[ad_1]
ಪರಿವಿಡಿ:
ಸಾಮಾನ್ಯ ಅಧ್ಯಯನ ಪತ್ರಿಕೆ 2:
1. ಒಬಿಸಿ ಗುಂಪುಗಳನ್ನು ಸೂಚಿಸಲು ರಾಜ್ಯಗಳ ಹಕ್ಕುಗಳನ್ನು ಮರುಸ್ಥಾಪಿಸುವ ಮಸೂದೆ.
2. ಜನಗಣತಿ ಎಂದರೇನು?
3. ಮಧ್ಯಾಹ್ನದ ಬಿಸಿಯೂಟದ ಯೋಜನೆ.
4. ಉಜ್ವಲ 2.0 ಯೋಜನೆ.
5. ಹಾಂಗ್ ಕಾಂಗ್ ನ ಆಡಳಿತವನ್ನು ಹೇಗೆ ನಿರ್ವಹಿಸಲಾಗುತ್ತದೆ?
ಸಾಮಾನ್ಯ ಅಧ್ಯಯನ ಪತ್ರಿಕೆ 3:
1. ಕೃತಕ ಬುದ್ಧಿಮತ್ತೆ ವ್ಯವಸ್ಥೆಗೆ ಪೇಟೆಂಟ್ ನೀಡಿದ ದಕ್ಷಿಣ ಆಫ್ರಿಕಾ.
ಸಾಮಾನ್ಯ ಅಧ್ಯಯನ ಪತ್ರಿಕೆ : 2
ವಿಷಯಗಳು: ಸಂವಿಧಾನ- ಐತಿಹಾಸಿಕ ಆಧಾರಗಳು, ವಿಕಸನ, ವೈಶಿಷ್ಟ್ಯಗಳು, ತಿದ್ದುಪಡಿಗಳು, ಮಹತ್ವದ ನಿಬಂಧನೆಗಳು ಮತ್ತು ಮೂಲ ರಚನೆ.
ಒಬಿಸಿ ಗುಂಪುಗಳನ್ನು ಸೂಚಿಸಲು ರಾಜ್ಯಗಳ ಹಕ್ಕುಗಳನ್ನು ಮರುಸ್ಥಾಪಿಸುವ ಮಸೂದೆ:
(Bill to Restore States’ rights to specify OBC groups)
ಸಂದರ್ಭ:
ಇತ್ತೀಚೆಗೆ, ‘ಸಂವಿಧಾನ 127 ನೇ ತಿದ್ದುಪಡಿ ಮಸೂದೆ, 2021’ (Constitution 127th Amendment Bill, 2021) ಅನ್ನು ಲೋಕಸಭೆಯಲ್ಲಿ ಸರ್ವಾನುಮತದಿಂದ ಅಂಗೀಕರಿಸಲಾಯಿತು.
ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ತಮ್ಮದೇ ಆದ ‘ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳ’ ಪಟ್ಟಿಗಳನ್ನು ತಯಾರಿಸಲು ಅವಕಾಶ ನೀಡುವಂತೆ ಸಂವಿಧಾನಕ್ಕೆ ತಿದ್ದುಪಡಿ ತರಲು ಮಸೂದೆಯು ಪ್ರಸ್ತಾಪಿಸುತ್ತದೆ.
ಅವಶ್ಯಕತೆ:
ಮೇ 5 ರಂದು, ಮಹಾರಾಷ್ಟ್ರದಲ್ಲಿ ಮರಾಠ ಸಮುದಾಯಕ್ಕೆ ಪ್ರತ್ಯೇಕ ಮೀಸಲಾತಿಯನ್ನು ರದ್ದುಗೊಳಿಸಿ, ಸುಪ್ರೀಂ ಕೋರ್ಟ್ ತೀರ್ಪು ನೀಡಿತು,.2018 ರ ಸಾಂವಿಧಾನಿಕ ತಿದ್ದುಪಡಿ (102 ನೇ ಸಾಂವಿಧಾನಿಕ ತಿದ್ದುಪಡಿ) ನಂತರ, ಕೇಂದ್ರ ಸರ್ಕಾರ ಮಾತ್ರ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳನ್ನು (ಎಸ್‌ಇಬಿಸಿ) ಅಧಿಸೂಚಿಸಬಹುದು ಆದರೆ ರಾಜ್ಯಗಳಿಗೆ ಈ ಅಧಿಕಾರವಿಲ್ಲ ಎಂದು ತೀರ್ಪು ನೀಡಿತ್ತು.
102 ನೇ ಸಂವಿಧಾನದ ತಿದ್ದುಪಡಿಯ ಅಡಿಯಲ್ಲಿ, ಸಂವಿಧಾನದಲ್ಲಿ ಕಲಂ 338B ಮತ್ತು ಕಲಂ 342 ರ ನಂತರ 342A ಅನ್ನು ಸೇರಿಸಲಾಗಿದೆ. ಇದರೊಂದಿಗೆ, ಈ ತಿದ್ದುಪಡಿಯಿಂದ ಸಂವಿಧಾನಾತ್ಮಕ ಸ್ಥಾನಮಾನವನ್ನು ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗಕ್ಕೆ (National Commission of Backward Classes – NCBC) ನೀಡಲಾಗಿದೆ.
ಈ ಸಾಂವಿಧಾನಿಕ ತಿದ್ದುಪಡಿಯ ವ್ಯಾಖ್ಯಾನವು ಹಿಂದುಳಿದ ವರ್ಗಗಳನ್ನು ಗುರುತಿಸುವ ಮತ್ತು ಅವರಿಗೆ ಮೀಸಲಾತಿಯ ಪ್ರಯೋಜನಗಳನ್ನು ಒದಗಿಸುವ ರಾಜ್ಯಗಳ ಹಕ್ಕನ್ನು ಪರಿಣಾಮಕಾರಿಯಾಗಿ ಕಸಿದುಕೊಳ್ಳುತ್ತದೆ.
127 ನೇ ಸಂವಿಧಾನ ತಿದ್ದುಪಡಿ ವಿಧೇಯಕದ ಪ್ರಮುಖ ಅಂಶಗಳು:
- ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ಇತರ ಹಿಂದುಳಿದ ವರ್ಗಗಳನ್ನು ಗುರುತಿಸಲು ರಾಜ್ಯ ಸರ್ಕಾರಗಳ ಅಧಿಕಾರವನ್ನು ಪುನಃಸ್ಥಾಪಿಸಲು ಮಸೂದೆ ಪ್ರಯತ್ನಿಸುತ್ತದೆ. ಮೇ 2021 ರಲ್ಲಿ ಸುಪ್ರೀಂ ಕೋರ್ಟ್ ನೀಡಿದ ಆದೇಶದಲ್ಲಿ, ಅಂತಹ ಅಧಿಕಾರವನ್ನು ಕೇಂದ್ರ ಸರ್ಕಾರಕ್ಕೆ ಮಾತ್ರ ನೀಡಲಾಯಿತು.
- ಈ ವಿಧೇಯಕದಿಂದ ಈ ನಿಬಂಧನೆಯನ್ನು ತಿದ್ದುಪಡಿ ಮಾಡಲಾಗಿದೆ ಮತ್ತು ಕೇಂದ್ರ ಸರ್ಕಾರದ ಉದ್ದೇಶಗಳಿಗಾಗಿ ಮಾತ್ರ ರಾಷ್ಟ್ರಪತಿಗಳು ‘ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳ’ ಪಟ್ಟಿಯನ್ನು ಅಧಿಸೂಚಿಸಬಹುದು ಎಂದು ಹೇಳುತ್ತದೆ.
- ಕೇಂದ್ರ ಸರ್ಕಾರವು ‘ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳ’ ಕೇಂದ್ರ ಪಟ್ಟಿಯನ್ನು ತಯಾರಿಸಿ ನಿರ್ವಹಿಸುತ್ತದೆ.
- ಇದರ ಜೊತೆಯಲ್ಲಿ, ಈ ಮಸೂದೆಯು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳ ತಮ್ಮದೇ ಪಟ್ಟಿಯನ್ನು ರಚನೆ ಮಾಡಲು ಅಧಿಕಾರ ನೀಡುತ್ತದೆ.
- ಈ ಪಟ್ಟಿಯನ್ನು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಕಾನೂನಿನ ಅಡಿಯಲ್ಲಿ ಮಾಡುತ್ತವೆ ಮತ್ತು ಇದು ಕೇಂದ್ರ ಪಟ್ಟಿಯಿಂದ ಭಿನ್ನವಾಗಿರಬಹುದು.
ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳ ಪಟ್ಟಿ:
‘ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗ’ (NCBC) ವನ್ನು ‘ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗ’ 1993 ರ ಅಡಿಯಲ್ಲಿ ಸ್ಥಾಪಿಸಲಾಯಿತು.
ಸಂವಿಧಾನ 102 ನೇ ತಿದ್ದುಪಡಿ ಕಾಯ್ದೆ, 2018 ರ ಮೂಲಕ NCBCಗೆ ಸಾಂವಿಧಾನಿಕ ಸ್ಥಾನಮಾನ ನೀಡಲಾಗಿದೆ ಮತ್ತು ಎಲ್ಲಾ ಉದ್ದೇಶಗಳಿಗಾಗಿ ಒಂದು ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶಕ್ಕೆ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳ ಪಟ್ಟಿಯನ್ನು ಅಧಿಸೂಚಿಸಲು ‘ಅಧ್ಯಕ್ಷ’ರಿಗೆ ಅಧಿಕಾರ ನೀಡಲಾಗಿದೆ.
2021 ರ ಮಸೂದೆಯು ಅದನ್ನು ತಿದ್ದುಪಡಿ ಮಾಡುತ್ತದೆ, ರಾಷ್ಟ್ರಪತಿಗಳು ಕೇಂದ್ರ ಸರ್ಕಾರದ ಉದ್ದೇಶಕ್ಕಾಗಿ ಮಾತ್ರ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳ ಪಟ್ಟಿಯನ್ನು ಅಧಿಸೂಚಿಸಬಹುದು.
NCBC ಯೊಂದಿಗೆ ಸಮಾಲೋಚನೆ:
ಸಂವಿಧಾನದ ಅನುಚ್ಛೇದ 338B ಯು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಸಾಮಾಜಿಕ ಮತ್ತು ಶೈಕ್ಷಣಿಕ ಹಿಂದುಳಿದ ವರ್ಗಗಳ ಮೇಲೆ ಪರಿಣಾಮ ಬೀರುವ ಎಲ್ಲಾ ಪ್ರಮುಖ ನೀತಿ ವಿಷಯಗಳ ಕುರಿತು ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗವನ್ನು ಸಂಪರ್ಕಿಸುವಂತೆ ಆದೇಶಿಸುತ್ತದೆ.
ಹೊಸ ಮಸೂದೆಯ ಪರಿಣಾಮಗಳು:
127 ನೇ ಸಂವಿಧಾನ ತಿದ್ದುಪಡಿ ವಿಧೇಯಕ ಅಂಗೀಕರಿಸಿದ ನಂತರ, ದೇಶದ 671 ಜಾತಿಗಳು ಇದರ ಲಾಭ ಪಡೆಯುತ್ತವೆ ಮತ್ತು ತಮ್ಮದೇ ಆದ ‘ಇತರೆ ಹಿಂದುಳಿದ ವರ್ಗಗಳ’ ಪಟ್ಟಿಯನ್ನು ತಯಾರು ಮಾಡುವ ರಾಜ್ಯಗಳ ಹಕ್ಕುಗಳನ್ನು ಪುನಃಸ್ಥಾಪಿಸಲಾಗುತ್ತದೆ.
ವಿಷಯಗಳು: ಜನಸಂಖ್ಯೆ ಮತ್ತು ಅದಕ್ಕೆ ಸಂಬಂಧಿಸಿದ ಸಮಸ್ಯೆಗಳು.
ಜನಗಣತಿ ಎಂದರೇನು?
(What is Census?)
COVID-19 ಸಾಂಕ್ರಾಮಿಕ ರೋಗಗಳ ನಿರಂತರ ಪ್ರಸರಣದಿಂದಾಗಿ, ಮುಂದಾಲೋಚನೆಯೊಂದಿಗೆ 2021 ರ ಜನಗಣತಿ ಮತ್ತು ಜನಗಣತಿಗೆ ಸಂಬಂಧಿಸಿದ ಇತರ ಚಟುವಟಿಕೆಗಳನ್ನು ಮುಂದೂಡಲಾಗಿದೆ.
ಹಿನ್ನೆಲೆ:
2020 ಏಪ್ರಿಲ್ ನಿಂದ ಸೆಪ್ಟೆಂಬರ್ ವರೆಗೆ ಮನೆಗಳ ಪಟ್ಟಿ ತಯಾರಿಸುವುದು ಮತ್ತು ವಸತಿ ಗಣತಿ ಮತ್ತು 2021 ರ ಫೆಬ್ರವರಿ 9 ರಿಂದ ಫೆಬ್ರವರಿ 28 ರವರೆಗೆ, ಜನಸಂಖ್ಯೆ ಎಣಿಕೆ ಅಥವಾ ಜನಗಣತಿ, ಹೀಗೆ ಈ ಜನಗಣತಿ ಪ್ರಕ್ರಿಯೆಯನ್ನು ಎರಡು ಹಂತಗಳಲ್ಲಿ ನಡೆಸಬೇಕಾಗಿತ್ತು.
ಆರಂಭಿಕವಾಗಿ ಜನಗಣತಿಯ ಮೊದಲ ಹಂತ ಮತ್ತು ರಾಷ್ಟ್ರೀಯ ಜನಸಂಖ್ಯಾ ನೋಂದಣಿ (NPR) ನವೀಕರಣವನ್ನು 2020 ರ ಏಪ್ರಿಲ್ 1 ರಿಂದ ಕೆಲವು ರಾಜ್ಯಗಳಲ್ಲಿ ಪ್ರಾರಂಭಿಸಲಾಯಿತು, ಆದರೆ ಕೋವಿಡ್-19 ಸಾಂಕ್ರಾಮಿಕ ರೋಗದ ಕಾರಣದಿಂದಾಗಿ ಮುಂದೂಡಲಾಯಿತು.
ಜನಗಣತಿ:
ಜನಗಣತಿಯು ದೇಶದ ಜನಸಂಖ್ಯೆಯ ಗಾತ್ರ, ಜನಸಂಖ್ಯೆಯ ಹಂಚಿಕೆ ಮತ್ತು ಅದರ ಸಾಮಾಜಿಕ-ಆರ್ಥಿಕ ಸ್ಥಿತಿಗಿಗಳನ್ನು, ಜನಸಂಖ್ಯಾ ವೈವಿಧ್ಯತೆ ಮತ್ತು ಇತರ ಗುಣಲಕ್ಷಣಗಳ ಬಗ್ಗೆ ಮಾಹಿತಿಯನ್ನು ಒದಗಿಸುತ್ತದೆ.
- ಜನಗಣತಿಯನ್ನು ಮೊದಲು 1872 ರಲ್ಲಿ, ಬ್ರಿಟಿಷ್ ವೈಸರಾಯನಾದ ಲಾರ್ಡ್ ಮೇಯೋ ಅವರ ಅಧಿಕಾರ ಅವಧಿಯಲ್ಲಿ ಪ್ರಾರಂಭಿಸಲಾಯಿತು.ಇದು ಜನ ಸಮುದಾಯದಲ್ಲಿ, ಸಮಾಜವನ್ನು ಉನ್ನತೀಕರಿಸಲು ಹೊಸ ನೀತಿಗಳನ್ನು, ಸರ್ಕಾರಿ ಕಾರ್ಯಕ್ರಮಗಳನ್ನು ರೂಪಿಸಲು ಸಹಾಯ ಮಾಡಿತು.
- ಭಾರತದಲ್ಲಿ ಮೊದಲ ಪೂರ್ಣಪ್ರಮಾಣದ ಜನಗಣತಿಯನ್ನು 1881 ರಲ್ಲಿ ನಡೆಸಲಾಯಿತು. ಅಂದಿನಿಂದ, ಪ್ರತಿ ಹತ್ತು ವರ್ಷಗಳಿಗೊಮ್ಮೆ ಜನಗಣತಿ ಕಾರ್ಯಕ್ರಮವನ್ನು ತಡೆರಹಿತವಾಗಿ ಹಮ್ಮಿಕೊಳ್ಳಲಾಗುತ್ತಿದೆ.
ಭಾರತದಲ್ಲಿ ಜನಗಣತಿಯನ್ನು ಯಾರು ನಡೆಸುತ್ತಾರೆ?
ಭಾರತದಲ್ಲಿ, ದಶಕದ ಜನಗಣತಿಯನ್ನು ನಡೆಸುವ ಜವಾಬ್ದಾರಿಯನ್ನು ಭಾರತ ಸರ್ಕಾರದ ಗೃಹ ವ್ಯವಹಾರಗಳ ಸಚಿವಾಲಯದ ಅಧೀನದಲ್ಲಿರುವ ರಿಜಿಸ್ಟ್ರಾರ್ ಜನರಲ್ ಮತ್ತು ಜನಗಣತಿ ಆಯುಕ್ತರ ಕಚೇರಿಗೆ (Office of the Registrar General and Census Commissioner) ವಹಿಸಲಾಗಿದೆ.
ಜನಗಣತಿಯು ಈ ಕೆಳಗಿನ ವಿಷಯಗಳ ಮಾಹಿತಿಯ ಅತ್ಯಂತ ವಿಶ್ವಾಸಾರ್ಹ ಮೂಲಗಳಲ್ಲಿ ಒಂದಾಗಿದೆ:
- ಜನಸಂಖ್ಯಾಶಾಸ್ತ್ರ.
- ಆರ್ಥಿಕ ಚಟುವಟಿಕೆಗಳು.
- ಸಾಕ್ಷರತೆ ಮತ್ತು ಶಿಕ್ಷಣ.
- ವಸತಿ ಮತ್ತು ಗೃಹ ಸೌಲಭ್ಯಗಳು.
- ನಗರೀಕರಣ, ಫಲವತ್ತತೆ ಮತ್ತು ಮರಣ.
- ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ.
- ಭಾಷೆ.
ಐತಿಹಾಸಿಕ ಮಹತ್ವ:
- ಕ್ರಿ.ಪೂ 800–600ರ ಅವಧಿಯಲ್ಲಿ ಭಾರತದಲ್ಲಿ ಕೆಲವು ರೀತಿಯ ಜನಸಂಖ್ಯಾ ಲೆಕ್ಕಾಚಾರವನ್ನು ಮಾಡಲಾಯಿತು ಎಂದು ‘ಋಗ್ವೇದ’ ವು ತಿಳಿಸುತ್ತದೆ.
- ತೆರಿಗೆ ಸಂಗ್ರಹಿಸಲು ರಾಜ್ಯ-ನೀತಿಯ ಅಳತೆಯಾಗಿ ಜನಸಂಖ್ಯಾ ದತ್ತಾಂಶ ಸಂಗ್ರಹವನ್ನು ಕ್ರಿ.ಪೂ 3 ನೇ ಶತಮಾನದಲ್ಲಿ ಕೌಟಿಲ್ಯ ಬರೆದಿರುವ ಅರ್ಥಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ.
- ಮೊಘಲ್ ಚಕ್ರವರ್ತಿ ಅಕ್ಬರ್ ಆಳ್ವಿಕೆಯ ಸಮಯದಲ್ಲಿ ಬರೆದ ‘ಐನ್-ಇ-ಅಕ್ಬರಿ’, ಯು, ಜನಸಂಖ್ಯೆ, ಕೈಗಾರಿಕೆ, ಸಂಪತ್ತು ಮತ್ತು ಇತರ ಹಲವು ಗುಣಲಕ್ಷಣಗಳಿಗೆ ಸಂಬಂಧಿಸಿದ ವಿವರವಾದ ಅಂಕಿ ಅಂಶಗಳನ್ನು ಒಳಗೊಂಡಿದೆ.
ವಿಷಯಗಳು: ಸರ್ಕಾರದ ನೀತಿಗಳು ಮತ್ತು ವಿವಿಧ ಕ್ಷೇತ್ರಗಳಲ್ಲಿನ ಅಭಿವೃದ್ಧಿಯ ಅಡಚಣೆಗಳು ಮತ್ತು ಅವುಗಳ ವಿನ್ಯಾಸ ಮತ್ತು ಅನುಷ್ಠಾನದಿಂದ ಉಂಟಾಗುವ ಸಮಸ್ಯೆಗಳು.
ಮಧ್ಯಾಹ್ನದ ಬಿಸಿಯೂಟ ಯೋಜನೆ:
(What is midday meal scheme?)
ಸಂದರ್ಭ:
ಇತ್ತೀಚೆಗೆ, ‘ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ’ ವು, ‘ಆಹಾರ ಮತ್ತು ಪೋಷಣೆಯ ಹಕ್ಕು’ ಖಚಿತಪಡಿಸಿಕೊಳ್ಳಲು ವಿವಿಧ ನೀತಿಗಳ ಸ್ಥಿತಿಯನ್ನು ಚರ್ಚಿಸಲು ‘ರಾಷ್ಟ್ರೀಯ ಮಟ್ಟದ ಸಭೆ’ ಆಯೋಜಿಸಿತ್ತು.
ಸಭೆಯ ಕೊನೆಯಲ್ಲಿ ತಜ್ಞರು ಈ ಕೆಳಗಿನ ಸಲಹೆಗಳನ್ನು ನೀಡಿದರು:
- ಮಧ್ಯಾಹ್ನದ ಬಿಸಿಯೂಟದ ಯೋಜನೆಯನ್ನು XII ತರಗತಿಯವರೆಗೆ ವಿಸ್ತರಿಸಬೇಕು.
- ‘ನಗರ ಉದ್ಯೋಗ ಖಾತ್ರಿ ಯೋಜನೆ’ ಆರಂಭಿಸಬೇಕು.
- ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು (PDS) ಆರಂಭಿಸಬೇಕು, ಇದು ಸಂಪೂರ್ಣವಾಗಿ ‘ಆಧಾರ್’ಗೆ ಲಿಂಕ್ ಆಗಿರದಂತಹ ವ್ಯವಸ್ಥೆ ಯಾಗಿರಬೇಕು.
ಮಧ್ಯಾಹ್ನದ ಬಿಸಿಯೂಟ ಯೋಜನೆಯ ಕುರಿತು:
ಈ ಯೋಜನೆಯು ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿನ ಮತ್ತು ಮದರಸಾಗಳಲ್ಲಿನ ಎಲ್ಲಾ ಮಕ್ಕಳಿಗೆ ಒಂದು ಬಾರಿಯ ಊಟವನ್ನು ಸಮಗ್ರ ಶಿಕ್ಷಣ ಯೋಜನೆಯಡಿಯಲ್ಲಿ,ಖಾತರಿಪಡಿಸುತ್ತದೆ.
- ಈ ಯೋಜನೆಯಡಿಯಲ್ಲಿ ಎಂಟನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ವರ್ಷದಲ್ಲಿ ಕನಿಷ್ಠ 200 ದಿನಗಳ ವರೆಗೆಯಾದರೂ ಒಂದು ಪೌಷ್ಠಿಕಾಂಶದ ಬೇಯಿಸಿದ ಊಟವನ್ನು ಖಾತರಿಪಡಿಸಲಾಗುತ್ತದೆ.
- ಈ ಯೋಜನೆಯು ಮಾನವ ಸಂಪನ್ಮೂಲ ಸಚಿವಾಲ (ಶಿಕ್ಷಣ ಸಚಿವಾಲಯ)ಯದ ವ್ಯಾಪ್ತಿಗೆ ಬರುತ್ತದೆ.
- ಇದನ್ನು ಕೇಂದ್ರ ಸರ್ಕಾರದ ಪ್ರಯೋಜಿತ ರಾಷ್ಟ್ರೀಯ ಶಿಕ್ಷಣ ಕಾರ್ಯಕ್ರಮವಾದ ಪ್ರಾಥಮಿಕ ಶಿಕ್ಷಣಕ್ಕೆ ಪೌಷ್ಟಿಕಾಂಶದ ಬೆಂಬಲಕ್ಕಾಗಿ ರಾಷ್ಟ್ರೀಯ ಕಾರ್ಯಕ್ರಮ (National Programme of Nutritional Support to Primary Education (NP – NSPE) ಎಂಬ ಹೆಸರಿನಲ್ಲಿ 1995 ರಲ್ಲಿ ಪ್ರಾರಂಭಿಸಲಾಯಿತು. 2004 ರಲ್ಲಿ, ಈ ಯೋಜನೆಯನ್ನು ಮಧ್ಯಾಹ್ನದ ಬಿಸಿಯೂಟ ಯೋಜನೆ ಎಂದು ಪುನರಾರಂಭಿಸಲಾಯಿತು.
- ಈ ಯೋಜನೆಯನ್ನು ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ, 2013 ರ ವ್ಯಾಪ್ತಿಗೆ ಒಳಪಡಿಸಲಾಗಿದೆ.
ಉದ್ದೇಶಗಳು:
ಹಸಿವು ಮತ್ತು ಅಪೌಷ್ಟಿಕತೆಯನ್ನು ಪರಿಹರಿಸಿ, ಶಾಲೆಯಲ್ಲಿ ದಾಖಲಾತಿ ಮತ್ತು ಹಾಜರಾತಿಯನ್ನು ಹೆಚ್ಚಿಸಿ,ವಿವಿಧ ಜಾತಿಗಳ ನಡುವೆ ಸಾಮಾಜಿಕೀಕರಣವನ್ನು ಸುಧಾರಿಸಿ, ತಳಮಟ್ಟದಲ್ಲಿ ಉದ್ಯೋಗವನ್ನು ಒದಗಿಸುವುದು, ವಿಶೇಷವಾಗಿ ಮಹಿಳೆಯರಿಗೆ ಒದಗಿಸುವುದು.
ಮಧ್ಯಾಹ್ನದ ಬಿಸಿಯೂಟ ಯೋಜನೆ (MDM) ನಿಯಮಗಳು 2015 ರ ಪ್ರಕಾರ:
- ಮಕ್ಕಳಿಗೆ ಶಾಲೆಯಲ್ಲಿ ಮಾತ್ರ ಊಟ ಬಡಿಸಲಾಗುವುದು.
- ಆಹಾರ ಧಾನ್ಯಗಳು ಲಭ್ಯವಿಲ್ಲದ ಕಾರಣ ಅಥವಾ ಬೇರೆ ಯಾವುದೇ ಕಾರಣಗಳಿಂದಾಗಿ ಯಾವುದೇ ಶಾಲಾ ದಿನದಂದು ಮಧ್ಯಾಹ್ನದ ಊಟವನ್ನು ಶಾಲೆಯಲ್ಲಿ ಒದಗಿಸದಿದ್ದರೆ, ಮುಂದಿನ ತಿಂಗಳು 15 ರೊಳಗೆ ರಾಜ್ಯ ಸರ್ಕಾರವು ಆಹಾರ ಭದ್ರತಾ ಭತ್ಯೆಯನ್ನು ಪಾವತಿಸಬೇಕು.
- ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ 2009 ರ ಅಡಿಯಲ್ಲಿ ಕಡ್ಡಾಯವಾಗಿರುವ ಶಾಲಾ ನಿರ್ವಹಣಾ ಸಮಿತಿಯು ಸಹ ಮಧ್ಯಾಹ್ನದ ಬಿಸಿಯೂಟ ಯೋಜನೆಯ ಅನುಷ್ಠಾನವನ್ನು ಮೇಲ್ವಿಚಾರಣೆ ಮಾಡುತ್ತದೆ.
ಪೌಷ್ಟಿಕಾಂಶದ ಮಾನದಂಡಗಳು:
- ಮಧ್ಯಾಹ್ನದ ಬಿಸಿಯೂಟ ಯೋಜನೆಯ ಮಾರ್ಗಸೂಚಿಗಳ ಪ್ರಕಾರ, ಕ್ಯಾಲೊರಿ ಸೇವನೆಯ ವಿಷಯದಲ್ಲಿ, ಕಿರು ಪ್ರಾಥಮಿಕ ಶಾಲೆಗಳಲ್ಲಿನ ಮಕ್ಕಳಿಗೆ MDM ಮೂಲಕ ದಿನಕ್ಕೆ ಕನಿಷ್ಠ 450 ಕ್ಯಾಲೊರಿಗಳನ್ನು 12 ಗ್ರಾಂ ಪ್ರೋಟೀನ್‌ನೊಂದಿಗೆ ಒದಗಿಸಬೇಕು ಮತ್ತು ಹಿರಿಯ ಪ್ರಾಥಮಿಕ ಶಾಲೆಗಳಲ್ಲಿನ ಮಕ್ಕಳು 20 ಗ್ರಾಂ ಪ್ರೋಟೀನ್‌ನೊಂದಿಗೆ 700 ಕ್ಯಾಲೊರಿಗಳನ್ನು ಒದಗಿಸಬೇಕು.
- ಪ್ರಾಥಮಿಕ ತರಗತಿಗಳ ಮಕ್ಕಳ ಪ್ರತಿ ಊಟದಲ್ಲಿ, ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ನಿಗದಿಪಡಿಸಿದಂತೆ 100 ಗ್ರಾಂ ಆಹಾರ ಧಾನ್ಯಗಳು, 20 ಗ್ರಾಂ ದ್ವಿದಳ ಧಾನ್ಯಗಳು, 50 ಗ್ರಾಂ ತರಕಾರಿಗಳು ಮತ್ತು 5 ಗ್ರಾಂ ತೈಲಗಳು ಮತ್ತು ಕೊಬ್ಬುಗಳನ್ನು ಒಳಗೊಂಡಿರಬೇಕು. ಹಿರಿಯ-ಪ್ರಾಥಮಿಕ ಶಾಲೆಗಳ ಮಕ್ಕಳ ಊಟದಲ್ಲಿ ಕಡ್ಡಾಯವಾಗಿ 150 ಗ್ರಾಂ ಆಹಾರ ಧಾನ್ಯಗಳು, 30 ಗ್ರಾಂ ದ್ವಿದಳ ಧಾನ್ಯಗಳು, 75 ಗ್ರಾಂ ತರಕಾರಿಗಳು ಮತ್ತು 7.5 ಗ್ರಾಂ ತೈಲಗಳು ಮತ್ತು ಕೊಬ್ಬುಗಳಿರಬೇಕು.
ವಿಷಯಗಳು: ಕೇಂದ್ರ ಮತ್ತು ರಾಜ್ಯಗಳಿಂದ ದುರ್ಬಲ ವರ್ಗದ ಜನಸಮುದಾಯದವರಿಗೆ ಇರುವ ಕಲ್ಯಾಣ ಯೋಜನೆಗಳು ಮತ್ತು ಈ ಯೋಜನೆಗಳ ಕಾರ್ಯಕ್ಷಮತೆ; ಕಾರ್ಯವಿಧಾನಗಳು,ಕಾನೂನುಗಳು, ಸಂಸ್ಥೆಗಳು ಮತ್ತು ಈ ದುರ್ಬಲ ವಿಭಾಗಗಳ ರಕ್ಷಣೆ ಮತ್ತು ಸುಧಾರಣೆಗಾಗಿ ರಚಿಸಲಾದ ಸಂಸ್ಥೆಗಳು.
ಉಜ್ವಲ 2.0 ಯೋಜನೆ:
(Ujjwala 2.0 scheme)
ಸಂದರ್ಭ:
ಇತ್ತೀಚೆಗೆ, ಕೇಂದ್ರ ಸರ್ಕಾರವು ಬಡವರಿಗಾಗಿ ‘ಉಜ್ವಲ ಅನಿಲ ಸಂಪರ್ಕ ಯೋಜನೆ’ಯ ಎರಡನೇ ಹಂತವನ್ನು ಆರಂಭಿಸಿದೆ.
ಪ್ರಧಾನ ಮಂತ್ರಿ ಉಜ್ವಲ ಯೋಜನೆ (PMUY) ಕುರಿತು:
(Pradhan Mantri Ujjwala Yojana)
ಮೇ 2016 ರಲ್ಲಿ ಪ್ರಾರಂಭಿಸಲಾಯಿತು.
- ಉದ್ದೇಶ: BPL ಕುಟುಂಬಗಳಿಗೆ LPG (ದ್ರವೀಕೃತ ಪೆಟ್ರೋಲಿಯಂ ಗ್ಯಾಸ್) ಸಂಪರ್ಕಗಳನ್ನು ಒದಗಿಸುವುದು.
- ಪ್ರಮುಖ ಲಕ್ಷಣಗಳು: ಪ್ರತಿ ಕುಟುಂಬಕ್ಕೆ ರೂ .1600 ಆರ್ಥಿಕ ಸಹಾಯದೊಂದಿಗೆ ಅರ್ಹ ಕುಟುಂಬಕ್ಕೆ ಕೇಂದ್ರದಿಂದ ಠೇವಣಿ ರಹಿತ LPG ಸಂಪರ್ಕವನ್ನು ಒದಗಿಸಲಾಗುತ್ತದೆ.
- ಗುರಿ: ಮೊದಲು 50 ಮಿಲಿಯನ್ ಕುಟುಂಬಗಳನ್ನು ಈ ಯೋಜನೆಯಡಿ ಒಳಪಡಿಸಲಾಯಿತು, ನಂತರ ಇದನ್ನು 80 ಮಿಲಿಯನ್ ಬಡ ಕುಟುಂಬಗಳನ್ನು ಯೋಜನೆಯಡಿ ತರಲು ವಿಸ್ತರಿಸಲಾಯಿತು ಮತ್ತು ಇದಕ್ಕಾಗಿ ಹೆಚ್ಚುವರಿ ರೂ .4,800 ಕೋಟಿಯನ್ನು ಸಹ ಹಂಚಿಕೆ ಮಾಡಲಾಗಿದೆ.
ಯೋಜನೆಯ ಉದ್ದೇಶಗಳು:
ಮಹಿಳೆಯರನ್ನು ಸಬಲೀಕರಣಗೊಳಿಸುವುದು ಮತ್ತು ಅವರ ಆರೋಗ್ಯವನ್ನು ರಕ್ಷಿಸುವುದು.
ಪಳೆಯುಳಿಕೆ ಇಂಧನ ಆಧಾರಿತ ಅಡುಗೆಗೆ ಸಂಬಂಧಿಸಿದ ಗಂಭೀರ ಆರೋಗ್ಯ ಅಪಾಯಗಳನ್ನು ಕಡಿಮೆ ಮಾಡುವುದು.
ಸಂಸ್ಕರಿಸಿದ ಇಂಧನವನ್ನು ಒದಗಿಸುವ ಮೂಲಕ ಅಡುಗೆಗೆ ಸಂಬಂಧಿಸಿದ ಭಾರತದಲ್ಲಿ ಸಾವಿನ ಸಂಖ್ಯೆಯನ್ನು ಕಡಿಮೆ ಮಾಡಲು.
ಪಳೆಯುಳಿಕೆ ಇಂಧನ ದಹನದಿಂದ ಒಳಾಂಗಣ ವಾಯು ಮಾಲಿನ್ಯದಿಂದ ಉಂಟಾಗುವ ಗಂಭೀರ ಉಸಿರಾಟದ ಕಾಯಿಲೆಗಳಿಂದ, ಚಿಕ್ಕ ಮಕ್ಕಳನ್ನು ರಕ್ಷಿಸುವುದು.
ಅರ್ಹತಾ ಮಾನದಂಡ:
- ಯೋಜನೆಯ ಅಡಿಯಲ್ಲಿ ಪ್ರಯೋಜನಗಳನ್ನು ಪಡೆಯಲು, ಅರ್ಜಿದಾರರು 18 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆ ಮತ್ತು ಭಾರತದ ಪ್ರಜೆಯಾಗಿರಬೇಕು.
- ಅರ್ಜಿದಾರರು ಬಿಪಿಎಲ್ (ಬಡತನ ರೇಖೆಗಿಂತ ಕೆಳಗಿರುವ) ಕುಟುಂಬಕ್ಕೆ ಸೇರಿದವರಾಗಿರಬೇಕು.
- ಅರ್ಜಿದಾರರ ಮನೆಯಲ್ಲಿ ಯಾರೂ ಎಲ್‌ಪಿಜಿ ಸಂಪರ್ಕ ಹೊಂದಿರಬಾರದು.
- ಕುಟುಂಬದ ಮನೆಯ ಆದಾಯವು ತಿಂಗಳಿಗೆ ಒಂದು ನಿರ್ದಿಷ್ಟ ಮಿತಿಯನ್ನು ಮೀರಬಾರದು, ಇದಕ್ಕಾಗಿ ಕೇಂದ್ರಾಡಳಿತ ಪ್ರದೇಶಗಳು ಮತ್ತು ರಾಜ್ಯ ಸರ್ಕಾರವು ಮಿತಿಯನ್ನು ನಿಗದಿಪಡಿಸುತ್ತದೆ.
- ಅರ್ಜಿದಾರರು ಸರ್ಕಾರ ಒದಗಿಸಿದ ಇತರ ರೀತಿಯ ಯೋಜನೆಗಳ ಫಲಾನುಭವಿಯಾಗಬಾರದು.
ಉಜ್ವಲ 2.0 ಅಡಿಯಲ್ಲಿ:
- ಅನಿಲ ಸಂಪರ್ಕ ಪಡೆಯಲು ವಲಸೆ ಕಾರ್ಮಿಕರು ಇನ್ನು ಮುಂದೆ ವಿಳಾಸ ಪುರಾವೆ ದಾಖಲೆ ಪಡೆಯಲು ಕಷ್ಟಪಡಬೇಕಾಗಿಲ್ಲ.
- ಈ ಕಾರ್ಮಿಕರು ಗ್ಯಾಸ್ ಸಂಪರ್ಕ ಪಡೆಯಲು ತಮ್ಮ ವಾಸಸ್ಥಳ ವಿಳಾಸದ ಸ್ವಯಂ ಘೋಷಣೆಯನ್ನು ಮಾತ್ರ ಸಲ್ಲಿಸಬೇಕಾಗುತ್ತದೆ.
ವಿಷಯಗಳು: ದ್ವಿಪಕ್ಷೀಯ, ಪ್ರಾದೇಶಿಕ ಮತ್ತು ಜಾಗತಿಕ ಗುಂಪುಗಳು ಮತ್ತು ಭಾರತಕ್ಕೆ ಸಂಬಂಧಿಸಿದ ಒಪ್ಪಂದಗಳು ಮತ್ತು / ಅಥವಾ ಭಾರತದ ಹಿತಾಸಕ್ತಿಗಳ ಮೇಲೆ ಪರಿಣಾಮ ಬೀರುವ ಅಂಶಗಳು.
ಹಾಂಗ್ ಕಾಂಗ್ ನ ಆಡಳಿತವನ್ನು ಹೇಗೆ ನಿರ್ವಹಿಸಲಾಗುತ್ತದೆ?
(How is Hong Kong administered?)
ಸಂದರ್ಭ:
ಇತ್ತೀಚೆಗೆ, ಹಾಂಗ್ ಕಾಂಗ್ ನ ನಾಯಕಿ ‘ಕ್ಯಾರಿ ಲ್ಯಾಮ್’ ಹಾಂಗ್ ಕಾಂಗ್ ನಲ್ಲಿ ವಿದೇಶಿ ನಿರ್ಬಂಧಗಳಿಗೆ ಸ್ಪಂದಿಸಲು ಚೀನಾ ಮುಖ್ಯ ಭೂಪ್ರದೇಶದ ಕಾನೂನಿನ ಅನುಷ್ಠಾನವನ್ನು ಬೆಂಬಲಿಸುವುದಾಗಿ ಹೇಳಿದ್ದಾರೆ. ಹಾಂಕಾಂಗ್ ನಗರವು ಈಗ ಚೀನೀ ಕಾನೂನನ್ನು ಅಳವಡಿಸಿಕೊಳ್ಳಲು ಸಿದ್ಧವಾಗಿದೆ ಎಂಬುದಕ್ಕೆ ಇದು ಸ್ಪಷ್ಟ ಸಂಕೇತವಾಗಿದೆ.
ಈ ಕಾನೂನನ್ನು ಬೀಜಿಂಗ್‌ನ ಶಾಸಕಾಂಗದ ಬದಲು ಹಾಂಗ್ ಕಾಂಗ್‌ನ ಶಾಸಕಾಂಗದ ಮೂಲಕ ಪರಿಚಯಿಸಲು ಪ್ರಸ್ತಾಪಿಸಲಾಗಿದೆ. ಈ ಕಾನೂನನ್ನು ಹಾಂಗ್ ಕಾಂಗ್‌ನ ‘ಕಿರು ಸಂವಿಧಾನ’ದ ಅನುಬಂಧಕ್ಕೆ ಸೇರಿಸಲಾಗುತ್ತದೆ. ಹಾಂಗ್ ಕಾಂಗ್ ನ ‘ಮಿನಿ-ಕಾನ್ಸ್ಟಿಟ್ಯೂಷನ್’ ಅನ್ನು ‘ಬೇಸಿಕ್ ಲಾ’ ಅಥವಾ ಮೂಲ ಕಾನೂನು ಎಂದು ಕರೆಯಲಾಗುತ್ತದೆ.
ಏನಿದು ‘ಪ್ರಸ್ತಾವಿತ ಕಾನೂನು’?
- ಜೂನ್ ನಲ್ಲಿ ಬೀಜಿಂಗ್‌ನಿಂದ ಒಂದು ಕಾನೂನನ್ನು ಅಂಗೀಕರಿಸಲಾಯಿತು, ಅದರ ಅಡಿಯಲ್ಲಿ ತಾರತಮ್ಯ ಮಾಡುವ ಅಥವಾ ಚೀನಾದ ನಾಗರಿಕರು ಅಥವಾ ಘಟಕಗಳ ವಿರುದ್ಧ ತಾರತಮ್ಯದ ವಿಧಾನಗಳನ್ನು ಅನ್ವಯಿಸುವ ವ್ಯಕ್ತಿಗಳು ಅಥವಾ ಸಂಸ್ಥೆಗಳನ್ನು ಚೀನಾ ಸರ್ಕಾರದ ‘ನಿರ್ಬಂಧ-ವಿರೋಧಿ ಪಟ್ಟಿಯಲ್ಲಿ’ (anti-sanctions list) ಸೇರಿಸಬಹುದು.
- ಚೀನೀ ಕಾನೂನಿನ ಪ್ರಕಾರ, ಈ ಪಟ್ಟಿಯಲ್ಲಿರುವ ವ್ಯಕ್ತಿಗಳಿಗೆ ಚೀನಾ ಪ್ರವೇಶವನ್ನು ನಿರಾಕರಿಸಬಹುದು ಅಥವಾ ದೇಶದಿಂದ ಹೊರಹಾಕಬಹುದು.
- ಕಾನೂನಿನ ಪ್ರಕಾರ, ಚೀನಾದಲ್ಲಿ ಅಂತಹ ವ್ಯಕ್ತಿಗಳ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬಹುದು ಅಥವಾ ನಿಷ್ಕ್ರಿಯಗೊಳಿಸಬಹುದು. ಅವರು ಚೀನೀ ಘಟಕಗಳು ಅಥವಾ ನಾಗರಿಕರೊಂದಿಗೆ ವ್ಯಾಪಾರ ಮಾಡುವುದನ್ನು ಸಹ ನಿಷೇಧಿಸಬಹುದು.
ಈ ಕಾನೂನನ್ನು ಅನ್ವಯಿಸುವ ಅವಶ್ಯಕತೆಗಳು:
ತಂತ್ರಜ್ಞಾನ, ಹಾಂಕಾಂಗ್ ಮತ್ತು ದೂರದ ಪಶ್ಚಿಮ ಪ್ರದೇಶವಾದ ಕ್ಸಿನ್ಜಿಯಾಂಗ್ ಮತ್ತು ವ್ಯಾಪಾರ ವಾಣಿಜ್ಯದ ಕುರಿತು ಚೀನಾದ ಮೇಲೆ, ಅಮೆರಿಕ ಮತ್ತು ಯುರೋಪಿಯನ್ ಒಕ್ಕೂಟದ ಒತ್ತಡದಿಂದಾಗಿ ಕಾನೂನನ್ನು ತರಲಾಗಿದೆ.
ಈ ಕಾನೂನಿಗೆ ಸಂಬಂಧಿಸಿದ ಕಾಳಜಿಗಳು ಮತ್ತು ಸಮಸ್ಯೆಗಳು:
ಹಾಂಗ್ ಕಾಂಗ್ ನಲ್ಲಿ ಈ ಕಾನೂನನ್ನು ಜಾರಿಗೊಳಿಸುವುದರಿಂದ ‘ಜಾಗತಿಕ ಹಣಕಾಸು ಕೇಂದ್ರ’ ಎಂಬ ಖ್ಯಾತಿಯನ್ನು ಅದು ಕಳೆದುಕೊಳ್ಳಬಹುದು ಎಂದು ವಿಮರ್ಶಕರು ಎಚ್ಚರಿಸಿದ್ದಾರೆ.
ಹಾಂಗ್ ಕಾಂಗ್ ಅನ್ನು ಹೇಗೆ ನಿರ್ವಹಿಸಲಾಗುತ್ತದೆ?
ಹಾಂಗ್ ಕಾಂಗ್ ಅನ್ನು ‘ಒಂದು ದೇಶ, ಎರಡು ಆಡಳಿತ ವ್ಯವಸ್ಥೆಗಳು’ (One Country Two Systems) ಎಂಬ ವಿಧಾನದಿಂದ ನಿಯಂತ್ರಿಸಲಾಗುತ್ತದೆ. ‘ಹಾಂಗ್ ಕಾಂಗ್’ ಮತ್ತು ‘ಮಕಾವು’ ವಿಶೇಷ ಆಡಳಿತ ಪ್ರದೇಶಗಳು ಮತ್ತು ಎರಡೂ ಹಿಂದಿನ ವಸಾಹತುಗಳು.
ನೀತಿಯ ಪ್ರಕಾರ, ಹಾಂಗ್ ಕಾಂಗ್ ಮತ್ತು ಮಕಾವು, ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾದ ಭಾಗವಾಗಿದ್ದರೂ, ಮುಖ್ಯ ಭೂಭಾಗದ ಚೀನಾದ ನೀತಿಗಳಿಗಿಂತ ವಿಭಿನ್ನ ಆರ್ಥಿಕ ಮತ್ತು ರಾಜಕೀಯ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಬಹುದು.
- ಹಾಂಗ್ ಕಾಂಗ್ ಜುಲೈ 1, 1997 ರಿಂದ ಚೀನಾದ ನಿಯಂತ್ರಣಕ್ಕೆ ಮರಳಿತು, ಮತ್ತು ಮಕಾವು ಸಾರ್ವಭೌಮತ್ವವನ್ನು ಡಿಸೆಂಬರ್ 20, 1999 ರಂದು ಚೀನಾಕ್ಕೆ ವರ್ಗಾಯಿಸಲಾಯಿತು.
- ಈ ಪ್ರದೇಶಗಳು ತಮ್ಮದೇ ಕರೆನ್ಸಿಗಳು, ಆರ್ಥಿಕ ಮತ್ತು ಕಾನೂನು ವ್ಯವಸ್ಥೆಗಳನ್ನು ಹೊಂದಿವೆ, ಆದರೆ ರಕ್ಷಣಾ ಮತ್ತು ರಾಜತಾಂತ್ರಿಕತೆಯನ್ನು ಬೀಜಿಂಗ್ ನಿರ್ಧರಿಸುತ್ತದೆ.
- ಅವರ ಅಲ್ಪಾವಧಿಯ ಸಂವಿಧಾನವು 50 ವರ್ಷಗಳವರೆಗೆ ಮಾನ್ಯವಾಗಿರುತ್ತದೆ-ಅಂದರೆ, ಹಾಂಗ್ ಕಾಂಗ್‌ಗೆ 2047 ಮತ್ತು ಮಕಾವುಗೆ 2049 ರವರೆಗೆ. ಈ ಅವಧಿಯ ನಂತರದ ವ್ಯವಸ್ಥೆ ಹೇಗಿರುತ್ತದೆ ಎಂಬ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ.
ಸಾಮಾನ್ಯ ಅಧ್ಯಯನ ಪತ್ರಿಕೆ : 3
ವಿಷಯಗಳು: ವಿಜ್ಞಾನ ಮತ್ತು ತಂತ್ರಜ್ಞಾನ- ಬೆಳವಣಿಗೆಗಳು ಮತ್ತು ಅವುಗಳ ಅನ್ವಯಗಳು ಮತ್ತು ದೈನಂದಿನ ಜೀವನದಲ್ಲಿ ಅವುಗಳ ಪರಿಣಾಮಗಳು ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಭಾರತೀಯರ ಸಾಧನೆಗಳು; ತಂತ್ರಜ್ಞಾನದ ದೇಶೀಕರಣ ಮತ್ತು ಹೊಸ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವುದು.
ಕೃತಕ ಬುದ್ಧಿಮತ್ತೆ ವ್ಯವಸ್ಥೆಗೆ ಪೇಟೆಂಟ್ ನೀಡಿದ ದಕ್ಷಿಣ ಆಫ್ರಿಕಾ:
(South Africa grants patent to an artificial intelligence system)
ಸಂದರ್ಭ:
ಇತ್ತೀಚೆಗೆ, ಜಗತ್ತಿನಲ್ಲಿ ಮೊದಲಬಾರಿಗೆ, ದಕ್ಷಿಣ ಆಫ್ರಿಕಾವು “ಫ್ರಾಕ್ಟಲ್ ಜ್ಯಾಮಿತಿ ಆಧಾರಿತ ಆಹಾರ ಧಾರಕ” (food container based on fractal geometry) ನಾವೀನ್ಯತೆಗೆ ಸಂಬಂಧಿಸಿದ ‘ಕೃತಕ ಬುದ್ಧಿಮತ್ತೆ ವ್ಯವಸ್ಥೆ’ (Artificial Intelligence System) ಗೆ ಪೇಟೆಂಟ್ ನೀಡಿದೆ.
ಈ ನಾವೀನ್ಯತೆಯು ಆಹಾರ ಪಾತ್ರೆಗಳ ಇಂಟರ್‌ಲಾಕಿಂಗ್‌ಗೆ ಸಂಬಂಧಿಸಿದೆ, ಮತ್ತು ಇಲ್ಲಿ ರೋಬೋಟ್‌ಗಳು ಈ ಪಾತ್ರೆಗಳನ್ನು ಸುಲಭವಾಗಿ ಗ್ರಹಿಸಿ ಅನುಕ್ರಮವಾಗಿ ಜೋಡಿಸಿ ಇರಿಸಬಹುದು.
ವಿವಾದದ ವಿಷಯ:
ಈ ಪೇಟೆಂಟ್ ಅನ್ನು ಮನುಷ್ಯನಿಗೆ ನೀಡುವ ಬದಲಾಗಿ, DABUS ಎಂಬ ‘ಕೃತಕ ಬುದ್ಧಿಮತ್ತೆ (AI) ವ್ಯವಸ್ಥೆಗೆ ನೀಡಲಾಗಿದೆ.
DABUS ಎಂದರೇನು?
DABUS ಎಂದರೆ “ಏಕೀಕೃತ ಭಾವನೆಗಳ ಸ್ವಾಯತ್ತ ಬೂಟ್ ಸ್ಟ್ರಾಪಿಂಗ್ ಸಾಧನ” (Device for the Autonomous Bootstrapping of Unified Sentience – DABUS).
- DABUS ‘ಕೃತಕ ಬುದ್ಧಿಮತ್ತೆ’ (ಪ್ರೋಗ್ರಾಮಿಂಗ್) ಕ್ಷೇತ್ರದಲ್ಲಿ ಪ್ರವರ್ತಕರಾದ ಸ್ಟೀಫನ್ ಥಾಲರ್ (Stephen Thaler) ರಚಿಸಿದ ‘ಕೃತಕ ಬುದ್ಧಿಮತ್ತೆ (AI) ವ್ಯವಸ್ಥೆ’ಯಾಗಿದೆ.
- ಈ ವ್ಯವಸ್ಥೆಯು ಮಾನವನ ಆಲೋಚನಾ ಪ್ರಕ್ರಿಯೆಯನ್ನು ಅನುಕರಿಸುತ್ತದೆ ಮತ್ತು ಅದರ ಆಧಾರದ ಮೇಲೆ ಹೊಸ ಆವಿಷ್ಕಾರಗಳನ್ನು ಮಾಡುವ ಸಾಮರ್ಥ್ಯ ಹೊಂದಿದೆ.
- DABUS ಒಂದು ನಿರ್ದಿಷ್ಟ ರೀತಿಯ ‘ಕೃತಕ ಬುದ್ಧಿಮತ್ತೆ’ (AI) ವ್ಯವಸ್ಥೆಯಾಗಿದ್ದು, ಇದನ್ನು ಸಾಮಾನ್ಯವಾಗಿ “ಕ್ರಿಯೇಟಿವಿಟಿ / ಸೃಜನಶೀಲ ಯಂತ್ರಗಳು” (Creativity Machines) ಎಂದು ಕರೆಯಲಾಗುತ್ತದೆ, ಏಕೆಂದರೆ ಇದು ಸಂಕೀರ್ಣ ಕಾರ್ಯಗಳನ್ನು ಸ್ವತಂತ್ರವಾಗಿ ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದೆ.
‘ಸೃಜನಶೀಲತೆ ಯಂತ್ರಗಳು’ ಎಂದರೇನು?
‘ಕ್ರಿಯೇಟಿವಿಟಿ ಯಂತ್ರಗಳು’ ಅಥವಾ ‘ಸೃಜನಶೀಲತೆ ಯಂತ್ರಗಳು’ ಡೇಟಾವನ್ನು ಸಂಸ್ಕರಿಸಲು ಮತ್ತು ಅವುಗಳನ್ನು ಆಳವಾಗಿ ವಿಶ್ಲೇಷಿಸಲು ಸಮರ್ಥವಾಗಿವೆ, ಮತ್ತು ಈ ಯಂತ್ರಗಳು ಈ ಡೇಟಾದಿಂದಲೂ ಕಲಿಯಬಹುದು.
- ಈ ಪ್ರಕ್ರಿಯೆಯನ್ನು ‘ಯಂತ್ರ ಕಲಿಕೆ’ (Machine Learning) ಎಂದು ಕರೆಯಲಾಗುತ್ತದೆ.
- ‘ಯಂತ್ರ ಕಲಿಕೆ’ ಹಂತ ಪೂರ್ಣಗೊಂಡ ನಂತರ, ಈ ಯಂತ್ರಗಳು ಯಾವುದೇ ಮಾನವ ಹಸ್ತಕ್ಷೇಪವಿಲ್ಲದೆ “ಸ್ವಾಯತ್ತವಾಗಿ” ರಚಿಸಲು ಸಾಧ್ಯವಾಗುತ್ತದೆ.
ಹಿನ್ನೆಲೆ:
- ಯುಎಸ್, ಯುರೋಪ್, ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ಸೇರಿದಂತೆ ವಿಶ್ವದಾದ್ಯಂತ ಪೇಟೆಂಟ್ ಕಛೇರಿಗಳಿಗೆ ಪೇಟೆಂಟ್ ಅರ್ಜಿ ಸಲ್ಲಿಸಲಾಗಿದ್ದು, DABUS ಅನ್ನು ಸಂಶೋಧಕರಾಗಿ ಪಟ್ಟಿ ಮಾಡಲಾಗಿದೆ.
- ಯುನೈಟೆಡ್ ಸ್ಟೇಟ್ಸ್ ‘ಪೇಟೆಂಟ್ ಮತ್ತು ಟ್ರೇಡ್‌ಮಾರ್ಕ್ ಆಫೀಸ್’ ಮತ್ತು ಯುರೋಪಿಯನ್ ಯೂನಿಯನ್‌ನ ‘ಪೇಟೆಂಟ್ ಆಫೀಸ್’ ಈ ಅರ್ಜಿಯನ್ನು ಔಪಚಾರಿಕ ಪರೀಕ್ಷಾ ಹಂತದಲ್ಲಿಯೇ ತಿರಸ್ಕರಿಸಿವೆ.
ದಕ್ಷಿಣ ಆಫ್ರಿಕಾದ ಈ ನಡೆಯನ್ನು ಏಕೆ ವಿರೋಧಿಸಲಾಗುತ್ತಿದೆ?
ಪ್ರತಿಭಟನೆಗೆ ತಜ್ಞರು ಉಲ್ಲೇಖಿಸಿದ ಮೂರು ಕಾರಣಗಳು ಇಂತಿವೆ:
- ಮೊದಲಿಗೆ, ಸಂಬಂಧಿತ ಪೇಟೆಂಟ್ ಕಾನೂನುಗಳ ಅಡಿಯಲ್ಲಿ, ಪೇಟೆಂಟ್‌ಗಳನ್ನು ಮಾನವ ಸಂಶೋಧಕರಿಗೆ ಮಾತ್ರ ನೀಡಲಾಗುತ್ತದೆ, ಕೃತಕ ಬುದ್ಧಿಮತ್ತೆ (AI) ಗೆ ಅಲ್ಲ.
- ಎರಡನೆಯದಾಗಿ, ಪೇಟೆಂಟ್‌ನ ಉದ್ದೇಶಗಳಿಗಾಗಿ, ‘ಮಾನಸಿಕ ಪರಿಕಲ್ಪನೆ ಅಥವಾ ಕಲ್ಪನೆ’ಯ ಅಂಶವನ್ನು ಹೊಂದಿರಬೇಕಾದ ವಿಚಾರಗಳಿಗೆ ಪೇಟೆಂಟ್ ನೀಡಲಾಗುತ್ತದೆ – ಇದು ಮಾನವನ ಮನಸ್ಸಿನಲ್ಲಿ ಮಾತ್ರ ಉದ್ಭವಿಸಬಹುದು.
- ಕೊನೆಯದಾಗಿ, ಆವಿಷ್ಕಾರಕರ ಸ್ಥಾನಮಾನವನ್ನು ಕೆಲವು ಹಕ್ಕುಗಳೊಂದಿಗೆ ನೀಡಲಾಗುತ್ತದೆ, ಆದರೆ, ‘ಕೃತಕ ಬುದ್ಧಿಮತ್ತೆ’ಯು ಇದನ್ನು ಕಾನೂನುಬದ್ಧವಾಗಿ ಹೊಂದಲು ಸಾಧ್ಯವಾಗುವುದಿಲ್ಲ.
Join our Official Telegram Channel HERE for Motivation and Fast Updates
Subscribe to our YouTube Channel HERE to watch Motivational and New analysis videos
[ad_2]