[ ದೈನಂದಿನ ಪ್ರಚಲಿತ ಘಟನೆಗಳು ] ದಿನಾಂಕ – 20ನೇ ಜುಲೈ 2021 – INSIGHTSIAS

[ad_1]

 

ಪರಿವಿಡಿ:

 ಸಾಮಾನ್ಯ ಅಧ್ಯಯನ ಪತ್ರಿಕೆ 2:

1. ಸಂಸತ್ತಿನ ಮುಂಗಾರು ಅಧಿವೇಶನ.

2. ಭಾರತೀಯ ಕಾರ್ಮಿಕ ಸಮ್ಮೇಳನ (ILC).

3. ಏನದು ಮಂಕಿ ಬಿ ವೈರಸ್?

 

ಸಾಮಾನ್ಯ ಅಧ್ಯಯನ ಪತ್ರಿಕೆ 3:

1. ನಾಸಾದ ಹೊಸ ಬಾಹ್ಯಾಕಾಶ ನೌಕೆ NEA ಸ್ಕೌಟ್.

2. ರಾಷ್ಟ್ರೀಯ ರಾಜಧಾನಿ ಪ್ರದೇಶ ಮತ್ತು ಅದರ ಅಕ್ಕ-ಪಕ್ಕದ ಪ್ರದೇಶಗಳಲ್ಲಿನ ವಾಯು ಗುಣಮಟ್ಟ ನಿರ್ವಹಣೆ ಆಯೋಗದ ಮಸೂದೆ, 2021.

3. ಚೀನಾದ ರಾಷ್ಟ್ರೀಯ ಇಂಗಾಲದ ಹೊರಸೂಸುವಿಕೆ ವ್ಯಾಪಾರ ಮಾರುಕಟ್ಟೆ.

 

ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:

1. ಸ್ಪೇಸ್ ರೈಸ್ (ಬಾಹ್ಯಾಕಾಶ ಅಕ್ಕಿ) ಎಂದರೇನು?

2. ಡಿಜಿಟಲ್ ಭೂ ಬಳಕೆಯ ದತ್ತಾಂಶದ ಸಂಗ್ರಹವನ್ನು ಪೂರ್ಣಗೊಳಿಸಿದ ಮೊದಲ ಖಂಡ.

3. ಡಿಜಿಟಲ್ ಫಲವತ್ತತೆ ನಕ್ಷೆಯನ್ನು ಪಡೆದ ಬಿಹಾರದ ಕಿಶಂಗಂಜ್ .

4. ವಿಂಟೇಜ್ ಕಾರುಗಳ ನೋಂದಣಿಗೆ ನಿಯಮಗಳು.

 


ಸಾಮಾನ್ಯ ಅಧ್ಯಯನ ಪತ್ರಿಕೆ : 2


 

ವಿಷಯಗಳು: ಸಂಸತ್ತು ಮತ್ತು ರಾಜ್ಯ ಶಾಸಕಾಂಗಗಳು – ರಚನೆ, ಕಾರ್ಯವೈಖರಿ, ವ್ಯವಹಾರದ ನಡಾವಳಿಗಳು, ಅಧಿಕಾರಗಳು ಮತ್ತು ಸವಲತ್ತುಗಳು ಮತ್ತು ಇವುಗಳಿಂದ ಉಂಟಾಗುವ ಸಮಸ್ಯೆಗಳು.

ಸಂಸತ್ತಿನ ಮುಂಗಾರು ಅಧಿವೇಶನ:


(Monsoon session of Parliament)

 ಸಂದರ್ಭ:

ಇತ್ತೀಚೆಗೆ, ‘ಸಂಸತ್ತಿನ ಮಾನ್ಸೂನ್ / ಮುಂಗಾರು ಅಧಿವೇಶನ’ ಪ್ರಾರಂಭವಾಗಿದೆ. 

  1. ಹಿಂದಿನ ಅಧಿವೇಶನದ ಅವಧಿಯನ್ನು ಮಾರ್ಚ್ 25 ರಂದು ಮೊಟಕುಗೊಳಿಸಲಾಯಿತು ಮತ್ತು ಸಂಸತ್ ಕಲಾಪವನ್ನು ಅನಿರ್ದಿಷ್ಟಾವಧಿಗೆ (sine die) ಮುಂದೂಡಲಾಯಿತು, ಸಾಂವಿಧಾನಿಕ ಮಾನದಂಡಗಳ ಪ್ರಕಾರ ಮುಂದಿನ ಸಂಸತ್ ಅಧಿವೇಶನವನ್ನು ಆರು ತಿಂಗಳ ಅವಧಿಯೊಳಗೆ ನಡೆಸಬೇಕು ಎಂಬ ನಿಬಂಧನೆ ಇದೆ. ಈ ಅವಧಿ ಸೆಪ್ಟೆಂಬರ್ 14 ಕ್ಕೆ ಕೊನೆಗೊಳ್ಳುತ್ತದೆ.

 

ಸಂವಿಧಾನದ ನಿಬಂಧನೆ ಏನು?

  1. ಭಾರತೀಯ ಸಂವಿಧಾನದ 85 ನೇ ವಿಧಿ ಪ್ರಕಾರ, ಸಂಸತ್ತಿನ ಎರಡು ಅಧಿವೇಶನಗಳ ನಡುವೆ ಆರು ತಿಂಗಳಿಗಿಂತ ಹೆಚ್ಚು ಅಂತರವಿರಬಾರದು.
  2. ದಯವಿಟ್ಟು ಗಮನಿಸಿ:ಸಂಸತ್ತಿನ ಅಧಿವೇಶನಗಳನ್ನು ಯಾವಾಗ ಮತ್ತು ಎಷ್ಟು ದಿನಗಳವರೆಗೆ ನಡೆಸಬೇಕು ಎಂದು ಸಂವಿಧಾನವು ನಿರ್ದಿಷ್ಟಪಡಿಸಿಲ್ಲ. ಅಥವಾ
  3. ಸಂವಿಧಾನವು, ಸಂಸತ್ತು ಯಾವಾಗ ಅಥವಾ ಎಷ್ಟು ದಿನಗಳವರೆಗೆ ಸಭೆ ಸೇರಬೇಕು ಎಂಬುದರ ಕುರಿತು ಸ್ಪಷ್ಟನೆ ನೀಡಿಲ್ಲ.
  4. ಸಂಸತ್ತಿನ ಎರಡು ಅಧಿವೇಶನಗಳ ನಡುವಿನ ಗರಿಷ್ಠ ಮಧ್ಯಂತರವು ಆರು ತಿಂಗಳುಗಳನ್ನು ಮೀರಬಾರದು. ಅಂದರೆ, ಸಂಸತ್ತು ವರ್ಷಕ್ಕೆ ಎರಡು ಬಾರಿಯಾದರೂ ಸಭೆ ನಡೆಸುವುದು ಕಡ್ಡಾಯ.
  5. ಸಂಸತ್ತಿನ ‘ಅಧಿವೇಶನ’ ಎನ್ನುವುದು ಸದನದ ಮೊದಲ ಸಭೆ ಮತ್ತು ಅದರ ಅಧಿಕಾರಾವಧಿಯ ನಡುವಿನ ಅವಧಿಯಾಗಿದೆ.

 

ಸಂಸತ್ ಅಧಿವೇಶನವನ್ನು ಕರೆಯುವವರು ಯಾರು?

  1. ವಿಧಿ 85 ರ ಪ್ರಕಾರ, ರಾಷ್ಟ್ರಪತಿಗಳು ಕಾಲಕಾಲಕ್ಕೆ, ಪ್ರತಿ ಸಂಸತ್ತಿನ ಅಧಿವೇಶನವನ್ನು ಕರೆಯಬಹುದು. ಹೀಗಾಗಿ, ಸರ್ಕಾರದ ಶಿಫಾರಸಿನ ಮೇರೆಗೆ ಸಂಸತ್ತಿನ ಅಧಿವೇಶನವನ್ನು ಕರೆಯಬಹುದು ಮತ್ತು ಅಧಿವೇಶನದ ದಿನಾಂಕ ಮತ್ತು ಅವಧಿಯನ್ನು ಸರ್ಕಾರವೇ ನಿರ್ಧರಿಸುತ್ತದೆ.
  2. ಮುಖ್ಯವಾಗಿ, ಸಂಸದೀಯ ವ್ಯವಹಾರಗಳ ಕ್ಯಾಬಿನೆಟ್ ಸಮಿತಿಯು ಸಂಸತ್ ಅಧಿವೇಶನವನ್ನು ಕರೆಯುವ ನಿರ್ಧಾರವನ್ನು ತೆಗೆದುಕೊಳ್ಳುತ್ತದೆ. ಈ ಸಮಿತಿಯ ನಿರ್ಧಾರವನ್ನು ರಾಷ್ಟ್ರಪತಿಗಳು ಔಪಚಾರಿಕವಾಗಿ ಮಂಡಿಸುತ್ತಾರೆ. ಹೀಗೆ ರಾಷ್ಟ್ರಪತಿಗಳ ಹೆಸರಿನಲ್ಲಿ ಸಂಸತ್ ಸದಸ್ಯರು ಅಧಿವೇಶನದಲ್ಲಿ ಭಾಗಿಯಾಗುತ್ತಾರೆ.
  3. ಪ್ರಧಾನಮಂತ್ರಿಯ ನೇತೃತ್ವದ ಕಾರ್ಯಕಾರಿಣಿಗೆ ಸಂಸತ್ತಿನ ಅಧಿವೇಶನವನ್ನು ಕರೆಯುವ ಬಗ್ಗೆ ರಾಷ್ಟ್ರಪತಿಗೆ ಸಲಹೆ ನೀಡುವ ಅಧಿಕಾರವಿದೆ. ಒಟ್ಟಿನಲ್ಲಿ ಸಂಸತ್ತಿನ ಅಧಿವೇಶನವನ್ನು ಕರೆಯುವ ಅಧಿಕಾರವು ಮೂಲತಃ ಸರ್ಕಾರದಲ್ಲಿ ಅಂತರ್ಗತವಾಗಿದೆ.

 

ಸಂಸತ್ತಿನ ಅಧಿವೇಶನವು ಏಕೆ ಇಷ್ಟೊಂದು ಪ್ರಮುಖವಾಗಿದೆ?

  1. ಕಾನೂನು/ಕಾಯ್ದೆಯ ರಚನೆಯು ಸಂಸತ್ತು ಯಾವಾಗ ಸಭೆ ಸೇರುತ್ತದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ.
  2. ಅಲ್ಲದೆ, ಸರ್ಕಾರದ ಕಾರ್ಯವೈಖರಿಗಳ ಕೂಲಂಕಷ ಪರಿಶೀಲನೆ ಮತ್ತು ರಾಷ್ಟ್ರೀಯ ವಿಷಯಗಳ ಬಗ್ಗೆ ಸಮಗ್ರವಾಗಿ ಚರ್ಚಿಸುವುದು ಉಭಯ ಸದನಗಳು ಅಧಿವೇಶನದಲ್ಲಿದ್ದಾಗ ಮಾತ್ರ ಸಾಧ್ಯಗುತ್ತದೆ.
  3. ಸಂಸತ್ತಿನ ಕಾರ್ಯ ಚಟುವಟಿಕೆಗಳಲ್ಲಿ ಉತ್ತಮವಾಗಿ ಮತ್ತು ಸಕ್ರಿಯವಾಗಿ ಭಾಗವಹಿಸುವುದು ಉತ್ತಮ ಪ್ರಜಾಪ್ರಭುತ್ವದ ಪ್ರಮುಖ ಲಕ್ಷಣವಾಗಿದೆ. ಅಂದರೆ, ಉತ್ತಮವಾಗಿ ಕಾರ್ಯನಿರ್ವಹಿಸುವ ಪ್ರಜಾಪ್ರಭುತ್ವಕ್ಕೆ ಸಂಸತ್ತಿನ ಕಾರ್ಯಚಟುವಟಿಕೆಯ ಅಗತ್ಯವಿದೆ.

 

ವಿಷಯಗಳು: ಅಭಿವೃದ್ಧಿ ಪ್ರಕ್ರಿಯೆಗಳು ಮತ್ತು ಅಭಿವೃದ್ಧಿ ಉದ್ಯಮ NGOಗಳು, ಸ್ವಸಹಾಯ ಗುಂಪುಗಳು, ವಿವಿಧ ಗುಂಪುಗಳು ಮತ್ತು ಸಂಘಗಳು, ದಾನಿಗಳು, ದತ್ತಿ, ಸಾಂಸ್ಥಿಕ ಮತ್ತು ಇತರ ಮಧ್ಯಸ್ಥಗಾರರ ಪಾತ್ರ.

ಭಾರತೀಯ ಕಾರ್ಮಿಕ ಸಮ್ಮೇಳನ (ILC):


(Indian Labour Conference (ILC)

 ಸಂದರ್ಭ:

ಇತ್ತೀಚೆಗೆ ‘ಭಾರತೀಯ ಮಜ್ದೂರ್ ಸಂಘ’ವು ಪ್ರಧಾನಿ ನರೇಂದ್ರ ಮೋದಿಯವರಿಗೆ ‘ಭಾರತೀಯ ಕಾರ್ಮಿಕ ಸಮ್ಮೇಳನ’ವನ್ನು (ಐಎಲ್‌ಸಿ) ಆಯೋಜಿಸುವಂತೆ ಒತ್ತಾಯಿಸಿದೆ.

ಭಾರತೀಯ ಕಾರ್ಮಿಕ ಸಮ್ಮೇಳನದ (Indian Labour Conference – ILC)   ಕೊನೆಯ ಸಮ್ಮೇಳನ 2015 ರಲ್ಲಿ ನಡೆದಿತ್ತು.

 

ಭಾರತೀಯ ಕಾರ್ಮಿಕರ ಸಮ್ಮೇಳನ’ವನ್ನು ಆಯೋಜಿಸುವ ಅಗತ್ಯತೆ:

  1. “ದೇಶದಲ್ಲಿ ಸರ್ಕಾರ, ಉದ್ಯೋಗದಾತ ಮತ್ತು ಕಾರ್ಮಿಕರ’ ತ್ರಿಪಕ್ಷೀಯ (Tripartism) ಸಂಪ್ರದಾಯವನ್ನು ಉಳಿಸಿಕೊಳ್ಳಲು ಭಾರತೀಯ ಕಾರ್ಮಿಕ ಸಮಾವೇಶಗಳು ಅವಶ್ಯಕ.
  2. ತ್ರಿಪಕ್ಷೀಯ’ ವ್ಯವಸ್ಥೆಗೆ ಸಂಬಂಧಿಸಿದ ಕಾರ್ಯವಿಧಾನವನ್ನು ಬಲಪಡಿಸಲು ‘ಅಂತರರಾಷ್ಟ್ರೀಯ ಕಾರ್ಮಿಕ ಸಂಸ್ಥೆ’ (ILO) ಯ ಕನ್ವೆನ್ಷನ್ ಸಂಖ್ಯೆ 144 ಅನ್ನು ಭಾರತದ ಸಂಸತ್ತು ಅಂಗೀಕರಿಸಿದ ಕಾರಣ, ‘ಭಾರತೀಯ ಕಾರ್ಮಿಕರ ಸಮ್ಮೇಳನವನ್ನು’ ಆಯೋಜಿಸುವುದು ಭಾರತದ ಕಾನೂನುಬದ್ಧ ಬಾಧ್ಯತೆಯಾಗಿದೆ.

 

ILC ಕುರಿತು:

  1. ಭಾರತೀಯ ಕಾರ್ಮಿಕ ಸಮ್ಮೇಳನ (ILC) ದೇಶದ ಕಾರ್ಮಿಕ ವರ್ಗಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಸರ್ಕಾರಕ್ಕೆ ಸಲಹೆ ನೀಡಲು ‘ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ’ದ ಉನ್ನತ ಮಟ್ಟದ’ ತ್ರಿಪಕ್ಷೀಯ ಸಮಾಲೋಚನಾ ಸಮಿತಿಯಾಗಿದೆ.
  2. ‘ಭಾರತೀಯ ಕಾರ್ಮಿಕ ಸಮ್ಮೇಳನದ’ ಸದಸ್ಯರಲ್ಲಿ, ಎಲ್ಲಾ 12 ಕೇಂದ್ರ ಕಾರ್ಮಿಕ ಸಂಘ ಸಂಸ್ಥೆಗಳು, ಉದ್ಯೋಗದಾತರ ಕೇಂದ್ರ ಸಂಸ್ಥೆಗಳು, ಎಲ್ಲಾ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಮತ್ತು ಕಾರ್ಯಸೂಚಿಗೆ ಸಂಬಂಧಿಸಿದ ಕೇಂದ್ರ ಸಚಿವಾಲಯಗಳು / ಇಲಾಖೆಗಳು ಸೇರಿವೆ.
  3. ಭಾರತೀಯ ಕಾರ್ಮಿಕರ ಸಮ್ಮೇಳನದ ಮೊದಲ ಸಭೆ (ಆಗ ಇದನ್ನು ತ್ರಿಪಕ್ಷೀಯ ರಾಷ್ಟ್ರೀಯ ಕಾರ್ಮಿಕ ಸಮ್ಮೇಳನ ಎಂದು ಕರೆಯಲಾಗುತ್ತಿತ್ತು) 1942 ರಲ್ಲಿ ನಡೆಯಿತು ಮತ್ತು ಈವರೆಗೆ ಒಟ್ಟು 46 ಅಧಿವೇಶನಗಳು ನಡೆದಿವೆ.

 

ಪ್ರಾಮುಖ್ಯತೆ:

ಭಾರತೀಯ ಕಾರ್ಮಿಕ ಸಮ್ಮೇಳನದಲ್ಲಿ, ಕಾರ್ಮಿಕ ಕಲ್ಯಾಣವನ್ನು ಸುಧಾರಿಸುವ ಉದ್ದೇಶದಿಂದ ಪ್ರಮುಖ ವಿಷಯಗಳ ಕುರಿತು ವಿಚಾರ-ವಿಮರ್ಶೆ ಮಾಡಲಾಗುತ್ತದೆ. ಈ ವೇದಿಕೆಯ ಮೂಲಕ ಇದರಲ್ಲಿ ಕನಿಷ್ಠ ವೇತನ ನಿಗದಿಪಡಿಸುವಿಕೆಯ ವ್ಯವಸ್ಥೆ ಮತ್ತು ಉದ್ಯೋಗಕ್ಕಾಗಿ ನಿಂತಿರುವ ಆದೇಶಗಳನ್ನು ಒಳಗೊಂಡಂತೆ ಹಲವಾರು ಗಮನಾರ್ಹ ಕೊಡುಗೆಗಳನ್ನು ನೀಡಲಾಗಿದೆ.

 

ವಿಷಯಗಳು: ಆರೋಗ್ಯ, ಶಿಕ್ಷಣ, ಸಾಮಾಜಿಕ ವಲಯ / ಸೇವೆಗಳ ಅಭಿವೃದ್ಧಿ ಮತ್ತು ನಿರ್ವಹಣೆಗೆ ಸಂಬಂಧಿಸಿದ ಮಾನವ ಸಂಪನ್ಮೂಲ ಸಂಬಂಧಿತ ವಿಷಯಗಳು.

ಏನದು ಮಂಕಿ ಬಿ ವೈರಸ್?


(What is the Monkey B virus?)

 ಸಂದರ್ಭ:

ಇತ್ತೀಚೆಗೆ, ಮಂಕಿ ಬಿ ವೈರಸ್ (Monkey B virus- BV) ನೊಂದಿಗೆ ಮೊದಲ ಮಾನವ ಸೋಂಕಿನ ಪ್ರಕರಣವು ಚೀನಾದಲ್ಲಿ ವರದಿಯಾಗಿದೆ.

 

ಮಂಕಿ ಬಿ  ವೈರಸ್’ ಬಗ್ಗೆ:

  1.  ಈ ವೈರಸ್ ಅನ್ನು ಮೊದಲ ಬಾರಿಗೆ 1932 ರಲ್ಲಿ ಗುರುತಿಸಲಾಯಿತು. 2020 ರ ಹೊತ್ತಿಗೆ, ಈ ವೈರಸ್ ಸೋಂಕಿಗೆ 50 ಜನರು ಮಾತ್ರ ಒಳಗಾಗಿದ್ದಾರೆ, ಮತ್ತು ಅದರಲ್ಲಿ 21 ಜನರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
  2. ಇದು ಮಕಾಕ್ ಪ್ರಭೇದದ ‘ಮಕಾಕ್ಸ್’ (Macaques) ನಲ್ಲಿ ಕಂಡುಬರುವ ‘ಎಂಜೂಟಿಕ್’ (Enzootic)ಆಲ್ಫಾಹೆರ್ಪ್ಸ್ ವೈರಸ್’ (Alphaherpes Virus) ಆಗಿದೆ.
  3. ‘ಬಿ ವೈರಸ್’,ಮಾನವರಲ್ಲಿ ತೀವ್ರವಾದ ರೋಗಕಾರಕತೆಯನ್ನು ಪ್ರದರ್ಶಿಸುವ ಏಕೈಕ ‘ಓಲ್ಡ್-ವರ್ಲ್ಡ್-ಮಂಕಿ ಹರ್ಪಿಸ್ವೈರಸ್’ ಆಗಿದೆ.
  4. ಪ್ರಸ್ತುತ, ಬಿ ವೈರಸ್ ಸೋಂಕಿನಿಂದ ರಕ್ಷಿಸಲು ಯಾವುದೇ ಲಸಿಕೆಗಳು ಲಭ್ಯವಿಲ್ಲ.

 

ರೋಗ ಪ್ರಸಾರ:

 ಈ ವೈರಸ್ ಸೋಂಕಿನ ಹರಡುವಿಕೆ, ಇದು ಕೋತಿಗಳೊಂದಿಗಿನ ನೇರ ಸಂಪರ್ಕದ ಮೂಲಕ ಅಥವಾ ಅವುಗಳ ದೇಹದಿಂದ ಸ್ರವಿಸುವ ದ್ರವಗಳ ವಿನಿಮಯದ ಮೂಲಕ ಸಂಭವಿಸಬಹುದು.

 

ಲಕ್ಷಣಗಳು:

  1. ಸೋಂಕಿನ ಆರಂಭದಲ್ಲಿ ಜ್ವರ ಮತ್ತು ಶೀತ, ಸ್ನಾಯು ನೋವು, ಆಯಾಸ ಮತ್ತು ತಲೆನೋವಿನಂತಹ ಜ್ವರ ತರಹದ ಲಕ್ಷಣಗಳು ಕಂಡುಬರುತ್ತವೆ.
  2. ಅದರ ನಂತರ, ಸೋಂಕಿತ ವ್ಯಕ್ತಿಯ ದೇಹದ ಮೇಲಿನ ಗಾಯದ ಸ್ಥಳದಲ್ಲಿ, ಅಥವಾ ಕೋತಿಯೊಂದಿಗೆ ಸಂಪರ್ಕಕ್ಕೆ ಬಂದ ದೇಹದ ಭಾಗದ, ಸ್ಥಳದಲ್ಲಿ ಸಣ್ಣ ಗುಳ್ಳೆಗಳು ರೂಪುಗೊಳ್ಳಬಹುದು.
  3.  ಈ ಸೋಂಕಿನ ಇತರ ಕೆಲವು ಲಕ್ಷಣಗಳು ಉಸಿರಾಟದ ತೊಂದರೆ, ವಾಕರಿಕೆ ಮತ್ತು ವಾಂತಿ, ಹೊಟ್ಟೆ ನೋವು ಮತ್ತು ಬಿಕ್ಕಳಿಕೆ ಇತ್ಯಾದಿಗಳು.
  4. ರೋಗವು ಮುಂದುವರೆದಂತೆ, ಮೆದುಳು ಮತ್ತು ಬೆನ್ನುಹುರಿಯಲ್ಲಿ ವೈರಸ್ ಹರಡುತ್ತದೆ ಮತ್ತು ಉರಿಯೂತಕ್ಕೆ ಕಾರಣವಾಗುತ್ತದೆ. ಇದರ ಪರಿಣಾಮವಾಗಿ, ಗಾಯದ ಸ್ಥಳದ ಬಳಿ ನೋವು, ಮರಗಟ್ಟುವಿಕೆ, ತುರಿಕೆ ಮುಂತಾದ ನರವೈಜ್ಞಾನಿಕ ಮತ್ತು ಉರಿಯೂತದ ಲಕ್ಷಣಗಳು ಬೆಳೆಯುತ್ತವೆ ಮತ್ತು ಸ್ನಾಯುಗಳು ಸರಿಯಾಗಿ ಕೆಲಸ ಮಾಡುವುದನ್ನು ನಿಲ್ಲಿಸುತ್ತವೆ.

 


ಸಾಮಾನ್ಯ ಅಧ್ಯಯನ ಪತ್ರಿಕೆ : 3


 

ವಿಷಯಗಳು: ಮಾಹಿತಿ ತಂತ್ರಜ್ಞಾನ, ಬಾಹ್ಯಾಕಾಶ, ಕಂಪ್ಯೂಟರ್, ರೊಬೊಟಿಕ್ಸ್, ನ್ಯಾನೊ-ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ಬೌದ್ಧಿಕ ಆಸ್ತಿ ಹಕ್ಕುಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಜಾಗೃತಿ.

ನಾಸಾದ ಹೊಸ ಬಾಹ್ಯಾಕಾಶ ನೌಕೆ NEA ಸ್ಕೌಟ್:


(NASA’s new spacecraft NEA Scout)

ಸಂದರ್ಭ:

‘ಎನ್ಇಎ ಸ್ಕೌಟ್’(NEA Scout), ‘ಆರ್ಟೆಮಿಸ್ I ’(Artemis I)  ನೊಂದಿಗೆ ಕಳುಹಿಸಲಾದ ಹಲವಾರು ‘ಬಾಹ್ಯಾಕಾಶ ಉಪಕರಣ’ಗಳಲ್ಲಿ ಒಂದಾಗಿದೆ.  ‘ಆರ್ಟೆಮಿಸ್ I’ ಅನ್ನು ಬಹುಶಃ ಈ ವರ್ಷದ ನವೆಂಬರ್‌ನಲ್ಲಿ ಉಡಾವಣೆ ಮಾಡಲಾಗುವುದು.

ಆರ್ಟೆಮಿಸ್ I’ ಎಂದರೇನು?

ಆರ್ಟೆಮಿಸ್ I, ಓರಿಯನ್ ಬಾಹ್ಯಾಕಾಶ ನೌಕೆ ಮತ್ತು ಬಾಹ್ಯಾಕಾಶ ಉಡಾವಣಾ ವ್ಯವಸ್ಥೆ (SLS) ರಾಕೆಟ್‌ನ ಮಾನವರಹಿತ ಪರೀಕ್ಷಾರ್ಥ ಹಾರಾಟವಾಗಿದೆ.

ಆರ್ಟೆಮಿಸ್ ಕಾರ್ಯಕ್ರಮದಡಿಯಲ್ಲಿ, ನಾಸಾ 2024 ರಲ್ಲಿ ಮೊದಲ ಮಹಿಳೆಯನ್ನು ಚಂದ್ರನ ಮೇಲೆ ಇಳಿಸಲು ಮತ್ತು 2030 ರ ವೇಳೆಗೆ ‘ಸುಸ್ಥಿರ ಚಂದ್ರ ಪರಿಶೋಧನೆ ಕಾರ್ಯಕ್ರಮಗಳನ್ನು’ (sustainable lunar exploration programs) ಸ್ಥಾಪಿಸುವ ಗುರಿಯನ್ನು ಹೊಂದಿದೆ.

 

NEA ಸ್ಕೌಟ್ ಎಂದರೇನು?

  1. NEA ಎಂದರೆ ಭೂಮಿಯ ಸಮೀಪವಿರುವ ಕ್ಷುದ್ರಗ್ರಹ’ ಅಥವಾ ನಿಯರ್ ಅರ್ಥ ಅಸ್ಟ್ರಾಯ್ಡ್ (Near-Earth Asteroid- NEA) ಎಂದರ್ಥ.
  2. NEA ಸ್ಕೌಟ್ ಒಂದು ಚಿಕಣಿ ಬಾಹ್ಯಾಕಾಶ ನೌಕೆಯಾಗಿದ್ದು, ಇದು ಗಾತ್ರದಲ್ಲಿ ಒಂದು ‘ದೊಡ್ಡ ಶೂ ಪೆಟ್ಟಿಗೆಗೆ ಸಮನಾಗಿದೆ.
  3. ಇದರ ಮುಖ್ಯ ಉದ್ದೇಶ,‘ಸಮೀಪ-ಭೂಮಿಯ ಪರಿಭ್ರಮಣೆ ಮಾಡುವ’ ಕ್ಷುದ್ರಗ್ರಹಗಳ ಮೂಲಕ ಹಾರಾಟ ಮಾಡುವುದು ಮತ್ತು ಡೇಟಾವನ್ನು ಸಂಗ್ರಹಿಸುವುದು ಆಗಿದೆ.
  4. ಇದು ಅಮೆರಿಕದ ಮೊದಲ ಅಂತರಗ್ರಹ ಮಿಷನ್ ಆಗಲಿದೆ. ಇದರಲ್ಲಿ ವಿಶೇಷ ‘ಸೋಲಾರ್ ಸೈಲ್ ಪ್ರೊಪಲ್ಷನ್’(solar sail propulsion) ಅನ್ನು ಬಳಸಲಾಗಿದೆ.

 

NEA ಸ್ಕೌಟ್ ತನ್ನ ಚಲನೆಗೆ ಸೌರ ಶಕ್ತಿಯನ್ನು ಹೇಗೆ ಬಳಸುತ್ತದೆ?

ಈ ಕ್ಯೂಬ್‌ಸ್ಯಾಟ್‌ನಲ್ಲಿ, ಮಾನವ ಕೂದಲುಗಿಂತ ತೆಳ್ಳಗಿರುವ ಮತ್ತು ರಾಕೆಟ್‌ಬಾಲ್ ಅಂಕಣದ ಗಾತ್ರದ ಅಲ್ಯೂಮಿನಿಯಂ-ಲೇಪಿತ ಪ್ಲಾಸ್ಟಿಕ್ ಫಿಲ್ಮ್‌ನ ‘ಛಾವಣಿ’ ಅಥವಾ ‘ನೌಕಾಯಾನ’ ಆರೋಹಿಸಲು ಸ್ಟೇನ್‌ಲೆಸ್ ಸ್ಟೀಲ್ ಮಿಶ್ರಲೋಹದ ‘ಬೂಮ್ಸ್’ / ಸ್ಟೇನ್‌ಲೆಸ್ ಸ್ಟೀಲ್ ಅಲಾಯ್ ಬೂಮ್‌ಗಳನ್ನು  ಬಳಸಲಾಗುತ್ತದೆ.

  1. ದೊಡ್ಡ-ಪ್ರದೇಶದ ನೌಕಾಯಾನವು ಸೂರ್ಯನ ಬೆಳಕನ್ನು ಪ್ರತಿಬಿಂಬಿಸುವ ಮೂಲಕ ಒತ್ತಡವನ್ನು (Thrust) ಉಂಟುಮಾಡುತ್ತದೆ.
  2. ಫೋಟಾನ್ ಎಂದು ಕರೆಯಲ್ಪಡುವ ಸೌರ ಬೆಳಕಿನ ಶಕ್ತಿಯುತ ಕಣಗಳು ಸೌರ ರೂಟ್‌ನಿಂದ / ನೌಕಾಯಾನದಿಂದ ಹಿಂದಕ್ಕೆ ಪುಟಿಯುತ್ತವೆ ಮತ್ತು ಆ ಮೂಲಕ ನಿಧಾನವಾದ, ಆದರೆ ಸ್ಥಿರವಾದ ತಳ್ಳುವಿಕೆಯನ್ನು (Push) ನೀಡುತ್ತವೆ.
  3. ಸಮಯದ ಜೊತೆಯಲ್ಲಿ, ಈ ನಿರಂತರ ಚಾಲನಾ ಶಕ್ತಿ, ಅಥವಾ ಒತ್ತಡವು ಬಾಹ್ಯಾಕಾಶ ನೌಕೆಯನ್ನು ಅತಿ ವೇಗಕ್ಕೆ ವೇಗಗೊಳಿಸಲು ಸಾಧ್ಯವಾಗುತ್ತದೆ, ಈ ಕ್ಯೂಬ್‌ಸ್ಯಾಟ್ ಬಾಹ್ಯಾಕಾಶಕ್ಕೆ ವೇಗವನ್ನು ಪಡೆಯಲು ಮತ್ತು ಅದರ ಗುರಿ ಕ್ಷುದ್ರಗ್ರಹವನ್ನು ತಲುಪಲು ಅನುವು ಮಾಡಿಕೊಡುತ್ತದೆ.

 

ಈ ಕಾರ್ಯಾಚರಣೆಯ ಮಹತ್ವ:

  1. NEA ಸ್ಕೌಟ್ ‘ಭೂಮಿಯ ಸಮೀಪವಿರುವ ಕ್ಷುದ್ರಗ್ರಹ’ ದ ಮೂಲಕ ಹಾರಲು ಸುಮಾರು ಎರಡು ವರ್ಷಗಳ ಸುದೀರ್ಘ ಪ್ರಯಾಣವನ್ನು ಕೈಗೊಳ್ಳಲಿದೆ.
  2. ಅದರ ಗಮ್ಯಸ್ಥಾನವನ್ನು ತಲುಪಿದ ನಂತರ, ಈ ಬಾಹ್ಯಾಕಾಶ ನೌಕೆ ಕ್ಷುದ್ರಗ್ರಹದ ಚಿತ್ರಗಳನ್ನು ಸೆರೆಹಿಡಿಯುತ್ತದೆ,ನಮ್ಮ ಸೌರವ್ಯೂಹದಲ್ಲಿ ನೆಲೆಗೊಂಡಿರುವ ಭೂಮಿಯ ಸಮೀಪದ ಮತ್ತು ಸಣ್ಣ ಗಾತ್ರದ, ಆದರೆ ಪ್ರಮುಖ ಕ್ಷುದ್ರಗ್ರಹಗಳ ಬಗ್ಗೆ ನಮ್ಮ ತಿಳುವಳಿಕೆಯನ್ನು ಹೆಚ್ಚಿಸಲು ವಿಜ್ಞಾನಿಗಳು ಇದನ್ನು ಅಧ್ಯಯನ ಮಾಡುತ್ತಾರೆ.
  3. ಈ ಕ್ಷುದ್ರಗ್ರಹಗಳ ಗುಣಲಕ್ಷಣಗಳನ್ನು ಅರ್ಥಮಾಡಿಕೊಳ್ಳುವ ಮೂಲಕ, ಘರ್ಷಣೆಯ ಸಂದರ್ಭದಲ್ಲಿ ಸಂಭವನೀಯ ಹಾನಿಯನ್ನು ಕಡಿಮೆ ಮಾಡಲು ತಂತ್ರಗಳನ್ನು ಅಭಿವೃದ್ಧಿಪಡಿಸಲು ಇವು ಸಹಾಯ ಮಾಡುತ್ತವೆ.

 

ವಿಷಯಗಳು: ಸಂರಕ್ಷಣೆ, ಪರಿಸರ ಮಾಲಿನ್ಯ ಮತ್ತು ಅವನತಿ, ಪರಿಸರ ಪ್ರಭಾವದ ಮೌಲ್ಯಮಾಪನ.

ರಾಷ್ಟ್ರೀಯ ರಾಜಧಾನಿ ಪ್ರದೇಶ ಮತ್ತು ಅದರ ಅಕ್ಕ-ಪಕ್ಕದ ಪ್ರದೇಶಗಳಲ್ಲಿನ ವಾಯು ಗುಣಮಟ್ಟ ನಿರ್ವಹಣೆ ಆಯೋಗದ ಮಸೂದೆ, 2021:


(The Commission for Air Quality Management in the National Capital Region and Adjoining Areas Bill, 2021)

 

ಸಂದರ್ಭ:

ಪ್ರಸ್ತುತ, ಸಂಸತ್ತಿನಲ್ಲಿ ನಡೆಯುತ್ತಿರುವ ಮಾನ್ಸೂನ್ ಅಧಿವೇಶನದಲ್ಲಿ, ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ (MoEF) ದ ಮೂಲಕ ‘ರಾಷ್ಟ್ರೀಯ ರಾಜಧಾನಿ ಪ್ರದೇಶ ಮತ್ತು ಅದರ ಅಕ್ಕ-ಪಕ್ಕದ  ಪ್ರದೇಶಗಳಲ್ಲಿನ ವಾಯು ಗುಣಮಟ್ಟ ನಿರ್ವಹಣೆ ಆಯೋಗದ ಮಸೂದೆ, 2021’(‘The Commission for Air Quality Management in National Capital Region and Adjoining Areas Bill, 2021’) ಮಂಡಿಸಲಾಗುವುದು.

  1. ಮಸೂದೆಯು ಆಯೋಗವನ್ನು ಸ್ಥಾಪಿಸುತ್ತದೆ ಮತ್ತು ಕಳೆದ ವರ್ಷ ಘೋಷಿಸಿದ ಸುಗ್ರೀವಾಜ್ಞೆಯನ್ನು ಬದಲಾಯಿಸುತ್ತದೆ.
  2. ಮಸೂದೆಯಲ್ಲಿ, ಹಲವಾರು ಸುತ್ತಿನ ಮಾತುಕತೆಗಳ ನಂತರ, ಕಠಿಣ ದಂಡ ಮತ್ತು ಕೃಷಿ ತ್ಯಾಜ್ಯದ ಸುಡುವಿಕೆಗೆ ಜೈಲು ಶಿಕ್ಷೆ ವಿಧಿಸುವ ಬಗ್ಗೆ ರೈತರ ಕಳವಳವನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ.

 

ಮಸೂದೆಯಲ್ಲಿ ಮಾಡಿದ ಬದಲಾವಣೆಗಳು:

  1. ಮಸೂದೆಯಲ್ಲಿ, ಸರ್ಕಾರವು ಕೃಷಿ ತ್ಯಾಜ್ಯವನ್ನು ಸುಡುವುದನ್ನು ನಿರಪರಾಧವನ್ನಾಗಿ ಮಾಡಿದೆ ಅಥವಾ ನ್ಯಾಯಸಮ್ಮತಗೊಳಿಸಿದೆ ಮತ್ತು ಸಂಭವನೀಯ ಜೈಲು ಶಿಕ್ಷೆಯ ಷರತ್ತನ್ನು ಹಿಂತೆಗೆದುಕೊಂಡಿದೆ.
  2. ಆದಾಗ್ಯೂ, ರೈತರು ಸೇರಿದಂತೆ ಯಾವುದೇ ವ್ಯಕ್ತಿ ಕೃಷಿ ತ್ಯಾಜ್ಯವನ್ನು ಸುಡುವಾಗ ಸಿಕ್ಕಿಬಿದ್ದರೆ ಅವರ ಮೇಲೆ ‘ಪರಿಸರ ಪರಿಹಾರ ಶುಲ್ಕ’ ವಿಧಿಸಲಾಗುತ್ತದೆ.

 

‘ವಾಯು ಗುಣಮಟ್ಟ ನಿರ್ವಹಣಾ ಆಯೋಗ’ ಕುರಿತು:

2020 ರ ಅಕ್ಟೋಬರ್‌ನಲ್ಲಿ ‘ರಾಷ್ಟ್ರೀಯ ರಾಜಧಾನಿ ಪ್ರದೇಶ ಮತ್ತು ಅದರ ಪಕ್ಕದ ಪ್ರದೇಶಗಳಲ್ಲಿ ವಾಯು ಗುಣಮಟ್ಟ ನಿರ್ವಹಣೆಗೆ ಸುಗ್ರೀವಾಜ್ಞೆ’, 2020  (‘Commission for Air Quality Management in National Capital Region and Adjoining Areas Ordinance’) ಅಡಿಯಲ್ಲಿ ವಾಯು ಗುಣಮಟ್ಟ ನಿರ್ವಹಣಾ ಆಯೋಗವನ್ನು (CAQM) ರಚಿಸಲಾಯಿತು.

  1. ಈ ಆಯೋಗವು ‘ಶಾಸನಬದ್ಧ ಪ್ರಾಧಿಕಾರ’ ಆಗಿರುತ್ತದೆ.
  2. ಇದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ದೆಹಲಿ, ಪಂಜಾಬ್, ಹರಿಯಾಣ, ಉತ್ತರ ಪ್ರದೇಶ ಮತ್ತು ರಾಜಸ್ಥಾನದ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗಳನ್ನು ರದ್ದು ಪಡಿಸುತ್ತದೆ.

 

ಸಂರಚನೆ:

ಅಧ್ಯಕ್ಷರು: ಇದರ ನೇತೃತ್ವವನ್ನು ಭಾರತ ಸರ್ಕಾರದ ಕಾರ್ಯದರ್ಶಿ ಅಥವಾ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಹಿಸಲಿದ್ದಾರೆ.

  1. ಇದು ಶಾಶ್ವತ ನಿಕಾಯ ವಾಗಲಿದ್ದು, 20 ಕ್ಕೂ ಹೆಚ್ಚು ಸದಸ್ಯರನ್ನು ಹೊಂದಿರುತ್ತದೆ.
  2. ‘ಅಧ್ಯಕ್ಷರು’ ಮೂರು ವರ್ಷಗಳ ಅವಧಿಗೆ ಅಥವಾ ಅವರಿಗೆ 70 ವರ್ಷ ತುಂಬುವವರೆಗೆ ಅಧಿಕಾರದಲ್ಲಿ ಮುಂದುವರೆಯುತ್ತಾರೆ.
  3. ಆಯೋಗವು ವಿವಿಧ ಸಚಿವಾಲಯಗಳ ಪ್ರತಿನಿಧಿಗಳು ಮತ್ತು ಮಧ್ಯಸ್ಥಗಾರ ರಾಜ್ಯಗಳ ಪ್ರತಿನಿಧಿಗಳನ್ನು ಒಳಗೊಂಡಿರುತ್ತದೆ.
  4. ಇದರಲ್ಲಿ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (CPCB), ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಮತ್ತು ನಾಗರಿಕ ಸಮಾಜದ ತಜ್ಞರು ಸಹ ಸದಸ್ಯರಾಗಿ ಭಾಗವಹಿಸಲಿದ್ದಾರೆ.

 

ಅಧಿಕಾರಗಳು ಮತ್ತು ಕಾರ್ಯಗಳು:

  1. ವಾಯುಮಾಲಿನ್ಯಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ಆಯಾ ರಾಜ್ಯ ಸರ್ಕಾರಗಳಿಗೆ ನಿರ್ದೇಶನಗಳನ್ನು ನೀಡಲು ‘ವಾಯು ಗುಣಮಟ್ಟ ನಿರ್ವಹಣಾ ಆಯೋಗಕ್ಕೆ’ ಅಧಿಕಾರ ನೀಡಲಾಗುವುದು.
  2. ರಾಷ್ಟ್ರೀಯ ರಾಜಧಾನಿ ಪ್ರದೇಶ (NCR) ಮತ್ತು ಪಕ್ಕದ ಪ್ರದೇಶಗಳಲ್ಲಿ ಗಾಳಿಯ ಗುಣಮಟ್ಟವನ್ನು ರಕ್ಷಿಸುವ ಮತ್ತು ಸುಧಾರಿಸುವ ಉದ್ದೇಶದಿಂದ ಅಗತ್ಯವೆಂದು ಪರಿಗಣಿಸಲಾದ ದೂರುಗಳನ್ನು ‘ಆಯೋಗ’ ಪರಿಗಣಿಸುತ್ತದೆ.
  3. ಇದು ವಾಯುಮಾಲಿನ್ಯ ನಿಯಂತ್ರಣಕ್ಕೆ ಮಾನದಂಡಗಳನ್ನು ಸಹ ನಿಗದಿಪಡಿಸುತ್ತದೆ.
  4. ಈ ಆಯೋಗಕ್ಕೆ, ಉಲ್ಲಂಘಿಸುವವರನ್ನು ಗುರುತಿಸಲು, ಕಾರ್ಖಾನೆಗಳು, ಕೈಗಾರಿಕೆಗಳು ಮತ್ತು ಇತರ ಯಾವುದೇ ಮಾಲಿನ್ಯ ಘಟಕಗಳನ್ನು ಮೇಲ್ವಿಚಾರಣೆ ಮಾಡಲು ಮತ್ತು ಅಂತಹ ಘಟಕಗಳನ್ನು ಮುಚ್ಚುವ ಅಧಿಕಾರವಿರುತ್ತದೆ.
  5. ಮಾಲಿನ್ಯ ಮಾನದಂಡಗಳ ಉಲ್ಲಂಘನೆಗಾಗಿ ಎನ್‌ಸಿಆರ್ ಮತ್ತು ಪಕ್ಕದ ಪ್ರದೇಶಗಳಲ್ಲಿ ರಾಜ್ಯ ಸರ್ಕಾರಗಳು ನೀಡಿರುವ ನಿರ್ದೇಶನಗಳನ್ನು ರದ್ದುಗೊಳಿಸುವ ಅಧಿಕಾರವೂ ಆಯೋಗಕ್ಕೆ ಇರುತ್ತದೆ.

 

ಆಯೋಗ ಹೊಂದಿರುವ ಶಿಕ್ಷೆ ವಿಧಿಸುವ ಅಧಿಕಾರಗಳು:

ಹೌದು, ಆಯೋಗವು ಕೆಲವು ಅಧಿಕಾರಗಳನ್ನು ಹೊಂದಿದೆ. ನಿರ್ಬಂಧಿತ ಪ್ರದೇಶದಲ್ಲಿ ಕೈಗಾರಿಕಾ ಘಟಕವನ್ನು ಸ್ಥಾಪಿಸುವ ಮೂಲಕ ಆಯೋಗದ ನಿರ್ದೇಶನಗಳನ್ನು ಉಲ್ಲಂಘಿಸಿದರೆ 1 ಕೋಟಿ ರೂ.ವರೆಗೆ ದಂಡ ಮತ್ತು 5 ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸುವ ಅಧಿಕಾರವು ಆಯೋಗಕ್ಕಿದೆ.

 

ವಿಷಯಗಳು: ಸಂರಕ್ಷಣೆ, ಪರಿಸರ ಮಾಲಿನ್ಯ ಮತ್ತು ಅವನತಿ, ಪರಿಸರ ಪ್ರಭಾವದ ಮೌಲ್ಯಮಾಪನ.

ಚೀನಾದ ರಾಷ್ಟ್ರೀಯ ಇಂಗಾಲದ ಹೊರಸೂಸುವಿಕೆ ವ್ಯಾಪಾರ ಮಾರುಕಟ್ಟೆ:


(China’s national carbon emissions trading market)

 ಸಂದರ್ಭ:

ಒಂದು ದಶಕಕ್ಕೂ ಹೆಚ್ಚು ಕಾಲ ಸ್ಥಳೀಯ ಮಟ್ಟದಲ್ಲಿ ಪ್ರಾಯೋಗಿಕ ಯೋಜನೆಗಳನ್ನು ನಡೆಸಿದ ನಂತರ, ಚೀನಾ ತನ್ನ ಬಹುನಿರೀಕ್ಷಿತ ‘ರಾಷ್ಟ್ರೀಯ ಇಂಗಾಲದ ಹೊರಸೂಸುವಿಕೆ ವ್ಯಾಪಾರ ಮಾರುಕಟ್ಟೆ’ (National Carbon Emissions Trading Market) ಯನ್ನು ಅಧಿಕೃತವಾಗಿ ಪ್ರಾರಂಭಿಸಿದೆ.

  1. ಇದರೊಂದಿಗೆ, ಚೀನಾ ತನ್ನ ‘ಹೊರಸೂಸುವಿಕೆ ವ್ಯಾಪಾರ ಯೋಜನೆ’ (Emissions Trading Scheme- ETS) ಯೊಂದಿಗೆ ವಿಶ್ವದ ಅತಿದೊಡ್ಡ ‘ಹೊರಸೂಸುವಿಕೆ ವ್ಯಾಪಾರ ವ್ಯವಸ್ಥೆಯನ್ನು’ ಹೊಂದಿದ್ದ ಯುರೋಪಿಯನ್ ಒಕ್ಕೂಟವನ್ನು ಹಿಂದಿಕ್ಕಿದೆ.

 

ಕಾರ್ಬನ್ ಮಾರುಕಟ್ಟೆ’ ಎಂದರೇನು?

  1. ‘ಕಾರ್ಬನ್ ಮಾರುಕಟ್ಟೆ’ ಎನ್ನುವುದು ಹಸಿರುಮನೆ ಅನಿಲ ಹೊರಸೂಸುವವರು ಹಸಿರುಮನೆ ಅನಿಲ ಹೊರಸೂಸುವಿಕೆ ‘ಪರ್ಮಿಟ್ ಅಥವಾ ‘ಪರವಾನಗಿಗಳನ್ನು’ ಖರೀದಿಸಬಹುದು ಮತ್ತು ಮಾರಾಟ ಮಾಡಬಹುದಾದ ಸ್ಥಳವಾಗಿದೆ.
  2. ಅನುಮೋದಿತ ‘ಗುರಿ’ಗಿಂತ ಕೆಳಗಿರುವ’ ಇಂಗಾಲ-ಹೊರಸೂಸುವಿಕೆ ‘ಮತ್ತು’ ಹೊರಸೂಸುವಿಕೆ ‘ವಿಷಯದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುವ ಕಂಪನಿಗಳು,’ ಇಂಗಾಲ-ಹೊರಸೂಸುವಿಕೆ ಗುರಿ ‘ಹೆಚ್ಚುವರಿಯನ್ನು ಬಿಟ್ಟು, ಅದನ್ನು ಇಂಗಾಲದ ಮಾರುಕಟ್ಟೆಯಲ್ಲಿ ಮಾರಾಟ ಮಾಡಬಹುದು; ಹೆಚ್ಚಿನ ಮಾಲಿನ್ಯಕಾರಕ ಕಂಪನಿಗಳು ತಮ್ಮ ಅನುಸರಣೆ ಹೇಳಿಕೆಯನ್ನು ಸಲ್ಲಿಸಲು ಈ ಹೆಚ್ಚುವರಿಯನ್ನು ಖರೀದಿಸಬಹುದು.
  3. ಪ್ರತಿ ವರ್ಷ ಒಟ್ಟು ಇಂಗಾಲದ ಹೊರಸೂಸುವಿಕೆಯ ಮೇಲೆ ಸರ್ಕಾರವು ಒಂದು ಮಿತಿಯನ್ನು ನಿಗದಿಪಡಿಸುತ್ತದೆ, ಮತ್ತು ನಂತರ ಕಂಪನಿಗಳು, ‘ಹೊರಸೂಸುವ ಕೋಟಾ’ಗಳನ್ನು ಈ ನಿಗದಿತ ಮಿತಿಯೊಳಗೆ ಮಾರಾಟ ಮಾಡುತ್ತವೆ ಅಥವಾ ಖರೀದಿಸುತ್ತವೆ.

 

ಕಾರ್ಬನ್ ಮಾರುಕಟ್ಟೆಯಲ್ಲಿ ಪಾಲುದಾರರು:

  1. ಮೊದಲ ಹಂತದಲ್ಲಿ, ವಿದ್ಯುತ್ ಕ್ಷೇತ್ರವು ಮಾತ್ರ ಈ ವ್ಯವಸ್ಥೆಯ ವ್ಯಾಪ್ತಿಗೆ ಬರುತ್ತದೆ. ಇದರಲ್ಲಿ ಪ್ರತಿವರ್ಷ 2,000 ಕ್ಕೂ ಹೆಚ್ಚು ವಿದ್ಯುತ್ ಕಂಪನಿಗಳು ಭಾಗವಹಿಸುತ್ತಿದ್ದು, ಅವು ದೇಶದ ಒಟ್ಟು ವಾರ್ಷಿಕ ಹೊರಸೂಸುವಿಕೆಯ 40 ಪ್ರತಿಶತ ಅಥವಾ 4 ಬಿಲಿಯನ್ ಟನ್‌ಗಿಂತ ಹೆಚ್ಚು ಹಸಿರುಮನೆ ಅನಿಲಗಳನ್ನು ಹೊರಸೂಸುತ್ತದೆ.
  2. ಕಬ್ಬಿಣ ಮತ್ತು ಉಕ್ಕು, ಮತ್ತು ನಿರ್ಮಾಣ ಸಾಮಗ್ರಿಗಳು ಸೇರಿದಂತೆ ಇತರ ಏಳು ಹೆಚ್ಚು ಇಂಧನ -ಕೈಗಾರಿಕೆಗಳು ಭವಿಷ್ಯದಲ್ಲಿ ಇಂಗಾಲದ ಮಾರುಕಟ್ಟೆಯ ವ್ಯಾಪ್ತಿಗೆ ಬರಲಿವೆ.

 

ಕಾರ್ಬನ್ ಮಾರುಕಟ್ಟೆ ಅವಶ್ಯಕತೆ:

  1. 2030 ರ ವೇಳೆಗೆ ತನ್ನ ಹೊರಸೂಸುವಿಕೆಯನ್ನು ಗರಿಷ್ಠಗೊಳಿಸಲು ಮತ್ತು 2060 ರ ವೇಳೆಗೆ ‘ಇಂಗಾಲದ ತಟಸ್ಥತೆಯನ್ನು’ ಸಾಧಿಸುವ ಪ್ರಯತ್ನಗಳ ಭಾಗವಾಗಿ ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ಚೀನಾ ‘ವ್ಯವಹಾರ ಯೋಜನೆ’ ಯನ್ನು ಬಳಸಲು ಪ್ರಯತ್ನಿಸುತ್ತಿದೆ.
  2. ಇದರೊಂದಿಗೆ, ಚೀನಾ ಮೊದಲ ಬಾರಿಗೆ ರಾಷ್ಟ್ರೀಯ ಮಟ್ಟದಲ್ಲಿ ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು ನಿಯಂತ್ರಿಸುವ ಜವಾಬ್ದಾರಿಯನ್ನು ಉದ್ಯಮಗಳಿಗೆ ವಹಿಸಿದೆ.

 


ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:


ಸ್ಪೇಸ್ ರೈಸ್ (ಬಾಹ್ಯಾಕಾಶ ಅಕ್ಕಿ) ಎಂದರೇನು?

(What is Space rice?)

  1. ಇದು ನವೆಂಬರ್‌ನಲ್ಲಿ ಚೀನಾ 23 ದಿನಗಳ ಚಂದ್ರಯಾನಕ್ಕೆ ಚಾಂಗ್ -5 ಮಿಷನ್‌ನೊಂದಿಗೆ ಕಳುಹಿಸಿದ ಭತ್ತದ ಬೀಜಗಳಿಂದ ಬೆಳೆದ ಅಕ್ಕಿಯಾಗಿದೆ.
  2. ಸುಮಾರು 40 ಗ್ರಾಂ ಬೀಜಗಳು ‘ಕಾಸ್ಮಿಕ್ ವಿಕಿರಣ ಮತ್ತು ಶೂನ್ಯ ಗುರುತ್ವಾಕರ್ಷಣೆಗೆ’ ಒಡ್ಡಿಕೊಂಡ ನಂತರ, ಅವು ಭೂಮಿಗೆ ಹಿಂದಿರುಗಿದ ನಂತರ ಕೊಯ್ಲು ಮಾಡಲ್ಪಟ್ಟವು.
  3. ಬಾಹ್ಯಾಕಾಶ ಪರಿಸರಕ್ಕೆ ಒಡ್ಡಿಕೊಂಡ ಈ ಭತ್ತದ ಬೀಜಗಳು ‘ರೂಪಾಂತರ’ಕ್ಕೆ ಒಳಗಾಗಬಹುದು ಮತ್ತು ಭೂಮಿಯ ಮೇಲೆ ಪುನಃ ನೆಟ್ಟ ನಂತರ ಅವು ಹೆಚ್ಚಿನ ಇಳುವರಿಯನ್ನು ನೀಡಬಹುದು ಎಂದು ನಂಬಲಾಗಿದೆ.
  4. 1987 ರಿಂದ ಚೀನಾ ಅಕ್ಕಿ ಮತ್ತು ಇತರ ಬೆಳೆಗಳ ಬೀಜಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸುತ್ತಿದೆ.
  5. ಚೀನಾದಲ್ಲಿ, ಅನುಮೋದಿತ ಬಾಹ್ಯಾಕಾಶ ಬೆಳೆಗಳ ಒಟ್ಟು ನೆಟ್ಟ ಪ್ರದೇಶವು 2018 ರಲ್ಲಿ 2.4 ದಶಲಕ್ಷ ಹೆಕ್ಟೇರ್‌ಗಿಂತ ಹೆಚ್ಚಾಗಿದೆ.

 

ಡಿಜಿಟಲ್ ಭೂ ಬಳಕೆಯ ದತ್ತಾಂಶದ ಸಂಗ್ರಹವನ್ನು ಪೂರ್ಣಗೊಳಿಸಿದ ಮೊದಲ ಖಂಡ:

(First continent to complete collection of digital land use data)

  1. ಓಪನ್ ಡೀಲ್ ಉಪಕ್ರಮ’ (Open DEAL initiative)ದ ಅಡಿಯಲ್ಲಿ ನಿಖರ, ಸಮಗ್ರ ಮತ್ತು ಸಾಮರಸ್ಯದ ಡಿಜಿಟಲ್ ಭೂ ಬಳಕೆ ಮತ್ತು ಭೂ ಬಳಕೆ ಬದಲಾವಣೆಯ ದತ್ತಾಂಶ ಸಂಗ್ರಹವನ್ನು ರಚಿಸಿದ ವಿಶ್ವದ ಮೊದಲ ಖಂಡವಾಗಿ ಆಫ್ರಿಕಾ ಹೊರಹೊಮ್ಮಿದೆ.
  2. ಡೀಲ್ ಎಂದರೆ ಪರಿಸರ, ಕೃಷಿ ಮತ್ತು ಭೂ ಉಪಕ್ರಮಕ್ಕಾಗಿ ಡೇಟಾ (Data for the Environment, Agriculture and Land Initiative) ಆಗಿದೆ.
  3. ಡೇಟಾ ಸಂಗ್ರಹಣೆ ಮತ್ತು ವಿಶ್ಲೇಷಣೆಯ ಉಪಕ್ರಮದ ನೇತೃತ್ವವನ್ನು ಆಹಾರ ಮತ್ತು ಕೃಷಿ ಸಂಸ್ಥೆ (FAO) ಮತ್ತು ಆಫ್ರಿಕನ್ ಒಕ್ಕೂಟ ಆಯೋಗ (AUC) ವಹಿಸುತ್ತಿವೆ.
  4. ಈ ಉಪಕ್ರಮದ ಭಾಗವಾಗಿ, ಕಳೆದ 20 ವರ್ಷಗಳಲ್ಲಿ ಭೂ ಬಳಕೆಯ ಬದಲಾವಣೆಯನ್ನು ಮತ್ತು ಆಫ್ರಿಕ ಖಂಡದ ಪ್ರತಿ ದೇಶದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಭೂ-ನವೀಕರಣದ ಸಾಮರ್ಥ್ಯವನ್ನು ನಿರ್ಣಯಿಸಲು ಈ ಡೇಟಾವನ್ನು ವಿಶ್ಲೇಷಿಸಲಾಗಿದೆ.

 

ಡಿಜಿಟಲ್ ಫಲವತ್ತತೆ ನಕ್ಷೆಯನ್ನು ಪಡೆದ ಬಿಹಾರದ ಕಿಶಂಗಂಜ್ :

(Bihar’s Kishanganj gets digital fertility map)

ಇತ್ತೀಚೆಗೆ, ಬಿಹಾರ ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳು ‘ಡಿಜಿಟಲ್ ಫಲವತ್ತತೆ ನಕ್ಷೆ’  (Digital Fertility Map) ಯನ್ನು ಸಿದ್ಧಪಡಿಸಿದ್ದಾರೆ.

ರೈತರಿಗೆ ಆಗುವ ಲಾಭಗಳು:

  1. ಈ ನಕ್ಷೆಯನ್ನು ಬಳಸುವುದರಿಂದ ಉತ್ತಮ ಲಾಭಕ್ಕಾಗಿ ಯಾವ ಪ್ರದೇಶದಲ್ಲಿ ಯಾವ ಬೆಳೆಯನ್ನು ಬೆಳೆಯಬೇಕು ಎಂಬುದನ್ನು ಈಗ ರೈತರು ಸುಲಭವಾಗಿ ನಿರ್ಧರಿಸಬಹುದು.
  2. ರೈತರು ಹೊಸ ಬೆಳೆಗಳನ್ನು ಬೆಳೆಯಬಹುದು ಮತ್ತು ಬೆಳೆ ವೈವಿಧ್ಯೀಕರಣವನ್ನು ಮಾಡಬಹುದು.
  3. ರೈತರು, ತಮ್ಮ ಮಣ್ಣಿನ ಫಲವತ್ತತೆ ಮಟ್ಟವನ್ನು ತಿಳಿದ ನಂತರ, ಸರಿಯಾದ ಪ್ರಮಾಣದ ರಸಗೊಬ್ಬರಗಳ ಬಗ್ಗೆಯೂ ಅವರು ನಿರ್ಧರಿಸಬಹುದು. ಇದು ಅವರಿಗೆ ಬಂಪರ್ ಇಳುವರಿಯನ್ನು ನೀಡುತ್ತದೆ.

ಸಂಬಂಧಿತ ಕಾಳಜಿಗಳು:

  1. ಕೃಷಿ ತಜ್ಞರು ಮತ್ತು ರೈತರು ಹೆಚ್ಚುತ್ತಿರುವ ಭೂ ದಾಖಲೆಗಳ ಡಿಜಿಟಲೀಕರಣ ಮತ್ತು ಭೂಮಿಯ ಫಲವತ್ತತೆ ವಿವರಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
  2. ಈ ಡೇಟಾವನ್ನು ಖಾಸಗಿ ಕಂಪನಿಗಳು ಮತ್ತು ದೊಡ್ಡ ಕಾರ್ಪೊರೇಟ್ ಸಂಸ್ಥೆಗಳು ಭೂಸ್ವಾಧೀನ ಮತ್ತು ಸಾಲ ನೀಡುವಂತಹ ವಿವಿಧ ಉದ್ದೇಶಗಳಿಗಾಗಿ ದುರುಪಯೋಗಪಡಿಸಿಕೊಳ್ಳಬಹುದು ಎಂಬ ಆತಂಕವಿದೆ, ಇದು ರೈತರನ್ನು ತೊಂದರೆಗೆ ಸಿಲುಕಿಸುತ್ತದೆ.

 

ವಿಂಟೇಜ್ ಕಾರುಗಳ ನೋಂದಣಿಗೆ ನಿಯಮಗಳು:

(Rules for registration of vintage cars)

 ಇತ್ತೀಚೆಗೆ, ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಮೋಟಾರು ವಾಹನ ನಿಯಮಗಳು (CMVR)1989 ಅನ್ನು ತಿದ್ದುಪಡಿ ಮಾಡಿ, ವಿಂಟೇಜ್ ಮೋಟಾರು ವಾಹನಗಳ ನೋಂದಣಿ ಪ್ರಕ್ರಿಯೆಯನ್ನು  ಔಪಚಾರಿಕಗೊಳಿಸಿದೆ.

  1. ಇದು ಭಾರತದಲ್ಲಿ ಬಳಸಲ್ಪಟ್ಟ ಪುರಾತನ ವಾಹನಗಳ ಪರಂಪರೆಯನ್ನು ಸಂರಕ್ಷಿಸುವ ಮತ್ತು ಉತ್ತೇಜಿಸುವ ಗುರಿ ಹೊಂದಿದೆ.

ಹೊಸ ನಿಯಮಗಳ ಪ್ರಮುಖ ಲಕ್ಷಣಗಳು:

  1. ಹೊಸ ನಿಯಮಗಳ ಪ್ರಕಾರ, 50 ವರ್ಷಕ್ಕಿಂತ ಹಳೆಯದಾದ ಮತ್ತು ಎಲ್ಲಾ ಎರಡು ಮತ್ತು ನಾಲ್ಕು ಚಕ್ರದ ವಾಹನಗಳನ್ನು ಅವುಗಳ ಮೂಲ ರೂಪದಲ್ಲಿ ಸಂರಕ್ಷಿಸಲಾಗಿದೆ ಮತ್ತು ಯಾವುದೇ ಮಹತ್ವದ ಬದಲಾವಣೆಗೆ ಒಳಗಾಗದ ವಾಹನಗಳನ್ನು ವಿಂಟೇಜ್ ಮೋಟಾರು ವಾಹನಗಳಾಗಿ ಗುರುತಿಸಲಾಗುತ್ತದೆ.
  2. ಈಗಾಗಲೇ ನೋಂದಾಯಿಸಲಾದ ವಾಹನಗಳು ತಮ್ಮ ಮೂಲ ನೋಂದಣಿ ಚಿಹ್ನೆಯನ್ನು ಉಳಿಸಿಕೊಳ್ಳಬಹುದು. ಆದಾಗ್ಯೂ, ಹೊಸ ನೋಂದಣಿಗಾಗಿ, “VA” ಸರಣಿಯನ್ನು (ವಿಶಿಷ್ಟ ನೋಂದಣಿ ಗುರುತು) ನೋಂದಣಿ ಗುರುತು “XX VA YY8” ಎಂದು ನಿರ್ದಿಷ್ಟಪಡಿಸಲಾಗಿದೆ.
  3. ವಿಂಟೇಜ್ ಮೋಟಾರು ವಾಹನಗಳನ್ನು ನಿಯಮಿತ / ವಾಣಿಜ್ಯ ಉದ್ದೇಶಗಳಿಗಾಗಿ, ರಸ್ತೆಗಳಲ್ಲಿ ಚಲಾಯಿಸುವಂತಿಲ್ಲ.

  • Join our Official Telegram Channel HERE for Motivation and Fast Updates
  • Subscribe to our YouTube Channel HERE to watch Motivational and New analysis videos

[ad_2]

Leave a Comment