[Mission 2022] ದೈನಂದಿನ ಪ್ರಚಲಿತ ಘಟನೆಗಳು ದಿನಾಂಕ – 24 ನೇ ಸೆಪ್ಟೆಂಬರ್ 2021 – INSIGHTSIAS

[ad_1]

 

ಪರಿವಿಡಿ:

  

ಸಾಮಾನ್ಯ ಅಧ್ಯಯನ ಪತ್ರಿಕೆ 2:

1. ರಾಜ್ಯ ಆಹಾರ ಸುರಕ್ಷತೆ ಸೂಚ್ಯಂಕ (SFSI)

2. SCO ಪೀಸ್ ಫುಲ್ ಮಿಷನ್ 2021.

 

ಸಾಮಾನ್ಯ ಅಧ್ಯಯನ ಪತ್ರಿಕೆ 3:

1. ಭಾರತ್ ನೆಟ್ ಯೋಜನೆ.

2. ನಾಸಾದ ವೈಪರ್ ಮಿಷನ್

3.  ವಿಶ್ವ ಖಡ್ಗಮೃಗ ದಿನ – ಸೆಪ್ಟೆಂಬರ್ 22.

4. ಅಂತರರಾಷ್ಟ್ರೀಯ ಕಡಲ ಸಂಸ್ಥೆಯ ಮೂಲಕ ಕಪ್ಪು ಇಂಗಾಲದ ಹೊರಸೂಸುವಿಕೆಯ ಮೇಲೆ ಕಾರ್ಯನಿರ್ವಹಿಸಲು ಒತ್ತಾಯ.

5. ಅಸ್ಸಾಂ, ಮಿಜೋರಾಂ ಗಡಿ ವಿವಾದ.

 

ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:

1. ಸೈನ್ ಲಾಂಗ್ವೇಜ್ ಡೇ (ಸಂಜ್ಞಾ ಭಾಷೆ ದಿನ).

2. ವಿಷ್ಣೋನಿಕ್ಸ್.

3. ಸಮುದ್ರ ಶಕ್ತಿ.

4. ಹೈಬೊಡಾಂಟ್ ಶಾರ್ಕ್.

 


ಸಾಮಾನ್ಯ ಅಧ್ಯಯನ ಪತ್ರಿಕೆ : 2


 

ವಿಷಯಗಳು: ಸರ್ಕಾರದ ನೀತಿಗಳು ಮತ್ತು ವಿವಿಧ ಕ್ಷೇತ್ರಗಳಲ್ಲಿನ ಅಭಿವೃದ್ಧಿಯ ಅಡಚಣೆಗಳು ಮತ್ತು ಅವುಗಳ ವಿನ್ಯಾಸ ಮತ್ತು ಅನುಷ್ಠಾನದಿಂದ ಉಂಟಾಗುವ ಸಮಸ್ಯೆಗಳು.

ರಾಜ್ಯ ಆಹಾರ ಸುರಕ್ಷತೆ ಸೂಚ್ಯಂಕ (SFSI):


(State Food Safety Index (SFSI)

ಸಂದರ್ಭ:

ಇತ್ತೀಚೆಗೆ, ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು ಆಹಾರ ಭದ್ರತೆಯ ಐದು ಮಾನದಂಡಗಳ ಮೇಲೆ ರಾಜ್ಯಗಳ ಕಾರ್ಯಕ್ಷಮತೆಯನ್ನು ಅಳೆಯಲು ಆಹಾರ ಸುರಕ್ಷತೆ ಮತ್ತು ಸುರಕ್ಷತಾ ಮಾನದಂಡಗಳ ಪ್ರಾಧಿಕಾರ’ (FSSAI) ದ ಮೂರನೇ ‘ರಾಜ್ಯ ಆಹಾರ ಸುರಕ್ಷತೆ ಸೂಚ್ಯಂಕ’ (State Food Safety Index – SFSI) ಬಿಡುಗಡೆಮಾಡಿದರು.

ಸೂಚ್ಯಂಕದ ಪ್ರಮುಖ ಅಂಶಗಳು:

2020-21ರ ವರ್ಷದ ಶ್ರೇಯಾಂಕಗಳ ಆಧಾರದ ಮೇಲೆ ಒಂಬತ್ತು ಪ್ರಮುಖ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳನ್ನು ಅವುಗಳ ಪ್ರಭಾವಶಾಲಿ ಕಾರ್ಯಕ್ಷಮತೆಗಾಗಿ ಸ್ಥಾನಮಾನವನ್ನು ಪಡೆದಿವೆ.

  1. ಈ ವರ್ಷ ಗುಜರಾತ್ ಪ್ರಮುಖ ರಾಜ್ಯಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದರೆ, ಕೇರಳ ಮತ್ತು ತಮಿಳುನಾಡು ನಂತರದ ಸ್ಥಾನದಲ್ಲಿವೆ.
  2. ಚಿಕ್ಕ ರಾಜ್ಯಗಳಲ್ಲಿ, ಗೋವಾ ಮೊದಲ ಸ್ಥಾನದಲ್ಲಿದೆ, ನಂತರದ ಸ್ಥಾನಗಳಲ್ಲಿ ಮೇಘಾಲಯ ಮತ್ತು ಮಣಿಪುರ ಗಳಿವೆ.
  3. ಕೇಂದ್ರಾಡಳಿತ ಪ್ರದೇಶಗಳ ಪೈಕಿ, ಜಮ್ಮು ಮತ್ತು ಕಾಶ್ಮೀರ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಮತ್ತು ನವದೆಹಲಿ ಅಗ್ರ ಶ್ರೇಯಾಂಕಗಳನ್ನು ಪಡೆದುಕೊಂಡಿವೆ.

ಸೂಚ್ಯಂಕ’ದ ಕುರಿತು:

ರಾಜ್ಯ ಆಹಾರ ಸುರಕ್ಷತೆ ಸೂಚ್ಯಂಕ (SFSI), ಇದು ಒಂದು ಕ್ರಿಯಾತ್ಮಕ ಪರಿಮಾಣಾತ್ಮಕ ಮತ್ತು ಗುಣಾತ್ಮಕ ಬೆಂಚ್‌ಮಾರ್ಕಿಂಗ್ ಮಾದರಿಯಾಗಿದ್ದು, ಇದು ಎಲ್ಲಾ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಾದ್ಯಂತ ಆಹಾರ ಭದ್ರತೆಯ ಮೌಲ್ಯಮಾಪನಕ್ಕಾಗಿ ಒಂದು ‘ವಸ್ತುನಿಷ್ಠ ಚೌಕಟ್ಟನ್ನು’ ಒದಗಿಸುತ್ತದೆ.

  1. 2018-19 ನೇ ಸಾಲಿನ ಮೊದಲ ರಾಜ್ಯ ಆಹಾರ ಸುರಕ್ಷತಾ ಸೂಚಿಯನ್ನು 7 ಜೂನ್ 2019 ರಂದು ಪ್ರಪ್ರಥಮ ‘ವಿಶ್ವ ಆಹಾರ ಸುರಕ್ಷತಾ ದಿನ’ದಂದು ಘೋಷಿಸಲಾಯಿತು.
  2. ಆಹಾರ ಸುರಕ್ಷತೆಯ ಐದು ಪ್ರಮುಖ ನಿಯತಾಂಕಗಳ ಮೇಲೆ ರಾಜ್ಯಗಳ ಕಾರ್ಯಕ್ಷಮತೆಯನ್ನು ಅಳೆಯಲು ಈ ಸೂಚಿಯನ್ನು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ವು ಅಭಿವೃದ್ಧಿಪಡಿಸಿದೆ.

ಈ ಐದು ಮಾನದಂಡಗಳು ಯಾವುವು ಎಂದರೆ:

  1. ಮಾನವ ಸಂಪನ್ಮೂಲ ಮತ್ತು ಸಾಂಸ್ಥಿಕ ದತ್ತಾಂಶ,
  2. ಅನುಮತಿ / ಅನುಸರಣೆ,
  3. ಆಹಾರ ಪರೀಕ್ಷೆ – ಮೂಲಸೌಕರ್ಯ ಮತ್ತು ಮೇಲ್ವಿಚಾರಣೆ,
  4. ತರಬೇತಿ ಮತ್ತು ಸಾಮರ್ಥ್ಯ ವೃದ್ಧಿ, ಮತ್ತು
  5. ಗ್ರಾಹಕ ಸಬಲೀಕರಣ.

 

 

ವಿಷಯಗಳು: ದ್ವಿಪಕ್ಷೀಯ, ಪ್ರಾದೇಶಿಕ ಮತ್ತು ಜಾಗತಿಕ ಗುಂಪುಗಳು ಮತ್ತು ಭಾರತಕ್ಕೆ ಸಂಬಂಧಿಸಿದ ಒಪ್ಪಂದಗಳು ಮತ್ತು / ಅಥವಾ ಭಾರತದ ಹಿತಾಸಕ್ತಿಗಳ ಮೇಲೆ ಪರಿಣಾಮ ಬೀರುವ ಅಂಶಗಳು.

SCO ಪೀಸ್ ಫುಲ್ ಮಿಷನ್ 2021:


(SCO Peaceful Mission 2021)

ಸಂದರ್ಭ:

“ಪೀಸ್ ಫುಲ್ ಮಿಷನ್ 2021”, ರಶಿಯಾ ಆಯೋಜಿಸಿದ ‘ಶಾಂಘೈ ಸಹಕಾರ ಸಂಸ್ಥೆ’ (SCO) ಯ ಸದಸ್ಯ ರಾಷ್ಟ್ರಗಳ ಜಂಟಿ ಮಿಲಿಟರಿ ವ್ಯಾಯಾಮದ ಆರನೇ ಆವೃತ್ತಿಯಾಗಿದ್ದು, ಇದು ನೈರುತ್ಯ ರಷ್ಯಾದ ಒರೆನ್ಬರ್ಗ್,ನಲ್ಲಿ ಆರಂಭವಾಗಿದೆ.

ಭಾರತೀಯ ಸೇನೆ ಮತ್ತು ಭಾರತೀಯ ವಾಯುಪಡೆಯ 200 ಸಿಬ್ಬಂದಿಗಳ ಸಂಯೋಜಿತ ಭಾರತೀಯ ದಳವು ಈ ಮಿಲಿಟರಿ ವ್ಯಾಯಾಮದಲ್ಲಿ ಭಾಗವಹಿಸಿತು.

‘SCO ಪೀಸ್ ಫುಲ್ ಮಿಷನ್’ ಸಮರಾಭ್ಯಾಸದ ಕುರಿತು:

ಜಂಟಿ ಭಯೋತ್ಪಾದನೆ ನಿಗ್ರಹ ಸಮರಾಭ್ಯಾಸವಾದ ‘ಪೀಸ್ ಫುಲ್ ಮಿಷನ್’ ಸಮರಾಭ್ಯಾಸವು ಬಹುಪಕ್ಷೀಯ ಸಮರಾಭ್ಯಾಸವಾಗಿದೆ. ಇದನ್ನು ಶಾಂಘೈ ಸಹಕಾರ ಸಂಘಟನೆಯ ಸದಸ್ಯ ರಾಷ್ಟ್ರಗಳ ನಡುವೆ ‘ಮಿಲಿಟರಿ ರಾಜತಾಂತ್ರಿಕತೆಯ’ ಭಾಗವಾಗಿ ದ್ವೈವಾರ್ಷಿಕವಾಗಿ ನಡೆಸಲಾಗುತ್ತದೆ.

  1. ಪೀಸ್ ಫುಲ್ ಮಿಷನ್ 2021 ಸಮರಾಭ್ಯಾಸವು ನಗರ ಪರಿಸರದಲ್ಲಿ ಕಾರ್ಯಾಚರಣೆ ಮತ್ತು ಕಾರ್ಯತಂತ್ರದ ಮಟ್ಟದಲ್ಲಿ ಜಂಟಿ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯನ್ನು ಆಧರಿಸಿದೆ, ಇದರಲ್ಲಿ ಎಲ್ಲಾ SCO ಸದಸ್ಯ ರಾಷ್ಟ್ರಗಳ ಸೇನೆಗಳು ಮತ್ತು ವಾಯುಪಡೆಗಳು ಭಾಗವಹಿಸುತ್ತವೆ.
  2. SCO ಸದಸ್ಯ ರಾಷ್ಟ್ರಗಳ ನಡುವಿನ ನಿಕಟ ಬಾಂಧವ್ಯವನ್ನು ವೃದ್ಧಿಸುವುದು ಮತ್ತು ಬಹುರಾಷ್ಟ್ರೀಯ ಸೇನಾ ತುಕಡಿಗಳನ್ನು ಆಜ್ಞಾಪಿಸಲು ಮಿಲಿಟರಿ ನಾಯಕರ ಸಾಮರ್ಥ್ಯವನ್ನು ಹೆಚ್ಚಿಸುವುದು ಈ ಸಮರಾಭ್ಯಾಸದ ಉದ್ದೇಶವಾಗಿದೆ.
  3. ಈ ಸಮರಾಭ್ಯಾಸದಲ್ಲಿ, SCO ಸದಸ್ಯ ದೇಶಗಳ ಸಶಸ್ತ್ರ ಪಡೆಗಳ ನಡುವೆ ಉತ್ತಮ ಅಭ್ಯಾಸಗಳನ್ನು ಹಂಚಿಕೊಳ್ಳಲಾಗುತ್ತದೆ.

 

ಶಾಂಘೈ ಸಹಕಾರ ಸಂಘಟನೆಯ ಬಗ್ಗೆ:

ಶಾಂಘೈ ಸಹಕಾರ ಸಂಸ್ಥೆ (SCO) ಒಂದು ಶಾಶ್ವತ ಅಂತರ್ ಸರ್ಕಾರಿ ಅಂತರರಾಷ್ಟ್ರೀಯ ಸಂಘಟನೆಯಾಗಿದೆ.

ಎಸ್‌ಸಿಒ ರಚನೆಯನ್ನು 15 ಜೂನ್ 2001 ರಂದು ಶಾಂಘೈ (ಚೀನಾ) ನಲ್ಲಿ ಕಜಕಿಸ್ತಾನ ಗಣರಾಜ್ಯ, ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ, ಕಿರ್ಗಿಜ್ ಗಣರಾಜ್ಯ, ರಷ್ಯಾದ ಒಕ್ಕೂಟ, ತಜಿಕಿಸ್ತಾನ್ ಗಣರಾಜ್ಯ ಮತ್ತು ಉಜ್ಬೇಕಿಸ್ತಾನ್ ಗಣರಾಜ್ಯ ಗಳು ಘೋಷಿಸಿದವು.

  1. ಇದನ್ನು ‘ಶಾಂಘೈ -5’ ಹೆಸರಿನ ಸಂಘಟನೆಯ ಸ್ಥಾನದಲ್ಲಿ ರಚಿಸಲಾಯಿತು.

SCO ದ ಪ್ರಮುಖ ಗುರಿಗಳು:

  1. ಸದಸ್ಯ ರಾಷ್ಟ್ರಗಳಲ್ಲಿ ಪರಸ್ಪರ ನಂಬಿಕೆ ಮತ್ತು ಸದ್ಭಾವನೆಯನ್ನು ಬಲಪಡಿಸುವುದು.
  2. ರಾಜಕೀಯ, ವ್ಯವಹಾರ, ಆರ್ಥಿಕತೆ, ಸಂಶೋಧನೆ ಮತ್ತು ತಂತ್ರಜ್ಞಾನ ಮತ್ತು ಸಂಸ್ಕೃತಿಯಲ್ಲಿ ಪರಿಣಾಮಕಾರಿ ಸಹಕಾರವನ್ನು ಉತ್ತೇಜಿಸುವುದು.
  3. ಶಿಕ್ಷಣ ಇಂಧನ ಸಾರಿಗೆ ಪ್ರವಾಸೋದ್ಯಮ ಪರಿಸರ ಸಂರಕ್ಷಣೆ ಮತ್ತು ಸಂಬಂಧಪಟ್ಟ ಇತರ ಕ್ಷೇತ್ರಗಳಲ್ಲಿ ಶಾಂತಿ, ಸುರಕ್ಷತೆ ಮತ್ತು ಸ್ಥಿರತೆಯನ್ನು ಕಾಪಾಡಿಕೊಳ್ಳಲು ಮತ್ತು ಖಚಿತಪಡಿಸಿಕೊಳ್ಳಲು ಜಂಟಿ ಪ್ರಯತ್ನಗಳನ್ನು ಮಾಡುವುದು.
  4. ಪ್ರಜಾಪ್ರಭುತ್ವ, ನ್ಯಾಯಯುತ ಮತ್ತು ತರ್ಕಬದ್ಧ ನವ-ಅಂತರರಾಷ್ಟ್ರೀಯ ರಾಜಕೀಯ ಮತ್ತು ಆರ್ಥಿಕ ವ್ಯವಸ್ಥೆಯನ್ನು ಸ್ಥಾಪಿಸುವುದು.

ಸದಸ್ಯತ್ವ:

SCO ಎಂಟು ಸದಸ್ಯ ರಾಷ್ಟ್ರಗಳನ್ನು ಒಳಗೊಂಡಿದೆ – ಅವುಗಳೆಂದರೆ, ರಿಪಬ್ಲಿಕ್ ಆಫ್ ಇಂಡಿಯಾ, ರಿಪಬ್ಲಿಕ್ ಆಫ್ ಕಜಾಕಸ್ಥಾನ್, ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ, ಕಿರ್ಗಿಜ್ ರಿಪಬ್ಲಿಕ್, ಇಸ್ಲಾಮಿಕ್ ರಿಪಬ್ಲಿಕ್ ಆಫ್ ಪಾಕಿಸ್ತಾನ್, ರಷ್ಯನ್ ಫೆಡರೇಶನ್, ರಿಪಬ್ಲಿಕ್ ಆಫ್ ತಜಕಿಸ್ತಾನ್ ಮತ್ತು ರಿಪಬ್ಲಿಕ್ ಆಫ್ ಉಜ್ಬೇಕಿಸ್ತಾನ್.

 


ಸಾಮಾನ್ಯ ಅಧ್ಯಯನ ಪತ್ರಿಕೆ : 3


 

ವಿಷಯಗಳು:ಸರ್ಕಾರದ ನೀತಿಗಳು ಮತ್ತು ವಿವಿಧ ಕ್ಷೇತ್ರಗಳಲ್ಲಿನ ಅಭಿವೃದ್ಧಿಯ ಅಡಚಣೆಗಳು ಮತ್ತು ಅವುಗಳ ವಿನ್ಯಾಸ ಮತ್ತು ಅನುಷ್ಠಾನದಿಂದ ಉಂಟಾಗುವ ಸಮಸ್ಯೆಗಳು.

ಭಾರತ್ ನೆಟ್ ಯೋಜನೆ:


(BharatNet project)

 ಸಂದರ್ಭ:

ಇತ್ತೀಚೆಗೆ, ಮೇಘಾಲಯ ಕ್ಯಾಬಿನೆಟ್ ರಾಜ್ಯದಲ್ಲಿ ‘ಭಾರತ್ ನೆಟ್ ಯೋಜನೆ’ (BharatNet project) ಅನುಷ್ಠಾನಕ್ಕಾಗಿ ತ್ರಿಪಕ್ಷೀಯ ಒಪ್ಪಂದಕ್ಕೆ ತಿದ್ದುಪಡಿಗಳನ್ನು ಅಂಗೀಕರಿಸಿದೆ.

ದೂರಸಂಪರ್ಕ ಇಲಾಖೆ (DoT), ಮೇಘಾಲಯ ಸರ್ಕಾರದ ಐಟಿ ವಿಭಾಗ ಮತ್ತು ಭಾರತ್ ಬ್ರಾಡ್‌ಬ್ಯಾಂಡ್ ನೆಟ್‌ವರ್ಕ್ ಲಿಮಿಟೆಡ್ (BBNL) ನಡುವೆ 2013 ರಲ್ಲಿ ಈ ಒಪ್ಪಂದಕ್ಕೆ ಮೊದಲ ಬಾರಿಗೆ ಸಹಿ ಹಾಕಲಾಯಿತು. BBNL ‘ಭಾರತ್ ನೆಟ್ ಪ್ರಾಜೆಕ್ಟ್’ ನ ಅನುಷ್ಠಾನದ ಹೊಣೆಗಾರಿಕೆಯನ್ನು ಪಡೆದಿದೆ.

ಹಿನ್ನೆಲೆ:

ದೇಶದ 16 ರಾಜ್ಯಗಳಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವ (Public-Private Partnership-PPP)ದ ಮೂಲಕ ಭಾರತ್ ನೆಟ್ ನ ಪರಿಷ್ಕೃತ ಅನುಷ್ಠಾನ ತಂತ್ರಕ್ಕೆ ಕೇಂದ್ರ ಸಚಿವ ಸಂಪುಟವು ಜುಲೈ 2021 ರಲ್ಲಿ ಅನುಮೋದನೆಯನ್ನು ನೀಡಿದೆ.

ಅನುಷ್ಠಾನ ತಂತ್ರದ ಪ್ರಮುಖ ಅಂಶಗಳು:

  1. ಈ ಯೋಜನೆಗೆ ಸರ್ಕಾರವು ಕಾರ್ಯಸಾಧ್ಯತೆಯ ಅಂತರ ನಿಧಿ (Viability Gap Funding) ಯಾಗಿ 19,041 ಕೋಟಿ ರೂ. ಗಳನ್ನು ನೀಡಲಿದೆ.
  2. ಆಯ್ದ 16 ರಾಜ್ಯಗಳಲ್ಲಿ ಗ್ರಾಮ ಪಂಚಾಯಿತಿ (Gram Panchayats) ಗಳ ಹೊರತಾಗಿ ಭಾರತ್ ನೆಟ್ ಯೋಜನೆಯನ್ನು ಈಗ ಎಲ್ಲಾ ಜನವಸತಿ ಗ್ರಾಮಗಳಿಗೆ ವಿಸ್ತರಿಸಲಾಗುವುದು.
  3. ಪರಿಷ್ಕೃತ ಕಾರ್ಯತಂತ್ರವು ಭಾರತ್ ನೆಟ್ ಅನ್ನು ರಿಯಾಯಿತಿಗಳೊಂದಿಗೆ ನಿರ್ಮಿಸುವುದು, ನವೀಕರಿಸುವುದು, ನಿರ್ವಹಿಸುವುದು, ಕಾರ್ಯಾಚರಣೆ ಮತ್ತು ಬಳಸುವುದನ್ನು ಸಹ ಒಳಗೊಂಡಿದೆ, ಇದನ್ನು ಸ್ಪರ್ಧಾತ್ಮಕ ಅಂತರರಾಷ್ಟ್ರೀಯ ಬಿಡ್ಡಿಂಗ್ ಪ್ರಕ್ರಿಯೆಯ ಮೂಲಕ ಆಯ್ಕೆ ಮಾಡಲಾಗುತ್ತದೆ.

ಮಹತ್ವ:

  1. ಪಿಪಿಪಿ ಮಾದರಿಯು ಕಾರ್ಯಾಚರಣೆ, ನಿರ್ವಹಣೆ, ಬಳಕೆ ಮತ್ತು ಆದಾಯ ಉತ್ಪಾದನೆಗಾಗಿ ಖಾಸಗಿ ವಲಯದ ದಕ್ಷತೆಯನ್ನು ನಿಯಂತ್ರಿಸಲಾಗುವುದು ಮತ್ತು ಇದರ ಪರಿಣಾಮವಾಗಿ ಭಾರತ್‌ನೆಟ್ ಸೇವೆಯನ್ನು ವೇಗವಾಗಿ ಸಾಧಿಸುವ ನಿರೀಕ್ಷೆಯಿದೆ.
  2. ವಿಶ್ವಾಸಾರ್ಹ, ಗುಣಮಟ್ಟದ, ಹೆಚ್ಚಿನ ವೇಗದ ಬ್ರಾಡ್‌ಬ್ಯಾಂಡ್ ಹೊಂದಿರುವ ಎಲ್ಲಾ ಜನವಸತಿ ಗ್ರಾಮಗಳಿಗೆ ಭಾರತ್‌ನೆಟ್ ನ ವ್ಯಾಪ್ತಿಯನ್ನು ವಿಸ್ತರಿಸುವುದರಿಂದ ವಿವಿಧ ಕೇಂದ್ರ ಮತ್ತು ರಾಜ್ಯ ಸರ್ಕಾರಿ ಸಂಸ್ಥೆಗಳು ನೀಡುವ ಇ-ಸೇವೆಗಳನ್ನು ಉತ್ತಮವಾಗಿ ಪ್ರವೇಶಿಸಲು ಅನುವು ಮಾಡಿಕೊಡುತ್ತದೆ.
  3. ಇದು ಆನ್‌ಲೈನ್ ಶಿಕ್ಷಣ, ಟೆಲಿಮೆಡಿಸಿನ್, ಕೌಶಲ್ಯ ಅಭಿವೃದ್ಧಿ, ಇ-ಕಾಮರ್ಸ್ ಮತ್ತು ಬ್ರಾಡ್‌ಬ್ಯಾಂಡ್‌ನ ಇತರ ಅಪ್ಲಿಕೇಶನ್‌ಗಳನ್ನು ಸಹ ಸಕ್ರಿಯಗೊಳಿಸುತ್ತದೆ.

ಭಾರತ್ ನೆಟ್ ಯೋಜನೆಯ ಬಗ್ಗೆ:

  1. ಭಾರತ್ನೆಟ್ ಪ್ರಾಜೆಕ್ಟ್ ಅನ್ನು ಮೂಲತಃ 2011 ರಲ್ಲಿ ನ್ಯಾಷನಲ್ ಆಪ್ಟಿಕಲ್ ಫೈಬರ್ ನೆಟ್ವರ್ಕ್ (NOFN) ಎಂದು ಪ್ರಾರಂಭಿಸಲಾಯಿತು ಮತ್ತು ಇದನ್ನು 2015 ರಲ್ಲಿ ಭಾರತ್-ನೆಟ್ (BharatNet) ಎಂದು ಮರುನಾಮಕರಣ ಮಾಡಲಾಯಿತು.
  2. ಇದು ಆಪ್ಟಿಕಲ್ ಫೈಬರ್ ಮೂಲಕ5 ಲಕ್ಷ ಗ್ರಾಮ ಪಂಚಾಯಿತಿಗಳಿಗೆ (GPs) ಸಂಪರ್ಕವನ್ನು ಒದಗಿಸಲು ಪ್ರಯತ್ನಿಸುತ್ತದೆ.
  3. ಇದು ಭಾರತ್ ಬ್ರಾಡ್‌ಬ್ಯಾಂಡ್ ನೆಟ್‌ವರ್ಕ್ ಲಿಮಿಟೆಡ್ (Bharat Broadband Network Ltd -BBNL) ಜಾರಿಗೆ ತಂದ ಪ್ರಮುಖ ಮಿಷನ್.
  4. ಇದರ ಉದ್ದೇಶ,ಇ-ಆಡಳಿತ, ಇ-ಆರೋಗ್ಯ, ಇ-ಶಿಕ್ಷಣ, ಇ-ಬ್ಯಾಂಕಿಂಗ್, ಇಂಟರ್ನೆಟ್ ಮತ್ತು ಇತರ ಸೇವೆಗಳನ್ನು ಗ್ರಾಮೀಣ ಭಾರತಕ್ಕೆ ತಲುಪಿಸಲು ಅನುಕೂಲ ಮಾಡುವುದಾಗಿದೆ.

ಯೋಜನೆಯಡಿಯಲ್ಲಿ ವಿಶಾಲ ಪರಿಕಲ್ಪನೆಗಳು:

  1. ತಾರತಮ್ಯರಹಿತವಾಗಿ ಪ್ರವೇಶಿಸಬಹುದಾದ ಹೆಚ್ಚು ಸ್ಕೇಲೆಬಲ್ ನೆಟ್‌ವರ್ಕ್ ಮೂಲಸೌಕರ್ಯವನ್ನು ಸ್ಥಾಪಿಸುವುದು.
  2. ಎಲ್ಲಾ ಮನೆಗಳಿಗೆ 2 Mbps ನಿಂದ 20 Mbps ಮತ್ತು ಎಲ್ಲಾ ಸಂಸ್ಥೆಗಳಿಗೆ ಅವರ ಬೇಡಿಕೆಯ ಸಾಮರ್ಥ್ಯಕ್ಕೆ ಅನುಗುಣವಾಗಿ ಕೈಗೆಟುಕುವ ಬ್ರಾಡ್‌ಬ್ಯಾಂಡ್ ಸಂಪರ್ಕವನ್ನು ಒದಗಿಸುತ್ತದೆ.
  3. ರಾಜ್ಯಗಳು ಮತ್ತು ಖಾಸಗಿ ವಲಯದ ಸಹಭಾಗಿತ್ವದಲ್ಲಿ ಡಿಜಿಟಲ್ ಇಂಡಿಯಾದ ದೃಷ್ಟಿಯನ್ನು ಸಾಕಾರಗೊಳಿಸುವುದು.

ಅನುಷ್ಠಾನ:

ಈ ಯೋಜನೆಯು ಕೇಂದ್ರ-ರಾಜ್ಯ ಸಹಕಾರಿ ಯೋಜನೆ (Centre-State collaborative project) ಯಾಗಿದ್ದು, ಆಪ್ಟಿಕಲ್ ಫೈಬರ್ ನೆಟ್‌ವರ್ಕ್ ಸ್ಥಾಪಿಸಲು ರಾಜ್ಯಗಳು ತಮ್ಮ ಅಗತ್ಯಗಳಿಗೆ ಅನುಗುಣವಾಗಿ ಕೆಲಸ ಮಾಡಲು ಅಧಿಕಾರ ನೀಡಲಾಗಿದೆ.

ಇಡೀ ಯೋಜನೆಗೆ, ದೇಶದ ಗ್ರಾಮೀಣ ಮತ್ತು ದೂರದ ಪ್ರದೇಶಗಳಲ್ಲಿ ಟೆಲಿಕಾಂ ಸೇವೆಗಳನ್ನು ಸುಧಾರಿಸಲು ಸ್ಥಾಪಿಸಲಾದ ಯೂನಿವರ್ಸಲ್ ಸರ್ವಿಸ್ ಆಬ್ಲಿಗೇಶನ್ ಫಂಡ್ (Universal service Obligation Fund -USOF) ನಿಂದ ಧನಸಹಾಯ ನೀಡಲಾಗುತ್ತಿದೆ.

  

ವಿಷಯಗಳು: ಮಾಹಿತಿ ತಂತ್ರಜ್ಞಾನ, ಬಾಹ್ಯಾಕಾಶ, ಕಂಪ್ಯೂಟರ್, ರೊಬೊಟಿಕ್ಸ್, ನ್ಯಾನೊ-ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ಬೌದ್ಧಿಕ ಆಸ್ತಿ ಹಕ್ಕುಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಜಾಗೃತಿ.

ನಾಸಾದ ವೈಪರ್ ಮಿಷನ್:


(NASA’s VIPER Mission)

ಸಂದರ್ಭ:

ಇತ್ತೀಚೆಗೆ,ನಾಸಾ ‘ವೊಲಾಟೈಲ್ಸ್ ಇನ್ವೆಸ್ಟಿಗೇಟ್ ಪೋಲಾರ್ ಎಕ್ಸ್‌ಪ್ಲೋರೇಶನ್ ರೋವರ್’ (Volatiles Investigating Polar Exploration Rover– VIPER) ಗಾಗಿ ‘ಲ್ಯಾಂಡಿಂಗ್ ಸೈಟ್’ ಅನ್ನು ಆಯ್ಕೆ ಮಾಡಿದೆ.

ಚಂದ್ರನ ದಕ್ಷಿಣ ಧ್ರುವದ ಬಳಿ ಇರುವ ‘ನೋಬಿಲ್ ಕ್ರೇಟರ್’ (Nobile Crater) ನ ಪಶ್ಚಿಮ ಅಂಚಿನಲ್ಲಿರುವ ಒಂದು ಸ್ಥಳವನ್ನು ಈ ಲ್ಯಾಂಡಿಂಗ್ ಸೈಟ್ ಗೆ ಆಯ್ಕೆ ಮಾಡಲಾಗಿದೆ. ಈ ಕುಳಿಗೆ ಇಟಾಲಿಯನ್ ಧ್ರುವ ಪರಿಶೋಧಕ ‘ಉಂಬರ್ಟೊ ನೊಬಿಲ್’ (Umberto Nobile) ಅವರ ಹೆಸರಿಡಲಾಗಿದೆ.

ಹಿನ್ನೆಲೆ:

ನಾಸಾ ತನ್ನ ವೊಲಟೈಲ್ಸ್ ಇನ್ವೆಸ್ಟಿಗೇಟಿಂಗ್ ಪೋಲಾರ್ ಎಕ್ಸ್‌ಪ್ಲೋರೇಶನ್ ರೋವರ್ (VIPER) (Volatiles Investigating Polar Exploration Rover) ಅನ್ನು 2023 ರಲ್ಲಿ ಪ್ರಾರಂಭಿಸುವುದಾಗಿ ಜುಲೈ 2021 ರಲ್ಲಿ ಘೋಷಿಸಿದೆ.

  1. ನಾಸಾ ಈ ಕಾರ್ಯಾಚರಣೆಯನ್ನು ಪ್ರಾರಂಭಿಸುವ ಉದ್ದೇಶವು ಸ್ಥಳೀಯವಾಗಿ ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಿಕೊಂಡು ಚಂದ್ರನ ಮೇಲೆ ಮಾನವ ಜೀವನ ಸಾಧ್ಯವೇ ಎಂದು ಕಂಡುಹಿಡಿಯುವುದಾಗಿದೆ.

current affairs

 

ವೈಪರ್ ಮಿಷನ್ ಬಗ್ಗೆ:

  1. VIPER ಮೊಬೈಲ್ ರೋಬೋಟ್ ಆಗಿದೆ.
  2. ಇದು ಇತರ ಯಾವುದೇ ಆಕಾಶಕಾಯದ ಸಂಪನ್ಮೂಲ ಮ್ಯಾಪಿಂಗ್ ಮಾಡುವ ಮೊದಲ ಮಿಷನ್ ಆಗಿದೆ.
  3. ನಾಸಾದ ವಾಣಿಜ್ಯ ಉಡ್ಡಯನ ಪೇಲೋಡ್ ಸೇವೆಗಳು (Commercial Lunar Payload Services – CLPS) 100 ದಿನಗಳ ಕಾರ್ಯಾಚರಣೆ ಅವಧಿಗೆ ಉಡಾವಣಾ ವಾಹನ ಮತ್ತು ಲ್ಯಾಂಡರ್ ಅನ್ನು ಒದಗಿಸಲಿದೆ.

ಕಾರ್ಯಾಚರಣೆಯ ಉದ್ದೇಶಗಳು:

  1. ಚಂದ್ರನ ದಕ್ಷಿಣ ಧ್ರುವ ಪ್ರದೇಶವನ್ನು ಅನ್ವೇಷಿಸುವುದು.
  2. ಚಂದ್ರನಲ್ಲಿ ಲಭ್ಯವಿರುವ ಸಂಪನ್ಮೂಲಗಳನ್ನು ನಕ್ಷೆ ಮಾಡಲು ಸಹಾಯ ಮಾಡಲು.
  3. ಚಂದ್ರನ ಮೇಲ್ಮೈಯಲ್ಲಿ ನೀರಿನ ಸಾಂದ್ರತೆ ಮತ್ತು ಇತರ ಸಂಭಾವ್ಯ ಸಂಪನ್ಮೂಲಗಳನ್ನು ನಿರ್ಣಯಿಸುವುದು.

ಕಾರ್ಯಾಚರಣೆಯ ಮಹತ್ವ:

VIPER ನ ಸಂಶೋಧನೆಗಳು ಆರ್ಟೆಮಿಸ್ ಕಾರ್ಯಕ್ರಮದಡಿಯಲ್ಲಿ “ಗಗನಯಾತ್ರಿಗಳು ತಮ್ಮ ವಿಸ್ತೃತ ವಾಸ್ತವ್ಯದ ಸಮಯದಲ್ಲಿ ನೀರು ಮತ್ತು ಜೀವ ಉಳಿಸುವ ಇತರ ಸಂಪನ್ಮೂಲಗಳನ್ನು ಪ್ರವೇಶಿಸಬಹುದಾದ ಭವಿಷ್ಯದ ಲ್ಯಾಂಡಿಂಗ್ ಸೈಟ್‌ಗಳಿಗೆ ಸ್ಥಳಗಳನ್ನು ನಿರ್ಧರಿಸಲು ಸಹಾಯ ಮಾಡುತ್ತದೆ.”

 

ವಿಷಯಗಳು: ಸಂರಕ್ಷಣೆ ಮತ್ತು ಜೀವವೈವಿಧ್ಯತೆಗೆ ಸಂಬಂಧಿತ ಸಮಸ್ಯೆಗಳು.

ವಿಶ್ವ ಖಡ್ಗಮೃಗ ದಿನ – ಸೆಪ್ಟೆಂಬರ್ 22:


(World Rhino Day — September 22)

ಸಂದರ್ಭ:

ಅಸ್ಸಾಂ ಸರ್ಕಾರವು ಸೆಪ್ಟೆಂಬರ್ 22 ರಂದು ‘ವಿಶ್ವ ಖಡ್ಗಮೃಗ ದಿನ’ (World Rhino Day) ವನ್ನು ‘ಒಂದು ಕೊಂಬಿನ ಖಡ್ಗಮೃಗ’ ಗಳ (Greater One-Horned), ಸುಮಾರು 2,500 ಕೊಂಬುಗಳ ಸಂಗ್ರಹವನ್ನು ವಿಶೇಷ ಸಮಾರಂಭದಲ್ಲಿ ಸುಡುವ ಮೂಲಕ ಆಚರಿಸಿತು.

  1. ಈ ಸಮಾರಂಭವನ್ನು ‘ಖಡ್ಗಮೃಗ’ ಗಳ ಸಂರಕ್ಷಣೆಯ ಒಂದು ಮೈಲಿಗಲ್ಲಾಗಿ ಪ್ರಚಾರ ಮಾಡಲಾಗಿದೆ ಮತ್ತು ಖಡ್ಗಮೃಗದ ಕೊಂಬುಗಳ ಬಗ್ಗೆ ಪ್ರಚಲಿತವಿರುವ ಪುರಾಣ /ಕಟ್ಟುಕಥೆಗಳನ್ನು ಹೋಗಲಾಡಿಸುವ ಗುರಿಯನ್ನು ಹೊಂದಿದೆ.
  2. ಈ ಕಾರ್ಯಕ್ರಮವು ಕಳ್ಳ ಬೇಟೆಗಾರರು ಮತ್ತು ಕಳ್ಳಸಾಗಾಣಿಕೆದಾರರಿಗೆ ಅಂತಹ ವಸ್ತುಗಳಿಗೆ ಯಾವುದೇ ಮೌಲ್ಯವಿಲ್ಲ ಎಂಬ ಗಟ್ಟಿಯಾದ ಮತ್ತು ಸ್ಪಷ್ಟ ಸಂದೇಶವನ್ನು ರವಾನಿಸುತ್ತದೆ.

 

ಇದನ್ನು ಮಾಡಲು ಸರ್ಕಾರಕ್ಕೆ ಅನುಮತಿ ಇದೆಯೇ?

ಅಳಿವಿನಂಚಿನಲ್ಲಿರುವ ವನ್ಯಜೀವಿ ಮತ್ತು ಸಸ್ಯವರ್ಗದ ಅಂತಾರಾಷ್ಟ್ರೀಯ ವ್ಯಾಪಾರದ ಸಮಾವೇಶಕ್ಕೆ (Convention on International Trade in Endangered Species of Wild Fauna and Flora- CITES) ಭಾರತ ಸಹಿ ಹಾಕಿದ ದೇಶ ವಾಗಿದೆ.ಆದ್ದರಿಂದ, ಖಡ್ಗಮೃಗದ ಕೊಂಬುಗಳನ್ನು ಮಾರಾಟ ಮಾಡುವುದು ದೇಶದಲ್ಲಿ ಕಾನೂನುಬಾಹಿರವಾಗಿದೆ.

  1. ಅಲ್ಲದೆ, ಕೊಂಬುಗಳ ನಾಶದ ಪ್ರಕರಣವು ವನ್ಯಜೀವಿ (ರಕ್ಷಣೆ) ಕಾಯಿದೆ, 1972 ರ ಸೆಕ್ಷನ್ 39 (3) (ಸಿ) ಗೆ ಅನುಸಾರವಾಗಿ ಮಾಡಿದ ಒಂದು ಪ್ರಕ್ರಿಯೆಯಾಗಿದೆ.

 

ಏಕಶೃಂಗಿ ಖಡ್ಗಮೃಗಗಳ ಕುರಿತು:

  1. ‘ಒಂದು ಕೊಂಬಿನ ಖಡ್ಗಮೃಗ’ ಮಾತ್ರ ಭಾರತದಲ್ಲಿ ಕಂಡುಬರುತ್ತದೆ.
  2. ಅವುಗಳನ್ನು ‘ಇಂಡಿಯನ್ ರೈನೋಸೆರೋಸ್’ ಎಂದೂ ಕರೆಯುತ್ತಾರೆ ಮತ್ತು ಖಡ್ಗಮೃಗದ ಪ್ರಭೇದಗಳಲ್ಲಿ ಅತ್ಯಂತ ದೊಡ್ಡದಾಗಿದೆ.
  3. ಇದನ್ನು ‘ಕಪ್ಪು ಕೊಂಬು’ ಮತ್ತು ಬೂದು-ಕಂದು ಚರ್ಮದ ಮಡಿಕೆಗಳಿಂದ ಗುರುತಿಸಲಾಗುತ್ತದೆ.
  4. ಅವು,ಸಾಮಾನ್ಯವಾಗಿ ಮೇಯುವ ಮೂಲಕ ತಮ್ಮ ಆಹಾರವನ್ನು ಸ್ವೀಕರಿಸುತ್ತವೆ, ಮತ್ತು ಅವುಗಳ ಆಹಾರದಲ್ಲಿ ಎಲ್ಲಾ ರೀತಿಯ ಹುಲ್ಲುಗಳು, ಎಲೆಗಳು, ಪೊದೆಗಳು ಮತ್ತು ಮರದ ಕೊಂಬೆಗಳು, ಹಣ್ಣುಗಳು ಮತ್ತು ಜಲಸಸ್ಯಗಳು ಸೇರಿವೆ.

ರಕ್ಷಣೆ ಸ್ಥಿತಿ:

  1. IUCN ಕೆಂಪು ಪಟ್ಟಿ: ದುರ್ಬಲ/ಅಪಾಯಕ್ಕೊಳಗಾದ ಬಲ್ಲ ಪ್ರಭೇದ (VU).
  2. ಅಳಿವಿನಂಚಿನಲ್ಲಿರುವ ವನ್ಯಜೀವಿ ಮತ್ತು ಸಸ್ಯಪ್ರಭೇದಗಳ ಅಂತರರಾಷ್ಟ್ರೀಯ ವ್ಯಾಪಾರ ಸಮಾವೇಶ (CITES): ಅನುಬಂಧ -1 (ಅಳಿವಿನಂಚಿನಲ್ಲಿರುವ ಬೆದರಿಕೆ ಹೊಂದಿರುವ ಮತ್ತು CITES, ವೈಜ್ಞಾನಿಕ ಸಂಶೋಧನೆಯಂತಹ ವಾಣಿಜ್ಯೇತರ ಉದ್ದೇಶಗಳನ್ನು ಹೊರತುಪಡಿಸಿ ಈ ಪ್ರಭೇದಗಳನ್ನು ಅಂತರರಾಷ್ಟ್ರೀಯ ವ್ಯಾಪಾರಕ್ಕಾಗಿ ಬಳಸುವುದನ್ನು ನಿಷೇಧಿಸುತ್ತದೆ).
  3. ವನ್ಯಜೀವಿ ಸಂರಕ್ಷಣಾ ಕಾಯ್ದೆ, 1972: ಅನುಸೂಚಿ -1.

ಭಾರತದ ಇತರ ಸಂರಕ್ಷಣಾ ಪ್ರಯತ್ನಗಳು:

  1. ಐದು ಖಡ್ಗಮೃಗ ಶ್ರೇಣಿಯ ದೇಶಗಳು: ಖಡ್ಗಮೃಗದ ಪ್ರಭೇದಗಳ ರಕ್ಷಣೆ ಮತ್ತು ಸಂರಕ್ಷಣೆಗಾಗಿ ಐದು ಖಡ್ಗಮೃಗ ಶ್ರೇಣಿಯ ದೇಶಗಳು (ಭಾರತ, ಭೂತಾನ್, ನೇಪಾಳ, ಇಂಡೋನೇಷ್ಯಾ ಮತ್ತು ಮಲೇಷ್ಯಾ) ಏಷ್ಯನ್ ಖಡ್ಗಮೃಗಗಳ ರಕ್ಷಣೆ ಮತ್ತು ಸಂರಕ್ಷಣೆಗಾಗಿ ‘ಏಷ್ಯನ್ ಖಡ್ಗಮೃಗಗಳ ಕುರಿತ ನವದೆಹಲಿ ಘೋಷಣೆಗೆ (New Delhi Declaration on Asian Rhinos- 2019) ಸಹಿ ಹಾಕಿವೆ.
  2. ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯವು (MoEFCC) ದೇಶದ ಎಲ್ಲಾ ಖಡ್ಗಮೃಗಗಳ ಡಿಎನ್‌ಎ ಪ್ರೊಫೈಲ್‌ಗಳನ್ನು ರಚಿಸುವ ಯೋಜನೆಯನ್ನು ಪ್ರಾರಂಭಿಸಿದೆ.
  3. ರಾಷ್ಟ್ರೀಯ ಖಡ್ಗಮೃಗ ಸಂರಕ್ಷಣಾ ಕಾರ್ಯತಂತ್ರ: ಒಂದು ಕೊಂಬಿನ ಖಡ್ಗಮೃಗಗಳನ್ನು ಸಂರಕ್ಷಿಸಲು ಇದನ್ನು 2019 ರಲ್ಲಿ ಪ್ರಾರಂಭಿಸಲಾಯಿತು.

ಭಾರತೀಯ ಖಡ್ಗಮೃಗ ಮುನ್ನೋಟ 2020 (IRV 2020) ಕುರಿತು:

ಇದನ್ನು 2005 ರಲ್ಲಿ ಪ್ರಾರಂಭಿಸಲಾಯಿತು.

  1. ಇಂಡಿಯನ್ ರೈನೋ ವಿಷನ್ 2020 ಅನ್ನು, ಅಸ್ಸಾಂ ಸರ್ಕಾರದ ಅರಣ್ಯ ಇಲಾಖೆಯ ನೇತೃತ್ವದಲ್ಲಿ ವಿಶ್ವ ವನ್ಯಜೀವಿ ನಿಧಿ (World Wildlife Fund- WWF India) ಭಾರತ, ಇಂಟರ್ನ್ಯಾಷನಲ್ ರೈನೋ ಫೌಂಡೇಶನ್ ಮತ್ತು ಇತರ ಅನೇಕ ಸಂಸ್ಥೆಗಳ ಸಹಭಾಗಿತ್ವದಲ್ಲಿ ಪ್ರಾರಂಭಿಸಲಾದ ಒಂದು ಉಪಕ್ರಮವಾಗಿದೆ.
  2. ಅಸ್ಸಾಂನ ಹೊಸ ಪ್ರದೇಶಗಳಲ್ಲಿ ಖಡ್ಗಮೃಗಗಳ ಜನಸಂಖ್ಯೆಯನ್ನು ಒಟ್ಟು 3,000 ಕ್ಕೆ ಹೆಚ್ಚಿಸುವುದು IRV -2020 ರ ಗುರಿಯಾಗಿದೆ.
  3. ಪ್ರಸ್ತುತ, ಅಸ್ಸಾಂನ ನಾಲ್ಕು ಸಂರಕ್ಷಿತ ಪ್ರದೇಶಗಳಲ್ಲಿ ಅಂದರೆ – ಪೊಬಿಟೋರಾ ವನ್ಯಜೀವಿ ಅಭಯಾರಣ್ಯ ‘, ರಾಜೀವ್ ಗಾಂಧಿ ಒರಾಂಗ್ ರಾಷ್ಟ್ರೀಯ ಉದ್ಯಾನ, ಕಾಜಿರಂಗಾ ರಾಷ್ಟ್ರೀಯ ಉದ್ಯಾನ ಮತ್ತು ಮನಸ್ ರಾಷ್ಟ್ರೀಯ ಉದ್ಯಾನ ಗಳಲ್ಲಿ– ಖಡ್ಗಮೃಗ ಗಳು ಕಂಡುಬರುತ್ತವೆ.

current affairs

 

ದಯವಿಟ್ಟು ಗಮನಿಸಿ:

  1. ದಡೂತಿ ದೇಹ, ಕಂಬದಂಥ ಕಾಲು, ಭಾರಿ ತೂಕ ಮತ್ತು ಮೂಗಿನ ಮೇಲಿನ ಕೊಂಬುಗಳಿಂದ ವಿಶಿಷ್ಟವಾಗಿ ಕಾಣಿಸುವ ಘೇಂಡಾಮೃಗದ (ರೈನೊ) ಸಂತತಿಯು ಅದರ ಆವಾಸ ನಾಶ ಮತ್ತು ಮಾನವ ಬೇಟೆಯಿಂದಾಗಿ ವಿನಾಶದ ಭೀತಿಯಲ್ಲಿದೆ. ಆಫ್ರಿಕಾ ಮತ್ತು ಏಷ್ಯಾದ ಕಾಡುಗಳಲ್ಲಿ ಮಾತ್ರ ಇರುವ ರೈನೊಗಳು ಜೀವಿವೈವಿಧ್ಯದ ಪ್ರಮುಖ ಕೊಂಡಿಗಳೆನಿಸಿದ್ದರೂ ಅವುಗಳ ಕೊಂಬಿನಲ್ಲಿ ಮನುಷ್ಯನ ಕ್ಯಾನ್ಸರ್ ಮತ್ತು ನಿಮಿರು ದೌರ್ಬಲ್ಯ ಗುಣಪಡಿಸುವ ರಾಸಾಯನಿಕಗಳಿವೆ ಎಂಬ ತಪ್ಪುಗ್ರಹಿಕೆಯಿಂದಾಗಿ ಅವುಗಳ ಬೇಟೆ ಅನಿಯಂತ್ರಿತವಾಗಿ ನಡೆಯುತ್ತಿದೆ.
  2. ಕಳೆದ ಶತಮಾನದ ಆರಂಭದಲ್ಲಿ ಐದು ಲಕ್ಷದಷ್ಟಿದ್ದ ಅವುಗಳ ಸಂಖ್ಯೆ ಈಗ ಬರೀ ಮೂವತ್ತು ಸಾವಿರಕ್ಕಿಳಿದಿದೆ. ನಮ್ಮಲ್ಲಿ ಸುಮಾರು 3,300 ಇರಬಹುದೆಂಬ ಅಂದಾಜಿದ್ದು, ಅಪಾಯದಲ್ಲಿರುವ ಪ್ರಾಣಿ ಎಂದು ಐಯುಸಿಎನ್‌ (ಇಂಟರ್‌ನ್ಯಾಷನಲ್‌ ಯೂನಿಯನ್‌ ಫಾರ್‌ ಕನ್ಸರ್ವೇಷನ್‌ ಆಫ್‌ ನೇಚರ್‌) ಕೆಂಪುಪಟ್ಟಿಗೆ ಸೇರಿಸಲಾಗಿದೆ.
  3. ಆಫ್ರಿಕಾದ ಡೈಸೆರಾಸ್ ಬೈಕಾರ್ನಿಸ್ (ಕಪ್ಪು), ಸೆರೆಟೊತೀರಿಯಂ ಸೈಮಮ್‌ (ಬಿಳಿ), ಅಸ್ಸಾಂನ ರೈನಾಸರಾಸ್ ಯೂನಿಕಾರ್ನಿಸ್, ಜಾವಾದ ರೈನಾಸರಾಸ್ ಸೊಂಡೇಕಸ್ ಮತ್ತು ಸುಮಾತ್ರಾದ ಡಿಸೆರೊರೈನಸ್‌ ಸುಮಾತ್ರೆನ್ಸಿಸ್ ಎಂಬ ಐದು ಪ್ರಭೇದಗಳಿವೆ. ಆಫ್ರಿಕಾ ಮತ್ತು ಸುಮಾತ್ರಾದ ಘೇಂಡಾಮೃಗಗಳಿಗೆ ಮೂಗಿನ ಮೇಲೆ ಒಂದರ ಹಿಂದೊಂದು ಎರಡು ಕೊಂಬುಗಳಿರುತ್ತವೆ. ನಮ್ಮ ಮತ್ತು ಜಾವಾದ ಪ್ರಭೇದಗಳಲ್ಲಿ ಒಂದೇ ಕೊಂಬು ಇರುತ್ತದೆ. ಕೆಲವು ಬಗೆಯ ವಿಶೇಷ ಕೂದಲುಗಳು ಒತ್ತೊತ್ತಾಗಿ ಕೂಡಿಕೊಂಡು, ಬಿರುಸುಗೊಂಡು ರಚನೆಯಾದ ಈ ಕೊಂಬುಗಳ ಕಳ್ಳಮಾರಾಟದ ಬೃಹತ್ ಜಾಲ ಚೀನಾ, ವಿಯೆಟ್ನಾಂನಲ್ಲಿದೆ.
  4. ನಮ್ಮಲ್ಲಿರುವ ಘೇಂಡಾಮೃಗಗಳ ಪೈಕಿ ಎರಡು ಸಾವಿರಕ್ಕೂ ಹೆಚ್ಚು ‘ರೈನೊಗಳ ಸ್ವರ್ಗ’ ಎಂದೇ ಕರೆಯಲಾಗುವ ಅಸ್ಸಾಂನ ‘ಕಾಜಿರಂಗ’ ರಾಷ್ಟ್ರೀಯ ಉದ್ಯಾನವನದಲ್ಲೇ ಇವೆ. ಅದಕ್ಕೆ ಕಾರಣ, ಜಾರಿಯಲ್ಲಿರುವ ಅತ್ಯಂತ ಕಠಿಣ ಹಾಗೂ ವಿಚಿತ್ರ ಕಾನೂನು. ಕಾಜಿರಂಗದಲ್ಲಿ ಅರಣ್ಯ ಇಲಾಖೆಯ ಅಧಿಕಾರಿ– ವಾಚರ್– ಗಾರ್ಡ್‌ಗಳನ್ನು ಹೊರತುಪಡಿಸಿ ಬೇರೆ ಯಾರೂ ಕಾಲ್ನಡಿಗೆಯಲ್ಲಿ ಸಂಚರಿಸುವಂತಿಲ್ಲ, ಅಂಥವರ ಮೇಲೆ ಕಂಡಲ್ಲಿ ಗುಂಡು ಹಾರಿಸುವ ಕಾನೂನು ಜಾರಿಯಲ್ಲಿದೆ ಎಂದು ಬಿಬಿಸಿ ಮತ್ತು ನಮ್ಮ ಹಲವು ಪತ್ರಿಕೆಗಳು ವರದಿ ಮಾಡಿದ್ದವು.
  5. ಸಾಕ್ಷ್ಯಚಿತ್ರವೊಂದನ್ನು ನಿರ್ಮಿಸಿದ್ದ ಬಿಬಿಸಿ, ‘ಇದು ಮಾನವ ಹಕ್ಕಿನ ಸ್ಪಷ್ಟ ಉಲ್ಲಂಘನೆ’ ಎಂದಿತ್ತು. ಸ್ಥಳೀಯ ಸಂರಕ್ಷಣಾ ತಂಡದವರು, ಇದು ಅರಣ್ಯ ಹಕ್ಕು ಕಾಯ್ದೆಗೆ ವಿರುದ್ಧ ಎಂದಿದ್ದರು. 2013ರಲ್ಲಿ 27 ರೈನೊಗಳು ಬೇಟೆಗೆ ಬಲಿಯಾಗಿದ್ದವು. ಕಾಡಿಗೆ ಕಾಲ್ನಡಿಗೆಯಲ್ಲಿ ಅನಧಿಕೃತ ಪ್ರವೇಶ ಪಡೆಯುವವರ ವಿರುದ್ಧ ಅರಣ್ಯ ಇಲಾಖೆಯು ಗುಂಡು ಹಾರಿಸಲು ಶುರು ಮಾಡಿದಾಗ ರೈನೊ ಹತ್ಯೆಗೆ ಕಡಿವಾಣ ಬಿತ್ತು ಎಂದು ವರದಿಯಾಗಿತ್ತು.
  6. ಇದು ಅಂತರರಾಷ್ಟ್ರೀಯ ವಲಯದಲ್ಲಿ ಭಾರಿ ವಿವಾದ ಸೃಷ್ಟಿಸಿತ್ತು. ರೈನೊಗಳ ಬೇಟೆಗಿಂತ ಅರಣ್ಯ ಇಲಾಖೆ ಹಾರಿಸಿದ ಗುಂಡುಗಳಿಗೆ ಸಿಕ್ಕಿ ಸತ್ತವರ ಸಂಖ್ಯೆ ಹೆಚ್ಚಾಗಿತ್ತು. ‘ಕಾಡಿನ ಮಧ್ಯ ಯಾವುದೇ ಹಳ್ಳಿಯಾಗಲೀ ಜನವಸತಿಯಾಗಲೀ ಇಲ್ಲ. ಹಾಗಾಗಿ ಅರಣ್ಯ ಇಲಾಖೆ ಮತ್ತು ಸಂಶೋಧಕರನ್ನು ಹೊರತುಪಡಿಸಿದರೆ ಕಾಡಿನ ಒಳಗೆ ಓಡಾಡುವವರು ಯಾರೂ ಇಲ್ಲ. ಎದುರಿಗೆ ಬಂದವರನ್ನೆಲ್ಲ ಕೊಂದಿಲ್ಲ, ಅನುಮಾನ ಹುಟ್ಟಿಸುವ ಇಲ್ಲವೇ ಬೇಟೆಯಲ್ಲಿ ಭಾಗಿಯಾದವರ ಮೇಲಷ್ಟೇ ಗುಂಡು ಹಾರಿಸುತ್ತೇವೆ. ಅದಕ್ಕೆ ನಮಗೆ ಪರವಾನಗಿ ಇದೆ’ ಎಂದು ಗಾರ್ಡ್‌ಗಳು ಬಿಬಿಸಿಗೆ ಹೇಳಿದ್ದರು.
  7. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕೊಂಬಿಗೆ ಮತ್ತು ಕೂದಲಿಗೆ ಭಾರಿ ಬೆಲೆ ಇರುವುದರಿಂದ ರೈನೊಗಳ ಹತ್ಯೆ ನಡೆಯುತ್ತಿದೆ. ಕಾಜಿರಂಗದ ಒಳಗೆ ಮತ್ತು ಸುತ್ತಮುತ್ತ ಉಗ್ರವಾದಿಗಳ ಉಪಟಳವಿದ್ದು, ಶಸ್ತ್ರಾಸ್ತ್ರ ಖರೀದಿಗೆ ಹಣ ಹೊಂದಿಸಲು ಪರದಾಡುವ ಉಗ್ರರು ಸ್ಥಳೀಯರ ಸಹಾಯದಿಂದ ರೈನೊದ ಬೇಟೆಯಾಡು ಅದರ ಭಾಗಗಳನ್ನೇ ಕರೆನ್ಸಿಯನ್ನಾಗಿ ಬಳಸುತ್ತಾರೆ ಎಂಬುದು ತಜ್ಞರ ಮಾತು.
  8. ಈ ಬಾರಿಯ ರೈನೊ ದಿನಾಚರಣೆಯ ಧ್ಯೇಯವಾಕ್ಯ ‘ಫೈವ್ ರೈನೊ ಸ್ಪೀಶೀಸ್ ಫಾರ್‌ಎವರ್’. ದೇಶದ ಒಟ್ಟು ರೈನೊಗಳ ಪೈಕಿ ಶೇ 95ರಷ್ಟು ಕಾಜಿರಂಗ, ಮರಿಗಾಂನ ಪೊಬಿಟೊರ ಮತ್ತು ಓರಾಂಗ್ ರಾಷ್ಟ್ರೀಯ ಉದ್ಯಾನವನಗಳಲ್ಲಿ ಇವೆ. 1966ರಲ್ಲಿ ಕೇವಲ 366ರಷ್ಟಿದ್ದ ರೈನೊಗಳ ಸಂಖ್ಯೆ ಈಗ 2,329ಕ್ಕೇರಿದೆ. ಪ್ರತೀ ಮೂರು ವರ್ಷಗಳಿಗೊಮ್ಮೆ ಗಣತಿ ನಡೆಯುತ್ತದೆ. ಬ್ರಹ್ಮಪುತ್ರಾ ನದಿಯ ಪ್ರವಾಹದಲ್ಲಿ ತಾಯಿಯಿಂದ ಬೇರ್ಪಡುವ ಮರಿ ರೈನೊಗಳನ್ನು ರಕ್ಷಿಸುವ ಕೆಲಸ ತಪ್ಪದೇ ನಡೆಯುತ್ತಿದೆ.
  9. ಬೇಟೆಯಿಂದ ರೈನೊಗಳನ್ನು ಉಳಿಸಲು ಸ್ಥಳೀಯ ಸಮುದಾಯಗಳ ಸಹಭಾಗಿತ್ವ ಬೇಕೇ ಬೇಕು ಎನ್ನುವ ಕೊಯಮತ್ತೂರಿನ ಜೂ ಔಟ್‍ರೀಚ್ ಸಂಸ್ಥೆಯು ಹಲವು ಕ್ಷೇತ್ರ ತರಬೇತಿ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸುತ್ತಿದೆ. ಅಸ್ಸಾಂ ಸರ್ಕಾರ 2005ರಲ್ಲಿ ಇಂಡಿಯಾ ರೈನೊ ವಿಶನ್– 2020 ಪ್ರಾರಂಭಿಸಿದ್ದು, ಕಠಿಣ ಸಂರಕ್ಷಣಾ ಕ್ರಮಗಳನ್ನು ಅನುಸರಿಸಿ ಘೇಂಡಾಮೃಗಗಳು ಮತ್ತು ಅವುಗಳ ಆವಾಸ ಎರಡನ್ನೂ ಉಳಿಸುವಲ್ಲಿ ಭಾಗಶಃ ಯಶಸ್ವಿಯಾಗಿದೆ. ರೈನೊಗಳ ಸಂರಕ್ಷಣೆಗೆ ಡಬ್ಲ್ಯುಡಬ್ಲ್ಯುಎಫ್ ಮತ್ತು ಟೆಕ್ಸಾಸ್ ಮೂಲದ ಇಂಟರ್‌ನ್ಯಾಷನಲ್ ರೈನೊ ಫೌಂಡೇಶನ್ ನಿರಂತರವಾಗಿ ಕೆಲಸ ಮಾಡುತ್ತಿವೆ.

ಆಧಾರ: ಪ್ರಜಾವಾಣಿ.

 

ವಿಷಯಗಳು:ಸಂರಕ್ಷಣೆ ಮತ್ತು ಜೀವವೈವಿಧ್ಯತೆಗೆ ಸಂಬಂಧಿತ ಸಮಸ್ಯೆಗಳು.

ಅಂತರರಾಷ್ಟ್ರೀಯ ಕಡಲ ಸಂಸ್ಥೆಯ ಮೂಲಕ ಕಪ್ಪು ಇಂಗಾಲದ ಹೊರಸೂಸುವಿಕೆಯ ಮೇಲೆ ಕಾರ್ಯನಿರ್ವಹಿಸಲು ಒತ್ತಾಯ:


(IMO urged to act on Black Carbon emissions)

ಸಂದರ್ಭ:

ಆರ್ಕ್ಟಿಕ್‌ನಲ್ಲಿ ಬೇಸಿಗೆಯ ಮಂಜು ತನ್ನ 12 ನೇ ಅತಿ ಕಡಿಮೆ ಮಟ್ಟವನ್ನು ತಲುಪಿದ ನಂತರ, ಕ್ಲೀನ್ ಆರ್ಕ್ಟಿಕ್ ಅಲೈಯನ್ಸ್ (Clean Arctic Alliance)ನಿಂದ ಅಂತರಾಷ್ಟ್ರೀಯ ಸಾಗರ ಸಂಸ್ಥೆ(International Maritime Organization – IMO) ಯು ನವೆಂಬರ್‌ನಲ್ಲಿ ‘ಆಯೋಜಿಸಲಿರುವ ಸಾಗರ ಪರಿಸರ ಸಂರಕ್ಷಣಾ ಸಮಿತಿಯ (Marine Environment Protection Committee – MEPC) 77 ನೇ ಸಭೆ, ಅಂದರೆ MEPC 77’ ಗೆ ಮೊದಲು, ಶಿಪ್ಪಿಂಗ್ / ನೌಕಾ ಸಾರಿಗೆಯಿಂದ ಕಪ್ಪು ಇಂಗಾಲ ಹೊರಸೂಸುವಿಕೆಯನ್ನು ತಕ್ಷಣವೇ ಕಡಿಮೆ ಮಾಡಬೇಕೆಂಬ ಬೇಡಿಕೆ ಇಡಲಾಗಿದೆ.

ಸಾಗರ ಪರಿಸರ ಸಂರಕ್ಷಣಾ ಸಮಿತಿಯ (MEPC)ಕುರಿತು:

ಸಮುದ್ರ ಪರಿಸರ ಮತ್ತು ಪರಿಸರ ವ್ಯವಸ್ಥೆಯ ಹಿತಾಸಕ್ತಿಗಳನ್ನು ರಕ್ಷಿಸಲು ಮತ್ತು ಸಂರಕ್ಷಿಸಲು ‘ಪೂರ್ವಭಾವಿ ನಿಲುವು’ ಅಳವಡಿಸಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ‘ಅಂತರಾಷ್ಟ್ರೀಯ ಕಡಲ ಸಂಸ್ಥೆ’ಯ ಮೂಲಕ (IMO) ‘ಸಾಗರ ಪರಿಸರ ಸಂರಕ್ಷಣಾ ಸಮಿತಿಯನ್ನು’ (Marine Environment Protection Committee – MEPC)ಸ್ಥಾಪಿಸಲಾಗಿದೆ.

  1. ಕಡಲ ಪ್ರದೇಶಗಳಲ್ಲಿ ಹಡಗುಗಳ ನಿರಂತರ ಮತ್ತು ಭಾರೀ ದಟ್ಟಣೆಯಿಂದ ಉಂಟಾಗುವ ವಾಯು ಮಾಲಿನ್ಯದ ಸಮಸ್ಯೆಗೆ ಪರಿಹಾರಗಳನ್ನು ಒದಗಿಸುವುದು ಈ ಸಮಿತಿಯ ಉದ್ದೇಶವಾಗಿದೆ.
  2. ‘ಸಮುದ್ರ ಪರಿಸರ ಸಂರಕ್ಷಣಾ ಸಮಿತಿ’ಯು ತನ್ನ ಸಭೆಗಳಲ್ಲಿ MARPOL ಕುರಿತು ಅಸ್ತಿತ್ವದಲ್ಲಿರುವ ನಿಯಮಗಳು ಮತ್ತು ಮಾರ್ಗಸೂಚಿಗಳಿಗೆ ಅಗತ್ಯ ತಿದ್ದುಪಡಿಗಳನ್ನು ತರಲು ಪ್ರಸ್ತಾಪಿಸುತ್ತದೆ.
  3. ಈ ಪರಿಸರ ಸಂರಕ್ಷಣಾ ಸಂಸ್ಥೆಯು ನಿರ್ದಿಷ್ಟವಾಗಿ ಸೂಕ್ಷ್ಮ ಸಮುದ್ರ ಪ್ರದೇಶಗಳು (Particularly Sensitive Sea Areas – PSSA) ಮತ್ತು ಇತರ ವಿಶೇಷ ಸಮುದ್ರ ಪ್ರದೇಶಗಳ ಗುರುತಿಸುವಿಕೆ ಮತ್ತು ಜಾರಿಗೊಳಿಸುವಿಕೆಯ ಮೇಲೆ ಕೇಂದ್ರೀಕರಿಸುತ್ತದೆ.

 

ಕಪ್ಪು ಕಾರ್ಬನ್ ಎಂದರೇನು? ಕಾಳಜಿಗಳು ಯಾವುವು?

ಕಪ್ಪು ಇಂಗಾಲವು ಪಳೆಯುಳಿಕೆ ಇಂಧನಗಳು ಮತ್ತು ಜೀವರಾಶಿಗಳ ಅಪೂರ್ಣ ದಹನದಿಂದ ಉತ್ಪತ್ತಿಯಾಗುತ್ತದೆ. ಪಳೆಯುಳಿಕೆ ಇಂಧನಗಳು, ಜೈವಿಕ ಇಂಧನಗಳು ಮತ್ತು ಜೀವರಾಶಿಗಳ ಅಪೂರ್ಣ ದಹನದ ಪರಿಣಾಮವಾಗಿ ಕಪ್ಪು ಇಂಗಾಲವು ಸ್ವಾಭಾವಿಕವಾಗಿ ಮತ್ತು ಮಾನವ ಚಟುವಟಿಕೆಗಳಿಂದ ಉತ್ಪತ್ತಿಯಾಗುತ್ತದೆ.

  1. ಐತಿಹಾಸಿಕ ಇಂಗಾಲದ ಹೊರಸೂಸುವಿಕೆಗಿಂತ ಭಿನ್ನವಾಗಿ, ಇದು ಸ್ಥಳೀಯ ಮೂಲಗಳಿಂದ ಹುಟ್ಟಿಕೊಂಡಿದೆ ಮತ್ತು ಸ್ಥಳೀಯ ಪ್ರದೇಶಗಳ ಮೇಲೆ ಭಾರಿ ಪರಿಣಾಮ ಬೀರುತ್ತದೆ.
  2. ಡೀಸೆಲ್ ಎಂಜಿನ್, ಅಡುಗೆ ಸ್ಟೌವ್, ಮರದ ಸುಡುವಿಕೆ ಮತ್ತು ಕಾಡಿನ ಬೆಂಕಿಯಿಂದ ಹೊರಸೂಸುವಿಕೆಯು ‘ಕಪ್ಪು ಇಂಗಾಲದ’ ಪ್ರಾಥಮಿಕ ಮೂಲಗಳಾಗಿವೆ.
  3. ಅಲ್ಪಾವಧಿಯ ಮಾಲಿನ್ಯಕಾರಕವಾದ ಕಪ್ಪು ಇಂಗಾಲವು, ಇಂಗಾಲದ ಡೈಆಕ್ಸೈಡ್ (carbon dioxide -CO2) ನಂತರ ಭೂಮಿಯ ಉಷ್ಣತೆ ಹೆಚ್ಚಳಗೊಳ್ಳಲು ಎರಡನೇ ಅತಿದೊಡ್ಡ ಕೊಡುಗೆ ನೀಡುತ್ತದೆ.

 

ವಿಷಯಗಳು:ಆಂತರಿಕ ಭದ್ರತೆಗೆ ಸವಾಲನ್ನು ಒಡ್ಡುವ ಆಡಳಿತ ವಿರೋಧಿ ಅಂಶಗಳ ಪಾತ್ರ.

ಅಸ್ಸಾಂ-ಮಿಜೋರಾಂ ಗಡಿ ವಿವಾದ:


(Assam-Mizoram border dispute)

ಸಂದರ್ಭ:

ಅಸ್ಸಾಂ ಮತ್ತು ಮಿಜೋರಾಂ ಮುಖ್ಯಮಂತ್ರಿಗಳು ಗಡಿಯಲ್ಲಿ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಪರಿಹಾರ ಮಾರ್ಗವನ್ನು ಹುಡುಕುತ್ತಿದ್ದಾರೆ.

ಇತ್ತೀಚಿನ ಘಟನೆಗಳು:

ಜುಲೈ 26 ರಂದು, ಎರಡು ರಾಜ್ಯಗಳ ಪೊಲೀಸ್ ಪಡೆಗಳ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಇದರಲ್ಲಿ ಆರು ಅಸ್ಸಾಂ ಪೊಲೀಸರು ಮತ್ತು ಒಬ್ಬ ನಾಗರಿಕ ಸಾವನ್ನಪ್ಪಿದರು ಮತ್ತು 60 ಜನರು ಗಾಯಗೊಂಡಿದ್ದರು.

 

ಗುಂಡಿನ ದಾಳಿ ಏಕಪಕ್ಷೀಯ ಮತ್ತು ಅಪ್ರಚೋದಿತ ಎಂದು ಅಸ್ಸಾಂ ಸರ್ಕಾರವು ಹೇಳಿಕೊಂಡಿದೆ, ಆದರೆ ಮಿಜೋರಾಂ ‘ಅಸ್ಸಾಂ ಪೊಲೀಸರು’ ತೋರಿಸಿದ ಆಕ್ರಮಣಕ್ಕೆ ತಮ್ಮ ಪೊಲೀಸರು ಪ್ರತೀಕಾರ ತೀರಿಸಿಕೊಂಡಿದ್ದಾರೆ ಎಂದು ಹೇಳಿದೆ.

ವಿವಾದದ ಮೂಲ:

ಅಸ್ಸಾಂ ಮತ್ತು ಮಿಜೋರಾಂ 164.6 ಕಿಮೀ ಉದ್ದದ ಅಂತಾರಾಜ್ಯ ಗಡಿಯನ್ನು ಹಂಚಿಕೊಳ್ಳುತ್ತವೆ ಮತ್ತು ಈ ಗಡಿಯಲ್ಲಿನ ಸಂಘರ್ಷವು ದಶಕಗಳಷ್ಟು ಹಳೆಯದು.

ಈ ವಿವಾದದ ಕೇಂದ್ರಬಿಂದು ಬ್ರಿಟಿಷರ ಅವಧಿಯಲ್ಲಿ ಹೊರಡಿಸಲಾದಎರಡು ಅಧಿಸೂಚನೆಗಳು:

  1. ‘ಬಂಗಾಳ ಪೂರ್ವ ಗಡಿನಾಡು ನಿಯಂತ್ರಣ ಕಾಯ್ದೆ, 1873’ ಅಡಿಯಲ್ಲಿ 1875 ರಲ್ಲಿ ಹೊರಡಿಸಲಾದ ಅಧಿಸೂಚನೆಯ ಆಧಾರದ ಮೇಲೆ ಈ ಭೂಮಿ ತನಗೆ ಸೇರಿದ್ದಾಗಿದೆ ಎಂದು ಮಿಜೋರಾಂ ಹೇಳಿಕೊಂಡಿದೆ.
  2. ಅಸ್ಸಾಂ ಈ ಭೂಮಿಯನ್ನು ತನ್ನದೇ ಎಂದು ಹೇಳಿಕೊಳ್ಳುತ್ತದೆ ಮತ್ತು ಇದಕ್ಕಾಗಿ ಇದು 1933 ರಲ್ಲಿ ರಾಜ್ಯ ಸರ್ಕಾರವು ಲುಶೈ ಬೆಟ್ಟಗಳನ್ನು ಗುರುತಿಸಿ ನೀಡಿದ ಅಧಿಸೂಚನೆಯನ್ನು ಉಲ್ಲೇಖಿಸುತ್ತದೆ. ಈ ಅಧಿಸೂಚನೆಯಲ್ಲಿ ಮಣಿಪುರದ ಗಡಿಯು ಲುಶಾಯ್ ಹಿಲ್ಸ್, ಅಸ್ಸಾಂನ ಕ್ಯಾಚರ್ ಜಿಲ್ಲೆ ಮತ್ತು ಮಣಿಪುರ ರಾಜ್ಯಗಳ ತ್ರಿವಳಿ ಸ್ಥಳದಿಂದ ಪ್ರಾರಂಭವಾಗುತ್ತದೆ ಎಂದು ಹೇಳಲಾಗಿದೆ. ಮಿಜೋಗಳು ಈ ಗಡಿರೇಖೆಯನ್ನು ಸ್ವೀಕರಿಸುವುದಿಲ್ಲ.

ವಸಾಹತುಶಾಹಿ ಅವಧಿಯಲ್ಲಿ, ಮಿಜೋರಾಂ ಅನ್ನು ಅಸ್ಸಾಂನ ಒಂದು ಜಿಲ್ಲೆಯಾದ ‘ಲುಶಾಯ್ ಹಿಲ್ಸ್’ ಎಂದು ಕರೆಯಲಾಗುತ್ತಿತ್ತು.

ಅಂತಹ ಘಟನೆಗಳ ಪರಿಣಾಮಗಳು:

ಜುಲೈ 26 ಘಟನೆಯ ನಂತರ, ಅಸ್ಸಾಂನ ಸ್ಥಳೀಯ ನಿವಾಸಿಗಳು ಮಿಜೋರಾಂ ಅನ್ನು ಸಂಪರ್ಕಿಸುವ ಏಕೈಕ ರೈಲ್ವೆ ಹಳಿಗಳನ್ನು ಕಿತ್ತುಹಾಕಿದ್ದಾರೆ ಮತ್ತು ರಾಷ್ಟ್ರೀಯ ಹೆದ್ದಾರಿ -306 ಅನ್ನು ನಿರ್ಬಂಧಿಸಿದ್ದಾರೆ. ಈ ಕಾರಣದಿಂದಾಗಿ ಮಿಜೋರಾಂನಿಂದ ಹೊರಗೆ ಮತ್ತು ಹೊರಗಿನಿಂದ ಮಿಝೋರಾಂ ಗೆ ನಾಗರಿಕರು ಮತ್ತು ಸರಕುಗಳ ಸಾಗಣೆ ಹಾಗೂ ಓಡಾಟಕ್ಕೆ  ತೊಂದರೆಯಾಗಿದೆ.

ಈಗ ಮಾಡಬೇಕಿರುವುದೇನು?

  1. ಎರಡು ರಾಜ್ಯಗಳ ನಡುವೆ ಇರುವ ಸಮಸ್ಯೆಯ ಸೌಹಾರ್ದಯುತ ಇತ್ಯರ್ಥಕ್ಕಾಗಿ ಸುಪ್ರೀಂ ಕೋರ್ಟ್ ಅನ್ನು ಸಂಪರ್ಕಿಸಬೇಕು.
  2. ಕೇಂದ್ರ ಸರ್ಕಾರದ ನೇರ ಮೇಲ್ವಿಚಾರಣೆಯಲ್ಲಿ ‘CRPF’ ಪಡೆಗಳಿಂದ ಈ ಪ್ರದೇಶದಲ್ಲಿ ಹೆಚ್ಚಿದ ಗಸ್ತು ಮತ್ತು ಕಣ್ಗಾವಲು ಇರಬೇಕು.
  3. ಪರಿಸ್ಥಿತಿ ಹದಗೆಡದಂತೆ ತಡೆಯಲು, ಸೂಕ್ಷ್ಮ ಸಂದೇಶಗಳನ್ನು ಪೋಸ್ಟ್ ಮಾಡುವುದನ್ನು ತಪ್ಪಿಸಬೇಕು ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಗಳನ್ನು ವಿವೇಚನೆಯಿಂದ ಬಳಸಬೇಕು.

 


ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:


ಸೈನ್ ಲಾಂಗ್ವೇಜ್ ಡೇ (ಸಂಜ್ಞಾ ಭಾಷೆ ದಿನ):

  1. ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಅಂಗವಿಕಲರ ಸಬಲೀಕರಣ ಇಲಾಖೆ (Divyangjan)ಯ ಅಡಿಯಲ್ಲಿರುವ ಸ್ವಾಯತ್ತ ಸಂಸ್ಥೆಯಾದ,ಭಾರತೀಯ ಸೈನ್ ಲಾಂಗ್ವೇಜ್ ರಿಸರ್ಚ್ ಅಂಡ್ ಟ್ರೈನಿಂಗ್ ಸೆಂಟರ್ (ISLRTC), 23 ಸೆಪ್ಟೆಂಬರ್ 2021 ರಂದು ‘ಸೈನ್ ಲಾಂಗ್ವೇಜ್ ಡೇ’ (Sign Language Day) ಅನ್ನು ಆಚರಿಸಿತು.
  2. ಅಂತರರಾಷ್ಟ್ರೀಯ ಸೈನ್ ಲಾಂಗ್ವೇಜ್ ಡೇ 2021 ರ ಥೀಮ್ “ನಾವು ಮಾನವ ಹಕ್ಕುಗಳಿಗಾಗಿ ಸಹಿ ಮಾಡುತ್ತೇವೆ” (We Sign For Human Rights) ಎಂದಾಗಿದೆ.
  3. ಈ ದಿನವನ್ನು ಮೊದಲಬಾರಿಗೆ 2018 ರಲ್ಲಿ ಅಂತರಾಷ್ಟ್ರೀಯ ಕಿವುಡರ ವಾರದ ಅಂಗವಾಗಿ ಆಚರಿಸಲಾಯಿತು.
  4. 1953ರ ಈ ದಿನದಂದು ವಿಶ್ವ ಕಿವುಡರ ಒಕ್ಕೂಟ (World Federation of the Deaf) ವನ್ನು ರಚಿಸಲಾಗಿರುವುದರಿಂದ 23 ಸೆಪ್ಟೆಂಬರ್ ಅನ್ನು ಅಂತರಾಷ್ಟ್ರೀಯ ಸಂಜ್ಞಾ ಭಾಷಾ ದಿನವನ್ನು ಆಚರಿಸಲು ಆಯ್ಕೆ ಮಾಡಲಾಗಿದೆ.
  5. ವಿಕಲಾಂಗ ವ್ಯಕ್ತಿಗಳ ಹಕ್ಕುಗಳ ಸಮಾವೇಶದ ಮೂಲಕ (Convention on the Rights of Persons with Disabilities – CRPD),‘ಸಂಜ್ಞಾ ಭಾಷೆಗಳ’ ಬಳಕೆಯನ್ನು ಗುರುತಿಸಲಾಗಿದೆ ಮತ್ತು ಅದರ ಬಳಕೆಯನ್ನು ಉತ್ತೇಜಿಸಲಾಗುತ್ತದೆ.ಅಂದರೆ, ಸಮಾವೇಶದ ಅಡಿಯಲ್ಲಿ, ಸಂಜ್ಞೆ ಭಾಷೆಗೆ ಮಾತನಾಡುವ ಭಾಷೆಯಂತೆಯೇ ಸ್ಥಾನಮಾನವನ್ನು ನೀಡಲಾಗುತ್ತದೆ ಮತ್ತು ಸದಸ್ಯ ರಾಷ್ಟ್ರಗಳು ಸಂಕೇತ ಭಾಷೆಯ ಕಲಿಕೆಯನ್ನು ಸುಲಭಗೊಳಿಸಲು ಮತ್ತು ಕಿವುಡ ಸಮುದಾಯದ ಭಾಷಾ ಗುರುತನ್ನು ಉತ್ತೇಜಿಸಲು ನಿರ್ಬಂಧವನ್ನು ಹೊಂದಿರುತ್ತವೆ.

current affairs

ವಿಷ್ಣೋನಿಕ್ಸ್:

(Vishnu onyx)

  1. ಟುಬಿಂಗನ್ ಮತ್ತು ಜರಗೋಜಾ ವಿಶ್ವವಿದ್ಯಾನಿಲಯಗಳ ಸಂಶೋಧಕರು ಇಲ್ಲಿಯವರೆಗೆ ಅಜ್ಞಾತ ಜಾತಿಯ ಪಳೆಯುಳಿಕೆಯನ್ನು ಕಂಡುಹಿಡಿದಿದ್ದಾರೆ, ಇದನ್ನು ಅವರು ‘ವಿಷ್ಣೋನಿಕ್ಸ್ ನೆಪ್ತುನಿ’ (Vishnuonyx Neptuni) ಎಂದು ಹೆಸರಿಸಿದ್ದಾರೆ, ಅಂದರೆ ‘ನೆಪ್ಚೂನ್ ನ ವಿಷ್ಣು’ ಎಂದರ್ಥ.
  2. 5 ದಶಲಕ್ಷದಿಂದ 14 ದಶಲಕ್ಷ ವರ್ಷಗಳ ಹಿಂದೆ, ವಿಷ್ಣೋನಿಕ್ಸ್ ಓಟರ್ಸ್ (Otters) ಕುಲದ ಸದಸ್ಯರಾಗಿದ್ದವು ಮತ್ತು ಇವು ದಕ್ಷಿಣ ಏಷ್ಯಾದ ಪ್ರಮುಖ ನದಿಗಳಲ್ಲಿ ಕಂಡುಬರುತ್ತಿದ್ದವು.
  3. ಈಗ ಅಳಿವಿನಂಚಿನಲ್ಲಿರುವ ಈ ಒಟರ್ ಗಳ ಪಳೆಯುಳಿಕೆಗಳನ್ನು ಮೊದಲು ಹಿಮಾಲಯದ ತಪ್ಪಲಿನಲ್ಲಿ ಕಂಡುಬರುವ ಕೆಸರುಗಳಲ್ಲಿ ಕಂಡುಹಿಡಿಯಲಾಯಿತು. ಹೊಸದಾಗಿ ಪತ್ತೆಯಾದ ಈ ಪಳೆಯುಳಿಕೆ ಈ ಜಾತಿಯು ಜರ್ಮನಿಯವರೆಗೆ ಪ್ರಯಾಣಿಸಿದೆ ಎಂದು ಸೂಚಿಸುತ್ತದೆ.
  4. ಇದು ಯೂರೋಪಿನಲ್ಲಿ ವಿಷ್ಣೋನಿಕ್ಸ್ ಕುಲದ ಸದಸ್ಯರ ಮೊದಲ ಆವಿಷ್ಕಾರವಾಗಿದೆ.

current affairs

ಸಮುದ್ರ ಶಕ್ತಿ:

  1. ‘ಸಮುದ್ರ ಶಕ್ತಿ’ (Samudra Shakti) ಭಾರತ ಮತ್ತು ಇಂಡೋನೇಷ್ಯಾ ನೌಕಾಪಡೆಗಳ ನಡುವಿನ ದ್ವಿಪಕ್ಷೀಯ ಸಮರಾಭ್ಯಾಸ ವಾಗಿದೆ. ಈ ಸಮರಾಭ್ಯಾಸವನ್ನು 2018 ರಲ್ಲಿ ಕಲ್ಪಿಸಲಾಗಿತ್ತು.
  2. ಎರಡು ನೌಕಾಪಡೆಗಳ ನಡುವಿನ ಕಡಲ ಕಾರ್ಯಾಚರಣೆಗಳಲ್ಲಿ ಪರಸ್ಪರ ತಿಳುವಳಿಕೆ ಮತ್ತು ಪರಸ್ಪರ ಕಾರ್ಯಸಾಧ್ಯತೆಯನ್ನು ಹೆಚ್ಚಿಸುವುದು ಮತ್ತು ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸುವುದು ಸಮರಾಭ್ಯಾಸದ ಗುರಿಯಾಗಿದೆ.

ಹೈಬೊಡಾಂಟ್ ಶಾರ್ಕ್:

(Hybodont Shark)

  1. ಭಾರತೀಯ ಭೂವೈಜ್ಞಾನಿಕ ಸಮೀಕ್ಷೆಯ (GSI) ಪಶ್ಚಿಮ ಪ್ರದೇಶವಾದ ಜೈಪುರದ ಅಧಿಕಾರಿಗಳ ತಂಡದಿಂದ ಅಪರೂಪದ ಆವಿಷ್ಕಾರವನ್ನು ಮಾಡಲಾಗಿದೆ.
  2. ಮೊದಲ ಬಾರಿಗೆ, ತಂಡವು ಜೈಸಲ್ಮೇರ್ ನಿಂದ ಜುರಾಸಿಕ್ ಯುಗದ ಹೊಸ ಜಾತಿಯ ಹೈಬೊಡಾಂಟ್ ಶಾರ್ಕ್ ನ ಹಲ್ಲುಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಂಡಿದೆ.
  3. ಹೈಬೊಡಾಂಟ್ಸ್, ಅಳಿವಿನಂಚಿನಲ್ಲಿರುವ ಶಾರ್ಕ್ ಗುಂಪು, ಟ್ರಯಾಸಿಕ್ ಮತ್ತು ಆರಂಭಿಕ ಜುರಾಸಿಕ್ ಯುಗಗಳಲ್ಲಿ ಸಾಗರ ಮತ್ತು ನದಿ ತೀರದ ಪರಿಸರದಲ್ಲಿ ಕಂಡುಬರುವ ಮೀನುಗಳ ಒಂದು ಪ್ರಮುಖ ಗುಂಪು.
  4. 65 ದಶಲಕ್ಷ ವರ್ಷಗಳ ಹಿಂದೆ ಕ್ರಿಟೇಶಿಯಸ್ ಯುಗದ ಅಂತ್ಯದ ವೇಳೆಗೆ ಹೈಬೊಡಾಂಟ್ಸ್ ಗಳು ನಿರ್ನಾಮಗೊಂಡಿವೆ.

current affairs


Join our Official Telegram Channel HERE for Motivation and Fast Updates

Subscribe to our YouTube Channel HERE to watch Motivational and New analysis videos

[ad_2]

Leave a Comment