[ ದೈನಂದಿನ ಪ್ರಚಲಿತ ಘಟನೆಗಳು ] ದಿನಾಂಕ – 22ನೇ ಜುಲೈ 2021 – INSIGHTSIAS

[ad_1]

 

ಪರಿವಿಡಿ:

 ಸಾಮಾನ್ಯ ಅಧ್ಯಯನ ಪತ್ರಿಕೆ 1:

1. ಆದರ್ಶ ಸ್ಮಾರಕ ಯೋಜನೆ.

2. ಐತಿಹಾಸಿಕ ನಗರ ಭೂದೃಶ್ಯ ಯೋಜನೆ.

 

ಸಾಮಾನ್ಯ ಅಧ್ಯಯನ ಪತ್ರಿಕೆ 2:

1. ಸ್ಥಳೀಯೇತರ ಸಂಗಾತಿಗಳಿಗೆ ನಿವಾಸಿ ಪ್ರಮಾಣಪತ್ರಗಳನ್ನು ನೀಡಲಿರುವ ಜಮ್ಮು ಮತ್ತು ಕಾಶ್ಮೀರ ಆಡಳಿತ.

2. ಲೋಕಪಾಲ್ ವಿಚಾರಣಾ ನಿರ್ದೇಶಕ.

3. H5N1 ಏವಿಯನ್ ಇನ್ಫ್ಲುಯೆನ್ಸ ಎಂದರೇನು?

4. ‘ಸ್ಟ್ಯಾಂಡ್ ಅಪ್ ಇಂಡಿಯಾ ಸ್ಕೀಮ್’ ಅನ್ನು 2025 ಕ್ಕೆ ವಿಸ್ತರಿಸಿದ ಕೇಂದ್ರ ಸರ್ಕಾರ.

5. ಸ್ಮೈಲ್ ಯೋಜನೆ.

 

ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:

1. ಆಯುರ್ವೇದ ಉತ್ಪನ್ನಗಳಿಗೆ WHO-GMP / COPP ಪ್ರಮಾಣೀಕರಣ.

2. ಸೈನಿಕರು ಹೊತ್ತು ಸಾಗಿಸಬಹುದಾದ ಯುದ್ಧ ಟ್ಯಾಂಕ್ ನಿರೋಧಕ ಕ್ಷಿಪಣಿ.

3. ಹೊಸ ಪೀಳಿಗೆಯ ಆಕಾಶ್ ಕ್ಷಿಪಣಿ.

4. ಕಮನ್ ಅಮನ್ ಸೇತು.

 


ಸಾಮಾನ್ಯ ಅಧ್ಯಯನ ಪತ್ರಿಕೆ : 1


 

ವಿಷಯಗಳು: ಭಾರತೀಯ ಸಂಸ್ಕೃತಿಯು ಪ್ರಾಚೀನ ಕಾಲದಿಂದ ಆಧುನಿಕ ಕಾಲದವರೆಗೆ ಕಲಾ ಪ್ರಕಾರಗಳು, ಸಾಹಿತ್ಯ ಮತ್ತು ವಾಸ್ತುಶಿಲ್ಪದ ಪ್ರಮುಖ ಅಂಶಗಳನ್ನು ಒಳಗೊಂಡಿದೆ.

ಆದರ್ಶ ಸ್ಮಾರಕ ಯೋಜನೆ:


(Adarsh Smarak Scheme)

ಸಂದರ್ಭ:

ಆಂಧ್ರಪ್ರದೇಶದಲ್ಲಿರುವ,ನಾಗಾರ್ಜುನಕೊಂಡದ ಸ್ಮಾರಕಗಳು, ಸಾಲಿಹುಂಡಂ (Salihundam)ನ ಬೌದ್ಧ ಅವಶೇಷಗಳು ಮತ್ತು ಲೆಪಾಕ್ಷಿಯ ವೀರಭದ್ರ ದೇವಸ್ಥಾನ ಗಳನ್ನು  ಹೆಚ್ಚುವರಿ ಸೌಲಭ್ಯಗಳನ್ನು ಒದಗಿಸುವ ಉದ್ದೇಶದಿಂದ ‘ಆದರ್ಶ್ ಸ್ಮಾರಕ್’ (Adarsh Smarak) ಗಳು ಎಂದು ಗುರುತಿಸಲಾಗಿದೆ.

 

ಆದರ್ಶ್ ಸ್ಮಾರಕ್ ಯೋಜನೆಯ ಬಗ್ಗೆ:

  1. ಸುಧಾರಿತ ಸಂದರ್ಶಕರ ಸೌಲಭ್ಯಗಳನ್ನು, ವಿಶೇಷವಾಗಿ ದೈಹಿಕವಾಗಿ ವಿಕಲಚೇತನರಿಗೆ ಒದಗಿಸಲು ಆದರ್ಶ್ ಸ್ಮಾರಕ್ ಯೋಜನೆಯನ್ನು, 2014 ರಲ್ಲಿ ಪ್ರಾರಂಭಿಸಲಾಯಿತು.
  2. ಅನುಷ್ಠಾನ: ಸಂಸ್ಕೃತಿ ಸಚಿವಾಲಯ.
  3. ಈ ಯೋಜನೆಯಡಿ ಸಂರಕ್ಷಿತ ಸ್ಥಳಗಳಲ್ಲಿ ನಾಗರಿಕ ಸೌಲಭ್ಯಗಳನ್ನು ಹೆಚ್ಚಿಸಲಾಗುತ್ತಿದೆ.
  4. ಭಾರತದ ಪುರಾತತ್ವ ಸಮೀಕ್ಷೆ ಇಲಾಖೆಯು 100 ಸ್ಮಾರಕಗಳನ್ನು ನವೀಕರಣಕ್ಕಾಗಿ / ಉನ್ನತಿಕರಿಸುವುದಕ್ಕಾಗಿ “ಆದರ್ಶ್ ಸ್ಮಾರಕ್” ಎಂದು ಗುರುತಿಸಿದೆ.

 

ಈ ಯೋಜನೆಯ ಉದ್ದೇಶಗಳು:

  1. ಸ್ಮಾರಕಗಳನ್ನು ಸಂದರ್ಶಕರ ಸ್ನೇಹಿಯನ್ನಾಗಿ ಮಾಡುವುದು.
  2. ಈ ಸ್ಮಾರಕಗಳ ಕುರಿತು ವಿವರಣೆ ನೀಡಲು ಆಡಿಯೋ-ವಿಡಿಯೋ ಕೇಂದ್ರಗಳ ಸೌಲಭ್ಯವನ್ನು ಒದಗಿಸುವುದು.
  3. ವಿಭಿನ್ನ ಸಾಮರ್ಥ್ಯದ ಜನರು ಈ ಸ್ಮಾರಕಗಳನ್ನು ಸುಲಭವಾಗಿ ಪ್ರವೇಶಿಸುವಂತೆ ಅನುಕೂಲತೆ ಒದಗಿಸುವುದು.
  4. ಸ್ವಚ್ಛ ಭಾರತ್ ಅಭಿಯಾನವನ್ನು ಅನುಷ್ಠಾನಗೊಳಿಸಲು.

 

ವಿಷಯಗಳು: ಭಾರತೀಯ ಸಂಸ್ಕೃತಿಯು ಪ್ರಾಚೀನ ಕಾಲದಿಂದ ಆಧುನಿಕ ಕಾಲದವರೆಗೆ ಕಲಾ ಪ್ರಕಾರಗಳು, ಸಾಹಿತ್ಯ ಮತ್ತು ವಾಸ್ತುಶಿಲ್ಪದ ಪ್ರಮುಖ ಅಂಶಗಳನ್ನು ಒಳಗೊಂಡಿದೆ.

ಐತಿಹಾಸಿಕ ನಗರ ಭೂದೃಶ್ಯ ಯೋಜನೆ:


(Historic Urban Landscape Project)

 ಸಂದರ್ಭ:

ಮಧ್ಯಪ್ರದೇಶವು ತನ್ನ ರಾಜ್ಯದ ಗ್ವಾಲಿಯರ್ ಮತ್ತು ಓರ್ಚಾ (Orchha) ನಗರಗಳಿಗಾಗಿ  ಯುನೆಸ್ಕೋದ ‘ಐತಿಹಾಸಿಕ ನಗರ ಭೂದೃಶ್ಯ’ (UNESCO’s ‘Historic Urban Landscape) ಯೋಜನೆಯನ್ನು ಪ್ರಾರಂಭಿಸಿದೆ.

  1. ಈ ನಗರಗಳ ಅಭಿವೃದ್ಧಿ ಮತ್ತು ನಿರ್ವಹಣಾ ಯೋಜನೆಯನ್ನು ಯುನೆಸ್ಕೋ ಸಿದ್ಧಪಡಿಸುತ್ತದೆ.
  2. ಇತಿಹಾಸ, ಸಂಸ್ಕೃತಿ, ಆಹಾರ, ಜೀವನಶೈಲಿ, ಆರ್ಥಿಕ ಅಭಿವೃದ್ಧಿ, ಸಮುದಾಯ ಅಭಿವೃದ್ಧಿ ಸೇರಿದಂತೆ ಎಲ್ಲಾ ಅಂಶಗಳನ್ನು ಇದರಲ್ಲಿ ಸೇರಿಸಲಾಗುವುದು.
  3. ಈ ಸ್ಥಳಗಳನ್ನು ಯುನೆಸ್ಕೋ, ಭಾರತ ಸರ್ಕಾರ ಮತ್ತು ಮಧ್ಯಪ್ರದೇಶ ಸರ್ಕಾರಗಳು ಅವುಗಳ ಐತಿಹಾಸಿಕ ಮತ್ತು ಸಾಂಸ್ಕೃತಿಕ ಸುಧಾರಣೆಗೆ ಒತ್ತು ನೀಡುವ ಮೂಲಕ ಜಂಟಿಯಾಗಿ ಅಭಿವೃದ್ಧಿಪಡಿಸಲಿವೆ.

 

ಹಿನ್ನೆಲೆ:

ಮಧ್ಯಪ್ರದೇಶದ ಗ್ವಾಲಿಯರ್ ಮತ್ತು ಓರ್ಚಾವನ್ನು ಯುನೆಸ್ಕೋದ ವಿಶ್ವ ಪರಂಪರೆಯ ನಗರಗಳ ಪಟ್ಟಿ (UNESCOs world heritage cities) ಯಲ್ಲಿ  ಯುನೆಸ್ಕೋ ತನ್ನ ನಗರ ಭೂದೃಶ್ಯ ನಗರ ಕಾರ್ಯಕ್ರಮದಡಿ 2020 ರ ಡಿಸೆಂಬರ್‌ನಲ್ಲಿ ಸೇರ್ಪಡೆಗೊಳಿಸಿತು.

 

ಗ್ವಾಲಿಯರ್:

  1. ಗ್ವಾಲಿಯರ್ ಅನ್ನು 9 ನೇ ಶತಮಾನದಲ್ಲಿ ನಿರ್ಮಿಸಲಾಯಿತು ಮತ್ತು ಅದನ್ನು ಗುರ್ಜರ್ ಪ್ರತಿಹಾರ ರಾಜವಂಶ, ತೋಮರ್, ಬಾಗೆಲ್ ಕಚ್ವಾಹೊ ಮತ್ತು ಸಿಂಧಿಯ ಗಳು ಆಳ್ವಿಕೆ ನಡೆಸಿದ್ದಾರೆ.
  2. ಈ ರಾಜವಂಶಗಳು ನಿರ್ಮಿಸಿ ಬಿಟ್ಟ ಸ್ಮರಣಿಕೆಗಳನ್ನು ಈ ಪ್ರದೇಶದ ಸ್ಮಾರಕಗಳು, ಕೋಟೆಗಳು ಮತ್ತು ಅರಮನೆಗಳಲ್ಲಿ ಹೇರಳವಾಗಿ ಕಾಣಬಹುದಾಗಿದೆ.

 

ಓರ್ಚಾ:

  1. 16 ನೇ ಶತಮಾನದಲ್ಲಿ ಬುಂಡೇಲಾ ಸಾಮ್ರಾಜ್ಯದ ರಾಜಧಾನಿಯಾಗಿದ್ದ ಓರ್ಚಾ ನಗರವು ದೇವಾಲಯಗಳು ಮತ್ತು ಅರಮನೆಗಳಿಗಾಗಿ ಜನಪ್ರಿಯವಾಗಿದೆ.
  2. ಪಟ್ಟಣದ ಪ್ರಸಿದ್ಧ ತಾಣಗಳು ಎಂದರೆ, ರಾಜ್ ಮಹಲ್, ಜಹಾಂಗೀರ್ ಮಹಲ್, ರಾಮರಾಜ ದೇವಸ್ಥಾನ, ರಾಯ್ ಪ್ರವೀಣ್ ಮಹಲ್, ಮತ್ತು ಲಕ್ಷ್ಮೀನಾರಾಯಣ್ ಮಂದಿರಗಳು.

 

‘ಐತಿಹಾಸಿಕ ನಗರ ಭೂದೃಶ್ಯ’ ಅನುಸಂಧಾನದ ಬಗ್ಗೆ:

  1. ಇದನ್ನು 2011 ರಲ್ಲಿ ಯುನೆಸ್ಕೋದ ಸಾಮಾನ್ಯ ಸಮ್ಮೇಳನದಲ್ಲಿ ಅಂಗೀಕರಿಸಲಾಯಿತು.
  2. ಕ್ರಿಯಾತ್ಮಕ ಮತ್ತು ವಿಕಾಸಗೊಳ್ಳುತ್ತಿರುವ ಪರಿಸರದಲ್ಲಿ ಕಂಡುಬರುವ ಪಾರಂಪರಿಕ ಸಂಪನ್ಮೂಲಗಳನ್ನು ನಿರ್ವಹಿಸುವ ಸಮಗ್ರ ವಿಧಾನವಾಗಿ ಯುನೆಸ್ಕೋ ಐತಿಹಾಸಿಕ ನಗರ ಭೂದೃಶ್ಯ (Historic Urban Landscape HUL) ವಿಧಾನವನ್ನು ವ್ಯಾಖ್ಯಾನಿಸುತ್ತದೆ.
  3. ನಿರ್ಮಿತ ಮತ್ತು ನೈಸರ್ಗಿಕ ಪರಿಸರಗಳು, ಸ್ಪಷ್ಟವಾದ ಮತ್ತು ಅಸ್ಪಷ್ಟ ಮೌಲ್ಯಗಳು ಮತ್ತು ಸಮುದಾಯದ ಸಾಂಸ್ಕೃತಿಕ ಮತ್ತು ಸಾಮಾಜಿಕ ಆಚರಣೆಗಳ ನಡುವೆ ಸಂಭವಿಸುವ ನಗರದೊಳಗಿನ ಪರಸ್ಪರ ಸಂಬಂಧಗಳನ್ನು HUL ಅಂಗೀಕರಿಸಿದೆ.
  4. ಈ ವಿಧಾನವು, ನಗರ ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಸ್ಥಳೀಯ, ರಾಷ್ಟ್ರೀಯ, ಪ್ರಾದೇಶಿಕ, ಅಂತರರಾಷ್ಟ್ರೀಯ, ಸಾರ್ವಜನಿಕ ಮತ್ತು ಖಾಸಗಿ ವ್ಯಕ್ತಿಗಳು ಸೇರಿದಂತೆ ವಿವಿಧ ಪಾಲುದಾರರನ್ನು ಒಳಗೊಂಡ ನೀತಿ, ಆಡಳಿತ ಮತ್ತು ನಿರ್ವಹಣಾ ಕಾಳಜಿಗಳನ್ನು ತಿಳಿಸುತ್ತದೆ.

 


ಸಾಮಾನ್ಯ ಅಧ್ಯಯನ ಪತ್ರಿಕೆ : 2


 

ವಿಷಯಗಳು:ಸರ್ಕಾರದ ನೀತಿಗಳು ಮತ್ತು ವಿವಿಧ ಕ್ಷೇತ್ರಗಳಲ್ಲಿನ ಅಭಿವೃದ್ಧಿಯ ಅಡಚಣೆಗಳು ಮತ್ತು ಅವುಗಳ ವಿನ್ಯಾಸ ಮತ್ತು ಅನುಷ್ಠಾನದಿಂದ ಉಂಟಾಗುವ ಸಮಸ್ಯೆಗಳು.

ಸ್ಥಳೀಯೇತರ ಸಂಗಾತಿಗಳಿಗೆ ನಿವಾಸಿ ಪ್ರಮಾಣಪತ್ರಗಳನ್ನು ನೀಡಲಿರುವ ಜಮ್ಮು ಮತ್ತು ಕಾಶ್ಮೀರ ಆಡಳಿತ:


(J&K to grant domicile certificates to non-local spouses)

ಸಂದರ್ಭ:

ಭಾರತದ ಸಂವಿಧಾನದ 309 ನೇ ವಿಧಿ ಮತ್ತು ಜಮ್ಮು ಮತ್ತು ಕಾಶ್ಮೀರ ನಾಗರಿಕ ಸೇವೆಗಳ (ವಿಕೇಂದ್ರೀಕರಣ ಮತ್ತು ನೇಮಕಾತಿ) ಕಾಯ್ದೆ, 2010 (J&K Civil Service (Decentralisation and recruitment) Act, 2010) ರ ಅಡಿಯಲ್ಲಿ ಅಧಿಕಾರವನ್ನು ಚಲಾಯಿಸುವ ಮೂಲಕ, ಜಮ್ಮು ಮತ್ತು ಕಾಶ್ಮೀರದ ಆಡಳಿತವು ಈಗಾಗಲೇ ನಿವಾಸಿ ಪ್ರಮಾಣಪತ್ರ ಹೊಂದಿರುವ ಹಿಂದಿನ ರಾಜ್ಯ ನಿವಾಸಿಗಳ ಸಂಗಾತಿಗಳಿಗೆ ಕೂಡ ನಿವಾಸ ಪ್ರಮಾಣಪತ್ರಗಳನ್ನು ನೀಡುವ ಪ್ರಕ್ರಿಯೆಯನ್ನು ಜಾರಿಗೊಳಿಸಿದೆ.

ಇದು ಜಮ್ಮು ಮತ್ತು ಕಾಶ್ಮೀರದ ಹೊರಗಡೆಗೆ ಮದುವೆಯಾದ ಮಹಿಳೆಯರ ಗಂಡಂದಿರಿಗೆ ಮೊದಲ ಬಾರಿಗೆ ಈ ದಾಖಲೆಗಳನ್ನು(ನಿವಾಸ ಪ್ರಮಾಣಪತ್ರಗಳನ್ನು) ಹೊಂದಲು ಅವಕಾಶ ನೀಡುತ್ತದೆ.

ಹಿನ್ನೆಲೆ:

ಆಗಸ್ಟ್ 5, 2019 ಕ್ಕೆ ಮೊದಲು, ಕೇಂದ್ರವು ಜಮ್ಮು ಮತ್ತು ಕಾಶ್ಮೀರದ ವಿಶೇಷ ಸಾಂವಿಧಾನಿಕ ಸ್ಥಾನಮಾನವನ್ನು ಕೊನೆಗೊಳಿಸಿದ ಸಂದರ್ಭದಲ್ಲಿ, ಜಮ್ಮು ಮತ್ತು ಕಾಶ್ಮೀರದ ಹೊರಗೆ ಮದುವೆಯಾದ ಸ್ಥಳೀಯ ಮಹಿಳೆಯರ ಗಂಡಂದಿರಿಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಆಸ್ತಿ ಖರೀದಿಸಲು ಅಥವಾ ಉದ್ಯೋಗಕ್ಕೆ ಅರ್ಜಿ ಸಲ್ಲಿಸಲು ಯಾವುದೇ ಹಕ್ಕಿರಲಿಲ್ಲ.

 

ತಿದ್ದುಪಡಿ ಮಾಡಲಾದ ನಿವಾಸ ಪ್ರಮಾಣಪತ್ರ ನಿಯಮಗಳು:

  • ಜಮ್ಮು ಮತ್ತು ಕಾಶ್ಮೀರದ ಆಡಳಿತವು, ಮೇ 2020 ರಲ್ಲಿ, ಜೆ & ಕೆ ನಿವಾಸ ಪ್ರಮಾಣಪತ್ರ ನೀಡುವ ಕಾರ್ಯವಿಧಾನದ ನಿಯಮಗಳು 2020,( J&K grant of domicile certificate procedure rules 2020) ಅನ್ನು ಅಧಿಸೂಚಿಸಿತು.
  • ತಿದ್ದುಪಡಿ ಮಾಡಿದ ನಿಯಮಗಳ ಪ್ರಕಾರ,

ಸ್ಥಳೀಯರಲ್ಲದವರು ಆದರೆ ಅರ್ಹರಾದವರೂ ಸಹ ಪ್ರಮಾಣಪತ್ರಕ್ಕಾಗಿ ಅರ್ಜಿ ಸಲ್ಲಿಸಬಹುದಾಗಿದೆ.

  • ಅಲ್ಲದೆ, ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರದಲ್ಲಿ ಯಾವುದೇ ಹುದ್ದೆಗೆ ನೇಮಕಗೊಳ್ಳಲು ನಿವಾಸ ಪ್ರಮಾಣಪತ್ರಗಳನ್ನು ಹೊಂದಿರುವುದನ್ನು ಮೂಲ ಅರ್ಹತಾ ಷರತ್ತನ್ನಾಗಿ ಮಾಡಲಾಗಿದೆ.
  • ಪ್ರಮಾಣಪತ್ರವನ್ನು ನೀಡಲು ವಿಫಲವಾದ ಯಾವುದೇ ಅಧಿಕಾರಿಗೆ ₹ 50,000 ದಂಡ ವಿಧಿಸಲಾಗುತ್ತದೆ. ಆ ದಂಡದ ಮೊತ್ತವನ್ನು ಆತನ ವೇತನದಿಂದ ವಸೂಲಿ ಮಾಡಲಾಗುವುದು.

 

ವಿಷಯಗಳು : ವಿವಿಧ ಸಾಂವಿಧಾನಿಕ ಹುದ್ದೆಗಳಿಗೆ ನೇಮಕಾತಿ,ವಿವಿಧ ಸಾಂವಿಧಾನಿಕ ಸಂಸ್ಥೆಗಳ ಅಧಿಕಾರಗಳು, ಕಾರ್ಯಗಳು ಮತ್ತು ಜವಾಬ್ದಾರಿಗಳು.

ಲೋಕಪಾಲ್ ವಿಚಾರಣಾ ನಿರ್ದೇಶಕ:


(Director of Inquiry for Lokpal)

ಸಂದರ್ಭ:

ಲೋಕಪಾಲ್ ಅಸ್ತಿತ್ವಕ್ಕೆ ಬಂದ ಎರಡು ವರ್ಷಗಳ ನಂತರವೂ, ಕೇಂದ್ರ ಸರ್ಕಾರವು ಇನ್ನೂ ತನಿಖಾ / ವಿಚಾರಣಾ ನಿರ್ದೇಶಕರನ್ನು (director of inquiry) ನೇಮಕ ಮಾಡಬೇಕಿದೆ.

ವಿಚಾರಣೆಯ ನಿರ್ದೇಶಕರು ಯಾರು?

ಲೋಕಪಾಲ್ ಮತ್ತು ಲೋಕಾಯುಕ್ತ ಕಾಯ್ದೆ, 2013 ರ ಪ್ರಕಾರ:

  1. ಭಾರತ ಸರ್ಕಾರದ ಜಂಟಿ ಕಾರ್ಯದರ್ಶಿ ಹುದ್ದೆಗೆ ಕಡಿಮೆಯಿಲ್ಲದಂತೆ ಒಬ್ಬರು ವಿಚಾರಣಾ ನಿರ್ದೇಶಕರು ಇರಬೇಕು.
  2. ಲೋಕಪಾಲರಿಂದ ಕೇಂದ್ರ ವಿಚಕ್ಷಣ ಆಯೋಗಕ್ಕೆ (Central Vigilance Commission -CVC) ಉಲ್ಲೇಖಿಸಲಾದ ಪ್ರಕರಣಗಳ ಪ್ರಾಥಮಿಕ ವಿಚಾರಣೆಗಳನ್ನು ನಡೆಸಲು ವಿಚಾರಣಾ ನಿರ್ದೇಶಕರ (ಅವನು / ಅವಳ) ನ್ನು ಕೇಂದ್ರ ಸರ್ಕಾರವು ನೇಮಕ ಮಾಡುತ್ತದೆ.

 

ಏನಿದು ಪ್ರಕರಣ?

  1. ಭಾರತ ಸರ್ಕಾರವು ತನಿಖಾ ನಿರ್ದೇಶಕರನ್ನು ನೇಮಕ ಮಾಡಿಲ್ಲ, ಆದಾಗ್ಯೂ ಆಯೋಗದಲ್ಲಿ ಪ್ರಾಥಮಿಕ ವಿಚಾರಣೆ ನಡೆಸಲು ಪ್ರಕರಣಗಳನ್ನು ಸ್ವೀಕರಿಸಲಾಗುತ್ತಿದೆ.
  2. ಮಾರ್ಚ್ 2021 ರಂತೆ ನಲವತ್ತೊಂದು ಪ್ರಕರಣಗಳನ್ನು ಪ್ರಾಥಮಿಕ ವಿಚಾರಣೆಗೆ ಸ್ವೀಕರಿಸಲಾಗಿದೆ.

 

ಲೋಕಪಾಲರ ಆಯ್ಕೆ ಸಮಿತಿ:

ಆಯ್ಕೆ ಸಮಿತಿಯ ಶಿಫಾರಸಿನ ಮೇರೆಗೆ ಲೋಕಪಾಲ ಸಮಿತಿಯ ಸದಸ್ಯರನ್ನು ರಾಷ್ಟ್ರಪತಿಗಳು ನೇಮಿಸುತ್ತಾರೆ.

ಆಯ್ಕೆ ಸಮಿತಿಯ ಸಂಯೋಜನೆ:

  1. ಅಧ್ಯಕ್ಷತೆ ಪ್ರಧಾನ ಮಂತ್ರಿ.
  2. ಲೋಕಸಭೆಯ ಸಭಾಪತಿ.
  3. ಲೋಕಸಭೆಯಲ್ಲಿ ಪ್ರತಿಪಕ್ಷದ ನಾಯಕ.
  4. ಭಾರತದ ಮುಖ್ಯ ನ್ಯಾಯಮೂರ್ತಿ ಅಥವಾ ಅವರು ನಾಮನಿರ್ದೇಶನ ಮಾಡಿದ ನ್ಯಾಯಾಧೀಶರು ಮತ್ತು
  5. ಓರ್ವ ಪ್ರಖ್ಯಾತ ನ್ಯಾಯವಾದಿ.

ಲೋಕಪಾಲ್ ಕಾಯ್ದೆ (ತಿದ್ದುಪಡಿ) 2016 ರ ಮೂಲಕ, ಮಾನ್ಯತೆ ಪಡೆದ ಪ್ರತಿಪಕ್ಷದ ನಾಯಕನ ಅನುಪಸ್ಥಿತಿಯಲ್ಲಿ ಲೋಕಸಭೆಯ ಏಕೈಕ ಅತಿದೊಡ್ಡ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಸಮಿತಿಯ ಸದಸ್ಯರನ್ನಾಗಿ ಮಾಡಲು ಅವಕಾಶ ಕಲ್ಪಿಸಲಾಗಿದೆ.

 

2013 ರ ಲೋಕಪಾಲ್ ಕಾಯ್ದೆಯ ಮುಖ್ಯಾಂಶಗಳು:

  1. ಕೇಂದ್ರ ಮಟ್ಟದಲ್ಲಿ ‘ಲೋಕಪಾಲ್’ ಮತ್ತು ರಾಜ್ಯ ಮಟ್ಟದಲ್ಲಿ ‘ಲೋಕಾಯುಕ್ತ’ ಎಂಬ ಭ್ರಷ್ಟಾಚಾರ-ವಿರೋಧಿ ‘ಆಡಳಿತಾತ್ಮಕ ಕುಂದುಕೊರತೆ ವಿಚಾರಣಾ ಅಧಿಕಾರಿ’ (OMBUDSAMAN)ಯನ್ನು ನೇಮಿಸಲು ಈ ಕಾಯ್ದೆಯು ಅವಕಾಶ ನೀಡುತ್ತದೆ.
  2. ಲೋಕಪಾಲ ಅಧ್ಯಕ್ಷರು ಮತ್ತು ಗರಿಷ್ಠ ಎಂಟು ಸದಸ್ಯರನ್ನು ಹೊಂದಿರುವ ಬಹು-ಸದಸ್ಯ ಸಂಸ್ಥೆಯಾಗಿರುತ್ತದೆ.
  3. ಲೋಕಪಾಲದ ಅಧಿಕಾರ ವ್ಯಾಪ್ತಿಯು ಪ್ರಧಾನಿ ಸೇರಿದಂತೆ ಎಲ್ಲಾ ವರ್ಗದ ಸಾರ್ವಜನಿಕ ಸೇವಕರನ್ನು ಒಳಗೊಂಡಿರುತ್ತದೆ. ಆದರೆ ಸಶಸ್ತ್ರ ಪಡೆಗಳು ಲೋಕಪಾಲ್ ವ್ಯಾಪ್ತಿಗೆ ಬರುವುದಿಲ್ಲ.
  4. ಕಾನೂನು ಕ್ರಮ ಜರುಗಿಸುವಾಗಲೂ ಭ್ರಷ್ಟ ವಿಧಾನಗಳಿಂದ ಸ್ವಾಧೀನಪಡಿಸಿಕೊಂಡ ಆಸ್ತಿಯನ್ನು ಲಗತ್ತಿಸಲು ಮತ್ತು ಮುಟ್ಟುಗೋಲು ಹಾಕಿಕೊಳ್ಳಲು ಈ ಕಾಯಿದೆಯು ಅವಕಾಶ ನೀಡುತ್ತದೆ.
  5. ಈ ಕಾಯ್ದೆ ಜಾರಿಗೆ ಬಂದ ಒಂದು ವರ್ಷದೊಳಗೆ ರಾಜ್ಯಗಳು ಲೋಕಾಯುಕ್ತವನ್ನು ರಚಿಸಬೇಕಾಗುತ್ತದೆ.
  6. ಮಾಹಿತಿ ಪೂರೈಕೆದಾರರಾಗಿ (ಶಿಳ್ಳೆ ಹೊಡೆಯುವವರು -whistleblowers) ಕಾರ್ಯನಿರ್ವಹಿಸುವ ಸಾರ್ವಜನಿಕ ಸೇವಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಈ ಕಾಯ್ದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ.

 

ಅಧಿಕಾರಗಳು:

  1. ಲೋಕಪಾಲ ಸಂಸ್ಥೆಯು ಸಿಬಿಐ ಸೇರಿದಂತೆ ಯಾವುದೇ ತನಿಖಾ ಸಂಸ್ಥೆಯನ್ನು ಮೇಲ್ವಿಚಾರಣೆ ಮಾಡುವ ಮತ್ತು ನಿರ್ದೇಶನಗಳನ್ನು ನೀಡುವ ಅಧಿಕಾರವನ್ನು ಹೊಂದಿರುತ್ತದೆ.
  2. ಈ ಕಾಯ್ದೆಯ ಪ್ರಕಾರ, ತನಿಖಾ ಸಂಸ್ಥೆಯೊಂದು (ಕೇಂದ್ರ ಜಾಗೃತ/ ವಿಚಕ್ಷಣಾ ಆಯೋಗ ಅಥವಾ ಸಿಬಿಐನಂತಹ) ತನಿಖೆಯನ್ನು ಪ್ರಾರಂಭಿಸುವ ಮೊದಲೇ ಲೋಕಪಾಲ ಸಂಸ್ಥೆಯು ವ್ಯಕ್ತಿಯೊಬ್ಬರ ವಿರುದ್ಧ ಮೇಲ್ನೋಟದ ಪ್ರಕರಣವಿದ್ದಲ್ಲಿ (prima facie case) ಯಾವುದೇ ಸಾರ್ವಜನಿಕ ಸೇವಕನನ್ನು ಕರೆಸಿಕೊಳ್ಳಬಹುದು ಅಥವಾ ಪ್ರಶ್ನಿಸಬಹುದು. ಲೋಕಪಾಲ್ ಶಿಫಾರಸ್ಸು ಮಾಡಿರುವ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐನ ಯಾವುದೇ ಅಧಿಕಾರಿಯನ್ನು ಲೋಕಪಾಲ್ ಅನುಮೋದನೆ ಇಲ್ಲದೆ ವರ್ಗಾಯಿಸಲಾಗುವುದಿಲ್ಲ.
  3. ಆರು ತಿಂಗಳೊಳಗೆ ತನಿಖಾ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು. ಆದಾಗ್ಯೂ, ಲೋಕಪಾಲ್ ಅಥವಾ ಲೋಕಾಯುಕ್ತರು ಸಮಂಜಸವಾದ ಕಾರಣಗಳನ್ನು ಲಿಖಿತವಾಗಿ ನೀಡಿದ ನಂತರ ತನಿಖೆಯ ಅವಧಿಯನ್ನು ಒಂದು ಸಮಯದಲ್ಲಿ ಆರು ತಿಂಗಳವರೆಗೆ ವಿಸ್ತರಿಸಬಹುದು.
  4. ಲೋಕಪಾಲ್ ಉಲ್ಲೇಖಿಸಿರುವ ಪ್ರಕರಣಗಳನ್ನು ಆಲಿಸಲು ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಲಾಗುವುದು.

 

ವಿಷಯಗಳು: ಆರೋಗ್ಯ, ಶಿಕ್ಷಣ, ಸಾಮಾಜಿಕ ವಲಯ / ಸೇವೆಗಳ ಅಭಿವೃದ್ಧಿ ಮತ್ತು ನಿರ್ವಹಣೆಗೆ ಸಂಬಂಧಿಸಿದ ಮಾನವ ಸಂಪನ್ಮೂಲ ಸಂಬಂಧಿತ ವಿಷಯಗಳು.

H5N1 ಏವಿಯನ್ ಇನ್ಫ್ಲುಯೆನ್ಸ ಎಂದರೇನು?


(What is H5N1 avian influenza?)

ಸಂದರ್ಭ:

ಈ ವರ್ಷ ಭಾರತದಲ್ಲಿ H5N1 ಏವಿಯನ್ ಇನ್ಫ್ಲುಯೆನ್ಸದಿಂದಾಗಿ ಮೊದಲ ಮರಣ ಪ್ರಕರಣ ದಾಖಲಾಗಿದೆ.

ಪಕ್ಷಿ/ಹಕ್ಕಿ ಜ್ವರ ಎಂದರೇನು?

ಇದನ್ನು, ಏವಿಯನ್ ಇನ್ಫ್ಲುಯೆನ್ಸ ಎಂದೂ ಕರೆಯುತ್ತಾರೆ.

  1. ಇದು ಏವಿಯನ್ ಇನ್ಫ್ಲುಯೆನ್ಸ ಟೈಪ್ ಎ ವೈರಸ್‌ (avian influenza Type A)ನಿಂದ ಉಂಟಾಗುವ ರೋಗವಾಗಿದ್ದು, ವಿಶ್ವಾದ್ಯಂತ ಕಾಡು ಪಕ್ಷಿಗಳಲ್ಲಿ ನೈಸರ್ಗಿಕವಾಗಿ ಕಂಡುಬರುತ್ತದೆ.
  2. ಈ ರೋಗಗಳು ಸಾಮಾನ್ಯವಾಗಿ ಪ್ರಪಂಚದಾದ್ಯಂತದ ಕಾಡು ಜಲ ಪಕ್ಷಿಗಳಲ್ಲಿ ಕಂಡುಬರುತ್ತವೆ ಮತ್ತು ದೇಶೀಯ ಕೋಳಿ ಪ್ರಭೇದಗಳು ಮತ್ತು ಇತರ ಪಕ್ಷಿ ಮತ್ತು ಪ್ರಾಣಿ ಪ್ರಭೇದಗಳಿಗೆ ಸೋಂಕು ಉಂಟುಮಾಡುತ್ತವೆ.
  3.  ಈ ವೈರಸ್ ದೇಶೀಯ ಕೋಳಿಗಳಿಗೆ ಸೋಂಕು ತಗುಲಿಸುತ್ತದೆ ಮತ್ತು ಥೈಲ್ಯಾಂಡ್ ಪ್ರಾಣಿಸಂಗ್ರಹಾಲಯಗಳಲ್ಲಿ ಹಂದಿಗಳು, ಬೆಕ್ಕುಗಳು ಮತ್ತು ಹುಲಿಗಳಲ್ಲಿ ಎಚ್ 5 ಎನ್ 1 ಸೋಂಕಿನ ಪ್ರಕರಣಗಳು ಕಂಡುಬಂದಿರುವುದು ವರದಿಯಾಗಿದೆ.
  4. ರೋಗಲಕ್ಷಣಗಳು ಸೌಮ್ಯದಿಂದ ತೀವ್ರವಾದ ಇನ್ಫ್ಲುಯೆನ್ಸದಂತಹ ಅನಾರೋಗ್ಯದವರೆಗೆ ಇವೆ.

 

ವರ್ಗೀಕರಣ:

 ಇನ್ಫ್ಲುಯೆನ್ಸ ಎ ವೈರಸ್‌ಗಳನ್ನು Hemagglutinin (HA) and Neuraminidase (NA) ಎಂಬ ಎರಡು ಮೇಲ್ಮೈ ಪ್ರೋಟೀನ್‌ಗಳ ಆಧಾರದ ಮೇಲೆ ಉಪ ಪ್ರಕಾರಗಳಾಗಿ ವರ್ಗೀಕರಿಸಲಾಗಿದೆ.

ಉದಾಹರಣೆಗೆ, HA 7 ಪ್ರೋಟೀನ್ ಮತ್ತು NA 9 ಪ್ರೋಟೀನ್ ಹೊಂದಿರುವ ವೈರಸ್ ಅನ್ನು ‘H7N9’ ವೈರಸ್ ನ ಉಪ ವಿಭಾಗ (Subtype) ಎಂದು ಕರೆಯಲಾಗುತ್ತದೆ.

  1. ಸುಮಾರು 18 ಎಚ್‌ಎ ಉಪವಿಭಾಗಗಳು ಮತ್ತು 11 ಎನ್‌ಎ (18 HA subtypes and 11 NA subtypes) ಉಪವಿಭಾಗಗಳಿವೆ.
  2. ಈ ಎರಡು ಪ್ರೋಟೀನ್‌ಗಳ ಹಲವಾರು ಸಂಯೋಜನೆಗಳ ಸಾಧ್ಯತೆ ಇದೆ, ಉದಾ., H5N1, H7N2, H9N6, H17N10, ಇತ್ಯಾದಿ.

 

ಹರಡುವಿಕೆ:

  1. ಮಾನವರಲ್ಲಿ ಏವಿಯನ್ ಮತ್ತು ಸ್ವೈನ್ (ಹಂದಿ) ಇನ್ಫ್ಲುಯೆನ್ಸ ಸೋಂಕಿನ ವರದಿಗಳು ಕಂಡು ಬಂದಿವೆ.
  2. ಈ ಸೋಂಕು ಸರಿ ಸುಮಾರು 60% ರಷ್ಟು ಹೆಚ್ಚಿನ ಮರಣ ಪ್ರಮಾಣವನ್ನು ಹೊಂದಿರುವುದರಿಂದ ಇದು ಮಾರಣಾಂತಿಕವಾಗಿದೆ.
  3. ಏವಿಯನ್ ಫ್ಲೂ ವೈರಸ್ ಸೋಂಕಿತ ಪಕ್ಷಿಗಳ ಲಾಲಾರಸ(Saliva), ಲೋಳೆ(Mucus) ಮತ್ತು ಮಲದ (Poop) ಮೂಲಕ ಹರಡುತ್ತದೆ, ಮತ್ತು ಈ ವೈರಸ್ ಮನುಷ್ಯನ ಕಣ್ಣು, ಮೂಗು ಅಥವಾ ಬಾಯಿಯ ಸಂಪರ್ಕಕ್ಕೆ ಸಾಕಷ್ಟು ಪ್ರಮಾಣದಲ್ಲಿ ಬಂದಾಗ ಅಥವಾ ಉಸಿರಾಟದ ಪ್ರಕ್ರಿಯೆಯಲ್ಲಿ ಈ ಸೋಂಕಿತ ವಸ್ತುಗಳನ್ನು ಉಸಿರಾಡುವ ಮೂಲಕ ಮಾನವರು ಸೋಂಕಿಗೆ ಒಳಗಾಗಬಹುದು.

 

ಪಕ್ಷಿ ಜ್ವರದ ವಿವಿಧ ತಳಿಗಳು:

  1. ಚೀನಾದಲ್ಲಿ ಪ್ರಾಣಿಗಳಲ್ಲಿ ಹಲವಾರು ಪಕ್ಷಿ ಜ್ವರಗಳು ಕಂಡುಬಂದಿವೆ, ಆದರೆ ಮಾನವರಲ್ಲಿ ಇನ್ನೂ ದೊಡ್ಡ ಪ್ರಮಾಣದ ಅಥವಾ ಸಾಮೂಹಿಕವಾಗಿ ಏಕಾಏಕಿ ಹರಡುವಿಕೆಯು ಸಂಭವಿಸಿಲ್ಲ.
  2. ಚೀನಾದಲ್ಲಿ ಪಕ್ಷಿ ಜ್ವರದಿಂದ ಉಂಟಾದ ಕೊನೆಯ ಮಾನವ ಸಾಂಕ್ರಾಮಿಕ ರೋಗವು 2016–2017ರ ಅವಧಿಯಲ್ಲಿ H7N9 ವೈರಸ್‌ನಿಂದ ಉಂಟಾಗಿದೆ.
  3. H5N8 ‘ಇನ್ಫ್ಲುಯೆನ್ಸ A’ ವೈರಸ್‌ನ ಉಪವಿಭಾಗವಾಗಿದೆ (ಇದನ್ನು ಪಕ್ಷಿ ಜ್ವರ ವೈರಸ್ ಎಂದೂ ಕರೆಯುತ್ತಾರೆ). H5N8, ಮಾನವರಿಗೆ ಕಡಿಮೆ ಅಪಾಯಕಾರಿಯಾದರೂ, ಕಾಡು ಪಕ್ಷಿಗಳು ಮತ್ತು ದೇಶೀಯ ಕೋಳಿಗಳಿಗೆ ಹೆಚ್ಚು ಮಾರಕವಾಗಿದೆ. ಪ್ಯಾರಿಸ್ ಮೂಲದ ವರ್ಲ್ಡ್ ಆರ್ಗನೈಸೇಶನ್ ಫಾರ್ ಅನಿಮಲ್ ಹೆಲ್ತ್ ಪ್ರಕಾರ, H5N8 ಏವಿಯನ್ ಇನ್ಫ್ಲುಯೆನ್ಸವು ಪಕ್ಷಿಗಳ ಕಾಯಿಲೆಯಾಗಿದ್ದು, ಇದು Type “A” influenza viruse ಗಳಿಂದ ಉಂಟಾಗುತ್ತದೆ, ಇದು ಕೋಳಿಗಳು, ಟರ್ಕಿ ಕೋಳಿಗಳು, ಕ್ವಿಲ್ಗಳು, ಗಿನಿಯಿಲಿ ಮತ್ತು ಬಾತುಕೋಳಿಗಳು ಸೇರಿದಂತೆ ಅನೇಕ ಜಾತಿಗಳ ದೇಶೀಯ ಕೋಳಿಗಳ ಮೇಲೆ ಪರಿಣಾಮ ಬೀರುತ್ತದೆ. , ಹಾಗೆಯೇ ಸಾಕುಪ್ರಾಣಿಗಳು, ಕಾಡು ವಲಸೆ ಹಕ್ಕಿಗಳು ಮತ್ತು ನೀರು ಹಕ್ಕಿಗಳನ್ನು ಒಳಗೊಂಡಂತೆ ಪರಿಣಾಮ ಬೀರುತ್ತದೆ.
  4. ಏಪ್ರಿಲ್ ನಲ್ಲಿ, ಈಶಾನ್ಯ ಚೀನಾದ ಶೆನ್ಯಾಂಗ್ ನಗರದ, ಕಾಡು ಪಕ್ಷಿಗಳಲ್ಲಿ ಹೆಚ್ಚು ರೋಗಕಾರಕ H5N6 ಏವಿಯನ್ ಫ್ಲೂ ಸೋಂಕು ಪತ್ತೆಯಾಗಿದೆ.

 

ವಿಷಯಗಳು: ಸರ್ಕಾರದ ನೀತಿಗಳು ಮತ್ತು ವಿವಿಧ ಕ್ಷೇತ್ರಗಳಲ್ಲಿನ ಅಭಿವೃದ್ಧಿಯ ಅಡಚಣೆಗಳು ಮತ್ತು ಅವುಗಳ ವಿನ್ಯಾಸ ಮತ್ತು ಅನುಷ್ಠಾನದಿಂದ ಉಂಟಾಗುವ ಸಮಸ್ಯೆಗಳು.

‘ಸ್ಟ್ಯಾಂಡ್ ಅಪ್ ಇಂಡಿಯಾ ಸ್ಕೀಮ್’ ಅನ್ನು 2025 ಕ್ಕೆ ವಿಸ್ತರಿಸಿದ ಕೇಂದ್ರ ಸರ್ಕಾರ:


(Centre extends ‘Stand Up India Scheme’ to 2025)

 

ಸಂದರ್ಭ:

ಭಾರತ ಸರ್ಕಾರವು ‘ಸ್ಟ್ಯಾಂಡ್ ಅಪ್ ಇಂಡಿಯಾ ಯೋಜನೆಯ’ (Stand Up India Scheme)  ಅವಧಿಯನ್ನು 2025 ರವರೆಗೆ ವಿಸ್ತರಿಸಿದೆ.

ಯೋಜನೆಯ ಕಾರ್ಯಕ್ಷಮತೆ:

ಕಳೆದ ಐದು ವರ್ಷಗಳಲ್ಲಿ ಈ ಯೋಜನೆಯಡಿ ಬ್ಯಾಂಕುಗಳು 26,204 ಕೋಟಿ ರೂ.ಗಳನ್ನು ಸುಮಾರು 1,16,266 ಫಲಾನುಭವಿಗಳಿಗೆ ವಿತರಿಸಿವೆ.

ಈ ಯೋಜನೆಯಿಂದ 93,094 ಕ್ಕೂ ಹೆಚ್ಚು ಮಹಿಳಾ ಉದ್ಯಮಿಗಳು ಪ್ರಯೋಜನವನ್ನು ಪಡೆದಿದ್ದಾರೆ.

 

‘ಸ್ಟ್ಯಾಂಡ್ ಅಪ್ ಇಂಡಿಯಾ’ ಯೋಜನೆಯ ಬಗ್ಗೆ:

  1. ಆರ್ಥಿಕ ಸಬಲೀಕರಣ ಮತ್ತು ಉದ್ಯೋಗ ಸೃಷ್ಟಿಯ ಮೂಲಕ ತಳಮಟ್ಟದಲ್ಲಿ ಉದ್ಯಮಶೀಲತೆಯನ್ನು ಉತ್ತೇಜಿಸಲು ‘ಸ್ಟ್ಯಾಂಡ್ ಅಪ್ ಇಂಡಿಯಾ’ ಯೋಜನೆಯನ್ನು 2016 ರ ಏಪ್ರಿಲ್ 5ರಂದು ರಂದು ಪ್ರಾರಂಭಿಸಲಾಯಿತು.
  2. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಮಹಿಳಾ ಉದ್ಯಮಿಗಳಂತಹ ಸೀಮಿತ ಸೇವಾ ಪ್ರಯೋಜನಗಳನ್ನು ಪಡೆಯುವವರಿಗೆ ಸಾಂಸ್ಥಿಕ ಸಾಲ ರಚನೆಗಳ ಪ್ರಯೋಜನವನ್ನು ವಿಸ್ತರಿಸುವುದು ಯೋಜನೆಯ ಉದ್ದೇಶವಾಗಿದೆ.
  3. ಕನಿಷ್ಠ ಪಕ್ಷ ಓರ್ವ ಪರಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಮಹಿಳಾ ಸಾಲಗಾರರಿಗೆ ಹೊಸ (Greenfield) ಉದ್ಯಮವನ್ನು ಸ್ಥಾಪಿಸಲು ಪ್ರತಿ ಬ್ಯಾಂಕ್ ಶಾಖೆಗೆ 10 ಲಕ್ಷದಿಂದ 1 ಕೋಟಿ ರೂಪಾಯಿಗಳವರೆಗೆ ಬ್ಯಾಂಕ್ ಸಾಲ ನೀಡುವುದು ಈ ಯೋಜನೆಯ ಉದ್ದೇಶ ವಾಗಿದೆ.
  4. ಇದರ ಅಡಿಯಲ್ಲಿ, SIDBI ಮತ್ತು NABARD ಕಚೇರಿಗಳನ್ನು ಸ್ಟ್ಯಾಂಡ್ ಅಪ್ ಇಂಡಿಯಾ ಸಂಪರ್ಕ ಕೇಂದ್ರಗಳು (Stand-Up Connect Centres -SUCC)ಎಂದು ಹೆಸರಿಸಲಾಗುವುದು.

 

ಯೋಜನೆಯ ಕಾರ್ಯಕ್ಷಮತೆ:

ಐದು ವರ್ಷಗಳ ಹಿಂದೆ ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡ (ST) ಮತ್ತು ಮಹಿಳೆಯರಲ್ಲಿ ಉದ್ಯಮಶೀಲತೆಯನ್ನು ಉತ್ತೇಜಿಸಲು ಭಾರತ ಸರ್ಕಾರ ‘ಸ್ಟ್ಯಾಂಡ್ ಅಪ್ ಇಂಡಿಯಾ ಯೋಜನೆ’ ಅನ್ನು ಪ್ರಾರಂಭಿಸಿತು.

 

ಈ ಯೋಜನೆಯಡಿ ಅರ್ಹತೆ:

  1. 18 ವರ್ಷಕ್ಕಿಂತ ಮೇಲ್ಪಟ್ಟ ಎಸ್‌ಸಿ / ಎಸ್‌ಟಿ ಮತ್ತು / ಮಹಿಳಾ ಉದ್ಯಮಿಗಳು.
  2. ಗ್ರೀನ್‌ಫೀಲ್ಡ್ ಯೋಜನೆಗೆ ಮಾತ್ರ ಯೋಜನೆಯಡಿ ಸಾಲ ನೆರವು ನೀಡಲಾಗುವುದು.
  3. ಸಾಲಗಾರ ವ್ಯಕ್ತಿಯು ಯಾವುದೇ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆಯಲ್ಲಿ ಸುಸ್ತಿದಾರನಾಗಿ (‘ಡೀಫಾಲ್ಟರ್’-ಬಾಕಿ) ಇರಬಾರದು.
  4. ವೈಯಕ್ತಿಕವಲ್ಲದ ಉದ್ಯಮಗಳ ಸಂದರ್ಭದಲ್ಲಿ, SC / ST ಮತ್ತು / ಮಹಿಳಾ ಉದ್ಯಮಿಗಳು ಕನಿಷ್ಠ 51% ಷೇರುಪಾಲು ಮತ್ತು ನಿಯಂತ್ರಣವನ್ನು ಹೊಂದಿರಬೇಕು.

 

ವಿಷಯಗಳು: ಸಮಾಜದ ದುರ್ಬಲ ವರ್ಗದವರಿಗೆ ಯೋಜನೆಗಳು.

ಸ್ಮೈಲ್ ಯೋಜನೆ:


(SMILE Scheme)

 ಸಂದರ್ಭ:

ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು (Ministry of Social Justice and Empowerment) ಸಮಾಜದ ಅಂಚಿನಲ್ಲಿರುವ ವ್ಯಕ್ತಿಗಳಿಗೆ ಬೆಂಬಲ ನೀಡುವುದಕ್ಕಾಗಿ ಈ ಯೋಜನೆಯನ್ನು ರೂಪಿಸಿದೆ.

 

SMILE ಯೋಜನೆಯ ಕುರಿತು:

ಸ್ಮೈಲ್ ಎಂದರೆ ಜೀವನೋಪಾಯ ಮತ್ತು ಉದ್ಯಮಕ್ಕಾಗಿ ಅಂಚಿನಲ್ಲಿರುವ ವ್ಯಕ್ತಿಗಳಿಗೆ ಬೆಂಬಲ” (SMILE stands for Support for Marginalized Individuals) .

ಯೋಜನೆಯ ಗಮನ: ಪುನರ್ವಸತಿ, ವೈದ್ಯಕೀಯ ಸೌಲಭ್ಯಗಳು, ಸಮಾಲೋಚನೆ, ಮೂಲ ದಸ್ತಾವೇಜು, ಶಿಕ್ಷಣ, ಕೌಶಲ್ಯ ಅಭಿವೃದ್ಧಿ, ಆರ್ಥಿಕ ಸಂಪರ್ಕ ಇತ್ಯಾದಿಗಳ ಮೇಲೆ ಯೋಜನೆಯು ಗಮನ ಹರಿಸಿದೆ.

ಇದು, ‘ಭಿಕ್ಷಾಟನೆಯಲ್ಲಿ ತೊಡಗಿರುವ ವ್ಯಕ್ತಿಗಳ ಸಮಗ್ರ ಪುನರ್ವಸತಿಗಾಗಿ ಕೇಂದ್ರ ವಲಯ ಯೋಜನೆ’ ಯ ಉಪ ಯೋಜನೆಯನ್ನು (Central Sector Scheme for Comprehensive Rehabilitation of persons engaged in the act of Begging) ಒಳಗೊಂಡಿದೆ.

ಈ ಯೋಜನೆಯನ್ನು ರಾಜ್ಯ ಸರ್ಕಾರಗಳು / ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳು / ನಗರ ಸ್ಥಳೀಯ ಸಂಸ್ಥೆಗಳು, ಸ್ವಯಂಸೇವಾ ಸಂಸ್ಥೆಗಳು, ಸಮುದಾಯ ಆಧಾರಿತ ಸಂಸ್ಥೆಗಳು (Community Based Organizations -CBOs), ಸಂಸ್ಥೆಗಳು ಮತ್ತು ಇತರರ ಬೆಂಬಲದೊಂದಿಗೆ ಅನುಷ್ಠಾನಗೊಳಿಸಲಾಗುವುದು.

 

ಭಾರತದಲ್ಲಿ ಭಿಕ್ಷುಕರ ಸಂಖ್ಯೆ:

  1. 2011 ರ ಜನಗಣತಿ ಪ್ರಕಾರ ಭಾರತದಲ್ಲಿ ಒಟ್ಟು ಭಿಕ್ಷುಕರ ಸಂಖ್ಯೆ 4,13,670 (2,21,673 ಪುರುಷರು ಮತ್ತು 1,91,997 ಮಹಿಳೆಯರು ಸೇರಿದಂತೆ) ಮತ್ತು 2001 ರ ಜನಗಣತಿಗೆ ಹೋಲಿಸಿದರೆ ಈ ಸಂಖ್ಯೆ ಹೆಚ್ಚಾಗಿದೆ.
  2. ಪಟ್ಟಿಯಲ್ಲಿ ಪಶ್ಚಿಮ ಬಂಗಾಳ ಮೊದಲ ಸ್ಥಾನದಲ್ಲಿದ್ದರೆ ಉತ್ತರ ಪ್ರದೇಶ ಮತ್ತು ಬಿಹಾರ ಕ್ರಮವಾಗಿ ಎರಡು ಮತ್ತು ಮೂರು ಸ್ಥಾನದಲ್ಲಿದೆ. 2011 ರ ಜನಗಣತಿಯ ಪ್ರಕಾರ ಲಕ್ಷದ್ವೀಪ ಕೇವಲ ಇಬ್ಬರು ಭಿಕ್ಷಾಟನೆ ಮಾಡುವ ವ್ಯಕ್ತಿಗಳನ್ನು ಹೊಂದಿದೆ.
  3. ಕೇಂದ್ರಾಡಳಿತ ಪ್ರದೇಶಗಳಲ್ಲಿ, ನವದೆಹಲಿಯು ಅತಿ ಹೆಚ್ಚು ಭಿಕ್ಷುಕರನ್ನು (2,187) ಹೊಂದಿದ್ದರೆ, ಚಂಡೀಗಡದಲ್ಲಿ 121 ಮಂದಿ ಬಿಕ್ಷುಕರು ಇದ್ದಾರೆ.
  4. ಈಶಾನ್ಯ ರಾಜ್ಯಗಳ ಪೈಕಿ, ಅಸ್ಸಾಂ 22,116 ಭಿಕ್ಷುಕರೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ಮಿಜೋರಾಂ 53 ಭಿಕ್ಷುಕರೊಂದಿಗೆ ಅತ್ಯಂತ ಕೆಳಗಿನ ಸ್ಥಾನದಲ್ಲಿದೆ.

 


ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:


ಆಯುರ್ವೇದ ಉತ್ಪನ್ನಗಳಿಗೆ WHO-GMP / COPP ಪ್ರಮಾಣೀಕರಣ:

 ಇಂಡಿಯನ್ ಮೆಡಿಸಿನ್ಸ್ ಫಾರ್ಮಾಸ್ಯುಟಿಕಲ್ ಕಾರ್ಪೊರೇಶನ್ ಲಿಮಿಟೆಡ್ (IMPCL) 18 ಆಯುರ್ವೇದ ಉತ್ಪನ್ನಗಳಿಗೆ WHO-GMP / COPP  ಪ್ರಮಾಣೀಕರಣಕ್ಕಾಗಿ ಅರ್ಜಿ ಸಲ್ಲಿಸಿದೆ.

  1. ಜಿಎಂಪಿ ಎಂಬುದು ಉತ್ತಮ ಉತ್ಪಾದನಾ ಅಭ್ಯಾಸದ ಒಂದು ಸಂಕ್ಷಿಪ್ತ ರೂಪವಾಗಿದೆ (GMP-Good Manufacturing Practice).
  2. WHO GMP ಪ್ರಮಾಣಪತ್ರವು ಹೆಚ್ಚಿನ ಜಾಗತಿಕ ಮಾರುಕಟ್ಟೆಗಳಲ್ಲಿ ಔಷಧಗಳನ್ನು ಮಾರಾಟ ಮಾಡಲು ಔಷಧೀಯ ಕಂಪನಿಗಳಿಗೆ ಕಡ್ಡಾಯವಾಗಿ ಬೇಕಾದ ಪ್ರಮಾಣಪತ್ರವಾಗಿದೆ.
  3.  ಔಷಧೀಯ ಉತ್ಪನ್ನದ ಪ್ರಮಾಣಪತ್ರ (certificate of pharmaceutical product -CPP or CoPP) ವಿಶ್ವ ಆರೋಗ್ಯ ಸಂಸ್ಥೆ (WHO) ಯು ಶಿಫಾರಸು ಮಾಡಿದ ಸ್ವರೂಪದಲ್ಲಿ ನೀಡಲಾದ ಪ್ರಮಾಣಪತ್ರವಾಗಿದೆ.
  4. ಇದು ವಿತರಣೆಯ ದಿನಾಂಕದಿಂದ 3 ವರ್ಷಗಳವರೆಗೆ ಮಾನ್ಯವಾಗಿರುತ್ತದೆ ಮತ್ತು ಅದರ ನಂತರ ಕಂಪನಿಗಳು ನವೀಕರಣಕ್ಕಾಗಿ ಅರ್ಜಿ ಸಲ್ಲಿಸಬಹುದಾಗಿದೆ.

 

ಸೈನಿಕರು ಹೊತ್ತು ಸಾಗಿಸಬಹುದಾದ ಯುದ್ಧ ಟ್ಯಾಂಕ್ ನಿರೋಧಕ ಕ್ಷಿಪಣಿ:

(Man-portable anti-tank guided missile)

  1.  MPATGM- ಇದು ಮೂರನೇ ತಲೆಮಾರಿನ ಆಂಟಿ-ಟ್ಯಾಂಕ್ ಗೈಡೆಡ್ ಕ್ಷಿಪಣಿ (ಯುದ್ಧ ಟ್ಯಾಂಕ್ ನಿರೋಧಕ ಕ್ಷಿಪಣಿ- ATGM) ಯಾಗಿದ್ದು ಇದನ್ನು ಸ್ಥಳೀಯವಾಗಿ ಡಿಆರ್‌ಡಿಒ ಅಭಿವೃದ್ಧಿಪಡಿಸಿದೆ.
  2. ಸೈನಿಕರು ಹೊತ್ತು ಸಾಗಿಸಬಹುದಾದ ಯುದ್ಧ ಟ್ಯಾಂಕ್ ನಿರೋಧಕ ಕ್ಷಿಪಣಿ ಮತ್ತು ಕ್ಷಿಪಣಿ ಲಾಂಚರ್‌ನ ಅಂತಿಮ ಹಂತದ ಪರೀಕ್ಷಾರ್ಥ ಕಾರ್ಯಾಚರಣೆಯನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ನಡೆಸಿದೆ.
  3. ಇದರ ದಾಳಿ ಮಾಡುವ ವ್ಯಾಪ್ತಿ 2.5 ಕಿ.ಮೀ. ಅಂದರೆ ಈ ಕ್ಷಿಪಣಿಯು ಕನಿಷ್ಠ ಅಂತರದ ದಾಳಿಯ ಸಾಮರ್ಥ್ಯವನ್ನು ಹೊಂದಿದೆ.
  4. ಇದನ್ನು ಸೈನಿಕರು ಭುಜದ ಮೇಲೆ ಹೊತ್ತು ಕಾರ್ಯಾಚರಿಸ ಬಹುದಾಗಿದೆ ಮತ್ತು ಇದನ್ನು ಹಗಲು ಮತ್ತು ರಾತ್ರಿ ಸಮಯದಲ್ಲಿಯೂ ಬಳಸಬಹುದು. ಇದು ಕನಿಷ್ಠ ಪಾರ್ಶ್ವ ಕೇಂದ್ರ ಮತ್ತು ಗುರುತ್ವ ಬಲದ ಆಫ್‌ಸೆಟ್ ಹೊಂದಿದೆ.
  5. ಇದು ಬೆಂಕಿಯಲ್ಲಿ ಕೆಲಸ ಮಾಡುತ್ತದೆ ಮತ್ತು ಫೈರ್ ಆಂಡ್ ಫಾರ್ಗೆಟ್ (fire and forget) ತತ್ವದ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತದೆ ಮತ್ತು ಅದು ತನ್ನ ಉನ್ನತಮಟ್ಟದ ಆಕ್ರಮಣ ಸಾಮರ್ಥ್ಯಗಳಿಗೆ ಹೆಸರುವಾಸಿಯಾಗಿದೆ.
  6. ಹಗುರ ತೂಕದ ಈ ಕ್ಷಿಪಣಿ ವ್ಯವಸ್ಥೆಯನ್ನು ಸಂಪೂರ್ಣ ದೇಶೀಯವಾಗಿ ಅಭಿವೃದ್ಧಿಪಡಿಸಲಾಗಿದೆ. ಗುರಿ ನಿರ್ದೇಶಿತವಾದ ಈ ಕ್ಷಿಪಣಿಯನ್ನು ಯುದ್ಧ ಟ್ಯಾಂಕ್‌ಗಳ ಮೇಲೆ ದಾಳಿ ನಡೆಸಲು ಬಳಸಬಹುದಾಗಿದೆ.

ಹೊಸ ಪೀಳಿಗೆಯ ಆಕಾಶ್ ಕ್ಷಿಪಣಿ:

(New Generation Akash Missile)

  1.  ಆಕಾಶ್-NG ಹೊಸ ತಲೆಮಾರಿನ ಭೂಮಿಯಿಂದ ಆಕಾಶಕ್ಕೆ ( Surface to Air Missile ) ದಾಳಿ ಮಾಡುವ ಕ್ಷಿಪಣಿ ವ್ಯವಸ್ಥೆಯಾಗಿದೆ.
  2. ಇದು 60 ಕಿ.ಮೀ ವರೆಗಿನ ದಾಳಿ ಸಾಮರ್ಥ್ಯವನ್ನು ಹೊಂದಿದೆ ಮತ್ತು 2.5 ಮ್ಯಾಕ್ ವರೆಗಿನ ವೇಗದಲ್ಲಿ ಹಾರಾಟ ನಡೆಸುತ್ತದೆ.
  3. ಇದನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯು ಅಭಿವೃದ್ಧಿಪಡಿಸಿದೆ.

 

ಕಮನ್ ಅಮನ್ ಸೇತು:

(Kaman Aman Setu)

  1.  ಇತ್ತೀಚೆಗೆ ಫ್ಲ್ಯಾಗ್ ಮೀಟಿಂಗ್ (ಧ್ವಜ ಸಭೆ) ನಡೆಸಿದ ಭಾರತ ಮತ್ತು ಪಾಕಿಸ್ತಾನ ಸೇನೆಗಳು ಕಮನ್ ಅಮನ್ ಸೇತುದಲ್ಲಿ ಸಿಹಿತಿಂಡಿಗಳನ್ನು ವಿನಿಮಯ ಮಾಡಿಕೊಂಡವು.
  2. ಕಮನ್ ಅಮಾನ್ ಸೇತು ಉತ್ತರ ಕಾಶ್ಮೀರದ ಉರಿಯಲ್ಲಿದೆ.
  3. ಕಮನ್ ಅಮನ್ ಸೇತು – ಭಾರತ ಮತ್ತು ಪಾಕಿಸ್ತಾನ ನಡುವಿನ ಸ್ನೇಹ ಸೇತುವೆಯಾಗಿದ್ದು, ಇದು ಉರಿ ಜಿಲ್ಲೆಯಲ್ಲಿನ ಭಾರತ-ಪಾಕಿಸ್ತಾನ ಗಡಿಯ ಕೊನೆಯ ಪ್ರದೇಶವಾಗಿದೆ.

 

[ad_2]

Leave a Comment