾಡಲು ಮುಂದಾಗಿದೆ ಎಂದು ಒಕ್ಕೂಟ ಆರೋಪಿಸಿದೆ.
- ಪ್ರಸ್ತಾವಿತ ತಿದ್ದುಪಡಿ ಮಸೂದೆಯನ್ನು ಅಮಾನತಿನಲ್ಲಿ ಇಡಬೇಕು. ರಾಜ್ಯಗಳು ಕೊರೊನಾ ವೈರಾಣು ವಿರುದ್ಧದ ಹೋರಾಟದಲ್ಲಿ ಇವೆ. ಇಂತಹ ಸಂದರ್ಭದಲ್ಲಿ ತಿದ್ದುಪಡಿಗೆ ವಿವರವಾದ ಪ್ರತಿಕ್ರಿಯೆ ಸಲ್ಲಿಸುವುದು ರಾಜ್ಯಗಳಿಗೆ ಸಾಧ್ಯವಿಲ್ಲ. ಕೋವಿಡ್ ಪಿಡುಗು ಹಿನ್ನೆಲೆಗೆ ಸರಿದ ಬಳಿಕವೇ ತಿದ್ದುಪಡಿ ವಿಚಾರದಲ್ಲಿ ಮುಂದುವರಿಯಬೇಕು ಎಂದು ತಮಿಳುನಾಡು ಮುಖ್ಯಮಂತ್ರಿ ಕೆ. ಪಳನಿಸ್ವಾಮಿ ಅವರು ಪ್ರಧಾನಿಗೆ ಮೇ 9ರಂದು ಬರೆದ ಪತ್ರದಲ್ಲಿ ಹೇಳಿದ್ದಾರೆ.
- ವಿದ್ಯುತ್ ನಿಯಂತ್ರಣ ಆಯೋಗದ ರಚನೆಗೆ ಸಬಂಧಿಸಿ ರಾಜ್ಯ ಸರ್ಕಾರಗಳು ಹೊಂದಿರುವ ಅಧಿಕಾರವನ್ನು ಕಸಿದುಕೊಳ್ಳುವ ಪ್ರಸ್ತಾವವೂ ತಿದ್ದುಪಡಿಯಲ್ಲಿ ಇದೆ. ಸಂವಿಧಾನದಲ್ಲಿರುವ ಒಕ್ಕೂಟ ತತ್ವಗಳನ್ನು ಇದು ಉಲ್ಲಂಘಿಸುತ್ತದೆ ಎಂದೂ ಅವರು ಪ್ರತಿಪಾದಿಸಿದ್ದಾರೆ.
ಪ್ರತಿಕ್ರಿಯೆ: ಜೂನ್ 5ರವರೆಗೆ ಅವಕಾಶ:
- ಕಡುವಿಗೆ ಪ್ರತಿಕ್ರಿಯೆ ಸಲ್ಲಿಸುವ ಗಡುವನ್ನು ಕೇಂದ್ರ ವಿದ್ಯುತ್ ಸಚಿವಾಲಯವು ಜೂನ್ 5ರವರೆಗೆ ವಿಸ್ತರಿಸಿದೆ. ಏಪ್ರಿಲ್ 17ರಂದು ಈ ಕರಡು ಪ್ರಕಟವಾಗಿತ್ತು. ಮೇ 8ರ ಒಳಗೆ ಪ್ರತಿಕ್ರಿಯೆ ಸಲ್ಲಿಸಲು ಸೂಚಿಸಲಾಗಿತ್ತು. ಆದರೆ, ಈ ಗಡುವನ್ನು ವಿಸ್ತರಿಸಬೇಕು ಎಂದು ಸಚಿವಾಲಯಕ್ಕೆ ಹಲವು ವಿನಂತಿಗಳು ಬಂದಿವೆ. ಹಾಗಾಗಿ, ಗಡುವನ್ನು ವಿಸ್ತರಿಸಲಾಗಿದೆ ಎಂದು ಸಚಿವಾಲಯ ಹೇಳಿದೆ.
- ನಾಲ್ಕನೇ ಪ್ರಯತ್ನ: ವಿದ್ಯುತ್ ವಿತರಣೆ ವ್ಯವಸ್ಥೆಯ ಸುಧಾರಣೆಗಾಗಿ ಕಾಯ್ದೆ ತಿದ್ದುಪಡಿಯ ಕರಡನ್ನು 2014ರಲ್ಲಿಯೇ ಸಿದ್ಧಪಡಿಸಿ, ಲೋಕಸಭೆಯಲ್ಲಿ ಮಂಡಿಸಲಾಗಿತ್ತು. ಮೊಬೈಲ್ ಫೋನ್ ಸೇವೆಯ ಕಂಪನಿಯನ್ನು ಬದಲಾಯಿಸುವ ರೀತಿಯಲ್ಲಿಯೇ ವಿದ್ಯುತ್ ವಿತರಣೆ ಕಂಪನಿಯನ್ನು ಬದಲಾಯಿಸಿಕೊಳ್ಳುವ ಅವಕಾಶವನ್ನು ಗ್ರಾಹಕರಿಗೆ ನೀಡುವ ಪ್ರಸ್ತಾವ ಈ ಕರಡುವಿನಲ್ಲಿ ಇತ್ತು. ಆದರೆ, ಲೋಕಸಭೆ ಅವಧಿ ಮುಗಿದ ಕಾರಣ ಮಸೂದೆಯು ರದ್ದಾಗಿತ್ತು. 2018 ಮತ್ತು 2019ರಲ್ಲಿಯೂ ತಿದ್ದುಪಡಿ ಕರಡನ್ನು ಪ್ರಕಟಿಸಲಾಗಿತ್ತು.
ತಿದ್ದುಪಡಿಯ ಮುಖ್ಯಾಂಶಗಳು:
- ರೈತರು ಸೇರಿ ಯಾವುದೇ ವರ್ಗಕ್ಕೆ ನೀಡುವ ವಿದ್ಯುತ್ ಶುಲ್ಕ ಸಹಾಯಧನವನ್ನು ವಿದ್ಯುತ್ ದರ ನಿಗದಿ ಮಾಡುವಾಗ ಗಣನೆಗೆ ತೆಗೆದುಕೊಳ್ಳಲಾಗುವುದಿಲ್ಲ. ಹಾಗಾಗಿ, ಎಲ್ಲ ವರ್ಗಗಳ ಗ್ರಾಹಕರು ವಿದ್ಯುತ್ತಿನ ಪೂರ್ಣ ಶುಲ್ಕವನ್ನು ಪಾವತಿಸಬೇಕು. ಸಹಾಯಧನದ ಮೊತ್ತವನ್ನು ಸರ್ಕಾರವು ಗ್ರಾಹಕರಿಗೆ ನೇರ ನಗದು ವರ್ಗಾವಣೆ ಮೂಲಕ ನೀಡಬೇಕು.
- ವಿದ್ಯುತ್ ಗುತ್ತಿಗೆ ಜಾರಿ ಪ್ರಾಧಿಕಾರ (ಇಸಿಇಎ) ರಚನೆ: ವಿದ್ಯುತ್ ಮಾರಾಟ, ಖರೀದಿ, ಪ್ರಸರಣಕ್ಕೆ ಸಂಬಂಧಿಸಿದ ವ್ಯಾಜ್ಯಗಳನ್ನು ಬಗೆಹರಿಸುವ ಅಧಿಕಾರ ಈ ಪ್ರಾಧಿಕಾರಕ್ಕೆ ಇದೆ. ದರ ನಿಗದಿ, ನಿಯಂತ್ರಣ ಮತ್ತು ವಿದ್ಯುತ್ ಶುಲ್ಕಕ್ಕೆ ಸಂಬಂಧಿಸಿದ ವ್ಯಾಜ್ಯಗಳು ಈ ಪ್ರಾಧಿಕಾರದ ವ್ಯಾಪ್ತಿಗೆ ಬರುವುದಿಲ್ಲ.
- ವಿತರಣೆ ಉಪ ಗುತ್ತಿಗೆ ಮತ್ತು ಫ್ರಾಂಚೈಸಿ: ಒಂದು ಪ್ರದೇಶದಲ್ಲಿ ವಿದ್ಯುತ್ ವಿತರಣೆಯ ಗುತ್ತಿಗೆ ಹೊಂದಿರುವ ಕಂಪನಿಯು, ತನ್ನ ವ್ಯಾಪ್ತಿಯೊಳಗೆ ವಿದ್ಯುತ್ ವಿತರಣೆಗೆ ಬೇರೊಂದು ಕಂಪನಿಗೆ ಉಪಗುತ್ತಿಗೆ ನೀಡಬಹುದು. ರಾಜ್ಯ ಆಯೋಗದ ಪೂರ್ವಾನುಮತಿ ಪಡೆದು ಈ ಗುತ್ತಿಗೆ ನೀಡಬಹುದು ಅಥವಾ ಈ ಕಂಪನಿಯನ್ನು ಫ್ರಾಂಚೈಸಿ ಎಂದು ನೇಮಿಸಿ, ರಾಜ್ಯ ಆಯೋಗಕ್ಕೆ ಮತ್ತೆ ಮಾಹಿತಿ ನೀಡಬಹುದು.
- ನಿಯಂತ್ರಣ ವ್ಯವಸ್ಥೆ ಸ್ಥಾಪನೆ, ಆಯೋಗಗಳ ರಚನೆ ಮತ್ತು ಅದರ ಅಧ್ಯಕ್ಷ ಹಾಗೂ ಸದಸ್ಯರ ನೇಮಕದಲ್ಲಿನ ಗೊಂದಲಗಳನ್ನು ನಿವಾರಿಸುವ ಪ್ರಸ್ತಾವ.
- ಶುಲ್ಕ ಪಾವತಿಯ ಖಾತರಿ ಇಲ್ಲದೇ ಇದ್ದರೆ ವಿತರಣಾ ಕಂಪನಿಗಳಿಗೆ ವಿದ್ಯುತ್ ಹಂಚಿಕೆಯನ್ನು ತಡೆ ಹಿಡಿಯುವ ಅವಕಾಶ.
ಪ್ರಮುಖ ಆಕ್ಷೇಪಗಳು:
- ಕೇಂದ್ರ ಮತ್ತು ರಾಜ್ಯ ವಿದ್ಯುತ್ ನಿಯಂತ್ರಣ ಆಯೋಗಗಳ ಅಧಿಕಾರವು ಇಸಿಇಎಯಿಂದಾಗಿ ಮೊಟಕಾಗುತ್ತದೆ.
- ಉಪಗುತ್ತಿಗೆ ಅಥವಾ ಫ್ರಾಂಚೈಸಿ ನೇಮಕವು ವಿದ್ಯುತ್ ವಿತರಣೆ ವ್ಯವಸ್ಥೆಯ ಖಾಸಗೀಕರಣಕ್ಕೆ ದಾರಿ ಮಾಡಿಕೊಡುತ್ತದೆ.
- ವಿವಿಧ ವರ್ಗಗಳಿಗೆ ನೀಡುವ ವಿದ್ಯುತ್ ಶುಲ್ಕ ಸಹಾಯಧನವನ್ನು ಈಗ ರಾಜ್ಯ ಸರ್ಕಾರಗಳು ನೇರವಾಗಿ ವಿದ್ಯುತ್ ವಿತರಣಾ ಕಂಪನಿಗಳಿಗೆ ಪಾವತಿಸುತ್ತದೆ. ಮುಂದೆ, ಗ್ರಾಹಕರೇ ನೇರವಾಗಿ ಶುಲ್ಕ ಪಾವತಿಸಬೇಕು. ಅವರ ಈ ವೆಚ್ಚವನ್ನು ‘ನೇರ ನಗದು ವರ್ಗಾವಣೆ’ ಮೂಲಕ ಸರ್ಕಾರಗಳು ಭರಿಸುತ್ತವೆ. ಆದರೆ, ಗ್ರಾಹಕರು ವಿದ್ಯುತ್ ಶುಲ್ಕ ಪಾವತಿಸದೇ ಇರಬಹುದು ಮತ್ತು ಸರ್ಕಾರದಿಂದ ಬಂದ ಸಹಾಯಧನವನ್ನು ಬೇರೆ ಉದ್ದೇಶಕ್ಕೆ ಬಳಸಬಹುದು.
- ರೈತರು ಮತ್ತು ಬಡ ಗ್ರಾಹಕರಿಗೆ ಸಕಾಲದಲ್ಲಿ ವಿದ್ಯುತ್ ಶುಲ್ಕ ಪಾವತಿಸುವುದು ಸಾಧ್ಯವಾಗದೇ ಇರಬಹುದು. ಇದರಿಂದಾಗಿ ವಿದ್ಯುತ್ ವಿತರಣಾ ಕಂಪನಿಗಳ ಆರ್ಥಿಕ ಹೊರೆ ಇನ್ನಷ್ಟು ಹೆಚ್ಚಬಹುದು.
ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:
ಸತ್ಯ ಮತ್ತು ಸಮನ್ವಯಕ್ಕಾಗಿ ರಾಷ್ಟ್ರೀಯ ದಿನ:
(National Day for Truth and Reconciliation)
ಇತ್ತೀಚೆಗೆ, ಕೆನಡಾದಿಂದ ಸತ್ತ ಮಕ್ಕಳು ಮತ್ತು ದೇಶದ ‘ಸ್ಥಳೀಯ ವಸತಿ ಶಾಲೆಗಳು’, ಕುಟುಂಬಗಳು ಮತ್ತು ಸಮುದಾಯಗಳ ಬದುಕುಳಿದವರ ಸ್ಮರಣಾರ್ಥವಾಗಿ ’30 ಸೆಪ್ಟೆಂಬರ್ ‘ಅನ್ನು’ ಸತ್ಯ ಮತ್ತು ಸಮನ್ವಯಕ್ಕಾಗಿ ಪ್ರಪ್ರಥಮ ರಾಷ್ಟ್ರೀಯ ದಿನ (National Day for Truth and Reconciliation) ವನ್ನಾಗಿ ಆಚರಿಸಲಾಯಿತು.
- ಈ ರಜಾದಿನದ ಉದ್ದೇಶವು ಎಲ್ಲಾ ನಾಗರಿಕರಿಗೆ ‘ಸ್ಥಳೀಯ ಮಕ್ಕಳ’ (Indigenous Children) ಇತಿಹಾಸ ಮತ್ತು ಸಂಕಟಗಳ ಬಗ್ಗೆ ತಿಳಿಸುವುದು ಮತ್ತು ನೆನಪಿಸುವ ಶಿಕ್ಷಣವನ್ನು ನೀಡುವುದು.
- ಈ ದಿನ ಎಲ್ಲಾ ನಾಗರಿಕರಿಗೆ ‘ಕಿತ್ತಳೆ’ ಬಟ್ಟೆಗಳನ್ನು ಧರಿಸಲು ಪ್ರೋತ್ಸಾಹ ನೀಡಲಾಗಿದ್ದು, ಆ ಮೂಲಕ ‘ಸ್ಥಳೀಯ ಮಕ್ಕಳು’ ಅವರ ಸಂಸ್ಕೃತಿ ಮತ್ತು ಸ್ವಾತಂತ್ರ್ಯವನ್ನು ಹೇಗೆ ಕಳೆದುಕೊಂಡಿದ್ದಾರೆ ಎಂಬುದನ್ನು ಇದು ಎತ್ತಿ ತೋರಿಸುತ್ತದೆ.
‘ರಾಷ್ಟ್ರೀಯ ಸತ್ಯ ಮತ್ತು ಸಮನ್ವಯ ದಿನ’ದ ಆರಂಭದ ಹಿನ್ನೆಲೆ:
ಈ ವರ್ಷದ ಆರಂಭದಲ್ಲಿ, ಕೆನಡಾದ ಬ್ರಿಟಿಷ್ ಕೊಲಂಬಿಯಾದಲ್ಲಿರುವ ಕಮ್ಲೂಪ್ಸ್ ಇಂಡಿಯನ್ ರೆಸಿಡೆನ್ಶಿಯಲ್ ಶಾಲೆಯಲ್ಲಿನ 215 ‘ಸ್ಥಳೀಯ ವಿದ್ಯಾರ್ಥಿಗಳ’ ನೂರಾರು ಗುರುತುಗಳಿಲ್ಲದ ಸಮಾಧಿಗಳು ಕಂಡುಬಂದಿವೆ. ಈ ಘಟನೆಯು ದೇಶದಲ್ಲಿ ರಾಷ್ಟ್ರೀಯ ಆಕ್ರೋಶವನ್ನು ಹುಟ್ಟುಹಾಕಿತು ಮತ್ತು ದೇಶಾದ್ಯಂತ ಇಂತಹ ಸಾಮೂಹಿಕ ಸಮಾಧಿಯನ್ನು ಹುಡುಕಲು ಸ್ಥಳೀಯ ಗುಂಪುಗಳನ್ನು ಪ್ರೇರೇಪಿಸಿತು.
ಕೆನಡಾದ ಸತ್ಯ ಮತ್ತು ಸಮನ್ವಯ ಆಯೋಗವು (TRC) ಅಂತಹ ವಸತಿ ಶಾಲೆಗಳು “ಮೂಲನಿವಾಸಿ ಸಂಸ್ಕೃತಿಗಳು ಮತ್ತು ಭಾಷೆಗಳನ್ನು ನಾಶಮಾಡಲು ವ್ಯವಸ್ಥಿತವಾದ, ಸರ್ಕಾರದ ಪ್ರಾಯೋಜಿತ ಪ್ರಯತ್ನವಾಗಿದೆ ಮತ್ತು ಅವರು ಇನ್ನು ಮುಂದೆ ವಿಭಿನ್ನ ಜನರಾಗಿ ಉಳಿಯದಂತೆ ಮೂಲನಿವಾಸಿಗಳನ್ನು ಒಗ್ಗೂಡಿಸುವ ಪ್ರಯತ್ನ” ಎಂದು ತೀರ್ಮಾನಿಸಿದರು.
ಆಯೋಗವು ಈ ಶಾಲೆಗಳ ಕಾರ್ಯಾಚರಣೆ ಮತ್ತು ಉದ್ದೇಶವನ್ನು “ಸಾಂಸ್ಕೃತಿಕ ನರಮೇಧ” (cultural genocide) ಕ್ಕೆ ಸಮಾನವೆಂದು ಘೋಷಿಸಿದೆ.
ನಂತರ, ಮೃತ ವಿದ್ಯಾರ್ಥಿಗಳು ಮತ್ತು ವ್ಯಕ್ತಿಗಳ ಗೌರವಾರ್ಥವಾಗಿ ಕ್ರಮ ಕೈಗೊಳ್ಳಲು ಕರೆ ನೀಡಲಾಯಿತು. ನಂತರ, ಕೆನಡಾದ ಸಂಸತ್ತು ಈ ದಿನವನ್ನು ಕಾನೂನುಬದ್ಧವಾಗಿ ‘ಫೆಡರಲ್ ರಜಾದಿನ’ ಎಂದು ಅನುಮೋದಿಸಿತು.
ಅಂತರರಾಷ್ಟ್ರೀಯ ಕಾಫಿ ದಿನ 2021:
ಅಂತಾರಾಷ್ಟ್ರೀಯ ಕಾಫಿ ದಿನವನ್ನು ಪ್ರತಿ ವರ್ಷ ಅಕ್ಟೋಬರ್ 1 ರಂದು ಆಚರಿಸಲಾಗುತ್ತದೆ.
ಉದ್ದೇಶ: ಕಾಫಿ ಬೀನ್ಸ್ ರೈತರ ಸಂಕಷ್ಟವನ್ನು ಗುರುತಿಸುವುದು ಮತ್ತು ಆರೋಮ್ಯಾಟಿಕ್ (ರುಚಿಕರ) ಪಾನೀಯಗಳ ಬಗ್ಗೆ ನಮ್ಮ ಪ್ರೀತಿಯನ್ನು ವ್ಯಕ್ತಪಡಿಸುವುದು.
ಇದನ್ನು ಮೊದಲು ಜಪಾನ್ನಲ್ಲಿ ಆಚರಿಸಲಾಯಿತು, ನಂತರ ಅಧಿಕೃತವಾಗಿ 2015 ರಲ್ಲಿ ಅಂತರಾಷ್ಟ್ರೀಯ ಕಾಫಿ ದಿನವೆಂದು ಘೋಷಿಸಲಾಯಿತು.
ಈ ದಿನದ ಮಹತ್ವ: 1963 ರಲ್ಲಿ ಲಂಡನ್ನಲ್ಲಿ ಸ್ಥಾಪಿತವಾದ ಅಂತಾರಾಷ್ಟ್ರೀಯ ಕಾಫಿ ಸಂಸ್ಥೆ, 1 ಅಕ್ಟೋಬರ್ 2015 ಅನ್ನು ಮೊದಲು ಅಂತರಾಷ್ಟ್ರೀಯ ಕಾಫಿ ದಿನವನ್ನಾಗಿ ಘೋಷಿಸಿತು. ಅಂದಿನಿಂದ, ಈ ದಿನವನ್ನು ಪ್ರಪಂಚದಾದ್ಯಂತ ಆಚರಿಸಲಾಗುತ್ತದೆ.
ಗೇಮಿಂಗ್ ಡಿಸಾರ್ಡರ್:
(Gaming Disorder)
ಇಂಟರ್ನ್ಯಾಷನಲ್ ಕ್ಲಾಸಿಫಿಕೇಶನ್ ಆಫ್ ಡಿಸಿಸ್ ನ (ICD -11) 11 ನೇ ಪರಿಷ್ಕರಣೆಯು ‘ಗೇಮಿಂಗ್ ಡಿಸಾರ್ಡರ್’ (Gaming disorder) ಅನ್ನು ‘ಗೇಮಿಂಗ್ ವ್ಯವಹಾರ’ ಮಾದರಿ (“ಡಿಜಿಟಲ್-ಗೇಮಿಂಗ್” ಅಥವಾ “ವಿಡಿಯೋ-ಗೇಮಿಂಗ್”) ಎಂದು ವ್ಯಾಖ್ಯಾನಿಸುತ್ತದೆ.
ಇದರ ಲಕ್ಷಣಗಳಲ್ಲಿ ‘ಗೇಮಿಂಗ್’ ಕಡೆಗೆ ದುರ್ಬಲ ನಿಯಂತ್ರಣ ಮತ್ತು ಇತರ ಚಟುವಟಿಕೆಗಳಿಗಿಂತ ಗೇಮಿಂಗ್ಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.
ಹಿನ್ನೆಲೆ:
2018 ರ ಮಧ್ಯದಲ್ಲಿ WHO,‘ಇಂಟರ್ನ್ಯಾಷನಲ್ ಕ್ಲಾಸಿಫಿಕೇಶನ್ ಆಫ್ ಡಿಸಿಸ್’ನ (ICD -11) 11 ನೇ ಪರಿಷ್ಕರಣೆಯನ್ನು ಬಿಡುಗಡೆ ಮಾಡಿದೆ.
ICD ಎಂದರೇನು?
ರೋಗಗಳ ಅಂತರರಾಷ್ಟ್ರೀಯ ವರ್ಗೀಕರಣ (International Classification of Diseases – ICD) ವು ಜಾಗತಿಕ ಮಟ್ಟದಲ್ಲಿ ಆರೋಗ್ಯ ಪ್ರವೃತ್ತಿಗಳು ಮತ್ತು ಅಂಕಿಅಂಶಗಳನ್ನು ಗುರುತಿಸಲು ಆಧಾರವಾಗಿದೆ ಮತ್ತು ರೋಗಗಳು ಮತ್ತು ಆರೋಗ್ಯ ಪರಿಸ್ಥಿತಿಗಳನ್ನು ವರದಿ ಮಾಡಲು ‘ಅಂತರಾಷ್ಟ್ರೀಯ ಮಾನದಂಡವಾಗಿದೆ.
ಇದನ್ನು ಪ್ರಪಂಚದಾದ್ಯಂತದ ವೈದ್ಯರು ‘ಪರಿಸ್ಥಿತಿಗಳನ್ನು ಪತ್ತೆಹಚ್ಚಲು’ ಮತ್ತು ಸಂಶೋಧಕರು ಪರಿಸ್ಥಿತಿಗಳನ್ನು ವರ್ಗೀಕರಿಸಲು ಬಳಸುತ್ತಾರೆ.
ಐಸಿಡಿಯಲ್ಲಿ ಒಂದು ಅಸ್ವಸ್ಥತೆಯನ್ನು ಸೇರಿಸಿದ ನಂತರ, ಸಾರ್ವಜನಿಕ ಆರೋಗ್ಯ ತಂತ್ರಗಳನ್ನು ಯೋಜಿಸುವಾಗ ಈ ಅಸ್ವಸ್ಥತೆಗಳ ಪ್ರವೃತ್ತಿಯನ್ನು ದೇಶಗಳು ಗಣನೆಗೆ ತೆಗೆದುಕೊಳ್ಳುತ್ತವೆ.
ಬ್ರಹ್ಮಪುತ್ರ ಪರಂಪರೆ ಕೇಂದ್ರ:
(Brahmaputra heritage centre)
ಅಸ್ಸಾಂನ ಗುವಾಹಟಿಯಲ್ಲಿನ ಸುಮಾರು 150 ವರ್ಷಗಳ ಹಳೆಯ ಬಂಗಲೆಯಲ್ಲಿ, ‘ಬ್ರಹ್ಮಪುತ್ರ ನದಿ ಪಾರಂಪರಿಕ ಕೇಂದ್ರ’ (Brahmaputra River Heritage Centre) ವನ್ನು ಸ್ಥಾಪಿಸಲಾಗಿದೆ.
ಈ ಬಂಗಲೆ 17 ನೇ ಶತಮಾನದಲ್ಲಿ ಅಹೋಮ್ ಆಡಳಿತಗಾರರ ‘ಮಿಲಿಟರಿ ಕಚೇರಿ’ ಆಗಿತ್ತು.
- ಇದನ್ನು ಬರ್ಫುಕನಾರ್ ತಿಲಾ (Barphukanar Tila) ಎಂದೂ ಕರೆಯಲಾಗುತ್ತಿತ್ತು. ಅಂದರೆ ಬರ್ಫುಖಾನ್ ನ ಬೆಟ್ಟ.
- ಬರ್ಫುಖಾನ್ ಎಂಬುದು ಅಹೋಮ್ ರಾಜ ಪ್ರತಾಪ ಸಿಂಹ ಅಥವಾ ಸುಸೆಂಗ್ಫಾ (1603–1641) ರಚಿಸಿದ ಗವರ್ನರ್ ಜನರಲ್ಗೆ ಸಮಾನವಾದ ಹುದ್ದೆಯಾಗಿದೆ.
- ಬ್ರಹ್ಮಪುತ್ರದ ಬಳಿ ಇರುವ ಈ ಬೆಟ್ಟವನ್ನು ಪ್ರಾಚೀನ ಗ್ರಂಥಗಳಲ್ಲಿ ಮಂದರಾಚಲ ಎಂದು ಉಲ್ಲೇಖಿಸಲಾಗಿದೆ. ಈ ಸ್ಥಳದಿಂದ ಮಾರ್ಚ್ 1671 ರಲ್ಲಿ, ಅಹೋಮ್ ಜನರಲ್ ‘ಲಚಿತ್ ಬರ್ಫುಕನ್’ ಸರೈಘಾಟ್ ಯುದ್ಧವನ್ನು ಆರಂಭಿಸಿದನು, ಇದರಲ್ಲಿ ಅವನು ಮೊಘಲರನ್ನು ಹೀನಾಯವಾಗಿ ಸೋಲಿಸಿದನು.
- ಸರೈಘಾಟ್ ಕದನವನ್ನು “ನದಿಯಲ್ಲಿ ನಡೆದ ಮಹಾನ್ ನೌಕಾ ಯುದ್ಧ” ಎಂದು ಪರಿಗಣಿಸಲಾಗಿದೆ.
Join our Official Telegram Channel HERE for Motivation and Fast Updates
Subscribe to our YouTube Channel HERE to watch Motivational and New analysis videos
[ad_2]