[ ದೈನಂದಿನ ಪ್ರಚಲಿತ ಘಟನೆಗಳು ] ದಿನಾಂಕ – 27ನೇ ಜುಲೈ 2021 – INSIGHTSIAS

[ad_1]

 

ಪರಿವಿಡಿ:

 ಸಾಮಾನ್ಯ ಅಧ್ಯಯನ ಪತ್ರಿಕೆ 2:

1. ಪ್ರಧಾನಮಂತ್ರಿ ಜನ ವಿಕಾಸ ಕಾರ್ಯಕ್ರಮ (PMJVK).

2. ಅಂತರರಾಷ್ಟ್ರೀಯ ಉತ್ತರ-ದಕ್ಷಿಣ ಸಾರಿಗೆ ಕಾರಿಡಾರ್‌ ಮತ್ತು ಭಾರತ.

 

ಸಾಮಾನ್ಯ ಅಧ್ಯಯನ ಪತ್ರಿಕೆ 3:

1. ಗುರುಗ್ರಹದ ಎಕ್ಸ್-ರೇ ಧ್ರುವೀಯ ಜ್ಯೋತಿಯ ರಹಸ್ಯವನ್ನು ಪರಿಹರಿಸಿದ ನಾಸಾ.

2. ನೌಕಾ, ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ರಷ್ಯಾ ಕಳುಹಿಸುತ್ತಿರುವ ಮಾಡ್ಯೂಲ್.

3. ಸ್ವಚ್ಛ ಗಂಗಾ ನಿಧಿ (CGF).

4. ಅಸ್ಸಾಂ-ಮಿಜೋರಾಂ ಗಡಿ ವಿವಾದ.

 

ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:

1. ತ್ರಿಪುರ ಅಗರ್‌ವುಡ್‌ ನೀತಿ.

2. ನ್ಯಾಷನಲ್ ಸೆಂಟರ್ ಆಫ್ ಎಕ್ಸಲೆನ್ಸ್ ಫಾರ್ ಆನಿಮೇಷನ್, ವಿಷುಯಲ್ ಎಫೆಕ್ಟ್ಸ್, ಗೇಮಿಂಗ್ & ಕಾಮಿಕ್ಸ್.

3. 84 kos ಪರಿಕ್ರಮ ಮಾರ್ಗ.

4. ಭಾರತದ ‘ಮೊದಲ ಹಸಿರು ಕೈಗಾರಿಕಾ ನಗರ’ ವಾದ

 


ಸಾಮಾನ್ಯ ಅಧ್ಯಯನ ಪತ್ರಿಕೆ : 2


 

ವಿಷಯಗಳು:ಸರ್ಕಾರದ ನೀತಿಗಳು ಮತ್ತು ವಿವಿಧ ಕ್ಷೇತ್ರಗಳಲ್ಲಿನ ಅಭಿವೃದ್ಧಿಯ ಅಡಚಣೆಗಳು ಮತ್ತು ಅವುಗಳ ವಿನ್ಯಾಸ ಮತ್ತು ಅನುಷ್ಠಾನದಿಂದ ಉಂಟಾಗುವ ಸಮಸ್ಯೆಗಳು.

ಪ್ರಧಾನಮಂತ್ರಿ ಜನ ವಿಕಾಸ ಕಾರ್ಯಕ್ರಮ (PMJVK):


(Pradhan Mantri Jan Vikas Karyakaram (PMJVK)

ಸಂದರ್ಭ:

ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯವುಪ್ರಧಾನ ಮಂತ್ರಿ ಜನ ವಿಕಾಸ್ ಕಾರ್ಯಕ್ರಮ’ (Pradhan Mantri Jan Vikas Karyakaram – PMJVK) ವನ್ನು ದೇಶದ ಗುರುತಿಸಲ್ಪಟ್ಟ ಅಲ್ಪಸಂಖ್ಯಾತ ಬಾಹುಳ್ಯದ ಪ್ರದೇಶಗಳಲ್ಲಿ (Minority Concentration Areas – MCAs) ಜಾರಿಗೆ ತರುತ್ತಿದೆ.

 

ಪ್ರಧಾನಮಂತ್ರಿ ಜನ ವಿಕಾಸ ಕಾರ್ಯಕ್ರಮದ ಕುರಿತು:

  1. 2018 ರಲ್ಲಿ, ಕೇಂದ್ರ ಸರ್ಕಾರದಿಂದ ಹಿಂದಿನ ಬಹು-ವಲಯ ಅಭಿವೃದ್ಧಿ ಕಾರ್ಯಕ್ರಮವನ್ನು (Multi-sectoral Development Programme-MsDP) ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದಕ್ಕಾಗಿ ಇದನ್ನು ‘ಪ್ರಧಾನ ಮಂತ್ರಿ ಜನ ವಿಕಾಸ್ ಕಾರ್ಯಕ್ರಮ’ (PMJVK) ಎಂದು ಮರುನಾಮಕರಣ ಮಾಡಲಾಯಿತು.
  2. ಅಲ್ಪಸಂಖ್ಯಾತ ಸಮುದಾಯಗಳಿಗೆ ಉತ್ತಮ ಸಾಮಾಜಿಕ-ಆರ್ಥಿಕ ಮೂಲಸೌಕರ್ಯ ಸೌಲಭ್ಯಗಳನ್ನು ಒದಗಿಸುವುದು ಇದರ ಉದ್ದೇಶವಾಗಿದೆ.

 

ಕಾರ್ಯಕ್ರಮದ ಅಡಿಯಲ್ಲಿ ವಿಶೇಷವಾಗಿ ಗಮನ ಹರಿಸಿದ ಪ್ರದೇಶಗಳಿಗೆ ಹಣ ಹಂಚಿಕೆ:

  1. ‘ಪ್ರಧಾನ್ ಮಂತ್ರಿ ಜನ ವಿಕಾಸ್ ಕಾರ್ಯಕ್ರಮ’ ದ ಅಡಿಯಲ್ಲಿ 80% ಸಂಪನ್ಮೂಲಗಳನ್ನು ಶಿಕ್ಷಣ, ಆರೋಗ್ಯ ಮತ್ತು ಕೌಶಲ್ಯ ಅಭಿವೃದ್ಧಿಗೆ ಸಂಬಂಧಿಸಿದ ಯೋಜನೆಗಳಿಗೆ ಮೀಸಲಿಡಲಾಗುತ್ತದೆ.
  2. ಕಾರ್ಯಕ್ರಮದ ಅಡಿಯಲ್ಲಿ 33% ರಿಂದ 40% ಸಂಪನ್ಮೂಲಗಳನ್ನು ವಿಶೇಷವಾಗಿ ಮಹಿಳಾ ಕೇಂದ್ರಿತ ಯೋಜನೆಗಳಿಗೆ ಮಾತ್ರ ಹಂಚಲಾಗುತ್ತದೆ.

 

ಪ್ರಧಾನ ಮಂತ್ರಿ ಜನ ವಿಕಾಸ್ ಕಾರ್ಯಕ್ರಮ’ ದ ಫಲಾನುಭವಿಗಳು:

  1. PMJVK ಸಂದರ್ಭದಲ್ಲಿ, ಅಲ್ಪಸಂಖ್ಯಾತ ಸಮುದಾಯಗಳೆಂದು ಅಧಿಸೂಚನೆಗೊಂಡ ಸಮುದಾಯಗಳನ್ನು 1992 ರ ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗದ ಸೆಕ್ಷನ್ 2 (ಸಿ) ಅಡಿಯಲ್ಲಿ ಅಲ್ಪಸಂಖ್ಯಾತ ಸಮುದಾಯಗಳೆಂದು ಪರಿಗಣಿಸಲಾಗುತ್ತದೆ.
  2. ಈ ಕಾಯಿದೆಯಡಿ, ಪ್ರಸ್ತುತ ‘ಮುಸ್ಲಿಮರು, ಸಿಖ್ಖರು, ಕ್ರಿಶ್ಚಿಯನ್ನರು, ಬೌದ್ಧರು, ಪಾರ್ಸಿಗಳು ಮತ್ತು ಜೈನರು’ ಎಂಬ ಆರು ಸಮುದಾಯಗಳನ್ನು ಅಲ್ಪಸಂಖ್ಯಾತ ಸಮುದಾಯಗಳಾಗಿ ಅಧಿಸೂಚಿಸಲಾಗಿದೆ.

 

ವಿಷಯಗಳು: ಭಾರತ ಮತ್ತು ನೆರೆಹೊರೆಯ ದೇಶಗಳೊಂದಿಗೆ ಅದರ ಸಂಬಂಧಗಳು.

ಅಂತರರಾಷ್ಟ್ರೀಯ ಉತ್ತರ-ದಕ್ಷಿಣ ಸಾರಿಗೆ ಕಾರಿಡಾರ್‌ನಲ್ಲಿ ಭಾರತ:


(Why can’t India Bank on the International North-South Transport Corridor?)

ಸಂದರ್ಭ:

‘ಪಾಕಿಸ್ತಾನ-ಅಫ್ಘಾನಿಸ್ತಾನ-ಉಜ್ಬೇಕಿಸ್ತಾನ್ ರೈಲ್ವೆ’  (Pakistan-Afghanistan-Uzbekistan – PAKAFUZ railway) ನಿರ್ಮಿಸುವ ಯೋಜನೆಯಿಂದಾಗಿ, ಭಾರತ ದೇಶದ, ‘ಮಧ್ಯ ಏಷ್ಯಾದ ಔಟ್ ರೀಚ್ ಪ್ರಯತ್ನಗಳಿಗೆ’ ಸಂಬಂಧಿಸಿದಂತೆ, ಭಾರತದ ಅಂತರರಾಷ್ಟ್ರೀಯ ಉತ್ತರ-ದಕ್ಷಿಣ ಸಾರಿಗೆ ಕಾರಿಡಾರ್ (International North-South Transport Corridor – INSTC) ನಿರರ್ಥಕವಾಗುತ್ತದೆ, ಆದ್ದರಿಂದ ಭಾರತವು ತನ್ನ ಕಾರ್ಯತಂತ್ರವನ್ನು ಪುನಃ ರಚಿಸಬೇಕಾಗಬಹುದು.

ಏನಿದು ಪ್ರಕರಣ?

  1. ಪಾಕಿಸ್ತಾನ-ಅಫ್ಘಾನಿಸ್ತಾನ-ಉಜ್ಬೇಕಿಸ್ತಾನ್’ (PAKAFUZ) ಪ್ರಸ್ತಾವನೆಯಡಿ 573 ಕಿ.ಮೀ ಉದ್ದದ ರೈಲ್ವೆ ಯೋಜನೆಯನ್ನು ಪ್ರಸ್ತಾಪಿಸಲಾಗಿದೆ.
  2. ರೈಲು ಯೋಜನೆಯು ಉಜ್ಬೇಕಿಸ್ತಾನ್ ರಾಜಧಾನಿ ತಾಷ್ಕೆಂಟ್ ಅನ್ನು ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ಮತ್ತು ಪಾಕಿಸ್ತಾನದ ಉತ್ತರ ನಗರವಾದ ಪೇಶಾವರದೊಂದಿಗೆ ಸಂಪರ್ಕಿಸುತ್ತದೆ.
  3. ಈ ಯೋಜನೆಯು ಭಾರತದ ಹಿತಾಸಕ್ತಿಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ, ಏಕೆಂದರೆ ಇರಾನ್‌ನ ಚಬಹಾರ್ ಬಂದರಿನ ಮೂಲಕ ಅಫ್ಘಾನಿಸ್ತಾನದಲ್ಲಿ ತನ್ನ ಪ್ರಭಾವವನ್ನು ವಿಸ್ತರಿಸಲು ಭಾರತವು ಯೋಜನೆ ರೂಪಿಸುತ್ತಿದೆ.
  4. ಈಗ ಭಾರತದ ದೊಡ್ಡ ಕಾಳಜಿ ಏನೆಂದರೆ, ಅಫ್ಘಾನಿಸ್ತಾನವು PAKAFUZ ಗೆ ಸೇರ್ಪಡೆಯಾಗುವುದರೊಂದಿಗೆ, ಹಿಂದೂ ಮಹಾಸಾಗರ ಪ್ರವೇಶಕ್ಕಾಗಿ ಈ ದೇಶ ಇನ್ನು ಮುಂದೆ INSTC ಯನ್ನು ಅವಲಂಬಿಸುವುದಿಲ್ಲ. PAKAFUZ ಮೂಲಭೂತವಾಗಿ ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ (CPEC) ನ ಉತ್ತರದ ಶಾಖೆಯಾಗಿ ಕಾರ್ಯನಿರ್ವಹಿಸುತ್ತದೆ, ಅದನ್ನು ಈಗ N-CPECಎಂದೂ ಕರೆಯಲಾಗುತ್ತದೆ.
  5. ಇದರ ಪರಿಣಾಮವೆಂದರೆ ಮಧ್ಯ ಏಷ್ಯಾದಲ್ಲಿ ಚೀನಾದ ಪ್ರಭಾವವನ್ನು “ಸಮತೋಲನಗೊಳಿಸಲು” ಭಾರತಕ್ಕೆ ಸಾಧ್ಯವಾಗುವುದಿಲ್ಲ, ಇದರಿಂದಾಗಿ ಭಾರತವು ತನ್ನ ಸಂಬಂಧಿತ ಕಾರ್ಯತಂತ್ರವನ್ನು ಮತ್ತಷ್ಟು ಮರು ಮೌಲ್ಯಮಾಪನ ಮಾಡಲು ಒತ್ತಾಯಿಸುತ್ತದೆ.

 

ಭಾರತಕ್ಕೆ ಮುಂದಿನ ಹಾದಿ:

  1. ಮಧ್ಯ ಏಷ್ಯಾದ ಮೇಲೆ ಕೇಂದ್ರೀಕರಿಸುವ ಬದಲು, ಭಾರತವು, ತಾರ್ಕಿಕವಾಗಿ, ಇಂಡೋ-ಪೆಸಿಫಿಕ್ ಪ್ರದೇಶದ ಆಫ್ರೋ-ಯುರೇಷಿಯನ್ ರಿಮ್ಲ್ಯಾಂಡ್’ಗೆ ತನ್ನ ವ್ಯಾಪ್ತಿಯನ್ನು ವಿಸ್ತರಿಸಲು ತನ್ನ ಹೆಚ್ಚಿನ ಸಮಯ, ಗಮನ ಮತ್ತು ಶ್ರಮವನ್ನು ವಿನಿಯೋಗಿಸಬೇಕು. ಯುರೇಷಿಯನ್ ಹಾರ್ಟ್ ಲ್ಯಾಂಡ್ ಗೆ ಹೋಲಿಸಿದರೆ ಭಾರತಕ್ಕೆ ಈ ಪ್ರದೇಶದಲ್ಲಿ ಹೆಚ್ಚಿನ ಅವಕಾಶಗಳಿವೆ.
  2. ಇಸ್ರೇಲ್ ತನ್ನ ಟ್ರಾನ್ಸ್ ರೀಜನಲ್ ಸಂಪರ್ಕ ಯೋಜನೆಯಾದ “ಟ್ರಾನ್ಸ್-ಅರೇಬಿಯನ್ ಕಾರಿಡಾರ್ (Trans-Arabian Corridor – TAC)” – ಅನ್ನು 2019 ರ ಡಿಸೆಂಬರ್‌ನಲ್ಲಿ ಭಾರತದೊಂದಿಗೆ ಹಂಚಿಕೊಂಡಿದೆ. ಇದನ್ನು ಭಾರತ ಮರುಪರಿಶೀಲಿಸಬೇಕು.
  3. ಕೆಲವು ವರ್ಷಗಳ ಹಿಂದೆ ಬಹುತೇಕ ಮರೆತುಹೋದ ಭಾರತ-ಜಪಾನ್ ಏಷ್ಯಾ-ಆಫ್ರಿಕಾ ಬೆಳವಣಿಗೆಯ ಜಂಟಿ ಕಾರಿಡಾರ್ (Asia-Africa Growth Corridor – AAGC) ಅನ್ನು ಪುನರುಜ್ಜೀವನಗೊಳಿಸಬಹುದು.
  4. ಭಾರತವು ಈಗಾಗಲೇ ವ್ಲಾಡಿವೋಸ್ಟಾಕ್-ಚೆನ್ನೈ ಮ್ಯಾರಿಟೈಮ್ ಕಾರಿಡಾರ್ (Vladivostok-Chennai Maritime Corridor -VCMC) ಮೂಲಕ ರಷ್ಯಾದೊಂದಿಗೆ ಶೀಘ್ರಗತಿಯಲ್ಲಿ / ವೇಗವಾಗಿ ಸಾಗುತ್ತಿದೆ. ಈ ಕಾರಿಡಾರ್ ಅನ್ನು 2019 ರಲ್ಲಿ ಪ್ರಧಾನಿ ಮೋದಿ ಮತ್ತು ರಷ್ಯಾ ಅಧ್ಯಕ್ಷ ಪುಟಿನ್ ಅವರು ‘ಈಸ್ಟರ್ನ್ ಎಕನಾಮಿಕ್ ಫೋರಂ’ ನ ಆಯೋಜನೆಯ ಸಂದರ್ಭದಲ್ಲಿ ಘೋಷಿಸಿದರು. 2019 ರಲ್ಲಿ ಪ್ರಧಾನಿ ಮೋದಿಯವರು  ‘ಈಸ್ಟರ್ನ್ ಎಕನಾಮಿಕ್ ಫೋರಂ’ ನ ಗೌರವಾನ್ವಿತ ಅತಿಥಿಯಾಗಿ ಭಾಗವಹಿಸಿದ್ದರು.

 

INSTC ಕುರಿತು:

ಅಂತರರಾಷ್ಟ್ರೀಯ ಉತ್ತರ-ದಕ್ಷಿಣ ಸಾರಿಗೆ ಕಾರಿಡಾರ್ -INSTC ) ಸರಕು ಸಾಗಣೆಗಾಗಿ 7,200 ಕಿ.ಮೀ ಉದ್ದದ ಬಹು-ವಿಧದ (ಮಲ್ಟಿ-ಮೋಡ್) ಹಡಗುಗಳು, ರೈಲ್ವೆಗಳು ಮತ್ತು ರಸ್ತೆಮಾರ್ಗಗಳ ಜಾಲವಾಗಿದೆ.

ಒಳಗೊಂಡಿರುವ ಪ್ರದೇಶಗಳು: ಭಾರತ, ಇರಾನ್, ಅಫ್ಘಾನಿಸ್ತಾನ, ಅಜೆರ್ಬೈಜಾನ್, ರಷ್ಯಾ, ಮಧ್ಯ ಏಷ್ಯಾ ಮತ್ತು ಯುರೋಪ್.

2014 ರಲ್ಲಿ, ಅದರ ಎರಡು ಮಾರ್ಗಗಳನ್ನು ಈ ಮೊದಲೇ ಪರೀಕ್ಷಿಸಲಾಗಿದೆ:

ಮೊದಲನೆಯದಾಗಿ, ಮುಂಬೈನಿಂದ ಅಜರ್ಬೈಜಾನ್‌ನ ಬಾಕುಗೆ ‘ಬಂದರ್ ಅಬ್ಬಾಸ್’ ಮೂಲಕ.

ಎರಡನೆಯದಾಗಿ, ಮುಂಬೈಯಿಂದ ‘ಬಂದರ್ ಅಬ್ಬಾಸ್’ ಮೂಲಕ ಅಸ್ಟ್ರಾಖಾನ್, ಟೆಹ್ರಾನ್ ಮತ್ತು ಬಂದರ್-ಎ-ಅಂಜಲಿವರೆಗೆ.

 

ಈ ಕಾರಿಡಾರ್‌ನ ಪ್ರಾಮುಖ್ಯತೆ:

  1. ‘ಅಂತರರಾಷ್ಟ್ರೀಯ ಉತ್ತರ-ದಕ್ಷಿಣ ಸಾರಿಗೆ ಕಾರಿಡಾರ್’ (INSTC) ಅನ್ನು ಚೀನಾದ ‘ಬೆಲ್ಟ್ ಮತ್ತು ರೋಡ್ ಇನಿಶಿಯೇಟಿವ್’ (BRI) ಗೆ ಬಹಳ ಹಿಂದೆಯೇ ಕಲ್ಪಿಸಲಾಗಿತ್ತು. INSTC ಯು, ಭಾರತದಿಂದ ರಷ್ಯಾ ಮತ್ತು ಯುರೋಪ್ ಗಳಿಗೆ ಇರಾನ್‌ ಮೂಲಕ ಸಾಗಿಸುವ ಸರಕುಗಳ ಸಾಗಣೆ ವೆಚ್ಚ ಮತ್ತು ಸಮಯವನ್ನು ಉಳಿಸುತ್ತದೆ ಮತ್ತು ಅದೇ ಸಮಯದಲ್ಲಿ, ಯುರೇಷಿಯನ್ ದೇಶಗಳ ಸಂಪರ್ಕಕ್ಕೆ ಪರ್ಯಾಯ ಮಾರ್ಗವನ್ನು ಸಹ ಒದಗಿಸುತ್ತದೆ.
  2. ಇದು ಮಧ್ಯ ಏಷ್ಯಾ ಮತ್ತು ಪರ್ಷಿಯನ್ ಕೊಲ್ಲಿಗೆ ಸರಕುಗಳನ್ನು ಸಾಗಿಸಲು ಅನುಕೂಲವಾಗುವಂತೆ ಅಂತರರಾಷ್ಟ್ರೀಯ ಸಾರಿಗೆ ಮತ್ತು ಸಾರಿಗೆ ಕಾರಿಡಾರ್ ಅನ್ನು ರಚಿಸುವುದಕ್ಕಾಗಿ ಭಾರತ, ಒಮಾನ್, ಇರಾನ್, ತುರ್ಕಮೆನಿಸ್ತಾನ್, ಉಜ್ಬೇಕಿಸ್ತಾನ್ ಮತ್ತು ಕಜಾಕಸ್ಥಾನ್ ಗಳು ಸಹಿ ಮಾಡಿದ ‘ಅಶ್ಗಬತ್ ಒಪ್ಪಂದ’ (the Ashgabat agreement) ಎಂದು ಕರೆಯಲ್ಪಡುವ ವಿವಿಧೋದ್ದೇಶ ಸಾರಿಗೆ ಒಪ್ಪಂದದೊಂದಿಗೆ ಸಿಂಕ್ರೊನೈಸ್ ಆಗಲಿದೆ.

 


ಸಾಮಾನ್ಯ ಅಧ್ಯಯನ ಪತ್ರಿಕೆ : 3


 

ವಿಷಯಗಳು: ಮಾಹಿತಿ ತಂತ್ರಜ್ಞಾನ, ಬಾಹ್ಯಾಕಾಶ, ಕಂಪ್ಯೂಟರ್, ರೊಬೊಟಿಕ್ಸ್, ನ್ಯಾನೊ-ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ಬೌದ್ಧಿಕ ಆಸ್ತಿ ಹಕ್ಕುಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಜಾಗೃತಿ.

ಗುರುಗ್ರಹದ ಎಕ್ಸ್-ರೇ ಧ್ರುವೀಯ ಜ್ಯೋತಿಯ ರಹಸ್ಯವನ್ನು ಪರಿಹರಿಸಿದ ನಾಸಾ:


(NASA solves mystery of Jupiter’s X-Ray Auroras)

ಸಂದರ್ಭ:

ಗುರು ಗ್ರಹದ (Jupiter) ಎರಡೂ ಧ್ರುವಗಳ ಬಳಿ ‘ಧ್ರುವ ಜ್ಯೋತಿಗಳು’ / ‘ಅರೋರಾಗಳು’(Auroras)  ಕಂಡುಬರುತ್ತವೆ. ಮತ್ತು ಅವು ಎಕ್ಸ್ ಕಿರಣ(X-rays)ಗಳನ್ನು ಹೊರಸೂಸುತ್ತವೆ. ಈ ಎಕ್ಸರೆ ಹೊರಸೂಸುವಿಕೆಯ ಹಿಂದಿನ ಕಾರಣದ ಬಗ್ಗೆ ವಿಜ್ಞಾನಿಗಳು ಸಾಕಷ್ಟು ಗೊಂದಲಕ್ಕೊಳಗಾಗಿದ್ದರು.

ಈಗ, ನಾಸಾ ಜುನೋ ಮಿಷನ್ (Juno mission) ಮತ್ತು ಯುರೋಪಿಯನ್ ಬಾಹ್ಯಾಕಾಶ ಏಜೆನ್ಸಿಯ ಎಕ್ಸ್‌ಎಂಎಂ-ನ್ಯೂಟನ್ (XMM-Newton mission)ಮಿಷನ್‌ನ ಡೇಟಾವನ್ನು ಸಂಯೋಜಿಸುವ ಮೂಲಕ ಈ ಒಗಟನ್ನು ಪರಿಹರಿಸಿದೆ.

 

ಈ ವಿದ್ಯಮಾನದ ಹಿಂದಿನ ಕಾರಣವೇನು?

ಗುರುಗ್ರಹದ ಧ್ರುವಗಳಲ್ಲಿನ ಅರೋರಾಗಳು ಅದರ ವಾತಾವರಣದಲ್ಲಿನ ಅಯಾನುಗಳ ಘರ್ಷಣೆಯಿಂದ ಉಂಟಾಗುತ್ತವೆ. ಈ ‘ಅಯಾನುಗಳು’(ions) ಗ್ರಹದ ವಾತಾವರಣಕ್ಕೆ ಪ್ರವೇಶಿಸಲು ಗುರುಗ್ರಹದ ಕಾಂತಕ್ಷೇತ್ರದಲ್ಲಿನ ವಿದ್ಯುತ್ಕಾಂತೀಯ ತರಂಗಗಳಲ್ಲಿ ಸರ್ಫಿಂಗ್ ಮಾಡುತ್ತವೆ.

 

ಜುನೋ ಮಿಷನ್ ಬಗ್ಗೆ:

ಜುನೋ ಬಾಹ್ಯಾಕಾಶ ನೌಕೆ, ಗುರುಗ್ರಹದ ರಚನೆ, ಸಂಯೋಜನೆ ಮತ್ತು ವಿಕಾಸವನ್ನು ಅಧ್ಯಯನ ಮಾಡುವ ಉದ್ದೇಶದಿಂದ ಇದನ್ನು 2011 ರಲ್ಲಿ ಪ್ರಾರಂಭಿಸಲಾಯಿತು.ಇದು, ಗೆಲಿಲಿಯೋ ನಂತರ ಗುರು ಗ್ರಹವನ್ನು ಪರಿಭ್ರಮಿಸಿದ ಮೊದಲ ಬಾಹ್ಯಾಕಾಶ ನೌಕೆಯಾಗಿದೆ.

ಜುನೊದ ಮುಖ್ಯ ಉದ್ದೇಶ ಗುರು ಗ್ರಹದ ರಚನೆ ಮತ್ತು ಅದರ ಮೂಲದ / ವಿಕಾಸದ ಕಥೆಯನ್ನು ಬಹಿರಂಗಪಡಿಸುವುದಾಗಿದೆ.

 

XMM-Newton ಮಿಷನ್ ಕುರಿತು:

ಎಕ್ಸ್‌ಎಂಎಂ-ನ್ಯೂಟನ್ ಮಿಷನ್’ (XMM-Newton mission) ಅನ್ನು ‘ಹೈ ಥ್ರೂಪುಟ್ ಎಕ್ಸರೆ ಸ್ಪೆಕ್ಟ್ರೋಸ್ಕೋಪಿ ಮಿಷನ್’ (High Throughput X-ray Spectroscopy Mission) ಮತ್ತು ‘ಎಕ್ಸರೆ ಮಲ್ಟಿ-ಮಿರರ್ ಮಿಷನ್’ (X-ray Multi-Mirror Mission) ಎಂದು ಕರೆಯಲಾಗುತ್ತದೆ.

ಎಕ್ಸ್‌ಎಂಎಂ-ನ್ಯೂಟನ್ ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆ ಡಿಸೆಂಬರ್ 1999 ರಲ್ಲಿ ಪ್ರಾರಂಭಿಸಿದ ಎಕ್ಸರೆ ಬಾಹ್ಯಾಕಾಶ ವೀಕ್ಷಣಾಲಯವಾಗಿದೆ.

ಇದು ಯುರೋಪಿಯನ್ ಬಾಹ್ಯಾಕಾಶ ಏಜೆನ್ಸಿಯ ಹೊರಿಜಾನ್ 2000’ (Horizon 2000) ಕಾರ್ಯಕ್ರಮದ ಒಂದು ಭಾಗವಾಗಿದೆ.

ಈ ಬಾಹ್ಯಾಕಾಶ ನೌಕೆಯ ಕಾರ್ಯವು ಅಂತರತಾರಾ ಎಕ್ಸರೆ ಮೂಲಗಳನ್ನು ತನಿಖೆ ಮಾಡುವುದು, ಕಿರಿದಾದ ಮತ್ತು ವಿಶಾಲ ಶ್ರೇಣಿಯ ಸ್ಪೆಕ್ಟ್ರೋಸ್ಕೋಪಿಯನ್ನು ನಿರ್ವಹಿಸುವುದು, ಮತ್ತು ಮೊದಲ ಬಾರಿಗೆ ಎಕ್ಸರೆ ಮತ್ತು ಆಪ್ಟಿಕಲ್ (ಗೋಚರ ಮತ್ತು ನೇರಳಾತೀತ) ತರಂಗಾಂತರಗಳಲ್ಲಿನ ವಸ್ತುಗಳ ಮೊದಲ ಏಕಕಾಲಿಕ ಚಿತ್ರಣವನ್ನು ನಿರ್ವಹಿಸುವುದು.

 

ವಿಷಯಗಳು: ಮಾಹಿತಿ ತಂತ್ರಜ್ಞಾನ, ಬಾಹ್ಯಾಕಾಶ, ಕಂಪ್ಯೂಟರ್, ರೊಬೊಟಿಕ್ಸ್, ನ್ಯಾನೊ-ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ಬೌದ್ಧಿಕ ಆಸ್ತಿ ಹಕ್ಕುಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಜಾಗೃತಿ.

ನೌಕಾ, ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ರಷ್ಯಾ ಕಳುಹಿಸುತ್ತಿರುವ ಮಾಡ್ಯೂಲ್:


(Nauka, the module Russia is sending to the ISS)

ಸಂದರ್ಭ:

ಜುಲೈ 21 ರಂದು, ಕಜಕಿಸ್ತಾನದ ಬೈಕೊನೂರ್ ಕಾಸ್ಮೊಡ್ರೋಮ್‌ನಿಂದ ಪ್ರೋಟಾನ್ ರಾಕೆಟ್‌ ನ ಮೂಲಕ ನೌಕಾ ಲ್ಯಾಬ್ ಮಾಡ್ಯೂಲ್ (Nauka Lab Module) ಅನ್ನು ರಷ್ಯಾ ಉಡಾವಣೆ ಮಾಡಿತು.

ಈ ಮಾಡ್ಯೂಲ್ ಜುಲೈ 29 ರಂದು ‘ಇಂಟರ್ನ್ಯಾಷನಲ್ ಸ್ಪೇಸ್ ಸ್ಟೇಷನ್’ (ISS) ಅನ್ನು ಸೇರಿಕೊಳ್ಳುವಂತೆ ಪ್ರೋಗ್ರಾಮಿಂಗ್ ಅನ್ನು ನಿಗದಿಪಡಿಸಲಾಗಿದೆ.

 

ಏನಿದು ನೌಕಾ?

  1. ರಷ್ಯನ್ ಭಾಷೆಯಲ್ಲಿ “ವಿಜ್ಞಾನ” ಎಂಬ ಅರ್ಥವನ್ನು ಹೊಂದಿರುವ ನೌಕಾ (Nauka), ಇದುವರೆಗೆ ರಷ್ಯಾ ಪ್ರಾರಂಭಿಸಿದ ಅತಿದೊಡ್ಡ ಬಾಹ್ಯಾಕಾಶ ಪ್ರಯೋಗಾಲಯವಾಗಿದೆ.
  2.  ಇದು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (International Space Station – ISS) ಅಳವಡಿಸಲಾಗಿರುವ ರಷ್ಯಾದ ಮಾಡ್ಯೂಲ್ ಪಿರ್ಸ್ (Pirs) ಅನ್ನು ಬದಲಾಯಿಸುತ್ತದೆ. ಐಎಸ್ಎಸ್ ನಲ್ಲಿನ ‘ಪಿಐಆರ್’ ಮಾಡ್ಯೂಲ್ ಅನ್ನು ಬಾಹ್ಯಾಕಾಶ ನೌಕೆಗೆ ‘ಡಾಕಿಂಗ್ ಪೋರ್ಟ್’ ಆಗಿ ಮತ್ತು ಗಗನಯಾತ್ರಿಗಳು ‘ಬಾಹ್ಯಾಕಾಶ ನಡಿಗೆ’ಗೆ ಹೋಗಲು ದ್ವಾರವಾಗಿ ಬಳಸಲಾಗುತ್ತದೆ.
  3. ಈಗ, ‘ನೌಕಾ’ ಬಾಹ್ಯಾಕಾಶ ಕೇಂದ್ರದಲ್ಲಿ ರಷ್ಯಾದ ‘ಮುಖ್ಯ ಸಂಶೋಧನಾ ಸೌಲಭ್ಯ’ವಾಗಿ ಕಾರ್ಯನಿರ್ವಹಿಸಲಿದೆ.
  4. ‘ನೌಕಾ’ ಲ್ಯಾಬ್ ಮಾಡ್ಯೂಲ್ 42 ಅಡಿ ಉದ್ದ ಮತ್ತು 20 ಟನ್ ತೂಕ ಹೊಂದಿದೆ.
  5. ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆ (ESA) ನಿರ್ಮಿಸಿದ ಆಮ್ಲಜನಕ ಜನರೇಟರ್, ಹೆಚ್ಚುವರಿ ಹಾಸಿಗೆ, ಶೌಚಾಲಯ ಮತ್ತು ರೊಬೊಟಿಕ್ ಸರಕು ಕ್ರೇನ್ ಅನ್ನು ಸಹ ನೌಕಾ ಲ್ಯಾಬ್ ಮಾಡ್ಯೂಲ್ ಜೊತೆಗೆ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಕಳುಹಿಸಲಾಗುತ್ತಿದೆ.
  6. ISS ನಲ್ಲಿ, ನೌಕಾ ಅನ್ನು ಪ್ರಮುಖ ಜ್ವೆಜ್ದಾ ಮಾಡ್ಯೂಲ್ಗೆ ಲಗತ್ತಿಸಲಾಗುತ್ತದೆ.
  7.  ಈ ಮಾಡ್ಯೂಲ್ ಬಾಹ್ಯಾಕಾಶ ನಿಲ್ದಾಣದಲ್ಲಿ ಎಲ್ಲಾ ಜೀವ ಬೆಂಬಲ ವ್ಯವಸ್ಥೆಗಳನ್ನು (life support systems) ಒದಗಿಸುತ್ತದೆ, ಮತ್ತು ಐಎಸ್ಎಸ್ ನ ರಷ್ಯಾದ ಕಕ್ಷೀಯ ಭಾಗವಾದ ರಷ್ಯನ್ ಆರ್ಬಿಟಲ್ ಸೆಗ್ಮೆಂಟ್ (ROS) ನ ರಚನಾತ್ಮಕ ಮತ್ತು ಕ್ರಿಯಾತ್ಮಕ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತದೆ.

 

ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಕುರಿತು:

  1. ‘ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ’ (ISS), ಮೂಲಭೂತವಾಗಿ ದೊಡ್ಡ ಗಾತ್ರದ ಬಾಹ್ಯಾಕಾಶ ನೌಕೆಯಾಗಿದ್ದು, ಇದು ಭೂಮಿಯ ಕೆಳ ಕಕ್ಷೆಯಲ್ಲಿ(ಭೂ ನೀಚ ಕಕ್ಷೆಯಲ್ಲಿ) ಬಹಳ ದೀರ್ಘಕಾಲದವರೆಗೆ ಉಳಿದಿದೆ.
  2. ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ISS) ವನ್ನು 1998 ರಲ್ಲಿ ಪ್ರಾರಂಭಿಸಲಾಯಿತು.
  3. ಇದು ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆ ಸೇರಿದಂತೆ ರಷ್ಯಾ, ಯುನೈಟೆಡ್ ಸ್ಟೇಟ್ಸ್, ಕೆನಡಾ, ಜಪಾನ್‌ನ ಬಾಹ್ಯಾಕಾಶ ಏಜೆನ್ಸಿಗಳನ್ನು ಒಳಗೊಂಡಿದೆ. ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ISS) ಮಾನವ ಇತಿಹಾಸದಲ್ಲಿ ಅತ್ಯಂತ ಮಹತ್ವಾಕಾಂಕ್ಷೆಯ ಅಂತರರಾಷ್ಟ್ರೀಯ ಸಹಯೋಗವಾಗಿದೆ.
  4. ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವು ‘(ISS) ಭೂಮಿಯ ಕೆಳ ಕಕ್ಷೆಯಲ್ಲಿರುವ’(ನಿಕಟವರ್ತಿ ಕಕ್ಷೆಯಲ್ಲಿ) ಮಾಡ್ಯುಲರ್ ಬಾಹ್ಯಾಕಾಶ ನಿಲ್ದಾಣ ‘(ವಾಸಯೋಗ್ಯ ಕೃತಕ ಉಪಗ್ರಹ) ವಾಗಿದೆ.
  5. ISS ಮೈಕ್ರೊಗ್ರಾವಿಟಿ (ಸೂಕ್ಷ್ಮಗುರುತ್ವ) ಮತ್ತು ಬಾಹ್ಯಾಕಾಶ ಪರಿಸರ ಸಂಶೋಧನಾ ಪ್ರಯೋಗಾಲಯವಾಗಿ ಕಾರ್ಯನಿರ್ವಹಿಸುತ್ತದೆ, ಅದರ ಮೇಲೆ ಖಗೋಳ ಜೀವವಿಜ್ಞಾನ, ಖಗೋಳವಿಜ್ಞಾನ, ಹವಾಮಾನಶಾಸ್ತ್ರ, ಭೌತಶಾಸ್ತ್ರ ಮತ್ತು ಇತರ ಕ್ಷೇತ್ರಗಳಿಗೆ ಸಂಬಂಧಿಸಿದ ವೈಜ್ಞಾನಿಕ ಪ್ರಯೋಗಗಳನ್ನು ನಡೆಸಲಾಗುತ್ತದೆ.
  6. ISS ಸುಮಾರು 93 ನಿಮಿಷಗಳಲ್ಲಿ ಭೂಮಿಯನ್ನು ಒಂದು ಸುತ್ತು ಸುತ್ತುತ್ತದೆ ಮತ್ತು ದಿನಕ್ಕೆ 15.5 ಕಕ್ಷೆಗಳನ್ನು ಪೂರ್ಣಗೊಳಿಸುತ್ತದೆ.
  7.  ಬಾಹ್ಯಾಕಾಶ ನೌಕೆಯ ವ್ಯವಸ್ಥೆಗಳ ಪರೀಕ್ಷೆಗಾಗಿ ನಿಲ್ದಾಣವು ವಿಶಿಷ್ಟ ವಾತಾವರಣವನ್ನು ಒದಗಿಸುತ್ತದೆ. ಇಂತಹ ವ್ಯವಸ್ಥೆಗಳು ಚಂದ್ರ ಮತ್ತು ಮಂಗಳದ ಯಾತ್ರೆಗೆ ಅಗತ್ಯವಾಗಿವೆ.
  8. ಇದರೊಂದಿಗೆ ರಷ್ಯಾದ ಬಾಹ್ಯಾಕಾಶ ಸಂಸ್ಥೆಯು 2025 ರಲ್ಲಿ ತನ್ನದೇ ಆದ ‘ಕಕ್ಷೀಯ ಕೇಂದ್ರ’(ISS)ವನ್ನು ಪ್ರಾರಂಭಿಸಲು ಯೋಜಿಸುತ್ತಿದೆ, ಒಂದು ವೇಳೆ ಇದು ಆಸ್ಪತ್ರೆ ಬಂದರೆ ಅಂತರಿಕ್ಷದಲ್ಲಿನ ಒಂಬತ್ತನೇ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವಾಗಲಿದೆ.

 

 

ವಿಷಯಗಳು: ಸಂರಕ್ಷಣೆ, ಪರಿಸರ ಮಾಲಿನ್ಯ ಮತ್ತು ಅವನತಿ, ಪರಿಸರ ಪ್ರಭಾವದ ಮೌಲ್ಯಮಾಪನ.

ಸ್ವಚ್ಛ ಗಂಗಾ ನಿಧಿ (CGF):


(Clean Ganga funds)

ಸಂದರ್ಭ:

ರಾಷ್ಟ್ರೀಯ ಸ್ವಚ್ಛ ಗಂಗಾ ಮಿಷನ್ (National Mission for Clean Ganga – NMCG) ಅನ್ನು ಗಂಗಾ ನದಿಯನ್ನು ಸ್ವಚ್ಛ ಗೊಳಿಸಲು  2014 ರಲ್ಲಿ ₹ 20,000 ಕೋಟಿ ಕಾರ್ಯಕ್ರಮವಾಗಿ ರೂಪಿಸಲಾಗಿದ್ದು ಇಲ್ಲಿಯವರೆಗೆ ಗಂಗಾ ನದಿಯನ್ನು ಸ್ವಚ್ಛ ಗೊಳಿಸಲು ₹ 15,074 ಕೋಟಿ ಹಂಚಿಕೆ ಮಾಡಲಾಗಿದೆ.

  1. ಇದರಲ್ಲಿ ಕೇವಲ, ₹.10,972 ಕೋಟಿ, ಅಥವಾ ಮೊತ್ತದ ಮೂರನೇ ಎರಡರಷ್ಟು ಹಣವನ್ನು ಹಣಕಾಸು ಸಚಿವಾಲಯವು ರಾಷ್ಟ್ರೀಯ ಸ್ವಚ್ಛ ಗಂಗಾ ಮಿಷನ್ ಗೆ ಬಿಡುಗಡೆ ಮಾಡಿದೆ.
  2. ಇದರ ಅಡಿಯಲ್ಲಿ ಉತ್ತರ ಪ್ರದೇಶಕ್ಕೆ ಅತಿ ಹೆಚ್ಚು 3,535 ಕೋಟಿ ರೂ., ನಂತರದ ಸ್ಥಾನದಲ್ಲಿ ಬಿಹಾರ (₹ 2,631 ಕೋಟಿ), ಬಂಗಾಳ (₹ 1,030 ಕೋಟಿ) ಮತ್ತು ಉತ್ತರಾಖಂಡ್ (₹ 1001 ಕೋಟಿ) ನೀಡಲಾಗಿದೆ.

 

ಹಿನ್ನೆಲೆ:

ಈ ಧನಸಹಾಯ ಬಹಳ ಮುಖ್ಯ, ಏಕೆಂದರೆ ಜೂನ್ 30 ರವರೆಗೆ NMCG ಹತ್ತಿರ ನಮಾಮಿ ಗಂಗೆ ಕಾರ್ಯಕ್ರಮದಡಿ ಕೇವಲ 1,040.63 ಕೋಟಿ ರೂ. ಮೊತ್ತವು ಉಳಿದಿತ್ತು.

ನದಿ ಶುಚಿಗೊಳಿಸುವಿಕೆ ಮತ್ತು ಪುನರುಜ್ಜೀವನಗೊಳಿಸುವಿಕೆ, ದೇಶೀಯ ಒಳಚರಂಡಿ, ಕೈಗಾರಿಕಾ ತ್ಯಾಜ್ಯ ಮತ್ತು ಘನತ್ಯಾಜ್ಯವನ್ನು ನದಿಗೆ ಬಿಡುವ ಮೊದಲು ಸಂಸ್ಕರಣೆ ಮತ್ತು ನಿರ್ವಹಣೆ, ಪರಿಸರ ಹರಿವು, ಗ್ರಾಮೀಣ ನೈರ್ಮಲ್ಯ, ಅರಣ್ಯೀಕರಣ, ಜೀವವೈವಿಧ್ಯ ಸಂರಕ್ಷಣೆ, ಮತ್ತು ಸಾರ್ವಜನಿಕ ಭಾಗವಹಿಸುವಿಕೆಯಂತಹ ವಿವಿಧ ಮಧ್ಯಸ್ಥಿಕೆಗಳ ಅವಶ್ಯಕತೆಯಿದೆ.

 

ರಾಷ್ಟ್ರೀಯ ಸ್ವಚ್ಚ ಗಂಗಾ ಮಿಷನ್‌ ನ (NMCG)ಕುರಿತು:

NMCGಯನ್ನು, 2011 ರ ಆಗಸ್ಟ್ 12 ರಂದು ಸೊಸೈಟಿ ಗಳ ನೋಂದಣಿ ಕಾಯ್ದೆ 1860 ರ ಅಡಿಯಲ್ಲಿ ಸೊಸೈಟಿಯಾಗಿ ನೋಂದಾಯಿಸಲಾಗಿದೆ.

  1. ಇದು ಪರಿಸರ (ಸಂರಕ್ಷಣೆ) ಕಾಯ್ದೆ (EPA), 1986 ರ ನಿಬಂಧನೆಗಳ ಅಡಿಯಲ್ಲಿ ರೂಪುಗೊಂಡ ರಾಷ್ಟ್ರೀಯ ಗಂಗಾ ನದಿ ಜಲಾನಯನ ಪ್ರಾಧಿಕಾರದ (NGRBA) ಅನುಷ್ಠಾನಗೊಳಿಸುವ ಅಂಗವಾಗಿ ಕಾರ್ಯನಿರ್ವಹಿಸಿತು.
  2. ದಯವಿಟ್ಟು ಗಮನಿಸಿ: ‘ರಾಷ್ಟ್ರೀಯ ಗಂಗಾ ನದಿ ಜಲಾನಯನ ಪ್ರಾಧಿಕಾರ’ (NGRBA) ವನ್ನು, ‘ರಾಷ್ಟ್ರೀಯ ಗಂಗಾ ಕೌನ್ಸಿಲ್’ (National Ganga Council – NGC) ಎಂದೂ ಕರೆಯಲ್ಪಡುವ ‘ಗಂಗಾ ನದಿಯ ಪುನರುಜ್ಜೀವನಗೊಳಿಸುವಿಕೆ, ಸಂರಕ್ಷಣೆ ಮತ್ತು ನಿರ್ವಹಣೆಗಾಗಿ ರಾಷ್ಟ್ರೀಯ ಮಂಡಳಿ’ (National Council for Rejuvenation, Protection and Management of River Ganga) ಯ ರಚನೆ ಮಾಡಿದ ನಂತರ, 2016 ರ ಅಕ್ಟೋಬರ್ 7 ರಂದು ‘ರಾಷ್ಟ್ರೀಯ ಗಂಗಾ ನದಿ ಜಲಾನಯನ ಪ್ರಾಧಿಕಾರ’ (NGRBA) ವನ್ನು ವಿಸರ್ಜಿಸಲಾಯಿತು.

ಅಥವಾ

‘ರಾಷ್ಟ್ರೀಯ ಗಂಗಾ ಕೌನ್ಸಿಲ್’ ಎಂದೂ ಕರೆಯಲ್ಪಡುವ ‘ಗಂಗಾ ನದಿಯ ಪುನರುಜ್ಜೀವನಗೊಳಿಸುವಿಕೆ, ಸಂರಕ್ಷಣೆ ಮತ್ತು ನಿರ್ವಹಣೆಗಾಗಿ ರಾಷ್ಟ್ರೀಯ ಮಂಡಳಿ’ ಯ ರಚನೆಯಾದ ನಂತರ ರಾಷ್ಟ್ರೀಯ ಗಂಗಾ ನದಿ ಜಲಾನಯನ ಪ್ರಾಧಿಕಾರವನ್ನು ಅಕ್ಟೋಬರ್ 7, 2016 ರಂದು ವಿಸರ್ಜಿಸಲಾಯಿತು.

 

ವಿಷಯಗಳು:ಆಂತರಿಕ ಭದ್ರತೆಗೆ ಸವಾಲನ್ನು ಒಡ್ಡುವ ಆಡಳಿತ ವಿರೋಧಿ ಅಂಶಗಳ ಪಾತ್ರ.

ಅಸ್ಸಾಂ-ಮಿಜೋರಾಂ ಗಡಿ ವಿವಾದ:


(Assam-Mizoram border dispute)

ಸಂದರ್ಭ:

ಈ ವರ್ಷದ ಜೂನ್ ಆರಂಭದಲ್ಲಿ, ಮಿಜೋರಾಂ-ಅಸ್ಸಾಂ ಗಡಿಯಲ್ಲಿ ಕೈಬಿಟ್ಟ / ಖಾಲಿ ಇರುವ ಎರಡು ಮನೆಗಳನ್ನು ಅಪರಿಚಿತ ವ್ಯಕ್ತಿಗಳು ಸುಟ್ಟುಹಾಕಿದರು, ಈ ಕಾರಣದಿಂದಾಗಿ ಈ ಪರಿವರ್ತನಶೀಲ ಅಂತರ-ರಾಜ್ಯ ಗಡಿಯಲ್ಲಿ ಉದ್ವಿಗ್ನತೆ ಹೆಚ್ಚಾಗಿದೆ.

  1. ಘಟನೆಯ ನಂತರ, ಜುಲೈ ಆರಂಭದಲ್ಲಿ ಎರಡು ನೆರೆಯ ರಾಜ್ಯಗಳ ನಡುವಿನ ಗಡಿ ವಿವಾದಗಳು ಮತ್ತೆ ಉಲ್ಬಣಗೊಂಡವು, ಎರಡೂ ರಾಜ್ಯಗಳು ತಮ್ಮ ಪ್ರದೇಶಗಳನ್ನು ಅತಿಕ್ರಮಣ ಮಾಡಿಕೊಳ್ಳಲಾಗಿದೆ ಎಂದು ಪರಸ್ಪರ ಆರೋಪ ಮಾಡುತ್ತಿವೆ.

 

ವಿವಾದದ ತಕ್ಷಣದ ಕಾರಣ:

ಮಿಜೋರಾಂ ಕಡೆಯ ಪ್ರಕಾರ, ಪ್ರಸ್ತುತ ಬಿಕ್ಕಟ್ಟನ್ನು ಪ್ರಚೋದಿಸಲು ಅಸ್ಸಾಂನ ಜನರು ‘ನೋ ಮ್ಯಾನ್ಸ್ ಲ್ಯಾಂಡ್’ ನಲ್ಲಿನ ಯಥಾಸ್ಥಿತಿಯನ್ನು ಉಲ್ಲಂಘಿಸಿದ್ದಾರೆ. ಕೆಲವು ವರ್ಷಗಳ ಹಿಂದೆ, ಎರಡು ರಾಜ್ಯ ಸರ್ಕಾರಗಳು ‘ಯಾರೊಬ್ಬರ ಸ್ವಾಧೀನಕ್ಕೆ ಒಳಪಡದ ಪ್ರದೇಶ’ಕ್ಕೆ, ಅಂದರೆ ಅಂತರರಾಜ್ಯ ಗಡಿಯಲ್ಲಿ ‘ಯಾವುದೇ ವ್ಯಕ್ತಿಗೆ ಸಂಬಂಧಪಡದ ಭೂಮಿ’ ಯ ಬಗ್ಗೆ ಒಪ್ಪಿಗೆ ಸೂಚಿಸಿದ್ದನ್ನು ಗಮನಿಸಬಹುದು.

 

ವಿವಾದದ ಬಗ್ಗೆ:

1972 ರಲ್ಲಿ, ಮಿಜೋರಾಂ ಅನ್ನು ಅಸ್ಸಾಂನಿಂದ  ಪ್ರತ್ಯೇಕಿಸಲಾಯಿತು ಮತ್ತು ಕೇಂದ್ರಾಡಳಿತ ಪ್ರದೇಶದ ಸ್ಥಾನಮಾನವನ್ನು ನೀಡಲಾಯಿತು ಮತ್ತು 1987 ರಲ್ಲಿ ಪೂರ್ಣ ಪ್ರಮಾಣದ ರಾಜ್ಯವಾಯಿತು.

  1. ಈ ಹಿಂದೆ, ಈ ಎರಡು ರಾಜ್ಯಗಳ ನಡುವೆ 164.6 ಕಿ.ಮೀ ಉದ್ದದ ಅಂತರ-ರಾಜ್ಯ ಗಡಿಯಲ್ಲಿ ಜಗಳಗಳು ನಡೆದಿವೆ, ಇದು ಕೆಲವೊಮ್ಮೆ ಹಿಂಸಾತ್ಮಕ ಘರ್ಷಣೆಗೆ ಕಾರಣವಾಗಿದೆ.
  2. ಈ ವಿವಾದವು ಬ್ರಿಟಿಷ್ ಅವಧಿಯಲ್ಲಿ ಅಂಗೀಕರಿಸಲ್ಪಟ್ಟ ಎರಡು ಅಧಿಸೂಚನೆಗಳಿಂದ ಬಂದಿದೆ:
  3. ಮೊದಲನೆಯದಾಗಿ, 1875 ರಲ್ಲಿ ಬಿಡುಗಡೆಯಾದ ಅಧಿಸೂಚನೆ, ಅದರ ಅಡಿಯಲ್ಲಿ ‘ಲುಶೈ ಹಿಲ್ಸ್’ ಅನ್ನು ‘ಕ್ಯಾಚರ್’ ​​(Cachar) ಮೈದಾನ ಪ್ರದೇಶದಿಂದ ಬೇರ್ಪಡಿಸಲಾಯಿತು.
  4. ಎರಡನೆಯದಾಗಿ, 1933 ರಲ್ಲಿ ಬಿಡುಗಡೆಯಾದ ಅಧಿಸೂಚನೆ, ಅದರ ಮೂಲಕ ಲುಶಾಯ್ ಹಿಲ್ಸ್ ಮತ್ತು ಮಣಿಪುರದ ನಡುವೆ ಗಡಿಯನ್ನು ನಿರ್ಧರಿಸಲಾಯಿತು.

 

ಪ್ರಸ್ತುತ ಪ್ರತಿಪಾದಿಸಲ್ಪಡುತ್ತಿರುವ ಹಕ್ಕುಗಳು ಯಾವುವು?

  1. ‘ಬಂಗಾಳ ಪೂರ್ವ ಗಡಿನಾಡು ನಿಯಂತ್ರಣ ಕಾಯ್ದೆ, 1873’ ಅಡಿಯಲ್ಲಿ 1875 ರಲ್ಲಿ ಹೊರಡಿಸಲಾದ ಅಧಿಸೂಚನೆಯ ಆಧಾರದ ಮೇಲೆ ಈ ಭೂಮಿ ತನಗೆ ಸೇರಿದ್ದಾಗಿದೆ ಎಂದು ಮಿಜೋರಾಂ ಹೇಳಿಕೊಂಡಿದೆ.
  2. ಅಸ್ಸಾಂ ಈ ಭೂಮಿಯನ್ನು ತನ್ನದೇ ಎಂದು ಹೇಳಿಕೊಳ್ಳುತ್ತದೆ ಮತ್ತು ಇದಕ್ಕಾಗಿ ಇದು 1933 ರಲ್ಲಿ ರಾಜ್ಯ ಸರ್ಕಾರವು ಲುಶೈ ಬೆಟ್ಟಗಳನ್ನು ಗುರುತಿಸಿ ನೀಡಿದ ಅಧಿಸೂಚನೆಯನ್ನು ಉಲ್ಲೇಖಿಸುತ್ತದೆ. ಈ ಅಧಿಸೂಚನೆಯಲ್ಲಿ ಮಣಿಪುರದ ಗಡಿಯು ಲುಶಾಯ್ ಹಿಲ್ಸ್, ಅಸ್ಸಾಂನ ಕ್ಯಾಚರ್ ಜಿಲ್ಲೆ ಮತ್ತು ಮಣಿಪುರ ರಾಜ್ಯಗಳ ತ್ರಿವಳಿ ಸ್ಥಳದಿಂದ ಪ್ರಾರಂಭವಾಗುತ್ತದೆ ಎಂದು ಹೇಳಲಾಗಿದೆ. ಮಿಜೋ ಗಳು ಈ ಗಡಿರೇಖೆಯನ್ನು ಸ್ವೀಕರಿಸುವುದಿಲ್ಲ.
  3. ವಸಾಹತುಶಾಹಿ ಅವಧಿಯಲ್ಲಿ, ಮಿಜೋರಾಂ ಅನ್ನು ಅಸ್ಸಾಂನ ಒಂದು ಜಿಲ್ಲೆಯಾದ ಲುಶಾಯ್ ಹಿಲ್ಸ್’ ಎಂದು ಕರೆಯಲಾಗುತ್ತಿತ್ತು.

 

ಆಗಾಗ್ಗೆ ಸಂಭವಿಸುವ ಈ ಘರ್ಷಣೆಗಳಿಗೆ ಕಾರಣಗಳು:

ಈ ಎರಡು ನೆರೆಯ ರಾಜ್ಯಗಳ ನಡುವಿನ ಗಡಿ ಒಂದು ಕಾಲ್ಪನಿಕ ರೇಖೆಯಾಗಿದ್ದು, ಇದು ನದಿಗಳು, ಬೆಟ್ಟಗಳು, ಕಣಿವೆಗಳು ಮತ್ತು ಕಾಡುಗಳ ನೈಸರ್ಗಿಕ ಅಡೆತಡೆಗಳ ಉದ್ದಕ್ಕೂ ಬದಲಾಗುತ್ತದೆ. ಗಡಿ ವಿವಾದಕ್ಕೆ ಅಸ್ಸಾಂ ಮತ್ತು ಮಿಜೋರಾಂ ಜನರು ಈ ಅಸ್ಪಷ್ಟ ಗಡಿಯಲ್ಲಿನ ವ್ಯತ್ಯಾಸಗಳನ್ನು ದೂಷಿಸುತ್ತಾರೆ.

ಗಡಿ ಪ್ರದೇಶಗಳಲ್ಲಿ ವಾಸಿಸುವ ಜನರು, ಸ್ಪಷ್ಟವಾದ ಗಡಿರೇಖೆಯ ಅರಿವಿಲ್ಲದೆ, ಆಗಾಗ್ಗೆ ಗಡಿಯನ್ನು ದಾಟಿ ಇನ್ನೊಂದು ಬದಿಗೆ ಹೋಗುತ್ತಾರೆ.

 


ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:


ತ್ರಿಪುರ ಅಗರ್‌ವುಡ್‌ ನೀತಿ:

(Tripura agarwood policy)

ಇತ್ತೀಚೆಗೆ, ‘ತ್ರಿಪುರ ಅಗರ್ವುಡ್ ನೀತಿ 2021’ ರ ಕರಡು ಬಿಡುಗಡೆಯಾಗಿದೆ.

2025 ರ ವೇಳೆಗೆ ರಾಜ್ಯದಲ್ಲಿ 2000 ಕೋಟಿ ರೂ.ಗಳ ಆರ್ಥಿಕತೆಯನ್ನು ಅಭಿವೃದ್ಧಿಪಡಿಸಲು ರಾಜ್ಯದ ‘ಅಗರ್‌ವುಡ್‌’ (Agarwood) ವ್ಯವಹಾರವನ್ನು ಉತ್ತೇಜಿಸುವುದು ಈ ನೀತಿಯ ಉದ್ದೇಶವಾಗಿದೆ.

100 ಕೋಟಿ ರೂ.ಗಳ ವಿನಿಯೋಗದೊಂದಿಗೆ ಈ ಯೋಜನೆಯನ್ನು ಕೇಂದ್ರ ಸರ್ಕಾರದ ‘ಆತ್ಮನಿರ್ಭರ ಭಾರತ’ ಮತ್ತು ‘ವೊಕಲ್ ಫಾರ್ ಲೋಕಲ್’ ಉಪಕ್ರಮಗಳ ಭಾಗವಾಗಿ ಪ್ರಾರಂಭಿಸಲಾಗಿದೆ.

 

ಅಗರ್ವುಡ್ ಕುರಿತು:

  1. ಅಗರ್ವುಡ್ ಮರದ ಎಣ್ಣೆಯನ್ನು (ಅಕ್ವಿಲೇರಿಯಾ ಮಾಲಾಸೆನ್ಸಿಸ್ – Aquilaria malaccensis) ದ್ರವ ಚಿನ್ನ ಎಂದೂ ಕರೆಯುತ್ತಾರೆ.
  2. ಜಾಗತಿಕ ಮಾರುಕಟ್ಟೆಯಲ್ಲಿ ಒಂದು ಲೀಟರ್ ‘ಅಗರ್ ತೈಲ’ದ ಬೆಲೆ 5 ಲಕ್ಷ ರೂ.
  3. IUCN ಈ ಮರವನ್ನು ‘ತೀವ್ರವಾಗಿ ಅಳಿವಿನಂಚಿನಲ್ಲಿರುವ ವರ್ಗ’ (critically endangered category) ದಲ್ಲಿ ಪಟ್ಟಿ ಮಾಡಿದೆ.
  4. ಅಗರ್ವುಡ್ ಮರವು ಈಶಾನ್ಯ ಭಾರತ, ಬಾಂಗ್ಲಾದೇಶ, ಭೂತಾನ್ ಮತ್ತು ಆಗ್ನೇಯ ಏಷ್ಯಾದ ಕೆಲವು ಭಾಗಗಳಿಗೆ ಸ್ಥಳೀಯವಾಗಿದೆ.
  5. ಇದು ನಿತ್ಯಹರಿದ್ವರ್ಣ ಮರವಾಗಿದ್ದು, ಸುಮಾರು 40 ಮೀಟರ್ ಎತ್ತರಕ್ಕೆ ಬೆಳೆಯುತ್ತದೆ.

 

ನ್ಯಾಷನಲ್ ಸೆಂಟರ್ ಆಫ್ ಎಕ್ಸಲೆನ್ಸ್ ಫಾರ್ ಆನಿಮೇಷನ್, ವಿಷುಯಲ್ ಎಫೆಕ್ಟ್ಸ್, ಗೇಮಿಂಗ್ & ಕಾಮಿಕ್ಸ್:

ಕೇಂದ್ರ ಸರ್ಕಾರವು ಭಾರತೀಯ ಮತ್ತು ಜಾಗತಿಕ ಉದ್ಯಮದ ಅವಶ್ಯಕತೆಗಳನ್ನು ಗಮನದಲ್ಲಿಟ್ಟುಕೊಂಡು, ಭಾರತದಲ್ಲಿ ವಿಶ್ವ ದರ್ಜೆಯ ಪ್ರತಿಭಾ ಪೂಲ್ ಅನ್ನು ರಚಿಸಲು ಅನಿಮೇಷನ್, ವಿಷುಯಲ್ ಎಫೆಕ್ಟ್ಸ್, ಗೇಮಿಂಗ್ ಮತ್ತು ಕಾಮಿಕ್ಸ್ ಗಾಗಿ (National Centre of Excellence for Animation, Visual Effects, Gaming & Comics)  ರಾಷ್ಟ್ರೀಯ ಕೇಂದ್ರ ಸ್ಥಾಪಿಸಲು ನಿರ್ಧರಿಸಿದೆ.

ಭಾರತೀಯ ತಂತ್ರಜ್ಞಾನ ಸಂಸ್ಥೆ ಬಾಂಬೆಯ (IIT-Bombay) ಸಹಯೋಗದೊಂದಿಗೆ ಈ ‘ಸೆಂಟರ್ ಆಫ್ ಎಕ್ಸಲೆನ್ಸ್’ ಅನ್ನು ಸ್ಥಾಪಿಸಲಾಗುವುದು.

 

84 kos ಪರಿಕ್ರಮ ಮಾರ್ಗ:

(84 kos parikrama marg)

ಅಯೋಧ್ಯೆಯ ಸುತ್ತಲಿನ “84 ಕೋಸ್ ಪರಿಕ್ರಮ ಮಾರ್ಗ” ವನ್ನು ರಾಷ್ಟ್ರೀಯ ಹೆದ್ದಾರಿ ಎಂದು ಘೋಷಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಅಯೋಧ್ಯೆಯಲ್ಲಿನ ಎಲ್ಲಾ ಮೂರು ಪರಿಕ್ರಮಗಳು – 5 ಕೋಸ್ (ಸುಮಾರು 15 ಕಿಮೀ), 14 ಕೋಸ್ (42 ಕಿಮೀ), ಮತ್ತು 84 ಕೋಸ್ (ಸುಮಾರು 275 ಕಿಮೀ) – ಭಗವಾನ್ ರಾಮನೊಂದಿಗೆ ಸಂಬಂಧ ಹೊಂದಿವೆ.

ವಾಲ್ಮೀಕಿ ರಾಮಾಯಣದ ಬಾಲ ಕಾಂಡದಲ್ಲಿ ಉಲ್ಲೇಖಿಸಲಾದ ಸನ್ನಿವೇಶದ ಪ್ರಕಾರ, ಅಯೋಧ್ಯೆಯನ್ನು ಈ ಹಿಂದೆ ಕೋಸಲದೇಶ ಎಂದು ಕರೆಯಲಾಗುತ್ತಿತ್ತು ಮತ್ತು ಆರಂಭದಲ್ಲಿ ಇದು 48 ಕೋಸ್ ಗಳಲ್ಲಿ ಹರಡಿತು ಮತ್ತು ನಂತರ ಅದನ್ನು 84 ಕೋಸ್ ಗಳಿಗೆ ವಿಸ್ತರಿಸಲಾಯಿತು.

“84 ಕೋಸ್ ಪರಿಕ್ರಮ”,ಇದು ಕೋಸಲದೇಶದ ಸುತ್ತಲಿನ ಗಡಿಯಾಗಿದ್ದು, ಇದು ರಾಮ ಸಾಮ್ರಾಜ್ಯಕ್ಕೆ ಸಂಬಂಧಿಸಿದ ಎಲ್ಲಾ ಪ್ರಮುಖ ಸ್ಥಳಗಳ ಮೂಲಕ ಹಾದುಹೋಗುತ್ತದೆ.

ಹಿಂದೂ ನಂಬಿಕೆಯ ಪ್ರಕಾರ, ’84 ಕೋಸ್ ಪರಿಕ್ರಮ’ ಒಬ್ಬ ವ್ಯಕ್ತಿಯನ್ನು 84 ಲಕ್ಷ ಯೋನಿಗಳನ್ನು (ಜೀವನ) ಪೂರೈಸುವ ಜವಾಬ್ದಾರಿಯಿಂದ ಮುಕ್ತಗೊಳಿಸುತ್ತದೆ.

ಭಗವಾನ್ ರಾಮನ ಯುಗವಾದ ತ್ರೇತ ಯುಗದಿಂದ ಅಂದರೆ ಸುಮಾರು 1 ಲಕ್ಷ ವರ್ಷಗಳ ಹಿಂದೆ ಅಯೋಧ್ಯೆಯ ಪರಿಕ್ರಮ ಪ್ರಾರಂಭವಾಯಿತು ಎಂದು ಹಿಂದೂಗಳು ನಂಬುತ್ತಾರೆ.

 

ಭಾರತದ ‘ಮೊದಲ ಹಸಿರು ಕೈಗಾರಿಕಾ ನಗರ’ ವಾದ KASEZ:

(KASEZ becomes ‘first green industrial city’ in India)

  1. ಕಾಂಡ್ಲಾ ವಿಶೇಷ ಆರ್ಥಿಕ ವಲಯ (Kandla Special Economic Zone – KASEZ), ಅಸ್ತಿತ್ವದಲ್ಲಿರುವ ಕೈಗಾರಿಕಾ ನಗರಗಳ ವಿಭಾಗದಲ್ಲಿ ‘IGBC ಗ್ರೀನ್ ಸಿಟಿ ರೇಟಿಂಗ್’ ಅಡಿಯಲ್ಲಿ ಪ್ಲ್ಯಾಟಿನಮ್ ರೇಟಿಂಗ್ ಪಡೆದ ಭಾರತದ ಮೊದಲ ಹಸಿರು ಕೈಗಾರಿಕಾ ನಗರವಾಗಿದೆ. ಕಾಂಡ್ಲಾ ವಿಶೇಷ ಆರ್ಥಿಕ ವಲಯವು ದೇಶದ ಅತ್ಯಂತ ಹಳೆಯ ರಫ್ತು ವಲಯವಾಗಿದೆ.
  2.  ಈ ವಿಶೇಷ ಆರ್ಥಿಕ ವಲಯ (SEZ), ಅದರ ಹಸಿರು ಹೊದಿಕೆಯನ್ನು ವಿಸ್ತರಿಸಲು, ಒಂದು ತುಂಡು ಭೂಮಿಯಲ್ಲಿ 68 ಮರದ ಪ್ರಭೇದಗಳನ್ನು ಬೆಳೆಸುವಲ್ಲಿ ಮತ್ತು 28 ಬಗೆಯ ಪಕ್ಷಿಗಳನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ. ಈ ಪ್ರದೇಶವು ಹಿಂದೆ ಯಾವುದೇ ಸಸ್ಯವರ್ಗವಿಲ್ಲದ ಉಪ್ಪು-ಸಮೃದ್ಧ (ಜವುಳು) ಭೂಮಿಯಲ್ಲಿತ್ತು.
  3. ಈ ಪ್ರದೇಶದ ಹೆಚ್ಚಿನ ಮರಗಳನ್ನು ಮಿಯಾವಾಕಿ ಅರಣ್ಯ ವಿಧಾನವನ್ನು ಬಳಸಿಕೊಂಡು 2019 ರ ನಂತರ ನೆಡಲಾಗಿದೆ.
  4.  IGBC ಹಸಿರು ನಗರಗಳ ರೇಟಿಂಗ್ ವ್ಯವಸ್ಥೆಯು ಸ್ವಯಂಪ್ರೇರಿತ ಮತ್ತು ಒಮ್ಮತದ ಆಧಾರಿತ ಕಾರ್ಯಕ್ರಮವಾಗಿದೆ. ಅಸ್ತಿತ್ವದಲ್ಲಿರುವ ನಗರಗಳಲ್ಲಿನ ಪರಿಸರ ಸುಸ್ಥಿರತೆಯನ್ನು ಪರಿಹರಿಸುವ ದೃಷ್ಟಿಯಿಂದ, ಇದು ಭಾರತದಲ್ಲಿ ಈ ರೀತಿಯ ಮೊದಲ ರೇಟಿಂಗ್ ಆಗಿದೆ.
  5. ಭಾರತೀಯ ಕೈಗಾರಿಕಾ ಒಕ್ಕೂಟದ (Confederation of Indian Industry -CII) ಒಂದು ಭಾಗವಾಗಿರುವ ಇಂಡಿಯನ್ ಗ್ರೀನ್ ಬಿಲ್ಡಿಂಗ್ ಕೌನ್ಸಿಲ್ (IGBC) ಅನ್ನು 2001 ರಲ್ಲಿ ಸ್ಥಾಪಿಸಲಾಯಿತು.

    Join our Official Telegram Channel HERE for Motivation and Fast Updates

    Subscribe to our YouTube Channel HERE to watch Motivational and New analysis videos

[ad_2]

Leave a Comment